ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 179/2021 ಕಲಂ. 504,323,324 ಐ.ಪಿ.ಸಿ:-

  ದಿನಾಂಕ: 07/07/2021 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾರರಾದ ಪ್ರಸಾದ್ ನಾಯ್ಕ ಬಿನ್ ನರಸೇನಾಯ್ಕ, 38 ವರ್ಷ, ಲಂಬಾಣಿ ಜನಾಂಗ, ಜಿರಾಯ್ತಿ, ವಾಸ ಮರವಪಲ್ಲಿ ತಾಂಡ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 30/06/2021 ರಂದು ಬೆಳಿಗ್ಗೆ ಜಮೀನು ವಿಚಾರವಾಗಿ ನನ್ನ ತಮ್ಮನಾದ ಕೃಷ್ಣೇನಾಯ್ಕ ರವರು ನನ್ನ ಹೆಂಡತಿ ಗಿರಿಜಮ್ಮಳಿಗೆ ಕೆಟ್ಟ ಶಬ್ದಗಳಿಂದ ಬೈಯ್ದಿರುತ್ತಾರೆ. ಈ ವಿಚಾರವನ್ನು ಸಂಜೆ ನಾನು ಮನೆಗೆ ಹೋದಾಗ ನನ್ನ ಹೆಂಡತಿ ನನಗೆ ತಿಳಿಸಿರುತ್ತಾರೆ. ಈ ವಿಚಾರವಾಗಿ ರಾತ್ರಿ ಸುಮಾರು 9-00 ಗಂಟೆಯಲ್ಲಿ  ನಾನು ನನ್ನ ತಮ್ಮನಿಗೆ ನಮ್ಮ ತಂದೆಯ ಹೆಸರಿನಲ್ಲಿರುವ ಜಮೀನು ಅನ್ನು ನಾನು ನನ್ನ ಅಣ್ಣ ಮತ್ತು ನನ್ನ ತಮ್ಮ ಕೃಷ್ಣೇನಾಯ್ಕ ರವರು ಮೂರು ಜನ ಉಳುಮೆ ಮಾಡಿಕೊಳ್ಳುತ್ತಿದ್ದು, ನನ್ನ ಪಾಲಿನ ಜಮೀನನ್ನು ಯಾಕೇ ನೀನು ಮಾಡಿದ್ದು ಎಂದು ಕೇಳಿದಕ್ಕೆ ನನ್ನ ಮೇಲೆ ಜಗಳ ತೆಗೆದು ಕೈಗಳಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ನನ್ನ ತಲೆಗೆ ಹೊಡೆದಿರುತ್ತಾನೆ. ನಂತರ ಅಲ್ಲೆ ಇದ್ದ ನನ್ನ ಅಣ್ಣನಾದ ವೆಂಕಟರಾಮೇನಾಯ್ಕ ರವರು ಜಗಳ ಬಿಡಿಸಿದ್ದು, ನನ್ನ ಅಣ್ಣನ ಮಗನಾದ ಗಿರೀಶನು ನನ್ನನ್ನು ಆಟೋವಿನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ನಂತರ ವೈದ್ಯರ ಸಲಹೆ ಮೇರೆಗೆ  ಚಿಕ್ಕಬಳ್ಳಾಪುರ ನಂತರ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು, ನನ್ನ ಹೆಂಡತಿ ಮತ್ತು ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ನನಗೆ ಕಲ್ಲಿನಿಂದ ತಲೆಗೆ ಹೊಡೆದು ರಕ್ತ ಗಾಯಪಡಿಸಿದ ಕೃಷ್ಣೇನಾಯ್ಕ ಬಿನ್ ನರಸೇನಾಯ್ಕ, 32 ವರ್ಷ, ಮರವಪಲ್ಲಿ ತಾಂಡ ಗ್ರಾಮ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 180/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ: 08/07/2021 ರಂದು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಹೆಚ್ ಸಿ-257 ರವರು ಭೇಟಿ ನೀಡಿ ಮೆಮೋ ಪಡೆದು ಗಾಯಾಳು ನಾಗರಾಜಪ್ಪ ಬಿನ್ ಲೇಟ್ ಆದಿಮೂರ್ತಿ 53ವರ್ಷ, ಬಲಜಿಗರು, ಕೂಲಿಕೆಲಸ, ವಾಸ: 5ನೇ ವಾರ್ಡ್, ಬಾಗೇಪಲ್ಲಿ ಪುರ ರವರು ನೀಡಿದ  ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 10-15 ಗಂಟೆಗೆ ಹಾಜರುಪಡಿಸಿದ ಹೇಳಿಕೆಯ ದೂರಿನ  ಸಾರಾಂಶವೇನೆಂದರೆ ದಿನಾಂಕ: 03/07/2021 ರಂದು ಬೆಳಿಗ್ಗೆ ಸುಮಾರು 9-30 ಗಂಟೆ ಸಮಯದಲ್ಲಿ ನನ್ನ ಬಾಬತ್ತು ಕೆಎ 05  ಇವಿ 8108 ನೋಂದಣಿ ಸಂಖ್ಯೆಯ ಬಜಾಜ್ ಡಿಸ್ಕವರಿ ಕಂಪನಿಯ ದ್ವಿಚಕ್ರ ವಾಹನದಲ್ಲಿ ಸ್ವಂತ ಕೆಲಸದ ನಿಮಿತ್ತ ಪೂಲವಾರಿಪಲ್ಲಿ ಗ್ರಾಮಕ್ಕೆ ಹೋಗಿ ವಾಪಸ್ಸು ಬಾಗೇಪಲ್ಲಿ ಪುರಕ್ಕೆ ಬರಲು ಪೂಲವಾರಿಪಲ್ಲಿ ಕ್ರಾಸ್ ಬಳಿ ಎನ್ ಹೆಚ್-44ರಲ್ಲಿ ಚಿಕ್ಕಬಳ್ಳಾಪುರ ದಿಂದ ಬಾಗೇಪಲ್ಲಿ ಕಡೆಗೆ ಹೋಗುವ ರಸ್ತೆಯ ಪುಟ್ ಪಾತ್ ನಲ್ಲಿ ದ್ವಿಚಕ್ರ ವಾಹನದ ಮೇಲೆ ಕುಳಿತಿದ್ದಾಗ ಕೆಎ 05 ಕೆಜಿ 4327 ನೋಂದಣಿ ಸಂಖ್ಯೆಯ ಯಮಹ ಎಫ್ Z ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನದ ಮೇಲೆ ಕುಳಿತಿದ್ದ ನನಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ ನನ್ನ ಬಲಗಾಲಿಗೆ, ಮೊಣಕಾಲಿನ ಕೆಳಭಾಗಕ್ಕೆ, ಬಲಗೈ ಹೆಬ್ಬೆರಳಿಗೆ ರಕ್ತಗಾಯವಾಗಿದ್ದು ದ್ವಿಚಕ್ರ ವಾಹನದ ಬಲಭಾಗದಲ್ಲಿ ಜಖಂಗೊಂಡಿರುತ್ತೆ. ನಂತರ ಅಲ್ಲೇ ಇದ್ದ ರವಿಕುಮಾರ್ ಮತ್ತು ಗೌತಮ್ ಎಂಬುವವರು ನನ್ನನ್ನು ಉಪಚರಿಸಿ ಸರ್ಕಾರಿ ಆಂಬುಲೆನ್ಸ್ ನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆ ಚಿಕಿತ್ಸೆಗಾಗಿ ದಾಖಲಾಗಿದ್ದು ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ವೈದ್ಯರ ಸಲಹೆ ಮೇರೆಗೆ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ನನಗೆ ಡಿಕ್ಕಿ ಹೊಡೆಸಿ ರಕ್ತಗಾಯ ಪಡಿಸಿರುವ ಕೆಎ 05 ಕೆಜಿ 4327 ನೋಂದಣಿ ಸಂಖ್ಯೆಯ ಯಮಹ ಎಫ್ Z ದ್ವಿಚಕ್ರ ವಾಹನದ ಸವಾರನ ವಿರುದ್ದ ಕಾನೂನು ರೀತ್ಯ ಕ್ರಮಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಸಿ.ಇ.ಎನ್ ಪೊಲೀಸ್‌ ಠಾಣೆ ಮೊ.ಸಂ.32/2021 ಕಲಂ. 419,420 ಐ.ಪಿ.ಸಿ & 66(D) INFORMATION TECHNOLOGY  ACT 2000:-

  ದಿನಾಂಕ: 08-07-2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರಾದ ಜ್ಷಾನೇಶ್ವರ್ ಜಿ ವಿ ಬಿನ್ ಲೇಟ್ ಸೋಮಶೇಖರ್ ಜಿ ವಿ, 42 ವರ್ಷ, ಲಿಂಗಾಯಿತರು, ಟೆಕ್ನಿಕಲ್ ಸಪೋರ್ಟ ಇಂಜಿನಿಯರ್ ಕೆಲಸ, ವಾಸ ಡಿವಿಜಿ ಪೇಟೆ, ಚಿಕ್ಕಬಳ್ಳಾಪುರ ಟೌನ್, ಮೊ ಸಂಖ್ಯೆ:9741894707 ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಟೈಪ್ ಮಾಡಿರುವ ದೂರಿನ ಸಾರಾಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಿದ್ದು ಖಾಸಗಿ ಕಂಪನಿಯಲ್ಲಿ ಟೆಕ್ನಿಕಲ್ ಸಪೋರ್ಟ, ಇಂಜಿನಿಯರ್ ಆಗಿ ಕೆಲಸವನ್ನು ಮಾಡುತ್ತಿರುತ್ತೇನೆ. ನಾನು ಚಿಕ್ಕಬಳ್ಳಾಪುರ ಟೌನ್ ನಿಲ್ಲಿ ಹೆಚ ಡಿ ಎಪ್ ಸಿ  ಬ್ಯಾಂಕ್ ನಲ್ಲಿ ಅಕೌಂಟ್ ನಂ:25831000010112 ರಂತೆ ಖಾತೆಯನ್ನು ಹೊಂದಿದ್ದು, ಸದರಿ ಖಾತೆಗೆ ಎ ಟಿ ಎಂ ಕಾರ್ಢ ನ್ನು  ಹೊಂದಿದ್ದು, ಸದರಿ ಖಾತೆಗೆ ಮೊ ಸಂಖ್ಯೆ:  9741894707 ನ್ನು ಲಿಂಕ್ ಮಾಡಿಕೊಂಡು ಅಮೇಜಾನ್ ವ್ಯಾಲೆಟ್ ಲ್ಲಿ ನನ್ನ ಹಣ ಕಾಸಿನ ವ್ಯವಹಾರಗಳನ್ನು ಮಾಡುತ್ತಿರುತ್ತೇನೆ.  ಈಗಿರುವಲ್ಲಿ ದಿನಾಂಕ:22/6/2021 ರಂದು ನನ್ನ ಮೊಬೈಲ್ ಗೆ ಒಂದು ಸಂದೇಶ ಬಂದಿತ್ತು.ಅದನ್ನು ನೋಡಲಾಗಿ Amazon part-time job, mobile phone operation anytime, anywhere to earn 1000-3000 Rs per day, please add a teacher's whats-app:bit.ly/3pIYpjz  ಅಂತ ಸಂದೇಶ  ಇತ್ತು. ನಂತರ ಕೆಲಸದ ಬಿಡುವಿನ  ಅವಧಿಯಲ್ಲಿ  ಹಣ ಸಂಪಾದಿಸೋಣವೆಂತ ಯೋಚಿಸಿ   ಈ ಸಂದೇಶದಲ್ಲಿನ ಲಿಂಕ್ ಓಪನ್ ಮಾಡಿದ್ದು. ಅದರಲ್ಲಿ ಮೊ ಸಂಖ್ಯೆ:9863230639  &  7900539030  ಇದ್ದು. ನಾನು ಸದರಿ ಸಂದೇಶದಲ್ಲಿನ ಲಿಂಕ್ ನ್ನು ಓಪನ್  ಮಾಡಿದ್ದು, ಅದರಲ್ಲಿ ಒಂದು ಲಿಂಕ್ ನ್ನು ಕಳುಹಿಸುತ್ತೇವೆಂತ https://eshopjobgo.com/index.php/Home/Public/reg/smid/1824894  ನ್ನು ಕಳುಹಿಸಿದರು. ಇದರಲ್ಲಿ ನಾನು ಲಾಗಿನ್ ಆಗಿದ್ದು, ನೀವು ಮೊದಲು  300/- ರೂಗಳನ್ನು ಕಟ್ಟಿ ರಿಜಿಸ್ಟರ್  ಮಾಡಬೇಕು. ಅಂತ ಹೇಳಿದರು.ಅದರಂತೆ ನನ್ನ ಮೇಲ್ಕಂಡ ಖಾತೆಯಿಂದ ಅಮೆಜಾನ್ ವ್ಯಾಲೆಟ್ ಮೂಲಕ 300/- ರೂಗಳನ್ನು ಕಳುಹಿಸಿ ರಿಜಿಸ್ಟರ್ ಮಾಡಿಕೊಂಡೆ. ನಂತರ  ಪ್ರತಿ ದಿನ ನಾವು ಕೊಡುವ ಆರ್ಢರ್ ಗಳನ್ನು ಕಂಪ್ಲೀಟ್ ಮಾಡಬೇಕು ಅಂತ ತಿಳಿಸಿದರು. ನಂತರ  ದಿನಕ್ಕೆ 10 ಆರ್ಢರ್ ಟಾಸ್ಕ್ ಕಂಪ್ಲೀಟ್ ಮಾಡಬೇಕು ಅಂದರು. ಆ ದಿನ ನನಗೆ ನೀಡಿದ್ದ ಆರ್ಢರ್ ಟಾಸ್ಕ್ ಕಂಪ್ಲೀಟ್  ಮಾಡಲು ಸಾದ್ಯವಾಗಿರುವುದಿಲ್ಲ. ನಾನು ಮಾಡಿದ ಕೆಲಸದ ಮೊತ್ತಕ್ಕೆ ಅವರು ನೀಡಿದ್ದ ಮೊತ್ತ  ಜಾಸ್ತಿ ಇತ್ತು ಅದರಿಂದ ಮುಂದೆ ಹೋಗಲು & ಹಣ  ಡ್ರಾ ಮಾಡಲು ಆಪ್ ನಲ್ಲಿ ಆಪ್ ಷನ್ ಬಿಟ್ಟಿರುವುದಿಲ್ಲ. ಆದ ಕಾರಣ  ಅವರು ನೀಡಿದ್ದ ಮೊತ್ತಕ್ಕೆ  ನನ್ನ ಖಾತೆಯಿಂದ 10000/- ರೂಗಳ ಹಣವನ್ನು ಕಳುಹಿಸಿ ಟಾಪ್ ಆಪ್ ಮಾಡಿಕೊಂಡೆ. ನಂತರ ದಿನಾಂಕ:24/6/2021 ರಂದು ಟಾಸ್ಕ್ ಗಳನ್ನು ಆ ದಿನ ಸಹ ಕಂಪ್ಲೀಟ್  ಮಾಡಲಾಗಲಿಲ್ಲ. ನಂತರ  ಆ ದಿನ ಸಹ ಅವರು ನೀಡಿದ ಮೊತ್ತಕ್ಕೆ  ನಾನು ಟಾಸ್ಕ್ನಲ್ಲಿ ಗಳಿಸಿದ ಮೊತ್ತ ಕಡಿಮೆ ಇತ್ತು. ಪುನಃ ಆ ಮೊತ್ತಕ್ಕೆ 26,168/- ರೂಗಳನ್ನು ನನ್ನ ಮೇಲ್ಕಂಡ ಖಾತೆಯಿಂದ ಕಳುಹಿಸಿ ಟಾಪ್ ಆಪ್ ಮಾಡಿಕೊಂಡೆ. ನಂತರ ಹಣ ಡ್ರಾ ಮಾಡಲು ಪ್ರಯತ್ನಿಸಿದಾಗ ಹಣ ಬಂದಿರುವುದಿಲ್ಲ.  ಅದೇ ರೀತಿ ದಿನಾಂಕ:25/6/2021 ರಂದು 29174/- ರೂಗಳನ್ನು, ದಿನಾಂಕ;26/6/2021 ರಂದು 1,29,226  ರೂಗಳನ್ನು ಟಾಪ್ ಅಪ್, ಟಾಪ್ ಅಪ್ ಅಂತ ನನ್ನಿಂದ  ಒಟ್ಟು  1,94,568/- ರೂಗಳನ್ನು ಅಕ್ರಮವಾಗಿ ನನ್ನಿಂದ ಪಡೆದು ಆನ್ ಲೈನ್ ಮೂಲಕ ವಂಚಿಸಿರುತ್ತಾನೆ. ಸದರಿ ಆರೋಪಿತರು “eshop jobgo” ಹೆಸರಿನಲ್ಲಿ ನನಗೆ ಪಾರ್ಟ ಟೈಂ ಜಾಬ್ ಕೊಡುವುದಾಗಿ ನಂಬಿಸಿ ನಾನು ಕಂಪ್ಲೀಟ್ ಮಾಡಲು ಸಾದ್ಯವಾಗದಂತಹ  ಟಾಸ್ಕ್ ಗಳನ್ನು ಕೊಟ್ಟು, ಹಣವನ್ನು ಟಾಪ್ ಆಪ್ ಮಾಡಿಸಿಕೊಂಡು ಒಟ್ಟು  1,94,568/- ರೂಗಳನ್ನು ವಂಚಿಸಿರುತ್ತಾರೆ. ಸದರಿ “ eshop jobgo” ಕಛೇರಿಯ ವಿಳಾಸ  eshopjobgo. com,Lower Parel(W), Ganpatrao Kadan Marg, 17 th Flour, Block-A, Urmi Estate, Mumbai-400001.   ಅಂತ  ಇದ್ದು, ಮೇಲ್ಕಂಡ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

4. ಚಿಕ್ಕಬಳ‍್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.36/2021 ಕಲಂ. 279 ಐ.ಪಿ.ಸಿ & 184,196,177 INDIAN MOTOR VEHICLES ACT:-

  ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ವೇಣುಗೋಪಾಲ ಎಂ ಎ.ಎಸ್.ಐ ಆದ ನಾನು ದಿನಾಂಕ:08/07/2021 ರಂದು ಬೆಳಿಗ್ಗೆ ಸುಮಾರು 10-45 ಗಂಟೆಯ ಸಮಯದಲ್ಲಿ ನಾನು ಮತ್ತು ಸಿಬ್ಬಂದಿರವರಾದ ಸಿ.ಪಿ.ಸಿ-241 ಶ್ರೀ.ರಾಜಶೇಖರ್ ಗುಂಜೆಟ್ಟಿ ಹಾಗೂ ಸಿ.ಪಿ.ಸಿ-243 ಶ್ರೀ.ನಾಗರಾಜ ನಾಯ್ಕ್ ಎಸ್ ರವರೊಂದಿಗೆ ನಮ್ಮ ಠಾಣಾ ಸರಹದ್ದಾದ ವಾಪಸಂದ್ರ ಬಳಿ ಸ್ಥಳದಂಡ ವಿಧಿಸುತ್ತಿರುವಾಗ ಅದೇ ಸಮಯಕ್ಕೆ ಮಂಚನಬಲೆ ಬ್ರಿಡ್ಜ್ ನಿಂದ ವಾಪಸಂದ್ರ ಕಡೆಗೆ ಹೈದರಾಬಾದ್ – ಬೆಂಗಳೂರು ಹೋಗುವ ಎನ್.ಹೆಚ್-44 ಬೈಪಾಸ್ ಏಕ ಮುಖ ರಸ್ತೆಯಲ್ಲಿ ವೇಗವಾಗಿ ಸಾರ್ವಜನಿಕರ ಪ್ರಾಣಕ್ಕೆ ಹಾನಿ ಉಂಟಾಗುವ ರೀತಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದ ಈಚರ್ ಕ್ಯಾಂಟರ್ ವಾಹನವನ್ನು ತಡೆದು ನಿಲ್ಲಿಸಲಾಗಿ ಸದರಿ ವಾಹನದ ನೊಂದಣಿ ಸಂಖ್ಯೆಯನ್ನು ನೋಡಲಾಗಿ AP-39-U-3480 ರ ಕ್ಯಾಂಟರ್ ವಾಹನವಾಗಿದ್ದು, ಸದರಿ ವಾಹನದ ಚಾಲಕನ ಹೆಸರು ಮತ್ತು ವಿಳಾಸ ಕೇಳಲಾಗಿ ಮಂಜುನಾಥ ಪಿ ಬಿನ್ ಪಿ ಚೆಂಗಪ್ಪ 38 ವರ್ಷ, ನಂ-1-56, ಕೃಷ್ಣಪುರಂ ಗ್ರಾಮ, ಧನಮೈಗಿರಿ ಅಂಚೆ, ಈ ಕೋಟಾ ಮಂಡಲಂ, ಪಳಮನೇರ್ ತಾಲ್ಲೂಕು, ಚಿತ್ತೂರು ಜಿಲ್ಲೆ, ಆಂದ್ರಪ್ರದೇಶ ಎಂತ ತಿಳಿಸಿದ್ದು ಸದರಿ ಚಾಲಕನನ್ನು ವಾಹನದ ದಾಖಲೆಗಳನ್ನು ಹಾಗೂ ಚಾಲಕನ ಚಾಲನಾ ಪರವಾನಿಗೆಯನ್ನು ಕೇಳಲಾಗಿ ಚಾಲನಾ ಪರವಾನಿಗೆ ನೀಡಿದ್ದು ಸದರಿ ವಾಹನದ ದಾಖಲೆಗಳು ವಾಹನದ ಮಾಲೀಕರ ಬಳಿ ಇರುವುದಾಗಿ ತಿಳಿಸಿದ್ದು ಸದರಿ ಮೇಲ್ಕಂಡ AP-39-U-3480 ರ ಕ್ಯಾಂಟರ್ ವಾಹನವನ್ನು ಚಾಲಕನ ಸಮೇತ ಬೆಳಿಗ್ಗೆ 11-00 ಗಂಟೆಗೆ ಸಿಪಿಸಿ-243 ನಾಗರಾಜ ನಾಯ್ಕ್ ಎಸ್ ರವರೊಂದಿಗೆ ಠಾಣೆಗೆ ತೆಗೆದುಕೊಂಡು ಬಂದು ಮೇಲ್ಕಂಡಂತೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ಕ್ಯಾಂಟರ್ ವಾಹನದ ಚಾಲಕನ ಮೇಲೆ ಠಾಣಾ ಮೊ.ಸಂ: 36/2021 ಕಲಂ: 279 ಐಪಿಸಿ ರೆ/ವಿ 184, 196, 177 ಐ.ಎಂ.ವಿ ಆಕ್ಟ್ ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ಚಿಕ್ಕಬಳ‍್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.37/2021 ಕಲಂ. 279 ಐ.ಪಿ.ಸಿ & 184,196,177 INDIAN MOTOR VEHICLES ACT:-

  ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ವೇಣುಗೋಪಾಲ ಎಂ ಎ.ಎಸ್.ಐ ಆದ ನಾನು ದಿನಾಂಕ:08/07/2021 ರಂದು ಮಧ್ಯಾಹ್ನ ಸುಮಾರು 12-30 ಗಂಟೆಯ ಸಮಯದಲ್ಲಿ ನಾನು ಮತ್ತು ಸಿಬ್ಬಂದಿರವರಾದ ಸಿ.ಪಿ.ಸಿ-241 ಶ್ರೀ.ರಾಜಶೇಖರ್ ಗುಂಜೆಟ್ಟಿ ಹಾಗೂ ಸಿ.ಪಿ.ಸಿ-243 ಶ್ರೀ.ನಾಗರಾಜ ನಾಯ್ಕ್ ಎಸ್ ರವರೊಂದಿಗೆ ನಮ್ಮ ಠಾಣಾ ಸರಹದ್ದಾದ ವಾಪಸಂದ್ರ ಬಳಿ ಸ್ಥಳದಂಡ ವಿಧಿಸುತ್ತಿರುವಾಗ ಅದೇ ಸಮಯಕ್ಕೆ ಮಂಚನಬಲೆ ಬ್ರಿಡ್ಜ್ ನಿಂದ ವಾಪಸಂದ್ರ ಕಡೆಗೆ ಹೈದರಾಬಾದ್ – ಬೆಂಗಳೂರು ಹೋಗುವ ಎನ್.ಹೆಚ್-44 ಬೈಪಾಸ್ ಏಕ ಮುಖ ರಸ್ತೆಯಲ್ಲಿ ವೇಗವಾಗಿ ಸಾರ್ವಜನಿಕರ ಪ್ರಾಣಕ್ಕೆ ಹಾನಿ ಉಂಟಾಗುವ ರೀತಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದ ಈಚರ್ ಮಿನಿ ಲಾರಿ ವಾಹನವನ್ನು ತಡೆದು ನಿಲ್ಲಿಸಲಾಗಿ ಸದರಿ ವಾಹನದ ನೊಂದಣಿ ಸಂಖ್ಯೆಯನ್ನು ನೋಡಲಾಗಿ KA-41-A-3578 ರ ವಾಹನವಾಗಿದ್ದು, ಸದರಿ ವಾಹನದ ಚಾಲಕನ ಹೆಸರು ಮತ್ತು ವಿಳಾಸ ಕೇಳಲಾಗಿ ರಾಜು ಬಿನ್ ಹೈಗಾನಾರ್ ವಿ 32 ವರ್ಷ, ಪ.ಜಾತಿ, ನಂ-411, 11ನೇ ಕ್ರಾಸ್, ಯರೂಬ್ ನಗರ, ಬಿ.ಎಸ್.ಕೆ 2 ನೇ ಸ್ಟ್ರೀಟ್, ಬೆಂಗಳೂರು ಎಂತ ತಿಳಿಸಿದ್ದು ಸದರಿ ಚಾಲಕನನ್ನು ವಾಹನದ ದಾಖಲೆಗಳನ್ನು ಹಾಗೂ ಚಾಲಕನ ಚಾಲನಾ ಪರವಾನಿಗೆಯನ್ನು ಕೇಳಲಾಗಿ ವಾಹನದ ದಾಖಲೆಗಳು ನನ್ನ ಬಳಿ ಇಲ್ಲವೆಂತ ತಿಳಿಸಿದ್ದು ತಿಳಿಸಿದ್ದು ಸದರಿ ಮೇಲ್ಕಂಡ KA-41-A-3578 ರ ಮಿನಿಲಾರಿ ವಾಹನವನ್ನು ಚಾಲಕನ ಸಮೇತ ಬೆಳಿಗ್ಗೆ 12-45 ಗಂಟೆಗೆ ಸಿಪಿಸಿ-241 ನಾಗರಾಜ ನಾಯ್ಕ್ ಎಸ್ ರವರೊಂದಿಗೆ ಠಾಣೆಗೆ ತೆಗೆದುಕೊಂಡು ಬಂದು ಮೇಲ್ಕಂಡಂತೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ಕ್ಯಾಂಟರ್ ವಾಹನದ ಚಾಲಕನ ಮೇಲೆ ಠಾಣಾ ಮೊ.ಸಂ: 37/2021 ಕಲಂ: 279 ಐಪಿಸಿ ರೆ/ವಿ 184, 181, 196, 177 ಐ.ಎಂ.ವಿ ಆಕ್ಟ್ ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.302/2021 ಕಲಂ. 279,337 ಐ.ಪಿ.ಸಿ :-

  ದಿನಾಂಕ: 07/07/2021 ರಂದು ಸಂಜೆ 7.00 ಗಂಟೆಗೆ ಮುನಿರೆಡ್ಡಿ ಬಿನ್ ಲೇಟ್ ಮುನಿಸ್ವಾಮಿರೆಡ್ಡಿ, 34 ವರ್ಷ, ವಕ್ಕಲಿಗರು, ಗಾರೆಕೆಲಸ, ಚೊಕ್ಕಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಅಣ್ಣನಾದ ಸಿ.ಎಂ.ಆಂಜನೇಯರೆಡ್ಡಿ ರವರಿಗೆ 36 ವರ್ಷ ವಯಸ್ಸಾಗಿದ್ದು ಜಿರಾಯ್ತಿ ಮಾಡಿಕೊಂಡಿರುತ್ತಾನೆ. ಈ ದಿನ ದಿನಾಂಕ: 07/07/2021 ರಂದು ಸಂಜೆ ತನ್ನ ಅಣ್ಣ ಸಿ.ಎಂ.ಆಂಜನೇಯರೆಡ್ಡಿ ರವರು ಕೆಲಸದ ನಿಮಿತ್ತ ತನ್ನ ಬಾಬ್ತು ಕೆಎ-53 ಜೆ-8487 ನೊಂದಣಿ ಸಂಖ್ಯೆಯ ಹೀರೋ ಹೋಂಡಾ ಸ್ಲೆಂಡರ್ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿಗೆ ಬಂದಿರುತ್ತಾರೆ. ಇದೇ ದಿನ ಸಂಜೆ 4.50 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಾಸಿಯಾದ ರೆಡ್ಡಪ್ಪ ಬಿನ್ ಕೃಷ್ಣಪ್ಪ ರವರು ತನಗೆ ಪೋನ್ ಮಾಡಿ ನಿನ್ನ ಅಣ್ಣ ಸಿ.ಎಂ.ಆಂಜನೇಯರೆಡ್ಡಿ ರವರಿಗೆ ಚಿಂತಾಮಣಿ-ಬಾಗೇಪಲ್ಲಿ ರಸ್ತೆಯ ರೈಲ್ವೆ ಬ್ರಿಡ್ಜ್ ಮತ್ತು ಪೆಟ್ರೋಲ್ ಬಂಕ್ ಮದ್ಯೆ ಅಪಘಾತವಾಗಿರುವುದಾಗಿ ತಿಳಿಸಿರುತ್ತಾನೆ. ಆಗ ತಮ್ಮ ಗ್ರಾಮದಲ್ಲಿದ್ದ ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ಸಂಗತಿ ನಿಜವಾಗಿದ್ದು ರಸ್ತೆಯ ಬದಿಯಲ್ಲಿ ಜನರು ಸೇರಿದ್ದು, ತನ್ನ ಅಣ್ಣನ ಬಲಕಾಲಿಗೆ, ತಲೆಗೆ ಮತ್ತು ಮೈ-ಕೈಗೆ ರಕ್ತಗಾಯಗಳಾಗಿರುತ್ತೆ. ರಸ್ತೆಯ ಬದಿಯಲ್ಲಿ ತನ್ನ ಅಣ್ಣನ ದ್ವಿಚಕ್ರ ವಾಹನವಿದ್ದು ವಾಹನವು ಜಖಂ ಆಗಿರುತ್ತೆ. ಇದರ ಎದುರುಗಡೆ ಕೆಎ-05 ಎಬಿ-8991 ನೊಂದಣಿ ಸಂಖ್ಯೆಯ 407 ಟೆಂಪೋ ಇದ್ದು ಸದರಿ ವಾಹನದ ಮುಂಭಾಗದಲ್ಲಿ ಜಖಂ ಆಗಿರುತ್ತೆ. ನಂತರ ತಾನು ಗಾಯಗೊಂಡಿದ್ದ ತನ್ನ ಅಣ್ಣನನ್ನು ಆಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಪಡೆಸಿ ವೈದ್ಯರ ಸಲಹೆಯ ಮೇರೆಗೆ ತನ್ನ ಅಣ್ಣನನ್ನು ತನ್ನ ಬಾಮೈದ ಶ್ರೀನಾಥ ಬಿನ್ ಚಂದ್ರಪ್ಪ ರವರ ಮುಖಾಂತರ ಕೋಲಾರ ನಗರದಲ್ಲಿರುವ ಗೌರವ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇನೆ. ನಂತರ ರೆಡ್ಡಪ್ಪ ಬಿನ್ ಕೃಷ್ಣಪ್ಪ ರವರನ್ನು ಅಪಘಾತದ ಬಗ್ಗೆ ವಿಚಾರ ಮಾಡಲಾಗಿ, ನಿನ್ನ ಅಣ್ಣ ಆಂಜನೇಯರೆಡ್ಡಿ ರವರು ಸಂಜೆ 4.30 ಗಂಟೆ ಸಮಯದಲ್ಲಿ ಚಿಂತಾಮಣಿಯಿಂದ ದ್ವಿಚಕ್ರ ವಾಹನದಲ್ಲಿ ಊರಿಗೆ ಬರುತ್ತಿದ್ದಾಗ, ಎದುರುಗಡೆಯಿಂದ ಬರುತ್ತಿದ್ದ ಕೆಎ-05 ಎಬಿ-8991 ನೊಂದಣಿ ಸಂಖ್ಯೆಯ 407 ಟೆಂಪೋವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿನ್ನ ಅಣ್ಣನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿರುವುದಾಗಿ ತಿಳಿಸಿರುತ್ತಾರೆ. ಸದರಿ ವಾಹನದ ಚಾಲಕನ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲ. ಆದ್ದರಿಂದ ಮೇಲ್ಕಂಡ ಟೆಂಪೋ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.303/2021 ಕಲಂ. 279,337 ಐ.ಪಿ.ಸಿ :-

  ದಿನಾಂಕ: 08/07/2021 ರಂದು ಬೆಂಗಳೂರಿನ ಈಸ್ಟ್ ಪಾಯಿಂಟ್ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ನಾರಾಯಣಸ್ವಾಮಿ ಬಿನ್ ಲೇಟ್ ಪಿಳ್ಳಪ್ಪ, 35 ವರ್ಷ, ಆದಿ ಕರ್ನಾಟಕ ಜನಾಂಗ, ಚಾಲಕ ವೃತ್ತಿ, ನಿಮ್ಮಕಾಯಲಹಳ್ಳಿ ಗ್ರಾಮ, ನಂದಿಗಾನಹಳ್ಳಿ ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 08.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ: 04/07/2021 ರಂದು ಸಂಜೆ 4.00 ಗಂಟೆ ಸಮಯದಲ್ಲಿ ತಾನು ತನ್ನ ಬಾಬತ್ತು KA-07 K-4701 ಹೀರೋ ಸ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಕೆಲಸದ ನೀಮಿತ್ತ ಕುರುಟಹಳ್ಳಿ ಕ್ರಾಸ್ ಗೆ ಹೋಗಿದ್ದು, ಅಲ್ಲಿ ಕೆಲಸ ಮುಗಿಸಿಕೊಂಡು ಊರಿಗೆ ವಾಪಸ್ ಹೋಗಲು ಅದೇ ದಿನ ಸಂಜೆ ಸುಮಾರು 5.30 ಗಂಟೆಯಲ್ಲಿ ಕೋಲಾರ ರಸ್ತೆಯಲ್ಲಿರುವ ಚರ್ಚ್ ಬಳಿ ಬರುತ್ತಿದ್ದಾಗ ತನ್ನ ಎದುರುಗಡೆ ರಸ್ತೆಯಿಂದ ಅಂದರೆ ಚಿಂತಾಮಣಿ ಕಡೆಯಿಂದ ಬರುತ್ತಿದ್ದ ಈಚರ್ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ತಾನು ವಾಹನದ ಸಮೇತ ರಸ್ತೆಯ ಮೇಲೆ ಬಿದ್ದಿದ್ದು, ಆಗ ತನ್ನ ತಲೆ, ಬಲಕೈಗೆ, ಬಲಮೊಣಕಾಲಿಗೆ ಊತಗಾಯಗಳಾಗಿದ್ದು, ಎಡ ಬೆನ್ನಿಗೆ ತರಚಿದ ಗಾಯವಾಗಿರುತ್ತೆ. ಆಗ ತನಗೆ ಡಿಕ್ಕಿ ಹೊಡೆಸಿದ ಈಚರ್ ವಾಹನ ಸ್ಥಳದಲ್ಲಿದ್ದು ಅದರ ನೊಂದಣಿ ಸಂಖ್ಯೆ KA-07-4522 ಆಗಿರುತ್ತೆ. ನಂತರ ತನ್ನನ್ನು ತಮ್ಮ ಗ್ರಾಮದ ಆಂಜಪ್ಪ ಬಿನ್ ಮುನಿಶಾಮಪ್ಪ ಮತ್ತು ರಮೇಶ್ ಬಿನ್ ಲೇಟ್ ಮುನಿಶಾಮಪ್ಪ ರವರುಗಳು ಬಂದು ಉಪಚರಿಸಿ ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಆಸ್ಪತ್ರೆಯಲ್ಲಿ ತನ್ನನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದರ ಮೇರೆಗೆ ತಾನು ಅದೇ ದಿನ ಬೆಂಗಳೂರಿನ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದು ದಾಖಲಾಗಿರುತ್ತೇನೆ. ತಾನು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ದೂರನ್ನು ನೀಡಲು ತಡವಾಗಿರುತ್ತೆ. ಆದ್ದರಿಂದ ತನಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಮೇಲ್ಕಂಡ ನಂಬರ್ KA-07-4522 ನೊಂದಣಿ ಸಂಖ್ಯೆಯ ಈಚರ್ ವಾಹನದ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.158/2021 ಕಲಂ.143,341,323,504,506,149 ಐ.ಪಿ.ಸಿ :-

  ದಿನಾಂಕ: 07-07-2021 ರಂದು 16-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ.ಪುಷ್ಪಲತ @ ಪುಟ್ಟಮ್ಮ ಕೋಂ ಆರ್. ನಾಗರಾಜ, 47 ವರ್ಷ, ನಾಯಕರು, ಪ್ರಶಾಂತ್ ನಗರ, ಬಿ.ಹೆಚ್.ರಸ್ತೆ, ಗೌರಿಬಿದನೂರು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೇಂದರೆ ತನ್ನ ತಾಯಿಯವರಾದ ನೀಲಮ್ಮ ಕೋಂ ಲೇಟ್ ಸೀನಪ್ಪ ರವರು  ದಿನಾಂಕ:05/07/2021 ರಂದು ಸಂಜೆ ಸುಮಾರು 7-15 ಗಂಟೆಯಲ್ಲಿ  ದೈವಾದೀನರಾಗಿದ್ದು, ತನಗೆ ಸುಮಾರು 7-30 ಗಂಟೆಗೆ ವಿಷಯ ತಿಳಿಯಲಾಯಿತು. ದಿನಾಂಕ: 06-07-2021 ರಂದು ಬೆಳಗ್ಗೆ 09-30 ಗಂಟೆಗೆ ತಾನು ಹಾಗೂ ತನ್ನ ಮಕ್ಕಳಾದ 1 ಣೆ ಚೈತನ್ಯ, 2ನೇ ಅಶ್ವಿನಿ, 3 ನೇ ಮಗ  ಅಭಿಷೇಕ್ , ತಾವುಗಳು ಎರಡು ದ್ವಿಚಕ್ರ ವಾಹನಗಳಲ್ಲಿ ತೆರಳಿ ತನ್ನ ತಾಯಿಯವರ ಅಂತಿಮ ದರ್ಶನ ಮಾಡಲು ದೊಡ್ಡಕುರುಗೋಡು ಗ್ರಾಮದಲ್ಲಿ ಜಮೀನಿನಲ್ಲಿ ವಾಸವಾಗಿದ್ದ ಸ್ಥಳಕ್ಕೆ ಹೋದೆವು. ಜಮೀನಿನಲ್ಲೆ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ಸಿದ್ದತೆಗಳು ನಡೆದಿದ್ದು, ತಮಗೆ ಮೆಲ್ನೋಟಕ್ಕೆ ಕಂಡು ಬಂದವು. ತಾನು ತನ್ನ ಮಕ್ಕಳು ಸ್ಥಳಕ್ಕೆ ಹೋಗಿದ ತಕ್ಷಣ ತನ್ನ ತಮ್ಮ ಸುಬ್ಬು @ ಸುಬ್ರಮಣಿ ತನ್ನನ್ನು ತಡೆದು ನೀನು ಇಲ್ಲಿಗೆ ಏತಕ್ಕಾಗಿ ಬಂದೆ, ನಿನ್ನನ್ನು ಇಲ್ಲಿಗೆ ಬರಲು ಯಾರು ಹೇಳಿದರು ಎಂದು ಹೇಳಿ  ಏಕಾ ಏಕಿ ತನ್ನ ತಲೆಗೆ ಹೊಡೆದು ತನ್ನ ಕತ್ತನ್ನು ಹಿಸುಕಲು ಯತ್ನಿಸಿದನು. ಅದೇ ಸಮಯಕ್ಕೆ ತನ್ನ ಎರಡನೇ ತಮ್ಮ ವೆಂಕಟೇಶ ತನ್ನ ಮಗಳಾದ  ಅಶ್ವಿನಿಗೆ ಹೊಡೆಯಬಾರದ ಕಡೆಯಲ್ಲೆಲ್ಲಾ ಹೊಡೆಯಲು ಪ್ರಾರಂಭಿಸಿದನು. ಹಾಗೆ ತನ್ನ  ಮೊದಲನೇ ತಮ್ಮ ಸುಬ್ರಮಣಿ ಹೆಂಡತಿ ನಾಗರತ್ನ ಹಾಗೂ ಅವರ ಮಕ್ಕಳಾದ ಒಂದನೇ ಧನುಷ ಹಾಗೂ ಎರಡನೇ ಮಗಳಾಧ ತನುಶ್ರೀ ಇವರು ಮೂರು ಜನ ತನ್ನ ಮೊದಲನೇ ಮಗಳಾದ ಚೈತನ್ಯಗೆ ಸಿಕ್ಕ ಸಿಕ್ಕಲ್ಲಿ ಹೊಡೆಯಲಾರಂಭಿಸಿದರು.  ಮತ್ತು ತನ್ನ ಎರಡನೇ ತಮ್ಮನಾದ ವೆಂಕಟೇಶ ಅವರ ಪತ್ನಿಯಾದ ಕವಿತ ಕೂಡ ಗಂಡನ ಜೊತೆ ಸೇರಿ ತನ್ನ ಎರಡನೇ ಮಗಳಾದ  ಅಶ್ವಿನಿಗೆ ಹೊಡೆಯಲು ಆರಂಭಿಸಿದನು. ನಂತರ ಸುಬ್ರಮಣಿ ಹಾಗೂ ವೆಂಕಟೇಶ  ಇಬ್ಬರು ಸೇರಿ  ತನ್ನ ಮಗನಾದ ಅಬಿಷೇಕ್ ನನ್ನು ಹಿಡಿದು, ಕೈಕಾಲುಗಳಲ್ಲಿ ತನ್ನ ಮಗನನ್ನು ಹೊಡೆದು ನಿನ್ನು, ನಿನ್ನ ಭಾವನಾದ ಮುರಳೀಧರ್ ಹಾಗು ನಿನ್ನ ತಾಯಿ ಹಾಗೂ ಅಕ್ಕ ತಂಗಿಯರನ್ನು  ಕೊಲೆ ಮಾಡುವುದಾಗಿ  ಹೇಳಿ ಹೆದರಿಸಿ, ತಮ್ಮ ಪ್ರಾಣಕ್ಕೆ ಕುತ್ತು ತರುವುದಾಗಿ ಹೇಳಿರುವುದಾಗಿ ಪಿರ್ಯಾದು.

 

9. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.149/2021 ಕಲಂ.379 ಐ.ಪಿ.ಸಿ :-

  ದಿನಾಂಕ : 07/07/2021 ರಂದು 16-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ನವೀನ್  ಕುಮಾರ್ ಸಿ ಬಿನ್ ಚಿಕ್ಕಗಂಗಪ್ಪ, 21 ವರ್ಷ, ಆದಿ ಕರ್ನಾಟಕ, ಜಿರಾಯ್ತಿ, ವಾಸ: ಚೊಳಶೆಟ್ಟಿಹಳ್ಳಿ ಗ್ರಾಮ,   ನಗರಗೆರೆ ಹೋಬಳಿ,  ಗೌರಿಬಿದನೂರು  ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ  ದೂರಿನ ಸಾರಾಂಶವೆನೆಂದರೆ  ತನ್ನ ಬಾವ ಮುನಿರಾಜು ರವರು 2009 ನೇ ಇಸವಿಯಲ್ಲಿನ ಕೆ.ಎ-53-ಎಲ್-6942 ನೊಂದಣಿ ಸಂಖ್ಯೆಯ ಯಮಹಾ ಗ್ಲಾಡಿಯೇಟರ್ ದ್ವಿ ಚಕ್ರ ವಾಹನ 2018 ನೇ ಸಾಲಿನಲ್ಲಿ  ಖರೀದಿಸಿದ್ದು ಸದರಿ ದ್ವಿಚಕ್ರ ವಾಹನವನ್ನು ಸುಮಾರು 3 ವರ್ಷಗಳ ಹಿಂದೆ ತನ್ನ ಬಾವ ತನಗೆ ತಮ್ಮ ಗ್ರಾಮದಲ್ಲಿ ಜಮೀನಿನಿಂದ ಮನೆಗೆ ಹುಲ್ಲು ತರಲು ಕೊಟ್ಟಿದ್ದು ಅಂದಿನಿಂದ ತಾನೇ ಮೇಲ್ಕಂಡ ದ್ವಿಚಕ್ರ ವಾಹನವನ್ನು ಉಪಯೋಗಿಸುತ್ತಿರುತ್ತೇನೆ.  ಹೀಗಿರುವಲ್ಲಿ ದಿನಾಂಕ:28/06/2021 ರಂದು ಚಿಕ್ಕಬಳ್ಳಾಪುರದಲ್ಲಿ ಇರುವ ತನ್ನ ಬಾವನಿಗೆ ಹಣವನ್ನು ನೀಡಲು  ರಾತ್ರಿ ಸುಮಾರು 7-30 ಗಂಟೆ ಸಮಯದಲ್ಲಿ ತಮ್ಮ ಗ್ರಾಮವನ್ನು ಬಿಟ್ಟು ರಾತ್ರಿ ಸುಮಾರು 8-20 ಗಂಟೆ ಸಮಯದಲ್ಲಿ ಗುಡಿಬಂಡೆ- ಬೀಚಗಾನಹಳ್ಳಿ ಮುಖಾಂತರ ರಾಷ್ಟ್ರೀಯ ಹೆದ್ದಾರಿ-44 ನಲ್ಲಿ ಜಯಂತಿ ಗ್ರಾಮದಿಂದ ಮುಂದೆ ಇರುವ ರೆಡ್ಡಿ ಡಾಬ ಬಳಿ ಬಾಗೇಪಲ್ಲಿ - ಚಿಕ್ಕಬಳ್ಳಾಪುರ ಕಡೆ ಪುಟ್ಬಾತ್ ರಸ್ತೆಯಲ್ಲಿ ನಿಲ್ಲಿಸಿ ಬಹಿರ್ದೆಸೆಗೆ ಹೋಗಿ ಪುನಃ ಬಂದು ದ್ವಿ ಚಕ್ರ ವಾಹನವನ್ನು ನಿಲ್ಲಿಸಿದ ಜಾಗದಲ್ಲಿ ನೋಡಲಾಗಿ ತನ್ನ ಬಾಬತ್ತು ಮೇಲ್ಕಂಡ ದ್ವಿಚಕ್ರವಾಹನ ಸ್ಥಳದಲ್ಲಿ ಇರುವುದಿಲ್ಲ ನಂತರ ಅಕ್ಕ-ಪಕ್ಕದಲಿ ಮತ್ತು ಡಾಬ ಬಳಿ ಇರುವ  ಜನರನ್ನು ವಿಚಾರಿಸಿದಾಗ ತಮಗೆ ಗೊತ್ತಿಲ್ಲವೆಂದು ತಿಳಿಸಿರುತ್ತಾರೆ. ತನ್ನ ಬಾಬತ್ತು ಕೆ.ಎ-53-ಎಲ್-6942 ನೊಂದಣಿ ಸಂಖ್ಯೆಯ ಯಮಹಾ ಗ್ಲಾಡಿಯೇಟರ್ ಅಂದಾಜು 10,000/- ರೂ ಬೆಲೆ ಬಾಳುವ ದ್ವಿ ಚಕ್ರ ವಾಹನವನ್ನು ಯಾರೂ ಅಪರಿಚಿತರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ತಾನು ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ತನ್ನ ಬಾಬತ್ತು ವಾಹನವನ್ನು ಹುಡುಕಲಾಗಿ ಪತ್ತೆಯಾಗದ ಕಾರಣ ಈ ದಿನ ಠಾಣೆಗೆ ತಡವಾಗಿ ಹಾಜರಾಗಿ ತನ್ನ ಬಾಬತ್ತು ಮೇಲ್ಕಂಡ ದ್ವಿಚಕ್ರವಾಹನವನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 

10. ಮಂಚೇನಹ‍ಳ್ಳಿ ಪೊಲೀಸ್‌ ಠಾಣೆ ಮೊ.ಸಂ.114/2021 ಕಲಂ. 4,8,11 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020, 11(1) (A),11(1) (D) PREVENTION OF CRUELTY TO ANIMALS ACT 1960 & 429 ಐ.ಪಿ.ಸಿ & 192,177 INDIAN MOTOR VEHICLES ACT:-

     ದಿನಾಂಕ:07/07/2021 ರಂದು ಸಂಜೆ 4-00 ಗಂಟೆಗೆ ಠಾಣಾ ಎ.ಎಸ್.ಐ ಮನೋಹರ್ ಬಾಬು ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ: 07/07/2021 ರಂದು ಬೆಳಿಗ್ಗೆ 8-00 ಗಂಟೆಯಿಂದ ರಾತ್ರಿ 8-00 ಗಂಟೆಯವರೆಗೆ ನನಗೂ ಮತ್ತು ಮಂಚೇನಹಳ್ಳಿ ಪೊಲೀಸ್ ಠಾಣೆಯ ಪಿ.ಸಿ-111 ಲೋಕೇಶ್ ರವರಿಗೂ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ನಾಚಿಕುಂಟೆ ಕ್ರಾಸ್ ಬಳಿ ಬಕ್ರೀದ್ ಹಬ್ಬದ ಪ್ರಯುಕ್ತ ವಾಹನಗಳನ್ನು ಚೆಕ್ ಮಾಡಲು ಚೆಕ್ ಪೋಸ್ಟ್ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ನಾವು ಕರ್ತವ್ಯದಲ್ಲಿದ್ದಾಗ ಮದ್ಯಾಹ್ನ ಸುಮಾರು 3-15 ಗಂಟೆ ಸಮಯದಲ್ಲಿ ಮಧುಗಿರಿ ಕಡೆಯಿಂದ ಕೆ.ಎ-44, 5475 ಟಾಟಾ ಎಸ್ ವಾಹನ ಬಂದಿದ್ದು, ಸದರಿ ವಾಹನವನ್ನು ನಾನು ಮತ್ತು ಪಿ.ಸಿ-111 ಲೋಕೇಶ್ ರವರು ನಿಲ್ಲಿಸಿ ಚೆಕ್ ಮಾಡಲಾಗಿ ಸದರಿ ವಾಹನದಲ್ಲಿ ಒಂದು ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣದ ಸೀಮೆ ಹಸು ಇದ್ದು, ಇದನ್ನು ಎಲ್ಲಿಂದ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿರುವುದು ಎಂದು ವಿಚಾರ ಮಾಡಲಾಗಿ ಟಾಟಾ ಎಸ್ ವಾಹನದ ಚಾಲಕ ಸದರಿ ಹಸುವನ್ನು ಅಲ್ಲಿಪುರಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು, ಎಲ್ಲಿಂದ ತಂದಿದ್ದೆಂದು ಕೇಳಲಾಗಿ ಚಾಲಕ ಉತ್ತರ ನೀಡಲು ತಡವರಿಸಿದ್ದು, ಸರಿಯಾಗಿ ಹೇಳಿರುವುದಿಲ್ಲ. ಚಾಲಕನ ಹೆಸರು ವಿಳಾಸ ಕೇಳಲಾಗಿ ಜಗಾರ್ ಅಲಿ ಬಿನ್ ಅಲಿರಜಾ, 37 ವರ್ಷ, ಮುಸ್ಲೀಂ ಜನಾಂಗ, ಬಾಕ್ರಿ ಮೊಹಲ್ಲಾ, ಅಲ್ಲಿಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ಮೊಬೈಲ್ ಸಂ-9972458718 ಎಂದು ತಿಳಿಸಿರುತ್ತಾನೆ. ಚಾಲಕ ಜಗಾರ್ ಅಲಿರವರು ಸದರಿ ಹಸುವಿನ ಕತ್ತು ಮತ್ತು ಕಾಲುಗಳನ್ನು ಕದಲದಂತೆ ಹಗ್ಗಗಳಿಂದ ಬಿಗಿದು ಕ್ರೂರವಾಗಿ ಕಟ್ಟಿ ಕಸಾಯಿಖಾನೆಯಲ್ಲಿ ಕಟಾವು ಮಾಡುವ ಉದ್ದೇಶದಿಂದ ಅಕ್ರಮವಾಗಿ ಎಲ್ಲಿಂದಲೋ ತಂದು ಅಲ್ಲಿಪುರಕ್ಕೆ ಸಾಗಿಸುತ್ತಿರುವುದಾಗಿ ಅನುಮಾನ ಬಂದಿರುತ್ತೆ. ಆದ್ದರಿಂದ ಮೇಲ್ಕಂಡ ಕೆ.ಎ-44, 5475 ಟಾಟಾ ಎಸ್ ವಾಹನವನ್ನು ಅದರಲ್ಲಿರುವ ಹಸುವಿನ ಸಮೇತ ವಾಹನದ ಚಾಲಕ ಜಗಾರ್ ಅಲಿ ರವರನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಮಂಚೇನಹಳ್ಳಿ ಪೊಲೀಸ್ ಠಾಣೆಗೆ ತಂದು ಹಾಜರು ಪಡಿಸಿ ನೀಡಿದ ದೂರು.

 

11. ಮಂಚೇನಹ‍ಳ್ಳಿ ಪೊಲೀಸ್‌ ಠಾಣೆ ಮೊ.ಸಂ.115/2021 ಕಲಂ. 4,8,11 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020, 11(1) (A),11(1) (D) PREVENTION OF CRUELTY TO ANIMALS ACT, 192,177 INDIAN MOTOR VEHICLES ACT, 1988 & 429 ಐ.ಪಿ.ಸಿ:-

  ಘನ ನ್ಯಾಯಾಲಯದಲ್ಲಿ ಲಕ್ಷ್ಮಿನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ನಾನು ಈ ದಿನ ದಿನಾಂಕ:08/07/2021 ರಂದು ಮುಂಜಾನೆ 01-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ಕಡೆಯಿಂದ ಬೆಂಗಳೂರು ಕಡೆಗೆ ಮೂರು ಕಂಟೈನರ್ ವಾಹನಗಳಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ಕಟಾವು ಮಾಡಲು ಅಕ್ರಮವಾಗಿ ದನಗಳನ್ನು ಸಾಗಿಸುತ್ತಿರುವುದಾಗಿ ಮಾಹಿತಿ ಬಂದಿದ್ದು, ನಾನು ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40, ಜಿ-395 ರಲ್ಲಿ ಚಾಲಕ ಎಪಿಸಿ.120 ನಟೇಶ್ ಮತ್ತು ಠಾಣಾ ಸಿಬ್ಬಂದಿಯವರಾದ ಪಿ.ಸಿ-283 ಅರವಿಂದ, ಪಿ.ಸಿ-175 ನವೀನ್ ಕುಮಾರ್, ಪಿ.ಸಿ.336 ಉಮೇಶ್ ಬಿ. ಶಿರಶ್ಯಾಡ್, ಮತ್ತು ಪಂಚರೊಂದಿಗೆ ಮುಂಜಾನೆ 1-45 ಗಂಟೆಗೆ ತೊಂಡೇಬಾವಿ ಹೊರ ಪೊಲೀಸ್ ಠಾಣೆಯ ಮುಂದಿನ ಎಸ್.ಹೆಚ್-9 ರಸ್ತೆಯಲ್ಲಿ ಕಾಯುತ್ತಿದ್ದಾಗ ಗೌರಿಬಿದನೂರು ಕಡೆಯಿಂದ  ಮೂರು ಕಂಟೈನರ್ ವಾಹನಗಳು ಬಂದಿದ್ದು, ಅವುಗಳನ್ನು ಪಂಚಾಯ್ತಿದಾರರ ಸಮಕ್ಷಮ ತಡೆದು ನಿಲ್ಲಿಸಿ ಪರಿಶೀಲಿಸಲಾಗಿ  1) ಕೆ.ಎ-23, ಎ-5083 ನೊಂದಣಿ ಸಂಖ್ಯೆಯ ವಾಹನವಾಗಿದ್ದು, ಇದರ ಚಾಲಕ ತನಿಂಖಾನ್ ಬಿನ್ ಚೋಟು ಖಾನ್, ಮತ್ತು ಕ್ಲೀನರ್ ನವಾಜ್ ಬಿನ್ ಬಾಬು ರವರಾಗಿದ್ದು, ಸದರಿ ವಾಹನದಲ್ಲಿ ಒಂದು ಎಮ್ಮೆ ಮತ್ತು 15 ಎತ್ತುಗಳು ಇರುತ್ತವೆ. 2) ಕೆ.ಎ-50, ಎ-5006 ನೊಂದಣಿ ಸಂಖ್ಯೆಯ ಈಚರ್ ಕಂಟೈನರ್ ವಾಹನವಾಗಿದ್ದು, ಇದರ ಚಾಲಕ ನಜೀರ್ ಬಿನ್ ಪೀರ್ ಸಾಬ್ ಮತ್ತು ಕ್ಲೀನರ್ ರಾಜಾಸಾಬ್ ಬಿನ್ ಇಮಾಮ್ ಸಾಬ್ ರವರಾಗಿದ್ದು, ಇದರಲ್ಲಿ 10 ಎತ್ತುಗಳು ಮತ್ತು 8 ಹೆಣ್ಣು ಕರುಗಳು ಇರುತ್ತವೆ. 3) ಕೆ.ಎ-04, ಡಿ-6036 ನೊಂದಣಿ ಸಂಖ್ಯೆಯ ಈಚರ್ ಕಂಟೈನರ್ ವಾಹನವಾಗಿದ್ದು, ಇದರ ಚಾಲಕನ ಹೆಸರು ಸೈಯದ್ ನಯಾಜ್ @ ಇಮ್ರಾನ್ ಬಿನ್ ಬಾಬು ಮತ್ತು ಕ್ಲೀನರ್ ಅಜರ್ ಬಿನ್ ಅಸ್ಲಂ ರವರಾಗಿದ್ದು, ಸದರಿ ವಾಹನದಲ್ಲಿ 10 ಎತ್ತುಗಳು, 6 ಹೆಣ್ಣು ಕರುಗಳು ಮತ್ತು ಒಂದು ಗಂಡು ಕರು ಒಟ್ಟು 17 ದನಕರುಗಳಿರುತ್ತದೆ. ಈ ವಾಹನಗಳಲ್ಲಿ ದನಕರುಗಳನ್ನು ಕಟಾವು ಮಾಡುವ ಉದ್ದೇಶದಿಂದ ಆರೋಪಿಗಳು ಯಾವುದೇ ಪರವಾನಿಗೆ ಮತ್ತು ಅನುಮತಿ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದು, ದನಕರುಗಳನ್ನು ಉಸಿರಾಡದಂತೆ ಕಂಟೈನರ್ ಬಾಗಿಲುಗಳನ್ನು ಮುಚ್ಚಿದ್ದು, ಅವುಗಳು ಕದಲದಂತೆ ಕ್ರೂರವಾಗಿ ಕಟ್ಟಿ ಹಾಕಿರುತ್ತಾರೆ. ಈ ಮೇಲ್ಕಂಡ ಮೂರು ವಾಹನಗಳು ಮತ್ತು ವಾಹನದಲ್ಲಿದ್ದ ಎಲ್ಲಾ ದನಕರುಗಳನ್ನು ಹಾಗೂ ಮೂರು ವಾಹನದ ಚಾಲಕ ಮತ್ತು ಕ್ಲೀನರ್ ಗಳನ್ನು ಪಂಚಾಯ್ತಿದಾರರ ಸಮಕ್ಷಮ ಬೆಳಗಿನ ಜಾಗ 01-45 ಗಂಟೆಯಿಂದ 03-45 ಗಂಟೆಯವರೆಗೆ ವಿವರವಾದ ಪಂಚನಾಮೆಯನ್ನು ಜರುಗಿಸಿ ವಶಕ್ಕೆ ಪಡೆದು ನಂತರ ಬೆಳಗಿನ ಜಾವ 04-30 ಗಂಟೆಗೆ ಠಾಣೆಗೆ ವಾಪಾಸ್ ಬಂದು ಠಾಣಾ ಮೊ.ಸಂ.115/2021 ಕಲಂ  4, 8, 11 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020, 11(1)(A), 11(1)(D) PREVENTION OF CRUELTY TO ANIMALS ACT, 1960, 192, 177 IMV Act and 429 IPC  ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತದೆ.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.224/2021 ಕಲಂ. 307,323,504,506,34 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act 2015:-

  ದಿನಾಂಕ: 07-07-2021 ರಂದು ಸಮಯ 14-30 ಗಂಟೆಗೆ ಪಿರ್ಯಾದಿದಾರರಾದ  ದೇವರಾಜ ವಿ.ಜಿ. ಬಿನ್ ಗಂಗಪ್ಪ, 40 ವರ್ಷ, ಪ.ಜಾತಿ, (ಆದಿ ಕರ್ನಾಟಕ), ಕೂಲಿ ಕೆಲಸ, ವಾಸ: ಮೇಲೂರು ಗ್ರಾಮ,ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು  ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತಮ್ಮ ಸ್ವಂತ ಸ್ಥಳ ವರದನಾಯಕನಹಳ್ಳಿ ಗ್ರಾಮವಾಗಿದ್ದು ಈಗ್ಗೆ 13 ವರ್ಷಗಳ ಹಿಂದೆ ತಾನು ಮೇಲೂರು ಗ್ರಾಮದ ತಿಗಳ ಜನಾಂಗದ ನಾರಾಯಣಸ್ವಾಮಿ ರವರ ಮಗಳಾದ ಸೌಮ್ಯ ರವರನ್ನು ಪ್ರೀತಿಸಿ ಮದುವೆಯಾಗಿದ್ದು ಹಾಲಿ ತಾನು ಮೇಲೂರು ಗ್ರಾಮದಲ್ಲಿಯೇ ವಾಸವಾಗಿರುತ್ತೇನೆ. ಹೀಗಿದ್ದು ತಮ್ಮ ಗ್ರಾಮದ ಲಲಿತ ರವರು ತಮ್ಮ ಮನೆಯ ಬಳಿ ಬಂದು ತನ್ನನ್ನು ಮತ್ತು ತನ್ನ ಹೆಂಡತಿ ಸೌಮ್ಯ ರವರನ್ನು ಆಗಾಗ ತಮ್ಮ ಮನೆಯ ಬಳಿ ಬಂದು ತಮ್ಮನ್ನು ಬೈಯುತ್ತಿದ್ದು, ದಿನಾಂಕ: 06-07-2021 ರಂದು ಬೆಳಿಗ್ಗೆ 6.00 ಗಂಟೆಯಲ್ಲಿ ತಾನು ಹಾಗೂ ತನ್ನ ಹೆಂಡತಿ ಮನೆಯ ಬಳಿಯಿದ್ದಾಗ ತಮ್ಮ ಗ್ರಾಮದ ಲಿಂಗಾಯಿತ ಜನಾಂಗದ ಲಲಿತ ಕೋಂ ಗೋಪಿ ರವರು ತಮ್ಮ ಮನೆಯ ಬಳಿ ಬಂದು ಏನೋ ಕೀಳು ಜಾತಿ ತನ್ನ ಮಗನೆ ಎಂದು ಜಾತಿ ನಿಂದನೆ ಮಾಡಿ ತನ್ನನ್ನು ಮತ್ತು ತನ್ನ ಹೆಂಡತಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿರುತ್ತಾಳೆ. ಈ ಹಿನ್ನೆಲೆಯಲ್ಲಿ ದಿನಾಂಕ: 06-07-2021 ರಂದು ಸಂಜೆ 5.00 ಗಂಟೆಯಲ್ಲಿ ತಾನು ತಮ್ಮ ಗ್ರಾಮದ ತಮ್ಮ ಮಾವನವರ ಮನೆಯ ಬಳಿ ಹೋದಾಗ ತಮ್ಮ ಗ್ರಾಮದ ಲಿಂಗಾಯಿತ ಜನಾಂಗದ ಲಲಿತ ಕೋಂ ಗೋಪಿ, ಲಲಿತ ರವರ ಅಣ್ಣನಾದ ರಾಜ ಬಿನ್ ಕೃಷ್ಣಪ್ಪ, ಮತ್ತು ಗೌರಿಬಿದನೂರು ಚೀಲೇನಹಳ್ಳಿ ಗ್ರಾಮದ ಗೋವರ್ದನ್ ಮೂರು ಜನರು ಸೇರಿಕೊಂಡು ತನ್ನ ಮೇಲೆ ಗಲಾಟೆ ಮಾಡಿದ್ದು, ಆ ಪೈಕಿ ಲಲಿತ ಮತ್ತು ರಾಜ ರವರು ಏನೋ ಕೀಳು ಜಾತಿ ತನ್ನ ಮಗನೆ ನಿನಗೆ ಇಲ್ಲಿ ಏನೋ ಕೆಲಸ ಲೋಪರ್ ತನ್ನ ಮಗನೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ಲಲಿತ ರವರು ಆಕೆಯ ಕೈಲ್ಲಿದ್ದ ಚಾಕುವಿನಲ್ಲಿ ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ತಿವಿಯಲು ಬಂದಿದ್ದು ತಾನು ತಪ್ಪಿಸಿಕೊಂಡಿರುತ್ತೇನೆ. ಆ ಸಮಯದಲ್ಲಿ ಗೋವರ್ದನ್, ರಾಜ ಮತ್ತು ಲಲಿತ ತನಗೆ ಕೈಗಳಿಂದ ಹೊಡೆದು, ಕಾಲಿನಿಂದ ಒದ್ದು ಇನ್ನು ಮುಂದೆ ನೀನೇನಾದರೂ ಈ ಕಡಗೆ ಬಂದರೆ ನಿನಗೆ ಒಂದು ಗತಿ ಕಾಣಿಸಿ ಇಲ್ಲಿಯೇ ಸಮಾದಿ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದು ಆಗ ಅಲ್ಲಿಯೇ ಇದ್ದ ಮೇಲೂರು ಗ್ರಾಮದ ಮನೋಹರ್ ಬಿನ್ ಎಂ.ಡಿ. ಚಂದ್ರಪ್ಪ ಮತ್ತು ಸುಧಾಕರ್ ಬಿನ್ ಗೋಪಾಲಪ್ಪ ರವರುಗಳು ಬಂದು ಗಲಾಟೆ ಬಿಡಿಸಿರುತ್ತಾರೆ. ವಿನಾ ಕಾರಣ ತನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ, ಕೈಗಳಿಂದ ಹೊಡೆದು, ಕಾಲಿನಿಂದ ಒದ್ದು, ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ತಿವಿಯಲು ಬಂದು ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಂಡು ತನಗೆ ಮತ್ತು ತಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕಾಗಿ ಕೋರಿದ್ದು ಗಲಾಟೆಯ ಬಗ್ಗೆ ತಮ್ಮ ಕುಟುಂಬದ ಹಿರಿಯರಿಗೆ ವಿಚಾರ ತಿಳಿಸಿ ಈ ದಿನ ತಡವಾಗಿ ಬಂದು ದೂರನ್ನು ನೀಡಿದ್ದರ ಮೇರೆಗೆ ಠಾಣಾ ಮೊ.ಸಂ: 224/2021 ಕಲಂ:307, 323, 504, 506 ರೆ/ವಿ 34 ಐ.ಪಿ.ಸಿ ಹಾಗೂ 3(1)(r), 3(1)(s) The SC/ST (Prevention of Atracitie) Amendment Act-2015  ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

13. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.225/2021 ಕಲಂ. 341,504,506 ಐ.ಪಿ.ಸಿ:-

  ದಿನಾಂಕ: 07-07-2021 ರಂದು ಸಮಯ 18.30 ಗಂಟೆಗೆ ಪಿರ್ಯಾದಿದಾರರಾದ ಪ್ರತಾಪ್ @ ಚಿನ್ನಿ ಬಿನ್ ಶ್ರೀನಿವಾಸ, 26 ವರ್ಷ, ತಿಗಳರು, ಜಿರಾಯ್ತಿ, ಮೇಲೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಗ್ರಾಮದ ನಾರಾಯಣಸ್ವಾಮಿ ಬಿನ್ ಮುನಿವೆಂಕಟಪ್ಪ ರವರು ತಮ್ಮ ದೊಡ್ಡಪ್ಪನಾಗಿದ್ದು ತಮ್ಮ ದೊಡ್ಡಪ್ಪ ನಾರಾಯಣಸ್ವಾಮಿ ಮತ್ತು ತಮ್ಮ ಗ್ರಾಮದಲ್ಲಿ ವಾಸವಾಗಿರುವ ಲಲಿತ ಕೋಂ ಗೋಪಿ ರವರಿಗೆ ಹಳೆ ವೈಷಮ್ಯಗಳಿರುತ್ತದೆ, ಇತ್ತೀಚೆಗೆ ತಮ್ಮ ದೊಡ್ಡಪ್ಪ ನಾರಾಯಣಸ್ವಾಮಿ ರವರಿಗೆ ಕಾಲು ಗಾಯಗಳಾಗಿದ್ದು ಆ ಸಮಯದಲ್ಲಿ ತಾನು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಬರುವುದು ಮಾಡುತ್ತಿದ್ದೆ, ಈ ಹಿನ್ನೆಲೆಯಲ್ಲಿ ದಿನಾಂಕ: 06-07-2021 ಬೆಳಿಗ್ಗೆ 7.00 ಗಂಟೆಯಲ್ಲಿ ತಾನು ತಮ್ಮ ಗ್ರಾಮದ ಗಂಗಮ್ಮ ದೇವಾಲಯದ ಬಳಿಯಿರುವ ವಾಲಿಬಾಲ್ ಕೋಟರ್್ಗೆ ವಾಲಿಬಾಲ್ ಆಡಲು ಹೋಗುತ್ತಿದ್ದಾಗ ಲಲಿತ ಕೋಂ ಗೋಪಿ ರವರು ತನ್ನನ್ನು ಅಡ್ಡ ಹಾಕಿ ಏನೋ ಲೋಪರ್ ನನ್ನ ಮಗನೆ ನಿನಗೆ ಪೋನ್ ಮಾಡಿದರೆ ನೀನು ಬರಲ್ಲ ಎಂದು, ನಾನು ನಿನಗೆ ಪೋನ್ ಮಾಡಿ ಎಲ್ಲಿಗೆ ಬಾ ಎಂದರೆ ಅಲ್ಲಿಗೆ ಬರಬೇಕು ಇಲ್ಲದಿದ್ದರೆ ನೀನು ನನ್ನ ಮಗಳನ್ನು ರೇಪ್ ಮಾಡಿದ್ದೀಯ ಎಂದು ಪೋಕ್ಸೋ ಕೇಸ್ ಹಾಕಿಸುತ್ತೇನೆ ಇಲ್ಲದಿದ್ದರೆ ನೀನು ನನ್ನನ್ನು ರೇಪ್ ಮಾಡಿದ್ದೀಯ ಎಂದು ಕೇಸ್ ಹಾಕಿಸಿ ನಿನ್ನನ್ನು ಜೈಲಿಗೆ ಕಳುಹಿಸುತ್ತೇನೆ, ನಾನು ಹೇಳಿದ ಹಾಗೆ ನೀನು ಕೇಳಬೇಕು ಇಲ್ಲದಿದ್ದರೆ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆ ಸಮಯದಲ್ಲಿ ಅಲ್ಲಿಯೇ ಇದ್ದ ತಮ್ಮ ಗ್ರಾಮದ ನಿಖಿಲ್ ಬಿನ್ ಆನಂದಪ್ಪ ಮತ್ತು ಮುನೀಂದ್ರ ಬಿನ್ ಮುನಿಕುಮಾರ್ ರವರುಗಳು ಲಲಿತ ರವರಿಗೆ ಬುದ್ದಿವಾದ ಹೇಳಿ ಕಳುಹಿಸಿರುತ್ತಾರೆ. ವಿನಾ ಕಾರಣ ತನಗೆ ತೊಂದರೆ ನೀಡಿ ತನ್ನನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುವ ಲಲಿತ ಕೋಂ ಗೋಪಿ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ತಮ್ಮ ಮನೆಯಲ್ಲಿ ಹಿರಿಯವರಿಗೆ ವಿಚಾರವನ್ನು ತಿಳಿಸಿ ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಠಾಣಾ ಮೊ ಸಂ: 225/2021 ಕಲಂ 341, 504, 506 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 08-07-2021 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080