Feedback / Suggestions

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.57/2021 ಕಲಂ. 416,417,418,419,420,423,463,464,465,468,470,34 ಐ.ಪಿ.ಸಿ :-

     ದಿನಾಂಕ 06/03/2021 ರಂದು ಬೆಳಿಗ್ಗೆ 11-30 ಗಂಟೆಗೆ ನ್ಯಾಯಾಲಯದ ಪಿಸಿ-235 ರವರು ಘನ ನ್ಯಾಯಾಲಯದಿಂದ ಸಾದರು ಪಡಿಸಿದ ಪಿಸಿಆರ್-06/2021  ರ ದೂರನ್ನು ಠಾಣೆಯಲ್ಲಿ ಹಾಜರುಪಡಿಸಿದನ್ನು  ಸ್ವೀಕರಿಸಿದ್ದು, ಫಿರ್ಯಾಧುದಾರರಾದ ಶ್ರೀಮತಿ ಭಾರತಿ ಕೋಂ ಸೀನಪ್ಪ, 21 ನೇ ವಾರ್ಡ ಬಾಗೇಪಲ್ಲಿ ಪುರ ರವರು ಘನ ನ್ಯಾಯಾಲಯದಲ್ಲಿ ಹೂಡಿರುವ ದೂರಿನ ಸಾರಾಂಶವೆನಂದರೆ The addresses of the parties are as stated in the cause title for issue of notices summons and Notices from this Hon’ble court. The complainant may also represent through his counsel Sri. S L Devraja B.A. LLB Advocate # 81, 1 st floor, 2nd Cross, Chamarjpete, Chikkaballapur -562101. The complainant is the absolure owner of the property bearinge Municipal Khata and assessment No 2082/3, measuring East to west 40 feet and North-south 30 feet, situated at ward no 13 7th Block, Bagepalli Town Chikkaballapur District. The said property was acquired by the complainent under the registred sale deed,beering No 362/2004-2005 executed by one Govardhanachari. In pursuandce of the registered sale deed, the Khatha and assesement was Stood in her Name. She Mortgaged the above said property at the Canara Bank, Bagepalli and obtained loan on the same for Construction of a dwellinge House. The loan was cleared On 02-08-2012.  The acussed No 2 is the mother of the accused No. 1 They have no right, title interest or possession over the above said priperty. They are also not related with the complainant.

Such being the position in the first week of December 2020.  It is  learnt by the complainant that the accused No.-1 has created General Power Of Attorney pertaining to the above said priperty by inpersonating the complainant. On the color of the same, the accused No-1 has created a registred sale deed. Dated 31-01-2008. In the name of accused has no any kind of right, litle, interest or possession over the priprety regerred above and the documents created by them is non-est in the eye of law. The accused No.1 and 2 are collusive. Immediately after knowledge of the impresonation and creation of the deed pertaining to schedule property, she approached the Sub-registar and other authorities concerned, has obtained the cerfied copies. She shocked when she seen the create documents. The accused not only satisfied by credting the deeds described above, ared trying to credate third to create third party interest on the schedule property taking law into their own hands. By creating the aforesaid deed, the accused have cheated the complainant. The accused not only satisfied by creating the deeds described above are tryinge to create third party inrerest on the schedule property takinge law into their own hands. By creating the aforesaid deed, the accused have cheated the complainant. The illegal acts of the accused is punishable Under Section 416, 417, 418, 419, 420, 423, 463, 464, 465, 468, 470 r/w 34 Ipc. ರೀತ್ಯಾ ಸಾದರ ಪಡಿಸಿದ ದೂರಾಗಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.58/2021 ಕಲಂ. 143,144,147,323,504,506,34 ಐ.ಪಿ.ಸಿ :-

     ದಿನಾಂಕ:06/03/2021 ರಂದು ಸಂಜೆ 5:30 ಗಂಟೆಯಲ್ಲಿ ನ್ಯಾಯಾಲಯದ ಪೇದೆ ಪಿ.ಸಿ 235 ರವರು ಘನ ನ್ಯಾಯಾಲಯದಿಂದ ಪಿ.ಸಿ.ಆರ್ 11/2021 ಅನ್ನು ಹಾಜರುಪಡಿಸಿದ್ದನ್ನು ಸ್ವೀಕರಿಸಿದ್ದು, ಪಿರ್ಯಾದಿದಾರರಾದ ವಿ.ಕೃಷ್ಣಮೂರ್ತಿ ಬಿನ್ ಲೇಟ್ ಪೂಜಾರಿ ವೆಂಕಟರಾಯಪ್ಪ, 64 ವರ್ಷ, ಕೊತ್ತಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಘನ ನ್ಯಾಯಾಲಯದಿಂದ ಸಾದರುಪಡಿಸಿದ ದೂರಿನ ಸಾರಾಂಶವೇನೆಂದರೆ,  ಬಾಗೇಪಲ್ಲಿ ಸರ್ವೇ ನಂಬರ್ 201/9 ರ  0.08 ಗುಂಟೆ ಜಮೀನು ಪಿರ್ಯಾದಿ, ಆರೋಪಿಗಳು ಮತ್ತು ಇತರೆಯವರಿಗೆ ಸೇರಿದ ಅವಿಭಕ್ತ ಕುಟುಂಬಕ್ಕೆ ಸೇರಿದ ಆಸ್ತಿಯಾಗಿರುತ್ತದೆ. ಮೂಲತಃ ಈ ಜಮೀನು ಪೂಜಾರಿ ಅಪ್ಪಯ್ಯ ರವರಿಗೆ ಸೇರಿರುವ ಆಸ್ತಿಯಾಗಿರುತ್ತೆ. ಅವರ ಮರಣದ ನಂತರ  ಇವರ ಮೂವರೂ ಮಕ್ಕಳಾದ ಪಿರ್ಯಾದಿದಾರರ ತಂದೆ ಪೂಜಾರಿ ವೆಂಕಟರಾಯಪ್ಪ, 1ನೇ ಆರೋಪಿಯ ತಂದೆಯಾದ ಪೂಜಾರಿ ನಂಜಪ್ಪ, 2ನೇ ಆರೋಪಿಯ ತಂದೆಯಾದ ಆದೆಪ್ಪ ರವರುಗಳು ಈ ಆಸ್ತಿಯ ಉತ್ತರಾಧಿಕಾರಿಗಳಾಗಿರುತ್ತಾರೆ.  ಹೀಗಿರುವಾಗ್ಗೆ ಈ ಅವಿಭಕ್ತ ಕುಟುಂಬದವರಲ್ಲಿ ಮನಸ್ತಾಪಗಳು ಉಂಟಾಗಿದ್ದು, ಪಿರ್ಯಾದಿದಾರರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದು, ಆದ್ದರಿಂದ ಪಿರ್ಯಾದಿದಾರರು ಮೇಲ್ಕಂಡ ಜಮೀನಿನ ಬಾಗಕ್ಕಾಗಿ ಬಾಗೇಪಲ್ಲಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದು, ಘನ ನ್ಯಾಯಾಲಯದಲ್ಲಿ ಓ.ಎಸ್ ನಂ 328/2020 ರಂತೆ ನಡೆಯುತ್ತಿರುತ್ತದೆ. ಘನ ನ್ಯಾಯಾಲಯದ ಆದೇಶಗಳನ್ನು ಆರೋಪಿ1 ರವರು ಪಾಲಿಸದೆ ಜಮೀನಿನಲ್ಲಿ ಪಾಯವನ್ನು ಹಾಕಿ ಗೋಡೆಗಳನ್ನು ಕಟ್ಟುವ ಮಟ್ಟಕ್ಕೆ ಕಾಮಗಾರಿಯನ್ನು ನಡೆಸುತ್ತಿರುತ್ತಾರೆ. ದಿನಾಂಕ:23/02/2021 ರಂದು ಪಿರ್ಯಾದಿದಾರರು ಜಮೀನಿನ ಬಳಿ ಹೋಗಿ, ನ್ಯಾಯಾಲಯದಲ್ಲಿ ಓ.ಎಸ್ ನಡೆಯುತ್ತಿದ್ದರೂ, ವಿವಾದಿತ ಜಮೀನಿನಲ್ಲಿ  ಕಾಮಗಾರಿ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಆರೋಪಿಗಳು ಅಕ್ರಮ ಗುಂಪು ಕಟ್ಟಿಕೊಂಡು,  ಕೈಯ್ಯಲ್ಲಿ ಮಾರಕಾಯುಧಗಳನ್ನು ಹಿಡಿದುಕೊಂಡು ಪಿರ್ಯಾದಿಯ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು, ಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡ ಆರೋಪಿಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಇತ್ಯಾದಿಯಾಗಿ ಸಾದರುಪಡಿಸಿದ ದೂರಾಗಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.59/2021 ಕಲಂ. 160 ಐ.ಪಿ.ಸಿ :-

     ದಿನಾಂಕ 07/03/2021 ರಂದು ಬೆಳಗಿನ ಜಾವ 2-45 ಗಂಟೆಯಲ್ಲಿ ನಾರಾಯಣಸ್ವಾಮಿ ಎಎಸ್ಐ ರವರು ಆರೋಪಿಗಳೊಂದಿಗೆ ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ.ನಾರಾಯಣಸ್ವಾಮಿ ಎಎಸ್ಐ ಆದ ನಾನು ನೀಡುತ್ತಿರುವ ದೂರು ಏನೆಂದರೆ ದಿನಾಂಕ. 06/03/2021 ರಂದು ಬೆಳಿಗ್ಗೆ ಠಾಣಾಧಿಕಾರಿಗಳು ನನಗೆ ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ರಾತ್ರಿ 8-00 ಗಂಟೆಗೆ ಹಾಜರಾಗಿ, ರಾತ್ರಿ 10-00 ಗಂಟೆಯಲ್ಲಿ ಗಸ್ತು ಕರ್ತವ್ಯ ಪ್ರಾರಂಬಿಸಿ ಬಾಗೇಪಲ್ಲಿ ಟೌನ್ ನಲ್ಲಿ ಅಂಗಡಿಗಳನ್ನು ಮುಚ್ಚಿಸಿರುತ್ತೇನೆ. ರಾತ್ರಿ ಗಸ್ತು ಮುಂದುವರೆಯಿಸಿ ರಾತ್ರಿ 1-30 ಗಂಟೆಯಲ್ಲಿ ಎಸ್ ಬಿ ಎಂ ಸರ್ಕಲ್ ಬಳಿ ಇರುವಾಗ ಠಾಣೆಯಿಂದ ಪೋನ್ ಮಾಡಿ ಬಾಗೇಪಲ್ಲಿ ಟೌನ್ ಡಿ.ವಿ.ಜಿ ರಸ್ತೆಯಲ್ಲಿರುವ ಮಂಜುನಾಥ ಲಾಡ್ಜ್ ಮುಂಭಾಗ ರಸ್ತೆಯಲ್ಲಿ ಯಾರೋ ಗಲಾಟೆ ಮಾಡಿಕೊಳ್ಳುತ್ತಿರುವುದಾಗಿ  ತಿಳಿಸಿದ್ದು ತಕ್ಷಣ ನಾನು ಮತ್ತು ರಾತ್ರಿ ಗಸ್ತು ಕರ್ತವ್ಯ ಸಿಬ್ಬಂದಿಯವರಾದ ಹೆಚ್.ಸಿ-34, ರಾಮಚಂದ್ರಪ್ಪ, ಹೆಚ್.ಸಿ-56 ರಾಜು, ಪಿಸಿ-432 ಮಾಳಪ್ಪ ಮತ್ತು ಪಿಸಿ-192 ವಿನೋದ್ ಕುಮಾರ ರವರೊಂದಿಗೆ ಡಿ.ವಿ.ಜಿ ರಸ್ತೆಯಲ್ಲಿರುವ ಮಂಜುನಾಥ ಲಾಡ್ಜ್ ಮುಂಭಾಗದಲ್ಲಿ ಹೋದಾಗ ರಸ್ತೆಯಲ್ಲಿ ಯಾರೋ ಆಸಾಮಿಗಳು ಕುಡಿದು ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೋಬ್ಬರು ಬೈದಾಡಿಕೊಂಡು ಕೈ ಕೈ ಮಿಲಾಸುತ್ತಿದ್ದು, ಅವರಿಗೆ ಬುದ್ದಿವಾದ ಹೇಳಿದರೂ ಸಹ ಕೇಳದೇ ಅದೇ ರೀತಿಯಾಗಿ ಒಬ್ಬರಿಗೋಬ್ಬರು ಕೈ ಕೈ ಮಿಲಾಯಿಸಿಕೊಂಡು ಜಗಳ ಮಾಡಿಕೊಳ್ಳುತ್ತಿದ್ದವರ ಹೆಸರು ವಿಳಾಸ ಕೇಳಲಾಗಿ 1]  ವಿನೋದ್ ಕುಮಾರ ರೆಡ್ಡಿ ಬಿನ್ ಆದಿನಾರಾಯಣರೆಡ್ಡಿ, 25 ವರ್ಷ, ರೆಡ್ಡಿ ಜನಾಂಗ, ಆಸ್ಪತ್ರೆಯಲ್ಲಿ ಕೆಲಸ, ವಾಸ ಕನ್ನಿಶೆಟ್ಟಿಪಲ್ಲಿ ಗ್ರಾಮ, ಚಿಲಮತ್ತೂರು ಮಂಡಲಂ, ಹಿಂದೂಪುರ ತಾಲ್ಲೂಕು. ಅನಂತಪುರಂ ಜಿಲ್ಲೆ. 2] ವಿಜಯ್ ಕುಮಾರ್ ರೆಡ್ಡಿ ಬಿನ್ ನಾಗೇಶ್ವರರೆಡ್ಡಿ, 27 ವರ್ಷ, ವಕ್ಕಲಿಗರು, ಕೂಲಿಕೆಲಸ, ವೆಂಕಟಂಪಲ್ಲಿ ಗ್ರಾಮ, ಎಲ್ಲಾನ್ನೂರು ಮಂಡಲಂ, ತಾಡಪತ್ರಿ ತಾಲ್ಲೂಕು. ಅನಂತಪುರಂ ಜಿಲ್ಲೆ. 3] ಪಿ.ಸಂದೀಪ್ ಕುಮಾರ್ ಬಿನ್ ಸೂರ್ಯನಾರಾಯಣ, 23 ವರ್ಷ, ಗಾಂಡ್ಲಾ ಜನಾಂಗ, ಅಂಚೆ ಕಛೇರಿಯಲ್ಲಿ ಕೆಲಸ, ವಾಸ ಚಿರ್ಲಕೊಂಡಯಪಲ್ಲಿ ಗ್ರಾಮ, ತಾಡಿಮರ್ರಿ ಮಂಡಲಂ,ಧರ್ಮಾವರಂ ತಾಲ್ಲೂಕು, ಅನಂತಪುರ ಜಿಲ್ಲೆ.4] ನವೀನ್ ಕುಮಾರ ರೆಡ್ಡಿ ಬಿನ್ ತಿರಿಕಿರೆಡ್ಡಿ, 23 ವರ್ಷ, ರೆಡ್ಡಿ ಜನಾಂಗ, ವಿದ್ಯಾರ್ಥಿ, ವಾಸ ಕನ್ನಿಶೆಟ್ಟಿಪಲ್ಲಿ ಗ್ರಾಮ, ಚಿಲಮತ್ತೂರು ಮಂಡಲಂ, ಹಿಂದೂಪುರ ತಾಲ್ಲೂಕು. ಅನಂತಪುರಂ ಜಿಲ್ಲೆ. 5] ಅನಿಲ್ ಕುಮಾರ ರೆಡ್ಡಿ ಬಿನ್ ಗಂಗಿರೆಡ್ಡಿ, 23 ವರ್ಷ, ವಿದ್ಯಾರ್ಥಿ ವಾಸ ಕನ್ನಿಶೆಟ್ಟಿಪಲ್ಲಿ ಗ್ರಾಮ, ಚಿಲಮತ್ತೂರು ಮಂಡಲಂ, ಹಿಂದೂಪುರ ತಾಲ್ಲೂಕು. ಅನಂತಪುರಂ ಜಿಲ್ಲೆ. 6]  ಚಂದನೇಶ್ವರರೆಡ್ಡಿ ಬಿನ್ ವಿ.ಗೋಪಾಲ್ ರೆಡ್ಡಿ, 20 ವರ್ಷ, ರೆಡ್ಡಿ ಜನಾಂಗ, ವಿದ್ಯಾರ್ಥಿ ವಾಸ ಸಿಂಹಾದ್ರಿಪುರಂ ಗ್ರಾಮ, ನಂ 4/07, ಪುಲಿವೆಂದಲಾ ಟೌನ್,  ಕಡಪ ಜಿಲ್ಲಾ, 7] ಮಾರುತಿ ಬಿನ್ ರಾಮಾಂಜನೇಯಲು , 23 ವರ್ಷ, ನಾಯಕ ಜನಾಂಗ, ಕೋರಿಯರ್ ಕೆಲಸ, ವಾಸ ನಂ 19/901, ರಾಯ್ ನಗರ್, ಅನಂತಪುರ ಟೌನ್. 8] ಧರ್ಮಾತೇಜರೆಡ್ಡಿ ಬಿನ್ ಶಿವಾರೆಡ್ಡಿ, 22 ವರ್ಷ, ರೆಡ್ಡಿ ಜನಾಂಗ, ವ್ಯವಸಾಯ, # 2-42, ಜಾಲಿ ಮೆನ್ಸ್ ವೇರ್ ಮೇಲೆ, ಕಮಲನಗರ, ಡಿಇಓ ಆಫೀಸ್ ಹತ್ತಿರ, ಅನಂತಪುರ ಟೌನ್. ಎಂದು ತಿಳಿದು ಬಂದಿರುತ್ತದೆ. ಮೇಲ್ಕಂಡವರನ್ನು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿ  ಹಾಜರು ಪಡಿಸಿರುತ್ತೇನೆ.  ಕುಡಿದು ಸಾರ್ವಜನಿಕ ರಸ್ತೆಯಲ್ಲಿ ಕೈ ಕೈ ಮಿಲಾಸಿಕೊಂಡು ಗಲಾಟೆ ಮಾಡಿಕೊಳ್ಳುತ್ತಿದ್ದ  ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ  ನೀಡಿದ ದೂರಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.95/2021 ಕಲಂ. 143,147,148,323,324,447,427,504,506,149  ಐ.ಪಿ.ಸಿ & 3(1)(f),3(1)(r),3(1)(s) The SC & ST (Prevention of Atrocities) Amendment Act 2015  :-

     ದಿನಾಂಕ: 06/03/2021 ರಂದು ಬೆಳಿಗ್ಗೆ 10.00 ಗಂಟೆಗೆ ಶ್ರೀರಾಮಪ್ಪ ಬಿನ್ ಲೇಟ್ ವೆಂಕಟರಾಯಪ್ಪ, 40 ವರ್ಷ, ಆದಿಕರ್ನಾಟಕ ಜನಾಂಗ, ಗಾರೆ ಕೆಲಸ, ಬುಕ್ಕನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು 2017-ನೇ ಸಾಲಿನಲ್ಲಿ ತಮ್ಮ ಗ್ರಾಮಕ್ಕೆ ಸೇರಿದ ಗ್ರಾಮ ಪಂಚಾಯ್ತಿ ಹೌಸ್ ಲಿಸ್ಟ್ ನಂಬರ್-88 ರಲ್ಲಿ ಪೂರ್ವ-ಪಶ್ಚಿಮ 25 ಅಡಿಗಳು(7.60 ಮೀಟರ್) ಮತ್ತು ಉತ್ತರ-ದಕ್ಷಿಣ 22 ಅಡಿಗಳ(7.00 ಮೀಟರ್) ಖಾಲಿ ನಿವೇಶವನ್ನು ಅದರ ಮಾಲೀಕರಾದ ಚಿಂತಾಮಣಿ ಟೌನ್ ಶಾಂತಿ ನಗರದ ವಾಸಿ ಸೀನಪ್ಪ @ ಶ್ರೀನಿವಾಸ್ ಬಿನ್ ಲೇಟ್ ಮುನಿವೆಂಕಟಪ್ಪ ರವರಿಂದ ಆಗಿನ ಸರ್ಕಾರಿ ಚಲಾವಣೆಯ ಮೌಲ್ಯ ಒಟ್ಟು 44,000/- ರೂಗಳಿಗೆ ಖರೀದಿಸಿರುತ್ತೇನೆ. ಅದರಂತೆ ಸೀನಪ್ಪ ರವರು ಸದರಿ ನಿವೇಶನವನ್ನು ದಿನಾಂಕ:15/05/2017 ರಂದು ತನ್ನ ಹೆಸರಿಗೆ ಕ್ರಯ ಮಾಡಿಕೊಟ್ಟಿರುತ್ತಾರೆ. ಪ್ರಸ್ತುತ ಸದರಿ ನಿವೇಶನಕ್ಕೆ ತಾನೇ ವಾರಸುದಾರನಾಗಿರುತ್ತೇನೆ. ತಾನು 2017-ನೇ ಸಾಲಿನಲ್ಲಿ ಮೇಲ್ಕಂಡ ನಿವೇಶನದಲ್ಲಿ ಮನೆ ಕಟ್ಟಲೆಂದು ಕಾಗತಿ ಗ್ರಾಮ ಪಂಚಾಯ್ತಿ ಕಛೇರಿಯ ಪಿ.ಡಿ.ಓ ರವರಲ್ಲಿ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸಿದ್ದು, ಅದರಂತೆ ತನಗೆ ದಿನಾಂಕ:04/07/2017 ರಂದು ಮನೆ ಕಟ್ಟಲು ತಮ್ಮ ಪಂಚಾಯ್ತಿಯಿಂದ ಲೈಸೆನ್ಸ್ ಅನ್ನು ಸಹ ನೀಡಿರುತ್ತಾರೆ. ನಂತರ ತಾನು ಮೇಲ್ಕಂಡ ತಮ್ಮ ಬಾಬತ್ತು ಖಾಲಿ ನಿವೇಶನದಲ್ಲಿ ಮನೆ ಕಟ್ಟಲೆಂದು ಪಾಯ ಹಾಕಲು ಹೋದಾಗಲೆಲ್ಲಾ ತಮ್ಮ ಗ್ರಾಮದ ವಾಸಿಗಳಾದ ಬಲಜಿಗ ಜನಾಂಗದ ರಾಮಪ್ಪ @ ರಾಮರೆಡ್ಡಿ ಮತ್ತು ಅವರ ಕುಟುಂಬದವರು ವಿನಾ ಕಾರಣ ತಮಗೆ ತೊಂದರೆಯನ್ನು ನೀಡುತ್ತಿದ್ದರು. ನಂತರ ತಾವು ಈ ನಿವೇಶನದ ವಿಚಾರವಾಗಿ ಚಿಂತಾಮಣಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದು, ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ತಮ್ಮ ಪರವಾಗಿ ತೀರ್ಪನ್ನು ನೀಡಿರುತ್ತೆ. ನಂತರ ತನಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ಚಿಕಿತ್ಸೆ ಪಡೆದು ಓಡಾಡಲು ಸಾಧ್ಯವಾಗದ ಕಾರಣ ತಮ್ಮ ಮನೆಯಲ್ಲಿಯೇ ವಿಶ್ರಾಂತಿಯನ್ನು ಪಡೆದುಕೊಂಡಿದ್ದು, ತಮ್ಮ ನಿವೇಶನದಲ್ಲಿ ಯಾವುದೇ ಕೆಲಸ ಕಾರ್ಯವನ್ನು ಮಾಡಲು ಹೋಗಿರುವುದಿಲ್ಲ. ನಂತರ ದಿನಾಂಕ:27/02/2021 ರಂದು ಬೆಳಿಗ್ಗೆ ಸುಮಾರು 08-30 ಗಂಟೆಯ ಸಮಯದಲ್ಲಿ ತಾನು, ತನ್ನ ಪತ್ನಿ ಶ್ರೀಮತಿ ಭಾಗ್ಯಮ್ಮ ಮತ್ತು ತನ್ನ ಭಾಮೈದ ಅನೀಲ್ ಎಂಬುವರು ಮೇಲ್ಕಂಡ ತಮ್ಮ ನಿವೇಶನದಲ್ಲಿ ಮನೆ ಕಟ್ಟಲೆಂದು ಪಾಯ ಹಾಕಲು ಹೋಗಿದ್ದಾಗ, ತಮ್ಮ ಗ್ರಾಮದ ವಾಸಿಗಳಾದ ಬಲಜಿಗ ಜನಾಂಗಕ್ಕೆ ಸೇರಿದ ರಾಮಪ್ಪ @ ರಾಮರೆಡ್ಡಿ ಬಿನ್ ಲೇಟ್ ಸುಬ್ಬಣ್ಣ, ಅವರ ಮಗ ಪವನ್ ಕುಮಾರ್, ಚಿಕ್ಕಪ್ಪ ಸೂರಪ್ಪ ಬಿನ್ ಲೇಟ್ ವೆಂಕಟರವಣಪ್ಪ ಮತ್ತು ಶ್ರೀಕಾಂತ್ ಬಿನ್ ಸೂರಪ್ಪ ರವರುಗಳು ತಮ್ಮ ನಿವೇಶನದ ಬಳಿಗೆ ಬಂದು ಯಾವುದೇ ಕೆಲಸ ಕಾರ್ಯಗಳನ್ನು ಮಾಡದಂತೆ ತಮಗೆ ತೊಂದರೆಯನ್ನು ನೀಡಿದ ವಿಚಾರವಾಗಿ ತಾನು ಅದೇ ದಿನ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ಕಂಪ್ಲೆಂಟ್ ನೀಡಿದ್ದು, ಠಾಣಾ ಎನ್.ಸಿ.ಆರ್ ನಂ-96/2021 ರಂತೆ ಪ್ರಕರಣ ದಾಖಲಿಸಿ, ರಾಮಪ್ಪ @ ರಾಮರೆಡ್ಡಿ ಮತ್ತು ಅವರ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಿ, ತಮ್ಮ ನಿವೇಶನದ ತಂಟೆ-ತಕರಾರಿಗೆ ಹಾಗೂ ತಮ್ಮ ತಂಟೆ-ತಕರಾರಿಗೆ ಹೋಗದಂತೆ ಬಂದೋಬಸ್ತ್ ಮಾಡಿ ಸೂಕ್ತ ತಿಳುವಳಿಕೆಗಳನ್ನು ನೀಡಿ ಕಳುಹಿಸಿರುತ್ತಾರೆ. ನಂತರ ತಾವು ಮೇಲ್ಕಂಡ ತಮ್ಮ ಖಾಲಿ ನಿವೇಶನದಲ್ಲಿ ಚಿಕ್ಕದಾಗಿ ಹ್ಯಾಲೋ ಬ್ರಿಕ್ಸ್ ಇಟ್ಟಿಗೆಗಳ ಒಂದು ಮನೆ ಗೋಡೆಯನ್ನು ನಿರ್ಮಿಸಿ, ಸದರಿ ಮನೆಗೆ ಜಂಕ್ ಶೀಟುಗಳನ್ನು ಮೇಲ್ಛಾವಣಿಯಾಗಿ ಅಳವಡಿಸಿಕೊಂಡು ಸದರಿ ಮನೆಯಲ್ಲಿ ದಿನಾಂಕ:03/03/2021 ರಿಂದ ತಾವು ಮನೆಗೆ ಪೂಜೆ ಮಾಡಿಸಿ, ಸದರಿ ಮನೆಯಲ್ಲಿ ಸಂಸಾರ ಇರುತ್ತೇವೆ. ಅಲ್ಲದೆ ಇದೇ ನಿವೇಶನದಲ್ಲಿ ಹೊಸದಾಗಿ ನಿರ್ಮಿಸಿರುವ ಮನೆಯ ಪಕ್ಕದಲ್ಲಿ ತಾವು ಒಂದು ಚಿಕ್ಕ ಪೆಟ್ಟಿಗೆ ಅಂಗಡಿಯನ್ನು ಸಹ ಇಟ್ಟಿರುತ್ತೇವೆ. ಹೀಗಿರುವಾಗ ಈ ದಿನ ದಿನಾಂಕ:06/03/2021 ರಂದು ಮುಂಜಾನೆ 02-00 ಗಂಟೆಯ ಸಮಯದಲ್ಲಿ ತಾನು ಮತ್ತು ತನ್ನ ಪತ್ನಿ ಶ್ರೀಮತಿ ಭಾಗ್ಯಮ್ಮ ತಮ್ಮ ಹಳೆಯ ಮನೆಯಲ್ಲಿ ಮಲಗಿದ್ದಾಗ, ಅದೇ ಸಮಯಕ್ಕೆ ತಮ್ಮ ಮನೆಯ ಪಕ್ಕದಲ್ಲಿರುವ ತಮ್ಮ ಹೊಸಮನೆಯ ಕಟ್ಟಡದ ಕಡೆಯಿಂದ ತನ್ನ ತಂಗಿ ಶಾಂತಮ್ಮಳ ಕಿರುಚಾಟದ ಶಬ್ದವನ್ನು ಕೇಳಿ ತಾನು ಮತ್ತು ತನ್ನ ಪತ್ನಿ ಎದ್ದು ಮನೆಯಿಂದ ಹೊರಗೆ ಬಂದು ನೋಡಲಾಗಿ, ತಮ್ಮ ಖಾಲಿ ನಿವೇಶನದಲ್ಲಿ ತಾವು ಹೊಸದಾಗಿ ನಿರ್ಮಿಸಿರುವ ಮನೆಯ ಬಳಿ ತನ್ನ ತಂಗಿ ಶಾಂತಮ್ಮ ಮತ್ತು ಆಕೆಯ ಗಂಡ ತಿರುಮಳಪ್ಪ ಇದ್ದು, ಜೋರಾಗಿ ಕಿರುಚಾಡುತ್ತಿದ್ದರು. ಅಲ್ಲಿ ತಮ್ಮ ಗ್ರಾಮದ ವಾಸಿಗಳಾದ ಬಲಜಿಗ ಜನಾಂಗಕ್ಕೆ ಮೇಲ್ಕಂಡ ರಾಮಪ್ಪ @ ರಾಮರೆಡ್ಡಿ ಬಿನ್ ಲೇಟ್ ಸುಬ್ಬಣ್ಣ, ಅವರ ಮಗ ಪವನ್ ಕುಮಾರ್, ಚಿಕ್ಕಪ್ಪ ಸೂರಪ್ಪ ಬಿನ್ ಲೇಟ್ ವೆಂಕಟರವಣಪ್ಪ, ಸೂರಪ್ಪನ ಮಗ ಶ್ರೀಕಾಂತ್, ವಕ್ಕಲಿಗ ಜನಾಂಗದ ವೆಂಕಟರಾಮರೆಡ್ಡಿ ಬಿನ್ ಬಿ.ಆರ್.ವೆಂಕಟೇಶಪ್ಪ ಮತು ಅವರ ತಮ್ಮ ದೇವರಾಜ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ತಮ್ಮ ಮೇಲ್ಕಂಡ ಹೊಸಮನೆ ಕಟ್ಟಡದ ಖಾಲಿ ನಿವೇಶನದೊಳಗೆ ಅಕ್ರಮ ಪ್ರವೇಶ ಮಾಡಿದ್ದು, ಕೈಗಳಲ್ಲಿದ್ದ ಕಬ್ಬಿಣದ ಗಡಾರೆ ಮತ್ತು ಇತರೆ ಆಯುಧಗಳಿಂದ ತಮ್ಮ ಮನೆಯ ಕಟ್ಟಡವನ್ನು ಕೆಳಗೆ ತಳ್ಳುತ್ತಿದ್ದರು. ಇದನ್ನು ಕೇಳಲು ಅಡ್ಡ ಹೋದ ತನ್ನ ತಂಗಿ ಶಾಂತಮ್ಮ ಮತ್ತು ಆಕೆಯ ಗಂಡ ತಿರುಮಳಪ್ಪನಿಗೆ ಮೇಲ್ಕಂಡವರ ಪೈಕಿ ರಾಮಪ್ಪ @ ರಾಮರೆಡ್ಡಿ, ಶ್ರೀಕಾಂತ್, ಸೂರಪ್ಪ ರವರುಗಳು ಅವರ ಕೈಗಳಲ್ಲಿದ್ದ ಗಡಾರೆ ಮತ್ತು ಇತರೆ ಆಯುಧಗಳಿಂದ ಹೊಡೆದು ಹಲ್ಲೆ ಮಾಡಿ ರಕ್ತಗಾಯಪಡಿಸಿ, ತನ್ನ ತಂಗಿ ಮತ್ತು ಆಕೆಯ ಗಂಡನನ್ನು ಕುರಿತು ನಿಮ್ಮಮ್ಮನ್ ಮಾದಿಗ ನನ್ನ ಮಕ್ಕಳೇ ನಿಮ್ಮದು ಊರಿನಲ್ಲಿ ಜಾಸ್ತಿಯಾಗಿದೆ, ನೀವು ಮಾದಿಗ ನನ್ನ ಮಕ್ಕಳು ಇಲ್ಲಿರಲು ಬಿಡುವುದಿಲ್ಲ, ನಿಮ್ಮನ್ನು ಮುಗಿಸದೇ ಬಿಡುವುದಿಲ್ಲಎಂದು ಜಾತಿ ಬಗ್ಗೆ ಬೈದು, ಜಾತಿ ನಿಂದನೆ ಮಾಡಿರುತ್ತಾರೆ. ಆಗ ಜಗಳ ಬಿಡಿಸಲು ಅಡ್ಡ ಹೋದ ತನಗೆ ಮತ್ತು ತನ್ನ ಪತ್ನಿ ಶ್ರೀಮತಿ ಭಾಗ್ಯಮ್ಮಳಿಗೆ ಪವನ್ ಕುಮಾರ್, ದೇವರಾಜ ಮತ್ತು ವೆಂಕಟರಾಮರೆಡ್ಡಿ ರವರುಗಳು ಸಹ ಅವಾಚ್ಯ ಶಬ್ದಗಳಿಂದ ಜಾತಿ ಬಗ್ಗೆ ಬೈದು ಜಾತಿ ನಿಂದನೆ ಮಾಡಿ, ಕೈಗಳಿಂದ ಮೈಮೇಲೆ ಹಲ್ಲೆ ಮಾಡಿ ನೋವುಂಟು ಮಾಡಿರುತ್ತಾರೆ. ನಂತರ ಮೇಲ್ಕಂಡವರುಗಳು ತಮ್ಮ ನಿವೇಶನದಲ್ಲಿ ತಾವು ಹೊಸದಾಗಿ ನಿರ್ಮಿಸಿರುವ ಮನೆಯ ಕಟ್ಟಡದ ಗೋಡೆಗಳನ್ನು ಕೆಳಕ್ಕೆ ತಳ್ಳಿ, ಮೇಲ್ಛಾವಣಿಗೆ ಅಳವಡಿಸಿದ್ದ ಜಂಕ್ ಶೀಟುಗಳನ್ನು ಜಖಂಗೊಳಿಸಿರುತ್ತಾರೆ. ಅಲ್ಲದೆ ಈ ಮನೆಯ ಕಟ್ಟಡದ ಪಕ್ಕದಲ್ಲಿದ್ದ ಚಿಲ್ಲರೆ ಅಂಗಡಿಯ ಪೆಟ್ಟಿಗೆಯನ್ನು ಸಹ ಕೆಳಕ್ಕೆ ತಳ್ಳಿದ್ದು, ಇದರಿಂದ ನನಗೆ ಸುಮಾರು 2 ಲಕ್ಷ ರೂಗಳ ನಷ್ಟ ಉಂಟಾಗಿರುತ್ತೆ. ಅಷ್ಟರಲ್ಲಿ ತಮ್ಮ ಗ್ರಾಮದ ವಾಸಿಗಳಾದ ಬೋವಿ ಜನಾಂಗಕ್ಕೆ ಸೇರಿದ ನಾಗರಾಜ ಬಿನ್ ಬಾಲಪ್ಪ, ನಮ್ಮ ಜನಾಂಗದ ದ್ಯಾವಪ್ಪ ಬಿನ್ ಲೇಟ್ ಪೂಜಪ್ಪ ಮತ್ತು ಮಂಜುನಾಥ ಬಿನ್ ಬ್ಯಾಟರಾಯಪ್ಪ ರವರುಗಳು ಅಡ್ಡ ಬಂದು ಜಗಳ ಬಿಡಿಸಿ, ಮೇಲ್ಕಂಡವರಿಗೆ ಬುದ್ದಿವಾದ ಹೇಳಿ ಅಲ್ಲಿಂದ ಕಳುಹಿಸಿಕೊಟ್ಟು, ತಮ್ಮನ್ನು ಉಪಚರಿಸಿರುತ್ತಾರೆ. ಆದ್ದರಿಂದ ಮೇಲ್ಕಂಡ ರಾಮಪ್ಪ @ ರಾಮರೆಡ್ಡಿ, ಪವನ್ ಕುಮಾರ್, ಸೂರಪ್ಪ, ಶ್ರೀಕಾಂತ್, ದೇವರಾಜ ಮತ್ತು ವೆಂಕಟರಾಮರೆಡ್ಡಿ ರವರುಗಳ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.96/2021 ಕಲಂ. 143,147,447,504,506,149 ಐ.ಪಿ.ಸಿ:-

     ದಿನಾಂಕ: 06/03/2021 ರಂದು ರಾತ್ರಿ 08.00 ಗಂಟೆಗೆ ರಾಮಪ್ಪ @ ರಾಮರೆಡ್ಡಿ ಬಿನ್ ಲೇಟ್ ಸುಬ್ಬಣ್ಣ, 42 ವರ್ಷ, ಬಲಜಿಗರು, ಜಿರಾಯ್ತಿ, ಬುಕ್ಕನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 16/05/2001 ರಲ್ಲಿ ಚಿಂತಾಮಣಿ ಸಬ್ ರಿಜಿಸ್ಟರ್ ರವರ ಕಛೇರಿಯಲ್ಲಿ 1ನೇ ಪುಸ್ತಕದ 223-285ನೇ ಸಂಪುಟಗಳಲ್ಲಿ ಎನ್.ಆರ್.1056/2001-02 ರಂತೆ ಚಂದ್ರಮ್ಮ ಕೋಂ ಸುಂದರ್ ಸಿಂಗ್ ರವರಿಂದ ತನ್ನ ಹೆಸರಿಗೆ ಮೇಲ್ಕಂಡ ಪತ್ರದ ರೀತ್ಯಾ ಕ್ರಯವಾಗಿರುವ ಸೈಟಿನಲ್ಲಿ ಈ ದಿನ ದಿನಾಂಕ: 06/03/2021 ರಂದು ಮುಂಜಾನೆ 02.00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಶ್ರೀರಾಮಪ್ಪ ಬಿನ್ ಲೇಟ್ ವೆಂಟರಾಯಪ್ಪ, ಭಾಗ್ಯಮ್ಮ ಕೋಂ ಶ್ರೀರಾಮಪ್ಪ, ಕಲ್ಯಾಣ್ ಬಿನ್ ಶ್ರೀರಾಮಪ್ಪ, ಶ್ರೀಕಾಂತ್ ಬಿನ್ ಶ್ರೀರಾಮಪ್ಪ, ನರಸಿಂಹ ಬಿನ್ ಲೇಟ್ ವೆಂಕಟರಾಯಪ್ಪ, ನಾಗೇಶ್ ಬಿನ್ ನರಸಿಂಹ, ತಿರುಮಲಪ್ಪ, ಅನಿಲ್ ಬಿನ್ ತಿರುಮಲಪ್ಪ, ಗೋಪಾಲ್ ಬಿನ್ ತಿರುಮಲಪ್ಪ, ಹರಿ ಎಂಬುವವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು, ಮೇಲ್ಕಂಡ ಸೈಟಿನಲ್ಲಿ ಕಬ್ಬಿಣದ ಪೆಟ್ಟಿಗೆಯನ್ನು ಇಡುತ್ತಿದ್ದು, ಈ ಬಗ್ಗೆ ತಾವು ಹೋಗಿ ನಮಗೆ ನ್ಯಾಯಾಲಯದಲ್ಲಿ ಸ್ಟೇ ಆಗಿದೆ ಎಂದು ಹೇಳಿದರೂ ಸಹ ತನ್ನ ಮೇಲೆ ಗಲಾಟೆ ಮಾಡಿ, ಅವಾಚ್ಯಶಬ್ದಗಳಿಂದ ಬೈದು, ಪ್ರಾಣಬೆದರಿಕೆಯನ್ನು ಹಾಕಿ ತೊಂದರೆಯನ್ನು ನೀಡಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.97/2021 ಕಲಂ.279,304(ಎ)  ಐ.ಪಿ.ಸಿ:-

     ದಿನಾಂಕ 07-03-2021 ರಂದು ಬೆಳಗ್ಗೆ 7-30 ಗಂಟೆಗೆ ಗೋಪಾಲ ಬಿನ್ ಲೇಟ್ ನಾರಾಯಣಪ್ಪ, 40 ವರ್ಷ, ವಕ್ಕಲಿಗರು, ವ್ಯವಸಾಯ, ವಾಸ: ವಾಸುದೇವನಹಳ್ಳಿ ಗ್ರಾಮ, ದೊಡ್ಡಬಳ್ಳಾಪುರ ತಾಲ್ಲೂಕು ಬೆಂಗಳೂರು ಗ್ರಾ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ, ತನ್ನ ತಂದೆ ನಾರಾಯಣಪ್ಪ ಮತ್ತು ತಾಯಿ ಮುನಿನಂಜಮ್ಮ ರವರಿಗೆ 4 ಜನ ಮಕ್ಕಳು, 1ನೇತಾನು, 2ನೆ ಮಂಜುಳ, 3ನೇ ನಾಗವೇಣಿ, 4ನೇ ನಾಗೇಶ ಆಗಿರುತ್ತೇವೆ. ನಾಗೇಶ ನಿಗೆ ಇನ್ನು ಮದುವೆ ಇಲ್ಲ, ಈತನು ಅಡುಗೆ ಕೆಲಸ ಮಾಡಿಕೊಂಡಿದ್ದನು, ನಿನ್ನೆಯ ದಿನ ದಿನಾಂಕ 06-03-2021 ರಂದು ಮದ್ಯಾಹ್ನ ಸಮಯದಲ್ಲಿ ತನ್ನ ತಮ್ಮ ನಾಗೇಶ ಮತ್ತು ಆತನ ಸ್ನೇಹಿತ ರಘುನಾಥಪುರ ನಾರಾಯಣ ಎಂಬುವರು ಚಿಂತಾಮಣಿಯಲ್ಲಿ ಅಡುಗೆ ಮಾಡುವ ಕೆಲಸ ಇದೆಯೆಂತ ಆತನ ಸ್ನೇಹಿತನ ಬಾಬತ್ತು ಕೆ.ಎ-43-ಹೆಚ್-632 ವಿಕ್ಟರ್ ದ್ವಿಚಕ್ರ ವಾಹನದಲ್ಲಿ ಹೋದರು, ನಂತರ ಅದೇ ದಿನಾಂಕ: 06-03-2021 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕು ಚಿನ್ನಸಂದ್ರ ಗ್ರಾಮದ ಅಕ್ರಂ ಎಂಬುವರು ತನ್ನ ತಮ್ಮನ ಮೊಬೈಲ್ ಪೋನ್ನಿಂದ ಪೋನ್ ಮಾಡಿ ಆ ದಿನ ರಾತ್ರಿ 8-30 ಗಂಟೆ ಸಮಯದಲ್ಲಿ ತನ್ನ ತಮ್ಮ ಮತ್ತು ಆತನ ಸ್ನೇಹಿತ ನಾರಾಯಣ ಎಂಬುವರು ಅಡುಗೆ ಕೆಲಸ ಮುಗಿಸಿಕೊಂಡು ವಾಪಸ್ಸು ಊರಿಗೆ ಬರಲು ಚಿನ್ನಸಂದ್ರ ಕ್ರಾಸ್ ಬಳಿ ಬೆಂಗಳೂರು-ಕಡಪ ರಸ್ತೆಯ ಕ್ರಾಸ್ ಮಾಡುತ್ತಿದ್ದಾಗ ಕೆ.ಎ-01-ಎಇ-1064 ಲಾರಿ ಚಾಲಕನು ಬೆಂಗಳೂರು ಕಡೆಯಿಂದ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡಿಸಿ ಇಬ್ಬರ ಮೇಲೆ ಹತ್ತಿಸಿದ ಪರಿಣಾಮ ಇಬ್ಬರು ರಸ್ತೆಯ ಮೇಲೆ ಬಿದ್ದು, ತಲೆಗೆ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದರು, ತಾನು ಮತ್ತು ನಮ್ಮೂರಿನವರು ಚಿಂತಾಮಣಿಗೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು, ತನ್ನ ತಮ್ಮನ ಹೆಣ ಮತ್ತು ಆತನ ಸ್ನೇಹಿತ ನಾರಾಯಣ ರವರ ಹೆಣಗಳು ಚಿಂತಾಮಣಿ ಸಕರ್ಾರಿ ಆಸ್ಪತ್ರೆಯ ಶವಾಗಾರದಲ್ಲಿ ಇತ್ತು. ಇವರ ತಲೆಗೆ ತೀವ್ರಗಾಯವಾಗಿ ಮೃತಪಟ್ಟಿದ್ದರು, ತನ್ನ ತಮ್ಮ ನಾಗೇಶ ಮತ್ತು ಆತನ ಸ್ನೇಹಿತ ನಾರಾಯಣ ರವರ ಅಪಘಾತದ ಸಾವಿಗೆ ಮೇಲ್ಕಂಡ ಕೆ.ಎ-01-ಎಇ-1064 ಲಾರಿ ಚಾಲಕನ ಅತಿವೇಗ ಮತ್ತು ಅಜಗರೂಕತೆಯ ಚಾಲನೆ ಕಾರಣವಾಗಿದ್ದು, ತಾವು ಈ ದಿನ ಬಂದು ವಿಷಯ ತಿಳಿದು ತಡವಾಗಿ ದೂರು ನೀಡುತ್ತಿದ್ದು, ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

 

7. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.31/2021 ಕಲಂ. 324,504,506 ಐ.ಪಿ.ಸಿ:-

     ದಿನಾಂಕ: 07.03.2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಾದ ಮಹೇಶ್ ಬಿನ್ ವೆಂಕಟರಮಣಾಚಾರಿ, 23 ವರ್ಷ, ವಿಶ್ವಕರ್ಮ, ಆಪೋಲೊ ಫಾರ್ಮಸಿಯಲ್ಲಿ ಕೆಲಸ, ವಾಸ: ಗದ್ವಾಲ್ ಪೇಟೆ, ವಾರ್ಡ್ ನಂ:21, ಚಿಂತಾಮಣಿ ನಗರ ರವರು ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ಸುಮಾರು 02 ತಿಂಗಳ ಹಿಂದೆ ಮಂಜು ಎಂಬುವವರು ನನ್ನ ತಂದೆಗೆ ಕರೆ ಮಾಡಿರುತ್ತಾರೆ ನಂತರ ನನ್ನ ತಂದೆ ಕರೆ ಸ್ವೀಕರಿಸದೆ ಪಾಂಡು ವೃತ್ತದ ಬಳಿ ಇರುವ ಶಿವ ಸ್ಟೋರ್ಸ್ ಬಳಿ ಹೋದಾಗ ಬಾಬಾಜಾನ್ ಎಂಬುವವರು ಅಲ್ಲೇ ಇದ್ದು ನೀನು ಮಂಜು ರವರು ಕರೆ ಮಾಡಿದಾಗ ಮನೆಯಲ್ಲಿ ಇದ್ದಿನಿ ಎಂದು ಹೇಳಿ ಈಗ ಅಂಗಡಿ ಬಳಿ ಇದ್ದಿಯಾ ಎಂದು ನನ್ನನ್ನು ಏಕಾಏಕಿ ಲೋಪರ್ ನನ್ನ ಮಗನೆ ಎಂದು ಬೈದಿರುತ್ತಾನೆ ನಂತರ ಅಲ್ಲೇ ಇದ್ದ ಮಂಜು ರವರು ಇಬ್ಬರನ್ನು ಸಮಾಧಾನಪಡಿಸಿರುತ್ತಾರೆ.ನಂತರ ದಿನಾಂಕ: 06.03.2021 ರಂದು ರಾತ್ರಿ 8:30 ಗಂಟೆ ಸಮಯದಲ್ಲಿ  ನಮ್ಮ ತಂದೆಯವರು ಪಾಂಡು ವೃತ್ತದ ಬಳಿ ಇರುವ ಶಿವ ಸ್ಟೋರ್  ಬಳಿ ಹೋದಾಗ ಬಾಬಾಜಾನ್ ರವರು ಸಹ ಅಲ್ಲೇ ಇದ್ದು ಅಲ್ಲಿದ್ದ ಶಿವ ರವರಿಗೆ  ಸುಮಾರು 02 ತಿಂಗಳ ಹಿಂದೆ ಇವರೇ  ನನ್ನ ಮೇಲೆ ವಿನಾಕಾರಣ ಗಲಾಟೆ ಮಾಡಿದ್ದು ಎಂದು ಹೇಳುವಷ್ಟರಲ್ಲಿ ಬಾಬಾಜಾನ್ ರವರು ಏಕಾಏಕಿ "ರೇ ನೀ ಯಮ್ಮನ್ನೆ ದೆಂಗ, ನೀನ್ಯಾರು ನನ್ನನ್ನು ನೋಡಿ ಮಾತನಾಡಲು ಎಂದು ಏಕಾಏಕಿ ನಮ್ಮ ತಂದೆಯವರನ್ನು   ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. ನಂತರ ನಮ್ಮ ತಂದೆಯವರು ನನ್ನ ಮಗನನ್ನು ಕರೆದುಕೊಂಡು ಬರುವುದಾಗಿ ಹೇಳಿ ಮನೆಯ ಬಂದು ನನಗೆ ಈ ವಿಚಾರ ತಿಳಿಸಿದ್ದು  ನಂತರ ನಾನು ನಮ್ಮ ತಂದೆಯವರೊಂದಿಗೆ ಶಿವ ಸ್ಟೋರ್  ಬಳಿ ಹೋದಾಗ ಅಲ್ಲೇ ಇದ್ದ ಬಾಬಾಜಾನ್ ರವರು ನಮ್ಮನ್ನು ನೋಡಿ ಲೇ ಲೋಪರ್ ನನ್ನ ಮಕ್ಕಲೇ  ನನ್ನ ಮೇಲೆ ಗಲಾಟೆಗೆ ಬರುತ್ತಿದ್ದಿರಾ ಎಂದು ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು  ನಾನು ಏಕೆ ಈ ರೀತಿ ನನ್ನನ್ನುಮತ್ತು ನಮ್ಮ ತಂದೆಯವರನ್ನು ಬೈಯುತ್ತಿದ್ದಿಯಾ ಎಂದು ಕೇಳುವಷ್ಟರಲ್ಲಿ ಬಾಬಾಜಾನ್ ರವರು ಅಲ್ಲೇ ಇದ್ದ ಗಾಜು ಬಾಟಲನ್ನು ತೆಗೆದುಕೊಂಡು ನನ್ನ ತಲೆಯ ಎಡ ಭಾಗದ ಕಿವಿಗೆ ಹೊಡೆದು  ರಕ್ತಗಾಯಪಡಿಸಿ  ನನ್ನ ಮಕ್ಕಳೆ ನನ್ನ ಹತ್ತಿರ ಗಾಂಚಾಲಿ ಮಾಡುತ್ತಿರಾ ಎಂದು ಬೈದು ನಿಮ್ಮನ್ನು ಇಲ್ಲೇ  ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.  ಆದ್ದರಿಂದ ನನ್ನ ಮೇಲೆ ಹಲ್ಲೇ ಮಾಡಿ ರಕ್ತಗಾಯವನ್ನುಂಟು ಮಾಡಿರುವ ಬಾಬಾ ಜಾನ್ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ಹೇಳಿಕೆಯಂತೆ ಪ್ರಕರಣದ ದಾಖಲಿಸಿರುತ್ತೆ.

 

8. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.29/2021 ಕಲಂ. 323,324,504,506,34  ಐ.ಪಿ.ಸಿ:-

     ದಿನಾಂಕ: 07/03/2021 ರಂದು ಶ್ರೀ. ಪ್ರದೀಪ ಬಿನ್ ಶ್ರೀನಿವಾಸ, 24 ವರ್ಷ, ಆದಿ ಕರ್ನಾಟಕ ಜನಾಂಗ, ಟೈಲರ್ ಕೆಲಸ ವಾಸ ಯಲಗಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿರುವ  ಹೇಳಿಕೆಯ ಸಾರಾಂಶವೇನೆಂದರೆ, ತಮ್ಮ ಮನೆಯ ಪಕ್ಕದಲ್ಲಿ ತಮ್ಮ ಅತ್ತೆಯಾದ ವೆಂಕಟಲಕ್ಷ್ಮಮ್ಮ ಕೋಂ ಅಶ್ವತ್ಥಪ್ಪ ರವರ ಮನೆ ಇದ್ದು ಎರಡೂ ಮನೆಗಳ ಮಧ್ಯೆ ಸುಮಾರು 4 ಅಡಿಗಳ ಖಾಲಿ ಜಾಗ ಇರುತ್ತೆ. ದಿನಾಂಕ: 07/03/2021 ರಂದು ಬೆಳಿಗ್ಗೆ ಸುಮಾರು 7.30 ಗಂಟೆ ಸಮಯದಲ್ಲಿ ತಮ್ಮ ಅತ್ತೆ ವೆಂಕಟಲಕ್ಷ್ಮಮ್ಮರವರು ಖಾಲಿ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡಿರುತ್ತಾರೆಂತ ತಮ್ಮ ಮನೆಯವರನ್ನು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದು ತನ್ನ ತಾಯಿಯಾದ ರತ್ನಮ್ಮರವರು ಏಕೆ ತಮ್ಮನ್ನು ವಿನಾ ಕಾರಣ ಬೈಯ್ಯುತ್ತಿರುತ್ತೀಯ ನಮ್ಮ ಮನೆಯವರು ಯಾರೂ ಮೂತ್ರ ವಿಸರ್ಜನೆ ಮಾಡಿರುವುದಿಲ್ಲವೆಂತ ಹೇಳುತ್ತಿದ್ದಾಗ ವೆಂಕಲಕ್ಷ್ಮಮ್ಮರವರ ಮಗನಾದ ಪ್ರದೀಪ ರವರು ನಮ್ಮ ತಾಯಿಗೆ ಎದರು ಮಾತನಾಡುತ್ತೀಯ ತ ತನ್ನ ತಾಯಿಯನ್ನು ಹೊಡೆಯಲು ಬಂದಾಗ ತಾನು ಮತ್ತು ತನ್ನ ತಂದೆ ಅಡ್ಡ ಹೋದಾಗ ಪ್ರದೀಪ ತನ್ನನ್ನು ಕೈಗಳಿಂದ ಮೈಮೇಲೆ ಹೊಡೆದು ಕೆಲಕ್ಕೆ ತಳ್ಳಿದ್ದು ತಾನು ಬಿದ್ದು ಹೋದಾಗ ಏಕಾಏಕಿ ಪ್ರದೀಪ ಆತನ ಜೋಬಿನಲ್ಲಿದ್ದ ಚಿಕ್ಕ ಚಾಕುವನ್ನು ತೆಗೆದುಕೊಂಡು ತನ್ನ ಬೆನ್ನಿನ ಮೇಲೆ ನಾಲ್ಕು ಕಡೆ ಹಾಗು ಬಲಭಾಗದ ಎದೆಯ ಮೇಲೆ ಚುಚ್ಚಿ ರಕ್ತ ಗಾಯ ಪಡಿಸಿರುತ್ತಾನೆ. ಅಷ್ಠರಲ್ಲಿ ತಮ್ಮ ಗ್ರಾಮದ ಅಶ್ವತ್ಥಮ್ಮ ಕೋಂ ಮುನಿಯಪ್ಪ ಮತ್ತು ವೆಂಕಟಲಕ್ಷ್ಮಮ್ಮ ಕೋಂ ಮುನಿಕೃಷ್ಣರವರು ಬಂದು ವೆಂಕಟಲಕ್ಷ್ಮಮ್ಮ ರವರ ಮೇಲೆ ಗಲಾಟೆಗೆ ಹೋಗುತ್ತೀರಾ ಎಂತ ಅವಾಚ್ಯವಾಗಿ ಬೈದು ಬೆದರಿಕೆ ಹಾಕಿ ಇಬ್ಬರೂ ಸೇರಿ ತನ್ನ ತಾಯಿಯಾದ ರತ್ನಮ್ಮರವರನ್ನು ಕೈಗಳಿಂದ ಹೊಡೆದು ಮೂಗೇಟುಗಳನ್ನುಂಟು  ಮಾಡಿರುತ್ತಾರೆ. ಅಷ್ಠರಲ್ಲಿ ತಮ್ಮ ಗ್ರಾಮದ ವಾಸಿಗಳಾದ ನರೇಂದ್ರ ಬಿನ್ ವೆಂಕಟೇಶಪ್ಪ ಹಾಗು ಅನಿಲ್ ಬಿನ್ ನರಸಿಂಹಪ್ಪರವರು ಬಂದು ಅವರಿಂದ ಬಿಡಿಸಿ ಉಪಚರಿಸಿದ್ದು ಗಾಯಗೊಂಡಿದ್ದ ತನ್ನನ್ನು ತನ್ನ ತಂದೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ 108 ಅಂಬ್ಯುಲೆನ್ ವಾಹನದಲ್ಲಿ ಕರೆತಂದು ಚಿಕಿತ್ಸೆಗಾಗಿ ದಾಖಲು ಮಾಡಿದ್ದು ತಮ್ಮ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

9. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.52/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:06/03/2021 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಸಿ.ಅಶ್ವತ್ಥಪ್ಪ ಬಿನ್ ಚಿಕ್ಕವೆಂಕಟಶ್ಯಾಮಪ್ಪ, ಸಾದರ ಜನಾಂಗ, ಜಿರಾಯ್ತಿ, ಅಲಕಾಪುರ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರಿಗೆ 03 ಜನ ಮಕ್ಕಳಿದ್ದು, ಮೊದಲನೆಯವರಾದ ಗೋಪಾಲ ದಿನಾಂಕ:21/02/2021 ರಂದು ಗೌರೀಬಿದನೂರಿಗೆ ಹೋಗಿ ದಿನ ನಿತ್ಯ ವಸ್ತುಗಳನ್ನು ತೆಗೆದುಕೊಂಡು ಅಲಕಾಪುರ ಗ್ರಾಮಕ್ಕೆ ಬರಲು ಆಟೋಗಾಗಿ ಗೌರೀಬಿದನೂರು ಪಟ್ಟಣದ ಬೆಂಗಳೂರು ಸರ್ಕಲ್ ನಲ್ಲಿ ಕಾಯುತ್ತಿದ್ದಾಗ ಪಿರ್ಯಾದಿದಾರರ ಗ್ರಾಮದವರೇ ಆದ ರವಿಕುಮಾರ್ ಕೆ ಬಿನ್ ಕೃಷ್ಣೇಗೌಡ  ರವರು ಹಿಂದೂಪುರ ಕಡೆಯಿಂದ ದ್ವಿ ಚಕ್ರ ವಾಹನ CB-HONDA SHINE  KA-40, ED-4642 ರಲ್ಲಿ ಬಂದು ಪಿರ್ಯಾದಿದಾರರ ಮಗನನ್ನು ನೋಡಿ ನಾನು ಅಲಕಾಪುರಕ್ಕೆ ಹೋಗುತ್ತಿದ್ದೇನೆ, ಬಾ ಎಂದು ಕರೆದುಕೊಂಡು ವಾಹನದ ಹಿಂದುಗಡೆ ಪಿರ್ಯಾದಿದಾರರ ಮಗನನ್ನು ಕೂರಿಸಿಕೊಂಡು ಬರುವಾಗ ಸಂಜೆ ಸುಮಾರು 5-15 ಗಂಟೆ ಸಮಯದಲ್ಲಿ ದ್ವಿ ಚಕ್ರ ವಾಹನವನ್ನು ಅತಿವೇಗ ಮತ್ತು ಅಜಗರೂಕತೆಯಿಂದ ಓಡಿಸಿ ನಿಯಂತ್ರಣ ತಪ್ಪಿ ಮಿನಿ ವಿದಾನ ಸೌಧ ಬಳಿ ಬಿದ್ದಿದ್ದನ್ನು ಕಂಡು ಮಿನಿ ವಿಧಾನ ಸೌಧದ ಬಳಿ ಇದ್ದ ಪಿರ್ಯಾದಿದಾರರ ಗ್ರಾಮದವರೇ ಆದ ನಾಗರಾಜು ಪಿರ್ಯಾದಿದಾರರಿಗೆ ಪೋನ್ ಮಾಡಿ ವಿಷಯ ತಿಳಿಸಿ ನಂತರ ಅಂಬುಲೆನ್ಸ್ ಗೆ ಕರೆ ಮಾಡಿ ಗಾಯಾಳುವನ್ನು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು, ವಿಷಯ ತಿಳಿದು ಪಿರ್ಯಾದಿದಾರರು ನೇರವಾಗಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು, ಪಿರ್ಯಾದಿದಾರರ ಮಗನಿಗೆ ತೀವ್ರವಾಗಿ ತಲೆಗೆ ಪೆಟ್ಟಾಗಿ ತೂತು ಬಿದ್ದಿರುತ್ತೆಂದು, ಹಾಗೂ ಎಡಕಾಲಿನ ಮಂಡಿ ಮುರಿದಿರುತ್ತೆಂದು, ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಲು ತಿಳಿಸಿದ್ದು, ಪಿರ್ಯಾದಿದಾರರು ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಮಗನನ್ನು ಆಂಬುಲೆನ್ಸ್ ನಲ್ಲಿ ತುಮಕೂರು ರಸ್ತೆಯಲ್ಲಿರುವ ಬೆಂಗಳೂರಿನ ಪ್ರಕ್ರಿಯಾ ಆಸ್ಪತ್ರೆಯಲ್ಲಿ ಚಿಕಿತ್ತೆಗಾಗಿ ದಾಖಲು ಮಾಡಿದ್ದು, ಪಿರ್ಯಾದಿದಾರರು ಮಗನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣವಾದ ಮೇಲ್ಕಂಡ ದ್ವಿ ಚಕ್ರ ವಾಹನ ಸವಾರನ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

 

10. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.53/2021 ಕಲಂ. 15(A),32,34 ಕೆ.ಇ ಆಕ್ಟ್:-

     ದಿನಾಂಕ:06/03/2021 ರಂದು ರಾತ್ರಿ 7-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಉಪ ವಿಭಾಗದ DYSP  ಶ್ರೀ ಕೆ. ರವಿಶಂಕರ್ ರವರು ಮಾಲು ಪಂಚನಾಮೆ ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಪಿರ್ಯಾದಿದಾರರು ತಮ್ಮ ಕಛೇರಿಯ ಸಿಬ್ಬಂದಿಯಾದ ಹೆಚ್.ಸಿ-205 ರಮೇಶ, ಹೆಚ್.ಸಿ-59 ಶ್ರೀನಿವಾಸ ಹಾಗೂ ಜೀಪ್ ಚಾಲಕ ಎಪಿಸಿ-119 ಅಶೋಕ ರವರೊಂದಿಗೆ ಇಲಾಖಾ ಜೀಪ್ ಸಂಖ್ಯೆ ಕೆಎ-40, ಜಿ-0855 ರಲ್ಲಿ ಗೌರೀಬಿದನೂರು ವೃತ್ತ ಕಛೇರಿಗೆ ತನಿಖೆಯಲ್ಲಿರುವ ಪ್ರಕರಣಗಳ ಕಡತಗಳ ವಿಮರ್ಶೆಗಾಗಿ ಬಂದಿದ್ದು, ಸಂಜೆ 4-30 ಗಂಟೆಯಲ್ಲಿ ಪಿರ್ಯಾದಿದಾರರಿಗೆ ಬಾತ್ಮಿದಾರರಿಂದ ಬಂದ ಮಾಹಿತಿಯಂತೆ ಗುಂಡಾಪುರ ಬಸ್ ನಿಲ್ದಾಣದಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿ ತಿಳಿಸಿ, ನಂತರ ಪಿರ್ಯಾದಿದಾರರು ಸಿಬ್ಬಂದಿ ಮತ್ತು ಪಂಚಾಯ್ತಿದಾರರೊಂದಿಗೆ ಹೊಸೂರು ಹೋಬಳಿಯ ಕುದುರೆ ಬ್ಯಾಲ್ಯ ಗ್ರಾಮಕ್ಕೆ ಹೋಗಿ ವೆಂಕಟೇಶ ಬಿನ್ ಲೇಟ್ ತಿಮ್ಮಪ್ಪ ರವರ ಅಂಗಡಿಯ ಬಳಿ ಗಮನಿಸಲಾಗಿ ಯಾರೋ ಒಬ್ಬ ಆಸಾಮಿ ಅಂಗಡಿಯ ಮುಂಭಾಗ ಮದ್ಯಪಾನ ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರನ್ನು ಹಾಗೂ ಸಿಬ್ಬಂದಿಯನ್ನು ನೋಡಿ ಆತನು ಓಡಿ ಹೋಗಿದ್ದ ಸ್ಥಳದಲ್ಲಿದ್ದ 90 ML HAYWARDS CHEERS WHISKY  ಕಂಪನಿಯ ಒಂದು ಖಾಲಿ ಮಧ್ಯದ ಟೆಟ್ರಾ ಪಾಕೇಟ್ 2 ಖಾಲಿ ಪ್ಲಾಸ್ಟಿಕ್ ನೀರಿನ ಪ್ಯಾಕೇಟ್ ಗಳು 1 ಪ್ಲಾಸ್ಟಿಕ್ ಲೋಟಾವನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿ ಅಂಗಡಿಯಲ್ಲಿದ್ದ ಮಾಲೀಕನಾದ ವೆಂಕಟೇಶ ಬಿನ್ ಲೇಟ್ ತಿಮ್ಮಪ್ಪ, 45 ವರ್ಷ, ನಾಯಕ ಜನಾಂಗ, ವಾಸ ಕುದುರೆಬ್ಯಾಲ್ಯ ಗ್ರಾಮರವರಿಗೆ ಸಾರ್ವಜನಿಕರಿಗೆ ಮದ್ಯಪಾನ ಮಾಡಿಸಲು ಸ್ಥಳಾವಕಾಶಕ್ಕೆ ಮತ್ತು ಮಾರಾಟ ಮಾಡಲು ಪರವಾನಗಿ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದರಿಂದ ಆತನ ಅಂಗಡಿಯಲ್ಲಿದ್ದ ಒಟ್ಟು 90 ML HAYWARDS CHEERS WHISKY ಯ 96 ಪ್ಯಾಕೆಟ್ ಗಳನ್ನು FSL  ಪರೀಕ್ಷೆಗಾಗಿ ಅಲಾಯಿದೆಯಾಗಿ ತೆಗೆದು K  ಎಂಬ ಅಕ್ಷರದಿಂದ ಅರಗು ಮಾಡಿ ಸೀಲು ಮಾಡಿರುತ್ತೆ. ಸದರಿ ಮಾಲುಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಆರೋಪಿತನಾದ ವೆಂಕಟೇಶನನ್ನು ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದು ಮೇಲ್ಕಂಡ ಮಾಲು ಮತ್ತು ಆರೋಪಿತನ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

 

11. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.22/2021 ಕಲಂ. 420 ಐ.ಪಿ.ಸಿ:-

     ದಿನಾಂಕ:06/03/2021 ರಂದು ಸಂಜೆ 6:30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಅನಿತ ಕೋಂ ನಾಗೇಶ್, 34 ವರ್ಷ, ನಾಯಕರು, ಗೃಹಿಣಿ, ವಿವಿ ಎಕ್ಸ್ಟೆಕ್ಷನ್, ಗಂಗಮ್ಮ ದೇವಾಲಯದ ಮೈನ್ ರೋಡ್, 2 ನೇ ಕ್ರಾಸ್ ಲೆಪ್ಟ್, ಹೊಸಕೋಟೆ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:06/03/2021 ರಂದು ನಮ್ಮ ಸಂಬಂದಿಕರ ಮದುವೆ ಕಾರ್ಯವು ಚಿಕ್ಕಬಳ್ಳಾಪುರ ತಾಲ್ಲೂಕು, ನಂದಿ ಕ್ರಾಸಿನ ಸಮೀಪವಿರುವ ಕೃಷ್ಣ ಕನ್ವೇಕ್ಷನ್ ಹಾಲ್ನಲ್ಲಿ ಇದ್ದುದ್ದರಿಂದ ಸದರಿ ಕಾರ್ಯಕ್ರಮಕ್ಕೆ ಬರಲು ಮದ್ಯಾಹ್ನ 1:30 ಗಂಟೆಗೆ ಹೊಸಕೋಟೆಯಿಂದ ದೇವನಹಳ್ಳಿಗೆ ಬಸ್ಸಿನಲ್ಲಿ ಬಂದು ಅಲ್ಲಿಂದ ನಂದಿ ಕ್ರಾಸಿಗೆ ಬರಲು ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದ ಕೆ.ಎ-40 -9678 ಖಾಸಗಿ ಡಿ.ಎ.ಎಂ ಬಸ್ಸಿನಲ್ಲಿ ಮದ್ಯಾಹ್ನ ಸುಮಾರು 3:00 ಗಂಟೆಗೆ ಹತ್ತಿದಾಗ ಮೂರು ಜನ ಕುಳಿತುಕೊಳ್ಳುವ ಸೀಟಿನಲ್ಲಿ ಕುಳಿತುಕೊಳ್ಳುವಾಗ ಕಿಟಕಿ ಸೈಡಿನಲ್ಲಿ ಒಂದು ಹೆಂಗಸು ಕುಳಿತುಕೊಂಡಿದ್ದಳು ನಾನು ಆಕೆಯ ಪಕ್ಕದಲ್ಲಿ ಕುಳಿತುಕೊಂಡೆ ಮತ್ತೊಬ್ಬ ಹೆಂಗಸು, ಸುಮಾರು 40 ವರ್ಷ ಒಂದು ಮಗುವನ್ನು ಎತ್ತಿಕೊಂಡು ಕುಳಿತುಕೊಳ್ಳುವಾಗ ನಾನು ಆಕೆಗೆ ಮಗು ಇದೇ ನೀನು ಮದ್ಯದಲ್ಲಿ ಕುಳಿತುಕೋ ಎಂದು ಹೇಳಿದಾಗ ಆಕೆಯು ಇಲ್ಲ ತಾನು ದೇವಸ್ಥಾನದ ಬಳಿ ಇಳಿದುಕೊಳ್ಳುತ್ತೇನೆಂದು ನನ್ನ ಎಡ ಭಾಗದಲ್ಲಿ ಕುಳಿತುಕೊಂಡಳು ಮಗುವಿಗೆ 5 ರೂಗಳ ನಾಣ್ಯಗಳನ್ನು ಕೊಟ್ಟು ನಾವಿಬ್ಬರು ಮದ್ಯ ಕುಳಿಸಿದಳು ಆ ಮಗ ನಾಣ್ಯಗಳಲ್ಲಿ ಆಟವಾಡುತ್ತಾ ಎರಡು ಬಾರಿ ನನ್ನ ಕಾಲುಗಳ ಬಳಿ ನಾಣ್ಯಗಳನ್ನು ಹಾಕಿದಾಗ ಅದನ್ನು ಎತ್ತಿಕೊಳ್ಳಲು ಆ ಹೆಂಗಸು ನನ್ನ ನನ್ನ ಕಡೆಭಾಗಿ ಎರಡು ಬಾರಿ ತೆಗೆದುಕೊಂಡಳು ಆಗ ಆಕೆಯ ಜೊತೆ ಮತ್ತೊಬ್ಬ ಹೆಂಗಸು ನಿಂತುಕೊಂಡಿದ್ದು ಆಕೆಗೆ ಕೆಳಕ್ಕೆ ಬಾಗಿದಾಗ ಆಕೆಯು ಸಿಟುಗೆ ಅಡ್ಡ ಬರುತ್ತಿದ್ದಳು. ನಂತರ ಬಸ್ಸಿನ ಕಂಡೆಕ್ಟರ್ ರವರು ನಂದಿ ಕ್ರಾಸ್ ಬಂದು ಎಂದಾಗ ನನ್ನ ಪಕ್ಕದಲ್ಲಿದ್ದ ಹೆಂಗಸು ಎದ್ದು ನಿಂತು ಮುಂದಕ್ಕೆ ಹೋದಳು ನಾನು ನಂದಿ ಕ್ರಾಸಿನಲ್ಲಿ ಮದ್ಯಾಹ್ನ 3:20 ಗಂಟೆಗೆ ಇಳಿದುಕೊಂಡೆ, ಇಳಿದ ತಕ್ಷಣ ನನ್ನನ್ನು ಕನ್ವೇಕ್ಷನ್ ಹಾಲ್ಗೆ ಡ್ರಾಫ್ ಮಾಡಲು ಮುನಿರಾಜು ಮತ್ತು ಹೇಮಂತ್ ಕುಮಾರ್ ರವರು ತೆಗೆದುಕೊಂಡು ಬಂದಿದ್ದ ಕಾರಿನಲ್ಲಿ ಕುಳಿತುಕೊಂಡು ಹೋಗುತ್ತಿದ್ದಾಗ ನಾನು ಬ್ಯಾಗನ್ನು ಚೆಕ್ ಮಾಡಿದಾಗ ಅದರಲ್ಲಿ ಇಟ್ಟಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ಹಾರ ಮತ್ತು 30 ಗ್ರಾಂ ತೂಕದ ಚಿನ್ನದ ನಕ್ಲೇಸ್ ಇರುವುದಿಲ್ಲ ನನಗೆ ಗಾಭರಿಯಾಗಿ ಮುನಿರಾಜು ಮತ್ತು ಹೇಮಂತ್ ಕುಮಾರ್ ರವರಿಗೆ ತಿಳಿಸಿ ನನ್ನ ಪಕ್ಕದಲ್ಲಿ ಮಗವಿನೊಂದಿಗೆ ಕುಳಿತುಕೊಂಡಿದ್ದ ಹೆಂಗಸು ನಿಂತುಕೊಂಡಿದ್ದ ಹೆಂಗಸಿನ ಮೇಲೆ ಅನುಮಾನಗೊಂಡು ಕಾರಿನಲ್ಲಿ ಬಸ್ಸನ್ನು ಪಾಲೋ ಮಾಡಿಕೊಂಡು ಹೋದಾಗ ಬಸ್ ನಿಲ್ದಾಣದ ಬಳಿ ನಾನು ಹತ್ತಿ ಇಳಿದ ಬಸ್ಸು ನಿಂತಿದ್ದು ಸದರಿ ಬಸ್ಸಿನ ಕಂಡೆಕ್ಟರ್ ಮತ್ತು ಕ್ಲೀನರ್ ರವರನ್ನು ಕೇಳಿದಾಗ ಅವರು ನಿನ್ನ ಬಳಿ ಇದ್ದ ಇಬ್ಬರು ಹೆಂಗಸರು ಚದಲಪುರ ಕ್ರಾಸಿನಲ್ಲಿ ಇಳಿದುಕೊಂಡಿರುವುದಾಗಿ ತಿಳಿಸಿದರು ನಂತರ ಚದಲಪುರ ಕ್ರಾಸ್, ಸುತ್ತಮುತ್ತ ಕಡೆಗಳಲ್ಲಿ ಹುಡುಕಾಡಿದರು ಸಹ ಸಿಕ್ಕಿರುವುದಿಲ್ಲ. ಬಸ್ಸಿನಲ್ಲಿ ಕುಳಿತುಕೊಂಡಿದ್ದಾಗ ಮೇಲ್ಕಂಡ ಇಬ್ಬರು ಹೆಂಗಸರು ನನ್ನ ಗಮನವನ್ನು ಬೇರೆಡೆ ಸೆಳೆದು ಮೋಸದಿಂದ ವಡವೆಗಳನ್ನು ಎತ್ತಿಕೊಂಡಿರುತ್ತಾರೆ. ಸದರಿ ಎರಡು ವಡವೆಗಳ ಅಂದಾಜು ಮೌಲ್ಯ ಸುಮಾರು 2 ಲಕ್ಷ ರೂಗಳಾಗಿರುತ್ತೆ. ಆದ್ದರಿಂದ ಮೇಲ್ಕಂಡ ಇಬ್ಬರು ಹೆಂಗಸರನ್ನು ಪತ್ತೆ ಮಾಡಿ ಅವರ ವಿರುದ್ದ ಕನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು. 

Last Updated: 07-03-2021 05:55 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080