ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.49/2021 ಕಲಂ. 435 ಐ.ಪಿ.ಸಿ :-

          ದಿನಾಂಕ: 09/04/2021 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾಧಿದಾರರಾದ  ಎ ಎನ್ ಪ್ರಕಾಶ್ ರೆಡ್ಡಿ ಬಿನ್ ಲೇಟ್ ಪಟೇಲ್ ಎ ವಿ ನಾರಾಯಣರೆಡ್ಡಿ 75 ವರ್ಷ, ವಕ್ಕಲಿಗರು, ವ್ಯವಸಾಯ, ವಾಸ: ಅಂಕಾಲಮಡಗು ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ ನಂ: 8762631598 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ನಮ್ಮ ಗ್ರಾಮದ ಸರ್ವೇ ನಂಬರ್ 34 ರಲ್ಲಿ  ಸುಮಾರು 18 ವರ್ಷ, ಕಳೆದಿರುವ ಗೋಡಂಬಿ ಗಿಡ ನಾಟಿ ಮಾಡಿದ್ದು, ಅದರಿಂದ ಉತ್ತಮ ಪಸಲು ಬರುತ್ತಿದ್ದು, ಅದು ನಮ್ಮ ಜೀವನದ ಆಧಾರ ಸ್ತಂಭವಾಗಿತ್ತು. ದಿನಾಂಕ: 06/04/2021 ರಂದು ಮಂಗಳವಾರದಂದು ಮದ್ಯಾಹ್ನ ಸುಮಾರು 1 ರಿಂದ 3 ಗಂಟೆಯ ಒಳಗೆ ಅನುಮಾನಾಸ್ಪದ ವ್ಯಕ್ತಿಗಳು ನಮ್ಮ ತೋಟಗಾರಿಕೆ ಬೆಳೆಗೆ  ಬೆಂಕಿ ಹಚ್ಚಿ ಈ ವರ್ಷದ ಪಸಲು ಪೂರ್ತಿ ಬೆಂಕಿಗೆ ಅನಾಹುತವಾಗಿದೆ. ಈ ವರ್ಷದ ಪಸಲಿನ ಟ್ಟು ಮೊತ್ತ 1 ಲಕ್ಷ ಹಾಗು ಈ ವರ್ಷ ಹೊಸದಾಗಿ ನೆಟ್ಟಿರುವ ಸುಮಾರು 150 ಗಿಡಗಳು ಅದರ ಬೆಲೆ ಸುಮಾರು 75 ಸಾವಿರ ರೂಗಳು ಹಾಗೂ ಬೆಂಕಿ ಅನಾಹುತಕ್ಕೆ ಆಹುತಿಯಾದ ಗಿಡಗಳು ಮೊತ್ತ 2 ಲಕ್ಷ ರೂಗಳು ಆಗಿರುತ್ತದೆ. ನಮ್ಮ ಸರ್ವೇ ನಂಬರ್ 34 ರಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಅದು ನಮ್ಮ ಗಮನಕ್ಕೆ ಬಂದಿದ್ದು, ನಾವು ಸುಮಾರು ಸಲ ಅವರಿಗೆ ಎಚ್ಚಿಕೆ ಕೊಟ್ಟಿರುತ್ತೇವೆ. ಅಲ್ಲಿ ಅಕ್ರಮ ಚಟುವಟಿಕೆಗಳಾದ ಮದ್ಯ ಪಾನ ಸೇವನೆ ಮತ್ತು ಜೂಜಾಟಗಳು ಮತ್ತು ಪಸಲು ಕದಿಯುತ್ತಿದ್ದರು. ನಾವು ದಿನ ನಿತ್ಯ ತೋಟದ ವೀಕ್ಷಣೆಗೆ ಹೋಗುತ್ತಿದ್ದು, ಆದಿನ ಭತ್ತದ ಬೆಳೆಗೆ ನೀರು ಹಾಯಿಸುವ ಸಲುವಾಗಿ ಸ್ವಲ್ಪ ತಡವಾಯಿತು ಅಂತಿಮವಾಗಿ ಪೂರ್ತಿ ಬೆಳೆ ನಷ್ಟವಾಗಿರುತ್ತದೆ. ಮತ್ತು ಸುತ್ತ ಮುತ್ತ ಹೊಲಗಳ ಜನರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದರೂ ಸಹ ಬೆಂಕಿ ನಂದಿಸಲು ಸಾದ್ಯವಾಗಲಿಲ್ಲ. ನಮಗೆ ಕಾನೂನಿನ ಚೌಕಟ್ಟಿನಲ್ಲಿ ನಮಗೆ ನ್ಯಾಯ ದೊರಕಿಸಿಕೊಡಬೇಕಾಗಿ ಕೊಟ್ಟ ದೂರಿನ ಸಾರಾಂಶವಾಗಿರುತ್ತದೆ.

 

2. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.50/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ: 09/04/2021 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಹಾಯಕ ಆರಕ್ಷಕ ಉಪನಿರೀಕ್ಷಕ ಶ್ರೀ ಪ್ರಕಾಶ್.ಜೆ ಆದ ನಾನು  ಬೆಳಿಗ್ಗೆ 10-45 ಗಂಟೆಯಲ್ಲಿ ಠಾಣೆಯಲ್ಲಿ ಇದ್ದಾಗ, ನನಗೆ  ಠಾಣೆಯ ಪಿ.ಎಸ್.ಐ ರವರಾದ ಶ್ರೀ.ಟಿ.ಎನ್.ಪಾಪಣ್ಣ ರವರು ದೂರವಾಣಿ ಕರೆಮಾಡಿ ಠಾಣಾ ವ್ಯಾಪ್ತಿಯ ಕೋನಕುಂಟ್ಲು ದೇವಾಲಯದ ಬಳಿ ಸಾರ್ವಜನಿಕ ಸ್ಥಳವಾದ ರಸ್ತೆಯ ಬದಿಯಲ್ಲಿ ಎಸ್.ಸುನಿಲ್ ಕುಮಾರ್ ಬಿನ್ ಸುಬ್ಬರಾಜು ಎಂಬುವರು ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ನಾನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಹಮ್ಮಿಕೊಂಡಿರುವ ಅಪರಾಧ ಚರ್ಚಾ ಸಭೆಯಲ್ಲಿದ್ದು ನೀವು ಈ ಬಗ್ಗೆ ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತ್ತೆ ಸೂಚಿಸಿದರ ಮೇರೆಗೆ ನಾನು, ಠಾಣೆಯ  ಸಿಬ್ಬಂದಿ ಹೆಚ್.ಸಿ – 36 ವಿಜಯ್ ಕುಮಾರ್  ರವರೊಂದಿಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ದ್ವಿಚಕ್ರ ವಾಹನಗಳಲ್ಲಿ ಕೋನಕುಂಟ್ಲು ದೇವಾಲಯದ ಬಳಿಗೆ ಹೋಗುತ್ತಿದ್ದಂತ್ತೆ ಸಾರ್ವಜನಿಕ ಸ್ಥಳವಾದ ದೇವಾಲಯದ ಮುಂಭಾಗದಲ್ಲಿ ಇರುವ ರಸ್ತೆಯಲ್ಲಿ ಯಾರೂ ಇಬ್ಬರು ಆಸಾಮಿಗಳು ಮದ್ಯಪಾನಮಾಡುತ್ತಿದ್ದು ಮತ್ತೊಬ್ಬ ಆಸಾಮಿಯು ಅವರಿಗೆ ಮದ್ಯಪಾನಮಾಡಲು ಸಹಕರಿಸುತ್ತಿದ್ದು ನಾವುಗಳು ಅಲ್ಲಿಗೆ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ನೋಡಿ ಮದ್ಯಪಾನಮಾಡುತ್ತಿದ್ದ ವ್ಯಕ್ತಿಗಳು ಓಡಿ ಹೋಗಿದ್ದು ಸ್ಥಳದಲ್ಲಿ ಮದ್ಯಪಾನಮಾಡುತ್ತಿದ್ದವರಿಗೆ ಸಹಕರಿಸುತ್ತಿದ್ದ ವ್ಯಕ್ತಿಯು ಅಲ್ಲಿಯೇ ಇದ್ದು ಸದರಿ ವ್ಯಕ್ತಿಯನ್ನು ಹೆಸರು ವಿಳಾಸವನ್ನು ವಿಚಾರಿಸಲಾಗಿ ಎಸ್.ಸುನೀಲ್ ಕುಮಾರ್ ಬಿನ್ ಸುಬ್ಬರಾಜು, 36ವರ್ಷ, ಬಲಜಿಗರು, ಹಾಲಿನ ಡೈರಿಯಲ್ಲಿ ಕೆಲಸ, ಶಂಕರಾಪುರ ಗ್ರಾಮ, ತಂಬಾಲಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ, ಎಂದು ತಿಳಿಸಿದ್ದು ಸದರಿ ವ್ಯಕ್ತಿಯನ್ನು ವಿಚಾರಿಸಲಾಗಿ ತನಗೆ ಗೊತ್ತಿರುವ ವ್ಯಕ್ತಿಗಳು ಮದ್ಯಪಾನ ಮಾಡಲು ಒಳ್ಳೆಯ ಸ್ಥಳವನ್ನು ತೋರಿಸುವಂತ್ತೆ ಕೋರಿದ್ದರ ಮೇರೆಗೆ ತಾನು ಅವರನ್ನು ಮದ್ಯಪಾನಮಾಡಲು ಸದರಿ ಸ್ಥಳಕ್ಕೆ ಕರೆದುಕೊಂಡು ಬಂದು ಮದ್ಯಪಾನಮಾಡಲು ಅವಕಾಶಮಾಡಿಕೊಟ್ಟಿರುವುದಾಗಿ ತಿಳಿಸಿದ್ದರ ಮೇರೆಗೆ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ  90 ಎಂ.ಎಲ್ ನ ಹೈವಾರ್ಡ್ಸ್ ಚೇರ್ಸ್ ವಿಸ್ಕಿಯ 08 ಟೆಟ್ರಾ ಪ್ಯಾಕೆಟ್ ಗಳು ಇದ್ದು ಪ್ರತಿಯೊಂದರ ಮೇಲೆ ಬೆಲೆ ರೂ 35.13 ರೂ ಎಂತ ಇದ್ದು ಒಟ್ಟು 281 ರೂ ಬೆಲೆ 0.720 ಲೀಟರ್ ನಷ್ಟು ಮದ್ಯದ ಪ್ಯಾಕೇಟ್ ಗಳು, 2 ಖಾಲಿಯ 90 ಎಂ.ಎಲ್.ನ ಹೈವಾರ್ಡ್ಸ್ ನ ಟೆಟ್ರಾ ಪ್ಯಾಕೆಟ್ ಗಳು, 2 ಪ್ಲಾಸ್ಟಿಕ್ ಲೋಟಗಳು ಹಾಗೂ ಎರಡು ಲೀಟರ್ ಸಾಮರ್ಥ್ಯದ ಒಂದು ನೀರಿನ ಬಾಟಲಿ ಇದ್ದು ಸ್ಥಳದಲ್ಲಿ ಎಸ್.ಸುನಿಲ್ ಕುಮಾರ್ ಬಿನ್ ಸುಬ್ಬರಾಜು ರವರು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯಪಾನಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಸ್ಥಳದಲ್ಲಿದ್ದ 90 ಎಂ.ಎಲ್ ನ ಹೈವಾರ್ಡ್ಸ್ ಚೇರ್ಸ್ ವಿಸ್ಕಿಯ 08 ಟೆಟ್ರಾ ಪ್ಯಾಕೆಟ್ ಗಳು ಇದ್ದು ಪ್ರತಿಯೊಂದರ ಮೇಲೆ ಬೆಲೆ ರೂ 35.13 ರೂ ಎಂತ ಇದ್ದು ಒಟ್ಟು 281 ರೂ ಬೆಲೆ 0.720 ಲೀಟರ್ ನಷ್ಟು ಮದ್ಯದ ಪ್ಯಾಕೇಟ್ ಗಳು, 2 ಖಾಲಿಯ 90 ಎಂ.ಎಲ್.ನ ಹೈವಾರ್ಡ್ಸ್ ನ ಟೆಟ್ರಾ ಪ್ಯಾಕೆಟ್ ಗಳು, 2 ಪ್ಲಾಸ್ಟಿಕ್ ಲೋಟಗಳು ಹಾಗೂ ಎರಡು ಲೀಟರ್ ಸಾಮರ್ಥ್ಯದ ಒಂದು ನೀರಿನ ಬಾಟಲಿಯನ್ನು ಬೆಳಿಗ್ಗೆ 11-30 ಗಂಟೆಯಿಂದ ಮಧ್ಯಾಹ್ನ 12-15 ಗಂಟೆಯವರೆಗೂ ಪಂಚಾಯ್ತಿದಾರರ ಸಮಕ್ಷಮ ಕೈಗೊಂಡ ಪಂಚನಾಮೆಯ ಮುಖಾಂತರ ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿ ಇದ್ದ ಆಸಾಮಿಯನ್ನು ವಶಕ್ಕೆ ಪಡೆದುಕೋಂಡು ಠಾಣೆಗೆ  ಮಧ್ಯಾಹ್ನ 12-45 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:50/2021 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

3. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.51/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ: 09/04/2021 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಹಾಯಕ ಆರಕ್ಷಕ ಉಪನಿರೀಕ್ಷಕ ಶ್ರೀ ಪ್ರಕಾಶ್.ಜೆ ಆದ ನಾನು  ಮಧ್ಯಾಹ್ನ 1-30 ಗಂಟೆಯಲ್ಲಿ ಠಾಣೆಯಲ್ಲಿ ಇದ್ದಾಗ, ನನಗೆ  ಠಾಣೆಯ ಪಿ.ಎಸ್.ಐ ರವರಾದ ಶ್ರೀ.ಟಿ.ಎನ್.ಪಾಪಣ್ಣ ರವರು ದೂರವಾಣಿ ಕರೆಮಾಡಿ ಠಾಣಾ ವ್ಯಾಪ್ತಿಯ ಕೋನಾಪುರ ಗ್ರಾಮದ ಸಾರ್ವಜನಿಕ ಸ್ಥಳವಾದ ಸರ್ಕಾರಿ ಶಾಲೆಯ ಬಳಿ ನರೇಶ್ ಬಿನ್ ನರಸಿಂಹಲೂ ಎಂಬುವರು ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ನಾನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಹಮ್ಮಿಕೊಂಡಿರುವ ಅಪರಾಧ ಚರ್ಚಾ ಸಭೆಯಲ್ಲಿದ್ದು ನೀವು ಈ ಬಗ್ಗೆ ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತ್ತೆ ಸೂಚಿಸಿದರ ಮೇರೆಗೆ ನಾನು, ಠಾಣೆಯ  ಸಿಬ್ಬಂದಿ ಹೆಚ್.ಸಿ – 36 ವಿಜಯ್ ಕುಮಾರ್  ರವರೊಂದಿಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ದ್ವಿಚಕ್ರ ವಾಹನಗಳಲ್ಲಿ ಕೋನಾಪುರ ಗ್ರಾಮದ ಶಾಲೆಯ ಬಳಿಗೆ ಹೋಗುತ್ತಿದ್ದಂತ್ತೆ ಸಾರ್ವಜನಿಕ ಸ್ಥಳವಾದ ಶಾಲೆಯ ಬಳಿ ಯಾರೂ ಇಬ್ಬರು ಆಸಾಮಿಗಳು ಮದ್ಯಪಾನಮಾಡುತ್ತಿದ್ದು ಮತ್ತೊಬ್ಬ ಆಸಾಮಿಯು ಅವರಿಗೆ ಮದ್ಯಪಾನಮಾಡಲು ಸಹಕರಿಸುತ್ತಿದ್ದು ನಾವುಗಳು ಅಲ್ಲಿಗೆ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ನೋಡಿ ಮದ್ಯಪಾನಮಾಡುತ್ತಿದ್ದ ವ್ಯಕ್ತಿಗಳು ಓಡಿ ಹೋಗಿದ್ದು ಸ್ಥಳದಲ್ಲಿ ಮದ್ಯಪಾನಮಾಡುತ್ತಿದ್ದವರಿಗೆ ಸಹಕರಿಸುತ್ತಿದ್ದ ವ್ಯಕ್ತಿಯು ಅಲ್ಲಿಯೇ ಇದ್ದು ಸದರಿ ವ್ಯಕ್ತಿಯನ್ನು ಹೆಸರು ವಿಳಾಸವನ್ನು ವಿಚಾರಿಸಲಾಗಿ ನರೇಶ್ ಬಿನ್ ನರಸಿಂಹಲು, 32ವರ್ಷ, ಆದಿ ಕರ್ನಾಟಕ ಜನಾಂಗ, ಪೈಂಟಿಂಗ್ ಕೆಲಸ, ಶಂಕರಾಪುರ ಗ್ರಾಮ, ತಂಬಾಳಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ, ಎಂದು ತಿಳಿಸಿದ್ದು ಸದರಿ ವ್ಯಕ್ತಿಯನ್ನು ವಿಚಾರಿಸಲಾಗಿ ತನಗೆ ಗೊತ್ತಿರುವ ವ್ಯಕ್ತಿಗಳು ಮದ್ಯಪಾನ ಮಾಡಲು ಒಳ್ಳೆಯ ಸ್ಥಳವನ್ನು ತೋರಿಸುವಂತೆ ಕೋರಿದ್ದರ ಮೇರೆಗೆ ತಾನು ಅವರನ್ನು ಮದ್ಯಪಾನಮಾಡಲು ಸದರಿ ಸ್ಥಳಕ್ಕೆ ಕರೆದುಕೊಂಡು ಬಂದು ಮದ್ಯಪಾನಮಾಡಲು ಅವಕಾಶಮಾಡಿಕೊಟ್ಟಿರುವುದಾಗಿ ತಿಳಿಸಿದ್ದರ ಮೇರೆಗೆ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ  90 ಎಂ.ಎಲ್ ನ ಹೈವಾರ್ಡ್ಸ್ ಚೇರ್ಸ್ ವಿಸ್ಕಿಯ 10 ಟೆಟ್ರಾ ಪ್ಯಾಕೆಟ್ ಗಳು ಇದ್ದು ಪ್ರತಿಯೊಂದರ ಮೇಲೆ ಬೆಲೆ ರೂ 35.13 ರೂ ಎಂತ ಇದ್ದು ಒಟ್ಟು 351 ರೂ ಬೆಲೆ 0.900 ಲೀಟರ್ ನಷ್ಟು ಮದ್ಯದ ಪ್ಯಾಕೇಟ್ ಗಳು, 2 ಖಾಲಿಯ 90 ಎಂ.ಎಲ್.ನ ಹೈವಾರ್ಡ್ಸ್ ನ ಟೆಟ್ರಾ ಪ್ಯಾಕೆಟ್ ಗಳು, 2 ಪ್ಲಾಸ್ಟಿಕ್ ಲೋಟಗಳು ಹಾಗೂ ಎರಡು ಲೀಟರ್ ಸಾಮರ್ಥ್ಯದ ಒಂದು ನೀರಿನ ಬಾಟಲಿ ಇದ್ದು ಸ್ಥಳದಲ್ಲಿ ನರೇಶ್ ಬಿನ್ ನರಸಿಂಹಲು ರವರು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯಪಾನಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಸ್ಥಳದಲ್ಲಿದ್ದ 90 ಎಂ.ಎಲ್ ನ ಹೈವಾರ್ಡ್ಸ್ ಚೇರ್ಸ್ ವಿಸ್ಕಿಯ 10 ಟೆಟ್ರಾ ಪ್ಯಾಕೆಟ್ ಗಳು ಇದ್ದು ಪ್ರತಿಯೊಂದರ ಮೇಲೆ ಬೆಲೆ ರೂ 35.13 ರೂ ಎಂತ ಇದ್ದು ಒಟ್ಟು 351 ರೂ ಬೆಲೆ 0.900 ಲೀಟರ್ ನಷ್ಟು ಮದ್ಯದ ಪ್ಯಾಕೇಟ್ ಗಳು, 2 ಖಾಲಿಯ 90 ಎಂ.ಎಲ್.ನ ಹೈವಾರ್ಡ್ಸ್ ನ ಟೆಟ್ರಾ ಪ್ಯಾಕೆಟ್ ಗಳು, 2 ಪ್ಲಾಸ್ಟಿಕ್ ಲೋಟಗಳು ಹಾಗೂ ಎರಡು ಲೀಟರ್ ಸಾಮರ್ಥ್ಯದ ಒಂದು ನೀರಿನ ಬಾಟಲಿಯನ್ನು ಮಧ್ಯಾಹ್ನ 02-00 ಗಂಟೆಯಿಂದ 2-45 ಗಂಟೆಯ ವರೆಗೂ ಪಂಚಾಯ್ತಿದಾರರ ಸಮಕ್ಷಮ ಕೈಗೊಂಡ ಪಂಚನಾಮೆಯ ಮುಖಾಂತರ ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿ ಇದ್ದ ಆಸಾಮಿಯನ್ನು ವಶಕ್ಕೆ ಪಡೆದುಕೋಂಡು ಠಾಣೆಗೆ  ಮಧ್ಯಾಹ್ನ 03-00 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:51/2021 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

4. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.25/2021 ಕಲಂ. 504,353 ಐ.ಪಿ.ಸಿ & 66 INFORMATION TECHNOLOGY ACT 2008:-

          ದಿನಾಂಕ: 09-04-2021 ರಂದು ಕೆ.ಎಸ್.ಆರ್.ಟಿ.ಸಿ, ಚಿಕ್ಕಬಳ್ಳಾಪುರ ವಿಭಾಗದ,ಚಿಕ್ಕಬಳ್ಳಾಪುರ ಘಟಕದ ವ್ಯವಸ್ಥಾಪಕರಾದ ಶ್ರೀ ಎಸ್. ಲಕ್ಷ್ಮೀಪತಿ, ಮೊಬೈಲ್-7760990363 ರವರು ಠಾಣೆಗೆ ಹಾಜರಾಗಿ ನೀಡಿದ ಅರ್ಜಿಯ ಸಾರಾಂಶವೇನೆಂದರೆ, ದಿನಾಂಕ: 07-04-2021 ರಿಂದ ಕೆ.ಎಸ್.ಆರ್.ಟಿ.ಸಿ ನೌಕರರು 6ನೇ ವೇತನ ಆಯೋಗದ ಅನುಷ್ಟಾನಕ್ಕಾಗಿ ಸಾರಿಗೆ ನೌಕರರು ಅನಿರ್ಧಿಷ್ಟಾವದಿ ಮುಷ್ಕರವನ್ನು ಹಮ್ಮಿಕೊಂಡಿದ್ದು, ದಿನಾಂಕ: 08-04-2021 ರಂದು ಚಿಕ್ಕಬಳ್ಳಾಪುರ ಘಟಕದ ಹಿರಿಯ ಚಾಲಕರುಗಳಾದ ಶ್ರೀ ಹೆಚ್.ವಿ ಸತ್ಯನಾರಾಯಣರಾವ್, ಚಾಲಕ ಬಿಲ್ಲೆ ಸಂಖ್ಯೆ: 355 ಮತ್ತು ಶ್ರೀ ಬಿ.ವಿ.ಕೆ ಮೂರ್ತಿ, ಚಾಲಕ, ಬಿಲ್ಲೆ ಸಂಖ್ಯೆ: 13332 ರವರುಗಳು ಘಟಕಕ್ಕೆ ಹಾಜರಾಗಿ ಪೊಲೀಸ್ ಬಂದೋಬಸ್ತಿನಲ್ಲಿ ಮಾರ್ಗಕ್ಕೆ ಸೂಚಿಸಿದಂತೆ ಸದರಿಯವರುಗಳು ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ. ಈ ಸಂಬಂದ ಸಾಮಾಜಿಕ ಜಾಲತಾಣವಾದ ವಾಟ್ಸಪ್ ನಲ್ಲಿ(Whatsup) K.S.R.T.C (C.B.P) ಎಂಬ ಗ್ರೂಪಿನಲ್ಲಿ ಚಿಕ್ಕಬಳ್ಳಾಪುರ ಘಟಕದ ಸಿಬ್ಬಂದಿಯವರಾದ ಶ್ರೀ ಚಂದ್ರ, ಜೆ.ಎಸ್, ಮೊಬೈಲ್-9036688408, ಶ್ರೀ ರಾಮಾಂಜಿಉಷಾ ಮೊಬೈಲ್-9741177940 ಹಾಗೂ ರಮೇಶ್, ಮೊಬೈಲ್-9743841885 ರವರುಗಳು ದಿನಾಂಕ: 08-04-2021 ರಂದು ಚಿಕ್ಕಬಳ್ಳಾಪುರ ಘಟಕದ ಹಿರಿಯ ಚಾಲಕರುಗಳಾದ ಶ್ರೀ ಹೆಚ್.ವಿ ಸತ್ಯನಾರಾಯಣರಾವ್, ಮತ್ತು ಶ್ರೀ ಬಿ.ವಿ.ಕೆ ಮೂರ್ತಿ ರವರುಗಳು ಘಟಕಕ್ಕೆ ಹಾಜರಾಗಿ ಕರ್ತವ್ಯವನ್ನು ನಿರ್ವಹಿಸಿದ್ದರಿಂದ ಸದರಿ ಬಿ ಕೆ ಮೂರ್ತಿ ಮತ್ತು  ಹೆಚ್.ವಿ ಸತ್ಯನಾರಾಯಣರಾವ್ ರವರುಗಳ ಭಾವ ಚಿತ್ರಗಳ ಮೇಲೆ “ಶ್ರದ್ದಾಂಜಲಿ” ಎಂಬ ಬರಹವನ್ನು ಹಾಕಿ,0.27 ಸೆಕೆಂಡ್ಸ್ ಬರುವ ಶೋಕ ಗೀತಿಯನ್ನು ಆಕ್ಷೇಪಣಾರ್ಹ ತಲೆಬರಹದೊಂದಿಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ವಾಟ್ಸಪ್ ನಲ್ಲಿ(Whatsup) K.S.R.T.C (C.B.P) ಎಂಬ ಗ್ರೂಪಿನಲ್ಲಿ ಅಪ್ಲೋಡ್ ಮಾಡಿ ಸಿಬ್ಬಂದಿಯವರ ಮನೋಸ್ಥೈರ್ಯವನ್ನು ಕುಂದಿಸಿರುವುದಲ್ಲದೆ, ಇತರೆ ಸಿಬ್ಬಂದಿಯವರುಗಳು ಕರ್ತವ್ಯಕ್ಕೆ ಹಾಜರಾಗುವುದನ್ನು ಅಡ್ಡಿಪಡಿಸಿರುವುದಾಗಿರುತ್ತದೆ. ಆದ್ದರಿಂದ ತಾವುಗಳು ಮೇಲ್ಕಂಡ ಸಿಬ್ಬಂದಿಯವರ ವಿರುದ್ದ ಕಾನೂನು ಕ್ರಮವನ್ನು ಜರುಗಿಸಲು ಕೋರಿ ನೀಡಿದ ದೂರು.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.143/2021 ಕಲಂ. 379 ಐ.ಪಿ.ಸಿ :-

          ದಿನಾಂಕ: 08/04/2021 ರಂದು ರಾತ್ರಿ 8.30 ಗಂಟೆಗೆ ಮಂಜುನಾಥ ಬಿನ್ ಶ್ರೀನಿವಾಸಪ್ಪ, 45 ವರ್ಷ, ದೋಬಿ ಜನಾಂಗ, ಗಾರೆಕೆಲಸ, ಚಿಕ್ಕಕಟ್ಟಿಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ 3 ಮೇಕೆಗಳಿದ್ದು, ಸದರಿ ಮೇಕೆಗಳನ್ನು ತಾನು ತಮ್ಮ ಮನೆಯಿಂದ ಸ್ವಲ್ವ ದೂರದಲ್ಲಿರುವ ತಮ್ಮ ಜಾಗದಲ್ಲಿರುವ ಚಪ್ಪರದ ಕೆಳಗೆ ಕಟ್ಟಿ ಹಾಕಿಕೊಳ್ಳುತ್ತಿರುತ್ತೇನೆ. ಎಂದಿನಂತೆ ದಿನಾಂಕ: 06/04/2021 ರಂದು ಬೆಳಿಗ್ಗೆ 06.00 ಗಂಟೆ ಸಮಯದಲ್ಲಿ ತಾನು ತನ್ನ ಬಾಬ್ತು ಮೇಲ್ಕಂಡ 3 ಮೇಕೆಗಳನ್ನು ತಮ್ಮ ಚಪ್ಪರದ ಬಳಿ ಕಟ್ಟಿ ಹಾಕಿ ಅದೇ ದಿನ ಮದ್ಯಾಹ್ನ 1.00 ಗಂಟೆಗೆ ತಾನು ಸದರಿ ಮೇಕೆಗಳಿಗೆ ಮೇವು ಹಾಕಿ ಕೆಲಸದ ನಿಮಿತ್ತ ನಾಯಿಂದ್ರಹಳ್ಳಿಗೆ ಹೋಗಿರುತ್ತೇನೆ. ಅದೇ ದಿನ ಸಂಜೆ 5.00 ಗಂಟೆಗೆ ತಮ್ಮ ಚಪ್ಪರದ ಬಳಿ ಬಂದು ನೋಡಲಾಗಿ 3 ಮೇಕೆಗಳ ಪೈಕಿ ಒಂದು ಮೇಕೆ ಸ್ಥಳದಲ್ಲಿ ಇಲ್ಲದೆ ಇದ್ದು ತಾನು ತಮ್ಮ ಗ್ರಾಮದ ಸುತ್ತ ಮುತ್ತಲಿನಲ್ಲಿ ಹುಡುಕಾಡಲಾಗಿ ತನ್ನ ಮೇಕೆ ಪತ್ತೆ ಆಗಿರುವುದಿಲ್ಲ. ಸದರಿ ಮೇಕೆಯನ್ನು ದಿನಾಂಕ: 06/04/2021 ರಂದು ಮದ್ಯಾಹ್ನ 1.00 ಗಂಟೆಯಿಂದ ಸಂಜೆ 5.00 ಗಂಟೆ ಮಧ್ಯೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ತನ್ನ ಮೇಕೆ ಕಂದು ಮತ್ತು ಬಿಳಿ ಬಣ್ಣದಿಂದ ಕೂಡಿದ್ದು, ಸುಮಾರು 7,000/- ರೂ ಬೆಲೆ ಬಾಳುತ್ತೆ. ಕಳುವಾಗಿರುವ ತನ್ನ ಮೇಕೆಯನ್ನು ಹುಡುಕಾಡಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಳುವಾಗಿರುವ ತನ್ನ ಮೇಕೆಯನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.144/2021 ಕಲಂ. 279,304(A) ಐ.ಪಿ.ಸಿ :-

          ದಿನಾಂಕ: 08/04/2021 ರಂದು ರಾತ್ರಿ 11.15 ಗಂಟೆ ಸಮಯದಲ್ಲಿ ತಾಜ್ ಪಾಷ ಬಿನ್ ಬಾಬು, 27 ವರ್ಷ, ಗ್ರಾಮ ಲೆಕ್ಕಿಗರು, ಅಟ್ಟೂರು ಕಂದಾಯ ವೃತ್ತ, ಕೈವಾರ ಹೋಬಳಿ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು 7 ವರ್ಷಗಳಿಂದ ಅಟ್ಟೂರು ಕಂದಾಯ ವೃತ್ತದ ಗ್ರಾಮ ಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ. ಶ್ರೀನಿವಾಸಪುರ ತಾಲ್ಲೂಕು ಚಾಂಪಲ್ಲಿ ಗ್ರಾಮದ ವಾಸಿಯಾದ ಸಿ.ಎಂ.ಅಮರೇಶ ಬಿನ್ ಮುನಿನಾರಾಯಣಪ್ಪ ರವರಿಗೆ 48 ವರ್ಷ ವಯಸ್ಸಾಗಿದ್ದು, ಆತನು ಈಗ್ಗೆ ಸುಮಾರು ಒಂದು ವರ್ಷದಿಂದ ಚಿಂತಾಮಣಿ ತಾಲ್ಲೂಕು ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ. ಈ ದಿನ ದಿನಾಂಕ 08/04/2021 ರಂದು ರಾತ್ರಿ 9.30 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯಲ್ಲಿದ್ದಾಗ, ಕೊಡದವಾಡಿ ಗ್ರಾಮದ ವಾಸಿಯಾದ ಚೌಡರೆಡ್ಡಿ ರವರು ತನಗೆ ಪೋನ್ ಮಾಡಿ ಚಿಂತಾಮಣಿ-ಶ್ರೀನಿವಾಸಪುರ ರಸ್ತೆಯ ಕೊಡದವಾಡಿ ಗ್ರಾಮದ ಬಳಿ ರಾಜಸ್ವ ನಿರೀಕ್ಷಕರಾದ ಸಿ.ಎಂ.ಅಮರೇಶ ರವರಿಗೆ ಅಪಘಾತವಾಗಿರುವುದಾಗಿ ತಿಳಿಸಿದ್ದರ ಮೇರೆಗೆ ತಾನು ಮತ್ತು ಕೊಡದವಾಡಿ ಕಂದಾಯ ವೃತ್ತದ ಗ್ರಾಮ ಲೆಕ್ಕಿಗನಾದ ಅನಿಲ್ ಕುಮಾರ್ ರವರು ಸ್ಥಳಕ್ಕೆ ಹೋಗಿ ನೋಡಲಾಗಿ, ಸ್ಥಳದಲ್ಲಿ ಜನರು ಸೇರಿದ್ದು ರಸ್ತೆಯ ಬದಿಯಲ್ಲಿ ಒಂದು ಎತ್ತಿನಗಾಡಿ ಹಾಗೂ ದ್ವಿಚಕ್ರ ವಾಹನವಿದ್ದು, ದ್ವಿಚಕ್ರ ವಾಹನವು ರಾಜಸ್ವ ನಿರೀಕ್ಷಕರಾದ ಸಿ.ಎಂ.ಅಮರೇಶ ರವರದ್ದಾಗಿದ್ದು ಅದರ ನೊಂದಣಿ ಸಂಖ್ಯೆ ಕೆಎ-07 ಇಬಿ-3704 ಆಗಿದ್ದು, ಹೀರೋ ಗ್ಲಾಮರ್ ಕಂಪನಿಯದ್ದಾಗಿರುತ್ತೆ. ಸದರಿ ವಾಹನದ ಮುಂಭಾಗದ ಹೆಡ್ ಲೈಟ್ ಜಖಂ ಆಗಿರುತ್ತೆ. ಸ್ಥಳದಲ್ಲಿದ್ದ ಚೌಡರೆಡ್ಡಿ ರವರನ್ನು ವಿಚಾರ ಮಾಡಲಾಗಿ ಈ ದಿನ ರಾತ್ರಿ 8.00 ಗಂಟೆ ಸಮಯದಲ್ಲಿ ಆರ್.ಐ ಸಿ.ಎಂ.ಅಮರೇಶ ರವರು ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿ ಕಡೆಯಿಂದ ತಮ್ಮ ಗ್ರಾಮದ ಬಳಿ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮುಂದೆ ಹೋಗುತ್ತಿದ್ದ ಎತ್ತಿನಗಾಡಿಗೆ ಹಿಂದುಗಡೆ ಡಿಕ್ಕಿ ಹೊಡೆಸಿದ್ದರಿಂದ ಆತನು ದ್ವಿಚಕ್ರ ವಾಹನದ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿದ್ದು, ಆತನ ತಲೆ ಮತ್ತು ಹೊಟ್ಟೆಗೆ ರಕ್ತಗಾಯಗಳಾಗಿದ್ದು, ತಾವು ಆತನನ್ನು ಉಪಚರಿಸಿ ಆತನನ್ನು 108 ಆಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ಸಾರ್ವಜನಿಕರು ರಾಜಸ್ವ ನಿರೀಕ್ಷಕರಾದ ಸಿ.ಎಂ.ಅಮರೇಶ ರವರನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸುಮಾರು 9.40 ಗಂಟೆ ಸಮಯದಲ್ಲಿ ತನ್ನ ತಂದೆಯಾದ ಸಿ.ಎಂ.ಅಮರೇಶ ರವರು ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಆತನ ಮಗನಾದ ದಿಲೀಪ್ ರೆಡ್ಡಿ ರವರು ನನಗೆ ಪೋನ್ ಮಾಡಿ ತಿಳಿಸಿರುತ್ತಾರೆ. ನಂತರ ವಿಚಾರ ತಿಳಿಯಲಾಗಿ ಸಿ.ಎಂ.ಅಮರೇಶ ರವರು ಕೋವಿಡ್-19 ಕರ್ತವ್ಯಕ್ಕೆ ತಾಲ್ಲೂಕಿನ ದೊಡ್ಡನೆತ್ತ ಮತ್ತು ಸಿಂಗನಹಳ್ಳಿ ಗ್ರಾಮಕ್ಕೆ ಹೋಗಲು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕೊಡದವಾಡಿ ಬಳಿ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎತ್ತಿನಗಾಡಿಗೆ ಡಿಕ್ಕಿ ಹೊಡೆಸಿದ್ದರಿಂದ ಗಾಯಗಳಾಗಿ ಮೃತಪಟ್ಟಿರುವುದಾಗಿ ತಿಳಿಯಿತು. ಆದ್ದರಿಂದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.84/2021 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ 09/04/2021 ರಂದು ಬೆಳಿಗ್ಗೆ 9-00  ಗಂಟೆಗೆ ಶ್ರೀ ಎನ್. ಮೋಹನ್ , ಪಿ.ಎಸ್.ಐ. ಗೌರಿಬಿದನೂರು ಗ್ರಾಮಾಂತರ ಠಾಣೆ ರವರು ಠಾಣೆಗೆ ಹಾಜರಾಗಿ   ನೀಡಿದ  ದೂರಿನ ಸಾರಾಂಶವೇನೆಂಧರೆ  ದಿನಾಂಕ: 09/04/2021 ರಂದು ಬೆಳಿಗ್ಗೆ 6-30 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಹುಣಸೇನಹಳ್ಳಿ  ಗ್ರಾಮದಲ್ಲಿ  ಯಾರೋ ಆಸಾಮಿಗಳು  ತಮ್ಮ ವಾಸದ ಮನೆಯ ಹಿತ್ತಲಿನಲ್ಲಿ  ಅಕ್ರಮವಾಗಿ ಯಾವುದೇ ಪರವಾನಗಿಯಿಲ್ಲದೇ ಮದ್ಯವನ್ನು ದಾಸ್ತಾನು ಮಾಡಿಕೊಂಡು ಮಾರಾಟ  ಮಾಡುತ್ತಿದ್ದಾರೆಂದು ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು  ಸಿಬ್ಬಂದಿಯಾದ  ಹೆಚ್.ಸಿ-10 ಶ್ರೀರಾಮಯ್ಯ ಮ.ಹೆಚ್.ಸಿ-07 ಶ್ರೀಮತಿ ಅನಿತಾ ಮತ್ತು  ಪಿ.ಸಿ.179 ಶಿವಶೇಖರ ,  ರವರೊಂದಿಗೆ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538  ರಲ್ಲಿ ಗೌರಿಬಿದನೂರು ತಾಲ್ಲೂಕು ಹುಣಸೇನಹಳ್ಳಿ  ಗ್ರಾಮಕ್ಕೆ  ಬೆಳಿಗ್ಗೆ 7-00 ಗಂಟೆಗೆ  ಹೋಗಿ, ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ ನೋಡಲಾಗಿ  ಯಾರೋ ಇಬ್ಬರು  ಆಸಾಮಿಗಳು  ತಮ್ಮ ವಾಸದ ಮನೆಯ ಹಿತ್ತಲಿನಲ್ಲಿ ಯಾವುದೇ ಪರವಾನಗೆ ಇಲ್ಲದೇ ಅಕ್ರಮವಾಗಿ ಮದ್ಯ , ಮಾರಾಟ ಮಾಡಲು ದಾಸ್ತಾನು ಮಾಡಿದ್ದು  ಪೊಲೀಸ್ ವಾಹನವನ್ನು ಕಂಡು ಮದ್ಯವನ್ನು  ಸ್ಥಳದಲ್ಲಿ ಬಿಟ್ಟು ಅಲ್ಲಿಂದ ಓಡಿ ಹೋಗಿದ್ದು  ಸಿಬ್ಬಂದಿಯವರು ಅವರನ್ನು ಬೆನ್ನಟ್ಟಿ ಹಿಡಿದುಕೊಳ್ಳಲು  ಪ್ರಯತ್ನಿಸಿದರೂ ಸಹಾ ಕೈಗೆ ಸಿಗದೇ ಪರಾರಿಯಾಗಿರುತ್ತಾರೆ.  ಇವರು  ಯಾವುದೇ ಪರವಾನಗಿಯಿಲ್ಲದೇ ಅಕ್ರಮವಾಗಿ ಮದ್ಯವನ್ನು  ಮಾರಾಟ ಮಾಡಲು ದಾಸ್ತಾನು ಮಾಡುತ್ತಿದ್ದುದ್ದಾಗಿ ತಿಳಿದುಬಂದಿರುತ್ತೆ. ಇವರ   ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ ಶ್ರೀಮತಿ ಭಾಗ್ಯಮ್ಮ ಕೊಂ ಲೇಟ್ ರಾಜಣ್ಣ, 40 ವರ್ಷ,ನಾಯಕರು,ವ್ಯಾಪಾರ, ವಾಸ ಹುಣಸೇನಹಳ್ಳಿ  ಗ್ರಾಮ, ಗೌರಿಬಿದನೂರು ತಾಲ್ಲೂಕು ಮತ್ತು ಆಕೆಯ ಮಗನಾದ ಮಹೇಶ ಬಿನ್ ಲೇಟ್ ರಾಜಣ್ಣ, 22 ವರ್ಷ,ನಾಯಕರು, ವ್ಯಾಪಾರ, ವಾಸ ಹುಣಸೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿದುಬಂದಿರುತ್ತೆ.  ನಂತರ ಪಂಚರ ಸಮಕ್ಷಮದಲ್ಲಿ  08  ಮದ್ಯ ಇರುವ ರಟ್ಟಿನ ಬಾಕ್ಸ್ ಗಳನ್ನು  ಪರಿಶೀಲಿಸಲಾಗಿ, ಅದರಲ್ಲಿ 90 ML ಸಾಮರ್ಥ್ಯದ HAY WARDS  CHEERS WHISKY 768 ಟೆಟ್ರಾ ಪ್ಯಾಕೇಟ್ ಗಳು ಇರುತ್ತೆ.ಇದರ  ಒಟ್ಟು  ಮೌಲ್ಯ 26979.84/- ರೂ  ಆಗಿರುತ್ತೆ.  ಸದರಿ ಮದ್ಯ ಸುಮಾರು 69 ಲೀಟರ್ 120 ಎಂ.ಎಲ್. ಇರುತ್ತೆ. ಇವುಗಳ ಪೈಕಿ ಪರೀಕ್ಷೆಗೆ ಕಳುಹಿಸುವ ಸಲುವಾಗಿ ಪ್ರತಿ ರಟ್ಟಿನ ಬಾಕ್ಸ್ ಗಳಲ್ಲಿ ತಲಾ 90 ML ಸಾಮರ್ಥ್ಯದ HAY WARDS CHEERS WHISKY ಒಂದು ಟೆಟ್ರಾ ಪ್ಯಾಕೇಟ್ ಅನ್ನು  ಪ್ರತ್ಯೇಕವಾಗಿ ತೆಗೆದು ಬಿಳಿಬಟ್ಟೆಯಿಂದ ಸುತ್ತಿ ‘’K’’ ಎಂಬ ಅಕ್ಷರದಿಂದ  ಸೀಲು ಮಾಡಿರುತ್ತೆ. ಸದರಿ ಆಸಾಮಿಗಳು  ತಮ್ಮ ವಾಸದ ಮನೆಯ ಹಿತ್ತಲಿನಲ್ಲಿ  ಅಕ್ರಮವಾಗಿ ಯಾವುದೇ ಪರವಾನಗಿಯಿಲ್ಲದೇ ಮದ್ಯವನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ.  ನಂತರ   ಸ್ಥಳದಲ್ಲಿ  ಬೆಳಿಗ್ಗೆ 7-30  ಗಂಟೆಯಿಂದ 8-30   ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಸ್ಥಳದಲ್ಲಿ ದೊರೆತ  90 ML ಸಾಮರ್ಥ್ಯದ  HAY WARDS CHEERS WHISKY  768 ಟೆಟ್ರಾ ಪ್ಯಾಕೇಟ್ ಗಳ ಮದ್ಯವನ್ನು ವಶಪಡಿಸಿಕೊಂಡು, ಠಾಣೆಗೆ ಬೆಳಿಗ್ಗೆ 9-00  ಗಂಟೆಗೆ  ವಾಪಸ್ಸು ಬಂದಿದ್ದು,  ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ  ವಿರುದ್ಧ  ಕಲಂ: 32, 34 ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ ಮೇರೆಗೆ  ಪ್ರಕರಣ ದಾಖಲಿಸಿರುತ್ತೆ.

 

8. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.59/2021 ಕಲಂ. 9B EXPLOSIVE ACT, 1884:-

          ದಿನಾಂಕ:09/04/2021 ರಂದು ಬೆಳಿಗ್ಗೆ 9-45 ಗಂಟೆ ಸಮಯದಲ್ಲಿ ಪಿರ್ಯಾದಿ ಸಿ,ಪಿ,ಸಿ 84 ಮುನಿರಾಜು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:09/04/2021 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ತಾನು ಗುಡಿಬಂಡೆ ಪೊಲೀಸ್ ಠಾಣೆಯ ಸರಹದ್ದಿನ ಬೀಚಗಾನಹಳ್ಳಿ ಕ್ರಾಸ್ ನಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ತನಗೆ ಭಾತ್ಮೀದಾರರಿಂದ ಜಯಂತಿ ಗ್ರಾಮದ ಹತ್ತಿರ ಗಿಡಗಳ ಪೊದೆಯಲ್ಲಿ ಯಾರೋ ಸ್ಪೋಟಕ ವಸ್ತುಗಳು ಇಟ್ಟಿರುವುದಾಗಿ ಬಂದ ಬಾತ್ಮೀಯ ಮೇರೆಗೆ ತಾನು ಕೂಡಲೆ ಸ್ಥಳಕ್ಕೆ ಹೋಗಿ ನೋಡಿದಾಗ ಜಯಂತಿ ಗ್ರಾಮದ ಹತ್ತಿರದ ಗಿಡಗಳ ಪೊದೆಯಲ್ಲಿ IDEAL POWER 90 ಎಂಬ 36 ಜಿಲೆಟಿನ್ ಗಳು ಮತ್ತು 01 ಇಡಿ ವೈರ್ ಇದ್ದವು ಈ ಸ್ಪೋಟಕ ವಸ್ತುಗಳನ್ನು ಯಾರೋ ಕಿಡಿಗೇಡಿಗಳು ಯಾವುದೋ ಸಮಯದಲ್ಲಿ ತಂದು ಬಿಸಾಡಿ ಹೋಗಿದ್ದು ಈ ಸ್ಪೋಟಕ ವಸ್ತುಗಳನ್ನು ಬಿಸಾಡಿ ಹೋಗಿರುವವರನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

9. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.24/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ:08/04/2021 ರಂದು ಸಂಜೆ 18-30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿ CPC-181 ರವರು ಠಾಣಾ NCR 43/2021 ರಲ್ಲಿ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ್ದು ದಾಖಲಿಸಿದ ವರದಿ ಸಾರಾಂಶವೇನೆಂದರೆ, ದಿನಾಂಕ:08-04-2021 ರಂದು ಮಧ್ಯಾಹ್ನ 1-30 ಗಂಟೆಯಲ್ಲಿ ಪಿ.ಎಸ್.ಐ ಪಾತಪಾಳ್ಯ ಠಾಣೆ ರವರು ಗಸ್ತಿನಲ್ಲಿದ್ದಾಗ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ಬೋವಿಪಲ್ಲಿ ಗ್ರಾಮದ ಸರ್ಕಾರಿ ಕೆರೆ ಅಂಗಳದಲ್ಲಿ ಜಾಲಿಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವನ್ನಾಗಿಟ್ಟುಕೊಂಡು ಆಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರಾದ ಸಿಪಿಸಿ-234 ಸುರೇಶ ಕೊಂಡಗೂಳಿ, ಸಿಪಿಸಿ-148 ದನಂಜಯ, ಪಿಸಿ-181 ಪ್ರಸಾದ್, ಸಿಪಿಸಿ-124 ಆದಿನಾರಾಯಣ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-59 ವಾಹನದಲ್ಲಿ ಚಾಲಕ AHC-21 ಸತ್ಯಾನಾಯ್ಕ್ ರವರೊಂದಿಗೆ ಮೇಲ್ಕಂಡ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು 100 ರೂ ಅಂದರ್, 100 ರೂ ಬಾಹರ್ ಎಂದು ಕೂಗಿಕೊಂಡು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ನಾವು ದಾಳಿ ಮಾಡಲು ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ಎಲ್ಲಿಯೂ ಕದಲಬೇಡಿ ಎಂದು ಎಚ್ಚರಿಕೆ ನೀಡಿ ಇಸ್ಪೀಟ್ ಜೂಜಾಟವಾಡಯತ್ತಿದ್ದವರನ್ನು  ವಶಕ್ಕೆ ಪಡೆದು ಸದರಿಯವರ ಹೆಸರು ಮತ್ತು ವಿಳಾಸ ಕೇಳಲಾಗಿ 1)ರಾಮಾಂಜಿನಪ್ಪ ಬಿನ್ ನರಸಿಂಹಪ್ಪ, 30 ವರ್ಷ, ನಾಯಕರು, ಗಾರೆ ಕೆಲಸ, ಬೋವಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 2)ಶಂಕರ ಬಿನ್ ಶಿವಣ್ಣ, 28 ವರ್ಷ, ನಾಯಕರು, ಕಂಬಿ ಕೆಲಸ, ಬೋವಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು  3) ಶ್ರೀರಾಮ ಬಿನ್ ನರಸಿಂಹಪ್ಪ, 41 ವರ್ಷ, ಮಗ್ಗದ ಕೆಲಸ, ವಾಸ: 1ನೇ ಬ್ಲಾಕ್, ಎಗವ ಮಿದ್ದುಲು, ಬಿಳ್ಳೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು  ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಸಿಕ್ಕಿಬಿದ್ದಿದ್ದ ಮೂರು ಜನರನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ  520/- ರೂ ನಗದು ಹಣ, ಒಂದು ಹಳೆಯ ಪ್ಲಾಸ್ಟಿಕ್ ಚೀಲ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಮಧ್ಯಾಹ್ನ 2-00 ರಿಂದ 3-00 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳು, ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು,  ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ.24/2021 ಕಲಂ-87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತದೆ.

 

10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.96/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ: 08-04-2021 ರಂದು ರಾತ್ರಿ 8.30 ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 08-04-2021 ರಂದು ಠಾಣಾಧಿಕಾರಿಗಳು ನನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ನಾನು ಬೆಳ್ಳುಟ್ಟಿ, ಹಿತ್ತಲಹಳ್ಳಿ, ಬೋದಗೂರು, ಭಕ್ತರಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ರಾತ್ರಿ 7.45 ಗಂಟೆ ಸಮಯದಲ್ಲಿ ಮಳಮಾಚನಹಳ್ಳಿ ಗ್ರಾಮದ ಕಡೆ ಹೋಗುತ್ತಿದ್ದಾಗ ಬಾತ್ಮಿದಾರರಿಂದ ಮಳಮಾಚನಹಳ್ಳಿ ಗ್ರಾಮದ ನರಸಿಂಹಮೂರ್ತಿ ಬಿನ್ ವೆಂಕಟರೆಡ್ಡಿ ರವರ ಮನೆಯ ಮುಂಬಾಗದ ಸಿಮೆಂಟ್ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ನರಸಿಂಹಮೂರ್ತಿ ಬಿನ್ ವೆಂಕಟರೆಡ್ಡಿ ರವರ ಮನೆಯ ಬಳಿ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳವಾದ ರಸ್ತೆಯಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಸದರಿ ಆಸಾಮಿ ತನ್ನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ನಾನು ಆತನನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದಂತೆ ಆಸಾಮಿಯು ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಅಲ್ಲಿಯೇ ಬಿಸಾಡಿ  ಓಡಿ ಹೋಗಿದ್ದು, ಸದರಿ ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್. ನ 15 HAYWARDS CHEERS WHISKY ಟೆಟ್ರಾ ಪ್ಯಾಕೆಟ್ ಗಳಿದ್ದು, ಸ್ಥಳದಲ್ಲಿ ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು ಗಳು ಮತ್ತು ಸ್ಥಳದಲ್ಲಿ ಬಿದ್ದಿದ್ದ ಖಾಲಿ ವಾಟರ್ ಪಾಕೇಟ್ ಗಳನ್ನು ಎತ್ತಿಕೊಂಡು ಸದರಿ ಆಸಾಮಿಯ ಹೆಸರು ವಿಳಾಸವನ್ನು ಗ್ರಾಮಸ್ಥರಿಂದ ತಿಳಿಯಲಾಗಿ ನರಸಿಂಹಮೂರ್ತಿ ಬಿನ್ ವೆಂಕಟರೆಡ್ಡಿ, 28 ವರ್ಷ, ವಕ್ಕಲಿಗರ, ಜಿರಾಯ್ತಿ, ವಾಸ: ಮಳಮಾಚನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿದುಬಂದಿದ್ದು, ಸ್ಥಳದಲ್ಲಿದ್ದ ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ವಶಕ್ಕೆ ಹಾಜರುಪಡಿಸಿ ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ನರಸಿಂಹಮೂರ್ತಿ ಬಿನ್ ವೆಂಕಟರೆಡ್ಡಿ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು.

 

11. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.33/2021 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ-08-04-2021 ರಂದು ಮಧ್ಯಾಹ್ನ 04-15 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀನಿವಾಸ, ಹೆಚ್.ಸಿ.61, ಶಿಡ್ಲಘಟ್ಟ ನಗರ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ.08.04.2021 ರಂದು ಬೆಳಿಗ್ಗೆ 8.00 ಗಂಟೆಗೆ ಠಾಣಾಧಿಕಾರಿಗಳು ನನಗೆ ಮತ್ತು ಪಿ.ಸಿ.570 ನರಸಿಂಹಪ್ಪ ರವರಿಗೆ ಕಳುವು ಪ್ರಕರಣಗಳ ಪತ್ತೆ ಮತ್ತು ಅಪರಾದ ತಡೆಗಳ ಬಗ್ಗೆ ನೇಮಕ ಮಾಡಿದ್ದು, ಆದೇಶದಂತೆ ನಾವು ಠಾಣೆಯಿಂದ ಹೊರಟು ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆ,   ಅಜಾದ್ ನಗರ, ಮಯೂರ ಸರ್ಕಲ್, ಅಶೋಕ ರಸ್ತೆ ಕಡೆಯಿಂದ ಶಿಡ್ಲಘಟ್ಟ ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಶಿಡ್ಲಘಟ್ಟ ಬೈಪಾಸ್ ನಲ್ಲಿ ಬರುತ್ತಿದ್ದಾಗ ರಸ್ತೆ ತಿರುವಿನಲ್ಲಿ ಮದ್ಯಾಹ್ನ ಸುಮಾರು 3.30 ಗಂಟೆಯಲ್ಲಿ ಶಿಡ್ಲಘಟ್ಟ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಕಡೆಯಿಂದ ಯಾರೋ ಒಬ್ಬ ಆಸಾಮಿ ದ್ವಿಚಕ್ರ ವಾಹನ ರಸ್ತೆ ಮದ್ಯೆ ನಿಲ್ಲಿಸಿಕೊಂಡು ಯಾರಿಗೋ ಕಾಯುತ್ತಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ಸ್ವಲ್ಪ ದೂರದಿಂದ ನೋಡಿ ದ್ವಿಚಕ್ರ ವಾಹನ ರಸ್ತೆಯ ಮದ್ಯೆ ಬಿಟ್ಟು ಓಡಿ ಹೋಗುತ್ತಿದ್ದು, ನಾವುಗಳು ಹಿಂಬಾಲಿಸಿ ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಮಂಜುನಾಥ ಬಿನ್ ಮುನೀಂದ್ರಪ್ಪ, 36 ವರ್ಷ, ನೇಯ್ಗೆ ಜನಾಂಗ, ಟೆಂಪೋ ಚಾಲಕ, ಮಳ್ಳೂರು ಗ್ರಾಮ, ಹಾಲಿ ವಾಸ ಮಯೂರ ಟಾಕೀಸ್ ಮುಂಭಾಗ ಬಾಡಿಗೆ ವಾಸ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾನೆ. ದ್ವಿಚಕ್ರ ವಾಹನದಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿ ನೋಡಲಾಗಿ 1] Old Admiral  VSOP BRANDY 1 ltr  ಲೇಬಲ್ ಇರುವ 25 ಪ್ಲಾಸ್ಟಿಕ್ ಮದ್ಯದ ಬಾಟಲ್ ಗಳು ಇರುತ್ತೆ. ಒಂದು ಬಾಟಲ್ ಮೇಲೆ 387.80 ರೂಗಳಿದ್ದು, 25 ಮದ್ಯದ ಬಾಟಲ್ ಗಳ ಬೆಲೆ 9695/-ರೂಗಳಾಗಿರುತ್ತೆ. ದ್ವಿಚಕ್ರ ವಾಹನ ನಂಬರ್ ನೋಡಲಾಗಿ ಹಿಂಭಾಗದಲ್ಲಿ AP.03.BK.0655 ನಂಬರ್ ಇದ್ದು ಹೊಂಡಾ ದ್ವಿಚಕ್ರ ವಾಹನ ಆಗಿರುತ್ತೆ. ಮುಂಭಾಗದಲ್ಲಿ ನಂಬರ್ ಇರುವುದಿಲ್ಲ. ಸದರಿ ಆಸಾಮಿಯನ್ನು ಮದ್ಯದ ಬಾಟಲ್ ಗಳನ್ನು ಇಟ್ಟುಕೊಂಡಿರುವ ಬಗ್ಗೆ ಹಾಗೂ ಸಾಗಿಸಲು ಪರವಾನಗಿ ಇದೆಯೇ ಎಂದು ಪ್ರಶ್ನಿಸಿದಾಗ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾನೆ. ಮದ್ಯ ತಂದಿರುವ ಬಗ್ಗೆ ಪ್ರಶ್ನಿಸಲಾಗಿ ಸದರಿ ಆಸಾಮಿ ಅಕ್ಷಯ ಬಾರ್ ನಿಂದ ತಂದಿರುವುದಾಗಿ ತಿಳಿಸಿರುತ್ತಾನೆ. ಸದರಿ ಆಸಾಮಿ ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಮದ್ಯ ಬಾಟಲ್ ಗಳು ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿರುವುದಾಗಿ ಕಂಡು ಬಂದಿರುತ್ತೆ. ಆದ್ದರಿಂದ ಮೇಲ್ಕಂಡ ಮಂಜುನಾಥ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಮಾಲು ಹಾಗೂ ದ್ವಿಚಕ್ರ ವಾಹನ ಸಮೇತ ಹಾಜರಾಗಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 09-04-2021 06:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080