ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.267/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ: 06/09/2021 ರಂದು ಸಂಜೆ: 5-45 ಗಂಟೆಗೆ  ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ಇನ್ಸ್ ಪೆಕ್ಟರ್, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ; 06-09-2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-134 ಧನಂಜಯ್ ಕುಮಾರ್ ಹಾಗೂ ಜೀಪ್ ಚಾಲಕ ಎ ಹೆಚ್ ಸಿ-57 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ವಾಹನದಲ್ಲಿ ಬಾಗೇಪಲ್ಲಿ ಟೌನ್, ಘಂಟಂವಾರಿಪಲ್ಲಿ, ಟೋಲ್ ಪ್ಲಾಜಾ ಕಡೆ ಗಸ್ತು ಮಾಡಿಕೊಂಡು ಕಾಶಾಪುರ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಅಸಾಮಿಯು ಪ್ಲಾಸ್ಟೀಕ್ ಚೀಲವನ್ನು ತನ್ನ ಪಕ್ಕದಲ್ಲಿ ಇಟ್ಟುಕೊಂಡು ಮದ್ಯಪಾನ ಮಾಡುತ್ತಿದ್ದು. ಸಮವಸ್ರದಲ್ಲಿದ್ದ ನಮ್ಮಗಳನ್ನು ನೋಡಿ ಪ್ಲಾಸ್ಟೀಕ್ ಚೀಲವನ್ನು ಕೈಯಲ್ಲಿ ಹಿಡಿದುಕೊಂಡು ಓಡಿ ಹೋಗುತ್ತಿದ್ದವನನ್ನು ಸಿಬ್ಬಂದಿಯಾದ ಸಿಪಿಸಿ-134 ಧನಂಜಯ್ ಕುಮಾರ್ ರವರು ಹಿಡಿದುಕೊಂಡಿದ್ದು. ಸದರಿ ಅಸಾಮಿಯ ಕೈಯಲ್ಲಿ ಒಂದು ಪ್ಲಾಸ್ಟಿಕ್ ಚೀಲವಿದ್ದು. ನಂತರ ಅಸಾಮಿಯ ಹೆಸರು ವಿಳಾಸವನ್ನು ಕೇಳಲಾಗಿ ದುರ್ಗೆಶ್ ಬಿನ್ ಚಿನ್ನ ನಾಗಪ್ಪ, 25 ವರ್ಷ, ಯರಕುಲ ಜನಾಂಗ, ವಿದ್ಯಾರ್ಥಿ ವಾಸ: ಮನೆ ನಂ-2-81, ಕೊಡಪಗನಿಪಲ್ಲಿ ಗ್ರಾಮ, ಕೊತ್ತಚೆರುವು ಮಂಡಲಂ, ಪುಟ್ಟಪರ್ತಿ ತಾಲ್ಲೂಕು, ಅನಂತಪುರಂ ಜಿಲ್ಲೆ, ಆಂದ್ರಪ್ರದೇಶ ಎಂದು ತಿಳಿಸಿದ್ದು. ನಂತರ ರಸ್ತೆಯಲ್ಲಿ ಬಾಗೇಪಲ್ಲಿ ಕಡೆಯಿಂದ ಗುಡಿಬಂಡೆಯ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನದ ಸವಾರರನ್ನು ನಿಲ್ಲಿಸಿ ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ಸ್ಥಳದಲ್ಲಿ ಪಂಚನಾಮೆ ಜರುಗಿಸಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಅಸಾಮಿಯ ಕೈಯಲ್ಲಿದ್ದ ಪ್ಲಾಸ್ಟೀಕ್ ಚೀಲವನ್ನು ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 18 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  ಇವುಗಳು  ಒಟ್ಟು 1 ಲೀಟರ್ 620 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 632/-ರೂ ಗಳಾಗಿರುತ್ತೆ. ಸದರಿ ಅಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ನಿಮ್ಮ ಬಳಿ ಯಾವುದಾದರು ಪರವಾನಗಿ ಇದೆಯೇ? ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿರುತ್ತಾರೆ. ನಂತರ ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಸಂಜೆ 5-45 ಗಂಟೆಗೆ ಠಾಣೆಯಲ್ಲಿ   ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.268/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ: 06/09/2021 ರಂದು ಸಂಜೆ 19-15 ಗಂಟೆಗೆ HC-50 ನರಸಿಂಹಮೂರ್ತಿ, ಡಿಸಿಬಿ-ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ನಾನು ಮತ್ತು ಮಂಜುನಾಥ ಸಿಪಿಸಿ-531 ರವರು ಈ ದಿನ ದಿನಾಂಕ:06.09.2021 ರಂದು ನಮ್ಮ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ ರಾಜಣ್ಣರವರ ಆದೇಶದಂತೆ  ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಬಾಗೇಪಲ್ಲಿ ತಾಲ್ಲೂಕಿನ ಬಾಗೇಪಲ್ಲಿ ಪುರದ ಬಸ್ ನಿಲ್ದಾಣ, ಟಿ.ಬಿ ಕ್ರಾಸ್ ಕಡೆ ಗಸ್ತುಮಾಡಿಕೊಂಡು ಸಂಜೆ 6.00 ಗಂಟೆಗೆ ಏಟಿಗಡ್ಡಪಲ್ಲಿಯ ಬಳಿ ಬಂದಾಗ ಬಾತ್ಮಿದಾರರಿಂದ ಬಂದ ಮಾಹಿತಿಯೇನೆಂದರೆ, ಬಾಗೇಪಲ್ಲಿ ಪುರದ ಐ.ಬಿ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಆಸಾಮಿಗಳು ಮದ್ಯಪಾನ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಸಂಜೆ 6.15 ಗಂಟೆಗೆ ಪಂಚರೊಂದಿಗೆ ಮೇಲ್ಕ=ಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಕೆಲವರು ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಮದ್ಯಪಾನಮಾಡುತ್ತಿದ್ದು, ನಮ್ಮಗಳನ್ನು ನೋಡಿ ಓಡಿಹೋದರು. ಸದರಿ  ಸ್ಥಳದಲ್ಲಿ ಒಬ್ಬ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ತಬ್ರೇಜ್ ಬಿನ್ ಬಾಬು, 30 ವರ್ಷ, ಮುಸ್ಲಿಂ, ಸೆಂಟ್ರಿಂಗ್ ಕೆಲಸ, ವಾಸ: 20ನೇ ವಾರ್ಡ್ , ಬಾಗೇಪಲ್ಲಿ ಪುರ ಎಂತ ತಿಳಿಸಿದನು, ಸದರಿ ಆಸಾಮಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನಮಾಡುತ್ತಿರುವ ಬಗ್ಗೆ ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂತ ತಿಳಿಸಿದನು. ಸದರಿ ಸ್ಥಳದಲ್ಲಿ ದೊರೆತ 18 ಮದ್ಯ ತುಂಬಿರುವ HAYWARDS CHEERS WHISKY ಯ ಟೆಟ್ರಾ ಪಾಕೆಟ್ ಗಳು, ಒಂದು ಖಾಲಿ ವಾಟರ್ ಬಾಟಲ್, 2 ಖಾಲಿ HAYWARDS CHEERS WHISKY ಯ ಟೆಟ್ರಾ ಪಾಕೆಟ್ ಗಳಿದ್ದು, ಸದರಿ ಸ್ಥಳದಲ್ಲಿ ಪಂಚನಾಮೆಯ ಮೂಲಕ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು. ನಂತರ ಸದರಿ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ, ಆರೋಪಿ ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕಾನೂನುರೀತ್ಯಾ ಕ್ರಮಜರುಗಿಸಲು ಕೋರಿ ನೀಡಿದ ವರದಿ.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.269/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:07/09/2021 ರಂದು ಬೆಳಿಗ್ಗೆ 9-30ಗಂಟೆಗೆ  ಶ್ರೀ ಗೋಪಾಲರೆಡ್ಡಿ ಪಿಎಸ್ಐ, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ   ಈ ದಿನ ದಿನಾಂಕ; 07-09-2021 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿಯಾದ ಪಿಸಿ-103 ಬಯ್ಯಾರೆಡ್ಡಿ ಪಿಸಿ-176 ಶಶಿಕುಮಾರ್ ಹಾಗೂ ಜೀಪ್ ಚಾಲಕ ಎ ಹೆಚ್ ಸಿ-14 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ವಾಹನದಲ್ಲಿ ಬಾಗೇಪಲ್ಲಿ ತಾಲ್ಲೂಕು, ಮಿಟ್ಟೇಮರಿ, ಚೊಕ್ಕಂಪಲ್ಲಿ, ಮೂಗಚಿನ್ನೇಪಲ್ಲಿ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ, ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು, ಮಿಟ್ಟೇಮರಿ ಹೋಬಳಿ, ಸೋಲಿಮಾಕಲಪಲ್ಲಿ ಗ್ರಾಮದ ಬಳಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಪಿಸಿ-103 ಬಯ್ಯಾರೆಡ್ಡಿ ಪಿಸಿ-176 ಶಶಿಕುಮಾರ್ ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಹೊರಟು, ಸೋಲಿಮಾಕಲಪಲ್ಲಿ ಗ್ರಾಮದ ಬಳಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಬೆಳಿಗ್ಗೆ 8-15 ಗಂಟೆಗೆ ಸೋಲಿಮಾಕಲಪಲ್ಲಿ ಗ್ರಾಮದ ಬಳಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿ ಮುಂಭಾಗದಲ್ಲಿದ್ದ ಅಸಾಮಿಯು ಓಡಿ ಹೋಗುತ್ತಿದ್ದವನ್ನು ಸಿಬ್ಬಂದಿಯಾದ ಬಯ್ಯಾರೆಡ್ಡಿ ರವರು ಹಿಡಿದುಕೊಂಡಿದ್ದು, ಅಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ನರಸಿಂಹಪ್ಪ ಬಿನ್ ಲೇಟ್ ನರಸಿಂಹಪ್ಪ, 60ವರ್ಷ, ಆದಿಕರ್ನಾಟಕ, ಚಿಲ್ಲರೇ ಅಂಗಡಿ ವ್ಯಾಪಾರ, ವಾಸ: ಸೋಲಿಮಾಕಲಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದುಬಂದಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಬೆಳಿಗ್ಗೆ 9-30  ಗಂಟೆಗೆ ಠಾಣೆಯಲ್ಲಿ   ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.84/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ 06/09/2021 ರಂದು ಶ್ರೀ ಕೆ.ಆರ್ ಪ್ರತಾಪ್ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ತಾನು  ದಿನಾಂಕ:06/09/2021 ರಂದು ಮದ್ಯಾಹ್ನ ಸುಮಾರು 2-00 ಗಂಟೆಗೆ ಸಿಬ್ಬಂದಿಯವರಾದ ಪಿಸಿ-148 ಧನುಂಜಯ,  ಜೀಪ್ ಚಾಲಕ ಎಪಿಸಿ-87 ಮೋಹನ್ ಕುಮಾರ್ ರವರೊಂದಿಗೆ ಚೇಳೂರು ಪೊಲೀಸ್ ಠಾಣಾ ಸರಹದ್ದು ಪುಲಗಲ್ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಸದರಿ ಗ್ರಾಮದಲ್ಲಿ ಮನೆಯ ಮುಂಬಾಗದ ಖಾಲಿ ಜಾಗದಲ್ಲಿ ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-42 ಜಿ-61 ರಲ್ಲಿ ಪುಲಗಲ್ ಗ್ರಾಮದ ರಾಜಪ್ಪ ಬಿನ್ ಲೇಟ್ ಲಕ್ಷ್ಮಣ್ ರವರ ಮನೆಯ ಮುಂಬಾಗದ ಖಾಲಿ ಜಾಗದ ಬಳಿಗೆ ಹೋಗಲಾಗಿ ನಾವು ಹೋಗಿದ್ದ  ಜೀಪನ್ನು ನೋಡಿ ಮನೆಯ ಮುಂಬಾಗದ  ಖಾಲಿ ಜಾಗದಲ್ಲಿದ್ದವರು  ಓಡಿ ಹೋಗಿದ್ದು.  ಮನೆಯ  ಮಾಲೀಕನ ಹೆಸರು ವಿಳಾಸ ತಿಳಿಯಲಾಗಿ ರಾಜಪ್ಪ ಬಿನ್ ಲೇಟ್ ಲಕ್ಷ್ಮಣ್. 48 ವರ್ಷ, ಈಡಿಗ ಜನಾಂಗ, ವ್ಯಾಪಾರ, ಪುಲಗಲ್ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ.  ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ  16  ಹೈ ವಾರ್ಡ್ಸ್   ವಿಸ್ಕಿ ಮದ್ಯದ ಟೆಟ್ರಾ ಪಾಕಟೆ ಗಳು (ಸುಮಾರು  562/- ರೂ ಬೆಲೆ ಬಾಳುವುದಾಗಿರುತ್ತೆ,) ಮತ್ತು 01 ಲೀಟರ್ ನ 01 ನೀರಿನ ಖಾಲಿ ಬಾಟಲ್ ಮತ್ತು 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ ಖಾಲಿ 90 ಮಿ,ಲೀಟರ್ ನ  01  ಹೈ ವಾರ್ಡ್ಸ್ ವಿಸ್ಕಿ ಟೆಟ್ರಾ ಪಾಕೆಟ್ ಗಳು ಇದ್ದು  ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿಯನ್ನು ಪಡೆದಿರುವುದಿಲ್ಲ.  ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿ ಮೇಲ್ಕಂಡವನ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.146/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:06.09.2021 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಮಾನ್ಯ ಪಿ,ಎಸ್,ಐ ರವರು ಠಾಣೆಯಲ್ಲಿ ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:06.09.2021 ರಂದು ಸಂಜೆ 6-50 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಮೈಲಪ್ಪನಹಳ್ಳಿ ಗ್ರಾಮದ ರಸ್ತೆಯ ಬಳಿ ಗಂಟಿಗಾನಹಳ್ಳಿ ಗ್ರಾಮದ ವಾಸಿ ಮುದ್ದುಕೃಷ್ಣಪ್ಪ ಬಿನ್ ಚಿಕ್ಕಮುನಿಶಾಮಪ್ಪ, 50 ವರ್ಷ, ಜಿರಾಯ್ತಿ ಕೆಲಸ ವಕ್ಕಲಿಗ ಜನಾಂಗ ರವರು ಚಿಕ್ಕಬಳ್ಳಾಪುರದಿಂದ ಮೈಲಪ್ಪನಹಳ್ಳಿ ಗ್ರಾಮಕ್ಕೆ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ:15[ಎ], 32[3] ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಕೊಳ್ಳಲು  ಸೂಚಿಸಲಾಗಿದೆ ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ.

 

6. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.147/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ 07/09/2021 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ತನಗೆ ಮತ್ತು ತಮ್ಮ ಠಾಣೆಯ ಮಧು ಸಿ.ಪಿ.ಸಿ 527 ರವರುಗಳಿಗೆ ತಮ್ಮ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ನೇಮಕಮಾಡಿದ್ದು ಅದರಂತೆ ತಾವುಗಳು ಚಿಕ್ಕಬಳ್ಳಾಪುರ ತಾಲ್ಲೂಕಿನ ಸೇಟ್ ದಿನ್ನೆ, ರಾಮದೇವರ ಗುಡಿ ಕಡೆ ಗಸ್ತುಮಾಡಿಕೊಂಡು ಬೆಳಗ್ಗೆ 10-00 ಗಂಟೆಗೆ ಇನಮಿಂಚೇನಹಳ್ಳಿ ಗ್ರಾಮಕ್ಕೆ ಬಂದಾಗ ಬಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಬೆಳಗ್ಗೆ 10-20 ಗಂಟೆಗೆ ರೇಣುಮಾಕಲಹಳ್ಳಿ ಗ್ರಾಮಕ್ಕೆ ಬಂದು ಗ್ರಾಮದ ವಾಸಿಯಾದ ಚಿಕ್ಕಲ್ಲಕ್ಕಪ್ಪ ಬಿನ್ ಲೇಟ್ ಕಾಳಪ್ಪ ರವರ ಬಾಬತ್ತು ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ  ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಕೆಲವರು ಮಧ್ಯಪಾನಮಾಡುತ್ತಿದ್ದವರು  ತಮ್ಮಗಳನ್ನು ನೋಡಿ ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಚಿಲ್ಲರೆ ಅಂಗಡಿಯ ಬಳಿ ಒಬ್ಬ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಲಿಖಿತ್ ಕುಮಾರ್ ಬಿನ್ ಲೇಟ್ ಚಿಕ್ಕಲಕ್ಕಪ್ಪ, 20 ವರ್ಷ, ಕುರುಬರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ- ರೇಣುಮಾಕಲಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕ್ ಎಂದು ತಿಳಿಸಿದ್ದು ಸದರಿ ಸ್ಥಳದಲ್ಲಿ 90 ಎಂ.ಎಲ್ ನ 20 HAYWARDS CHREES WHISKY TETRA POCKET, 02 ಖಾಲಿಯಾಗಿರುವ 90 ಎಂ.ಎಲ್ ನ  HAYWARDS CHREES WHISKY TETRA POCKET ಗಳಿದ್ದು ಮಧ್ಯತುಂಬಿರುವ ಪ್ರತಿಯೊಂದರೆ ಬೆಲೆ 35.13/- ರೂ ಒಟ್ಟು 702/- ರೂ ಒಟ್ಟು ಮಧ್ಯ 1 ಲೀಟರ್ 800 ಎಂ.ಎಲ್ ಆಗಿರುತ್ತದೆ, ಆರೋಪಿ, ಮಾಲುಗಳು, ಅಸಲು ಮಹಜರನ್ನು ಠಾಣೆಗೆ ತಂದು ಹಾಜರುಪಡಿಸಿದ್ವುಗಳನ್ನು ಪಡೆದುಕೊಂಡು ಪ್ರಕರಣವನ್ನು ದಾಖಳುಮಾಡಿಕೊಂಡಿರುತ್ತೆಂದ ಈ ಪ್ರ,ವ,ವರದಿ.

 

7. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.148/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:07.09.2021 ರಂದು ಮದ್ಯಾಹ್ನ 12-40 ಗಂಟೆ ಸಮಯದಲ್ಲಿ ಮಾನ್ಯ ಪಿ,ಎಸ್,ಐ ರವರು ಠಾಣೆಯಲ್ಲಿ ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:07.09.2021 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಇಟ್ಟಪ್ಪನಹಳ್ಳಿ ಗ್ರಾಮದ ವಾಸಿ ನರಸಿಂಹಪ್ಪ ಬಿನ್ ಪಸುಲಪ್ಪ, 35 ವರ್ಷ, ಚಿಲ್ಲರೆ ಅಂಗಡಿ ವ್ಯಾಪಾರ. ಆದಿ ಕರ್ನಾಟಕ ಜನಾಂಗ. ರವರು ತನ್ನ ಚಿಲ್ಲರೆ ಅಂಗಡಿ ಬಳಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಕೊಳ್ಳಲು  ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.393/2021 ಕಲಂ. ಮನುಷ್ಯ ಕಾಣೆ:-

  ದಿನಾಂಕ 06-09-2021 ರಂದು ಮದ್ಯಾಹ್ನ 1-30 ಗಂಟೆಗೆ ಕವಿತಾ ಬಿನ್ ನವೀನ್ ಕುಮಾರ್. 36 ವರ್ಷ, ಆರ್ಯ ವೈಶ್ಯರು. ಗೃಹಿಣಿ, ವಾಸ;ತಿಮ್ಮಸಂದ್ರ ಗ್ರಾಮ. ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಈಗ್ಗೆ ಸುಮಾರು 15 ವರ್ಷಗಳ ಹಿಂದೆ ನವೀನ್ ಕುಮಾರ್ ಬಿನ್ ಜಗನ್ನಾಥ್ ಎಂಬುವವರೊಂದಿಗೆ ಮದುವೆಯಾಗಿದ್ದು, ತಮಗೆ 14 ವರ್ಷದ ಯಶ್ವಿನಿ ಎಂಬ ಹೆಣ್ಣು ಮಗಳಿರುತ್ತಾಳೆ. ತನ್ನ ಗಂಡ ತಮ್ಮ ಗ್ರಾಮದ ಪಿ.ವಿ.ಆರ್ ಸಿಲ್ಕ್ ಅಂಗಡಿಯ ಮುಂದೆ ಪಾನಿಪೂರಿ ತಳ್ಳುವ ಗಾಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾರೆ. ತನ್ನ ಗಂಡನಿಗೆ ಕುಡಿಯುವ ಚಟವಿರುತ್ತದೆ. ಹೀಗಿರುವಾಗ ಇತ್ತಿಚ್ಚೆಗೆ ತನ್ನ ಗಂಡನ ಪಾನಿಪೂರಿ ಅಂಗಡಿಗೆ ಸರಿಯಾಗಿ ವ್ಯಾಪಾರಗಳು ಆಗದ ಕಾರಣ ತನ್ನ ಗಂಡನು ಆಗ್ಗಾಗ್ಗೆ ತನ್ನ ಬಳಿ ಬಂದು ಹೇಳುತ್ತಿರುತ್ತಾರೆ. ಹೀಗಿರುವಾಗ ದಿನಾಂಕ:14-08-2021 ರಂದು ಬೆಳಿಗ್ಗೆ  8-00 ಗಂಟೆ ಸಮಯದಲ್ಲಿ ತನ್ನ ಗಂಡನು ತನಗೆ ಚಿಂತಾಮಣಿಯಲ್ಲಿ ಸ್ವಲ್ಪ ಕೆಲಸ ಇದೆ ಹೋಗಿ ಬರುತ್ತೇನೆಂದು ಮನೆಯಲ್ಲಿದ್ದ ಇದ್ದ ಇಪ್ಪತ್ತು ಸಾವಿರ ರೂ ಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ನಂತರ ಸಂಜೆಯಾದರೂ ಮನೆಗೆ ಬಾರದ ಕಾರಣ ತಾನು ತನ್ನ ಗಂಡನ ಪೋನ್ ನಂ:90661111175 ಗೆ ಕರೆ ಮಾಡಿದಾಗ ಅದು ಸ್ವೀಚ್ ಆಫ್ ಬಂದಿರುತ್ತದೆ. ನಂತರ ತಾನು ಸದರಿ ವಿಚಾರವನ್ನು ಬೆಂಗಳೂರಿನ ತನ್ನ ಅಣ್ಣನಾದ ಪುನಿತ್ ಗುರು ರವರಿಗೆ ತಿಳಿಸಿದ್ದು ಅಂದಿನಿಂದಲೂ ತಾನು ಮತ್ತು ತಮ್ಮ ಅಣ್ಣ ತನ್ನ ಗಂಡನನ್ನು ತಮ್ಮ ಗ್ರಾಮದಲ್ಲಿ ಮತ್ತು ತಮ್ಮ ನೆಂಟರ ಮನೆಗಳಲ್ಲಿ ಹುಡುಕಾಡುತ್ತಿದ್ದು ಇಲ್ಲಿಯವರೆಗೂ ಪತ್ತೇಯಾಗಿರುವುದಿಲ್ಲ, ಅದ್ದರಿಂದ ಈ ದಿನ ತಾವು ತಡವಾಗಿ ದೂರು ನೀಡುತ್ತಿದ್ದು ತಾವು ಕಾಣೆಯಾಗಿರುವ ತನ್ನ ಗಂಡನನ್ನು ಪತ್ತೇ ಮಾಡಿಕೊಡಬೇಕಾಗಿ ತಮ್ಮಲ್ಲಿ ಕೋರುತ್ತೇನೆ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.394/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ: 06/09/2021 ರಂದು ಸಂಜೆ 5.00 ಗಂಟೆಗೆ ಠಾಣೆಯ ಸಿ.ಹೆಚ್.ಸಿ-39, ಬಾಬಾಜಾನ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 06/09/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು ಹಾಗೂ ಸಿ.ಹೆಚ್.ಸಿ 09 ಅಮರೇಶ ರವರು ಠಾಣಾ ಸರಹದ್ದಿನ ಕೋನಪಲ್ಲಿ, ತಿಮ್ಮಸಂದ್ರ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3.30 ಗಂಟೆಯ ಸಮಯದಲ್ಲಿ ನಾಯನಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಮಂಜುನಾಥ ಬಿನ್ ಕೃಷ್ಣಪ್ಪ ರವರು ಅವರ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ನಾಯನಹಳ್ಳಿ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ  ನೋಡಲಾಗಿ 1) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 10 ಟೆಟ್ರಾ ಪಾಕೆಟ್ ಗಳು, 2) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು 3)ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 4)ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಓಪನ್ ಆಗಿರುವ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಮಂಜುನಾಥ ಬಿನ್ ಕೃಷ್ಣಪ್ಪ, 40 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ನಾಯನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3.45 ರಿಂದ ಸಂಜೆ 4.30 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಮಂಜುನಾಥ ಬಿನ್ ಕೃಷ್ಣಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

10. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.395/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ: 06/09/2021 ರಂದು ಸಂಜೆ 7.00 ಗಂಟೆಗೆ ಠಾಣೆಯ ಸಿ.ಹೆಚ್.ಸಿ-09, ಅಮರೇಶ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 06/09/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು ಹಾಗೂ ಸಿ.ಪಿ.ಸಿ 24 ನರೇಶ ರವರು ಠಾಣಾ ಸರಹದ್ದಿನ ಬುಕ್ಕನಹಳ್ಳಿ, ಸಿಂಗಸಂದ್ರ, ಎನ್.ಕೊತ್ತೂರು ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5.30 ಗಂಟೆಯ ಸಮಯದಲ್ಲಿ ಮುಂತಕದಿರೇನಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಶಂಕರಮ್ಮ ಕೋಂ ಚೌಡಪ್ಪ ರವರು ಅವರ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಮುಂತಕದಿರೇನಹಳ್ಳಿ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ  ನೋಡಲಾಗಿ 1) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 7 ಟೆಟ್ರಾ ಪಾಕೆಟ್ ಗಳು, 2) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು 3)ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 4)ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಓಪನ್ ಆಗಿರುವ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಶ್ರೀಮತಿ ಶಂಕರಮ್ಮ ಕೋಂ ಚೌಡಪ್ಪ, 38 ವರ್ಷ, ಬೋವಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಮುಂತಕದಿರೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 5.45 ರಿಂದ ಸಂಜೆ 6.30 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಶಂಕರಮ್ಮ ಕೋಂ ಚೌಡಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

11. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.396/2021 ಕಲಂ. 15(A)  ಕೆ.ಇ ಆಕ್ಟ್:-

  ದಿನಾಂಕ: 07/09/2021 ರಂದು ಬೆಳಿಗ್ಗೆ 11.20 ಗಂಟೆಗೆ ಠಾಣೆಯ ಸಿ.ಹೆಚ್.ಸಿ-152 ನಾಗರಾಜ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ಈ ದಿನ ದಿನಾಂಕ:07/09/2021 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ತಾನು, ಸಿ.ಪಿ.ಸಿ-509 ಚಂದ್ರಪ್ಪರವರು ಠಾಣಾ ಸರಹದ್ದಿನ ಪಾಲೇಪಲ್ಲಿ, ಅನಕಲ್ಲು ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಬೆಳಿಗ್ಗೆ 10.00 ಗಂಟೆಯ ಸಮಯದಲ್ಲಿ ಜಲದೇನಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಬೈರೆಡ್ಡಿ ಬಿನ್ ಚೌಡಪ್ಪರವರು ತನ್ನ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಅದೇ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ  ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಬೈರೆಡ್ಡಿ ಬಿನ್ ಚೌಡಪ್ಪ, 30ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಜಲದೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 10.15 ರಿಂದ 11.00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಬೈರೆಡ್ಡಿ ಬಿನ್ ಚೌಡಪ್ಪರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

12. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.166/2021 ಕಲಂ. 454,457,380 ಐ.ಪಿ.ಸಿ:-

  ದಿನಾಂಕ: 06/09/2021 ರಂದು ಪಿರ್ಯಾದಿದಾರರಾದ ಕಲ್ಪನ ಕೋಂ. ಲೇಟ್. ಮಂಜುನಾಥ, 35 ವರ್ಷ, ವಕ್ಕಲಿಗ, ಶಿಕ್ಷಕಿ ವೃತ್ತಿ,ವಾಸ: ಎನ್.ಆರ್ ಬಡಾವಣೆ, ಚಿಂತಾಮಣಿ ನಗರ ಸ್ವಂತ ಸ್ಥಳ ಎಂ.ಕೊತ್ತೂರು ಗ್ರಾಮ ಶ್ರೀನಿವಾಸಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ತಾನು ಬಾಗೇಪಲ್ಲಿ ತಾಲ್ಲೂಕಿನ ಚಾಕವೇಲು ಗ್ರಾಮದಲ್ಲಿರುವ ಸಕರ್ಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಮ್ಮ ಸ್ವಂತ ಊರು ಶ್ರೀನಿವಾಸಪುರ ತಾಲ್ಲೂಕು ಎಂ.ಕೊತ್ತೂರು ಗ್ರಾಮವಾಗಿದ್ದು ನಾವು ಚಿಂತಾಮಣಿಗೆ ಹೀಗ್ಗೆ ಸುಮಾರು 3 ವರ್ಷಗಳಿಂದ ಚಿಂತಾಮಣಿಯ ಕಾಳಿಕಾಂಬ ದೇವಸ್ಥಾನದ ರಸ್ತೆಯಲ್ಲಿರುವ ಸುರೇಶ್  ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿರುತ್ತೇವೆ.ತಾನು ಕೂಡಿಟ್ಟದ್ದ ಹಣದಲ್ಲಿ ಸುಮಾರು 15 ಗ್ರಾಂ. ತೂಕದ ಬಂಗಾರದ ಒಂದು ಬಳೆ, ಸುಮಾರು 10 ಗ್ರಾಂ. ತೂಕದ 1 ಕತ್ತಿನ ಸರ, 3 ಗ್ರಾಂ. ತೂಕದ 1 ಜೊತೆ ಕಿವಿಯ ಓಲೆ, 1 ಜೊತೆ ಬೆಳ್ಳಿ ಕಾಲ್ ಚೈನ್ ತೆಗೆದುಕೊಂಡಿದ್ದೆ. ಈ ಬಂಗಾರದ ಮತ್ತು ಬೆಳ್ಳಿಯ ಒಡವೆಗಳನ್ನು ನಾವು ವಾಸವಾಗಿರುವ ಬಾಡಿಗೆ  ಮನೆಯ ರೂಂ.ನ ಬೀರುವಾದಲ್ಲಿ ಇಟ್ಟಿದ್ದೆವು.ಹೀಗಿರುವಾಗ ತಾನು ಕೆಲಸದ ಊರು ದೂರ ಇದ್ದುದರಿಂದ ಪ್ರತಿದಿನ ಕೆಲಸಕ್ಕೆ ಹೋಗಿ ಬರಲು ಸರಿಯಾಗಿ ಬಸ್ ವ್ಯವಸ್ಥೆಯಿಲ್ಲದೇ ಇದ್ದುದರಿಂದ ದಿನಾಂಕ:21/06/2021 ರಂದು ತಾನು ಮತ್ತು ತನ್ನ ಮಗ ಕೆಲಸ ಮಾಡುವ ಚಾಕ್ ವೇಲು ಗ್ರಾಮಕ್ಕೆ ಹೋಗಿ ಅಲ್ಲಿಯೇ ನಮಗೆ ಪರಿಚಯವಿರುವವರ ಮನೆಯಲ್ಲಿಯೇ ಇದ್ದೆವು. ನಂತರ ದಿನಾಂಕ:26/06/2021 ರಂದು ಸಂಜೆ ಸುಮಾರು 04-00 ಗಂಟೆಯ ಸಮಯದಲ್ಲಿ ಚಿಂತಾಮಣಿಗೆ ಬಂದು ಮನೆಯ ಬಳಿ ಹೋಗಿ ನೋಡಲಾಗಿ ಮನೆಯ ಬಾಗಿಲಿನ ಡೋರ್ ಲಾಕ್ ಬೀಗವನ್ನು ಕಿತ್ತಿರುವಂತೆ ಇದ್ದು, ಒಳಗೆ ಹೋಗಿ ನೋಡಲಾಗಿ ಮನೆಯ ರೂಂ.ನಲ್ಲಿರುವ ಬೀರುವಿನ ಲಾಕ್ ನ್ನು ಯಾವುದೋ ಆಯುಧದಿಂದ ಕಿತ್ತು ಅದರಲ್ಲಿದ್ದ  15 ಗ್ರಾಂ. ತೂಕದ ಬಂಗಾರದ ಒಂದು ಬಳೆ, ಸುಮಾರು 10 ಗ್ರಾಂ. ತೂಕದ 1 ಕತ್ತಿನ ಸರ, 3 ಗ್ರಾಂ. ತೂಕದ 1 ಜೊತೆ ಕಿವಿಯ ಓಲೆ, 1 ಜೊತೆ ಬೆಳ್ಳಿ ಕಾಲ್ ಚೈನ್ ನ್ನು ಯಾರೋ ಕಳ್ಳರು ನಾವು ಮನೆಯಲ್ಲಿ ಇಲ್ಲದ ಸಮಯವನ್ನು ನೋಡಿಕೊಂಡು ಹಗಲು ಅಥವಾ ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಡೋರ್ ಲಾಕ್ ನ್ನು  ಯಾವುದೋ ಆಯುಧದಿಂದ ಕಿತ್ತು ಹಾಕಿ ಅದರಲ್ಲಿದ್ದ  28 ಗ್ರಾಂ. ತೂಕದ ಬೆಲೆ ಸುಮಾರು 75,000-00 ರೂ.ಗಳಷ್ಟು ಬೆಲೆ ಬಾಳುವ ಈ ಮೇಲ್ಕಂಡ ಬಂಗಾರ  ಮತ್ತು ಬೆಳ್ಳಿಯ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನವಾಗಿರುವ ವಿಷಯವನ್ನು ತಾನು ನಮ್ಮ ಮನೆಯ ಸುತ್ತ ಮುತ್ತಲ ಜನರಿಗೆ ತಿಳಿಸಿ ಕೇಳಿದಾಗ ಕಳ್ಳತನ ಮಾಡಿರುವ ಕಳ್ಳರು ಯಾರು ಎಂಬುದು ಗೊತ್ತಾಗಲಿಲ್ಲ. ಅಲ್ಲದೇ ಈ ಬಗ್ಗೆ ನಾವು ಠಾಣೆಯಲ್ಲಿ ಯಾವುದೇ ದೂರು ನೀಡಿರಲಿಲ್ಲ. ಈ ದಿನ ಚಿಂತಾಮಣಿಯ ಪೊಲೀಸರು ಯಾರೋ ಕಳ್ಳರನ್ನು ಹಿಡಿದು ವಿಚಾರಣೆ ಮಾಡುತ್ತಿರುವ ವಿಷಯ ತಿಳಿದು ನಮ್ಮ ಮನೆಯಲ್ಲಿ ಕಳ್ಳತನ ಮಾಡಿರುವುದಾಗಿ ವಿಷಯ ತಿಳಿಯಿತು. ಆದ್ದರಿಂದ ಈ ದಿನ ಠಾಣೆಗೆ ತಡವಾಗಿ ದೂರು ನೀಡುತ್ತಿದ್ದು ದಿನಾಂಕ:21/06/2021  ರಿಂದ 26/06/2021 ರ ಮಧ್ಯೆ ಹಗಲು ಅಥವಾ ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವವರ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಿ ನಮ್ಮ ಒಡವೆಗಳನ್ನು ಕೊಡಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೇ.

 

13. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.167/2021 ಕಲಂ. 457,380 ಐ.ಪಿ.ಸಿ:-

  ದಿನಾಂಕ: 06/09/2021 ರಂದು ಪಿರ್ಯಾದಿದಾರರಾದ ಶ್ರೀಧರ ಟಿ.ಕೆ. ಬಿನ್ ಟಿ.ಎನ್.ಕೃಷ್ಣಮೂರ್ತಿ, 32 ವರ್ಷ, ಬ್ರಾಹ್ಮಣರು, ಕೆಇಬಿ ಯಲ್ಲಿ ಕೆಲಸ, ವಾಸ: ಪೂರ್ಣ ಕಣ್ಣಿನ ಆಸ್ಪತ್ರೆ ಬಳಿ, ಎನ್ ಆರ್ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ತಾನು ಬಾಗೇಪಲ್ಲಿ ತಾಲ್ಲೂಕಿನ ಜೂಲಪಾಳ್ಯದಲ್ಲಿ ಕೆ.ಇ.ಬಿ. ಯಲ್ಲಿ ಗುತ್ತಿಗೆ ಆಧಾರದ ಮೇರೆಗೆ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ಹೀಗಿರುವಾಗ ಚಿಕ್ಕಬಳ್ಳಾಫುರದಲ್ಲಿರುವ ನಮ್ಮ ನೆಂಟರ ಉಪನಯನ ಕಾರ್ಯವಿದ್ದುದರಿಂದ ದಿನಾಂಕ:13/02/2021 ರಂದು ಬೆಳಿಗ್ಗೆ ಸುಮಾರು 09-00 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತರಾಗಿ ಚಿಕ್ಕಬಳ್ಳಾಪುರಕ್ಕೆ ಹೋಗಿ ಆ ದಿನ ರಾತ್ರಿ ಅಲ್ಲಿಯೇ ಇದ್ದು  ಮರುದಿನ ದಿನಾಂಕ:14/02/2021 ರಂದು ಬೆಳಿಗ್ಗೆ ಕಾರ್ಯಕ್ರಮ ಮುಗಿಸಿಕೊಂಡು  ಸಂಜೆ 06-30 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಡೋರ್ ಲಾಕ್ ಲಿಂಕ್ ನ್ನು  ಕಿತ್ತು ಹಾಕಿ ಕಳ್ಳರು  ಮನೆಯೊಳಗೆ ಹೋಗಿ ಮನೆಯಲ್ಲಿದ್ದ ನಮ್ಮ ಬಾಬತ್ತು ಬಂಗಾರದ ಸುಮಾರು 15 ಗ್ರಾಂ. ತೂಕದ ಬ್ರಾಸ್ ಲೈಟ್, ಸುಮಾರು 4 ಗ್ರಾಂ. ತೂಕದ ಕಿವಿ ಡ್ರಾಪ್ಸ್, ಸುಮಾರು 2 ಗ್ರಾಂ. ತೂಕದ 4 ಮಾಂಗಲ್ಯದ ಗುಂಡುಗಳು ಮತ್ತು 2 ಜೊತೆ ಬೆಳ್ಳಿ ಕಾಲು ಚೈನ್ ಗಳನ್ನು ಯಾರೋ ಕಳ್ಳರು ನಾವು ಮನೆಯಲ್ಲಿ ಇಲ್ಲದ ಸಮಯವನ್ನು ನೋಡಿಕೊಂಡು ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಡೋರ್ ಲಾಕ್ ನ್ನು  ಯಾವುದೋ ಆಯುಧದಿಂದ ಕಿತ್ತು ಹಾಕಿ ಅದರಲ್ಲಿದ್ದ  ಸುಮಾರು 21 ಗ್ರಾಂ. ತೂಕ ಬೆಲೆ ಸುಮಾರು 60,000-00 ರೂ. ಮತ್ತು ಬೆಳ್ಳಿ ಒಡವೆಯ ಬೆಲೆ ಸುಮಾರು 3000 ರೂ.ಗಷ್ಟು ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನವಾಗಿರುವ ವಿಷಯವನ್ನು ನಾನು ನಮ್ಮ ಮನೆಯ ಸುತ್ತಮುತ್ತಲ ಜನರಿಗೆ ತಿಳಿಸಿ ಕೇಳಿದಾಗ ಕಳ್ಳತನ ಮಾಡಿರುವ ಕಳ್ಳರು ಯಾರು ಎಂಬುದು ಗೊತ್ತಾಗಲಿಲ್ಲ. ಅಲ್ಲದೇ ಈ ಬಗ್ಗೆ ನಾವು ಠಾಣೆಯಲ್ಲಿ ಯಾವುದೇ ದೂರು ನೀಡಿರಲಿಲ್ಲ. ಈ ದಿನ ಚಿಂತಾಮಣಿಯ ಪೊಲೀಸರು ಯಾರೋ ಕಳ್ಳರನ್ನು ಹಿಡಿದು ವಿಚಾರಣೆ ಮಾಡುತ್ತಿರುವ ವಿಷಯ ತಿಳಿದು ನಮ್ಮ ಮನೆಯಲ್ಲಿ ಕಳ್ಳತನ ಮಾಡಿರುವುದಾಗಿ ವಿಷಯ ತಿಳಿಯಿತು. ಆದ್ದರಿಂದ ಈ ದಿನ ಠಾಣೆಗೆ ತಡವಾಗಿ ದೂರು ನೀಡುತ್ತಿದ್ದು ದಿನಾಂಕ:13/02/2021  ರಿಂದ 14/02/2021 ರ ಮಧ್ಯೆ ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವವರ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಿ ನಮ್ಮ ಒಡವೆಗಳನ್ನು ಕೊಡಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ .

 

14. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.125/2021 ಕಲಂ. 324,504,506 ಐ.ಪಿ.ಸಿ:-

  ದಿನಾಂಕ:06/09/2021 ರಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಚಂದ್ರ ಶೇಖರ್ @ ಶಿವ ಬಿನ್ ಬೈರಪ್ಪ, 28 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ದ್ಯಾವರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ನೀಡಿದ ಹೇಳಿಕೆಯ ಸಾರಾಂಶವೆನೇಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ನಾನು ದಿನಾಂಕ:06/09/2021 ರಂದು ಬೆಳಗ್ಗೆ 11-00 ಗಂಟೆಯ ಸಮಯದಲ್ಲಿ  ನನ್ನ ಸ್ವಂತ ಕೆಲಸದ ನಿಮಿತ್ತ ನಮ್ಮ ಗ್ರಾಮದಿಂದ ಶಿಡ್ಲಘಟ್ಟ ನಗರಕ್ಕೆ  ಬರಲೆಂದು ಅಮ್ಮಗಾರಹಳ್ಳಿ ಮನೋಹರ ರವರ ತೋಟದ ಬಳಿ ರಸ್ತೆಯಲ್ಲಿ ನನ್ನ ಬಾಬತ್ತು  ದ್ವಿ ಚಕ್ರ ವಾಹನದಲ್ಲಿ ಬಂದು ನಾನು ಮೂತ್ರ ವಿಸರ್ಜನೆ ಮಾಡಬೇಕಾಗಿದ್ದರಿಂದ  ನನ್ನ  ದ್ವಿ ಚಕ್ರ ವಾಹನವನ್ನು  ರಸ್ತೆಯ ಬದಿಯಲ್ಲಿ ನಿಲ್ಲಿಸಿ ಅಲ್ಲಿ ಬೆಳೆದಿದ್ದ ಬೇಲಿ ಗಿಡಗಳ ಮರೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಯಾರೋ ಹಿಂದಿನಿಂದ ಬಂದು ನನ್ನ ತೆಲೆಯ ಹಿಂಭಾಗಕ್ಕೆ ಯಾವುದೇ ಆಯುಧದಿಂದ ಜೋರಾಗಿ ಹೊಡೆದು ರಕ್ತ ಗಾಯಪಡಿಸಿರುತ್ತಾರೆ. ಆಗ ನಾನು ಹಿಂದೆ ತಿರುಗಿ ನೋಡಿದಾಗ ನಮ್ಮ ಗ್ರಾಮದ ಡಿ.ಎನ್ ಬೈರಾರೆಡ್ಡಿ ಬಿನ್ ನಾರಾಯಣಪ್ಪ ಮಚ್ಚನ್ನು ಎತ್ತಿಕೊಂಡು ಏ ಲೋಫರ್ ಸೂಳೆ ಮಗನೇ  ನಿನ್ನಮ್ಮ ನೇ ಕ್ಯಾಯಾ ಎಂದು ಕೆಟ್ಟದಾಗಿ ಬೈಯುತ್ತಾ ಮತ್ತೆ ಅದೇ ಮಚ್ಚಿನಿಂದ ನನ್ನ ತಲೆಯ ಮೇಲ್ಭಾಗ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಆಗ ನಾನು ಮಚ್ಚನ್ನು ಹಿಡಿದುಕೊಂಡಾಗ  ಮಚ್ಚನ್ನು ನನ್ನ ಕೈನಿಂದ ಕಿತ್ತುಕೊಂಡು ಪುನಃ ನನ್ನ ಬಲಗೈನ ಮುಂಗೈನ ಮೇಲೆ  ಹೊಡೆದು  ಊತದ ಗಾಯವನ್ನುಂಟು ಮಾಡಿರುತ್ತಾನೆ. ನಂತರ ಎಡಗೈನ ಮುಂಗೈನಿಂದ  ಸ್ವಲ್ಪ ಮೇಲ್ಭಾಗದಲ್ಲಿ ಹೊಡೆದು ನೋವುಂಟು ಮಾಡಿರುತ್ತಾನೆ. ನನ್ನನ್ನು ಬೈರಾರೆಡ್ಡಿ ರವರು ಹೊಡೆಯುತ್ತಿರುವಾಗ ಅಲ್ಲೇ ರಸ್ತೆಯಲ್ಲಿ ಹೋಗುತ್ತಿದ್ದ ರಾಮಲಿಂಗಾಪುರ ಗ್ರಾಮದ ವೆಂಕಟೇಶ್ ಬಿನ್ ವೆಂಕಟರೋಣಪ್ಪ,  ಹೆಚ್,ಕೆ ನಾರಾಯಣಸ್ವಾಮಿ ಬಿನ್ ಕೃಷ್ಣಪ್ಪ ದ್ಯಾವರಹಳ್ಳಿರವರು ಬಂದು ನನ್ನನ್ನು ಬಿಡಿಸಿರುತ್ತಾರೆ. ಆಗ ಬೈರಾರೆಡ್ಡಿ ನನ್ನನ್ನು ಕುರಿತು ನಿನ್ನಮ್ಮನ್ ನೀನು ಈಗ ಬದುಕಿಕೊಂಡೆ ಇಲ್ಲದಿದ್ದರೆ ನಿನ್ನನ್ನು ಈಗಾಗಲೇ ಸಾಯಿಸುತ್ತಿದ್ದೆ ಎಂದು ಪ್ರಾಣ ಬೆದರಿಕೆ ಹಾಕಿ ಹೊರೆಟು ಹೋಗಿರುತ್ತಾನೆ. ಆಗ ಗಾಯಗೊಂಡಿದ್ದ ನನ್ನನ್ನು ರಾಮಲಿಂಗಾಪುರದ ವೆಂಕಟೇಶಪ್ಪ ರವರು ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ಆದ್ದರಿಂದ  ನನ್ನ ಮೇಲೆ  ಗಲಾಟೆ ಮಾಡಿದ ಡಿ.ಎನ್  ಬೈರಾರೆಡ್ಡಿ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ರಾತ್ರಿ 8-15 ಗಂಟೆಗೆ ಪಡೆದುಕೊಂಡು ಠಾಣೆಗೆ ಹಾಜರಾಗಿ ಠಾಣಾ ಮೊ.ಸಂಖ್ಯೆ:125/2021 ಕಲಂ:324,504,506 ಐ.ಪಿ.ಸಿ ರೀತ್ಯಾ  ಪ್ರಕರಣ ದಾಖಲಿಸಿರುತ್ತೆ.

 

15. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.126/2021 ಕಲಂ. 341,323,324,504,506 ಐ.ಪಿ.ಸಿ:-

  ದಿನಾಂಕ:- 07/09/2021 ರಂದು ಮಧ್ಯಾಹ್ನ 13-45 ಗಂಟೆ ಸಮಯದಲ್ಲಿ ಠಾಣೆಯ ಸಿಬ್ಬಂದಿಯವರಾದ ಮೊಹಮದ್ ಸೈಯ್ಯದ್ ಹೆಚ್.ಸಿ 159 ರವರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ  ಬೈರಾರೆಡ್ಡಿ ಬಿನ್ ನಾರಾಯಣಸ್ವಾಮಿ, 45 ವರ್ಷ, ಮರಗೆಲಸ, ವಾಸ ದ್ಯಾವರಹಳ್ಳಿ ಗ್ರಾಮ, ಶಿಡ್ಲಘಟ್ಟ (ತಾ) ರವರ  ಹೇಳಿಕೆಯನ್ನು ಪಡೆದು ತಂದು ಹಾಜರುಪಡಿಸಿದ್ದ ದೂರಾಗಿದ್ದು, ದೂರಿನ ಸಾರಾಂಶವೇನೆಂದರೆ,  ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿವುದಾಗಿಯೂ, ಹೀಗಿರುವಲ್ಲಿ ದಿ:- 06/09/2021 ರಂದು ಬೆಳಿಗ್ಗೆ ಸುಮಾರು 10-30 ಯಿಂದ 11-00 ಗಂಟೆ ಸಮಯದಲ್ಲಿ ತಾನು ದಿಬ್ಬೂರಹಳ್ಳಿಯಿಂದ ತಮ್ಮ ಗ್ರಾಮದ ದ್ವಿಚಕ್ರ ವಾಹನದಲ್ಲಿ ಮುಖ್ಯರಸ್ತೆಯಿಂದ ಅಮ್ಮಗಾರಹಳ್ಳಿ  ಗ್ರಾಮಕ್ಕೆ ತಿರುಗುವ ಸ್ಥಳದಲ್ಲಿ ತಮ್ಮ ಗ್ರಾಮದ ಚಂದ್ರಶೇಖರ @ ಶಿವ ಎಂಬುವರು ತನ್ನ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ ಆ ವೇಳೆಗೆ ತಾನು ತನ್ನ ವಾಹನವನ್ನು ನಿಲ್ಲಿಸಿದ್ದು, ಆಗ ಸದರಿ ವ್ಯಕ್ತಿಯು ತನ್ನನ್ನು ಕುರಿತು ಏನೋ ನೆನ್ನೆ ದಿನ ಪೊಲೀಸ್ ಠಾಣೆಗೆ ಹೋಗಿ ನನ್ನ ಮೇಲೆ ಕಂಪ್ಲೆಂಟ್ ಕೊಡೋದಕ್ಕೆ ಹೋಗಿದ್ದರಂತೆ ಎಂದು ಹೇಳೀದ, ಅದಕ್ಕೆ ತಾನು ತನ್ನ ಸ್ವಂತ ಕೆಲಸದ ಮೇಲೆ ತಾನು ಠಾಣೆಗೆ ಹೋಗಿದ್ದು, ನಿನ್ನ ವಿಚಾರದಲ್ಲಿ ಅಲ್ಲ ಎಂದು ಹೇಳುತ್ತಿದ್ದಾಗ ಏಕಾಏಕಿಯಾಗಿ ಕೆಟ್ಟ ಮಾತುಗಳಿಂದ ಬೈಯ್ಯುತ್ತಾ ಕೈಗಳಿಂದ ತನ್ನ ಮೇಲೆ ಹಲ್ಲೆ ಮಾಡಿದನು.  ತಾನು ಏಕೆ ಹೀಗೆ ವಿನಾಕಾರಣ ತಮ್ಮ ಮೇಲೆ ಗಲಾಟೆ ಮಾಡುತ್ತಿದ್ದಿಯಾ  ಎಂತ ಹೇಳುವಷ್ಟರಲ್ಲಿ, ಅಲ್ಲೇ ಬಿದ್ದಿದ್ದ ಒಂದು ಕಲ್ಲಿನ್ನು ಎತ್ತಿಕೊಂಡು ತನ್ನ ಎದೆಯಭಾಗ, ಎಡಭುಜದ ಭಾಗ ಹಾಗೂ ಮೈಮೇಲೆಹೊಡೆದನು, ತಾನು ಏಟುಗಳನ್ನು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾಗ, ತನಗೆ ಮೂಗೇಟುಗಳು ಉಂಟುಮಾಡಿದನು, ಅಷ್ಟರಲ್ಲಿ ರಸ್ತೆಯಲ್ಲಿ ಯಾರೋ ಬರುತ್ತಿದ್ದನ್ನು ನೋಡಿ, ತನ್ನನ್ನು ಕುರಿತು, ನನ್ನ ಮಗನೇ ಈ ದಿನ ನಿನ್ನ ಸಮಯ ಚೆನ್ನಾಗಿದೆ, ಇಲ್ಲಾ ಅಂದಿದ್ರೆ ಈ ದಿನ  ನಿನ್ನನ್ನು ಸಾಯಿಸುತ್ತಿದ್ದೆ ಎಂದು ಪ್ರಾಣ ಬೆದರಿಕೆ  ಹಾಕಿದನು ಹಾಗೂ ಅಲ್ಲಿಂದ ಹೊರಟು ಹೋದನು. ತಾನು ಅಲ್ಲಿಂದ ತಮ್ಮ ಗ್ರಾಮಕ್ಕೆ ಹೋಗದೆ ತಾನು ದಿಬ್ಬೂರಹಳ್ಳಿಯಲ್ಲಿರುವ ತನ್ನ ಅಂಗಡಿಯ ಬಳಿ ಹೋಗಿ,ತನ್ನ ತಮ್ಮನಾದ ಚಂದ್ರಪ್ಪ ಬಿನ್  ನಾರಾಯಣಪ್ಪ ರವರಿಗೆ ವಿಚಾರವನ್ನು ತಿಳಿಸಿದೆ. ನಂತರ ಚಂದ್ರಶೇಖರ್ @ ಶಿವ ಹಲ್ಲೆ ಮಾಡಿದ್ದರಿಂದ ತನಗೆ ಮೈ ಕೈ ನೋವುಗಳು ಹೆಚ್ಚಾಗಿದ್ದರಿಂದ ತಾನು, ತನ್ನ  ತಮ್ಮನೊಂದಿಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿರುತ್ತೇನೆ. ವಿನಾಕಾರಣ ತನ್ನ ಮೇಲೆ ಹಲ್ಲೆ ಮಾಡಿ, ಕೈಟ್ಟಮಾತುಗಳಿಂದ ಬೈದು, ತನಗೆ ತೊಂದರೆ ನೀಡಿದ ಚಂದ್ರಶೇಖರ್ @ ಶಿವ ರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ಹೇಳಿಕೆಯ ದೂರಾಗಿರುತ್ತೆ.

 

16. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.218/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:07/09/2021 ರಂದು ಮಾನ್ಯ ಘನ ನ್ಯಾಯಾಲಯ ಪಿ.ಸಿ205 ಮೋಹನ್ ಕುಮಾರ್ ರವರು ತಂದು ಹಾಜರುಪಡಿಸಿದ ಅನುಮತಿಯ ಆದೇಶದ ಸಾರಾಂಶವೇನೆಂದರೆ: ಈ ದಿನ ದಿನಾಂಕ:27/08/2021 ರಂದು ಮಾನ್ಯ ಸಿ.ಪಿ.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ಮೆಮೋ ದೂರಿನ ಸಾರಾಂಶ ಏನೆಂಧರೆ: ಆದ ನಾನು  ಸೂಚಿಸುವುದೇನೆಂದರೆ,  ಈ ದಿನ ದಿನಾಂಕ:27/08/2021 ರಂದು ಸಂಜೆ 4-15 ಗಂಟೆಯಲ್ಲಿ ವೃತ್ತ  ಕಛೇರಿಯಲ್ಲಿದ್ದಾಗ ಚೌಳೂರು ಗೇಟ್ ಬಳಿ ಇರುವ ಮಾರುತಿ ಪ್ರಾವಿಷನ್ ಸ್ಟೋರ್ ನಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಯಾದ,ಪಿಸಿ-310 ಮೈಲಾರಪ್ಪ, ಮತ್ತು ಎಪಿಸಿ-133 ಹೇಮಂತ ರವರೊಂದಿಗೆ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-1234 ರಲ್ಲಿ  ಚೇಳೂರು ಗೇಟ್ ಗೆ 4-30 ಗಂಟೆಗೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಹಾಗೂ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು  ಆದಿನಾರಾಯಣಪ್ಪ ಬಿನ್ ನಾರಾಯಣಪ್ಪ, 42 ವರ್ಷ, ನಾಯಕ ಜನಾಂಗ, ವ್ಯಾಪಾರ, ಚೌಳೂರು ಗ್ರಾಮ ಹಿಂದೂಪುರ ಮಂಡಲಂ, ಅನಂತಪುರ ಜಿಲ್ಲೆ.  ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು   ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 10 ಟೆಟ್ರಾ ಪಾಕೆಟ್ ಗಳು ಮತ್ತು 180 ಎಂ.ಎಲ್ ನ ಓಲ್ಡ್ ಟವರೆನ್ 6ಟೆಟ್ರಾ ಪಾಕೆಟ್ ಗಳು  ಇದ್ದು ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 900 ಎಂ.ಎಲ್. ಆಗಿರುತ್ತೆ. ಇವುಗಳ ೊಟ್ಟು ಬೆಲೆ 866/- ರೂಗಳಾಗಿರುತ್ತೆ. 90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ ಒಂದು ಟೆಟ್ರಾ ಪಾಕೆಟ್ ಬೆಲೆ ರೂ 35.13 ಗಳಾಗಿದ್ದು,.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಸಂಜೆ 5-00 ಗಂಟೆಯಿಂದ 6-00  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 10 ಟೆಟ್ರಾ ಪಾಕೆಟ್ ಗಳು ಮತ್ತು 180 ಎಂ.ಎಲ್ ನ ಓಲ್ಡ್ ಟವರೆನ್ 6ಟೆಟ್ರಾ ಪಾಕೆಟ್ ಗಳು 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 04 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ರಾತ್ರಿ 6-30 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ದೂರನ್ನು ಪಡೆದುಕೊಂಡು ಠಾಣಾ ಎನ್.ಸಿ.ಆರ್ ಸಂಖ್ಯೆ:376/2021 ಅನ್ನು ದಾಖಲಿಸಿಕೊಂಡು ಮಾನ್ಯ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿರುವುದಾಗಿದೆ.

 

17. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.219/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ:07/09/2021 ರಂದು ಮಾನ್ಯ ಘನ ನ್ಯಾಯಾಲಯದ ಪಿ.ಸಿ.205 ಮೋಹನ್ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ಅನುಮತಿ ಪತ್ರದ ಸಾರಾಂಶವೇನೆಂಧರೆ:  ಕೆ.ಸಿ.ವಿಜಯ್ ಕುಮಾರ್ ಪಿ.ಎಸ್.ಐ ಗೌರಿಬಿದನೂರು ಗ್ರಾಮಾಂತರ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ:   ಸೂಚಿಸುವುದೇನೆಂದರೆ, ದಿನಾಂಕ:30/08/2021 ರಂದು ಬೆಳಿಗ್ಗೆ 7-30 ಗಂಟೆಯಲ್ಲಿ  ಭಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೊಸೂರು ಗ್ರಾಮದ ಹೊಸೂರು ಕೆರೆಯಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಹಾಗೂ ನಮ್ಮ ಸಿಬ್ಬಂದಿಯವರಾದ ಜೀಪ್ ನ ಚಾಲಕ ಎ.ಪಿ.ಸಿ-143 ಮಹೇಶ್ ಸಿಬ್ಬಂದಿಯವರಾದ ಪಿ.ಸಿ-520 ಶ್ರೀನಾಥ್  ಪಿ.ಸಿ.518 ಆನಂದ ರವರನ್ನು  ಕರೆದುಕೊಂಡು ಸರ್ಕಾರಿ ಜೀಪ್ ಸಂಖ್ಯೆ:ಕೆಎ-40 ಜಿ-538 ರಲ್ಲಿ ಹೊಸೂರು ಗ್ರಾಮದ ಹತ್ತಿರ ಬೆಳಿಗ್ಗೆ 8-00  ಗಂಟೆಗೆ ಹೋಗಿ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಹೊಸೂರು ಗ್ರಾಮದ ಕೆರೆಯ ಬಳಿ ಹೋಗಿ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಸ್ವಲ್ಪ ದೂರದಲ್ಲಿ ವೃತ್ತಾಕಾರವಾಗಿ ಕುಳಿತುಕೊಂಡು ಆ ಪೈಕಿ ಒಬ್ಬ ಅಂದರ್ ಗೆ 200/-ರೂ ಇನ್ನೋಬ್ಬ ಬಾಹರ್ ಗೆ 200/-ರೂ ಎಂದು ಜೋರಾಗಿ ಕೂಗುತ್ತಾ ಉಳಿದವರು ಹಣವನ್ನು ಕಟ್ಟಿಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಹಾಗೂ ಸಿಬ್ಬಂದಿಯವರು ಸದರಿಯವರನ್ನು ಸುತ್ತುವರೆದು  ಇಸ್ಪೀಟು ಜಾಜಾಟ ಆಡುತ್ತಿರುವವರನ್ನು ವಶಕ್ಕೆ ಪಡೆದು ಹೆಸರು ವಿಳಾಸವನ್ನು ಕೆಳಲಾಗಿ 1)ರವಿಕುಮಾರ್ ಬಿನ್ ಜಯ ಮುನಿರಾವ್ ,39ವರ್ಷ, ಮರಾಠಿ ಜನಾಂಗ, ವ್ಯವೆವಸಾಯ, ಹೊಸೂರು ಗ್ರಾಮ, ಗೌರಿಬಿದನೂರು ತಾಲ್ಲೂಕು. ಮೊ:9164247088. 2)ಶ್ರೀಧರ್ ಬಿನ್ ಲೇಟ್ ತಿಮ್ಮಯ್ಯ, 22 ವರ್ಷ, ನಾಯಕ ಜನಾಂಗ, ವ್ಯಾಪಾರ ಹೊಸುರು ಗ್ರಾಮ ಗೌರಿಬಿದನೂರು ತಾಲ್ಲೂಕು 3)ರಮೇಶ್ ಬಿನ್ ಭುವಣ್ಣ, 40ವರ್ಷ, ಆದಿ ಕರ್ನಾಟಕ ಜನಾಂಗ, ಡ್ರೈವರ್ ಕೆಲಸ, ಹೊಸೂರು ಗ್ರಾಮ, ಗೌರಿಬಿದನೂರು ತಾಲ್ಲೂಕು. 4)ಕಿರಣ್ ಕುಮಾರ್ ಬಿನ್ ನರಸಿಂಹಮೂರ್ತಿ ಜಿ, 27 ವರ್ಷ, ನಾಯಕರು ವ್ಯವಸಾಯ, ಹೊಸೂರು ಗ್ರಾಮ ಗೌರಿಬಿದನೂರು ತಾಲ್ಲೂಕು. 5)ರಾಮಕೃಷ್ಣ ಬಿನ್ ವೆಂಕಟರೋಣಪ್ಪ, 30 ವರ್ಷ, ಆದಿ ಕರ್ನಾಟಕ ಜನಾಂಗ, ಗಾರೆ ಕೆಲಸ, ವ್ಯವಸಾಯ,ಹೊಸೂರು ಗ್ರಾಮ, ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದರು. ನಂತರ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು ಜೂಜಾಟಕ್ಕೆ ಪಣಕ್ಕಿಟ್ಟಿದ್ದ 4250/- ರೂ ನಗದು ಹಣ ಮತ್ತು ಒಂದು ನ್ಯೂಸ್ ಪೇಪರ್ ಅನ್ನು ಪಂಚರ ಸಮಕ್ಷಮ ಬೆಳಿಗ್ಗೆ 8-15 ಗಂಟೆಯಿಂದ 9-15 ಗಂಟೆಯವರೆಗೆ  ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಬೆಳಿಗ್ಗೆ 9-30 ಗಂಟೆಗೆ ಠಾಣೆಗೆ ವಾಪಸ್ ಬಂದು ಮೇಲ್ಕಂಡ ಮಾಲು ಮತ್ತು ಆಸಾಮಿಗಳನ್ನು ವರದಿ ಮತ್ತು ಅಸಲು ಪಂಚನಾಮೆಯೊಂದಿಗೆ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಠಾಣಾ ಎನ್.ಸಿ.ಆರ್ 382/2021 ರನ್ನು ದಾಖಲಿಸಿಕೊಂಡು ಮಾನ್ಯ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸುತ್ತಿರುವುದಾಗಿದೆ.

 

18. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.136/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ;06/09/2021 ರಂದು ಸಂಜೆ 4-00 ಗಂಟೆಯಲ್ಲಿ ಠಾಣಾ ನ್ಯಾಯಾಲಯದ ಪಿಸಿ 318 ರವರು ಠಾಣಾ ಎನ್,ಸಿ,ಆರ್, ಪ್ರಕರಣದಲ್ಲಿ  ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದು ಹಾಜರುಪಡಿಸಿದರ ಸಾರಾಂಶವೇನೆಂಧರೆ ದಿನಾಂಕ:31/08/2021 ರಂದು ಮಧ್ಯಾಹ್ನ02-15 ಗಂಟೆಗೆ ಶ್ರೀ ಗೋಪಾಲ್-244 ರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ, ದಿನಾಂಕ:31/08/2021 ರಂದು ಮಧ್ಯಾಹ್ನ01-00 ಗಂಟೆಯಲ್ಲಿ ತಾನು ಗೌರಿಬಿದನೂರು ನಗರದಲ್ಲಿ ಗಸ್ತಿನಲ್ಲಿ ಇದ್ದಾಗ ಸಾರ್ವಜನಿಕರು ಪೋನ್ ಮಾಡಿ ಗೌರಿಬಿದನೂರು ನಗರದ ಬಿ.ಹೆಚ್.ರಸ್ತೆಯ ಶನಿಮಹಾತ್ಮ  ದೇವಾಲಯದ ಬಳಿ  ಯಾರೋ ಆಸಾಮಿ ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದರು, ಕೂಡಲೇ ತಾನು ಪಿ.ಎಸ್.ಐ ಸಾಹೇಬರಿಗೆ ಮಾಹಿತಿಯನ್ನು ತಿಳಿಸಿದ್ದು, ನಂತರ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ನಮ್ಮ ಠಾಣಾ ಸಿಬ್ಬಂದಿಯವರಾದ ಪಿ.ಸಿ-282 ರಮೇಶ್  ರವರನ್ನು ಕರೆದುಕೊಂಡು ಮಾಹಿತಿಯಂತೆ ಬಿ.ಹೆಚ್.ರಸ್ತೆಯ ಶನಿಮಹಾತ್ಮ  ದೇವಾಲಯದ ಬಳಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ  ಮದ್ಯ ಸೇವನೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಮದ್ಯ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿ ಇದ್ದ ತಮ್ಮನ್ನು ಕಂಡು ಮದ್ಯ ಸೇವನೆ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು ಮಾಹಿತಿಯಂತೆ ಮದ್ಯ ಸರಬರಾಜು ಮಾಡುತ್ತಿದ್ದ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಅಲ್ಲಾಬಕಾಷ್ ಬಿನ್ ಅರೀಪ್ ಉಲ್ಲಾ,25 ವರ್ಷ,ಮುಸ್ಲಿಂ ಜನಾಂಗ ,ಚಿಕನ್ ಅಂಗಡಿಯಲ್ಲಿ ಕೆಲಸ,ವಾಸ;ಹಸ್ನಾಬಾದ್,ಹಿಂದೂಪುರ ಟೌನ್ ಪೋನ್;7989045634, ಎಂದು ತಿಳಿಸಿದನು. ಆಸಾಮಿಗೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ರೀತಿಯ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ 1) 90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 16 ಟೆಟ್ರಾ ಪಾಕೆಟ್ ಗಳು 2)  90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 04 ಖಾಲಿ ಟೆಟ್ರಾ ಪಾಕೆಟ್ ಗಳು 3) 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು 4)ಎರಡು ಲೀಟರ್ ಸಾಮರ್ಥ್ಯದ ಒಂದು ಖಾಲಿ ಪ್ಲಾಸ್ಟಿಕ್  ವಾಟರ್ ಬಾಟಲ್ ಇರುತ್ತೆ. ಮದ್ಯವಿರುವ ಪಾಕೆಟ್ಗಗಳ ಮೇಲೆ ಇರುವ ಬೆಲೆಯನ್ನು ನೋಡಲಾಗಿ 35.13 ರೂಪಾಯಿಗಳೆಂತ ಇರುತ್ತೆ ಇದರ ಒಟ್ಟು ಬೆಲೆ 562 ರೂ ಗಳಾಗಿರುತ್ತೆ. ಆಸಾಮಿ ಮತ್ತು ಮಾಲುಗಳನ್ನುಮಧ್ಯಾಹ್ನ 1-15 ಗಂಟೆಯಿಂದ 2-00 ಗಂಟೆಯವರೆಗೆ  ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ಠಾಣಾಧಿಕಾರಿಗಳಿಗೆ ನೀಡಿದ ವರಧಿಯನ್ನು ಪಡೆದು ಎನ್,ಸಿ,ಆರ್ ದಾಖಲಿಸಿಕೊಂಡು ಈ ದಿನ ದಿನಾಂಕ;06/09/2021 ರಂದು ಘನ ನ್ಯಾಯಾಲಯದ ಅನುಮತಿಯನ್ನು  ಕ್ರಿಮಿನಲ್ ಪ್ರಕರಣ ದಾಖಲಿಸಿರುತ್ತೆ.

 

19. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.137/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ;07/09/2021 ರಂದು ಸಂಜೆ 4-00 ಗಂಟೆಗೆ ನ್ಯಾಯಾಲಯದ ಪಿಸಿ 318 ರವರು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂಧರೆ ದಿನಾಂಕ:01/09/2021 ರಂದು ಮಧ್ಯಾಹ್ನ 3-00 ಗಂಟೆಯಲ್ಲಿ ನಗರ ಗಸ್ತಿನಲ್ಲಿದ್ದಾಗ ಬಂದ ಖಚಿತ ಮಾಹಿತಿಯ ಮೇರೆಗೆ ಗೌರಿಬಿದನೂರು ನಗರದ  ಕೋಟೆ ಮಾರಮ್ಮ ದೇವಸ್ಥಾನದ ಪಕ್ಕದ  ಪಿನಾಕಿನಿ ನದಿಯ ಹೊಂಗೆ ಮರದ ಕೆಳಗೆ  ಯಾರೋ ಕೆಲವು ಮಂದಿ ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತೀರುವುದಾಗಿ ಮಾಹಿತಿಯನ್ನು ಬಂದಿದ್ದು, ಅದರಂತೆ ತಮ್ಮ ಠಾಣೆಯ ಸಿಬ್ಬಂದಿಯಾದ, ಹೆಚ್ ಸಿ-214 ಲೋಕೇಶ್, ಸಿಪಿಸಿ-282 ರಮೇಶ್ , ಸಿಪಿಸಿ-34 ಮಂಜುನಾಥ   ಮತ್ತು ಎ.ಪಿ,ಸಿ-76 ಹರೀಶ್  ರವರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ಸರ್ಕಾರಿ  ಜೀಪ್ ಸಂಖ್ಯೆ ಕೆ.ಎ-40 ಜಿ-281 ರಲ್ಲಿ ಎ.ಪಿ,ಸಿ-76 ಹರೀಶ್  ರವರು ಚಾಲನೆ ಮಾಡಿಕೊಂಡು ಎಮ್.ಜಿ ವೃತ್ತದ ಬಳಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿ ಸದರಿ ದಾಳಿಗೆ ಪಂಚರು ಒಪ್ಪಿದರು. ಅವರನ್ನು ಜೀಫ್ ನಲ್ಲಿ ಕರೆದುಕೊಂಡು ಕೋಟೆ ಮಾರಮ್ಮ ದೇವಸ್ಥಾನದ ಪಕ್ಕದ ಪಿನಾಕಿನಿ ನದಿಯ ದಡದ ಸ್ವಲ್ಪ ದೂರದಲ್ಲಿ ನಿಂತು ನೋಡಲಾಗಿ  ಕೆಲವು ಮಂದಿ ಗುಂಪಾಗಿ ಕೊಳಿತುಕೊಂಡು ಅಂದರ್-100 ಬಾಹರ್-100 ಎಂದು ಕೂಗಾಡುತ್ತಾ ಇಸ್ಪೀಟ್ ಜೂಜಾಟವನ್ನು ಅಡುತ್ತೀರುವುದು ಖಚಿತ ಪಡಿಸಿಕೊಂಡು  ಸದರಿ ರವರ ಮೇಲೆ ಪಂಚರೊಂದಿಗೆ ದಾಳಿ ಮಾಡಿ ಅವರನ್ನು ಸುತ್ತುವರೆದು  ಅವರು ಓಡಿಹೋಗದಂತೆ ಎಚ್ಚರಿಕೆ ನೀಡಿ ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಲಕ್ಷ್ಮೀಕಾಂತ ಬಿನ್ ಲೇಟ್ ವಿಜಯ್ ಕುಮಾರ್ ,32 ವರ್ಷ,ವೈಶ್ಯರು.ವ್ಯಾಪಾರ ,ವಾಸ; ವೆಂಕಟರವಣಸ್ವಾಮಿ ದೇವಸ್ಥಾನದ ಹಿಂಭಾಗ ಗೌರಿಬಿದನೂರು ಟೌನ್ 2) ರಾಮಾಂಜಿ ಬಿನ್ ಗಂಗಪ್ಪ,40 ವರ್ಷ,ಆದಿಕರ್ನಾಟಕ.ಹೂವಿನ ವ್ಯಾಪಾರ,ವಾಸ; ಸಂತೇಮೈದಾನ ಗೌರಿಬಿದನೂರು ಟೌನ್ ಪೋನ್ ನಂ;9031716936 3) ಗಂಗಾಧರ ಬಿನ್ ಲೇಟ್ ಮುನಿಯಪ್ಪ,49 ವರ್ಷ,ಆದಿ ಕರ್ನಾಟಕ ,ಕೂಲಿ ಕೆಲಸ,ವಾಸ;ಸಂತೇಮೈದಾನ ಗೌರಿಬಿದನೂರು ನಗರ ಪೋನ್ ನಂ;9731138210 4) ವಿಶ್ವನಾಥ ಬಿನ್ ಸಿದ್ದಪ್ಪ .32 ವರ್ಷ,ಬಲಜಿಗರು.ವ್ಯಾಪಾರ ,ವಾಸ;ಅಬಿಲಾಷ್ ಲೇಔಟ್ ಗೌರಿಬಿದನೂರು ನಗರ ಪೋನ್ ನಂ; 6361301394 ಎಂದು ತಿಳಿಸಿದ್ದು ನಂತರ ಸ್ಥಳದಲ್ಲಿ  ಪಂಚರ ಸಮಕ್ಷಮ ಪರಿಶೀಲನೆ ಮಾಡಲಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಇಸ್ಪೀಟ್ ಎಲೆಗಳನ್ನು ಲೆಕ್ಕ ಮಾಡಲಾಗಿ ಓಟ್ಟು 52 ಇಸ್ಫೀಟ್ ಎಲೆಗಳು ಇದ್ದು ಮತ್ತು ಅಲ್ಲಲ್ಲಿ ಬಿದ್ದಿದ್ದ ವಿವಿಧ ಮುಖಬೆಲೆಯ ಹಣವನ್ನು ಲೆಕ್ಕ ಮಾಡಲಾಗಿ ಓಟ್ಟು 1600/- ರೂಗಳು ಇರುತ್ತೆ. ಮತ್ತು ಒಂದು ನ್ಯೂಸ್ ಪೇಪರ್ ಸದರಿಯವುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಮಧ್ಯಾಹ್ನ 3-15 ಗಂಟೆಯಿಂದ 4:00 ಗಂಟೆಯವರೆಗೆ ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡಿರುತ್ತೆ. ಮೇಲ್ಕಂಡ ಆರೋಪಿತರನ್ನು ಮತ್ತು ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಮಧ್ಯಾಹ್ನ4-15 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ವರಧಿಯನ್ನು ಪಡೆದು ಎನ್,ಸಿ,ಆರ್ ದಾಖಲಿಸಿ ಈ ದಿನ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದು ಪ್ರಕರಣ ದಾಖಲಸಿರುತ್ತೆ .

 

20. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.91/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ 06/09/2021 ರಂದು ಸಂಜೆ 18.45 ಗಂಟೆಗೆ ಪಿ.ಎಸ್.ಐ ರವರು ಮಾಲು ಮಹಜರ್ ಆಸಾಮಿಗಳನ್ನು ಠಾಣೆಯಲ್ಲಿ ಹಾಜರುಪಡೆಸಿ ನೀಡಿದ ವರದಿ ಏನೆಂದರೆ: ದಿನಾಂಕ:06/09/2021 ರಂದು ಸಂಜೆ: 04-30 ಗಂಟೆ ಸಮಯದಲ್ಲಿ ತಾನು ಠಾಣೆಯ ಸರಹದ್ದಿನ ಚಲಮಕೋಟೆ, ಮರಿನಾಯಕನಹಳ್ಳಿ, ಚಿಕ್ಕಕರಕಮಾಕಲಹಳ್ಳಿ, ಹಾಗೂ ಇತರೆ ಗ್ರಾಮಗಳ ಕಡೆ ಗಸ್ತಿನಲ್ಲಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದು ಮುರಗಮಲ್ಲ ಗ್ರಾಮದ ಗಂಗಾರಾಂ ರವರ ಜಮೀನಿನಲ್ಲಿರುವ ಏರ್ ಟೆಲ್ ಮತ್ತು ಐಡಿಯಾ ಕಂಪನಿಗಳ ಟವರ್ ಕೆಳಗೆ ಯಾರೋ ಕೆಲವರು ಕಾನೂನು ಬಾಹಿರವಾಗಿ ಇಸ್ಟೀಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನ ಮೇರೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡುವ ಸಲುವಾಗಿ ಕೆಎ-40-ಜಿ-539 ಸಕರ್ಾರಿ ವಾಹನದಲ್ಲಿ ತಾನು ಠಾಣಾ ಸಿಬ್ಬಂದಿಯವರಾದ ಎ.ಎಸ್.ಐ ಶ್ರೀನಿವಾಸಗೌಡ, ಹೆಚ್.ಸಿ. 148 ಕೃಷ್ಣಪ್ಪ, ಹೆಚ್.ಸಿ. 161 ಕೃಷ್ಣಪ್ಪ, ಹೆಚ್.ಸಿ. 215 ಮಂಜುನಾಥರೆಡ್ಡಿ, ಪಿ.ಸಿ. 484 ಶಿವಣ್ಣ, ಪಿ.ಸಿ.511 ಮುರಳಿ ಮತ್ತು ಚಾಲಕ ಎಪಿಸಿ-163 ಆಯರಾಜ್ ರವರೊಂದಿಗೆ ಮುರಗಮಲ್ಲ ಗ್ರಾಮದ ಬಳಿಗೆ ಹೋಗಿ ಅಲ್ಲಿದ್ದವರಿಗೆ ಮಾಹಿತಿಯನ್ನು ತಿಳಿಸಿ ಪಂಚಾಯ್ತಿದಾರರನ್ನಾಗಿ ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಅವರೊಂದಿಗೆ ಮುರಗಮಲ್ಲ ಗ್ರಾಮದ ಗಂಗಾರಾಂ ರವರ ಜಮೀನಿನ ಬಳಿ ಹೋಗಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ವಾಹನದಿಂದ ಇಳಿದು  ಸ್ವಲ್ಪ ದೂರ ನಡೆದುಕೊಂಡು ಹೋಗಿ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಏರ್ ಟೆಲ್ ಮತ್ತು ಐಡಿಯಾ ಕಂಪನಿಗಳ ಟವರ್ ಗಳ ಕೆಳಗೆ ಯಾರೋ ಕೆಲವರು ಹಣವನ್ನು, ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಂದರ್ ಬಾಹರ್ ಎಂದು ಇಸ್ಟೀಟು ಜೂಜಾಟವಾಡುತ್ತಿದ್ದು, ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಜೂಜಾಡುತ್ತಿದ್ದ ಸದರಿಯವರು ಇಸ್ಟೀಟ್ ಎಲೆ. ಹಾಗೂ ಹಣವನ್ನು ಸ್ಥಳದಲ್ಲಿಯೇ ಬಿಟ್ಟು ಓಡಲು ಪ್ರಯತ್ನಿಸಿದ್ದು, ಅವರನ್ನು ಬೆನ್ನಟ್ಟಿ ವಶಕ್ಕೆ ಪಡೆದು ಅವರ ಹೆಸರು  ಮತ್ತು ವಿಳಾಸ ಕೇಳಲಾಗಿ 1) ಅಮಾನ್ ಬಿನ್ ಲೇಟ್ ಸನಾವುಲ್ಲ, 32 ವರ್ಷ, ಲಾರಿ ಕ್ಲೀನರ್ ಕೆಲಸ, ಜಾಮೀಯ ಮಸೀದಿ ಬಳಿ, ಮುರಗಮಲ್ಲ, 2) ಜಬೀವುಲ್ಲಾ ಬಿನ್ ಲೇಟ್ ಅಮೀರ್ ಜಾನ್,  28 ವರ್ಷ, ವೆಲ್ಡಿಂಗ್ ಕೆಲಸ, ಮುರಗಮಲ್ಲ ಗ್ರಾಮ, 3) ಖದೀರ್  ಬಿನ್ ಲೇಟ್ ಸೈಯದ್ ಚೋಟ್ ಸಾಬ್, 38 ವರ್ಷ, ಅಡುಗೆ ಭಟ್ಟರ ಕೆಲಸ,  ಟಿಪ್ಪು ನಗರ, ಚಿಂತಾಮಣಿ ನಗರ, 4) ಇಬ್ರತ್ ಬಿನ್ ಇಬ್ರಾಹಿಂ, 29 ವರ್ಷ, ಮಾಂಸ ಹೊಡೆಯುವ ಕೆಲಸ, ಮುರಗಮಲ್ಲ ಗ್ರಾಮ, 5) ಇಷರ್ಾದ್ ಆಲಿ ಬಿನ್ ಅಮೀರ್ ಜಾನ್, 36 ವರ್ಷ, ಲಾರಿ ಕ್ಲೀನರ್, ಮುರಗಮಲ್ಲ ಗ್ರಾಮ,  6) ಸುಜಾಯಿದ್ ಆಲಿಖಾನ್ ಬಿನ್ ಷಹಬಾದ್ ಆಲಿಖಾನ್, 32 ವರ್ಷ, ಭಟ್ಟರ ಕೆಲಸ, ಮುರಗಮಲ್ಲ ಗ್ರಾಮ,  7) ಯಾರಬ್ ಬಿನ್ ಲೇಟ್ ಫಯಾಜ್, 28 ವರ್ಷ, ಚಿಕನ್ ಅಂಗಡಿ ಕೆಲಸ, ಮುರಗಮಲ್ಲ ಗ್ರಾಮ,  8) ಷರೀಪ್ ಬಿನ್ ಲೇಟ್ ಇಮಾಮ್ ಸಾಬ್, 55 ವರ್ಷ, ಬಂಡೆ ಕೆಲಸ, ಮುರಗಮಲ್ಲ  ಗ್ರಾಮ, ಎಲ್ಲಾರೂ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದರು.  ಸ್ಥಳದಲ್ಲಿ ಪಂಚರ  ಸಮಕ್ಷಮ ಪರಿಶೀಲಿಸಲಾಗಿ 4780/- ರೂ ನಗದು ಹಣ, 52 ಇಸ್ಟೀಟ್ ಎಲೆಗಳು, ಹಾಗೂ ಒಂದು ನ್ಯೂಸ್ ಪೇಪರ್ ಇದ್ದು, ಸ್ಥಳದಲ್ಲಿ, 52 ಇಸ್ಟೀಟ್ ಎಲೆ, ಜೂಜಾಟವಾಡಲು ಪಣವಾಗಿಟ್ಟಿದ್ದ 4780/- ನಗದು ಹಣ, ಒಂದು ನ್ಯೂಸ್ ಪೇಪರ್ನ್ನು ಈ ಕೇಸಿನ ಮುಂದಿನ ನಡಾವಳಿಗಾಗಿ ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿಯೇ ಸಂಜೆ: 05-00 ರಿಂದ 06-00 ಗಂಟೆ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಆರೋಪಿತರು, ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿದ್ದು, ಆರೋಪಿತರು, ಮಾಲು ಹಾಗೂ ಮಹಜರ್ ನ್ನು ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ವರದಿ ದೂರಿನ್ನು ಪಡೆದು ಠಾಣಾ ಎನ್.ಸಿ.ಆರ್ 102/2021 ರಂತೆ ದಾಖಲಿಸಿಕೊಂಡು  ಘನ ನ್ಯಾಯಾಲಯದಿಂದ ಅನುಮತಿ ಪಡೆದು ರಾತ್ರಿ 20.15 ಗಂಟೆಗೆ ಠಾಣಾ ಮೊ.ಸಂ 91/2021  ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

21. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.155/2021 ಕಲಂ. 15(A),32(3) ಕೆ.ಇ ಆಕ್ಟ್:-

  ಘನ ನ್ಯಾಯಾಲಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ ಲಕ್ಷ್ಮೀನಾರಾಯಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:07/09/2021 ರಂದು ಬೆಳಿಗ್ಗೆ 09-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ ಬಂದ ಮಾಹಿತಿ ಏನೇಂದರೆ ಮಾವಿನಕಾಯನಹಳ್ಳಿ ಗ್ರಾಮದ  ಗಂಗಾಧರಪ್ಪ ಬಿನ್ ಗಂಗಪ್ಪ, ರವರು ಮಾವಿನಕಾಯನಹಳ್ಳಿ ಗ್ರಾಮದ ಅವರ ಮನೆಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಸಿಬ್ಬಂದಿಯವರಾದ ಪಿ.ಸಿ.483 ರಮೇಶ್ ಬಾಬು ಮತ್ತು ಜೀಪ್ ಚಾಲಕ ಎಪಿಸಿ.120 ನಟೇಶ್ ರವರೊಂದಿಗೆ ಹಾಗೂ ಪಂಚರೊಂದಿಗೆ  ಬೆಳಿಗ್ಗೆ 09-30 ಗಂಟೆಯ ಸಮಯಕ್ಕೆ  ಮಾವಿನಕಾಯನಹಳ್ಳಿ ಗ್ರಾಮದ ಗಂಗಾಧರಪ್ಪ ಬಿನ್ ಗಂಗಪ್ಪ ರವರ ಮನೆಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಗಂಗಾಧರಪ್ಪ ಬಿನ್ ಗಂಗಪ್ಪ, 55 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ವಾಸ ಮಾವಿನಕಾಯಲಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 14  ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು 3). 2 ಪ್ಲಾಸ್ಟಿಕ್  ಲೋಟ ಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಬ್ಯಾಗನ್ನು ಪಂಚನಾಮೆಯ ಮೂಲಕ  ಬೆಳಿಗ್ಗೆ 09-45 ಗಂಟೆಯಿಂದ ಬೆಳಿಗ್ಗೆ 10-30 ಗಂಟೆಯವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 504/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಗಂಗಾಧರಪ್ಪ ಬಿನ್ ಗಂಗಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 10-45 ಗಂಟೆಗೆ ಠಾಣೆಗೆ ವಾಪಾಸ್ ಬಂದು 155/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತದೆ.

 

22. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.156/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ:07/09/2021 ರಂದು ಪಿರ್ಯಾದಿದಾರರಾದ ಇಬ್ನೆ ಹಸನ್ ಬಿನ್ ಲೇಟ್ ತಾಲೇಬ್ ಅಲಿಬೇಗ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 06/09/2021 ರಂದು ನನ್ನ ತಮ್ಮನ ಮಗನಾದ ಫಜ್ಲಿಲ್ ಅಬ್ಬಾಸ್ ಬಿನ್ ನಬ್ವತ್ ಅಲಿ, 20 ವರ್ಷ, ಕಾರ್ಪೆಂಟರ್ ಕೆಲಸ, ಅಲ್ಲಿಪುರ ಗ್ರಾಮರವರು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಟಿಫನ್ ತಿನ್ನುವುದಕ್ಕಾಗಿ ತಾನು ಕೆಲಸ ಮಾಡಿಕೊಂಡಿದ್ದ ಸ್ಥಳದಿಂದ ತಮ್ಮ ಮನೆಗೆ ಹೋಗಲು ಅವರ ಬಾಬತ್ತು ನಂಬರ್ ಬಂದಿಲ್ಲದ ಹೊಸ HERO PASSION PRO ಬೈಕಿನಲ್ಲಿ ಅಲ್ಲಿಪುರ ಗ್ರಾಮದ ಮುಸ್ತಪಾ ಸರ್ಕಲ್ ನಿಂದ ಮುಂದೆ ತೊಂಡೇಬಾವಿ-ಮಧುಗಿರಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ KA-43 E-5491 TVS XL HEAVY DUTY ಬೈಕ್ ಸವಾರ ತನ್ನ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಮ್ಮ ತಮ್ಮನ ಮಗನ ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ತಮ್ಮನ ಮಗ ರಸ್ತೆಯಲ್ಲಿ ಬಿದ್ದು ಹೋದನು. ಅದೇ ರಸ್ತೆಯಲ್ಲಿರುವ ನಮ್ಮ ಮೆಕಾನಿಕ್ ಅಂಗಡಿ ಬಳಿ ಕೆಲಸ ಮಾಡುತ್ತಿದ್ದ ನಾನು ಮತ್ತು ನನ್ನ ಸ್ನೇಹಿತ ಶಬ್ಬೀರ್ ಅಲಿ ಬಿನ್ ಅಮೀರ್ ಜಾನ್ ರವರು ಅಪಘಾತವಾಗಿದ್ದನ್ನು ಕಂಡು ಸ್ಥಳಕ್ಕೆ ಹೋಗಿ ರಸ್ತೆಯಲ್ಲಿ ಬಿದ್ದು ಹೋಗಿದ್ದವರನ್ನು ಎತ್ತಿ ಉಪಚರಿಸಿ ನೋಡಲಾಗಿ ನನ್ನ ತಮ್ಮನ ಮಗ ಫಜ್ಲಿಲ್ ಅಬ್ಬಾಸ್ ನ ಎಡಮೊಣಕಾಲಿಗೆ ಗಾಯವಾಗಿದ್ದು, ಎಡಕಣ್ಣಿನ ಬಳಿ ರಕ್ತಗಾಯವಾಗಿತ್ತು. ತಕ್ಷಣ ಫಜ್ಲಿಲ್ ಅಬ್ಬಾಸ್ ನನ್ನು ರಸ್ತೆಯಲ್ಲಿ ಬಂದ ಯಾವುದೋ ಆಟೋದಲ್ಲಿ ಅಲ್ಲಿಪುರದ ಐ.ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದೆವು. ಫಜ್ಲಿಲ್ ಅಬ್ಬಾಸ್ ನನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾವು ಫಜ್ಲಿಲ್ ಅಬ್ಬಾಸ್ ನನ್ನು ಆಂಬುಲೆನ್ಸ್ ನಲ್ಲಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿರುತ್ತೇವೆ. ಆಸ್ಪತ್ರೆಯಲ್ಲಿಯೇ ನನ್ನ ತಮ್ಮನ ಮಗ ಫಜ್ಲಿಲ್ ಅಬ್ಬಾಸ್ ನೊಂದಿಗೆ ಇದ್ದು ಚಿಕಿತ್ಸೆ ಕೊಡಿಸಿ ಆತನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ನನ್ನ ತಮ್ಮನ ಮಗ ಫಜ್ಲಿಲ್ ಅಬ್ಬಾಸ್ ನಿಗೆ ಅಪಘಾತವನ್ನುಂಟು ಮಾಡಿದ KA-43 E-5491 TVS XL HEAVY DUTY ಬೈಕ್ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 

23. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.103/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:06-09-2021 ರಂದು ಮಧ್ಯಾಹ್ನ 2-10 ಗಂಟೆಗೆ ಸಾಹೇಬರು ದಾಳಿಯಿಂದ ಠಾಣೆಗೆ ಆರೋಫಿ, ಅಮಾನತ್ತು ಪಡಿಸಿಕೊಂಡಿದ್ದ ಮಾಲು ಹಾಗೂ ಪಂಚನಾಮೆಯೊಂದಿಗೆ ಹಾಜರಾಗಿ ನೀಡಿದ  ವರದಿಯ ಸಾರಾಂಶವೇನೆಂದರೆ ದಿನಾಂಕ:06/09/2021 ರಂದು ಮಧ್ಯಾಹ್ನ 12-40 ಗಂಟೆಯ ಸಮಯದಲ್ಲಿ ಠಾಣಾ ಸರಹದ್ದು ಗಸ್ತಿನಲ್ಲಿದ್ದಾಗ ಬಾತ್ಮೀದಾರರಿಂದ ತಾಳಹಳ್ಳಿ ಗ್ರಾಮದ ಮುನಿಕೃಷ್ಣಪ್ಪ ರವರ ಅಂಗಡಿ ಮುಂಭಾಗದಲ್ಲಿ ಅಕ್ರಮವಾಗಿ ಮಧ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿರುತ್ತಾರೆಂದು  ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಯಾದ ಸಿಪಿಸಿ-207 ನವೀನ್ ಕುಮಾರ್ ಮತ್ತು ಸಿಪಿಸಿ-314 ಜವಾರಪ್ಪ ರವರನ್ನು ಚದಲಪುರ ಕ್ರಾಸ್ ಗೆ ಬರುವಂತೆ ತಿಳಿಸಿ ತಾನು ಮಧ್ಯಾಹ್ನ 12-50 ಗಂಟೆಗೆ ಚದಲಪುರ ಕ್ರಾಸ್ ಗೆ ಬಂದು ಕ್ರಾಸ್ ನಲ್ಲಿದ್ದ ಸಿಬ್ಬಂದಿಯನ್ನು ಮತ್ತು ಪಂಚರನ್ನು ಬರಮಾಡಿಕೊಂಡು ಸರ್ಕಾರಿ ಪೊಲೀಸ್ ಜೀಪ್ KA-40-G-1555 ರಲ್ಲಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಮಧ್ಯಾಹ್ನ 1-05 ಗಂಟೆಗೆ ಹೋಗುವಷ್ಠರಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಗಿರಾಕಿಗಳು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಸ್ಥಳದಿಂದ ಓಡಿ  ಪರಾರಿಯಾಗಿ ಹೋದರು. ಇವನ ಅಂಗಡಿಯ ಮುಂಭಾಗದಲ್ಲಿ ಮದ್ಯದ ಟೇಟ್ರಾ ಪಾಕೇಟ್ ಗಳು,  ಖಾಲಿ ಮದ್ಯದ ಟೆಟ್ರಾ ಪ್ಯಾಕೇಟುಗಳು ಹಾಗೂ ಖಾಲಿ ಲೋಟಗಳು ಇದ್ದವು, ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಸಾಮಿಯ  ಹೆಸರು ವಿಳಾಸವನ್ನು ಕೇಳಲಾಗಿ ಮುನಿಕೃಷ್ಣಪ್ಪ ಬಿನ್ ಲೇಟ್ ನ್ಯಾಥಪ್ಪ, 56 ವರ್ಷ, ವಕ್ಕಲಿಗರು, ಕೂಲಿ ಕೆಲಸ ,ತಾಳಹಳ್ಳಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದನು. ನಂತರ ಸ್ಥಳದಲ್ಲಿದ್ದ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥದ HAYWARDS CHEERS  WHISKY  ಹೆಸರಿನ 12 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ ಬೆಲೆ 35.13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-1080 ML ಮದ್ಯವಿದ್ದು ಒಟ್ಟು ಬೆಲೆ 421 ರೂ ಆಗುತ್ತದೆ.2) 90 ಎಂ ಎಲ್ ಸಾಮರ್ಥ್ಯದ HAYWARDS CHEERS  WHISKY  ಖಾಲಿ 5 ಟೆಟ್ರಾ ಪ್ಯಾಕೇಟುಗಳು ಇರುತ್ತವೆ, 3) 5 ಖಾಲಿ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಕಲ್ಲಿಸಿಕೊಟ್ಟ ಆಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಮಧ್ಯಾಹ್ನ 1:10 ಗಂಟೆಯಿಂದ ಮಧ್ಯಾಹ್ನ 1:45 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ  ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

ಇತ್ತೀಚಿನ ನವೀಕರಣ​ : 07-09-2021 07:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080