ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.126/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:07/05/2021 ರಂದು ಪಿರ್ಯಾದದಿದಾರರಾದ ಶ್ರೀ ಜಯರಾಂ ಎಎಸ್ಐ ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ಈ ದಿನ ದಿನಾಂಕ; 07-05-2021 ರಂದು ಮದ್ಯಾಹ್ನ 12-15 ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಪಿಸಿ-276 ಸಾಗರ್ ರವರು ಬಾಗೇಪಲ್ಲಿ ಪುರದಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ಗೂಳೂರು ವೃತ್ತದ ಬಳಿ ಇದ್ದಾಗ ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ ಕೊಂಡವಾರಂಪಲ್ಲಿ ಗ್ರಾಮದ ನಾಗರಾಜು ರವರ ಮನೆಯ ಬಳಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು, ಪಿಸಿ-276 ಸಾಗರ್ ರವರೊಂದಿಗೆ     ದ್ವಿಚಕ್ರ ವಾಹನದಲ್ಲಿ ಹೊರಟು, ಅಲ್ಲಿಯೇ ಇದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಕೊಂಡವಾರಂಪಲ್ಲಿ ಗ್ರಾಮದ ನಾಗರಾಜು ರವರ ಮನೆಯ ಬಳಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಮನೆಯ  ಮುಂಭಾಗದಲ್ಲಿದ್ದವನು ಓಡಿ ಹೋಗಲು ಪ್ರಯತ್ನಸುತ್ತಿದ್ದವನ್ನು ನಾವು ಮತ್ತು ಪಂಚರು ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1).ಸಂತೋಷ್ ಬಿನ್ ನಾಗರಾಜು, 26 ವರ್ಷ, ಬಲಜಿಗ ಜನಾಂಗ, ಚಾಲಕ, ವಾಸ:ಕೊಂಡವಾರಂಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 18 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 620 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 632/-ರೂ ಗಳಾಗಿರುತ್ತೆ. ಸದರಿ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗೆ ಇಲ್ಲವೆಂದು ತಿಳಿಸಿದ್ದು, ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 2-15 ಗಂಟೆ ಠಾಣೆಗೆ ಹಾಜರಾಗಿ  ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.127/2021 ಕಲಂ. 32,34  ಕೆ.ಇ ಆಕ್ಟ್:-

     ದಿನಾಂಕ: 07/05/2021 ರಂದು  ಶ್ರೀ ರೆಡ್ಡಪ್ಪ ಎ.ಎಸ್ .ಐ ಬಾಗೇಪಲ್ಲಿ ಪೊಲೀಸ್ ಠಾಣೆ, ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಈ ದಿನ ದಿನಾಂಕ; 07-05-2021 ರಂದು ಬಾಗೇಪಲ್ಲಿ ಟೌನ್ ನಲ್ಲಿ ದ್ವಿಚಕ್ರ ವಾಹನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ   ಪಿಸಿ-276 ಸಾಗರ್ ಎಸ್ ವಿ  ರವರೊಂದಿಗೆ ಬಾಗೇಪಲ್ಲಿ ಪುರದಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ ಸುಮಾರು 2-30 ಗಂಟೆಯಲ್ಲಿ ಬಾಗೇಪಲ್ಲಿ ಪುರದ ನ್ಯಾಷನಲ್ ಕಾಲೇಜ್ ಮುಂಭಾಗ ಬರುತ್ತಿದ್ದಾಗ,  ವೆಂಕಟೇಶ ಬಿನ್ ನಾರಾಯಣಪ್ಪ, 28 ವರ್ಷ, ನಾಯಕರು,  ವಾಸ: ಚಿಂತಮಾಕಲದಿನ್ನೆ ಗ್ರಾಮ, ಗೂಳೂರು ಹೋಬಳಿ, ಎಂಬುವವರು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಪಿಸಿ-276 ಸಾಗರ ರವರು ದ್ವಿ ಚಕ್ರ ವಾಹನದಲ್ಲಿ ಗೂಳೂರು ಸರ್ಕಲ್ ಬಳಿ ಬಂದಾಗ  ಗೂಳೂರು ಸರ್ಕಲ್ ಆಟೋ ನಿಲ್ದಾಣದ ಬಳಿ ಪ್ಲಾಸ್ಟಿಕ್  ಚೀಲವನ್ನು ಇಟ್ಟುಕೊಂಡು ನಿಂತುಕೊಂಡಿದ್ದು, ಸದರಿ ಆಸಾಮಿಯು ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ಕಂಡು ಸ್ಥಳದಲ್ಲೇ ಚೀಲವನ್ನು ಬಿಟ್ಟು ಓಡಿಹೋಗುತ್ತಿದ್ದು, ಪಿಸಿ-276 ಸಾಗರ್ ರವರು ಆತನನ್ನು ಹಿಂಬಾಲಿಸಿ ಹಿಡಿಯಲು ಹೋದಾಗ ಸದರಿ ಆಸಾಮಿಯು ತಪ್ಪಿಸಿಕೊಂಡು ಓಡಿಹೋಗಿರುತ್ತಾನೆ.  ನಂತರ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು  ವಿಚಾರವನ್ನು ತಿಳಿಸಿ ಪಂಚಾಯ್ತಿದಾರರಾಗಿ ಸಹಕರಿಸಲು ಕೋರಿ ಪಂಚರ ಸಮಕ್ಷಮದಲ್ಲಿ ಚೀಲವನ್ನು ಪರಿಶೀಲಿಸಲಾಗಿ, ಇದರಲ್ಲಿ 2 ಬಾಕ್ಸ್ ಗಳಿದ್ದು, ಒಂದನೇ ಬಾಕ್ಸ್ ನಲ್ಲಿ 90 ML ಸಾಮಥ್ಯದ  HAYWARDS CHEERS WHISKY ಯ  96 ಟೆಟ್ರಾ ಪಾಕೇಟ್ ಗಳಿರುತ್ತೆ. 2ನೇ ಬಾಕ್ಸ್ ನಲ್ಲಿ 90 ML ಸಾಮಥ್ಯದ  HAYWARDS CHEERS WHISKY ಯ  96 ಟೆಟ್ರಾ ಪಾಕೇಟ್ ಗಳಿರುತ್ತೆ., ಒಟ್ಟು 192 ಟೆಟ್ರಾ ಪಾಕೇಟ್ ಗಳಿದ್ದು, ಇವುಗಳು 17 ಲೀಟರ್ 280 ಎಂ.ಎಲ್ ಮದ್ಯವಿದ್ದು, ಇದರ ಒಟ್ಟು  ಮೌಲ್ಯ 6,744 /- ರೂ.ಗಳಾಗಿರುತ್ತದೆ. ಸದರಿ ಮದ್ಯವನ್ನು ಅಕ್ರಮ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದು, ಮೇಲ್ಕಂಡ  ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲನ್ನು ಮತ್ತು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ 4-00 ಗಂಟೆಗೆ ಠಾಣೆಯಲ್ಲಿ  ಹಾಜರುಪಡಿಸುತ್ತಿದ್ದು, ವೆಂಕಟೇಶ ಬಿನ್ ನಾರಾಯಣಪ್ಪ, 28 ವರ್ಷ, ನಾಯಕರು,  ವಾಸ: ಚಿಂತಮಾಕಲದಿನ್ನೆ ಗ್ರಾಮರವರ  ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.130/2021 ಕಲಂ. 32,34  ಕೆ.ಇ ಆಕ್ಟ್:-

     ದಿನಾಂಕ: 08/05/2021 ರಂದು ಶ್ರೀ ಜಯರಾಂ, ಸಹಾಯಕ ಪೊಲೀಸ್ ಉಪ-ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೇನೆಂದರೆ. ಈ ದಿನ ದಿನಾಂಕ; 08-05-2021 ರಂದು ಠಾಣಾಧಿಕಾರಿಗಳು ನನಗೆ ಮತ್ತು ಪಿಸಿ-214 ಅಶೋಕ ರವರಿಗೆ  ಹಗಲು ಗಸ್ತು ಕರ್ತವ್ಯಕ್ಕೆ  ನೇಮಿಸಿದ್ದು ಅದರಂತೆ ನಾನು ಮತ್ತು ಪಿಸಿ-214 ರವರು ಬಾಗೇಪಲ್ಲಿ ಪುರದಲ್ಲಿ ಗಸ್ತು ಮಾಡುತ್ತಿದ್ದಾಗ ಬೆಳಿಗ್ಗೆ 9-30 ಗಂಟೆಯಲ್ಲಿ  ಬಾಸ್ಕರ್ ಬಿನ್ ನಂಜಪ್ಪ, ಬಲಜಿಗರ ಜನಾಂಗ, ವಾಸ ಮಾರ್ಗಾನುಕುಂಟೆ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂಬವವರು  ಅಕ್ರಮವಾಗಿ  ಪ್ಲಾಸ್ಟಿಕ್ ಚೀಲದಲ್ಲಿ  ಮದ್ಯವನ್ನು ತೆಗೆದುಕೊಂಡು ಗೂಳೂರು ಸರ್ಕಲ್ ನಿಂದ ಗೂಳೂರು ಕಡೆಗೆ ಹೋಗುತ್ತಿರುವುದಾಗಿ ಮಾನ್ಯ ಸಿಪಿಐ ಬಾಗೇಪಲ್ಲಿ ವೃತ್ತ ರವರಿಗೆ ಮಾಹಿತಿ ಬಂದಿರುವುದಾಗಿ ಹಾಗೂ ನಮಗೆ ದಾಳಿ ಮಾಡಲು ಮೌಖಿಕ ಆದೇಶವನ್ನು ನೀಡಿದ್ದು ಅದರಂತೆ  ನಾನು ಮತ್ತು ಪಿಸಿ-214 ಅಶೋಕ ರವರು  ದ್ವಿ ಚಕ್ರ ವಾಹನದಲ್ಲಿ ಗೂಳೂರು ಸರ್ಕಲ್ ನಿಂದ ಗೂಳೂರಿಗೆ ಹೋಗುವ ರಸ್ತೆಯಲ್ಲಿ ಕದಿರಿ ಕಬಾಬ್ ಅಂಗಡಿಯ ಬಳಿ 9-45 ಗಂಟೆಗೆ ಹೋದಾಗ ಆಸಾಮಿಯು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಹೆಗಲ ಮೇಲೆ ತೆಗೆದುಕೊಂಡು ಹೋಗುತ್ತಿದ್ದ ಪ್ಲಾಸ್ಟಿಕ್ ಚೀಲವನ್ನು ರಸ್ತೆಯಲ್ಲಿ ಬಿಸಾಕಿ ಓಡಿಹೋಗಲು ಪ್ರಯತ್ನಿಸುತ್ತಿದವನ್ನು ಸಿಬ್ಬಂದಿಯಾದ ಪಿಸಿ-214 ಅಶೋಕರವರು ಹಿಂಬಾಲಿಸಿ ಹಿಡಿದುಕೊಳ್ಳಲು ಹೋದಾಗ ಕೈಯಿಗೆ ಸಿಗದೇ ಓಡಿ ಹೋಗಿರುತ್ತಾನೆ. ನಂತರ ಸ್ಥಳಕ್ಕೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪ್ಲಾಸ್ಟಿಕ್ ಚೀಲವನ್ನು ತೆಗೆದು ಪರಿಶೀಲಿಸಲಾಗಿ ಇದರಲ್ಲಿ 180ML ಸಾಮರ್ಥ್ಯದ HAYWARDS CHEERS WHISKY ಯ 96 ಟೆಟ್ರಾ ಪಾಕೇಟ್ ಗಳಿರುತ್ತವೆ, ಇವುಗಳು ಒಟ್ಟು 17 ಲೀಟರ್ 280 ಎಂ.ಎಲ್ ಮದ್ಯವಿದ್ದು, ಇದರ ಒಟ್ಟು ಮೌಲ್ಯ 7.320/- ರೂ.ಗಳಾಗಿರುತ್ತದೆ. ಸದರಿ ಮದ್ಯವನ್ನು ಮಾರಾಟ ಮಾಡಲು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು, ಮೇಲ್ಕಂಡ  ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಹಾಗೂ ಅಸಲು ಪಂಚನಾಮೆಯೊಂದಿಗೆ  ಬೆಳಿಗ್ಗೆ 11-00 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸುತ್ತಿದ್ದು, ಮೇಲ್ಕಂಡ ಬಾಸ್ಕರ್ ಬಿನ್ ನಂಜಪ್ಪ, ಬಲಜಿಗರ ಜನಾಂಗ, ವಾಸ ಮಾರ್ಗಾನುಕುಂಟೆ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ  ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ವರದಿಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.131/2021 ಕಲಂ. 32,34  ಕೆ.ಇ ಆಕ್ಟ್:-

     ದಿನಾಂಕ:08-05-2021 ರಂದು 12-30 ಗಂಟೆಗೆ ಶ್ರೀ.ರೆಡ್ಡಪ್ಪ, ಸಹಾಯಕ ಪೊಲೀಸ್ ಉಪ-ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮಾಲು ಹಾಗೂ ಅಸಲು ಪಂಚನಾಮೆಯೊಂದಿಗೆ ನೀಡಿದ ವರದಿ ಏನೆಂದರೆ ಈ ದಿನ ದಿನಾಂಕ; 08-05-2021 ರಂದು ಠಾಣಾಧಿಕಾರಿಗಳು ನನಗೆ ಮತ್ತು ಪಿಸಿ-280 ಮುರಳಿ ರವರಿಗೆ  ಹಗಲು ಗಸ್ತು ಕರ್ತವ್ಯಕ್ಕೆ  ನೇಮಿಸಿದ್ದು ಅದರಂತೆ ನಾನು ಮತ್ತು ಪಿಸಿ-280 ಮುರಳಿ  ರವರು ಬಾಗೇಪಲ್ಲಿ ಪುರದಲ್ಲಿ ಗಸ್ತು ಮಾಡುತ್ತಿದ್ದಾಗ ಬೆಳಿಗ್ಗೆ 10-30 ಗಂಟೆಯಲ್ಲಿ  ಮಂಜುನಾಥ ರೆಡ್ಡಿ ಬಿನ್ ರಾಮಚಂದ್ರರೆಡ್ಡಿ, ವಕ್ಕಲಿಗರು, ಜಿಲಾಜಿರ್ಲಾ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂಬುವವರು  ಅಕ್ರಮವಾಗಿ  ಪ್ಲಾಸ್ಟಿಕ್ ಚೀಲದಲ್ಲಿ  ಮದ್ಯವನ್ನು ತೆಗೆದುಕೊಂಡು ಕೊಡಿಕೊಂಡ ರಸ್ತೆಯಲ್ಲಿ  ಹೋಗುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ   ನಾನು ಮತ್ತು ಪಿಸಿ-280 ಮುರಳಿ ರವರು  ದ್ವಿ ಚಕ್ರ ವಾಹನದಲ್ಲಿ ಗಂಗಮ್ಮ ದೇವಾಸ್ಥಾನದ ಬಳಿ ಬಂದು ಸ್ಥಳದಲ್ಲಿದ್ದ ಪಂಚಾಯ್ತಿದಾರರಿಗೆ ಮೇಲ್ಕಂಡ ವಿಚಾರವನ್ನು ತಿಳಿಸಿ, ದಾಳಿ ಪಂಚನಾಮೆ ಮಾಡಬೇಕಾಗಿರುವುದರಿಂದ ಪಂಚರಾಗಿ ಹಾಜರಿದ್ದು ಸಹಕರಿಸುವಂತೆ ಕೋರಿ, ಅವರುಗಳು ಒಪ್ಪಿಕೊಂಡ ನಂತರ ಪಂಚರು ಮತ್ತು ನಾವುಗಳು ದ್ವಿ ಚಕ್ರ ವಾಹನಗಳಲ್ಲಿ  ಕೊಡಿಕೊಂಡ ರಸ್ತೆಯಲ್ಲಿರುವ ಷಾದಿ ಮಹಲ್ ಬಳಿ 11-00 ಗಂಟೆಯಲ್ಲಿ  ಹೋದಾಗ ನಮ್ಮ ಮುಂದೆ ಹೋಗುತ್ತಿದ್ದ ಆಸಾಮಿಯು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಹೆಗಲ ಮೇಲೆ ತೆಗೆದುಕೊಂಡು ಹೋಗುತ್ತಿದ್ದ ಪ್ಲಾಸ್ಟಿಕ್ ಚೀಲವನ್ನು ರಸ್ತೆಯಲ್ಲಿ ಬಿಸಾಕಿ ಓಡಿಹೋಗುತ್ತಿದ್ದವನನ್ನು ಸಿಬ್ಬಂದಿಯಾದ ಪಿಸಿ-280 ಮುರಳಿ ರವರು ಹಿಂಬಾಲಿಸಿ ಹಿಡಿದುಕೊಳ್ಳಲು ಹೋದಾಗ ಕೈಯಿಗೆ ಸಿಗದೇ ಓಡಿ ಹೋಗಿರುತ್ತಾನೆ. ನಂತರ ಪಂಚರ ಸಮಕ್ಷಮ  ಪ್ಲಾಸ್ಟಿಕ್ ಚೀಲವನ್ನು ತೆಗೆದು ಪರಿಶೀಲಿಸಲಾಗಿ ಇದರಲ್ಲಿ 1]  180ML ಸಾಮರ್ಥ್ಯದ HAYWARDS CHEERS WHISKY ಯ 24 ಟೆಟ್ರಾ ಪಾಕೇಟ್ ಗಳಿರುತ್ತವೆ, 2] 180 ML ಸಾಮರ್ಥ್ಯದ OLD TAVERN WHISKY ಯ 48 ಟೆಟ್ರಾ ಪಾಕೇಟ್ ಗಳಿರುತ್ತದೆ. ಇವುಗಳು ಒಟ್ಟು 12 ಲೀಟರ್ 960 ಎಂ.ಎಲ್ ಮದ್ಯವಿದ್ದು, ಇದರ ಒಟ್ಟು ಮೌಲ್ಯ 5,994/- ರೂ.ಗಳಾಗಿರುತ್ತದೆ. ಸದರಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದು, ಮೇಲ್ಕಂಡ  ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಹಾಗೂ ಅಸಲು ಪಂಚನಾಮೆಯೊಂದಿಗೆ  ಮದ್ಯಾಹ್ನ 12-30 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸುತ್ತಿದ್ದು, ಮೇಲ್ಕಂಡ ಮಂಜುನಾಥ ರೆಡ್ಡಿ ಬಿನ್ ರಾಮಚಂದ್ರ ರೆಡ್ಡಿ, ವಕ್ಕಲಿರು, ಜಿಲಾಜಿರ್ಲಾ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ  ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯನ್ನು ಪಡೆದು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತೆ.

 

5. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.68/2021 ಕಲಂ. 506,341,34,504,323,324 ಐ.ಪಿ.ಸಿ:-

     ದಿನಾಂಕ: 07/05/2021 ರಂದು ಮದ್ಯಾಹ್ನ 13-10 ಗಂಟೆಯಿಂದ 13-40 ಗಂಟೆಯವರೆಗೆ    ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಸಂತೋಷ ಬಿನ್ ಜಿ ಎಸ್ ರಾಮಣ್ಣ, 32 ವರ್ಷ, ವಕ್ಕಲಿಗರು, ಸಿಪಿಎಫ್ ಖಾಸಗಿ ಕಂಪನಿ ಬೆಂಗಳೂರು ರಲ್ಲಿ ಅಕೌಂಟೆಂಟ್ ಕೆಲಸ, ವಾಸ: ಯಸಗಲಹಳ್ಳಿ ಗ್ರಾಮ, ಮುಂಗಾನಹಳ್ಳಿ ಹೋಬಳಿ ಚಿಂತಾಮಣಿ ತಾಲ್ಲೂಕು ಮೊ ನಂ: 8660808608 ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ:07/05/2021 ರಂದು ಬೆಳಿಗ್ಗೆ ಸುಮಾರು 9-00 ಗಂಟೆಯ ಸಮಯದಲ್ಲಿ ನಾನು ನಮ್ಮ ಬಾಬತ್ತು ಸರ್ವೇ ನಂಬರ್ 39 ರ ಜಮೀನಿನಲ್ಲಿ ಜಿ ಸಿ ಬಿ ವಾಹನದಲ್ಲಿ ಕಲ್ಲುಗಳನ್ನು ಕಿತ್ತು ಹಾಕುತ್ತಿದ್ದಾಗ , ನಮ್ಮ ಗ್ರಾಮದ ನಾಗರತ್ನಮ್ಮ, ಕೆಯ ಗಂಡ ಚಿಕ್ಕವೆಂಕಟರವಣಪ್ಪ, ಆಕೆಯ ಮಗ 1 ನೇ ಹರೀಶ್ . 2 ನೇ ಮಗ ರಮೇಶ್ ರವರು ಬಂದು ನನ್ನನ್ನು ಅಡ್ಡಗಟ್ಟಿ ಲೋಪರ್ ನನ್ನ ಮಗನೇ  ನಮ್ಮ ಜಮೀನಿನಲ್ಲಿ ಕಲ್ಲುಗಳನ್ನು ಹಾಕುತ್ತೀಯಾ ಎಂದು ಅವಾಚ್ಯಶಬ್ದಗಳಿಂದ ಬೈದು ಹರೀಶ್ ಮತ್ತು ರಮೇಶ್ ರವರು ಕೈಗಳಿಂದ  ಮೈಮೇಲೆ ಹೊಡೆದು ಕಾಲುಗಳಿಮದ ದ್ದಿರುತ್ತಾರೆ. ನಾಗರತ್ನಮ್ಮ ಅಲ್ಲಿಯೇ ಬಿದಿದ್ದ ಕಲ್ಲಿನಿಂದ ಬಲಕಾಳಿನ ಮೊಣಕಾಲಿಗೆ ಹೊಡೆದು ರಕ್ತಗಾಯಪಡಸಿಇರುತ್ತಾಳೆ. ಚೆಕ್ಕವೆಂಕಟರವಣಪ್ಪ ಕಾಲಿನಿಂದ ನನ್ನ ಸೊಂಟಕ್ಕೆ ಒದ್ದಿರುತ್ತಾನೆ. ಅಷ್ಟರಲ್ಲಿ ಜಗಳ ಬಿಡಿಸಲು ಅಡ್ಡ ಬಂದ ನನ್ನ ತಾಯಿ ವೆಂಕಟಮ್ಮರವರಿಗೆ ನಾಗರತ್ನಮ್ಮ ಕಲ್ಲಿನಿಂದ ಬಲಕೈ ಭುಜಕ್ಕೆ ಮತ್ತು ಎಡ ಮೊಣಕಾಲಿಗೆ ಹೊಡೆದು ಗಾಯಪಡಿಸಿರುತ್ತಾಳೆ. ಜಗಳ ಬಿಡಿಸಲು ಬಂದ ನನ್ನ ಅಣ್ಣ ಮಂಜುನಾಥರವರಿಗೆ ಹರೀಶ್ ಮತ್ತು ರಮೇಶ್ ರವರು ಕೈಗಳಿಂದ ಹೊಡೆದು ನೋವುಂಟು ಮಾಡಿರುತ್ತಾರೆ. ಚಿಕ್ಕವೆಂಕಟರವಣಪ್ಪ ನಮ್ಮನ್ನು ಮಚ್ಚಿನಿಂದ ಹೊಡೆದು ಸಾಯಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ಗಲಾಟೆ ಶಬ್ದ ಕೇಳಿ ಸ್ಥಳಕ್ಕೆ ಬಂದ ಮಾದಮಂಗಲ ಗ್ರಾಮದ  ಎನ್ ರಮೇಶ್ ಬಿನ್ ದೊಡ್ಡನಾರಾಯಣಪ್ಪ, 45 ವರ್ಷ, ವಕ್ಕಲಿಗರು, ಹಾಗು ನಮ್ಮ ಗ್ರಾಮದ ಚೌಡಪ್ಪ ಬಿನ್ ಲೇಟ್ ವೆಂಕಟರಾಯಪ್ಪ. 50 ವರ್ಷ, ವಕ್ಕಲಿಗರು, ರವರುಗಳು ಬಂದು ನಮಗೆ ಜಗಳ ಬಿಡಿಸಿರುತ್ತಾರೆ. ನಂತರ ನಾವು ದ್ವಿಚಕ್ರವಾಹನಗಳಲ್ಲಿ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿರುತ್ತೇವೆ . ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ಕೊಟ್ಟ ದೂರಿನ ಸಾರಾಂಶವಾಗಿರುತ್ತದೆ.

 

6. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.69/2021 ಕಲಂ. 87 ಕೆ.ಪಿ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರಿ ಟಿ ಎನ್ ಪಾಪಣ್ಣ  ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ,  ದಿನಾಂಕ:07/05/2021 ರಂದು ಮಧ್ಯಾಹ್ನ 15-00 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಠಾಣಾ ವ್ಯಾಪ್ತಿಯ ಬಟ್ಲಹಳ್ಳಿ ಗ್ರಾಮದ ಸರ್ಕಾರಿ ಕೆರೆಯ  ಅಂಗಳದಲ್ಲಿ ಹೊಂಗೆಮರದ ಕೆಳಗಡೆ ಯಾರೋ ಆಸಾಮಿಗಳು ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಇಸ್ಪೀಟ್ ಜೂಜಾಟವಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದು ನಾನು ಠಾಣಾ ಸಿಬ್ಬಂದಿಯವರಾದ ಹೆಚ್.ಸಿ-36 ವಿಜಯ್ ಕುಮಾರ್, ಹೆಚ್ ಸಿ 139 ಶ್ರೀನಾಥ, ಸಿಪಿಸಿ - 262 ಅಂಬರೀಶ್, ಸಿಪಿಸಿ- 387 ಅನಿಲ್ ಕುಮಾರ್ ಸಿಪಿಸಿ291 ಗಂಗಾಧರ ರವರೊಂದಿಗೆ ಜೀಪ್ ನಲ್ಲಿ ಬಟ್ಲಹಳ್ಳಿ ಬಸ್ ನಿಲ್ದಾಣಕ್ಕೆ ಹೋಗಿ ಪಂಚರನ್ನು ಕರೆದುಕೊಂಡು ಸರ್ಕಾರಿ ಕೆರೆಯ ಅಂಗಳಕ್ಕೆ ಮದ್ಯಾಹ್ನ 15-30 ಗಂಟೆಗೆ ಹೋಗಿ ದೂರದಲ್ಲಿ ಜೀಪ್   ನಿಲ್ಲಿಸಿ ನೋಡಲಾಗಿ ಯಾರೋ ಆಸಾಮಿಗಳು ಹೊಂಗೆ ಮರದ ಕೆಳಗಡೆ ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸದರಿಯವರನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ಎಲ್ಲಿಯೂ ಹೋಗದಂತೆ ಸೂಚಿಸಿದಾಗ  ಅಲ್ಲಿದ್ದ 8 ಜನ ಆಸಾಮಿಗಳ ಪೈಕಿ ಒಬ್ಬ ಆಸಾಮಿಯು ಓಡಿ ಹೋಗಿರುತ್ತಾನೆ.  ಉಳಿದ 7 ಜನ ಆಸಾಮಿಗಳನ್ನು  ವಶಕ್ಕೆ ಪಡೆದು ಅವರುಗಳ  ಹೆಸರು ಮತ್ತು ವಿಳಾಸ ಕೇಳಲಾಗಿ 1) ಶ್ರೀನಿವಾಸ ಬಿ ಎಸ್  ಬಿನ್ ಲೇಟ್ ಸುಬ್ಬರಾಯಪ್ಪ, 45 ವರ್ಷ, ಗಾಣಿಗರು. ಹೋಟೆಲ್ ಕೆಲಸ, ವಾಸ:  ಬಟ್ಲಹಳ್ಳಿ ಗ್ರಾಮ ಚಿಂತಾಮಣಿ  ತಾಲ್ಲೂಕು  ಮೊ ನಂ: 9686307130 2). ಕೃಷ್ಣಾರೆಡ್ಡಿ ಬಿನ್ ಲೇಟ್ ಲಕ್ಷ್ಮಯ್ಯ, 38 ವರ್ಷ, ವಕ್ಕಲಿಗರು,  ಹೋಟೆಲ್ ಕೆಲಸ, ವಾಸ:  ಬಟ್ಲಹಳ್ಳಿ ಗ್ರಾಮ ಚಿಂತಾಮಣಿ  ತಾಲ್ಲೂಕು,  ಮೊ.ನಂ- 9731992524 3.) ಸುಧಾಕರ್ ಬಿನ್ ಅಶ್ವಥರೆಡ್ಡಿ,30 ವರ್ಷ, ವಕ್ಕಲಿಗರು, ವ್ಯವಸಾಯ, ವಾಸ: ಬಟ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, ಮೊ ನಂ: 9663076030. 4) ಚಂದ್ರಶೇಖರ್ ಬಿನ್ ಶ್ರೀನಿವಾಸ,24 ವರ್ಷ, ಗಾಣಿಗರು, ಹೋಟೆಲ್ ಕೆಲಸ, ವಾಸ: ಬಟ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು.ಮೊ ನಂ: 9686307130  5) ಬಿ ಎಸ್ ಹರೀಶ್  ಬಿನ್ ಶಿವಣ್ಣ, 30 ವರ್ಷ, ವಕ್ಕಲಿಗರು, ವೈರಿಂಗ್ ಕೆಲಸ, ವಾಸ: ಬಟ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು.ಮೊ ನಂ: 7996125359. 6) ಶ್ರೀನಿವಾಸ ಬಿನ್ ವೆಂಕಟರವಣಪ್ಪ,27 ವರ್ಷ, ಗೊಲ್ಲರು , ಹೋಟೆಲ್ ಕೆಲಸ ವಾಸ: ಕೋನಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು. ಮೊ ನಂ: 7337811486. 7) ಪವನ್ ಬಿನ್ ರಾಮು,18 ವರ್ಷ, ಗಾಣಿಗರು, ಹೋಟೆಲ್ ಕೆಲಸ, ವಾಸ: ಬಟ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು.ಮೊ ನಂ: 7676554584. ಓಡಿ ಹೋದ ಆಸಾಮಿಯ ಹೆಸರು ಮತ್ತು ವಿಳಾಸ ತಿಳಿಯಲಾಗಿ  8) ಮೋಹನ್ ಬಿನ್ ಶ್ರೀನಿವಾಸ,26 ವರ್ಷ, ಗಾಣಿಗರು,ಹೋಟೆಲ್ ಕೆಲಸ,  ವಾಸ: ಬಟ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. ಎಂದು ತಿಳಿಸಿದ್ದು, ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಪೇಪರ್  ನೆಲದಲ್ಲಿ ಹಾಸಿದ್ದು, ಸದರಿ ಪ್ಲಾಸ್ಟಿಕ್ ಪೇಪರ್ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆ ಇದ್ದು, ಇವುಗಳನ್ನು ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 5120/- ರೂಗಳಿರುತ್ತೆ. ಇಸ್ಪೀಟ್ ಜೂಜಾಟ ಆಡುತ್ತಿದ್ದ 7 ಜನ ಆಸಾಮಿಗಳನ್ನು, ಅವರು ಆಟಕ್ಕೆ ಪಣವಾಗಿಟ್ಟಿದ್ದ, 5120/-  ರೂಗಳ ನಗದು ಹಣವನ್ನು, ಒಂದು ಪ್ಲಾಸ್ಟಿಕ್ ಪೇಪರ್ ಹಾಗೂ 52 ಇಸ್ಟೀಟ್ ಎಲೆಗಳನ್ನು ಈ ಕೇಸಿನ ಮುಂದಿನ ಕ್ರಮಕ್ಕಾಗಿ ಮದ್ಯಾಹ್ನ 15-45 ಗಂಟೆಯಿಂದ 16-45 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು ಮಾಲುಗಳು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಮದ್ಯಾಹ್ನ 17-30 ಗಂಟೆಗೆ ಹಾಜರಾಗಿ ಸ್ವತಃ ಠಾಣೆಯ ಎನ್ ಸಿ ಆರ್ ನಂ: 69/2021 ರಂತೆ ದಾಖಲಿಸಿಕೊಂಡು ಆರೋಪಿಗಳ ಮತ್ತು ಮಾಲಿನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ಹೆಚ್ ಸಿ 107 ರವರ ಮೂಲಕ ರವಾನಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಕೊಂಡು ಸಂಜೆ 19-30 ಗಂಟೆಗೆ ಠಾಣೆಗೆ ಹಾಜರುಪಡಿಸಿದ್ದನ್ನು ಪಡೆದು ಠಾಣೆಯ ಮೊ ಸಂಖ್ಯೆ: 69/2021 ಕಲಂ: 87 ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

7. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.38/2021 ಕಲಂ. 379 ಐ.ಪಿ.ಸಿ:-

     ದಿನಾಂಕ 07/05/2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾಧಿದಾರರು ನೀಡಿದ ಗಣಿಕೀಕೃತ ದೂರಿನ ಸಾರಾಂಶವೇನೆಂದರೆ ಕೋವಿಡ್ ಆಸ್ಪತ್ರೆಗೆ ರೋಗಿಗಳ ಚಿಕಿತ್ಸೆಗೆಂದು  ಆಕ್ಸಿಜನ್ ಸಿಲಿಂಡರ್ಗಳನ್ನು ತರಿಸಿ ಹಳೇ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಶೇಖರಿಸಿದ್ದು, ಸದರಿ ಸಿಲಿಂಡರ್ಗಳ ಉಸ್ತುವಾರಿಯನ್ನು ಡಿ.ಎನ್ ಮುನಿರಾಜು ಗ್ರೂಫ್ “ಡಿ” ಅಟೆಂಡರ್ ರವರನ್ನು ನೇಮಿಸಿದ್ದು, ಸದರಿ ಕೊಠಡಿಗೆ ಎರಡು ಬೀಗದ ಕೈಗಳಿದ್ದು ಒಂದು ಡಿ.ಎನ್ ಮುನಿರಾಜು ರವರಿಗೆ ಮತ್ತೊಂದು ತುರ್ತು ಪರಿಸ್ಥಿತಿಯಲ್ಲಿ ಬೇಕೆಂದಲ್ಲಿ ನಿವಾಸಿ ವೈದ್ಯಾಧಿಕಾರಿಗಳ ಬಳಿ ಇರುತ್ತದೆ. ಅದರಂತೆ ದಿನಾಂಕ:01/05/2021 ರಂದು ಡಿ.ಎನ್ ಮುನಿರಾಜು ರವರು ಸಾಯಂಕಾಲ ಸಿಲಿಂಡರ್ ಗಳನ್ನು ಪರೀಶಿಲಿಸಿ ಓಟ್ಟು ಸಿಲಿಂಡರ್ ಗಳ ಸಂಖ್ಯೆಯನ್ನು ಪುಸ್ತಕದಲ್ಲಿ ನಮೂದಿಸಿ ಬೀಗ ಹಾಕಿಕೊಂಡು ಹೋಗಿದ್ದು, ಮರುದಿನ ದಿನಾಂಕ:02/05/2021 ಡಿ.ಎನ್ ಮುನಿರಾಜು ರವರು ರಂದು ಸಿಲಿಂಡರ್ ಕೊಠಡಿಯನ್ನು ಬೀಗ ತೆಗೆದು ನೋಡಿದ್ದು ಕೊಠಡಿಯಲ್ಲಿದ್ದ 10 ಜಂಬು ಸಿಲಿಂಡರ್ಗಳು ಇರಲಿಲ್ಲವೆಂದು ಯಾರೋ ಕಳವು ಮಾಡಿರುತ್ತಾರೆ ಎಂಬುದಾಗಿ ನನಗೆ ಮಾಹಿತಿ ನೀಡಿದ್ದು ಸದರಿ ಸಿಲಿಂಡರ್ಗಳ ಕೊಠಡಿಯ ಉಸ್ತುವರಿಯಾಗಿ ಕೆಲಸ ಮಾಡುತ್ತಿದ್ದ ಡಿ.ಎನ್ ಮುನಿರಾಜು ರವರು ದಿನಾಂಕ: 01/05/2021 ರಂದು ಬೀಗ ಹಾಕಿಹೊಗಿರುತ್ತಾರೆ. ಪುನಃ ಅವರೇ ದಿನಾಂಕ:02/05/2021 ರಂದು ಅವರು ಹಾಕಿರುವ ಬೀಗವನ್ನು ತೆಗೆದು ನೋಡಿ ಕಳವು ಆಗಿರುವುದಾಗಿ ತಿಳಿಸಿದ್ದು, ಸದರಿ 10 ಜಂಬು ಆಕ್ಸಿಜನ್ ಸಿಲಿಂಡರ್ಗಳ ಬೆಲೆ ಆಂದಾಜು 80000/-ರೂ ಗಳಾಗಿರುತ್ತದೆ. ಆದ್ದರಿಂದ ಕಳವು ಮಾಡಿರುವ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಿ ಕಳುವಾಗಿರುವ 10 ಜಂಬು ಆಕ್ಸಿಜನ್ ಸಿಲಿಂಡರ್ ಗಳನ್ನು ಪತ್ತೆ ಮಾಡಿ ಕೊಡಬೇಕೆಂದು ತಮ್ಮಲ್ಲಿ ಕೋರಿ ನೀಡಿದ ದೂರಾಗಿರುತ್ತದೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.189/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

     ದಿನಾಂಕ 07-05-2021 ರಂದು ಮದ್ಯಾಹ್ನ 2-00 ಗಂಟೆಗೆ ಠಾಣೆಯ ಪಿ.ಎಸ್.ಐ ರವರಾದ ಕೆ.ನಾರಾಯಣಸ್ವಾಮಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:-07-05-2021 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ತಮ್ಮ ಸಿಬ್ಬಂದಿ ಯವರಾದ ಹೆಚ್.ಸಿ 249 ಸಂದೀಪ್ ಕುಮಾರ್, ಮತ್ತು ಸಿಪಿಸಿ 430 ನರಸಿಂಹಯ್ಯರವರೊಂದಿಗೆ ತನಗೆ ಒದಗಿಸಿರುವ ಜೀಪ್ ಸಂಖ್ಯೆ ಕೆ.ಎ-40-ಜಿ-64ರಲ್ಲಿ ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಬೂರಗಮಾಕಲಹಳ್ಳಿ ಗ್ರಾಮದ ಬಳಿ ಇರುವ ಯುವರ್ಸ್ ಚಾಯ್ಸ್ ಅಂಡ್ ಗಿಪ್ಟ್ ಸೆಂಟರ್ ಅಂಗಡಿಯ ಮಾಲೀಕರು ಅಂಗಡಿಯಲ್ಲಿ ಗಿಪ್ಟ್ ಅರ್ಟಿಕಲ್ಸ್ (ಉಡುಗೊರೆ)ಗಳನ್ನು ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಮದ್ಯಾಹ್ನ 1-30 ಗಂಟೆಗೆ ಬೂರಗಮಾಕಲಹಳ್ಳಿ ಗ್ರಾಮದ ಯುವರ್ಸ್ ಚಾಯ್ಸ್ ಅಂಡ್ ಗಿಪ್ಟ್ ಸೆಂಟರ್ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 7-8 ಜನರನ್ನು ಅಂಗಡಿಯಲ್ಲಿ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶ್ರೀನಿವಾಸ ಬಿನ್ ನಾರಾಯಣಸ್ವಾಮಿ, 40 ವರ್ಷ, ಒಕ್ಕಲಿಗರು, ಗಿಪ್ಟ್  ಅಂಗಡಿ ಮಾಲೀಕರು, ವಾಸ: ಬೂರಗಮಾಕಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಇವರು ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇ ಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಗಿಪ್ಟ್ ಅರ್ಟಿಕಲ್ಸ್ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುತ್ತೆ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.190/2021 ಕಲಂ. 323,324,504,506,34 ಐ.ಪಿ.ಸಿ :-

     ದಿನಾಂಕ 07-05-2021 ರಂದು ಮದ್ಯಾಹ್ನ 3-00 ಗಂಟೆಗೆ ವೆಂಕಟೇಶ ಬಿನ್ ಗೋಪಾಲಕೃಷ್ಣ, 43 ವರ್ಷ, ವಕ್ಕಲಿಗರು, ಜಿರಾಯ್ತಿ, ಪೆರಮಾಚನಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಮ್ಮ ಅಕ್ಕನವರಾದ ಲಕ್ಷ್ಮಮ್ಮ ಕೊಂ ರಾಮಣ್ಣ ರವರಿಗೂ ಮತ್ತು ಕೆಂದನಹಳ್ಳಿ ಗ್ರಾಮದ ಮುನೀಂದ್ರ ಬಿನ್ ಕೃಷ್ಣಪ್ಪ ರವರಿಗೂ ಜಮೀನಿನ ವಿಚಾರದಲ್ಲಿ ತಕರಾರು ಇರುತ್ತೆ. ಹೀಗಿರುವಾಗ ದಿನಾಂಕ 06-05-2021 ರಂದು  ಸಂಜೆ 5-00 ಗಂಟೆ ಸಮಯದಲ್ಲಿ ತನ್ನ ಅಕ್ಕ ಲಕ್ಷ್ಮಮ್ಮ ರವರು ಹಸುಗಳಿಗೆ ಮೇವು ತರಲು ಜಮೀನಿನ ಬಳಿ ಹೋದಾಗ ಮೇಲ್ಕಂಡ ಮುನೀಂದ್ರ ಮತ್ತು ಅವರ ಕಡೆಯವರಾದ ಶ್ರೀನಾಥ ಬಿನ್ ಕೃಷ್ಣಪ್ಪ, ಅನಿಲ್ ಬಿನ್ ಲೇಟ್ ಆಂಜಿನಪ್ಪ ರವರು ತನ್ನ ಅಕ್ಕನ ಮೇಲೆ ಗಲಾಟೆ ಮಾಡಿ ಅವಾಶ್ಚ ಶಬ್ದಗಳಿಂದ ಬೈದು  ಮೈ ಕೈ ಮೇಲೆ ಹೊಡೆದು ನೋವುಂಟು  ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ಸದರಿ ವಿಚಾರವನ್ನು ತನ್ನ ಅಕ್ಕ ಮನೆಗೆ ಬಂದು ತಮಗೆ ಹೇಳಿದ್ದು  ತಾನು ಮತ್ತು ಲಕ್ಷ್ಮಮ್ಮ ರವರ ಮಕ್ಕಳಾದ ರವಿ ಮತ್ತು ಕಾರ್ತಿಕ್ ರವರು ಸದರಿ ವಿಚಾರವನ್ನು ಕೇಳೋಣವೆಂದು ಅದೇ ದಿನ ರಾತ್ರಿ 8-00 ಗಂಟೆ ಸಮಯದಲ್ಲಿ ಹೋಗುತ್ತಿದ್ದಾಗ ಲಕ್ಷ್ಮಮ್ಮ ರವರ ಮನೆ ಬಳಿ  ಮುನೀಂದ್ರ, ಶ್ರೀನಾಥ ಮತ್ತು ಅನಿಲ್ ರವರಿದ್ದು ತಾನು ಮುನೀಂದ್ರ ರವರನ್ನು ಕುರಿತು ಏಕೆ ತನ್ನ ಅಕ್ಕನ ಮೇಲೆ ಗಲಾಟೆ ಮಾಡಿದ್ದು ಎಂದು ಕೇಳಿದ್ದಕ್ಕೆ  ಮುನೀಂದ್ರ ರವರು ಆತನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ  ತಲೆಗೆ ಹೊಡೆದು ನೋವುಂಟು ಮಾಡಿದ್ದು ಆಗ ಗಲಾಟೆ ಬಿಡಿಸಲು ಅಡ್ಡ ಬಂದ ರವಿ ಮತ್ತು ಕಾರ್ತಿಕ್ ರವರಿಗೆ ಶ್ರೀನಾಥ ಮತ್ತು ಅನಿಲ್ ರವರು  ಕೈಗಳಿಂದ ಹೊಡೆದು ನೋವುಂಟು ಮಾಡಿದರು. ಮೇಲ್ಕಂಡವರು ತನ್ನನ್ನು ಕುರಿತು ಇನ್ನೋಂದು ಸಲ ತಮ್ಮ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.  ಸದರಿ ಗಲಾಟೆ ಬಗ್ಗೆ ತಮ್ಮ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡೋಣವೆಂದು ಹೇಳಿದ್ದು ಮೇಲ್ಕಂಡವರು ರಾಜಿಗೆ ಬಾರದ ಕಾರಣ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ. ಮಾಡಿರುತ್ತಾರೆ.

 

10. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.191/2021 ಕಲಂ. 15(A) ಕೆ.ಇ ಆಕ್ಟ್ :-

     ದಿನಾಂಕ 07/05/2021 ರಂದು ಸಂಜೆ 5.00 ಗಂಟಗೆ ಪಿ.ಎಸ್.ಐ ಕೆ.ನಾರಾಯಣಸ್ವಾಮಿ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ 07/05/2021 ರಂದು ಆದ ತಾನು ಠಾಣೆಗೆ ಒದಗಿಸಿರುವ ಕೆಎ-40 ಜಿ-326 ಸರ್ಕಾರಿ ಜೀಪ್ ನಲ್ಲಿ ಠಾಣೆಯ ಸಿಬ್ಬಂದಿಯವರಾದ ಪಿ.ಸಿ.464 ಅರುಣ್ ಕುಮಾರ್, ಪಿ.ಸಿ.430 ನರಸಿಂಹಯ್ಯ ಮತ್ತು ಪಿ.ಸಿ 339 ಕರಿಯಪ್ಪ ರವರೊಂದಿಗೆ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಿಕೊಂಡು ಶೆಟ್ಟಿಹಳ್ಳಿ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ವಾಸಿಯಾದ ಸೀನಪ್ಪ ಬಿನ್ ಲೇಟ್ ನಾರಾಯಣಪ್ಪ ರವರು ತನ್ನ ಅಂಗಡಿಯ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ನನಗೆ ಖಚಿತ ಮಾಹಿತಿ ದೊರೆತಿದ್ದು, ಸದರಿ ಅಂಗಡಿಯ ಬಳಿ ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಸೀನಪ್ಪ ಬಿನ್ ಲೇಟ್ ನಾರಾಯಣಪ್ಪ ರವರ ಅಂಗಡಿಯ ಮುಂಭಾಗ ಹೋಗುವಷ್ಟರಲ್ಲಿ ಸದರಿ ಅಂಗಡಿಯ ಮುಂದೆ ಕುಳಿತಿದ್ದ ವ್ಯಕ್ತಿಗಳು ಮತ್ತು ಅಂಗಡಿಯಲ್ಲಿದ್ದ ಆಸಾಮಿಯು ಓಡಿ ಹೋಗಿದ್ದು, ಅಂಗಡಿಯಲ್ಲಿ ನೋಡಲಾಗಿ 1) ಬ್ಯಾಗ್ ಪೈಪರ್ ವಿಸ್ಕಿ ಕಂಪನಿಯ 180 ಎಂ.ಎಲ್ ಮದ್ಯ ತುಂಬಿರುವ 3 ಟೆಟ್ರಾ ಪಾಕೆಟ್ ಗಳು 2) ಓಲ್ಟ್ ಟಾವರ್ನ್ ವಿಕ್ಸಿ ಕಂಪನಿಯ 180 ಎಂ.ಎಲ್ ಮದ್ಯ ತುಂಬಿರುವ 1 ಟೆಟ್ರಾ ಪಾಕೆಟ್ ಮತ್ತು 3) ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್ ಮದ್ಯ ತುಂಬಿರುವ 3 ಟೆಟ್ರಾ ಪಾಕೆಟ್ ಗಳಿದ್ದು, ಅಂಗಡಿಯ ಮುಂಭಾಗದಲ್ಲಿ ಪರಿಶೀಲಿಸಲಾಗಿ 4) ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್ ನ 2 ಖಾಲಿ ಟೆಟ್ರಾ ಪಾಕೆಟ್ ಗಳು 5) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು 6) ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು ಟೆಟ್ರಾ ಪಾಕೆಟ್ ಗಳನ್ನು ಪರಿಶೀಲಿಸಲಾಗಿ ಅವುಗಳಲ್ಲಿ ಸ್ವಲ್ವ ಮದ್ಯವಿರುತ್ತೆ. ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ಎರಡು ನೀರಿನ ಬಾಟಲ್ ಗಳು ಓಪನ್ ಆಗಿದ್ದು ಆವುಗಳಲ್ಲಿ ಸ್ವಲ್ಪ ಭಾಗದ ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ಸೀನಪ್ಪ ಬಿನ್ ಲೇಟ್ ನಾರಾಯಣಪ್ಪ, 60 ವರ್ಷ, ದೋಬಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಶೆಟ್ಟಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು, ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3.45 ಗಂಟೆಯಿಂದ 4.30 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ಎಲ್ಲಾ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲುಗಳು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ವರದಿಯನ್ನು ನೀಡುತ್ತಿದ್ದು, ಅಕ್ರಮವಾಗಿ ತನ್ನ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಸೀನಪ್ಪ ಬಿನ್ ಲೇಟ್ ನಾರಾಯಣಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ.

 

11. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.192/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ದಿನಾಂಕ 07/05/2021 ರಂದು ಸಂಜೆ 6.00 ಗಂಟಗೆ ಪಿ.ಎಸ್.ಐ ಕೆ.ನಾರಾಯಣಸ್ವಾಮಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 07/05/2021 ರಂದು ಸಂಜೆ 5.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ತಮ್ಮ ಸಿಬ್ಬಂದಿಯವರಾದ ಸಿ.ಪಿ.ಸಿ-464 ಅರುಣ್ ಕುಮಾರ್, ಮತ್ತು ಸಿ.ಪಿ.ಸಿ-430 ನರಸಿಂಹಯ್ಯರವರೊಂದಿಗೆ ತನಗೆ ಒದಗಿಸಿರುವ ಜೀಪ್ ಸಂಖ್ಯೆ ಕೆ.ಎ-40-ಜಿ-64ರಲ್ಲಿ ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಶ್ರೀನಿವಾಸಪುರ ದಿನ್ನೆ ಗ್ರಾಮದ ಬಳಿ ಇರುವ ಕೆ.ಜಿ.ಎನ್ ಸ್ಟೋರ್ಸ್ (ಚಿಲ್ಲರೆ ಅಂಗಡಿ) ಯ ಮಾಲೀಕರು ಅಂಗಡಿಯಲ್ಲಿ ದಿನಸಿ ಪದಾರ್ಥಗಳನ್ನು ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಸಂಜೆ 5.30 ಗಂಟೆಗೆ ಶ್ರೀನಿವಾಸಪುರದಿನ್ನೆ ಗ್ರಾಮದ ಕೆ.ಜಿ.ಎನ್ ಸ್ಟೋರ್ಸ್ ದಿನಸಿ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 7-8 ಜನರನ್ನು ಅಂಗಡಿಯಲ್ಲಿ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಸನಾವುಲ್ಲಾ ಬಿನ್ ಲೇಟ್ ಭಾಷಾಸಾಬಿ, 45 ವರ್ಷ, ಮುಸ್ಲಿಂ ಜನಾಂಗ, ಚಿಲ್ಲರೆ ಅಂಗಡಿ ಮಾಲೀಕರು, ವಾಸ: ಶ್ರೀನಿವಾಸದಿನ್ನೆ ಗ್ರಾಮ, ಚಿಂತಾಮಣಿ ತಾಲ್ಲೂಕು ಇವರು ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

12. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.193/2021 ಕಲಂ. 15(ಎ) ಕೆ.ಇ ಆಕ್ಟ್ :-

     ದಿನಾಂಕ 07/05/2021 ರಂದು ಸಂಜೆ 7.45 ಗಂಟಗೆ ಪಿ.ಎಸ್.ಐ ನಾರಾಯಣಸ್ವಾಮಿ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:07/05/2021 ರಂದು ಸಂಜೆ 6.15 ಗಂಟೆ ಸಮಯದಲ್ಲಿ ತಾನು ಮತ್ತು ಠಾಣಾ ಸಿಬ್ಬಂದಿಯಾದ ಸಿ.ಹೆಚ್.ಸಿ-249 ಶ್ರೀ ಸಂದೀಪ್ ಕುಮಾರ್ ಮತ್ತು ಸಿ.ಪಿ.ಸಿ-430 ನರಸಿಂಹಯ್ಯರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-326 ರಲ್ಲಿ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಿಕೊಂಡು ಶೆಟ್ಟಿಹಳ್ಳಿ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ಮಂಜುನಾಥರೆಡ್ಡಿ ಬಿನ್ ಸುಬ್ಬಾರೆಡ್ಡಿ ಎಂಬುವವರು ತನ್ನ ಮನೆಯ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಸದರಿ ಮನೆಯ ಬಳಿ ದಾಳಿ ಮಾಡುವ ಸಲುವಾಗಿ ಶೆಟ್ಟಿಹಳ್ಳಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಮಂಜುನಾಥರೆಡ್ಡಿ ಬಿನ್ ಸುಬ್ಬಾರೆಡ್ಡಿರವರ ಮನೆಯ ಬಳಿ ಹೋಗಿ ಜೀಪನ್ನು ನಿಲ್ಲಿಸುವಷ್ಟರಲ್ಲಿ ಮನೆಯ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮನೆಯಲ್ಲಿದ್ದ ಆಸಾಮಿಯು ಓಡಿ ಹೋಗಿದ್ದು, ಅಂಗಡಿಯ ಮುಂಭಾಗದಲ್ಲಿ ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮನೆಯಲ್ಲಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಮಂಜುನಾಥರೆಡ್ಡಿ ಬಿನ್ ಸುಬ್ಬಾರೆಡ್ಡಿ, 30 ವರ್ಷ, ವಕ್ಕಲಿಗರು, ಕೂಲಿ ಕೆಲಸ, ಶೆಟ್ಟಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ 6.45 ಗಂಟೆಯಿಂದ 7.30 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ತನ್ನ ಮನೆಯ ಮುಂದೆ ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಮಂಜುನಾಥರೆಡ್ಡಿ ಬಿನ್ ಸುಬ್ಬಾರೆಡ್ಡಿರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

13. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.71/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005 & 6,7,20(2) COTPA, Cigarettes and Other Tobacco Products,Act 2003, :-

     ದಿನಾಂಕ: 07/05/2021 ರಂದು ರಾತ್ರಿ 8:30 ಗಂಟೆಗೆ ನ್ಯಾಯಾಲಯದ ಪಿ.ಸಿ  367 ರವರು ಎನ್ .ಸಿ ಆರ್ ನಂ  60/2021 ರಲ್ಲಿ ನ್ಯಾಯಾಲಯದ ಅನುಮತಿ ಪಡೆದುಕೊಂಡು ಹಾಜರುಪಡಿಸಿದ್ದನ್ನು ಪಡೆದು ಸಾರಾಂಶವೇನೆಂದರೆ ತಾನು ಮತ್ತು  ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-81 ವಿಶ್ವನಾಥ, ಪಿ.ಸಿ-539 ರವೀಂದ್ರ ರವರರೊಂದಿಗೆ ಗಸ್ತು ಮಾಡುತ್ತಿರುವಾಗ ಈ ದಿನ ದಿನಾಂಕ:07/05/2021 ರಂದು ಬೆಳಿಗ್ಗೆ 10-45 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದಲ್ಲಿ ಕರೋನಾ ಖಾಯಿಲೆ ತಡೆಗಟ್ಟುವ ಹಿನ್ನೆಲೆ ಹಾಗು ಲಾಕ್ ಡೌನ್ ಪ್ರಯುಕ್ತ ಚೇಳೂರು ಸರ್ಕಲ್ ನಲ್ಲಿ ಸಿಬ್ಬಂದಿಯವರೊಂದಿಗೆ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಚೇಳೂರು ಸರ್ಕಲ್ ನ ವೀರಭದ್ರಪ್ಪ ಸ್ಟೋರ್ ನ ಮಾಲೀಕರು ಅಂಗಡಿ ಮುಂದೆ ತಂಬಾಕು ಉತ್ಪನ್ನಗಳನ್ನು (ಜಾಹಿರಾತು ವ್ಯವಹಾರ ಹಾಗು ವಿತರಣೆ ಉತ್ಪದಾನೆ ನಿರ್ಭಂದ) ಕಾಯ್ದೆ-2003 ರ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ನೀಡಿ ಮುಂದೆ ತಾನು ಮತ್ತು  ಸಿಬ್ಬಂದಿಯೊಂದಿಗೆ ಮೇಲ್ಕಂಡ ವೀರಭದ್ರಪ್ಪ ಸ್ಟೋರ್ ಬಳಿ ಬೆಳಿಗ್ಗೆ 11-00 ಗಂಟೆಗೆ ಕರೆದುಕೊಂಡು ಹೋದಾಗ ಅಂಗಡಿ ಮಾಲೀಕರು ತಂಬಾಕು ಉತ್ಪನ್ನಗಳನ್ನು ಮಾರಟ ಮಾಡುತ್ತಿದ್ದು, ಯಾರೋ ಒಂದು ಹುಡುಗ ಹಾಗು 2-3 ಜನ ಅಸಾಮಿಗಳು ಇದ್ದು,ಸದರಿ ಅಸಾಮಿಗಳು ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಇದ್ದು, ಸದರಿ ಅಂಗಡಿ ಮಾಲೀಕನು ಸಹ ಯಾವುದೇ ರೀತಿಯ ಮಾಸ್ಕ ಧರಿಸದೇ ವ್ಯಾಪಾರ ಮಾಡುತ್ತಿದ್ದು, ಪೊಲೀಸ್ ವಾಹನವನ್ನು ಕಂಡ ಕೂಡಲೇ ಅಸಾಮಿಗಳು ಅಲ್ಲಿಂದ ಹೊರಟು ಹೋಗಿದ್ದು, ಅಂಗಡಿಯ ಮುಂದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಸಾಮಿಯ ಹೆಸರು ವಿಳಾಸ ಕೇಳಲಾಗಿ ಮಣಿಕಂಠ ಬಿನ್ ಲೇಟ್ ವೀರಭದ್ರಪ್ಪ, 43 ವರ್ಷ, ಲಿಂಗಾಯತರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಡೆಕ್ಕನ್ ಆಸ್ಪತ್ರೆ ಬಳಿ, ಚಿಂತಾಮಣಿ ಟೌನ್ ಎಂದು ತಿಳಿಸಿದ್ದು, ಸ್ಥಳದಲ್ಲಿ ಕೆಲವು ಚೀಲಗಳನ್ನು ಇಟ್ಟುಕೊಂಡಿದ್ದು, ಅವುಗಳನ್ನು ಪರಿಶೀಲಿಸಲಾಗಿ ಅಂಗಡಿ ಮುಂಭಾಗದಲ್ಲಿ ಬಿಡಿ ಸಿಗರೇಟ್ ಬಾದಷಾ ಮತ್ತು ಹನ್ಸ್ ಪಾಕೆಟ್ ಗಳನ್ನು ಮಾರಾಟ ಮಾಡುತ್ತಿದ್ದು ಅಂಗಡಿಯಲ್ಲಿ ಪರಿಶಿಲಿಸಲಾಗಿ 1) ಗಣೇಶ ಬೀಡಿ 50 ಬಂಡಲ್ ಇದ್ದು ಒಂದು ಬಂಡಲ್ ಬೆಲೆ  350 ರೂಗಳಾಗಿದ್ದು,  17.500 ರೂಗಳು. 2) ಮತ್ತೊಂದು ಚೀಲದಲ್ಲಿ ಚೈನಿ ತಂಬಾಕು ಬಾಂಡಲ್ ಗಳ ಎರಡು ಬ್ಯಾಗ್ ಗಳು ಇದ್ದು ಅವುಗಳಲ್ಲಿ ಏಣಿಕೆ ಮಾಡಲಾಗಿ ಒಂದು ಬ್ಯಾಗ್  ನಲ್ಲಿ 52 ಬಂಡಲ್ ಇರುತ್ತೆ, ಮತ್ತೊಂದು ಬ್ಯಾಗ್ ನಲ್ಲಿ 52 ಬಂಡಲ್ ಇರುತ್ತೆ. ಒಂದೊಂದು ಪಾಕೆಟ್  ಬೆಲೆ 15 ರೂಗಳಾಗಿರುತ್ತೆ.  ಇವುಗಳು ಒಟ್ಟು ಬೆಲೆ 26.500 ರೂಗಳಾಗಿರುತ್ತೆ. ಪಾಕೆಟ್ ಗಳು ಇರುತ್ತೆ,3) ಬಾದಷಾ ಹನ್ಸ್ ಒಂದು ಬಂಡೆಲ್ ನಲ್ಲಿ 5 ಪಾಕೆಟ್ ಗಳಿದ್ದು  ಒಂದು ಪಾಕೆಟ್ ಬೆಲೆ 200 ರೂಗಾಳಗಿದ್ದು ಅಂತಹ 10 ಬಂಡಲ್ ಗಳಿದ್ದು ಅವುಗಳ ಒಟ್ಟು ಬೆಲೆ 10.000/ ರೂಗಳಾಗಿರುತ್ತೆ. 4) 10 ನೇ ನಂಬರ್  ಬಿಡಿ 100 ಬಂಡಲ್ ಇದ್ದು ಒಂದು ಬಂಡಲ್ ಬೆಲೆ  330 ರೂಗಳಾಗಿದ್ದು, ಒಟ್ಟು ಬೆಲೆ 33,000 ರೂಗಳಾಗಿರುತ್ತೆ.  5) ಐದು ಪಾಕೆಟ್ ಸಿಗರೇಟ್ ಇದ್ದು ಅವುಗಳ ಮೇಲೆ ಗೋಲ್ಡ್ ಪ್ಯಾಕ್ ಇರುತ್ತೆ. ಒಂದೊಂದು ಪ್ಯಾಕ ಬೆಲೆ 100 ರೂಗಳಾಗಿರುತ್ತೆ. 5 ಪ್ಯಾಕಗಳ ಬೆಲೆ 500/ರೂಗಳಾಗಿರುತ್ತೆ. ಮೇಲ್ಕಂಡ ಕ್ರಮ ಸಂಖ್ಯೆ 1 ರಿಂದ 5 ರ ಟ್ಟು ಬೆಲೆ 87.500/ ರೂಗಳಾಗಿರುತ್ತೆ. ಸದರಿ ಅಂಗಡಿ ಮಾಲೀಕರಿಗೆ ಸದರಿ ವಸ್ತುಗಳನ್ನು ಮಾರಾಟ ಮಾಡಲು ಪರವಾನಿಗೆ ಬಗ್ಗೆ ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾರೆ. ಮೇಲ್ಕಂಡ ತಂಬಾಕು ಪ್ಯಾಕೇಟ್ ಗಳ ಮೇಲೆ ಕ್ಯಾನ್ಸರ್ ಇತರೆ ರೋಗ ಹರಡುವ ಬಗ್ಗೆ ನೀಡಿರುವ ಸೂಚನೆಗಳ ಬಗ್ಗೆ ಸರಿಯಾದ ಎಚ್ಚರಿಕೆ ಪೋಟೋಗಳನ್ನು ಸ್ವಷ್ಟವಾಗಿ ಪ್ರಿಂಟ್ ಮಾಡಿರುವುದಿಲ್ಲ. ಹಾಗೂ ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೆ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಗ್ರಾಹಕರಿಗೆ ಸಾಮಾಜಿಕ ಅಂತರವನ್ನು ಮರೆತು ಮಾಲೀಕರು ಮಾಸ್ಕ್ ಧರಿಸದೇ ಉಲ್ಲಂಘನೆ ಮಾಡಿದ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದು ಮತ್ತು ಮೇಲ್ಕಂಡ ಎಲ್ಲಾ ಮಾಲುಗಳೊಂದಿಗೆ ಠಾಣೆಗೆ ಹಾಜರಾಗಿ ಠಾಣಾ ಎನ್.ಸಿ.ಆರ್ ನಂ: 60/2021 ರಂತೆ ಸ್ವತಃ ದಾಖಲಿಸಿ ಮುಂದಿನ ಕ್ರಮ ಜರುಗಿಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 

14. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.52/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:07/05/2021 ರಂದು ಸಂಜೆ 19-00 ಗಂಟೆಗೆ ಠಾಣೆಯ ಎ,ಎಸ್,ಐ ಪಾರ್ಥಸಾರಥಿ  ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೇಂದರೆ, ದಿನಾಂಕ:07/05/2021 ರಂದು ಸಂಜೆ 16-15 ಗಂಟೆಯಲ್ಲಿ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಎ.ಎಸ್.ಐ ಪಾರ್ಥಸಾರಥಿ  ಆದ ನನಗೆ ಮತ್ತು  ಸಿ.ಹೆಚ್.ಸಿ 143 ಶ್ರೀನಾಥ ರವರಿಗೆ ಲಾಕ್ ಡೌನ್ ಪ್ರಯುಕ್ತ ಬಂದೋಬಸ್ತ್ ಕರ್ತವ್ಯಕ್ಕೆ ನೇಮಿಸಿದ್ದು ಆದರಂತೆ ನಾವು  ದಿಬ್ಬೂರಹಳ್ಳಿ, ದೊಡ್ಡತೇಕಹಳ್ಳಿ ಗೇಟ್ , ದ್ಯಾವಪ್ಪನಹಳ್ಳಿಯಿಂದ ಕನಪ್ಪನಹಳ್ಳಿಗೆ ಹೋಗುವ ರಸ್ತೆಯಲ್ಲಿ ತರಬಹಳ್ಳಿ ಗ್ರಾಮದ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ತರಬಹಳ್ಳಿ ಗ್ರಾಮದ  ಶ್ರೀನಿವಾಸ  ಎಗ್ ರೈಸ್ ಅಂಗಡಿಯ ಮುಂಭಾಗ ಯಾರೋ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಶಾಂತಿಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಆದರಂತೆ ಪಂಚರನ್ನು ಅದೇ ಗ್ರಾಮದ ಮುಖ್ಯ ರಸ್ತೆಯಲ್ಲಿ ಬರಮಾಡಿಕೊಂಡು ಶ್ರೀನಿವಾಸ ಅಂಗಡಿಯಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯೆಕ್ತಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡಿದ್ದು ಇನ್ನೊಬ್ಬ ವ್ಯಕ್ತಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿಗೆ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡುತ್ತಿದ್ದು ಸಮವಸ್ರದಲ್ಲಿದ್ದ ಪೊಲೀಸರನ್ನು ನೋಡಿ ಮಧ್ಯಪಾನ ಮಾಡುತ್ತಿದ್ದ ವ್ಯೆಕ್ತಿ ಹಾಗೂ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡಿದ್ದ ವ್ಯೆಕ್ತಿಯು ಸಹ ಅಲ್ಲಿಂದ ಓಡಿ ಹೋಗಿರುತ್ತಾರೆ. ನಂತರ ಅಲ್ಲಿದ್ದ  ಸಾರ್ವಜನಿಕರಿಗೆ ಸದರಿ ಎಗ್ ರೈಸ್ ಅಂಗಡಿಯ ಮಾಲೀಕರ ಪೂರ್ಣ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಸದರಿ ಆಸಾಮಿಯ ಹೆಸರು ಶ್ರೀನಿವಾಸ ಬಿನ್ ದೊಡ್ಡ ವೆಂಕಟಪ್ಪ, 47 ವರ್ಷ, ಗೊಲ್ಲರು, ಹೋಟೆಲ್ ವ್ಯಾಪಾರ, ಪಲಿಚೆರ್ಲು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿದು ಬಂದಿದ್ದು ಪಂಚರ ಸಮಕ್ಷಮ ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ.ಎಲ್ ನ HAYWARRDS CHEERS WHISKY ಕಂಪನಿಯ 15 ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳು ಒಟ್ಟು 1350 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 526.95ರೂಗಳಾಗಿರುತ್ತೆ ಸದರಿ ತುಂಬಿದ 90 ಎಂ.ಎಲ್ ನ HAYWARRDS CHEERS WHISKY ಕಂಪನಿಯ 15 ಟೆಟ್ರಾ ಪ್ಯಾಕೇಟ್ ಮಧ್ಯದ ಪ್ಯಾಕೇಟ್ ಗಳನ್ನು ಮತ್ತು  ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು  ಸಂಜೆ 17-00 ಗಂಟೆಯಿಂದ 18-00 ಗಂಟೆಯ ವರೆಗೆ ಅಮಾನತ್ತು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ಹಾಜರಾಗಿ ಆಸಾಮಿಯು ಪರಾರಿಯಾಗಿರುತ್ತಾರೆಂದು ಠಾಣೆಯಲ್ಲಿ ಠಾಣಾಧಿಕಾರಿಗಳಿಗೆ ಮಾಲು ಮತ್ತು ಪಂಚನಾಮೆಯನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಈ ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:52/2021 ಕಲಂ:15(A)32(3) KE ACT ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

15. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.113/2021 ಕಲಂ. 379 ಐ.ಪಿ.ಸಿ:-

          ದಿನಾಂಕ 07/05/2021 ರಂದು ರಾತ್ರಿ 12-45  ಗಂಟೆ ಸಮಯದಲ್ಲಿ  ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಮೋಹನ್ .ಎನ್.  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 06/05/2021 ರಂದು ರಾತ್ರಿ 10-30  ಸಮಯದಲ್ಲಿ  ಗೌರೀಬಿದನೂರು ತಾಲ್ಲೂಕು, ಇಡಗೂರು  ಗ್ರಾಮದ ಬಳಿ ಇರುವ ಕೆರೆಯ  ಅಂಗಳದಲ್ಲಿ ಯಾರೋ ಅಕ್ರಮವಾಗಿ ಟ್ರಾಕ್ಟರ್ ನಲ್ಲಿ  ಮರಳು ಕಳ್ಳತನವಾಗಿ ತುಂಬುತ್ತಿರುವ  ಬಗ್ಗೆ ಮಾಹಿತಿ ಬಂದ  ಮೇರೆಗೆ ತಾನು ಮತ್ತು ಸಿಬ್ಬಂಧಿಯಾದ ಪಿ.ಸಿ-208 ತಿಪ್ಪೆಸ್ವಾಮಿ , ಪಿ.ಸಿ-302 ಕುಮಾರ್ ನಾಯಕ್,  ಪಿ.ಸಿ-06 ನರಸಿಂಹ ಮೂರ್ತಿ,   ಹಾಗು  ಪಿ.ಸಿ-520 ಶ್ರೀನಾಥ್ ಹಾಗೂ ಇಡಗೂರು  ಗ್ರಾಮದ ಪಂಚರನ್ನು ಕರೆದುಕೊಂಡು  ರಾತ್ರಿ 11-00 ಗಂಟೆಗೆ ಇಡಗೂರು ಗ್ರಾಮದ ಬಳಿ ಇರುವ ಕೆರೆಯ  ಅಂಗಳಕ್ಕೆ  ಹೋದಾಗ, ಯಾರೋ  ಟ್ರಾಕ್ಟರ್ ನಲ್ಲಿ  ಮರಳನ್ನು ತುಂಬಿಸುತ್ತಿದ್ದು, ತಮ್ಮನ್ನು ಮತ್ತು ಪೊಲೀಸ್ ಜೀಪನ್ನು ದೂರದಿಂದಲೇ ನೋಡಿ, ಮರಳು ತುಂಬಿರುವ ಟ್ರಾಕ್ಟರ್ , 02 ಬಾಂಡ್ಲಿಗಳು, 02 ಚನಿಕೆಗಳನ್ನು  ಸ್ಥಳದಲ್ಲೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದು ತಾನು ಮತ್ತು ಸಿಬ್ಬಂದಿಯು ಬೆನ್ನಟ್ಟಿದರೂ ಸಿಗದೇ ಓಡಿ ಹೋಗಿರುತ್ತಾರೆ. ನಂತರ ಟ್ರಾಕ್ಟರ್ ಚಾಲಕನ ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ  ನಾಗೇಶ ಬಿನ್ ನಾರಾಯಣಪ್ಪ, 29 ವರ್ಷ, ವಾಸ ಇಡಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ಚಾಲನ ಜೊತೆಯಲ್ಲಿದ್ದ ಕೂಲಿಯ ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ   ಬ್ರಹ್ಮಕುಮಾರ್ ಬಿನ್ ನರಸಿಂಹಯ್ಯ, 30 ವರ್ಷ,  ವಾಸ ಇಡಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿದು ಬಂದಿರುತ್ತೆ.  ನಂತರ ಟ್ರಾಕ್ಟರ್ ಬಳಿ ಹೋಗಿ ಪರಿಶೀಲಿಸಿ ಮಾಡಿಲಾಗಿ ಅದು ಮಹೀಂದ್ರ  ಕಂಪನಿಯ ಟ್ರ್ಯಾಕ್ಟರ್ ಆಗಿರುತ್ತೆ. ಟ್ರಾಕ್ಟರ್ ನ ಇಂಜಿನ್ ಮೇಲೆ ನೊಂದಣಿ ಸಂಖ್ಯೆ ಸ್ಪಷ್ಟವಾಗಿ ಇರುವುದಿಲ್ಲ.  ಟ್ರಾಕ್ಟರ್ ನ ಇಂಜಿನ್ ಮೇಲೆ   NAEW13696  ಎಂಬ ಸಂಖ್ಯೆ ಮುಂದ್ರಿತವಾಗಿರುತ್ತೆ.    ಟ್ರ್ಯಾಲಿಯಲ್ಲಿ ಬಾಡಿ ಲೆವೆಲ್  ಮರಳು ತುಂಬಿರುತ್ತೆ. ಟ್ರ್ಯಾಲಿಗೆ ನೊಂದಣಿ ಸಂಖ್ಯೆ ಇರುವುದಿಲ್ಲ.  ಮರಳು ತೆಗೆದು ಸಾಗಾಣಿಕೆಯನ್ನು  ಮಾಡಲು  ಸರ್ಕಾರ ನಿಷೇದಿಸಿದ್ದರೂ ಸಹಾ  ಮೇಲ್ಕಂಡ    ಟ್ರ್ಯಾಕ್ಟರ್  ಮತ್ತು ಟ್ರ್ಯಾಲಿಯಲ್ಲಿ ಅದರ ಮಾಲೀಕ ಹಾಗು ಚಾಲಕ ಯಾವುದೇ ಪರವಾನಗಿ ಇಲ್ಲದೇ ಕಳ್ಳತನವಾಗಿ ಮರಳನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ  ಅಕ್ರಮವಾಗಿ ಮರಳು ಕಳವು  ಮಾಡಿರುತ್ತಾರೆ. ಮರಳು ತುಂಬಿದ  ಟ್ರ್ಯಾಕ್ಟರ್  ಮತ್ತು ಟ್ರ್ಯಾಲಿಯನ್ನು,  02 ಬಾಂಡ್ಲಿಗಳು, 02 ಚನಿಕೆಗಳನ್ನು ರಾತ್ರಿ 11-15  ಗಂಟೆಯಿಂದ ರಾತ್ರಿ 12-15  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಕೃತಕ ವಿದ್ಯೂತ್ ಬೆಳಕಿನಲ್ಲಿ ಪಂಚನಾಮೆ ಜರುಗಿಸಿ  ವಶಕ್ಕೆ ತೆಗೆದುಕೊಂಡು ಠಾಣೆಗೆ ರಾತ್ರಿ 12-45 ಗಂಟೆಗೆ  ಠಾಣೆಗೆ ವಾಪಸ್ಸು ಬಂದು, ಮೇಲ್ಕಂಡ ಟ್ರ್ಯಾಕ್ಟರ್  ಚಾಲಕ ನಾಗೇಶ ಬಿನ್ ನಾರಾಯಣಪ್ಪ, ಕೂಲಿ ಬ್ರಹ್ಮಕುಮಾರ್ ಬಿನ್ ನರಸಿಂಹಯ್ಯ ಮತ್ತು ಮಾಲೀಕನ ಮೇಲೆ ಕಲಂ: 379 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸಿದೆದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

16. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.114/2021 ಕಲಂ. 34,504,323,324  ಐ.ಪಿ.ಸಿ:-

          ದಿನಾಂಕ 07/05/2021  ರಂದು ಪಿರ್ಯಾಧಿದಾರರಾದ ಮುದ್ದು ಕೃಷ್ಣ ಬಿನ್ ಗಂಗಪ್ಪ, 28 ವರ್ಷ, SC ಜನಾಂಗ, ಕೂಲಿ ಕೆಲಸ, ಹರಿಜನ ಕಾಲೋನಿ , ಹೊಸೂರು  ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು  ನೀಡಿದ ಹೇಳಿಕೆಯ ಸಾರಾಂಶವೇನೆಂದರೆ- ದಿನಾಂಕ 06/05/2021  ರಂದು ಬೆಳಿಗ್ಗೆ 11-15 ಗಂಟೆಯಲ್ಲಿ  ಸೊನಗಾನಹಳ್ಳಿ ರಸ್ತೆಯಲ್ಲಿ ರಮೇಶ್ ರವರ ಮನೆಯ ಮುಂಭಾಗದಲ್ಲಿ ನಾನು ನನ್ನ ಸ್ವಂತ  ದ್ವಿಚಕ್ರ ವಾಹನದಲ್ಲಿ ಮೆಡಿಕಲ್ ಸ್ಟೋರ್ ಬಳಿ ಹೋಗಲು ಹೋಗುತ್ತಿದ್ದಾಗ  ನಮ್ಮ ಗ್ರಾಮದ ವಾಸಿಯಾದ ರಮೇಶ್ ಬಿನ್ ಬಾಲಪ್ಪ ಮತ್ತು ಅವರ ತಮ್ಮ ನಂದೀಶ್ ಎಂಬುವವರು ಹಿಂಭಾಗದಲ್ಲಿ ಕುಳಿತಿದ್ದು ರಮೇಶ್ ಎಂಬುವವರು  ತಮ್ಮ ದ್ವಿಚಕ್ರ ವಾಹನವನ್ನು ಅತಿವೇಗ ಹಾಗೂ ಅಜಾಗರೂ ಕತೆಯಿಂದ  ಚಲಾಯಿಸಿಕೊಂಡು ನನ್ನ ಮೇಲೆ ಬಂದ ಅವಾಗ ನಾನು ಪಕ್ಕದಲ್ಲಿ ಹೋಗಿ “ಏ” ಏನಯ್ಯ  ನಿಧಾನಕ್ಕೆ ಹೋಗಿ ಎಂದು ಹೇಳಿದಾಗ ಏಯ್ ನೀನು ಯವಾನೋ ಎಂತ ಹೇಳಿ ತನ್ನ ದ್ವಿಚಕ್ರ ವಾಹನದ  ಕೆಳಗೆ ಇಳಿದರು ವಾಹನದ ಹಿಂಭಾಗದ ಸೀಟ್ ನಲ್ಲಿ ಕುಳಿತಿದ್ದ ನಂದೀಶ್ ಎಂಬುವವನು ಸಹಾ ಇಳಿದರು ಈ  ನನ್ನ ಮಗನದು ಜಾಸ್ತಿಯಾಯಿತು   ಎಂತ ಅವಾಚ್ಯ ಶಬ್ದಗಳಿಂದ ಬೈದು ರಮೇಶ್ ಎಂಬುವವರು ಅಲ್ಲೀಯೇ ಇದ್ದ ಕಲ್ಲನ್ನು ತೆಗೆದುಕೊಂಡು ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿ ನಂತರ ನಂದೀಶ್ ಎಂಬುವರು ಅಲ್ಲಿಯೇ ಇದ್ದ ಕಟ್ಟಿಗೆಯ ರಿಪೀಸ್ ತೆಗೆದುಕೊಂಡು ತಲೆಯ ಹಿಂಭಾಗ ಹೊಡೆದು ರಕ್ತಗಾಯ ಮಾಡಿದ  ತನಗೆ ಹೊಡೆಯುತ್ತಿದ್ದಾಗ ನಮ್ಮ ಗ್ರಾಮದ ಜನರು ಯಾರೂ ಬಿಡಿಸಲಿಲ್ಲ ನಂತರ ನನಗೆ ಹೊಡೆಯುತ್ತಿದ್ದವರಿಂದ ಬಿಡಿಸಿಕೊಂಡು ನನ್ನ ಮಾವನಾದ ನರಸಿಂಹಮೂರ್ತಿ ಯವರ ಜೊತೆಯಲ್ಲಿ ಹೊಸೂರು  ಸರ್ಕಾರಿ ಆಸ್ವತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ  ಚಿಕಿತ್ಸೆ ಪಡೆದುಕೊಳ್ಳಲು  ಗೌರಿಬಿದನೂರು ಸರ್ಕಾರಿ ಆಸ್ವತ್ರೆಯಲ್ಲಿ ದಾಖಲಾಗಿರುತ್ತೇನೆ. ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆದಿವವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ.

 

17. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.115/2021 ಕಲಂ. 78(I),78(III) ಕೆ.ಪಿ ಆಕ್ಟ್ :-

          ದಿನಾಂಕ;-23/03/2021 ರಂದು ಸಂಜೆ 4-45 ಗಂಟೆಗೆ ಅರ್ಜಿದಾರರು ಕಛೇರಿಯಲ್ಲಿರುವಾಗ್ಗೆ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ವಾಟದಹೊಸಹಳ್ಳಿ ಗ್ರಾಮದ ನರೇಶ್ ಬಿನ್ ನರಸಿಂಹಪ್ಪ ರವರು ತನ್ನ ಬಾಬತ್ತು ತರಕಾರಿ ಅಂಗಡಿ ಮುಂಭಾಗ ಸಾರ್ವಜನಿಕರಿಗೆ ಅಕ್ರಮವಾಗಿ ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿಗಳು ಕೊಡುವುದಾಗಿ ಅಮಿಷಾ ತೋರಿಸಿ ಮಟ್ಕಾ ಚೀಟಿ ಬರೆದುಕೊಟ್ಟು ಸಾರ್ವಜನಿಕರಿಂದ ಹಣವನ್ನು ಪಡೆದುಕೊಳ್ಳುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಹೆಚ್.ಸಿ 224 ವೆಂಕಟೇಶ್ ಹಾಗು ಜೀಪ್ ಚಾಲಕ ಪಿಸಿ 129 ಹೇಮಂತ್ ರವರೊಂದಿಗೆ ಪಂಚರನ್ನು ಕರೆದುಕೊಂಡು ಕೆಎ040-ಜಿ-1222 ವಾಹನದಲ್ಲಿ ವಾಟದಹೊಸಹಳ್ಳೀಗೆ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಕಾಲು ನಡಿಗೆಯಲ್ಲಿ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿ ತರಕಾರಿ ಅಂಗಡಿಯ ಮುಂಭಾಗ ರಸ್ತೆಯಲ್ಲಿ ಹೋಗುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿಗಳು ಕೊಡುವುದಾಗಿ ಅಮಿಷಾ ತೋರಿಸಿ ಮಟ್ಕಾ ಚೀಟಿ ಬರೆದುಕೊಟ್ಟು ಹಣವನ್ನು ಪಡೆಯುತ್ತಿದ್ದ ಆಸಾಮಿಯನ್ನು ಸಿಬ್ಬಂದಿಯ ಸಹಾಯದಿಂದ ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ನರೇಶ್ ಬಿನ್ ನರಸಿಂಹಪ್ಪ, 35 ವರ್ಷ, ಆದಿಕರ್ನಾಟಕ ಜನಾಂಗ, ತರಕಾರಿ ವ್ಯಾಪಾರ, ವಾಟದಹೊಸಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು. ಎಂತ ತಿಳಿಸಿದ್ದು ಈತನ ಕಡೆಯಿಂದ ದು ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್, ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ ಒಂದು ಮಟ್ಕಾ ಚೀಟಿ ಜೇಬಿನಲ್ಲಿದ್ದ ಹಣವನ್ನು ಎಣಿಸಲಾಗಿ 760/- ರೂಗಳು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತುಪಡಿಸಿಕೊಂಡು ಆರೋಪಿ ವಶಕ್ಕೆ ಪಡೆದು ಆರೋಪಿ ಮತ್ತು ಮಾಲನ್ನು ಪಡೆದು ಮುಂದಿನ ಕ್ರಮ ಜರುಗಿಸಲು ನೀಡಿದ ವರದಿ.

 

18. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.116/2021 ಕಲಂ. 87  ಕೆ.ಪಿ ಆಕ್ಟ್ :-

          ದಿನಾಂಕ 08/05/2021 ರಂದು ಬೆಳಿಗ್ಗೆ 10-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ  ಪಿಸಿ 129 ರವರು ನೀಡಿದ ನ್ಯಾಯಾಲಯದ ಅನುಮತಿಯ ವರದಿಯ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶರತ್ ಕುಮಾರ್ ಆದ ನಾನು ಮತ್ತು ಸಿಬ್ಬಂದಿಯೊಂದಿಗೆ ಗೌರಿಬಿದನೂರು ತಾಲ್ಲೂಕುನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಗಸ್ತು ಮಾಡಿಕೊಂಡು ಸಂಜೆ 5-30 ಗಂಟೆಗೆ ಗೌರಿಬಿದನೂರು ನಗರದ ಬೈಪಾಸ್ ರಸ್ತೆಗೆ ಬಂದು ಗಸ್ತಿನಲ್ಲಿದ್ದಾಗ ಸಾಕ್ಷಿದಾರರಿಂದ ಬಂದ ಮಾಹಿತಿ ಮೇರೆಗೆ ಗಂಗಸಂದ್ರ ಗ್ರಾಮದ ಬಸ್ ನಿಲ್ದಾಣಕ್ಕೆ ಬಂದು ಇಲ್ಲಿಯೇ ಇದ್ದ ಪಂಚರನ್ನು ಬರ ಮಾಡಿಕೊಂಡು ಅವರಿಗೆ ಬಂದ ಮಾಹಿತಿಯನ್ನು ತಿಳಿಸಿ ನಂತರ ನಾವು ಮತ್ತು ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಸಂಜೆ 6-00 ಗಂಟೆಗೆ ಹೋಗಿ ನೋಡಲಾಗಿ ಬಂದು ಹುಣಸೇಮರದ ಕೆಳಗೆ ಯಾರೋ ಕೆಲವರು ಆಸಾಮಿಗಳು ವೃತ್ತಾಕಾರವಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಾಕಿ ಅಂದರ್ –ಬಾಹರ್ ಜೂಜಾಟವಾಡುತ್ತಿದ್ದು ಪಂಚರ ಸಮಕ್ಷಮ 07 ಜನ ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದುಕೊಂಡಿರುತ್ತೆ. ನಂತರ ಸ್ಥಳದಲ್ಲಿ ದೊರೆತ 52 ಇಸ್ವೀಟ್ ಎಲೆಗಳು , ಒಂದು ಪ್ಲಾಸ್ಟಿಕ್ ಚೀಲ ಹಾಗೂ ಜೂಜಾಟಕ್ಕೆ ಪಣವಾಗಿಟ್ಟಿದ್ದ 4,150 ರೂ ನಗದು ಹಣವನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಅಮಾನತ್ತುಪಡಿಸಿಕೊಂಡಿರುತ್ತೆ. ನಿಷೇದಿತ ಅಂದರ್ –ಬಾಹರ್ ಇಸ್ವೀಟು ಜೂಜಾಟವಾಡುತ್ತಿದ್ದ ಆಸಾಮಿಗಳು , ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಎನ್ ಸಿ ಪ್ರಕರಣ ದಾಖಲಿಸಿ ಘನ ನ್ಯಾಯಾಲಯದ ಅನುಮತಿ ಪಡೆದು ಠಾಣಾ ಮೊ. ಸಂ 116/2021 ರಂತೆ ಪ್ರಕರಣ ದಾಖಲಿಸಿರುತ್ತೆ.

 

19. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.117/2021 ಕಲಂ. 87  ಕೆ.ಪಿ ಆಕ್ಟ್ :-

          ದಿನಾಂಕ:08/05/2021 ರಂದು ಬೆಳಿಗ್ಗೆ 11-15 ಗಂಟೆಗೆ ಘನ ನ್ಯಾಯಾಲಯದ ಪಿ.ಸಿ-129 ರಾಮಚಂದ್ರ ರವರು ನ್ಯಾಯಾಲಯದ ಅನುಮತಿ ಆದೇಶ ಪ್ರತಿಯನ್ನು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ 13/04/2021 ರಂದು ಮದ್ಯಾಹ್ನ 1-00 ಗಂಟೆಗೆ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಮೋಹನ್ ಎನ್. ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ  ಆಸಾಮಿಗಳು, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ  ದೂರಿನ ಸಾರಾಂಶವೇನೆಂದರೆ   ದಿನಾಂಕ: 13/04/2021  ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ, ತೋಕಲಹಳ್ಳಿ  ಗ್ರಾಮದಲ್ಲಿ  ಇರುವ  ಹಾಲಿನ ಡೈರಿ ಮುಂಭಾಗದಲ್ಲಿನ ಸಾರ್ವಜನಿಕ ರಸ್ತೆಯಲ್ಲಿ  ಯಾರೋ ಆಸಾಮಿಗಳು  ಹಣವನ್ನು ಪಣವಾಗಿಟ್ಟು ಇಸ್ಪೀಟ್  ಎಲೆಗಳಿಂದ  ಅಕ್ರಮ ಜೂಜಾಟವನ್ನು  ಆಡುತ್ತಿದ್ದಾರೆಂದು  ಖಚಿತವಾದ ಮಾಹಿತಿ ಬಂದ ಮೇರೆಗೆ  ನಾನು ಮತ್ತು ಪ್ರೊಬೆಷನರಿ ಸಬ್ ಇನ್ಸೆಪೆಕ್ಟರ್ ಮುತ್ತರಾಜು .ಕೆ ಹಾಗೂ ಸಿಬ್ಬಂದಿಯವರಾದ, ಹೆಚ್.ಸಿ-166 ಸಂಪಂಗಿರಾಮಯ್ಯ, ಹೆಚ್.ಸಿ-171 ಬಾಬು.ಸಿ, ಹೆಚ್.ಸಿ-170 ಜೂಲಪ್ಪ, ಪಿ.ಸಿ-512  ರಾಜಶೇಖರ, ಪಿ.ಸಿ-518 ಆನಂದ,  ಪಿ.ಸಿ-246 ಸಿಕಂದರ್ ಮುಲ್ಲಾ, ಪಿ.ಸಿ-433 ಬಾಬಾಜಾನ್,  ಪಿ.ಸಿ-381 ಜಗದೀಶ, ಪಿ.ಸಿ-281 ಗುರುಸ್ವಾಮಿ, ಪಿ.ಸಿ-426 ಲೋಹಿತ್,  ಜೀಪಿನ ಚಾಲಕ ಎ.ಪಿ.ಸಿ-143  ಮಹೇಶ, ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538  ರಲ್ಲಿ  ಮತ್ತು  ಸಿಬ್ಬಂದಿಯ ದ್ವಿಚಕ್ರ ವಾಹನಗಳಲ್ಲಿ ತೋಕಲಹಳ್ಳಿ  ಗ್ರಾಮಕ್ಕೆ ಬೆಳಿಗ್ಗೆ  11-30   ಗಂಟೆಗೆ ಹೋಗಿ  ಸ್ವಲ್ಪ ದೂರದಲ್ಲಿ   ಸರ್ಕಾರಿ ವಾಹನವನ್ನು ಹಾಗೂ ಸಿಬ್ಬಂದಿಯ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ  ಮರೆಯಲ್ಲಿ ನಿಂತು ನೋಡಲಾಗಿ  ಹಾಲಿನ ಡೈರಿ ಮುಂಬಾಗ ಸಾರ್ವಜನಿಕ ರಸ್ತೆಯಲ್ಲಿ    ಜನರು ಗುಂಪಾಗಿ ಕುಳಿತುಕೊಂಡು  ಅಂದರ್ ಗೆ 100 ರೂ, ಬಾಹರ್ ಗೆ 100 ರೂ  ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು  ಪಂಚರ ಸಮಕ್ಷಮದಲ್ಲಿ  ನಾನು ಮತ್ತು ಸಿಬ್ಬಂದಿಯವರು  ಜೂಜಾಡುತ್ತಿದ್ದವರನ್ನು ಸುತ್ತುವರೆದು ಹಿಡಿದುಕೊಂಡು ಒಬ್ಬೊಬ್ಬರನ್ನಾಗಿ ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ 1) ಮಂಜುರಾಜು ಬಿನ್ ಲೆಟ್ ಮುನಿಯಪ್ಪ, 45 ವರ್ಷ, ಭೋವಿ,  ಜಿರಾಯ್ತಿ,   ವಾಸ ಹುದಗೂರು  ಗ್ರಾಮ , ಗೌರೀಬಿದನೂರು ತಾಲ್ಲೂಕು  , 2) ಹನುಮಪ್ಪ ಬಿನ್ ಗಂಗಪ್ಪ, 65 ವರ್ಷ,  ತಲಾರಿ ಜನಾಂಗ, ಜಿರಾಯ್ತಿ, ವಾಸ ತೋಕಲಹಳ್ಳಿ ಗ್ರಾಮ, ನಗೆಗರೆ ಹೋಬಳಿ, ಗೌರಿಬಿದನೂರು ತಾಲ್ಲುಕು.  3)  ಅಶ್ವತ್ಥಪ್ಪ ಬಿನ್ ಲೇಟ್ ಗಂಗಪ್ಪ, 65 ವರ್ಷ, ತಲಾರಿ ಜನಾಂಗ, ಜಿರಾಯ್ತಿ, ವಾಸ ತೋಕಲಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು 4) ಲಕ್ಷ್ಮೀನಾರಾಯಣಪ್ಪ ಬಿನ್ ಯರ್ರಪ್ಪ, 52  ವರ್ಷ, ನಾಯಕ ಜನಾಂಗ, ಜಿರಾಯ್ತಿ,, ವಾಸ ತೋಕಲಹಳ್ಳಿ ಗ್ರಾಮ, ಗೌರೀಬಿದನೂರು  ತಾಲ್ಲೂಕು 5) ಲಕ್ಷ್ಮೀನಾರಾಯಣ ಬಿನ್ ನರಸಿಂಹಪ್ಪ, 42 ವರ್ಷ, ನೇಯ್ಗೆ ಜನಾಂಗ, ಜಿರಾಯ್ತಿ ವಾಸ ತೋಕಲಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು, 6) ರವಿ ಎ ಬಿನ್ ಚಿಕ್ಕಅಂಜಿನಪ್ಪ, 36 ವರ್ಷ, ಆದಿ ಕರ್ನಾಟಕ ಜನಾಂಗ, ಚಾಕ ವೃತ್ತಿ, ತೋಕಲಹಳ್ಳಿ ಗ್ರಾಮ ಗೌರೀಬಿದನೂರು ತಾಲ್ಲೂಕು, 7) ಕೃಷ್ಣಪ್ಪ ಬಿನ್ ರಾಮಪ್ಪ 42 ವರ್ಷ, ನೇಯ್ಗೆ ಜನಾಂಗ, ಕೂಲಿ ಕೆಲಸ ವಾಸ , ತೋಕಲಹಳ್ಳಿ ಗ್ರಾಮ ಗೌರೀಬಿದನೂರು ತಾಲ್ಲೂಕು 8) ವೆಂಕಟೇಶ ಬಿನ್ ಚಿಕ್ಕವೆಂಕಟರವಣಪ್ಪ, 46 ವರ್ಷ, ಗೊಲ್ಲರು ಜಿರಾಯ್ತಿ ವಾಸ ತೋಕಲಹಳ್ಳಿ ಗ್ರಾಮ ಗೌರೀಬಿದನೂರು ತಾಲ್ಲೂಕು, 9) ನಂದೀಶ ಬಿನ್ ಅಶ್ವತ್ಥಪ್ಪ, 28 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ ವಾಸ ಬೋಡಬಂಡನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು 10) ನಂದೀಶ ಬಿನ್ ನರಸಿಂಹಪ್ಪ, 30 ವರ್ಷ, ಅಗಸರು, ಖಾಸಗಿ ಕಂಪನಿಯಲ್ಲಿ ಕೆಲಸ ಹುದುಗೂರು ಗ್ರಾಮ, ಗೌರೀಬಿದನೂರು ತಾಲ್ಲೂಕು, 11) ನಾಗರಾಜ ಬಿನ್ ನಾರಾಯಣಪ್ಪ, 36 ವರ್ಷ, ಪ.ಜಾತಿ, ಜಿರಾಯ್ತಿ, ವಾಸ ತೋಕಲಹಳ್ಳಿ ಗ್ರಾಮ ಗೌರೀಬಿದನೂರು ತಾಲ್ಲೂಕು 12) ಕೃಷ್ಣಪ್ಪ ಬಿನ್ ಯರ್ರಪ್ಪ, 46 ವರ್ಷ, ಬಲಜಿಗರು, ಜಿರಾಯ್ತಿ ವಾಸ ತೋಕಲಹಳ್ಳಿ ಗ್ರಾಮ ಗೌರೀಬಿದನೂರು ತಾಲ್ಲೂಕು, 13) ಸುಬ್ಬರಾಯಪ್ಪ ಬಿನ್ ಆವುಲಪ್ಪ, 60 ವರ್ಷ, ನಾಯಕರು, ಜಿರಾಯ್ತಿ, ವಾಸ ತೋಕಲಹಳ್ಳಿ ಗ್ರಾಮ ಗೌರೀಬಿದನೂರು ತಾಲ್ಲೂಕು, 14) ಮುರಳಿ ಬಿನ್ ನರಸಿಂಹಪ್ಪ,25 ವರ್ಷ,  ಪ.ಜಾತಿ, ಜಿರಾಯ್ತಿ ವಾಸ ತೋಕಲಹಳ್ಳಿ ಗ್ರಾಮ ಗೌರೀಬಿದನೂರು ತಾಲ್ಲೂಕು, ಎಂದು ತಿಳಿಸಿರುತ್ತಾರೆ. ಇನ್ನೂ ಕೆಲವರು ಸ್ಥಳದಿಂದ ಓಡಿ ಹೋಗಿರುತ್ತಾರೆ. ಸ್ಥಳದಲ್ಲಿ ಜೂಜಾಟಕ್ಕೆ ಪಣಕ್ಕೆ ಕಟ್ಟಿದ್ದ ಹಣ ಇದ್ದು   ಎಣಿಸಲಾಗಿ 1)  13860/- ರೂ ಹಣ , 2) 52 ಸ್ಪೀಟ್ ಎಲೆಗಳು , 3) ಒಂದು ಪ್ಲಾಸ್ಟಿಕ್ ಚೀಲ ಇರುತ್ತೆ. ಸ್ಥಳದಲ್ಲಿ  ಬೆಳಿಗ್ಗೆ 11-30   ಗಂಟೆಯಿಂದ 12-30   ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಮೇಲ್ಕಂಡ ನಗದು, ಇಸ್ಪೀಟು ಎಲೆಗಳನ್ನು ವಶಪಡಿಸಿಕೊಂಡು, ಮದ್ಯಾಹ್ನ 1-00   ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,  ಆರೋಪಿಗಳು, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ  ಕಾನೂನು ರೀತ್ಯಾ ಕ್ರಮ  ಕೈಗೊಳ್ಳಲು   ಸೂಚಿಸಿದ್ದರ ಮೇರೆಗೆ  ಎನ.ಸಿ.ಆರ್ ಅನ್ನು ನೊಂದಾಯಿಸಿಕೊಂಡು ಘನ ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಿಸಿರುತ್ತೆ.

 

20. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.118/2021 ಕಲಂ. 87  ಕೆ.ಪಿ ಆಕ್ಟ್ :-

          ದಿನಾಂಕ 08/05/2021 ರಂದು ಬೆಳಿಗ್ಗೆ  11-30 ಗಂಟೆಗೆ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರುಪಡಿಸಿದ್ದು  ಅನುಮತಿ ಪತ್ರದ ಸಾರಾಂಶವೇನೆಂದರೆ ದಿನಾಂಕ 06-03-2021 ರಂದು ಸಂಜೆ 7-00  ಗಂಟೆಗೆ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಮೋಹನ್ ಎನ್. ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ  03 ಜನ ಆಸಾಮಿಗಳು, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ  ದೂರಿನ ಸಾರಾಂಶವೇನೆಂದರೆ ದಿನಾಂಕ: 06/03/2021  ರಂದು  ಸಂಜೆ 5-00 ಗಂಟೆಯಲ್ಲಿ ಸಿಬ್ಬಂದಿಯೊಂದಿಗೆ ವಿಧುರಾಶ್ವತ್ಥ ಹೊರ ಠಾಣಾ ವ್ಯಾಪ್ತಿಯಲ್ಲಿ ಸಂಜೆ ಗಸ್ತು ಕರ್ತವ್ಯದಲ್ಲಿದ್ದಾಗ  ಗೌರಿಬಿದನೂರು ತಾಲ್ಲೂಕು ಉಚ್ಚೋದನಹಳ್ಳಿ   ಗ್ರಾಮದ ಬಳಿ ಇರುವ ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು  ಹಣವನ್ನು ಪಣವಾಗಿಟ್ಟು ಇಸ್ಪೀಟ್  ಎಲೆಗಳಿಂದ  ಅಕ್ರಮ ಜೂಜಾಟವನ್ನು  ಆಡುತ್ತಿದ್ದಾರೆಂದು  ಖಚಿತವಾದ ಮಾಹಿತಿ ಬಂದ ಮೇರೆಗೆ  ನಾನು ಮತ್ತು ಸಿಬ್ಬಂದಿಯವರಾದ, ಹೆಚ್.ಸಿ-171 ಜೂಲಪ್ಪ , ಪಿ.ಸಿ-512  ರಾಜಶೇಖರ, ಪಿ.ಸಿ-179 ಶಿವಶೇಖರ, ಪಿ.ಸಿ-433 ಬಾಬಾಜಾನ್, ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538  ರಲ್ಲಿ  ಉಚ್ಚೋದನಹಳ್ಳಿ  ಗ್ರಾಮಕ್ಕೆ ಸಂಜೆ 5-30 ಗಂಟೆಗೆ ಹೋಗಿ  ಸ್ವಲ್ಪ ದೂರದಲ್ಲಿ   ಸರ್ಕಾರಿ ವಾಹನವನ್ನು ನಿಲ್ಲಿಸಿ   ಮರೆಯಲ್ಲಿ ನಿಂತು ನೋಡಲಾಗಿ  ಗ್ರಾಮದ ಹೊರವಲಯದಲ್ಲಿ  ಇರುವ ಕೆರೆಯ ಅಂಗಳದಲ್ಲಿ ಬೆಳಕಿನಲ್ಲಿ  ಸುಮಾರು 6-8 ಜನರು ಗುಂಪಾಗಿ ಕುಳಿತುಕೊಂಡು  ಅಂದರ್ ಗೆ 100 ರೂ, ಬಾಹರ್ ಗೆ 100 ರೂ  ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು  ಪಂಚರ ಸಮಕ್ಷಮದಲ್ಲಿ  ನಾನು ಮತ್ತು ಸಿಬ್ಬಂದಿಯವರು  ಜೂಜಾಡುತ್ತಿದ್ದವರನ್ನು ಸುತ್ತುವರೆದು ಹಿಡಿದುಕೊಂಡು ಒಬ್ಬೊಬ್ಬರನ್ನಾಗಿ ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ 1)  ಸುಭಾಷ್ ಬಿನ್ ಮದ್ದಿಲೇಟಪ್ಪ, 38 ವರ್ಷ,  ಆದಿ ಕರ್ನಾಟಕ, ಖಾಸಗಿ ಕೆಲಸ, ಪರಗಿ ಗ್ರಾಮ, ಹಿಂದೂಪುರ ಮಂಡಲಂ, ಎ.ಪಿ., 2) ನಾರಾಯಣಪ್ಪ ಬಿನ್ ಗೋವಿಂದಪ್ಪ, 35 ವರ್ಷ, ಶೆಟ್ಟಿಬಲಜಿಗರು, ಡ್ರೈವರ್ ಕೆಲಸ, ವಾಸ ಬಾಶೆಟ್ಟಿಹಳ್ಳಿ ಗ್ರಾಮ, ದೊಡ್ಡಬಳ್ಳಾಪುರ ತಾಲ್ಲುಕು, 3) ಮಾರುತಿ ಬಿನ್ ರಾಮಾಂಜಿನಪ್ಪ, 28 ವರ್ಷ, ಬೋವಿ ಜನಾಂಗ, ಜಿರಾಯ್ತಿ, ವಾಸ ರೊದ್ದಂ ಗ್ರಾಮ, ಹಿಂದೂಪುರ ಮಂಡಲಂ, ಎ.ಪಿ.,ಎಂದು ತಿಳಿಸಿರುತ್ತಾರೆ.  ಕೆಲವರು ಓಡಿ ಹೋಗಿದ್ದು, ಓಡಿ ಹೋದ ಇತರೆ ಆಸಾಮಿಗಳ  ಹೆಸರು ಮತ್ತು ವಿಳಾಸ ತಿಳಿದಿರುವುದಿಲ್ಲ  ಎಂದು ತಿಳಿಸಿರುತ್ತಾರೆ. ಸ್ಥಳದಲ್ಲಿ ಜೂಜಾಟಕ್ಕೆ ಪಣಕ್ಕೆ ಕಟ್ಟಿದ್ದ ಹಣ ಇದ್ದು   ಎಣಿಸಲಾಗಿ 1)  4850/- ರೂ ಹಣ , 2) 52 ಸ್ಪೀಟ್ ಎಲೆಗಳು , ಒಂದು ನ್ಯೂಸ್ ಪೇಪರ್  ಇರುತ್ತೆ. ಸ್ಥಳದಲ್ಲಿ  ಸಂಜೆ 5-30  ಗಂಟೆಯಿಂದ 6-30   ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಮಾಲನ್ನು   ವಶಪಡಿಸಿಕೊಂಡು, ಠಾಣೆಗೆ ಸಂಜೆ 7-00   ಗಂಟೆಗೆ  ಠಾಣೆಗೆ ವಾಪಸ್ಸು ಬಂದು ಆರೋಪಿಗಳು, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ  ಕಾನೂನು ರೀತ್ಯಾ ಕ್ರಮ    ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ  ಎನ.ಸಿ.ಆರ್ ಅನ್ನು ನೊಂದಾಯಿಸಿಕೊಂಡು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

21. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.48/2021 ಕಲಂ. 341,447,506 ಐ.ಪಿ.ಸಿ:-

          ದಿನಾಂಕ; 07-05-2021 ರಂದು ಮದ್ಯಾಹ್ನ 15-00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ  ಸಾರಾಂಶವೇನೆಂದರೆ ಪಿರ್ಯಾದುದಾರರು ಸಮಗ್ರ ಶಿಶು ಅಭಿವೃದ್ದಿ ಹಾಗು ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ  ಅಧಿಕಾರಿಗಳಾಗಿದ್ದು ಅವರದೆ ಇಲಾಖೆಯ ನಂದಿ ಹೋಬಳಿ  ನಕ್ಕನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು  ಅಂಗನವಾಡಿ  ಮುಂಬಾಗ ಇರುವ ದಾರಿಯು ಮುಖ್ಯರಸ್ತೆಯವರೆವಿಗೂ ತನ್ನದೆಂದು ಅದೇ ಗ್ರಾಮದ ಕೇಶವರೆಡ್ಡಿ ಬಿನ್ ಮುನಿನಂಜಪ್ಪ  ರವರು ಈ ಬಗ್ಗೆ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿರುತ್ತದೆಂದು 1 ತಿಂಗಳಿನಿಂದ  ಜನರನ್ನು  ಓಡಾಡಲು ಬಿಡದೆ  ಸದರಿ ಸ್ಥಳಕ್ಕೆ ಕಲ್ಲು ಕೂಚಗಳನ್ನು ನೆಟ್ಟು ಮುಳ್ಳು ತಂತಿಗಳಿಂದ ಕಾಂಪೌಂಡ್  ನಿರ್ಮಿಸಿ  ಜನರು ಓಡಾಡಲು ತೊಂದರೆಯನ್ನು ಕೊಡುತ್ತಿರುತ್ತಾರೆಂದು. ಯಾರಾದರೂ ಓಡಾಡಿದರೆ  ಒಂದು ಗತಿಯನ್ನು ಕಾಣಿಸುವುದಾಗಿ  ಸದರಿ ಸಂಸ್ಥೆಯು  ಸರ್ಕಾರಿ ಸಂಸ್ಥೆಯಾಗಿದ್ದು  ಅಂಗನವಾಡಿ  ಶಾಲೆಗೆ ಹೋಗುವ ದಾರಿಗೆ ಅಕ್ರಮವಾಗಿ ಕಾಂಪೌಂಡ್ ನ್ನು ನಿರ್ಮಿಸಿ  ಜನರ ಓಡಾಟಕ್ಕೆ  ತೊಂದರೆ ಕೊಡುತ್ತಿರುವ ಕೇಶವರೆಡ್ಡಿ ಬಿನ್ ಮುನಿನಂಜಪ್ಪರವರ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

22. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.35/2021 ಕಲಂ. 143,147,323,324,427,504,506,114,149 ಐ.ಪಿ.ಸಿ:-

          ದಿನಾಂಕ:07-05-2021 ರಂದು ಪಾತಪಾಳ್ಯ ಠಾಣೆಯ ಹೆಚ್.ಸಿ-183 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಹೇಳಿಕೆ ಪಡೆದುಕೊಂಡು ಸಂಜೆ 17-15 ಗಂಟೆಗೆ ಠಾಣೆಗೆ ವಾಪಸ್ಸಾಗಿ ಹಾಜರುಪಡಿಸಿದ ಹೇಳಿಕೆ ದೂರನ್ನು ಪಡೆದು ದಾಖಲಿಸಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಸರ್ವೆ ನಂಬರ್ 414/B ಸರ್ಕಾರಿ ಜಾಗದಲ್ಲಿ ತಾವು ಹುಲ್ಲಿನ ಬಣವೆ ಹಾಕಿ ಸರ್ಕಾರದಿಂದ ಬಾತ್ ರೂಂ ಅನ್ನು ಕಟ್ಟಿಕೊಂಡಿದ್ದು, ಸದರಿ ಜಾಗದ ವಿಚಾರದಲ್ಲಿ  ತಮಗೂ ಮತ್ತು ಕೋನಪ್ಪ ರವರಿಗೆ ತಕರಾರುಗಳಿರುವುದಾಗಿ, ಈ ದಿನ ದಿನಾಂಕ: 07-05-2021 ರಂದು ಬೆಳಿಗ್ಗೆ 09-00 ಗಂಟೆಯಲ್ಲಿ ತಾನು ಮೇಲ್ಕಂಡ ಜಾಗದ ಬಳಿ ಹೋದಾಗ ಮೇಲ್ಕಂಡ 1)ಕೋನಪ್ಪ   ಬಿನ್ ಎದ್ದುಲ ಚಿನ್ನಪ್ಪ ಅವರ ಕಡೆಯವರಾದ 2)A.ಶ್ರೀನಿವಾಸುಲು ಬಿನ್ ಎದ್ದುಲ ಚಿನ್ನಪ್ಪ 3)ಪಾಲೇಟಪ್ಪ ಬಿನ್ ಎದ್ದುಲ ಚಿನ್ನಪ್ಪ 4)ಚಿನ್ನಮ್ಮ ಕೋಂ ಎದ್ದುಲ ಚಿನ್ನಪ್ಪ 5)ಅಶೋಕ ಬಿನ್ ಕೋನಪ್ಪ 6)ಅನಿಲ್ ಬಿನ್ ಕೋನಪ್ಪ 7)ನಿಖಿಲ್ ಬಿನ್ ಕೋನಪ್ಪ 8)ರತ್ನಮ್ಮ ಕೋಂ ಕೋನಪ್ಪ 9)ಕದಿರಮ್ಮ ಕೋಂ ಪಾಲೇಟಪ್ಪ 10)ಅನಿತ ಕೋಂ ಶ್ರೀನಿವಾಸ ರವರು ತಮ್ಮ ಹುಲ್ಲಿನ ಬಣವೆಯನ್ನು ಕಿತ್ತು ಹಾಕಿ ಕಲ್ಲು ಕೂಚಗಳನ್ನು ಹೊಡೆದು ಹಾಕಿ ಬಾತ್ ರೂಂ ನ್ನು ಕಿತ್ತು ಹಾಕಿರುವುದಾಗಿ, ತಾನು ಏಕೆ ತಮ್ಮ ಜಾಗದಲ್ಲಿರುವ  ಹುಲ್ಲಿನ ಬಣವೆ & ಬಾತ್ ರೂಂ ನ್ನು ಕಿತ್ತು ಹಾಕಿರುವುದು ಎಂದು ಕೇಳಿದ್ದಕ್ಕೆ  ಮೇಲ್ಕಂಡ ಎಲ್ಲರೂ ಅಕ್ರಮ ಗುಂಪು ಕಟ್ಟಿಕೊಂಡು ತನ್ನ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು ಕೈಗಳಿಂದ ತನ್ನ ಮೈಮೇಲೆ ಹೊಡೆದು ಮೈಕೈ ನೋವು ಉಂಟು ಮಾಡಿರುವುದಾಗಿ, ಆ ಪೈಕಿ ಅಶೋಕ ಬಿನ್ ಕೋನಪ್ಪ ರವರು ಕಲ್ಲಿನಿಂದ ತನ್ನ ಹಣೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿರುವುದಾಗಿ, ಸದರಿ ಜಾಗದ ತಂಟೆಗೆ ಬಂದರೆ ನಿನ್ನನ್ನು ಮುಗಿಸಿಬಿಡುವುದಾಗಿ ಪ್ರಾನಬೆದರಿಕೆ ಹಾಕಿರುವುದಾಗಿ, ನಂತರ ಮೇಲ್ಕಂಡವರು ತನ್ನ ಅಣ್ಣನ ಮಗನಾದ ಶಂಕರ ಬಿನ್ ವೆಂಕಟರಾಯಪ್ಪ ರವರನ್ನು ಸಹ ಅವಾಚ್ಯವಾಗಿ ಬೈಯ್ದು ಗಲಾಟೆ ಮಾಡಿರುವುದಾಗಿ, ಗಾಯಗೊಂಡಿದ್ದ ತನ್ನನ್ನು ಶಂಕರ ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿ   ತಮ್ಮ ಗ್ರಾಮದ ವೆಂಕಟಾಚಲಪತಿ, ಜಗದೀಶ ಮತ್ತು ರತ್ನಮ್ಮ ರವರು ಹೇಳಿ ಕೊಟ್ಟು ತಮ್ಮ ಮೇಲೆ ಗಲಾಟೆಗೆ ಕಳುಹಿಸಿರುವುದಾಗಿ ಅಕ್ರಮ ಗುಂಪು ಕಟ್ಟಿಕೊಂಡು ಬಂದು ತನ್ನ ಮೇಲೆ ಜಗಳ ಮಾಡಿ, ಹುಲ್ಲಿನ ಬಣವೆ ಮತ್ತು ಬಾತ್ ರೂಂ ನ್ನು ಕಿತ್ತು ಹಾಕಿ ನಷ್ಟಪಡಿಸಿದ ಮೇಲ್ಕಂಡವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ.

 

23. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.36/2021 ಕಲಂ. 143,147,323,324,504,149 ಐ.ಪಿ.ಸಿ:-

          ದಿನಾಂಕ:07-05-2021 ರಂದು ಸಂಜೆ 18-15 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ.ರತ್ನಮ್ಮ ಕೋಂ ಕೋನಪ್ಪ ರವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ವೆಂಕಟಾಚಲಪತಿ ಸ್ವಾಮಿ ರವರು ಜಮೀನಿನಲ್ಲಿ ಇದೇ ಗ್ರಾಮದ ವೆಂಕಟೇಶಪ್ಪ ಬಿನ್ ನಡಿಪಪ್ಪ ರವರು ಹುಲ್ಲಿನ ಬಣವೆ ಹಾಕಿಕೊಂಡಿರುದಾಗಿ ನಂತರ ಸದರಿ ಜಮೀನು ತನಗೆ ಬೇಡ ಎಂದು ವೆಂಕಟೇಶಪ್ಪ ರವರು ಹೇಳಿದ್ದರಿಂದ ತಮಗೆ ವೆಂಕಟಾಚಲಪತಿ ರವರು ಕೇಳಿದಾಗ 1 ಲಕ್ಷ ರೂಪಾಯಿಗಳಿಗೆ ತೆಗೆದುಕೊಂಡು ತನ್ನ ಹೆಸರಿಗೆ 2018 ರಲ್ಲಿ ಖಾತೆ ಮಾಡಿಕೊಂಡಿರುವುದಾಗಿ ಸದರಿ ಜಾಗವನ್ನು ವೆಂಕಟೇಶಪ್ಪ ರವರು ಬಿಡದೇ ಇದ್ದುದರಿಂದ ಈ ದಿನ ದಿನಾಂಕ:07-05-2021 ರಂದು ಮದ್ಯಾಹ್ನ 12-30 ಗಂಟೆಯಲ್ಲಿ ತಾನು ಸದರಿ ಜಾಗದಲ್ಲಿ ಸೀಮೇಹಸು ಕಟ್ಟಿ ಹಾಕಿ ಕ್ಲೀನ್ ಮಾಡಿಕೊಳ್ಳುತ್ತಿದ್ದಾಗ ಇದೇ ಗ್ರಾಮ ದವರಾಧ 1)ವೆಂಕಟೇಶಪ್ಪ 2)ಶಂಕರಪ್ಪ ಬಿನ್ ವೆಂಕಟರಾಯಪ್ಪ 3)ಮಂಜುಳ ಕೋಂ ಶಂಕರಪ್ಪ 4)ಸುರೇಶ ಬಿನ್ ಚಿಕ್ಕನರಸಿಂಹಪ್ಪ 5)ಚಲಪತಿ ಬಿನ್ ಮಿಷನ್ ನರಸಿಂಹಪ್ಪ 6)ಅಂಜಿನಪ್ಪ ಬಿನ್ ಲಕ್ಷ್ಮನ್ನ 7) ಪುಷ್ಪಮ್ಮ ಕೋಂ ವೆಂಕಟರವಣಪ್ಪ 8)ವಿನೋದ್ ಕುಮಾರ್ ಬಿನ್ ವೆಂಕಟರವಣಪ್ಪ 9)ಲಕ್ಷ್ಮೀದೇವಿ ಕೋಂ ಅಂಜಿನಪ್ಪ 10)ಮಂಜುನಾಥ ಬಿನ್ ವೆಂಕಟೇಶಪ್ಪ 11)ವೆಂಕಟರವಣಪ್ಪ ಬಿನ್ ವೆಂಕಟೇಶಪ್ಪ 12)ಮುನಿಲಕ್ಷ್ಮಮ್ಮ ಕೋಂ ಮಂಜುನಾಥ ರವರು ಎಲ್ಲರೂ ಗುಂಫು ಕಟ್ಟಿಕೊಂಡು ತನ್ನನ್ನು ಅವಾಚ್ಯವಾಗಿ ಬೈಯ್ಯುತ್ತಾ ಮಚ್ಚು, ದೊಣ್ಣೆ, ಕಲ್ಲುಗಳನ್ನು, ಮುಳ್ಳು ಕಟ್ಟಿಗೆಯಿಂದ ತನ್ನ ಮೇಲೆ ಬಿದ್ದು ಸಿಕ್ಕಾಪಟ್ಟೆ ಹೊಡೆದು ಮುಳ್ಳುಕಟ್ಟಿಗೆಯಿಂದ ತನ್ನ ಎರಡು ಕೈಗಳಿಗೆ ಏಟುಗಳು ಬಿದ್ದು ರಕ್ತಗಾಯಗ ಳಾಗಿರುವುದಾಗಿ ತಲೆಯ ಹಿಂಭಾಗ ಕಲ್ಲಿನ ಏಟು ಬಿದ್ದು ಮೂಗೇಟು ಆಗಿರುವುದಾಗಿ ಗಲಾಟೆ ಸಮಯದಲ್ಲಿ ತನ್ನನ್ನು ಕೆಳಕ್ಕೆ ತಳ್ಳಿ ಶಂಕರಪ್ಪ, ಮಂಜುಳ, ಸುರೇಶ, ಪುಷ್ಪಮ್ಮ  ರವರು ಕಾಲುಗಳಿಂದ ಒದ್ದಿರುವುದಾಗಿ ಗಲಾಟೆ ನಂತರ ಪುನಃ ತಮ್ಮ ಮನೆಯ ಬಳಿ ಬಂದು ಅವಾಚ್ಯವಾಗಿ ಬೈಯ್ದಿರುವುದಾಗಿ ಈ ವಿಚಾರದಲ್ಲಿ ಕಾನೂನು ಕ್ರಮ ಜರುಗಿಸಲು ಕೋರಿ ಪಿರ್ಯಾದು.

 

24. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.149/2021 ಕಲಂ. 323,353,504,506,34,269,271 ಐ.ಪಿ.ಸಿ & 4,5,10 THE KARNATAKA EPIDEMIC DISEASES ACT, 2020:-

          ದಿನಾಂಕ:07-05-2021 ರಂದು ಸಂಜೆ 5-00 ಗಂಟೆಯಲ್ಲಿ ಠಾಣೆಯಲ್ಲಿ  ಕತ್ಯವ್ಯ ನಿರ್ವಹಿಸುವ   ಸಿಪಿಸಿ-510 ಹರೀಶ್.ಟಿ.ವಿ, ರವರು ನೀಡಿದ  ಗಣಕೀಕೃತ ದೂರಿನ ಸಾರಾಂಶವೇನೆಂದರೆ   ದಿನಾಂಕ 07/05/2021 ರಂದು ತನಗೆ  ಕೋವಿಡ್-19 ತಡೆಗಟ್ಟು ಸಲುವಾಗಿ  ಶಿಡ್ಲಘಟ್ಟ ತಾಲ್ಲೂಕು ಅಬ್ಲೂಡು ಗ್ರಾಮಕ್ಕೆ ಬಂದೋಬಸ್ತು ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಬೆಳಿಗ್ಗೆ 8-00 ಗಂಟೆಗೆ ಅಬ್ಲೂಡು ಗ್ರಾಮಕ್ಕೆ ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈಗಿರುವಲ್ಲಿ ಇದೇ ದಿನ ಸಂಜೆ 3-45 ಗಂಟೆಯಲ್ಲಿ ಅಬ್ಲೂಡು ಗ್ರಾಮದ  ಕರ್ತವ್ಯ ನಿರ್ವಹಿಸುತ್ತಿದ್ದಾಗ  ಅಬ್ಲೂಡು ಗ್ರಾಮದ ದೇವರಾಜ ಬಿನ್ ವೆಂಕಟರಮಣಪ್ಪ ರವರು ತನ್ನ ಚಿಕನ್ ಅಂಗಡಿಯನ್ನು ತೆಗೆದಿದ್ದು ಸದರಿ ಅಂಗಡಿಯ ಮುಂಭಾಗ ಯಾರೋ ಅಸಾಮಿಗಳು ಅಂಗಡಿಯ ಮುಂಭಾಗದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಕುಳಿತುಕೊಂಡಿದ್ದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಅಂಗಡಿಯ ಮುಂಭಾಗದಲ್ಲಿ ಮಾಕರ್್ ಸಹ ಮಾಡಿರುವುದಿಲ್ಲ ಹಾಗೂ ಮಾಸ್ಕ್ ಗಳನ್ನು ಧರಿಸದೇ ಸರ್ಕಾರದ ಹೊರಡಿಸಿರುವ ಕೋವಿಡ್-19 ಆದೇಶಗಳನ್ನು ಪಾಲಿಸದೇ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕಪಕ್ಕದಲ್ಲಿಯೇ ಕುಳಿತುಕೊಂಡು ಮಾತನಾಡಿಕೊಂಡಿದ್ದು  ಅಗ ತಾನು ಸದರಿ ಚಿಕನ್ ಅಂಗಡಿಯ ಬಳಿ ಹೋಗುವಷ್ಠರಲ್ಲಿ ಚಿಕನ್ ಅಂಗಡಿ ಮಾಲೀಕ ಅಲ್ಲಿಂದ ಓಡಿಹೋಗಿರುತ್ತಾನೆ ಅಲ್ಲಿಯೇ ಇದ್ದ  ಇಬ್ಬರು ಅಸಾಮಿಗಳು ತಮ್ಮ ಕೆಎ-40 ಹೆಚ್-3641 ದ್ವಿಚಕ್ರವಾಹನವನ್ನು ಅಲ್ಲಿಯೇ ನಿಲ್ಲಿಸಿಕೊಂಡಿದ್ದರು  ಸದರಿ ಅಸಾಮಿಗಳು ಮಾಸ್ಕ್ ಹಾಕಿರುವುದಿಲ್ಲ ಆಗ ನಾನು ಸದರಿ ಅಸಾಮಿಗಳಿಗೆ ಏಕೆ ಅನಾವ್ಯಶಕವಾಗಿ 10-00 ಗಂಟೆ ಮೇಲೆ ಓಡಾಡುತ್ತಿದ್ದೀರಾ ಮುಖಕ್ಕೆ ಮಾಸ್ಕ ಸಹ ಹಾಕಿರವುದಿಲ್ಲವೆಂದು ಸಾಮಾಜಿಕ ಅಂತರದಲ್ಲಿರುವುದಿಲ್ಲ ಎಂದು ಕೇಳಿದಾಗ ಸದರಿ ಅಸಾಮಿಗಳು ಏಕಾ ಏಕಿ ತನ್ನ ಮೇಲೆ ಗಲಾಟೆ ಮಾಡಿ ಏ ನೀನು ಯಾರೂ ಕೇಳುವುದಕ್ಕೆ ನಾವು ಎಲ್ಲಿಬೇಕಾದರೂ ಓಡಾಡುತ್ತೇವೆ ಎಲ್ಲಿ ಬೇಕಾದರೂ ಇರುತ್ತೇವೆಂದು ಹೇಳಿ ಲೋಪರ್ ನನ್ನ ಮಗನೇ ಎಂದು ಕೆಟ್ಟ ಮಾತುಗಳಿಂದ ಬೈದಿರುತ್ತಾರೆ ಸದರಿ ಅಸಾಮಿಗಳ ಹೆಸರು ಮತ್ತು ವಿಳಾಸ ತಿಳಿದುಕೊಳ್ಳಲಾಗಿ ಶ್ರೀನಿವಾಸ ಬಿನ್ ವೆಂಕಟೇಶಪ್ಪ ಮತ್ತು ರವಿಚಂದ್ರ  ಬಿನ್ ವೆಂಕಟರಮಣಪ್ಪ, ಇಬ್ಬರೂ ಕೆಂಪನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು  ಎಂದು ತಿಳಿದುಬಂದಿರುತ್ತೆ, ಶ್ರೀನಿವಾಸ  ಮತ್ತು ರವಿಚಂದ್ರ  ರವರುಗಳು ತಾನು ಧರಿಸಿದ್ದ ಖಾಕಿ ಸಮವಸ್ತ್ರದ ಗಲ್ಲಾಪಟ್ಟಿಯನ್ನು ಹಿಡಿದು ಎಳೆದಾಡಿ ತನ್ನನ್ನು ಕೆಳಗಡೆ ತಳ್ಳಿ ಅವರು ಸಹ ತನ್ನ ಮೇಲೆ ಬಿದ್ದು  ತಾನು ಧರಿಸಿದ್ದ  ಸಮವಸ್ತ್ರದ ಬಲಭಾಗದ ಜೋಬ್ ಅನ್ನು ಹಿಡಿದು ಹರಿದು ಹಾಕಿ ಕೈಗಳಿಂದ ತನ್ನ ಕೆನ್ನೆಗೆ ಹೊಡೆದಿರುತ್ತಾರೆ ಆಗ ಗಲಾಟೆಯನ್ನು  ಅಲ್ಲಿಯೇ ಇದ್ದ ನವೀನ್ ಬಿನ್ ದ್ಯಾವಪ್ಪ ಮತ್ತು ಮಧು ಬಿನ್ ಅಂಡೆಪ್ಪ, ರವರು ಕಣ್ಣಾರೆ ನೋಡಿ ಬಂದು ಅವರಿಂದ ತನ್ನನ್ನು ಬಿಡಿಸಿ ಅಲ್ಲಿದ್ದ ಸಾರ್ವಜನಿಕರ ಸಹಾಯದಿಂದ ಇಬ್ಬರು ಅಸಾಮಿಗಳನ್ನು ಹಿಡಿದುಕೊಂಡಿದ್ದು ನಂತರ ಅದೇ ಸಮಯಕ್ಕೆ ಅಲ್ಲಿಗೆ ಬಂದು ಇನ್ನೊಬ್ಬ ಅಸಾಮಿ ತನ್ನನ್ನು ಕುರಿತು ಏ ನಿನೂ ಯಾವ ಪೊಲೀಸ್  ನೀನು ಯಾರು ನಮ್ಮ ಕಡೆಯವರನ್ನು ಕೇಳುವುದಕ್ಕೆಂದು ಏಕವಚನದಲ್ಲಿ ಮಾತನಾಡಿ ಏ ಲೋಪರ್ ನನ್ನ ಮಗನೇ  ಅವರನ್ನು ಬಿಟ್ಟುಬಿಡು ಇಲ್ಲವೇಂದರೆ ನಾನು ನಿನಗೆ  ಏನೂ ಮಾಡಬೇಕೋ ಗೊತ್ತು ನೀನು ಬಿಟ್ಟಿಲ್ಲವೆಂದರೆ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿದ್ದು ಆಗ ಸದರಿ ಅಸಾಮಿಯನ್ನು ಹಿಡಿದುಕೊಳ್ಳಲು ಹೋದಾಗ ಸದರಿ ಅಸಾಮಿ ಅಲ್ಲಿಂದ ಓಡಿಹೋಗಿರುತ್ತಾನೆ ಪರಾರಿಯಾದ ಅಸಾಮಿಯ ಹೆಸರು ಮತ್ತು ವಿಳಾಸ ತಿಳಿದುಕೊಳ್ಳಲಾಗಿ ವೇಣುಗೋಪಾಲ ಬಿನ್ ವೆಂಕಟರಮಣಪ್ಪ, ಕೆಂಪನಹಳ್ಳಿ ಗ್ರಾಮ ಎಂದು ತಿಳಿದು ಬಂದಿರುತ್ತೆ , ವಶಕ್ಕೆ ಪಡೆದುಕೊಂಡಿದ್ದ ಅಸಾಮಿಗಳನ್ನು ಸಾರ್ವಜನಿಕರ ಸಹಾಯದಿಂದ  ಹಿಡಿದುಕೊಂಡು ಸದರಿ ವಿಚಾರವನ್ನು ಪೋನ್ ಮುಖಾಂತರ ಠಾಣೆಗೆ ತಿಳಿಸಿದ್ದು ಆಗ ಠಾಣಾಧಿಕಾರಿಗಳಾದ ಸಿ.ಹೆಚ್.ಸಿ-18 ವೆಂಕಟೇಶಪ್ಪ, ಸಿಪಿಸಿ-543 ಸುಧಾಕರ್ ಮತ್ತು ಜಿಪ್ ಚಾಲಕರಾದ ಎ.ಹೆಚ್.ಸಿ-15 ಗೌರಿಶಂಕರ್ ರವರು ಜೀಪ್ ನಲ್ಲಿ ಬಂದು ನಾನು ವಶಕ್ಕೆಪಡೆದುಕೊಂಡಿದ್ದ ಅಸಾಮಿಗಳನ್ನು ಜೀಪ್ ನಲ್ಲಿ ಹತ್ತಿಸಿಕೊಂಡು ಸಂಜೆ 5-30 ಗಂಟೆಗೆ ಠಾಣೆಯ ಬಳಿ ಕರೆದುಕೊಂಡು ಬಂದಿರುತ್ತೇವೆ ನಂತರ ವೇಣುಗೋಪಾಲ ಬಿನ್ ವೆಂಕಟರಮಣಪ್ಪ ರವರು ತಮ್ಮನ್ನು ಹಿಂಬಾಲಿಸಿಕೊಂಡು ಠಾಣೆಯ ಬಳಿ ಬಂದು ಠಾಣೆಯ ಹೊರಗಡೆ ದೂರದಲ್ಲಿ ನಿಂತುಕೊಂಡು ಏ ಲೋಪರ್ ನನ್ನ ಮಗನೇ ನೀನು ಯಾವ ಪೊಲೀಸ್ ನಮ್ಮವರನ್ನು ಬಿಟ್ಟುಬಿಡು ಇಲ್ಲವೇಂದರೆ ತಾನು ನಿನಗೆ  ಏನೂ ಮಾಡಬೇಕೋ ಗೊತ್ತು ನೀನು ಬಿಟ್ಟಿಲ್ಲವೆಂದರೆ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾನೆ ಆಗ ಸದರಿ ಅಸಾಮಿಯನ್ನು ಸಹ ವಶಕ್ಕೆಪಡೆದುಕೊಂಡಿರುತ್ತೇವೆ. ಮೇಲ್ಕಂಡ ಅಸಾಮಿಗಳು ನೀವು ನಮ್ಮನ್ನು ಅರೆಷ್ಟ ಮಾಡಿದರೇ ನಿಮ್ಮನ್ನು ಒಂದು ಗತಿ ಕಾಣಿಸಲು ಏನು ಕ್ರಿಯೇಟ್ ಮಾಡಬೇಕೋ ನಮಗೆ ಗೊತ್ತು ಎಂದು ಬೆದರಿಕೆ ಹಾಕಿರುತ್ತಾರೆ.ಅಲ್ಲಿಂದ ಪರಾರಿಯಾದ ಚಿಕನ್ ಅಂಗಡಿಯ ಮಾಲೀಕನ ಹೆಸರು ಮತ್ತು ವಿಳಾಸ ತಿಳಿದುಕೊಳ್ಳಲಾಗಿ ದೇವರಾಜ ಬಿನ್ ವೆಂಕಟರವಣಪ್ಪ, ಸುಮಾರು 45 ವರ್ಷ, ಗಾಣೀಗರು, ಗಾಡ್ಲಹೊಸಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿದು ಬಂದಿರುತ್ತೆ. ಅದ್ದರಿಂದ ತಾನು ನಿರ್ವಹಿಸುತ್ತಿದ್ದ ಸರ್ಕಾರಿ  ಕೆಲಸಕ್ಕೆ ಅಡ್ಡಿಪಡಿಸಿ ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯಶಬ್ದಗಳಿಂದ ಬೈದು, ಕೈಗಳಿಂದ ಹಲ್ಲೆ ಮಾಡಿದ ಪ್ರಾಣಬೆದರಿಕೆ ಹಾಕಿದ ಶ್ರೀನಿವಾಸ, ರವಿಚಂದ್ರ  ಮತ್ತು ವೇಣುಗೋಪಾಲ ರವರ ವಿರುದ್ದ  ಮತ್ತು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ  ಚಿಕನ್ ಅಂಗಡಿಯ ಮಾಲೀಕನಾದ ದೇವರಾಜ್ ರವರ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ: 149/2021 ಕಲಂ:323,353,504,506, ರೆ/ವಿ 34 ಐ.ಪಿ.ಸಿ   ಹಾಗೂ ಕಲಂ:269,271 ಐ.ಪಿ.ಸಿ ಮತ್ತು  ಕಲಂ 4,5,10 Epidemic Diseases Act-2020   ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

25. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.150/2021 ಕಲಂ. 427,279 ಐ.ಪಿ.ಸಿ :-

          ದಿನಾಂಕ:07-05-2021 ರಂದು ಸಂಜೆ-5-30 ಗಂಟೆಯಲ್ಲಿ ಪಿರ್ಯಾದಿದಾರರಾದ  ಪಿ.ಎಸ್. ಕಿರಣ್, ಸಹಾಯಕ ಇಂಜಿನಿಯರ್(ವಿ) ಬೆವಿಕಂ ಕಾರ್ಯ ಮತ್ತು ಪಾಲನ ಘಟಕ-01 ರವರು ಠಾಣೆಗೆ ಹಾಜರಾಗಿ   ನೀಡಿದ ದೂರಿನ ಸಾರಾಂಶವೇನೆಂದರೆ  ತನಗೆ  ತಮ್ಮ ಶಾಖೆಯ ಜೂನಿಯರ್ ಪವರ್ ಮೆನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಶಶಿಧರ್. ಪಿ. ರವರು    ದಿನಾಂಕ:07-05-2021 ರಂದು ಬೆಳಿಗ್ಗೆ 8-00 ಗಂಟೆಯಲ್ಲಿ ದೂರವಾಣಿ ಮೊಬೈಲ್ ಕರೆ ತಿಳಿಸಿದ್ದೇನೆಂದರೆ  ದಿನಾಂಕ: 07-05-2021 ರಂದು ರಂದು ಮದ್ಯ ರಾತ್ರಿ ಸಮಯದಲ್ಲಿ ಶೀಗೇಹಳ್ಳಿ ಗ್ರಾಮದಲ್ಲಿ  ಯಾವುದೋ ವಾಹನವು ವಿದ್ಯುತ್ ಕಂಬಗಳಿಗೆ ಗುದ್ದಿದ್ದ ಪರಿಣಾಮ 02 ಸಂಖ್ಯೆಯ ವಿದ್ಯುತ್ ಕಂಬಗಳು ಸ್ಥಳದಲ್ಲಿ ಮುರಿದು ಬಿದ್ದಿರುತ್ತವೆ. ತಾನು ಸ್ಥಳ ಪರೀಶಲನೆ ಮಾಡಿದಾಗ ಸ್ಥಳಿಯ ಗ್ರಾಮಸ್ಥರು ಕೂಡ ಯಾವುದೋ ವಾಹನವು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದಿರಬಹುದು ಎಂಬುದಾಗಿ ತಿಳಿಸಿರುತ್ತಾರೆ. ಇದರ ಪರವಾಗಿ ತಮಗೆ ದೂರು ನೀಡುತ್ತಿದ್ದು ಬೆವಿಕಂ ಗೆ ಆಗಿರುವ ನಷ್ಟವು ಅಂದಾಜು: RS.13000 (ಹದಿಮೂರು ಸಾವಿರ ರೂಗಳು ಮಾತ್ರ) SIDE RR ಸಂಖ್ಯೆ: SDL 22902, SDL 3506  ತಾವು ತನಿಖೆಯನ್ನು ಮಾಡಿ ಸೂಕ್ತ ಕಾನೂನಿನ ಕ್ರಮವನ್ನು ತೆಗೆದು ಕೊಳ್ಳಬೇಕೆಂದು ತಮ್ಮಲ್ಲಿ ಕೋರಿ  ನೀಡಿದ ದೂರಿನ ಮೇರಗೆ ಠಾಣಾ  ಮೊ.ಸಂ:150/2021 ಕಲಂ:279,427 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

26. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.151/2021 ಕಲಂ. 15(A),32(3) ಕೆ.ಇ ಆಕ್ಟ್ :-

          ದಿನಾಂಕ: 08-05-2021  ರಂದು ಬೆಳಿಗ್ಗೆ 9-30  ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 08-05-2021  ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಹನುಮಂತಪುರ, ಚೀಮನಹಳ್ಳಿ, ಕಡೆಗಳಲ್ಲಿ ಗಸ್ತು ಮಾಡಿಕೊಂಡು ಬೆಳ್ಳಿಗೆ 9-00 ಗಂಟೆ ಸಮಯದಲ್ಲಿ  ಅಬ್ಲೂಡು  ಗ್ರಾಮದ ಕಡೆ ಹೋಗಲು ಗುಡಿಹಳ್ಳಿ  ಗೇಟ್ ನಲ್ಲಿದ್ದಾಗ ಬಾತ್ಮಿದಾರರಿಂದ ಅಬ್ಲೂಡು ಗ್ರಾಮದ ಚಾಗೆ ಗೇಟ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಅಬ್ಲೂಡು  ಗ್ರಾಮದ ಚಾಗೇ ಗೇಟ್  ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಕವರ್  ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ನಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ  ದೇವರೆಡ್ಡಿ ಬಿನ್ ವೆಂಕಟರಾಯಪ್ಪ, 60 ವರ್ಷ, ವಕ್ಕಲಿಗರು, ಜಿರಾಯ್ತಿ, ಆನೇಮಡಗು  ಗ್ರಾಮ, ಬಶೇಟ್ಟಿಹಳ್ಳಿ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರ್  ಪರಿಶೀಲಿಸಲಾಗಿ 90 ಎಂ.ಎಲ್.  ಸಾಮರ್ಥ್ಯದ 10 ORIGINAL CHOICE DELUXE WHISKY ಟೆಟ್ರಾ ಪ್ಯಾಕೆಟ್ ಗಳಿದ್ದು,  ಸದರಿ ಸ್ಥಳದಲ್ಲಿ 2 ಖಾಲಿ ಪ್ಲಾಸ್ಟಿಕ್ ಲೋಟಗಳು ,4 ಖಾಲಿ ವಾಟರ್ ಪಾಕೇಟ್ ಗಳನ್ನು ಮತ್ತು 90 ಎಂ.ಎಲ್.  ಸಾಮರ್ಥ್ಯದ 2 ORIGINAL CHOICE DELUXE WHISKY ಖಾಲಿ ಟೆಟ್ರಾ ಪ್ಯಾಕೆಟ್  ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಬೆಳ್ಳಿಗೆ 9-30 ಗಂಟೆಯಲ್ಲಿ ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿರುತ್ತೇನೆ. ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ದೇವರೆಡ್ಡಿ ಬಿನ್ ವೆಂಕಟರಾಯಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇನೆ.ಇದ್ದ ಸಂಗತಿಯನ್ನು ನಿವೇದಿಸಿಕೊಳ್ಳುತ್ತೇನೆ.ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ. 151/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 08-05-2021 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080