Feedback / Suggestions

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 271/2021 ಕಲಂ. 78(3) KARNATAKA POLICE ACT, 1963 :-

     ದಿನಾಂಕ -06/09/2021 ರಂದು ರಾತ್ರಿ 9-30 ಗಂಟೆಗೆ   ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ  ಹಾಜರಾಗಿ ನೀಡಿದ ವರಧಿಯ ದೂರಿನ ಸಾರಾಂಶವೇನೆಂದರೆ, ದಿನಾಂಕ 06.03.2021 ರಂದು ರಾತ್ರಿ 8-15 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಗೂಳೂರು ಹೋಬಳಿ, ನಲ್ಲಪರೆಡ್ಡಿಪಲ್ಲಿ ಗ್ರಾಮದ ಕೃಷ್ಣಪ್ಪ ಬಿನ್ ವೆಂಕಟರಾಯಪ್ಪ, 48 ವರ್ಷ, ನಾಯಕರು, ಜಿರಾಯ್ತಿ ಕೆಲಸ ರವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿ.ಹೆಚ್..ಸಿ-156 ನಟರಾಜ್ , ಸಿಪಿಸಿ-257 ನರಸಿಂಹಮೂರ್ತಿ ಮತ್ತು  ಜೀಪ್ ಚಾಲಕ ವೆಂಕಟೇಶ್ ಎ.ಹೆಚ್.ಸಿ-57 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-1444 ವಾಹನದಲ್ಲಿ  ನಲ್ಲಪರೆಡ್ಡಿಪಲ್ಲಿ ಗ್ರಾಮದ ಬಳಿ ಇದ್ದ ಪಂಚಾಯ್ತಿದಾರರನ್ನು ಕರೆದುಕೊಂಡು ಮೇಲ್ಕಂಡ ವಿಚಾರವನ್ನು ತಿಳಿಸಿ, ಪಂಚರೊಂದಿಗೆ ರಾತ್ರಿ 8-30 ಗಂಟೆಗೆ ಹೋಗಿ ನಲ್ಲಪರೆಡ್ಡಿಪಲ್ಲಿ ಗ್ರಾಮದ ರಸ್ತೆಯಲ್ಲಿ ಜೀಪನ್ನು ನಿಲ್ಲಿಸಿ ನಾವು ಮತ್ತು ಪಂಚರು ನಡೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಕೃಷ್ಣಪ್ಪ ಬಿನ್ ವೆಂಕಟರಾಯಪ್ಪ ರವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ, 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ ಬಳಿ ಪರಿಶೀಲಿಸಲಾಗಿ  ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 2010/-ರೂ.ಹಣ ಇದ್ದು,  ಆಸಾಮಿಯ ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ  ಕೃಷ್ಣಪ್ಪ ಬಿನ್ ವೆಂಕಟರಾಯಪ್ಪ, 48 ವರ್ಷ, ನಾಯಕರು, ಜಿರಾಯ್ತಿ ವಾಸ: ನಲ್ಲಪರೆಡ್ಡಿಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಗೆ  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿರುತ್ತಾನೆ. ಪಂಚಾಯ್ತಿದಾರರಾರ ಸಮಕ್ಷಮ ಆತನ ಬಳಿ ಇದ್ದ ಹಣದ ಬಗ್ಗೆ ವಿಚಾರ ಮಾಡಲಾಗಿ ಸಾರ್ವಜನಿಕರಿಂದ ಜೂಜಾಟದ ಸಮಯದಲ್ಲಿ ವಸೂಲಿ ಮಾಡಿದ ಹಣವನ್ನು ನಮ್ಮ ಗ್ರಾಮದ ಶ್ರೀನಿವಾಸರೆಡ್ಡಿ ಬಿನ್ ಕೃಷ್ಣಾರೆಡ್ಡಿ, 55 ವರ್ಷ, ಓಕ್ಕಲಿಗರು, ಜಿರಾಯ್ತಿ ಕೆಲಸ ರವರಿಗೆ ಕೊಡುತ್ತೇನೆ ಎಂದು ತಿಳಿಸಿರುತ್ತಾನೆ.  ಪಂಚಾಯ್ತಿದಾರರ ಸಮಕ್ಷಮ  ಒಂದು ಬಾಲ್ ಪಾಯಿಂಟ್ ಪೆನ್, ಹಾಗೂ ಒಂದು ಮಟ್ಕ ಚೀಟಿ, ಮತ್ತು 2010/- ರೂ ನಗದು ಹಣವನ್ನು  ಪಂಚನಾಮೆಯನ್ನು ಜರುಗಿಸಿ, ಮುಂದಿನ ತನಿಖೆಗಾಗಿ ಅಮಾನತ್ತು ಪಡಿಸಿಕೊಂಡೆವು ಅಸಲು ಪಂಚನಾಮೆ,  ಮಾಲು ಮತ್ತು ಆಸಾಮಿಯನ್ನು ರಾತ್ರಿ 9-30  ಗಂಟೆಗೆ ಠಾಣೆಯಲ್ಲಿ ಮುಂದಿನ ಕ್ರಮ ಜರುಗಿಸಲು ನೀಡಿದ ದೂರನ್ನು ಪಡೆದು ಠಾಣಾ ಎನ್ ಸಿ ಆರ್ ನಂ-255/2021 ರಂತೆ  ದಾಖಲಿಸಿರುತ್ತದೆ, ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನುದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 07-09-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 272/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ -07/09/2021 ರಂದು ಸಂಜೆ 5-30 ಗಂಟೆಗೆ   ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ  ಹಾಜರಾಗಿ ನೀಡಿದ ವರಧಿಯ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ; 07-09-2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿಯಾದ  ಸಿಪಿಸಿ- 176 ಶಶಿಕುಮಾರ್, ಸಿಪಿಸಿ-237 ವಿನಯ್ ಕುಮಾರ್ ಯಾದವ್  ಹಾಗೂ ಜೀಪ್ ಚಾಲಕ ಎ ಹೆಚ್ ಸಿ-57 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ವಾಹನದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣಾ ಸರಹದ್ದಿನ ಕಾರಕೂರು ಕ್ರಾಸ್, ಯಲ್ಲಂಪಲ್ಲಿ, ಕೊಂಡಂವಾರಿಪಲ್ಲಿ, ಗಡಿದಂ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ, ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ದೇವರಗುಡಿಪಲ್ಲಿ  ಗ್ರಾಮದ ಬಳಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ- 176 ಶಶಿಕುಮಾರ್, ಸಿಪಿಸಿ-237 ವಿನಯ್ ಕುಮಾರ್ ಯಾದವ್  ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಹೊರಟು, ದೇವರ ಗುಡಿಪಲ್ಲಿ ಕ್ರಾಸ್ ಬಳಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳ  ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಸಂಜೆ 4-15 ಗಂಟೆಗೆ ದೇವರ ಗುಡಿಪಲ್ಲಿ ಗ್ರಾಮದ ಬಳಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿ ಮುಂಭಾಗದಲ್ಲಿದ್ದ ಅಸಾಮಿಯು ಓಡಿ ಹೋಗುತ್ತಿದ್ದವನ್ನು ಸಿಬ್ಬಂದಿಯಾದ ಸಿಪಿಸಿ-176 ಶಶಿಕುಮಾರ್ ಮತ್ತು ಸಿಪಿಸಿ-237 ವಿನಯ್ ಕುಮಾರ್ ಯಾದವ್  ರವರು ಹಿಡಿದುಕೊಂಡು ನಮ್ಮ ವಶಕ್ಕೆ ಪಡೆದಿರುತ್ತೆವೆ ಸದರಿ ಅಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ನರಸಿಂಹಮೂರ್ತಿ ಬಿನ್ ನಾರಾಯಣಪ್ಪ 39 ವರ್ಷ, ದೋಬಿ ಜನಾಂಗ ಚಿಲ್ಲರೇ ಅಂಗಡಿ ವ್ಯಾಪಾರ, ವಾಸ:  ದೇವರ ಗುಡಿಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದುಬಂದಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಸಂಜೆ  5-30 ಗಂಟೆ ಠಾಣೆಯಲ್ಲಿ  ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ ವರದಿ.

 

3. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 273/2021 ಕಲಂ . 15(A),32(3) KARNATAKA EXCISE ACT, 1965 :-
ದಿನಾಂಕ -07/09/2021 ರಂದು ಸಂಜೆ 6-15 ಗಂಟೆಗೆ ಶ್ರೀ ಗೋಪಾಲರೆಡ್ಡಿ ಪೊಲೀಸ್ ಉಪ-ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ  ಹಾಜರಾಗಿ ನೀಡಿದ ವರಧಿಯ ದೂರಿನ ಸಾರಾಂಶವೇನೆಂದರೆ,  ಈ ದಿನ ದಿನಾಂಕ; 07-09-2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿಯಾದ  ಸಿಪಿಸಿ- 574 ರಫೀಕ್, ಸಿಪಿಸಿ-575 ವಿಜಯ್  ಹಾಗೂ ಜೀಪ್ ಚಾಲಕ ಎ ಹೆಚ್ ಸಿ-14 ವೆಂಕಟೇಶ್  ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ವಾಹನದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣಾ ಸರಹದ್ದಿನ ಕಾರಕೂರು ಕ್ರಾಸ್, ಕೊಂಡಂವಾರಿಪಲ್ಲಿ, ಮಲ್ಲಸಂದ್ರ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ, ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ದೇವರಗುಡಿಪಲ್ಲಿ  ಗ್ರಾಮದ ಬಳಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ- 574 ರಫೀಕ್, ಸಿಪಿಸಿ-575 ವಿಜಯ್ ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಹೊರಟು, ದೇವರ ಗುಡಿಪಲ್ಲಿ ಕ್ರಾಸ್ ಬಳಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳ  ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಸಂಜೆ 5-15 ಗಂಟೆಗೆ ದೇವರ ಗುಡಿಪಲ್ಲಿ ಗ್ರಾಮದ ಬಳಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿ ಮುಂಭಾಗದಲ್ಲಿದ್ದ ಅಸಾಮಿಯು ಓಡಿ ಹೋಗುತ್ತಿದ್ದವನ್ನು ಸಿಬ್ಬಂದಿಯಾದ ಸಿಪಿಸಿ- 574 ರಫೀಕ್, ಸಿಪಿಸಿ-575 ವಿಜಯ್ ರವರು ಹಿಡಿದುಕೊಂಡು ಅಸಾಮಿ ವಶಕ್ಕೆ ಪಡೆದಿರುತ್ತೆವೆ. ಸದರಿ ಅಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ನರಸಿಂಹಮೂರ್ತಿ ಬಿನ್ ನಾರಾಯಣಪ್ಪ 39 ವರ್ಷ, ದೋಬಿ ಜನಾಂಗ ಚಿಲ್ಲರೇ ಅಂಗಡಿ ವ್ಯಾಪಾರ, ವಾಸ:  ದೇವರ ಗುಡಿಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದುಬಂದಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಸಂಜೆ  6-15 ಗಂಟೆ ಠಾಣೆಯಲ್ಲಿ  ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿರುತ್ತೆ.

 

4. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 274/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ -07/09/2021 ರಂದು ಸಂಜೆ 7-00 ಗಂಟೆಗೆ   ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ  ಹಾಜರಾಗಿ ನೀಡಿದ ವರಧಿಯ ದೂರಿನ ಸಾರಾಂಶವೇನೆಂದರೆ,  ಈ ದಿನ ದಿನಾಂಕ; 07-09-2021 ರಂದು ಸಂಜೆ 5-45 ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-89 ಮಂಜುನಾಥ್, ಸಿಪಿಸಿ-280 ಮುರಳಿ ಹಾಗೂ ಜೀಪ್ ಚಾಲಕ ಎ ಹೆಚ್ ಸಿ-57 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ವಾಹನದಲ್ಲಿ ಬಾಗೇಪಲ್ಲಿ ಟೌನ್ ನ ಎಸ್ ಬಿ ಎಮ್ ರೋಡ್, ನೇತಾಜಿ ಸರ್ಕಲ್, ಕೊತ್ತಪಲ್ಲಿ ರೋಡ್, ಗೂಳೂರು ರೋಡ್ ಕಡೆ ಗಸ್ತು ಮಾಡಿಕೊಂಡು ರಾಮಸ್ವಾಮಿಪಲ್ಲಿ ಗ್ರಾಮಕ್ಕೆ ಹೋಗಲು ಹೋಗುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಅಸಾಮಿಯು ಪ್ಲಾಸ್ಟೀಕ್ ಚೀಲವನ್ನು ತನ್ನ ಪಕ್ಕದಲ್ಲಿ ಇಟ್ಟುಕೊಂಡು ಮದ್ಯಪಾನ ಮಾಡುತ್ತಿದ್ದು. ಸಮವಸ್ರದಲ್ಲಿದ್ದ ನಮ್ಮಗಳನ್ನು ನೋಡಿ ಪ್ಲಾಸ್ಟೀಕ್ ಚೀಲವನ್ನು ಕೈಯಲ್ಲಿ ಹಿಡಿದುಕೊಂಡು ಓಡಿ ಹೋಗುತ್ತಿದ್ದವನನ್ನು ಸಿಬ್ಬಂದಿಯಾದ ಸಿಪಿಸಿ-89 ಮಂಜುನಾಥ್, ಸಿಪಿಸಿ-280 ಮುರಳಿ ರವರು ಹಿಡಿದುಕೊಂಡಿದ್ದು. ಸದರಿ ಅಸಾಮಿಯ ಕೈಯಲ್ಲಿ ಒಂದು ಪ್ಲಾಸ್ಟಿಕ್ ಚೀಲವಿದ್ದು. ನಂತರ ಅಸಾಮಿಯ ಹೆಸರು ವಿಳಾಸವನ್ನು ಕೇಳಲಾಗಿ ಲಕ್ಷೀನಾರಾಯಣಚಾರಿ ಬಿನ್ ಆನಂದಚಾರಿ, 48 ವರ್ಷ, ವಿಶ್ವಕರ್ಮ ಜನಾಂಗ, ಕೂಲಿ ಕೆಲಸ, ವಾಸ:ಸೋಮಂದೇಪಲ್ಲಿ ಗ್ರಾಮ, ಪೆನಗೊಂಡ ತಾಲ್ಲೂಕು, ಅನಂತಪುರ ಜಿಲ್ಲೆ, ಆಂದ್ರಪ್ರದೇಶ ಎಂದು ತಿಳಿಸಿದ್ದು. ನಂತರ ಅಲ್ಲಿಯೇ ಇದ್ದವರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ಸ್ಥಳದಲ್ಲಿ ಪಂಚನಾಮೆ ಜರುಗಿಸಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಅಸಾಮಿಯ ಕೈಯಲ್ಲಿದ್ದ ಪ್ಲಾಸ್ಟೀಕ್ ಚೀಲವನ್ನು ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 18 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  ಇವುಗಳು  ಒಟ್ಟು 1 ಲೀಟರ್ 620 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 632/-ರೂ ಗಳಾಗಿರುತ್ತೆ. ಸದರಿ ಅಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ನಿಮ್ಮ ಬಳಿ ಯಾವುದಾದರು ಪರವಾನಗಿ ಇದೆಯೇ? ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿರುತ್ತಾರೆ. ನಂತರ ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಸಂಜೆ 7-00 ಗಂಟೆಗೆ ಠಾಣೆಯಲ್ಲಿ   ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ ವರದಿ.

 

5. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 275/2021 ಕಲಂ. 429 ಐಪಿಸಿ ಮತ್ತು ಸೆಕ್ಷನ್ 11(1) PREVENTION OF CRUELTY TO ANIMALS ACT, 1960 & ಸೆಕ್ಷನ್ 4,5,12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 & ಸೆಕ್ಷನ್ 177,192(A) INDIAN MOTOR VEHICLES ACT, 1988 :-

     ದಿನಾಂಕ: 08/09/2021 ರಂದು ಬೆಳಿಗ್ಗೆ 6-30 ಗಂಟೆಗೆ  ಶ್ರೀ.ನಾಗರಾಜ್ ಡಿ.ಆರ್ ಪೊಲೀಸ್ ಇನ್ಸ್ ಪೆಕ್ಟರ್ ಆರೋಪಿ ಮತ್ತು ಮಾಲಿನೊಂದಿಗೆ ಠಾನೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ ದಿನಾಂಕ 08/09/2021 ರಂದು ಬೆಳಗಿನ ಜಾವ 5-15 ಗಂಟೆಯಲ್ಲಿ  ನಾನು ಠಾಣೆಯಲ್ಲಿರುವಾಗ ಯಾರೋ ಆಸಾಮಿಗಳು ಹೈದ್ರಾಬಾದ್ ಕಡೆಯಿಂದ ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಣಿಕೆ ಮಾಡುತ್ತಿರುವುದಾಗಿ ಬಂದು ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಯವರಾದ ಪಿಸಿ-214 ಅಶೋಕ,  ಪಿಸಿ-276 ಸಾಗರ್ ರವರನ್ನು ಜೊತೆಗೆ ಕರೆದುಕೊಂಡು ಹೋಗಿ ಬಾಗೇಪಲ್ಲಿ ಟೋಲ್ ಪ್ಲಾಜಾ  ಬಳಿ  ಕಾಯುತ್ತಿದ್ದಾಗ ಬೆಳಗಿನ ಜಾವ ಸುಮಾರು 6-00 ಗಂಟೆ ಸಮಯದಲ್ಲಿ ಹೈದ್ರಾಬಾದ್ ಕಡೆಯಿಂದ KA-52-A-1577 ನೊಂದಣೀ ಸಂಖ್ಯೆಯ ಈಚರ್ ಗೂಡ್ಸ್ ಕಂಟೈನರ್ ವಾಹನ ಬರುತ್ತಿದ್ದು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಮತ್ತು ಪೊಲೀಸ್ ಜೀಪನ್ನು ನೋಡಿದ ವಾಹನ ಚಾಲಕನು ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿ ಓಡಿಹೋಗಲು ಪ್ರಯತ್ನಿಸಿದವನನ್ನು ಪೊಲೀಸ್ ಸಿಬ್ಬಂದಿಯವರಾದ ಪಿಸಿ-214 ಅಶೋಕ, ಪಿಸಿ-276 ಸಾಗರ್ ರವರು ಹಿಂಬಾಲಿಸಿ ಹಿಡಿದುಕೊಂಡು ಬಂದು ಹಾಜರುಪಡಿಸಿದವರನ್ನು ವಿಚಾರಿಸಲಾಗಿ ಶೇಖ್ ಸರ್ದಾರ್ ಬಿನ್ ಅಜೀಮುದ್ದೀನ್, 26 ವರ್ಷ, ಚಾಲಕ ವೃತ್ತಿ, ಮುದುಕನಹಳ್ಳಿ ಗ್ರಾಮ, ತಿಪ್ಪಸಂದ್ರ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ  ಎಂದು ತಿಳಿಸಿರುತ್ತಾರೆ. ಜಾನುವಾರುಗಳನ್ನು ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ ವಾಹನವನ್ನು  ಪರಿಶೀಲಿಸಲಾಗಿ 19 ಜಾನುವಾರುಗಳು  ಇದ್ದು, ಅವುಗಳನ್ನು ಇಕ್ಕಟಿನಲ್ಲಿ  ಕಟ್ಟಿಕೊಂಡು ಅಮಾನವೀಯ ರೀತಿಯಲ್ಲಿ ಕ್ರೂರತನದಿಂದ ಸಾಗಾಣಿಕೆ ಮಾಡಿಕೊಂಡು, ಅವುಗಳಿಗೆ ಆಹಾರ ಮತ್ತು ನೀರಿಲ್ಲದೆ ಅಕ್ರಮವಾಗಿ ಯಾವುಧೇ ಪರವಾನಗಿ ಇಲ್ಲದೇ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ನಂತರ ಜಾನುವಾರುಗಳನ್ನು ತುಂಬಿರುವ KA-52-A-1577 ನೊಂದಣಿ ಸಂಖ್ಯೆಯ ಈಚರ್ ಗೂಡ್ಸ್ ಕಂಟೈನರ್ ವಾಹನ ಮತ್ತು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವರದಿಯೊಂದಿಗೆ ಹಾಜರುಪಡಿಸುತ್ತಿದ್ದು ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ಜಾನುವಾರುಗಳನ್ನು KA-52-A-1577 ನೊಂದಣಿ ಸಂಖ್ಯೆಯ ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿರುವ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 429 IPC, ಕಲಂ 11(1) PREVENTION  OF  CRUELTY  TO ANIMAL ACT,  U/S  4, 5, 12 THE KARNATAKA PREVENTION OF SLANGHTER AND  PRESERVATION OF  CATTLE ORDINANCE-2020 AND U/S 177, 192(A) INDIAN MOTOR VEHICLE ACT  ರೀತ್ಯಾ ಪ್ರಕರಣದ ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

6. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 276/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ:08.09.2021 ರಂದು ಬೆಳಿಗ್ಗೆ 10-00 ಗಂಟೆಗೆ ಪಿಐ ಸಾಹೇಬರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ; 08-09-2021 ರಂದು  ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-176 ಶಶಿಕುಮಾರ್, ಸಿಪಿಸಿ- 237 ವಿನಯ್ ಕುಮಾರ್ ಯಾದವ್ ರವರು  ಹಾಗೂ ಜೀಪ್ ಚಾಲಕ ಎ ಹೆಚ್ ಸಿ-57 ನೂರ್ ಪಾಷಾ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ವಾಹನದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣಾ ಸರಹದ್ದಿನ ಕಾರಕೂರು ಕ್ರಾಸ್, ಲಗುಮದ್ದೇಪಲ್ಲಿ, ಶಂಖಂವಾರಿಪಲ್ಲಿ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ, ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ಆಚೇಪಲ್ಲಿ ಗ್ರಾಮದ ಬಳಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-176 ಶಶಿಕುಮಾರ್, ಸಿಪಿಸಿ- 237 ವಿನಯ್ ಕುಮಾರ್ ಯಾದವ್  ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಹೊರಟು, ಆಚೇಪಲ್ಲಿ ಕ್ರಾಸ್ ಬಳಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಬೆಳಿಗ್ಗೆ 8-45 ಗಂಟೆಗೆ ಆಚೇಪಲ್ಲಿ ಗ್ರಾಮದ ಬಳಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿ ಮುಂಭಾಗದಲ್ಲಿದ್ದ ಅಸಾಮಿಯು ಓಡಿ ಹೋಗುತ್ತಿದ್ದವನ್ನು ಸಿಬ್ಬಂದಿಯಾದ ಶಶಿಕುಮಾರ್, ವಿನಯ್ ಕುಮಾರ್ ಯಾದವ್ ರವರು ಹಿಡಿದುಕೊಂಡಿದ್ದು ಸದರಿ ಅಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ಸಿದ್ದಪ್ಪ ಬಿನ್ ಕದಿರಪ್ಪ, 48 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೇ ಅಂಗಡಿ ವ್ಯಾಪಾರ, ವಾಸ: ಆಚೇಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದುಬಂದಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಬೆಳಿಗ್ಗೆ 10-00 ಗಂಟೆ ಠಾಣೆಯಲ್ಲಿ  ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ ವರದಿಯನ್ನು ಸ್ವೀಕರಿಸಿ ಠಾಣಾ ಮೊ ಸಂ-276/2021 ಕಲಂ-15(A), 32(3) ಕೆಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

7. ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ಮೊ.ಸಂ. 38/2021 ಕಲಂ. 419,420 ಐಪಿಸಿ ಮತ್ತು ಸೆಕ್ಷನ್ 66(C),66(D) INFORMATION TECHNOLOGY ACT 2008.

     ದಿನಾಂಕ:7/9/2021 ರಂದು ಪಿರ್ಯಾದಿ ಶ್ರೀ  ಎಂ ಎಸ್ ವೀರಭದ್ರಪ್ಪ ಬಿನ್ ಲೇಟ್ ಸುಬ್ಬಣ್ಣ,75 ವರ್ಷ, ಕುಂಬಾರರು, ನಿವೃತ್ತ ವೆಟರ್ನರಿ ಇನ್ಸಪೆಕ್ಟರ್, ವಾಸ ಟ್ಯಾಂಕ್ ಬಂಡ್ ರಸ್ತೆ, ಚಿಂತಾಮಣಿ ಟೌನ್, ಮೊ ಸಂಖ್ಯೆ:9241299772 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಚಿಂತಾಮಣಿ ನಗರದಲ್ಲಿನ ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ನಂ:0496101008961 ರಂತೆ ಖಾತೆಯನ್ನು ಹೊಂದಿದ್ದು, ಇದಕ್ಕೆ ಎ ಟಿ ಎಂ ಕಾರ್ಢನ್ನು ಸಹ ಹೊಂದಿರುತ್ತೇನೆ. ನಾನು ದಿನಾಂಕ:5/9/2021 ರಂದು ಮದ್ಯಾನಃ 01-50 ಗಂಟೆಯ ಸಮಯದಲ್ಲಿ ಚಿಂತಾಮಣಿ ನಗರದಲ್ಲಿನ ಕೆನರ ಬ್ಯಾಂಕ್ ನ ಕೆಳಗೆ ಇರುವ ಕನರಾ ಬ್ಯಾಂಕ್ ಎಟಿಎಂ ಸೆಂಟರ್ ನಲ್ಲಿ ಹಣ ಡ್ರಾ ಮಾಡಲು ಹೋಗಿದ್ದು. ನನಗೆ ಸರಿಯಾಗಿ ಕಣ್ಣು ಕಾಣದ ಕಾರಣ ಅಲ್ಲಿಯೆ ನಿಂತಿದ್ದ  ವ್ಯಕ್ತಿಗೆ 10000/- ರೂಗಳನ್ನು ಡ್ರಾ ಮಾಡಿಕೊಡಲು ತಿಳಿಸಿದೆ. ಅವನು ಡ್ರಾ ಮಾಡಿಕೊಡುವುದಾಗಿ ತಿಳಿಸಿ ನನ್ನ ಕಾರ್ಢನ್ನು ತೆಗೆದುಕೊಂಡು ಎ ಟಿ ಎಂ ಮಿಷನ್ ನಲ್ಲಿ ಹಾಕಿ ಮೊದಲು 10 ಸಾವಿರ ರೂಗಳನ್ನು ಡ್ರಾ ಮಾಡಿ ಕೊಟ್ಟ, ನಂತರ ಪುನಃ 10 ಸಾವಿರ  ಡ್ರಾ ಮಾಡಿಕೊಡುವಂತೆ ಅವನಿಗೆ ಕೇಳಿದೆ. ಅವನು ನನಗೆ ತಿಳಿಯದಂತೆ ಅದೇ ರೀತಿಯ ಬೇರೆ ಎಟಿಎಂ ಕಾರ್ಡನ್ನು ಎ ಟಿ ಎಂ ಮಿಷನ್ ಗೆ ಹಾಕಿ ಹಣ ಬರುತ್ತಿಲ್ಲ ಎಂತ ಹೇಳಿ ನನಗೆ ಅವನ ಬಳಿ ಇದ್ದ ಬೇರೆ ಎಟಿಎಂ ಕಾರ್ಢನ್ನು ನನಗೆ ಕೊಟ್ಟು ಹೋಗಿರುತ್ತಾನೆ.ನನ್ನ  ಎ ಟಿ ಎಂ ಕಾರ್ಢನ್ನು ಅವನು ತೆಗೆದುಕೊಂಡು  ಹೋಗಿರುತ್ತಾನೆ. ಅದು ನನಗೆ ಆಗ ತಿಳಿಯಲಿಲ್ಲ. ನನ್ನದೆ ಕಾರ್ಢ ಅಂತ ನಾನು  ಮನೆಗೆ ಹೊರಟು ಹೋದೆ.ಆದರೆ ಅವನು ಪುನಃ ಚಿಂತಾಮಣಿಯ ವಿವಿಧ ಎಟಿಎಂ ಸೆಂಟರ್ ಗಳಲ್ಲಿ & ಹೊಸಕೋಟೆ, ಬೆಂಗಳೂರು ಮೊದಲಾದ ಕಡೆಗಳಲ್ಲಿ ನನ್ನ ಎ ಟಿ ಎಂ ಕಾರ್ಢನಿಂದ ನನ್ನ ಖಾತೆಯಲ್ಲಿ ಇದ್ದ ಒಟ್ಟು 1,40,000/- ರೂಗಳ ಹಣ ಡ್ರಾ ಮಾಡಿರುತ್ತಾನೆ. ನನ್ನ ಮೊಬೈಲ್ ಗೆ ಸಂದೇಶಗಳು ಬಂದಿರುತ್ತವೆ. ನನ್ ಮೊಬೈಲ್ ಪೋನ್ ಕೀಪ್ಯಾಡ್ ಆಗಿರುವುದರಿಂದ ಸರಿಯಾಗಿ ತಿಳಿಯಲಿಲ್ಲ. ನಂತರ ದಿನಾಂಕ:6/9/2021 ರಂದು  ಮೊಬೈಲ್ ಗೆ ಬಂದಿದ್ದ ಸಂದೇಶಗಳಿಂದ ತಿಳಿಯಿತು. ನಂತರ ಕೂಡಲೆ ಬ್ಯಾಂಕ್ ನಲ್ಲಿ ವಿಚಾರಣೆ ಮಾಡಿದ್ದು, ಅವರು ಸಹ ತಿಳಿಸಿದರು. ನಂತರ ನನ್ನ ಖಾತೆಯಲ್ಲಿ ಇನ್ನು ಹಣ ಇದ್ದುದರಿಂದ ಕಾರ್ಢನ್ನು ಬ್ಲಾಕ್ ಮಾಡಿಸಿರುತ್ತೇನೆ. ಮೇಲ್ಕಂಡ ಆರೋಪಿ ಎ ಟಿ ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ನಂಬಿಸಿ ನನ್ನಿಂದ ಎಟಿಎಂ ಕಾರ್ಢ ನ್ನು ಪಡೆದು ನನ್ನಿಂದ ಪಿನ್ ನಂಬರ್ ಹಾಕಿಸಿ ನಂತರ ಅವನು ಬೇರೆ ಎಟಿಎಂ ಕಾರ್ಡನ್ನು ನನಗೆ ಕೊಟ್ಟು, ನನ್ನ ಎಟಿಎಂ ಕಾರ್ಢನ್ನು ಬದಲಾಯಿಸಿ 1,40,000/- ರೂಗಳನ್ನು ಡ್ರಾ ಮಾಡಿಕೊಂಡಿರುವ ಆರೋಪಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಲು & ನಮ್ಮ ಹಣವನ್ನು ವಾಪಸ್ಸು ಕೊಡಿಸಲು ಕೋರಿ ನೀಡಿದ ದೂರು.

 

8. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 148/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ:07.09.2021 ರಂದು ಮದ್ಯಾಹ್ನ 12-40 ಗಂಟೆ ಸಮಯದಲ್ಲಿ ಮಾನ್ಯ ಪಿ,ಎಸ್,ಐ ರವರು ಠಾಣೆಯಲ್ಲಿ ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:07.09.2021 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಇಟ್ಟಪ್ಪನಹಳ್ಳಿ ಗ್ರಾಮದ ವಾಸಿ ನರಸಿಂಹಪ್ಪ ಬಿನ್ ಪಸುಲಪ್ಪ, 35 ವರ್ಷ, ಚಿಲ್ಲರೆ ಅಂಗಡಿ ವ್ಯಾಪಾರ. ಆದಿ ಕರ್ನಾಟಕ ಜನಾಂಗ. ರವರು ತನ್ನ ಚಿಲ್ಲರೆ ಅಂಗಡಿ ಬಳಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಕೊಳ್ಳಲು  ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ.

 

9. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 149/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ 08/09/2021 ರಂದು ಪಿರ್ಯಾದಿದಾರರಾದ ಪಿ.ಎಸ್.ಐ (ಕಾಸು) ರವರು ನೀಡಿದ ವರದಿಯ ಸಾರಾಂಶವೇನೆಂದರೆ ಇದೇ ದಿನ ಬೆಳಗ್ಗೆ 09-30 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತವಾದ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ತಾಲ್ಲೂಕ್, ಗುವ್ವಲಕಾನಹಳದ್ಳಿ ಗ್ರಾಮದ ವಾಸಿಯಾದ ಗಂಗರತ್ನಮ್ಮ ಕೋಂ ಲೇಟ್ ವೀರಭಧ್ರಪ್ಪ, 40 ವರ್ಷ ಲಿಂಗಾಯಿತರು, ಚಿಲ್ಲರೆ ಅಂಗಡಿ ವ್ಯಾಪರ ರವರು ಅವರ ಬಾಬತ್ತು ಚಿಲ್ಲರೆ ಅಂಗಡಿಯ ಬಳಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಧ್ಯವನ್ನು ಸೇವನೆ ಮಾಡಲು ಅವಕಾಶಮಾಡಿಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಆದ್ದರಿಂದ  ಮೇಲ್ಕಂಡ ಆಸಾಮಿಯ ವಿರುದ್ಧ ಕಲಂ, 15(ಎ) 32(3) ಕೆ.ಇ ಆಕ್ಟ ರೀತ್ಯ ಪ್ರಕರಣವನ್ನು ದಾಖಲುಮಾಡಿಕೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಈ ಪ್ರ,ವ,ವರದಿ.

 

10. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 150/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ:08.09.2021 ರಂದು ಬೆಳಿಗ್ಗೆ 11-40 ಗಂಟೆಗೆ ಮಾನ್ಯ ಶ್ರೀ ಬಿ.ಪಿ ಮಂಜು ರವರು ನೀಡಿದ ವರದಿಯ ಸಾರಾಂಶವೆನೆಂದರೆ ಈ ದಿನ ದಿನಾಂಕ:08.09.2021 ರಂದು  ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ತಿಪ್ಪೇನಹಳ್ಳಿ ಗ್ರಾಮದ ರಸ್ತೆಯ ಬಳಿ ವಾರ್ಡ ನಂ 09, ಟಿ,ಜಿ ಟ್ಯಾಂಕ್ ರೋಡ್, ಚಿಕ್ಕಬಳ್ಳಾಪುರ ನಗರದ ವಾಸಿ ಇಮ್ರಾನ್ ಬಿನ್ ಮೆಹಬೂಬ್ ಪಾಷ, 30 ವರ್ಷ, ಆಟೋ ಚಾಲಕರು, ಮುಸ್ಲೀಂ ಜನಾಂಗ ರವರು ಚಿಕ್ಕಬಳ್ಳಾಪುರದಿಂದ ತಿಪ್ಪೇನಹಳ್ಳಿ ಗ್ರಾಮಕ್ಕೆ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಕುಳಿತು ಮದ್ಯಪಾನ ಸೇವನೆ ಮಾಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ:15[ಎ] 32[3] ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಕೊಳ್ಳಲು  ಸೂಚಿಸಿದ ಮೇರೆಗೆ ಈ ಪ್ರ,ವ,ವರದಿ.

 

11. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ .397/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ: 07/09/2021 ರಂದು ಸಂಜೆ 4.30 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಶ್ರೀ ವೇಣು, ಸಿ.ಹೆಚ್.ಸಿ-110 ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 07/09/2021 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಶ್ರೀ ರಾಜಣ್ಣ.ಪಿ.ಐ ರವರು ತನಗೆ ಹಾಗೂ ತಮ್ಮ ಠಾಣೆಯ ಸಿ.ಹೆಚ್.ಸಿ-198 ಮಂಜುನಾಥ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು, ಅದರಂತೆ ತಾವುಗಳು ಈ ದಿನ ಮದ್ಯಾಹ್ನ ಸುಮಾರು 2.45 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕು, ಮುನಗನಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಗ್ರಾಮದ ಆಂಜಮ್ಮ ಕೋಂ ಲೇಟ್ ಲಕ್ಷ್ಮಯ್ಯ ರವರು ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯಂತೆ ಪಂಚರೊಂದಿಗೆ ಮುನಗನಹಳ್ಳಿ ಗ್ರಾಮದ ಆಂಜಮ್ಮ ಕೋಂ ಲೇಟ್ ಲಕ್ಷ್ಮಯ್ಯ ರವರ ಅಂಗಡಿಯ ಮುಂಭಾಗ ಹೋದಾಗ ಮದ್ಯಪಾನ ಮಾಡುತ್ತಿದ್ದ ಹಾಗೂ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಸಾಮಿಯು ಸ್ಥಳದಿಂದ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 1).Haywards Cheers Whisky ಯ 90 ML ನ ಮದ್ಯ ತುಂಬಿದ 10 ಟೆಟ್ರಾ ಪಾಕೇಟ್ ಗಳು, 2).Bagpiper Deluxe Whisky ಯ 180 ML ನ ಮದ್ಯ ತುಂಬಿದ 4 ಟೆಟ್ರಾ ಪಾಕೇಟ್ ಗಳು, 3).2 ಪ್ಲಾಸ್ಟಿಕ್ ಗ್ಲಾಸ್ ಗಳು, 4). Haywards Cheers Whisky ಯ 90 ML ನ 2 ಖಾಲಿ ಟೆಟ್ರಾ ಪಾಕೇಟ್ ಗಳು, 5). ಒಂದು ಲೀಟರ್ ನ ಒಂದು ಖಾಲಿ ನೀರಿನ ಬಾಟೆಲ್ ಇರುತ್ತೆ. (ಒಟ್ಟು ಮದ್ಯ 01 ಲೀಟರ್ 620 ML, ಬೆಲೆ ಸುಮಾರು 775/- ರೂಗಳು). ನಂತರ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆಸಾಮಿಯ ಹೆಸರು ಹಾಗೂ ವಿಳಾಸ ತಿಳಿಯಲಾಗಿ ಶ್ರೀಮತಿ ಆಂಜಮ್ಮ ಕೋಂ ಲೇಟ್ ಲಕ್ಷ್ಮಯ್ಯ, 75 ವರ್ಷ, ಆದಿ ಕರ್ನಾಟಕ ಜನಾಂಗ, ಅಂಗಡಿ ವ್ಯಾಪಾರ, ಮುನಗನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಮೇಲ್ಕಂಡ ಮಾಲುಗಳನ್ನು ಮದ್ಯಾಹ್ನ 3.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮುಖಾಂತರ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ಯಾವುದೇ ಪರವಾನಿಗೆಯನ್ನು ಪಡೆಯದೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಶ್ರೀಮತಿ ಆಂಜಮ್ಮ ಕೋಂ ಲೇಟ್ ಲಕ್ಷ್ಮಯ್ಯ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

12. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 220/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ: 31/08/2021 ರಂದು  ಬೆಳಿಗ್ಗೆ 11-00 ಗಂಟೆಯಲ್ಲಿ  ವೃತ್ತ ಕಛೇರಿಯಲ್ಲಿದ್ದಾಗ ಬೈಚಾಪುರ ಗ್ರಾಮದ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ ಹೆಚ್ ಸಿ 220 ಗಂಗರಾಜು ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-1234ರಲ್ಲಿ  ಬೈಚಾಪುರ ಗ್ರಾಮ ಬಳಿ ಮದ್ಯಾಹ್ನ 11-15 ಗಂಟೆಗೆ  ಹೋಗಿ ಅಲ್ಲಿ,  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ಸಾರ್ವಜನಿಕ ರಸ್ತೆಯಲ್ಲಿ ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ  ವ್ಯಕ್ತಿಯ ಆಸಾಮಿಯ ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು    ಶ್ರೀನಿವಾಸ ಬಿನ್ ನಾಗಪ್ಪ,40 ವರ್ಷ,ಆದಿಕರ್ನಾಟಕ,ಜಿರಾಯ್ತಿ, ಬೈಚಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ.ಎಲ್.ಸಾಮರ್ಥ್ಯದ Orginal CHEERS  WHISKY ಯ 10 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ  900 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 351/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇದೆಯೇ ಎಂದು ಕೇಳಿದಾಗ ಯಾವುದೇ ಪರವಾನಗಿ ಇಲ್ಲವೆಂದು ತಿಳಿದು ಬಂದಿರುತ್ತದೆ. ಆದ್ದರಿಂದ  ಸ್ಥಳದಲ್ಲಿ ಬೆಳಿಗ್ಗೆ 11-30 ಗಂಟೆಯಿಂದ 12-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ  ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ  90 ಎಂ.ಎಲ್ ಸಾಮರ್ಥ್ಯದ Orginal CHEERS  WHISKY ಯ 10 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ದೂರಾಗಿರುತ್ತೆ. ದಿನಾಂಕ 08/09/2021 ರಂದು ಬೆಳಿಗ್ಗೆ 09-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ರವರು ತಂದು ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪತ್ರ ನೀಡಿದ ಮೇರೆಗೆ ಠಾಣಾ ಮೊ.ಸಂ 220/2021 ಕಲಂ:15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್-1965 ರಿತ್ಯಾ ಪ್ರಕರಣವನ್ನು ದಾಖಲು ಮಾಡಿರುತ್ತೆ.

 

13. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 138/2021 ಕಲಂ. 78(3) KARNATAKA POLICE ACT, 1963 :-

     ದಿನಾಂಕ 08/09/2021 ರಂದು ಬೆಳಿಗ್ಗೆ 10:00 ಗಂಟೆಯಲ್ಲಿ ನ್ಯಾಯಾಲಯದ ಸಿಬ್ಬಂದಿ ನ್ಯಾಯಾಲಯದ ಅನುಮತಿ ಪತ್ರವನ್ನು ಹಾಜರುಪಡಿಸಿದ ಸಾರಾಂಶವೇನೆಂದರೆ, ದಿನಾಂಕ 05/09/2021 ರಂದು ಸಂಜೆ 5:00 ಗಂಟೆಯಲ್ಲಿ DCB-CEN ಪೊಲೀಸ್ ಠಾಣೆಯ HC-80 ಕೃಷ್ಣಪ್ಪ ರವರು ಠಾಣೆಗೆ ಹಾಜರಾಗಿ ಚಿಕ್ಕಬಳ್ಳಾಪುರ ಜಿ್ಲ್ಲೆ, ಡಿ.ಸಿ.ಬಿ. ಸಿ.ಇ.ಎನ್ ಪೊಲೀಸ್ ಠಾಣೆಯ  ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ.ಎನ್.ರಾಜಣ್ಣ ರವರು ತನ್ನನ್ನು ಮತ್ತು ಪಿ.ಸಿ 152 ಜಯಣ್ಣ ರವರನ್ನು ಗೌರಿಬಿದನೂರು ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ಮಾಡಲು ನೇಮಿಸಿದ್ದು ಅದರಂತೆ ಗೌರಿಬಿದನೂರು ನಗರದ ಹಿಂದೂಪುರ ವೃತ್ತದ ಬಳಿ ಇರುವಾಗ ಮದ್ಯಾಹ್ನ 1:15 ಗಂಟೆಯಲ್ಲಿ 10ನೇ ವಾರ್ಡಿನಲ್ಲಿ ಯಾರೋ ಒಬ್ಬ ಆಸಾಮಿ ಅಕ್ರಮವಾಗಿ ಮಟ್ಕಾ ಅಂಕಿಗಳನ್ನು ಬರೆದುಕೊಡುತ್ತಿರುವುಧಾಗಿ ಮಾಹಿತಿ ಬಂದಿದ್ದು ಪಂಚರನ್ನು ಬರಮಾಡಿಕೊಂಡು 10 ನೇ ವಾರ್ಡಿನ ಅಜಯ್ ದರ್ಶಿನಿ ಹೋಟೆಲ್ ಮುಂಭಾಗ ಯಾರೋ ಆಸಾಮಿ ಬನ್ನಿ ಬನ್ನಿ 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆಂದು ಕೂಗುತ್ತಿದ್ದ ಆಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಈಶ್ವರ್ ಬಿನ್ ಲೇಟ್ ಸುಬ್ಬರಾಯಪ್ಪ, 45 ವರ್ಷ, ನಾಯಕರು, 10 ನೇ ವಾರ್ಡ್ ಗೌರಿಬಿದನೂರು ಟೌನ್ ಎಂದು ತಿಳಿಸಿದ್ದು ಸದರಿ ಆಸಾಮಿಯನ್ನು ಪರಿಶೀಲಿಸಲಾಗಿ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ ಮಟ್ಕಾ ಚೀಟಿ, ಬಾಲ್ ಪಾಯಿಂಟ್ ಪೆನ್ನು ಹಾಗೂ ನಗದು ಹಣ 840 ರೂಪಾಯಿ ಇದ್ದು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು ವಿಚಾರ ಮಾಡಲಾಗಿ ಬರೆದ ಮಟ್ಕಾ ಅಂಕಿಗಳನ್ನು ಕುಮಾರ @ ಗೊಡ್ಲಿ ಬಿನ್ ಕೃಷ್ಣಪ್ಪ 38 ವರ್ಷ, ಬಲಜಿಗರು ರಜಾಕ್ ಸಾಬ್ ಗಲ್ಲಿ ಗೌರಿಬಿದನೂರು ರವರಿಗೆ ಕೊಡುತ್ತಿರುತ್ತೇನೆಂದು ತಿಳಿಸಿದ ಆಸಾಮಿ ಮತ್ತು ಮಾಲುಗಳನ್ನು ಠಾಣೆಗೆ ಹಾಜರಾಗಿ ನೀಡಿದ ವರದಿನ್ನು ಪಡೆದು ಎನ್.ಸಿ.ಆರ್ ದಾಖಲಿಸಿರುತ್ತೇನೆ. ನಂತರ ನ್ಯಾಯಾಲಯದ ಅನುಮತಿ ಮೇರೆಗೆ ಈ ದಿನ ಪ್ರಕರಣವನ್ನು ದಾಖಲಿಸಿರುತ್ತೇನೆ.

 

14. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 157/2021 ಕಲಂ. 15(A),32(3) KARNATAKA EXCISE ACT, 1965 :-

     ಘನ ನ್ಯಾಯಾಲಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ ಲಕ್ಷ್ಮೀನಾರಾಯಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:07/09/2021 ರಂದು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ ಬಂದ ಮಾಹಿತಿ ಏನೇಂದರೆ ಮಿಣಕನಗುರ್ಕಿ ಗ್ರಾಮದ  ನಾಗಭೂಷಣ್ ಬಿನ್ ನಾಗಪ್ಪ ರವರು ಅವರ ಮನೆಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಸಿಬ್ಬಂದಿಯವರಾದ ಪಿ.ಸಿ.483 ರಮೇಶ್ ಬಾಬು ಮತ್ತು ಪಿ.ಸಿ.283 ಅರವಿಂದ ಹಾಗೂ  ಜೀಪ್ ಚಾಲಕ ಎಪಿಸಿ.120 ನಟೇಶ್ ರವರೊಂದಿಗೆ ಹಾಗೂ ಪಂಚರೊಂದಿಗೆ  ಮದ್ಯಾಹ್ನ 3-30 ಗಂಟೆಯ ಸಮಯಕ್ಕೆ  ಮಿಣಕನಗುರ್ಕಿ ಗ್ರಾಮದ ನಾಗಭೂಷಣ ಬಿನ್ ನಾಗಪ್ಪ ರವರ ಮನೆಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ನಾಗಭೂಷಣ ಬಿನ್ ನಾಗಪ್ಪ 28 ವರ್ಷ, ನಾಯಕ ಜನಾಮಗ, ಚಿಲ್ಲರೆ ಅಂಗಡಿ ವ್ಯಾಪಾರ ವಾಸ ಮಿಣಕನಗುರ್ಕಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 15  ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 03 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು,  2 ಪ್ಲಾಸ್ಟಿಕ್   ಲೋಟಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಬ್ಯಾಗನ್ನು ಪಂಚನಾಮೆಯ ಮೂಲಕ  ಮದ್ಯಾಹ್ನ 3-45 ಗಂಟೆಯಿಂದ 4-30 ಗಂಟೆಯವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 545/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ನಾಗಭೂಷಣ ಬಿನ್ ನಾಗಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಮದ್ಯಾಹ್ನ 4-45 ಗಂಟೆಗೆ ಠಾಣೆಗೆ ವಾಪಾಸ್ ಬಂದು 157/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತದೆ.

 

15. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 158/2021 ಕಲಂ. 323,324,427,504 ರೆ/ವಿ 34 ಐಪಿಸಿ :-

     ದಿನಾಂಕ:08/09/2021 ರಂದು ಠಾಣಾ ಹೆಚ್.ಸಿ.76 ರವರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುವಾದ ಶ್ರೀ ಇರ್ಷಾದ್ ಖಾನ್ ಬಿನ್ ಲೇಟ್ ಅಲಿಂಖಾನ್ 35 ವರ್ಷ, ರವರಿಂದ ಹೇಳಿಕೆಯನ್ನು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ದಿನಾಂಕ:07/09/2021 ರಂದು ನಮ್ಮ ಮನೆಯ ಮುಂದಿನ ಮಂಚೇನಹಳ್ಳಿ ಕೆ.ಇ.ಬಿ ಕಛೇರಿಯ ಮುಂದೆ ರಾತ್ರಿ 10-30 ಗಂಟೆಯ ಸಮಯದಲ್ಲಿ ರಸ್ತೆಯಲ್ಲಿ ನಮ್ಮ ಅಣ್ಣ ಅದಿಲ್ ಖಾನ್ 42 ವರ್ಷ ಚಾಲಕ ವೃತ್ತಿ ರವರು ಇದ್ದಾಗ ನಮ್ಮ ಗ್ರಾಮದ ಅಬ್ದುಲ್ ರೆಹಮಾನ್ ರವರು ಬಂದು ನಮ್ಮ ಕಾರಿನ ಮುಂದಿನ ಗ್ಲಾಸ್ ಒಡೆದು ಹಾಕಿದ ಬಗ್ಗೆ ಕೇಳಿದಾಗ ಅವರು ಕೈನಿಂದ ಹೊಡೆದು ಗಲಾಟೆ ಮಾಡುತ್ತಿರುವುದಾಗಿ ನನಗೆ ನಮ್ಮ ಅಣ್ಣ ಫೊನ್ ಮಾಡಿದಾಗ ನಾನು ಬಂದು ಏಕೆ ನಮ್ಮ ಕಾರಿನ ಗ್ಲಾಸ್ ಹೊಡೆದಿದ್ದು, ಎಂದು ಕೇಳಿದಾಗ ಅಲ್ಲಿಗೆ ಬಂದ ಅಬ್ದುಲ್ ರೆಹಮಾನ್ ತಮ್ಮ ಮುಬಾರಕ್ ಪಾಷ ಬಿನ್ ಲೇಟ್ ನಜೀರ್ ಸಾಬ್ ರವರು ಏಕಾಏಕಿ ಬಂದು ಒಂದು ರಾಡಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದಾಗ ನಾನು ಕೆಳಗೆ ಬಿದ್ದಾಗ ಮತ್ತೆ ಕೈಯಿಂದ ನನ್ನ ಮೂತಿಗೆ ಕಣ್ಣಿಗೆ ಹೊಡೆದು ಗಾಯಪಡಿಸಿದಾಗ ಗಲಾಟೆಯ ಶಬ್ದವನ್ನು ಕೇಳಿ ಅಲ್ಲಿಗೆ ಬಂದ ಇಸ್ಮಾಯಿಲ್ ಜಬೀ ಮತ್ತು ಶಬೀರ್ ರವರು ಬಂದು ನನ್ನನ್ನು ಉಪಚರಿಸಿ ನನ್ನನ್ನು ಚಿಕಿತ್ಸೆಗಾಗಿ ಮಂಚೇನಹಳ್ಳಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದು,  ನಂತರ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಹೋಗಲು ತಿಳಿಸಿದ್ದು, ನಾನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ದಿನಾಂಕ:09/09/2021 ರಂದು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು, ನಮ್ಮ ಬಾಬತ್ತು ಕೆ.ಎ-03, ಎ.ಇ-4799 ಕಾರಿನ ಗ್ಲಾಸನ್ನು ಇಟ್ಟಿಗೆಯಿಂದ ಹೊಡೆದು ನಮ್ಮನ್ನು ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು ಗಾಯಪಡಿಸಿದವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ಹೇಳಿಕೆ ದೂರು.

 

16. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 104/2021 ಕಲಂ. 15(A),32(3) KARNATAKA EXCISE ACT, 1965 :-

     ದಿನಾಂಕ:07-09-2021 ರಂದು ಸಂಜೆ 7-40 ಗಂಟೆಗೆ ಸಾಹೇಬರು ದಾಳಿಯಿಂದ ಠಾಣೆಗೆ ಆರೋಫಿ ಅಮಾನತ್ತು ಪಡಿಸಿದ್ದ ಮಾಲು ಹಾಗೂ ಪಂಚನಾಮೆಯೊಂದಿಗೆ ಹಾಜರಾಗಿ ನೀಡಿದ  ವರದಿಯ ಸಾರಾಂಶವೇನೆಂದರೆ ದಿನಾಂಕ:07/09/2021 ರಂದು ಸಂಜೆ 6-15 ಗಂಟೆಯ ಸಮಯದಲ್ಲಿ ಠಾಣಾ ಸರಹದ್ದು ಗಸ್ತಿನಲ್ಲಿದ್ದಾಗ ಬಾತ್ಮೀದಾರರಿಂದ ಕೊಳವನಹಳ್ಳಿ ಗ್ರಾಮದ ಹರೀಶ್ ರವರ ಮನೆಯ ಮುಂಭಾಗದಲ್ಲಿ ಅಕ್ರಮವಾಗಿ ಮಧ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿರುತ್ತಾರೆಂದು  ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಯಾದ ಹೆಚ್ ಸಿ-85 ನರಸಿಂಹಮೂರ್ತಿ ಮತ್ತು ಸಿಪಿಸಿ-183 ಶಿವಲಿಂಗಪ್ಪ ರವರನ್ನು ಚದಲಪುರ ಕ್ರಾಸ್ ಗೆ ಬರುವಂತೆ ತಿಳಿಸಿ ತಾನು ಸಂಜೆ 6-20 ಗಂಟೆಗೆ ಚದಲಪುರ ಕ್ರಾಸ್ ಗೆ ಬಂದು ಕ್ರಾಸ್ ನಲ್ಲಿದ್ದ ಸಿಬ್ಬಂದಿಯನ್ನು ಮತ್ತು ಪಂಚರನ್ನು ಬರಮಾಡಿಕೊಂಡು ಸರ್ಕಾರಿ ಪೊಲೀಸ್ ಜೀಪ್ KA-40-G-1555 ರಲ್ಲಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಸಂಜೆ 6-30 ಗಂಟೆಗೆ ಹೋಗುವಷ್ಠರಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಗಿರಾಕಿಗಳು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಸ್ಥಳದಿಂದ ಓಡಿ  ಪರಾರಿಯಾಗಿ ಹೋದರು. ಇವನ ಮನೆಯ ಮುಂಭಾಗದಲ್ಲಿ ಮದ್ಯದ ಟೇಟ್ರಾ ಪಾಕೇಟ್ ಗಳು,  ಖಾಲಿ ಮದ್ಯದ ಟೆಟ್ರಾ ಪ್ಯಾಕೇಟುಗಳು ಹಾಗೂ ಖಾಲಿ ಲೋಟಗಳು ಇದ್ದವು, ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಸಾಮಿಯ  ಹೆಸರು ವಿಳಾಸವನ್ನು ಕೇಳಲಾಗಿ ಹರೀಶ್ ಬಿನ್ ಲೇಟ್ ಮುನಿನಾರಾಯಣಪ್ಪ, 26 ವರ್ಷ, ಕೂಲಿ ಕೆಲಸ, ವಕ್ಕಲಗರು, ಕೊಳವನಹಳ್ಳಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದನು. ನಂತರ ಸ್ಥಳದಲ್ಲಿದ್ದ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥದ HAYWARDS CHEERS  WHISKY  ಹೆಸರಿನ 20 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ ಬೆಲೆ 35.13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-1800 ML ಮದ್ಯವಿದ್ದು ಒಟ್ಟು ಬೆಲೆ 702 ರೂ ಆಗುತ್ತದೆ.2) 90 ಎಂ ಎಲ್ ಸಾಮರ್ಥ್ಯದ HAYWARDS CHEERS  WHISKY  ಖಾಲಿ 5 ಟೆಟ್ರಾ ಪ್ಯಾಕೇಟುಗಳು ಇರುತ್ತವೆ, 3) 5 ಖಾಲಿ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಕಲ್ಲಿಸಿಕೊಟ್ಟ ಆಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 6-35 ಗಂಟೆಯಿಂದ ಸಂಜೆ 7-15 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಸಂಜೆ 7-30 ಗಂಟೆಗೆ ಠಾಣೆಗೆ  ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

17. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 287/2021 ಕಲಂ. 279,337 ಐಪಿಸಿ :-

     ದಿನಾಂಕ:08-09-2021 ರಂದು ಮದ್ಯಾಹ್ನ 1-15 ಗಂಟೆಯಲ್ಲಿ ಪಿರ್ಯಾದಿದಾರರಾದ ಮಂಜುನಾಥ.ಎನ್ ಬಿನ್ ನಾರಾಯಣಸ್ವಾಮಿ 30 ವರ್ಷ, ವಕ್ಕಲಿಗರು, ವಾಟರ್ ಸಪ್ಲೆ, ವಳಗೇರೆಪುರ ಗ್ರಾಮ, ಜಡಗೇನಹಳ್ಳಿ ಹೋಬಳಿ,ಹೊಸಕೋಟೆ ತಾಲ್ಲೂಕು ವಾಸ: ನ್ಯಾಯಾಂಗ ಬಡಾವಣೆ ಯಲಹಂಕ ಬೆಂಗಳೂರು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತನ್ನ ಸ್ವಂತ ಸ್ಥಳ ವಳಗೇರೆಪುರ ಗ್ರಾಮ ವಾಗಿದ್ದು ತಾನು ಈಗ್ಗೆ ಸುಮಾರು 4 ವರ್ಷದಿಂದ ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿ ವಾಸವಾಗಿರುತ್ತೇನೆ, ವಾಟರ್ ಸಪ್ಲೆ ಕೆಲಸ ಮಾಡಿಕೊಂಡಿರುತ್ತೇನೆ, ತಾನು ಅಂಜಿಲಿ ಎಂಬುವವರನ್ನು ಮದುವೆಯಾಗಿದ್ದು ತಮಗೆ ಒಂದು  ಚಾರ್ವಿಕ್ ಎಂಬ ಗಂಡು ಮಗನಿರುತ್ತಾನೆ, ತನ್ನ ತಂಗಿಯಾದ ಮಮತ ರವರನ್ನು ಶಿಡ್ಲಘಟ್ಟದ ತಾಲ್ಲುಕು ನಡಿಪಿನಾಯಕನಹಳ್ಳಿ ಗ್ರಾಮದ ಗೌರೀಶ್ ರವರಿಗೆ ಕೊಟ್ಟು ವಿವಾಹ ಮಾಡಿರುತ್ತೇವೆ ತಾವು ಆಗಾ ಆಗಾ ತಮ್ಮ ತಂಗಿ ಮನೆಗೆ ಬಂದು ಹೋಗುತ್ತಿರುತ್ತೇವೆ, ಈಗಿರುವಲ್ಲಿ ದಿನಾಂಕ:05-09-2021 ರಂದು ಮದ್ಯಾಹ್ನ ತನ್ನ ತಂಗಿ ಮನೆಗೆ ಹೋಗಿ ಬರೋಣವೆಂದು ತಮ್ಮ ಸಂಬಂದಿಕರಾದ ಚಂದ್ರಕಲಾ ರವರ ಬಾಬತ್ತು ಕೆಎ-50 ಜೆಡ್-5963 ಮಾರುತಿ ಓಮಿನಿ ಕಾರಿನಲ್ಲಿ  ಯಲಹಂಕ ಬಿಟ್ಟು ವಿಜಯಪುರ,ಜಂಗಮಕೋಟೆ ಕ್ರಾಸ್ ಮಾರ್ಗವಾಗಿ  ಸಂಜೆ 6-30 ಗಂಟೆಯಲ್ಲಿ  ಜಂಗಮಕೋಟೆ ಕ್ರಾಸ್-ಶಿಡ್ಲಘಟ್ಟ ರಸ್ತೆಯ ಯಣ್ಣಂಗೂರು ಗೇಟ್ ನಿಂದ ಸ್ವಲ್ಪ ಮುಂದೆ  ಬರುತ್ತಿದ್ದಾಗ ಶಿಡ್ಲಘಟ್ಟ ಕಡೆಯಿಂದ ಬಂದ  ಕೆಎ-03 ಎಂ.ಟಿ-5783 ಮಾರುತಿ ಸ್ವೀಪ್ಟ್ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು  ತಾನು ಚಾಲನೆ ಮಾಡುತ್ತಿದ್ದ  ಓಮಿನಿ ಕಾರಿಗೆ ಎದರುಬದಿಯಿಂದ ಡಿಕ್ಕಿ ಹೊಡೆಸಿದ ಪರಿಣಾಮ ತಾನು ಚಾಲನೆ ಮಾಡುತ್ತಿದ್ದ ಓಮಿನಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ತನ್ನ ತಲೆಯ ಹಣೆಗೆ ರಕ್ತಗಾಯವಾಗಿರುತ್ತೆ, ತನಗೆ ಅಪಘಾತವುಂಟುಮಾಡಿದ ಕೆಎ-03 ಎಂ.ಟಿ-5783 ಮಾರುತಿ ಸ್ವೀಪ್ಟ್ ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿರುತ್ತೆ, ಸದರಿ ವಿಚಾರವನ್ನು ತಾನು ತನ್ನ ಭಾವನಾದ ಗೌರೀಶ್ ರವರಿಗೆ ತಿಳಿಸಿದ್ದು ಆಗ ತನ್ನ ಭಾವ ಸ್ಥಳಕ್ಕೆ ಬಂದು ತನ್ನನ್ನು ಕರೆದುಕೊಂಡು ಹೋಗಿ ಜಂಗಮಕೋಟೆ ಕ್ರಾಸ್ ನಲ್ಲಿರುವ ರೇಣುಕಾ ಕ್ಲಿನಿಕ್ ನಲ್ಲಿ ಚಿಕಿತ್ಸೆಪಡಿಸಿರುತ್ತಾರೆ, ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆಪಡಿಸಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ತನಗೆ ಅಪಘಾತವುಂಟುಮಾಡಿದ ಕೆಎ-03 ಎಂ.ಟಿ-5783 ಮಾರುತಿ ಸ್ವೀಪ್ಟ್ ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ:287/2021 ಕಲಂ 279, 337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

Last Updated: 08-09-2021 05:45 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080