ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.35/2021  ಕಲಂ. 379 ಐ.ಪಿ.ಸಿ & 41(D),102 CODE OF CRIMINAL PROCEDURE, 1973 :-

     ದಿನಾಂಕ:07/02/2021 ರಂದು 16:00 ಗಂಟೆಗೆ ಠಾಣಾ ಸಿಬ್ಬಂದಿ ಪಿ.ಸಿ 131 ರವರು ಠಾಣೆಗೆ ಹಾಜರಾಗಿ ನೀಡಿದ ಆಸಾಮಿ, ಕೆ.ಎ-52 ಜೆ-6815 ದ್ವಿಚಕ್ರ ವಾಹನ ಮತ್ತು ವರದಿಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ಸಿಪಿಸಿ-131 ರಾಜಪ್ಪ ಆರ್. ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ:07-02-2021 ರಂದು ನನಗೆ ಮತ್ತು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಅಶೋಕ್ ಸಿಪಿಸಿ-214, ರವರಿಗೆ ಠಾಣಾಧಿಕಾರಿಗಳು ಅಪರಾಧ ಚಟುವಟಿಗಳ ಬಗ್ಗೆ ನಿಗಾ ವಹಿಸಿ ಹಗಲು ಗಸ್ತು ನಿರ್ವಹಿಸುವಂತೆ ಹಗಲು ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ನಾವು ಬಾಗೇಪಲ್ಲಿ ಟೌನಿನ,  ಕೊಡಿಕೊಂಡ ರಸ್ತೆ, ಎಸ್.ಬಿ.ಎಂ ರಸ್ತೆ, ಡಿ.ವಿ.ಜಿ ರಸ್ತೆ ಕಡೆಗೆ ಗಸ್ತು ಮಾಡಿಕೊಂಡು ಟೌನಿನ ಟಿ.ಬಿ ಕ್ರಾಸ್ ಬಳಿ ಗಸ್ತು ಮಾಡುತ್ತಿದ್ದಾಗ ಮದ್ಯಾಹ್ನ  ಸುಮಾರು 3:30 ಗಂಟೆಯ ಸಮಯದಲ್ಲಿ ಕೊಡಿಕೊಂಡ ಚೆಕ್ ಪೋಸ್ಟ್ ಕಡೆಯಿಂದ ಟಿ.ಬಿ ಕ್ರಾಸ್ ಕಡೆಗೆ ಯಾರೋ ಒಬ್ಬ ಆಸಾಮಿಯು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದು, ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ವಾಹನವನ್ನು ಗಾಬರಿಯಿಂದ ಹಿಂದಕ್ಕೆ ತಿರುಗಿಸಲು ಪ್ರಯತ್ನಿಸಿದಾಗ ನಾವು ಹಿಂಭಾಲಿಸಲಾಗಿ ಸದರಿ ಆಸಾಮಿಯು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದಾಗ, ನಾವುಗಳು ಆತನನ್ನು ಬೆನ್ನತ್ತಿ  ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ, ಆತನು ತೊದಲುತ್ತಾ ಹೆದರುತ್ತಾ ತನ್ನ ಹೆಸರು ವಿ.ಈಶ್ವರಪ್ಪ @ ಈಶ್ವರ ಬಿನ್ ವಿ. ಶಿವಪ್ಪ, 31 ವರ್ಷ, ವಡ್ಡಿ ಜನಾಂಗ, ಜಿರಾಯ್ತಿ, ವಾಸ ನಂಜಿರೆಡ್ಡಿಪಲ್ಲಿ ಗ್ರಾಮ, ಚಾಗಲೇರು ಪಂಚಾಯ್ತಿ, ಚಿಲಮತ್ತೂರು ಮಂಡಲಂ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ ಎಂದು ತಿಳಿಸಿದ್ದು, ಆತನ ಬಳಿ ಇರುವ ದ್ವಿಚಕ್ರ ವಾಹನದ ಬಗ್ಗೆ ಮಾಹಿತಿಯನ್ನು ಕೇಳಲಾಗಿ ಸಮಂಜಸವಾದ ಉತ್ತರವನ್ನು ನೀಡದೇ ಇದ್ದು, ವಾಹನದ ನೊಂದಣಿ ಸಂಖ್ಯೆಯನ್ನು ಪರಿಶೀಲಿಸಲಾಗಿ ಕೆ.ಎ-52-ಜೆ-6815 ನೊಂದಣಿ ಸಂಖ್ಯೆಯ ಹೀರೋ ಸ್ಪ್ಲೆಂಡರ್ ಪ್ರೋ ದ್ವಿಚಕ್ರ ವಾಹನವಾಗಿರುತ್ತೆ. ಇದರ ಇಂಜಿನ್ ನಂ HA10ELDHB01380 ಚಾಸ್ಸಿ ನಂ MBLHA10ASDHB01228 ಆಗಿರುತ್ತದೆ. ವಾಹನದ ದಾಖಲಾತಿಗಳನ್ನು ಕೇಳಲಾಗಿ ತನ್ನ ಬಳಿ ಇಲ್ಲವೆಂದು ತಿಳಿಸಿದ್ದರಿಂದ  ಸದರಿ ದ್ವಿಚಕ್ರ ವಾಹನವನ್ನು ಆಸಾಮಿಯು ಕಳ್ಳತನ ಮಾಡಿ ತಂದಿರಬಹುದೆಂದು ಅನುಮಾನ ಬಂದು ಸದರಿ ಆಸಾಮಿಯನ್ನು ವಾಹನದೊಂದಿಗೆ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯಾಗಿರುತ್ತೆ.

2.ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.62/2021 ಕಲಂ. 341,323,324,504,506,34 ಐ.ಪಿ.ಸಿ :-

     ದಿನಾಂಕ: 07/02/2021 ರಂದು ಸಂಜೆ 7.00 ಗಂಟೆಗೆ ಶ್ರೀಮತಿ ಭಾರತಮ್ಮ ಕೋಂ ಶಿವ, 34 ವರ್ಷ, ಬಲಜಿಗರು, ಗೃಹಣಿ, ಜಲದೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾವು ತಮ್ಮ ಗ್ರಾಮದಲ್ಲಿ ತಮ್ಮ ಚಿಕ್ಕ ಮಾವ ಲೇಟ್ ನಾಗಪ್ಪ ರವರ ಜಮೀನಿನಲ್ಲಿ ತಮ್ಮ ಬಾಬತ್ತು ಸೀಮೆಹಸುವನ್ನು ಕಟ್ಟಿ ಹಾಕುತ್ತಿರುತ್ತೇವೆ. ಸದರಿ ನಾಗಪ್ಪ ರವರ ಜಮೀನಿನ ಪಕ್ಕದಲ್ಲಿ ತಮ್ಮ ಗ್ರಾಮದ ನಮ್ಮ ಜನಾಂಗದ ಸೀನಪ್ಪ@ಶ್ರೀನಿವಾಸಪ್ಪ ರವರ ವಾಸದ ಮನೆ ಇರುತ್ತೆ. ತಾವು ಸೀಮೆಹಸುವನ್ನು ಕಟ್ಟುವ ವಿಚಾರದಲ್ಲಿ ಹಲವಾರು ಬಾರಿ ತಮಗೂ ಮತ್ತು ಸೀನಪ್ಪ@ಶ್ರೀನಿವಾಸಪ್ಪ ರವರಿಗೂ ಗಲಾಟೆಗಳಾಗಿರುತ್ತೆ. ಹೀಗಿರುವಾಗ ದಿನಾಂಕ: 06/02/2021 ರಂದು ರಾತ್ರಿ 7.30 ಗಂಟೆ ಸಮಯದಲ್ಲಿ ತಾನು ಸೀಮೆಹಸುವನ್ನು ಕಟ್ಟುವ ಜಾಗದ ಬಳಿ ಹೋದಾಗ ಮೇಲ್ಕಂಡ ಸೀನಪ್ಪ@ಶ್ರೀನಿವಾಸಪ್ಪ, ಲಕ್ಷ್ಮಿದೇವಮ್ಮ ಕೋಂ ಸೀನಪ್ಪ, ಪ್ರಮೀಳ ಕೋಂ ಸೀನಪ್ಪ ಮತ್ತು ಗಂಗಮ್ಮ ಕೋಂ ಚಿಕ್ಕ ವೆಂಕಟರಾಯಪ್ಪ ರವರು ಬಂದು ತನ್ನನ್ನು ಅಡ್ಡಗಟ್ಟಿ ನೀವು ಇಲ್ಲಿ ಹಸುಗಳನ್ನು ಕಟ್ಟಿ ಹಾಕಬಾರದೆಂದು ತನ್ನ ಮೇಲೆ ಗಲಾಟೆ ಮಾಡಿ, ಅವಾಚ್ಯಶಬ್ದಗಳಿಂದ ಬೈದು, ಲಕ್ಷ್ಮಿದೇವಮ್ಮ, ಪ್ರಮೀಳ ಮತ್ತು ಗಂಗಮ್ಮ ರವರು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿದರು. ಸೀನಪ್ಪ@ಶ್ರೀನಿವಾಸಪ್ಪ ರವರು ಅಲ್ಲಿಯೇ ಬಿದ್ದಿದ್ದ ಯಾವುದೋ ದೊಣ್ಣೆಯಿಂದ ತನ್ನ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯವನ್ನುಂಟು ಮಾಡಿದರು. ಅಷ್ಠರಲ್ಲಿ ತಾನು ಕಿರುಚಾಡಿದ್ದು ಆಗ ತನ್ನ ಗಂಡ ಶಿವ ಮತ್ತು ತಮ್ಮ ಗ್ರಾಮದ ಕೃಷ್ಣಪ್ಪ ಬಿನ್ ವೆಂಕಟರವಣಪ್ಪ ರವರು ಬಂದು ಜಗಳವನ್ನು ಬಿಡಿಸಿದ್ದು, ಮೇಲ್ಕಂಡವರು ಅಲ್ಲಿಂದ ಹೋಗುವಾಗ ಇನ್ನೊಂದು ಸಾರಿ ಇಲ್ಲಿ ಹಸುವನ್ನು ಕಟ್ಟಿಹಾಕಿದರೆ ನಿನ್ನನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿ ಅಲ್ಲಿಂದ ಹೊರಟು ಹೋದರು. ನಂತರ ಗಾಯಗೊಂಡಿದ್ದ ತನ್ನನ್ನು ತನ್ನ ಗಂಡ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ಸದರಿ ಗಲಾಟೆಯ ಬಗ್ಗೆ ತಮ್ಮ ಗ್ರಾಮದ ಹಿರಿಯರು ನ್ಯಾಯಪಂಚಾಯ್ತಿ ಮಾಡೋಣ ಎಂದು ಹೇಳಿದ್ದು, ಇದುವರೆಗೂ ನ್ಯಾಯ ಪಂಚಾಯ್ತಿ ಮಾಡದ ಕಾರಣ ನಾನು ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

3. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.24/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ;07/02/2021 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿದದಾರರಾದ ಆನಂದಪ್ಪ ಬಿನ್ ಈರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ;07//02/2021 ರಂದು ಬೆಳಿಗ್ಗೆ ಸುಮಾರು 9-30 ರ ಸಮಯದಲ್ಲಿ ತನಗೆ ಬಂದ ಮೊಬೈಲ್ ಕರೆಯಿಂದ ತಿಳಿದ ವಿಷಯ್ತದಂತೆ ತನ್ನ  ಸಂಬಂದಿ ಬಾಗೇಪಲ್ಲಿ ಯಲ್ಲಿ ಸರ್ಕಾರಿ ನೌಕರಿಯಲ್ಲಿರುವ ರಂಗನಾಥ ಗೌಡ ಬಿನ್  ಲೇಟ್ ಲಕ್ಷ್ಮೀ ನಾರಾಯಣ ವಾಸ ಮದುಗಿರಿ ಟೌನ್     ರವರು ತಮ್ಮ ದ್ವಿಚಕ್ರ ವಾಹನದಲ್ಲಿ ಅಂದರೆ ಹಿರೋ ಹೋಂಡಾ ಸ್ಪೆಂಡರ್ ಸಂಖ್ಯೆ KA02 -EU -4498 ಈ ವಾಹಹನವನ್ನು ಚಾಲನೆ ಮಾಡಿಕೊಂಡು  ಬಾಗೇಪಲ್ಲಿ ಯಿಂದ ಮಧುಗಿರಿಗೆ ಹೋಗುತ್ತಿರುವಾಗ ಮಾರ್ಗ ಮದ್ಯೆದಲ್ಲಿ ಅಂದರೆ  ಗುಂಡಾಪುರ ಬಸ್ ನಿಲ್ದಾಣ ದಿಂದ ಸ್ವಲ್ಪ ಮುಂದೆ ಹೋಗುತ್ತಿರುವಾಗ ಎದುರುಗಡೆಯಿಂದ ಬರುತ್ತಿದ್ದ  ಐಚರ್ ವಾಹನ  ಸಂಖ್ಯೆ KA16 -D-4353 ಇದರ ಚಾಲಕನು ಈ  ಐಚರ್ ವಾಹನ ವನ್ನು  ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕಿನಲ್ಲಿ ಹೋಗುತ್ತಿದ್ದ ರಂಗನಾಥ ಗೌಡ ರವರ ದ್ವಿಚಕ್ರ ವಾಹಹನಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ ತೀವ್ರತರವಾದ ಪೆಟ್ಟು ಆಗಿದ್ದು ಅವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು ವೈದ್ಯಾದಿಕಾರಿಗಳ ಸಲಹೆಯ ಮೇರೆಗೆ ಗಾಯಾಳುವನ್ನು ಬೆಂಗಳೂರು ಪ್ರೋ ಲೈಪ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿದ್ದು ಮೇಲೆ ಹೇಳಿದಂತೆ ತನಗೆ  ಮೊಬೈಲ್  ಕರೆ ಬಂದ ತಕ್ಷಣ ತಾನು ಸ್ಳಳಕ್ಕೆ ದಾವಿಸಿ ಅಪಘಾತ ಕೃತ್ಯದ ಬಗ್ಗೆ ತಿಳಿದುಕೊಂಡು ತದನಂತರ ಗಾಯಾಳುವನ್ನು ಬೆಂಗಳೂರು ಆಸ್ಪತ್ರೆಗೆ ಸೇರಿಸಿಬಂದು ತಡವಾಗಿ ಬಂದು ನೀಡಿದ ದೂರನ್ನು ಪಡೆದು ಪ್ರಕರಣ.

4. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.25/2021 ಕಲಂ. 286,336 ಐ.ಪಿ.ಸಿ, 5A,9B  EXPLOSIVE ACT, 1884 & 4,6 EXPLOSIVE SUBSTANCES ACT, 1908:-

     ದಿನಾಂಕ 07/02/2021 ರಂದು ಸಂಜೆ 7-45 ಗಂಟೆಗೆ ಪಿರ್ಯಾಧಿ  ಗುಡಿಬಂಡೆ ಪೊಲೀಸ್ ಠಾಣೆಯ  ಪೊಲೀಸ್ ಇನ್ಸ್ಪೇಕ್ಟರ್ ಮಂಜುನಾಥ.ಎಂ.ಎನ್. ರವರು ಠಾಣೆಗೆ ಹಾಜರಾಗಿ ಅಸಲು ಮಹಜರ್ ಹಾಗೂ ಮಾಲಿನೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈ ದಿನ ದಿನಾಂಕ:07-02-2021 ರಂದು ಸಂಜೆ:4-00 ಗಂಟೆಯಲ್ಲಿ ನಾನು ಮತ್ತು ಸಿ.ಹೆಚ್.ಸಿ-102 ಆನಂದ ರವರು ಪೆರೇಸಂದ್ರ ಕಡೆ ಗಸ್ತುನಲ್ಲಿದ್ದಾಗ ನನಗೆ ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಹೋಬಳಿ ಜೊನ್ನಲಕುಂಟೆ ಗ್ರಾಮದ  ಹೊರ ವಲಯದಲ್ಲಿರುವ  ಸರ್ವೇ ನಂ-24 ( ಹಳೆ ಸರ್ವೇ ನಂ-11/ಪಿ2 ) ರಲ್ಲಿನ 3 ಎಕರೆ 10 ಗುಂಟೆ ಜಾಗದಲ್ಲಿರುವ  ಕಲ್ಲು ಕ್ವಾರೆಗೆ ಅನುಮತಿ ಇಲ್ಲದೇ ಅಕ್ರಮವಾಗಿ ಅಪಾಯಕಾರಿ ಸ್ಪೋಟಕಗಳನ್ನು ಅಳವಡಿಸಿ ಸ್ಪೋಟಿಸಲು ಸಿದ್ದಪಡಿಸಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ಜೊತೆಯಲ್ಲಿದ್ದ  ಸಿ.ಹೆಚ್.ಸಿ-102 ಆನಂದ ರವರನ್ನು ಹಾಗೂ ಪೆರೇಸಂದ್ರ ಕ್ರಾಸ್ ನಲ್ಲಿ ಪಂಚರನ್ನು ಮತ್ತು ಮೈನಿಂಗ್ ಮೇಟ್ ವೇದ್ ಕುಮಾರ್ ಸಾಹು ರವರನ್ನು ಬರಮಾಡಿಕೊಂಡು ಸಂಜೆ 4-45 ಗಂಟೆಗೆ ತಾವುಗಳು ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1888 ರಲ್ಲಿ ಪೆರೆಸಂದ್ರ ಕ್ರಾಸ್ ನಿಂದ ಆದೇಗಾರಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಹೋಬಳಿ ಜೊನ್ನಲಕುಂಟೆ ಗ್ರಾಮದ  ಹೊರ ವಲಯದಲ್ಲಿರುವ  ಸರ್ವೇ ನಂ-24 ( ಹಳೆ ಸರ್ವೇ ನಂ-11/ಪಿ2 ) ರಲ್ಲಿನ 3 ಎಕರೆ 10 ಗುಂಟೆ ಜಾಗದಲ್ಲಿರುವ ಶ್ರೀ ಶಿರಡಿ ಸಾಯಿ ಅಗ್ರಿಗೇಟ್  ಕಲ್ಲು ಕ್ವಾರೆಗೆ ಸಂಜೆ:5-00 ಗಂಟೆಗೆ ಹೋಗಿ ಪಂಚರ ಸಮಕ್ಷಮ ಶ್ರೀ ಶಿರಡಿ ಸಾಯಿ ಅಗ್ರಿಗೇಟ್ ಕಲ್ಲು ಕ್ವಾರೆಯನ್ನು ಪರಿಶೀಲನೆ ಮಾಡಲಾಗಿ ಕಲ್ಲು ಕ್ವಾರೆಯ ಉತ್ತರದ ಕಡೆಗೆ  ಸುಮಾರು 15*15 ಅಡಿ ವಿಸ್ತೀರ್ಣದ ಜಾಗದಲ್ಲಿ 15 ರಂದ್ರಗಳನ್ನು ಕೊರೆದು ಅಪಾಯಕಾರಿ ಸ್ಪೋಟಕಗಳನ್ನು ಅಳವಡಿಸಿರುವುದು ಕಂಡುಬಂದಿರುತ್ತೆ. ಸದರಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಆಸಾಮಿ ಇದ್ದು ಸದರಿಯವನನ್ನು ವಿಚಾರಣೆ ಮಾಡಲಾಗಿ ತನ್ನ ಹೆಸರು ಮೂರ್ತಿ ಎಂತ ತಿಳಿಸಿದ್ದು, ಸದರಿ ಕ್ವಾರಿಯ ಮಾಲಿಕ ರಾಘವೇಂದ್ರರೆಡ್ಡಿ ಮತ್ತು ನಾಗರಾಜ ರವರು ಆಗಿರುತ್ತಾರೆ, ಸದರಿ ಸ್ಪೋಟಕವನ್ನು ಈ ಹಿಂದೆ ಗಂಗೋಜಿ ರಾವ್ ಎಂಬುವರು ಸರಬುರಾಜು ಮಾಡಿರುತ್ತಾನೆಂದು ತಿಳಿಸಿದನು, ಸ್ಥಳದಲ್ಲಿ ಸ್ಪೋಟಕ ತಂದ ವಾಹನವಾಗಲೀ ಸ್ಪೋಟಕವನ್ನು ಸರಬರಾಜು  ಮಡಿರುವ ಅಸಾಮಿಯಾಗಲೀ ಸ್ಥಳದಲ್ಲಿ ಇರುವುದಿಲ್ಲ. ಹಾಗೂ ಸ್ಪೋಟಕ ಸರಬರಾಜು ಮಾಡುವವನೊಂದಿಗೆ ಹಾಗೂ ಸ್ಪೋಟಕಗೊಳಿಸುವ ವ್ಯಕ್ತಿಯೊಂದಿಗೆ ಮಾಡಿಕೊಂಡಿರುವ  ಒಪ್ಪಂದ ಪತ್ರವನ್ನು ಹಾಜರುಪಡಿಸಲು ಸೂಚಿಸಿದ್ದು, ತನ್ನ ಬಳಿ ಅಂತಹ ಯಾವುದೇ ದಾಖಲಾತಿ ಇರುವುದಿಲ್ಲವೆಂತ ತಿಳಿಸಿ ವಿಚಾರಣೆ ಮಾಡುವಷ್ಟರಲ್ಲಿ ಸದರಿ ಆಸಾಮಿ ಸ್ಥಳದಿಂದ ಓಡಿ ಪರಾರಿಯಾಗಿರುತ್ತಾನೆ. ಈ ಸ್ಪೋಟಕಗಳನ್ನು ಬಳಸಿ ಕಲ್ಲು ಬಂಡಿಗಳನ್ನು ಸ್ಪೋಟಿಸಲು  ಮಾಹಿತಿ ನೀಡಿರುವುದಿಲ್ಲ ನಂತರ ಮೈನಿಂಗ್ ಮೇಟ್ ವೇದ್ ಕುಮಾರ್ ರವರ ಸಹಾಯದಿಂದ ರಂದ್ರಗಳಲ್ಲಿದ್ದ  ಸ್ಪೋಟಕಗಳಿಗೆ ಅಳವಡಿಸಿರುವ ತಂತಿಗಳನ್ನು ಹೊರತೆಗೆದು 14 ರಂದ್ರಗಳಿಂದ ಸುಮಾರು 125 ಗ್ರಾಂ ತೂಕ, ಸುಮಾರು 6 ಇಂಚು ಉದ್ದವಿರುವ ಸುಮಾರು 1.1/2 ಇಂಚು ದಪ್ಪ ಇರುವ 14 ಜಿಲೆಟಿನ್ ಜೆಲ್ ಟ್ಯೂಬ್ ಗಳು ಇದರ ಜೊತೆಗೆ ಇದ್ದ 17 ಎಲೆಕ್ಟ್ರಿಕ್ ಡಿಟೋನೇಟರ್ ವೈರ್ಗಳನ್ನು ಹೊರ ತೆಗೆದಿರುತ್ತೆ. ಹಾಗೂ ಈ ಸ್ಥಳದಲ್ಲಿ ಸ್ಪೋಟಕಗಳಿಗೆ ಕನೆಕ್ಷನ್  ನೀಡಲು ಉಪಯೋಗಿಸಿದ್ದ ಒಂದು ಬಂಡಲ್ ವೈರ್ ಇರುತ್ತೆ. ಈ ಜೆಲ್ ಟ್ಯೂಬ್ ಗಳನ್ನು ಜಿಲೆಟಿನ್ ವೈರ್ ಗಳನ್ನು ಅಳವಡಿಸಿದ್ದ ರಂದ್ರಗಳನ್ನು ಪರಿಶೀಲಿಸಿದಾಗ  ಪ್ರತಿಯೊಂದು  ರಂದ್ರವು ಸುಮಾರು 2 ಅಡಿಯಿಂದ 2.1/2 ಅಡಿಗಳಷ್ಟು ಆಳ ಸುಮಾರು 2 ಇಂಚು ಅಗಲವಿರುತ್ತದೆ. ಹಾಗೂ ಇದೇ ಜಾಗದಿಂದ ಪಶ್ಚಿಮಕ್ಕೆ  ಸುಮಾರು 15 ಅಡಿ ಆಳ ಮತ್ತು 6 ಇಂಚು ಅಗಲದ 7 ರಂದ್ರಗಳನ್ನು ಕೊರೆದಿರುವುದು ಕಂಡು ಬರುತ್ತೆ. ಈ ಸ್ಥಳದ ಸುತ್ತಮುತ್ತ ಸ್ಪೋಟಕಗಳನ್ನು  ಇಟ್ಟು ಬಂಡೆಗಳನ್ನು ಹೊಡೆದಿರುವ ನಿಶಾನೆಗಳು ಇರುತ್ತದೆ. ನಂತರ ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆಯನ್ನು ಪಡೆಯದೇ ಸ್ಪೋಟಿಸಲು ಸಿದ್ದಪಡಿಸಿದ್ದ ರಂದ್ರಗಳಿಂದ ಹೊರತೆಗೆದಿರುವ 14 ಜೆಲ್ ಟ್ಯೂಬ್ ಗಳು, 17 ಜಿಲೆಟಿನ್  ಇ ಡಿ  ವೈರ್ ಗಳನ್ನು ಮತ್ತು ಒಂದು ಬಂಡಲ್ ವೈರನ್ನು ಸಂಜೆ:5-15 ಗಂಟೆಯಿಂದ ಸಂಜೆ:6-45 ಗಂಟೆಯವರಿಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು, ಯಾವುದೇ ಅನುಮತಿಯನ್ನು ಪಡೆಯದೇ ಕಾನೂನು ಬಾಹಿರವಾಗಿ ಸ್ಪೋಟಕಕ್ಕೆ ಉಪಯೋಗಿಸುವ ಮೇಲ್ಕಂಡ ಸ್ಪೋಟಕಗಳನ್ನು ಅಳವಡಿಸಿ ಸ್ಪೋಟಿಸಲು ಸಿದ್ದಪಡಿಸಿದ್ದ ಮೂರ್ತಿ ಹಾಗೂ ಶ್ರೀ ಶಿರಡಿ ಸಾಯಿ ಅಗ್ರಿಗೇಟ್ ಕಲ್ಲು ಕ್ವಾರೆಯ ಮಾಲಿಕರಾದ ರಾಘವೇಂದ್ರ ರೆಡ್ಡಿ, ನಾಗರಾಜು ಹಾಗೂ ಸ್ಪೋಟಕಗಳನ್ನು ಸರಬುರಾಜು ಮಾಡಿದ್ದ ಗಂಗೋಜಿರಾವ್ ನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

5.ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.26/2021 ಕಲಂ. 279,337 ಐ.ಪಿ.ಸಿ & 134 INDIAN MOTOR VEHICLES ACT:-

     ದಿನಾಂಕ:07.02.2021 ರಂದು ಮದ್ಯಾಹ್ನ 3.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಂಜುನಾಥ ಡಿ.ವಿ ಬಿನ್ ಲೇಟ್ ವೆಂಕಟಚಲಪತಿ, 39 ವರ್ಷ, ನಂ 468, ಟ್ಯಾಂಕ್ ರಸ್ತೆ, ತೂಬಗೆರೆ ಪೇಟೆ, ದೊಡ್ಡಬಳ್ಳಾಪುರ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:07.02.2021 ರಂದು ಮದ್ಯಾಹ್ನ 1.00 ಗಂಟೆ ಸಮಯದಲ್ಲಿ ನಾನು ನನ್ನ ಬಾಬತ್ತು ಕೆಎ-53-ಪಿ-9400 ಸ್ಯಾಂಟ್ರೋ ಕಾರಿನಲ್ಲಿ ದೊಡ್ಡಬಳ್ಳಾಪುರ ಎಸ್.ಹೆಚ್-9 ರಸ್ತೆ ಮಾರ್ಗವಾಗಿ ಗೌರಿಬಿದನೂರಿಗೆ ಹೋಗಲು ಬರುತ್ತಿರುವಾಗ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹತ್ತಿರ ಅಲ್ಲೀಪುರ ಕ್ರಾಸ್ ಬಳಿ ವಿರುದ್ದ ದಿಕ್ಕಿನಲ್ಲಿ ಬಂದ ಕೆಎ-01-ಎಜೆ-4011 ಬಲ್ಕರ್ ಲಾರಿ ಚಾಲಕ ಲಾರಿಯನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ನನ್ನ ಕಾರಿಗೆ ಡಿಕ್ಕಿ ಹೊಡೆದಿದ್ದು ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದ್ದು ಆಗ ಲಾರಿಯ ಚಾಲಕ ನಮ್ಮ ಮೇಲೆ ಗಲಾಟೆಗೆ ಬಂದಾಗ ಅಲ್ಲಿಯ ಸ್ಥಳೀಯರು ಸೇರಿ ಅವನದೇ ತಪ್ಪು ಎಂದಾಗ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದು ಈ ಅಪಘಾತದಿಂದ ನನ್ನ ಪತ್ನಿಯಾದ ಶ್ರೀಮತಿ ಕೆ.ಸಿ ಪ್ರಮೀಳ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಘಾತ ಪಡಿಸಿದ ಕೆಎ-01-ಎಜೆ-4011 ಬಲ್ಕರ್ ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

6. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.27/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:07/02/2021 ರಂದು ರಾತ್ರಿ 7-00 ಗಂಟೆಗೆ ಠಾಣಾ ಹೆಚ್.ಸಿ.76 ರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುವಾದ ಶ್ರೀ ಕೆ.ಶಿವ ಬಿನ್ ರಾಮಾಂಜಿನಪ್ಪ ರವರಿಂದ ಹೇಳಿಕೆಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ದಿನಾಂಕ:07/02/2021 ರಂದು ನಮ್ಮ ಬಾಬತ್ತು KA-40, EA-5332 ನೊಂದಣಿ ಸಂಖ್ಯೆಯ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ನನ್ನ ಅಕ್ಕಳಾದ ಎಸ್.ರೂಪ ಬಿನ್ ಸುರೇಶ್, 25 ವರ್ಷ, ಪ್ರಶಾಂತ್ ನಗರ ಗೌರಿಬಿದನೂರು ಟೌನ್ ರವರೊಂದಿಗೆ ದೊಡ್ಡಬಳ್ಳಾಪುರದ ಮಾಕಳಿಗೆ ಹೋಗಿ ಕೆಲಸವನ್ನು ಮುಗಿಸಿಕೊಂಡು ಮನೆಗೆ ವಾಪಾಸ್ ಬೆಂಗಳೂರು-ಗೌರಿಬಿದನೂರು ಎಸ್.ಹೆಚ್-9 ರಸ್ತೆಯ ತೊಂಡೇಬಾವಿಯ ಹೆಚ್.ಪಿ.ಪೆಟ್ರೋಲ್ ಬಂಕ್ ಬಳಿ ಸಂಜೆ 5-30 ಗಂಟೆಯ ಸಮಯದಲ್ಲಿ ಬರುತ್ತಿರುವಾಗ ಅದೇ ಸಮಯಕ್ಕೆ ಹೆಚ್.ಪಿ.ಪೆಟ್ರೋಕ್ ಬಂಕ್ ಕಡೆಯಿಂದ KA-43, K-3947 ನೊಂದಣಿ ಸಂಖ್ಯೆಯ ಸೂಪರ್ ಎಕ್ಸ್.ಎಲ್ ವಾಹನ ಬರುತ್ತಿದ್ದು, ಆಗ ಗೌರಿಬಿದನೂರು ಕಡೆಯಿಂದ ಬಂದ KA-03, MA-2738 ನೊಂದಣಿ ಸಂಖ್ಯೆಯ ಕಾರಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎರಡೂ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆಸಿದಾಗ ನಾವುಗಳು ಕೆಳಗೆ ಬಿದ್ದು, ನನಗೆ ತಲೆಗೆ ಕುತ್ತಿಗೆ ಕೈಗಳಿಗೆ ಗಾಯಗಳಾಗಿ ನನ್ನ ಅಕ್ಕಳಿಗೆ ಎರಡೂ ಕಾಲಿನ ಮೊಣಕಾಲುಗಳಿಗೆ ಗಾಯಗಳಾಗಿದ್ದು, ಟಿ.ವಿ.ಎಸ್ ಎಕ್ಸ್ ಎಲ್ ವಾಹನದ ಸವಾರನ ಹೆಸರು ವಿಳಾಸ ಕೇಳಲಾಗಿ ಗಂಗಾಧರಪ್ಪ ಬಿನ್ ಲೇಟ್ ವೆಂಕಟರವಣಪ್ಪ 65 ವರ್ಷ, ಲಿಂಗಾಯಿತರು, ಜಿರಾಯ್ತಿ, ಪೆದ್ದನಹಳ್ಳಿ ಗ್ರಾಮ ನಗರಗೆರೆ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವರಿಗೆ ಎಡಕಾಲಿನ ಪಾದಕ್ಕೆ ತಲೆಗೆ ಮತ್ತು ನಡುಗೆ ಗಾಯಗಳಾಗಿದ್ದು, ಗಾಯಾಳುಗಳಾದ ನಮ್ಮನ್ನು ಅಲ್ಲಿಗೆ ಬಂದ ಸ್ಥಳಿಯರು ಉಪಚರಿಸಿ ಅಲ್ಲಿಗೆ ಬಂದ ಹೈವೆ ಪಟ್ರೋಲ್ ಅಂಬ್ಯೂಲೇನ್ಸ್ ನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು, ನಮಗೆ ಅಪಘಾತ ಪಡಿಸಿದ KA-03, MA-2738 ನೊಂದಣಿ ಸಂಖ್ಯೆಯ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ಹೇಳಿಕೆ ದೂರು.

7. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.28/2021 ಕಲಂ. 379  ಐ.ಪಿ.ಸಿ:-

     ದಿನಾಂಕ: 08/02/2021 ರಂದು ಮದ್ಯಾಹ್ನ 14-45 ಗಂಟೆಗೆ ಪಿರ್ಯಾದಿದಾರರಾದ ಟಿ ಶಿವಾರೆಡ್ಡಿ ಬಿನ್ ಲೇಟ್ ತಿಪ್ಪಾರೆಡ್ಡಿ, 47 ವರ್ಷ, ವಕ್ಕಲಿಗರು, ವೆಂಕಟರಾಪುರ ಗ್ರಾಮ, ಡಿಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ: 06/02/2021 ರ ರಾತ್ರಿ ಮನೆಯ ಪಕ್ಕದಲ್ಲಿ ರೇಕುಗಳ ಶೆಡ್ಡಿನ ಕೆಳಗಡೆ ಕಟ್ಟಿ ಹಾಕಿದ್ದ HF ಇಂಗ್ಲೀಷ್ ಪೀಡ್ ತಳಿಯ ಇಯಾಲು ಆಗಿರುವ ಸುಮಾರು 50,000 ರೂ ಬೆಲೆ ಬಾಳುವ ಹಸು ಮತ್ತು HF ತಳಿಯ ಬಿಳಿ ಮತ್ತು ಕಪ್ಪು ಮಚ್ಚೆಗಳುಳ್ಳ ಸುಮಾರು 25,000 ರೂ ಬೆಲೆ ಬಾಳುವ ಕರು ಕಟ್ಟಿ ಹಾಕಿದ್ದು ರಾತ್ರಿ ಸುಮಾರು 2 ಗಂಟೆಗೆ ಎದ್ದು ಹಸುಗಳಿಗೆ ಮೇವು ಹಾಕಲು ನೋಡಿದಾಗ ಹಸು, ಕರು ಕಾಣಿಸಲಿಲ್ಲಾ ಹಗ್ಗಗಳನ್ನು ಕೊಯ್ದು ಹಾಕಿ ಹಸು ಮತ್ತು ಕರುವನ್ನು ಕಳ್ಳತನದಿಂದ ಹೊಡೆದುಕೊಂಡು ಹೋಗಿರುತ್ತಾರೆ ನಾನು ಗ್ರಾಮದ ಸುತ್ತ ಮುತ್ತ ಹುಡುಕಾಡಿದೆ ಸಿಗಲಿಲ್ಲ ಹಸು ಮತ್ತು ಕರುವನ್ನು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ಪ್ರ.ವ.ವರದಿ.

8. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.13/2021 ಕಲಂ. 279,304(A)  ಐ.ಪಿ.ಸಿ:-

     ದಿನಾಂಕ 07-02-2021 ರಂದು ರಾತ್ರಿ 9-00 ಗಂಟೆಗೆ ಪಿರ್ಯಾದಿಯಾದ ಶ್ರೀ, ಗೋಪಾಲ್ ಬಿನ್ ಲೇಟ್ ನಾರಾಯಣಪ್ಪ ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ತನ್ನಣ್ಣ ಮಾರೇಗೌಢ ಎಂಬುವರಿಗೆ ಇಬ್ಬರು ಮಕ್ಕಳು 1 ನೆ ನಿಖಿಲ್ ಗೌಡ ಮತ್ತು 2ನೆ ಸಹನ ಎಂಬ ಮಕ್ಕಳಿದ್ದು ಅವರ ಕುಟುಂಬವು  ವ್ಯವಸಾಯವನ್ನು ಅವಲಂಬಿಸಿರುತ್ತದೆ ಅವರ ಮಗನು ಬಿಬಿ ಎಂ ವ್ಯಾಸಾಂಗ ಮಾಡಿದ್ದು ನಿಖೀಲ್ ಗೌಡನು ಕಾಲೇಜನ್ನು ಮುಗಿಸಿ  ದೇವನಹಳ್ಳಿಯಲ್ಲಿ ಮದ್ಯಾಹ್ನ 2-00 ಗಂಟೆಯಿಂದ ಸಂಜೆ 5-00 ಗಂಟೆಯವರೆವಿಗೆ ಟ್ಯೂಷನ್ಗೆ KA-50-V-7735 ನೊಂದಣಿಯ ದ್ವಿಚಕ್ರ ವಾಹನದಲ್ಲಿ  ಹೋಗಿ ಬರುತ್ತಿದ್ದನು, ಎಂದಿನಂತೆ ಈ ದಿನ ತನ್ನ ದ್ವಿಚಕ್ರ ವಾಹನದಲ್ಲಿ ಹೋದನು ತಾನು ಸಂಜೆ 5-45 ಗಂಟೆಯ ಸಮಯದಲ್ಲಿ  ತೋಟದ ಕೆಲಸದಲ್ಲಿದ್ದಾಗ  ಹುರುಳಗುರ್ಕಿ  ಗ್ರಾಮದ ಚಂದ್ರಪ್ಪ ಬುವರು ನನಗೆ [ಪೋನ್ ಮಾಡಿ ತಿಳಿಸಿದ  ವಿಚಾರವೇನೆಂದರೆ  ಸಂಜೆ 17-30 ಗಂಟೆಯ ಸಮಯದಲ್ಲಿ ನಿಖೀಲ್ ಗೌಡನು ತನ್ನ ದ್ವಿಚಕ್ರ ವಾಹನದಲ್ಲಿ ದೇವನಹಳ್ಳಿ ಕಡೆಯಿಂದ  ಸರ್ವೀಸ್ ರಸ್ತೆಯಲ್ಲಿ ಬರುತ್ತಿದ್ದಾಗ  ನಾಗಾರ್ಜುನ ಕಾಲೇಜಿನ ಕಡೆಯಿಂದ KA-40-TA-5177 ನೊಂದಣಿಯ ಟ್ರಾಕ್ಟರ್ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ  ಮಾಡಿಕೊಂಡು ಬಂದು  ಯಾವುದೇ ಮುನ್ಸೂಚನನೆ ಇಲ್ಲದೆ ಹುರುಳಗುರ್ಕಿ  ಕಡೆ ತಿರುಗಿಸುವಾಗ  ನಿಖಿಲ್ ಗೌಡನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತ ಮಾಡಿದನು. ದ್ವಿಚಕ್ರ ವಾಹನ ಜಖಂ ಆಗಿ ಸ್ಥಳದಲ್ಲಿದ್ದ   ತಾನು ಹಾಗೂ ನಮ್ಮ ಗ್ರಾಮದ ಮುನಿಕೃಷ್ಣಪ್ಪ ರವರು ಹೋಗಿ ನೋಡಲಾಗಿ  ನಿಖಿಲ್ ಗೌಡನ ತಲೆಗೆ ತೀರ್ವತರವಾದ ರಕ್ತ ಗಾಯವಾಗಿ ಕೈ ಕಾಲುಗಳಿಗೆ ರಕ್ತಗಾಯಗಳಾಗಿದ್ದು  ನಾವುಗಳು ನಿಖೀಲ್ ಗೌಡನನ್ನು ಉಪಚರಿಸುತ್ತಿದ್ದಾಗ  ಟ್ರಾಕ್ಟರ್ ಚಾಲಕ ಜನಸೇರಿದ್ದು  ಟ್ರಾಕ್ಟರನ್ನು ಸ್ಥಳದಲ್ಲಯೇ ಬಿಟ್ಟು ಪರಾರಿಯಾಗಿ ಹೊರಟುಹೋದನು, ತಕ್ಷಣ ನಿಖಿಲ್ ಗೌಡನನ್ನು  ಬೀರಗಾನಹಳ್ಳಿ ಗ್ರಾಮ ಮುನಿರಾಜು ರವರ  ಕಾರಿನಲ್ಲಿ ದೇವನಹಳ್ಳಿ ಆಸ್ಪತ್ರಗೆ  ಕಳುಹಿಸಿಕೊಟ್ಟಿರುವುದಾಗಿ ಬೇಗ ಬರುವಂತೆ ತಿಳಿಸಿದನು,   ಕೂಡಲೆ ತಾನು ಹಾಗೂ ತನ್ನಣ್ಣನ ಮಗನಾದ ಮಾರೇಗೌಡ ರವರು  ಕೂಡಲೆ ದೇವನಹಳ್ಳಿ  ಸರ್ಕಾರಿ ಆಸ್ಪತ್ರೆಯ ಬಳಿ  ಹೋಗಿದ್ದು  ನಿಖೀಲ್ ಗೌಡನು ಮರಣಹೊಂದಿದ್ದನು,  ಹೆಣವನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಇಟ್ಟಿರುತ್ತದೆ, ಈ ಅಪಘಾತ ಮಾಡಿ ಪರಾರಿಯಾಗಿರುವ KA-40-TA-5177/5178 ನೊಂದಣಿಯ ಟ್ರಾಕ್ಟರ್  ಚಾಲಕನ ಅತಿವೇಗ ಮತ್ತು ಅಜಾಗರೂಕತೆಯೆ ಕಾರಣವಾಗಿದ್ದು  ಸದರಿ ಟ್ರಾಕ್ಟರ್ ಚಾಲಕನನ್ನು ಪತ್ತೆ ಮಾಡಿ ಅವನ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲು ಕೋರುತ್ತೇನೆ.

ಇತ್ತೀಚಿನ ನವೀಕರಣ​ : 08-02-2021 05:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080