ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.48/2021 ಕಲಂ. 307,504 ಐ.ಪಿ.ಸಿ:-

          ದಿನಾಂಕ:07/04/2021 ರಂದು ಮದ್ಯಾಹ್ನ 14-30 ಗಂಟೆಗೆ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಘುನಂದನ್ ಬಿನ್  ಲೆಟ್ ಪಿ ಎಸ್ ನಾರಾಯಣಸ್ವಾಮಿ, 32 ವರ್ಷ, ಗೊಲ್ಲರು, ಟೈಲರ್ ಕೆಲಸ, ವಾಸ: ಪಲ್ಲಿಗಡ್ಡ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ ನಂ: 9902419140 ರವರು ನೀಡಿದ ಹೇಳೀಕೆಯ ದೂರಿನ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಟೈಲರ್ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿರುತ್ತೇನೆ. ನಮ್ಮ ತಂದೆ ಲೇಟ್ ಪಿ ಎಸ್ ನಾರಾಯಣಸ್ವಾಮಿ  ಮತ್ತು  ತಾಯಿ ನಾಗರತ್ನಮ್ಮ ರವರಿಗೆ ಇಬ್ಬರು ಮಕ್ಕಳಿದ್ದು, 1 ನೇ ನಾನು 2 ನೇ ನನ್ನ ತಂಗಿ ಜ್ಯೋತಿ ರವರಾಗಿರುತ್ತೇವೆ. ದಿನಾಂಕ: 07/04/2021 ರಂದು ಮದ್ಯಾಹ್ನ  12-00 ಗಂಟೆಯ ಸಮಯದಲ್ಲಿ ನಾನು ಮತ್ತು ನನ್ನ ಭಾವ ಕೊನಾಪುರ ಗ್ರಾಮದ ವಾಸಿ  ಜಗನ್ನಾಥ ಬಿನ್  ಕೆ ವಿ  ಲೇಟ್ ಕೋನಪ್ಪ ರವರು ದ್ವಿಚಕ್ರವಾಹನಗಳಲ್ಲಿ ಯಗವಕೋಟೆಗೆ  ಹೋಗಿ ಲೈನಿಂಗ್ ಬಟ್ಟೆಯನ್ನು ವ್ಯಾಪಾರ ಮಾಡಿಕೊಂಡು ಮದ್ಯಾಹ್ನ 12-15 ಗಂಟೆಯಲ್ಲಿ ಊರಿಗೆ ವಾಪಸ್ಸು ಹೋಗಲು ದ್ವಿಚಕ್ರವಾಹನದಲ್ಲಿ  ಯಗವಕೋಟೆ ಬಸ್ ನಿಲ್ದಾಣದಲ್ಲಿ  ಬರುತ್ತಿದ್ದಾಗ ಯಾರೋ ಒಬ್ಬ ಆಸಾಮಿ ನನಗೆ ದ್ವಿಚಕ್ರವಾಹನ ನಿಲ್ಲಿಸಲು ಸೂಚಿಸಿದ್ದು ಅದರಂತೆ ನಾನು ದ್ವಿಚಕ್ರವಾಹನ ನಿಲ್ಲಿಸಿದಾಗ ಆತನು ನನಗೆ ಕಾಪಲ್ಲಿ ಕ್ರಾಸ್ ಗೆ ಡ್ರಾಪ್ ಕೊಡುವಂತೆ ಕೆಳಿದ ಅದಕ್ಕೆ  ನಾನು ಒಪ್ಪಿ ಆತನನ್ನು  ದ್ವಿಚಕ್ರವಾಹನದಲ್ಲಿ ಹಿಂಬದಿಯಲ್ಲಿ ಕುಳ್ಳರಿಸಿಕೊಂಡು  ಯಗವಕೋಟೆ – ಗುಂತೂರು ಗಡ್ಡ ಮದ್ಯೆ ಥಾರ್ ರಸ್ತೆಯಲ್ಲಿರುವ ಚಾಕಾ ಸಾಕಾಣೀಕೆ ಕೇಂದ್ರದ ಬಳಿ   ಬರುತ್ತಿದ್ದಾಗ  ಆಸಾಮಿಯು ನನನ್ನು ಕುರಿತು 500 ರೂಪಾಯಿ ಹಣ ಕೊಡುವಂತೆ ಕೆಳೀದ ಅದಕ್ಕೆ ನಾನು ನಿನಗೆ ಡ್ರಾಪ್ ಕೊಡುತ್ತೇನೆ. ನಿನಗೆ ಹಣ ಯಾಕೆ ಕೊಡಬೇಕು, ನಾನು ಹಣ ಕೊಡುವುದಿಲ್ಲವೆಂದು ಹೇಳುತ್ತಿದ್ದಂತೆ  ಆಸಾಮಿಯು ನನ್ನನ್ನು ಕುರಿತು ಬೋಳಿಮಗನೇ ಹಣ ಕೊಡುವುದಿಲ್ಲವೆಂದು ಹೇಳುತ್ತೀಯಾ ನಾನು ಯಾರು ಗೊತ್ತ ನನ್ನ ಮೇಲೆ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ 2 ಕೇಸುಗಳು ಆಗಿವೆ , ನನ್ನನ್ನು ಕಂಡರೆ ಜನರು ಭಯ ಪಡುತ್ತಾರೆ.   ನಿನಗೆ ನನ್ನನ್ನು ಕಂಡರೆ ಭಯವಿಲ್ಲವೇನೂ. ಲೋಪರ್ ನನ್ನ ಮಗನೇ  ಈಗ ನಿನ್ನನ್ನು ಮುಗಿಸುತ್ತೇನೆ ಪ್ರಾಣ ಸಹಿತ ಬಿಡುವುದಿಲ್ಲವೆಂದು ಹೇಳಿ ಕೊಲೆ ಮಾಡುವ ಉದ್ದೇಶದಿಂದ ಆತನ ಬಳಿ ಇಟ್ಟುಕೊಂಡಿದ್ದ ಚಾಕುವಿನಿಂದ ನನ್ನ ಎಡ ಭುಜದ ಹಿಂಬಾಗದಲ್ಲಿ ತಿವಿದು ರಕ್ತಗಾಯಪಡಿಸಿದನು.  ನಾನು ನೊವಿನಿಂದ ದ್ವಿಚಕ್ರವಾಹನ ನಿಲ್ಲಿಸಿದ ಕೂಡಲೇ ಆಸಾಮಿಯು ದ್ವಿಚಕ್ರವಾಹನದಿಂದ ಇಳಿದು ಅದೇ ಚಾಕುವಿನಿಂದ ಎಡ ಭಾಗದ ಹೊಟ್ಟೆಯ ಮೇಲೆ 2 ಕಡೆ ಎದೆಯ ಕೆಳ ಭಾಗದಲ್ಲಿ 2 ಕಡೆ ಹಾಗೂ ಎಡ ಕೈ ರೆಟ್ಟೆಯ  ಮೇಲೆ ಚಾಕುವಿನಿಂದ ತಿವಿದು ಕೊಲೆ ಮಾಡಲು ಪ್ರಯತ್ನಿಸಿದನು. ನಾನು ನೋವಿನಿಂದ ಕೆಳಗಡೆ ಬಿದ್ದು ಹೋದಾಗ ನಾನು ಮ್ಯಾಕಪೋತಲಹಳ್ಳಿ  ಗಂಗಿರೆಡ್ಡಿ ನನ್ನನ್ನು ಕಂಡರೆ ಎಲ್ಲರೂ ಭಯ ಪಡಬೇಕು ಎಂದು ಬೆದರಿಕೆ ಹಾಕಿದ ಅಷ್ಟರಲ್ಲಿ ಯಗವಕೋಟೆಯಿಂದ ದ್ವಿಚಕ್ರವಾಹನದಲ್ಲಿ  ಬಂದ ನನ್ನ ಭಾವ ಜಗನ್ನಾಥ ರವರು ಹಾಗೂ ಅಲ್ಲಿಯೇ ಪಕ್ಕದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಜನರು ಸ್ಥಳಕ್ಕೆ ಬಂದು ನನ್ನನ್ನು ಉಪಚರಿಸಿದರು, ನನ್ನ ಭಾವ ಜಗನ್ನಾಥ ನನ್ನನ್ನು ಉಪಚರಿಸಿ ದ್ವಿಚಕ್ರವಾಹನದಲ್ಲಿ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಆದ್ದರಿಂದ ಮೇಲ್ಕಂಡ ಮ್ಯಾಕಪೋತಲಹಳ್ಳಿ ಗಂಗಿರೆಡ್ಡಿ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ಕೊಟ್ಟ ದೂರಿನ ಸಾರಾಂಶವಾಗಿರುತ್ತದೆ.

 

2. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.24/2021 ಕಲಂ. 279,337,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:- 07/04/2021 ರಂದು ಶ್ರೀ ವೆಂಕಟೇಶಪ್ಪ ಬಿನ್ ತಿರುಮಲಪ್ಪ, 55 ವರ್ಷ, ಆದಿಕರ್ನಾಟಕ ಜನಾಂಗ, ಗಾರೆ ಕೆಲಸ, ದಿನ್ನೇಹೊಸಹಳ್ಳಿ ಗ್ರಾಮ, ಕಸಬಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೆನೇಂದರೆ ದಿನಾಂಕ:-06/04/2021 ರಂದು ರಾತ್ರಿ ಸುಮಾರು 8-45 ಗಂಟೆಯ ಸಮಯದಲ್ಲಿ ನನ್ನ ಮಗನಾದ ವೆಂಕಟರೋಣಪ್ಪ ಬಿನ್ ವೆಂಕಟೇಶಪ್ಪ 29 ವರ್ಷ, ಗಾರೆ ಕೆಲಸ ರವರು ತನ್ನ ಸ್ನೇಹಿತನಾದ ಚಿಕ್ಕಬಳ್ಳಾಪುರ ಟೌನ್ ನ ಪ್ರಶಾಂತ ನಗರದ ಹರೀಶ್ ಬಿನ್ ನರಸಿಂಹಪ್ಪ 28 ವರ್ಷ, ಆದಿ ಕರ್ನಾಟಕ ಜನಾಂಗ, ಗಾರೆ ಕೆಲಸ, ರವರನ್ನು ಚಿಕ್ಕಬಳ್ಳಾಪುರ ನಗರಕ್ಕೆ ಬಿಟ್ಟು ಬರುವುದಾಗಿ ಹೇಳಿ ಕೆಎ-43-ಕ್ಯೂ-4751 ರ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಮನೆಯಿಂದ ಹೋಗಿದ್ದು ಸುಮಾರು 9-45 ಗಂಟೆಯ ಸಮಯದಲ್ಲಿ ತನ್ನ ಸ್ನೇಹಿತನಾದ ಹರೀಶ್ ರವರು ನನಗೆ ಮೊಬೈಲ್ ಕರೆಮಾಡಿ ನಿಮ್ಮ ಮಗ ಹಾಗೂ ನಾನು ಹೋಗುತ್ತಿದ್ದ ದ್ವಿಚಕ್ರವಾಹನ ಅಪಘಾತವಾಗಿ ಇಬ್ಬರಿಗೂ ಗಾಯಗಳಾಗಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿರುವುದಾಗಿ ತಿಳಿಸಿದ್ದು ನಾನು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ಸದರಿ ಅಪಘಾತ ಬಗ್ಗೆ ವಿಚಾರಿಸಲಾಗಿ ನನ್ನ ಮಗ ವೆಂಕಟರೋಣಪ್ಪ ಹಾಗೂ ಅವನ ಸ್ನೇಹಿತ ಹರೀಶ್ ರವರು ದಿನ್ನೆಹೊಸಹಳ್ಳಿ ಗ್ರಾಮದಿಂದ ಚಿಕ್ಕಬಳ್ಳಾಪುರಕ್ಕೆ ಹೋಗಲು ಕೆಎ-43-ಕ್ಯೂ-4751ರ ದ್ವಿಚಕ್ರವಾಹನದಲ್ಲಿ ದಿನ್ನೆಹೊಸಹಳ್ಳಿ - ಚಿಕ್ಕಬಳ್ಳಾಪುರ ರಸ್ತೆಯ ಚಿಕ್ಕಬಳ್ಳಾಪುರ ನಗರದ ಈದ್ಗಾ ಮುಂಭಾಗದ ರಸ್ತೆಯಲ್ಲಿ ಸುಮಾರು ರಾತ್ರಿ 9-30 ಗಂಟೆಯ ಸಮಯದಲ್ಲಿ ಹೋಗುತ್ತಿದ್ದಾಗ ಎದುರಿಗೆ ಚಿಕ್ಕಬಳ್ಳಾಪುರ ಕಡೆಯಿಂದ ಬಂದ ಯಾವುದೋ ಆಟೋ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆಎ-43-ಕ್ಯೂ-4751 ರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿ ಅಲ್ಲಿಂದ ವಾಹನ ಸಮೇತ ಹೊರಟು ಹೋದ ಪರಿಣಾಮ ವಾಹನವನ್ನು ಚಾಲನೆ ಮಾಡುತ್ತಿದ್ದ ನನ್ನ ಮಗ ವೆಂಕಟರೋಣಪ್ಪ ರವರಿಗೆ ಎದೆಗೆ, ಬಲ ಕಾಲಿನ ಮೊಣಕಾಲಿನ ಬಳಿಗೆ ರಕ್ತಗಾಯಗಳಾಗಿದ್ದು ಹಾಗೂ ಹಿಂದೆ ಕುಳಿತಿದ್ದ ತನ್ನ ಸ್ನೇಹಿತ ಹರೀಶ್ ರವರಿಗೆ ಬಲ ಕೈಗೆ, ಬಲಕಾಲಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಅಲ್ಲಿನ ಸ್ಥಳಿಯರು ಉಪಚರಿಸಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ನಂತರ ನನ್ನ ಮಗನಿಗೆ ಹೆಚ್ಚಿನ ಗಾಯಗಳಾಗಿದ್ದರಿಂದ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬ್ಯೂಲೆನ್ಸ್ ವಾಹನದಲ್ಲಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ಹೆಚ್ಚಾಗಿ ಕೋವಿಡ್-19 ಇರುವುದರಿಂದ ಅಲ್ಲಿ ಚಿಕಿತ್ಸೆಯನ್ನು ಪಡೆಯದೇ ತಕ್ಷಣ ಅಲ್ಲಿಂದ ಸಂಜಯ್ ಗಾಂಧಿ ಆಸ್ಪತ್ರೆಗೆ ಸೇರಿಸಿ ಅಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಾರ್ಗ ಮಧ್ಯದಲ್ಲಿಯೇ ಸುಮಾರು ಬೆಳಗಿನ ಜಾವ 02-00 ಗಂಟೆಗೆ ಮೃತ ಪಟ್ಟಿರುವುದಾಗಿ ವಿಕ್ಟೋರಿಯಾ ಆಸ್ಪತ್ರೆಯ ವೈಧ್ಯಾಧಿಕಾರಿಗಳು ತಿಳಿಸಿದ್ದು, ನಂತರ ಮೃತ ದೇಹವನ್ನು ಅಲ್ಲಿಂದ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿ ಈ ದಿನ ದಿನಾಂಕ:-07/04/2021 ರಂದು ತಡವಾಗಿ ಅಪಘಾತ ಪಡಿಸಿ ವಾಹನ ಸಮೇತ ಪರಾರಿಯಾದ ಯಾವುದೋ ಆಟೋ ವಾಹನವನ್ನು ಮತ್ತು ಚಾಲಕನನನ್ನು ಪತ್ತೇ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಗಣಕೀಕೃತ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.141/2021 ಕಲಂ. 447,341,427,504,506 ಐ.ಪಿ.ಸಿ :-

          ದಿನಾಂಕ: 06/04/2021 ರಂದು ರಾತ್ರಿ 8.30 ಗಂಟೆಗೆ ಶ್ರೀಮತಿ ಡಿ ಎ ಶೋಭಾ ಕೋಂ ಲೇಟ್ ಡಿ.ಕೆ ಆದಿನಾರಾಯಣ, 50ವರ್ಷ, ವೈಶ್ಯರು, ಗೃಹಿಣಿ, ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಗಂಡನಾದ ಡಿ.ಕೆ.ಆಧಿನಾರಾಯಣ ರವರು 2011 ಸಾಲಿನಲ್ಲಿ ಮಸ್ತೇನಹಳ್ಳಿ ಗ್ರಾಮದ ಸರ್ವೇ ನಂಬರ 83/6 ರಲ್ಲಿರುವ 1 ಎಕರೆ 33 ಗುಂಟೆ ಜಮೀನನ್ನು ವೀರೆಗೌಡ ಬಿನ್ ಚೆನ್ನ ವೆಂಕಟಪ್ಪ ಎಂಬುವವರಿಂದ ಖರೀದಿಸಿದ್ದರು. ಈ ಜಮೀನಿನಲ್ಲಿ ರೇಷ್ಮೆ ಸೊಪ್ಪನ್ನು ಬೆಳೆಸುತ್ತಿದ್ದು ಇದಕ್ಕೆ ಅದೇ ಗ್ರಾಮದ ದೇವರಾಜ ಬಿನ್ ನಾರಾಯಣಸ್ವಾಮಿ ಎಂಬುವವರ ಕೊಳವೆ ಬಾವಿಯಿಂದ ಜಮೀನಿಗೆ  ನೀರನ್ನು ಪಡೆದುಕೊಂಡು ನೀರಿನ ಭಾಗವಾಗಿ ಹಣವನ್ನು ನೀಡುತ್ತಿದ್ದರು. 2018 ಸಾಲಿನಲ್ಲಿ ತನ್ನಗಂಡ ಮೃತಪಟ್ಟಿರುತ್ತಾರೆ. ಅಂದಿನಿಂದ ಮೇಲ್ಕಂಡ ದೇವರಾಜ್ ರವರ ಕುಟುಂಬದವರು ತಮ್ಮನ್ನು ಸದರಿ ಜಮೀಜನಿನ ಬದಿಗೆ ಹೋದರೆ ಬೆದರಿಕೆ ಹಾಕುವುದು ಹಾಗೂ ಜಮೀನಿನಿಂದ ಬರುವ ಯಾವುದೇ ಫಸಲು/ಹಣವನ್ನು ತಮಗೆ ನೀಡುತ್ತಿರುವುದಿಲ್ಲ. 2019 ನೇ ಸಾಲಿನಲ್ಲಿ ನನ್ನ ಹೆಸರಿಗೆ ಪವತಿ ವಾರಸು ಮೂಲಕ ಮೇಲ್ಕಂಡ ಜಮೀನಿನ ಖಾತೆ ಬದಲಾವಣೆ ಮಾಡಿಸಿಕೊಂಡಿರುತ್ತೇನೆ. ಅದಕ್ಕೆ ಸಂಬಂದಿಸಿದ ದಾಖಲೆಗಳು ತನ್ನ ಹೆಸರಿನಲ್ಲಿ ಇರುತ್ತವೆ. ಹೀಗಿರುವಲ್ಲಿ ದಿನಾಂಕ:27/03/2021 ರಂದು ತಾನು ಮತ್ತು ತನ್ನ ಮಗ ಮನೋಜ್ ರವರು ಮೇಲ್ಕಂಡ ಸರ್ವೇ ನಂಬರಿನ ಜಮೀನಿಗೆ ಮುಳ್ಳು ತಂತಿ ಬೇಲಿಯನ್ನು ಹಾಕಲು ಕಲ್ಲುಗಳನ್ನು ಕೂಲಿಯವರನ್ನು ಕರೆಸಿಕೊಂಡು ಕಲ್ಲುಗಳನ್ನು  ಜಮೀನಿನ ಬಳಿ ಇಳಿಸುತ್ತಿದ್ದಾಗ ಮದ್ಯಾಹ್ನ ಸುಮಾರು 12.00 ಗಂಟೆಗೆ ಮಸ್ತೇನಹಳ್ಳಿ ಗ್ರಾಮದ ವಕ್ಕಲಿಗರ ಜನಾಂಗಕ್ಕೆ ಸೇರಿದ ವಿನೋದಮ್ಮ ಕೊಂ ದೇವರಾಜು 44 ವರ್ಷ ರವರು ತಮ್ಮ ಜಮೀನಿನೊಳಗೆ ಅಕ್ರಮ ಪ್ರವೇಶ ಮಾಡಿ ತಮ್ಮನ್ನು ಕುರಿತು “ನೀವು ಈ ಜಮೀನಿಗೆ ಮುಳ್ಳು ತಂತಿ ಬೇಲಿಯನ್ನು ಹಾಕಬಾರದು” ಎಂದು ತಮ್ಮನ್ನು ಅಡ್ಡಗಟ್ಟಿ ತಡೆದು, ಅವಾಶ್ಯ ಶಬ್ದಗಳಿಂದ ಬೈದು, “ಈ ಜಮೀನಿನ ಬಳಿ ನೀವು ಬರಬಾರದು. ಬಂದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲ” ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಬಂದ ಗುಟ್ಟಹಳ್ಳಿ ಗ್ರಾಮದ ಶಿವಣ್ಣ ಮತ್ತು ಕೈವಾರ ಗ್ರಾಮದ ಶಶಿಕುಮಾರ್ ರವರು ತಮಗೆ ಸಮಾದಾನಪಡಿಸಿ ಗ್ರಾಮಕ್ಕೆ ಕಳುಹಿಸಿದರು. ತಾವು ಮನೆಗೆ ವಾಪಸ್ಸಾಗಿ ಎರಡು ದಿನಗಳ ನಂತರ ಜಮೀನಿನ ಬಳಿ ಹೋಗಿ ನೋಡುವಷ್ಟರಲ್ಲಿ ತಾವು ಬೇಲಿ ಹಾಕಲು ತರಿಸಿದ್ದ ಸುಮಾರು ಏಳು ಅಡಿ ಉದ್ದದ 150 ಕಲ್ಲು ಕೂಚುಗಳನ್ನು ಹೊಡೆದು ಸುಮಾರು 60,000 ರೂ ಗಳಷ್ಟು ನಷ್ಠ ಉಂಟುಮಾಡಿರುತ್ತಾರೆ. ಇದೂವರೆವಿಗೂ ಗ್ರಾಮದಲ್ಲಿ ಹಿರಿಯರು ಮಾತನಾಡುವುದಾಗಿ ಹೇಳಿದ್ದು ಮಾತನಾಡದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡ ವಿನೋದಮ್ಮ ಕೊಂ ದೇವರಾಜ್ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.142/2021 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ: 07/04/2020 ರಂದು ಸಂಜೆ 4.00 ಗಂಟೆಗೆ ನ್ಯಾಯಾಲಯ ಕರ್ತವ್ಯದ CPC-339 ರವರು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಅನುಮತಿಯ ಪತ್ರದ ಸಾರಾಂಶವೇನೆಂದರೆ, ಈ ದಿನ ದಿನಾಂಕ:07/04/2021 ರಂದು ಬೆಳಿಗ್ಗೆ 11.00 ಗಂಟೆಯ ಸಮಯದಲ್ಲಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ.ನರೇಶ್ ನಾಯ್ಕ್.ಎಸ್ ರವರಿಗೆ ಠಾಣಾ ಸರಹದ್ದಿಗೆ ಸೇರಿದ ಕತ್ತಿರಗುಪ್ಪೆ ಗ್ರಾಮದ ಬಳಿಯಿರುವ ಸರ್ಕಾರಿ ಕೆರೆಯ ಹಿಂಭಾಗದಲ್ಲಿರುವ ಹೊಂಗೆ ಮರದ ಕೆಳಗೆ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಜೂಜಾಟ ಆಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಸದರಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಠಾಣೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಸಿ.ಹೆಚ್.ಸಿ-249 ಸಂದೀಪ್ ಕುಮಾರ್, ಸಿ.ಪಿ.ಸಿ-197 ಅಂಬರೀಶ, ಸಿ.ಪಿ.ಸಿ-464 ಅರುಣ್ ಕುಮಾರ್ ಮತ್ತು ಪಂಚರೊಂದಿಗೆ KA-40-G-326 ನಂಬರಿನ ಠಾಣೆಯ ಸರ್ಕಾರಿ ಜೀಪಿನಲ್ಲಿ ಕತ್ತಿರಗುಪ್ಪೆ ಗ್ರಾಮದ ಬಳಿಯಿರುವ ಸರ್ಕಾರಿ ಕೆರೆಯ ಬಳಿ ಹೋಗಿ ಜೀಪನ್ನು ನಿಲ್ಲಿಸಿ ನೋಡಲಾಗಿ ಸರ್ಕಾರಿ ಕೆರೆಯ ಹಿಂಭಾಗದಲ್ಲಿರುವ ಹೊಂಗೆ ಮರದ ಕೆಳಗೆ ಕೆಲವರು ಗುಂಪು ಕಟ್ಟಿಕೊಂಡು ಕೋಳಿ ಪಂದ್ಯ ಜೂಜಾಟ ಆಡುತ್ತಿದ್ದು ಸದರಿಯವರನ್ನು ಸುತ್ತುವರಿದು ಓಡಿಹೋಗದಂತೆ ಎಚ್ಚರಿಕೆ ನೀಡಿದರೂ ಸಹ ಆ ಪೈಕಿ ಕೆಲವರು ಕೋಳಿ ಹುಂಜಗಳ ಸಮೇತ ಓಡಿ ಹೋಗಿದ್ದು, ಉಳಿದಂತೆ ಸ್ಥಳದಲ್ಲಿದ್ದ ಒಬ್ಬ ಆಸಾಮಿಯನ್ನು ವಶಕ್ಕೆ ಪಡೆದು ಆತನ ಹೆಸರು, ವಿಳಾಸ ಕೇಳಲಾಗಿ 1).ಶಿವಕುಮಾರ್ ಬಿನ್ ಆನಂದ, 28 ವರ್ಷ, ಬೋವಿ ಜನಾಂಗ, ಕಲ್ಲುಹೊಡೆಯುವ ಕೆಲಸ, ಕುಂದಲಗುರ್ಕಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿದ್ದು, ಸಿಕ್ಕಿಬಿದ್ದ ಆಸಾಮಿಯನ್ನು ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 2).ಪೃಥ್ವಿ ಬಿನ್ ರಾಚಪ್ಪ, 29 ವರ್ಷ, ವಕ್ಕಲಿಗರು, ಜಿರಾಯ್ತಿ, ಕತ್ತಿರಗುಪ್ಪೆ ಗ್ರಾಮ, ಚಿಂತಾಮಣಿ ತಾಲ್ಲೂಕು, 3).ಪೈಯಾಜ್ ಬಿನ್ ಇಮಾಮ್ ಖಾನ್, 35 ವರ್ಷ, ಮುಸ್ಲಿಂ ಜನಾಂಗ, ಜಿರಾಯ್ತಿ, ಕತ್ತಿರಗುಪ್ಪೆ ಗ್ರಾಮ, ಚಿಂತಾಮಣಿ ತಾಲ್ಲೂಕು, 4).ವಿಜಯ್ ಬಿನ್ ನರಸಿಂಹಪ್ಪ, 25 ವರ್ಷ, ನಾಯಕರು, ಕೂಲಿ ಕೆಲಸ, ಕತ್ತಿರಗುಪ್ಪೆ ಗ್ರಾಮ, ಚಿಂತಾಮಣಿ ತಾಲ್ಲೂಕು, 5).ದ್ವಾರಕೇಶ ಬಿನ್ ನಾರಾಯಣಪ್ಪ, 29 ವರ್ಷ, ಜಿರಾಯ್ತಿ, ನಾಯಕರು, ಕತ್ತಿರಗುಪ್ಪೆ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿರುತ್ತಾನೆ. ನಂತರ ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ ಒಂದು ಕೋಳಿ ಹುಂಜ, ಪಣಕ್ಕಿಟ್ಟಿದ್ದ 1.100/- ರೂ ನಗದು ಹಣ ದೊರೆತಿರುತ್ತದೆ. ಸದರಿ ಮಾಲುಗಳನ್ನು ಬೆಳಿಗ್ಗೆ 11.30 ರಿಂದ ಮದ್ಯಾಹ್ನ 12.30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿದ್ದು, ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಜೂಜಾಟವಾಡುತ್ತಿದ್ದ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಯದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿರುತ್ತೆ. ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

5. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.52/2021 ಕಲಂ. 143,147,148,324,302,307,149 ಐ.ಪಿ.ಸಿ:-

          ದಿನಾಂಕ: 06/04/2021 ರಂದು ರಾತ್ರಿ 11:30 ಗಂಟೆಗೆ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ದಿ: 07/04/2021 ರಂದು 00:15 ಗಂಟೆಗೆ ವಾಪಸ್ಸು ಗಾಯಾಳು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ  ತನಗೆ 3 ಜನ  ಹೆಣ್ಣು ಮಕ್ಕಳಿದ್ದು  ಗಂಡು ಮಕ್ಕಳಿಲ್ಲದ ಕಾರಣ ವಿಷ್ಣುಪ್ರಸಾದ್ ಎಂಬ ಹುಡುಗನನ್ನು ಸಾಕಿಕೊಂಡಿರುತ್ತೇವೆ, ಅವನಿಗೆ ಈ ಗ ಸುಮಾರು 18 ವರ್ಷ ವಯಸ್ಸಾಗಿರುತ್ತೆ. ತಮ್ಮ ಅತ್ತೆಯಾದ ಸರೋಜಮ್ಮ ರವರಿಗೆ 6 ಜನ ಮಕ್ಕಳು 2 ಹೆಣ್ಣು ಮಕ್ಕಳಿರುತ್ತಾರೆ, ಎಲ್ಲರೂ ಅಲಾಯಿದೆಯಾಗಿ ವಾಸ ಮಾಡಿಕೊಂಡಿರುತ್ತಾರೆ, ತಮ್ಮ ಮಾವ ಸೀನಪ್ಪ ರವರು ತನ್ನ ಮಕ್ಕಳಿಗೆ ಯಾವುದೇ ಆಸ್ತಿಯನ್ನು ಸರಿಯಾಗಿ ಹಂಚಿಕೆ ಮಾಡಿರುವುದಿಲ್ಲ. ಚಿಂತಾಮಣಿ ನಗರದ ಶ್ರೀರಾಮನಗರದಲ್ಲಿರುವ ಮನೆಗಳನ್ನು ಬಾಡಿಗೆಗೆ ಕೊಟ್ಟಿರುತ್ತಾರೆ. ಈ ವಿಚಾರದಲ್ಲಿ  ತನ್ನ ಗಂಡ ಅಶ್ವಥನಾರಾಯಣ ರವರಿಗೂ ಮತ್ತು ಇವರ ತಮ್ಮ ಆಂಜಪ್ಪ ರವರಿಗೂ ಮನೆಯ ಬಾಡಿಗೆ ಹಣದ ವಿಚಾರದಲ್ಲಿ ಆಗಾಗ ಗಲಾಟೆಗಳು ಮಾಡಿಕೊಳ್ಳುತ್ತಿದ್ದರು, ಈಗಿರುವಲ್ಲಿ ಈ ದಿನ ದಿ: 06/04/2021 ರಂದು ನಾವು ಮನೆಯಲ್ಲಿರುವಾಗ ಆಂಜಪ್ಪ  ಆತನ ಮಕ್ಕಳಾದ ಹರೀಶ್, ನವೀನ್ ರವರುಗಳು ಬಂದು ತನ್ನ ಗಂಡನನ್ನು ಕುರಿತು ಏ ಲೋಪರ್ ನನ್ನ ಮಗನೇ  ನಿನಗೆ ಮನೆಯ ಬಾಡಿಗೆ ಯಾಕೆ ಕೊಡಬೇಕು ಎಂತ ಗಲಾಟೆ ಮಾಡಿ ಹೊರಟುಹೋಗಿರುತ್ತಾರೆ. ಮತ್ತೆ ಇದೇ ದಿನ ರಾತ್ರಿ ಸುಮಾರು 10:00 ಗಂಟೆಯಲ್ಲಿ ತಾವು ಮನೆಯಲ್ಲಿರುವಾಗ ಆಂಜಪ್ಪ  ಆತನ ಮಕ್ಕಳಾದ ಹರೀಶ್, ನವೀನ್ ಅವರ ಜೊತೆಯಲ್ಲಿಯೇ ಬಂದಿದ್ದ ಶಿವ ಬಿನ್ ಮಂಜುನಾಥ, ನಾಗರಾಜ ಬಿನ್ ಸೀನಪ್ಪ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ಮನೆಯ ಬಳಿ ಬಂದು ಕೈಗಳಲ್ಲಿ ಮಚ್ಚು , ದೊಣ್ಣೆಯ, ಚಾಕುಗಳನ್ನು ಹಿಡಿದುಕೊಂಡು ಬಂದು ಆ ಪೈಕಿ ಆಂಜಪ್ಪ ತಮ್ಮನ್ನು ಕುರಿತು ಹೊರಗೆ ಬಾರೋ ಬೋಳಿ  ಮಕ್ಕಳಾ ತಂದೆ – ತಾಯಿಯನ್ನು ನೋಡಿಕೊಳ್ಳಲು ಆಗಲ್ಲ ನಿಮಗೆ ಬಾಡಿಗೆ ಹಣ ಬೇಕಾ ಎಂತ ಕೆಟ್ಟ ಮಾತುಗಳಿಂದ ಬೈಯುತ್ತಿದ್ದರು, ಆಗ ತಾನು ತನ್ನ ಗಂಡ ಅಶ್ವಥನಾರಾಯಣ ಮಗ ವಿಷ್ಣುಪ್ರಸಾದ್  ಹೊರಗೆ ಬಂದಾಗ ಹರೀಶ್ ತನ್ನ ಗಂಡನನ್ನು ಕುರಿತು ಈ ನನ್ನ ಮಗನನ್ನು ಸಾಯಿಸಿಬಿಟ್ಟರೆ ತನಗೆ ಅಡ್ಡವಿರಲ್ಲವೆಂದು ಸಾಯಿಸುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಮಚ್ಚಿನಿಂದ ತನ್ನ ಗಂಡನ ತಲೆಗೆ ಹೊಡೆದು ರಕ್ತಗಾಯಪಡಿಸಿದನು ಕೂಡಲೇ ತಾನು ತನ್ನ ಮಗ ವಿಷ್ಣುಪ್ರಸಾದ್ ಅಡ್ಡಹೋಗಿದ್ದಕ್ಕೆ ನವೀನ ಚಾಕುವಿನಿಂದ ತನಗೆ ಕೈಗೆ ಹಾಕಿ ರಕ್ತಗಾಯಪಡಿಸಿ ಶವ ರವರು ದೊಣ್ಣೆಯಿಂದ ಹೊಡೆದಿರುತ್ತಾರೆ. ತನ್ನ ಮಗ ವಿಷ್ಣು ಅಡ್ಡಬಂದಿದ್ದಕ್ಕೆ ಹರೀಶ್ ಅದೇ ಮಚ್ಚಿನಿಂದ ತನ್ನ ಮಗನನ್ನು ಸಾಯಿಸುವ ಉದ್ದೇಶದಿಂದ ತನ್ನ ಮಗನ ತಲೆಗೆ ಹೊಡೆದು ರಕ್ತಗಾಯಪಡಿಸಿ ಶಿವ ಮತ್ತು ನಾಗರಾಜ ರವರು ತನ್ನ ಗಂಡನಿಗೆ ಕಾಲುಗಳಿಂದ  ಒದ್ದು ಕೆಳಗೆ ಬಿಳಿಸಿರುತ್ತಾರೆ. ಆಗ ತಾನು ಕೂಗಿಕೊಂಡಾಗ  ತನ್ನ ಮಕ್ಕಳು ಮತ್ತು ಇತರೆಯವರು ಬರುವಷ್ಟರಲ್ಲಿ ಮೇಲ್ಕಂಡ ರವರು ದೊಣ್ಣೆ, ಚಾಕು , ಮಚ್ಚುವನ್ನು ಅಲ್ಲಿಯೇ  ಬಿಸಾಡಿ ಹೊರಟುಹೋದರು. ಗಾಯಗೊಂಡ ತನ್ನ ಮಗ ಮತ್ತು ಗಂಡನನ್ನು ಯಾವುದೋ ಒಂದು ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ  ಬರುವಷ್ಟರಲ್ಲಿ ತನ್ನ ಮಗ ವಿಷ್ಣುಪ್ರಸಾದ್ ಸತ್ತುಹೋಗಿರುತ್ತಾನೆ, ತನ್ನ ಗಂಡನಿಗೆ ಹೆಚ್ಚಿನ ಗಾಯಗಳಾಗಿದ್ದರಿಂದ  ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ತಿಳಿಸಿರುತ್ತಾರೆ. ತನ್ನ ಮಗನನ್ನು ಕೊಲೆ ಮಾಡಿ ತನಗೆ ಮತ್ತು ತನ್ನ ಗಂಡನಿಗೆ ತೀವ್ರ ಸ್ವರೂಪದ ಗಾಯಳುಂಟುಮಾಡಿದ ಮೇಲ್ಕಂಡರವರ ಮೇಲೆ ಕಾನೂನು ಕ್ರ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

6. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.53/2021 ಕಲಂ. 323,302,504,506,34 ಐ.ಪಿ.ಸಿ:-

          ದಿನಾಂಕ: 06/04/2021 ರಂದು 01:15 ಗಂಟೆಗೆ  ಕೋಲಾರ ಜಾಲಪ್ಪ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಹರೀಶ್ ರವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ದಿ: 07/04/2021 ರಂದು 2:45 ಗಂಟೆಗೆ ವಾಪಸ್ಸು ಆಗಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ  ತಮ್ಮ ತಾತ ಸೀನಪ್ಪ ,ಅಜ್ಜಿ ಸರೋಜಮ್ಮ ರವರು ಚಿಂತಾಮಣಿ ನಗರದ ಶ್ರೀರಾಮನಗರದಲ್ಲಿ ವಾಸವಾಗಿದ್ದು, ಅವರಿಗೆ ಒಟ್ಟು 8 ಜನ ಮಕ್ಕಳಿದ್ದು, 1 ನೇ ಮಂಜಪ್ಪ, 2 ನೇ ಅಶ್ವಥನಾರಾಯಣ, 3 ನೇ ಆಂಜಪ್ಪ, 4 ನೇ ಗಾಯಿತ್ರಮ್ಮ , 5 ನೇ ಪದ್ಮಮ್ಮ, 6 ನೇ ನಾರಾಯಣ, 7 ನೇ ಕೃಷ್ಣಮೂರ್ತಿ, 8 ನೇ ನಾಗರಾಜ ರವರುಗಳಾಗಿದ್ದು ಎಲ್ಲರಿಗೂ ಮದುವೆಗಳಾಗಿ ಅಲಾಯಿದೆಯಾಗಿ ಸಂಸಾರ ಮಾಡಿಕೊಂಡಿರುತ್ತಾರೆ. ತಮ್ಮ ತಂದೆ ಆಂಜಪ್ಪ ಗಾರೆಮೇಸ್ರ್ತೀ ಕೆಲಸ ಮಾಡುತ್ತಿದ್ದು, ತಾವು ಸಂಸಾರ ಸಮೇತ ಬೆಂಗಳೂರಿನ ಕ್ಯಾಸನಹಳ್ಳಿ ಯಲ್ಲಿ ವಾಸವಾಗಿರುತ್ತೇವೆ. ತಮ್ಮ ತಂದೆ ತಾನು ಮತ್ತು ನವೀನ್ ಎಂಬ ಿಬ್ಬರು ಗಂಡು ಮಕ್ಕಳಿರುತ್ತೇವೆ, ಈಗಿರುವಲ್ಲಿ ತಮ್ಮ ದೊಡ್ಡಪ್ಪ ಅಶ್ವಥನಾರಾಯಣ ರವರಿಗೆ 3 ಜನ  ಹೆಣ್ಣು ಮಕ್ಕಳಿದ್ದು, ಗಂಡು ಮಕ್ಕಳು ಇಲ್ಲದ ಕಾರಣ ವಿಷ್ಣುಪ್ರಸಾದ್  ಎಂಬ ಹುಡುಗನನ್ನು ಸಾಕಿಕೊಂಡಿದ್ದರು. ತಮ್ಮ ತಾತ ಮತ್ತು ಅಜ್ಜಿ ಅವರ ಮಕ್ಕಳಿಗೆ ಯಾವುದೇ ಆಸ್ತಿಯನ್ನು ಹಂಚಿಕೆ ಮಾಡಿರುವುದಿಲ್ಲ, ತಮ್ಮ ಅಜ್ಜಿ ಸರೋಜಮ್ಮ ರವರು ಮನೆಗಳನ್ನು ಬಾಡಿಗೆ & ಲೀಜ್ ಗೆ ಹಾಕಿದ್ದು ಈ ಹಣದ ವಿಚಾರದಲ್ಲಿ ತನ್ನ ತಂದೆ ಆಂಜಪ್ಪ ರವರಿಗೂ ಮತ್ತು ತಮ್ಮ ದೊಡ್ಡಪ್ಪ ಅಶ್ವಥನಾರಾಯಣ ರವರಿಗೂ ಆಗಾಗ ಗಲಾಟೆಗಳು ನಡೆಯುತ್ತಿತ್ತು. ಈ ದಿನ ದಿ: 06/04/2021 ರಂದು ಮದ್ಯಾಹ್ನ ತಮ್ಮ ದೊಡ್ಡಪ್ಪ ಅಶ್ವಥನಾರಾಯಣ ರವರು ತಮ್ಮ ಅಜ್ಜಿ ಸರೋಜಮ್ಮ ರವರನ್ನು ಬಾಡಿಗೆ ಹಣದ ವಿಚಾರದಲ್ಲಿ ಕೇಳಿರುತ್ತಾನೆಂತ ತಮ್ಮ ತಂದೆಗೆ ತಮ್ಮ ಅಜ್ಜಿ ಹೇಳಿರುತ್ತಾರೆ. ಆಗ ತಮ್ಮ ತಂದೆ ತಮಗೆ ಹೇಳಿದರು, ಚಿಂತಾಮಣಿಗೆ ಹೋಗಿ ಅಜ್ಜಿಯನ್ನು ಮಾತನಾಡಿಸಿ ಕೊಂಡು ಬರೋಣವೆಂತ ಹೇಳಿದರು. ಮತ್ತೆ ತಾನು ತನ್ನ ತಂದೆ ಆಂಜಪ್ಪ ತನ್ನ ತಮ್ಮ ನವೀನ್ ತಮ್ಮ ಚಿಕ್ಕಪ್ಪನಾದ ನಾಗರಾಜ ರವರು ಸೇರಿ ಚಿಂತಾಮಣಿಗೆ ಬಂದು ಸಂಜೆ ತಾವುಗಳು ತಮ್ಮ ದೊಡ್ಡಪ್ಪ ಅಶ್ವಥನಾರಾಯಣ ರವರನ್ನು ಕುರಿತು ಏಕೆ ಅಜ್ಜಿಯ ಮೇಲೆ ಗಲಾಟೆ ಮಾಡುತ್ತೀಯಾ ಎಂತ ಕೇಳಿರುತ್ತೇವೆ. ಇದನ್ನ ಮನಸ್ಸಿನಲ್ಲಿಟ್ಟುಕೊಂಡು ಈ ದಿನ ದಿ: 06/04/2021 ರಂದು ರಾತ್ರಿ ಸುಮಾರು 10:00 ಗಂಟೆಯಲ್ಲಿ ತಾವು ಅಜ್ಜಿಯ ಮನೆಯ ಬಳಿ ಇದ್ದಾಗ ಆಶ್ವಥನಾರಾಯಣ, ನಾಗಲಕ್ಷ್ಮೀ ಮಗ ವಿಷ್ಣು ಪ್ರಸಾದ್  ಮಗಳಾದ ಅಶ್ವಿನಿ ರವರು ಸಮಾನ ಉದ್ದೇಶದಿಂದ ಅಶ್ವಥನಾರಾಯಣ ರವರನ್ನು ಕುರಿತು ಏಕೆ ಅಜ್ಜಿಯ ಮೇಲೆ ಗಲಾಟೆ ಮಾಡುತ್ತೀಯಾ ಎಂತ ಜಗಳ ತೆಗೆದು ಬೆಂಗಳೂರಿನಿಂದ ಬಂದಿದ್ದರ ಬೋಳಿ ನನ್ನ ಮಕ್ಕಳಾ ಎಂತ ತಮ್ಮ ತಂದೆಯನ್ನು ಸಾಯಿಸುವ  ಉದ್ದೇಶದಿಂದ ತಮ್ಮ ತಂದೆಯನ್ನು ಸಾಯಿಸುವ ಉದ್ದೇಶದಿಂದ ಅಶ್ವಥನಾರಾಯಣ ಮನೆಯಲ್ಲಿದ್ದ ಮಚ್ಚನ್ನು ತೆಗೆದುಕೊಂಡು ಬಂದು ತನ್ನ ತಂದೆಯ ಕುತ್ತಿಗೆಗೆ ಹಾಕಿ ಗಾಯಪಡಿಸಿದನು, ತಾವುಗಳು ಅಡ್ಡಹೋ್ಗಿದ್ದಕ್ಕೆ  ವಿಷ್ಣು ಪ್ರಸಾದ್ , ನಾಗಲಕ್ಷ್ಮೀ , ಅಶ್ವಿನಿ ರವರು ತಮ್ಮನ್ನು ಕೆಟ್ಟ ಮಾತುಗಳಿಂದ ಬೈದು ನಿಮ್ಮನ್ನು  ಈ ದಿನ  ಸಾಉಇಸದೇ ಬಿಡುವುದಿಲ್ಲವೆಂತ ಪ್ರಾಣಬೆದರಿಕೆ ಹಾಕಿರುತ್ತಾರೆ, ಗಾಯಗೊಂಡ ತನ್ನ ತಂದೆಯನ್ನು ತಾವುಗಳು ಯಾವುದೋ ಒಂದು ವಾಹನದಲ್ಲಿ ಕರೆದುಕೊಂಡು ಕೋಲಾರ ಜಾಲಪ್ಪ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷೆ ಮಾಡುವಷ್ಟರಲ್ಲಿ ತಮ್ಮ ತಂದೆ ಮೃತಪಟ್ಟಿರುತ್ತಾರೆ , ಹಳೇ ದ್ವೇಷದಿಂದ ತಮ್ಮ ತಂದೆಯನ್ನು ಕೊಲೆ ಮಾಡಿರುವ ಮೇಲ್ಕಂಡ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

7. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.46/2021 ಕಲಂ. 11,4,8,9 KARNTAKA PREVENTION OF COW SLANGHTER & CATTLE PREVENTION ACT-1964, 192(A),177  INDIAN MOTOR VEHICLES ACT:-

          ದಿನಾಂಕ:07/04/2021 ರಂದು ಮದ್ಯಾಹ್ನ 3-30 ಗಂಟೆಯಲ್ಲಿ ಪಿರ್ಯಾದಿದಾರರಾದ ಮಿಥುನ್ ಬಿನ್ ಗೊಂವಿಂದರಾಜು ಕರೆಕಲ್ಲಹಳ್ಳಿ ಗ್ರಾಮ, ಗೌರಿಬಿದನೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಮಶವೆನೆಂದರೆ ದಿನಾಂಕ:07/04/2021 ರಂದು ಮದ್ಯಾಹ್ನ 2-00 ಗಂಟೆಯಲ್ಲಿ ತಾನು ಮತ್ತು ತನ್ನ ಸ್ನೇಹತರಾದ ಗಣೇಶ್, ನಿಖಿಲ್ ರವರ ಜೊತೆಯಲ್ಲಿ ಮನೆಗೆ ಹೋಗುತ್ತೀದ್ದಾಗ ಅಕ್ರಮವಾಗಿ ಕೆ.ಎ- 06 ಸಿ 9194 ನೊಂದಣಿ ಸಂಖ್ಯೆ ಟಾಟಾ ಏಸ್ ಗಾಡಿಯಲ್ಲಿ ಮನ್ಸೂರ್ ಬಾಷಾ ಬಿನ್ ಲೇಟ್ ಕರೀಮ್ ಸಾಬ್ ಎಂಬುವರಿಗೆ ಸೇರಿದ ಗಾಡಿಯಲ್ಲಿ ಅಕ್ರಮವಾಗಿ ಒಂದು ದೇಶಿಯ ತಳಿಯ ಹಸು ಮತ್ತು ಜಾರ್ಸಿ ಜಾತಿಗೆ ಸೇರಿದ ಮತ್ತೊಂದು ಹಸುವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಹಸುಗಳನ್ನು ಸಾಗಿಸಲು ಪರವಾನಿಗೆಯನ್ನು ವಿಚಾರಿಸಿದ್ದು ಯಾವುದು ಇಲ್ಲವೆಂದು ತಿಳಿಸಿರುತ್ತಾರೆ ಆರೊಪಿರ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

8. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.54/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:07/04/2021 ರಂದು ಘನ ನ್ಯಾಯಾಲಯದ ಪಿ,ಸಿ-89 ರವರು ಠಾಣಾ ಎನ್,ಸಿ,ಆರ್ ನಂ:75/2021 ರಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಅನುಮತಿ ಪಡೆದುಕೊಂಡು ಬಂದ ದೂರಿನ ಸಾರಾಂಶವೇನೆಂದರೆ, ದಿನಾಂಕ:06/04/2021 ರಂದು ಮದ್ಯಾಹ್ನ:3.00 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಠಾಣಾ 17 ನೇ ಬೀಟ್ ಸಿಬ್ಬಂದಿ ಸಿ,ಹೆಚ್,ಸಿ-28 ದಕ್ಷಿಣಾ ಮೂರ್ತಿ ರವರು ನನಗೆ ಪೋನ್ ಮಾಡಿ ಗುಡಿಬಂಡೆ ತಾಲೂಕು ಕೊಂಡರೆಡ್ಡಿಹಳ್ಳಿ ಗ್ರಾಮದಲ್ಲಿ ಗಸ್ತುನಲ್ಲಿರುವಾಗ ವೆಂಕಟೇಶ ಬಿನ್ ಆದಿನಾರಾಯಣಪ್ಪ ರವರ ಚಿಲ್ಲರೆ ಅಂಗಡಿಯ ಮುಂಬಾಗ ಸಾರ್ವಜನಿಕ ಸ್ಥಳವಾದಲ್ಲಿ ವೆಂಕಟೇಶ ರವರು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಠಾಣಾ ಸಿಬ್ಬಂದಿಯಾದ ಸಿ.ಹೆಚ್.ಸಿ-31 ಆನಂದ ರವರನ್ನು ಕರೆದುಕೊಂಡು ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಹೆಚ್,ಸಿ-43 ವೆಂಕಟಾ ಚಲ ರವರೊಂದಿಗೆ ಕೊಂಡರೆಡ್ಡಿಹಳ್ಳಿ ಗ್ರಾಮಕ್ಕೆ ಮದ್ಯಾಹ್ನ 03-30 ಗಂಟೆ ಸಮಯಕ್ಕೆ ಹೋಗಿ ಗ್ರಾಮದಲ್ಲಿದ್ದ ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಪಂಚರೊಂದಿಗೆ ವೆಂಕಟೇಶ ರವರ ಚಿಲ್ಲರೆ ಅಂಗಡಿಯ ಸ್ವಲ್ಪ ದೂರದ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ವೆಂಕಟೇಶ ರವರ ಚಿಲ್ಲರೆ ಅಂಗಡಿಯ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಮದ್ಯಾಹ್ನ: 03-45 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದು ಆತನ ಹೆಸರು & ವಿಳಾಸ ತಿಳಿಯಲಾಗಿ ವೆಂಕಟೇಶ ಬಿನ್ ಆದಿನಾರಾಯಣಪ್ಪ 30 ವರ್ಷ, ಆದಿ ದ್ರಾವಿಡ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರಿ ವಾಸ:ಕೊಂಡರೆಡ್ಡಿಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 10 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 02 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 900 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*10=351 /- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 04-00 ಗಂಟೆಯಿಂದ ಸಂಜೆ :04-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ;5-15 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ:05-30 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಲು ನೀಡಿದ  ದೂರು.

 

9. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.55/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 07/04/2021 ರಂದು ಮದ್ಯಾಹ್ನ 1-30 ಗಂಟೆಗೆ ಘನ ನ್ಯಾಯಾಲಯದ ಪಿಸಿ 89 ರವರು ಠಾಣಾ ಎನ್.ಸಿ.ಆರ್ 76/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲು ಘನ ನ್ಯಾಯಾಲಯದಲ್ಲಿ ಅನುಮತಿ ಪಡೆದದಿದ್ದನ್ನು ತಂದು ಹಾಜರುಪಡಿಸಿದ್ದನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ. ದಿನಾಂಕ:06/04/2021 ರಂದು ಪಿ,ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:06/04/2021 ರಂದು ಸಂಜೆ 5.30 ಗಂಟೆ ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಠಾಣಾ 15 ನೇ ಬೀಟ್ ಸಿಬ್ಬಂದಿ ಸಿ,ಹೆಚ್,ಸಿ-31 ಆನಂದ ರವರು ನನಗೆ ಪೋನ್ ಮಾಡಿ ಗುಡಿಬಂಡೆ ತಾಲೂಕು ದಪ್ಪರ್ತಿ ಗ್ರಾಮದಲ್ಲಿ ಗಸ್ತುನಲ್ಲಿರುವಾಗ ವೆಂಕಟೇಶಪ್ಪ ಬಿನ್ ವೆಂಕಟರಾಯಪ್ಪ ರವರ ಚಿಲ್ಲರೆ ಅಂಗಡಿಯ ಮುಂಬಾಗ ಸಾರ್ವಜನಿಕ ಸ್ಥಳವಾದಲ್ಲಿ ವೆಂಕಟೇಶಪ್ಪ ರವರು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-92 ರವಿ ಮತ್ತು ಸಿ,ಪಿ,ಸಿ 583 ಅವಿನಾಶ್ ರವರನ್ನು ಕರೆದುಕೊಂಡು ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಹೆಚ್,ಸಿ-43 ವೆಂಕಟಾ ಚಲ ರವರೊಂದಿಗೆ ದಪ್ಪರ್ತಿ ಗ್ರಾಮಕ್ಕೆ ಸಂಜೆ 5-45 ಗಂಟೆ ಸಮಯಕ್ಕೆ ಹೋಗಿ ಗ್ರಾಮದಲ್ಲಿದ್ದ ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಪಂಚರೊಂದಿಗೆ ವೆಂಕಟೇಶಪ್ಪ ರವರ ಚಿಲ್ಲರೆ ಅಂಗಡಿಯ ಸ್ವಲ್ಪ ದೂರದ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ವೆಂಕಟೇಶಪ್ಪ ರವರ ಚಿಲ್ಲರೆ ಅಂಗಡಿಯ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಸಂಜೆ 06-00 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದು ಆತನ ಹೆಸರು & ವಿಳಾಸ ತಿಳಿಯಲಾಗಿ ವೆಂಕಟೇಶಪ್ಪ ಬಿನ್ ವೆಂಕಟರಾಯಪ್ಪ 58 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರಿ ವಾಸ:ದಪ್ಪತರ್ಿ ಗ್ರಾಮ, ಗುಡಿಬಂಡೆ ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 11 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 02 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 990 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*11=386/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 06-00 ಗಂಟೆಯಿಂದ ಸಂಜೆ :06-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ;7-00 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ:07-15 ಗಂಟೆಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ದೂರಾಗಿರುತ್ತೆ.

 

10. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.34/2021 ಕಲಂ. 20(ಬಿ) NARCOTIC DRUGS & PSYCHOTROPIC SUBSTANCES ACT, 1985:-

          ದಿನಾಂಕ:06/04/2021 ರಂದು ಸಂಜೆ 4:30 ಗಂಟೆಗೆ ವೃತ್ತ ಪೊಲೀಸ್ ನಿರೀಕ್ಷಕರಾದ ಶ್ರೀ. ಪ್ರಶಾಂತ್ ರವರು 3 ಜನ ಅಸಾಮಿಗಳನ್ನು, ಸೀಲು ಮಾಡಿರುವ 2 ಗಾಂಜ ವಸ್ತುಗಳನ್ನು, ಒಂದು ದ್ವಿಚಕ್ರ ವಾಹನವನ್ನು, ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:06/04/2021 ರಂದು ಬೆಳಿಗ್ಗೆ ತಾನು ಕಛೇರಿಯಲ್ಲಿರುವಾಗ್ಗೆ ಬಂದ ಮಾಹಿತಿಯಂತೆ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿಯ ಸುತ್ತ-ಮುತ್ತ ಹಾಗೂ ಮಾಡಕುಹೊಸಹಳ್ಳಿ ಕಡೆಗಳಲ್ಲಿ ಯಾರೋ ಆಸಾಮಿಗಳು ದ್ವಿಚಕ್ರ ವಾಹನದಲ್ಲಿ ಸರ್ಕಾರದಿಂದ ನಿಷೇಧವಾಗಿರುವ ಮಾಧಕ ವಸ್ತುವಾದ ಗಾಂಜಾ ಸೊಪ್ಪನ್ನು ಸಾರ್ವಜನಿಕರಿಗೆ ಮಾರಾಟ ಮಾಡುವುದಕ್ಕೆ ಸಾಗಾಣಿಕೆ ಮಾಡುತ್ತಿರುತ್ತಾರೆಂದು ಮದ್ಯಾಹ್ನ 12-20 ಗಂಟೆಗೆ ಮಾಹಿತಿ ಬಂದಿದ್ದರ ಮೇರೆಗೆ ಸದರಿಯವರ ಮೇಲೆ ದಾಳಿ ಮಾಡುವುದಕ್ಕಾಗಿ ನಾನು ಸದರಿ ಮಾಹಿತಿಯನ್ನು ಕೂಡಲೇ ಮಾನ್ಯ ಚಿಕ್ಕಬಳ್ಳಾಪುರ ಉಪ-ವಿಭಾಗದ ಡಿ.ವೈ.ಎಸ್.ಪಿ ಸಾಹೇಬರಿಗೆ ಹಾಗೂ ಮಾನ್ಯ ಎಸ್,ಪಿ ಸಾಹೇಬರಿಗೆ ಇಲಾಖೆಯಿಂದ ಒದಗಿಸಿರುವ ದೂರವಾಣಿ ಸಂಖ್ಯೆಗಳಿಗೆ ಕರೆಮಾಡಿ ಸದರಿ ಮಾಹಿತಿಯನ್ನು ತಿಳಿಸಿ, ದಾಳಿ ಮಾಡಲು ಮೌಖಿಕವಾಗಿ ಅನುಮತಿಯನ್ನು ಪಡೆದುಕೊಂಡಿರುತ್ತೇನೆ, ನಂತರ ತಮ್ಮ ಕಛೇರಿಯ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ರವಿಕುಮಾರ್, ಹೆಚ್.ಸಿ-114, ವಿಜಯ್ ಕುಮಾರ್, ಪಿ.ಸಿ-245, ನಾಗೇಶ್, ಹೆಚ್.ಸಿ-229, ನಂದಿ ಗಿರಿಧಾಮ ಪೊಲೀಸ್ ಠಾಣೆಯ ಶೇಖರ್ ಹೆಚ್.ಸಿ-234, ಚಾಲಕನಾದ ಮಂಜುನಾಥ ಎಪಿಸಿ-124 ರವರೊಂದಿಗೆ ಮಾಹಿತಿಯಂತೆ ಮೊಡಕು ಹೊಸಹಳ್ಳಿಗೆ ಹೋಗಿರುತ್ತೇವೆ. ಮೊಡಕು ಹೊಸಹಳ್ಳಿಯಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ಮೇಲ್ಕಂಡ ವಿಚಾರ ತಿಳಿಸಿ ಅವರಿಗೆ ನೋಟೀಸ್ ಜಾರಿ ಮಾಡಿ ಮೊಡಕು ಹೊಸಹಳ್ಳಿ ಮದು ರವರ ಅಂಗಡಿಯಲ್ಲಿ ತೂಕದ ಡಿಜಿಟಲ್ ಸ್ಕೇಲನ್ನು ಪಡೆದು ಎಲ್ಲರೂ ಮೊಡಕು ಹೊಸಹಳ್ಳಿಯಿಂದ ಮುಂದೆ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಹೋಗಿ ವಾಹನಗಳನ್ನು ಮರೆಯಾಗಿ ನಿಲ್ಲಿಸಿ ರಸ್ತೆಯ ಪಕ್ಕದ ಗೋಕುಂಟೆ ಬಳಿ ಕಾಯುತ್ತಿದ್ದಾಗ ಮೂವರು ಆಸಾಮಿಗಳು ಒಂದೇ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದವನ್ನು ಮಾಹಿತಿಯಂತೆ ಅಡ್ಡಲಾಗಿ ತಡೆಯುವಷ್ಟರಲ್ಲಿ ಆಸಾಮಿಗಳು ದ್ವಿಚಕ್ರ ವಾಹನಬಿಟ್ಟು ಓಡಿಹೋಗುವುದಕ್ಕೆ ಪ್ರಯತ್ನ ಪಟ್ಟವರನ್ನು ಸಿಬ್ಬಂದಿಯವರು ಹಿಡಿದುಕೊಂಡಿದ್ದು, ಅವರನ್ನು ಸಿ.ಪಿ.ಐ ಸಾಹೇಬರವರ ಮುಂದೆ ಹಾಜರುಪಡಿಸಿದ್ದು, ಅವರ ಹೆಸರನ್ನು ಕೇಳಲಾಗಿ 1)ಅಭಿಶೇಖ್ ಬಿನ್ ಅಶೋಕ್ ಕುಮಾರ್, 27 ವರ್ಷ, ಬಲಜಿಗರು, ವ್ಯಾಪಾರ ನಂದಿ ಬೆಟ್ಟದ ಕ್ರಾಸ್ ನಲ್ಲಿರುವ ಖುಷಿ ಕೆಫೆ, ವಾಸ: ಕೆ.ಕೆ ಪೇಟೆ, ಶಿಡ್ಲಘಟ್ಟ ಟೌನ್, 2)ಕಿರಣ್ ಬಿನ್ ಲೇಟ್ ಮಂಜುನಾಥ, 28 ವರ್ಷ, ಬೆಸ್ತರು, ಕೂಲಿ ಕೆಲಸ, ವಾಸ: ಹೆಗ್ಗಡಿಹಳ್ಳಿ ಗ್ರಾಮ, ದೊಡ್ಡಬಳ್ಳಾಪುರ ತಾಲ್ಲೂಕು, 3)ಸುಧೀಶ್ ಬಿನ್ ಚಂದ್ರ, 21 ವರ್ಷ, ತೇಯರ್ ಜನಾಂಗ, 7ನೇ ಹೊಸಕೋಟೆ, ಕಂಬಿಬಾಣೆ, ಕೊಡಗು ಜಿಲ್ಲೆ, ರವರನ್ನು ಪ್ರಶ್ನಿಸಿದಾಗ ಮೇಲ್ಕಂಡವರಲ್ಲಿ ಅಭಿಷೇಕ್ ರವರು ತಾನು ಹಾಗೂ ಸುಲ್ತಾನ್ ಪೇಟೆಯ ನಾಗರಾಜ್ ರವರು ಶಿಡ್ಲಘಟ್ಟದ ಫೈರೋಜ್ ರವರಿಂದ ಗಾಂಜಾ ಸೊಪ್ಪನ್ನು ತರಿಸಿಕೊಂಡು ಅವುಗಳನ್ನು ಪಾಕೆಟ್ ಗಳಾಗಿ ಮಾಡಿ ಕಿರಣ್, ಸುದೀಶ್, ನಂದಿಯ ನಂದನ್, ಮತ್ತು ಮಧು ಹಾಗೂ ಕಾರಹಳ್ಳಿ ಕ್ರಾಸ್ ನಲ್ಲಿನ ಕಟಿಂಗ್ ಶಾಪ್ ಮನು ಎಂಬುವವರ ಮುಖಾಂತರ ಮಾರಾಟ ಮಾಡಿಸುತ್ತಿದ್ದುದ್ದಾಗಿ ತಿಳಿಸಿದ್ದು, ಫೈರೋಜ್ ಈಗ ಜೈಲಿನಲ್ಲಿದ್ದು, ಈ ಹಿಂದೆ 3-4 ತಿಂಗಳ ಹಿಂದೆ ಅವನಿಂದ ಖರೀಧಿ ಮಾಡಿದ್ದ ಗಾಂಜಾವನ್ನು ಮಾರಾಟ ಮಾಡುತ್ತಿದ್ದುದ್ದಾಗಿ ಒಪ್ಪಿಕೊಂಡಿದ್ದು, ಪಂಚರನ್ನು ಮತ್ತು ನಮ್ಮಗಳನ್ನು ಪರಸ್ಪರ ಚೆಕ್ ಮಾಡಿಕೊಂಡು ನಮ್ಮಗಳ ಬಳಿ ಯಾವುದೇ ವಸ್ತುಗಳು ಇಲ್ಲವೆಂದು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಆರೋಪಿ ಅಭಿಷೇಕ್ ರವರಿಗೆ ಗಾಂಜಾ ಸೊಪ್ಪನ್ನು ಹಾಜರುಪಡಿಸುವಂತೆ ತಿಳಿಸಿದಾಗ ಆತನು ನಾನು ಓಡಿಸಿಕೊಂಡು ಬರುತ್ತಿದ್ದ ನಂ: ಕೆ.ಎ-40-ಇಎಫ್-1113 ಹೋಂಡಾ ಡಿಯು ದ್ವಿಚಕ್ರ ವಾಹನದ ಸೀಟ್ ಕೆಳಗೆ ಬಿಳಿಯ ಬಟ್ಟೆಯ ಬ್ಯಾಗ್ ನಲ್ಲಿ ಇಟ್ಟಿದ್ದನ್ನು ಹಾಜರುಪಡಿಸಿದ್ದು, ಪರಿಶೀಲಿಸಿಲಾಗಿ ಗಾಂಜಾ ಸೊಪ್ಪು ಗಾಟು ವಾಸನೆಯನ್ನು ಹೊಂದಿರುವ ಹಾಗೂ ಒಣಗಿ ಹೋಗಿರುವ ಹೂ-ಎಲೆ ಗಳನ್ನು ಹೊಂದಿದ್ದು, ತೂಕ ಮಾಡಲಾಗಿ ಒಟ್ಟು ತೂಕ 500 ಗ್ರಾಮ್ ತೂಕವಿರುತ್ತದೆ. ಪಂಚರ ಸಮ್ಮುಖದಲ್ಲಿ ವಿಧಿ-ವಿಧಾನಗಳನ್ನು ಅನುಸರಿಸಿ ದ್ವಿಚಕ್ರ ವಾಹನ ಮತ್ತು ಗಾಂಜಾ ಸೊಪ್ಪನ್ನು ಪಂಚನಾಮೆ ಮುಖಾಂತರ ಅಮಾನತ್ತು ಪಡಿಸಿರುತ್ತೇನೆ. ಆದ್ದರಿಂದ ಆರೋಪಿಗಳಾದ 1) ಅಭಿಶೇಖ್, 2) ನಾಗರಾಜ್, 3) ಕಿರಣ್, 4) ಸುಧೀಶ್, 5) ನಂದನ್, 6) ಮದು, 7) ಮನು,  8) ಶಿಡ್ಲಘಟ್ಟದ ಫೈರೋಜ್ ರವರು ಗಾಂಜಾ ಸೊಪ್ಪನ್ನು ಅಕ್ರಮವಾಗಿ ಮಾರಾಟ ಮಾಡುವುದಕ್ಕಾಗಿ ಸಾಗಾಣಿಕೆ ಮಾಡುತಿದ್ದು, ಅವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂಖ್ಯೆ:34/2021 ಕಲಂ: 20(ಬಿ) ಎನ್.ಡಿ.ಪಿ.ಎಸ್ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

11. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.32/2021 ಕಲಂ. 448,324,504,506,34 ಐ.ಪಿ.ಸಿ:-

          ದಿನಾಂಕ:-05.04.2021 ರಂದು ಮಧ್ಯಾಹ್ನ 03.30 ಗಂಟೆಗೆ ಪಿರ್ಯಾದಿ ಕಲೀಲ್ ಉಲ್ಲಾ ಖಾನ್ ಬಿನ್ ಅಲ್ಲಿಖಾನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ  ಸಾರಾಂಶವೇನೆಂದರೆ, ನನಗೆ ಮತ್ತು ನನ್ನ ಅಣ್ಣನಾದ ವಜೀರ್ ಖಾನ್ ಬಿನ್ ಅಲ್ಲಿಖಾನ್ ರವರಿಗೆ ಶಿಡ್ಲಘಟ್ಟ ಗ್ರಾಮಕ್ಕೆ ಸೇರಿದ ಸರ್ವೆ ನಂ-43/2 ರ ಪೈಕಿ 0.01.04 ಗುಂಟೆ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದು. ಸದರಿ ನಿವೇಶನದ ಬಗ್ಗೆ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ಸಂ-R.A (ಶಿ) 24/-2020-21 ರಂತೆ ವಿಚಾರಣೆ ನಡೆಯುತ್ತಿದ್ದು. ಇನ್ನೂ ಇತ್ಯರ್ಥವಾಗಿರುವುದಿಲ್ಲ.  ಹೀಗಿರುವಾಗ ದಿನಾಂಕ-05.04.2021 ರಂದು ಬೆಳಿಗ್ಗೆ ಸುಮಾರು 11.45 ಗಂಟೆಯಲ್ಲಿ ವಜೀರ್ ಖಾನ್ ಮತ್ತು ಇವರ ಮಗ ಇಮ್ರಾನ್ ಖಾನ್ ರವರು  ನಮ್ಮ ಮನೆಯ ಜಾಗವನ್ನು ಕದೀರ್ (ಕತ್ತು) ಎಂಬುವವರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದು, ಆಗ ನಾವು ಕದೀರ್ ರವರಿಗೆ ಈ ಮನೆಯ ಬಗ್ಗೆ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದ್ದು ಮನೆ ಮಾರಾಟ ಮಾಡಲು ಬಿಡುವುದಿಲ್ಲ ಎಂದು ಮಾತನಾಡುತ್ತಿದ್ದಾಗ ನಮ್ಮ ಅಣ್ಣ ವಜೀರ್ ಖಾನ್ ಮತ್ತು ಇವರ ಮಗ ಇಮ್ರಾನ್ ಖಾನ್ ನನ್ನ ಮೇಲೆ ಜಗಳ ಮಾಡಿ ನನ್ನ ಮಗನೇ ನೀನು ಯಾರು ಹೇಳುವುದಕ್ಕೆ ಎಂದು ಬಾಯಿಗೆ ಬಂದಂತೆ ಕೆಟ್ಟ ಮಾತುಗಳಿಂದ ಬೈದು ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡು ನನ್ನ ಇನ್ನೊಬ್ಬ ಅಣ್ಣ ಮಹಬೂಬ್ ಖಾನ್ ರವರ ಮನೆಯಲ್ಲಿ ಹೋಗಿರುತ್ತೇನೆ. ಆದರೂ ನನ್ನ ಅಣ್ಣ ವಜೀರ್ ಖಾನ್ ಕಬ್ಬಿಣದ ಪೈಪ್ ತೆಗೆದುಕೊಂಡು ಬಂದು ಮಹಬೂಬ್ ಖಾನ್ ರವರ ಮನೆಗೆ ನುಗ್ಗಿ ನನ್ನ ಹೊಡೆಯಲು ಪ್ರಯತ್ನಿಸಿದಾಗ ನನ್ನನ್ನು ಬಿಡಿಸಲು ಅಡ್ಡ ಬಂದ ನನ್ನ ಅಣ್ಣನ ಮಕ್ಕಳಾದ ಆದೀಲ್ ಖಾನ್ ಮತ್ತು ಅಸೀಫ್ ಖಾನ್ ರವರಿಗೆ ಕಬ್ಬಿಣದ ಪೈಪ್ ನಿಂದ ಹೊಡೆದು ಮೂಗೇಟು ಮಾಡಿರುತ್ತಾರೆ ಹಾಗೂ ಮನೆ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ ಆಗ ಮಹಬೂಬ್ ಖಾನ್ ಮತ್ತು ಪಕ್ಕದ ಮನೆಯ ಬಾಬಾ ಬಿನ್ ಹುಸೇನ್ ಸಾಬ್ ರವರು ಬಂದು ಜಗಳ ಬಿಡಿಸಿರುತ್ತಾರೆ. ಈ ಗಲಾಟೆ ದೃಶ್ಯಗಳು ನಮ್ಮ ಅಣ್ಣ ಮಹಬೂಬ್ ಖಾನ್ ರವರ ಮನೆಯ ಸಿಸಿ ಟಿವಿ ಯಲ್ಲಿ ಸೆರೆಯಾಗಿರುತ್ತದೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 07-04-2021 07:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080