ಅಭಿಪ್ರಾಯ / ಸಲಹೆಗಳು

1.ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.36/2021  ಕಲಂ. 279,337,338 ಐ.ಪಿ.ಸಿ :-

     ದಿನಾಂಕ:08/02/2021 ರಂದು ಸಮಯ 11-30 ಗಂಟೆಗೆ  ನ್ಯಾಯಾಲಯದ ಪಿಸಿ-235 ರವರು  ಬಾಗೇಪಲ್ಲಿ ಘನ ನ್ಯಾಯಾಲಯ ಬಾಗೇಪಲ್ಲಿ ಪಿಸಿಆರ್ ನಂ-3/2021 ನ್ನು ಠಾಣೆಯಲ್ಲಿ ಹಾಜರು ಪಡಿಸಿದ್ದು, ಪಿರ್ಯಾದುದಾರರಾದ ನಾರಾಯಣಸ್ವಾಮಿ ಕೆ ವಿ ಬಿನ್ ವೆಂಕಟರಾಯಪ್ಪ,32 ವರ್ಷ,ವಾಸ: ಕಾಲುವಗಡ್ಡಪಲ್ಲಿ ಗ್ರಾಮ ಗುಡಿಬಂಡೆ ತಾಲ್ಲೂಕು ರವರು ನ್ಯಾಯಾಲಯದಿಂದ ಸಾದರುಪಡಿಸಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ:24/05/2020 ರಂದು ಬೆಳಿಗ್ಗೆ ಸುಮಾರು 11-30 ಗಂಟೆ ಸಮಯದಲ್ಲಿ ವಿಮೋಚನರೆಡ್ಡಿ ರವರ ಬಾಬತ್ತು ಟಾಟಾ ಕಂಪನಿಯ TN-22 CZ-2685 ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿಯಲ್ಲಿ ಗಡಿದಂ ಕೆರೆಯಲ್ಲಿ ಮಣ್ಣನ್ನು ತುಂಬಿಸಿಕೊಂಡು ಗಡಿದಂ ಶ್ರೀನಿವಾಸರೆಡ್ಡಿ ರವರ ಬಾಬತ್ತು ಜಮೀನಿನಲ್ಲಿ ಅನ್ ಲೋಡ್ ಮಾಡಲು ಲಾರಿಯ ಬಾಡಿಯನ್ನು ಮೇಲೆ ಎತ್ತಲು ನೋಡಿದಾಗ ಕೆ.ಇ.ಬಿ ವಿದ್ಯುತ್ ತಂತಿಗಳಿದ್ದು. ಪಿರ್ಯಾದಿದಾರರು ಮೇಲೆ ವಿದ್ಯುತ್ ತಂತಿಗಳಿವೆ ಲಾರಿ ಬಾಡಿಗೆ ವಿದ್ಯುತ್ ತಾಕಿ ಸ್ಪರ್ಶವಾಗಬಹುದು ಎಂದು ಹೇಳಿದರೂ ಸಹ ವಿಮೋಚನ ರೆಡ್ಡಿ ರವರು ನೀನು ಬಾಡಿ ಮೇಲೆ ಎತ್ತಿ ಅನ್ ಲೋಡ್ ಮಾಡು ವಿದ್ಯುತ್ ತಂತಿಗಳು ಏನೂ ತಾಕುವುದಿಲ್ಲ ಎಂದು ಹೇಳಿದ್ದು, ಏನು ಆದರೂ ನಾನೇ ನೋಡಿಕೊಳ್ಳುತ್ತೇನೆ, ನೀನು ಅನ್ ಲೋಡ್ ಮಾಡು ಇಲ್ಲದಿದ್ದರೆ ಲಾರಿ ಇಳಿದು ಕೆಲಸ ಬಿಟ್ಟು ಹೋಗು ಎಂದು ಬೈದಾಗ ಪಿರ್ಯಾದಿಯು ಟಿಪ್ಪರ್ ಲಾರಿಯ ಬಾಡಿಯನ್ನು ಮೇಲಕ್ಕೆ ಎತ್ತಿದಾಗ ಲಾರಿಯ ಮೇಲ್ಭಾಗದಲ್ಲಿ ಹಾದು ಹೋಗಿದ್ದ ಕೆ,ಇ,ಬಿ ವಿದ್ಯುತ್ ತಂತಿಗಳು ತಗುಲಿ ವಿದ್ಯುತ್ ಸ್ಪರ್ಶವಾಗಿದ್ದು ಸ್ಪರ್ಶದಿಂದ ಪಿರ್ಯಾದಿಗೆ ಬಲ ಕೆನ್ನೆಯ ಕೆಳಭಾಗ, ಕತ್ತಿನ ಮದ್ಯ ರಕ್ತಗಾಯ ಹಾಗೂ ಎಡಕಾಲಿನ ಪಾದಕ್ಕೆ ತೀವ್ರ ಸ್ವರೂಪದ ಗಾಯಗಳಾಗಿ ಬಿದ್ದುಹೋಗಿದ್ದು, ಜಮೀನಿನಲ್ಲಿದ್ದ ಕೆಲಸಗಾರರು ಪಿರ್ಯಾದಿಯನ್ನು ಸ್ಥಳದಲ್ಲಿ ಉಪಚರಿಸಿ ಯಾವುದೋ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವಂತೆ ತಿಳಿಸಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಕೊಂಡಿರುತ್ತೇನೆ. ವೈದ್ಯಕೀಯ ಚಿಕಿತ್ಸೆಗೆ ಹೆಚ್ಚಿನ ಹಣ ಖರ್ಚು ಆಗಿ ಪಿರ್ಯಾದುದಾರರಿಗೆ ನಷ್ಟವುಂಟಾಗಿರುತ್ತದೆ. ಆದರೆ ಟಿಪ್ಪರ್ ಮಾಲೀಕ ಪಿರ್ಯಾದಿಯನ್ನು ಘಟನೆಯ ನಂತರ ಇದುವರೆವಿಗೂ  ಯಾವುದೇ ರೀತಿಯ ವಿಚಾರಣೆಯನ್ನು ಸಹ ಮಾಡಿರುವುದಿಲ್ಲ. ಆದ್ದರಿಂದ ಟಿಪ್ಪರ್ ಮಾಲಿಕನಾದ ವಿಮೋಚನ ರೆಡ್ಡಿ ರವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ನ್ಯಾಯಾಲಯದಿಂದ ಸಾದರುಪಡಿಸಿದ ದೂರಾಗಿರುತ್ತೆ.

2.ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.14/2021 ಕಲಂ. 160 ಐ.ಪಿ.ಸಿ :-

     ದಿನಾಂಕ: 08/02/2021 ರಂದು ಮದ್ಯಾಹ್ನ 14-30 ಗಂಟೆ ಸಮಯದಲ್ಲಿ ಹೆಚ್ ಸಿ 139 ಶ್ರೀನಾಥ  ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,  ದಿನಾಂಕ:08/02/2021 ರಂದು ಮದ್ಯಾಹ್ನ 13-00 ಗಂಟೆಯ ಸಮಯದಲ್ಲಿ  ಪಿ ಎಸ್ ಐ ಸಾಹೇಬರವರು  ಹೆಚ್ ಸಿ 139 ಶ್ರೀನಾಥ ಆದ ನನ್ನನ್ನು   ಮತ್ತು  ಹೆಚ್ ಸಿ - 36 ವಿಜಯ್ ಕುಮಾರ್ ರವರನ್ನು ಕರೆದು  ನನಗೆ ಈಗ  ಬಟ್ಲಹಳ್ಳಿ ಪೊಲೀಸ್ ಠಾಣೆಯ ಸರಹದ್ದಿನ ಪುಲ್ಲಗುಂಡ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಸರ್ಕಾರಿ ಕೊಳವೆ ಬಾವಿಯನ್ನು ಕೊರೆಯಿಸುವ ವಿಚಾರದಲ್ಲಿ ಪುಲ್ಲಗುಂಡ್ಲಹಳ್ಳಿ ಗ್ರಾಮದ ವಾಸಿಗಳಾದ ರಮೇಶ್ ಮತ್ತು ವಿಶ್ವನಾಥ ಕಡೆಯವರಿಗೆ ಗಲಾಟೆಗಳು ಆಗುತ್ತಿರುವುದಾಗಿ  ಮಾಹಿತಿ ಬಂದಿರುತ್ತದೆ. ನಿವುಗಳು ಗ್ರಾಮಕ್ಕೆ  ಹೋಗಿ ವಿಚಾರ ತಿಳಿದು ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಬಂದು ಹಾಜರುಪಡಿಸುವಂತೆ ಸೂಚಿಸಿ ಕಳುಹಿಸಿಕೊಟ್ಟಿದ್ದು ಅದರಂತೆ ನಾವುಗಳು ಪುಲ್ಲಗುಂಡ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಹೋದಾಗ ಶಾಲೆಯ ಬಳಿ ಸರ್ಕಾರಿ ಕೊಳವೆ ಬಾವಿ ಕೊರೆಸಿದ್ದು, ಈ ವಿಚಾರವಾಗಿ ಶಾಲೆಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಪುಲ್ಲಗುಂಡ್ಲಹಳ್ಳಿ ಗ್ರಾಮದ 1 ನೇ ಪ್ರತಿವಾದಿಗಳಾದ 1) ರಮೇಶ್ ಪಿ.ಎಮ್ ಬಿನ್ ಮುನಿಶಾಮಿ, 36 ವರ್ಷ, ನಾಯಕರು, ವ್ಯವಸಾಯ, ವಾಸ: ಪುಲ್ಲಗುಂಡ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ ನಂ: 9686520277, ರವರು ಮತ್ತು ಆತನ ಬೆಂಬಲಿಗರಾದ 2) ನರಸಿಂಹ ಬಿನ್ ಲೇಟ್ ಕದಿರಪ್ಪ 40 ವರ್ಷ, ನಾಯಕರು ಟೈಲರ್ ಕೆಲಸ, ವಾಸ: ಪುಲ್ಲಗುಂಡ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ ನಂ: 8197021323   3) ನರಸಿಂಹಮೂರ್ತಿ ಬಿನ್ ಮುನಿಶಾಮಿ, 38 ವರ್ಷ, ನಾಯಕರು, ವ್ಯವಸಾಯ, ವಾಸ: ಪುಲ್ಲಗುಂಡ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ ನಂ: 9008746987 4) ಪಿ.ಸಿ. ಶ್ರೀರಾಮ ಬಿನ್ ಲೇಟ್ ಚಿಕ್ಕ ಈರಪ್ಪ, 50 ವರ್ಷ, ನಾಯಕರು, ವ್ಯವಸಾಯ, ವಾಸ: ಪುಲ್ಲಗುಂಡ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ ನಂ: 9019538086. 5) ಅಶ್ವಥ ಬಿನ್ ಕದಿರಪ್ಪ (ಲೇಟ್), 36 ವರ್ಷ, ನಾಯಕರು, ವ್ಯವಸಾಯ, ವಾಸ: ಪುಲ್ಲಗುಂಡ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ ನಂ: 9900996387  6)  ಸುರೇಶ್ ಬಿನ್ ಮುನಿಶಾಮಿ, 44 ವರ್ಷ, ನಾಯಕರು, ವ್ಯವಸಾಯ, ವಾಸ: ಪುಲ್ಲಗುಂಡ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ ನಂ: 9019500639  7) ಶ್ರೀಮತಿ ಕಲ್ಪನ ಕೊಂ ನರಸಿಂಹಮೂರ್ತಿ, 30 ವರ್ಷ, ನಾಯಕರು, ವ್ಯವಸಾಯ, ವಾಸ: ಪುಲ್ಲಗುಂಡ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರುಗಳು  ಮತ್ತು 2 ನೇ ಪ್ರತಿವಾದಿಗಳು 8) ವಿಶ್ವನಾಥ  ಬಿನ್ ನರಸಿಂಹಪ್ಪ 33 ವರ್ಷ, ನಾಯಕರು ವ್ಯವಸಾಯ ವಾಸ: ಪುಲ್ಲಗುಂಡ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ ನಂ: 6361702288 ರವರು  ಮತ್ತು ಆತನ ಬೆಂಬಲಿಗರಾದ  9) ಕೋನಪ್ಪ ಬಿನ್ ನರಸಿಂಹಪ್ಪ, 35 ವರ್ಷ, ನಾಯಕರು,ವ್ಯವಸಾಯ, ವಾಸ: ಪುಲ್ಲಗುಂಡ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ ನಂ: 7019725322. 10) ನರಸಿಂಹಪ್ಪ ಬಿನ್ ಲೇಟ್ ಕೋನಪ್ಪ, 56 ವರ್ಷ, ನಾಯಕರು, ವ್ಯವಸಾಯ, ವಾಸ: ಪುಲ್ಲಗುಂಡ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. ಮೊ ನಂ: 9945483405. 11) ವೆಂಕಟರವಣಮ್ಮ ಕೊಂ ನರಸಿಂಹಪ್ಪ, 50 ವರ್ಷ, ನಾಯಕರು, ವ್ಯವಸಾಯ, ವಾಸ: ಪುಲ್ಲಗುಂಡ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. 12) ಶ್ರೀಮತಿ ಕಲಾವತಿ ಕೊಂ ವಿಶ್ವನಾಥ, 30 ವರ್ಷ, ನಾಯಕರು, ವ್ಯವಸಾಯ, ವಾಸ: ಪುಲ್ಲಗುಂಡ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರುಗಳು ಗುಂಪುಸೇರಿಕೊಂಡು ಒಬ್ಬರಿಗೊಬ್ಬರು ಪರಸ್ಪರ ಬೈದಾಡಿಕೊಂಡು, ತಳ್ಳಾಡಿಕೊಂಡು  ಕೈ ಕೈ ಮಿಲಾಯಿಸಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗಬರುವಂತೆ ವರ್ತಿಸಿ, ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವ ರೀತಿಯಲ್ಲಿ ವರ್ತಿಸಿದರು. ಅಷ್ಟರಲ್ಲಿ ನಾನು, ಮತ್ತು ಹೆಚ್ ಸಿ - 36 ವಿಜಯಕುಮಾರ್ ಹಾಗೂ  ಗಲಾಟೆಯ ಶಬ್ದ ಕೇಳಿಸಿಕೋಂಡು ಸ್ಥಳಕ್ಕೆ ಬಂದ ಪುಲ್ಲಗುಂಡ್ಲಹಳ್ಳಿ ಗ್ರಾಮದ ಸಾರ್ವಜನಿಕರು ಉಭಯತ್ರಯರಿಗೂ ಸಮಾದಾನಪಡಿಸಿ ಗಲಾಟೆಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದರೂ ಸಹ  ಮೇಲ್ಕಂಢ ಆಸಾಮಿಗಳು ನಮ್ಮ ಉಪಸ್ಥಿತಿಯಲ್ಲಿ ಗುಂಪುಸೇರಿಕೊಂಡು ಒಬ್ಬರಿಗೊಬ್ಬರು ಪರಸ್ಪರ ಬೈದಾಡಿಕೊಂಡು, ತಳ್ಳಾಡಿಕೊಂಡು  ಕೈ ಕೈ ಮಿಲಾಯಿಸಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗಬರುವಂತೆ ವರ್ತಿಸಿ, ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವ ರೀತಿಯಲ್ಲಿ ವರ್ತಿಸಿರುತ್ತಾರೆ. ಆದ್ದರಿಂದ ಮೇಲ್ಕಂಡವರನ್ನು ಠಾಣೆಗೆ ಕರೆದುಕೊಂಡು ಬಂದು ಹಾಜರುಪಡಿಸಿದ್ದು, ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ  ತಮ್ಮಲ್ಲಿ ಕೋರುತ್ತೇನೆ.

3.ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.12/2021 ಕಲಂ. 419,420  ಐ.ಪಿ.ಸಿ & 66(D) INFORMATION TECHNOLOGY ACT 2008:-

     ದಿನಾಂಕ:9/02/2021 ರಂದು ಪಿರ್ಯಾದಿ  ಮಹ್ಮದ್ ಅಲ್ತಾಪ್ ಬಿನ್ ಮಹ್ಮದ್ ಶರೀಪ್,60 ವರ್ಷ, ನಿವೃತ್ತ ಬಿ ಎಸ್ ಎನ್ ಎಲ್ ಇಂಜಿನಿಯರ್, ವಾಸ ವಿವಿ ಪುರಂ, ಗೌರೀಬಿದನೂರು ಟೌನ್, ಮೊ ಸಂಖ್ಯೆ:9483166038 ಠಾಣೆಗೆ ಹಾಜರಾಗಿ ನಿಡಿದ  ದೂರು ಏನೆಂದರೆ ನಾನು ಎಸ್ ಬಿ ಐ ಗೌರೀಬಿದನೂರು ಶಾಖೆಯಲ್ಲಿ ಉಳಿತಾಯ ಖಾತೆ ನಂ:64044482872 ರಂತೆ ಖಾತೆಯನ್ನು ಮತ್ತು ಆ ಖಾತೆಗೆ ಎ ಟಿ ಎಂ ಕಾರ್ಡನ್ನು ಸಹ ಹೊಂದಿರುತ್ತೇನೆ.ಈಗಿರುವಲ್ಲಿ ದಿನಾಂಕ:19/01/2021 ರಂದು ನನ್ನ ಮೊಬೈಲ್ ಗೆ ಒಂದು ಸಂದೇಶ ಬಂದಿದ್ದು,  ಅದರಲ್ಲಿ ನಮ್ಮ ಬಳಿ ಸಾಕಷ್ಟು ಹಣ  ಇದೆ, ನಾನು ಕ್ಯಾನ್ಸರ್ ಕಾಯಿಲೆಯಿಂದ ನರಳುತ್ತಿದ್ದೇನೆ, ನನ್ನ ಪತಿಯು ಸಹ ಗಾಗಲೆ ಮೃತ ಪಟ್ಟಿರುತ್ತಾರೆ, ನನಗೆ ಮಕ್ಕಳು ಸಹ ಇರುವುದಿಲ್ಲ, ನಾನು ಮೃತ ಪಟ್ಟರೆ ಹಣ ಸಂಬಂದಿಕರಿಗೆ ಹೊರಟು ಹೋಗುತ್ತಿದೆ. ಅದು ನನಗೆ ಇಷ್ಟ ಇರುವುದಿಲ್ಲ. ಆದ ಕಾರಣ ಸದರಿ ಹಣ ದೇಶದ ಬಡವರಿಗೆ ಸೇರಲಿ ಅಂತ ಭಾವಿಸಿದ್ದು, ಸದರಿ ಹಣದ ಪೈಕಿ  70 % ಹಣವನ್ನು ಬಡವರಿಗೆ ಧಾನ ಮಾಡಬೇಕು ಉಳಿಕೆ 30% ನೀವು ಬಳಸಿಕೊಳ್ಳಬೇಕು ಅಂತ ಸಂದೇಶದಲ್ಲಿ ಹಾಕಿ ಅದರಲ್ಲಿ MAIL ID:-vidyajan@vidyajan.com  ಸಹ ಹಾಕಿ ಇದಕ್ಕೆ ಸಂಪರ್ಕಿಸಲು ತಿಳಿಸಿದರು. ನಾನು ಪುನಃ ಸದರಿ ಮೇಲ್ ಐಡಿಗೆ ಸಂಪರ್ಕಿಸಿದಾಗ ನನಗೆ  ನನ್ನ ಗಂಡ ಮೃತ ಪಟ್ಟಿರುತ್ತಾನೆ. ನನ್ನ ಪತಿ ಹೆಚ್ ಎಸ್ ಬಿ ಸಿ ಅಮೇರಿಕಾ ದೇಶದ ಬ್ಯಾಂಕ್ ನಲ್ಲಿ 3.9 ಮಿಲಿಯನ್ ಯು ಎಸ್ ಡಾಲರ್ ಹಣ ಇಟ್ಟಿರುತ್ತಾರೆ.ನನಗೆ ಸಹ ಕ್ಯಾನ್ಸರ್ ಕಾಯಿಲೆ ಜಾಸ್ತಿಯಾಗಿರುತ್ತದೆ. ಆದ ಕಾರಣ ನಿಮ್ಮ ಬ್ಯಾಂಕ್ ಖಾತೆಗೆ ಸದರಿ ಹಣ ವರ್ಗಾಯಿಸುತ್ತೇನೆ, ಅಂತ ತಿಳಿಸಿದರು  ನಂತರ ದಿನಾಂಕ;29/1/2021 ರಂದು ಪೋನ್ ನಂಬರ್: +13022654713 ಸಂಖ್ಯೆಯಿಂದ ನನ್ನ ಮೊಬೈಲ್ ಗೆ ಕರೆ ಬಂದಿದ್ದು, ಅವರು ನಾವು ನಮ್ಮ ಬ್ಯಾಂಕ್ ನಿಂದ ಇಂಡಿಯಾ ದೇಶಕ್ಕೆ ಹಣ ವರ್ಗಾಯಿಸಿರುತ್ತೇವೆ. ನೀವು ಕರೆಸ್ಪಾಂಡೆನ್ಸ್ ರವರೊಂದಿಗೆ ಮಾತಾಡಿಕೊಂಡು ಹಣವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ನಂತರ ಅದೇ ದಿನ ಮೊ ಸಂಖ್ಯೆ: 7286828669 ಸಂಖ್ಯೆಯಿಂದ ಕರೆ ಮಾಡಿ ನಾವು ಆರ್ ಬಿ ಐ ಬ್ಯಾಂಕ್ ಕಡೆಯಿಂದ ಮಾತಾಡುತ್ತಿರುವುದಾಗಿ ತಿಳಿಸಿ ನಿಮಗೆ ವಿದೇಶದಿಂದ ಹಣ ಬಂದಿದೆ, ಸದರಿ 3.9 ಮಿಲಿಯನ್ ಹಣವನ್ನು ಕನ್ವರ್ಟ ಮಾಡಲು 0.014% ತೆರಿಗೆ ಕಟ್ಟಬೇಕು ಅಂತ ತಿಳಿಸಿದ ನಾನು ನಿಜ ಇರಬಹುದೆಂತ ನಂಬಿ ಅದೇ ದಿನ ನನ್ನ ಮೇಲ್ಕಂಡ ಎಸ್ ಬಿ ಐ ಬ್ಯಾಂಕ್ ಖಾತೆಯಿಂದ RTGS  ಮೂಲಕ  ಅವರು ನೀಡಿದ್ದ ಸೆಂಟ್ರಲ್ ಬ್ಯಾಂಕ್ ಅಕೌಂಟ್ ನಂ:3851742498 & IFSC CODE:-CBIN0283688 ಖಾತೆಗೆ  30000  ರೂಗಳ ಹಣ ವರ್ಗಾಯಿಸಿರುತ್ತೇನೆ. ನಂತರ  ಹಣ ಕನ್ವರ್ಟ ಆಗಿದೆ. ಆದರೆ ಹೋಂ ಡಿಪಾರ್ಟಮೆಂಟ್ ನಿಂದ ಅನುಮತಿಯನ್ನು ಪಡೆಯ ಬೇಕಾಗಿದೆ.   ಅದಕ್ಕೆ ನೀವು  299999-00 ರೂಗಳನ್ನು ಕಟ್ಟ ಬೇಕು ಅಂತ ತಿಳಿಸಿದ. ಆಗ ನನಗೆ ಅನುಮಾನ ಬಂದು ಇವರು ನನ್ನನ್ನು ವಂಚಿಸುತ್ತಿದ್ದಾರೆಂತ ನಂಬಿ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ಸದರಿ  ನನ್ನಿಂದ 30,000/- ರೂಗಳನ್ನು ಪಡೆದು, ಅವರು ಧಾನದ ಮೊತ್ತವನ್ನು ನೀಡದೆ ಮತ್ತು ನನ್ನ ಹಣವನ್ನು ನನಗೆ ವಾಪಸ್ಸು ನೀಡದೆ ವಂಚಿಸಿರುವ ಮೇಲ್ಕಂಡ ಮೊಬೈಲ್ ಸಂಖ್ಯೆಯ ಬಳಕೆದಾರರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಲು ಕೋರಿ ನೀಡಿದ ದೂರು.

4.ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.63/2021 ಕಲಂ. 279,337  ಐ.ಪಿ.ಸಿ:-

     ದಿನಾಂಕ: 09/02/2021 ರಂದು ಬೆಳಿಗ್ಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಪಿ.ಜಗದೀಶ್ ಬಿನ್ ಪಿ.ವೆಂಕಟರವಣ, 21 ವರ್ಷ, ಬಲಜಿಗರು, ಚಾಲಕ ವೃತ್ತಿ, ಪಿ.ಟಿ.ಎಂ ಗ್ರಾಮ ಮತ್ತು ಮಂಡಲ್, ತಂಬಾಳಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ, ಆಂದ್ರಪ್ರದೇಶ ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 11.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ: 08/02/2021 ರಂದು ತನಗೆ ಮಲಕಲಚೆರವು ಮಂಡಲ್, ಮದ್ದಿನಾಯನಪಲ್ಲಿ ಗ್ರಾಮದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಹೊಸಕೋಟೆ ಟೌನ್ ಗೆ ಬಾಡಿಗೆಗೆ ಹೋಗಿ ಬರಲೆಂದು ಅದೇ ದಿನ ರಾತ್ರಿ 9.00 ಗಂಟೆಗೆ ಬಿ.ಕೊತ್ತಕೋಟೆ ಗ್ರಾಮವನ್ನು ಬಿಟ್ಟು ತನ್ನನ್ನು ಬಾಡಿಗೆಗೆ ಕರೆದಿದ್ದ ಮದ್ದಿನಾಯನಪಲ್ಲಿ ಗ್ರಾಮದ ವಾಸಿಯಚಾಸ ಬಿ.ರೆಡ್ಡಪ್ಪರೆಡ್ಡಿ ಬಿನ್ ವೆಂಕಟರೆಡ್ಡಿ, 40 ವರ್ಷ ರವರೊಂದಿಗೆ ತಮ್ಮ ಮಾಲಿಕರಾದ ರಾಜೇಶ್ ರವರ ಬಾಬತ್ತು ನೊಂದಣಿ ಸಂಖ್ಯೆ: KA-03 MH-7962 ಚಾವರ್ಲೆಟ್ ತವೇರಾ ಕಾರಿನಲ್ಲಿ ರಾತ್ರಿ 11.30 ಗಂಟೆ ಸಮಯದಲ್ಲಿ ಕಡಪ - ಬೆಂಗಳೂರು ಮಾರ್ಗ ರಸ್ತೆಯ ಮಾಡಿಕೆರೆ ಕ್ರಾಸ್ ಬಳಿ ಬಂದಾಗ ಅದೇ ಸಮಯಕ್ಕೆ ತಮ್ಮ ಎದುರುಗಡೆಯಿಂದ ಅಂದರೆ ಬೆಂಗಳೂರು ಕಡೆಯಿಂದ ಬಂದ ನೊಂದಣಿ ಸಂಖ್ಯೆ: AP-03 TE-6688 ಅಶೋಕ ಲೈಲ್ಯಾಂಡ್ ಲಾರಿಯ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನ ಮಾಡಿಕೊಂಡು ಹೋಗುತ್ತಿದ್ದ ಚಾವರ್ಲೆಟ್ ತವೇರಾ ಕಾರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಈ ಅಪಘಾತದಿಂದ ತನಗೆ ಬಲ ಗೆನ್ನೆಗೆ ರಕ್ತಗಾಯವಾಗಿ, ಕೈ ಕಾಲುಗಳ ಮೇಲೆ ಮೂಗೇಟುಗಳುಂಟಾಗಿರುತ್ತೆ. ತನ್ನೊಂದಿಗೆ ವಾಹನದಲ್ಲಿದ್ದ ರೆಡ್ಡಪ್ಪರೆಡ್ಡಿ ರವರಿಗೆ ಬಾಯಿಗೆ ರಕ್ತಗಾಯವಾಗಿ ಎಡೆಯ ಭಾಗಕ್ಕೆ ಒತ್ತಿದ ಮೂಗೇಟುಗಳುಂಟಾಗಿರುತ್ತೆ. ಅಷ್ಠರಲ್ಲಿ ವಿಚಾರ ತಿಳಿದು ಅಲ್ಲಿಗೆ ಬಂದು ಐಮರೆಡ್ಡಿಹಳ್ಳಿ ಗ್ರಾಮದ ಆಂಜಪ್ಪ ಬಿನ್ ಕೈಯ್ಯಪ್ಪ ಹಾಗೂ ಇತರರು ಬಂದು ತಮ್ಮನ್ನು ಉಪಚರಿಸಿ ಚಿಕಿತ್ಸೆಗಾಗಿ ದಾಖಲು ಮಾಡಿರುತ್ತಾರೆ. ಅಪಘಾತಕ್ಕೀಡಾದ ತಮ್ಮ ಕಾರು ಹಾಗೂ ಅಪಘಾತಪಡಿಸಿದ ಲಾರಿ ಸ್ಥಳದಲ್ಲಿರುತ್ತೆ. ಆದ್ದರಿಂದ ಅಪಘಾತವನ್ನುಂಟು ಮಾಡಿದ ಲಾರಿಯ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

5.ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.35/2021  ಕಲಂ. 457,380 ಐ.ಪಿ.ಸಿ:-

     ದಿನಾಂಕ 08-02-2021 ರಂದು  ಬೆಳಿಗ್ಗೆ 10-30 ಗಂಟೆಗೆ  ಪಿರ್ಯಾದಿದಾರರಾದ ಎನ್. ಜಯಪ್ರಕಾಶ್ ಬಿನ್ ಲೇಟ್ ಕೆ. ನರಸಿಂಹಪ್ಪ, 34 ವರ್ಷ, ಆದಿ ದ್ರಾವಿಡ, ವ್ಯಾಪಾರ, ವಾಸ ಸೋಮಶೆಟ್ಟಿಹಳ್ಳಿ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ದಿನಾಂಕ 06-02-2021 ರಂದು  ಸುಮಾರು 02-50 ಗಂಟೆಗೆ  ತನ್ನ ಅಣ್ಣನವರಿಗೆ ಅನಾರೋಗ್ಯದ ಕಾರಣ  ನಾವು  ಮತ್ತು ಮನೆಯವರು ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ  ಆಸ್ಪತ್ರೆಗೆ ಹೋಗಿರುತ್ತೇವೆ. ದಿನಾಂಕ 07-02-2021 ರಂದು  ಬೆಳಿಗ್ಗೆ 10-30 ಗಂಟೆಗೆ  ನಮ್ಮ ಸಂಬಂದಿಕರು ಮನೆಯ  ಬಾಗಿಲು ಮುರಿದಿರುವುದನ್ನು  ನಮಗೆ ದೂರವಾಣಿ ಕರೆ ಮಾಡಿ ನಮ್ಮ ಮನೆಯಲ್ಲಿ  ಕಳ್ಳತನ ಆಗಿದೆ ಎಂದು ನಮಗೆ ತಿಳಿಸಿದರು. ನಮ್ಮ ಅಣ್ಣನಿಗೆ ಆಪರೇಷನ್ ಇದ್ದ ಕಾರಣ  ದಿನಾಂಕ 08-02-2021 ರಂದು  ನಾವು  ಬೆಂಗಳೂರಿನಿಂದ  ಮನೆಗೆ  ಬಂದು ನೋಡಿದಾಗ ನಮಗೆ 1)ಒಂದು ಜೊತೆ ಬಂಗಾರದ  ವಾಲೆ ಜುಮುಕಿ- 12 ಗ್ರಾಂ ತೂಕ ಬೆಲೆ 20,000/-, 2)ಬಂಗಾರದ ಬ್ರಾಸ್ ಲೆಟ್-20 ಗ್ರಾಂ, 50,000/-, 3)ಒಂದು ಜೊತೆ ಬಂಗಾರದ ಕಿವಿ ಚೈನ್ -6 ಗ್ರಾಂ ತೂಕ, ಬೆಲೆ 21,000/-, 4)ಫ್ಯಾನ್ಸಿ ವಾಲೆ 54 ಜೋಡಿ-11 ಗ್ರಾಂ ತೂಕ 38,500/-, 5)ಬಂಗಾರದ ಗುಂಡಿನ ಜೋಡಿ ಹಾಕುವ  ಪ್ಲೇಟ್ ಗಳು- 3 ಗ್ರಾಂ ತೂಕ ಬೆಲೆ 12,000/-, 6)ಬಂಗಾರದ ಮಾವಟಿಗಳು 5 ಗ್ರಾಂ, 17,5000/-, 7)ಆರು ಬಂಗಾರದ 6 ಉಂಗುರಗಳು 34 ಗ್ರಾಂ ತೂಕ ಬೆಲೆ 1,05,000/-, 8) ಬೆಳ್ಳಿಯ ಕಾಲುಚೈನು ಎರಡು ಜೋಡಿ 200 ಗ್ರಾಂ ತೂಕ, 9000/- , 9)ಕೈಗೆ ಹಾಕಿಕೊಳ್ಳುವ ಬೆಳ್ಳಿಯ ಕಡಗ 60 ಗ್ರಾಂ ತೂಕ ಬೆಲೆ 4000/-, 10)ಬೆಳ್ಳಿಯ ಕತ್ತಿನ ಚೈನು ಒಂದು 50 ಗ್ರಾಂ ತೂಕ ಬೆಲೆ 3000/-11)5000/- ನಗದುಹಣ, 12) 2 ರೇಷ್ಮೇ ಸೀರೆಗಳು ಬೆಲೆ 24,000/- ರೂ ಗಳಾಗಿರುತ್ತೆ. ಒಟ್ಟು 91 ಗ್ರಾಂ ಬಂಗಾರದ ಆಭರಣಗಳ ಬೆಲೆ 2,64.000/- ಒಟ್ಟು ಬೆಳ್ಳಿ ಆಭರಣಗಳ ತೂಕ 310 ಗ್ರಾಂ ಬೆಲೆ 16000/- . 5000/- ನಗದು ಹಣ, 24,000/- ರೂಗಳ ರೇಷ್ಮೇ ಸೀರೆಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು  ಹೋಗಿರುತ್ತಾರೆ. ಕಳುವು ಮಾಡಿರುವವರನ್ನು ಪತ್ತೆ ಮಾಡಿ ಕೊಡಲು ಕೋರಿ ನೀಡಿದ ದೂರಾಗಿರುತ್ತೆ.

6.ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.36/2021  ಕಲಂ. 143,147,148,323,324,504,506,149  ಐ.ಪಿ.ಸಿ:-

     ದಿನಾಂಕ:09/02/2021 ರಂದು ಬೆಳಗಿನ ಜಾವ 00-30 ಗಂಟೆಯಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಲಕ್ಷ್ಮೀದೇವಮ್ಮ ಕೋಂ ಭಜನಿ ಗಂಗನ್ನ , 56 ವರ್ಷ, ಆದಿ ಕರ್ನಾಟಕ, ಹುದುಗೂರು, ಗ್ರಾಮ ಗೌರೀಬಿದನೂರು ತಾಲ್ಲೂಕು ರವರು ನೀಡಿರುವ ಹೇಳಿಕೆ ದೂರಿನ ಸಾರಾಂಶಾವೇನೆಂದರೆ,  ಪಿರ್ಯಾದಿದಾರರಿಗೆ ಇಬ್ಬರು ಮಕ್ಕಳಿದ್ದು 1ನೇ ಸುರೇಂದ್ರ, 28 ವರ್ಷ, 2ನೇ ಬಾಬು 25 ವರ್ಷ ಆಗಿರುತ್ತಾರೆ. ಹಿರಿಯ ಮಗ ಸುರೇಂದ್ರ ಅದೇ ಗ್ರಾಮದ ವಾಸಿ ಓಬಳಗಾರಿ ಲಕ್ಷ್ಮೀನರಸಿಂಹಪ್ಪ, ರವರ ಮಗಳು ಸುಮಿತ್ರ ರವರನ್ನು ಪ್ರೀತಿಸಿ ಮದುವೆಯಾಗಿದ್ದು ಅವರಿಗೆ ಇಬ್ಬರು ಮಕ್ಕಳು ಇರುತ್ತಾರೆ. ಪಿರ್ಯಾದಿದಾರರ ಸೊಸೆ ಸುಮಿತ್ರ ಆಗಾಗ್ಗೆ ಸಣ್ಣ ಪುಟ್ಟ ವಿಚಾರಕ್ಕೆ ಗಂಡನೊಂದಿಗೆ ಗಲಾಟೆ ಮಾಡಿಕೊಂಡು ತವರು ಮನೆಗೆ ಹೋಗುತ್ತಿದ್ದರು, ಈ ಬಗ್ಗೆ ಗ್ರಾಮದಲ್ಲಿ ಈ ಹಿಂದೆ ರಾಜಿ ಪಂಚಾಯ್ತಿಗಳು ಮಾಡಿದ್ದರೂ ಪಿರ್ಯಾದಿದಾರರ ಸೊಸೆ ಸುಮಿತ್ರ ಗಂಡನನ್ನು ಬಿಟ್ಟು ತವರು ಮನೆಗೆ ಹೋಗಿ ಬೇರೆ ಮನೆ ಮಾಡಿದರೆ ಬರುವುದಾಗಿ ತಿಳಿಸಿ ತವರು ಮನೆಯಲ್ಲೇ ಇದ್ದುದ್ದರಿಂದ  ಈ ದಿನ ದಿನಾಂಕ:08/02/2021 ರಂದು ಸಂಜೆ ಸುಮಾರು 6-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರ ಹಿರಿಯ ಮಗ ಸುರೇಂದ್ರ ಪತ್ನಿ ಸುಮಿತ್ರ ರವರಿಗೆ ಬೇರೆ ಮನೆ ಮಾಡಿರುತ್ತೇನೆ. ಬಾ ಮನೆಗೆ ಹೋಗೋಣ ಎಂದು ಕರೆದು  ಮನೆಗೆ ವಾಪಸ್ಸಾಗಿದ್ದಾಗ ಇದೇ ದಿನ ರಾತ್ರಿ ಸುಮಾರು 7-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಅವರ ಹಿರಿಯ ಮಗ ಸುರೇಂದ್ರ, ಕಿರಿಯ ಮಗ  ಬಾಬು ಮತ್ತು ಬಾಬು ಪತ್ನಿ ಮೇಘನ ರವರೊಂದಿಗೆ ಮನೆಯಲ್ಲಿದ್ದಾಗ ಸೊಸೆ ಸುಮಿತ್ರ ಅವರ ಸಂಬಂಧಿಕರಾದ ಅದೇ ಗ್ರಾಮದ ಚಿಕ್ಕಗಂಗಪ್ಪ ಬಿನ್ ಲೇಟ್ ನರಸಿಂಹಪ್ಪ, ಬಾಲಕೃಷ್ಣ ಬಿನ್ ಚಿಕ್ಕಪ್ಪಯ್ಯ, ಶಿವ ಬಿನ್ ಚಿಕ್ಕಗಂಗಪ್ಪ, ನವೀನ ಬಿನ್ ನರಸಿಂಹಪ್ಪ, ಗಿರೀಶ, ಪುಟ್ಟಮ್ಮ, ಶಶಿಕಲಾ ಕೋಂ ಗಂಗರಾಜು ರವರೊಂದಿಗೆ ಅಕ್ರಮ ಗುಂಪುಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆಗಳನ್ನು ಮತ್ತು ಇಟ್ಟಿಗೆಗಳನ್ನು ಹಿಡಿದುಕೊಂಡು ಪಿರ್ಯಾದಿದಾರರ  ಮನೆಯ ಬಳಿ ಬಂದು ನಿನ್ನ ಮಗನಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸುಮಿತ್ರ ಹೇಳಿ, ನಂತರ ಬಾಲಕೃಷ್ಣ ದೊಣ್ಣೆಯಿಂದ ಪಿರ್ಯಾದಿದಾರರ ತಲೆಯ ಎಡ ಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿ, ಅಲ್ಲಿಯೇ ಇದ್ದ ಬಾಬು ಜಗಳ ಬಿಡಿಸಲು ಹೋಗಿದ್ದಕ್ಕೆ ಶಿವ ಮತ್ತು ನವೀನ ದೊಣ್ಣೆಗಳಿಂದ ಬಾಬುವಿನ ತಲೆಗೆ, ಮೈ ಮೇಲೆ, ಕಾಲಿಗೆ ಹೊಡೆದು ರಕ್ತಗಾಯಗಳನ್ನುಂಟು ಮಾಡಿರುತ್ತಾರೆ. ನಂತರ ಗಿರೀಶ ಮತ್ತು ಚಿಕ್ಕಗಂಗಪ್ಪ ಇಟ್ಟಿಗೆಗಳಿಂದ ಬಾಬುವಿನ ಮೈ ಮೇಲೆ, ಹಣೆಗೆ ಮತ್ತು ಮುಖದ ಮೇಲೆ ಹೊಡೆದು ಗಾಯಗಳನ್ನುಂಟು ಮಾಡಿರುತ್ತಾರೆ. ಹಿರಿಯ ಸೊಸೆ ಸುಮಿತ್ರಮ್ಮ, ಪುಟ್ಟಮ್ಮ, ಮತ್ತು ಶಶಿಕಲಾ ಪಿರ್ಯಾದಿದಾರರಿಗೆ ಮತ್ತು ಕಿರಿಯ ಸೊಸೆ ಮೇಘನಾ ರವರಿಗೆ ಕೈಗಳಿಂದ ಮೈ ಮೇಲೆ ಹೊಡೆದು ಕೆಳಕ್ಕೆ ತಳ್ಳಿ, ಮೂಗೇಟುಗಳನ್ನುಂಟು ಮಾಡಿ ಈ ಸೂಳೇ ಮುಂಡೆಗಳದು  ಜಾಸ್ತಿ ಆಗಿದೆ  ಇವರನ್ನು ಮುಗಿಸೋಣ ಎಂದು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ಸುಮಿತ್ರ ಮೇಘನಾ ರವರಿಗೆ ಕಾಲುಗಳಿಂದ ಒದ್ದು, ಬಟ್ಟೆಗಳನ್ನು ಹರಿದು ಹಾಕಿರುತ್ತಾಳೆ ಸ್ಥಳದಲ್ಲಿದ್ದ ಮಾನಸ ಮತ್ತು ಸುರೇಂದ್ರ ಜಗಳ ಬಿಡಿಸಿ ಆಂಬುಲೆನ್ಸ್ ವಾಹನದಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದು ದಾಖಲು ಮಾಡಿದ್ದು ಈ ಗಲಾಟೆಗೆ ಕಾರಣವಾದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ  ಜರುಗಿಸಲು ಕೋರಿ ದೂರು.

7.ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.25/2021  ಕಲಂ. 428,429,34 ಐ.ಪಿ.ಸಿ:-

     ದಿನಾಂಕ 07/02/2021 ರಂದು ರಾತ್ರಿ 08:30 ಗಂಟೆ ಸಮಯದಲ್ಲಿ ಬಂದ ಮಾಹಿತಿಯಂತೆ ಕಲ್ಲೂಡಿ ಸಮೀಪವಿರುವ ಬ್ರಿಡ್ಜ ಬಳಿ ಹೋಗಿ ಪರಿಶೀಲಿಸಲಾಗಿ ಕೆಲವು ವ್ಯಕ್ತಿಗಳು ಒಂದು ಟ್ರಾಕ್ಟರ್ ನಲ್ಲಿ ಬೋನ್ ಇಟ್ಟುಕೊಂಡು ಬಂದಿದ್ದು ಅದರಲ್ಲಿ ಹಲವಾರು ಕೋತಿಗಳು ತುಂಬಿರುವ ಕಾರಣ ಹೆಚ್ಚಿನ ಒತ್ತಡದಿಂದ ಉಸಿರಾಟದ ತೊಂದರೆಯಿಂದ 25 ಕೋತಿಗಳು ಮೃತಪಟ್ಟಿದ್ದವು. ಸ್ಥಳದಲ್ಲಿದ್ದ ಒಬ್ಬ ವ್ಯಕ್ತಿಯನ್ನು ಕೇಳಲಾಗಿ ತನ್ನ ಹೆಸರು ಇಲಿಯಾಜ್ ಬಾಷಾ ಬಿನ್ ಅಬ್ದುಲ್ ರಹೀಮ್ ಸಾಬ್ ಎಂದು ತಿಳಿಸಿದ್ದು ತಮ್ಮ ಊರಿನ ಕೃಷ್ಣಪ್ಪ ಬಿನ್ ನರಸಿಂಹಪ್ಪ, ಶಶಿಕುಮಾರ್, ಬಾಲಪ್ಪ ಬಿನ್ ಕೃಷ್ಣಪ್ಪ ಹಾಗೂ ಮತ್ತಿತರರು ಸೇರಿ ಊರಿನಲ್ಲಿ ಕೋತಿಗಳ ಕಾಟ ಹೆಚ್ಚಾದ ಕಾರಣ ಬೋನಿನಲ್ಲಿ ಹಿಡಿದುಕೊಂಡು ಕಲ್ಲೂಡಿ ಬಳಿ ಬಿಡಲು ಬಂದಿದ್ದು ಕೋತಿಗಳು ಬೋನಿನಲ್ಲಿ ಹೆಚ್ಚಾಗಿದ್ದ ಕಾರಣ 25 ಕೋತಿಗಳು ಉಸಿರುಗಟ್ಟಿ ಸತ್ತಿದ್ದು ಉಳಿದ ಕೋತಿಗಳು ತಪ್ಪಿಸಿಕೊಂಡು ಹೋಗಿರುತ್ತವೆ ಎಂದು ತಿಳಿಸಿದನು. ಈ ರೀತಿಯಾಗಿ ಪ್ರಾಣಿಗಳನ್ನು ಸಾಗಾಣಿಕೆ ಮಾಡುವುದಾಗಲೀ, ಸಾಯಿಸುವುದಾಗಲೀ ತಪ್ಪಾಗಿರುತ್ತದೆ ಎಂದು ತಿಳಿಸಿ ಆರೋಪಿಗಳೊಂದಿಗೆ ಟ್ರಾಕ್ಟರ್ ನ್ನು ಕರೆದುಕೊಂಡು ಬರುತ್ತಿರುವಾಗ 3 ಜನ ಆರೋಪಿಗಳು ತಪ್ಪಿಸಿಕೊಂಡು ಹೋಗಿದ್ದು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ನಂತರ ಈ ದಿನ ದಿನಾಂಕ 08/02/2021 ರಂದು ಸಂಜೆ 6:00 ಗಂಟೆಗೆ ಆರೋಪಿಗಳ  ವಿರುದ್ದ ಸ್ವತಃ ಪ್ರಕರಣವನ್ನು ದಾಖಲಿಸಿರುತ್ತೇನೆ.

8.ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.26/2021  ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ;09/02/2021 ರಂದು ಬೆಳಿಗ್ಗೆ 10-30 ಗಂಟೆಗೆ ಘನ ನ್ಯಾಯಾಲಯದ ಮ.ಪಿಸಿ 364 ರವರು ಠಾಣಾ ಎನ್,ಸಿ,ಆರ್ ಸಂಖ್ಯೆ 28/2021 ರಲ್ಲಿ ಕ್ರಿಮಿನಲ್ ಪ್ರಕಣ ದಾಖಲಿಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂದರೆ ದಿನಾಂಕ 01/02/2021 ರಂದು ಸಂಜೆ 6:30 ಗಂಟೆಯಲ್ಲಿ ಪಿ.ಎಸ್.ಐ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಪ್ರಸನ್ನಕುಮಾರ್ ಕೆ PSI ಆದ ತಾನು ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ: 01-02-2021 ರಂದು ಸಂಜೆ 4:30 ಗಂಟೆಯಲ್ಲಿ ನಗರದ ನಾಗಾರೆಡ್ಡಿ ಬಡಾವಣೆಯ ಶ್ರೀಪದ್ಮಾವತಿ ಕಲ್ಯಾಣ ಮಂಟಪದ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ನಾನು HC-214 ಲೋಕೇಶ್, ಪಿ.ಸಿ 282 ರಮೇಶ್, PC-201 ಸುರೇಶ್, ಹಾಗೂ ಜೀಪ್ ಚಾಲಕ APC-105 ಅಶ್ವತ್ಥ ರೆಡ್ಡಿ ರವರೊಂದಿಗೆ ಸರ್ಕಾರಿ ಜೀಪಿನಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಕರೇಕಲ್ಲಹಳ್ಳಿಯಿಂದ ನಾಗಾರೆಡ್ಡಿ ಬಡಾವಣೆ ಕಡೆ ಹೋಗುವ ದಾರಿಯಲ್ಲಿ ಜೀಪನ್ನು ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ಶ್ರೀಪದ್ಮಾವತಿ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಇಸ್ಪೀಟ್ ಜೂಜಾಟವಾಡುತ್ತಿದ್ದು ಅದರಲ್ಲಿ ಒಬ್ಬ 100 ರೂಪಾಯಿ ಅಂದರ್ ಎಂದು ಮತ್ತೊಬ್ಬ 100 ರೂಪಾಯಿಗಳು ಬಾಹರ್ ಎಂದು ಕೂಗುತ್ತಿದ್ದು ಉಳಿದವರಲ್ಲಿ ಕೆಲವರು ಹಣವನ್ನು ಬಾಹರ್ ಕೆಲವರು ಅಂದರ್ ಎಂದು ಹಣವನ್ನು ಹಾಕುತ್ತಿದ್ದರು. ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಅವರನ್ನು ಸುತ್ತುವರೆದು ಓಡಿಹೋಗದಂತೆ ಸೂಚನೆಗಳನ್ನು ನೀಡಿ ಹಿಡಿಯಲು ಹೋದಾಗ ಕೆಲವರು ಸ್ಥಳದಿಂದ ಓಡಿಹೋಗಿದ್ದು ಕೆಲವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಶಿವಣ್ಣ ಬಿನ್ ಆದ್ಯಪ್ಪ, 48 ವರ್ಷ, ಸಾದರ ಗೌಡರು, ಕಲ್ಲೂಡಿ, ಗೌರಿಬಿದನೂರು ನಗರ, 2)ರಘು ಬಿನ್ ನರಸಪ್ಪ, 44 ವರ್ಷ, ಸಾದರ ಗೌಡರು, ಕಲ್ಲೂಡಿ ಗೌರಿಬಿದನೂರು ನಗರ, ಫೋ: 9959603419, 3) ಕೃಷ್ಣ ಬಿನ್ ನರಸಿಂಹಯ್ಯ, 35 ವರ್ಷ, ಪರಿಶಿಷ್ಟ ಜಾತಿ, ಕರೀಂಸಾಬಿ ಗಲ್ಲಿ, ಗೌರಿಬಿದನೂರು ನಗರ ಫೋ:9611983798, 4) ಸದ್ದಾಮ್ ಬಿನ್ ಮಹಮದ್ ಅಲಿ, 27 ವರ್ಷ, ಮುಸ್ಲಿಂ ಜನಾಂಗ, ಹಿರೇಬಿದನೂರು ಗೌರಿಬಿದನೂರು ನಗರ ಎಂದು ತಿಳಿಸಿದ್ದು ಓಡಿಹೋದವರ ಬಗ್ಗೆ ವಿಚಾರ ಮಾಡಲಾಗಿ 5) ಕೃಷ್ಣ @ ಕೃಷ್ಣಮೂರ್ತಿ, 6) ನಾಗರಾಜ್ @ ಮಬ್ಬು ಎಂದು ತಿಳಿಸಿರುತ್ತಾರೆ. ಸ್ಥಳದಲ್ಲಿ ಹುಲ್ಲಿನ ಹಾಸಿನ ಮೇಲೆ 52 ಇಸ್ಪೀಟ್ ಎಲೆಗಳು ಹಾಗೂ ನಗದು ಹಣ 6200 ರೂಪಾಯಿಗಳು ಇದ್ದು ಎಲ್ಲವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿಗಳನ್ನು ವರದಿಯೊಂದಿಗೆ ಠಾಣೆಗೆ ಸಂಜೆ 6:30 ಗಂಟೆಯಲ್ಲಿ ಹಾಜರುಪಡಿಸಿದ ಮೇರೆಗೆ ಪೊಲೀಸ್ ಐ.ಟಿ ಕಾರ್ಯ ನಿರ್ವಹಿಸದ ಕಾರಣ ಈ ದಿನ ದಿನಾಂಕ 02/02/2021 ರಂದು ಎನ್.ಸಿ.ಆರ್ ಪ್ರಕರಣ ದಾಖಲಿಸಿರುತ್ತೇನೆ ನಂತರ ಈ ದಿನ ಘನ ನ್ಯಾಯಾಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.   

ಇತ್ತೀಚಿನ ನವೀಕರಣ​ : 09-02-2021 05:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080