ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 62/2021 ಕಲಂ. 32,34 ಕರ್ನಾಟಕ ಅಬಕಾರಿ ಕಾಯ್ದೆ :-

  ದಿನಾಂಕ:08-03-2021 ರಂದು ರಾತ್ರಿ 8-15 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಶರತ್ ಕುಮಾರ್ ರವರು ಮಾಲು ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಶರತ್ ಕುಮಾರ್ ಆದ ನಾನು ಮತ್ತು ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40-ಜಿ-270 ರಲ್ಲಿ ಬಾಗೇಫಲ್ಲಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಪರಗೋಡು, ಗೂಳೂರು ಕಡೆ ಗಸ್ತು ಮಾಡಿಕೊಂಡು ಸಂಜೆ 6-15 ಗಂಟೆಗೆ ನಲ್ಲಪ್ಪರೆಡ್ಡಿಪಲ್ಲಿ ಗ್ರಾಮಕ್ಕೆ ಬಂದು ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಬಾಗೇಪಲ್ಲಿ ತಾಲ್ಲೂಕಿನ ಜಿಲಾಜಿರ್ಲಾ ಗ್ರಾಮದ ವಾಸಿಯಾದ ರಾಜಕುಮಾರ್ ಬಿನ್ ಅಶ್ವತ್ಥಪ್ಪ, 29 ವರ್ಷ, ಈಡಿಗರು, ವ್ಯಾಪಾರ ರವರು ತನ್ನ ಬಾಬತ್ತು ಕುರಿಗಳ ಶೆಡ್ಡಿನಲ್ಲಿ ಕಾನೂನು ಬಾಹಿರವಾಗಿ ಮಧ್ಯವನ್ನು ಮಾರಾಟ ಮಾಡಲು ಸಂಗ್ರಹಣೆ ಮಾಡಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಂಚರ ಸಮಕ್ಷಮ ಮೇಲ್ಕಂಡ ಸ್ಥಳಕ್ಕೆ ಹೋಗಿ ಸ್ಥಳದಲ್ಲಿದ್ದ 1) 90 ML HAYWARD CHEERS 54 TETRA POCKETS 2) 180 ಎಂ.ಎಲ್ ಸಾಮರ್ಥ್ಯದ 6 OLD TAVERN WHISKY TETRA POCKETS 3) 8 PM 180 ಎಂ.ಎಲ್ ಸಾಮರ್ಥ್ಯದ 7 WHISKY TETRA POCKETS ಇದ್ದು, ಇದರ ಒಟ್ಟು ಸಾಮರ್ಥ್ಯದ 7ಲೀಟರ್ 300 ಎಂ.ಎಲ್ ಆಗಿದ್ದು, ಇದರ ಒಟ್ಟು ಬೆಲೆ 3024/- ರೂಗಳಾಗಿರುತ್ತೆ. ಸದರಿ ಆಸಾಮಿಗೆ ಮಧ್ಯವನ್ನು ಮಾರಾಟ ಮಾಡಲು ಯಾವುದಾದರೂ ಪರವಾನಗಿ ಇದೇಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು. ನಂತರ ಸದರಿ ಮಾಲುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಎಲ್ಲಾ ಮಾಲುಗಳ ಪೈಕಿ ಒಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು B ಎಂಬ ಅಕ್ಷರದಿಂದ ಸೀಲು ಮಾಡಿರುತ್ತೆ. ನಂತರ ಮಾಲುಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮವಾಗಿ ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡಿದ ರಾಜಕುಮಾರ್ ಬಿನ್ ಅಶ್ವತ್ಥಪ್ಪ ರವರ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿ ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕ್ರಮಜರುಗಿಸಲು ಕೋರಿ ನೀಡಿದ ದೂರು.

 

 2.ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 63/2021 ಕಲಂ. 32,34 ಕರ್ನಾಟಕ ಅಬಕಾರಿ ಕಾಯ್ದೆ :-

  ದಿನಾಂಕ:08-03-2021 ರಂದು ರಾತ್ರಿ 9-45 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಎನ್. ರಾಜಣ್ಣ ರವರು ಮಾಲು,ಆರೋಪಿ,ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಎನ್. ರಾಜಣ್ಣ ಆದ ಮತ್ತು ಸಿಬ್ಬಂದಿಯವರಾದ ಕೃಷ್ಣಪ್ಪ, ಸಿ.ಹೆಚ್.ಸಿ-80, ಜಯಣ್ಣ, ಸಿಪಿಸಿ-152 ಹಾಗೂ ಜೀಪ್ ಚಾಲಕನಾದ ಮಧು, ಸಿಪಿಸಿ-527 ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40-ಜಿ-270 ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಬಾಗೇಪಲ್ಲಿ ತಾಲ್ಲೂಕಿನ ಗೂಳೂರು, ಚೆನ್ನರಾಯನಹಳ್ಳಿ ಹಾಗೂ ಇತ್ಯಾದಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ರಾತ್ರಿ 8-00 ಗಂಟೆಗೆ ಜಿಲಾಜಿರ್ಲಾ ಗ್ರಾಮಕ್ಕೆ ಬಂದು ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಜಿಲಾಜಿರ್ಲಾ ಗ್ರಾಮದ ವಾಸಿಯಾದ ರಾಜು ಬಿನ್ ಕೃಷ್ಣಪ್ಪ, 29 ವರ್ಷ, ಗೊಲ್ಲರು, ವ್ಯವಸಾಯ ರವರು ಇದೇ ಗ್ರಾಮದ ವಾಸಿಯಾದ ಲಕ್ಷ್ಮೀನಾರಾಯಣಪ್ಪ ರವರ ಬಾಬತ್ತು ಕುರಿಗಳ ಶೆಡ್ಡಿನಲ್ಲಿ ಕಾನೂನು ಬಾಹಿರವಾಗಿ ಮಧ್ಯವನ್ನು ಮಾರಾಟ ಮಾಡಲು ಸಂಗ್ರಹಣೆ ಮಾಡಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಂಚರ ಸಮಕ್ಷಮ ಮೇಲ್ಕಂಡ ಸ್ಥಳಕ್ಕೆ ಹೋಗಿ ಸ್ಥಳದಲ್ಲಿದ್ದ 1) 90 ML HAYWARD CHEERS 36 TETRA POCKETS 2) 180 ಎಂ.ಎಲ್ ಸಾಮರ್ಥ್ಯದ 15 OLD TAVERN WHISKY TETRA POCKETS 3) 180 ಎಂ.ಎಲ್ ಸಾಮರ್ಥ್ಯದ 6 OLD ADMIRAL VSOP BRANDY TETRA POCKET ಇದ್ದು, ಇದರ ಒಟ್ಟು ಸಾಮರ್ಥ್ಯದ 7 ಲೀಟರ್ 060 ಎಂ.ಎಲ್ ಆಗಿದ್ದು, ಇದರ ಒಟ್ಟು ಬೆಲೆ 3085/- ರೂಗಳಾಗಿರುತ್ತೆ. ಸದರಿ ಆಸಾಮಿಗೆ ಮಧ್ಯವನ್ನು ಮಾರಾಟ ಮಾಡಲು ಯಾವುದಾದರೂ ಪರವಾನಗಿ ಇದೇಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು. ನಂತರ ಸದರಿ ಮಾಲುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಎಲ್ಲಾ ಮಾಲುಗಳ ಪೈಕಿ ಒಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು B ಎಂಬ ಅಕ್ಷರದಿಂದ ಸೀಲು ಮಾಡಿರುತ್ತೆ. ನಂತರ ಮಾಲುಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮವಾಗಿ ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡಿದ ರಾಜು ಬಿನ್ ಕೃಷ್ಣಪ್ಪ ರವರ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿ ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕ್ರಮಜರುಗಿಸಲು ಕೋರಿ ನೀಡಿದ ದೂರು.

 

3. ಡಿಸಿಬಿ/ಸಿಇಎನ್ ಪೊಲೀಸ್ ಠಾಣೆ ಮೊ.ಸಂ. 15/2021 ಕಲಂ. 419, 420 ಐಪಿಸಿ ಮತ್ತು ಸೆಕ್ಷನ್ 66(D),66(C) ಆಫ್ INFORMATION TECHNOLOGY ACT 2008 :-

  ದಿನಾಂಕ:09-03-2021 ರಂದು ಪಿರ್ಯಾದಿದಾರರಾದ ಶ್ರೀ ಪಿ, ಸುಧಾಕರ್ ಬಿನ್ ಪಿ, ಗೋವಿಂದಪ್ಪ, 34 ವರ್ಷ, ಹೆಚ್.ಡಿ.ಎಫ್.ಸಿ ಬ್ಯಾಂಕಿನಲ್ಲಿ ಕೆಲಸ. ಮೇಳ್ಯಾ ಗ್ರಾಮ, ಗೌರಿಬಿದನೂರು ತಾಲ್ಲೂಕು, ಮೊಬೈಲ್ ನಂಬರ್- 7989782529. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಸುಮಾರು 10 ವರ್ಷಗಳಿಂದ ಬೆಂಗಳೂರಿನ ಯಲಹಂಕ ನಗರದ ಹೆಚ್.ಡಿ.ಎಫ್.ಸಿ ಬ್ಯಾಂಕ್ ಶಾಖೆಯಲ್ಲಿ 03711040001001 ಸಂಖ್ಯೆಯ ಉಳಿತಾಯ ಖಾತೆಯನ್ನು ಹೊಂದಿರುತ್ತೇನೆ.ಅದಕ್ಕೆ ಎ ಟಿ ಎಂ ಕಾರ್ಡನ್ನು ಹೊಂದಿದ್ದು, ಇದರಲ್ಲಿ ನನ್ನ ಹಣ ಕಾಸಿನ ವ್ಯವಹಾರಗಳನ್ನು ಮಾಡುತ್ತಿದ್ದೆ. ಈಗಿರುವಲ್ಲಿ ದಿನಾಂಕ:-04-01-2021 ರಂದು ನಾನು ನಮ್ಮ ಮನೆಯಲ್ಲಿ ಇದ್ದಾಗ ಮೊ ಸಂಖ್ಯೆ:7834861195  ಸಂಖ್ಯೆಯ ಪೋನ್ ನಂಬರಿನಿಂದ ನನಗೆ ಪೋನ್ ಮಾಡಿ ನೀವು ಜಾಬ್ ಹುಡುಕುತಿದ್ದೀರ, ಆಗಾದರೆ ನೀವು ಶೈನ್ ಡಾಟ್ ಕಾಮ್ ಜಾಭ್ ಪೋರ್ಟಲ್ ನಲ್ಲಿ ನೀವು ರಿಜಿಸ್ಟರ್ ಮಾಡಿಸಿಕೊಳ್ಳಿ ಎಂತ ತಿಳಿಸಿದರು. ನಂತರ ನಾವು ಒಂದು ಲಿಂಕ್ ನ್ನು ನಿಮ್ಮ ಮೊಬೈಲ್ ಗೆ ಕಳುಹಿಸುತ್ತೇವೆ, ಅದನ್ನು ಓಪನ್ ಮಾಡಿ ಪ್ರೋಸಸ್ ಶುಲ್ಕ 100/- ರೂ ಕಟ್ಟಬೇಕು ಅಂತ ಹೇಳಿದ್ದು, ನನ್ನ ಮೊಬೈಲ್ ಗೆ ಓಟಿಪಿ ನಂಬರನ್ನು  ಕಳುಹಿಸಿದರು. ನಾನು ಅವರಿಗೆ ನನ್ನ ಮೊಬೈಲ್ ಗೆ ಬಂದಿರುವ ಓಟಿಪಿ ನಂಬರ್ ಹೇಳಿದೆ. ಅದನ್ನು ಪಡೆದುಕೊಂಡ ಅವರು 100/- ರೂಗಳ ಬದಲಾಗಿ 29,000/-ರೂಗಳನ್ನು ನನ್ನ ಮೇಲ್ಕಂಡ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಿಕೊಂಡಿರುತ್ತಾನೆ, ನಂತರ ನಾನು ಮೇಲ್ಕಂಡ  ಅವನ ಪೋನ್ ನಂಭರ್ ಗೆ ಕರೆ ಮಾಡಲಾಗಿ ಕರೆಯನ್ನು ಸ್ವೀಕರಿಸಿರುವುದಿಲ್ಲ, ನನಗೆ ಪೋನ್ ಮಾಡಿ ಶೈನ್ ಡಾಟ್ ಕಾಮ್ ಜಾಬ್ ಪೋರ್ಟಲ್ ನಲ್ಲಿ ನಿಮ್ಮ ಹೆಸರು & ಬಯೋಡಾಟಾ ವನ್ನು ರಿಜಿಸ್ಟರ್ ಮಾಡಿಸಿಕೊಳ್ಳಿ ಎಂತ ನನ್ನನ್ನು ನಂಬಿಸಿ, ನನ್ನ ಮೇಲ್ಕಂಡ ಹೆಚ್ ಡಿ ಎಪ್ ಸಿ ಬ್ಯಾಂಕ್ ಖಾತೆಯಿಂದ ಒಟ್ಟು 29,000/- ರೂಗಳನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವವರನ್ನು ಪತ್ತೆ ಮಾಡಿ, ನನ್ನ ಹಣ ನನಗೆ ವಾಪಸ್ಸು ಕೊಡಿಸಬೇಕಾಗಿ  ಮತ್ತು ಆಪಾಧಿತನ ವಿರುದ್ದ ಕಾನೂನು ಕ್ರಮ ಜರಗಿಸಲು  ಕೋರಿ ನೀಡಿದ ದೂರು.

 

 4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 35/2021 ಕಲಂ. 323,447,448,452,504,506 ರೆ/ವಿ 34 ಐಪಿಸಿ :-

  ದಿನಾಂಕ:09-03-2021  ರಂದು ಬೆಳಿಗ್ಗೆ  11.30  ಗಂಟೆಯಲ್ಲಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯ ಕರ್ತವ್ಯ  ನಿರ್ವಹಿಸುತ್ತಿರುವ ಶ್ರೀ. ರವಿಕುಮಾರ್ ಸಿಪಿಸಿ-97 ರವರು  ಚಿಕ್ಕಬಳ್ಳಾಪುರ  ಪ್ರೀನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಲಯವು ಪಿ.ಎಸ್.ಐ ಚಿಕ್ಕಬಳ್ಳಾಪುರ ರವರಿಗೆ ಕಲಂ 156 (3) ಸಿ.ಆರ್.ಪಿ.ಸಿ ರೀತ್ಯಾ  ಪ್ರಕರಣ ದಾಖಲಿಸಿಕೊಂಡು ತನಿಖೆ  ಮಾಡಿ ದಿನಾಂಕ:20-03-2021ರ ಒಳಗೆ  ಅಂತಿಮ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶ ಮಾಡಿ ಸಾದರುಪಡಿಸಿದ  P.C.R. NO.38/2021 ರ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಶ್ರೀಮತಿ. ನಿಲಮ್ಮ ಬಿನ್ ವೆಂಕಟಾಚಲಪತಿ ರವರು  ಆರೋಪಿ-1 ಶ್ರೀ.ವೆಂಕಟಾಚಲಪತಿ ಬಿನ್ ಲೇಟ್ ಎಲ್.ವೆಂಕಟೇಶಪ್ಪ ಲಿಂಗಶೆಟ್ಟಿಪುರ  ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರ ಮಗಳಾಗಿರುತ್ತಾಳೆ. ಪಿರ್ಯಾದಿ ಶ್ರೀಮತಿ. ನಿಲಮ್ಮರವರಿಗೆ ಅವಿಭಕ್ತ ಕುಟುಂಬದ ತನ್ನ ತಾತನ ಮೂಲಕ ಪಿರ್ತಾಜಿತವಾದ ಆಸ್ತಿ ಬಂದಿರುತ್ತದೆ .ಇಲ್ಲಿಯ ತನಕ ಪಿರ್ಯಾದಿಗೆ ತನ್ನ ಪಿರ್ತಾಜಿತವಾದ ಆಸ್ತಿಯಾದ ಚಿಕ್ಕಬಳ್ಳಾಪುರ ತಾಲ್ಲೂಕು ಕಸಭಾ ಹೋಬಳಿ ಲಿಂಘಶೆಟ್ಟಪುರ ಗ್ರಾಮದ ಸರ್ವೇ ನಂಬರ್ 41/3 ರಲ್ಲಿ 01 ಎಕರೆ 22 ಗುಂಟೆ ಜಮೀನು ವಿಭಾಗ  ಆಗಿರುವುದಿಲ್ಲ ಒಂದೇ ಕುಟುಂಬದಲ್ಲಿ ವಾಸವಾಗಿರುತ್ತಾರೆ. ಪಿರ್ಯಾದಿ ಶ್ರೀಮತಿ. ನಿಲಮ್ಮ ರವರು ತನ್ನ ತಂದೆಯಾದ ಶ್ರೀ.ವೆಂಕಟಾಚಲಪತಿ ಬಿನ್ ಲೇಟ್ ಎಲ್.ವೆಂಕಟೇಶಪ್ಪ ರವರಿಗೆ  ತನ್ನ ಪಿರ್ಯಾಜಿತವಾದ ಆಸ್ತಿಯಲ್ಲಿ ಪ್ರತ್ಯಕವಾಗಿ ವಿಭಾಗ ಕೊಡುವಂತೆ ಹಲವಾರು  ಬಾರಿ ಕೇಳಿಕೊಂಡಿರುತ್ತಾರೆ. ಶ್ರೀ.ವೆಂಕಟಾಚಲಪತಿ ರವರು ಇಂದು ಮತ್ತು ನಾಳೆ ಎಂಬುದಾಗಿ ದಿನಗಳನ್ನು ಮುಂದೂಡಿಕೊಂಡು ಬರುತ್ತಿರುತ್ತಾರೆ. ಆರೋಪಿ 1ರವರು  ಅಮೂಲ್ಯವಾದ ಆಸ್ತಿಯ ಪಾಲನ್ನು ಕಭಳಿಸುವ  ಉದ್ದೇಶದಿಂದ  ಮತ್ತು 3ನೇ ಭಾಗಕ್ಕೆ ಆಸಕ್ತಿಯನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿರುತ್ತಾರೆಂದು  ಆರೋಪಿಯು ಪಿರ್ಯಾದಿದಾರರಿಗೆ ಆಸ್ತಿ ವಿಭಾಗ ಮಾಡಿಕೊಟ್ಟಿರುವುದಿಲ್ಲ. ಪಿರ್ಯಾದಿದಾರರು ರೆವಿನ್ಯೂ  ಇಲಾಖೆಯಿಂದ  ಎಲ್ಲಾ ದಾಖಲೆಗಳನ್ನು  ಪಡೆದುಕೊಂಡು  ಸದರಿಯವರ  ವಿರುದ್ದ ಚಿಕ್ಕಬಳ್ಳಾಪುರ  1ನೇ ಹೆಚ್ಚುವರಿ ಸಿವಿಲ್ ಜೆಡ್ಜ್ ಮತ್ತು ಜೆ,ಎಂ.ಎಪ್.ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು O.S.No.140/2020 ರಂತೆ ವಿಚಾರಣೆ  ನಡೆದು ದಿನಾಂಕ: 04/03/2020 ರಂದು  ಪಿರ್ಯಾದಿದಾರರಿಗೆ ಪ್ರತ್ಯೇಕವಾಗಿ  ವಿಭಾಗ ಮಾಡುವಂತೆ ನ್ಯಾಯಾಲಯದಲ್ಲಿ ಕೋರಿರುತ್ತಾರೆ. ನಂತರ ನ್ಯಾಯಾಲಯವು  ಪಿರ್ಯಾದಿದಾರರಿಗೆ ಮದ್ಯಂತರ ಆದೇಶ ಮಾಡಿ ಪ್ರತಿವಾದಿಗಳು  ಯಾವುದೇ ದಾಖಲೆಗಳನ್ನು  3ನೇ ವ್ಯಕ್ತಿಗೆ  ಆಸ್ತಿಯನ್ನು  ವಿಭಾಗ ಮಾಡಿಕೊಡದಂತೆ ಆದೇಶ ಮಾಡಿರುತ್ತೆ. ಪಿರ್ಯಾದಿದಾರರು  ವಕೀಲರ  ಮೂಲಕ  ಆರೋಪಿ 1 ಮತ್ತು 2 ರವರಿಗೆ  ದಿನಾಂಕ: 07/03/2020 ರಂದು  ನೊಂದಾಯಿತ ಅಂಚೆ ಮೂಲಕ  ದಾಖಲೆಗಳನ್ನು ಸಲ್ಲಿಸಿಕೊಂಡಿರುತ್ತಾರೆ. ಪಿರ್ಯಾದಿಯು  ತನಗೆ ಪ್ರತ್ಯೇಕವಾಗಿ  ವಿಭಾಗ ಮಾಡಿಕೊಡುವಂತೆ  ಆರೋಪಿತರ   ವಿರುದ್ದ  ಮೇಲ್ಕಂಡಂತೆ ದಾವೆ  ಹೂಡಿದ್ದು  ನ್ಯಾಯಾಲಯವು ಮದ್ಯಂತರ ಆದೇಶ ನೀಡಿ ಪಿರ್ಯಾದಿದಾರರ ಸ್ವಾದೀನಕ್ಕೆ  ಪ್ರತಿವಾದಿಗಳು ಮತ್ತು ಇತರೆಯವರು ಪ್ರವೇಶ ಮಾಡದಂತೆ ಆದೇಶವಾಗಿರುತ್ತೆಂದು   ಹೀಗಿದ್ದು ಆರೋಪಿ 1 ಮತ್ತು 2 ರವರು ದಿನಾಂಕ: 15/10/2020 ರಂದು ಚಿಕ್ಕಬಳ್ಳಾಪುರ  ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಸಂಖ್ಯೆ: 2401/2020-2021  stored in CD No. CKBD 605/2020-2021 ರಂತೆ ಪ್ರತಿವಾದಿ 6 ಮತ್ತು 7 ರವರಿಗೆ 13,00,000/ರೂಪಾಯಿಗಳಿಗೆ  ಮೇಲ್ಕಂಡ  ಜಮೀನನ್ನು ಮಾರಾಟ ಮಾಡಿರುತ್ತಾರೆ. ಪಿರ್ಯಾದಿಯು ಮಾರಾಟವಾದ  ಜಮೀನುನಲ್ಲಿ ಯಾವುದೇ  ಹಣವನ್ನು ತೆಗೆದುಕೊಂಡಿರುವುದಿಲ್ಲ. ಯಾವುದೇ  ದಾಖಲೆಯನ್ನು  ಆರೋಪಿ 2 ಮತ್ತು 3 ರವರಿಗೆ  ಮಾಡಿಕೊಟ್ಟಿರುವುದಿಲ್ಲವೆಂದು       ಪಿರ್ಯಾದಿದಾರರು  ಆರೋಫಿತರಿಗೆ  ಜಮೀನು ಮಾರಾಟ ಮಾಡಿರುವ ಬಗ್ಗೆ  ಕೇಳಿದ್ದಕ್ಕೆ ಆರೋಪಿ 1 ರಿಂದ 4 ರವರುಗಳು ಸಮಾನ ಉದ್ದೇಶದಿಂದ ಪಿರ್ಯಾದಿದಾರರಿಗೆ ಕೈಗಳಿಂದ  ಹೊಡೆದು ಅವಾಚ್ಯ ಮಾತುಗಳಿಂದ  ಬೈದು  ಪ್ರಾಣ ಬೆದರಿಕೆ  ಹಾಕಿರುತ್ತಾರೆ. ಈ  ವಿಚಾರವು ಪಿರ್ಯಾದಿದಾರರಿಗೆ ನರೆಹೊರಯವರ ಮೂಲಕ ತಿಳಿದುಬಂದಿರುತ್ತೆ.   ಪಿರ್ಯಾದಿದಾರರು ಚಿಕ್ಕಬಳ್ಳಾಪುರ ಗ್ರಾಮಾಂತರ  ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿರುತ್ತಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಮೌಖಿಕವಾಗಿ  ಬುದ್ದಿ ಮಾತು ಹೇಳಿ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ತಿಳಿಸಿರುತ್ತಾರೆ. ಆರೋಪಿಗಳು ರಾಜಕೀಯವಾಗಿ  ಮತ್ತು ಆರ್ಥಿಕವಾಗಿ ಪ್ರಭಲರಾಗಿರುತ್ತಾರೆಂದು  ಸ್ಥಳಿಯ ಪೊಲೀಸರಿಂದ ನ್ಯಾಯ ದೊರೆಯುವ ಭರವಸೆ ಇರುವುದಿಲ್ಲವೆಂದು ಪಿರ್ಯಾದಿದಾರರು ನ್ಯಾಯಾಲಯದ ಮರೆ ಹೋಗಿರುತ್ತಾರೆ. ಆರೋಪಿಗಳು ಸ್ಥಳಿಯವಾಗಿ ಶಕ್ತಿಯುತವಾಗಿರುತ್ತಾರೆ.  ಪೊಲೀಸರು ಪಿರ್ಯಾದದಿದಾರರ ದೂರನ್ನು ಸ್ವೀಕರಿಸಿ ಅಸಂಜ್ಞೆಯ ಪ್ರಕರಣವೆಂದು ಸ್ವೀಕರಿಸಿ ದೂರನ್ನು ನೊಂದಣಿ ಮಾಡಿಕೊಂಡು ತನಿಖೆ ಮಾಡಿರುವುದಿಲ್ಲವೆಂದು  ಪಿರ್ಯಾದಿದಾರು ನ್ಯಾಯಾಲದಲ್ಲಿ  ಮರೆ ಹೋಗಿದ್ದು    ಆರೋಪಿತರ ವಿರುದ್ದ ಕಲಂ 323, 447, 448, 452, 504, 506 ರೆ/ವಿ 34 ಐಪಿಸಿ  ರೀತ್ಯಾ ಕಾನೂನು ಕ್ರಮ ಕೈಗೊಳ್ಳಲು ಕೋರಿ  ನ್ಯಾಯಾಲಯದದಿಂದ ಸಾದಾರಾದ ದೂರಿನ ಮೇರೆಗೆ ಪ್ರ.ವ.ವರದಿ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 99/2021 ಕಲಂ. 379 ಐಪಿಸಿ :-

  ದಿನಾಂಕ: 08/03/2021 ರಂದು ರಾತ್ರಿ 9.00 ಗಂಟೆಗೆ ವಿ.ಮುನಿರೆಡ್ಡಿ ಬಿನ್ ವೆಂಕಟರೆಡ್ಡಿ.ವಿ, 36 ವರ್ಷ, ವಕ್ಕಲಿಗರು, ಜಿರಾಯ್ತಿ, ಚೌಡದೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆಯವರ ಹೆಸರಿನಲ್ಲಿ ಇದೇ ಚಿಂತಾಮಣಿ ತಾಲ್ಲೂಕು, ಅಂಬಾಜಿದುರ್ಗ ಹೋಬಳಿ, ಚಿನ್ನೇಪಲ್ಲಿ ಗ್ರಾಮದ ಸರ್ವೇ ನಂಬರ್ 22 ರಲ್ಲಿ 2 ಎಕರೆ ಜಮೀನಿದ್ದು, ಸದರಿ ಜಮೀನಿನಲ್ಲಿ ತಾವು ಕೊಳವೆಬಾವಿಯನ್ನು ಕೊರೆಸಿ ಸದರಿ ಕೊಳವೆಬಾವಿಗೆ ಮೋಟರ್ ಹಾಗೂ ಪ್ಯಾನಲ್ ಬೋರ್ಡ್ ನ್ನು ಅಳವಡಿಸಿಕೊಂಡು ವ್ಯವಸಾಯ ಮಾಡಿಕೊಂಡಿರುತ್ತೇನೆ. ಹೀಗಿರುವಾಗ ಎಂದಿನಂತೆ ತಾನು ದಿನಾಂಕ: 07/03/2021 ರಂದು ಮೇಲ್ಕಂಡ ತಮ್ಮ ಜಮೀನಿನಲ್ಲಿ ಕೆಲಸ ಮಾಡಿಕೊಂಡು ಸಂಜೆ 6.00 ಗಂಟೆಗೆ ತೋಟದ ಬಳಿಯಿಂದ ತಮ್ಮ ಮನೆಗೆ ವಾಪಸ್ ಬಂದು ನಂತರ ಅದೇ ದಿನ ಸಂಜೆ 7.00 ಗಂಟೆಗೆ ಕೊಳವೆಬಾವಿಯ ಮೋಟರ್ ನ್ನು ಆನ್ ಮಾಡಲು ತಮ್ಮ ತೋಟದ ಬಳಿಗೆ ಹೋದಾಗ ತಾವು ಕೊಳವೆಬಾವಿಗೆ ಅಳವಡಿಸಿದ್ದ ಸುಮಾರು 16.000/- ರೂ ಬೆಲೆ ಬಾಳುವ ಪ್ಯಾನಲ್ ಬೋರ್ಡ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ತಾನು ಕಳುವಾದ ತಮ್ಮ ಪ್ಯಾನಲ್ ಬೋರ್ಡ್ ನ್ನು ತಮ್ಮ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಹುಡುಕಾಡಲಾಗಿ ಎಲ್ಲ್ಲಿಯೂ ಪತ್ತೆಯಾಗಿರುವುದಿಲ್ಲ. ತಮ್ಮ ಗ್ರಾಮದ, ತಮ್ಮ ಜನಾಂಗದ ವೆಂಕಟರೆಡ್ಡಿ ಬಿನ್ ಲೇಟ್ ಮುನಿಶಾಮಿ ರವರು ಆಗಾಗ ಒಂಟಿಯಾಗಿ ತಮ್ಮ ಜಮೀನಿನ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದು, ತಮ್ಮ ಪ್ಯಾನಲ್ ಬೋರ್ಡ್ ಕಳುವಾಗಿರುವ ಬಗ್ಗೆ ಸದರಿ ವೆಂಕಟರೆಡ್ಡಿ ರವರ ಮೇಲೆ ತಮಗೆ ಅನುಮಾನ ಇರುತ್ತೆ. ಕಳುವಾಗಿರುವ ತಮ್ಮ ಬಾಭತ್ತು ಪ್ಯಾನಲ್ ಬೋರ್ಡ್ ನ್ನು ಇದುವರೆಗೂ ಹುಡುಕಾಡಿಕೊಂಡಿದ್ದು ಎಲ್ಲಿಯೂ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಕಳುವಾಗಿರುವ ಪ್ಯಾನಲ್ ಬೋರ್ಡ್ ನ್ನು ಹಾಗೂ ಕಳುವು ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

6. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 30/2021 ಕಲಂ. 379,380 ಐಪಿಸಿ :-

  ದಿನಾಂಕ: 08/03/2021 ರಂದು ಮಧ್ಯಾಹ್ನ 3.00 ಗಂಟೆಗೆ ಘನ ನ್ಯಾಯಾಲಯದಿಂದ ಸಾದರವಾದ ಪಿ.ಸಿ.ಆರ್ 11/2021 ಪ್ರಕರಣವನ್ನು ಘನ ನ್ಯಾಯಾಲಯದ ಪೇದೆ ಪಿಸಿ 490 ಸೊಮಶೇಕರ ರವರು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ಅರ್ಜಿದಾರರಾದ ಶ್ರೀ. ಆಲಂಸಾಬಿ ಬಿನ್ ಹಕೀಂ ಸಾಬಿ, 58 ವರ್ಷ, ಕರಿಯಪ್ಪನಹಳ್ಳಿ ಗ್ರಾಮ, ಸಾದಲಿ ಹೋಬಳಿ, ಶಿಡ್ಲಘಟ್ಟ ತಾಲ್ಲುಕು, ರವರು TAFE LTD MF 1035 DI ಮಾಡೆಲ್ ನ ಟ್ರ್ಯಾಕ್ಟರ್ ನ್ನು ವ್ಯವಸಾಯದ ಸಲುವಾಗಿ ಹೊಂದಿದ್ದು ಸದರೀ ಟ್ರ್ಯಾಕ್ಟರ್ ದಿನಾಂಕ: 05/07/2019 ರಮದು ಚಿಕ್ಕಬಳ್ಳಾಪುರದ ಆರ್ ಟಿ.ಓ ಕಛೇರಿಯಲ್ಲಿ ನೊಂದಣಿ ಆಗಿದ್ದು KA-40-TA-8797 ಆಗಿರುತ್ತೆ. ಸದರೀ ಟ್ರ್ಯಾಕ್ಟರ್ ನ್ನು ಪರಿಚಯಸ್ಥರಾದ ಈ ಪ್ರಕರಣದ ಆರೋಪಿತ  ಅಮರನಾಥರೆಡ್ಡಿ ವ್ಯವಸಾಯದ ಉದ್ದೇಶಕ್ಕಾಗಿ ಅರ್ಜಿದಾರರಿಂದ ತೆಗೆದುಕೊಂಡು ಹೋಗಿ ಪುನಃ ಕೆಲಸ ಮುಗಿದ ಮೇಲೆ ವಾಪಸ್ಸು ಮಾಡುತ್ತಿದ್ದನು. ಆದರೆ ದಿನಾಂಕ: 09/01/2021 ರಂದು ಪಿರ್ಯಾಧಿ ಮನೆ ಬಳಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ನ್ನು ಅಮರನಾಥರೆಡ್ಡಿ ಹೇಳದೇ ಕೇಳದೇ ನಕಲೀ ಕೀ ಬಳಸಿ ತೆಗೆದುಕೊಂಡು ಹೋಗಿದ್ದು ಆರೋಪಿ ತೆಗೆದುಕೊಂಡು ಹೋಗುವಾಗ ಕರಿಯಪ್ಪನಹಳ್ಳಿ ಗ್ರಾಮದ ವಾಸಿ ಎಂ. ವೆಂಕಟರೆಡ್ಡಿರವರು ಕಣ್ಣಾರೆ ಕಂಡು ಪಿರ್ಯಾಧಿಗೆ ವಿಚಾರ ತಿಳಿಸಿರುತ್ತಾರೆ. ಅದರಂತೆ ಆತನ ಮನೆಗೆ ಹೋಗಿ ವಿಚಾರ ಮಾಡಲಾಗಿ ಆತನು ಸಿಗದೇ ಇದ್ದು ಪಿರ್ಯಾಧಿದಾರರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡು ಟ್ರ್ಯಾಕ್ಟರ್ ನ ಕಳ್ಳತನ ಮಾಡಿದ ಅಮರನಾಥರೆಡ್ಡಿ ರವರ ಮೇಲೆ ಕಲಂ 379, 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಲು ಕೋರಿರುವುದಾಗಿರುತ್ತೆ.

 

7. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 31/2021 ಕಲಂ. 323,324,307,114,504,506 ರೆ/ವಿ 149 ಐಪಿಸಿ :-

  ದಿನಾಂಕ 09/03/2021 ರಂದು ಠಾಣಾ ಸಿಬ್ಬಂಧಿ ಹೆಚ್.ಸಿ-119 ರವರು ಶಿಡ್ಲಘಟ್ಟ ಸರ್ಕಾರಿ ಆಸ್ವತ್ರೆಯಿಂದ ಗಾಯಾಳುವಿನ ಹೇಳಿಕೆಯನ್ನು ಪಡೆದು ತಂದು ಹಾಜರುಪಡಿಸಿದ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ 08/03/2021 ರಂದು ರಾತ್ರಿ ಸುಮಾರು 9.30 ಗಂಟೆಯ ಸಮಯದಲ್ಲಿ ತಾನು ಮತ್ತು ತಮ್ಮ ಮೊಮ್ಮಗಳು ತಮ್ಮ ಮನೆಯ ಮುಂದೆ ರಸ್ತೆಯ ಪಕ್ಕದಲ್ಲಿ ನಿಂತಿದ್ದಾಗ ತನ್ನ ಅಳಿಯ ವೆಂಕಟೇಶಪ್ಪ ಬಿನ್ ಲೇಟ್ ವೆಂಕಟರವಣಪ್ಪರವರು ದ್ವಿ ಚಕ್ರ ವಾಹನದಲ್ಲಿ ಬಂದು ತನ್ನ ಮೇಲೆ ಹತ್ತಿಸಲು ಬಂದಿದ್ದು ಆಗ ತಾನು ಏಕೆ ತನ್ನ ಮೇಲೆ ವಾಹನವನ್ನು ಹತ್ತಿಸಲು ಬಂದಿದ್ದು ಎಂದು ಕೇಳಿದ್ದಕ್ಕೆ ನಿನ್ನಮ್ಮನೇ ಕ್ಯಾಯಾ, ಸೂಳೆ ಮುಂಡೆ ಜಾಸ್ತಿ ಮಾತನಾಡಬೇಡ ನಿನ್ನನ್ನು ಮತ್ತು ನಿನ್ನ ಮೊಮ್ಮಗಳನ್ನು ಸಾಯಿಸಿಬಿಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿ, ನಿನ್ನ  ಮೊಮ್ಮಗಳು ಪ್ರಾರ್ಥನಾ ಬದುಕಿದ್ದರೆ ನನ್ನ ಆಸ್ತಿಯಲ್ಲಿ ಪಾಲು ಕೇಳುತ್ತಾಳೆಂದು ಅವಳನ್ನು ಹೊಡೆಯಲು ಬಂದಿದ್ದು, ಆಗ ತಾನು ಪ್ರಾರ್ಥಾನಾ ರವರನ್ನು ಎತ್ತಿಕೊಂಡು ಮನೆಯಲ್ಲಿ ಬಿಟ್ಟದ್ದು  ಆಗ ವೆಂಕಟೇಶಪ್ಪನ ಹೆಂಡತಿ ಲಕ್ಷ್ಮಿದೇವಮ್ಮ ಮತ್ತು ವೆಂಕಟೇಶಪ್ಪನ ತಾಯಿ ನಾರಾಯಣಮ್ಮ, ವೆಂಕಟೇಶಪ್ಪನ ತಮ್ಮನಾದ ಶ್ರೀನಿವಾಸಪ್ಪರವರು ಬಂದಿದ್ದು, ಆ ಪೈಕಿ ಲಕ್ಷ್ಮಿದೇವಮ್ಮ ಮತ್ತು ನಾರಾಯಣಮ್ಮರವರುಗಳು ತನ್ನ ತಲೆ ಕೂದಲನ್ನು ಹಿಡಿದು ಎಳೆದಾಡಿ, ಜಾಕಿಟ್ನ್ನು ಹರಿದು ಹಾಕಿ, ಇಬ್ಬರೂ ತನ್ನ ಮೈ ಮೇಲೆ ತಡೆಗಳಿಗೆ ಒದ್ದು ನೋವುಂಟು ಮಾಡಿದ್ದು, ಶ್ರೀನಿವಾಸ ಹಿಂದೆಯಿಂದ ಒದ್ದಿದ್ದು, ಆಗ ತಾನು ಮುಂದಕ್ಕೆ ಕೆಳಕ್ಕೆ ಬಿದ್ದಾಗ ಎರಡೂ ಮೊಣ ಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ನಂತರ ವೆಂಕಟೇಶಪ್ಪ ತನ್ನ ಮೊಮ್ಮಗಳನ್ನು ತಾನೇ ಸಾಕುತ್ತಿರುವುದರಿಂದ ತನ್ನನ್ನು ಸಾಯಿಸಿದರೆ ಪ್ರಾರ್ಥಾನಾಳನ್ನು ಸಾಕುವವರು ಇರುವುದಿಲ್ಲವೆಂದು ತನ್ನನ್ನು ಸಾಯಿಸುವ ಉದ್ದೇಶದಿಂದ ವೆಂಕಟೇಶಪ್ಪ ಮಚ್ಚನ್ನು ತೆಗೆದುಕೊಂಡು ತನ್ನ ತಲೆಗೆ ಹೊಡೆಯಲು ಬಂದಿದ್ದು, ಆಗ ತಾನು ತನ್ನ ಬಲಕೈಯನ್ನು ಅಡ್ಡ ಇಟ್ಟಾಗ ಮಚ್ಚು ತನ್ನ ಬಲಕೈನ ಹೆಬ್ಬೆರಳಿಗೆ ಬಿದ್ದು ರಕ್ತ ಗಾಯವಾಗಿದ್ದು, ಈ ಹಿಂದೆಯೂ ಸಹ ತಮಗೂ ಮತ್ತು ವೆಂಕಟೇಶಪ್ಪರವರಿಗೆ ಗಲಾಟೆಗಳಾಗಿ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ತನ್ನ ಮಗಳು ಕಳಾವತಿ ವೆಂಕಟೇಶಪ್ಪರವರ ಎರಡನೇ ಹೆಂಡತಿಯಾಗಿದ್ದು, ಅವಳು ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಮಡಿದ್ದು, ಅವಳನ್ನು ಹೇಗಾದರೂ ಮಾಡಿ ಕೆಲಸದಿಂದ ತೆಗಿಸಿಬಿಡಬೇಕೆಂಬ ಉದ್ದೇಶದಿಂದ ವಿನಾಃ ಕಾರಣ ಜಗಳ ಮಾಡಿ ಸಾಯಿಸಲು ಬಂದಿದ್ದು,  ತಮ್ಮ ಮೇಲೆ ಈ ರೀತಿ ಗಲಾಟೆಗಳನ್ನು ಮಾಡಲು ವೆಂಕಟೆಶಪ್ಪನಿಗೆ ಅವರ ಬಾವಮೈದ ಶಿವಾನಂದ ರವರು ಸಹಾಯ ಮಾಡಿ ಪ್ರಚೋದಿಸುತ್ತಿದ್ದು, ವೆಂಕಟೇಶಪ್ಪ ತನ್ನನ್ನು ಸಾಯಿಸುವ ಉದ್ದೇಶದಿಂದ ಹಲ್ಲೆ ಮಾಡುತ್ತಿದ್ದಾಗ ತನ್ನ ತಮ್ಮನ ಮಗ ಶ್ರೀನಾಥ ಬಿನ್ ವೆಂಕಟೆಶ ಮತ್ತು ಅವರ ಹೆಂಡತಿ ಲಕ್ಷ್ಮಿದೇವಮ್ಮರವರು ಬಂದು ಗಲಾಟೆಯನ್ನು ಬಿಡಿಸಿದ್ದು, ಸದರಿ ಮೇಲ್ಕಂಡವರ ಮೇಲೆ ಸೂಕ್ತ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 56/2021 ಕಲಂ. 379 ಐಪಿಸಿ & ಸೆಕ್ಷನ್ 41(D),102 ಸಿಆರ್‍.ಪಿ.ಸಿ. :-

  ದಿನಾಂಕ 08/03/2021 ರಂದು ಸಂಜೆ 6-15 ಗಂಟೆಗೆ  ಗೌರೀಬಿದನೂರು (ಗ್ರಾ) ಪೊಲೀಸ್ ಠಾಣೆ, ಹೆಡ್ ಕಾನ್ಸೇಟಬಲ್ -20 ಶ್ರೀನಿವಾಸರೆಡ್ಡಿ   ರವರು ಠಾಣೆಯಲ್ಲಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ ದಿನಾಂಕ:08/03/2021 ರಂದು ಬೆಳಿಗ್ಗೆ 08-00 ಗಂಟೆಯಲ್ಲಿ ಹಾಜರಾತಿಯಲ್ಲಿ ತನಗೆ ಮತ್ತು ಪಿ.ಸಿ.455 ಶ್ರೀ.ಡಿ.ಎನ್.ಅಶ್ವತ್ಥಪ್ಪ ರವರೊಂದಿಗೆ ಅಪರಾಥ ಪತ್ತೆ ಕಾರ್ಯದ ಗಸ್ತು  ನಿರ್ವಹಿಸಲು ನೇಮಿಸಿದ್ದು, ಅದರಂತೆ ತಾನು ಮತ್ತು ಡಿ.ಎನ್. ಅಶ್ವತ್ತಪ್ಪ ರವರು  ಹೊಸೂರು, ಕೋಟಾಲದಿನ್ನೆ, ಗೆದರೆ  ಮುಂತಾದ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ ಸುಮಾರು 6-00 ಗಂಟೆಯಲ್ಲಿ ಗೌರೀಬಿದನೂರು ಆರ್.ಎಂ.ಸಿ. ಮಾರುಕಟ್ಟೆ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಯಾರೋ ಒಬ್ಬ ವ್ಯಕ್ತಿ ನೊಂದಣಿ ಸಂಖ್ಯೆ ಇಲ್ಲದ ಹಸಿರು ಬಣ್ಣದ ಡಿಯೋ ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಸದರಿ ವಾಹನದ ಮುಂಭಾಗ ವಾಹನ ಜಖಂ ಆಗಿತ್ತು. ಅನುಮಾನ ಬಂದು ಸದರಿ ವ್ಯಕ್ತಿಯನ್ನು ನಿಲ್ಲಿಸಿ ವಿಚಾರಿಸಲು ಹೋದಾಗ, ಸದರಿ ವ್ಯಕ್ತಿಯು ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಪರಾರಿಯಾಗಲು ಹಿಂಬಾಲಿಸಿದ್ದು, ತಾನು ಹಾಗು ಪಿ.ಸಿ. ಅಶ್ವತ್ಥಪ್ಪ ಸಾರ್ವಜನಿಕರ ಸಹಾಯದಿಂದ ಆತನನ್ನು ಹಿಂಬಾಲಿಸಿ ಹಿಡಿದುಕೊಂಡು, ಆತನ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು ಶಿವಶಂಕರ್ ಬಿನ್ ಲೇಟ್ ಸೋಮಪ್ಪ, 43 ವರ್ಷ,  ಪ.ಜಾತಿ ( ಎ.ಕೆ.) ನೆಲಗುದಿಗೆ ಗ್ರಾಮ, ತೂಬಗೆರೆ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು.ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ತಿಳಿಸಿದ್ದು, ಈತನ ಬಳಿ ಇದ್ದ ದ್ವಿಚಕ್ರ ವಾಹನದ ನೊಂದಣಿ ಸಂಖ್ಯೆ ಹಾಗು ಅದರ ಆರ್.ಸಿ. ಮಾಲೀಕರು ಯಾರೆಂದು ಕೇಳಿದಾಗ, ಸಮಂಜಸವಾದ ಉತ್ತರ ಕೊಟ್ಟಿರುವುದಿಲ್ಲ.  ಆದುದರಿಂದ ಈತನ ಬಳಿ ಇರುವ ದ್ವಿಚಕ್ರ ವಾಹನವು ಕಳ್ಳತನದೆಂದು ಅನುಮಾನ ಬಂದಿರುವುದರಿಂದ ಸದರಿ ಶಿವಶೇಖರ್ ಬಿನ್ ಲೇಟ್ ಸೋಮಪ್ಪ ಹಾಗು ಈತನ ಬಳಿ ಇರುವ ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಂಡು ಠಾಣೆಯಲ್ಲಿ ತಮ್ಮ ಮುಂದೆ ಹಾಜರ್ಪಡಿಸಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಮೇರೆಗೆ ಕೇಸು ದಾಖಲಿಸಿರುತ್ತೆ.

 

9. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 40/ ಕಲಂ. 323,324,504,506 ರೆ/ವಿ 34 ಐಪಿಸಿ :-

  ದಿನಾಂಕ: 09/03/2021 ರಂದು ಮುಂಜಾನೆ 00-30 ಗಂಟೆಯ ಸಮಯದಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀನಿವಾಸ ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ : ದಿನಾಂಕ:08/03/2021 ರಂದು ಸಂಜೆ 6-00 ಗಂಟೆಯಲ್ಲಿ ತಾನು ಮನೆಯಿಂದ ತಮ್ಮ ಜಮೀನಿನ ಹತ್ತಿರ ಹೋದಾಗ ತಮ್ಮ  ಜಮೀನಿನ ಪಕ್ಕದಲ್ಲಿರುವ ತಮ್ಮ ಅಣ್ಣನಾದ ನಾರಾಯಣಪ್ಪ  ಮತ್ತು ಅವರ ಮಗನಾದ ನಾಗೇಶರವರು   ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಅದೇ ಸಮಯಕ್ಕೆ ತಾನು ತಮ್ಮ ಜಮೀನಿನ ಹತ್ತಿರ ಬಂದಾಗ ನಾರಾಯಣಪ್ಪ ರವರು ತನ್ನ ಹತ್ತಿರ  ಬಂದು ಏಕಾಏಕಿಯಾಗಿ ಬೋರ್ ವೆಲ್ ನೀರು ವಿಚಾರಕ್ಕೆ ತನ್ನ ಮೇಲೆ ಜಗಳ ತೆಗೆದು ತನ್ನ ಶರ್ಟ್ ಹಿಡಿದುಕೊಂಡು ಕಾಲಿನಿಂದ ಒದ್ದಿರುತ್ತಾರೆ. ಪಕ್ಕದಲ್ಲಿದ್ದ ಅವರ ಮಗನಾದ ನಾಗೇಶ ರವರು ಅಲ್ಲೇ ಇದ್ದ ಮಚ್ಚನ್ನು ತೆಗೆದುಕೊಂಡು ಏಕಾಏಕಿಯಾಗಿ ತನ್ನ ಮೇಲೆ ಮಚ್ಚಿನಿಂದ ತಲೆಗೆ ಹಾಕಿ ಗಾಯಪಡಿಸಿರುತ್ತಾನೆ.  ಮತ್ತು ನಾರಾಯಣಪ್ಪ ಅವಾಚ್ಯ ಶಬ್ದಗಳಿಂದ ಬೈಯುತ್ತಾ ತನಗೆ ಪ್ರಾಣ ಬೇದರಿಕೆ ಹಾಕಿರುತ್ತಾನೆ . ಅಲ್ಲಿಂದ ತಪ್ಪಿಸಿಕೊಂಡು ತಾನು ಮನೆಗೆ ಬಂದಿರುತ್ತೇನೆ.  ಮನೆಯಲ್ಲಿದ್ದ ತನ್ನ ಅಣ್ಣನ ಮಗನಾದ ಶಶಿಕುಮಾರ್ ತನ್ನನ್ನು ತಕ್ಷಣ ದ್ವಿಚಕ್ರ ವಾಹನದಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಧಾಖಲು ಮಾಡಿರುತ್ತಾರೆ.  ತನ್ನ ಮೇಲೆ ಗಲಾಟೆಮಾಡಿ ಹಲ್ಲೆ ಮಾಡಿರುವ ಮೇಲ್ಕಂಡವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

10. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 46/2021 ಕಲಂ. 32,34 ಕರ್ನಾಟಕ ಅಬಕಾರಿ ಕಾಯ್ದೆ :-

  ಮಂಚೇನಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ.ಲಕ್ಷ್ಮೀನಾರಾಯಣ ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ: 08/03/2021 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ನಾನು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನನಗೆ ಬಾತ್ಮಿದಾರರಿಂದ ದೊಡ್ಡಮಲ್ಲೇಕೆರೆ ಗ್ರಾಮದ ಶ್ರೀರಾಮಪ್ಪ ಬಿನ್ ಲೇಟ್ ಹನುಮಂತಪ್ಪ ಎಂಬುವರು ತಮ್ಮ ಬಾಬತ್ತು ಚಿಲ್ಲರೆ ಅಂಗಡಿಯಲ್ಲಿ ಯಾವುದೇ ರೀತಿಯ ಲೈಸನ್ಸ್ ಮತ್ತು ಪರ್ಮಿಟ್ ಇಲ್ಲದೇ ಅಕ್ರಮವಾಗಿ ಮದ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ದಾಸ್ತಾನು ಮಾಡಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ನಾನು ಹಾಗೂ ಸಿಬ್ಬಂದಿಗಳಾದ ಹೆಚ್.ಸಿ 219, ಶ್ರೀನಿವಾಸಮೂರ್ತಿ, ಪಿಸಿ 532 ಚಿಕ್ಕಣ್ಣ, ಪಿಸಿ 537 ಆನಂದ್ ಕುಮಾರ್, ಪಿಸಿ 111 ಲೋಕೇಶ, ಪಿಸಿ 311 ಗೂಳಪ್ಪ ಶ್ರೀ ಶೈಲ್ ನಿಂಗನೂರ, ಪಿಸಿ 336 ಉಮೇಶ  ಬಿ ಶಿರಶ್ಯಾಡ ರವರೊಂದಿಗೆ ಕೆಎ-40-ಜಿ-395 ರ ಸರ್ಕಾರಿ ಜೀಪ್ ನಲ್ಲಿ ಹಾಗೂ ದ್ವಿ ಚಕ್ರ ವಾಹನಗಳಲ್ಲಿ ಪಂಚರನ್ನು ಕರೆದುಕೊಂಡು ದೊಡ್ಡಮಲ್ಲೆಕೆರೆ ಗ್ರಾಮಕ್ಕೆ ಹೋಗಿ ಜೀಪ್ ನ್ನು ಹಾಗೂ ದ್ವಿ ಚಕ್ರ ವಾಹನಗಳನ್ನು ಮರೆಯಲ್ಲಿ ನಿಲ್ಲಿಸಿ ಬಂದ ಬಾತ್ಮಿಯಂತೆ ಕಾಲ್ನಡಿಗೆಯಲ್ಲಿ ಶ್ರೀರಾಮಪ್ಪ ಬಿನ್ ಲೇಟ್ ಹನುಮಂತಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಸ್ವಲ್ಪ ದೂರದಿಂದಲೇ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೆ ಅಂಗಡಿಯಲ್ಲಿ ಕುಳಿತುಕೊಂಡಿದ್ದ ಅಸಾಮಿಯು ಓಡಿ ಹೋಗಿದ್ದು ಸಿಬ್ಬಂದಿಯವರು ಅಸಾಮಿಯನ್ನು ಬೆನ್ನಟ್ಟಿದರು ಸಿಗದೇ ಓಡಿ ಇದ್ದು ಪಂಚರ ಸಮಕ್ಷಮ ಚಿಲ್ಲರೆ ಅಂಗಡಿಯಲ್ಲಿ ಪರಿಶೀಲಿಸಲಾಗಿ ಅಂಗಡಿಯ ಒಳಗೆ ಒಂದು ಪ್ಲಾಸ್ಟೀಕ್ ಗೋಣಿ ಚೀಲದಲ್ಲಿ 4 ರಟ್ಟಿನ ಬಾಕ್ಸ್ ನಲ್ಲಿ 90 ಎಂ.ಎಲ್ ನ HAYWARDS CHEERS WHISKY ಯ 324 ಮಧ್ಯದ ಟೆಟ್ರಾ ಪ್ಯಾಕೆಟ್  ಗಳಿದ್ದು ಒಟ್ಟು 29.160 ಲೀಟರ್ ನಷ್ಟು ಮಧ್ಯವಿರುತ್ತದೆ. ಇದರ ಬೆಲೆ 11,383 ರೂಗಳಾಗಿದ್ದು ಚಿಲ್ಲರೆ ಅಂಗಡಿಯಿಂದ ಓಡಿ ಹೋದವನ ಹೆಸರು ಮತ್ತು ವಿಳಾಸವನ್ನು ಅಕ್ಕ ಪಕ್ಕದವರಿಂದ ತಿಳಿಯಲಾಗಿ ಶ್ರೀರಾಮಪ್ಪ ಬಿನ್ ಲೇಟ್ ಹನುಮಂತಪ್ಪ 45 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ದೊಡ್ಡಮಲ್ಲೇಕೆರೆ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ತನ್ನ ಅಂಗಡಿಯಲ್ಲಿ ಯಾವುದೇ ರೀತಿಯ ಪರವಾನಗಿ ಇಲ್ಲದೇ ಅಕ್ರಮವಾಗಿ ಮಧ್ಯವನ್ನು ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರಿಂದ ಶ್ರೀರಾಮಪ್ಪ ರವರು ಓಡಿ ಹೋಗಿದ್ದು ಸದರಿ 90 ಎಂ.ಎಲ್ ನ HAYWARDS CHEERS WHISKY ಯ 324 ಮಧ್ಯದ ಟೆಟ್ರಾ ಪ್ಯಾಕೆಟ್  ಗಳಿಗೆ ಕ್ರ.ಸಂ:1 ಎಂದು ನೀಡಿ  ರಾಸಾಯನಿಕ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕ್ರ.ಸಂ:1 ರ 4 ರಟ್ಟಿನ ಬಾಕ್ಸ್ ನಲ್ಲಿ ಒಂದೊಂದು ಮಧ್ಯ ಟೆಟ್ರಾ ಪ್ಯಾಕೆಟ್ ಗಳನ್ನು ತೆಗೆದು 4 ಮಧ್ಯದ ಟೆಟ್ರಾ ಪ್ಯಾಕೆಟ್ ಗಳನ್ನು ಅಲಾಯಿದೆಯಾಗಿ ಒಂದು ತಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಮೂತಿಯನ್ನು ದಾರದಿಂದ ಹೊಲೆದು ಭದ್ರಪಡಿಸಿ P ಎಂಬ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಮಕ್ಷಮ ಸಂಜೆ 4-00  ಗಂಟೆಯಿಂದ 5-00 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸಂಜೆ 5-45 ಗಂಟೆಗೆ ಠಾಣೆಗೆ ಬಂದು ಠಾಣಾ ಮೊಸಂ: 46/2021 ಕಲಂ: 32, 34 ಕೆಇ ಆಕ್ಟ್ ರೀತ್ಯ ಸ್ವತಃ ಪ್ರಕರಣವನ್ನು ದಾಖಲಿಸಿರುತ್ತೇನೆ.

 

11. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 47/2021 ಕಲಂ. 379 ಐಪಿಸಿ :-

  ದಿನಾಂಕ: 09/03/2021 ರಂದು ಮದ್ಯಾಹ್ನ 13-00 ಗಂಟೆಗೆ ಪಿರ್ಯಾದಿದಾರರಾದ ಜಿ ಶ್ರೀನಿವಾಸ ಬಿನ್ ವಿ ಗೋವಿಂದಯ್ಯ, 40 ವರ್ಷ, ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು, ಜಿ ಬೊಮ್ಮಸಂದ್ರ ಗ್ರಾಮ ಪಂಚಾಯ್ತಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ಗೌರಿಬಿದನೂರು ತಾಲ್ಲೂಕು ಜಿ ಬೊಮ್ಮಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ  ಇದೇ ಜಿ ಬೊಮ್ಮಸಂದ್ರ ಗ್ರಾಮದಲ್ಲಿ 2015 ನೇ ಸಾಲಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಸ್ಮಶಾನ ಅಭಿವೃದ್ದಿ ಮಾಡಲಾಗಿದ್ದು ಕಾಂಪೌಂಡ್ ನಿರ್ಮಿಸಿ ಗೇಟ್ ಕೂಡ ಅಳವಡಿಸಲಾಗಿತ್ತು ಆದರೆ ಸದರಿ ಗೇಟಿನ ಒಂದು ಕಡೆಯ ಭಾಗವನ್ನು ದಿನಾಂಕ: 02/03/2021 ರಂದು ಕಳ್ಳತನ ಮಾಡಿರುತ್ತಾರೆ ಎಂದು ಗ್ರಾಮಸ್ಥರಿಂದ ತಿಳಿದು ಬಂದು ದಿನಾಂಕ: 03/03/2021 ರಂದು ಸ್ಥಳ ಪರಿಶೀಲನೆ ಮಾಡಿದಾಗ ಗೇಟಿನ ಒಂದು ಕಡೆಯ ಭಾಗವು ಕಾಣೆಯಾಗಿರುತ್ತದೆ ಸದರಿ ಕಳ್ಳತನ ಆಗಿರುವ ಗೇಟ್ ಸುಮಾರು 10,000/- ರೂ ಬೆಲೆ ಬಾಳುವುದಾಗಿದ್ದು ಸರ್ಕಾರಿ ಸ್ವತ್ತಾಗಿರುತ್ತದೆ ಆದ್ದರಿಂದ ಸದರಿ ಸ್ಮಶಾನದ ಗೇಟ್ ಕಳವು ವಿಷಯವನ್ನು ನನ್ನ ಮೇಲಾಧಿಕಾರಿಗಳಿಗೆ ತಿಳಿಸಿ ನಂತರ  ಈ ದಿನ ದಿನಾಂಕ: 09/03/2021 ರಂದು ತಡವಾಗಿ ದೂರನ್ನು ನೀಡುತ್ತಿದ್ದು ಸದರಿ ಗೇಟ್ ನ್ನು ಕಳವು ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ಪ್ರ.ವ.ವರದಿ.

 

12. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 24/2021 ಕಲಂ. 279,304(ಎ) ಐಪಿಸಿ ರೆ/ವಿ 187 ಐಎಂವಿ ಆಕ್ಟ್ :-

  ದಿನಾಂಕ;-09-03-2021 ರಂದು ಬೆಳಗ್ಗೆ 10-30 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನನ್ನ ತಂದೆ ಲೇಟ್ ಬಾಬು ಮತ್ತು ತಾಯಿ ಲೇಟ್ ಮಾಜಾನ್ ರವರಿಗೆ ನಾವು ಇಬ್ಬರು ಮಕ್ಕಳು.1ನೇ ನಾನು ಮತ್ತು 2ನೇ ನನ್ನ ತಮ್ಮನಾದ ಇನಾಯತ್ ಆಗಿದ್ದು ಇಬ್ಬರಿಗೂ ಮದುವೆಯಾಗಿರುತ್ತದೆ.ನನ್ನ ತಾಯಿ ನಮ್ಮ ಚಿಕ್ಕಂದಿನಲ್ಲೇ ಮೃತಪಟ್ಟಿದ್ದು ನನ್ನ ತಂದೆ ಇತ್ತೀಚೆಗೆ ಸುಮಾರು 15 ವರ್ಷಗಳ ಹಿಂದೆ ತೀರಿಕೊಂಡಿದ್ದು ನಾವಿಬ್ಬರೂ ನಮ್ಮ ಅಜ್ಜಿ ಮಹಬೂಬ್ ಬೀ ಕೋಂ ಲೇಟ್ ದಾವೂದ್ ಸಾಬ್ ಮನೆಯಲ್ಲೇ ವಾಸವಿರುತ್ತೇವೆ.ನನ್ನ ತಮ್ಮನಾದ ಇನಾಯತ್ 28ವರ್ಷ ವಯಸ್ಸಾಗಿದ್ದು ಇವನಿಗೆ ರೂಬಿಯಾ ಎಂಬುವಳೊಂದಿಗೆ ಮದುವೆಯಾಗಿ ಇಬ್ಬರು ಹೆಣ್ಣುಮಕ್ಕಳಾಗಿದ್ದು ಈಗ್ಗೆ ಸುಮಾರು 4 ವರ್ಷಗಳ ಹಿಂದೆ ರೂಬಿಯಾ ಗಂಡನನ್ನು ಬಿಟ್ಟು ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ಮಕ್ಕಳೊಂದಿಗೆ ಬೇರೆಯವನ ಜೊತೆಯಲ್ಲಿ ಸಂಸಾರ ಮಾಡುತ್ತಿದ್ದು, ಇವನು ವಾಪಸಂದ್ರದ ಇಂತಿಯಾಜ್ ರವರ  ಟೀ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು.ಇವನು ಅತಿಯಾಗಿ ಮಧ್ಯಪಾನ ಮಾಡುತ್ತಿದ್ದನು. ದಿನಾಂಕ-08/03/2021 ರಂದು ರಾತ್ರಿ 09.00 ಗಂಟೆಗೆ ಊಟ ಮಾಡಿ ಮನೆ ಬಿಟ್ಟು ಹೋದವನು ಮನೆಗೆ ವಾಪಸ್ಸು ಬಂದಿರಲಿಲ್ಲ. ಈ ದಿನ ತಾರೀಖು 09/03/2021 ರಂದು ಬೆಳಿಗ್ಗೆ 08.30 ರಲ್ಲಿ ನಾನು ಗಂಡನೊಂದಿಗೆ ಹಿಂಡಿಗನಾಳದಲ್ಲಿದ್ದು ನಮ್ಮ ದೊಡ್ಡಪ್ಪನ ಮಗ ಜಾವೀದ್ ಬಿನ್ ಯಾಕೂಬ್ ಸಾಬ್ ರವರು ಕರೆ ಮಾಡಿ ನಿನ್ನ ತಮ್ಮ ಇನಾಯತ್ ರಾತ್ರಿ ರಸ್ತೆ ಅಪಘಾತದಲ್ಲಿ ಮೃತಪಟ್ಟು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರುತ್ತಾರೆಂದು ಹೇಳಿದಾಗ ನಾನು ಮತ್ತು ನನ್ನ ಗಂಡ ಅನ್ಸರ್ ಆಸ್ಪತ್ರೆ ಗೆ ಬಂದು ಶವಾಗಾರದಲ್ಲಿ ನೋಡಿದ್ದು ಬಾಯಿ,ಮೂಗು ಮತ್ತು ಕಿವಿಯಲ್ಲಿ ರಕ್ತ ಬಂದಿದ್ದು ಮಾಹಿತಿ ತಿಳಿಯಲಾಗಿ ರಾತ್ರಿ 11.00 ರಿಂದ 11.30 ರ ಮಧ್ಯೆ ರಾಷ್ರೀಯ ಹೆದ್ದಾರಿಯ-7 ಹಳೇ ಡಿ.ಸಿ ಆಫೀಸು ಸಮೀಪ ಪಶ್ಶಿಮದ ಕಡೆಯ ರಸ್ತೆ ಬದಿಯಲ್ಲಿ ಯಾವುದೋ ಕಾರ್ ಚಾಲಕನು ಬೆಂಗಳೂರು ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರನ್ನು ಓಡಿಸಿಕೊಂಡು ಬಂದು ಮೃತನಿಗೆ ಡಿಕ್ಕಿ ಹೊಡೆಸಿ ನಿಲ್ಲಿಸದೇ ಪರಾರಿಯಾಗಿ ಹೋದ ಪರಿಣಾಮ ಮೃತನು ರಸ್ತೆಯ ಬದಿ ನಿರ್ಮಾಣವಾಗುತ್ತಿರುವ ಸರ್ವೀಸ್ ರಸ್ತೆಯ ಮೇಲೆ ಬಿದ್ದು ಮೃತ ಪಟ್ಟಿದ್ದನೆಂದು,ಸ್ದಳದಲ್ಲಿ ಅಪಘಾತ ಮಾಡಿ ಪರಾರಿ ಆಗಿರುವ  ಕಾರಿನ ಸೈಡ್ ಮಿರರ್ ಸಹ ಬಿದ್ದಿರುವುದಾಗಿ ತಿಳಿಯಿತು. ಮಾಹಿತಿಯನ್ನು ತಡವಾಗಿ ಪಡೆದು ಶವಾಗಾರಕ್ಕೆ ಭೇಟಿಕೊಟ್ಟು ಸ್ದಳಕ್ಕೆ ಭೇಟಿ ನೀಡಿ ವಿಚಾರ ಮಾಡಿ ನಂತರ ದೂರು ನೀಡಲು ತಡವಾಗಿರುತ್ತದೆ .ಇನಾಯತ್ ನ ಸಾವಿಗೆ ಕಾರಣನಾದ ಹಾಗೂ ಅಪಘಾತ ಮಾಡಿ ಪರಾರಿಯಾಗಿರುವ ಕಾರನ್ನು ಮತ್ತು ಚಾಲಕನನ್ನು ಪತ್ತೆ ಮಾಡಿ ಸದರಿಯವನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಬೆಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

13. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 56/2021 ಕಲಂ. 279,304(ಎ) ಐಪಿಸಿ :-

  ದಿನಾಂಕ: 08-03-2021 ರಂದು ರಾತ್ರಿ 10.00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ನಾರಾಯಣಸ್ವಾಮಿ ಟಿ.ಪಿ. ಬಿನ್ ಲೇಟ್ ದೊಡ್ಡಪೆದ್ದನ್ನ, 55 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ತೊಟ್ಲಗಾನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಹಾಗೂ ತನ್ನ ಹೆಂಡತಿಯಾದ ಶ್ರೀಮತಿ ಹನುಮಕ್ಕ ರವರಿಗೆ 1ನೇ ಶ್ರೀಮತಿ ಸರಸ್ವತಮ್ಮ ಹಾಗೂ 2ನೇ ತನ್ನ ಮಗನಾದ ಅಂಬರೀಷ ರವರಾಗಿದ್ದು ತನ್ನ ಮಗಳಿಗೆ ಬಿಳ್ಳಮಾರನಹಳ್ಳಿ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಿರುತ್ತೇವೆ. ತನ್ನ ಮಗನಾದ ಅಂಬರೀಷ ರವರಿಗೆ 29 ವರ್ಷ ವಯಸ್ಸಾಗಿದ್ದು ತಮಿಳುನಾಡು ಹೊಸೂರು ತಾಲ್ಲೂಕು ಬೂದಿನೆತ್ತ ಗ್ರಾಮದ ಶಿಲ್ಪ ಎಂಬಾಕೆಯೊಂದಿಗೆ ವಿವಾಹವಾಗಿದ್ದು, ಅವರಿಗೆ ಸುಮಾರು 2 ವರ್ಷದ ನವದೀಪ್ ನಾಯಕ್ ಎಂಬ ಒಬ್ಬ ಗಂಡು ಮಗನಿರುತ್ತಾನೆ. ತನ್ನ ಮಗನು ಜಂಗಮಕೋಟೆ, ಶಿಡ್ಲಘಟ್ಟ, ತಮಿಳುನಾಡು ಹಾಗೂ ಇತರೆ ಕಡೆಗಳಲ್ಲಿ ಕಡೆಗಳಲ್ಲಿ ಪ್ಲವರ್ ಡೆಕೋರೇಷನ್ ಕೆಲಸ ಮಾಡುತ್ತಿದ್ದನು. ಈಗ್ಗೆ ಒಂದು ವಾರದ ಹಿಂದೆ ತನ್ನ ಮಗನಾದ ಅಂಬರೀಷ ರವರು ತಮಿಳುನಾಡಿಗೆ ಪ್ಲವರ್ ಡೆಕೋರೇಷನ್ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿರುತ್ತಾನೆ. ಹೀಗಿದ್ದು ಈ ದಿನ ದಿನಾಂಕ: 08-03-2021 ರಂದು ರಾತ್ರಿ ಸುಮಾರು 7.50 ಗಂಟೆ ಸಮಯದಲ್ಲಿ ನಮ್ಮ ಅಣ್ಣನ ಮಗನಾದ ರವಿ ಬಿನ್ ಟಿ.ಪಿ ಕೃಷ್ಣಪ್ಪ ರವರು ತನಗೆ ಪೋನ್ ಮಾಡಿ ನಡಿಪಿನಾಯಕನಹಳ್ಳಿ ಗೇಟ್ ನಲ್ಲಿ ತನ್ನ ಮಗನಾದ ಅಂಬರೀಷ ರವರಿಗೆ ಅಪಘಾತವಾಗಿರುವುದಾಗಿ ಕೂಡಲೇ ಬರುವಂತೆ ತಿಳಿಸಿದ್ದು, ತಾನು ಹಾಗೂ ತಮ್ಮ ಗ್ರಾಮದ ಇತರರು ಸ್ಥಳಕ್ಕೆ ಹೋಗಿ ನೋಡಲಾಗಿ ತನ್ನ ಮಗನಾದ ಅಂಬರೀಷ ರವರಿಗೆ ಅಪಘಾತವಾಗಿರುವುದು ನಿಜವಾಗಿದ್ದು ತನ್ನ ಮಗನನ್ನು ಉಪಚರಿಸಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಸಾಗಿಸಿಕೊಂಡು ಹೋಗಿದ್ದು ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಅಂಬರೀಷ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು ಅಪಘಾತದ ಬಗ್ಗೆ ವಿಚಾರ ತಿಳಿಯಲಾಗಿ ತನ್ನ ಮಗನಾದ ಅಂಬರೀಷ ರವರು ಆತನ ಬಾಬತ್ತು ನಂ. ಕೆಎ-40-ವೈ-9610 ದ್ವಿಚಕ್ರ ವಾಹನದಲ್ಲಿ ಕೆಲಸ ಮುಗಿಸಿಕೊಂಡು ಈ ದಿನ ದಿನಾಂಕ: 08-03-2021 ರಂದು ರಾತ್ರಿ ಸುಮಾರು 7.45 ಗಂಟೆ ಸಮಯದಲ್ಲಿ ಜಂಗಮಕೋಟೆ-ಶಿಡ್ಲಘಟ್ಟ ರಸ್ತೆಯ ನಡಿಪಿನಾಯಕನಹಳ್ಳಿ ಗೇಟ್ ಬಳಿ ರಸ್ತೆಯ ಎಡಬದಿಯಲ್ಲಿ ಜಂಗಮಕೋಟೆ ಕ್ರಾಸ್ ಕಡೆಯಿಂದ ಬರುತ್ತಿದ್ದಾಗ ಶಿಡ್ಲಘಟ್ಟ ಕಡೆಯಿಂದ ಬಂದ ನಂ. ಕೆಎ-51-ಎಂಡಿ-7748 ಮಾರುತಿ ಸ್ವಿಪ್ಟ್ ಕಾರನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮಗನು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಎದುರುಗಡೆಯಿಂದ ಡಿಕ್ಕಿ ಹೊಡೆಸಿದ ಪರಿಣಾಮ ವಾಹನಗಳು ಜಖಂಗೊಂಡು ಅಪಘಾತದಲ್ಲಿ ತನ್ನ ಮಗನಾದ ಅಂಬರೀಷ ರವರಿಗೆ ತಲೆಗೆ ತೀವ್ರತರವಾದ ಗಾಯವಾಗಿದ್ದು, ಕೈಗಳಿಗೆ ಹಾಗೂ ಕಾಲುಗಳಿಗೂ ಸಹ ಗಾಯಗಳಾಗಿದ್ದು ಗಾಯಗೊಂಡಿದ್ದ ತನ್ನ ಮಗನಾದ ಅಂಬರೀಷ ರವರನ್ನು ಆಂಬ್ಯುಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಸಾಗಿಸಿಕೊಂಡು ಬರುತ್ತಿದ್ದಾಗ ಮಾರ್ಗ ಮದ್ಯೆ ಸುಮಾರು 8.00 ಗಂಟೆಯಲ್ಲಿ ಮೃತಪಟ್ಟಿರುವುದಾಗಿದ್ದು, ತಾವು ಸ್ಥಳಕ್ಕೆ ಬೇಟಿ ಮಾಡಿ ತನಿಖೆ ಕೈಗೊಂಡು ನಂ. ಕೆಎ-51-ಎಂಡಿ-7748 ಮಾರುತಿ ಸ್ವಿಪ್ಟ್ ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 56/2021 ಕಲಂ 279, 304(ಎ) ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 09-03-2021 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080