ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.225/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ: 07/08/2021ರಂದು ಮದ್ಯಾಹ್ನ 1-30 ಗಂಟೆಗೆ ಶ್ರೀ ನಾಗರಾಜ್ .ಡಿ.ಆರ್. ಪೊಲೀಸ್ ಇನ್ಸ್ ಪೆಕ್ಟರ್ ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ, ಮತ್ತು ಅಸಲು ಪಂಚನಾಮೆಯೊಮದಿಗೆ ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ ಈ ದಿನ ದಿನಾಂಕ. 07-08-2021 ರಂದು ಪುರ  ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ  ಬೆಳಿಗ್ಗೆ  11-45 ಗಂಟೆ ಸಮಯದಲ್ಲಿ ಗೂಳೂರು ಸರ್ಕಲ್ ಬಳಿ ಇದ್ದಾಗ ಯಾರೋ ಆಸಾಮಿಯು ಬಾಗೇಪಲ್ಲಿ ತಾಲ್ಲೂಕು ಪುಟ್ಟಪರ್ತಿ ಗ್ರಾಮದಲ್ಲಿ  ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು  ಮತ್ತು ಸಿಬ್ಬಂದಿಯವರಾದ  ಪಿ.ಸಿ-278 ಶಬ್ಬೀರ್,  ಪಿಸಿ-319 ವಿನಾಯಕ   ಹಾಗೂ ಜೀಪ್ ಚಾಲಕ  ಎ.ಹೆಚ್.ಸಿ-57 ನೂರ್ ಬಾಷಾ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-1444 ವಾಹನದಲ್ಲಿ ಹೊರಟು ಬಾಗೇಪಲ್ಲಿ ಟೌನ್ ಟಿ.ಬಿ ಕ್ರಾಸ್  ಬಳಿ   ಪಂಚರನ್ನು ಬರಮಾಡಿಕೊಂಡು  ಮೇಲ್ಕಂಡ ದಾಳಿ  ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ನಾವು ಮತ್ತು ಪಂಚರು ಪುಟ್ಟಪರ್ತಿ ಗ್ರಾಮದ ಬಳಿ ಜೀಪಿನಲ್ಲಿ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೆ ಅಂಗಡಿ ಮುಂಭಾಗದಲ್ಲಿದ್ದವನು ಓಡಿ ಹೋಗಲು ಪ್ರಯತ್ನಿಸಿದವನನ್ನು ನಾವು ಮತ್ತು ಪಂಚರು  ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ತಿಳಿಯಲಾಗಿ ವೆಂಕಟಸ್ವಾಮಿ  ಬಿನ್ ಲೇಟ್ ಅಶ್ವತ್ಥಪ್ಪ, 50 ವರ್ಷ, ಬಲಜಿಗರ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಪುಟ್ಟಪರ್ತಿ ಗ್ರಾಮ, ಕಸಬಾ ಹೋಬಳಿ,  ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು ನಂತರ ಪಂಚರ ಸಮಕ್ಷಮದಲ್ಲಿ  ಸ್ಥಳದಲ್ಲಿ ಪರಿಶೀಲಿಸಲಾಗಿ 1] 90 ಎಂ ಎಲ್  HAYWARDS CHEERS WHISKY ಯ 20  ಟೆಟ್ರಾ ಪಾಕೇಟ್ ಗಳಿದ್ದು, 2] 90ML ನ 2 ಖಾಲಿ ಟೆಟ್ರಾ ಪಾಕೇಟ್ ಗಳು, 3] ಮದ್ಯ ಕುಡಿದಿರುವ ಖಾಲಿ 4 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು    ಒಟ್ಟು    1 ಲೀಟರ್ 800 ಎಂ.ಎಲ್ ಆಗಿದ್ದು, ಇದರ ಬೆಲೆ 702/- ರೂಗಳಾಗಿರುತ್ತೆ,  ಸದರಿ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿದ್ದು, ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ 1-30 ಗಂಟೆಗೆ ಠಾಣೆಗೆ ಹಾಜರಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.226/2021 ಕಲಂ. 15(A),32(3) ಕೆ.ಇ ಆಕ್ಟ್ :-

    ದಿನಾಂಕ:07/08/2021 ರಂದು ಸಂಜೆ 4-30 ಗಂಟೆಗೆ ಶ್ರೀ  ರಮೇಶ್ ಹೆಚ್.ಸಿ-172 ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ 07/08/2021 ರಂದು ಠಾಣಾಧಿಕಾರಿಗಳು ನನಗೆ 21 ನೇ  ಗ್ರಾಮಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ನಾನು ಗ್ರಾಮಗಸ್ತು ಕರ್ತವ್ಯ ನಿರ್ವಹಿಸಿಕೊಂಡು  ರಾಯದುರ್ಗಂಪಲ್ಲಿ   ಗ್ರಾಮದ ಬಳಿ ಬರುವಾಗ ಬಾತ್ಮಿದಾರರು ನನಗೆ ಪೋನ್ ಮಾಡಿ ರಾಯದುರ್ಗಂಪಲ್ಲಿ ಗ್ರಾಮದ  ನಾಗರಾಜು ಬಿನ್ ರಾಮದಾಸ್, ಬಲಜಿಗ ಜನಾಂಗ, ವಾಸ ರಾಯದುರ್ಗಂಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಗ್ರಾಮದ ಕ್ರಾಸ್ ಬಳಿಗೆ ಹೋಗಿ  ಪಂಚರನ್ನು ಬರಮಾಡಿಕೊಂಡು  ಮೇಲ್ಕಂಡ ದಾಳಿ  ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ನಾವು ಮತ್ತು ಪಂಚರು ರಾಯದುರ್ಗಂಪಲ್ಲಿ ಗ್ರಾಮದ ನಾಗರಾಜು ಮನೆಯ ಬಳಿ ದ್ವಿ ಚಕ್ರ ವಾಹನಗಳಲ್ಲಿ  ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಮನೆಯ ಮುಂಭಾಗದಲ್ಲಿದ್ದವನು ಓಡಿ ಹೋಗಿರುತ್ತಾನೆ. ನಂತರ ಆತನ ಹೆಸರು ವಿಳಾಸ ತಿಳಿಯಲಾಗಿ ನಾಗರಾಜು ಬಿನ್ ರಾಮದಾಸು, 47 ವರ್ಷ, ಬಲಜಿಗರು, ವಾಸ ರಾಯದುರ್ಗಂಪಲ್ಲಿ ಗ್ರಾಮ, ಗೂಳೂರು  ಹೋಬಳಿ,  ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದು ಬಂದಿರುತ್ತದೆ. ನಂತರ ಪಂಚರ ಸಮಕ್ಷಮದಲ್ಲಿ  ಸ್ಥಳದಲ್ಲಿ ಪರಿಶೀಲಿಸಲಾಗಿ 1] 90 ಎಂ ಎಲ್  HAYWARDS CHEERS WHISKY ಯ 19  ಟೆಟ್ರಾ ಪಾಕೇಟ್ ಗಳಿದ್ದು, 2] 90ML ನ 2 ಖಾಲಿ ಟೆಟ್ರಾ ಪಾಕೇಟ್ ಗಳು, 3] ಮದ್ಯ ಕುಡಿದಿರುವ ಖಾಲಿ 4 ಪ್ಲಾಸ್ಟಿಕ್ ಗ್ಲಾಸ್ ಗಳು ಬಿದ್ದಿರುತ್ತವೆ.   ಇವುಗಳು    ಒಟ್ಟು    1 ಲೀಟರ್ 710 ಎಂ.ಎಲ್ ಆಗಿದ್ದು, ಇದರ ಬೆಲೆ 667/- ರೂಗಳಾಗಿರುತ್ತೆ,  ಸದರಿ ಆಸಾಮಿಯನ್ನು ಯಾವುದೇ ಪರವಾನಗಿ ಇಲ್ಲದೇ ಮನೆಯ ಮುಂದೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತದೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ ಮತ್ತು ಮಾಲಿನೊಂದಿಗೆ ಮದ್ಯಾಹ 4-30 ಗಂಟೆಗೆ ಠಾಣೆಗೆ ಹಾಜರಾಗಿ ವರದಿಯನ್ನು ನೀಡುತ್ತಿದ್ದು ಮೇಲ್ಕಂಡ ನಾಗರಾಜು ಬಿನ್ ರಾಮದಾಸು, 47 ವರ್ಷ, ಬಲಜಿಗರು, ವಾಸ ರಾಯದುರ್ಗಂಪಲ್ಲಿ ಗ್ರಾಮ, ಗೂಳೂರು  ಹೋಬಳಿ,  ಬಾಗೇಪಲ್ಲಿ ತಾಲ್ಲೂಕು ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ವರದಿಯ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.74/2021 ಕಲಂ. 15(A),32(3) ಕೆ.ಇ ಆಕ್ಟ್ :-

    ಈ ದಿನ ದಿನಾಂಕ:07/08/2021  ರಂದು ಸಂಜೆ  19:30 ಗಂಟೆ ಸಮಯದಲ್ಲಿ ಪಿ ಎಸ್ ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ  ಸಂಜೆ 17:30 ಗಂಟೆಯಲ್ಲಿ ನಾನು ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ 42 ಜಿ 61 ನ ಜೀಪ್ ನಲ್ಲಿ ಜೀಪ್ ಚಾಲಕ ಎಪಿಸಿ 87 ಮೋಹನ್  ಹಾಗೂ  ಠಾಣೆಯ ಸಿಬ್ಬಂದಿಯವರಾದ ಸಿ.ಹೆಚ್.ಸಿ 149 ಇನಾಯತ್ ವುಲ್ಲಾ ರವರೊಂದಿಗೆ ಠಾಣಾ ಸರಹದ್ದು ಪುಲಗಲ್ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ ಸದರಿ ಗ್ರಾಮದ ವಾಸಿಯಾದ ಜಯಮ್ಮಕೊಂ ಲೇಟ್ ಯಾಮನಾರಿ  ರವರು ತನ್ನ ಮನೆಯ ಮುಂಭಾಗ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶವನ್ನು ನೀಡಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು  ಜಯಮ್ಮ ರವರ ಮನೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಮಧ್ಯಪಾನವನ್ನು `ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಮಧ್ಯಪಾನ ಮಾಡುತ್ತಿದ್ದವರು ಮತ್ತು ಮಧ್ಯದ ಪ್ಯಾಕೆಟ್ ಗಳನ್ನು ಇಟ್ಟುಕೊಂಡಿದ್ದ ವ್ಯಕ್ತಿ ಮದ್ಯದ ಪ್ಯಾಕೆಟ್ ಗಳನ್ನು ಸ್ಥಳದಲ್ಲಿಯೇ ಬಿಸಾಡಿ ಸ್ಥಳದಿಂದ ಓಡಿ ಹೋಗಿರುತ್ತಾರೆ. ಸದರಿ ಸ್ಥಳದಲ್ಲಿದ್ದ  ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ  1) 180 ಎಂ.ಎಲ್ ನ  OLD TAVERN WHISKY ಕಂಪನಿಯ 2 ಟೆಟ್ರಾ ಪ್ಯಾಕೇಟ್ ಗಳಿದ್ದು ಒಟ್ಟು 360 ಎಮ್ ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಬೆಲೆ 86.75 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು 173.5 ರೂಗಳಾಗಿರುತ್ತೆ. 2) 90 ಎಮ್ ಎಲ್ ನ SHHEERS WHISKY  ಕಂಪನಿಯ 7 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿ ಪ್ಯಾಕೆಟ್ ನ ಮೇಲೆ 35.13 ರೂ ಎಂದು ನಮೂದಿಸಿದ್ದು  ಒಟ್ಟು 630 ಎಮ್ ಎಲ್ ಯಿದ್ದು, ಇವುಗಳು ಒಟ್ಟು 245.91 ರೂ  ಗಳಾಗಿರುತ್ತೆ.3)  180 ML ನ BAGPIPER WHISKY ಕಂಪನಿಯ 5 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿ ಪ್ಯಾಕೆಟ್ ನ ಮೇಲೆ 106.23 ರೂ ಎಂದು ನಮೂದಿಸಿದ್ದು  ಒಟ್ಟು 900 ಎಮ್ ಎಲ್ ಯಿದ್ದು, ಇವುಗಳು ಒಟ್ಟು 531.15 ಎಂದು ನಮೂದಿಸಿದ್ದು ಮೂರು  ಕಂಪನಿಗಳ ಮಧ್ಯದ ಟೆಟ್ರಾ ಪ್ಯಾಕೆಟ್ ಗಳ ಒಟ್ಟು 1620 ಎಮ್ ಎಲ್ ಯಿದ್ದು, ಇವುಗಳ ಒಟ್ಟು 950.56 ರೂಗಳಾಗಿರುತ್ತೆ. ಸದರಿ ಸ್ಥಳದಲ್ಲಿದ್ದ ಸಾರ್ವಜನಿಕರನ್ನು  ಮಧ್ಯದ ಪ್ಯಾಕೆಟ್ ಗಳನ್ನಿಟ್ಟುಕೊಂಡಿದ್ದವರ   ಹೆಸರು ಮತ್ತು ವಿಳಾಸವನ್ನು ಕೇಳಲಾಗಿ   ಜಯಮ್ಮ ಕೊಂ  ಲೇಟ್ ಯಾಮನಾರಿ, 55 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಪುಲಗಲ್ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ  ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿರುತ್ತಾಳೆಂದು  ಹಾಗೂ ಅವರ  ಬಳಿ ಯಾವುದೇ  ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾರೆ.  ಸದರಿ  ಸ್ಥಳದಲ್ಲಿದ್ದ  ಮೇಲ್ಕಂಡ ಮಧ್ಯದ  ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು  ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ದಾಳಿ ಅಮಾನತು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಠಾಣೆಗೆ ಹಾಜರಾಗಿ ವರದಿಯನ್ನು  ನೀಡಿರುತ್ತೇನೆ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.119/2021 ಕಲಂ. 279,337 ಐ.ಪಿ.ಸಿ:-

      ದಿನಾಂಕ: 07/08/2021 ರಂದು  ರಾತ್ರಿ  7-30  ಗಂಟೆಯ ಸಮಯದಲ್ಲಿ  ಪಿರ್ಯಾದಿ ಸಿ.ಟಿ. ಮಂಜುನಾಥಚಾರಿ ಬಿನ್  ಲೇಟ್ ಜಿ.ಕೆ.ತಿಮ್ಮಾಚಾರಿ  49ವರ್ಷ ವಿಶ್ವ ಕರ್ಮ  ಜನಾಂಗ ಚಿನ್ನದ ಕೆಲಸ ವಾಸ: 9ನೇ ವಾರ್ಡ್ ಶೆಟ್ಟಿಹಳ್ಳಿ  ಬಡಾವಣೆ. ಮುನಿಸಿಪಲ್ ಕಾಲೇಜು  ಹಿಂಬಾಗ ಚಿಕ್ಕಬಳ್ಳಾಪುರ ಟೌನ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ: 06/08/2021 ರಂದು  ಮದ್ಯಾಹ್ನ  ಸುಮಾರು 3-00 ಗಂಟೆಯ ಸಮಯದಲ್ಲಿ  ತನ್ನ ದೊಡ್ಡಪ್ಪನ ಮಗನಾದ ಜಿ.ಕೆ.ತ್ಯಾಗರಾಜಚಾರಿ ರವರು  ಕೆಲಸದ ನಿಮಿತ್ತ  ಶಿಡ್ಲಘಟ್ಟ ಟೌನ್ ಗೆ ಹೋಗಲು ಅವರ  ಬಾಬತ್ತು  ಕೆ.ಎ.40.ಇ.8912  ನಂಬರಿನ ದ್ವಿ ಚಕ್ರ ವಾಹನದಲ್ಲಿ  ಎನ್.ಹೆಚ್.234 ರಸ್ತೆಯ ಲಕ್ಕಹಳ್ಳಿ ಗೇಟ್ ಬಳಿ ಹೋಗುತ್ತಿದ್ದಾಗ ಎದುರುಗಡೆಯಿಂದ ಶಿಡ್ಘಘಟ್ಟ ಕಡೆಯಿಂದ ಕೆ.ಎ.50.ಎಂ.ಎ.1074  ನಂಬರಿನ  ಬೊಲೆರೋ ವಾಹನದ  ಚಾಲಕ  ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ತ್ಯಾಗರಾಜಚಾರಿ ರವರ  ದ್ವಿ ಚಕ್ರ ವಾಹನಕ್ಕೆ  ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿರುವುದಾಗಿ ಅದರ ಪರಿಣಾಮ ದ್ವಿ ಚಕ್ರ ವಾಹನ ಜಖಂಗೊಂಡು  ತ್ಯಾಗರಾಜಚಾರಿ ರವರಿಗೆ  ಬಲಕೈಗೆ. ತಲೆಗೆ  ಎಡ ಕೈಗೆ ಮತ್ತು ಮೈ ಮೇಲೆ  ಗಾಯಗಳಾಗಿರುವುದಾಗಿ ಗಾಯಾಳು  ಜಿ.ಕೆ.ತ್ಯಾಗರಾಜಚಾರಿ ಯವರನ್ನು ಅಪಘಾತ ಪಡಿಸಿದ ಬೊಲೆರೋ ವಾಹನದಲ್ಲಿ  ಚಿಕ್ಕಬಳ್ಳಾಪುರಕ್ಕೆ ಆಸ್ಪತ್ರೆಗೆ  ಕರೆದುಕೊಂಡು ಬರುತ್ತಿರುವುದಾಗಿ ಅಲ್ಲಿಯೇ ಇದ್ದ  ನಾರಾಯಣಸ್ವಾಮಿ  ಬಿನ್  ಕೆಂಪಣ್ಣ ಗಿಡ್ನಹಳ್ಳಿ. ವೆಂಕಟಾಚಾರಿ ಬಿನ್ ಗುರುಮೂರ್ತಾಚಾರಿ ಹೊಸಹುಡ್ಯ ಗ್ರಾಮ  ರವರು  ಪೋನು ಮುಖಾಂತರ  ವಿಚಾರ ತಿಳಿಸಿದ್ದು  ಆ ಕೂಡಲೇ ತಾನು ಚಿಕ್ಕಬಳ್ಳಾಪುರ  ಜಿಲ್ಲಾ ಆಸ್ಪತ್ರೆಯ ಬಳಿ ಹೋಗಿ ನೋಡಲಾಗಿ  ತ್ಯಾಗರಾಜರವರಿಗೆ ಮೇಲ್ಕಂಡಂತೆ  ಗಾಯಗಳಾಗಿತ್ತು. ಚಿಕ್ಕಬಳ್ಳಾಪುರ  ಜಿಲ್ಲಾ ಆಸ್ಪತ್ರೆಯ  ವೈದ್ಯಾಧಿಕಾರಿಗಳು  ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ  ಚಿಕಿತ್ಸೆಯ  ಬಗ್ಗೆ  ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ  ಕಳುಹಿಸಿಕೊಟ್ಟರು. ತಾನು  ಗಾಯಾಳುವನ್ನು ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ದಾಖಲು ಮಾಡಿದ್ದು  ತಾನು ಮತ್ತು ಜಿ.ಕೆ.ತ್ಯಾಗರಾಜಚಾರಿರವರ ಮನೆಯವರು ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದು  ಸದರಿ ಅಪಘಾತವನ್ನುಂಟು ಮಾಡಿರುವ ಕೆ.ಎ.50.ಎಂ.ಎ.1074  ನಂಬರಿನ  ಬೊಲೆರೋ ವಾಹನದ  ಚಾಲಕನ ಮೇಲೆ  ಕಾನೂನು  ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ  ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

5. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.58/2021 ಕಲಂ. 323,324,504,506 ಐ.ಪಿ.ಸಿ:-

      ದಿನಾಂಕ 07/08/2021 ರಂದು ರಾತ್ರಿ 7-15 ಗಂಟೆಯಲ್ಲಿ ಪಿರ್ಯಾದಿ ಶಮ್ಮನ್ ಸಿದ್ದಿಕ್ ಬಿನ್ ನಜೀರ್ ಅಹ್ಮದ್, 27 ವರ್ಷ, ಮುಸ್ಲಿಂ ಜನಾಂಗ, ಚಾಲಕ ವೃತ್ತಿ, ವಾಸ ವಾರ್ಡ್ ನಂ 28 ಎಲೆ ಪೇಟೆ ಚಿಕ್ಕಬಳ್ಳಾಪುರ ನಗರ ರವರು ಜಿಲ್ಲಾ ಅಸ್ಪತ್ರೆಯಲ್ಲಿ ವೈದ್ಯರ ಸಮಕ್ಷಮ ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ ತನಗೆ ಚಿಕ್ಕಬಳ್ಳಾಪುರ ನಗರದ ಈದ್ಗಾ ಪಕ್ಕಲ್ಲಿರುವ ರಘು ರವರು ತನಗೆ ಸೇಹ್ನಿತರಾಗಿರುತ್ತಾರೆ ಅಂದಿನಿಂದ ಜೋತೆಯಲ್ಲಿ ಅನ್ಯೂನ್ಯವಾಗಿದ್ದು ರಘು ಎಂಬುವವರು ಕ್ಷುಲ್ಲಕ ಕಾರಣಕ್ಕಾಗಿ ಎರಡೂ ಬಾರಿ ಗಲಾಟೆಗಳಾಗಿದ್ದು ಅಂದಿನಿಂದ ಮಾತನಾಡುವುದನ್ನು ಬಿಟ್ಟಿದ್ದು ಈಗ ಕೆಇಬಿಯಲ್ಲಿ ಕೆಲಸ ಬಿಟ್ಟು ಅನ್ನಪೂರ್ಣೆಶ್ವೇರಿ ಅಟೋ ಮೋಬೈಲ್ಸ್ ಮಾಲೀಕ ಸಂತೋಷ್ ರವರ ಕಾರನ್ನು ಓಡಿಸಿಕೊಂಡು ಇರುತ್ತೇನೆ ಹಿಗಿರುವಾಗ ದಿನಾಂಕ 07/08/2021 ರಂದು ಸಂಜೆ ಸುಮಾರು 4-00 ಗಂಟೆಯಲ್ಲಿ ಅನ್ನ ಪೂರ್ಣೆಶ್ವರಿ ಅಟೋ ಮೊಬೈಲ್ಸ್( ಗಂಗಮ್ಮ ಗುಡಿ ರಸ್ತೆ )  ಬಳಿ ಕುಳಿತು ಕೊಂಡಿದ್ದಾಗ ರಘು ಎಂಬುವವರು ಬಂದು ಸಿಗರೇಟನ್ನು ಕುಡಿಯುತ್ತಾ ಏನೋ ಲೇ ಚೀಟೆ ನನ್ನ ಮಗನೇ ಎಂದು ದೌರ್ಜನ್ಯದಿಂದ ಮಾತನಾಡಲು ಬಂದಾಗ ನಾನು ಸುಮ್ಮನೆ ಏನು ಮಾತನಾಡದೇ ನಿನು ನನ್ನನ್ನು ಮಾತನಾಡಬೇಡ ನನ್ನಗೂ ನಿನಗೂ ಅಗುವುದಿಲ್ಲ ದು ಹೇಳುತ್ತಿದ್ದಂತೆ ಏನೋ ಲೇ ನನ್ನ ಮಗನೇ ಕುಡುಕನನ್ನ ಮಗನೇ ನನಗೆ ಎದುರು ಮಾತನಾಡುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮುಖ ಎದೆ ಪಕ್ಕೇಲುಬುಗಳಿಗೆ ಗುದ್ದಿದನು ಹಾಗೂ ಅಲ್ಲಿಯೇ ಇದ್ದ ಕಲ್ಲನ್ನು ತೆಗೆದುಕೊಂಡು ಎದೆಗೆ ದೇಹದ ಹಿಂಬಾಗಕ್ಕೆ ಮುಖಕ್ಕೆ ಗುದ್ದಿದನು ನಂತರ ನನ್ನನ್ನು ಎಳೆದಾಡಿ ಕೆಳಕ್ಕೆ ತಳ್ಳಿದನು ಇದರಿಂದ ನನ್ನ ದೇಹದ ಮೇಲೆ ತರಚಿದ ಗಾಯಗಳಾಗಿದ್ದು ಮತ್ತೆ ಕತ್ತಿನ ಮೇಲೆ ಕಾಲನ್ನು ಇಟ್ಟು ನನ್ನ ಮಗನೇ ನಿನ್ನನ್ನು ಸಾಯಿಸಿ ಹಾಕುತ್ತೇನೆ ಬಿಡುವುದಿಲ್ಲ  ತಳ್ಳಿದನು ಇದರಿಂದ ನನ್ನ ಬಟ್ಟೆಗಳು ಹರಿದು ಹೋಗಿರುತ್ತವೆ ನಂತರ ಅಲ್ಲಿಯೇ ಇದ್ದ ಸಂತೋಷ್ ಮತ್ತು ರಮೇಶ್ ರವರು ಮತ್ತು ಇತರರು ಬಂದು ಗಲಾಟೆ ಬಿಡಿಸಿ ಬುದ್ದಿವಾದ ಹೇಳಿ ಕಳುಹಿಸಿದರು ರಮೇಶ್ ರವರು ಚಿಕ್ಕಬಳ್ಳಾಪುರ ಜಿಲ್ಲಾ ಅಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ದಾಖಲಿಸಿರುತ್ತಾರೆ ರಘು ರವರು ಹಳೇ ಗಲಾಟೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವಿನಾಃ ಕಾರಣ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮತ್ತು ಕಲ್ಲಿನಿಂದ ಹೊಡೆದು ಗಾಯ ಪಡಿಸಿ ಪ್ರಾಣ ಬೆದರಿಕೆ ಹಾಕಿರುವ ರಘು ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

 

6. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.41/2021 ಕಲಂ. 279,337,304(A) ಐ.ಪಿ.ಸಿ:-

     ದಿನಾಂಕ 08-08-2021 ರಂದು ಬೆಳಗ್ಗೆ 9-15 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ  ದೂರಿನ  ಸಾರಾಂಶವೇನೆಂದರೆ ನನ್ನ ಸ್ವಂತ ಗ್ರಾಮ ಆವತಿ ತಮ್ಮ ತಂದೆಯ ತಂಗಿಯಾದ ರತ್ನಮ್ಮ ಎಂಬುವರನ್ನು ನಮ್ಮೂರಿನ  ಲೇಟ್ ಬೀರಪ್ಪ ರವರಿಗೆ ಕೊಟ್ಟು ಮದುವೆಯನ್ನು ಮಾಡಿದ್ದು ಅವರಿಗೆ ಮೂರು ಜನ ಮಕ್ಕಳು 1) ಆಂಜೀನಮ್ಮ 2)ನೆ ಆಂಜೀನಪ್ಪ 3)ನೆ ನಿರ್ಮಲ ಎಂಬುಬುವರಿದ್ದು ಎಲ್ಲರಿಗೂ  ಮದುವೆಗಳಾಗಿದ್ದು  ಅವರವರ ಮನೆಗಳಲ್ಲಿ ವಾಸವಾಗಿರುತ್ತಾರೆ, ಬೀರಪ್ಪನು 10 ವರ್ಷದ ಹಿಂದೆ ಮರಣಹೊಂದಿರುತ್ತಾನೆ,  ನಮ್ಮ ಅತ್ತೆಯ ಮಗನಾದ ಆಂಜೀನಪ್ಪನಿಗೆ ನಂದಗುಡಿ ಗ್ರಾಮದ ದೀಫ ಎಂಬುವರೊಂದಿಗೆ ಈಗ್ಗೆ 13 ವರ್ಷದ ಹಿಂದೆ ಮದುವೆಯಾಗಿದ್ದು ಅವನಿಗೆ ಇಬ್ಬರು ಮಕ್ಕಳು 1ನೆ ಆದಿತ್ಯ. 2ನೆ ಶ್ರಾವಣಿ ಎಂಬುವರಿದ್ದು ಈಗ್ಗೆ 4 ವರ್ಷದ ಹಿಂದೆ  ದೀಪಾ ರವರು ಮರಣಹೊಂದಿದ್ದು  ಇವನು ಕೂಲಿ ಕೆಲಸ ಮಾಡುತ್ತಾ ಮಕ್ಕಳನ್ನು ತಾಯಿಯೊಂದಿಗೆ  ಸಾಕುತ್ತಿದ್ದನು, ದಿನಾಂಕ;07-08-2021 ರಂದು ರಾತ್ರಿ ನಾನು 10-30 ಗಂಟೆಯ ಸಮಯದಲ್ಲಿ ಮನೆಯಲ್ಲಿದ್ದಾಗ  ಯಾರೋ ಸಾರ್ವಜನಿಕರು ನನ್ನ ಮೊಬೈಲಿಗೆ ಪೋನ್ ಮಾಡಿ ತಿಳಿಸಿದ ವಿಚಾರವೇನೆಂದರೆ ನಿಮ್ಮ ಸಂಭಂದಿ  ಆಂಜಿನಪ್ಪನು  ಎಸ್ ಜೆ ಸಿ ಐಟಿ ಕಾಲೇಜಿನ ಬಳಿ ಅಪಘಾತಕ್ಕೀಡಾಗಿ ಮರಣ ಹೊಂದಿರುತ್ತಾನೆಂದು  ವಿಚಾರ ತಿಳಿಸಿದರು, ತಕ್ಷಣ ನಾನು ನಮ್ಮ ಸಂಭಂದಿಕರು  ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಬಳಿ ಬಂದಾಗ ವಿಚಾರ ನಿಜವಾಗಿತ್ತು, ಆಂಜಿನಪ್ಪನ ದೇಹವನ್ನು ಶವಗಾರದಲ್ಲಿ ಇಟ್ಟಿದ್ದರು,   ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದ  ನಮ್ಮೂರಿನ ಆನಂದನ ಬಳಿ ವಿಚಾರ ತಿಳಿಯಲಾಗಿ  ಇದೇ ದಿನ ಸಂಜೆ  ಮುನಿಯಪ್ಪರವರ ಬಾಬತ್ತುKA-43-S-2371 ನೊಂದಣಿಯ ಪಲ್ಸರ್ ದ್ವಿಚಕ್ರ ವಾಹನವನ್ನು ಪಡೆದುಕೊಂಡು ಹಿಂಬದಿಯಲ್ಲಿ ಆಂಜಿನಪ್ಪನನ್ನು ಕುಳ್ಳರಿಸಿಕೊಂಡು  ಚಿಕ್ಕಬಳ್ಳಾಪುರಕ್ಕೆ ಬರಲು ಬರುತ್ತಿದ್ದಾಗ ರಾತ್ರಿ ಸುಮಾರು 9-15 ಗಂಟೆಯ ಸಮಯದಲ್ಲಿ ಎಸ್ ಜೆ ಸಿ ಐಟಿ ಕಾಲೇಜಿನ ಬಳಿ ಬರುತ್ತಿದ್ದಾಗ  ತನ್ನ ವಾಹನವು ಅತಿವೇಗದಲ್ಲಿದ್ದ ಕಾರಣ  ಮಣ್ಣಿನ ಗುಡ್ಡೆಯ ಮೇಲೆ ಹತ್ತಿಸಿ  ಇಬ್ಬರೂ ರಸ್ತೆಯ  ಎಡಬದಿಯಲ್ಲಿನ  ಕಾಲುವೆಗೆ ಬಿದ್ದು ಹೋದಾಗ ಹಿಂಬದಿಯಲ್ಲಿ ಕುಳಿತಿದ್ದ ಆಂಜಿನಪ್ಪನು ಸ್ಥಳದಲ್ಲಿಯೇ ಮೃತಪಟ್ಟನು, ಗಾಯಗಳಾಗಿದ್ದ ನಮ್ಮನ್ನು ಸಾರ್ವಜನಿಕರು ಆಸ್ಪತ್ರಗೆ ಕಳೂಹಿಸಿಕೊಟ್ಟರೆಂದು ವಿಚಾರ ತಿಳಿಸಿದನು, ನಾನು ಆಂಜಿನಪ್ಪನು ಮರಣ ಹೊಂದಿರುವ ವಿಚಾರವನ್ನು ಅವರ ಅಕ್ಕ ಮತ್ತು ಅಮ್ಮನಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರನ್ನು  ನೀಡುತ್ತಿದ್ದು   ದಿನಾಂಕ 07-08-2021 ರಂದು  ರಾತ್ರಿ ಆವತಿ ಗ್ರಾಮದಿಂದ  ಮುನಿಯಪ್ಪ ರವರ ಬಾಬತ್ತು  ದ್ವಿಚಕ್ರ ವಾಹನದಲ್ಲಿ ಆಂಜೀನಪ್ಪನನ್ನು ಕುಳ್ಳರಿಸಿಕೊಂಡು ಚಿಕ್ಕಬಳ್ಳಾಪುರಕ್ಕೆ ಬರಲು ಬರುವಾಗ ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಹೋಗಿ ಮಣ್ಣು ಗುಡ್ಡೆಯ ಮೇಲೆ ಹತ್ತಿಸಿ ಕಾಲುವಗೆ ಬೀಳಿಸಿ ಆಂಜಿನಪ್ಪನ ಸಾವಿಗೆ ಕಾರಣನಾದ KA-43-S-2371 ನೊಂದಣಿಯ ಸವಾರ ಆನಂದ ಬಿನ್  ನಾರಾಯಣ ಸ್ವಾಮಿ ರವರ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.353/2021 ಕಲಂ. 32,34,36(B) ಕೆ.ಇ ಆಕ್ಟ್:-

     ದಿನಾಂಕ: 07/08/2021 ರಂದು ಸಂಜೆ 5.30 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರವರಾದ ಸರಸ್ವತಮ್ಮ ರವರು ಆರೋಪಿ, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 07/08/2021 ರಂದು ತಾನು ಮತ್ತು ತಮ್ಮ ಠಾಣೆಯ ಸಿಬ್ಬಂದಿಯವರಾದ ಮಂಜುನಾಥ್, ಸಿ.ಹೆಚ್.ಸಿ-198, ವೇಣು, ಸಿ.ಹೆಚ್.ಸಿ-110 ಹಾಗೂ ಕೆ.ಎ-40-ಜಿ-58 ರ ಜೀಪ್ ಚಾಲಕನಾದ ಎ.ಹೆಚ್.ಸಿ-13 ಸುಶೀಲ್ ಕುಮಾರ್ ರವರೊಂದಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಬಂದು ಮದ್ಯಾಹ್ನ 3.00 ಗಂಟೆಯಲ್ಲಿ ಕನ್ನಂಪಲ್ಲಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಚಿಂತಾಮಣಿ ತಾಲ್ಲೂಕಿನ ನಾರಾಯಣಹಳ್ಳಿ ಗ್ರಾಮದ ವಾಸಿಯಾದ ಶ್ರೀಮತಿ ಸರೋಜಮ್ಮ ಕೋಂ ಲೇಟ್ ನಾರಾಯಣಸ್ವಾಮಿ ರವರು ಅಕ್ರಮವಾಗಿ ಮದ್ಯವನ್ನು ದಾಸ್ತಾನು ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದು ಅದರಂತೆ ಪಂಚರೊಂದಿಗೆ ಮದ್ಯಾಹ್ನ 3.45 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮ ಆರೋಪಿತಳಾದ ಸರೋಜಮ್ಮ ಕೋಂ ಲೇಟ್ ನಾರಾಯಣಸ್ವಾಮಿ, 60 ವರ್ಷ, ಗಾಣಿಗರು, ಅಂಗಡಿ ವ್ಯಾಪಾರ, ವಾಸ ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರನ್ನು ವಶಕ್ಕೆ ಪಡೆದು ಸದರಿ ಮದ್ಯದ ಬಗ್ಗೆ ವಿಚಾರ ಮಾಡಲಾಗಿ ಕನ್ನಂಪಲ್ಲಿ ಗ್ರಾಮದಲ್ಲಿರುವ ವಿನಾಯಕ ಬಾರ್ ನಲ್ಲಿ ಕೆಲಸ ಮಾಡುವ ಶಂಕರಪ್ಪ ಎಂಬುವವರು ತಂದು ಕೊಟ್ಟಿದ್ದು, ಅದನ್ನು ತಾನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಹಾಗೂ ಮದ್ಯವನ್ನು ಮಾರಾಟ ಮಾಡಲು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾಳೆ. ನಂತರ ಆರೋಪಿತಳ ಕಡೆಯಿಂದ 6,931/- ರೂ ಬೆಲೆ ಬಾಳುವ 14 ಲೀಟರ್ 470 ಎಂ.ಎಲ್ ಸಾಮರ್ಥ್ಯದ ವಿವಿಧ ಕಂಪನಿಯ ಮದ್ಯವನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು ದಾಸ್ತಾನು ಮಾಡಿದ್ದ ಆರೋಪಿತಳು ಹಾಗೂ ಕನ್ನಂಪಲ್ಲಿಯ ವಿನಾಯಕ ಬಾರ್ ನಲ್ಲಿ ಕೆಲಸ ಮಾಡುವ ಶಂಕರಪ್ಪ ಅಕ್ರಮ ವ್ಯವಹಾರಕ್ಕೆ ಸಹಕರಿಸಿದ್ದು, ಆತನ ಮೇಲೆಯೂ ಸಹ ಕರ್ನಾಟಕ ಅಬಕಾರಿ ಕಾಯ್ದೆಯಡಿಯಲ್ಲಿ ಕ್ರಮಕೈಗೊಳ್ಳಲು ಕೋರಿ ಸ್ಥಳದಲ್ಲಿ ಸಿಕ್ಕಿ ಬಿದ್ದ ಆರೋಪಿತಳು, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಈ ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿರುವುದಾಗಿರುತ್ತೆ.

 

8. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.102/2021 ಕಲಂ. 323,324,504,506,34 ಐ.ಪಿ.ಸಿ:-

     ದಿ;-07/08/2021 ರಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪಿರ್ಯಾದುದಾರರಾದ ಶ್ರೀಮತಿ ಅಶ್ವಿನಿ ಕೋಂ ಪ್ರಶಾಂತ 25 ವರ್ಷ, ಆದಿ ಕರ್ನಾಟಕ, ಗೃಹಿಣಿ, ವಾಸ ಆನೆಮಡುಗು ಗ್ರಾಮ, ಶಿಡ್ಲಘಟ್ಟ (ತಾ) ರವರು ಹೇಳಿಕೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ತಾನು  ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು,ಈಗ್ಗೆ ಸುಮಾರು 5 ವರ್ಷಗಳ ಹಿಂದೆ ತಮ್ಮ ಗ್ರಾಮದ ತನ್ನ ಜನಾಂಗದ ರಾಮಲಿಂಗಪ್ಪ ರವರ ಮೊದಲನೇ ಮಗನಾದ ಪ್ರಶಾಂತನನ್ನು ಪ್ರೀತಿಸಿ ಮದುವೆಯಾಗಿದ್ದು,  ತನ್ನ ಗಂಡ ತನ್ನನ್ನು ಮದುವೆಯಾದ ಮೂರು ತಿಂಗಳು ಚೆನ್ನಾಗಿ ನೋಡಿಕೊಂಡಿದ್ದವನು, ನಂಥರದ ದಿನಗಳಲ್ಲಿ ಪ್ರತಿ ದಿನವೂ ಮಧ್ಯಪಾನ ಮಾಡಿಕೊಂಡು ಬಂದು  ರಾತ್ರಿ ವೇಳೆಯಲ್ಲಿ ತನ್ನನ್ನು ಕೆಟ್ಟಕೆಟ್ಟ ಮಾತುಗಳಿಂದ ಬೈಯ್ದು, ಕೈಗೆ ಏನೂ ಸಿಕ್ಕಿದರೆ ಅದನ್ನು ತೆಗೆದುಕೊಂಡು ಹೊಡೆಯುತ್ತಿದ್ದನು. ತಾನು ಈ ವಿಚಾರವನ್ನು ತನ್ನ ತಂದೆ ತಾಯಿಗೆ ತಿಳಿಸಿದರೆ ಅವರು ನೊಂದು ಕೊಳ್ಳುತ್ತಾರೆಂದು ವಿಚಾರವನ್ನು ತಿಳಿಸಿರುವುದಿಲ್ಲ. ತಮ್ಮ ದದಾಂಪತ್ಯ ಜೀವನದಲ್ಲಿ ತಮಗೆ 3 ವರ್ಷದ ಪ್ರಶ್ವಿತಾ ಎಂಬ ಹೆಣ್ಣು ಮಗುವಿರುತ್ತದೆ. ಈಗಿರುವಾಗ ದಿ:- 06/08/2021 ರಂದು ತನ್ನ ಮಗಳೂ ಪ್ರಶ್ವಿತಾ ತಾನು ಅಜ್ಜಿ ಮನೆಗೆ ಹೋಗಬೇಕೆಂದು ಹಠ ಹಿಡಿದಿರುತ್ತಾಳೆ, ಆಗ ತಾನು ಅವಳನ್ನು ತಮ್ಮ ತಮ್ಮನ ಮನೆಗೆ ಕಳುಹಿಸಿ ರಾತ್ರಿ ಊಟ ಮುಗಿಸಿ,ಮನೆಯಲ್ಲಿ ಮಲಗಿಕೊಂಡಿದ್ದು, ರಾಥ್ರಿ ಸುಮಾರು 11-00 ಗಂಟೆ ಸಮಯದಲ್ಲಿ ತನ್ನ ಗಂಡ ಮನೆಗೆ ಬಂದು ಮಲಗಿಕೊಂಡಿದ್ದ ತನ್ನನ್ನು ಜೊರಾಗಿ ಕಾಳಿನಿಂದ ಒದ್ದಿರುತ್ತಾನೆ, ಆಗ ನಾನು ಎದ್ದು ಏಕೆ ಒದ್ದುತ್ತಿದ್ದಿಯಾ ಎಂದು ಕೇಳಿದ್ದಕ್ಕೆ ನಿನ್ನಮ್ಮನೇ ಕ್ಯಾಯಾ, ಸೂಳೆ ಮುಂದೆ ನಾನು ಬರುವುದಕ್ಕಿಂತ ಮುಂಚೆ ಮಲಗಿದ್ದಿಯಾ ಪ್ರಶ್ವಿತಾ ಎಲ್ಲಿ ಎಂದು ಕೆಟ್ಟಕೆಟ್ಟದ್ದಾಗಿ ಬೈಯ್ದಿರುತ್ತಾನೆ. ಆಗ ತಾನು ಪ್ರಶ್ವಿತಾ ತನ್ನ ತಾಯಿಯ ಮನೆಯಲ್ಲಿದ್ದಾಳೆಎಂದು ಕೇಲೀದ್ದಕ್ಕೆ ಮನೆಯಲ್ಲಿದ್ದ ಹಿಟ್ಟಿನ ಕೋಲನ್ನು ತೆಗೆದುಕೊಂಡು ತನ್ನ ಎಡಗಡೆ ಕಿವಿಗೆ ಮತ್ತು ಹಿಂಭಾಗ ಹೊಡೆದು ರಕ್ತಗಾಯ ಪಡಿಸಿ, ಅದೇ ಕೋಲಿನಿಂದ ತನ್ನ  ಬಲಗೈಗೆ ಹೊಡೆದಿರುತ್ತಾನೆ. ಆಗ ಬಲಗೈನಲ್ಲಿದ್ದ ಬಳೆ ಚೂರುಗಳು ಕೈಗೆ ಚುಚ್ಚಿಕೊಂಡು ರಕ್ತಗಾಯವಾಗಿರುತ್ತದೆ. ನಂತರ ಅದೇ ಕೋಲಿನಿಂದ ತನ್ನ  ಎದೆಯ ಎಡಭಾಗಕ್ಕೆ ಚುಚ್ಚಿ ನೋವುಂಟು ಮಾಡಿ ಬಲಗಾಲು ಮತ್ತು ಬಲಗಾಲಿನ ತೊಡೆಗೆ ಹೊಡೆದು ಊತದ ಗಾಯವನ್ನುಂಟು ಮಾಡಿರುತ್ತಾನೆ. ಆಗ ಗಲಾಟೆಯ ಶಬ್ದವನ್ನು ಕೇಳಿಸಿಕೊಂಡು ಅವರ ತಾಯಿ ದ್ಯಾವಮ್ಮ ಬಾಗಿಲನ್ನು ತೆರೆದಾಗ , ತಾನು ಅವನಿಂದ ತಪ್ಪಿಸಿಕೊಂಡು ತನ್ನ ತವರು ಮನೆಗೆ ಓಡಿ ಹೋಗಿದ್ದು,  ತನ್ನ ತಂದೆ ತನ್ನನ್ನು ಹೊಡೆದ ವಿಚಾರವನ್ನು ಕೇಳಲು ತನ್ನ ಗಂಡನ ಮನೆಯ ಬಳಿ ಹೋದಾಗ ತನ್ನ ತಂದೆ ಮೇಲೂ  ತನ್ನ ಗಂಡ ಜಗಳ ಮಾಡಿದ್ದು, ತನ್ನ ತಾಯಿ ಗಾಯಿತ್ರಮ್ಮ ಮತ್ತು ತನ್ನತಮ್ಮ ಅಶೋಕ ಬಂದಾಗ ಪ್ರಶಾಂತನ ತಾಯಿ ಅವರ ತಂದೆ ಮತ್ತು ಅವರ ತಮ್ಮ ಪ್ರಭಾಕರ ರವರುಗಳು ಬಂದು, ಆಪೈಕಿ ಪ್ರಶಾಂತನ ತಾಯಿ ದ್ಯಾವಮ್ಮ ತನ್ನ ತಾಯಿಯ ತಲೆ ಕೂದಲನ್ನು ಹಿಡಿದುಕೊಂಡಿದ್ದು, ಆಗ ಪ್ರಭಾಕರ ಕೈಯಿಂದ ತನ್ನ ತಾಯಿಯ ಗಲ್ಲಕ್ಕೆ ಮತ್ತು ಬಲಕಿವಿಗೆ ಹೊಡೆದಿದ್ದು,  ಪ್ರಶಾಂತ ತನ್ನ ತಂದೆಯ ಮೂತಿಗೆ ಗುದ್ದಿ, ನೋವುಂಟು ಮಾಡಿದ್ದು,  ಪ್ರಶಾಂತ ತನ್ನ ತಮ್ಮನ ಕೆನ್ನೆಗೆ ಪರಚಿದ್ದು, ಆಗ ಎಡಗೈನ ಎಬ್ಬರಳೀಗೆ ತರಚಿದ ಗಾಯವಾಗಿರುತ್ತೆ.ಮೇಲ್ಕಂಡ ನಾಲ್ಕೂ ಜನರು ತಮ್ಮನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದ್ದು, ತಮ್ಮ ಮೇಲೆ ಗಲಾಟೆ ಮಾಡಿದ್ದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

 

9. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.178/2021 ಕಲಂ. 279 ಐ.ಪಿ.ಸಿ:-

     ದಿನಾಂಕ 07/08/2021 ರಂದು ರಾತ್ರಿ 9-00 ಗಂಟೆಗೆ ಪಿರ್ಯಾಧಿ ಚೆನ್ನಕೇಶ ಬಿನ್ ಕೆ.ವಿ. ನಾಗರಾಜ    ಕಣೆಜೇನಹಳ್ಳಿ ಗ್ರಾಮ  ಚಿಕ್ಕಬಳ್ಳಾಪುರ ತಾಲ್ಲೂಕು, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ 07/08/2021 ರಂದು ಸಂಜೆ ಸುಮಾರು 5-00 ಗಂಟೆಯ ಸಮಯದಲ್ಲಿ ತನ್ನ ಬಾಬತ್ತು ಕೆಎ40-ಟಿಎ-9342/9343 ರ ಟ್ರ್ಯಾಕ್ಟರ್ ಟ್ರ್ಯಾಲಿಯನ್ನು ಚಾಲಕ ಚಂದ್ರಶೇಖರ್ ಬಿನ್ ಅಶ್ವತ್ಥಪ್ಪ ರವರು ಚಿಕ್ಕಬಳ್ಳಾಪುರ ದಿಂದ ಬಾಗೇಪಲ್ಲಿ ಗೆ ಹೋಗು ಎನ್.ಹೆಚ್. 44 ರ ರಸ್ತೆಯಲ್ಲಿ  ಕೆ.ಎನ್. ಆರ್ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಪರಿಣಾಮ ತನ್ನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಟ್ರ್ಯಾಲಿ ಪಲ್ಟಿ ಹೊಡೆದು ಜಕ್ಕಂಗೊಂಡಿರುತ್ತೆ. ಚಾಲಕನಿಗೆ ಯಾವುದೇ ರೀತಿಯ ಗಾಯಗಳು ಆಗಿರುವುದಿಲ್ಲ. ಆದ್ದರಿಂದ ಚಾಲಕ ಚಂದ್ರಶೇಖರ್ ಬಿನ್ ಅಶ್ವತ್ಥಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ಕೋರಿ ನೀಡಿದ ದೂರಿನ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

10. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.82/2021 ಕಲಂ. 143,144,147,148,323,324,506,504,149 ಐ.ಪಿ.ಸಿ:-

     ದಿನಾಂಕ 07/08/2021 ರಂದು ಸಂಜೆ 6.30 ಗಂಟೆಯಲ್ಲಿ ಹೆಚ್.ಸಿ 200 ರವರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಪಿರ್ಯಾದಿ ಶ್ರೀಮತಿ ಜಯಲಕ್ಷ್ಮಮ್ಮ ಕೋಂ ನಾರಾಯಣಸ್ವಾಮಿ,30 ವರ್ಷ, ನಾಯಕರು ಜನಾಂಗ, ಜಿರಾಯ್ತಿ,ಬಂಡಕೋಟೆ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆ ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ ದಿನಾಂಕ 05/08/2021 ರಂದು  ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ತನ್ನ ಮಗಳ ಮದುವೆ ಈ ತಿಂಗಳ 15 ನೇ ತಾರೀಖು ಇರುವುದರಿಂದ ಮನೆಯ ಸುತ್ತಲೂ ಸ್ವಚ್ಚತೆಯನ್ನು ತಾನೂ ತನ್ನ ಮಗ ಶ್ರೀಕಾಂತ, ತನ್ನ ಗಂಡನಾದ ನಾರಾಯಣಸ್ವಾಮಿಯೊಂದಿಗೆ ಮಾಡುತ್ತಿದ್ದಾಗ ತಮ್ಮ ಗ್ರಾಮದ ತಮ್ಮ ಮನೆಯ ಮುಂಭಾಗದಲ್ಲಿ ವಾಸವಾಗಿರುವ ನಾರಾಯಣಪ್ಪರವರು ಮನೆಯ ಮುಂದೆ ಇರುವ ಜಾಗ ತಮಗೆ ಸೇರಿದ್ದು,  ಈ ಜಾಗದಲ್ಲಿ ಸ್ವಚ್ಚತೆ ಮಾಡಬೇಡಿ ಎಂತ ಜಗಳ ಕಾದು ಕೆಟ್ಟಮಾತುಗಳಿಂದ ಬೈಯ್ಯುತ್ತಾ  ಏಕಾಏಕಿ ನಾರಾಯಣಪ್ಪ ಬಿನ್ ಪೆದ್ದನ್ನ, ಶ್ರಿನಾಥ ಬಿನ್ ಪೆದ್ದನಾರಾಯಣಪ್ಪ, ಶ್ರೀನಿವಾಸ ಬಿನ್ ಲೇಟ್ ಪೆದ್ದನ್ನ, ರತ್ನಮ್ಮ ಕೋಂ ನಾರಾಯಣಪ್ಪ, ಈರಮ್ಮ ಕೋಂ  ವೆಂಕಟೇಶಪ್ಪ,ರವರುಗಳು ಕೈಗಳಲ್ಲಿ ಕಲ್ಲು ಮತ್ತು ಕೋಲುಗಳನ್ನು ಹಿಡಿದು ಎಲ್ಲಿದೆ ನಿಮ್ಮ ಜಾಗ ಎಂದು  ಹೇಳಿ ಅಪೈಕಿ ನಾರಾಯಣಪ್ಪ, ರತ್ನಮ್ಮ ರವರು ಕೈಗಳಿಂದ  ತನ್ನ ಮೈಮೇಲೆ ಹೊಡೆದು ಕೆಳಕ್ಕೆ ತಳ್ಳಿ ತನ್ನ ಜುಟ್ಟು ಎಳೆದು ಕೋಲಿನಿಂದ ಬಲಭುಜಕ್ಕೆ ಹೊಡೆದು ಊತಗಾಯಪಡೆಸಿ, ಎಡ ದೊಕ್ಕೆಯ ಬಳಿ  ರತ್ನಮ್ಮ ಕಾಲಿನಿಂದ ಒದ್ದು, ನೋವುಂಟು ಮಾಡಿದರು.ತನ್ನ ಮಗ ಶ್ರೀಕಾಂತ ಅಡ್ಡ ಬಂದಾಗ  ಶ್ರೀನಾಥ ಕೋಲಿನಿಂದ  ಬಲಕೈಗೆ ಹೊಡೆದು ರಕ್ತಗಾಯಪಡಿಸಿ ಕೆಳಕ್ಕೆ ತಳ್ಳಿ ಎಡ ದೊಕ್ಕೆಗೆ  ಕಾಲುಗಳಿಂದ ಒದ್ದು ನೋವುಂಟು ಪಡೆಸಿದರು.ಶ್ರಿನಿವಾಸ ಎಂಬುವರು ಕೈಗಳಿಂದ ಮತ್ತು ಕಾಲುಗಳಿಂದ ಒದ್ದು ಮೈನೋವುಂಟು ಮಾಡಿದ, ತನ್ನ ಗಂಡ ನಾರಾಯಣಸ್ವಾಮಿ ರವರಿಗೆ ಶ್ರೀನಾಥ, ಕಲ್ಲಿನಿಂದ ಬಲ ಹಣೆಗೆ ಹೊಡೆದು ತರಚಿದ ಗಾಯಪಡೆಸಿದ, ಶ್ರಿನಿವಾಸ , ರತ್ನಮ್ಮ, ಈರಮ್ಮ, ರವರು ಕೈಗಳಿಂದ  ಮತ್ತು ಕಲ್ಲುಗಳಿಂದ ಹೊಡೆದು ಎಡಮೊಣಕೈ, ಬಲಕಾಲು ಬಳಿ ಹೊಡೆದು ತರಚಿದ ಗಾಯ ಪಡೆಸಿ ಕೆಳಕ್ಕೆ ತಳ್ಳಿ ರಸ್ತೆಯಲ್ಲಿ ಒರಳಾಡಿಸಿ ಸೊಂಟದ ಬಳಿ ಕಾಲುಗಳಿಂದ ಒದ್ದು, ಮೈ ನೋವುಂಟು ಮಾಡಿ ಈ ನನ್ನ ಮಕ್ಕಳಿಗೆ ಈ ದಿನ ಸಾಯಿಸಲೇ ಬೇಕು ಎಂತ ಪ್ರಾಣ ಬೆದರಿಕೆ ಹಾಕಿ  ಹೊಡೆಯುತ್ತಿದ್ದಾಗ ತಮ್ಮ ಗ್ರಾಮದ ಬಿ.ವಿ ಚೌಡರೆಡ್ಡಿ, ಬಾಬು , ಸುಬ್ರಮಣಿ ಮತ್ತಿತರೇ ಗ್ರಾಮಸ್ಥರು ಜಗಳ ಬಿಡಿಸಿ ಉಪಚರಿಸಿ, ತಮಗೆ ಆಗಿದ್ದ ಗಾಯಗಳನ್ನು ನೋಡಿ 108 ವಾಹನಕ್ಕೆ ಕರೆ ಮಾಡಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ  ಬಂದು ಚಿಕಿತ್ಸೆಗಾಗಿ ದಾಖಲಾಗಿರುತ್ತೇವೆ. ಏಕಾಏಕಿ ಜಗಳಕ್ಕೆ ಬಂದು ಗಲಾಟೆ ಮಾಡಿ ಹೊಡೆದವರ ಈ ಮೇಲ್ಕಂಡವರು ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ನೀಡಿದ ಹೇಳಿಕೆ ದೂರಿನ ಸಾರಾಂಶವಾಗಿರುತ್ತೆ.

 

11. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.83/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:7/08/2021 ರಂದು ಸಂಜೆ 5:30 ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:07-08-2021 ರಂದು ಸಂಜೆ 4:00 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್.ಸಿ-32 ಕೇಶವ ಮೂರ್ತಿ ಮತ್ತು ಪಿಸಿ-240 ಮಧುಸೂಧನ್ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ಮುದ್ದೇನಹಳ್ಳಿ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಕಣಿವೆ ನಾರಾಯಣಪುರ ಗ್ರಾಮದ ಬೈರೇಗೌಡ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ತನ್ನ ಹೋಟೆಲ್ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಕಣಿವೆ ನಾರಾಯಣಪುರ ಗ್ರಾಮದ ಹೊರವಲಯದಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಸಂಜೆ 4:20 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ಬೈರೇಗೌಡ ಬಿನ್ ನಾರಾಯಣಸ್ವಾಮಿ, 29 ವರ್ಷ, ಒಕ್ಕಲಿಗರು, ಹೋಟೆಲ್ ಕೆಲಸ, ಕಣಿವೆನಾರಾಯಣಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 20 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 20 ಟೆಟ್ರಾ ಪ್ಯಾಕೇಟುಗಳ ಬೆಲೆ 702 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 800 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS WHISKY ಯ 5 ಖಾಲಿ  ಟೆಟ್ರಾ  ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 4:25 ಗಂಟೆಯಿಂದ ಸಂಜೆ 5:00 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.259/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ: 07-08-2021 ರಂದು ಮದ್ಯಾಹ್ನ 12-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮಮ್ಮ ಕೋಂ ಮುನಿಕೃಷ್ಣಪ್ಪ, 36 ವರ್ಷ, ನಾಯಕರು, ಜಿರಾಯ್ತಿ, ವಾಸ: ಡಬರಗಾನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ: 06-08-2021 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ತನ್ನ ಗಂಡ ಮುನಿಕೃಷ್ಣಪ್ಪ ರವರು ಮನೆಯಲ್ಲಿ ಇಲ್ಲದೆ ಇದ್ದ ಸಮಯದಲ್ಲಿ ಬೆಂಗಳೂರು ಗ್ರಾಮಾಂಜಿ ಜಿಲ್ಲೆ ಹೊಸಕೋಟೆ ತಾಲ್ಲೂಕು ಗೇರಹಳ್ಳಿ ಗ್ರಾಮದ ಲಕ್ಷ್ಮಿದೇವಮ್ಮ ಕೋಂ ನಾಗರಾಜ ಮತ್ತು ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಗ್ರಾಮದ ಸುಮ ಕೋಂ ಮಂಜುನಾಥ ರವರು ಇಬ್ಬರೂ ಸಹ ಡಬರಗಾನಹಳ್ಳಿ ಗ್ರಾಮದಲ್ಲಿರುವ ನಮ್ಮ ಮನೆಯ ಬಳಿ ಬಂದು ತನ್ನನ್ನು ಹಿಡಿದು ಕೂದಲನ್ನು ಹಿಡಿದು ಎಳೆದಾಡಿ ಕೈಗಳಿಂದ ಬೆನ್ನಿಗೆ ಹೊಡೆದು ಕೈಗಳಲ್ಲಿ ಪರಚಿ ನಿನ್ನ ಗಂಡನನ್ನು ಮತ್ತು ನಿನ್ನನ್ನು ನಾವು ಸಾಯಿಸದೆ ಬಿಡುವುದಿಲ್ಲವೆಂದು ಅವಾಚ್ಯ ಶಬ್ದಗಳಿಂದ ಬೈದು ಎಡಕೈಗೆ ದೊಣ್ಣೆಯಿಂದ ಹೊಡೆದು ರಕ್ತದ ಗಾಯ ಮಾಡಿದ್ದು, ಹೊಡೆಯುವಾಗ ತನ್ನ ತಮ್ಮನ ಹೆಂಡತಿಯಾದ ದೀಪ ಕೋಂ ನಾಗೇಶ ರವರು ಬಿಡಿಸಲು ಬಂದಾಗ ದೊಣ್ಣೆಯಲ್ಲಿ ಹೊಡೆದು ಕೂದಲನ್ನು ಹಿಡಿದು ಎಳೆದಾಡಿ ನೀನು ಯಾರೆ ಗಲಾಟೆ ಬಿಡಿಸಲು ಬರುವುದಕ್ಕೆ ಎಂದು ಆಕೆಯನ್ನು ಬೈದು ಹೊಡೆದು ಕತ್ತಿನ ಮೇಲೆ ರಕ್ತ ಬರುವ ರೀತಿ ಪರಚಿ ಪ್ರಾಣ ಬೆದರಿಕೆಯನ್ನು ಹಾಕಿದ್ದು ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 259/2021 ಕಲಂ 323, 324, 504, 506 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

13. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.260/2021 ಕಲಂ. 302 ಐ.ಪಿ.ಸಿ:-

    ದಿನಾಂಕ: 07-08-2021 ರಂದು ರಾತ್ರಿ 9.30 ಗಂಟೆಯಲ್ಲಿ ಫಿರ್ಯಾದಿದಾರರಾದ ಹರೀಶ್ ಬಿನ್ ನರಸಿಂಹಯ್ಯ, ಸುಮಾರು 40 ವರ್ಷ, ದೋಬಿ ಜನಾಂಗ, ಜಿರಾಯ್ತಿ ಕೆಲಸ, ವಾಸ: ಆನೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ತಮ್ಮ ಗ್ರಾಮದ ಪ್ರಶಾಂತ್ ರವರೊಂದಿಗೆ ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆ ನರಸಿಂಹಯ್ಯ ರವರಿಗೆ 1ನೇ ನಾಗರಾಜ ಆದ ತಮ್ಮ ಅಣ್ಣ, 2ನೇ ಹರೀಶ್ ಆದ ತಾನು, 3ನೇ ಲೋಕೇಶ್ ಆದ ತನ್ನ ತಮ್ಮ ಮೂರು ಜನ ಮಕ್ಕಳಿರುತ್ತೇವೆ. ತಮ್ಮ ಅಣ್ಣನಾದ ನಾಗರಾಜ ರವರು ತಮ್ಮ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದರು. ತಮ್ಮ ಅಣ್ಣನಾದ ನಾಗರಾಜ ರವರು ಈ ದಿನ ದಿನಾಂಕ: 07-08-2021 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಆತನ ಬಾಬತ್ತು ನಂ. ಕೆಎ-40-ಇಎ-4437 ಸ್ಕೂಟಿಯಲ್ಲಿ ನಮ್ಮ ಗ್ರಾಮದ ಗೇಟ್ ನಿಂದ ನಮ್ಮ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಮೀನಿನ ಪ್ಯಾಕ್ಟರಿ ಬಳಿ ಹೋಗುತ್ತಿದ್ದಾಗ ಶಿಡ್ಲಘಟ್ಟ ಟೌನ್ ವಾಸಿಗಳಾದ ತೇಜಸ್ @ ಉತ್ತೇಜ್ ನಾಯ್ಡು ರವರು ಪಲ್ಸರ್ ದ್ವಿಚಕ್ರ ವಾಹನದಲ್ಲಿ ಚಮಕ್ ನೀಡಿದ್ದು ಆಗ ತಮ್ಮ ಅಣ್ಣನಿಗೆ ಮತ್ತು ತೇಜಸ್ ರವರಿಗೆ ಗಲಾಟೆಗಳಾಗಿದ್ದು ಸದರಿ ವಿಚಾರದಲ್ಲಿ ತಮ್ಮ ಅಣ್ಣ ತೇಜಸ್ ರವರ ದ್ವಿಚಕ್ರ ವಾಹನದ ಕೀ ಕಿತ್ತುಕೊಂಡು ನೀನು ನಿಮ್ಮ ಕಡೆಯವರನ್ನು ಯಾರನ್ನು ಕರೆದುಕೊಂಡು ಬರುತ್ತೀಯೋ ಕರೆದುಕೊಂಡು ಬಾ ಎಂದು ಕಳುಹಿಸಿದ್ದು, ಸ್ವಲ್ಪ ಸಮಯದ ನಂತರ ಸಂಜೆ 4.30 ಗಂಟೆಯಲ್ಲಿ ತೇಜಸ್ ಕಡೆಯವರು ತಮ್ಮ ಗ್ರಾಮದ ಗೇಟ್ ಬಳಿ ಬಂದು ತಮ್ಮ ಅಣ್ಣನಿಗೆ ಸಮಾದಾನ ಮಾಡಿ ದ್ವಿಚಕ್ರ ವಾಹನದ ಕೀಯನ್ನು ತೇಜಸ್ ರವರಿಗೆ ಕೊಡಿಸಿದ್ದು ತೇಜಸ್ ರವರು ನಮ್ಮ ಅಣ್ಣನ ಬಳಿಗೆ ಬಂದು ನಿಮ್ಮಮ್ಮನ್ನೆ ಕ್ಯಾಯ ನನ್ನ ಬೈಕ್ ನ್ನೆ ಕಿತ್ತುಕೊಳ್ಳುತ್ತೀಯ ನಿನ್ನನ್ನು ಈ ದಿನ ಮುಗಿಸದೆ ಬಿಡುವುದಿಲ್ಲ ಎಂದು ಬೈದು ಅಲ್ಲಿಯೇ ಇದ್ದ ಯಾವುದೋ ಒಂದು ಸೈಕಲ್ ನ್ನು ಎತ್ತಿ ನಮ್ಮ ಅಣ್ಣ ಮೇಲೆ ಹಾಕಿದ್ದು ಕೂಡಲೇ ನಮ್ಮ ಅಣ್ಣ ನೆಲಕ್ಕೆ ಕುಸಿದು ಬಿದ್ದಿದ್ದು, ಕೂಡಲೇ ಅಲ್ಲಿಯೇ ಇದ್ದ ನಮ್ಮ ಗ್ರಾಮದ ವೀರಣ್ಣ ಬಿನ್ ರಾಮಣ್ಣ, ಆತನ ಹೆಂಡತಿ ಶ್ರೀಮತಿ ಅನುಸೂಯಮ್ಮ ಹಾಗೂ ಇತರರು ತಮ್ಮ ಅಣ್ಣನಿಗೆ ಉಪಚರಿಸಿ ವಿಚಾರವನ್ನು ತನಗೆ ತಿಳಿಸಿದ್ದು, ತಾನು ಹಾಗೂ ತಮ್ಮ ಗ್ರಾಮದ ಇತರರು ನಮ್ಮ ಅಣ್ಣನನ್ನು ನಮ್ಮ ಗ್ರಾಮದ ಅಮರ್ ರವರ ಆಟೋದಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿಕೊಂಡು ಬರುಷ್ಟರಲ್ಲಿ ಮಾರ್ಗ ಮದ್ಯೆ ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ. ದ್ವಿಚಕ್ರ ವಾಹನದಲ್ಲಿ ತಮ್ಮ ಅಣ್ಣನಿಗೆ ಚಮಕ್ ಕೊಟ್ಟಿದ್ದು ಸದರಿ ವಿಚಾರದಲ್ಲಿ ಬುದ್ದಿವಾದ ಹೇಳಿದ್ದಕ್ಕೆ ತಮ್ಮ ಅಣ್ಣನ ಮೇಲೆ ಸೈಕಲ್ ಎತ್ತಿ ಹಾಕಿ ಆತನನ್ನು ಕುಸಿಯುವಂತೆ ಮಾಡಿ ಆತನನ್ನು ಕೊಲೆ ಮಾಡಿರುವ ಶಿಡ್ಲಘಟ್ಟ ಟೌನ್ ವಾಸಿಗಳಾದ ತೇಜಸ್ @ ಉತ್ತೇಜ್ ನಾಯ್ಡು ಮತ್ತು ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 260/2021 ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 08-08-2021 07:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080