ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.53/2021 ಕಲಂ. 87 ಕೆ.ಪಿ. ಆಕ್ಟ್:-

          ದಿನಾಂಕ:07.04.2021 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಮಾನ್ಯ ಸಿ.ಪಿ.ಐ ಸಾಹೇಬರು ಆರೋಪಿಗಳು ಮಾಲು ಮತ್ತು ಪಂಚನಾಮೆಯೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 07-04-2021 ರಂದು ಸಂಜೆ 5-00 ಗಂಟೆಯ ಸಮಯದಲ್ಲಿ ತಾನು ಕಛೇರಿಯಲ್ಲಿರುವಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಸರಹದ್ದು  ಚಿಕ್ಕಬಳ್ಳಾಪುರ ತಾಲ್ಲೂಕು ಎಸ್.ಗೊಲ್ಲಹಳ್ಳಿ ಗ್ರಾಮದ ಬಳಿ ಇರುವ  ಸರ್ಕಾರಿ ಗುಟ್ಟೆಯ ಬಳಿ ಯಾರೋ 4 ಜನ ಆಸಾಮಿಗಳು ಹಣವನ್ನು ಪಣವಾಗಿಟ್ಟು ಅಕ್ರಮ ಅಂದರ್ -  ಬಾಹರ್ ಜೂಜಾಟ ಆಡುತ್ತಿರುವುದಾಗಿ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸುವ ಬಗ್ಗೆ ದೂರನ್ನು ನೀಡಿ ತಾನು ಪಂಚರು ಮತ್ತು ಸಿಬ್ಬಂದಿಗಳಾದ ಮತ್ತು ಸಿಬ್ಬಂದಿಗಳಾದ ಶ್ರೀ.ರವಿಕುಮಾರ್, ಸಿ.ಹೆಚ್.ಸಿ-114, ಶ್ರೀ.ನಾಗೇಶ್,ಸಿ.ಪಿ.ಸಿ-229, ಶ್ರೀ.ಬಾಲಾಜಿ, ಸಿ.ಪಿ.ಸಿ-118, ಶ್ರೀ.ವಿಜಯ್ ಕುಮಾರ್ , ಸಿ.ಪಿ.ಸಿ-245, ಜೀಪ್ ಚಾಲಕ ಶ್ರೀ.ಮಂಜುನಾಥ, ಎ.ಪಿ.ಸಿ-124 ರವರುಗಳೊಂದಿಗೆ  ಇಲಾಖಾ  ಜೀಪ್ ನಂ: ಕೆ.ಎ-40-ಜಿ-6633 ಬೊಲೇರೋ ಜೀಪ್ ನಲ್ಲಿ ಹೋಗಿ ಎಸ್.ಗೊಲ್ಲಹಳ್ಳಿ ಗ್ರಾಮದ ಬಳಿ ಇರುವ  ಸರ್ಕಾರಿ ಗುಟ್ಟೆಯ ಬಳಿ ಹಣವನ್ನು ಪಣವಾಗಿಟ್ಟು ವೃತ್ತಕಾರವಾಗಿ ಕುಳಿತು 500 ರೂಪಾಯಿ ಅಂದರ್ ಮತ್ತು 500 ರುಪಾಯಿ ಬಾಹರ್ ಎಂದು ಕೂಗುತ್ತಾ ಅಕ್ರಮವಾಗಿ ಅಂದರ್ - ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ದಾಳಿ ಮಾಡಿ ಜೂಜಾಟ ಆಡುತ್ತಿದ್ದ 4 ಜನ ಆಸಾಮಿಗಳನ್ನು ವಶಕ್ಕೆ ಪಡೆದು ಜೂಜಾಟದಲ್ಲಿ ಪಣಕ್ಕೆ ಇಟ್ಟಿದ್ದ 8000/- ನಗದು ಹಣವನ್ನು, ಜೂಜಾಟಕ್ಕೆ ಬಳಸಿದ್ದ 52 ಇಸ್ಪೀಟು ಎಲೆಗಳನ್ನು , ಒಂದು ಪ್ಲಾಸ್ಟಿಕ್ ಬ್ಯಾಗ್ ಅನ್ನು ಅಮಾನತ್ತು ಪಡಿಸಿಕೊಂಡಿರುತ್ತೆ. ಜೂಜಾಟದಲ್ಲಿ ವಶಕ್ಕೆ ಪಡೆದ 4 ಜನ ಆಸಾಮಿಗಳಾದ 1. ಹರೀಶ್, 2. ಚಂದ್ರ, 3. ಸತೀಶ್, 4. ಶಶಿಕುಮಾರ್  ರವರನ್ನು ಪಣಕ್ಕೆ ಇಟ್ಟಿದ್ದ 8000/- ನಗದು ಹಣವನ್ನು, ಜೂಜಾಟಕ್ಕೆ ಬಳಸಿದ್ದ 52 ಇಸ್ಪೀಟು ಎಲೆಗಳನ್ನು , ಒಂದು ಪ್ಲಾಸ್ಟಿಕ್ ಬ್ಯಾಗ್ ಅನ್ನು ಪಂಚನಾಮೆಯೊಂದಿಗೆ  ತಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಆಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.23/2021 ಕಲಂ. 15(A),32(3) ಕೆ.ಇ. ಆಕ್ಟ್:-

          ದಿನಾಂಕ: 07-04-2021 ರಂದು   ಮದ್ಯಾಹ್ನ 2.45 ಗಂಟೆಗೆ ಪಿ.ಎಸ್.ಐ ರವರು ನೀಡಿದ ವರದಿಯ ದೂರಿನ ಸಾರಾಂಶವೇನೆಂದರೆ, ಮದ್ಯಾಹ್ನ 2.30 ಗಂಟೆಯಲ್ಲಿ ತಾನು, ಠಾಣೆಯಲ್ಲಿದ್ದಾಗ ಬಂದ  ಖಚಿತ ಮಾಹಿತಿ ಏನೆಂದರೆ  ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಹಿಂಭಾಗದ ಖಾಲಿ ಪ್ರದೇಶದ ಬಳಿ ಯಾರೋ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟು ಮದ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಈ ಬಗ್ಗೆ ದಾಳಿ ಮಾಡಿ  ಕ್ರಮ ಕೈಗೊಳ್ಳುವ ಸಲುವಾಗಿ ಸಿಬ್ಬಂಧಿಯೊಂದಿಗೆ  ಸ್ಥಳಕ್ಕೆ ಬೇಟಿ ಮಾಡಲಿದ್ದು ಈ ಬಗ್ಗೆ  ಕಲಂ 15(ಎ),32(3) ಕೆ.ಇ ಅಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲು  ಸೂಚಿಸಿ ನೀಡಿದ ವರದಿಯ ದೂರಿನ ಮೇರೆಗೆ ಈ ಪ್ರ.ವ.ವರದಿ.

 

3. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.41/2021 ಕಲಂ. 448,323,353,504,506,34 ಐ.ಪಿ.ಸಿ:-

          ದಿನಾಂಕ :07-04-2021ರಂದು ಪಿರ್ಯಾಧಿಯಾದ ಜಿ.ಎಂ. ನಂಜಪ್ಪ, ಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಶೆಟ್ಟಿಹಳ್ಳಿ, ಶಿಡ್ಲಘಟ್ಟ ತಾಲ್ಲೂಕು ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:07-04-2021 ರಂದು ಬುಧವಾರ ಮಧ್ಯಾಹ್ನ 02-16 ಗಂಟೆ ಸಮಯದಲ್ಲಿ ಆನೇಮಡಗು ಗ್ರಾಮದ ಪ್ರಶಾಂತ್ ಹಾಗೂ ವಿಜಯ್ ಎಂಬ ಇಬ್ಬರು ಯುವಕ ಗೂಂಡಾಗಳು ದ್ವಿತೀಯ ಪಿಯುಸಿ ತರಗತಿ ಕೊಠಡಿಗೆ ಏಕಾಏಕಿ ಉಪನ್ಯಾಸಕರು ಅನುಮತಿಯಿಲ್ಲದೇ ನುಗ್ಗಿ ಕಲಾ ವಿಭಾಗದ ವಿಧ್ಯಾರ್ಥಿಗಳಾದ ನರಸಿಂಹಮೂರ್ತಿ.ಎಂ ಹಾಗೂ ಉಮೇಶ್ ಎಂಬ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುತ್ತಾರೆ. ಆಗ ತರಗತಿಯಲ್ಲಿ ಬೋಧನೆ ಮಾಡುತ್ತಿದ್ದ ಅತಿಥಿ ಉಪನ್ಯಾಸಕರಾದ ಶ್ರೀ ಖಲೀಂವುಲ್ಲಾ(ಅರ್ಥಶಾಸ್ತ್ರ ಉಪನ್ಯಾಸಕರು) ರವರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ. ಸದರಿ ಉಪನ್ಯಾಸಕರು ಈ ಇಬ್ಬರು ಯುವಕರನ್ನು ವಿಚಾರಿಸಲು ಮತ್ತು ತಡೆಯಲು ಮುಂದಾದರೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿ ವಿಧ್ಯಾರ್ಥಿಗಳಿಬ್ಬರನ್ನು ತರಗತಿಯಿಂದ ಹೊರಗಳಿದು ಪುನಃ ಹಲ್ಲೆ ನಡೆಸಿರುತ್ತಾರೆ. ಈ ವೇಳೆಯಲ್ಲಿ ಅಲ್ಲಿಗೆ ಇವರನ್ನು ತಡೆಯಲು ಬಂದಂತಹ ಶ್ರೀ ಆದಿನಾರಾಯಣ.ಎಸ್.ಕೆ. ಮತ್ತು ಶ್ರೀ. ಶ್ರೀನಿವಾಸ.ಎಸ್.ಎಂ ಹಾಗೂ ಇತರೆ ಉಪನ್ಯಾಸಕರಾದ ಕೃಷ್ಣಪ್ಪ ಡಿ.ಎ, ಶ್ರೀಕೃಷ್ಣ ಪರಮಾತ್ಮ, ಹರೀಶ್ ರಾಮಚಂದ್ರ, ರೇಷ್ಮಾ , ಹಜೀರಾ, ಸುಜಾತ.ಬಿ.ಸಿ ಇವರೆಲ್ಲರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಿಲ್ಲದೇ ಬೆದರಿಕೆ ಒಡ್ಡಿರುತ್ತಾರೆ. ಹಾಗೂ ಪೊಲೀಸ್ ಠಾಣೆಗೆ ಕರೆ ಮಾಡಲು ಪ್ರಾಂಶುಪಾಲರು ಮುಂದಾಗ ಪೊಲೀಸ್ ಠಾಣೆಗೆ ಕರೆ ಮಾಡುತ್ತೀರಾ ತನಗೆ ಪೊಲೀಸರು ಠಾಣೆಯಾವ ಲೆಕ್ಕ ಇಲ್ಲ ಅವರ ನಂಬರನ್ನು ನಾನೇ ನೀಡುತ್ತೇನೆ ಎಂದು ಪ್ರಶಾಂತ್ ಎಂಬ ಗೂಂಡಾ ಹೇಳಿರುತ್ತಾನೆ. ಹಾಗೂ ಕಾಲೇಜಿನ ಆವರಣದಲ್ಲಿ ಭಯದ ವಾತಾವರಣ ನಿರ್ಮಿಸಿರುತ್ತಾರೆ. ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಉಪನ್ಯಾಸಕರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಹಾಗೂ ವಿದ್ಯಾರ್ಥಿಗಳ ಮೇಲೆ ತೀವ್ರವಾಗಿ ಹಲ್ಲೆ ನೆಡೆಸಿರುತ್ತಾರೆ. ಸದರಿ ಗೂಂಡಾಗಳು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಗಂಗೋತ್ರಿ.ಎಲ್ ರವರಿಗೆ ಚುಡಾಯಿಸಿದ್ದರೆನ್ನಲ್ಲಾದ ನರಸಿಂಹಮೂರ್ತಿ ಹಾಗೂ ಉಮೇಶ ವೆಂಬ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಒಟ್ಟಾರೆಯಾಗಿ ಕಾಲೇಜಿನಲ್ಲಿ ರೌಡಿವರ್ತನೆಯನ್ನು ತೋರಿ ಕಾಲೇಜಿನಲ್ಲಿ ಶಾಂತಿ ಸುವ್ಯವಸ್ಥೆಯ ನಿಯಮಗಳನ್ನು ಮೀರಿರುತ್ತಾರೆ. ಆದ ಕಾರಣ ಕಾಲೇಜಿನಲ್ಲಿ ಇಂತಹ ಘಟನೆಗಳು ಪುನಾರಾವರ್ತನೆ ಆಗದಂತೆ ತಡೆಯುವ ಹಿನ್ನಲೆಯಲ್ಲಿ ಈ ಮೇಲ್ಕಂಡ ಇಬ್ಬರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿರುವ ದೂರಾಗಿರುತ್ತೆ.

 

4. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.56/2021 ಕಲಂ. 302 ಐ.ಪಿ.ಸಿ:-

          ದಿನಾಂಕ:07-04-2021 ರಂದು ಮದ್ಯಾಹ್ನ:2-15 ಗಂಟೆಯಲ್ಲಿ ಪಿರ್ಯಾದಿದಾರರಾದ ರಾಮಾಂಜಿ ಬಿನ್ ಲೇಟ್ ಚಿಕ್ಕ ಅಕ್ಕುಲಪ್ಪ 40 ವರ್ಷ ಕುರುಬರು ಜಿರಾಯ್ತಿ ವಾಸ ಗೋಟ್ಲಕುಂಟೆ ಗ್ರಾಮ ನಗರಗೇರೆ ಹೋಬಳಿ ಗೌರಿಬಿದನೂರು ತಾಲ್ಲೂಕು ಪೊ:9148577790 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನಂದರೆ: ತಾನು ಈಗ್ಗೆ ಸುಮಾರು 20 ವರ್ಷಗಳ ಹಿಂದೆ ಗೌರಿಬಿದನೂರು ತಾಲ್ಲೂಕು ದಿನ್ನೇನಹಳ್ಳಿ ಗ್ರಾಮದ ವಾಸಿಯಾದ ಗೋವಿಂದಪ್ಪ ರವರ ಮಗಳಾದ ಶಶಿಕಳಾ ರವರನ್ನು ಮದುವೆ ಮಾಡಿಕೊಂಡಿದ್ದು ತನಗೆ ಸುಮಾರು 18 ವರ್ಷದ ಸೌಮ್ಯ ಮತ್ತು 15 ವರ್ಷದ ರಮ್ಯ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು ತಾನು ಬಸ್ ಕ್ಲೀನರ್ ಕೆಲಸ ಮಾಡಿಕೊಂಡಿದ್ದು ತನ್ನ ಹೆಂಡತಿ ಶಶಿಕಳಾ ರವರು ಮನೆ ಕೆಲಸ ಮತ್ತು ಬೇರೆಯವರ ಕೂಲಿ ಕೆಲಸಕ್ಕೆ ಹೋಗಿ ಬರುತ್ತಿದ್ದು  ತನ್ನ ಮೇಲ್ಕಂಡ ಇಬ್ಬರು ಮಕ್ಕಳು ವ್ಯಾಸಂಗ ಮಾಡಿಕೊಂಡಿರುತ್ತಾರೆ.  ತನ್ನ ಹೆಂಡತಿಯಾದ ಶಶಿಕಳಾ ರವರ ಅಕ್ಕನಾದ  ರತ್ನಮ್ಮ ರವರನ್ನು ಗೌರಿಬಿದನೂರು ತಾಲ್ಲೂಕು ಗಂಗಸಂದ್ರ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದು ತನ್ನ ಹೆಂಡತಿ ಆಗಾಗ ಗಂಗಸಂದ್ರ ಗ್ರಾಮಕ್ಕೆ ಅವರ ಅಕ್ಕನ ಮನೆಗೆ ಹೋಗಿ ಬರುತ್ತಿದ್ದಾಗ  ತನ್ನ ಹೆಂಡತಿಗೆ  ಗೌರಿಬಿದನೂರು ತಾಲ್ಲೂಕು ಗಂಗಸಂದ್ರ ಗ್ರಾಮದ ವಾಸಿಯಾದ ಕುರುಬ ಜನಾಂಗದ ಶ್ರೀರಾಮ ಬಿನ್ ಲೇಟ್ ಗಂಗಪ್ಪ  ಸುಮಾರು 45 ವರ್ಷ ಎಂಬುವರು ಪರಿಚಯವಾಗಿದ್ದು ಶ್ರೀರಾಮ ರವರು ಆಗಾಗ ಗೋಟ್ಲುಕುಂಟೆ ಗ್ರಾಮದ ತಮ್ಮ ಮನೆಗೆ ಬಂದು ಹೋಗುತ್ತಿದ್ದರು.   ತಾನು ಈಗ್ಗೆ ಸುಮಾರು ಐದು  ವರ್ಷದ ಹಿಂದೆ ತಮ್ಮ ಗ್ರಾಮದಲ್ಲಿ ಮನೆಯನ್ನು ಕಟ್ಟಿದ್ದು ಈ ಮನೆಯನ್ನು ಕಟ್ಟಲು ಗಂಗಸಂದ್ರ ಗ್ರಾಮದ ವಾಸಿಯಾದ ಶ್ರೀರಾಮ ಬಿನ್ ಲೇಟ್ ಗಂಗಪ್ಪ ರವರು ಸಹ ಬರುತ್ತಿದ್ದು  ಶ್ರೀರಾಮ ರವರು ಈ ಹಿಂದೆ ತನ್ನ ಹೆಂಡತಿಗೆ ಪರಿಚಯವಿದ್ದುದ್ದರಿಂದ ತನ್ನ ಹೆಂಡತಿ ಶಶಿಕಳಾ   ರವರು ಶ್ರೀರಾಮ ರವರೊಂದಿಗೆ ಸಲುಗೆಯಿಂದ ಇರುತ್ತಿದ್ದರು ಮತ್ತು ಶ್ರೀರಾಮ ರವರು ಆಗಾಗ ರಾತ್ರಿ ತಮ್ಮ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು ಹಾಗೂ ತನ್ನ ಹೆಂಡತಿ ಶಶಿಕಳಾ ಮತ್ತು ಶ್ರೀರಾಮ ರವರು ರಾತ್ರಿ ಜಾಸ್ತಿ ಹೊತ್ತು  ಜೊತೆಯಲ್ಲಿ ಇಬ್ಬರು ಮಾತನಾಡುತ್ತ ಕುಳಿತುಕೊಳ್ಳುತ್ತಿದ್ದರು. ತನ್ನ ಹೆಂಡತಿ ಶಶಿಕಳಾ ಮತ್ತು ಶ್ರೀರಾಮ ಇಬ್ಬರು ಸಲುಗೆಯಿಂದ ಇರುತ್ತಿದ್ದನ್ನು ನೋಡಿ ತಾನು ಅನುಮಾನ ಬಂದು ತನ್ನ ಹೆಂಡತಿ ಶಶಿಕಳಾ ರವರಿಗೆ  ಎಚ್ಚರಿಕೆ ಕೊಟ್ಟರೆ ಆಕೆ ತನ್ನ ಮೇಲೆ ಜಗಳ ಮಾಡುತ್ತಾಳೆ ಎಂದು ತಾನು ಸುಮ್ಮನಿದ್ದೆ. ನಂತರ ಶ್ರೀರಾಮ ರವರು ತಮ್ಮ ಮನೆಯನ್ನು ಕಟ್ಟಿದ ನಂತರ ತಮ್ಮ ಮನೆಗೆ ಬರವುದನ್ನು ಕಡಿಮೆ ಮಾಡಿದ್ದರು ಸಹ ತನ್ನ ಹೆಂಡತಿ ಶಶಿಕಳಾ ಮತ್ತು ಶ್ರೀರಾಮ ರವರು ಪೋನ್ ನಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಹೀಗಿರುವಲ್ಲಿ ದಿನಾಂಕ:15-03-2021 ರಂದು ಬೆಳಗ್ಗೆ ಸುಮಾರು 10-00 ಗಂಟೆಯಲ್ಲಿ ತಾನು ಬಸ್ ಕ್ಲೀನರ್ ಕೆಲಸಕ್ಕೆ ಹೋಗಿದ್ದು ತನ್ನ ಇಬ್ಬರು ಮಕ್ಕಳು ಕಾಲೇಜ್ ಗೆ ಹೋಗಿದ್ದು ಮನೆಯಲ್ಲಿ ಯಾರೋ ಇಲ್ಲದ ಸಮಯದಲ್ಲಿ ತನ್ನ ಹೆಂಡತಿಯಾದ ಶಶಿಕಳಾ ರವರು ಮನೆಯಲ್ಲಿ ಯಾರಿಗೂ ಹೇಳದೆ ಮನೆಯಿಂದ ಹೊರಟು ಹೋಗಿದ್ದು ತಾನು ಈ ವಿಚಾರವನ್ನು ತನ್ನ ಹೆಂಡತಿಯಾದ ಶಶಿಕಳಾ ರವರ ಅಣ್ಣನಾದ ಚಿಕ್ಕ ಉಜ್ಜಿನಿಗೌಡ   ಮತ್ತು ಆಕೆಯ ತಮ್ಮಂದಿರಾದ  ವೆಂಕಟೇಶ್ ಮತ್ತು ಬಾಲಕೃಷ್ಣ ರವರಿಗೆ ತಿಳಿಸಿದ್ದು ತಾನು ಮತ್ತು ತನ್ನ ಹೆಂಡತಿ ತಮ್ಮ ವೆಂಕಟೇಶ್ ರವರು ತಮ್ಮ ಸಂಬಂದಿಕರ ಮನೆಗಳಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡಕಲಾಗಿ ಶಶಿಕಳಾ ರವರು ಪತ್ತೆಯಾಗಿರವುದಿಲ್ಲ ನಂತರ ದಿನಾಂಕ:21-03-2021 ರಂದು ಮದ್ಯಾಹ್ನ ಸುಮಾರು 12-00 ಗಂಟೆಯಲ್ಲಿ ಸಾರ್ವಜನಿಕರು ತನ್ನ ಬಾಮೈದ ವೆಂಕಟೇಶ್ ರವರಿಗೆ ಕರೆ ಮಾಡಿ ಗೌರಿಬಿದನೂರಿನಿಂದ ಗುಡಿಬಂಡೆಗೆ ಹೋಗುವ ರಸ್ತೆಯ ಪೂರ್ವ ದಿಕ್ಕಿನಲ್ಲಿರುವ ಅರಣ್ಯ ಪ್ರದೇಶದ ಮದ್ಯದಲ್ಲಿ ಯಾರೋ ಒಂದು ಹೆಂಗಸಿನ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಇರವುದಾಗಿ ತಿಳಿಸಿದ್ದು ತಾನು ಮತ್ತು ತನ್ನ ಬಾಮೈದ ವೆಂಕಟೇಶ್ ರವರು ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ಸ್ಥಳದಲ್ಲಿ ಇದ್ದ ಮೃತದೇಹವು ತನ್ನ ಹೆಂಡತಿ ಶಶಿಕಳಾ ರವರ ಮೃತದೇಹವಾಗಿರುತ್ತೆ.  ಮೃತದೇಹದ ಮೇಲೆ ಕೇಸರಿ ಬಣ್ಣದ ಸೀರೆ ಇದ್ದು ನಂತರ ತನ್ನ ಬಾಮೈದ ವೆಂಕಟೇಶ ರವರು  ತನ್ನ ಹೆಂಡತಿ ಶಶಿಕಳಾ ರವರ ಸಾವಿನ ವಿಚಾರದಲ್ಲಿ ತಮಗೆ ಅನುಮಾನ ವಿರುವುದಾಗಿ  ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ಸಂಖ್ಯೆ:12/2021 ಕಲಂ:174 ಸಿ.ಆರ್.ಪಿ.ಸಿ. ರೀತ್ಯ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತೆ. ಈ ದಿನ ದಿನಾಂಕ:07-04-2021 ರಂದು ತಾನು ಮನೆಯಲ್ಲಿದ್ದಾಗ ತಮ್ಮ ಗ್ರಾಮದ ವಾಸಿಗಳಾದ ಶ್ರೀನಿವಾಸ ಬಿನ್ ಲೇಟ್ ಆಂಜಿನಪ್ಪ ಸುಮಾರು 35 ವರ್ಷ ಕುರುಬರು ಜಿರಾಯ್ತಿ ಮತ್ತು ಮೈಲಾರಸ್ವಾಮಿ ಬಿನ್ ಟಿ.ಲಿಂಗಪ್ಪ 48 ವರ್ಷ ಬಲಿಜಿಗರು ಜಿರಾಯ್ತಿ ರವರು ತನ್ನ ಬಳಿ ಬಂದು ತಿಳಿಸಿದ್ದನೆಂದರೆ ದಿನಾಂಕ:15-03-2021 ರಂದು ಬೆಳಗ್ಗೆ ಸುಮಾರು 11-30 ಗಂಟೆಯಲ್ಲಿ ತಾವಿಬ್ಬರು ಕೆಲಸದ ನಿಮಿತ್ತ  ಗೌರಿಬಿದನೂರು ತಾಲ್ಲೂಕು ಸಬ್ಬನಹಳ್ಳಿ  ಗ್ರಾಮದ ಕ್ರಾಸ್ ನಲ್ಲಿದ್ದಾಗ ನಿಮ್ಮ  ಮನೆಯನ್ನು ಕಟ್ಟಲು ಬಂದಿದ್ದ ಗೌರಿಬಿದನೂರು ತಾಲ್ಲೂಕು ಗಂಗಸಂದ್ರ ಗ್ರಾಮದ ವಾಸಿಯಾದ ಕುರುಬ ಜನಾಂಗದ ಶ್ರೀರಾಮ ರವರು ಒಂದು ದ್ವಿ ಚಕ್ರವಾಹನದಲ್ಲಿ ಹಿಂದೆ ನಿನ್ನ  ಹೆಂಡತಿ ಶಶಿಕಳಾ ರವರನ್ನು ಕುರಿಸಿಕೊಂಡು ಗುಡಿಬಂಡೆ ಕಡೆ ಹೋಗಿರುತ್ತಾನೆ  ನಂತರ ಅದೇ ದಿನ ಮದ್ಯಾಹ್ನ ಸುಮಾರು 2-00 ಗಂಟೆಯಲ್ಲಿ ಗುಡಿಬಂಡೆ ಕಡೆ ಹೋಗಿದ್ದ ಶ್ರೀರಾಮ ರವರು ದ್ವಿ ಚಕ್ರವಾಹನದಲ್ಲಿ ವಾಪಸ್ಸು ಒಬ್ಬರೇ ಬಂದಿದ್ದು ದ್ವಿ ಚಕ್ರವಾಹನದಲ್ಲಿ ಹೋಗಿದ್ದ ನಿನ್ನ ಹೆಂಡತಿ ಶಶಿಕಳಾ ರವರು ಕಾಣಿಸಲಿಲ್ಲ ಎಂದು ತಿಳಿಸಿರುತ್ತಾರೆ. ಗಂಗಸಂದ್ರ ಗ್ರಾಮದ ವಾಸಿಯಾದ ಶ್ರೀರಾಮ ರವರು ಆಗಾಗ ತಮ್ಮ ಮನೆಗೆ ಬರುತ್ತಿದ್ದನ್ನು ಮತ್ತು ತನ್ನ ಹೆಂಡತಿ ಶಶಿಕಳಾಳೊಂದಿಗೆ ಅನೈತಿಕ ಸಂಬಂದ ಇರವುದನ್ನು ತಮ್ಮ ಗ್ರಾಮದಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದರು ಮತ್ತು ತನ್ನ ಹೆಂಡತಿ ಶಶಿಕಳಾ ಮತ್ತು ಶ್ರೀರಾಮ ರವರ ಮದ್ಯ ಅನೈತಿಕ ಸಂಬಂದ ಇರುವುದರ ಬಗ್ಗೆ ತನಗೂ ಸಹ ಅನುಮಾನವಿತ್ತು. ಮೇಲ್ಕಂಡ  ಶ್ರೀರಾಮ ತನ್ನ ಹೆಂಡತಿ ಶಶಿಕಳಾಳೊಂದಿಗೆ ಇದ್ದ ಅನೈತಿಕ ಸಂಬಂದದಿಂದ  ಸುಮಾರು 38 ವರ್ಷ ವಯಸ್ಸಿನ  ತನ್ನ ಹೆಂಡತಿ ಶಶಿಕಳಾಳನ್ನು ದ್ವಿ ಚಕ್ರವಾಹನದಲ್ಲಿ ಗುಡಿಬಂಡೆ ತಾಲ್ಲೂಕು ಚದುಮನಹಳ್ಳಿ  ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಶಶಿಕಳಾ ಮತ್ತು ಶ್ರೀರಾಮ ರವರ ನಡುವೆ ಅನೈತಿಕ ಸಂಬಂದದಿಂದ ಜಗಳ ಮಾಡಿಕೊಂಡು ಶ್ರೀರಾಮ ತನ್ನ ಹೆಂಡತಿ ಶಶಿಕಳಾಳನ್ನು  ಕೊಲೆ ಮಾಡಿರುತ್ತಾನೆ. ಆದ್ದರಿಂದ ಮೇಲ್ಕಂಡ ಶ್ರೀರಾಮ್ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ. ಮತ್ತು ತನ್ನ ಹೆಂಡತಿ ಕೊಲೆ ಮಾಡಿದ ಬಗ್ಗೆ ತನಗೆ ಈ ದಿನ ವಿಷಯ ಗೊತ್ತಾಗಿದ್ದು ತಡವಾಗಿ ದೂರು ನೀಡಿರವುದಾಗಿರುತ್ತೆ.

 

5. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.57/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:08/04/2021 ರಂದು ಬೆಳಿಗ್ಗೆ 11-30 ಗಂಟೆಗೆ ಘನ ನ್ಯಾಯಾಲಯದ ಪಿಸಿ-89  ರವರು ಠಾಣಾ NCR NO-76/2021 ರಲ್ಲಿ ಕ್ರಿಮೀನಲ್ ಪ್ರಕರಣ ದಾಖಲಿಸಲು ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ ವರಧಿಯ ಸಾರಾಂಶವೇನೆಂದರೆ :ದಿನಾಂಕ:05/04/2021 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ  ನಾನು ಠಾಣೆಯಲ್ಲಿರುವಾಗ ನನಗೆ ಠಾಣಾ ಪಿ.ಸಿ. 84 ಶ್ರೀ ಮುನಿರಾಜು ರವರು ತಿಳಿಸಿದ್ದೇನೆಂದರೆ ಬಾತ್ಮೀದಾರರರಿಂದ ಗುಡಿಬಂಡೆ ತಾಲ್ಲೂಕು ಉಲ್ಲೋಡು ಗ್ರಾಮದ ಶ್ರೀನಿವಾಸ ಬಿನ್ ಲೇಟ್ ಅರ್ಚಕ ನರಸಪ್ಪ  ರವರು ಅವರ ಚಿಲ್ಲರೆ ಅಂಗಡಿಯ ಬಳಿ ಯಾವುದೇ ರೀತಿಯ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿರುತ್ತೆಂದು ತಿಳಿಸಿದ್ದರ ಮೇರೆಗೆ ನಾನು ಕೆ.ಎ-40 ಜಿ-1888 ಸಕರ್ಾರಿ ಜೀಪಿನಲ್ಲಿ ಚಾಲಕ ಎ.ಹೆಚ್.ಸಿ.43 ವೆಂಕಟಾಚಲಪತಿ ರವರೊಂದಿಗೆ ಉಳ್ಳೋಡು ಗ್ರಾಮದ ಆಟೋ ನಿಲ್ದಾಣದ ಬಳಿ ಬೆಳಿಗ್ಗೆ 11-15 ಗಂಟೆಗೆ ಹೋಗಿ ಅಲ್ಲಿದ್ದ ಪಿಸಿ 84 ರಮೇಶ್ ರವರನ್ನು ಕರೆದುಕೊಂಡು ಹಾಗೂ ಅಲ್ಲಿಯೇ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಶ್ರೀನಿವಾಸ ಬಿನ್ ಲೇಟ್ ಅರ್ಚಕ ನರಸಪ್ಪ  ರವರ ಚಿಲ್ಲರೆ ಅಂಗಡಿ ಬಳಿಯಿಂದ  ಸ್ವಲ್ಪ ದೂರದಲ್ಲಿ ಹೋಗಿ ಸಕರ್ಾರಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಶ್ರೀನಿವಾಸ ಬಿನ್ ಲೇಟ್ ಅರ್ಚಕ ನರಸಪ್ಪ  ರವರ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುಮತಿ ನೀಡಿ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸದರಿ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಕಂಡುಬಂದಿದ್ದು, ಸದರಿ ಸ್ಥಳಕ್ಕೆ ನಾವುಗಳು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಅಲ್ಲಿದ್ದ ಮದ್ಯ ಸೇವನೆ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸಾರ್ವಜನಿಕರಿಗೆ  ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರವ ಸದರಿ ಚಿಲ್ಲರೆ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶ್ರೀನಿವಾಸ ಬಿನ್ ಲೇಟ್ ಅರ್ಚಕ ನರಸಪ್ಪ  61 ವರ್ಷ, ಶ್ರೀವೈಷ್ಣವ ಜನಾಂಗ ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಉಲ್ಲೋಡು ಗ್ರಾಮ, ಗುಡಿಬಂಡೆ ತಾಲ್ಲೂಕು ಎಂತ ತಿಳಿಸಿದ್ದು, ಮದ್ಯಪಾನ ಸೇವೆನೆ ಮಾಡಲು ಸ್ಥಳಾವಕಾಶ ಮಾಡಿಕಟ್ಟಿದ್ದಕ್ಕೆ ಅನುಮತಿ ಪಡೆದಿರುವ ಲೈಸನ್ಸ್ ತೋರಿಸುವಂತೆ ಕೇಳಲಾಗಿ ಸದರಿಯವರು ಯಾವುದೇ ರೀತಿಯ ಲೈಸನ್ಸ್ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ ಸ್ಥಳದಲ್ಲಿ ಹೈವಾಡ್ಸರ್್ ಚೀರ್ಸ್ ಕಂಪನಿಯ 90 ಎಂ.ಎಲ್ ಸಾಮಥ್ರ್ಯದ 10 ವಿಸ್ಕಿ ಟೆಟ್ರಾ ಪ್ಯಾಕೇಟ್ಗಳು ಇದ್ದವು, 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಬಿದ್ದಿದ್ದು, ಮದ್ಯವನ್ನು ಕುಡಿದು ಬಿಸಾಹಾಕಿದ್ದ 2 ಪ್ಲಾಸ್ಟಿಕ್ ಗ್ಲಾಸುಗಳು ಅಲ್ಲಿಯೇ ಪಕ್ಕದಲ್ಲಿಯೇ ಒಂದು ಲೀಟರ್ ಸಾಮಥ್ರ್ಯದ ಪ್ಲಾಸ್ಟಿಕ್ ವಾಟರ್ ಬಾಟಲ್ ಇದ್ದು, ಅದರಲ್ಲಿದ್ದ ನೀರು ಕೆಳಗಡೆಗೆ ಚೆಲ್ಲಿತ್ತು, ಮದ್ಯವಿರು ಪ್ಯಾಕೇಟ್ ಗಳ ಒಟ್ಟು ಬೆಲೆ 35.13*10 =351-10 ರೂಗಳು (900 ಎಂ.ಎಲ್) ಆಗಿರುತ್ತದೆ. ಸದರಿ ಮೇಲ್ಕಂಡ 10 ಮದ್ಯದ ಟೆಟ್ರಾ ಪ್ಯಾಕೇಟ್ಗಳನ್ನು, 2 ಖಾಲಿ ಟೆಟ್ರಾ ಪ್ಯಾಕೆಟ್ ಗಳನ್ನು  ಹಾಗೂ 2 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಪ್ಲಾಸ್ಟಿಕ್ ವಾಟರ್ ಬಾಟಲ್ನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 11-30 ಗಂಟೆಯಿಂದ ಮದ್ಯಾಹ್ನ 12-30 ಘಂಟೆಯವರೆಗೆ ಪಂಚನಾಮೆ ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮೇಲ್ಕಂಡ ಶ್ರೀನಿವಾಸ ಬಿನ್ ಲೇಟ್ ಅರ್ಚಕ ನರಸಪ್ಪ  ರವರನ್ನು ವಶಕ್ಕೆ ಪಡೆದುಕೊಂಡು ಮದ್ಯಾಹ್ನ 1-00 ಘಂಟೆಗೆ ಠಾಣೆಗೆ ಬಂದು 1-30 ಗಂಟೆಗೆ ವರಧಿಯನ್ನು ಸಿದ್ದಪಡಿಸಿ ಮೇಲ್ಕಂಡ ಆರೋಪಿ, ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿದೆ.

 

6. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.58/2021 ಕಲಂ. 427 ಐ.ಪಿ.ಸಿ & 03 PREV. OF DAMAGE TO PUBLIC PROPERTY ACT:-

          ದಿನಾಂಕ:08/04/2021 ರಂದು ಮದ್ಯಾಹ್ನ 12-00ಗಂಟೆಗೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ:07/04/2021 ರಿಂದ  ಕ.ರಾ.ರ.ಸಾ. ನಿಗಮದ ನೌಕರರು ತಮ್ಮ ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ  ಅನಿರ್ದಾಷ್ಟಾವಧಿ ಮುಷ್ಕರಕ್ಕೆ ಕರೆನೀಡಿರುತ್ತಾರೆ. ದಿನಾಂಕ:07/04/20201 ರಂದು  ಕೆ,ಎ-57 ಎಫ್-3883 ನೋಂದಣಿ ಸಂಖ್ಯೆಯ ಮಲ್ಟಿ ಆಕ್ಸೆಲ್ ವೋಲ್ವಾ ಸ್ಲೀಪರ್ ಕೋಚ್  ಬಸ್ಸಿನಲ್ಲಿ 30 ಜನ ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿನಲ್ಲಿ ಸಮಯ 21-45 ಗಂಟೆಗೆ  ಬೆಂಗಳೂರನ್ನು ಬಿಟ್ಟು ಸಿಕಂದರಾಬಾದ್ ಕಡೆಗೆ ಹೋಗಲು ಬೆಂಗಳೂರು- ಹೈದರಾಬಾದ್ ಎನ್,ಹೆಚ್-44 ರಸ್ತೆಯಲ್ಲಿ  ಹೋಗುತ್ತಿದ್ದಾಗ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ತಟ್ಟಹಳ್ಳಿ ಕ್ರಾಸ್  ಹತ್ತಿರ ಬೆಳಗಿನ ಜಾವ ಸಮಯ ಸುಮಾರು-00-05 ಗಂಟೆಯ ಸಮಯದಲ್ಲಿ ಯಾರೋ ಕಿಡಿಗೇಡಿಗಳು  ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಮೇಲ್ಕಂಡ ವಾಹನದ ಮೇಲೆ ಕಲ್ಲೂ ತೂರಿದ್ದರ ಪರಿಣಾಮ ವಾಹನದ ಎಡ ಭಾಗದ ಎರಡು ಪ್ರಯಾಣಿಕರ ಗಾಜುಗಳು ಒಡೆದು ಹೋಗಿದ್ದು ಅಂದಾಜು ಸುಮಾರು-20,000  ರೂಗಳು ನಷ್ಟವಾಗಿರುತ್ತದೆ.ಸದರಿ ವಾಹನವು ಬೆಂಗಳೂರು ಕೇಂದರ ವಿಭಾಗದ ಘಟಕ-2 ಕ್ಕೆ ಸೇರಿದ್ದು ಈ ವಾಹನದ ಚಾಲಕರಾಗಿ ಶ್ರೀ ಎಸ್,ಎಂ ಬಸಯ್ಯ ಬಿಲ್ಲೆ ಸಂಖ್ಯೆ-10959 ಇವರ ಮೊ ನಂ-9731986719 ಹಾಗೂ  ನಿರ್ವಾಹಕರಾಗಿ ಶ್ರೀ ಮಂಜುನಾಥ ಶೆಟ್ಟಿ ಬಿಲ್ಲೆ ಸಂಖ್ಯೆ-4633  ರವರುಗಳು ಕಾರ್ಯನಿರ್ವಹಿಸುತ್ತಿರುತ್ತಾರೆ. ಸದರಿ ಘಟನೆಯಲ್ಲಿ ಪ್ರಯಾಣಿಕರಿಗಾಗಲಿ, ಸಿಬ್ಬಂದಿಗಳಿಗಾಗಲಿ ಯಾವುದೇ ರೀತಿಯ ಗಾಯಗಳು ಆಗಿರುವುದಿಲ್ಲ. ಸದರಿ ವಾಹನವು ಮಾರ್ಗ ಸಂಖ್ಯೆ-09/10 ರಲ್ಲಿ  ಕಾರ್ಯಾಚರಣೆ ಮುಂದುವರೆಸಿರುತ್ತದೆ.  ಆದ್ದರಿಂದ ಮೇಲ್ಕಂಡ ಘಟನೆಯಿಂದ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿದ ಕಿಡಿಗೇಡಿಗಳನ್ನು ಪತ್ತೆಮಾಡಿ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

ಇತ್ತೀಚಿನ ನವೀಕರಣ​ : 08-04-2021 06:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080