Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.125/2021 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ:06/05/2021 ರಂದು ಮದ್ಯಾಹ್ನ 2-45 ಗಂಟೆಗೆ ಶ್ರೀ ರೆಡ್ಡಪ್ಪ ಸಹಾಯಕ ಪೊಲೀಸ್ ಉಪ-ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ; 06-05-2021 ರಂದು ಸಿಪಿಐ ರವರು ನನಗೆ ಮತ್ತು ಪಿಸಿ 276 ಸಾಗರ್ ರವರಿಗೆ  ಹಗಲು ಗಸ್ತು ಕರ್ತವ್ಯಕ್ಕೆ  ನೇಮಿಸಿದ್ದು ಅದರಂತೆ ನಾನು ಮತ್ತು ಪಿಸಿ-276 ಸಾಗರ್ ರವರು ಬಾಗೇಪಲ್ಲಿ ಪುರದಲ್ಲಿ ಹಗಲು ಗಸ್ತು ನಿರ್ವಹಿಸುತ್ತಿದ್ದಾಗ ಮಾನ್ಯ ಸಿ.ಪಿ.ಐ. ಸಾಹೇಬರಿಗೆ ಮದ್ಯಾಹ್ನ 1-00 ಗಂಟೆಯಲ್ಲಿ  ಸಮಯದಲ್ಲಿ ಸಾಧಿಕ್ ಭಾಷಾ ಬಿನ್ ನ್ಯಾಮತ್ ಸಾಬ್,  ಆಟೋ ಚಾಲಕ, ವಾಸ 3ನೇ ವಾರ್ಡ್, ಬಾಗೇಪಲ್ಲಿ ಟೌನ್ ರವರು ಅಕ್ರಮವಾಗಿ  ಪ್ಲಾಸ್ಟಿಕ್ ಚೀಲದಲ್ಲಿ ಮದ್ಯವನ್ನು ಮಾರಾಟ ಮಾಡಲು ತೆಗೆದುಕೊಂಡು ಮಂಜುನಾಥ ಬಾರ್ ಕಡೆಗೆ ಹೋಗುತ್ತಿರುವುದಾಗಿ ಮಾಹಿತಿ ಬಂದಿದ್ದು, ಸಿಪಿಐ ಸಾಹೇಬರು ಮೇಲ್ಕಂಡ ಮಾಹಿತಿಯನ್ನು ತಿಳಿಸಿ ಸದರಿಯವರ ಮೇಲೆ ದಾಳಿ ಮಾಡಲು ಮೌಖಿಕವಾಗಿ ಸೂಚಿಸಿದ್ದರ ಮೇರೆಗೆ ಸದರಿ ಮಾಹಿತಿಯನ್ನು ಅನುಸರಿಸಿ ನಾನು ಮತ್ತು ಪಿಸಿ-276 ಸಾಗರ್ ರವರು  ದ್ವಿ ಚಕ್ರ ವಾಹನದಲ್ಲಿ ಟಿ.ಬಿ.ಕ್ರಾಸ್ ನಲ್ಲಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮೇಲ್ಕಂಡ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಹಾಜರಿದ್ದು, ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಸದರಿಯವರು ಒಪ್ಪಿಕೊಂಡಿದ್ದು,  ನಂತರ ಪಂಚರು ಮತ್ತು ನಾವುಗಳು ದ್ವಿಚಕ್ರ ವಾಹನಗಳಲ್ಲಿ  ಬಾಗೇಪಲ್ಲಿ ತಾಲ್ಲೂಕು ಟಿ.ಬಿ.ಕ್ರಾಸ್ ನಿಂದ ಟೋಲ್ ಕಡೆಗೆ ಹೋಗುವ ಸರ್ವಿಸ್ ರಸ್ತೆಯಲ್ಲಿ ಬಸ್ ಸ್ಟಾಪ್ ಬಳಿ ಮದ್ಯಾಹ್ನ 1-15 ಗಂಟೆಯ ಸಮಯದಲ್ಲಿ ಹೋಗುತ್ತಿದ್ದ ಆಸಾಮಿಯು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಹೆಗಲ ಮೇಲೆ ತೆಗೆದುಕೊಂಡು ಹೋಗುತ್ತಿದ್ದ ಪ್ಲಾಸ್ಟಿಕ್ ಚೀಲವನ್ನು ರಸ್ತೆಯಲ್ಲಿ ಬಿಸಾಡಿ ಓಡಿಹೋಗುತ್ತಿದ್ದಾಗ ಸಿಬ್ಬಂದಿಯಾದ ಪಿಸಿ-276 ಸಾಗರ್ ರವರು ಹಿಂಬಾಲಿಸಿದಾಗ ಕೈಗೆ ಸಿಗದೇ ಓಡಿಹೋಗಿರುತ್ತಾನೆ. ನಂತರ ಸ್ಥಳದಲ್ಲಿ ಆಸಾಮಿಯು ಬಿಸಾಡಿ ಹೋಗಿದ್ದ ಪ್ಲಾಸ್ಟಿಕ್  ಚೀಲವನ್ನು, ಪಂಚರ ಸಮಕ್ಷಮ ಪರಿಶೀಲಿಸಲಾಗಿ ಪ್ಲಾಸ್ಟಿಕ್ ಚೀಲದಲ್ಲಿ ನಾಲ್ಕು ಬಾಕ್ಸ್ ಗಳಿದ್ದು, 1ನೇ ಬಾಕ್ಸ್ ನಲ್ಲಿ 180 M.L.ನ OLD TAVERN WHISHY ಯ 48 ಟೆಟ್ರಾ ಪಾಕೆಟ್ ಗಳಿರುತ್ತವೆ, ಇವುಗಳ ಒಟ್ಟು ಮದ್ಯ 8 ಲೀಟರ್ 640 ಎಂ.ಎಲ್. ಆಗಿದ್ದು, ಒಟ್ಟು ಮೌಲ್ಯ 4,164/- ರೂಪಾಯಿಗಳಾಗಿರುತ್ತೆ. 2ನೇ ಬಾಕ್ಸ್ ನಲ್ಲಿ ಪರಿಶೀಲಿಸಲಾಗಿ 180 M.L.ನ OLD TAVERN WHISHY ಯ 48 ಟೆಟ್ರಾ ಪಾಕೆಟ್ ಗಳಿರುತ್ತವೆ, ಇವುಗಳ ಒಟ್ಟು ಮದ್ಯ 8 ಲೀಟರ್ 640 ಎಂ.ಎಲ್. ಆಗಿದ್ದು, ಒಟ್ಟು ಮೌಲ್ಯ 4,164/- ರೂಪಾಯಿಗಳಾಗಿರುತ್ತೆ, ನಂತರ 3ನೇ ಬಾಕ್ಸ್ ನಲ್ಲಿ ಪರಿಶೀಲಿಸಲಾಗಿ 180 M.L.ನ OLD TAVERN WHISHY ಯ 48 ಟೆಟ್ರಾ ಪಾಕೆಟ್ ಗಳಿರುತ್ತವೆ, ಇವುಗಳ ಒಟ್ಟು ಮದ್ಯ 8 ಲೀಟರ್ 640 ಎಂ.ಎಲ್. ಆಗಿದ್ದು, ಒಟ್ಟು ಮೌಲ್ಯ 4,164/- ರೂಪಾಯಿಗಳಾಗಿರುತ್ತೆ, 4ನೇ ಬಾಕ್ಸ್ ನಲ್ಲಿ ಪರಿಶೀಲಿಸಲಾಗಿ 180 M.L.ನ 8P.M WHISHY ಯ 48 ಟೆಟ್ರಾ ಪಾಕೆಟ್ ಗಳಿರುತ್ತವೆ, ಇವುಗಳ ಒಟ್ಟು ಮದ್ಯ 8 ಲೀಟರ್ 640 ಎಂ.ಎಲ್. ಆಗಿದ್ದು, ಒಟ್ಟು ಮೌಲ್ಯ 4,164/- ರೂಪಾಯಿಗಳಾಗಿರುತ್ತೆ,ಮೇಲ್ಕಂಡ ನಾಲ್ಕು ಬಾಕ್ಸ್ ಗಳಲ್ಲಿ 34 ಲೀಟರ್ 560 ಎಂ.ಎಲ್. ಮದ್ಯವಿದ್ದು,  ಒಟ್ಟು ಮೌಲ್ಯ 16,656/- ರೂಪಾಯಿಗಳಾಗಿರುತ್ತೆ. ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ 2-45 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸಿದ್ದು, ಓಡಿ ಹೋದ ಸಾಧಿಕ್ ಭಾಷಾ ಬಿನ್ ನ್ಯಾಮತ್ ಸಾಬ್, ಮುಸ್ಲಿಂ ಜನಾಂಗ,  ಆಟೋ ಚಾಲಕ, ವಾಸ 3ನೇ ವಾರ್ಡ್, ಬಾಗೇಪಲ್ಲಿ ಟೌನ್ ರವರ ವಿರುದ್ದ ಕಾನೂನಿನ ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.67/2021 ಕಲಂ. 506,34,504,323,324 ಐ.ಪಿ.ಸಿ:-

     ದಿನಾಂಕ: 07/05/2021 ರಂದು ಮದ್ಯಾಹ್ನ 12-30 ಗಂಟೆಯಿಂದ 13-00 ಗಂಟೆಯವರೆಗೆ    ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀಮತಿ ನಾಗರತ್ನಮ್ಮ ಕೋಂ ವೈ ಎಂ  ಚಿಕ್ಕವೆಂಕಟರವರಣಪ್ಪ , 45 ವರ್ಷ, ಪಿಚ್ಚಗುಂಟ್ಲ (ಅಲೆಮಾರಿ ಜನಾಂಗ) ಮನೆ ಕೆಲಸ, ವಾಸ: ಯಸಗಲಹಳ್ಳಿ ಗ್ರಾಮ, ಮುಂಗಾನಹಳ್ಳಿ ಹೋಬಳಿ ಚಿಂತಾಮಣಿ ತಾಲ್ಲೂಕು ಮೊ ನಂ: 8971445964 ರವರು ನೀಡಿದ ಹೇಳಿಕೆಯನ್ನು ದೂರಿನ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ:07/05/2021 ರಂದು ಬೆಳಿಗ್ಗೆ ಸುಮಾರು 9-00 ಗಂಟೆಯ ಸಮಯದಲ್ಲಿ ನಾನು ನಮ್ಮ ಬಾಬತ್ತು ಮೇಕೆ ಮತ್ತು ನಾಟಿ ಹಸುಗಳನ್ನು ನಮ್ಮ ತೋಟದ ಬಳಿಗೆ ಹಿಡಿದುಕೊಂಡು ಹೋದಾಗ ನಮ್ಮ ಬಾಭತ್ತು ಸರ್ವೇ ನಂಬರ್ 6 ಮತ್ತು 39 ರ ಜಮೀನಿನಲ್ಲಿ ನಮ್ಮ ಗ್ರಾಮದ ವಾಸಿಗಳಾದ ಮಂಜುನಾಥ ಬಿನ್ ಜಿ ಎಸ್ ರಾಮಣ್ಣ, 35 ವರ್ಷ, ವಕ್ಕಲಿಗರು, ವ್ಯವಸಾಯ, ಮತ್ತು ಸಂತೋಷ ಬಿನ್ ಜಿ ಎಸ್ ರಾಮಣ್ಣ, 32 ವರ್ಷ, ವಕ್ಕಲಿಗರು, ಖಾಸಗಿ ಕಂಪನಿಯಲ್ಲಿ ಕೆಲಸ,ರವರುಗಳು ನಮ್ಮ ಜಮೀನಿನಲ್ಲಿ ಕಲ್ಲುಗಳನ್ನು ಹಾಕುತ್ತಿದ್ದರು. ನಾನು ಅವರನ್ನು ಕುರಿತು ಏಕೆ ನಮ್ಮ ಜಮೀನಿನಲ್ಲಿ ಕಲ್ಲುಗಳನ್ನು ಹಾಕುತ್ತಿರುವುದು ಎಂದು ಕೆಳಿದ್ದಕ್ಕೆ  ಹೋಗೇ ಬೋಳಿಮುಂಡೆ ನೀನು ಯಾರು ಕೇಳುವುದಕ್ಕೆ ಎಂದು ಅವಾಚ್ಯ ಶಬ್ದಗಳಿಂದ ನನ್ನನ್ನು ಬೈದು ಕೈಗಳಿಂದ ಮೈಮೇಲೆ ಹೊಡೆದಿದ್ದು, ಆ ಪೈಕಿ ಮಂಜುನಾಥನು ಅಲ್ಲಿಯೇ  ಬಿದಿದ್ದ ಕೋಲಿನಿಂದ ನನ್ನ ಎಡ ಕೈ ಮುಂಗೈಗೆ ಮತ್ತು ಬಲ ಕಾಲಿಗೆ ಹೊಡೆದು ಗಾಯಪಡಿಸಿರುತ್ತಾನೆ. ಸಂತೋಷನು ದೊಣ್ಣೆಯಿಂದ  ನನ್ನ ಬೆನ್ನಿಗೆ ಹೊಡೆದು ಗಾಯಪಡಿಸಿರುತ್ತಾನೆ. ಇಬ್ಬರು ಸೇರಿ ನನ್ನನ್ನು ಮುಳ್ಳು ಗಿಡಗಳ ಮೇಲೆ ತಳ್ಳಿ ನನ್ನನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಮುಳ್ಳುಗಳು ನನ್ನ ಕಾಲುಗಳಿಗೆ , ಕೈಗಳಿಗೆ, ಕುಚ್ಚಿಕೊಂಡು ತರಚಿದ ಗಾಯಗಳಾಗಿರುತ್ತವೆ. ನಾನು ನೋವಿನಿಂದ ಕಿರುಚಿಕೊಂಡಾಗ ಅಷ್ಟರಲ್ಲಿ ಸ್ಥಳಕ್ಕೆ ಬಂದ ನನ್ನ ಮಗ ರಮೇಶ್ ಮತ್ತು  ನಮ್ಮ ಭಾವ ವೈ ಎಂ ವೆಂಕಟರವಣಪ್ಪ ರವರು ಸ್ಥಳಕ್ಕೆ ಬಂದು ನನ್ನನ್ನು ಅವರಿಂದ ಪಾರು ಮಾಡಿ ನನ್ನನ್ನು ದ್ವಿಚಕ್ರವಾಹನದಲ್ಲಿ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು ನಾನು ಚಿಕಿತ್ಸೆ ಪಡೆಯುತ್ತಿರುತ್ತೇನೆ. ಆದ್ದರಿಂದ ಮೇಲ್ಕಂಢವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೋರಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

 

3. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.41/2021 ಕಲಂ. 380  ಐ.ಪಿ.ಸಿ:-

     ಈ ದಿನ  ದಿನಾಂಕ 07.05.2021 ಪಿರ್ಯಾದಿದಾರರಾದ  ದೇವರಾಜ್ ಬಿನ್ ವೆಂಕಟರವಣಪ್ಪ, 26 ವರ್ಷ, ಭೋವಿ ಜನಾಂಗ,  ಟೆಂಪೋ ಚಾಲಕ, ವಾಸ ನಿಮ್ಮಕಾಯಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು.  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಾನು ಈಗ್ಗೆ ಸುಮಾರು 04 ವರ್ಷಗಳಿಂದ ರಾಗಮಾಕಲಪಲ್ಲಿ ಗ್ರಾಮದ ಮಂಜುನಾಥರೆಡ್ಡಿ ರವರ ಬಾಬತ್ತು ಟೆಂಪೋ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ. ನಾನು ಕ್ಯಾರೆಟ್ ಅನ್ನು ಟೆಂಪೋಗೆ ತುಂಬಿಸಿಕೊಂಡು ಶಿವಪುರ ಗ್ರಾಮದ ಬಳಿ  ತೊಳೆಯಲು ತೆಗೆದುಕೊಂಡು ಹೋಗಿ ಅನ್ ಲೋಡ್ ಮಾಡಿ ಬರುತ್ತಿರುತ್ತೇನೆ. ಈಗಿರುವಲ್ಲಿ ನಮ್ಮ ಗ್ರಾಮದ ವಾಸಿ ರಾಜ ಎಂ.ವಿ ಬಿನ್ ಮೀಸಾಲು ವೆಂಕಟರವಣಪ್ಪ ಎಂಬವರು ಸುಮಾರು 4 ತಿಂಗಳಿಂದ  ನನಗೆ ಪರಿಚಯವಾಗಿದ್ದು, ರಾಜ ಎಂ.ವಿ ರವರು ನನಗೆ ನಾನು ಸಹ ನಿನ್ನ ಜೊತೆಯಲ್ಲಿ ಕೂಲಿ ಕೆಲಸಕ್ಕೆ ಬರುತ್ತೇನೆಂದು ಕೇಳಿಕೊಂಡಾಗ ನಾನು ನನ್ನ ಜೊತೆಯಲ್ಲಿ ಕ್ಯಾರೆಟ್ ಕೆಲಸಕ್ಕಾಗಿ ಕರೆದುಕೊಂಡು ಹೋಗುತ್ತಿದ್ದೆ. ನಾವಿಬ್ಬರೂ ಕೂಲಿ ಕೆಲಸಕ್ಕೆ ಹೋಗಿ ಸಂಜೆ ಮನೆಗೆ  ವಾಪಸ್ಸು ಬಂದು ನಮ್ಮ ಮನೆಯಲ್ಲಿಯೇ ಇರುತ್ತಿದ್ದೆವು. ಪ್ರತಿ ದಿನ ರಾಜ ಎಂ.ವಿ ರವರು ನಮ್ಮ ಮನೆಯಲ್ಲಿಗೆ ಬಂದು ಹೋಗುತ್ತಿದ್ದ.  ನಾವು ಮನೆಯಲ್ಲಿ ಏನೇ ತಂದು ಇಟ್ಟರೂ ಸಹ ರಾಜ ಎಂ.ವಿ ರವರು ನೋಡುತ್ತಿದ್ದರು.  ಹಾಗೂ ಒಂದೊಂದು  ದಿನ ರಾತ್ರಿ ಸಹ ನಮ್ಮ ಮನೆಯಲ್ಲಿಯೇ ಮಲಗುತ್ತಿದ್ದನು.  ಹೀಗಿರುವಲ್ಲಿ ನಮ್ಮ ತಾಯಿಯಾದ ತಿಪ್ಪಮ್ಮ ರವರು ದಿನಾಂಕ:31-03-2021 ರಂದು ಶಂಗೋರಪಲ್ಲಿ ಗ್ರಾಮಕ್ಕೆ ನಮ್ಮ ಸಂಬಂಧಿಕರ ಮದುವೆಗೆ ಹೋಗಿ ದಿನಾಂಕ:01-04-2021 ರಂದು ಮನೆಗೆ ವಾಪಸ್ಸು  ಬಂದು ಬಂಗಾರದ ವಡವೆಗಳಾದ 1] 8 ಗ್ರಾಂ ತೂಕದ ಕಿವಿಯ ಹ್ಯಾಂಗೀಸ್ ಒಂದು ಜೊತೆ 2] 10 ಗ್ರಾಂ ತೂಕದ ಕೊರಳಿನ ಚೈನ್  ಡಾಲರ್  ಒಳಗೊಂಡಂತೆ 3] 6 ಗ್ರಾಂ ತೂಕದ ಉಂಗುರ ಇವುಗಳನ್ನು ನಮ್ಮ ಮನೆಯಲ್ಲಿ ಬೀರುವಿನಲ್ಲಿ ಇಟ್ಟು ದೊಡ್ಡಬಳ್ಳಾಪುರಗೆ ಕೂಲಿ ಕೆಲಸಕ್ಕಾಗಿ ಹೊರಟುಹೋಗಿರುತ್ತಾರೆ. ನಮ್ಮ ತಾಯಿ ವಡವೆಗಳ್ನು ಇಡುತ್ತಿದ್ದಾಗ ರಾಜ ಎಂ.ವಿ ರವರು ಸಹ ನಮ್ಮ ಮನೆಯಲ್ಲಿಯೇ ಇದ್ದರು. ಹೀಗಿರುವಲ್ಲಿ ನಮ್ಮ ತಾಯಿಯವರು ದಿನಾಂಕ:29-04-2021 ರಂದು ಸಂಜೆ ದೊಡ್ಡಬಳ್ಳಾಪುರದಿಂದ ಮನೆಗೆ ವಾಪಸ್ಸು ಬಂದು ಮನೆಯಲ್ಲಿ ಬೀರುವಿನ ಬಾಗಿಲು ತೆಗೆದು ನೋಡಲಾಗಿ ಬೀರುವಿನಲ್ಲಿ ಇಟ್ಟಿದ್ದ ಮೇಲ್ಕಂಡ ವಡವೆಗಳು ಇರುವುದಿಲ್ಲ. ತಕ್ಷಣ ನಮ್ಮ ತಾಯಿ ನನಗೆ ಕೇಳಿದರು. ನನಗೂ ಸಹ ನಮ್ಮ ತಾಯಿ ಕೇಳಿದಾಗಲೇ ವಿಚಾರ  ಗೊತ್ತಾಯಿತು. ನಾನು ಸಹ ನಮ್ಮ ತಾಯಿ ವಡವೆಗಳನ್ನು ಬೀರುವಿನಲ್ಲಿ ಇಟ್ಟು ಹೋದಾಗನಿಂದ ಬೀರುವಿನ ಬಾಗಿಲು ತೆಗೆದಿರಲಿಲ್ಲಾ. ನಮ್ಮ ಮನೆಗೆ ನಮ್ಮ ಗ್ರಾಮದ ರಾಜ ಎಂ.ವಿ ರವರು ಬಿಟ್ಟರೇ ಬೇರೆ ಯಾರು ಸಹ ಬರುತ್ತಿರಲಿಲ್ಲಾ. ಅದ್ದರಿಂದ ರಾಜ ಎಂ.ವಿ ರವರೇ ವಡವೆಗಳನ್ನು ಕಳ್ಳತನ ಮಾಡಿರುಬಹುದೆಂದು ಅನುಮಾನ ಇರುತ್ತದೆ. ಸದರಿ ವಡವೆಗಳನ್ನು ಸುಮಾರು 8 ವರ್ಷಗಳ ಹಿಂದೆ 1 ಗ್ರಾಂ ಬಂಗಾರಕ್ಕೆ 2000/- ರೂಗಳಂತೆ ಕೊಂಡುಕೊಂಡಿರುತ್ತೇವೆ. ಒಟ್ಟು 24 ಗ್ರಾಂ ಬಂಗಾರದ ವಡವೆಗಳನ್ನು 48.000/- ರೂಗಳಿಗೆ ತೆಗೆದುಕೊಂಡಿರುತ್ತೇವೆ. ಅದ್ದರಿಂದ ಕಳ್ಳತನವಾಗಿರುವ ಮೇಲ್ಕಂಡ ವಡವೆಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿರುತ್ತದೆ. ನಮ್ಮ ಗ್ರಾಮದಲ್ಲಿ ದೊಡ್ಡವರ ಸಮ್ಮುಖದಲ್ಲಿ ರಾಜ ಎಂ ವಿ ರವರನ್ನು ವಿಚಾರಣೆ ಮಾಡಿದಾಗ ನಾನು ತೆಗೆದುಕೊಂಡು ಹೋಗಿರುವುದಿಲ್ಲ ಎಂಬುದಾಗಿ ತಿಳಿಸಿರುತ್ತಾರೆ. ಹಾಗೂ ಹುಡುಕಾಡಲಾಗಿ ಸಿಗದ ಕಾರಣ  ಈ ದಿನ ತಡವಾಗಿ ದೂರನ್ನು ನೀಡಿರುತ್ತೇನೆ.

 

4. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.37/2021 ಕಲಂ. 143,353,504,188,149  ಐ.ಪಿ.ಸಿ & 5(2),5(4) THE KARNATAKA EPIDEMIC DISEASES ACT, 2020:-

     ದಿನಾಂಕ; 07-05-2021 ರಂದು ಬೆಳಗ್ಗೆ 9.00 ಗಂಟೆಗೆ ಚಿಕ್ಕಬಳ್ಳಾಪುರ ಮಹಿಳಾ ಪೋಲಿಸ್ ಠಾಣೆಯ ಎ.ಎಸ್.ಐ ಶ್ರೀ ಮುರಳೀಧರ್ 55 ವರ್ಷ, ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ದೂರಿನ ಸಾರಾಂಶವೇನೆಂದರೆ, ದಿನಾಂಕ; 06-05-2021 ರಂದು ತನಗೆ ಚಿಕ್ಕಬಳ್ಳಾಪುರ ನಗರದಲ್ಲಿರುವ ಹಳೇ ಜಿಲ್ಲಾಸ್ಪತ್ರೆ ಕೋವಿಡ್ ಕೇರ್ ಸೆಂಟರ್ ಬಳಿ ಬೆಳಗ್ಗೆ 8.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ಹಗಲು ಕರ್ತವ್ಯಕ್ಕೆ ಮಾನ್ಯ ಡಿ.ಎಸ್.ಪಿ ಸಾಹೇಬರವರ ಕಚೇರಿಯಿಂದ  ಕರ್ತವ್ಯಕ್ಕೆ ನೇಮಿಸಿರುತ್ತಾರೆ. ಅದರಂತೆ ತಾನು, ಸಿಬ್ಬಂದಿಯಾದ  ಪಿ.ಸಿ-259 ಶ್ರೀ ಪರಶುರಾಮ ಬೋಯಿ, ಪಿ.ಸಿ-193 ಶ್ರೀ ಕರಿಬಸಪ್ಪ, ಮ.ಪಿ.ಸಿ-598 ಕುಮಾರಿ ಸ್ನೇಹಾ, ಹೆಚ್.ಜಿ-04, ಶ್ರೀ ದ್ಯಾವಪ್ಪ, ಹೆಚ್.ಜಿ-22 ಶ್ರೀ ನರಸಿಂಹಮೂರ್ತಿ, ಹೆಚ್.ಜಿ-73, ಶ್ರೀ ಅನಿಲ್, ಹೆಚ್.ಜಿ-03 ಶ್ರೀ ಕೃಷ್ಣ.ವಿ ರವರು ಹಳೇ ಜಿಲ್ಲಾಸ್ಪತ್ರೆಯ ಬಳಿ ಕರ್ತವ್ಯಕ್ಕೆ ಹಾಜರಿದ್ದು, ಕರ್ತವ್ಯ  ನಿರ್ವಹಿಸುತ್ತಿದ್ದಾಗ ಯಾರೋ 5-6 ಆಸಾಮಿಗಳು ಅಕ್ರಮ ಗುಂಪನ್ನು ಕಟ್ಟಿಕೊಂಡು ಬೆಳಗ್ಗೆ ಸುಮಾರು 8.30 ಗಂಟೆ ಸಮಯದಲ್ಲಿ ಹಳೇ ಆಸ್ಪತ್ರೆಯ ಆವರಣದ ಒಳಗಡೆ ಏಕಾಏಕಿ ಕೂಗಾಡಿಕೊಂಡು, ಕಿರುಚಿಕೊಂಡು ಬರುತ್ತಿದ್ದರು. ಆಗ ಕರ್ತವ್ಯದಲ್ಲಿದ್ದ ತಾನು, ಮತ್ತು ಸಿಬ್ಬಂದಿಯವರು ಸದರಿ ಆಸಾಮಿಗಳನ್ನು ತಡೆದು ಇದು ಕೋವಿಡ್ ಆಸ್ಪತ್ರೆಯಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿಷಿದ್ದವಾಗಿರುತ್ತದೆ. ಎಂದು ತಿಳಿಸುತ್ತಿದ್ದರೂ ಸಹ ನಮ್ಮ ಮಾತನ್ನು ಲೆಕ್ಕಿಸದೇ ನಮ್ಮ ಹುಡುಗಿ ಅನುಪಮ ಎಂಬುವರು ಸಾವಿಗಿಡಾಗಿದ್ದಾರೆ ಎಂದು ಹೇಳುತ್ತಾ ಕೆಟ್ಟ ಮಾತುಗಳನ್ನು ಬೈದುಕೊಂಡು ಆಸ್ಪತ್ರೆಯ ಆವರಣದ ಒಳಗೆ ಏಕಾಏಕಿ ಪ್ರವೇಶ ಮಾಡಿ, ನಮ್ಮ ಕರ್ತವ್ಯಕ್ಕೆ ಅಡ್ಡಪಡಿಸಿ, ಮಾಸ್ಕನ್ನು ಸಹ ಧರಿಸದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಕೋವಿಡ್ 2 ನೇ ಅಲೆ ತೀವ್ರತೆಯು ಜಾಸ್ತಿಯಾಗುತ್ತಿರುವ ಈ ಸಮಯದಲ್ಲಿ ಆಸ್ಪತ್ರೆಯ ಆವರಣದಲ್ಲಿ ಆಸ್ಪತ್ರೆಯ ವೈದ್ಯರಿಗೆ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ!! ಸುಧಾಕರ್ ರವರಿಗೆ ಜೋರಾಗಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು, ಸದರಿಯವರು ಚಿಂತಾಮಣಿ ತಾಲ್ಲೂಕು ಮಲ್ಲಿಕಾರ್ಜುನಪುರ ವಾಸಿ ಶ್ರೀಮತಿ ಅನುಪಮ ಕೋಂ ಅನಿಲ್, 25 ವರ್ಷ, ಗರ್ಬಿಣಿ, ಹೆಂಗಸು ಕೋವಿಡ್ ನಿಂದಾಗಿ ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿದ್ದು, ಆಕೆಯ ಸಂಬಂಧಿಕರು ಎಂದು ತಿಳಿದು ಬಂದಿರುತ್ತೆ. ಆಸಾಮಿಗಳ  ಹೆಸರು ವಿಳಾಸ ತಿಳಿಯಲಾಗಿ,ಮೃತಳ ಅಣ್ಣ ಬೈರೇಗೌಡ, ಸಂಬಂಧಿ-ದೇವರಾಜು, ತಂದೆ-ಗಣೇಶಪ್ಪ ಎಂದು ತಿಳಿಯಿತು ಹಾಗೂ ಇತರರ ಹೆಸರು ವಿಳಾಸ ತಿಳಿಯಬೇಕಾಗಿರುತ್ತೆ.  ಆದ್ದರಿಂದ ಸದರಿಯವರು ಅಕ್ರಮ ಗುಂಪು ಕಟ್ಟಿಕೊಂಡು ಕೋವಿಡ್ ಆಸ್ಪತ್ರೆಯ ಆವರಣದ ಒಳಗೆ ಯಾವುದೇ ಅನುಮತಿಯನ್ನು ಪಡೆಯದೆ ಏಕಾಏಕಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ, ದೌರ್ಜನ್ಯದಿಂದ ಪ್ರವೇಶಿಸಿದ್ದು, ನಾವು ತಡೆದರೂ ಸಹ  ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ವೈದ್ಯಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಅವಾಚ್ಯ ಶಬ್ದಗಳಿಂದ ಬೈದಿರುವ ಮೇಲ್ಕಂಡ ಆಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ. ತಾನು, ಕೋವಿಡ್ ಪ್ರಯುಕ್ತ ಕರ್ತವ್ಯದಲ್ಲಿದ್ದ ಕಾರಣ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು, ಮೇಲಾಧಿಕಾರಿಗಳ ಆದೇಶದಂತೆ ಈ ದಿನ ದಿನಾಂಕ; 07-05-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.185/2021 ಕಲಂ. 279,337 ಐ.ಪಿ.ಸಿ :-

          ದಿನಾಂಕ: 06/05/2021 ರಂದು ಸಂಜೆ 4.45 ಗಂಟೆಗೆ ನವೀನ್ ಕುಮಾರ್ ಬಿನ್ ಮುನಿಯಪ್ಪ, 32 ವರ್ಷ, ವಕ್ಕಲಿಗರು, ಕೂಲಿಕೆಲಸ, ವಾರ್ಡ್ ನಂ.30, ಅಗ್ರಹಾರ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಮನೆಯ ಪಕ್ಕದಲ್ಲಿರುವ ತನ್ನ ಚಿಕ್ಕಮ್ಮನ ಮಗನಾದ ಎಸ್.ಲಕ್ಷ್ಮಿನಾರಾಯಣ ಬಿನ್ ಶ್ರೀನಿವಾಸ ರವರಿಗೆ 26 ವರ್ಷ ವಯಸ್ಸಾಗಿದ್ದು, ಅವನು ಬಿಸ್ಲೆರಿ ಕಂಪನಿಯಲ್ಲಿ ಸೇಲ್ಸ್ ಮೆನ್ ಆಗಿ ಕೆಲಸ ಮಾಡಿಕೊಂಡಿರುತ್ತಾನೆ. ಈ ದಿನ ದಿನಾಂಕ: 06/05/2021 ರಂದು ಬೆಳಿಗ್ಗೆ 06.00 ಗಂಟೆ ಸಮಯದಲ್ಲಿ ತನ್ನ ತಮ್ಮ ಎಸ್.ಲಕ್ಷ್ಮಿನಾರಾಯಣ ರವರು ತನ್ನ ಬಾಬ್ತು ಕೆಎ-67 ಇ-3682 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ 150 ದ್ವಿಚಕ್ರ ವಾಹನದಲ್ಲಿ ಕಂಪನಿಯ ಕೆಲಸದ ನಿಮಿತ್ತ ಶ್ರೀನಿವಾಸಪುರಕ್ಕೆ ಹೋಗಿರುತ್ತಾನೆ. ಇದೇ ದಿನ ಬೆಳಿಗ್ಗೆ 10.10 ಗಂಟೆ ಸಮಯದಲ್ಲಿ ತನ್ನ ತಮ್ಮ ಎಸ್.ಲಕ್ಷ್ಮಿನಾರಾಯಣ ತನಗೆ ಪೋನ್ ಮಾಡಿ ತನಗೆ ಸಿದ್ದಿಮಠ ಕ್ರಾಸ್ ನಲ್ಲಿ ಯಾವುದೋ ಲಾರಿ ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು ತನ್ನ ಬಲಕಿವಿ, ಬಲ ತಲೆ ಮತ್ತಿತರೆ ಕಡೆ ಗಾಯಗಳಾಗಿದ್ದು, ನೀನು ಇಲ್ಲಿಗೆ ಬಾ ಎಂದು ತಿಳಿಸಿದ್ದರ ಮೇರೆಗೆ ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ಸಂಗತಿ ನಿಜವಾಗಿದ್ದು, ತನ್ನ ತಮ್ಮನನ್ನು ಸಾರ್ವಜನಿಕರು ಉಪಚರಿಸುತ್ತಿದ್ದು ಆತನ ಬಲ ಕಿವಿ, ಬಲ ತಲೆ, ಬಲ ಕಾಲು ಮತ್ತು ಬಲ ಕೈಗೆ ಗಾಯಗಳಾಗಿರುತ್ತೆ. ಸ್ಥಳದಲ್ಲಿ ನೋಡಲಾಗಿ ತನ್ನ ತಮ್ಮನ ದ್ವಿಚಕ್ರ ವಾಹನ ಜಖಂ ಆಗಿ ಬಿದ್ದಿದ್ದು, ರಸ್ತೆಯ ಬದಿಯಲ್ಲಿ ಚಿಂತಾಮಣಿ ಕಡೆ ಎಂಪಿ-11 ಎ-2745 ನೊಂದಣಿ ಸಂಖ್ಯೆಯ ಲಾರಿ ನಿಂತಿರುತ್ತೆ. ತನ್ನ ತಮ್ಮನನ್ನು 108 ಆಂಬುಲೆನ್ಸ್ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಪಡೆಸಿ ವೈದ್ಯರ ಸಲಹೆಯ ಮೇರೆಗೆ ತನ್ನ ತಮ್ಮನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆರ್.ಕೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತೇನೆ. ತನ್ನ ತಮ್ಮನನ್ನು ವಿಚಾರ ಮಾಡಲಾಗಿ ಈ ದಿನ ತಾನು ಕಂಪನಿಯ ಕೆಲಸದ ಪ್ರಯುಕ್ತ ಶ್ರೀನಿವಾಸಪುರಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಚಿಂತಾಮಣಿಗೆ ವಾಪಸ್ಸು ಬರಲು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ಚಿಂತಾಮಣಿ-ಶ್ರೀನಿವಾಸಪುರ ರಸ್ತೆಯ ಸಿಧ್ದಿಮಠ ಗೇಟ್ ಬಳಿ ಬರುತ್ತಿದ್ದಾಗ, ತನ್ನ ಹಿಂದುಗಡೆಯಿಂದ ಬರುತ್ತಿದ್ದ ಎಂಪಿ-11 ಎ-2745 ಲಾರಿಯನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂದುಗಡೆಯಿಂದ ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ತಾನು ವಾಹನದ ಸಮೇತ ಬಿದ್ದು ಹೋಗಿ ಗಾಯಗೊಂಡಿದ್ದು, ದಾರಿಹೋಕರು ಮತ್ತು ಸಿದ್ದಿಮಠ ಗ್ರಾಮಸ್ಥರು ಬಂದು ತನ್ನನ್ನು ಉಪಚರಿಸಿರುವುದಾಗಿ ತಿಳಿಸಿರುತ್ತಾನೆ. ಲಾರಿ ಚಾಲಕನ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲ. ಆದ್ದರಿಂದ ತನ್ನ ತಮ್ಮನಿಗೆ ಅಪಘಾತಪಡಿಸಿದ ಮೇಲ್ಕಂಡ ಲಾರಿ ಚಾಲಕನ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.186/2021 ಕಲಂ. 15(A) ಕೆ.ಇ ಆಕ್ಟ್:-

          ದಿನಾಂಕ: 06/05/2021 ರಂದು ಸಂಜೆ 7.30 ಗಂಟೆಗೆ ಠಾಣೆಯ ಸಿ.ಹೆಚ್.ಸಿ-249 ಸಂದೀಪ್ ಕುಮಾರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:06/05/2021 ರಂದು ಮದ್ಯಾಹ್ನ ತನ್ನನ್ನು ಮತ್ತು ಸಿ.ಪಿ.ಸಿ-458 ರಾಜೇಶ್ ರವರನ್ನು ಮಾನ್ಯ ಪಿ.ಎಸ್.ಐ ರವರು ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ತಾನು ಠಾಣಾ ವ್ಯಾಪ್ತಿಯ ಟಿ.ಹೊಸೂರು, ತಳಗವಾರ, ಮಾರಪಲ್ಲಿ ಗ್ರಾಮಗಳ ಕಡೆಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಸಂಜೆ 6-00 ಗಂಟೆಗೆ ಹೀರೆಪಾಳ್ಯ ಗ್ರಾಮದ ಬಳಿಗೆ ಹೋದಾಗ ಹಿರೇಪಾಳ್ಯ ಗ್ರಾಮದ ವಾಸಿ ಚೈತ್ರಾ ಕೊಂ ರಾಮಾಂಜಿನಪ್ಪ ಎಂಬುವರು ಅವರ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮೀದಾರರಿಂದ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಧಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಸ್ಥಳದಿಂದ ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ಚೈತ್ರಾ ಕೋಂ ರಾಮಾಂಜಿನಪ್ಪ, 30 ವರ್ಷ, ಗೊಲ್ಲರು, ಚಿಲ್ಲರೆ ಅಂಗಡಿ ವ್ಯಾಪಾರ, ಹಿರೇಪಾಳ್ಯ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) ಹೈವಾಡ್ಡ್ ಚೀಯರ್ಸ್ ವಿಸ್ಕಿ 90 ಎಂ.ಎಲ್ 08 ಟೆಟ್ರಾ ಪ್ಯಾಕೆಟ್ ಗಳು 2) 650 ML ONE KING FISHER BEER  BOTTLE, 3) 650 ML ONE TUBORG PREMIUM BEER BOTTLE, 4) ಒಂದು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಒಂದು ಖಾಲಿ ನೀರಿನ ಪ್ಲಾಸ್ಟಿಕ್ ಬಾಟಲ್, 5) 02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಸಂಜೆ  6.00 ಗಂಟೆಯಿಂದ 6.45 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೇವೆ. ಆದ್ದರಿಂದ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ ಚೈತ್ರ ಕೊಂ ರಾಮಾಂಜಿನಪ್ಪರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.187/2021 ಕಲಂ. 323,324,341,504,506,34 ಐ.ಪಿ.ಸಿ :-

          ದಿನಾಂಕ: 06/05/2021 ರಂದು ರಾತ್ರಿ 8.15 ಗಂಟೆಗೆ ಪಿರ್ಯಾದಿದಾರರಾದ ಅರುಣ್ ಪ್ರಸಾದ್ ಬಿನ್ ಶಿವಪ್ರಸಾದ್, 28 ವರ್ಷ, ಆದಿಕರ್ನಾಟಕ, ಖಾಸಗಿ ಕಂಪನಿಯಲ್ಲಿ ಕೆಲಸ, ಕೆ.ಗೊಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ತಮಗೂ ಹಾಗೂ ತಮ್ಮ ಪಕ್ಕದ ಮನೆಯ ವಾಸಿಯಾದ ನರೇಶ ಬಿನ್ ನಾರಾಯಾಣಸ್ವಾಮಿ ರವರಿಗೆ ಹಳೇಯ ವೈಶಮ್ಯಗಳಿರುತ್ತೆ. ಹೀಗಿರುವಾಗ ಈ ದಿನ ದಿನಾಂಕ 06/05/2021 ರಂದು ಸಂಜೆ 6.00 ಗಂಟೆ ಸಮಯದಲ್ಲಿ ತಾನು ತನ್ನ ಮನೆಯ ಮುಂದೆ ತನ್ನ ಬಾಬತ್ತು ಬುಲೆಟ್ ದ್ವಿಚಕ್ರ ವಾಹನವನ್ನು ಸ್ಟಾರ್ಟ ಮಾಡಿಕೊಂಡು ತಮ್ಮ ಮಾವನಾದ ಲೋಕೇಶ ರವರ ಮನೆಯ ಕಡೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ತಮ್ಮ ಗ್ರಾಮದ ಸರ್ಕಾರಿ ಶಾಲೆಯ ಮುಂದೆ ತಮ್ಮ ಗ್ರಾಮದ ಮೇಲ್ಕಂಡ ನರೇಶ ಮತ್ತು ಆತನ ಕಡೆಯವರಾದ ಲೋಕೇಶ್ ಬಿನ್ ನಾರಾಯಣಸ್ವಾಮಿ, ಮಂಜುನಾಥ ಬಿನ್ ವೆಂಕಟೇಶಪ್ಪ ಮತ್ತು ಶ್ರೀನಿವಾಸ ಬಿನ್ ವೆಂಕಟೇಶಪ್ಪ ರವರು ತನ್ನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ತನ್ನನ್ನು ಕುರಿತು ಏನೋ ಲೋಫರ್ ನನ್ನ ಮಗನೇ ನಿನ್ನಮ್ಮನೇ ದೆಂಗಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ಆ ಪೈಕಿ ನರೇಶ ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಹಣೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದ್ದು, ನಂತರ ಲೋಕೇಶ್ ರವರು ಅದೇ ದೊಣ್ಣೆಯಿಂದ ತನ್ನ ಮೈಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಉಳಿದ ಮಂಜುನಾಥ ಮತ್ತು ಶ್ರೀನಿವಾಸ ರವರು ಕೈಗಳಿಂದ ತನ್ನ ಮೈ ಮೇಳೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ನರೇಶ್ ರವರು ತನ್ನನ್ನು ಕುರಿತು ಈ ದಿನ ಉಳಿದು ಕೊಂಡಿದ್ದೀಯಾ ಬೋಳಿ ಮಗನೇ, ಇನೋಂದು ಸಲ ಗ್ರಾಮದ ಬುಲೆಟ್ ದ್ವಿಚಕ್ರವಾಹನದಲ್ಲಿ ಓಡಾಡಿದ್ದರೆ ನಿನ್ನನ್ನು ಇಲ್ಲಿಯೇ ಸಾಯಿಸಿ ಬಿಡುತ್ತೇನೆಂದು ಪ್ರಾಣಬೆದರಿಕೆ ಹಾಕಿದನು. ಅಷ್ಟರಲ್ಲಿ ತಮ್ಮ ಗ್ರಾಮದ ಶಿವರಾಜ್ ಬಿನ್ ಮುನಿರಾಜಪ್ಪ ಮತ್ತು ಪೃಥ್ವಿರಾಜ್ ಬಿನ್ ಲಕ್ಷ್ಮಯ್ಯ ರವರು ಅಡ್ಡ ಬಂದು ಜಗಳವನ್ನು ಬಿಡಿಸಿರುತ್ತಾರೆ. ನಂತರ ಗಾಯಗೊಂಡಿದ್ದ ತನ್ನನ್ನು ಶಿವರಾಜ್ ರವರು ದ್ವಿ ಚಕ್ರವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಅಸ್ವತ್ರೆಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತೇನೆ. ಆಸ್ವತ್ರೆಯಲ್ಲಿ ಕೊರೋನಾ ರೋಗಿಗಳು ಇರುವುದರಿಂದ ಠಾಣೆಗೆ ಬಂದು ಹೇಳಿಕೆಯನ್ನು ನೀಡಿರುತ್ತೇನೆ. ಆದ್ದರಿಂದ ಮೆಲ್ಕಂಡವರ ವಿರುದ್ದ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.188/2021 ಕಲಂ. 324,504,506 ಐ.ಪಿ.ಸಿ :-

          ದಿನಾಂಕ 06/05/2021 ರಂದು ರಾತ್ರಿ 8.45 ಗಂಟೆಗೆ ಗಾಯಾಳು ಲೋಕೇಶ್ ಬಿನ್ ನಾರಾಯಣಸ್ವಾಮಿ, 31 ವರ್ಷ, ಆದಿ ಕರ್ನಾಟಕ, ಖಾಸಗಿ ಬ್ಯಾಂಕ್ ನಲ್ಲಿ ಕೆಲಸ, ಗೊಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 06/05/2021 ರಂದು ಸಂಜೆ 5.45 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಾಸಿಯಾದ ಅರುಣ್ ಪ್ರಸಾದ್ ಬಿನ್ ಶಿವಪ್ರಸಾದ್ ರವರು ತನ್ನ ಬಾಬತ್ತು ಬುಲೆಟ್ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ತಮ್ಮ ಮನೆಯ ಮುಂದೆ ಹೋಗುತ್ತಿದ್ದು, ಸದರಿ ವಾಹನದ ಸೈಲೆಂಸರ್ ನಿಂದ  ಜಾಸ್ತಿ ಶಬ್ದ ಬರುತ್ತಿದ್ದಾಗ ತಾನು ಆತನಿಗೆ ಊರಿನಲ್ಲಿ ವಾಹನವನ್ನು ನಿಧಾನವಾಗಿ ಓಡಿಸುವಂತೆ ತಿಳಿಸಿದಾಗ ಆತನು ತನ್ನನ್ನು ಕುರಿತು  ಏನೋ ಬೋಳಿ ನನ್ನ ಮಗನೇ ನಿನ್ಯಾರು ನನಗೆ ಹೇಳುವುದಕ್ಕೆ ನನ್ನ ಗಾಡಿ ನನ್ನಿಷ್ಠ ಎಂದು ಕೆಟ್ಟ ಶಬ್ದಗಳಿಂದ ಬೈದು, ಅಲ್ಲಿಯೇ ಬಿದ್ದಿದ್ದ ದೊಣ್ಣೆಯನ್ನು ಎತ್ತಿಕೊಂಡು ತನ್ನ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿ ಇನ್ನೋಂದು ಸಲ ನನ್ನ ತಂಟೆಗೆ ಬಂದರೆ ತನ್ನನ್ನು ಬಿಡುವುದಿಲ್ಲವೆಂದು  ಪ್ರಾಣಬೆದರಿಕೆ ಹಾಕಿದನು. ಅಷ್ಠರಲ್ಲಿ ತಮ್ಮ ಗ್ರಾಮದ ಹೆಚ್. ರಾಜಣ್ಣ ಬಿನ್ ನಾರಾಯಣಪ್ಪ ಮತ್ತು ಆನಂದ ಬಿನ್ ಮುನಿಯಪ್ಪ ರವರು ಅಡ್ಡ ಬಂದು ಜಗಳವನ್ನು ಬಿಡಿಸಿರುತ್ತಾರೆ. ನಂತರ ತಾನು ಚಿಂತಾಮಣಿ ಸರ್ಕಾರಿ ಅಸ್ವತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದು, ಅಸ್ವತ್ರೆಯಲ್ಲಿ ಕೋರೊನಾ ರೋಗಿಗಳು ಇರುವುದರಿಂದ ತಾನು ಠಾಣೆಗೆ ಬಂದು ಹೇಳಿಕೆಯನ್ನು ನೀಡುತ್ತಿದ್ದು ಮೇಲ್ಕಂಡ ಅರುಣ್ ಪ್ರಸಾದ್ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

9. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.70/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

          ಘನ ನ್ಯಾಯಾಲಯದ ಪಿಸಿ 367 ಚೇತನ್ ನಿಂಗಾ ರೆಡ್ಡಿ ರವರು ಘನ ನ್ಯಾಯಾಲಯದಿಂದ ಎನ್ ಸಿ ಆರ್ ನಂ: 59/2021 ಪ್ರತಿ ಅನುಮತಿಯನ್ನು ಪಡೆದು ಹಾಜರುಪಡಿಸಿದ ಸಾರಾಂಶವೆನೆಂದರೆ ಪಿರ್ಯಾದಿದಾರರಾದ ಆನಂದ್ ಕುಮಾರ್ ಜೆ.ಎನ್ ಪಿ.ಐ ಚಿಂತಾಮಣಿ ನಗರ ಪೊಲೀಸ್ ಠಾಣೆ ರವರು ಪಿ.ಸಿ 539 ರವೀಂದ್ರ ರವರೊಂದಿಗೆ ಕಳುಹಿಸಿಕೊಟ್ಟ ವರದಿಯ ಸಾರಾಂಶವೆನೆಂದರೆ  ದಿನಾಂಕ:06/05/2021 ರಂದು ಬೆಳಿಗ್ಗೆ ಠಾಣಾ ಸಿಬ್ಬಂದಿ ಪಿ ಸಿ 539 ರವೀಂದ್ರ , ಸಿ.ಪಿ.ಸಿ-426 ಸರ್ವೇಶ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-3699 ರಲ್ಲಿ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ ಇದೇ ದಿನ ಬೆಳಿಗ್ಗೆ 10-45 ಗಂಟೆ ಸಮಯದಲ್ಲಿ ಚಿಂತಾಮಣಿ ಟೌನ್ ಬಂಬೂ ಬಜಾರಿನಲ್ಲಿ  ಗಸ್ತು ಮಾಡುತ್ತಿದ್ದಾಗ ಬಂಬೂ ಬಜಾರಿನಲ್ಲಿರುವ ತೌಸಿಪ್ ಚಿಕನ್  ಅಂಗಡಿಯ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು  ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ಸದರಿ ಅಂಗಡಿ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ತೌಸಿಪ್ ಬಿನ್ ಅಬ್ದುಲ್ ಮಾಲಿಕ 35 ವರ್ಷ ಚಿಕನ್ ಅಂಗಡಿ ವ್ಯಾಪಾರ ವಾಸ ಬಂಬೂ ಬಜಾರು ಚಿಂತಾಮಣಿ ನಗರ. ಮೊ: 9742024752 ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರೀಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಸದರಿ ಚಿಕನ್ ಅಂಗಡಿ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿ ಪಿ ಐ ಸಾಹೇಬರು ಪಿ ಸಿ 539 ರವರ ಮೂಲಕ ಠಾಣೆಗೆ ಕಳುಹಿಸಿಕೊಟ್ಟ ವರದಿಯನ್ನು ಠಾಣಾ ಎನ್ ಸಿ ಆರ್ ನಂಬರ್ 59/2021 ರಂತೆ ದಾಖಲಿಸಿ ಘನ ನ್ಯಾಯಾಲಯದ ಪಿಸಿ 367 ರವರು ಅನುಮತಿಯನ್ನು ಪಡೆದು ಹಾಜರುಪಡಿಸಿದ ಪ್ರತಿಯ ಮೇರೆಗೆ ಪ್ರ ವ ವರದಿಯನ್ನು ದಾಖಲಿಸಿರುತ್ತೆ.

 

10. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.50/2021 ಕಲಂ. 15(A),32(3) ಕೆ.ಇ ಆಕ್ಟ್ :-

          ರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ ದಿನಾಂಕ:07/05/2021 ರಂದು ಬೆಳಿಗ್ಗೆ 11.30 ಗಂಟೆಯಲ್ಲಿ ತಾನು ಠಾಣಾ ಸಿಬ್ಬಂದಿಯಾದ  ಹೆಚ್.ಸಿ -143 ಶ್ರೀನಾಥ ರವರನ್ನು ಕರೆದುಕೊಂಡು ದಿಬ್ಬೂರಹಳ್ಳಿ ಗ್ರಾಮದಲ್ಲಿ ಕೋವಿಡ್ -19 ಪ್ರಯುಕ್ತ ಬಂದೋಬಸ್ತ್ ಕರ್ತವ್ಯಕ್ಕೆ ಹೋಗಿದ್ದು, ಸದರಿ ಗ್ರಾಮದ ಬಸ್ ನಿಲ್ದಾಣದಲ್ಲಿದ್ದಾಗ  ಯಾರೋ ಒಬ್ಬ ಬಾತ್ಮಿದಾರರು ದಿಬ್ಬೂರಹಳ್ಳಿ ಗ್ರಾಮದ ವರ್ಷಿತಾ ಜೆರಾಕ್ಸ್ ಅಂಗಡಿಯ ಮುಂಭಾಗ  ನಂಜೇಗೌಡ ಬಿನ್ ದೊಡ್ಡನಂಜಪ್ಪ ರವರು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ನೀಡಿದ್ದು ಪಂಚರನ್ನು ಬರಮಾಡಿಕೊಂಡು ತಾವು ದಿಬ್ಬೂರಹಳ್ಳಿ ಗ್ರಾಮದ ನಂಜೇಗೌಡ ಬಿನ್ ದೊಡ್ಡನಂಜಪ್ಪ ರವರ ವರ್ಷಿತಾ ಜೆರಾಕ್ಸ್ ಅಂಗಡಿಯ ಬಳಿಗೆ ಬೆಳಗ್ಗೆ 11.45 ಗಂಟೆಗೆ ಹೋಗಿ ನೋಡುವಷ್ಟರಲ್ಲಿ ಸದರಿ ಅಂಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಮಧ್ಯಪಾನ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಖಾಲಿ ಪ್ಯಾಕೇಟ್ಗಳು, ನೀರಿನ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ನಂಜೇಗೌಡ ಬಿನ್ ದೊಡ್ಡನಂಜಪ್ಪ, 31 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ಮತ್ತು ಜೆರಾಕ್ಸ್ ಅಂಗಡಿ ವ್ಯಾಪಾರ, ದಿಬ್ಬೂರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಈತನನ್ನು  ಮದ್ಯದ ಪ್ಯಾಕೇಟ್ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಗಿಯನ್ನು ಹೊಂದಿದ್ದಾನೇಯೇ ಎಂಬುದರ  ಬಗ್ಗೆ ವಿಚಾರಿಸಲಾಗಿ  ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಮಧ್ಯಾಹ್ನ 12.00 ಗಂಟೆಯಿಂದ  1.00  ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 1.440 ಎಂ.ಎಲ್ ನ 562.08  ರೂಗಳ ಬೆಲೆ ಬಾಳುವ ಮಧ್ಯ ತುಂಬಿದ ಹೈವಾರ್ಡ್ಸ್ ವಿಸ್ಕಿ 90 ಎಂ.ಎಲ್ ನ 16 ಟೆಟ್ರಾ ಪ್ಯಾಕೇಟ್ಗಳು ಹಾಗೂ ಹೈವಾರ್ಡ್ಸ್ ವಿಸ್ಕಿ 90 ಎಂ.ಎಲ್ ನ 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲನ್ನು ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿ, ಮಾಲು ಮತ್ತು ಪಂಚನಾಮೆಯನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಈ ಬಗ್ಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

11. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.51/2021 ಕಲಂ. 15(A),32(3) ಕೆ.ಇ ಆಕ್ಟ್ :-

          ದಿನಾಂಕ 07/05/2021 ರಂದು ಠಾಣಾ ಸಿಬ್ಬಂದಿ ಹೆಚ್.ಸಿ 53 ಲೋಕೇಶ ರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ ದಿನಾಂಕ:07/05/2021 ರಂದು ಮಧ್ಯಾಹ್ನ 12.00 ಗಂಟೆಯಲ್ಲಿ ತಾನು ಠಾಣಾ ಸಿಬ್ಬಂದಿಯಾದ  ಪಿ.ಸಿ -196 ದೇವರಾಜ್ ಬಡಿಗೇರ್ ರವರನ್ನು ಕರೆದುಕೊಂಡು ದಿಬ್ಬೂರಹಳ್ಳಿ ಗ್ರಾಮದಲ್ಲಿ ಕೋವಿಡ್ -19 ಪ್ರಯುಕ್ತ ಬಂದೋಬಸ್ತ್ ಕರ್ತವ್ಯಕ್ಕೆ ಹೋಗಿದ್ದು, ಸದರಿ ಗ್ರಾಮದ ಬಸ್ ನಿಲ್ದಾಣದಲ್ಲಿದ್ದಾಗ ಕರ್ತವ್ಯ ನಿರ್ವಹಿಸುತ್ತಿದ್ದಾಗ ಯಾರೋ ಒಬ್ಬ ಆಸಾಮಿ ದೂರವಾಣಿ ಮುಖಾಮತರ ಕರೆ ಮಾಡಿ ದಿಬ್ಬೂರಹಳ್ಳಿ ಗ್ರಾಮದ ಶಿಡ್ಲಘಟ್ಟ ರಸ್ತೆಯಲ್ಲಿರುವ ದ್ಯಾವರಹಳ್ಳಿ ಗ್ರಾಮದ ರಾಮಕೃಷ್ಣಪ್ಪ ಬಿನ್ ನಾರಾಯಣಪ್ಪರವರ ಬಾಬತ್ತು ಬೈರವೇಶ್ವರ ಟಿಫನ್ ಸೆಂಟರ್ ಮುಂಭಾಗ  ರಾಮಕೃಷ್ಣಪ್ಪರವರು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ನೀಡಿದ್ದು ಪಂಚರನ್ನು ಬರಮಾಡಿಕೊಂಡು ತಾವು ದಿಬ್ಬೂರಹಳ್ಳಿ ಗ್ರಾಮದ ರಾಮಕೃಷ್ಣಪ್ಪ ಬಿನ್ ನಾರಾಯಣಪ್ಪರವರ ಬಾಬತ್ತು ಬೈರವೇಶ್ವರ ಟಿಫನ್ ಸೆಂಟರ್ ಬಳಿಗೆ ಮಧ್ಯಾಹ್ನ 12.15 ಗಂಟೆಗೆ ಹೋಗಿ ನೋಡುವಷ್ಟರಲ್ಲಿ ಸದರಿ ಹೋಟಲ್ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಮಧ್ಯಪಾನ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಖಾಲಿ ಪ್ಯಾಕೇಟ್ಗಳು, ನೀರಿನ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ರಾಮಕೃಷ್ಣಪ್ಪ ಬಿನ್ ನಾರಾಯಣಪ್ಪ, 42 ವರ್ಷ, ವಕ್ಕಲಿಗರು, ಹೋಟಲ್ ವ್ಯಾಪಾರ, ದ್ಯಾವರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಪೂನ್ ನಂ 8496899266 ಎಂದು ತಿಳಿಸಿದ್ದು, ಈತನನ್ನು  ಮದ್ಯದ ಪ್ಯಾಕೇಟ್ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಗಿಯನ್ನು ಹೊಂದಿದ್ದಾನೇಯೇ ಎಂಬುದರ  ಬಗ್ಗೆ ವಿಚಾರಿಸಲಾಗಿ  ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಮಧ್ಯಾಹ್ನ 12.30 ಗಂಟೆಯಿಂದ  1.30  ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 1 ಲೀಟರ್ 350 ಎಂ.ಎಲ್ ನ 526.95  ರೂಗಳ ಬೆಲೆ ಬಾಳುವ ಮಧ್ಯ ತುಂಬಿದ ಹೈವಾರ್ಡ್ಸ್ ವಿಸ್ಕಿ 90 ಎಂ.ಎಲ್ ನ 16 ಟೆಟ್ರಾ ಪ್ಯಾಕೇಟ್ಗಳು ಹಾಗೂ ಹೈವಾರ್ಡ್ಸ್ ವಿಸ್ಕಿ 90 ಎಂ.ಎಲ್ ನ 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲನ್ನು ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿ, ಮಾಲು ಮತ್ತು ಪಂಚನಾಮೆಯನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಈ ಬಗ್ಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

12. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.111/2021 ಕಲಂ. 15(A),32(3) ಕೆ.ಇ ಆಕ್ಟ್ :-

          ದಿನಾಂಕ: 08/04/2021 ರಂದು ನಾನು ಗೌರೀಬಿದನೂರು ತಾಲ್ಲೂಕಿನ ಗ್ರಾಮಗಳಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾಗ, ಸಂಜೆ ಸುಮಾರು 4-30 ಗಂಟೆಯಲ್ಲಿ ಗೌರೀಬಿದನೂರು ತಾಲ್ಲೂಕು, ನಗರಗೆರೆ ಹೋಬಳಿ, ಮಲ್ಲೇನಹಳ್ಳಿ ಗ್ರಾಮದಲ್ಲಿ ಯಾರೋ ತನ್ನ ಮನೆಯ ಹಿಂಭಾಗದಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ನಾನು ಪಂಚರೊಂದಿಗೆ, ಸ್ಥಳಕ್ಕೆ ಸಂಜೆ 5-00 ಗಂಟೆಗೆ ಹೋಗಿ ನೋಡಿದಾಗ, ಯಾರೋ 3 ಜನರು ಮಧ್ಯಪಾನ ಮಾಡಲು ಕುಳಿತಿದ್ದು, ಇವರಿಗೆ ಒಬ್ಬ ಆಸಾಮಿಯು ಒಂದು ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಕುಡಿಯಲು ಕೊಡುತ್ತಿದ್ದನು, ಇದನ್ನು ನೋಡಿ, ನಾನು ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡಿದ್ದ ವ್ಯಕ್ತಿಯನ್ನು ಹಿಡಿದುಕೊಂಡಾಗ, ಮಧ್ಯಪಾನ ಮಾಡಲು ಕೂತಿದ್ದವರು ಓಡಿ ಹೋಗಿರುತ್ತಾರೆ. ನಂತರ ನಾನು ಹಿಡಿದುಕೊಂಡಿದ್ದ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ, ಶ್ರೀನಿವಾಸ ಬಿನ್ ಆದಿನಾರಾಯಣಪ್ಪ, 36 ವರ್ಷ, ಗೊಲ್ಲರ ಜನಾಂಗ, ಮಲ್ಲೇನಹಳ್ಳಿ ಗ್ರಾಮ, ನಗರಗೆರೆ ಹೋಬಳಿ, ಗೌರೀಬಿದನೂರು ತಾಲ್ಲೂಕು, ಎಂದು ತಿಳಿಸಿದ್ದು, ಈತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, 180 ಎಂ.ಎಲ್ ಸಾಮರ್ಥ್ಯದ 9 OLD TAVERN ಟೆಟ್ರಾ ಪಾಕೆಟ್ ಗಳು ಹಾಗು 90 ಎಂ.ಎಲ್ ಸಾಮರ್ಥ್ಯದ 9 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು 2 ಲೀಟರ್, 340 ಎಂ.ಎಲ್. ಸಾಮರ್ಥ್ಯದ ವುಗಳ ಒಟ್ಟು ಬೆಲೆ 1097 ರೂಗಳು ಆಗಿರುತ್ತೆ. ಈತನಿಗೆ ಇವುಗಳನ್ನು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲದೇ ಇರುವುದರಿಂದ ಮಧ್ಯವನ್ನು ಪಂಚರ ಸಮಕ್ಷಮದಲ್ಲಿ ಸಂಜೆ 5-00 ಗಂಟೆಯಿಂದ 6-00 ಗಂಟೆಯವರೆಗೆ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು, ಆರೋಪಿಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ಈ ದೂರನ್ನು ನೀಡಿರುತ್ತೇನೆ.

 

13. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.112/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ 06/05/2021 ರಂದು ರಾತ್ರಿ 8-30 ಗಂಟೆಗೆ  ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸುರೇಶ್ ಬಾಬು ಬಿನ್ ಲೇಟ್ ಗಂಗಪ್ಪ, 45 ವರ್ಷ, ಆದಿ ಕರ್ನಾಟಕ, ವಾಸ ಆನಂದಪುರ  ಗೌರಿಬಿದನೂರು ಟೌನ್ ರವರಿಂದ ಹೇಳಿಕೆ ದೂರು ಪಡೆದು ರಾತ್ರಿ 9-00 ಗಂಟೆಗೆ ಠಾಣೆಗೆ ಹಾಜರಾಗಿದ್ದು, ಹೇಳಿಕೆ ದೂರಿನ ಸಾರಾಂಶವೆನೆಂದರೆ ದಿನಾಂಕ 06/05/2021 ರಂದು  ರಾತ್ರಿ ಸುಮಾರು 7-30 ಗಂಟೆ ಸಮಯದಲ್ಲಿ  ಆಂದ್ರ ಚೆಕ್ ಪೋಸ್ಟ್ ನಲ್ಲಿ ಕೆಲಸ ಮಾಡಿಕೊಂಡು ತನ್ನ ಸ್ನೇಹಿತ ಸುರೇಶ ಬಿ. ಬಿನ್ ಬಾಲಪ್ಪ ರವರ ಕೆ.ಎ-40-ಕೆ-9375 ನೊಂದಣೆ  ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ  ವಿಧುರಾಶ್ವತ್ಥ ಗೇಟ್ ಬಳಿ  ಬರುತ್ತಿದ್ದಾಗ ಎದರುಗಡೆಯಿಂದ   ಕೆ.ಎ-51-ಬಿ-7215 ನೊಂದಣಿ ಸಂಖ್ಯೆಯ ಕಾರಿನ ಚಾಲಕ ತನ್ನ  ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಹಿಂದುಗಡೆ ಕುಳಿತಿದ್ದ  ತಾನು ಕೆಳಗೆ ಬಿದ್ದಿದ್ದು ಗಾಯಗಳಾಗಿದ್ದು,  ತನ್ನ ಸ್ನೇಹಿತ ಸುರೇಶ ನಿಗೆ ತಲೆಗೆ  ಮತ್ತು ಕಿವಿಯ ಬಳಿ ರಕ್ತಗಾಯವಾಗಿರುತ್ತೆ. ತನ್ನ ಸ್ನೇಹಿತ ಸುರೇಶ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತಾರೆ. ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಕೆ.ಎ-51-ಬಿ-7215 ನೊಂದಣಿ ಸಂಖ್ಯೆಯ ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

14. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.87/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ:06.05.2021 ರಂದು  ಸಂಜೆ 4-30ಗಂಟೆ ಸಮಯದಲ್ಲಿ ನ್ಯಾಯಾಲಯದ ಪಿ,ಸಿ 89, ಮಜುನಾಥರವರು ಠಾಣೆಯ ಎನ್,ಸಿ,ಆರ್:109/2021 ರಲ್ಲಿ ಘನ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಲು ಅನುಮತಿ ಪಟೆದುಕೊಂಡು ಬಂದ ವರದಿಯ ಸಾರಾಂಶವೇನೆಂದರೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್ ಐ ಶ್ರೀ ಗಂಗಾಧರಪ್ಪ ಆದ ನಾನು ಸೂಚಿಸುವುದೇನೆಂದರೆ, ಈ ದಿನ ದಿ:05.05.2021 ರಂದು ಸಂಜೆ ಸುಮಾರು 4-00 ಗಂಟೆ ಸಮಯದಲ್ಲಿ ತಾನು ಗುಡಿಬಂಡೆ ಟೌನ್ ನಲ್ಲಿ ಗಸ್ತು ಮಾಡುತ್ತಿದ್ದಾಗ ತನಗೆ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಯವರಾದ ಸಿ.ಹೆಚ್.ಸಿ. 29, ಶ್ರೀನಿವಾಸರ ರವರು ಪೊನ್ ಮಾಡಿ ಚಿಕ್ಕಬಳ್ಳಾಪುರ ತಾಲ್ಲೂಕು ಕಮ್ಮಗಾನಹಳ್ಳಿ ಗ್ರಾಮದ ಕೆರೆಯಲ್ಲಿ ಕೆಲವರು ಗುಂಪಾಗಿ ಕುಳಿತುಕೊಂಡು  ಕಾನೂನು ಬಾಹಿರವಾದ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ತಿಳಿಸಿದ್ದು,  ಅದರಂತೆ ತಾನು ಪಂಚರ ಸಮಕ್ಷಮ ದ್ವಿಚಕ್ರ ವಾಹನಗಳಲ್ಲಿ ಸಿಬ್ಬಂದಿಯವರಾದ ಸಿ.ಹೆಚ್.ಸಿ. 73, ಹನುಮಂತರಾಯಪ್ಪ, ಸಿ,ಹೆಚ್.ಸಿ. 102. ಆನಂದ್, ಪಿ.ಸಿ.141, ಸಂತೋಷಕುಮಾರ್ ರೊಂದಿಗೆ  ಸಂಜೆ 4-20 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ  ದ್ವಿಚಕ್ರ ವಾಹನಗಳನ್ನು ಮರೆಯಲ್ಲಿ ನಿಲ್ಲಿಸಿ ನೋಡಲಾಗಿ ಯಾರೋ ಕೆಲವರು ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿ ಇಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಗೆ 200 ರೂ ಎಂತಲೂ ಬಾಹರ್ ಗೆ 200 ರೂ ಎಂತಲೂ ಇಸ್ಪೀಟ್ ಜೂಜಾಟವಾಡುತ್ತಿದ್ದು, ಪಂಚರ ಸಮಕ್ಷಮ ಸುತ್ತುವರೆದು ದಾಳಿ ಮಾಡಿದಾಗ ಕೆಲವರು ಓಡಿ ಹೋಗಿದ್ದು, ಸ್ಥಳದಲ್ಲಿದ್ದವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸಗಳನ್ನು ಕೇಳಲಾಗಿ 1) ವೆಂಕಟೇಶ ಬಿನ್ ಲೇಟ್ ಪಾಪಣ್ಣ, ಸುಮಾರು 65 ವರ್ಷ, ಬಲಜಿಗರು, ಜಿರಾಯ್ತಿ, ಕಮ್ಮಗಾನಹಳ್ಳಿ ಗ್ರಾಮ, ಮಂಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು,  2) ಮಂಜುನಾಥ ಬಿನ್ ನರಸಿಂಹಯ್ಯ, ಸುಮಾರು 35 ವರ್ಷ, ದೋಬಿ ಜನಾಂಗ, ಚಾಲಕ ವೃತ್ತಿ, ಪೆರೇಸಂದ್ರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 3) ಗೋವಿಂಧ ಬಿನ್ ಲೇಟ್ ತಿಮ್ಮಯ್ಯ, ಸುಮಾರು 41 ವರ್ಷ, ಬಲಜಿಗರು, ವ್ಯಾಪಾರ, ಕಮ್ಮಗಾನಹಳ್ಳಿ ಗ್ರಾಮ, ಮಂಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು,  4) ಮಹಮದ್ ಬಿನ್ ಲೇಟ್ ಮುನೀರ್ ಬಾಷ, 26 ವರ್ಷ, ಚಾಲಕ ವೃತ್ತಿ, ಪೆರೇಸಂದ್ರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು  ಎಂದು ತಿಳಿಸಿದ್ದು ಓಡಿಹೋದವರ ಹೆಸರು ಮತ್ತು ವಿಳಾಸಗಳನ್ನು ತಿಳಿಯಲಾಗಿ 5) ವೇಣು ಬಿನ್ ಅಶ್ವತ್ತಪ್ಪ, ಸುಮಾರು, 30 ವರ್ಷ, ಬಲಜಿಗರು. ತುಮಕಲಹಳ್ಳಿ ಗ್ರಾಮ, ಮಂಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು,  6) ಶ್ರೀನಾಥ ಬಿನ್ ವೆಂಕಟೇಶ್, ಸುಮಾರು 30 ವರ್ಷ, ಬಲಜಿಗರು, ಕಮ್ಮಗಾನಹಳ್ಳಿ ಗ್ರಾಮ, ಮಂಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು, 7) ಶ್ರೀನಿವಾಸ ಬಿನ್ ಅಶ್ವತ್ಥಪ್ಪ, 35 ವರ್ಷ, ಬಲಜಿಗರು, ಕಮ್ಮಗಾನಹಳ್ಳಿ ಗ್ರಾಮ, ಮಂಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು,  8) ಲಕ್ಷ್ಮಿಪತಿ ಬಿನ್ ನಾರಾಯಣಸ್ವಾಮಿ, ಸುಮಾರು 45 ವರ್ಷ, ಬಲಜಿಗರು. ಜಿರಾಯ್ತಿ, ಕಮ್ಮಗಾನಹಳ್ಳಿ ಗ್ರಾಮ, ಮಂಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು, 9) ರವಿಕುಮಾರ್ ಬಿನ್ ಬೈರಪ್ಪ, ಬಲಜಿಗರು. ಜಿರಾಯ್ತಿ, ಕಮ್ಮಗಾನಹಳ್ಳಿ ಗ್ರಾಮ, ಮಂಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು,  10) ಸಾಯಿ, ಪೆರೇಸಂದ್ರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. 11) ಲಕ್ಷ್ಮಣ ಬಿನ್ ಲಕ್ಷ್ಮಿನರಸಿಂಹಪ್ಪ, ಸುಮಾರು 36 ವರ್ಷ, ಕಮ್ಮಗಾನಹಳ್ಳಿ ಗ್ರಾಮ, ಮಂಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು,  12) ನಾಗರಾಜ್ ಬಿನ್ ಅಶ್ವತ್ಥಪ್ಪ, 32 ವರ್ಷ, ಜಿರಾಯ್ತಿ, ಬಲಜಿಗರು, ಕಮ್ಮಗಾನಹಳ್ಳಿ ಗ್ರಾಮ, ಮಂಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು, 13) ರಾಕೇಶ್ ಬಿನ್ ರವಿ 27 ವರ್ಷ, ವಿಶ್ವಕರ್ಮ ಜನಾಂಗ, ಜಿರಾಯ್ತಿ, ಪೆರೇಸಂದ್ರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು.  ಎಂದು ತಿಳಿಸಿರುತ್ತಾರೆ.  ನಂತರ ಸ್ಥಳದಲ್ಲಿ ಪರಿಶೀಲನೆ ಮಾಡಿ   ಸ್ಥಳದಲ್ಲಿ ದೊರೆತ 1) ಜೂಜಾಟಕ್ಕೆ ಪಣವಾಗಿಟ್ಟಿದ್ದ 11.330 ರೂ ನಗದು ಹಣ, 2) 52 ಇಸ್ಪೀಟ್ ಎಲೆಗಳು ಇಸ್ಪೀಟ್ ಜೂಜಾಟವಾಡಲು ಸ್ಥಳಕ್ಕೆ ಬರಲು ಉಪಯೋಗಿಸಿ  ಸ್ಥಳದಲ್ಲಿದ್ದ 1) ನೊಂದಣಿ ಸಂಖ್ಯೆ ಇಲ್ಲದ  ಇಂಜಿನ್ ನಂ: IA06EWMHA39614,  ಚಾಸಿಸ್  MBLJAW145MHA30336  ಪ್ಯಾಷನ್ ಪ್ರೋ ದ್ವಿಚಕ್ರ ವಾಹನ, 2) ಕೆ.ಎ.40.ವೈ, 8433 ನೊಂದಣಿ ಸಂಖ್ಯೆಯ ಆಕ್ಟೀವ್ ಹೋಂಡ 3ಜಿ. ದ್ವಿಚಕ್ರವಾಹನ, 3) ಕೆ.ಎ.40.ಕೆ.3205 ನೊಂದಣಿ ಸಂಖ್ಯೆಯ ಹೀರೋ ಹೋಂಡ ಗ್ಲಾಮರ್ ದ್ವಿಚಕ್ರ ವಾಹನ, 4) ಕೆ.ಎ.40. ಜೆ. 6849 ನೊಂದಣಿ ಸಂಖ್ಯೆಯ ಹೀರೋಹೋಂಡ ಸ್ಪ್ಲಂಡರ್ ಪ್ಲಸ್ ದ್ವಿಚಕ್ರ ವಾಹನ, 5) ಕೆ.ಎ.40.ವಿ. 0814 ನೊಂದಣಿ ಪಲ್ಸರ್ ದ್ವಿಚಕ್ರ ವಾಹನಗಗಳನ್ನು ಅಮಾನತ್ತುಪಡಿಸಿಕೊಂಡಿರುತ್ತೆ. ಕಾನೂನು ಬಾಹಿರವಾಗಿ ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ಆಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿ ಮಾಲು, ಅಸಲುಪಂಚನಾಮೆ ಮತ್ತು 4 ಆರೋಪಿಗಳೊಂದಿಗೆ ವರದಿಯನ್ನು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ಕೋರಿದೆ ಎಂದು ನೀಡಿದ ದೂರಾಗಿರುತ್ತೆ.

 

15. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.88/2021 ಕಲಂ. 324,506,34 ಐ.ಪಿ.ಸಿ :-

          ದಿನಾಂಕ:06/05/2021 ರಂದು ಸಂಜೆ 5.00 ಗಂಟೆಯಲ್ಲಿ ಪಿರ್ಯಾಧಿದಾರರಾದ ಚಂದ್ರಪ್ಪ ಬಿನ್ ರಾಮಸ್ವಾಮಿ 40ವರ್ಷ ದೊಂಬರ ಜನಾಂಗ ಗುಡಿವಂಡೆ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೇನೆಂದರೆ: ತಾನು ಮತ್ತು ತನ್ನ ಹೆಂಡತಿ ಲಕ್ಷ್ಮೀ ಮತ್ತು ತಮ್ಮ ತಾಯಿಯಾದ ಗಂಗಮ್ಮನವರು ಮನೆಯಲ್ಲಿ ಇದ್ದಾಗ ಸಂಜೆ ಅಂದರೆ ದಿನಾಂಕ:04/05/2021 ರಂದು ಸಾಯಂಕಾಲ ಸುಮಾರು 5-30 ರಿಂದ 5-45 ನಿಮೀಷದಲ್ಲಿ ಏಕಾಏಕಿ ಮನೆಯ ಮುಂದೆ ಇರುವಂತಹ ನಾರಾಯಣಸ್ವಾಮಿ ಹಾಗೂ ಅವರ ಭಾಮೈದ ಮಂಜುನಾಥ ಹಾಗೂ ಅವರ ಹೆಂಡತಿ  ರಾಮಾಂಜಿನಮ್ಮನವರು ದೊಣ್ಣೆಗಳಿಂದ  ಕಿವಿಯ ಕೆಳಭಾಗಕ್ಕೆ ಹಾಗೂ ಎಡ ಕೈನ ಭುಜದ ಮೇಲೆ ಹಾಗೂ ಎಡಕಾಲಿನ ಮೊಣಕಾಲಿನ ಮೇಲೆ ದೊಣೆಯಿಂದ ಹಲ್ಲೆ ಮಾಡಿ ಬೀಕರವಾಗಿ ಗಾಯಗೊಳಿಸಿರುತ್ತಾರೆ. ತಮ್ಮ ತಾಯಿಗೂ ಹಲ್ಲೆ ಮಾಡಿರುತ್ತಾರೆ. ಹಾಗೇ ತಮ್ಮ ಹೆಂಡತಿಗೂ  ಹಲ್ಲೆ ಮಾಡಿರುತ್ತಾರೆ.  ಈ ಮೊದಲಲೇ ತಾನು  ಮತ್ತು ತಮ್ಮತಾಯಿ ಗಂಗಮ್ಮ  ಎಂಬುವರು ಅನಾರೋಗ್ಯ ಪೀಡಿತರಾಗಿದ್ದು ಇದೇ ಗುಡಿಬಂಡೆ ತಾಲ್ಲೂಕಿನ ಆರೋಗ್ಯ  ಇಲಾಖೆಯಲ್ಲಿ  20/04/2021 ರಿಂದ ಕೋವಿಡ್ ಪರೀಕ್ಎ ಮಾಡಿಸಿಕೊಂಡು ಮನೆಯಲ್ಲಿಯೇ ಒಔಷದಿ ಸೇವಿಸಿಕೊಂಡು ಇದ್ದು ತಾವುಗಳು ತುಂಬಾ ಸುಸ್ತಾಗಿದ್ದೆವು. ಇದೆ ಸಮಯದಲ್ಲಿ ತಮ್ಮಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ. ಈ ಮೊದಲೇ ಸುಮಾರು 2ವರ್ಷಗಳ ಹಿಂದೆ ತಮ್ಮ ತಾಯಿ ಮೇಲೆ ಇದೆ ಮನೆಯ  ಎದುರು ಇರುವಂತಹ ಣಾರಾಯಣಸ್ವಾಮಿ ಅವರ ಹೆಂಡತಿ ರಾಮಾಂಜಿನಮ್ಮ  ತಮ್ಮ ತಾಯಿಗೆ ಎಡ ಕಾಲಿನಿಂದ ಒದ್ದು ಹಲ್ಲೆ ಮಾಡಿರುತ್ತಾರೆ. ಅವಾಗಲೂ ಸಹ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದು ಆವತ್ತು ಸಹ ಗುಡಿಬಂಡೆ ತಾಲ್ಲೂಕು ಆರೋಗ್ಯ ಇಲಾಖೆಯಲ್ಲಿ  ಚಿಕಿತ್ಸೆ ಪಡೆದು NCR ಮಾಡಿ ಕಾಂಪ್ರಮೈಸ್ ಮಾಡಿಸಿರುತ್ತಾರೆ. ಈಗಿದ್ದರೂ ಸಹಾ ತಮ್ಮ ಮೇಲೆ ದಿನಾಂಕ: 04/05/2021 ರಂದು ಸಂಜೆ ಹಲ್ಲೆಮಾಡಿರುವುದು ಎಷ್ಟುಸರಿ ಇನ್ನೂ ಮುಂದೆ ತಮಗೆ ಕೊಲೆ ಮಾಡುವುದಿಲ್ಲ ಎಂಬುವುದು ಏನು ಗ್ಯಾರಂಟಿ ಆದ್ದರಿಂದ ತಾವುಗಳು  ಜೀವ ಭಯದಿಂದ ಸುಮಾರು 2 1/2 ವರ್ಷದಿಂದ ಕಾಲ ಕಳೆದಿರುತ್ತೇವೆ. ಇನ್ನೂ ಮುಂದೆ ತಾವು ಇರುವುದಕ್ಕೆ ಸಾದ್ಯವಾಗುವುದಿಲ್ಲ. ಆದ್ದರಿಂದ  ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದರಿಂದ  ಇನ್ನೂ ಮುಂದೆ ಕೊಲೆ ಮಾಡಲು ಎದುರುವುದಿಲ್ಲ. ಅವರು ತಮಗೆ ಜೀವ ರಕ್ಷಣೆಕೊಟ್ಟು ತಮ್ಮ ಮನೆಯ ಮುಂದೆ ಇರುವಂತಹ ನಾರಾಯಣಸ್ವಾಮಿ, ಅವರ ಭಾಮೈದ ಮಂಜುನಾಥ ಹಾಗೂ ನಾರಾಯಣಸ್ವಾಮಿ ಹೆಂಡತಿ ರಾಮಾಂಜಿನಮ್ಮ ಎಂಬುವವರನ್ನು ಅರೆಸ್ಟ್ ಮಾಡಿ  ತಕ್ಕ ಶಿಕ್ಷೆಯನ್ನು ಕೊಡಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ. ದಿನಾಂಕ:04/05/2021 ರಂದು ಕೇಸು ದಾಖಲಾಗಿ NCR ಆಗಿರುತ್ತದೆ. ತಾನು ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಈ ದಿನ ಠಾಣೆಗೆ ಹಾಜರಾಗಿ ತಡವಾಗಿ ದೂರು ನೀಡುತ್ತಿದ್ದೇನೆ.

 

16. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.89/2021 ಕಲಂ. 324,504,506,34 ಐ.ಪಿ.ಸಿ :-

          ದಿನಾಂಕ:06.05.2021 ರಂದು ಸಾಯಂಕಾಲ 5-15 ಗಂಟೆ ಸಮುಯದಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಶಿಲ್ಪ ಕೋಂ ಬಾಲಕೃಷ್ಣ, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ:04.05.2021 ರಂದು ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ  ನಾನು ನಮ್ಮ ಮನೆಯ ಮುಂದೆ ನಿಂತಿದ್ದಾಗ, ನಮ್ಮ ಮನೆಯ ಮುಂಬಾಗದಲ್ಲಿರುವ ಮನೆಯ ಚಂದ್ರಪ್ಪ ಮತ್ತು ಆತನ ಹೆಂಡತಿ ರಾಮಾಂಜಿನಮ್ಮ ಮತ್ತು ಅವರ ತಾಯಿ ಸಾಕಮ್ಮನವರು ನನ್ನ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ದೊಣ್ಣೆಯಿಂದ ಹೊಡೆದು, ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ನಾನು ಆಸ್ಪತ್ರೆಗೆ ತೆರಳಿ ಚಿಕಿತ್ಸೆಯನ್ನು ಪಡೆದುಕೊಂಡು ಬಂದು ತಡವಾಗಿ ದೂರನ್ನು ದೂರನ್ನು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರ.ವ.ವರಧಿ.

 

17. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.90/2021 ಕಲಂ. 34,504,323,324 ಐ.ಪಿ.ಸಿ :-

          ದಿ:06.05.2021 ರಂದು ಸಾಯಂಕಾಲ 6-15 ಗಂಟೆ ಸಮುಯದಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಶ್ರೀಮತಿ ರಾಮಾಂಜಿನಮ್ಮ ಕೋಂ ನಾರಾಯಣಸ್ವಾಮಿಯವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ:04.05.2021 ರಂದು ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ  ನಾನು ಮತ್ತು ನನ್ನ ಗಂಡ ನಾರಾಯಣಸ್ವಾಮಿಯವರು ಪೇಟೆಗೆ  ಬಂದು ಮೆಡಿಕಲ್ಸ್ ಸ್ಟೋರ್ ನಲ್ಲಿ ಔಷದಿ ತೆಗೆದುಕೊಂಡು ಮನೆಗೆ ಬಂದಾಗ, ನಮ್ಮ ಎದರು ಮನೆಯಲ್ಲಿ ವಾಸವಾಗಿರುವ ಚಂದ್ರಪ್ಪ ಬಿನ್ ಗಂಗಾಧರಪ್ಪ, ರವರನ್ನು ನಮ್ಮನ್ನು ಹಳೆಯ ದ್ವೇಶಧ ಹಿನ್ನಲೆಯಲ್ಲಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಆಗ ನನ್ನ ಗಂಡನಾದ ನಾರಾಯಣಸ್ವಾಮಿಯವರು ಏಕೆ ಹೀಗೆ ಬೈದಾಡಿಕೊಳ್ಳುತ್ತಿರುವೆ ಎಂದು ಕೇಳಿದಾಗ ಚಂದ್ರಪ್ಪ ನನ್ನ ಗಂಡ ನಾರಾಯಣಸ್ವಾಮಿಯವರಿಗೆ ಕೈಗೆ, ಕಾಲುಗಳಿಗೆ ಹಾಗೂ ಮೈಕೈಗಳಿಗೆ ಹೊಡೆದು ಊತಗಾಯಗಳನ್ನುಂಟು ಮಾಡಿರುತ್ತಾರೆ. ನಂತರ ಚಂದ್ರಪ್ಪನ ಹೆಂಡತಿಯಾದ ಲಕ್ಷ್ಮಿ ಕೋಂ ಚಂದ್ರಪ್ಪ ರವರು ನನ್ನನ್ನು ಹಿಡಿದು ಎಳದಾಡಿ ಕಟ್ಟಿಗೆಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಮೈಕೈಗಳಿಗೆ ಊತಗಾಯವನ್ನುಂಟು ಮಾಡಿ, ರಕ್ತಗಾಯವನ್ನುಂಟು ಮಾಡಿರುತ್ತಾರೆ. ಹಾಗೂ ಬಮ್ಮ ಮನೆಯ ಹಿಂದೆ ವಾಸವಾಗಿರುವ ಶಿಲ್ಪ ಕೋಂ ಬಾಲಕೃಷ್ಣ ರವರು ಚಂದ್ರಪ್ಪನವರ ಪರವಾಗಿ ನಿಂತು ನನ್ನ ಜಡೆಯನ್ನು ಹಿಡಿದು ಎಳೆದಾಡಿ ಕಲ್ಲಿನಿಂದ ನನ್ನ ಮೈಕೈಗೆ ಹೊಡೆದಿರುತ್ತಾರೆ. ನಮ್ಮನ್ನು ಹೊಡೆದು ಗಲಾಟೆ ಮಾಡಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ. ನಾನು ಮತ್ತು ನನ್ನ ಗಂಡ ನಾರಾಯುಣಸ್ವಾಮಿಯವರು ಚಿಕಿತ್ಸೆಯ ಬಗ್ಗೆ ಚಿಕ್ಕಬಳ್ಳಾಪುರಕ್ಕೆ ಹೋಗಿ ಚಿಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಈ ದಿನ ತಡವಾಗಿ ಬಂದು ದೂರನ್ನು ನೀಡಿರುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

18. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.45/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 07-05-2021 ರಂದು ಪಿ.ಎಸ್.ಐ ರವರು ಠಾಣೆಗೆ ಮಾಲು, ಆರೋಪಿ, ಮಹಜರ್ ರೊಂದಿಗೆ ನೀಡಿದ ವರದಿ ಸಾರಾಂಶವೇನೆಂದರೆ, ದಿನಾಂಕ:07/05/2021 ರಂದು ಬೆಳಗ್ಗೆ 10-00 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಅಪ್ಪಸಾನಹಳ್ಳಿ ಗ್ರಾಮದ ಲಕ್ಷ್ಮೀನರಸಮ್ಮ ಬಿನ್ ಲೇಟ್ ನಾರಾಯಾಣಪ್ಪ  ರವರು ತಮ್ಮ ಮನೆಯ ಟೈಲರ್ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಸ್ಥಳದ ಮೇಲೆ  ದಾಳಿ ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿ.ಹೆಚ್.ಸಿ-210 ಶಿವಪ್ಪ, ಮ.ಪಿ.ಸಿ-496 ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ಜೀಪ್ ನಲ್ಲಿ ಅಪ್ಪಸಾನಹಳ್ಳಿ ಗ್ರಾಮದ ಬಳಿ ಹೋಗಿ ಅಲ್ಲಿದ್ದ ಇಬ್ಬರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಗ್ರಾಮದೊಳಗೆ ಹೋಗಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ನಡೆದುಕೊಂಡು ಅಪ್ಪಸಾನಹಳ್ಳಿ ಗ್ರಾಮದ ಲಕ್ಷ್ಮೀನರಸಮ್ಮ ಬಿನ್ ಲೇಟ್ ನಾರಾಯಾಣಪ್ಪ  ರವರ ಮನೆಯ ಟೈಲರ್ ಅಂಗಡಿ ಬಳಿ ಹೋಗಿ ನೋಡಲಾಗಿ ಮನೆಯ ಮಾಲೀಕಳಾದ ಲಕ್ಷ್ಮೀನರಸಮ್ಮ ತಮ್ಮ ಮನೆಯ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿಹೋಗಿದ್ದು, ಮನೆಯ ಮಾಲೀಕಳಾದ ಲಕ್ಷ್ಮೀನರಸಮ್ಮ  ರವರನ್ನು ವಶಕ್ಕೆ ಪಡೆದುಕೊಂಡು  ಹೆಸರು ಮತ್ತು ವಿಳಾಸ ಕೇಳಗಾಗಿ  ಲಕ್ಷ್ಮೀನರಸಮ್ಮ ಬಿನ್ ಲೇಟ್ ನಾರಾಯಾಣಪ್ಪ, 62 ವರ್ಷ, ವಿಶ್ವಕರ್ಮ ಜನಾಂಗ,  ಟೈಲರ್ ಕೆಲಸ, ವಾಸ ಅಪ್ಪಸಾನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿಸಿದನು. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು OLD TAVERN WHISKY 180 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  180 ಎಂ.ಎಲ್ OLD TAVERN WHISKY ಮಧ್ಯದ 12 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 86.75 ರೂ  ಆಗಿದ್ದು, 12 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 1041/-ರೂ ಆಗಿರುತ್ತೆ. ಮದ್ಯ ಒಟ್ಟು 2160 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಮನೆಯ ಮಾಲೀಕಳಾದ ಲಕ್ಷ್ಮೀನರಸಮ್ಮ ಇಲ್ಲವೆಂದು ತಿಳಿಸಿರುತ್ತಾಳೆ.  ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 10-30 ರಿಂದ 11-30 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು, ಆಸಾಮಿಯನ್ನು ಮತ್ತು ಮಹಜರ್ ನ್ನು ನಿಮ್ಮ ಮುಂದೆ ಈ ನನ್ನ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ಲಕ್ಷ್ಮೀನರಸಮ್ಮ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ವರದಿ ಸಾರಾಂಶವಾಗಿರುತ್ತೆ.

 

19. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.46/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 07/05/2021 ರಂದು ಮಧ್ಯಾಹ್ನ 2-00 ಗಂಟೆ ಪಿಎಸ್ಐ ರವರು ಮಾಲು, ಆರೋಪಿ ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ ದಿನಾಂಕ:07/05/2021 ರಂದು ಬೆಳಿಗ್ಗೆ 12-00 ಗಂಟೆ ಸಮಯದಲ್ಲಿ ತಾನು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಏನಿಗದಲೆ ಗ್ರಾಮದ ಮಾಂಸಹಾರಿ ಹೋಟೆಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಹೋಟೆಲ್ ಮೇಲೆ ದಾಳಿ ನಡೆಸುವ ಸಲುವಾಗಿ ತಾನು ಮತ್ತು ಸಿಬ್ಬಂದಿಯಾದ ಸಿಹೆಚ್ಸಿ-210 ಕೆ.ಬಿ.ಶಿವಪ್ಪ ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ಜೀಪ್ ನಲ್ಲಿ ಏನಿಗದಲೆ  ಗ್ರಾಮದ ಬಳಿ ಹೋಗಿ ಅಲ್ಲಿನವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ನಡೆದುಕೊಂಡು ಗ್ರಾಮದ ವಿಶ್ವೇಶ್ವರಯ್ಯ ಹೋಟೆಲ್ ಎಂದು ಕರೆಯುವ ಮಾಂಸಹಾರಿ ಹೋಟೆಲ್ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಹೋಟೆಲ್ ನಲ್ಲಿರುವ ಆಸಾಮಿ ಮಾಂಸಹಾರಿ ಹೋಟೆಲ್ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಓಡಿಹೋಗಿದ್ದು, ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟ  ಹೋಟೆಲ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಆಸಾಮಿಯನ್ನು ವಶಕ್ಕೆ ಪಡೆದು  ಹೆಸರು ಮತ್ತು ವಿಳಾಸ ಕೇಳಗಾಗಿ  ಶ್ರೀನಿವಾಸ ಬಿನ್ ವೆಂಕಟಪ್ಪ, 31 ವರ್ಷ, ಆದಿ ದ್ರಾವಿಡ ಜನಾಂಗ, ಜಿರಾಯ್ತಿ, ವಂಗಿಮಾಳ್ಳು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದನು. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು ORIGINAL CHOICE DELUXE WHISKEY  90 ML ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಇದ್ದು ಪರಿಶೀಲಿಸಲಾಗಿ 90 ಎಂ.ಎಲ್ ನ ORIGINAL CHOICE DELUXE WHISKEY ಮಧ್ಯದ 22 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 22 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 773/-ರೂ ಆಗಿರುತ್ತೆ. ಮದ್ಯ ಒಟ್ಟು 1980 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಸದರಿ ಆಸಾಮಿ ಇಲ್ಲವೆಂದು ತಿಳಿಸಿರುತ್ತಾನೆ. ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 12-30 ರಿಂದ 1-15 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು, ಆಸಾಮಿಯನ್ನು, ಮಹಜರ್ ನ್ನು ನಿಮ್ಮ ಮುಂದೆ ಈ ನನ್ನ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ಶ್ರೀನಿವಾಸ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿ ದೂರು.

 

20. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.146/2021 ಕಲಂ. 32,34,43(A)  ಕೆ.ಇ ಆಕ್ಟ್:-

          ದಿನಾಂಕ:06-05-2021 ರಂದು ಬೆಳಿಗ್ಗೆ 10-15 ಗಂಟೆಯಲ್ಲಿ  ಸಿ.ಹೆಚ್.ಸಿ-21 ರಂಗನಾಥ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ 06/05/2021 ರಂದು ಬೆಳಿಗ್ಗೆ ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು ಮತ್ತು ಸಿಪಿಸಿ-143 ಶಿವರಾಜುಕುಮಾರ್  ಈ ದಿನ ಜಂಗಮಕೋಟೆ ಹೊರ ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಬೆಳಿಗ್ಗೆ  9-30 ಗಂಟೆ ಸಮಯದಲ್ಲಿ ಜಂಗಮಕೋಟೆ  ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಕಡೆಯಿಂದ ಇಬ್ಬರು ಆಸಾಮಿಗಳು ಆಟೋದಲ್ಲಿ  ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ತಾನು ಮತ್ತು ಸಿಪಿಸಿ-143 ಶಿವರಾಜುಕುಮಾರ್   ರವರು ಜಂಗಮಕೋಟೆ-ಹೊಸಕೋಟೆ ಮುಖ್ಯ ರಸ್ತೆಯ ಶನಿಮಹಾತ್ಮ ದೇವಸ್ಥಾನದ ಮುಂಭಾಗ ರಸ್ತೆಯಲ್ಲಿ  ಜಂಗಮಕೋಟೆ ಕ್ರಾಸ್  ಕಡೆಯಿಂದ ಬರುತ್ತಿದ್ದ ಒಂದು ಆಟೋವನ್ನು  ಗಮನಿಸಿಕೊಂಡಿದ್ದಾಗ ಇಬ್ಬರು ಆಸಾಮಿಗಳು ಸದರಿ ಆಟೋದಲ್ಲಿ ಮದ್ಯದ ಮಾಲುಗಳ ಕೇಸ್ಗಳನ್ನು  ಇಟ್ಟುಕೊಂಡು ಆಟೋವನ್ನು  ಚಾಲನೆ ಮಾಡಿಕೊಂಡು ಬರುತ್ತಿದ್ದು,  ಸದರಿ ಆಟೋದ  ಚಾಲಕನಿಗೆ  ನಿಲ್ಲಿಸಲು ಸೂಚನೆ ನೀಡಿದಾಗ ಸದರಿ ಆಟೋದಲ್ಲಿದ್ದ ಇಬ್ಬರು ಆಸಾಮಿಗಳು  ಸಮವಸ್ತ್ರದಲ್ಲಿದ್ದ ತಮ್ಮನ್ನು  ಕಂಡು ಆಟೋವನ್ನು  ರಸ್ತೆಯ ಬದಿಯಲ್ಲಿ ನಿಲ್ಲಿಸಿ ಓಡಿ ಹೋಗಿರುತ್ತಾರೆ ನಂತರ ಸದರಿ ಆಟೋದಲ್ಲಿದ್ದ ಮದ್ಯದ ಮಾಲುಗಳನ್ನು  ಪರಿಶೀಲಿಸಲಾಗಿ ಅದರಲ್ಲಿ 4 ಮದ್ಯದ ಟೆಟ್ರಾ ಪಾಕೇಟ್ ಗಳಿರುವ ರೆಟ್ಟಿನ ಬಾಕ್ಸ್ ಗಳು  ಮತ್ತು 2 ಮದ್ಯದ ಬಾಟಲ್ ಗಳಿರುವ ರೆಟ್ಟಿನ ಬಾಕ್ಸ್ ಗಳು ಇದ್ದವು, ಪರಿಶೀಲಿಸಲಾಗಿ 1] 90 ಎಂ.ಎಲ್ ಸಾಮರ್ಥ್ಯದ 3 ಕೇಸ್ Hayward Punch Fine Whisky ಒಟ್ಟು 288 ಮದ್ಯದ ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಮೇಲೆ 35-13 ರೂ ಎಂದು ಬೆಲೆ ನಮೂದು ಆಗಿದ್ದು  ಒಟ್ಟು ಟೆಟ್ರಾ ಪಾಕೇಟ್ ಗಳ ಬೆಲೆ 10224-00 ರೂಗಳಾಗಿರುತ್ತೆ. 2] 180 ಎಂ.ಎಲ್ ಸಾಮರ್ಥ್ಯದ 43 Bagpiper Deluxe Whisky  ಮದ್ಯದ ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಮೇಲೆ 106-23 ರೂ ಎಂದು ಬೆಲೆ ನಮೂದು ಆಗಿದ್ದು  ಒಟ್ಟು ಟೆಟ್ರಾ ಪಾಕೇಟ್ ಗಳ ಬೆಲೆ 4567-89 ರೂಗಳಾಗಿರುತ್ತೆ. 3] 650 ಎಂ.ಎಲ್ ಸಾಮರ್ಥ್ಯದ 2 ಕೇಸ್ Kingfisher Strong Premium Beer ಒಟ್ಟು 24 ಮದ್ಯದ ಬೀರ್ ಬಾಟಲ್ ಗಳಿದ್ದು ಪ್ರತಿ ಬಾಟಲ್  ಮೇಲೆ 150 ರೂ ಎಂದು ಬೆಲೆ ನಮೂದು ಆಗಿದ್ದು  ಒಟ್ಟು ಬಾಟಲ್ಗಳ ಬೆಲೆ 3600-00 ರೂಗಳಾಗಿರುತ್ತೆ. ಮೇಲ್ಕಂಡ ಎಲ್ಲಾ ಮದ್ಯವು 18391-89 ರೂ ಬೆಲೆ ಬಾಳುವುದ್ದಾಗಿದ್ದು, ಮದ್ಯದ ಮಾಲುಗಳು ಒಟ್ಟು 49.26 ಲೀಟರ್ ನಷ್ಟಿರುತ್ತದೆ. ಆಟೋವನ್ನು  ಪರಿಶೀಲಿಸಲಾಗಿ ಇದರ ಮೇಲೆ ಕೆಎ-04-ಎ-4087 ನೊಂದಣಿ ಸಂಖ್ಯೆ ನಮೂದಿಸಿರುತ್ತೆ.  ನಂತರ ಸ್ಥಳಕ್ಕೆ ಬಂದ ಸಾರ್ವಜನಿಕರನ್ನು ಓಡಿ ಹೋದ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1] ಕೆಂಚಪ್ಪ ಬಿನ್ ಲೇಟ್ ಮುಳವಾಗಲಪ್ಪ, ಸುಮಾರು 45 ವರ್ಷ, ಪ.ಜಾತಿ, ಜಿರಾಯ್ತಿ, ವಾಸ:ಬೈರಸಂದ್ರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು 2] ಮುನಿಗಂಗಪ್ಪ ಬಿನ್ ಮುನಿಮಲ್ಲಪ್ಪ, ಸುಮಾರು 59 ವರ್ಷ, ಪ.ಜಾತಿ, ಆಟೋಚಾಲಕ ವೃತ್ತಿ, ವಾಸ:ಯಣ್ಣಂಗೂರು ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಮೇಲ್ಕಂಡ ಆಸಾಮಿಗಳು ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ತಮ್ಮ ಗ್ರಾಮದಲ್ಲಿ ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸಲು ಉದ್ದೇಶದಿಂದ ಕೆಎ-04-ಎ-4087 ನೊಂದಣಿಸಂಖ್ಯೆಯ ಆಟೋದಲ್ಲಿ ಸಾಗಾಣಿಕೆ ಮಾಡುತ್ತಿರುವುದಾಗಿ ಕಂಡು ಬಂದಿದ್ದು ಮೇಲ್ಕಂಡ ಮದ್ಯವನ್ನು ಮತ್ತು ಆಟೋವನ್ನು ವಶಕ್ಕೆ ಪಡೆದುಕೊಂಡು  ಬಂದು ತಮ್ಮ ಮುಂದೆ ಹಾಜರು ಪಡಿಸುತ್ತಿದ್ದು ಸದರಿ ಆಸಾಮಿಗಳ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ:146/2021 ಕಲಂ:32,34,43(ಎ) ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

21. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.147/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ: 07-05-2021  ರಂದು ಬೆಳಿಗ್ಗೆ 6-30  ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 07-05-2021  ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಹನುಮಂತಪುರ, ಚೀಮನಹಳ್ಳಿ, ಕಡೆಗಳಲ್ಲಿ ಗಸ್ತು ಮಾಡಿಕೊಂಡು ಬೆಳ್ಳಿಗೆ 6-00 ಗಂಟೆ ಸಮಯದಲ್ಲಿ  ಅಬ್ಲೂಡು  ಗ್ರಾಮದ ಕಡೆ ಹೋಗಲು ಗುಡಿಹಳ್ಳಿ  ಗೇಟ್ ನಲ್ಲಿದ್ದಾಗ ಬಾತ್ಮಿದಾರರಿಂದ ಅಬ್ಲೂಡು ಗ್ರಾಮದ ಚಾಗೆ ಗೇಟ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಅಬ್ಲೂಡು  ಗ್ರಾಮದ ಚಾಗೇ ಗೇಟ್  ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಕವರ್  ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ನಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಸುರೇಶ್ ಬಿನ್ ಸೊಣ್ಣಪ್ಪ, ಸುಮಾರು 53 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ:ನಡಿಪಿನಾಯಕನಹಳ್ಳಿ ಗ್ರಾಮ, ಶಿಡ್ಲಘಟ್ಟ  ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರ್  ಪರಿಶೀಲಿಸಲಾಗಿ 180 ಎಂ.ಎಲ್.  ಸಾಮರ್ಥ್ಯದ 6  BAGPIPER DELUXE WHISKY ಟೆಟ್ರಾ ಪ್ಯಾಕೆಟ್ ಗಳಿದ್ದು,  ಸದರಿ ಸ್ಥಳದಲ್ಲಿ 2 ಖಾಲಿ ಪ್ಲಾಸ್ಟಿಕ್ ಲೋಟಗಳು ,4 ಖಾಲಿ ವಾಟರ್ ಪಾಕೇಟ್ ಗಳನ್ನು ಮತ್ತು 180 ಎಂ.ಎಲ್.  ಸಾಮರ್ಥ್ಯದ 2  BAGPIPER DELUXE WHISKY  ಖಾಲಿ ಟೆಟ್ರಾ ಪ್ಯಾಕೆಟ್  ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಬೆಳ್ಳಿಗೆ 7-30 ಗಂಟೆಯಲ್ಲಿ ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿರುತ್ತೇನೆ. ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ಸುರೇಶ್ ಬಿನ್ ಸೊಣ್ಣಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು   ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ. 147/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

22. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.148/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ: 07-05-2021  ರಂದು ಬೆಳಿಗ್ಗೆ 8-00 ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 07-05-2021  ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು  ಅಬ್ಲೂಡು , ಚೀಮನಹಳ್ಳಿ, ಕಡೆಗಳಲ್ಲಿ ಗಸ್ತು ಮಾಡಿಕೊಂಡು ಬೆಳ್ಳಿಗೆ 7-30 ಗಂಟೆ ಸಮಯದಲ್ಲಿ  ಹನುಮಂತಪುರ ಗ್ರಾಮದ ಕಡೆ ಹೋಗಲು ವರದನಾಯಕನಹಳ್ಳಿ  ಗೇಟ್ ನಲ್ಲಿದ್ದಾಗ ಬಾತ್ಮಿದಾರರಿಂದ ಹನುಮಂತಪುರ ಗೇಟ್ ನಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಹನುಮಂತಪುರ ಗೇಟ್  ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಕವರ್  ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ತಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಮಂಜುನಾಥ ಬಿನ್ ಲಕ್ಷ್ಮೀನಾರಾಯಣ, ಸುಮಾರು 42, ಪದ್ಮಶಾಲಿ ಜನಾಂಗ, ಕೂಲಿಕೆಲಸ, ವಾಸ: ವಾರ್ಡ್ ನಂ:17 ಮಾರುತಿ ನಗರ, ಶಿಡ್ಲಘಟ್ಟ ಟೌನ್, ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರ್  ಪರಿಶೀಲಿಸಲಾಗಿ 90 ಎಂ.ಎಲ್.  ಸಾಮರ್ಥ್ಯದ 10 ORIGINAL CHOICE DELUXE WHISKY ಟೆಟ್ರಾ ಪ್ಯಾಕೆಟ್ ಗಳಿದ್ದು,  ಸದರಿ ಸ್ಥಳದಲ್ಲಿ 2 ಖಾಲಿ ಪ್ಲಾಸ್ಟಿಕ್ ಲೋಟಗಳು ,4 ಖಾಲಿ ವಾಟರ್ ಪಾಕೇಟ್ ಗಳನ್ನು ಮತ್ತು 90 ಎಂ.ಎಲ್.  ಸಾಮರ್ಥ್ಯದ 2 ORIGINAL CHOICE DELUXE WHISKY ಖಾಲಿ ಟೆಟ್ರಾ ಪ್ಯಾಕೆಟ್  ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಬೆಳ್ಳಿಗೆ 8-00 ಗಂಟೆಯಲ್ಲಿ ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿರುತ್ತೇನೆ. ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ಸುರೇಶ್ ಬಿನ್ ಸೊಣ್ಣಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ . ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ. 148/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

Last Updated: 07-05-2021 05:32 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080