ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 178/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ 06/07/2021 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿದಾರರಾದ ಅಶೋಕ ಕುಮಾರ ಜಿ.ಆರ್ ಬಿನ್ ರಾಮಕೃಷ್ಣಪ್ಪ.ಜಿ.ವಿ. 20 ವರ್ಷ, ಕುರುಬ ಜನಾಂಗ, ವಿದ್ಯಾರ್ಥಿ, ವಾಸ ಸಜ್ಜುಲವಾರಿಪಲ್ಲಿ ಗ್ರಾಮ, ಚೇಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೇಂದರೆ ದಿನಾಂಕ 05/07/2021 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ನನ್ನ ತಂದೆಯಾದ ರಾಮಕೃಷ್ಣಪ್ಪ, ಜಿ.ವಿ, ರವರು ನಮ್ಮ ಬಾಬತ್ತು ಕೆ.ಎ-40-ಕೆ-2250 ಹೀರೋ ಹೋಂಡಾ ಸ್ಪ್ಲೇಂಡರ್ ಪ್ಲಸ್ ದ್ವಿ ಚಕ್ರ ವಾಹನದಲ್ಲಿ ಕೆಲಸದ ಪ್ರಯುಕ್ತ ಬಾಗೇಪಲ್ಲಿ ತಾಲ್ಲೂಕು ಪರಗೋಡು ಗ್ರಾಮಕ್ಕೆ ಹೋಗಿದ್ದು,  ಕೆಲಸ ಮುಗಿಸಿಕೊಂಡು ವಾಪಸ್ ಬಾಗೇಪಲ್ಲಿಗೆ ಬರಲು ಎನ್.ಹೆಚ್ 44 ರಸ್ತೆಯಲ್ಲಿ ಅಗ್ನಿ ಶಾಮಕ ಠಾಣೆಯ ಬಳಿ ರಸ್ತೆಯ ಎಡಭಾಗದಲ್ಲಿ ಮದ್ಯಾಹ್ನ ಸುಮಾರು 3-00 ಗಂಟೆಯಲ್ಲಿ ಬರುತ್ತಿದ್ದಾಗ ಹಿಂಬದಿಯಿಂದ ಬೆಂಗಳೂರು ಕಡೆಯಿಂದ ಬಂದ ಎ.ಪಿ-39-ಡಿ.ಆರ್-0605 ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ನನ್ನ ತಂದೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಅದರ ಪರಿಣಾಮ ದ್ವಿ ಚಕ್ರ ವಾಹನ ಜಖಂಗೊಂಡು ನಮ್ಮ ತಂದೆಯವರಿಗೆ ಬಲ ಕೆನ್ನೆಗೆ, ಮುಖಕ್ಕೆ ಮತ್ತು ಬಲಗಡೆಯ ಹಣೆಯ ಮೇಲೆ ರಕ್ತ ಗಾಯಗಳಾಗಿರುವುದಾಗಿ ಚಿಕಿತ್ಸೆ ಬಗ್ಗೆ  ಆಂಬ್ಯೂಲೆನ್ಸ್ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ನನಗೆ ವಿಚಾರ ತಿಳಿಯಿತು. ತಕ್ಣಣ ನಾನು ಮತ್ತು ನಮ್ಮ ತಾಯಿ ಸಾವಿತ್ರಮ್ಮ ರವರು ಆಸ್ಪತ್ರೆಗೆ ಹೋಗಿ ನೋಡಲಾಗಿ ನಿಜವಾಗಿತ್ತು . ನಂತರ ವೈದ್ಯರ ಸಲಹೆ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ನಂತರ ಅಲ್ಲಿಂದ ನಿಮ್ಹಾನ್ಸ್ ಆಸ್ಪತ್ರೆ ನಂತರ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಪಡೆದು ನಂತರ ವೈದ್ಯರ ಸಲಹೆ ಮೇರೆಗೆ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತೇನೆ. ನಾನು ನಮ್ಮ ತಂದೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ಅಪಘಾತವನ್ನುಂಟು ಮಾಡಿದ ಎ.ಪಿ-39-ಡಿ.ಆರ್-0605 ನೊಂದಣಿ ಸಂಖ್ಯೆಯ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ. 50/2021 ಕಲಂ. 448,427,504,506,34 ಐ.ಪಿ.ಸಿ:-

  ದಿನಾಂಕ: 06-07-2021 ರಂದು ಈ ಕೇಸಿನ ಪಿರ್ಯಾಧಿಯಾದ ಶ್ರೀ ಎಸ್.ಜಿ. ನರಸಿಂಹಯ್ಯ ಬಿನ್ ಲೇಟ್ ಕೃಷ್ಣಪ್ಪ ವಾಪಸಂದ್ರ ರವರು  ರಾತ್ರಿ 7-30 ಗಂಟೆಗೆ ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ,   ತಾನು ಚಿಕ್ಕಬಳ್ಳಾಪುರ ನಗರದ  ಬಿಬಿ ರಸ್ತೆ ವಾಪಸಂದ್ರದಲ್ಲಿ  ಆರ್. ಅನೀಲ್ ಕುಮಾರ್ ರವರ ಬಾಡಿಗೆ ಅಂಗಡಿಗಳಲ್ಲಿ 2009 ರಿಂದ  ಕೋಳಿ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದಾಗಿ  ಈ  ಅಂಗಡಿಯ ಬಗ್ಗೆ ಅವರಿಗೂ ಮತ್ತು ಅವರ  ಅಣ್ಣ  ನರಸಿಂಹಮೂರ್ತಿ ರವರಿಗೆ  ತಕರಾರು ಇದ್ದು ಓಎಸ್-61/2016 ರಂತೆ  ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುತ್ತದೆ.  ಅರೋಪಿಗಳು ಬಾಡಿಗೆ ಕೊಡುವಂತೆ ಆಗಾಗ ಗಲಾಟೆ ಮಾಡುತ್ತಿದ್ದು. ತನಗೆ  ಅನೀಲ್ ಕುಮಾರ್ ರವರು ಬಾಡಿಗೆ ಕರಾರು ಪತ್ರ ಮಾಡಿಕೊಟ್ಟಿದ್ದು ಅವರಿಗೆ ಬಾಡಿಗೆ ನೀಡುವುದಾಗಿ ತಿಳಿಸಿದ್ದೆ, ಇದರಿಂದ ತನ್ನ ಹಾಗೂ ಇತರೆ ಅಂಗಡಿದಾರರಾದ ಅಂಗಡಿಯವರಾದ ವಿ.ಪಿ ಸುರೇಶ್, ಹಾಗೂ ಮನೆ ಮಾಲಿಕರಾದ  ಅನೀಲ್ ಕುಮಾರ್ ರವರ ಮೇಲೆ  ಓ.ಎಸ್-04/2017, 07/2017,  ರೀತ್ಯಾ ಸಿವಿಲ್ ಪ್ರಕರಣಗಳನ್ನು ದಾಖಲಿಸಿದ್ದು ಅವು ಸಹ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತವೆ. ಈ ದಿನ  ದಿನಾಂಕ: 06-07-2021 ರಂದು ಮಂಗಳವಾರವಾಗಿದ್ದರಿಂದ  ತಾನು ಅಂಗಡಿಗೆ  ಸುಮಾರು 35,000/- ರೂ ಬೆಲೆಯ  ಸುಮಾರು 300 ಕೆ.ಜಿ ಕೋಳಿಯನ್ನು ಮಾರಾಟ ಮಾಡಲು  ಅಂಗಡಿಯಲ್ಲಿ ಇಟ್ಟುಕೊಂಡಿದ್ದಾಗ ಬೆಳಗ್ಗೆ ಸುಮಾರು 9-30 ಗಂಟೆಯಲ್ಲಿ ಪ್ರತಿಮಾ ಹಾಗೂ ಅಕೆಯ ಗಂಡ ನರಸಿಂಹಮೂರ್ತಿ ರವರು ನನ್ನ ಅಂಗಡಿ ಬಳಿ ಬಂದು  ತನ್ನನ್ನು ಅಂಗಡಿ ಬಾಡಿಗೆ ಕೊಡಲು ಯೋಗ್ಯತೆ ಇಲ್ಲ ಬೇವರ್ಸಿ ನನ್ನ ಮಗನೆ ಅಂಗಡಿ ತೆಗೆದಿದ್ದೀಯೇನೋ ಎಂದು  ಇಬ್ಬರೂ ಅಕ್ರಮವಾಗಿ ಅಂಗಡಿ ಒಳಗೆ ಬಂದು  ಅಂಗಡಿಯಲ್ಲಿದ್ದ ಕೆಲವು ಕೋಳಿಗಳನ್ನು ಬೀದಿಗೆ ಬಿಸಾಡಿ  ಅಂಗಡಿಯಲ್ಲಿದ್ದ  ಸಾಮಾಗ್ರಿಗಳನ್ನು ಕಿತ್ತುಹಾಕಿ  ನರಸಿಂಹಮೂರ್ತಿರವರು ತನ್ನನ್ನು ತನ್ನ ಮಗನನ್ನು ಕತ್ತಿನ ಪಟ್ಟಿ ಹಿಡಿದು ಅಂಗಡಿಯಿಂದ ಹೊರಕ್ಕೆ ತಳ್ಳಿ  ನಿನ್ನಮ್ಮನ್ನೇ ಕ್ಯಾಯ ಯಾರಪ್ಪನದ್ದು ಅಂಗಡಿ ಎಂದು ವ್ಯಾಪಾರ ಮಾಡುತ್ತೀರೋ, ಯಾರಾದರೂ   ನನ್ನ ಅಂಗಡಿಗೆ  ಕಾಲಿಟ್ಟರೆ ಪ್ರಾಣ ತೆಗೆಯುತ್ತೇನೆ ಎಂದು ಬೆದರಿಸಿರುತ್ತಾರೆ, ಅದರೂ ನಿಮ್ಮ ಗಲಾಟೆಗಳು ಏನಾದರೂ ಇರಲಿ ನನ್ನ ಕೋಳಿ ಹಾಗೂ ಸಾಮಾಗ್ರಿಗಳನ್ನು  ತೆಗೆದುಕೊಂಡು ಹೋಗುತ್ತೇನೆ ಎಂದು  ಬೆಳಗ್ಗೆಯಿಂದ ಸಂಜೆ ವರೆಗೆ ಕೇಳಿಕೊಂಡರೂ ಹಿರಿಯರ ಮುಖಾಂತರ ಹೇಳಿಸಿದರೂ  ಸಹ  ಕೇಳದೆ ಇನ್ನೂ ಹೆಚ್ಚಿನ  ಸಂಖ್ಯೆಯ ಕೋಳಿಗಳು ಅಂಗಡಿಯಲ್ಲಿದ್ದರೂ  ಅಂಗಡಿಗೆ ಬೀಗ ಹಾಕಿಕೊಂಡು ಹೋಗಿ ಸುಮಾರು 35,000/- ರೂ ಬೆಲೆಯ ಬದುಕಿರುವ ಕೋಳಿಗಳನ್ನು ಒಳಗೆ ಹಾಕಿ ಬೀಗ ಹಾಕಿಕೊಂಡು ಹೋಗಿ ನಷ್ಠ ಮಾಡಿರುತ್ತಾರೆಂದು  ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು  ತನಿಖೆಯನ್ನು ಕೈಗೊಂಡಿರುತ್ತೇನೆ.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 155/2021 ಕಲಂ. 279,304(A) ಐ.ಪಿ.ಸಿ:-

  ದಿನಾಂಕ:06.07.2021 ರಂದು ಸಂಜೆ 20-00 ಗಂಟೆಗೆ ಪಿರ್ಯಾದಿದಾರರಾದ ಮಧುಸೂಧನರಾವ್ ಕೆ.ಜಿ ಬಿನ್ ಲೇಟ್ ಗುರುರಾಜರಾವ್, 52 ವರ್ಷ, ಬ್ರಾಹ್ಮಣರು, ವ್ಯಾಪಾರ, ವಾಸ ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರ ಸೋದರ ಮಾವನವರಾದ ಪ್ರಹ್ಲಾದ್ ಬಿನ್ ಲೇಟ್ ಗಿರಿಯಾಚಾರ್ 64 ವರ್ಷ, ಕುರೂಡಿ ಗ್ರಾಮ, ಗೌರೀಬಿದನೂರು ತಾಲ್ಲೂಕು ರವರು ಕುರೂಡಿ ಗ್ರಾಮದಲ್ಲಿ ಪುರೋಹಿತ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತಾರೆ. ಇವರು ದಿನಾಂಕ:01.07.2021 ರಂದು ಬೆಳಿಗ್ಗೆ ಸುಮಾರು 8-15 ನಿಮಿಷ ಸುಮಾರಿನಲ್ಲಿ ಕುರೂಡಿ ಕಡೆಯಿಂದ ಆನೂಡಿ ಕಡೆಗೆ ಹೋಗಲು ತಮ್ಮ ಬಾಬತ್ತು ಹೊಸ ಟಿ.ವಿ.ಎಸ್ ಎಕ್ಸ್.ಎಲ್  ವಾಹನದಲ್ಲಿ ನಂಜುಂಡಪ್ಪ ಎಂಬುವರ ಹೊಲದ ಬಳಿ ರಸ್ತೆಯಲ್ಲಿ ಬರುತ್ತಿದ್ದಾಗ ಅವರ ಪಂಚೆ ಗಾಳಿಗೆ ಹಾರಿ ಚಕ್ರಕ್ಕೆ ಸುತ್ತಿಕೊಂಡ ಕಾರಣ ಆಯತಪ್ಪಿ ಕೆಳಗೆ ಬಿದ್ದಿದ್ದು, ಅವರ ತಲೆಗೆ ಪೆಟ್ಟಾಗಿರುವುದಾಗಿ ಯಾರೋ ಗ್ರಾಮಸ್ಥರು ಪ್ರಹ್ಲಾದ್ ರವರ ಮಗನಿಗೆ ತಿಳಿಸಿದ್ದು, ಪ್ರಹ್ಲಾದ್ ರವರ ಮಗ ಶ್ರೇಯಸ್ ರವರು ಕೂಡಲೆ ಹೋಗಿ ಒಂದು ಆಟೋದಲ್ಲಿ ಪ್ರಹ್ಲಾದ್ ರವರನ್ನು ಗೌರೀಬಿದನೂರು ಮಾನಸ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಲು ತಿಳಿಸಿದ್ದರಿಂದ ಅವರನ್ನು ಆಂಬುಲೆನ್ಸ್ ನಲ್ಲಿ ಬೆಂಗಳೂರಿನ ಟ್ರಸ್ಟ್ ವೇಲ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಕೊಡಿಸುತ್ತಿದ್ದ ಕಾರಣ ನಾವು ದೂರು ನೀಡಿರುವುದಿಲ್ಲ. ಸ್ವತಃ ಅವರೇ ಬಿದ್ದ ಕಾರಣ ದೂರು ಕೊಡುವುದು ಬೇಡವೆಂದು ದೂರು ನೀಡಿರುವುದಿಲ್ಲ, ಆದರೆ ಈ ದಿನ ದಿನಾಂಕ:06.07.2021 ರಂದು ಮದ್ಯಾಹ್ನ ಸುಮಾರು 3-00 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ನಮ್ಮ ಸೋದರ ಮಾವನ ಹೊಸ ದ್ವಿ ಚಕ್ರ ವಾಹನ ಎಕ್ಸ್.ಎಲ್ 100 ಚಾಸಿಸ್ ಸಂಖ್ಯೆ.XMD621CP23M1B08302X ಆಗಿರುತ್ತೆ. ಆದ್ದರಿಂದ  ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇನೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 156/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ: 04/07/2021 ರಂದು 14-00 ಗಂಟೆ ಸಮಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ.ವಿಜಯ್ ಕುಮಾರ್.ಕೆ.ಸಿ.ರವರು ನೀಡಿದ ಮೇಮೋನ ಸಾರಾಶಂಶವೆನೆಂದರೆ  ದಿನ ದಿನಾಂಕ: 04/07/2021 ರಂದು ಮದ್ಯಾನ್ಹ 12-00 ಗಂಟೆಯಲ್ಲಿ ಪೊಲೀಸ್ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ನಾರಸಿಂಹನಹಳ್ಳಿ ಗ್ರಾಮದಲ್ಲಿ, ಟಿ.ಜಯರಾಮಯ್ಯ ಬಿನ್ ಲೇಟ್ ತಮ್ಮಯ್ಯ  ರವರ ಚಿಲ್ಲರೆ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯಾದ, ಪಿಸಿ-208 ತಿಪ್ಪೇಸ್ವಾಮಿ, ಪಿಸಿ-520 ಶ್ರೀನಾಥ, ಪಿಸಿ-205 ಮೋಹನ್ ಕುಮಾರ್, ಜೀಪ್ ಚಾಲಕ  ಎಪಿಸಿ-143 ಮಹೇಶ್ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು ಮದ್ಯಾನ್ಹ 12-30 ಗಂಟೆಗೆ ಮಾಹಿತಿ ಇದ್ದ  ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಹಾಗೂ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು  ಟಿ.ಜಯರಾಮಯ್ಯ ಬಿನ್ ಲೇಟ್ ತಮ್ಮಯ್ಯ, 45 ವರ್ಷ, ಕುರುಬರು, ಚಿಲ್ಲರೆ ಅಂಗಡಿ ವ್ಯಾಪಾರ, ನಾರಸಿಂಹನಹಳ್ಳಿ ಗ್ರಾಮ, ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು   ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 16  ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 1 ಲೀಟರ್ 440 ಎಂ.ಎಲ್. ಆಗಿರುತ್ತೆ. 90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ ಒಂದು ಟೆಟ್ರಾ ಪಾಕೆಟ್ ಬೆಲೆ ರೂ 35.13 ಗಳಾಗಿದ್ದು, ಇವುಗಳ ಒಟ್ಟು ಬೆಲೆ 526.08 ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS   WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಮದ್ಯಾಹ್ನ 12-30 ಗಂಟೆಯಿಂದ 13-30  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 16 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಮದ್ಯಾನ್ಹ 14-00 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದು ಈ ದೂರಿನಲ್ಲಿನ ಅಂಶಗಳು ಅಸಂಜ್ಞೇಯ ಅಂಶಗಳಾಗಿರುವುದರಿಂದ ಎನ್.ಸಿ.ಆರ್ ನಂ.292/2021 ರಂತೆ ದಾಖಲಿಸಿಕೊಂಡಿರುತ್ತೇನೆ. ನಂತರ ಈಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು  ಘನ ನ್ಯಾಯಾಲಯದಿಂದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಈದಿನ ನೀಡಿದ ಅನುಮತಿಯ ಆದೇಶದಂತೆ ಪ್ರಕರಣವನ್ನು ದಾಖಲಿಸಿರುತ್ತೆ.

 

5. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 112/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ:07/07/2021 ರಂದು ಬೆಳಿಗ್ಗೆ 09-30 ಗಂಟೆಗೆ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ ಲಕ್ಷ್ಮಿನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ನಾನು ಈ ದಿನ ದಿನಾಂಕ:05/07/2021 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಹೋಬಳಿ ಅಲಾಸ್ತಿಮ್ಮನಹಳ್ಳಿ ಗ್ರಾಮದ ಬಳಿ ಇರುವ ಸರ್ಕಾರಿ ಹಳ್ಳದಲ್ಲಿ ಬೇವಿನ ಮರದ ಕೆಳಗೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿ.ಸಿ-283 ಅರವಿಂದ, ಪಿ.ಸಿ-175 ನವೀನ್ ಕುಮಾರ್, ಪಿ.ಸಿ-483 ರಮೇಶ್ ಪಿ.ಸಿ-111 ಲೋಕೇಶ್ ಮತ್ತು ಜೀಪ್ ಚಾಲಕ ಎಪಿಸಿ-120 ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಮದ್ಯಾಹ್ನ 3-30 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿದರೂ ಸಹ ಇಬ್ಬರೂ ಸ್ಥಳದಿಂದ ಓಡಿ ಹೋಗಿದ್ದು, ಸ್ಥಳದಲ್ಲಿ ಸಿಕ್ಕಿದವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ವೆಂಕಟೇಶ ಬಿನ್ ವೆಂಕಟಸ್ವಾಮಿ, 45 ವರ್ಷ, ಕೂಲಿ ಕೆಲಸ, ಬೋವಿ ಜನಾಂಗ, ಅಲಾಸ್ತಿಮ್ಮನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 2) ಸುರೇಶ ಬಿನ್ ಲೇಟ್ ಬಾಲಪ್ಪ, 38 ವರ್ಷ, ಕೂಲಿ ಕೆಲಸ, ನಾಯಕ ಜನಾಂಗ, ಅದ್ದೆಕೊಪ್ಪ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು, 3) ಸತೀಶ ಬಿನ್ ಶಿವಲಿಂಗಪ್ಪ, 35 ವರ್ಷ, ವ್ಯಾಪಾರ, ಲಿಂಗಾಯಿತರು ವಾಸ ಪೋಶೆಟ್ಟಿಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 4) ನಾಗರಾಜ ಬಿನ್ ನಾರಾಯಣಪ್ಪ, 40 ವರ್ಷ, ಜಿರಾಯ್ತಿ, ಕುರುಬರು, ವಾಸ ಮುಕ್ಕಡಗಟ್ಟ ಗ್ರಾಮ, ದೊಡ್ಡಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಿಂದ ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 5) ಕಾಂತರಾಜ ಬಿನ್ ಗಂಗಪ್ಪ, 32 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ವಾಸ ಅದ್ದೆಕೊಪ್ಪ ಗ್ರಾಮ, ಗೌರಿಬಿದನೂರು ತಾಲ್ಲೂಕು, 6) ವೆಂಕಟೇಶ ಬಿನ್ ಲೇಟ್ ಬ್ರಹ್ಮಪ್ಪ, ಕೂಲಿ ಕೆಲಸ, ಒಕ್ಕಲಿಗರು, ವಾಸ ಅದ್ದೆಕೊಪ್ಪ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿದುಬಂದಿರುತ್ತದೆ. ಕೈಗೆ ಸಿಕ್ಕವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ನಂತರ ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ 3800/- ( ಮೂರು ಸಾವಿರದ ಎಂಟು ನೂರು ರೂಪಾಯಿಗಳು ಮಾತ್ರ.) ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಸಂಜೆ 4-00 ಗಂಟೆಯಿಂದ 5-00 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಸಂಜೆ 5-30 ಗಂಟೆಗೆ ಠಾಣೆಗೆ ವಾಪಾಸ್ ಬಂದು ಆರೋಪಿತರ ಮೇಲೆ ಮುಂದಿನ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಲು ಸ್ವತಃ ಠಾಣಾ ಎನ್.ಸಿ.ಆರ್ ನಂಬರ್ 182/2021 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 

6. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 113/2021 ಕಲಂ. 279,304(A) ಐ.ಪಿ.ಸಿ & 187 INDIAN MOTOR VEHICLES ACT:-

  ದಿನಾಂಕ 07-07-2021 ರಂದು ಮದ್ಯಾಹ್ನ 14-15 ಗಂಟೆಗೆ ಪಿರ್ಯಾದಿದಾರರಾದ ಗಜೇಂದ್ರ ಬಿನ್ ವೇಣುಗೋಪಾಲ್ 21 ವರ್ಷ, ಗೊಲ್ಲರು ಯರ್ರನಾಗೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಈ ದಿನ ದಿನಾಂಕ 07-07-2021 ರಂದು ನಮ್ಮ ತಂದೆ ವೇಣುಗೋಪಾಲ್ ಬಿನ್ ಲೇಟ್ ಎ.ಲಕ್ಷ್ಮಯ್ಯ, 50 ವರ್ಷ, ಗೊಲ್ಲ ಜನಾಂಗ, ವ್ಯಾಪಾರ ರವರು ತನ್ನ ಅಕ್ಕ ಲಕ್ಷ್ಮಮ್ಮ ರವರು ಹುಲಿಕುಂಟೆ ಗ್ರಾಮದಲ್ಲಿದ್ದು ನೋಡಿಕೊಂಡು ಬರುವುದಾಗಿ ಬೆಳಿಗ್ಗೆ 11-00 ಗಂಟೆಗೆ ನಮಗೆ ತಿಳಿಸಿ ನಮ್ಮ ದ್ವಿಚಕ್ರ ವಾಹನ ಕೆಎ-51, ಇಎ—684 ವಾಹನದಲ್ಲಿ ಹೋಗಿದ್ದು, ನಂತರ ನಮ್ಮ ಭಾವ ಪಾಪಣ್ಣ ರವರು ನನಗೆ ಕರೆ ಮಾಡಿ ಡಿ.ಪಾಳ್ಯ ವಾಟದಹೊಸಹಳ್ಳಿ ರಸ್ತೆಯ ಡಿ.ಪಾಳ್ಯ ಹಾಲಿನ ಡೈರಿಯ ಮುಂಬಾಗದ ಟಾರ್ ರಸ್ತೆಯಲ್ಲಿ ನಿಮ್ಮ ತಂದೆ ಹೋಗುತ್ತಿದ್ದು ದ್ವಿ ಚಕ್ರ ವಾಹನಕ್ಕೆ ವಾಟದಹೊಸಹಳ್ಳಿ ಗ್ರಾಮದ ಕಡೆಯಿಂದದ ಎದುರಿಗೆ ಬಂದ ಡಿ.ಪಾಳ್ಯ ಗ್ರಾಮದ ಅಲ್ತಾಫ್ ಅವರ ಕಾರು ಕೆಎ-02-ಜೆಡ್-6552 ಅಪಘಾತ ಪಡಿಸಿದ್ದು ನಿಮ್ಮ ತಂದೆಗೆ ಅಪಘಾತದಲ್ಲಿ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದ್ದು, ನಾನು ತಕ್ಷಣ ಅಪಘಾತದ ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು, ನಮ್ಮ ಭಾವ ಪಾಪಣ್ಣ ರವರನ್ನು ಅಪಘಾತದ ಬಗ್ಗೆ ಕೇಳಲಾಗಿ ಡಿ.ಪಾಳ್ಯ ಹಾಲಿನ ಡೈರಿ ಮುಂಭಾಗ ಮದ್ಯಾಹ್ನ 12-30 ಗಂಟೆಗೆ ಅಪಘಾತ ಸಂಭವಿಸಿರುವುದಗಿ ತಿಳಿಸಿ ಅಪಘಾತ ಪಡಿಸಿದ ಕಾರು ಚಾಲಕನು ವಾಹನವನ್ನು ಅಪಘಾತ ಪಡಿಸಿ ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದು ನಮ್ಮ ತಂದೆಗೆ ಅಪಘಾತ ಪಡಿಸಿ ಮರಣಕ್ಕೆ ಕಾರಣನಾದ ಡಿ.ಪಾಳ್ಯ ಗ್ರಾಮದ ಅಲ್ತಾಫ್ ರವರ ಕಾರು ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೋಟ್ಟ ದೂರು.

 

7. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ. 70/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ:06/07/2021 ರಂದು ನಾನು ಠಾಣೆಯಲ್ಲಿರುವಾಗ ಸಂಜೆ 18:25 ಗಂಟೆ ಸಮಯದಲ್ಲಿ ಠಾಣಾ ವ್ಯಾಪ್ತಿಯ ಕಣಿತಹಳ್ಳಿ-ತಿಮ್ಮನಹಳ್ಳಿ ರಸ್ತೆಯಲ್ಲಿ ಅಕ್ರಮವಾಗಿ ಕೆಲವರು ಹಣವನ್ನು ಪಣಕಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವವರ ಬಗ್ಗೆ ಮಾಹಿತಿ ಬಂದ ಮೇರೆಗೆ ಠಾಣಾ ಎನ್,ಸಿ.ಆರ್ ನಂ:66/2021 ರಲ್ಲಿ ನಮೂದು ಮಾಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ದಾಳಿ ಮಾಡಿ ತನಿಖೆ ಮುಂದುವರೆಸಲು ಅನುಮತಿಗಾಗಿ ಘನ ನ್ಯಾಯಾಲಯಕ್ಕೆ ಮನವಿ ಪತ್ರ ಸಲ್ಲಿಸಿಕೊಂಡು ಅನುಮತಿ ಪಡೆದುಕೊಂಡಿರುತ್ತೆ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 222/2021 ಕಲಂ. 380,457 ಐ.ಪಿ.ಸಿ:-

  ದಿನಾಂಕ: 07-07-2021 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ ಫಿರ್ಯಾದಿದಾರರಾದ ಶ್ರೀ ಸಿ. ಮಂಜುನಾಥ ಬಿನ್ ಲೇಟ್ ಚಿಕ್ಕನಂಜಪ್ಪ, 42 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಸುಗಟೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದೆ, ತಾನು ಇದೇ ಶಿಡ್ಲಘಟ್ಟ ತಾಲ್ಲೂಕು ಸುಗಟೂರು ಗ್ರಾಮದಲ್ಲಿರುವ  ತಮ್ಮ ಬಾಬತ್ತು ಸರ್ವೆ ನಂ. 201/1 ರ ಜಮೀನಿನಲ್ಲಿ ಶ್ರೀ ಮುನೇಶ್ವರಸ್ವಾಮಿ ಮತ್ತು ಸಪ್ತಮಾತೆ ಅಕ್ಕಾಯಮ್ಮ ದೇವಿ ದೇವಾಲಯದ ದೇವಾಲಯವನ್ನು ತಮ್ಮ ಗ್ರಾಮದ ಗ್ರಾಮಸ್ಥರು ಹಾಗೂ ಸುತ್ತ-ಮುತ್ತಲ ಗ್ರಾಮಸ್ಥರು ಕಟ್ಟಿಸಿದ್ದು, ಸದರಿ ದೇವಾಲಯದಲ್ಲಿ ತಾನೆ ಅರ್ಚಕರಾಗಿ ಪೂಜೆಗಳನ್ನು ಮಾಡಿಕೊಂಡು ಬರುತ್ತಿರುತ್ತೇನೆ. ಪ್ರತಿ ಶುಕ್ರವಾರ ಮತ್ತು ಪ್ರತಿ ಮಂಗಳವಾರದಂದು ಬೆಳಿಗ್ಗೆ 11.00 ಗಂಟೆಯಿಂದ ಮದ್ಯಾಹ್ನ ಸುಮಾರು 12.00 ಗಂಟೆಯ ವರೆಗೆ ದೇವಾಲಯದಲ್ಲಿ  ತಾನೇ ಪೂಜೆಗಳನ್ನು ಮಾಡಿ ಪುನಃ ದೇವಾಲಯಕ್ಕೆ ಬೀಗ ಹಾಕಿ ಬೀಗದ ಕೀಗಳನ್ನು ತನ್ನ  ಬಳಿಯೇ ಇಟ್ಟುಕೊಂಡಿರುತ್ತೇನೆ. ಪ್ರತಿ ದಿನ ತಮ್ಮ  ತೋಟಕ್ಕೆ ಹೋದಾಗ ದೇವಾಲಯದ ಕಡೆಗೆ ಹೋಗಿ ಓಡಾಡಿಕೊಂಡು ಬರುತ್ತಿದ್ದೆನು. ಹೀಗಿದ್ದು ದಿನಾಂಕ: 06-07-2021 ರಂದು ಬೆಳಿಗ್ಗೆ 11.00 ಗಂಟೆಗೆ ದೇವಾಲಯದ ಬಳಿ ಪೂಜೆ ಮಾಡಲು ಹೋದಾಗ ದೇವಾಲಯಕ್ಕೆ ಅಳವಡಿಸಿದ್ದ ಮುಂಭಾಗದ ಗೇಟ್ ನ ಬೀಗವನ್ನು ಹಾಗೂ ಗರ್ಭಗುಡಿಯ ಬೀಗವನ್ನು ಹೊಡೆದು ಹಾಕಿ ದೇವಾಲಯದ ಒಳಗೆ ಪ್ರವೇಶ ಮಾಡಿ ದೇವಾಲಯದಲ್ಲಿದ್ದ ದೇವರ ಆಭರಣಗಳಾದ ಸುಮಾರು 700 ಗ್ರಾಂ ತೂಕದ ಬೆಳ್ಳಿಯ ಕಿರೀಟ, ಸುಮಾರು 1 ಕೆ.ಜಿ. 200 ಗ್ರಾಂ ತೂಕದ ಬೆಳ್ಳಿಯ ನಾಗರ ಹೆಡೆ ಮತ್ತು ಸಪ್ತ ಮಾತೃಕೆಯರ ದೇವಿಗೆ ಅಳವಡಿಸಿದ್ದ ಸುಮಾರು 2 ಗ್ರಾಂ ತೂಕದ 6 ಬೆಳ್ಳಿಯ ಮಾಂಗಲ್ಯಗಳನ್ನು ಯಾರೋ ಕಳ್ಳಲು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ತಾನು ವಿಚಾರವನ್ನು ತಮ್ಮ  ಗ್ರಾಮದ ಹಿರಿಯರಾದ ಶ್ರೀ ಸಿ.ನಂಜೇಗೌಡ ಬಿನ್ ಲೇಟ್ ಚಿಕ್ಕಮಾರಪ್ಪ ರವರಿಗೆ ಮತ್ತು ಇತರರಿಗೆ ವಿಚಾರ ವನ್ನು ತಿಳಿಸಿ ಈ ದಿನ ತಡವಾಗಿ ದೂರನ್ನು ನೀಡಿದ್ದು ಒಟ್ಟು 1 ಕೆ.ಜಿ 912 ಗ್ರಾಂ ತೂಕದ 98,000-00 ರೂ ಬೆಲೆ ಬಾಳುವ ದೇವಾಲಯದ ಆಭರಣಗಳಾದ ಬೆಳ್ಳಿಯ ಕಿರೀಟ, ನಾಗರ ಹೆಡೆ ಮತ್ತು ಮಾಂಗಲ್ಯಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 222/2021 ಕಲಂ 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

ಇತ್ತೀಚಿನ ನವೀಕರಣ​ : 07-07-2021 06:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080