ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.83/2021 ಕಲಂ. 15(A),32(3) ಕೆ.ಇ ಆಕ್ಟ್:-

          ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:07/06/2021 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ಟಿ ಎನ್ ಪಾಪಣ್ಣ ಆದ ನಾನು  ಮಧ್ಯಾಹ್ನ 12-20 ಗಂಟೆ ಸಮಯದಲ್ಲಿ  ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಕರೋನ ಮಹಾಮಾರಿ ಸಾಂಕ್ರಾಮಿಕ ಖಾಯಿಲೆಯ ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಮತ್ತು ಠಾಣೆಯ ಮೊ.ಸಂ 82/2021 ರಲ್ಲಿ ತನಿಖೆಗಾಗಿ ಠಾಣೆಯ ಹೆಚ್.ಸಿ 36 ವಿಜಯ್ ಕುಮಾರ್ ಬಿ ರವರೊಂದಿಗೆ ಮಾವುಕೆರೆ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ನನಗೆ ಕದಡನಮರಿ ಗ್ರಾಮದ ವಾಸಿಯಾದ ಶ್ರೀ.ಕೃಷ್ಣಪ್ಪ ಬಿನ್ ಲೇಟ್ ರಾಮಪ್ಪ ರವರು ಅವರ ವಾಸದ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಠಾಣೆಯ ಹೆಚ್.ಸಿ 36 ವಿಜಯ್ ಕುಮಾರ್ ಬಿ ರವರೊಂದಿಗೆ ಕಡದನಮರಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚರನ್ನು ಕರೆದುಕೊಂಡು ಮಧ್ಯಾಹ್ನ 12-45 ಗಂಟೆಗೆ ಶ್ರೀ.ಕೃಷ್ಣಪ್ಪ ಬಿನ್ ಲೇಟ್ ರಾಮಪ್ಪ ರವರ ವಾಸದ ಮನೆಯ ಬಳಿಗೆ ಹೋಗಿ ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಸಾರ್ವಜನಿಕರಿಗೆ ಮದ್ಯಪಾನಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿದ್ದು ವ್ಯಕ್ತಿಯನ್ನು ಹಿಡಿದುಕೊಂಡು ಸದರಿ ಆಸಾಮಿಯ ಹೆಸರು ವಿಳಾಸವನ್ನು ವಿಚಾರಿಸಲಾಗಿ ಶ್ರೀ.ಕೃಷ್ಣಪ್ಪ ಬಿನ್ ಲೇಟ್ ರಾಮಪ್ಪ, 51ವರ್ಷ, ಭಜಂತ್ರಿ ಜನಾಂಗ, ಕೂಲಿ ಕೆಲಸ, ಕಡದನಮರಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನಮಾಡಲು ಸ್ಥಳಾವಕಾಶವನ್ನು ಮಾಡಿಕೊಡಲು ಯಾವುದಾದರು ಪರವಾನಿಗೆಯನ್ನು ಹೊಂದಿರುವ ಬಗ್ಗೆ ವಿಚಾರಿಸಲಾಗಿ ತಾನು ಯಾವುದೇ ಪರವಾನಿಗೆಯನ್ನು ಹೊಂದಿರುವುದಿಲ್ಲ ಎಂದು ತಿಳಿಸಿದರ ಮೇರೆಗೆ ಸದರಿ ಆಸಾಮಿಯನ್ನು ವಶಕ್ಕೆಪಡೆದುಕೊಂಡು ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಬಿದ್ದಿರುವುದು ಕಂಡು ಬಂದಿದ್ದರಿಂದ ಪಂಚರ ಸಮಕ್ಷಮ ಮಧ್ಯಾಹ್ನ 13-00 ಗಂಟೆಯಿಂದ ಮಧ್ಯಾಹ್ನ 14-00 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ 90 ಎಂ.ಎಲ್ ಸಾಮರ್ಥ್ಯದ 11 ಒರಿಜಿನಲ್ ಚಾಯ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳು ಒಟ್ಟು 990 ಎಂ.ಎಲ್ ನ, 386-00  ರೂಗಳ ಬೆಲೆ ಬಾಳುವುದಾಗಿದ್ದು ಸದರಿ ಮದ್ಯದ ಟೆಟ್ರಾ ಪ್ಯಾಕಟ್ ಗಳನ್ನು ಮತ್ತು 2 ಖಾಲಿಯ ಒರಿಜಿನಲ್ ಚಾಯ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು , 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ  ಮಧ್ಯಾಹ್ನ 14-30 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:83/2021 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.266/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ಈ ದಿನ ದಿನಾಂಕ: 07/06/2021 ರಂದು ಬೆಳಿಗ್ಗೆ 11.30 ಗಂಟೆಗೆ ಠಾಣೆಯ ಶ್ರೀ.ಸುರೇಶ್, ಸಿ.ಹೆಚ್.ಸಿ-57 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 07/06/2021 ರಂದು ಬೆಳಗ್ಗೆ 10.15 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-504 ಸತೀಶ ಕೆ.ಎ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ತಿಮ್ಮಸಂದ್ರ ಗ್ರಾಮದಲ್ಲಿ ಆಂಜನೇಯರೆಡ್ಡಿ ಎಂಬುವವರು ಅವರ ಪ್ಲೋರ್ ಮಿಲ್ ನಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಬೆಳಗ್ಗೆ 10.30 ಗಂಟೆ ಗಂಟೆಗೆ ತಿಮ್ಮಸಂದ್ರ ಗ್ರಾಮದ ಆಂಜನೇಯರೆಡ್ಡಿ  ರವರ ಪ್ಲೋರ್ ಮಿಲ್ ಬಳಿ ಹೋದಾಗ ಸದರಿ ಪ್ಲೋರ್ ಮಿಲ್ ನಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಪ್ಲೋರ್ ಮಿಲ್ ನ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಆಂಜನೇಯರೆಡ್ಡಿ, 55 ವರ್ಷ, ವಕ್ಕಲಿಗ ಜನಾಂಗ, ಪ್ಲೋರ್ ಮಿಲ್ ಅಂಗಡಿ ಮಾಲೀಕರು, ವಾಸ: ತಿಮ್ಮಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.267/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ಈ ದಿನ ದಿನಾಂಕ: 07/06/2021 ರಂದು ಮದ್ಯಾಹ್ನ 12.00 ಗಂಟೆಗೆ ಠಾಣೆಯ ಶ್ರೀ.ವಿಜಯಕುಮಾರ್, ಸಿ.ಹೆಚ್.ಸಿ-167 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 07/06/2021 ರಂದು ಬೆಳಗ್ಗೆ10.30 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-516 ವಿಶ್ವನಾಥ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಹಾದಿಗೆರೆ ಗ್ರಾಮದ ಮುನಿನಾಗಪ್ಪ ಬಿನ್ ಬುಡ್ಡಪ್ಪ @ ಮುನಿವೆಂಕಟಪ್ಪ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಬೆಳಗ್ಗೆ 10.45 ಗಂಟೆ ಗಂಟೆಗೆ ಹಾದಿಗೆರೆ ಗ್ರಾಮದ ಮುನಿನಾಗಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮುನಿನಾಗಪ್ಪ ಬಿನ್ ಬುಡ್ಡಪ್ಪ @ ಮುನಿವೆಂಕಟಪ್ಪ, 42 ವರ್ಷ, ಆದಿ ಕನರ್ಾಟಕ ಜನಾಂಗ, ಚಿಲ್ಲರೆ ಅಂಗಡಿ ಮಾಲೀಕರು, ವಾಸ: ಹಾಗಿಗೆರೆ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ 9008411521 ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.102/2021 ಕಲಂ. 457,380 ಐ.ಪಿ.ಸಿ :-

          ದಿನಾಂಕ: 06/06/2021 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರಾದ ನವಾಜ್ ಅಹಮದ್ ಬೇಗ್ ಬಿನ್ ನಿಸಾರ್ ಅಹಮದ್, 34 ವರ್ಷ, ಮುಸ್ಲಿಂರು, ಚೌಡರೆಡ್ಡಿಪಾಳ್ಯ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಮಗ ಎನ್.ಜಹೀದ್ ಅಹಮದ್ 4 ವರ್ಷ ಆಗಿದ್ದು ಈತನಿಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ದಿನಾಂಕ:05/06/2021 ರಂದು ರಂದು ರಾತ್ರಿ 8-00 ಗಂಟೆಗೆ ತಮ್ಮ ಮನೆ ಬೀಗ ಹಾಕಿಕೊಂಡು ಚಿಂತಾಮಣಿ ಟೌನ್ ಗ್ರಾಮೀಣಾ ಬ್ಯಾಂಕ್ ಮೇಲ್ಬಾಗದಲ್ಲಿರುವ ಡಾ: ಪ್ರಸನ್ನ ಕುಮಾರ್ ರವರ ಬಳಿ ತೋರಿಸಿಕೊಂಡು ನಂತರ ಅಗ್ರಹಾದಲ್ಲಿರುವ ನಮ್ಮ ಅತ್ತೆ ಮನೆಗೆ ಹೋಗಿ ಅಲ್ಲಿಯೇ ಉಳಿದುಕೊಂಡಿದ್ದು, ದಿನಾಂಕ:06/06/2021 ರಂದು ಬೆಳಿಗ್ಗೆ 6-00 ಗಂಟೆಗೆ ತಮ್ಮ ಮನೆಯ ಬಳಿ ಬಂದು ನೋಡಲಾಗಿ ತಮ್ಮ ಮನೆಯ ಮುಂಭಾಗದ ಗೇಟ್ ಬೀಗವನ್ನು ಹೊಡೆದು ಮುಂಭಾಗದ ಬಾಗಿಲು ಕಿತ್ತು ಹಾಕಿದ್ದು, ಮನೆಯ ಒಳಗೆ ಹೋಗಿ ನೋಡಲಾಗಿ ಮನೆಯ ಹಾಲ್ ನಲ್ಲಿ ಇಟ್ಟಿದ್ದ ಬೀರುವಿನ ಲಾಕ್ ಸಹನ್ನು ಕಿತ್ತುಹಾಕಿದ್ದು, ಬೀರುವಿನಲ್ಲಿ ಇಟ್ಟಿದ್ದ ಎರಡು ಜೊತೆ ಬಂಗಾರದ ಕಿವಿ ಓಲೆ ಸುಮಾರು 20 ಗ್ರಾಂ ಬೆಲೆ 40,000 ರೂಗಳು, ಒಂದು ಕತ್ತಿನ ಚೈನ್ ಸುಮಾರು 10 ಗ್ರಾಂ, ಬೆಲೆ 20,000 ರೂಗಳು. ಚಿಕ್ಕ ಮಕ್ಕಳ ಕತ್ತಿನ ಚೈನ್ ಸುಮಾರು 10 ಗ್ರಾಂ, ಬೆಲೆ ಸುಮಾರು 20,000 ಹಾಗು 4 ಚಿಕ್ಕ ಮಕ್ಕಳ ಉಂಗುರಗಳು  ಬೆಲೆ ಸುಮಾರು 6,000 ರೂಗಾಗಿದ್ದು, ಹಾಗು ನಗದು ಹಣ 10,000 ರೂಗಳನ್ನು ಯಾರೋ ಕಳ್ಳರು ದಿನಾಂಕ:05/06/2021 ರಾತ್ರಿ ವೇಳೆಯಲ್ಲಿ ತಮ್ಮ ಮನೆಯ ಬೀಗ ಕಿತ್ತುಹಾಕಿ ಮನೆಯ ಬೀರುವಿನಲ್ಲಿ ಇಟ್ಟಿದ್ದ ನಗದು ಹಣ ಮತ್ತು ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತಮ್ಮ ಮನೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.94/2021 ಕಲಂ. 324,307 ಐ.ಪಿ.ಸಿ :-

          ದಿನಾಂಕ:06.06.2021 ರಂದು ಮದ್ಯಾಹ್ನ 12.30 ಗಂಟೆಗೆ ಈ ಕೇಸಿನ ಪಿರ್ಯಾದಿದಾರರಾದ ಶ್ರೀಮತಿ ಸಿಮ್ರಾನ್ ಕೋಂ ಪೀರ್ ಖಾನ್, 25 ವರ್ಷ, ಗೃಹಿಣಿ, ವಾಸ: ಬಸವಾಪುರ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೇನೆಂದರೆ ತನಗೆ ಸುಮಾರು 8 ವರ್ಷಗಳ ಹಿಂದೆ ಬಸವಾಪುರ ಗ್ರಾಮದ ಲೇಟ್ ಮಹಬೂಬ್ ಖಾನ್ ರವರ ಮಗನಾದ ಪೀರ್ ಖಾನ್ ರವರನ್ನು ಮದುವೆಯಾಗಿರುತ್ತೇನೆ. ನಮಗೆ  ಇಬ್ಬರು ಮಕ್ಕಳು ಇರುತ್ತಾರೆ. ನನ್ನ ಗಂಡ ಟಾಟಾ ಎಸಿ ಓಡಿಸಿಕೊಂಡಿರುತ್ತಾರೆ. ದಿನಾಂಕ:05.06.2021 ರಂದು ರಾತ್ರಿ 9.00 ಗಂಟೆಯಲ್ಲಿ ನನ್ನ ಗಂಡನಿಗೆ ಫೋನ್ ಬಂದಿದ್ದು ನನಗೆ ದೊಡ್ಡಬಳ್ಳಾಪುರಕ್ಕೆ ಬಾಡಿಗೆ ಇದೆ ಎಂದು ಹೇಳಿ ಗಾಡಿಯನ್ನು ತೆಗೆದುಕೊಂಡು ಹೋದನು. ರಾತ್ರಿ ನನ್ನ ಗಂಡನ ಮೊಬೈಲ್ ಸಂಖ್ಯೆ 8971457273 ನಂಬರಿಗೆ ಸುಮಾರು ಬಾರಿ ಫೋನ್ ಮಾಡಿದಾಗ ಸ್ವಿಚ್ ಆಫ್ ಎಂದು ಬಂತು. ನಂತರ ನಮ್ಮ ಮನೆ ಪಕ್ಕದ ಅನ್ ಕಲ್ ನವಾಬ್ ಖಾನ್ ರವರು ನನಗೆ ನಿನ್ನ ಗಂಡ ಪೀರ್ ಖಾನ್ ರವರನ್ನು ಕಲ್ಲಿನಾಯಕನಹಳ್ಳಿ ಗ್ರಾಮದ ರೈಲ್ವೆ ಟ್ರ್ಯಾಕ್ ಹತ್ತಿರ ಗಾಯಗೊಂಡು ಬಿದ್ದಿರುವುದಾಗಿ ಹೇಳಿದ್ದು ನಾನು ಅಲ್ಲಿಗೆ ಹೋಗಿ ನೋಡಲಾಗಿ ಕಲ್ಲಿನಾಯಕನಹಳ್ಳಿ ಗ್ರಾಮದ ಒಂದು ಜಮೀನಿನ ಪಕ್ಕದಲ್ಲಿರುವ ರೈಲ್ವೆ ಹಳಿ ಹತ್ತಿರ ಗಾಯಗೊಂಡಿದ್ದು ತಲೆಯಲ್ಲಿ ಗಾಯವಾಗಿ ರಕ್ತ ಬರುತ್ತಿತ್ತು ಎಡಗೈಗೂ ಸಹಾ ಹೂತದ ಗಾಯವಾಗಿರುತ್ತದೆ. ದಿನಾಂಕ;05.06.2021 ರಂದು ರಾತ್ರಿ 9.00 ಗಂಟೆಯಲ್ಲಿ ದೊಡ್ಡಬಳ್ಳಾಪುರಕ್ಕೆ ಬಾಡಿಗೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ಬೆಳಗ್ಗೆ 7.00 ಗಂಟೆಗೆ ಮುಂಚೆ ಕಲ್ಲಿನಾಯಕನಹಳ್ಳಿ ಗ್ರಾಮದಲ್ಲಿ ರೈಲ್ವೆ ಟ್ರ್ಯಾಕ್ ಹತ್ತಿರ ಯಾರೋ ವ್ಯಕ್ತಿಗಳು ನನ್ನ ಗಂಡನ ತಲೆಗೆ ಯಾವುದೋ ಆಯುಧದಿಂದ ಹೊಡೆದು ರಕ್ತಗಾಯ ಮಾಡಿದ್ದು ಎಡಗೈಗೆ ಹೂತದ ಗಾಯವನ್ನು ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಈ ಹಿಂದೆ ಕಲ್ಲಿನಾಯಕನಹಳ್ಳಿ ಗ್ರಾಮದ ಗಂಗಾಧರಪ್ಪ ಬಿನ್ ವೆಂಕಟರಮಣಪ್ಪ ರವರು ನನ್ನ ಗಂಡನಿಗೆ ಫೋನ್ ಮುಖಾಂತರ ಅವರ ಮಗಳಾದ ಶಿರಿಶಾಳ ವಿಚಾರದಲ್ಲಿ ವಾರ್ನಿಂಗ್ ಅನ್ನು ಕೊಡುತ್ತಿದ್ದರು. ಇವರ ಮೇಲೆ ನನಗೆ ಅನುಮಾನವಿರುತ್ತದೆ. ನನ್ನ ಗಂಡನಿಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇನೆ. ನನ್ನ ಗಂಡ ಕಲ್ಲಿನಾಯಕನಹಳ್ಳಿ ಗ್ರಾಮದ ರೈಲ್ವೆಟ್ರ್ಯಾಕ್ ಹತ್ತಿರ ಗಾಯಗೊಂಡಿದ್ದರಿಂದ ಬಹುಶಹ ಗಂಗಾಧರಪ್ಪ ರವರೆ ಮಾಡಿರಬಹುದೆಂದು ಅನುಮಾನವಿರುತ್ತದೆ. ಆದ್ದರಿಂದ ನನ್ನ ಗಂಡನನ್ನು ಕೊಲೆ ಮಾಡಲು ಪ್ರಯತ್ನಿಸಿರುವವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ  ದೂರು.

 

6. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.183/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ: 06-06-2021 ರಂದು ಸಂಜೆ 7.15 ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 06-06-2021 ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಹಂಡಿಗನಾಳ, ಕೇಶವಾಪುರ, ಚೌಡಸಂದ್ರ, ಅಪ್ಪೇಗೌಡನಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 6.45 ಗಂಟೆ ಸಮಯದಲ್ಲಿ ಕಂಬದಹಳ್ಳಿ ಗ್ರಾಮದ ಕಡೆ ಹೋಗಲು ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿದ್ದಾಗ ಬಾತ್ಮಿದಾರರಿಂದ ಕಂಬದಹಳ್ಳಿ ಗ್ರಾಮದ ಮುನೇಗೌಡ ರವರ ಮನೆಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿಯು ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಕಂಬದಹಳ್ಳಿ ಗ್ರಾಮದ ಮುನೇಗೌಡ ರವರ ಮನೆಯ ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಕವರ್ ಎತ್ತಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದು ಆಗ ತಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಮುನೇಗೌಡ ಬಿನ್ ಬಚ್ಚೇಗೌಡ, 50 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ಕೆಲಸ, ವಾಸ: ಕಂಬದಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರ್ ಪರಿಶೀಲಿಸಲಾಗಿ 90 ಎಂ.ಎಲ್.  ಸಾಮರ್ಥ್ಯದ 10 ORIGINAL CHOICE DELUXE WHISKY ಟೆಟ್ರಾ ಪ್ಯಾಕೆಟ್ ಗಳಿದ್ದು,  ಸದರಿ ಸ್ಥಳದಲ್ಲಿ 2 ಖಾಲಿ ಪ್ಲಾಸ್ಟಿಕ್ ಲೋಟಗಳು, 2 ಖಾಲಿ ವಾಟರ್ ಪಾಕೇಟ್ ಗಳನ್ನು ಮತ್ತು 90 ಎಂ.ಎಲ್.  ಸಾಮರ್ಥ್ಯದ 2 ORIGINAL CHOICE DELUXE WHISKY ಖಾಲಿ ಟೆಟ್ರಾ ಪ್ಯಾಕೆಟ್ ಗಳನ್ನು ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಸಂಜೆ 7.15 ಗಂಟೆಯಲ್ಲಿ ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿರುತ್ತೇನೆ. ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ಮುನೇಗೌಡ ಬಿನ್ ಬಚ್ಚೇಗೌಡ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ.183/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.184/2021 ಕಲಂ. 32,34,43(A) ಕೆ.ಇ ಆಕ್ಟ್:-

          ದಿನಾಂಕ:07-06-2021 ರಂದು  ಬೆಳಿಗ್ಗೆ  11-20 ಗಂಟೆಯಲ್ಲಿ  ಡಿ.ಸಿ.ಬಿ ಸಿ.ಇ.ಎನ್ ಪೊಲೀಸ್ ಠಾಣೆಯ  ಮಹಿಳಾ ಸಬ್ ಇನ್ಸ್ಪೇಕ್ಟರ್  ಶ್ರೀಮತಿ ಸರಸ್ಪತಮ್ಮ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ    ಡಿ.ಸಿ.ಬಿ ಸಿ.ಇ.ಎನ್ ಪೊಲೀಸ್ ಠಾಣೆಯ ಪಿ.ಐ ರವರಾದ ಶ್ರೀ. ಎನ್.ರಾಜಣ್ಣ ರವರ ಆದೇಶದ ಮೇರಗೆ  ತಾನು ದಿನಾಂಕ:07-06-2021 ರಂದು ತಮ್ಮ ಠಾಣೆಯ ಸಿಬ್ಬಂದಿಯಾದ ಶ್ರೀ.ಟಿ.ನಾರಾಯಣರೆಡ್ಡಿ. ಎ.ಎಸ್.ಐ, ರವರೊಂದಿಗೆ ದ್ವಿಚಕ್ರವಾಹನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಚಿಕ್ಕಬಳ್ಳಾಪುರ ತಾಲ್ಲೂಕು ಜಾತವಾರಹೊಸಹಳ್ಳಿ, ಹೊಸಹುಡ್ಯ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಬೆಳಿಗ್ಗೆ 7-00 ಗಂಟೆಗೆ ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ರಸ್ತೆಯ ಹಂಡಿಗನಾಳ ಅಮಾನಿ ಕೆರೆಯ ಕಟ್ಟೆಯ ಮೇಲೆ ಇರುವ ಕಿಟ್ಟಿ ಬಿರಿಯಾನಿ ಹೋಟೇಲ್ ಹತ್ತಿರ ಯಾರೋ  ಒಬ್ಬ ಅಸಾಮಿ ಅಕ್ರಮವಾಗಿ ಮದ್ಯವನ್ನು ಟಿ.ವಿ.ಎಸ್. ಹೆವಿಡ್ಯೂಟಿ ದ್ವಿಚಕ್ರವಾಹನದಲ್ಲಿ ಸಾಗಿಸಿಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದಿದ್ದರ ಮೇರಗೆ ತಾವುಗಳು ಕೂಡಲೇ  ಪಂಚರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಶಿಡ್ಲಘಟ್ಟ ಕಡೆಯಿಂದ ಬರುತ್ತಿದ್ದ ದ್ವಿಚ್ರಕವಾಹಗಳನ್ನು ಗಮನಿಸುತ್ತಿದ್ದಾಗ ಶಿಡ್ಲಘಟ್ಟ ಕಡೆಯಿಂದ ಟಿ.ವಿ.ಎಸ್. ಹೆವಿಡ್ಯೂಟಿ ದ್ವಿಚಕ್ರವಾಹನದಲ್ಲಿ ಎರಡು ಚೀಲಗಳನ್ನು ಇಟ್ಟುಕೊಂಡು ಬರುತ್ತಿದ್ದು ಆಗ ತಾವು ಸದರಿ ದ್ವಿಚಕ್ರವಾಹನದ ಸವಾರನಿಗೆ ನಿಲ್ಲಿಸುವಂತೆ ಸೂಚನೆ ನೀಡಿದ್ದು ಆಗ ಸದರಿ ಅಸಾಮಿ ತನ್ನ ದ್ವಿಚಕ್ರವಾಹನವನ್ನು ನಿಲ್ಲಿಸಿರುತ್ತಾನೆ ಸದರಿ ದ್ವಿಚಕ್ರವಾಹನದಲ್ಲಿದ್ದ ಚೀಲಗಳನ್ನು ಪರಿಶೀಲಿಸಲಾಗಿ ಮದ್ಯದ ಟೆಟ್ರಾ ಪಾಕೇಟ್ ಗಳಿರುವ ಮೂರು ರೆಟ್ಟಿನ ಬಾಕ್ಸ್ ಗಳಿದ್ದವು  ಆಗ ಸದರಿ ಅಸಾಮಿಯ ಬಳಿ  ಮದ್ಯದ ಮಾಲುಗಳನ್ನು ಸಾಗಾಣಿಕೆ ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು  ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾನೆ ಆಗ ಸದರಿ ಅಸಾಮಿಯ  ಸದರಿ ಮದ್ಯದ ಮಾಲುಗಳು ಎಲ್ಲಿಂದ ತಂದಿದ್ದು ಎಂದು ಕೇಳಲಾಗಿ ಆಗ ತಾನು ಶಿಡ್ಲಘಟ್ಟ ನಗರದ ಬಸ್ಸ್ ನಿಲ್ದಾಣದ ಬಳಿ ಇರುವ ಅರ್ಚನಾ ವೈನ್ಸ್ ನಿಂದ ಕ್ಯಾಷಿಯರ್ ಶಿವು ಎಂಬುವವರು ಕೊಟ್ಟಿದ್ದು ಎಂದು ತಿಳಿಸಿರುತ್ತಾನೆ ಸದರಿ ಅಸಾಮಿಯ  ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ರಾಜು ಬಿನ್ ನರಸಿಂಹಪ್ಪ, ಸುಮಾರು 26 ವರ್ಷ. ಪ.ಜಾತಿ,ಚಿಲ್ಲರೇ ಅಂಗಡಿ ವ್ಯಾಪಾರ, ದೊಡ್ಡಕಿರುಗಂಬಿ ಗ್ರಾಮ,ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿರುತ್ತಾನೆ, ದ್ವಿಚಕ್ರವಾಹನವನ್ನು ಪರಿಶೀಲಿಸಲಾಗಿ ಕೆಎ-40 ಕೆ-9446 ನೋಂದಣಿ ಸಂಖ್ಯೆಯ ಟಿ.ವಿ.ಎಸ್, ಸೂಪರ್ ಎಕ್ಸ್.ಎಲ್ ಹೆವಿಡ್ಯೂಟಿ ಕಂಪನಿಯದಾಗಿರುತ್ತೆ, ಸದರಿ ದ್ವಿಚಕ್ರವಾಹನದಲ್ಲಿರುವ  ಮದ್ಯದ ಮಾಲುಗಳಿರುವ ಎರಡು ಚೀಲಗಳನ್ನು ಪರಿಶೀಲಿಸಲಾಗಿ  ಮೂರು ರೆಟ್ಟಿನ ಬಾಕ್ಸ್ ಗಳಿದ್ದು ಅವುಗಳನ್ನು ಪರಿಶೀಲನೆ ಮಾಡಲಾಗಿ ಹೈವಾರ್ಡ್ಸ್ ಚೀಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳಿರುವ ಎರಡು ರೆಟ್ಟಿನ ಬಾಕ್ಸ್ ಗಳಿದ್ದು, ಸದರಿ ಬಾಕ್ಸ್ ಗಳಲ್ಲಿ 90 ಎಂ.ಎಲ್ ಸಾಮಥ್ರ್ಯದ 192 ಟೆಟ್ರಾಪಾಕೇಟ್ ಗಳಿರುತ್ತೆ, ಮತ್ತೊಂದು ರೆಟ್ಟಿನ ಬಾಕ್ಸ್ ಅನ್ನು ಪರಿಶೀಲಿಸಲಾಗಿ ಬ್ಯಾಗ್ ಪೇಪರ್ ಡಿಲಕ್ಸ್ ವಿಸ್ಕಿಯ 180 ಎಂ.ಎಲ್ ಸಾಮಥ್ರ್ಯದ 48 ಟೆಟ್ರಾಪಾಕೇಟ್ ಗಳಿರುತ್ತೆ,ಮೇಲ್ಕಂಡ ಎಲ್ಲಾ ಮದ್ಯದ ಮಾಲುಗಳು ಒಟ್ಟು 25.920 ಲೀಟರ್ ನಷ್ಟಿದ್ದು ಅವುಗಳ ಒಟ್ಟು ಬೆಲೆ 11,843/- ರೂಗಳಾಗಿರುತ್ತೆ. ಮೇಲ್ಕಂಡ ಮದ್ಯದ ಮಾಲುಗಳ ಪೈಕಿ ಎಪ್.ಎಸ್.ಎಲ್ ಪರೀಕ್ಷೆಯ ಸಲುವಾಗಿ ಪ್ರತಿಯೊಂದು ಬಾಕ್ಸ್ ನಲ್ಲಿ ಒಂದೊಂದು ಟೆಟ್ರಾ ಪಾಕೇಟ್ ಒಟ್ಟು 3 ಟೆಟ್ರಾಪಾಕೇಟ್ ಗಳನ್ನ್ನು ಪ್ರತ್ಯೇಕವಾಗಿ ಒಂದೊಂದು ಬಿಳಿಬಟ್ಟೆಯ ಚೀಲದಲ್ಲಿ ಇಟ್ಟು ಮೂತಿಯನ್ನು ದಾರದಿಂದ ಹೊಲೆದು ಅರಗು ಮಾಡಿ ಅರಗಿನ ಮೇಲೆ “R” ಎಂಬ ಅಕ್ಷರದಿಂದ ಸೀಲ್ ಮಾಡಿರುತ್ತೆ, ಮೇಲ್ಕಂಡ ಎಲ್ಲಾ ಮದ್ಯದ ಮಾಲುಗಳನ್ನು ಮತ್ತು ದ್ವಿಚಕ್ರವಾಹನವನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿ ತಮ್ಮ ಮುಂದೆ ಹಾಜರುಪಡಿಸಿದ್ದು. ಕಾನೂನು ಬಾಹಿರವಾಗಿ ಮದ್ಯವನ್ನು ಸಂಗ್ರಹಣೆ ಮಾಡಿ ಸಾಗಾಣಿ ಮಾಡಿಕೊಂಡು ಬರುತ್ತಿದ್ದ ಆರೋಪಿ ರಾಜು ಬಿನ್ ನರಸಿಂಹಪ್ಪ,  ಮತ್ತು ಮದ್ಯವನ್ನು ಸಾಗಾಣಿಗೆ ಮಾಡಲು ಹೇಳಿ ಮದ್ಯವನ್ನು ಕೊಟ್ಟಿದ್ದ  ಅರ್ಚನ ವೈನ್ಸ್  ಕ್ಯಾಷಿಯರ್ ಶಿವು ಹಾಗೂ ಮಾಲೀಕರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ  ನೀಡಿದ ವರದಿಯ  ಮೇರಗೆ  ಠಾಣಾ ಮೊ.ಸಂ:184/2021 ಕಲಂ:32, 34, 43(ಎ) ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 07-06-2021 05:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080