ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.105/2021 ಕಲಂ. 32,34,43(A) ಕೆ.ಇ ಆಕ್ಟ್ :-

     ದಿನಾಂಕ 06/08/2021 ರಂದು ಸಂಜೆ 07-30 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರವರಾದ ಸರಸ್ವತಮ್ಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ನಾನು ಮತ್ತು ಸಿಬ್ಬಂದಿಯವರಾದ ಮಲ್ಲಿಕಾರ್ಜುನ, ಸಿ.ಹೆಚ್.ಸಿ-239 ಹಾಗೂ ಜೀಪ್ ಚಾಲಕರಾದ ಎ.ಹೆಚ್.ಸಿ-13 ಸುಶೀಲ್ ಕುಮಾರ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆಎ-40-ಜಿ-58 ರಲ್ಲಿ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿಗಾಗಿ ತಾಲ್ಲೂಕಿನಲ್ಲಿ ಗಸ್ತಿನಲ್ಲಿದ್ದಾಗ ಸಂಜೆ 4-00 ಗಂಟೆಗೆ ಮುಂಗಾನಹಳ್ಳಿ ಗ್ರಾಮಕ್ಕೆ ಬಂದು ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಸಂಜೆ ಸುಮಾರು 4-30 ಗಂಟೆಗೆ ಬಿ ಕೊತ್ತಕೋಟ-ಯನುಮಲಪಾಡಿ ರಸ್ತೆಯ ಮದ್ಯದಲ್ಲಿರುವ ಸಾಕ್ರೇವ್ ಬ್ರಿಡ್ಜ್ ಬಳಿಗೆ ಬಂದು ಪಂಚರೊಂದಿಗೆ ಕಾಯುತ್ತಿದ್ದಾಗ ಆಂಜನೇಯರೆಡ್ಡಿ ಬಿನ್ ಮದ್ದಿರೆಡ್ಡಿ, 50 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಕಂಬಾಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂಬುವವರು ಯಾವುದೋ ಒಂದು ದ್ವಿಚಕ್ರ ವಾಹನದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿದ್ದವನನ್ನು ಪಂಚರ ಸಮಕ್ಷಮ ಹಿಡಿದುಕೊಂಡು ವಿಚಾರ ಮಾಡಿ ಸದರಿ ಮದ್ಯದ ಬಗ್ಗೆ ಕೇಳಲಾಗಿ ಸದರಿ ಮದ್ಯವನ್ನು ಯನುಮಲಪಾಡಿ ಗ್ರಾಮದಲ್ಲಿರುವ ಮಧು ಬಾರ್ ಅಂಡ್ ರೆಸ್ಟೋರೆಂಟಿನಲ್ಲಿ ಖರೀದಿ ಮಾಡಿರುವುದಾಗಿ ಆಸಾಮಿ ತಿಳಿಸಿರುತ್ತಾನೆ. ನಂತರ ಬಿಳಿ ಬಣ್ಣದ ಚೀಲದಲ್ಲಿದ್ದ ಮದ್ಯವನ್ನು ಪರಿಶೀಲನೆ ಮಾಡುತ್ತಿದ್ದಾಗ ಏಕಾಏಕಿ ಸದರಿ ಆಸಾಮಿ ಸ್ಥಳದಿಂದ ಕೆ.ಎ-07-ಹೆಚ್-3494 ಟಿವಿಎಸ್ ಚಾಂಪ್ ದ್ವಿಚಕ್ರ ವಾಹನದ ಸಮೇತ ಪರಾರಿಯಾದನು. 1) OLD TAVERN WHISKY 180 ML ಒಟ್ಟು 02 ರೆಟ್ಟಿನ ಬಾಕ್ಸ್ ಗಳಿದ್ದು, ಒಟ್ಟು 96 ಟೆಟ್ರಾ ಪಾಕೆಟ್ ಗಳಿರುತ್ತೆ. ಇದರ ಒಟ್ಟು ಮದ್ಯವು 17 ಲೀಟರ್ 280 ಎಂಎಲ್ ಆಗಿದ್ದು, ಇದರ ಬೆಲೆ 8328/- ರೂಗಳಾಗಿರುತ್ತೆ. 2) Old Admiral VSOP BRANDY 180 ML 38 ಟೆಟ್ರಾ ಪಾಕೆಟ್ ಗಳಿದ್ದು, ಒಟ್ಟು 6 ಲೀಟರ್ 840 ಎಂ.ಎಲ್ ಮದ್ಯವಿರುತ್ತೆ ಇದರ ಬೆಲೆ 3296/- ರೂಗಳಾಗಿರುತ್ತೆ. ಪ್ರತಿಯೊಂದು ಮದ್ಯದ ಪಾಕೆಟ್ ನ ಬೆಲೆ 86.75/- ರೂಗಳಾಗಿರುತ್ತೆ. ಒಟ್ಟು 24 ಲೀಟರ್ 120 ಎಂ.ಎಲ್ ಮದ್ಯವಿದ್ದು, 11624/- ರೂಗಳಾಗಿರುತ್ತೆ. ಸದರಿ ಸ್ಥಳದಲ್ಲಿ ಪಂಚನಾಮೆ ಮೂಲಕ ಮೇಲ್ಕಂಡ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಎಫ್.ಎಸ್.ಎಲ್ ಸಲುವಾಗಿ ಪ್ರತಿಯೊಂದು ಮದ್ಯದ ಬಾಕ್ಸ್ ನಲ್ಲಿ ತಲಾ ಒಂದರಂತೆ ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು BTL ಎಂಬ ಅಕ್ಷರದಿಂದ ಸೀಲು ಮಾಡಿ ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ನೀಡಿರುವ ದೂರಾಗಿದೆ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.57/2021 ಕಲಂ. ಮನುಷ್ಯ ಕಾಣೆ :-

     ದಿನಾಂಕ 07/08/2021 ರಂದು ಬೆಳಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಎ ಬವಿತ ಕೊಂ ಗಂಗರಾಜು 32 ವರ್ಷ, ಉಪ್ಪಾರ ಜನಾಂಗ, ವಾರ್ಡ್ ನಂ 25 ಎನ್ ಪಿ.ಒ ರಸ್ತೆ ಹೂವಿನ ಬೀದಿ ಚಿಕ್ಕಬಳ್ಳಾಪುರ ನಗರ ಖಾಯಂ ವಾಸ ಮಂಚನಬಲೆ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು 7 ವರ್ಷಗಳ ಹಿಂದೆ ಅಂದ್ರ ಪ್ರದೇಶದ ಎನೆಗೆ ದಳವಾರಪಲ್ಲಿ ಚಿತ್ತೂರು ಜಿಲ್ಲೆ ವಾಸಿ ನಾರಾಯಣಪ್ಪ ಬುವವರ ಮಗನಾದ ಗಂಗರಾಜು (ರೆಡ್ಡಿ) ಎಂಬುವರನ್ನು ಮದುವೆ ಮಾಡಿಕೊಂಡಿದ್ದು ಅಂದಿನಿಂದ ಬೆಂಗಳೂರು ಕಲಾಸಿ ಪಾಳ್ಯದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈಟರ್ ಕೆಲಸ ಮಾಡಿಕೊಂಡು ಅಲ್ಲೇ ವಾಸವಿದ್ದು ಈಗ್ಗೆ ಸುಮಾರು ಒಂದು ವರ್ಷ ಹಿಂದೆ ಕೋರೊನ ಕಾಯಿಲೆ ಕಾರಣ ಕೆಲಸ ವಿಲ್ಲದೇ ಚಿಕ್ಕಬಳ್ಳಾಪುರ ನಗರದ ಹೂವಿನ ಬೀದಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುತ್ತೇವೆ. ನಮಗೆ ಇಬ್ಬರು ಮಕ್ಕಳಿರುತ್ತಾರೆ.ತಾನು ಮದುವೆಯಾದಗಿನಿಂದ ಅನೂನ್ಯವಾಗಿ ಸಂಸಾರ ಮಾಡಿಕೊಂಡಿದ್ದು  ಇತ್ತಿಚೆಗೆ ಕೂಲಿ ಕೆಲಸಕ್ಕೆ ಹೋಗಿ ಬರುತ್ತಿದ್ದರು ಹಿಗಿರುವಾಗ ಬೆಂಗಳೂರಿನ ಕಲಾಸಿ ಪಾಳ್ಯ ಮಾರುಕಟ್ಟೆಯ ಗೊವಿಂದರಾಜು ಎಂಬುವವರು ತನ್ನ ಗಂಡನಿಗೆ ಕರೆ ಮಾಡಿ ಕೆಲಸಕ್ಕೆ ಬರುವಂತೆ ಹೇಳಿದ್ದು ಅದರಂತೆ ದಿನಾಂಕ 01/08/2021 ರಂದು ರಾತ್ರಿ 8-30 ಗಂಟೆಗೆ ಬೆಂಗಳೂರಿಗೆ ಮಾರುಕಟ್ಟೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಇದುವರೆಗೆ ಮನೆಗೆ ಬಂದಿರುವುದಿಲ್ಲ ತನ್ನ ಗಂಡನ ಪೊನ್ ನಂ 6360638425 ಮತ್ತು 8553362642  ಗೆ ಕರೆ ಮಾಡಿದಾಗ ಸ್ವಿಚ್ ಅಪ್ ಬರುತ್ತಿರುತ್ತದೆ, ನಂತರ ಗಾಬರಿ ಗೊಂಡು ತನ್ನ ನೆಂಟರು, ಪರಿಚಯಸ್ತರು, ಸ್ನೇಹಿತರು, ಎಲ್ಲಾ ಕಡೆ ವಿಚಾರಿಸಿದರೂ ಸಹ ಪತ್ತೆಯಾಗಿರುವುದಿಲ್ಲ ಅದ್ದರಿಂದ ಕಾಣೆಯಾಗಿರುವ ತನ್ನ ಗಂಡ ಗಂಗರಾಜು(ರೆಡ್ಡಿ) ರವರನ್ನು ಪತ್ತೆ ಮಾಡಿ ಕೊಡಬೇಕಾಗಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.352/2021 ಕಲಂ. 15(ಎ) ಕೆ.ಇ ಆಕ್ಟ್ :-

     ದಿನಾಂಕ 07-08-2021 ರಂದು ಮದ್ಯಾಹ್ನ 12-30 ಗಂಟೆಗೆ ಠಾಣೆಯ ಹೆಚ್.ಸಿ-03 ರಾಜಣ್ಣ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:07/08/2021 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ತಾನು, ಸಿ.ಪಿ.ಸಿ-239 ಮಣಿಕಂಠ ರವರು ಠಾಣಾ ಸರಹದ್ದಿನ ಕಟಮಾಚನಹಳ್ಳಿ, ಚಿನ್ನಸಂದ್ರ, ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 11-15 ಗಂಟೆಯ ಸಮಯದಲ್ಲಿ ಆಲಂಭಗಿರಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಲಕ್ಷ್ಮೀನಾರಾಯಣಶೆಟ್ಟಿ ಬಿನ್ ರಾಮಶೆಟ್ಟಿ ರವರು ತನ್ನ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಆಲಂಭಗಿರಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಲಕ್ಷ್ಮೀನಾರಾಯಣಶೆಟ್ಟಿ ಬಿನ್ ರಾಮಶೆಟ್ಟಿ, 36 ವರ್ಷ, ಆರ್ಯವೈಶ್ಯರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಆಲಂಬಗಿರಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 11-30 ರಿಂದ 12-15 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಲಕ್ಷ್ಮೀನಾರಾಯಣಶೆಟ್ಟಿ ಬಿನ್ ರಾಮಶೆಟ್ಟಿ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 

4. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.140/2021 ಕಲಂ. 454,457,380 ಐ.ಪಿ.ಸಿ:-

     ಪಿರ್ಯಾದಿದಾರರಾದ ಗುಲಾಮ್ ಮುಸ್ತಾಪ ಬಿನ್ ಅಮೀರ್ ಜಾನ್, 48 ವರ್ಷ, ವೂಟ್ಟು ವ್ಯಾಪಾರ, ಸೊಣ್ಣಶೆಟ್ಟಿಹಳ್ಳಿ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಶವೆನೆಂದರೆ ತಾನು ವೂಟ್ಟು ವ್ಯಾಪಾರ ಮತ್ತು ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿಕೊಂಡಿರುತ್ತೇನೆ. ತಾನು ಈಗ್ಗೆ 4 ವರ್ಷಗಳಿಂದ ಸೊಣ್ಣಶೆಟ್ಟಿಹಳ್ಳಿಯ 6 ನೇ ಕ್ರಾಸ್ ನಲ್ಲಿರುವ ಚಾಂದಪಾಷ ರವರ ಬಾಬತ್ತು ಮನೆಯಲ್ಲಿ ಸಂಸಾರ ಸಮೇತ ಬಾಡಿಗೆಗೆ ವಾಸವಾಗಿರುತ್ತೇನೆ. ಚೌಡರೆಡ್ಡಿ ಪಾಳ್ಯದಲ್ಲಿ  ನಮ್ಮ ಬಾಬತ್ತು ಸ್ವಂತ ಮನೆಯಿದ್ದು ಸದರಿ ಮನೆಯನ್ನು ತಾನು ಈಗ್ಗೆ ಒಂದು ವಾರದ ಹಿಂದೆ ಚಿಂತಾಮಣಿ ತಾಲ್ಲೂಕು ಕೊಂಡ್ಲಿಗಾನಹಳ್ಳಿ ಗ್ರಾಮದ ವೆಂಕಟರವಣಪ್ಪ ರವರಿಗೆ 21 ಲಕ್ಷಕ್ಕೆ ಮಾರಾಟ ಮಾಡಿದ್ದು ಅವರು ನನಗೆ 10.ಲಕ್ಷ ಹಣವನ್ನು ನೀಡಿದ್ದು ಸದರಿ ಹಣವನ್ನು ತಾನು ತಂದು ನಮ್ಮ  ಮನೆಯ ಬಿರುವಿನಲ್ಲಿ ಇಟ್ಟಿರುತ್ತೇನೆ. ಮತ್ತೆ ತನ್ನ ಬಳಿಯಿದ್ದ ಮತ್ತು ವೊಟ್ಟಿನಿಂದ ಬಂದ ಹಾಗೂ ಎಸ್ ಎನ್ ಪಿ ಹಾರ್ಡವೇರ್ ಮಾಲೀಕರ ಖಾತೆಗೆ ಒಂದುವರೆ ಲಕ್ಷ ರೂಗಳನ್ನು ಅವರ ಖಾತೆಗೆ ಜಮಾ ಮಾಡಿಸಿ ಅವರಿಂದ ಹಣವನ್ನು ಡ್ರಾ ಮಾಡಿಸಿ ತೆಗೆದುಕೊಂಡು ಬಂದು ಮನೆಯಲ್ಲಿ ಇಟ್ಟಿರುತ್ತೇನೆ. ನಮ್ಮ ಮನೆಯ ಎರಡು ರೂಂನಲ್ಲಿರುವ ಬಿರುವಿನಲ್ಲಿ ಸುಮಾರು 17.50.000/ರೂಗಳನ್ನು ಇಟ್ಟಿರುತ್ತೇನೆ. ಈಗಿರುವಲ್ಲಿ ನಮ್ಮ ಸಂಬಂದಿಕರ ಮದುವೆಗೆಂದು ನಾವು ಮನೆಯನ್ನು ಬೀಗ ಹಾಕಿಕೊಂಡು ದಿನಾಂಕ 04/08/2021 ರಂದು ಸಂಜೆ 4.00 ಗಂಟೆಗೆ ಸಂಸಾರ ಸಮೇತ ಕೋಲಾರಕ್ಕೆ ಹೋಗಿರುತ್ತೇವೆ. ಮತ್ತೆ ನಾವು ಮದುವೆಯನ್ನು ಮುಗಿಸಿಕೊಂಡು ದಿನಾಂಕ 05/08/2021 ರಂದು ರಾತ್ರಿ ಸುಮಾರು 7.00 ಗಂಟೆಗೆ ನಮ್ಮ ಮನೆಯ ಬಳಿ ಬಂದಾಗ ನಮ್ಮ ಮನೆಯ ಬಾಗಿಲು ತೆಗೆದಂತಿದ್ದು. ನೋಡಲಾಗಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಮನೆಯೊಳಗೆ ಪ್ರವೇಶ ಮಾಡಿ ರೂಂನಲ್ಲಿರುವ ಬೀರುವಿನ ಲಾಕ್ ನ್ನು ಕಿತ್ತು ಅದರಲ್ಲಿಟ್ಟಿದ್ದ 17.50.000/ರೂಗಳ ನಗದು ಹಣವನ್ನು ಮತ್ತು ಮಕ್ಕಳ ಚಿಕ್ಕ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳರು ನಮ್ಮ ಮನೆಯಲ್ಲಿ ದಿನಾಂಕ 04/08/2021 ರಿಂದ 05/08/2021 ರಂದು ಯಾವುದೋ ಸಮಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಆದ್ದರಿಂದ ನಮ್ಮ ಮನೆಯಲ್ಲಿ ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು  ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೇ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.184/2021 ಕಲಂ. 78(I),78(3) ಕೆ.ಪಿ ಆಕ್ಟ್:-

     ದಿನಾಂಕ:02/08/2021 ರಂದು ಸಂಜೆ5-30 ಗಂಟೆಯಲ್ಲಿ ಶ್ರೀ ವಿಜಯ್ ಕುಮಾರ್ ಪಿಎಸ್ಐ, ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ರವರು ಠಾಣೆಯಲ್ಲಿ ನೀಡಿದ ಮೆಮೋ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 02/08/2021 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಗೌರೀಬಿದನೂರು ತಾಲ್ಲೂಕು, ಕದಿರೇನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಯಾರೋ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಹೆಚ್.ಸಿ 20 ಶ್ರೀನಿವಾಸರೆಡ್ಡಿ, ಪಿ.ಸಿ.512 ರಾಜಶೇಖರ ಹಾಗು ಪಂಚರೊಂದಿಗೆ ಗ್ರಾಮಕ್ಕೆ ಮದ್ಯಾಹ್ನ 3-30 ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ, ಮರೆಯಲ್ಲಿ ನಿಂತು ನೋಡಲಾಗಿ, ಯೋರೋ ಒಬ್ಬ ಕದಿರೇನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು ನಾನು ಮತ್ತು ಪೊಲೀಸ್ ಸಿಬ್ಬಂದಿಯವರು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಸುರೇಶ್ ಬಿನ್ ನರಸಪ್ಪ, 30 ವರ್ಷ, ಆದಿ ಕರ್ನಾಟಕ ಜನಾಂಗ, ವಾಟದಹೊಸಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಆತನ ಬಳಿ ಪರಿಶೀಲಿಸಲಾಗಿ ನಗದು ಹಣ 510-00 ರೂಗಳು, ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ಸುರೇಶ್ ಬಿನ್ ನರಸಪ್ಪ, ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದಿರುವ ಒಂದು ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಮತ್ತು 510-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 3-45 ಗಂಟೆಯಿಂದ ಸಂಜೆ 4-45 ಗಂಟಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ ಸಂಜೆ 5-30 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ಮೆಮೋ ದೂರನ್ನು ಪಡೆದುಕೊಂಡಿರುತ್ತೇನೆ. ದಿನಾಂಕ 06/08/2021 ರಂದು ಮದ್ಯಾನ 03-15 ಗಂಟೆಗೆ ನ್ಯಾಯಾಲಯದ ಪಿಸಿ 129 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.185/2021 ಕಲಂ. 78(I),78(3) ಕೆ.ಪಿ ಆಕ್ಟ್:-

     ದಿನಾಂಕ:03/08/2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ಮೆಮೋವಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 03/08/2021 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಪಿರ್ಯಾದಿದಾರರು ಹೆಚ್.ಸಿ-01 ಚಂದ್ರಶೇಖರ ಹಾಗೂ ಎ.ಪಿ.ಸಿ-143 ಮಹೇಶ ರವರೊಂದಿಗೆ ಕೆ.ಎ-40 ಜಿ-538 ಸರ್ಕಾರಿ ಜೀಪಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಸಹಾಯವಾಣಿ ಕೇಂದ್ರದ ವ್ಯಾಪ್ತಿಯ ಹಳ್ಳಿಗಳಲ್ಲಿ ಗಸ್ತು ಮಾಡಿಕೊಂಡು ಬೆಳಿಗ್ಗೆ 9-30 ಗಂಟೆಗೆ ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಗ್ರಾಮಕ್ಕೆ ಹೋದಾಗ ಭಾತ್ಮಿದಾರರಿಂದ ನಗರಗೆರೆ ಗ್ರಾಮದ ವಾಸಿ ನರಸಿಂಹರೆಡ್ಡಿ ಬಿನ್ ಲೇಟ್ ಚಿನ್ನಪ್ಪ ಎಂಬುವವರು ಕಾನೂನು ಬಾಹಿರವಾಗಿ ಮಟ್ಕಾ ಅಂಕಿಗಳನ್ನು ಬರೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಅದರಂತೆ ನಗರಗೆರೆ ಸಹಾಯವಾಣಿ ಕೇಂದ್ರಕ್ಕೆ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿ ತಿಳಿಸಿ ಪಂಚರೊಂದಿಗೆ ಹಾಗೂ ಸಿಬ್ಬಂದಿಯೊಂದಿಗೆ ನಡೆದುಕೊಂಡು ಹೋಗಿ ನೋಡಲಾಗಿ ಅದು ಅಸಂಜ್ಞೇಯ ಅಪರಾಧವಗಾರುತ್ತದೆ.. ಆದ್ದರಿಂದ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಳ್ಳುವಷ್ಟರಲ್ಲಿ ಆರೋಪಿ ಕೃತ್ಯವನ್ನು ಮರೆ ಮಾಚುವ ಸಾಧ್ಯತೆ ಇರುವುದರಿಂದ ಪಂಚರ ಸಮಕ್ಷಮದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ನಗರಗೆರೆ ಗ್ರಾಮದ ಬಸ್ ನಿಲ್ದಾಣದಲ್ಲಿ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಅಂಕಿಗಳನ್ನು ಬರೆಯುತ್ತಿದ್ದ ಆಸಾಮಿಯನ್ನ ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ನರಸಿಂಹರೆಡ್ಡಿ ಬಿನ್ ಲೇಟ್ ಚಿನ್ನಪ್ಪ, 70 ವರ್ಷ, ಒಕ್ಕಲಿಗರು, ವ್ಯವಸಾಯ, 2 ನೇ ವಾರ್ಡ್, ನಗರಗೆರೆ ಗ್ರಾಮ, ನಗರಗೆರೆ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿರುತ್ತಾರೆ. ನಂತರ ಆತನ ಬಳಿ ಪರಿಶೀಲಿಸಲಾಗಿ 1] ಒಂದು ಬಾಲ್ ಪಾಯಿಂಟ್ ಪೆನ್ನು 2] ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ 03 ಮಟ್ಕಾ ಚೀಟಿಗಳು ಮತ್ತು 3] 2,200/- ರೂಪಾಯಿಗಳಿದ್ದು ನಗದು ಹಣದ ಬಗ್ಗೆ ವಿಚಾರಿಸಲಾಗಿ ಮಟ್ಕಾ ಬರೆದಿದ್ದರಿಂದ ಬಂದ ಹಣವೆಂತ ತಿಳಿಸಿದ್ದು ಸ್ಥಳದಲ್ಲಿ ಬೆಳಿಗ್ಗೆ 9-45 ಗಂಟೆಯಿಂದ ಬೆಳಿಗ್ಗೆ 10-45 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿರುತ್ತೆ. ಅಮಾನತ್ತು ಪಡಿಸಿಕೊಂಡ ಮಾಲನ್ನು ಮತ್ತು ಆಸಾಮಿಯನ್ನು ವಶಕ್ಕೆ ವಶಪಡಿಸಿಕೊಂಡು, ಬೆಳಿಗ್ಗೆ 11-30 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯನ್ನು ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 78 ಕ್ಲಾಸ್ (1) (3) ಕೆ,ಪಿ.ಆಕ್ಟ್ ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂ.346/2021 ರಂತೆ ದಾಖಲಿಸಿರುತ್ತೆ. ದಿನಾಂಕ: 07/08/2021 ರಂದು ಬೆಳಿಗ್ಗೆ 11-30 ಗಂಟೆಗೆ ನ್ಯಾಯಾಲಯದ ಪಿಸಿ 302 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 

7. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.111/2021 ಕಲಂ. 78(3) ಕೆ.ಪಿ ಆಕ್ಟ್:-

     ದಿ:06/08/2021 ರಂದು ಮದ್ಯಾಹ್ನ 2-15 ಗಂಟೆಯಲ್ಲಿ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಪಿ.ಸಿ.318.ಶ್ರೀ.ದೇವರಾಜು ರವರು ಠಾಣಾ ಎನ್.ಸಿ.ಆರ್.ನಂ.133/2021 ಕೇಸಿನಲ್ಲಿ  ಆರೋಪಿಯ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಘನ ನ್ಯಾಯಾಲಯವು ಅನುಮತಿಯನ್ನು ನೀಡಿರುವ ಅದೇಶವನ್ನು ತಂದು ಹಾಜರ್ಪಡಿಸಿದ್ದು, ಎನ್.ಸಿ.ಆರ್.ನಂ.133/2021, ದಿ:28/06/2021 ರಲ್ಲಿ ಶ್ರೀ.ಕೆ.ಪ್ರಸನ್ನಕುಮಾರ್, ಪಿ.ಎಸ್.ಐ, ಗೌರಿಬಿದನೂರು ನಗರ ಪೊಲೀಸ್ ಠಾಣೆ ರವರು ದಿ:28/06/2021 ರಂದು ಸಂಜೆ 4-30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ  ದೂರು ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ:28/06/2021 ರಂದು ಮದ್ಯಾಹ್ನ 2-30 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ಶಿವಣ್ಣ.ಎ., ಹೆಚ್.ಸಿ.-213 ರವರು ನನಗೆ ಪೋನ್ ಮಾಡಿ ಗೌರಿಬಿದನೂರು ನಗರದ,  ವೀರಂಡ್ಲಹಳ್ಳಿ ಗ್ರಾಮದ ಜಗಳಿಕಟ್ಟೆಯ ಬಳಿ ಯಾರೋ ಒಬ್ಬ ವ್ಯಕ್ತಿ ಕಾನೂನು ಬಾಹಿರವಾಗಿ ಅಕ್ರಮ ಮಟ್ಕಾ ಜೂಜಾಟವನ್ನು ಆಡುತ್ತೀರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ಠಾಣೆಯಲ್ಲಿದ್ದ ನಮ್ಮ ಠಾಣೆಯ ಸಿಬ್ಬಂದಿಯಾದ ಪಿ.ಸಿ.-507.ಹನುಮಂತರಾಯಪ್ಪ ರವರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40.ಜಿ-281 ರಲ್ಲಿ  ಕುಳಿಸಿಕೊಂಡು  ಠಾಣೆಯ ಜೀಪ್ ಚಾಲಕನಾದ ಎ.ಪಿ.ಸಿ-76.ಹರೀಶ್ ರವರು  ಜೀಪ್ ಚಾಲಕನಾಗಿದ್ದು ಎಲ್ಲರೂ ಜೀಪಿನಲ್ಲಿ ಕುಳಿತುಕೊಂಡು ಮದ್ಯಾಹ್ನ 2-45 ಗಂಟೆಗೆ ಠಾಣೆಯಿಂದ ಹೊರಟು ಗೌರಿಬಿದನೂರು ನಗರದ, ನ್ಯಾಷನಲ್ ಕಾಲೇಜು ವೃತ್ತದ ಬಳಿಗೆ ಹೋಗಿ  ಅಲ್ಲಿ ಆಟೋ ನಿಲ್ದಾಣದ ಬಿಳಿ ಇದ್ದ  ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು, ಸದರಿ ದಾಳಿಗೆ  ಪಂಚಾಯ್ತಿ ದಾರರಾಗಿ ಹಾಜರಾಗಲು ಪಂಚರು ಒಪ್ಪಿದರು.  ನಂತರ ಅವರನ್ನು ನಮ್ಮ ಜೀಪಿನಲ್ಲಿ ಕರೆದುಕೊಂಡು ಇಲ್ಲಿಂದ ಮುಂದೆ ಸ್ವಲ್ಪ ದೂರದಲ್ಲಿ ಸಮಾತಾ ಶಾಲೆಯ ಬಳಿಗೆ ಹೋಗಿ ಅಲ್ಲಿದ್ದ ಮಾಹಿತಿಯನ್ನು ನೀಡಿದ್ದ ಶಿವಣ್ಣ.ಎ., ಹೆಚ್.ಸಿ.-213  ರವರನ್ನು ಮದ್ಯಾಹ್ನ 2-50  ಗಂಟೆಗೆ   ಕರೆದುಕೊಂಡು  ವೀರಂಡ್ಲಹಳ್ಳಿ ಬಳಿಯಿರುವ ಹಾಲಿನ ಕೇಂದ್ರದ ಬಳಿಯ ಸ್ವಲ್ಪ ದೂರಕ್ಕೆ  ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ವೀರಂಡ್ಲಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಜಗಳಿಕಟ್ಟೆಯ ಬಳಿ ಯಾರೋ ಒಬ್ಬ ಅಸಾಮಿಯು 1 ರೂಪಾಯಿಗೆ 70/- ರೂಗಳನ್ನು ಕೊಡುವುದಾಗಿ ಸಾರ್ವಜನಿಕರಿಗೆ ಅಮಿಷವನ್ನು ಒಡ್ಡಿ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಅವರಿಂದ ಹಣವನ್ನು ಸಂಗ್ರಹಣೆ ಮಾಡುತ್ತಿರುವುದು  ಖಚಿತಪಟ್ಟಿದ್ದು ಕೂಡಲೇ ಅಕ್ರಮ ಮಟ್ಕಾ ಜೂಜಾಟವಾಡುತ್ತಿದ್ದ ವ್ಯಕ್ತಿಯ  ಮೇಲೆ ದಾಳಿ ಮಾಡಲು ಹೋದಾಗ ಅಲ್ಲಿದ್ದ  ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಓಡಿ ಹೋಗಿದ್ದು ನಂತರ ಮಟ್ಕಾ ಜೂಜಾಟದ  ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವನ್ನು ಆಡುತ್ತಿದ್ದ ಅಸಾಮಿಯನ್ನು ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ವಿಮಲ್ ಕುಮಾರ್ ಬಿನ್ ತಾರಾಚಂದ್, 50 ವರ್ಷ, ಜೈನ ಜನಾಂಗ, ಆಟೋ ಡ್ರೈವರ್ ಮತ್ತು  ಸ್ಟೌವ್  ರಿಪೇರಿ ಕೆಲಸ, ವಾಸ ನಾಗಿರೆಡ್ಡಿ ಬಡಾವಣೆ, ಗೌರಿಬಿದನೂರು ನಗರ ಎಂದು ತಿಳಿಸಿದ್ದು ನಂತರ ಸ್ಥಳದಲ್ಲಿ  ಪಂಚರ ಸಮಕ್ಷಮ ಪರಿಶೀಲನೆ ಮಾಡಲಾಗಿ  ಆತನ ಕೈಯಲ್ಲಿದ್ದ  1]  ವಿವಿಧ  ಮಟ್ಕಾ ಹಣದ ಅಂಕಿಗಳಿಗೆ ಸಂಬಂಧಿಸಿದ ಒಂದು ಮಟ್ಕಾ ಚೀಟಿ. 2] ಒಂದು ಬಾಲ್ ಪೆನ್. 3] ವಿವಿಧ ಮುಖಬೆಲೆಯ  ನೋಟುಗಳ್ಳುಳ್ಳ  ಒಟ್ಟು 1450/- ರೂಗಳ ನಗದು ಹಣವಿದ್ದು ಇವುಗಳನ್ನು ಪಂಚರ ಸಮಕ್ಷಮ   ಮದ್ಯಾಹ್ನ 3-00 ಗಂಟೆಯಿಂದ ಮದ್ಯಾಹ್ನ 3-45  ಗಂಟೆಯವರೆಗೆ   ಪಂಚನಾಮೆಯನ್ನು ಜರುಗಿಸಿ ಮಾಲುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ.  ನಂತರ ಮೇಲ್ಕಂಡ ಆರೋಪಿತನನ್ನು ಮತ್ತು ಮಾಲಿನೊಂದಿಗೆ  ಹಾಗೂ ಅಸಲು ಪಂಚನಾಮೆಯೊಂದಿಗೆ ಸಂಜೆ 4-00 ಗಂಟೆಗೆ ಠಾಣೆಗೆ  ವಾಪಸ್ಸು ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 4-30 ಗಂಟೆಗೆ ಸದರಿ ಆರೋಪಿ ಮತ್ತು ಮಾಲುಗಳನ್ನು  ಮುಂದಿನ ಕಾನೂನು ಕ್ರಮ ಕೈಗೊಳ್ಳಲು  ಸೂಚಿಸಿ  ಶ್ರಿಮತಿ.ಪದ್ಮ.ಮ.ಹೆಚ್.ಸಿ-05 ರವರ ವಶಕ್ಕೆ ನೀಡಿದ್ದರ ಸಂಬಂಧ ಆರೋಪಿಯ ವಿರುದ್ದ ಠಾಣೆಯಲ್ಲಿ ಎನ್.ಸಿ.ಆರ್.ನಂ.133/2021  ರೀತ್ಯಾ ದಾಖಲಿಸಿಕೊಂಡಿರುತ್ತಾರೆ. ನಂತರ ಶ್ರಿಮತಿ.ಪದ್ಮ.ಮ.ಹೆಚ್.ಸಿ-05 ರವರು ಎನ್.ಸಿ.ಆರ್.ನಂ.133/2021 ಕೇಸಿನಲ್ಲಿನ  ಆರೋಪಿಯ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಲು  ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿದ್ದು, ಈ ಸಂಬಂಧ ಘನ ನ್ಯಾಯಾಲಯವು ಆರೋಪಿಯ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಕೆಯನ್ನು ಕೈಗೊಳ್ಳಲು ಅನುಮತಿಯನ್ನು   ನೀಡಿದ್ದು,  ಘನ ನ್ಯಾಯಾಲಯದ  ಅನುಮತಿಯ ಅದೇಶದ ಮೇರೆಗೆ ಠಾಣೆಯಲ್ಲಿ ಮೊ.ಸಂ.111/2021 ಕಲಂ 78(3) ಕೆ.ಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.259/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ: 07-08-2021 ರಂದು ಮದ್ಯಾಹ್ನ 12-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮಮ್ಮ ಕೋಂ ಮುನಿಕೃಷ್ಣಪ್ಪ, 36 ವರ್ಷ, ನಾಯಕರು, ಜಿರಾಯ್ತಿ, ವಾಸ: ಡಬರಗಾನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ: 06-08-2021 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ತನ್ನ ಗಂಡ ಮುನಿಕೃಷ್ಣಪ್ಪ ರವರು ಮನೆಯಲ್ಲಿ ಇಲ್ಲದೆ ಇದ್ದ ಸಮಯದಲ್ಲಿ ಬೆಂಗಳೂರು ಗ್ರಾಮಾಂಜಿ ಜಿಲ್ಲೆ ಹೊಸಕೋಟೆ ತಾಲ್ಲೂಕು ಗೇರಹಳ್ಳಿ ಗ್ರಾಮದ ಲಕ್ಷ್ಮಿದೇವಮ್ಮ ಕೋಂ ನಾಗರಾಜ ಮತ್ತು ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಗ್ರಾಮದ ಸುಮ ಕೋಂ ಮಂಜುನಾಥ ರವರು ಇಬ್ಬರೂ ಸಹ ಡಬರಗಾನಹಳ್ಳಿ ಗ್ರಾಮದಲ್ಲಿರುವ ನಮ್ಮ ಮನೆಯ ಬಳಿ ಬಂದು ತನ್ನನ್ನು ಹಿಡಿದು ಕೂದಲನ್ನು ಹಿಡಿದು ಎಳೆದಾಡಿ ಕೈಗಳಿಂದ ಬೆನ್ನಿಗೆ ಹೊಡೆದು ಕೈಗಳಲ್ಲಿ ಪರಚಿ ನಿನ್ನ ಗಂಡನನ್ನು ಮತ್ತು ನಿನ್ನನ್ನು ನಾವು ಸಾಯಿಸದೆ ಬಿಡುವುದಿಲ್ಲವೆಂದು ಅವಾಚ್ಯ ಶಬ್ದಗಳಿಂದ ಬೈದು ಎಡಕೈಗೆ ದೊಣ್ಣೆಯಿಂದ ಹೊಡೆದು ರಕ್ತದ ಗಾಯ ಮಾಡಿದ್ದು, ಹೊಡೆಯುವಾಗ ತನ್ನ ತಮ್ಮನ ಹೆಂಡತಿಯಾದ ದೀಪ ಕೋಂ ನಾಗೇಶ ರವರು ಬಿಡಿಸಲು ಬಂದಾಗ ದೊಣ್ಣೆಯಲ್ಲಿ ಹೊಡೆದು ಕೂದಲನ್ನು ಹಿಡಿದು ಎಳೆದಾಡಿ ನೀನು ಯಾರೆ ಗಲಾಟೆ ಬಿಡಿಸಲು ಬರುವುದಕ್ಕೆ ಎಂದು ಆಕೆಯನ್ನು ಬೈದು ಹೊಡೆದು ಕತ್ತಿನ ಮೇಲೆ ರಕ್ತ ಬರುವ ರೀತಿ ಪರಚಿ ಪ್ರಾಣ ಬೆದರಿಕೆಯನ್ನು ಹಾಕಿದ್ದು ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 259/2021 ಕಲಂ 323, 324, 504, 506 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

9. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.95/2021 ಕಲಂ. 285 ಐ.ಪಿ.ಸಿ:-

     ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಪದ್ಮಾವತಮ್ಮ ಪಿ.ಎಸ್.ಐ ಆದ ನಾನು ದಿನಾಂಕ: 07/08/2021 ರಂದು ಬೆಳಿಗ್ಗೆ ಸುಮಾರು 9-30 ಗಂಟೆಯಲ್ಲಿ ಠಾಣೆಯ ಕರ್ತವ್ಯದಲ್ಲಿದ್ದಾಗ ಮಾನ್ಯ ಸಿ.ಪಿ.ಐ ಸಾಹೇಬ ರವರಿಗೆ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ಆಜಾದ್ ನಗರದಲ್ಲಿರುವ ಕಲಂದರ್ ಬಿನ್ ಪಠಾನ್ ಪಾಷ ಎಂಬುವರು ಅವರ ಮನೆಯ ಮುಂದೆ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ನಿಂದ ಬೇರೆ ಗ್ಯಾಸ್ ಸಿಲಿಂಡರ್ ಹಾಗೂ ವಾಹನಗಳಿಗೆ ಗ್ಯಾಸ್ ರಿಪೀಲಿಂಗ್ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ನಾನು ಅಪರಾಧ ಸಿಬ್ಬಂದಿಯವರಾದ ಎ.ಎಸ್.ಐ ನರಸಿಂಹಮೂರ್ತಿ ಹಾಗೂ ಹೆದ್.ಸಿ-95 ಪ್ರಕಾಶ್ ರವರೊಂದಿಗೆ ಪಂಚಾಯ್ತಿದಾರರನ್ನು ಕರೆದುಕೊಂಡು ಕೆಎ-40-ಜಿ-141 ಸರ್ಆಾರಿ ಪೊಲೀಸ್ ವಾಹನದಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಬೆಳಿಗ್ಗೆ 10-00 ಗಂಟೆಗೆ ದಾಳಿ ಮಾಡಿದಾಗ ಕಲಂದರ್ ಎಂಬುವರು ಮನೆಯ ಮುಂಭಾಗದಲ್ಲಿ 4 ತುಂಬಿದ ಗ್ಯಾಸ್ ಸಿಲಿಂಡರ್ ಗಳನ್ನು ಇಟ್ಟುಕೊಂಡು ಮತ್ತೊಂದು ಗ್ಯಾಸ್ ಸಿಲಿಂಡರ್ ಗೆ ವಿದ್ಯುತ್ ಮೋಟರ್ ಇರುವ ಪೈಪನ್ನು ಆಳವಡಿಸಿ ಮಾನವನ ಪ್ರಾಣಕ್ಕೆ ಹಾನಿ ಉಂಟಾಗುವ ರೀತಿಯಲ್ಲಿ ನಿರ್ಲಕ್ಷ್ಯತೆಯಿಂದ ಹಾಗೂ ಅಪಾಯಕರ ರೀತಿಯಲ್ಲಿ ಗ್ಯಾಸ್ ರೀಪಿಲ್ಲಿಂಗ್ ಮಾಡಲು ಕಾಯತ್ತಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಆಸಾಮಿಯನ್ನು ವಶಕ್ಕೆ ಪಡೆದು ಆತನು ಹೆಸರು ವಿಳಾಸ ಕೇಳಲಾಗಿ ಕಲಂದರ್ ಬಿನ್ ಪಠಾನ್ ಪಾಷ, 22 ವರ್ಷ, ವೆಲ್ಡಿಂಗ್ ಕೆಲಸ, 28ನೇ ವಾಡರ್ು, ಅಜಾದ್ ನಗರ, ಶಿಢ್ಲಘಟ್ಟ ನಗರ ಎಂದು ತಿಳಿಸಿರುತ್ತಾರೆ ಇವರನ್ನು ಗ್ಯಾಸ್ ರೀಪಿಲ್ಲಿಂಗ್ ಮಾಡಲು ಪರವಾನಗಿ ಇದೆಯೇ ಎಂದು ಪ್ರಸ್ನಿಸಿದಾಗ ಸದರಿ ಆಸಾಮಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾರೆ. ಇವರು ಗ್ಯಾಸ್ ರೀಪಿಲ್ಲಿಂಗ್ ಮಾಡುವ ಸ್ಥಳದಲ್ಲಿ ಇದ್ದ ಗ್ಯಾಸ್ ಸಿಲಿಂಡರ್ ಗಳನ್ನು ಪರಿಶೀಲಿಸಲಾಗಿ ಇವು ಗೃಹ ಬಳಕೆ ಗ್ಯಾಸ್ ಸಿಲೆಂಡರ್ ಗಳಿದ್ದು, ಇಂದೇನ್ ಗ್ಯಾಸ್ ಕಂಪನಿಗೆ ಸೇರಿದ ಸುಮಾರು 16.00 ಕೆ.ಜಿ ತೂಕದ 4-ತುಂಬಿದ ಸಿಲೆಂಡರ್ ಗಳು, ಒಂದು ಅರ್ದಂ ಬರ್ದ ತುಂಬಿದ ಇಂದೇನ್ ಕಂಪನಿಯ 1-ಗ್ಯಾಸ್ ಸಿಲೆಂಡರ್ ಮತ್ತು 5 ಕೆ.ಜಿ ತೂಕದ 1- ಖಾಲಿ ಗ್ಯಾಸ್ ಸಿಲಿಂಡರ್ ತೂಕ ಮಾಡುವ ಒಂದು ತೂಕದ ಯಂತ್ರ ಹಾಗೂ ಗ್ಯಾಸ್ ರೀಪಿಲ್ಲಿಂಗ್ ಮಾಡುವ 1 ಹೆಚ್.ಪಿ. ವಿದ್ಯುತ್ ಮೋಟಾರ್ ಸಿಕ್ಕಿದ್ದು ಇವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಬೆಳಿಗ್ಗೆ 10-15 ರಿಂದ 10-45 ಗಂಟೆಯ ವರೆಗೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿದ್ದ ಆರೋಪಿ ಕಲಂದರ್ ರವರನ್ನು ವಶಕ್ಕೆ ಪಡೆದು, ಮಾಲು ಸಮೇತ ಠಾಣೆಗೆ ವಾಪಸ್ಸ್ಸು ಬಂದು ಮುಂದಿನ ಕಾನೂನು ಕ್ರಮ ಬಗ್ಗೆ ಬೆಳಿಗ್ಗೆ 11-30 ಗಂಟೆಗೆ ಠಾಣಾ ಮೊ.ಸಂ.95/2021 ಕಲಂ; 285 ಐಪಿಸಿ ರೀತ್ಯಾ ಸ್ವತಃ ಕೇಸು ದಾಖಲಿಸಿರುತ್ತೆ.

 

10. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.96/2021 ಕಲಂ. 285 ಐ.ಪಿ.ಸಿ:-

     ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಪದ್ಮಾವತಮ್ಮ ಪಿ.ಎಸ್.ಐ ಆದ ನಾನು ದಿನಾಂಕ: 07/08/2021 ರಂದು ಬೆಳಿಗ್ಗೆ ಸುಮಾರು 11-45 ಗಂಟೆಯಲ್ಲಿ ಠಾಣೆಯ ಕರ್ತವ್ಯದಲ್ಲಿದ್ದಾಗ ಮಾನ್ಯ ಸಿ.ಪಿ.ಐ ಸಾಹೇಬ ರವರಿಗೆ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ಸಂತೋಷ ನಗರದಲ್ಲಿರುವ ಮಹಮದ್ ಫಜಲ್ ಬಿನ್ ಮಹಮದ್ ಬಷೀರ್ ಹುಸೇನ್ ಎಂಬುವರು ಅವರ ಮನೆಯ ಮುಂದೆ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ನಿಂದ ಬೇರೆ ಗ್ಯಾಸ್ ಸಿಲಿಂಡರ್ಗೆ ಹಾಗೂ ವಾಹನಗಳಿಗೆ ಗ್ಯಾಸ್ ರಿಪೀಲಿಂಗ್ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ನಾನು ಅಪರಾಧ ಸಿಬ್ಬಂದಿಯವರಾದ ಎ.ಎಸ್.ಐ ನರಸಿಂಹಮೂರ್ತಿ ಹಾಗೂ ಹೆಚ್.ಸಿ-95 ಪ್ರಕಾಶ್ ರವರೊಂದಿಗೆ ಪಂಚಾಯ್ತಿದಾರರನ್ನು ಕರೆದುಕೊಂಡು ಕೆಎ-40-ಜಿ-141ಸರ್ಕಾರಿ ಪೊಲೀಸ್ ವಾಹನದಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಮದ್ಯಾಹ್ನ 12.30 ಗಂಟೆಗೆ ದಾಳಿ ಮಾಡಿದಾಗ ಯಾರೋ ಒಬ್ಬ ಆಸಾಮಿ ಅವರ ಮನೆಯ ಮುಂಭಾಗದಲ್ಲಿ 4 ತುಂಬಿದ ಗ್ಯಾಸ್ ಸಿಲಿಂಡರ್ ಗಳನ್ನು ಇಟ್ಟುಕೊಂಡು ಮತ್ತೊಂದು ಗ್ಯಾಸ್ ಸಿಲಿಂಡರ್ಗೆ ವಿದ್ಯುತ್ ಮೋಟರ್ ಇರುವ ಪೈಪನ್ನು ಆಳವಡಿಸಿ ಮಾನವನ ಪ್ರಾಣಕ್ಕೆ ಹಾನಿ ಉಂಟಾಗುವ ರೀತಿಯಲ್ಲಿ ನಿರ್ಲಕ್ಷತೆಯಿಂದ ಹಾಗೂ ಅಪಾಯಕರ ರೀತಿಯಲ್ಲಿ  ಕೆಎ.05-ಜಡ್-8675 ಮಾರುತಿ ಓಮನಿ ವ್ಯಾನ್ ವಾಹನಕ್ಕೆ ಗ್ಯಾಸ್ ರೀಪಿಲ್ಲಿಂಗ್ ಮಾಡುತ್ತಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಆಸಾಮಿಯನ್ನು ವಶಕ್ಕೆ ಪಡೆದು ಆತನು ಹೆಸರು ವಿಳಾಸ ಕೇಳಲಾಗಿ ಮಹಮದ್ ಫಜಲ್ ಬಿನ್ ಮಹಮದ್ ಬಷೀರ್, ಹುಸೇನ್, 38ವರ್ಷ, ರೇಷ್ಮೇ ಕೆಲಸ, ಸಂತೋಷನಗರ, ಶಿಢ್ಲಘಟ್ಟ ನಗರ ಎಂದು ತಿಳಿಸಿರುತ್ತಾರೆ. ಇವರನ್ನು ಗ್ಯಾಸ್ ರೀಪಿಲ್ಲಿಂಗ್ ಮಾಡಲು ಪರವಾನಗಿ ಇದೆಯೇ ಎಂದು ಪ್ರಸ್ನಿಸಿದಾಗ ಸದರಿ ಆಸಾಮಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾರೆ. ಇವರು ಗ್ಯಾಸ್ ರೀಪಿಲ್ಲಿಂಗ್ ಮಾಡುವ ಸ್ಥಳದಲ್ಲಿ ಇದ್ದ ಗ್ಯಾಸ್ ಸಿಲಿಂಡರ್ ಗಳನ್ನು ಪರಿಶೀಲಿಸಲಾಗಿ ಇವು ಗೃಹ ಬಳಕೆ ಗ್ಯಾಸ್ ಸಿಲೆಂಡರ್ ಗಳಿದ್ದು, ಇಂದೇನ್ ಗ್ಯಾಸ್ ಕಂಪನಿಗೆ ಸೇರಿದ ಸುಮಾರು 16.00 ಕೆ.ಜಿ ತೂಕದ 4-ತುಂಬಿದ ಸಿಲೆಂಡರ್ ಗಳು, ಒಂದು ಅರ್ದಂ ಬರ್ದ ತುಂಬಿದ ಇಂದೇನ್ ಕಂಪನಿಯ 1-ಗ್ಯಾಸ್ ಸಿಲೆಂಡರ್, ತೂಕ ಮಾಡುವ ಒಂದು ತೂಕದ ಯಂತ್ರ ಹಾಗೂ ಗ್ಯಾಸ್ ರೀಪಿಲ್ಲಿಂಗ್ ಮಾಡುವ 1 ಹೆಚ್.ಪಿ. ವಿದ್ಯುತ್ ಮೋಟಾರ್ ಮತ್ತು ರಿಪಿಲ್ಲಿಂಗ್ ಪೈಪು ಸಿಕ್ಕಿದ್ದು ಇವುಗಳನ್ನು ಹಾಗೂ ಕೆಎ.05-ಜಡ್-8675 ಮಾರುತಿ ಓಮನಿ ವ್ಯಾನ್ ವಾಹನವನ್ನು ಪಂಚಾಯ್ತಿದಾರರ ಸಮಕ್ಷಮ ಮದ್ಯಾಹ್ನ 12-45 ರಿಂದ 1-45 ಗಂಟೆಯ ವರೆಗೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿದ್ದ ಆರೋಪಿ ಮಹಮದ್ ಫಜಲ್ ರವರನ್ನು ವಶಕ್ಕೆ ಪಡೆದು, ಮಾಲುಗಳು ವಾಹನ ಸಮೇತ ಠಾಣೆಗೆ ವಾಪಸ್ಸ್ಸು ಬಂದು ಮುಂದಿನ ಕಾನೂನು ಕ್ರಮ ಬಗ್ಗೆ ಮದ್ಯಾಹ್ನ 2-15 ಗಂಟೆಗೆ ಠಾಣಾ ಮೊ.ಸಂ.96/2021 ಕಲಂ; 285 ಐಪಿಸಿ ರೀತ್ಯಾ ಸ್ವತಃ ಕೇಸು ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 07-08-2021 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080