ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.153/2021 ಕಲಂ. 188,269,270,353,504 ಐ.ಪಿ.ಸಿ & 51(b) THE DISASTER MANAGEMENT ACT, 2005 & 4 KARNATAKA PROHIBITION OF VIOLENCE AGAINST MEDICARE SERVICE PERSONNEL AND DAMAGE TO PROPERTY IN MEDICARE SERVICE INSTITUTIONS ACT:-

     ದಿನಾಂಕ: 07/06/2021 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಅನಿತ ಎನ್. ಕೋಂ ಅಶೋಕ್ ಕುಮಾರ್, 34 ವರ್ಷ, ಜೂನಿಯರ್ ಹೆಲ್ತ್ ಅಸಿಸ್ಟೆಂಟ್, ಮಾರ್ಗಾನುಕುಂಟೆ ಪ್ರಾಥಮಿಕ ಕೇಂದ್ರ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ವಾಸ-ಗೂಳೂರು ಗ್ರಾಮ,  ಬಾಗೇಪಲ್ಲಿ ತಾಲ್ಲೂಕು. ರವರು  ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ.  ನಾನು ಈಗ್ಗೆ 12 ವರ್ಷಗಳಿಂದ ಮಾರ್ಗಾನುಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜೂನಿಯರ್ ಹೆಲ್ತ್ ಅಸಿಸ್ಟೆಂಟ್ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತೇನೆ. ಕೋವಿಡ್-19 ಎರಡನೆ ಅಲೆ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗವಾದ ಕೋವಿಡ್ -19 ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರವು ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ರೂಪಿಸಿದ್ದು, ಅದರಂತೆ ದಿನಾಂಕ:03/06/2021 ರಂದು ಮಾರ್ಗಾನುಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಎಂ.ತೀರ್ಥದೀಪಿಕ ರವರು ನನಗೆ ಮತ್ತು ನನ್ನ ಸಹೋದ್ಯೋಗಿ ಸುಭಾಷಿಣಿ ಎಸ್ ಕೋಂ ಅನಿಲ್ ಕುಮಾರ್, 30 ವರ್ಷ, ಜೂನಿಯರ್ ಹೆಲ್ತ್ ಅಸಿಸ್ಟೆಂಟ್ ರವರಿಗೆ ನಾರಾಯಣಸ್ವಾಮಿ ಕೋಟೆಗೆ ನಾಗರೀಕರ ಕೋವಿಡ್ ಪರೀಕ್ಷೆ ಮಾಡಲು ಕರ್ತವ್ಯಕ್ಕೆ ನೇಮಿಸಿರುತ್ತಾರೆ. ಆದೇಶದಂತೆ ಡಾ. ತೀರ್ಥದೀಪಿಕ ರವರೊಂದಿಗೆ ನಾನು ಸುಭಾಷಿಣಿ, ಲ್ಯಾಬ್ ಟೆಕ್ನೀಷಿಯನ್ ವರುಣ್, ರವರು ಟಾಸ್ಕ್ ಪೋರ್ಸ್ ಸಮಿತಿಯ ಅಶ್ವತ್ಥನಾರಾಯಣಪ್ಪ ಬಿನ್ ಲೇಟ್ ತಿಪ್ಪನ್ನ, 45 ವರ್ಷ, ನಾಯಕರು, ಗ್ರಾಮ ಪಂಚಾಯ್ತಿ ಜವಾನ, ಮಾರ್ಗಾನುಕುಂಟೆ ಗ್ರಾಮ ಪಂಚಾಯ್ತಿ ರವರುಗಳು ನಾರಾಯಣಸ್ವಾಮಿಕೋಟೆಗೆ ತೆರಳಿದ್ದು,  ವೈದ್ಯಾಧಿಕಾರಿಗಳು ನಮ್ಮನ್ನು ಮನೆಮನೆಗೆ ತೆರಳಿ ಕೋವಿಡ್ ಪರೀಕ್ಷೆ ಮಾಡಿ ಪಾಸಿಟೀವ್ ಕೇಸ್ ಬಂದರೆ, ಕೋದಂಡರಾಮಸ್ವಾಮಿ ದೇವಸ್ಥಾನದ ಬಳಿ ಕಳುಹಿಸುವಂತೆ ಹೇಳಿ ದೇವಾಲಯದ ಬಳಿ ವೈದ್ಯಾಧಿಕಾರಿಗಳು ಇದ್ದರು. ನಾನು, ಸುಭಾಷಿಣಿ, ಟಾಸ್ಕ್ ಪೋರ್ಸ್ ಸಮಿತಿಯ ಅಶ್ವತ್ಥನಾರಾಯಣ, ಅಂಗನವಾಡಿಯ ಕಾರ್ಯಕರ್ತೆಯರಾದ ಸುಗುಣ ರವರು ಗ್ರಾಮದೊಳೆಗೆ ಹೋಗಿ ಈಗಾಗಲೇ ಕೋವಿಡ್ ಕೇಸ್ ಇದ್ದ  ರಾಮಾಂಜಿನಪ್ಪ ಬಿನ್ ಯಲ್ಲಪ್ಪ, 45 ವರ್ಷ, ಬೋವಿ ಜನಾಂಗ, ನಾರಯಣಸ್ವಾಮಿಕೋಟೆ ರವರ ಮನೆಯ ಬಳಿ ತೆರಳಿ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕೋವಿಡ್ ಪರೀಕ್ಷೆ ಮಾಡಲು ತೆರಳಿದಾಗ, ಮದ್ಯಾಹ್ನ 1:45 ಗಂಟೆಯಲ್ಲಿ ಮನೆಯಲ್ಲಿದ್ದ ರಾಮಾಂಜಿನಪ್ಪ ಬಿನ್ ಯಲ್ಲಪ್ಪ ರವರು ಹೊರಗೆ ಬಂದು ಮಾಸ್ಕ್ ಅನ್ನು ಧರಿಸಿಕೊಳ್ಳದೆ, ನನಗೆ ಕರೋನ ಬಂದಿದೆ ಎಂದು ನೀನು ಊರಿನವರಿಗೆಲ್ಲಾ ನೀವೆ ಹೇಳುತ್ತಿದ್ದಿರಾ ಎಂದು ಹೇಳಿ ಅಮ್ಮನ್ ಅಕ್ಕನ್ ನಮ್ಮ ಮನೆಗಳ ಬಳಿ ಗಾಂಚಾಲಿ ಮಾಡಬೇಡಿ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು, ಕೋವಿಡ್ -19 ತಡೆಗಟ್ಟಲು ಕೋವಿಡ್ ಪರೀಕ್ಷೆ ಮಾಡಲು ಹೋದ ನನ್ನನ್ನು ಮತ್ತು ನಮ್ಮ ಜೊತೆ ಬಂದ ಟಾಸ್ಕ್ ಪೋರ್ಸ್ ಸಿಬ್ಬಂದಿಯವರನ್ನು ಕರ್ತವ್ಯ ಮಾಡಲು ಬಿಡದೆ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ನಾನು ಎಷ್ಟೇ ತಿಳಿಹೇಳಲು ಪ್ರಯತ್ನಿಸಿದರೂ ಕೇಳದೆ ಕ್ವಾರೆಂಟೈನ್ ನಲ್ಲಿದ್ದ ವ್ಯಕ್ತಿ ಯಾವುದೇ ಮಾಸ್ಕ್ ಅನ್ನು ಧರಿಸದೆ ನನ್ನನ್ನು ಮತ್ತು ಟಾಸ್ಕ್ ಪೋರ್ಸ್ ಸಮಿತಿಯ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ಬೈಯ್ದಿರುತ್ತಾರೆ. ನಾವುಗಳು ಕೋವಿಡ್ ಪರೀಕ್ಷೆಯನ್ನು ಅರ್ಧಕ್ಕೆ ನಿಲ್ಲಿಸಿ ಬಂದು ವೈದ್ಯಾಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿರುತ್ತೇನೆ. ಕೃಷ್ಣಾಪುರ ಇತರೆ ಗ್ರಾಮಗಳಲ್ಲಿ ಪಾಸಿಟೀವ್ ಕೇಸಸ್ ಹೆಚ್ಚಾದ್ದರಿಂದ ಕರ್ತವ್ಯದಲ್ಲಿದ್ದು, ಇಲಾಖೆಯವರಿಗೆ ಮಾಹಿತಿ ನೀಡಿ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ರಾಮಾಂಜಿನಪ್ಪ ಬಿನ್ ಯಲ್ಲಪ್ಪ, 45 ವರ್ಷ, ಬೋವಿ ಜನಾಂಗ, ಕಲ್ಲುಹೊಡೆಯುವ ಕೆಲಸ, ನಾರಾಯಣಸ್ವಾಮಿಕೋಟೆ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.154/2021 ಕಲಂ. 279,337 ಐ.ಪಿ.ಸಿ & 187  INDIAN MOTOR VEHICLES ACT, 1988:-

     ದಿನಾಂಕ: 07/06/2021 ರಂದು ಸಂಜೆ 18-00 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ ರಾಮಚಂದ್ರ ಬಿನ್ ಲೇಟ್ ಬಾವನ್ನ, 40 ವರ್ಷ, ನಾಯಕರು, ಕೂಲಿಕೆಲಸ, ವಾಸ: ದೇವರಾಜಪಲ್ಲಿ ಗ್ರಾಮ ಪಾತಪಾಳ್ಯ, ಬಾಗೇಪಲ್ಲಿ ತಾಲ್ಲೂಕು. ಮೊ ಸಂ-9535098431 ರವರು ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ;07/06/2021 ರಂದು ಮದ್ಯಾಹ್ನ 4-00 ಗಂಟೆ ಸಮಯದಲ್ಲಿ ನಾನು ನಮ್ಮ ಗ್ರಾಮದ ವಾಸಿ ವೆಂಕಟೇಶ ಬಿನ್ ವೆಂಕರವಣಪ್ಪ, 35 ವರ್ಷ, ಚಿನ್ನಪೆದ್ದನ್ನ ಬಿನ್ ನರಸಿಂಹಪ್ಪ 29 ವರ್ಷ, ಎಸ್ ಸಿ ಜನಾಂಗ, ಮತ್ತು ವೆಂಕಟೇಶ ಬಿನ್ ನಾರಾಯಣಪ್ಪ 20 ವರ್ಷ, ರವರ ಬಾಬತ್ತು ಕೆಎ 40 4854 ಅಪ್ಪೆ ಆಟೋದಲ್ಲಿ ಕೂಲಿ ಕೆಲಸಕ್ಕೆಂದು ನಮ್ಮ ಗ್ರಾಮವಾದ ದೇವರಾಜಪಲ್ಲಿ ಯಿಂದ ಎಲ್ಲೋಡು ಗ್ರಾಮಕ್ಕೆ ಹೋಗಿ ವಾಪಸ್ಸು ನಮ್ಮ ಗ್ರಾಮಕ್ಕೆ ಬಾಗೇಪಲ್ಲಿ ತಾಲ್ಲೂಕು ಕಾಶಾಪುರ ಗ್ರಾಮ ಬಳಿ ಇರುವ ಮೋರಿಯ ಬಳಿ ಅಪ್ಪೆ ಆಟೋದಲ್ಲಿ ಬರುತ್ತಿದ್ದಾಗ ಬಾಗೇಪಲ್ಲಿ ಎನ್ ಹೆಚ್-44 ರಸ್ತೆ ಕಡೆಯಿಂದ ಕಲ್ಲುಗಳನ್ನು ತುಂಬಿದ್ದ ಅರಿಶಿನ ಮತ್ತು ಸಿಮೆಂಟ್ ಬಣ್ಣವಿರುವ ಟಿಪ್ಪರ್ ಲಾರಿಯ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಲಾರಿಯನ್ನು ಚಾಲನೆ ಮಾಡಿಕೊಂಡು ಬಂದು ಕಾಶಾಪುರ ಬಳಿ ಇರುವ ಮೋರಿಯನ್ನು ಎಗರಿಸಿದ್ದರ ಪರಿಣಾಮ ಟಿಪ್ಪರ್ ಲಾರಿಯಲ್ಲಿದ್ದ ಕಲ್ಲುಗಳು ಆಟೋ ಗ್ಲಾಸ್ ಮೇಲೆ ಬಿದ್ದ ಪರಿಣಾಮ ಆಟೋ ಚಾಲಕನ ನಿಯಂತ್ರಣಕ್ಕೆ ಬಾರದೆ ಎಡಗಡೆಗೆ ಬಿದ್ದು ಹೋಗಿದ್ದು ಟಿಪ್ಪರ್ ನ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಹೊರಟು ಹೋಗಿದ್ದು ನಂತರ ಆಟೋ ರಸ್ತೆಯಲ್ಲಿ ಬಿದ್ದ ಪರಿಣಾಮ ನನಗೆ ಎಡಗಾಲಿನ ಪಾದದ ಬಳಿ ತರಚಿ ರಕ್ತಗಾಯವಾಗಿದ್ದು, ಆಟೋದಲ್ಲಿದ್ದ ಚಿನ್ನಪೆದ್ದನ್ನ ರವರಿಗೆ ಬಲಗೈ ಮತ್ತು ಭುಜದ ಮೇಲೆ ತರಚಿದ ಗಾಯಗಳಾಗಿ ತಲೆಗೆ ಮೂಗೇಟು ಉಂಟಾಗಿರುತ್ತದೆ. ವೆಂಕಟೇಶ ರವರಿಗೆ ಬಲಗೈ ಗೆ ತರಚಿದ ಗಾಯ ಮತ್ತು ಸೊಂಟಕ್ಕೆ ಮೂಗೇಟು ಉಂಟಾಗಿರುತ್ತೆ. ಆಟೋ ಚಾಲಕನಾದ ವೆಂಕಟೇಶನಿಗೆ ಬಲಗೈ ಮತ್ತು ಎಡಗೈ ಮೇಲೆ ತರಚಿದ ಗಾಯಗಳಾಗಿದ್ದು ನಂತರ ಸ್ಥಳದಲ್ಲಿ ಯಾರೋ ಸಾರ್ವಜನಿಕರು ನಮ್ಮನ್ನು ಉಪಚರಿಸಿ ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು. ನಾವುಗಳು ಚಿಕಿತ್ಸೆ ಪಡೆಯುತ್ತಿರುತ್ತೇವೆ. ಆದ್ದರಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ಮೋರಿಯನ್ನು ಎಗರಿಸಿ ಕಲ್ಲುಗಳನ್ನು ಆಟೋ ಮೆಲೆ ಬೀಳಿಸಿ ಅಪಘಾತವನ್ನುಂಟು ಮಾಡಿ ನಿಲ್ಲಿಸದೇ ಹೊರಟು ಹೋದ ಟಿಪ್ಪರ್ ಲಾರಿಯ ಚಾಲಕನ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.84/2021 ಕಲಂ. 34,302 ಐ.ಪಿ.ಸಿ &  3 (2)(v) The SC & ST (Prevention of Atrocities) Amendment Act 2015:-

     ದಿನಾಂಕ:07/06/2021 ರಂದು ರಾತ್ರಿ 7-00 ಗಂಟೆಗೆ ಪಿರ್ಯಾದಿ ಶ್ರೀನಿವಾಸ ಬಿನ್ ಲೇಟ್ ವೆಂಕಟರಾಯಪ್ಪ, 45 ವರ್ಷ,  ಪ. ಜಾತಿ, ಮುಸ್ಟೂರು ಗ್ರಾಮ ರವರು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾನು  ಮುಷ್ಟೂರು ಗ್ರಾಮದ ಎಸ್,ಸಿ ಕಾಲೋನಿಯ ವಾಸಿಯಾಗಿರುತ್ತೇನೆ. ನನ್ನ ಹೆಂಡತಿ ಲಕ್ಷ್ಮಮ್ಮ ಆಗಿದ್ದು ನಮಗೆ ಒಟ್ಟು ಇಬ್ಬರು ಮಕ್ಕಳು ಮೊದಲನೇ ಮಗಳು ಸ್ವಪ್ನ ಈಗಾಗಲೇ ಮದುವೆಯಾಗಿ ಗಂಡನ ಮನೆಯಲ್ಲಿ ವಾಸವಾಗಿರುತ್ತಾಳೆ ಎರಡನೇ ಮಗ ವೆಂಕಟೇಶ್ ಆಗಿದ್ದು ಎರಡು ವರ್ಷಗಳ ಹಿಂದೆ ಗುಡಿಬಂಡೆ ತಾಲ್ಲೂಕು ಬೀಚಗಾನಹಳ್ಳಿ ಗ್ರಾಮದ ವೆಂಕಟೇಶಪ್ಪ ರವರ ಮಗಳಾದ ಸುನಿತ ರವರೊಂದಿಗೆ ಮದುವೆಯಾಗಿದ್ದು, ನಮ್ಮೊಂದಿಗೆ ವಾಸವಾಗಿರುತ್ತಾನೆ. ನನ್ನ ಮಗ ವೆಂಕಟೇಶ್ ರವರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಚಿಕ್ಕಬಳ್ಳಾಪುರದಲ್ಲಿ ಟೆಂಪೋ ಓಡಿಸುತ್ತಿದ್ದನು. ಹೀಗಿರುವಾಗ ಲಾಕ್ ಡೌನ್ ಇದ್ದುದ್ದರಿಂದ ಮನೆಯಲ್ಲಿಯೇ ಇದ್ದು, ಈ ದಿನ ದಿನಾಂಕ:07-06-2021 ರಂದು ಬೆಳಿಗ್ಗೆ 6-00 ಗಂಟೆಗೆ ಕೆಲಸಕ್ಕೆ ಹೋಗಿದ್ದವನು 10-00 ಕ್ಕೆಲ್ಲಾ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸು ಬಂದಿದ್ದನು. ನಂತರ ಮದ್ಯಾಹ್ನ ಸುಮಾರು 3-30 ರ ಸಮಯದಲ್ಲಿ ನಮ್ಮ ಗ್ರಾಮದ ವಾಸಿಗಳಾದ ಪ್ರವೀಣ, ಮಂಜುನಾಥಚಾರಿ, ಕೃಷ್ಣ, ಅಂಜಿ ರವರೊಂದಿಗೆ ನನ್ನ ಮಗ ವೆಂಕಟೇಶ್ ಹೊರಗೆ ಹೋಗಿದ್ದನು. ಸಂಜೆ ಸುಮಾರು 4-45 ರಿಂದ 5-00 ಗಂಟೆಯ ಸಮಯದಲ್ಲಿ ನಾನು ಮನೆಯ ಬಳಿಯಿದ್ದೆ. ಆ ಸಮಯದಲ್ಲಿ ನನ್ನ ಸ್ನೇಹಿತನಾದ ಆಟೋ ದ್ಯಾವಪ್ಪ ರವರು ನನ್ನ ಮೊಬೈಲ್ ಫೋನ್ ಗೆ ಕರೆ ಮಾಡಿ ತಾನು ಮತ್ತು ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರಾದ ರಮೇಶ್ ರವರು ಮುಷ್ಟೂರು ಕೆರೆ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದಾಗ ಮಾಜಿ ಎಂ.ಎಲ್.ಎ ಶಿವಾನಂದ ಎನ್ನುವವರ ಜಮೀನಿನಲ್ಲಿ ನಿಮ್ಮ ಮಗನನ್ನು ಯಾರೋ ಹೊಡೆದು ಹಾಕಿದ್ದಾರೆ ರಕ್ತ ಸುರಿಸಿಕೊಂಡು ಒದ್ದಾಡುತ್ತಿದ್ದಾನೆ ಎಂದು ತಿಳಿಸಿದ್ದು, ನಾನು ಕೂಡಲೇ ನನ್ನ ಗಾಡಿಯಲ್ಲಿ ಸ್ಥಳಕ್ಕೆ ಹೋದಾಗ ವಿಚಾರ ನಿಜವಾಗಿದ್ದು, ನನ್ನ ಮಗ ವೆಂಕಟೇಶ್ ರವರು ರಕ್ತದ ಮಡುವಿನಲ್ಲಿ ಬಿದ್ದು, ಒದ್ದಾಡುತ್ತಿದ್ದು, ನನ್ನ ಮಗನ ಎದೆಯ ಬಳಿ, ಎಡಭಾಗದ ಸೊಂಟದ ಬಳಿ ಮತ್ತು ಬಲಬಾಗದ ಕುತ್ತಿಗೆಗೆ ತಿವಿದ ರಕ್ತಗಾಯಗಳಾಗಿ ತಲೆಯಲ್ಲಿಯೂ ರಕ್ತಗಾಯವಾಗಿತ್ತು. ನಾನು ಅಲ್ಲಿಯೇ ನನ್ನ ಮಗನನ್ನು ಯಾರೋ ನಿನಗೆ ಹೊಡೆದಿದ್ದೆಂದು ವಿಚಾರಿಸಿದಾಗ ನಮ್ಮ ಗ್ರಾಮದ ವಾಸಿಗಳಾದ ನಾಯಕರ ಜನಾಂಗದ ಪ್ರವೀಣ ಬಿನ್ ಗೋವಿಂದಪ್ಪ, ಮತ್ತು ಆಚಾರಿ ಜನಾಂಗದ ಮಂಜುನಾಥ ಚಾರಿ ಬಿನ್ ಶ್ರೀನಿವಾಸ, ಹಾಗೂ ಇನ್ನು ಅವರೊಂದಿಗೆ ಬೇರೆಯವರು ಇದ್ದರು. ಎಂದು ಇಬ್ಬರ ಹೆಸರುಗಳನ್ನು ಹೇಳಿ ನಂತರ ಅವನಿಂದ ಮಾತನಾಡಲು ಸಾಧ್ಯವಾಗಲಿಲ್ಲ. ಸ್ಥಳದಲ್ಲಿ ರಕ್ತವಾಗಿರುವ ಕಲ್ಲು ಬಿದ್ದಿತ್ತು. ಕೂಡಲೆ ನಾನು ನನ್ನ ಸ್ನೇಹಿತ ದ್ಯಾವಪ್ಪ ರವರೊಂದಿಗೆ ನನ್ನ ಮಗನನ್ನು ಸ್ವಲ್ಪ ದೂರ ನನ್ನ ಗಾಡಿಯಲ್ಲಿ ಕುಳ್ಳಿರಿಸಿಕೊಂಡು ರಸ್ತೆಗೆ ಸಾಗಿಸಿಕೊಂಡು ಬರುವಷ್ಟರಲ್ಲಿ ಯಾರೋ ಆಂಬ್ಯುಲೆನ್ಸ್ ಗೆ ಫೋನ್ ಮಾಡಿ ಕರೆಯಿಸಿದ್ದು, ನಂತರ ಆಂಬ್ಯುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತೇನೆ. ವೈದ್ಯರು ಪರೀಕ್ಷೆ ಮಾಡಿ ಬರುವಾಗಲೇ ಸತ್ತು ಹೋಗಿರುತ್ತಾನೆಂದು ತಿಳಿಸಿರುತ್ತಾರೆ. ನನ್ನ ಮಗ ವೆಂಕಟೇಶ್ ರವರನ್ನು ಮೇಲ್ಕಂಡವರು ಯಾವುದೋ ವಿಚಾರಕ್ಕಾಗಿ ಕರೆದುಕೊಂಡು ಹೋಗಿ ಚಾಕುವಿನಿಂದ ತಿವಿದು ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾರೆ. ಆದ್ದರಿಂದ ತಾವುಗಳು ಕಾನೂನು ರೀತಿಯ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕೆಂದು ಕೋರಿದ್ದರ ದೂರಿನ ಸಾರಾಂಶವಾಗಿರುತ್ತದೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.268/2021 ಕಲಂ. 279,337  ಐ.ಪಿ.ಸಿ :-

     ದಿನಾಂಕ 07-06-2021 ರಂದು ಮದ್ಯಾಹ್ನ 13-00 ಗಂಟೆಗೆ ಮುನಿವೆಂಕಟರಾಯಪ್ಪ ಬಿನ್ ನಾರೆಪ್ಪ, 38 ವರ್ಷ, ಆದಿ ಕರ್ನಾಟಕ ಜನಾಂಗ, ಕಾರ್ಪೆಂಟರ್ ಕೆಲಸ, ಸೂಲದೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಕಾರ್ಪೆಂಟರ್ ಕೆಲಸ ಮಾಡಿಕೊಂಡಿರುತ್ತೇನೆ. ಹೀಗಿರುವಾಗ ದಿನಾಂಕ 04-06-2021 ರಂದು ತಮ್ಮ ಸಂಬಂದಿಗಳಾದ ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಬಳಿ ಇರುವ ಕದಿರಿಪುರ ಗ್ರಾಮದ ವಾಸಿ ಸಮರ ಬಿನ್ ನಾಗರಾಜ್ 23 ವರ್ಷ ಹಾಗೂ ಆತನ ತಾಯಿ ಮುನಿರತ್ನಮ್ಮ ಕೊಂ ನಾಗರಾಜ್ ರವರು ಅವರ ಬಾಬತ್ತು ಕೆಎ09 ಹೆಚ್.ಎನ್ 0341 ಬಜಾಜ್ ಪಲ್ಸರ್ ದ್ವಿ ಚಕ್ರ ವಾಹನದಲ್ಲಿ ತಮ್ಮ ಗ್ರಾಮಕ್ಕೆ ಬಂದಿರುತ್ತಾರೆ. ನಂತರ ದಿನಾಂಕ 06-06-2021 ರಂದು ಸಮರ ಮತ್ತು ಅವರ ತಾಯಿ ತಮ್ಮ ಗ್ರಾಮದಿಂದ ಅವರ ಗ್ರಾಮಕ್ಕೆ ಹೋಗುವ ಸಲುವಾಗಿ ಅವರ ಬಾಬತ್ತು ಕೆಎ 09 ಹೆಚ್.ಎನ್ 0341 ಬಜಾಜ್ ಪಲ್ಸರ್ ದ್ವಿ ಚಕ್ರ ವಾಹನದಲ್ಲಿ ಬೆಳಗ್ಗೆ 4-20 ಗಂಟೆ ಸಮಯದಲ್ಲಿ ತಮ್ಮ ಗ್ರಾಮದಿಂದ ಹೋಗಿರುತ್ತಾರೆ. ನಂತರ ಅದೇ ದಿನ 4-45 ಗಂಟೆಗೆ ಸಮರ ರವರ ಮೊಬೈಲ್ ನಿಂದ ಯಾರೋ ಸಾರ್ವಜನಿಕರು ತನಗೆ ಕರೆ ಮಾಡಿ ಸಮರ ರವರ ದ್ವಿಚಕ್ರ ವಾಹನಕ್ಕೆ ಪೆರಮಾಚನಹಳ್ಳಿ ಗೇಟ್ ಬಳಿ ಅಪಘಾತವಾಗಿದೆ ನೀವು ಕೂಡಲೇ ಬನ್ನಿ ಎಂದು ಹೇಳಿದ್ದು ಕೂಡಲೇ ತಾನು ಮತ್ತು ತನ್ನ ಅಣ್ಣ ವೆಂಕಟನರಸಪ್ಪ ರವರು ಸ್ಥಳಕ್ಕೆ ಹೋಗಿ ನೋಡಲಾಗಿ ಮೇಲ್ಕಂಡ ಸಮರ ಮತ್ತು ಆತನ ತಾಯಿ ಮುನಿರತ್ನಮ್ಮ ರವರಿಗೆ ಅಪಘಾತವಾಗಿದ್ದು ಸಮರ ರವರಿಗೆ ಎಡಗಾಲಿಗೆ ಮತ್ತು ಮುನಿರತ್ನಮ್ಮ ರವರ ಬಲ ಕಾಲಿಗೆ ರಕ್ತಗಾಯವಾಗಿರುತ್ತೆ. ಸ್ಥಳದಲ್ಲಿ ಸಮರ ರವರ ಕೆಎ09 ಹೆಚ್.ಎನ್0341 ಬಜಾಜ್ ಪಲ್ಸರ್ ದ್ವಿ ಚಕ್ರ ವಾಹನ ಮತ್ತು ಇನ್ನೊಂದು ಕೆಎ 07 ಇ 6736 ನೊಂದಣಿ ಸಂಖ್ಯೆಯ ಸ್ಕೂಟಿ ದ್ವಿಚಕ್ರ ವಾಹನ ಸಹ ಅಲ್ಲಯೇ ಬಿದ್ದಿರುತ್ತೆ. ನಂತರ ಸಮರ ರವರನ್ನು ವಿಚಾರಿಸಲಾಗಿ ಆತನು ತಾನು ಮತ್ತು ತನ್ನ ತಾಯಿ ಮುನಿರತ್ನಮ್ಮ ರವರು ತಮ್ಮ ಗ್ರಾಮಕ್ಕೆ ಹೋಗುವ ಸಲುವಾಗಿ ಈ ದಿನ ಬೆಳಗ್ಗೆ 4-30 ಗಂಟೆ ಸಮಯದಲ್ಲಿ ಬೆಂಗಳೂರು-ಕಡಪ ಮುಖ್ಯ ರಸ್ತೆಯ ಪೆರಮಾಚನಹಳ್ಳಿ ಗೇಟ್ ಬಳಿ ಹೋಗುತ್ತಿದ್ದಾಗ ತಮ್ಮ ಹಿಂಬದಿಯಿಂದ ಬಂದ ಸೂಲದೇನಹಳ್ಳಿ ಗ್ರಾಮದ ವಾಸಿ ವಿನೋದ್ ಬಿನ್ ವೆಂಕಟರಾಯಪ್ಪ ಆತನ ಬಾಬತ್ತು ಕೆಎ07 ಇ6736 ನೊಂದಣಿ ಸಂಖ್ಯೆಯ ಸ್ಕೂಟಿ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿ ಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆಸಿದ್ದು ತನ್ನ ವಾಹನ ನಿಯಂತ್ರಣ ತಪ್ಪಿ ತಮ್ಮ ಮುಂದೆ ಹೋಗುತ್ತಿದ್ದ ಯಾವುದೋ ಟಾಟಾ ಏಸ್ ವಾಹನಕ್ಕೆ ಹೋಗಿ ಹಿಂಬದಿಯಿಂದ ಡಿಕ್ಕಿ ಹೊಡೆದಿರುತ್ತೆ. ಟಾಟಾ ಏಸ್ ವಾಹನದ ನೊಂದಣಿ ಸಂಖ್ಯೆಯನ್ನು ನಾನು ಗಮನಿಸಿರುವುದಿಲ್ಲ. ಆಗ ತಾನು ಮತ್ತು ತನ್ನ ತಾಯಿ ವಾಹನ ಸಮೇತ ಕೆಳಗೆ ಬಿದ್ದು ಹೋಗಿರುತ್ತೇವೆ ಎಂದು ಹೇಳಿರುತ್ತಾನೆ. ನಂತರ ತಾವು ಸಮರ ಮತ್ತು ಆತನ ತಾಯಿಯನ್ನು ಬೆಂಗಳೂರಿನ ಎಂ.ವಿ.ಜೆ ಆಸ್ವತ್ರೆಗೆ ಆಂಬುಲೆನ್ಸ್ ನಲ್ಲಿ ಕಳುಹಿಸಿಕೊಟ್ಟಿರುತ್ತೇವೆ. ಹಾಲಿ ಸಮರ ಮತ್ತು ಆತನ ತಾಯಿ ಬೆಂಗಳೂರಿನ ಹಾಸ್ಮಟ್ ಆಸ್ವತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುತ್ತಾರೆ. ಇದುವರೆಗೂ ತಾನು ಗಾಯಾಳುಗಳಿಗೆ ಚಿಕಿತ್ಸೆಯನ್ನು ಕೊಡಿಸುತ್ತಿದ್ದು ಈ ದಿನ ತಡವಾಗಿ ಠಾಣೆಗೆ ಬಂದು ನೀಡುತ್ತಿದ್ದು ಸದರಿ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ತಮ್ಮ ಗ್ರಾಮದ ಕೆಎ07 ಇ6736 ನೊಂದಣಿ ಸಂಖ್ಯೆಯ ಸ್ಕೂಟಿ ದ್ವಿಚಕ್ರ ವಾಹನದ ಸವಾರನಾದ ವಿನೋದ್ ಬಿನ್ ವೆಂಕಟರಾಯಪ್ಪ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.132/2021 ಕಲಂ. 506,507,504 ಐ.ಪಿ.ಸಿ :-

     ದಿನಾಂಕ 05/06/2021 ರಮದು ಪಿರ್ಯಾಧಿದಾರರಾದ ಸತ್ಯನಾರಾಯಣಪ್ಪ ಬಿನ್ ಲೇಟ್ ನಾರಾಯಣಪ್ಪ , ಬೋವಿ ಜನಾಂಗ, ನರಸಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ಅರ್ಜಿಯಾ ಸಾರಾಂಶವೇನೆಂದರೆ- ಎದರು ಅರ್ಜಿದಾರರು 9148971839 ಮೊಬೈಲ್ ನಿಂದ ಅರ್ಜಿದಾರರ ಮೊಬೈಲ್ ನಂ 8618293193 ಗೆ ಕರೆಯನ್ನು ಮಾಡಿ ಪ್ರಾಣ ಬೆದರಿಕೆಯನ್ನು ಹಾಕಿದ್ದು ಹಾಗೂ ಅವಾಚ್ಯಶಬ್ದಗಳಿಂದ ನಿಮದಿಸಿದ್ದು ಮೇಲ್ಕಂಡ ಅಶೋಕ ಬುವರ ವಿರುದ್ದ ಈಗ್ಗೆ  3 ತಿಂಗಳ ಹಿಂದೆ ಅಶೋಕ ಮತ್ತು ಈತನ ಸಹಚರರ ವಿರುದ್ದ ಸ್.ಸಿ /ಎಸ್.ಟಿ ಕೇಸು ದಾಖಲಾಗಿದ್ದು ಸದರಿ ಕೇಸಿನಲ್ಲಿ ಎ-1 ಆಗಿರುತ್ತಾನೆ. ಈತನ ಬೇರೆ ಬೇರೆ ಕಡೆಗಳಿಂದ ನನಗೆ ಫೋನ್ ಮಾಡಿ ಹಿಂಸಿಸುತ್ತಿದ್ದು ನನ್ನ ಮಾನಸಿಕ ಖಿನ್ನತೆಗ ಒಳಗೊಂಡಿದ್ದು ತೀವ್ರನೊಂದಿರುತ್ತೇನೆ. ಈತನ ವಿರುದ್ದ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಗೌರಿಬಿದನೂರು ಗ್ರಾಮಾಂತರ ಠಾಣೆ ಎನ್ .ಸಿ.ಆರ್ ನಂ 261/2021 ರಂತೆ ನಿಂದಾಯಿಸಿಕೊಂಡಿದ್ದು, ಸದರಿ ದೂರು ಕಲಂ 504,506,507 ಐಪಿಸಿ ಆಗಿದ್ದು ಅಸಂಜ್ಙೆಯ ಅಪರಾಧವಾಗಿದ್ದು ಈ ದೂರನ್ನು ಪ್ರಕರಣವಾಗಿ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು  ಘನ ನ್ಯಾಯಾಲಯಕ್ಕೆ ಅನುಮತಿ ನೀಡಲು ಕೋರಿದ್ದು ಘನ ನ್ಯಾಯಾಲಯವು ದಿನಾಂಕ 07/06/2021 ಅನುಮತಿ ನೀಡಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.133/2021 ಕಲಂ. 32,34,36(A) ಕೆ.ಇ ಆಕ್ಟ್ :-

     ದಿನಾಂಕ 07-06-2021 ರಂದು 21-00 ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಶ್ರೀ ಎನ್. ಮೋಹನ್ ರವರು ಠಾಣೆಗೆ ಹಾಜರಾಗಿ ಆಸಾಮಿ, ಮಾಲುಗಳು ಮತ್ತು ಪಂಚನಾಮೆಯನ್ನು  ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂಧರೆ ತಾನು ದಿನಾಂಕ 07-06-2021 ರಂದು ಸಂಜೆ 06-00 ಗಂಟೆಯಿಂದ ಹೆಚ್,ಸಿ, 20 ರಿಜ್ವಾನುಲ್ಲಾ, ಹೆಚ್.ಸಿ. 10 ಶ್ರೀರಾಮಯ್ಯ, ಹೆಚ್.ಸಿ. 20 ಶ್ರೀನಿವಾಸ ರೆಡ್ಡಿ , ಪಿ.ಸಿ. 179  ಶಿವಶೇಖರ್ ಮತ್ತು ಎ.ಪಿ.ಸಿ. 143 ಮಹೇಶರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆ.ಎ.40-ಜಿ-538 ರಲ್ಲಿ ಪಟ್ರೋಲಿಂಗ್ ಕರ್ತವ್ಯವನ್ನು ವಿಧುರಾಶ್ವಥ ಹೊರಠಾಣೆಯ ವ್ಯಾಪ್ತಿಯ ಕುಡುಮಲಕುಂಟೆ, ದೊಡ್ಡಕುರುಗೋಡು, ವಿಧುರಾಶ್ವಥ ದೇವಸ್ಥಾನ ಕಡೆ ಮಾಡಿಕೊಂಡು ಸಂಜೆ 07-30 ಗಂಟೆಯಲ್ಲಿ ಚಿಕ್ಕಕುರುಗೋಡು ಗ್ರಾಮದಲ್ಲಿ ಗಸ್ತು ಕರ್ತವ್ಯವನ್ನು ಮಾಡುತ್ತಿದ್ದಾಗ ಬೆಂಗಳೂರು- ಹಿಂದೂಪುರ ರಸ್ತೆಯಲ್ಲಿ ಹಿಂದೂಪುರದ ಕಡೆಗೆ ಯಾವುದೋ ಒಂದು ಮಾರುತಿ ಜೆನ್ ಕಾರಿನಲ್ಲಿ ಮದ್ಯವನ್ನು ಸಾಗಾಣಿಕೆಯನ್ನು ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ಹಿಂದೂಪುರ-ಬೆಂಗಳೂರು ರಸ್ತೆಯಲ್ಲಿ  ರೈಲ್ವೇ ಗೇಟ್ ಕಡೆಗೆ ಪಂಚರನ್ನು ಕರೆದುಕೊಂಡು ಬರುತ್ತಿದ್ದಾಗ ಗೌರಿಬಿದನೂರು ಟೌನ್ ಕಡೆಯಿಂದ ಯಾವುದೋ ಒಂದು ಕಾರು ಬರುತ್ತಿದ್ದು ಅನುಮಾನಗೊಂಡು ತಾನು ಮತ್ತು ಸಿಬ್ಬಂದಿಯವರು ನಿಲ್ಲಿಸಿ ಪಂಚರ ಸಮಕ್ಷಮದಲ್ಲಿ ಪರಿಶೀಲಿಸಲಾಗಿ  ಮಾರುತಿ ಜೆನ್ ಕಾರು ಆಗಿದ್ದು  ಚಾಲಕನನ್ನು ವಿಚಾರಣೆಯನ್ನು ಮಾಡಲಾಗಿ ತನ್ನ ಹೆಸರು ಆದಿನಾರಾಯಣ ಬಿನ್ ಲೇಟ್ ಅಬ್ಬಣ್ಣ, 38 ವರ್ಷ, ಅಗಸರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ನಂ. 6/631, ಆರ್,ಟಿ.ಸಿ. ಬಸ್ ಸ್ಟ್ಯಾಂಡ್ ಹತ್ತಿರ, ಶ್ರೀನಿವಾಸ ನಗರ, ಅನಂತ ಪುರ ಎಂದು ತಿಳಿಸಿದನು. ಎಲ್ಲಿಂದ ಬಂದೆ ,ಎಲ್ಲಿಗೆ ಹೋಗುತ್ತೀದ್ದೀಯಾ ಎಂದು ಕೇಳಿದಾಗ ತಾನು ಗೌರಿಬಿದನೂರಿಗೆ ಬೆಳಿಗ್ಗೆ ಬಂದಿದ್ದು  ಅನಂತಪುರಕ್ಕೆ ಹೋಗುತ್ತಿದ್ದೇನೆಂದು ಹೇಳಿದನು. ಕಾರಿನಲ್ಲಿ ಏನಿದೆ ಎಂದು ಕೇಳಿದಾಗ ತಾನು ಮದ್ಯವನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಕಾರಿನ ಡಿಕ್ಕಿಯಲ್ಲಿ ಮದ್ಯವಿದೆ ಎಂದು ಹೇಳಿದನು. ನಂತರ ಕಾರಿನ ನೊಂದಣಿ ಸಂಖ್ಯೆಯನ್ನು ಪರಿಶೀಲಿಸಲಾಗಿ ಎ.ಪಿ-36-ಹೆಚ್-0500 ಮಾರುತಿ ಜೆನ್ ಕಾರು ಆಗಿರುತ್ತೆ. ಕಾರಿನ ಡಿಕ್ಕಿಯನ್ನು ತೆರೆಯಿಸಿ ನೋಡಲಾಗಿ ಒಂದು ಪ್ಲಾಸ್ಟೀಕ್ ಚೀಲವಿದ್ದು ಮದ್ಯದ ಬಾಟಲ್ ಇರುತ್ತೆ. ಚೀಲವನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಲಾಗಿ 1)ಚೀಲದಲ್ಲಿ OLD ADMIRAL  VSOP BRANDY ಹೆಸರಿನ 1 ಲೀಟರ್ ಸಾಮರ್ಥ್ಯದ ಬ್ರಾಂದಿ ಆಗಿದ್ದು ಎಣಿಸಲಾಗಿ 27 ಪ್ಲಾಸ್ಟೀಕ್ ಬಾಟಲ್ ಆಗಿರುತ್ತೆ. ಮದ್ಯವು 27 ಲೀಟರ್ ಇದ್ದು ಬೆಲೆ 10470/- ರೂ.ಗಳಾಗಿರುತ್ತೆ.  ಪಕ್ಕದಲ್ಲಿ 2) ORIGINAL CHOICE  ಹೆಸರಿನ 90  ಎಂ..ಎಲ್. ಸಾಮರ್ಥ್ಯದ  9 ಕೇಸ್ ಮದ್ಯದ ಟೆಟ್ರ್ಯಾಪಾಕೇಟ್ ಗಳಿರುತ್ತೆ. ಒಟ್ಟು 864 ಟೆಟ್ರ್ಯಾ ಪಾಕೇಟ್ ಇದ್ದು ಬೆಲೆ 30,352/- ರೂ.ಗಳಾಗಿರುತ್ತೆ. ಇವುಗಳ ಒಟ್ಟು 104 ಲೀಟರ್ 860 ಎಂ.ಎಲ್. ಆಗಿದ್ದು  40,822/- ರೂಗಳಾಗಿರುತ್ತೆ. ಆಸಾಮಿಯನ್ನು ಮದ್ಯವನ್ನು ಎಲ್ಲಿ ಖರೀದಿಸಿದ್ದೆಂದು  ಕೇಳಿದಾಗ  ಕೋಟಾಲದಿನ್ನೆ ಕ್ರಾಸ್ ನಲ್ಲಿರುವ  ತಿರುಮಲ ವೈನ್ಸ್ ನಲ್ಲಿ ಕ್ಯಾಷಿಯರ್  ಗೆ ನಾನು  40,822/- ರೂ.ಗಳನ್ನು ಕೊಟ್ಟು ಖರೀದಿಸಿ ಅನಂತಪುರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟವನ್ನು ಮಾಡಲು ತೆಗೆದುಕೊಂಡು ಹೋಗುತ್ತಿರುತ್ತೇನೆಂಧು  ತಿಳಿಸಿದನು.  ಆಸಾಮಿಯು ಲಾಕ್ ಡೌನ್ ಆಗಿದ್ದರೂ ಸಹಾ  ಆಂದ್ರ ಪ್ರದೇಶದಿಂದ  ಗೌರಿಬಿದನೂರಿಗೆ ಬಂದು  ಕೋಟಾಲದಿನ್ನೆ ಕ್ರಾಸ್ ನಲ್ಲಿರುವ ತಿರುಮಲ ವೈನ್ಸ್ ನಲ್ಲಿ ಅಕ್ರಮವಾಗಿಮದ್ಯವನ್ನು ಖರೀದಿಸಿದ್ದು ಕ್ಯಾಷಿಯರ್  ಲೈಸೆನ್ಸ್ ನಲ್ಲಿರುವ ಷರತ್ತುಗಳನ್ನು ಉಲ್ಲಂಘನೆ ಮಾಡಿ ನಿಗದಿತ ಅಳತೆಗಿಂತ ಹೆಚ್ಚಿನ ಮದ್ಯವನ್ನು ಆಸಾಮಿಗೆ ನೀಡಿರುತ್ತಾನೆ. 1)ಚೀಲದಲ್ಲಿರುವ  OLD ADMIRAL  VSOP BRANDY ಹೆಸರಿನ 1 ಲೀಟರ್ ಸಾಮರ್ಥ್ಯದ 26 ಪ್ಲಾಸ್ಟೀಕ್ ಬಾಟಲ್ ಮದ್ಯ 2) ORIGINAL CHOICE  ಹೆಸರಿನ 90 ಎಂ..ಎಲ್. ಸಾಮರ್ಥ್ಯದ  9 ಕೇಸ್ ಮದ್ಯದ  864 ಟೆಟ್ರ್ಯಾ ಪಾಕೇಟ್ 3) ಪ್ಲಾಸ್ಟೀಕ್ ಚೀಲ, 4) ಎ.ಪಿ-36-ಹೆಚ್-0500 ಮಾರುತಿ ಜೆನ್ ಕಾರು, 5) OLD ADMIRAL  VSOP BRANDY ಹೆಸರಿನ 1 ಲೀಟರ್ ಸಾಮರ್ಥ್ಯದ 1 ಪ್ಲಾಸ್ಟೀಕ್ ಬಾಟಲ್ ಮದ್ಯ , 6) ORIGINAL CHOICE  ಹೆಸರಿನ 90  ಎಂ.ಎಲ್. ಸಾಮರ್ಥ್ಯದ  1 ಟೆಟ್ರ್ಯಾ ಪಾಕೇಟ್ ಅನ್ನು ಸ್ಯಾಂಪಲ್ ಗಾಗಿ ತೆಗೆದು  ಬಿಳಿ ಬಟ್ಟೆಯಿಂದ ಸುತ್ತಿ ದಾರದಿಂದ ಹೊಲಿದು  ಕೆ. ಎಂಬ ಅಕ್ಷರದಿಂದ ಸೀಲು ಮಾಡಿ ಪಂಚರ ಸಮಕ್ಷಮದಲ್ಲಿ ಪಂಚನಾಮೆಯನ್ನು ಸಂಜೆ 07-30 ಗಂಟೆಯಿಂದ 08-30 ಗಂಟೆಯವರೆಗೆ ಜರುಗಿಸಿ ಅಮಾನತ್ತುಪಡಿಸಿಕೊಂಡಿರುತ್ತೆ. ಆಸಾಮಿ, ಮಾಲುಗಳು ಮತ್ತು ಪಂಚನಾಮೆಯನ್ನು 21-00 ಗಂಟೆಗೆ ಹಾಜರುಪಡಿಸುತ್ತಿದ್ದು ಆಸಾಮಿಗಳ ವಿರುದ್ದ ಕಲಂ 32, 34 , 36(ಎ) ಕರ್ನಾಟಕ ಅಬಕಾರಿ ಕಾಯ್ದೆ ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ  ಪ್ರಕರಣ ದಾಖಲಿಸಿರುವುದು.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.185/2021 ಕಲಂ. 394 ಐ.ಪಿ.ಸಿ :-

     ದಿನಾಂಕ: 07-06-2021 ರಂದು ಸಂಜೆ 5.00 ಗಂಟೆಯಲ್ಲಿ ಫಿರ್ಯಾದಿದಾರರಾದ ದೇವರಾಜ ಡಿ.ವಿ. ಬಿನ್ ವೆಂಕಟೇಶಪ್ಪ, ಸುಮಾರು 32 ವರ್ಷ, ಕುರುಬರು, ಜಿರಾಯ್ತಿ, ವಾಸ: ದೇವಗಾನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಜಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆ ವೆಂಕಟೇಶಪ್ಪ ಮತ್ತು ತಮ್ಮ ತಾಯಿ ಶ್ರೀಮತಿ ನಂಜಮರಿಯಮ್ಮ ರವರಾಗಿದ್ದು, 1ನೇ ನಮ್ಮ ಅಕ್ಕ ಶ್ರೀಮತಿ ಮಂಜುಳ, 2ನೇ ನಮ್ಮ ಅಣ್ಣ ಪ್ರಕಾಶ, 3ನೇ ನಮ್ಮ ಅಕ್ಕ ಶ್ರೀಮತಿ ಶಶಿಕಲ ಮತ್ತು 4ನೇ ದೇವರಾಜ ಆದ ನಾನು ಒಟ್ಟು 4 ಜನ ಮಕ್ಕಳಿದ್ದು ನಮ್ಮೆಲ್ಲರಿಗೂ ಮದುವೆಗಳಾಗಿರುತ್ತೆ. ನಮ್ಮ ಅಕ್ಕಂದಿರಿಗೆ ಇಬ್ಬರಿಗೂ ಮದುವೆಗಳಾಗಿದ್ದು, ತಮ್ಮ ಅಣ್ಣ ಪ್ರಕಾಶ್ ರವರು ಬೆಂಗಳೂರಿನಲ್ಲಿ ರಿಲಿಯಾನ್ಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿರುತ್ತಾನೆ. ತನಗೆ ಈಗ್ಗೆ 2 ವರ್ಷದ ಹಿಂದೆ ತಮಿಳುನಾಡು ಬೆರಿಕೆ ಬಳಿಯಿರುವ ಚಿಂತಲದೊಡ್ಡಿ ಗ್ರಾಮದ ಲೇಟ್ ರಾಜು ಎಂಬುವರ ಮಗಳಾದ ಪವಿತ್ರ ಎಂಬಾಕೆಯೊಂದಿಗೆ ಮದುವೆಯಾಗಿರುತ್ತದೆ. ತಾನು ತಮ್ಮ ಗ್ರಾಮದಲ್ಲಿ ನಮ್ಮ ತಂದೆ-ತಾಯಿ ಹಾಗೂ ಹೆಂಡತಿ ಶ್ರೀಮತಿ ಪವಿತ್ರ ರವರೊಂದಿಗೆ ವಾಸವಾಗಿರುತ್ತೇವೆ. ತಾನು ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿದ್ದು ಪ್ರತಿ ದಿನ ರೇಷ್ಮೆ ಹುಳುಗಳಿಗೆ ಸೊಪ್ಪನ್ನು ತರುವ ಸಲುವಾಗಿ ಬೆಳಿಗ್ಗೆ 6.00 ಗಂಟೆಗೆ ಹೋಗಿ ಸೊಪ್ಪನ್ನು ತೆಗೆದುಕೊಂಡು ಬೆಳಿಗ್ಗೆ ಸುಮಾರು 10.00 ಗಂಟೆಗೆ ಮನೆಗೆ ಬರುತ್ತಿದ್ದೆ. ಎಂದಿನಂತೆ ಈ ದಿನ ದಿನಾಂಕ: 07-06-2021 ರಂದು ನಾನು, ನಮ್ಮ ತಾಯಿ ಶ್ರೀಮತಿ ನಂಜಮರಿಯಮ್ಮ ಮತ್ತು ನಮ್ಮ ತಂದೆ ವೆಂಕಟೇಶಪ್ಪ ರವರು ರೇಷ್ಮೆ ಹುಳುಗಳಿಗೆ ಸೊಪ್ಪನ್ನು ತೆಗೆದುಕೊಂಡು ಬರುವ ಸಲುವಾಗಿ ತೋಟದ ಬಳಿ ಹೋಗಿದ್ದು, ಬೆಳಿಗ್ಗೆ ಸುಮಾರು 7.00 ಗಂಟೆ ಸಮಯದಲ್ಲಿ ನಮ್ಮ ಅಣ್ಣನಾದ ನರಸಿಂಹಮೂತರ್ಿ ಬಿನ್ ಲೇಟ್ ಜಿ. ಮುನಿಯಪ್ಪ ರವರು ತನಗೆ ಪೋನ್ ಮಾಡಿ ನಿನ್ನ ಹೆಂಡತಿ ಅತ್ತುಕೊಂಡು ನನಗೆ ಪೋನ್ ಮಾಡಿದ್ದಾಳೆ ಎಲ್ಲಿದ್ದೀಯ ನೀನು ಎಂದು ಕೇಳಿದ್ದು, ತಾನು ತೋಟದಲ್ಲಿದ್ದೇನೆ ಎಂದು ಹೇಳಿ ಕೂಡಲೇ ತಾನು ಹಾಗೂ ನಮ್ಮ ಅಣ್ಣ ನರಸಿಂಹಮೂರ್ತಿ ರವರು ಮನೆಯ ಬಳಿ ಬರುವಷ್ಟರಲ್ಲಿ ತನ್ನ ಹೆಂಡತಿ ಮನೆಯ ಒಳಗಡೆ ಇದ್ದು ಯಾರೋ ಹೊರಗಡೆಯಿಂದ ಬಾಗಿಲಿನ ಚಿಲಕವನ್ನು ಹಾಕಿಕೊಂಡು ಹೋಗಿದ್ದು ಬಾಗಿಲು ತೆಗೆದು ನೋಡಲಾಗಿ ನನ್ನ ಹೆಂಡತಿ ಅಸ್ವಸ್ಥಳಾಗಿ ಕೆಳಗೆ ಬಿದ್ದು ಕೂಡಲೇ ಆಕೆಯನ್ನು ಉಪಚರಿಸಿ ವಿಚಾರ ಮಾಡಲಾಗಿ ದಿನಾಂಕ: 07-06-2021 ರಂದು ಬೆಳಿಗ್ಗೆ 6.30 ಗಂಟೆ ಸಮಯದಲ್ಲಿ ಆಕೆ ಮನೆಗೆ ನೀರು ತೆಗೆದುಕೊಂಡು ಬರಲು ಹೋಗಿ ನೀರನ್ನು ತೆಗೆದುಕೊಂಡು ಅಡುಗೆ ಮನೆಗೆ ಹೋಗುವಷ್ಟರಲ್ಲಿ ಒಬ್ಬ ಮಹಿಳೆ ಬಂದು ನನ್ನ ಹೆಂಡತಿಯ ಬಾಯಿಯನ್ನು ಮುಚ್ಚಿಕೊಂಡಿದ್ದು ಅಷ್ಟರಲ್ಲಿ ಇಬ್ಬರುಪುರುಷರು ಮನೆಯ ಒಳಗಡೆ ಬಂದು ನನ್ನ ಹೆಂಡತಿಗೆ ಕೈಗಳಿಂದ ಹೊಡೆದು ಮನೆಯಲ್ಲಿಟ್ಟಿರುವ ವಡವೆಗಳನ್ನು ಎತ್ತಿಕೊಡು ಎಂದು ಕೇಳಿದ್ದು, ಆಗ ಆಕೆ ಎತ್ತಿಕೊಡುವುದಿಲ್ಲ ವಡವೆಗಳು ನನ್ನ ಬಳಿಯಿಲ್ಲ ನಮ್ಮ ಅತ್ತೆಯ ಬಳಿ ಇದ್ದಾವೆ ಎಂದು ಹೇಳಿದ್ದಕ್ಕೆ ಮನೆಯಲ್ಲಿದ್ದ ಬೀರುವಿನ ಬಾಗಿಲನ್ನು ತೆಗೆದು ಬೀರುವಿನಲ್ಲಿದ್ದ ಸುಮಾರು 4 ಗ್ರಾಂ ತೂಕದ ಒಂದು ಉಂಗುರವನ್ನು ಎತ್ತಿಕೊಂಡು ನನ್ನ ಹೆಂಡತಿಯ ಕತ್ತಿನಲ್ಲಿದ್ದ ತಾಳಿಯನ್ನು ಕಿತ್ತುಕೊಂಡಿದ್ದು ಆ ಪೈಕಿ 3 ಗ್ರಾಂ ತೂಕದ ಒಂದು ತಾಳಿ ಕಿತ್ತುಕೊಂಡಿದ್ದು, ಓಲೆಗಳನ್ನು ಬಿಚ್ಚಿಕೊಂಡು ಎಂದು ಕೇಳಿದ್ದು ಆಗ ತಾನು ಓಲೆಗಳನ್ನು ಕಿತ್ತು ಹುಳು ಮೇಯಿಸುವ ಟೇಬಲ್ ಕೆಳಗೆ ಹಾಕಿದ್ದು ಆಗ ಇಬ್ಬರು ಗಂಡಸರು ಸೇರಿಕೊಂಡು ತನ್ನ ಹೆಂಡತಿ ತೊಡೆ ಮೇಲೆ, ಹೊಟ್ಟೆಯ ಮೇಲೆ ಕಾಲುಗಳಲ್ಲಿ ಒದ್ದು ಕೈಗಳಲ್ಲಿ ಹೊಡೆದು ಮುಖವನ್ನು ಗೋಡೆಗೆ ಹೊಡೆದು ಗಾಯಗೊಳಿಸಿ ಅಲ್ಲಿಂದ ಹೊರಟು ಹೋಗಿದ್ದು, ನಂತರ ತನ್ನ ಹೆಂಡತಿ ತಮ್ಮ ಗ್ರಾಮದ ನರಸಿಂಹಮೂರ್ತಿ ರವರಿಗೆ ಪೋನ್ ಮಾಡಿರುವುದಾಗಿ ವಿಚಾರ ತಿಳಿದಿರುತ್ತೆ. ಮನೆಯಲ್ಲಿ ಯಾರು ಇಲ್ಲದೆ ಇದ್ದ ಸಮಯದಲ್ಲಿ ಮನೆಯ ಒಳಗೆ ನುಗ್ಗಿ ತನ್ನ ಹೆಂಡತಿಯನ್ನು ಹೊಡೆದು ಮನೆಯ ಬೀರುವಿನಲ್ಲಿಟ್ಟಿದ್ದ ಸುಮಾರು 20,000-00 ರೂ ಬೆಲೆ ಬಾಳುವ ಬಂಗಾರದ ಉಂಗುರ, ನನ್ನ ಹೆಂಡತಿಯ ಕತ್ತಿನಲ್ಲಿದ್ದ ಸುಮಾರು 15 ಸಾವಿರ ರೂ ಬೆಲೆ ಬಾಳುವ ಸುಮಾರು 3 ಗ್ರಾಂ ತೂಕದ ತಾಳಿಯನ್ನು ಕಿತ್ತುಕೊಂಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರನ ಮೇರೆಗೆ ಠಾಣಾ ಮೊ.ಸಂ. 185/2021 ಕಲಂ 394 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 08-06-2021 05:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080