ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.60/2021 ಕಲಂ. 279,337 ಐ.ಪಿ.ಸಿ :-

  ದಿನಾಂಕ:08/03/2021 ರಂದು ಪಿರ್ಯಾದಿದಾರರಾದ  ರಾಮಚಂದ್ರ ಬಿನ್ ನಾರಾಯಣಸ್ವಾಮಿ, 30 ವರ್ಷ, ಬಲಜಿಗ ಜನಾಂಗ, ಕೊಲಿಕೆಲಸ,ವಾಸ ಸೊಣಗಾನಹಳ್ಳಿ ಗ್ರಾಮ, ಸಾದಲಿ ಹೋಬಳಿ, ಶಿಢ್ಲಘಟ್ಟ ತಾಲ್ಲೂಕು.ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 06/03/2021 ರಂದು ನನ್ನ ತಂದೆಯಾದ ನಾರಾಯಣಸ್ವಾಮಿ ರವರು ಬೆಳಿಗ್ಗೆ ಗಾರೆಕೆಲಸಕ್ಕೆ ಬಾಗೇಪಲ್ಲಿಗೆ ಹೋಗಿಬರುವುದಾಗಿ ತಿಳಿಸಿ ಹೊರಟಿರುತ್ತಾರೆ. ನಂತರ ರಾತ್ರಿ ಸುಮಾರು 9-00 ಗಂಟೆಯಲ್ಲಿ ನನಗೆ ನನ್ನ ಭಾವನಾದ ಶಂಕರ ರವರು ಪೋನ್ ಮಾಡಿ ನಿಮ್ಮ ತಂದೆಗೆ ಬಾಗೇಪಲ್ಲಿ ಬಳಿ ಅಪಘಾತವಾಗಿದ್ದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು. ನಂತರ ಚಿಕ್ಕಬಳ್ಳಾಪುರದಿಂದ ನಿಮ್ಹಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ದಿಗ್ವಜಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿಕೊಂಡು ದಿನಾಂಕ 07/03/2021 ರಂದು ರಾತ್ರಿ ಮನೆಗೆ ಕರೆದುಕೊಂಡು ಬಂದಿರುತ್ತಾರೆ. ನಂತರ ನನ್ನ ತಂದೆಯನ್ನು  ವಿಚಾರ ಮಾಡಿ ತಿಳಿಯಲಾಗಿ ದಿನಾಂಕ 06/03/2021 ರಂದು ರಾತ್ರಿ ಸುಮಾರು 8-15 ಗಂಟೆಯಲ್ಲಿ ನನ್ನ ತಂದೆ ನಾರಾಯಣಸ್ವಾಮಿ ರವರು ಕೆಲಸ ಮುಗಿಸಿಕೊಂಡು ವಾಪಸ್ ಗ್ರಾಮಕ್ಕೆ ಬರಲು ಟಿ.ಬಿ.ಕ್ರಾಸ್ ಬಳಿ ಇರುವ ಆನಂದ ವೈನ್ಸ್ ಮುಂಭಾಗ ಬರುವಾಗ ಶೌಚಾಲಯಕ್ಕೆ ಹೋಗಲು ಹೆದ್ರಾಬಾದ್-ಬೆಂಗಳೂರು ರಸ್ತೆಯನ್ನು ದಾಟಲು ಹೋದಾಗ ಹೈದ್ರಾಬಾದ್ ಕಡೆಯಿಂದ ಬಂದ ಎ.ಪಿ-02-ಸಿ.ಸಿ-2164 ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆ ದಾಟುತ್ತಿದ್ದ ನನ್ನ ತಂದೆಗೆ ಡಿಕ್ಕಿ ಹೊಡೆಸಿದ ಪರಿಣಾಮ ಎಡಕೈ ತೋಳಿನ ಬಳಿ ಮೂಳೆ ಮುರಿದಿರುತ್ತದೆ. ಮತ್ತು ಬಲಕಾಲಿಗೆ ರಕ್ತಗಾಯವಾಗಿರುತ್ತದೆ.  ಆದ್ದರಿಂದ ನನ್ನ ತಂದೆಗೆ ಅಪಘಾತವನ್ನು ಉಂಟು  ಮಾಡಿದ ಎ.ಪಿ-02-ಸಿ.ಸಿ-2164 ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ. ನನ್ನ ತಂದೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಬಂದು ನೀಡಿದ ದೂರಾಗಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.61/2021 ಕಲಂ. 457,380  ಐ.ಪಿ.ಸಿ :-

  ದಿನಾಂಕ: 08/03/2021 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ಕಾಶಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು ದಿನಾಂಕ;05/03/2021 ರಂದು ಎಂದಿನಂತೆ ಕೆಲಸ ಮುಗಿಸಿ ಸಾಯಂಕಾಲ 4-30 ಗಂಟೆಗೆ ಬೀಗ ಹಾಕಿಕೊಂಡು ಹೋಗಿರುತ್ತೇನೆ. ನಂತರ ದಿನಾಂಕ:06/03/2021 ರಂದು ಬೆಳಿಗ್ಗೆ ಸುಮಾರು 8-30 ಗಂಟೆ ಸಮಯದಲ್ಲಿ ಅಂಗನವಾಡಿ ಕೇಂದ್ರದ ಬಳಿ ಹೋಗಿ ನೋಡಲಾಗಿ, ರಾತ್ರಿ ಅಂಗನವಾಡಿ ಮುಂದೆ ಯಾರೋ ಅಲ್ಲಿಯೇ ಕುಡಿದು ಊಟ ಮಾಡಿ, ಮದ್ಯದ ಬಾಟಲಿಗಳನ್ನು ಹಾಕಿದ್ದು, ಕುಡಿದ ಅಮಲಿನಲ್ಲಿಯೇ ಅಂಗನವಾಡಿ ಕೇಂದ್ರದ ಬೀಗವನ್ನು ಗಡಾರಿನಲ್ಲಿ ಹೊಡೆದು ಬೀಗವನ್ನು ಮುರಿದು ಅಂಗನವಾಡಿ ಕೇಂದ್ರದಲ್ಲಿರುವ ಸುಮಾರು 8-10 ಸಾವಿರ ಬೆಲೆ ಬಾಳುವ  ಗ್ಯಾಸ್ ಸಿಲಿಂಡರ್, ಸ್ಟೌವ್, ಪಾತ್ರೆಗಳನ್ನು ಎತ್ತಿಕೊಂಡು ಹೋಗಿರುತ್ತಾರೆ. ನಂತರ ಅಕ್ಕ ಪಕ್ಕದಲ್ಲಿರುವ ಮನೆಗಳವರನ್ನು ಕೇಳಿದ್ದು ಯಾರೂ ಸಹ ನಮಗೆ ಗೊತ್ತಿಲ್ಲವೆಂದು ತಿಳಿಸಿರುತ್ತಾರೆ. ಆದ್ದರಿಂದ ಅಂಗನವಾಡಿ ಕೇಂದ್ರದ ಬೀಗವನ್ನು ಹೊಡೆದು ಅದರಲ್ಲಿರುವ ಗ್ಯಾಸ್ ಸಿಲಿಂಡರ್, ಸ್ಟೌವ್, ಪಾತ್ರೆಗಳನ್ನು ರಾತ್ರಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗರುವವರನ್ನು ಪತ್ತೆ ಹಚ್ಚಿ, ಅವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರು.  ಸದರಿ ವಿಷಯವನ್ನು ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೆ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.34/2021 ಕಲಂ. 279,337  ಐ.ಪಿ.ಸಿ :-

  ದಿನಾಂಕ;07/03/2021 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೆನೆಂದರೆ ತಾನು ಈಗ್ಗೆ 12 ವರ್ಷಗಳಿಂದ ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಗಳಿಗೆ ಜಿ.ಎನ್.ಎಂಟರ್ ಪ್ರೈಸಸ್ ಕಂಪನಿಯ ಕಡೆಯಿಂದ ಹೊರಗುತ್ತಿಗೆ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ. ನೆನ್ನೆ ದಿನ ದಿನಾಂಕ: 06/03/2021 ರಂದು ತಾನು ನೈಟ್ ಡ್ಯೂಟಿಯಲ್ಲಿದ್ದು, ರಾತ್ರಿ ಸುಮಾರು 11-45 ಗಂಟೆ ಸಮಯದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಶಿಡ್ಲಘಟ್ಟ ತಾಲ್ಲೂಕು ದಿಬ್ಬೂರಹಳ್ಳಿ ಗ್ರಾಮದ ವಾಸಿ ಶ್ರೀಮತಿ ಅರ್ಚನ ಕೋಂ ರವಿ ಎಂಬುವವರನ್ನು ಡಿಲವರಿಗಾಗಿ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ತನಗೆ ತಿಳಿಸಿದರು. ತಾನು ತನಗೆ ನೀಡಿರುವ KA-40, G-0636 ಸರ್ಕಾರಿ ಆಂಬುಲೆನ್ಸ್ ವಾಹನದಲ್ಲಿ ಪೇಷಂಟ್ ಶ್ರೀಮತಿ ಅರ್ಚನ, ಅವರ ಕಡೆಯವರಾದ ಮುನಿಕೃಷ್ಣಪ್ಪ ಬಿನ್ ಯರ್ರನಾಗಪ್ಪ ಮತ್ತು ಆಶಾ ಕಾರ್ಯಕರ್ತೆ ಶ್ರೀಮತಿ ಪ್ರಮೀಳಮ್ಮರವರನ್ನು ತನ್ನ ಆಂಬುಲೆನ್ಸ್ ನಲ್ಲಿ ಹತ್ತಿಸಿಕೊಂಡು ಶಿಡ್ಳಘಟ್ಟ ಸರ್ಕಾರಿ ಆಸ್ಪತ್ರೆ ಬಿಟ್ಟು ಶಿಡ್ಲಘಟ್ಟ-ಚಿಕ್ಕಬಳ್ಳಾಪುರ NH-234 ರಸ್ತೆಯಲ್ಲಿ ಹೊಸಹುಡ್ಯ ಗ್ರಾಮ ಬಿಟ್ಟು ಮುಂದೆ ಆಂಬುಲೆನ್ಸ್ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದಾಗ ಮದ್ಯರಾತ್ರಿ 12-05 ಗಂಟೆ ಸಮಯದಲ್ಲಿ ಅಂದರೆ ದಿನಾಂಕ: 07/03/2021 ರಂದು ಬೆಳಗಿನ ಜಾವ 00-05 ಗಂಟೆ ಸಮಯದಲ್ಲಿ ತನ್ನ ಮುಂದೆ ಹೋಗುತ್ತಿದ್ದ KA-38, 9622 ನೊಂದಣಿ ಸಂಖ್ಯೆಯ ಸಿಮೆಂಟ್ ಲಾರಿಯ ಚಾಲಕ ತನ್ನ ಲಾರಿಯನ್ನು ಯಾವುದೇ ಮುನ್ಸೂಚನೆ ನೀಡದೇ ಹಠಾತ್ತಾಗಿ ನಿಲ್ಲಿಸಿದ್ದರಿಂದ ಹಿಂದೆ ಬರುತ್ತಿದ್ದ ತನ್ನ ಆಂಬುಲೆನ್ಸ್ ವಾಹನ ಹಿಂದಿನಿಂದ ಲಾರಿಗೆ ಡಿಕ್ಕಿಯಾದ ಪರಿಣಾಮ ಆಂಬುಲೆನ್ಸ್ ವಾಹನದ ಮುಂಭಾಗ ಜಖಂಗೊಂಡಿದ್ದು, ತನ್ನ ಬಲಕಾಲಿಗೆ, ಬಲಕೆನ್ನೆಗೆ, ಎದೆಗೆ ಮೂಗೇಟುಗಳಾಯಿತು. ತನ್ನ ಆಂಬುಲೆನ್ಸ್ ನಲ್ಲಿದ್ದ ಮತ್ಯಾರಿಗೂ ಯಾವುದೇ ಗಾಯ ಗಳಾಗಿರುವುದಿಲ್ಲ. ತಕ್ಷಣ ತಾನು  ಆಸ್ಪತ್ರೆಯ ಮತ್ತೊಂದು ಆಂಬುಲೆನ್ಸ್ ಡ್ರೈವರ್ ರವೀಂದ್ರ ರವರಿಗೆ ಪೋನ್ ಮಾಡಿ ಕರೆಸಿಕೊಂಡು ಅದರಲ್ಲಿ ಪೇಷಂಟ್ ನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತೇನೆ. ನಂತರ ತಾನು ರಸ್ತೆಯಲ್ಲಿ ಬಂದ ಯಾವುದೋ ವಾಹನದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಕೊಂಡಿರುತ್ತೇನೆ. KA-38, 9622 ನೊಂದಣಿ ಸಂಖ್ಯೆಯ ಸಿಮೆಂಟ್ ಲಾರಿಯ ಚಾಲಕನ ಹೆಸರು ತಿಳಿಯಬೇಕಾಗಿರುತ್ತೆ. ಅಪಘಾತಕ್ಕೆ ಕಾರಣನಾದ KA-38, 9622 ನೊಂದಣಿ ಸಂಖ್ಯೆಯ ಸಿಮೆಂಟ್ ಲಾರಿ ಮತ್ತು ಅದರ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದರ ಮೇರೆಗೆ ಈ ಪ್ರ,ವ,ವರದಿ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.55/2021  ಕಲಂ. 498A,302,306,34 ಐ.ಪಿ.ಸಿ :-

  ದಿನಾಂಕ 08-03-2021 ರಂದು ಬೆಳಿಗ್ಗೆ 11.30 ಘಂಟೆಗೆ ಪಿರ್ಯಾದಿದಾರರಾದ ಶ್ರೀ ಬೀರಪ್ಪ ಬಿನ್ ಲೇಟ್ ಹನುಮಯ್ಯ, 50 ವರ್ಷ, ಕುರುಬ ಜನಾಂಗ, ಜಿರಾಯ್ತಿ, ವಾಸ: ಸಾಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ತನಗೆ  4ಜನ ಮಕ್ಕಳಿದ್ದು, 1ನೇ ಜ್ಯೋತಿ, 2 ನೇ ದೇವರಾಜು, 3 ನೇ 22 ವರ್ಷ ವಯಸ್ಸಿನ ರಾಧ,  ಹಾಗು ರುಕ್ಮಿಣಿ ಅವಳಿ ಜವಳಿ ಮಕ್ಕಳು ಇದ್ದು,   ಹೆಣ್ಣು ಮಕ್ಕಳಿಗೆಲ್ಲಾ ಮಧುವೆಗಳಾಗಿದ್ದು, ತನ್ನ ಮಗ ದೇವರಾಜು ಎಂಬುವವರಿಗೆ ಇನ್ನೂ ಮಧುವೆಯಾಗಿರುವುದಿಲ್ಲ. ತನ್ನ ಹಿರಿಯ ಮಗಳಾದ ಜ್ಯೋತಿಯವರಿಗೆ ಹಿಂದೂಪುರ ಬಳಿ ಇರುವ ಸುಬ್ಬರೆಡ್ಡಿ ಪಲ್ಲಿಯ ಹರೀಶ ಎಂಬುವರೊಂದಿಗೆ ಮಧುವೆ ಮಾಡಿರುತ್ತೇವೆ.   ರಾಧ ರವರನ್ನ  ಈಗ್ಗೆ 3 ವರ್ಷಗಳ ಹಿಂದೆ ಗೌರೀಬಿದನೂರು ತಾಲ್ಲೂಕು, ಕಸಬಾ ಹೋಬಳಿ, ಹುದೂತಿ ಗ್ರಾಮದ ಮಂಜುನಾಥ ಬಿನ್ ಲೇಟ್ ಚಿಕ್ಕಮಲ್ಲಪ್ಪ ಎಂಬುವರೊಂದಿಗೆ ಮಧುವೆ ಮಾಡಿದ್ದೆವು. ತನ್ನ ಕೊನೆಯ ಮಗಳಾದ ರುಕ್ಮಿಣಿ ರವರನ್ನು ತನ್ನ ಅಳಿಯ ಮಂಜುನಾಥ ರವರ ತಮ್ಮನಾದ ಮಹೇಶ ಎಂಬುವರೊಂದಿಗೆ ಈಗ್ಗೆ ಸುಮಾರು ಒಂದೂವರೆ ವರ್ಷದ ಹಿಂದೆ  ಮಧುವೆ ಮಾಡಿದ್ದೆವು.  22 ವರ್ಷ ವಯಸ್ಸಿನ ರಾಧ  ಹಾಗು ರುಕ್ಮಿಣಿ ತನ್ನ ಗಂಡಂದಿರೊಂದಿಗೆ  ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು.   ತಾನು ತನ್ನ ಹೆಂಡತಿ ಹುದೂತಿಗೆ  ಆಗಾಗ ಹೋಗಿ ನಮ್ಮ ಮಕ್ಕಳ ಕಷ್ಟ ಸುಖ ವಿಚಾರಿಸಿಕೊಂಡು  ಬರುತ್ತಿದ್ದೆವು. ಕಳೆದ 6 ತಿಂಗಳ ಹಿಂದೆ ತಾನು, ತನ್ನ ಹೆಂಡತಿ ಗಂಗಮ್ಮ  ರಾಧ ಹಾಗು ರುಕ್ಮಿಣಿ ರವರ ಮನೆಗೆ ಹೋಗಿದ್ದೆವು. ಆ ಸಂದರ್ಬದಲ್ಲಿ,  ತನ್ನ ಹಿರಿಯ ಅಳಿಯ ಮಂಜುನಾಥ ತನ್ನ ಚಿಕ್ಕ ಮಗಳು ರುಕ್ಷ್ಮಿಣಿ ಮನೆಯಲ್ಲಿದ್ದಾಗ,  ಬಟ್ಟೆ ಬಿಚ್ಚಾಕಿ ಅಸಭ್ಯವಾಗಿ ವರ್ತಿಸುತ್ತಿದ್ದರಿಂದ ತಾನು ನನ್ನ  ಹೆಂಡತಿ ಬುದ್ದಿ ಹೇಳಿದ್ದಕ್ಕೆ  ನನ್ನ ಅಳಿಯ ಮಂಜುನಾಥ ಮತ್ತು ಅವರ ತಾಯಿ ಅಶ್ವತ್ಥಮ್ಮ  ನೀವು ಯಾರು ನಮಗೆ ಬುದ್ದಿ ಹೇಳುವುದಕ್ಕೆ ನಾವು ಇರುವುದು ಹೀಗೆಯೇ ನಮಗೆ ಬುದ್ದಿ ಹೇಳಲು ಬಂದರೆ ಪೊರಕೆಯಿಂದ ಹೊಡೆಯುತ್ತೇವೆ ಎಂದು ಬೈಯ್ದಿದ್ದರು. ಅಂದಿನಿಂದ  ರಾಧಳ ಆಕೆಯ ಗಂಡ ಮಂಜುನಾಥ ಹಾಗು ಅವರ ತಾಯಿ ಅಶ್ವತ್ಥಮ್ಮ  ಕುಡಿದು ಬಂದು, ತನ್ನ ಮಗಳು ರಾಧಳಿಗೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದರಿಂದ ಮನನೊಂದು ಬೇಸತ್ತಿದ್ದಳು. ಈ ವಿಚಾರ ತಮಗೆ ತಿಳಿಸಿದಾಗ, ಹೇಗೋ ಅನುಸರಿಸಿಕೊಂಡು ಸಂಸಾರ ಮಾಡಿಕೊಂಡು ಹೋಗುವಂತೆ ಬುದ್ದಿ ಹೇಳುತ್ತಿದ್ದೆವು.   ಆದರೆ ದಿನಾಂಕ:07/03/2021 ರಂದು ಸಂಜೆ ಕುಡಿದು ಬಂದು, ಮಂಜುನಾಥ ಹಾಗು ಅವರ ತಾಯಿ ಅಶ್ವತ್ಥಮ್ಮ  ತನ್ನ ಮಗಳು ರಾಧಳನ್ನು ಬೈಯ್ದಿದ್ದರಿಂದ ರಾಧ ಜಿಗುಪ್ಸೆಗೊಂಡು, ರಾತ್ರಿ ಮನೆಯ ಮುಂದೆ ಮಲಗಿದ್ದವರು ದಿನಾಂಕ:08/03/2021 ರಂದು ಬೆಳಿಗ್ಗೆ ಸುಮಾರು 4-00 ಗಂಟೆಯಲ್ಲಿ ತನ್ನ ಮಗಳು   ಹಾಗು ಈಕೆಯ ಒಂದು ವರ್ಷದ ಮನುಜ ಎದ್ದು ಒಳಗೆ ಹೋಗಿ ಮಲಗಿದ್ದು, ನಂತರ ಬೆಳಿಗ್ಗೆ 9-00 ಗಂಟೆಯಾದರೂ ಸಹ ಬಾಗಿಲು ತೆಗೆದಿರುವುದಿಲ್ಲ.  ಅದೇ ಮನೆಯಲ್ಲಿರುವ ತನ್ನ ಮಗಳು ರುಕ್ಮಿಣಿ ಎಬ್ಬಿಸಲು ಹೋದಾಗ, ರಾಧಳ ರೂಮಿನ ಒಳಗೆ ಚಿಲಕ ಹಾಕಿಕೊಂಡಿದ್ದು, ನಂತರ ಎಷ್ಟೇ ಕೂಗಿದರೂ ತೆಗೆಯದ ಕಾರಣ ಕಿಟಕಿಯಿಂದ ನೋಡಿದಾಗ, ತನ್ನ ಮಗಳು ರಾಧ ನೇಣು ಹಾಕಿಕೊಂಡಿರುವುದನ್ನು ಕಂಡು ಬಾಗಿಲು ಹೊಡೆದು, ಒಳಗೆ ಹೋಗಿ ನೋಡಿದಾಗ, ತನ್ನ ಮಗಳು ರಾಧ ಆಕೆಯ ಒಂದು ವರ್ಷದ ಮಗಳಾದ ಮನುಜಳನ್ನು ಸಾಯಿಸಿ, ತಾನು ಸಹ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆಂದು ತಿಳಿದು ಬಂದಿರುತ್ತೆ.   ತನ್ನ ಮಗಳು ರಾಧಳಿಗೆ ಆಕೆಯ ಗಂಡ ಮಂಜುನಾಥ ಹಾಗು ಅತ್ತೆ ಅಶ್ವತ್ಥಮ್ಮರವರು ಯಾವಾಗಲೂ ಕುಡಿದು ಬಂದು, ಗಲಾಟೆ ಮಾಡಿ, ಕಾಟ ಕೊಡುತ್ತಿದ್ದರಿಂದ, ತನ್ನ ಮಗಳು ರಾಧರವರು ಬೇಸತ್ತು ಜೀವನದಲ್ಲಿ ಜಿಗುಪ್ಸೆಗೊಂಡು, ಆಕೆಯ ಮಗಳಾದ ಮನುಜಳನ್ನು ಉಸಿರುಗಟ್ಟಿಸಿ ಸಾಯಸಿ, ತಾನು ಸಹ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ.   ಆದುದರಿಂದ ಇದಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರು.

 

5. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.29/2021 ಕಲಂ. 379  ಐ.ಪಿ.ಸಿ :-

  ದಿನಾಂಕ 08/03/2021 ರಂದು ಬೆಳಿಗ್ಗೆ 11-15 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀ ಕೆ. ಜಗದೀಶ ಬಿನ್ ಎನ್. ಕೃಷ್ಣಪ್ಪ, 29 ವರ್ಷ,  ನಾಯಕ ಜನಾಂಗ, ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ, ವಾಸ ಮುರಗಮಲ್ಲಾ ಗ್ರಾಮ ಚಿಂತಾಮಣಿ ತಾಲ್ಲೂಕು, ಪೋನ್ ನಂ: 9611119611 ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ: ತಾನು ಮೇಲ್ಕಂಡಂತೆ ವಾಸವಾಗಿದ್ದು, ಮುರಗಮಲ್ಲ ಗ್ರಾಮದ ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ. ತಾನು ಕೆಎ-67-ಇ-8982 ನೋಂದಣಿ ಸಂಖ್ಯೆಯ ನೀಲಿ ಬಣ್ಣದ HONDA ACTIVA 6G  ದ್ವಿಚಕ್ರವಾಹನವನ್ನು 2020 ನೇ ಸಾಲಿನಲ್ಲಿ ಕೊಂಡುಕೊಂಡು ತಾನೇ ಸ್ವಂತಕ್ಕೆ ಉಪಯೋಗಿಸುತ್ತಿರುತ್ತೇನೆ, ಸದರಿ ದ್ವಿಚಕ್ರವಾಹನದ ಇಂಜಿನ್ ನಂಬರ್: JF91EG0019464 ಛಾಸ್ಸಿಸ್ ನಂ: ME4JF913ALG019309 ಆಗಿರುತ್ತದೆ.  ದಿನಾಂಕ 07/03/2021 ರಂದು ರಾತ್ರಿ 12-00 ಗಂಟೆ ಸಮಯದಲ್ಲಿ ತನ್ನ ಬಾಬತ್ತು ದ್ವಿಚಕ್ರವಾಹನವನ್ನು ತಮ್ಮ ವಾಸದ ಮನೆಯ ಅಂಗಳದಲ್ಲಿ ಪಾರ್ಕ ಮಾಡಿ ಗೇಟ್ ಹಾಕಿ ಮಲಗಿದ್ದು, ದಿನಾಂಕ 08/03/2021 ರಂದು ಬೆಳಿಗ್ಗೆ 5-00 ಗಂಟೆ ಸಮಯದಲ್ಲಿ ಎದ್ದು ನೋಡಲಾಗಿ ರಾತ್ರಿ ನಿಲ್ಲಿಸಿದ್ದ ತನ್ನ ದ್ವಿಚಕ್ರವಾಹನ ಇಲ್ಲದೇ ಇದ್ದು,ಅದರ ಪಕ್ಕದಲ್ಲಿ ನಿಲ್ಲಿಸಿದ್ದ ಇತರೇ ಎರಡು ದ್ವಿಚಕ್ರವಾಹನಗಳು ಇದ್ದುದರಿಂದ  ಈ ಬಗ್ಗೆ ಅಕ್ಕಪಕ್ಕದವರನ್ನು ವಿಚಾರಿಸಿ ಸುತ್ತಮುತ್ತಲೂ ಹುಡಕಾಡಿದರೂ ಸಿಕ್ಕಿರುವುದಿಲ್ಲಾ. ತನ್ನ ಬಾಬತ್ತು ಕೆಎ-67-ಇ-8982 ನೋಂದಣಿ ಸಂಖ್ಯೆಯ HONDA ACTIVA 6G ದ್ವಿಚಕ್ರವಾಹನವನ್ನು ರಾತ್ರಿ ಯಾರೋ ಕಳ್ಳರು ತಮ್ಮ ಮನೆಯ ಅಂಗಳದಿಂದ ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ದ್ವಿಚಕ್ರವಾಹನದ ಅಂದಾಜು ಮೌಲ್ಯ 66000/- ರೂ ಆಗಿರುತ್ತದೆ. ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಿ ದ್ವಿಚಕ್ರವಾಹನವನ್ನು ಪತ್ತೆ ಮಾಡಲು ಕೋರಿ ಪಿರ್ಯಾದು.

 

6. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.23/2021 ಕಲಂ. 160  ಐ.ಪಿ.ಸಿ :-

  ದಿನಾಂಕ:07/03/2021 ರಂದು ಸಂಜೆ 6:00 ಗಂಟೆಗೆ ಪಿರ್ಯಾದಿ ಎ.ಎಸ್.ಐ ನಾಗರಾಜು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:07/03/2021 ರಂದು ಮೇಲಾಧಿಕಾರಿಗಳ ನೇಮಕದಂತೆ ಬೆಳಿಗ್ಗೆ 09:00 ಗಂಟೆಗೆ ತಾನು ಮತ್ತು ಠಾಣೆಯ ಹೆಚ್.ಸಿ-133 ಪುರುಷೋತ್ತಮ, ಪಿಸಿ-183 ಶಿವಲಿಂಗಪ್ಪ, ಮಹಿಳಾ ಪಿಸಿ-223 ಶ್ರೀಮತಿ ಚೈತ್ರ ರವರೊಂದಿಗೆ ಕೊಂಡೇನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕ ಸಹಾಕಾರ ಸಂಘದ ಚುನಾವಣೆಯ ಬಂದೋಬಸ್ತ್ ಕರ್ತವ್ಯಕ್ಕೆ ಬಂದು ಕರ್ತವ್ಯ ಮಾಡುತ್ತಿದ್ದು ಚುನಾವಣಾ ಅಧಿಕಾರಿ ಸಿಬ್ಬಂದಿ ಮತ್ತು ಹಾಲು ಡೈರಿಯ ಕಾರ್ಯದರ್ಶಿ ಇದ್ದು ಬೆಳಿಗ್ಗೆ 09:20 ಗಂಟೆಯಲ್ಲಿ ಸುಮಾರು 20 ಜನರ ಎರಡು ಗಂಪುಗಳ ರವರು ತಮ್ಮ ಬಳಿ ಬಂದು ಚುನಾವಣಾ ಅಧಿಕಾರಿಯನ್ನು ಕಂಡು ಚುನಾವಣಾ ಪ್ರಕ್ರಿಯೇಯ ಬಗ್ಗೆ ಮಾತನಾಡಬೇಕೆಂದು ಕೊಠಡಿಯೊಳಕ್ಕೆ ಹೋದವರು ಚುನಾವಣಾ ಸಿಬ್ಬಂದಿಯೊಂದಿಗೆ ಮಾತಿಗೆ ಮಾತು ಬೆಳಸಿ ಎಲ್ಲರು ಏರು ದ್ವನಿಯಲ್ಲಿ ಮಾತನಾಡುತ್ತಿದ್ದಾಗ ಚುನಾವಣಾ ಅಧಿಕಾರಿಯ ಸೂಚನೆಯಯಂತೆ ತಮ್ಮ ಸಿಬ್ಬಂದಿಯೊಂದಿಗೆ ಕೊಠಡಿಯೊಳಗೆ ಹೋಗಿ ಕೊಠಡಿಯಿಂದ ಸಮಾಧಾನ ಮಾಡಿ ಕೊಠಡಿಯಿಂದ ಹೊರಗೆ ಹಾಕಿದ್ದು ಚುನಾವಣೆಯ ನಡೆಯುತ್ತಿದ್ದ ಹಾಲು ಡೈರಿಯ ಮುಂಭಾಗ ಸಾರ್ವಜನಿಕರ ರಸ್ತೆಯಲ್ಲಿ ಎರಡು ಗುಂಪುಗಳಲ್ಲಿರುವವರು ಪರಸ್ವಪ ಜಗಳ ನಡೆಸಿ ಕೈ, ಕೈ ಮಿಲಾಯಿಸಿ ಜಗಳ ಮಾಡುತ್ತಿದ್ದಾಗ ತಾನು ಮತ್ತು ಸಿಬ್ಬಂದಿ ಜಗಳ ಬಿಡಿಸಿ ಪರಸ್ವರ ಬುದ್ದಿ ಹೇಳಿ ಎರಡು ಗುಂಪುಗಳನ್ನು ದೂರ ದೂರ ಕಳುಹಿಸಿದ್ದರು ಪುನಃ ಕಾದಾಟದ ಹಂತಕ್ಕೆ ಬಂದಾಗ ಪೊಲೀಸ್ ಸಿಬ್ಬಂದಿ ಮತ್ತು ಚುನಾವಣಾ ಸಿಬ್ಬಂದಿ ಜಗಳ ಬಿಡಿಸಿ ತಿಳಿಗೊಳಿಸಿದೇವು ಪರಿಸ್ಥಿತಿ ಕೈ ಮೀರಿ ಹಂತಕ್ಕೆ ಹೋದಾಗ ತಮ್ಮ ಹಿರಿಯ ಅಧಿಕಾರಿಗಳಾದ ಪಿ.ಎಸ್.ಐ, ಸಿಪಿ.ಐ, ಡಿವೈ.ಎಸ್.ಪಿ ಸಾಹೇಬರು ರವರುಗಳಿಗೆ ದೂರವಾಣಿ ಕರೆ ಮಾಡಿ ತಿಳಿಸಿದೇವು. ಎರಡು ಗುಂಪುಗಳಲ್ಲಿರುವವರ ಹೆಸರುಗಳು ವಿಳಾಸಗಳನ್ನು ಅಲಾಯಿದೆಯಾಗಿ ವಿಚಾರಿಸಿದಾಗ 1 ನೇ ಗುಂಪು 1) ಪಿಳ್ಳೇಗೌಡ ಬಿನ್ ನಾರಾಯಣಪ್ಪ, 51 ವರ್ಷ, ಒಕ್ಕಲಿಗರು, ಜಿರಾಯ್ತಿ, 2) ಶ್ರೀನಿವಾಸಮೂರ್ತಿ ಬಿನ್ ಲೇಟ್ ಮುನಿಶಾಮಪ್ಪ, 45 ವರ್ಷ, ಒಕ್ಕಲಿಗರು, ಜಿರಾಯ್ತಿ, 3) ದೇವೇಗೌಡ ಬಿನ್ ವೆಂಕಟರಾಯಪ್ಪ, 50 ವರ್ಷ, ಒಕ್ಕಲಿಗರು, ಜಿರಾಯ್ತಿ, 4) ರಾಮಾಂಜಿನಪ್ಪ ಬಿನ್ ಪಿಳ್ಳಹನುಮಂತಪ್ಪ, 45 ವರ್ಷ, ಒಕ್ಕಲಿಗರು, ಜಿರಾಯ್ತಿ, 5) ಮುನಿಕೃಷ್ಣಪ್ಪ ಬಿನ್ ಮುನಿಶಾಮಪ್ಪ, 54 ವರ್ಷ, ಒಕ್ಕಲಿಗರು, ಜಿರಾಯ್ತಿ, 6) ಮುರಳಿ ಬಿನ್ ಮುನಿಶಾಮಪ್ಪ, 40 ವರ್ಷ, ಒಕ್ಕಲಿಗರು, ಜಿರಾಯ್ತಿ, 7) ದಿಲೀಪ್ ಬಿನ್ ಗೋವಿಂದಪ್ಪ, 36 ವರ್ಷ, ಒಕ್ಕಲಿಗರು, ಜಿರಾಯ್ತಿ, 8) ಮುನಿಕೃಷ್ಣಪ್ಪ ಬಿನ್ ವೆಂಕಟರಾಯಪ್ಪ, 45 ವರ್ಷ, ಒಕ್ಕಲಿಗರು, ಜಿರಾಯ್ತಿ, 9) ಪ್ರಕಾಶ್ ಬಿನ್ ನಾರಾಯಣಪ್ಪ, 42 ವರ್ಷ, ಒಕ್ಕಲಿಗರು, ಜಿರಾಯ್ತಿ, 10) ಬೈರೇಗೌಡ ಬಿನ್ ನಾರಾಯಣಸ್ವಾಮಿ, 45 ವರ್ಷ, ಒಕ್ಕಲಿಗರು, ಜಿರಾಯ್ತಿ ಎಲ್ಲರ ವಾಸ: ಕೊಂಡೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 2 ನೇ ಗುಂಪು 1 ನೇ ಚಂದ್ರಪ್ಪ ಬಿನ್ ಲೇಟ್ ವೆಂಕಟರಾಯಪ್ಪ, 50 ವರ್ಷ, ಒಕ್ಕಲಿಗರು, ಜಿರಾಯ್ತಿ, 2) ರಾಮಾಂಜಿನಪ್ಪ ಬಿನ್ ಲೇಟ್ ಗೋವಿಂದಪ್ಪ, 49 ವರ್ಷ, ಒಕ್ಕಲಿಗರು, ಜಿರಾಯ್ತಿ, 3) ಮಂಜುನಾಥ ಬಿನ್ ವೆಂಕಟರಾಯಪ್ಪ, 45 ವರ್ಷ, ಒಕ್ಕಲಿಗರು, ಜಿರಾಯ್ತಿ, 4) ಕೆ.ಆರ್ ದೇವರಾಜ ಬಿನ್ ರಾಮಣ್ಣ, 48 ವರ್ಷ, ಒಕ್ಕಲಿಗರು, ಜಿರಾಯ್ತಿ, 5) ಶಿವಾರೆಡ್ಡಿ ಬಿನ್ ಮುನಿಯಪ್ಪ, 56 ವರ್ಷ, ಒಕ್ಕಲಿಗರು, ಜಿರಾಯ್ತಿ, 6) ವಿಜಯಕುಮಾರ್ ಬಿನ್ ಶ್ರೀರಾಮಪ್ಪ, 38 ವರ್ಷ, ಒಕ್ಕಲಿಗರು, ಜಿರಾಯ್ತಿ, 7) ಶ್ರೀಧರ್ ಬಿನ್ ಮುನಿಕೃಷ್ಣಪ್ಪ, 43 ವರ್ಷ, ಒಕ್ಕಲಿಗರು, ಜಿರಾಯ್ತಿ, 8) ಮಂಜುನಾಥ ಬಿನ್ ಶ್ರೀರಾಮಪ್ಪ, 36 ವರ್ಷ, ಒಕ್ಕಲಿಗರು, ಜಿರಾಯ್ತಿ, 9) ಹರೀಶ್ ಬಿನ್ ಶ್ರೀರಾಮಪ್ಪ, 40 ವರ್ಷ, ಒಕ್ಕಲಿಗರು, ಜಿರಾಯ್ತಿ, 10) ಕೆ.ಎನ್ ಶ್ರೀಧರ್ ಬಿನ್ ನಾಗರಾಜಪ್ಪ, 44 ವರ್ಷ, ಒಕ್ಕಲಿಗರು, ಜಿರಾಯ್ತಿ ಎಲ್ಲರ ವಾಸ: ಕೊಂಡೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ಈ ಮೇಲ್ಕಂಡ ಎರಡು ಗುಂಪಿನವರು ಸಾರ್ವಜನಿಕರ ಸ್ಥಳದಲ್ಲಿ ಕೈ,ಕೈ ಮಿಲಾಯಿಸಿ ಬೀದಿ ಕಲಹ ಮಾಡಿ ಬೆಳಿಗ್ಗೆ 09:20 ಗಂಟೆಯಿಂದ 09:45 ಗಂಟೆ ವರೆಗೆ ಗಲಾಟೆ ಮಾಡಿಕೊಂಡಿರುತ್ತಾರೆ. ಮೇಲ್ಕಂಡ ಎರಡು ಗುಂಪುಗಳು ಪುನಃ ಗಲಾಟೆ ಮಾಡಿಕೊಳ್ಳುವ ಸಾದ್ಯತೆಗಳು ಇದ್ದುದ್ದರಿಂದ ಸಂಜೆವರೆಗೂ ಸ್ಥಳದಲ್ಲಿ ಇದ್ದು ನಂತರ ತಡವಾಗಿ ಠಾಣೆಗೆ ಬಂದಿರುತ್ತೇನೆ. ಮೇಲ್ಕಂಡವರುಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 08-03-2021 06:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080