ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.34/2021 ಕಲಂ. 323,324,341 ರೆ/ವಿ 34 ಐಪಿಸಿ :-

    ದಿನಾಂಕ 06/02/2021 ರಂದು ಸಂಜೆ 5-20 ಗಂಟೆಗೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು, ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಬಾಬಾಜಾನ್ ಬಿನ್ ರಹಮತುಲ್ಲಾ, 35 ವರ್ಷ, ಮುಸ್ಲಿಂ ಜನಾಂಗ, ಬಸ್ ಚಾಲಕ, ಪೊಲೀಸ್ ಕ್ವಾಟ್ರಸ್ ಬಳಿ, ಚೇಳೂರು ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರು ನೀಡಿದ  ಹೇಳಿಕೆ ಸಾರಾಂಶವೆನೆಂದರೆ ದಿನಾಂಕ 06/02/2021 ರಂದು ಮದ್ಯಾಹ್ನ 2-15 ಗಂಟೆಗೆ  V M TRAVELS   ನ KA-09-B-9009 ನೋಂದಣಿ ಸಂಖ್ಯೆಯ ಬಸ್ಸನ್ನು ಚಾಲನೆ ಮಾಡಿಕೊಂಡು ಚೇಳೂರಿನಿಂದ ಹೊರಟು ಬಾಗೇಪಲ್ಲಿ ಕಡೆಗೆ ಬರುತ್ತಿದ್ದಾಗ ಮೂಗಿರೆಡ್ಡಿಪಲ್ಲಿ ಮತ್ತು  ಗೊಟ್ಲಪಲ್ಲಿ ನಡುವೆ ರಸ್ತೆ ಕಾಮಗಾರಿಯನ್ನು ಮಾಡುತ್ತಿದ್ದು , ರಸ್ತೆಯಲ್ಲಿ ಜಲ್ಲಿಕಲ್ಲುಗಳನ್ನು ಹಾಕಿದ್ದು, ನಾನು ಬಸ್ಸನ್ನು ನಿಧಾನವಾಗಿ ಚಾಲನೆ ಮಾಡಿದ್ದು, ಜಲ್ಲಿಕಲ್ಲಿ ಇದ್ದ ಕಾರಣ ಬಸ್ಸನಲ್ಲಿ ಶಬ್ದ ಉಂಟಾಗಿರುತ್ತದೆ ಅದಕ್ಕೆ ನನ್ನ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಆಸಾಮಿಯು ನನ್ನ ಬಳಿ ಬಂದು ಬಸ್ಸನ್ನು ನಿಧಾನವಾಗಿ ಚಾಲನೆ ಮಾಡು,  ಸರಿಯಾಗಿ ಚಾಲನೆ ಮಾಡು, ನಿನ್ನಮ್ಮನ್ ದೆಂಗಾ, ನಿನ್ನಮ್ಮನ್ ಸರಿಯಾಗಿ ಬಸ್ ಓಡಿಸೋ ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ನಂತರ  ನಾನು ಸದರಿ ಪ್ರಯಾಣಿಕನಿಗೆ ಮುಂದೆ ಬಂದು ಕುಳಿತುಕೊಳ್ಳಿ, ನಾನು ನಿಧಾನವಾಗಿಯೇ ಚಾಲನೆ ಮಾಡುತ್ತಿದ್ದೆನೆ. ಎಂತ ಹೇಳಿದೆನು. ಅದಕ್ಕೆ ಪುನಃ ಕೆಟ್ಟ ಕೆಟ್ಟ ಮಾತುಗಳಿಂದ ಬೈದಿರುತ್ತಾನೆ. ನಂತರ ಯಾರಿಗೋ ಪೋನ್ ಮಾಡಿ ಕಾರಕೂರು ಕ್ರಾಸಿಗೆ ಬರಲು ತಿಳಿಸಿರುತ್ತಾನೆ. ನಾನು ಬಸ್ಸನ್ನು ಚಾಲನೆ ಮಾಡಿಕೊಂಡು ಮದ್ಯಾಹ್ನ ಸುಮಾರು 3-15 ಗಂಟೆಗೆ ಕಾರಕೂರು ಕ್ರಾಸಿಗೆ ಬಂದಾಗ ಯಾರೋ ಮೂರು ಜನರು ಬಸ್ಸನ್ನು ಅಡ್ಡಗಟ್ಟಿದ್ದು, ನಾನು ಏಕೆ ಎಂದು ಕೇಳಿದಕ್ಕೆ ಡೋರ್ ಬಳಿ ಬಂದು ನನ್ನನ್ನು ಕೆಳಗೆ ಇಳಿಸಿ, ನಮ್ಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಆಸಾಮಿಯು ಕೆಳಗೆ ಇಳಿದು ಬಂದು ಕಾರಕೂರು ಕ್ರಾಸ್ ನಲ್ಲಿ ಕಬ್ಬಿನ ಹಾಲು ಮಾರಾಟ ಮಾಡುತ್ತಿದ್ದ ಅಂಗಡಿಯ ಬಳಿ ಕಬ್ಬಿನ ಕೋಲು ತೆಗೆದುಕೊಂಡು ಬಂದು ನನಗೆ ಅವಾಚ್ಯ ಶಬ್ದಗಳಿಂದ ಬೈದು ನನ್ನ ತಲೆಗೆ, ಮೈ ಕೈಗೆ ಹೊಡೆದಿರುತ್ತಾನೆ. ಆತನ ಸ್ನೇಹಿತರು ಒಬ್ಬರು ಖಾಲಿ ಎಳನೀರು ಬುರುಡೆಯಲ್ಲಿ ನನ್ನ ತಲೆಗೆ ಹೊಡೆದಿರುತ್ತಾನೆ. ಇನ್ನೊಬ್ಬನು ಕಬ್ಬಿನ ಕೋಲಿನಿಂದ ಮೈ ಕೈಗೆ ಕಾಲಿಗೆ ಹೊಡೆದಿರುತ್ತಾನೆ. ನಂತರ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಅಲ್ಲೇ ಬಿದ್ದಿದ್ದ ದೊಣ್ಣೆಯಿಂದ ನನ್ನನ್ನು ಎಡಕಾಲಿಗೆ ಹೊಡೆದು ರಕ್ತ ಗಾಯಪಡಿಸಿರುತ್ತಾನೆ. ಅಷ್ಟರಲ್ಲಿ ನಮ್ಮ ಬಸ್ಸಿನ ಕಂಡಕ್ಟರ್ ಆದ ಅಶೋಕ ಬಿನ್ ಯರ್ರಪ್ಪರೆಡ್ಡಿ ಹಾಗೂ ಸ್ಥಳದಲ್ಲಿದ್ದ ಚಿಲ್ಲರೆ ಅಂಗಡಿಯವರಾದ ಶ್ರೀಮತಿ ಭಾಗ್ಯಮ್ಮರವರು ಬಂದು ಜಗಳ ಬಿಡಿಸಿದ್ದು ಮೇಲ್ಕಂಡವರು ಅವರಿಗೂ ಸಹ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಮತ್ತೊಬ್ಬನು ನನಗೆ ಕೈಗಳಿಂದ ಹೊಡೆದಿರುತ್ತಾನೆ. ನಂತರ ನನ್ನನ್ನು ಅದೇ ಬಸ್ಸಿನಲ್ಲಿ ಬಸ್ ಚಾಲಕನಾದ ಇನಾಯತುಲ್ಲಾ ರವರು ಬಸ್ಸನ್ನು ಚಾಲನೆ ಮಾಡಿಕೊಂಡು ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗಾಗಿ ದಾಖಲಿಸಿರುತ್ತಾರೆ. ನಂತರ ನಮ್ಮ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಹಾಗೂ ನನಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು ರಕ್ತಗಾಯವನ್ನುಂಟು ಮಾಡಿದ ಬಗ್ಗೆ ವಿಚಾರ ಮಾಡಿ ತಿಳಿಯಲಾಗಿ ಆನಂದ ಬಿನ್ ನಂಜುಂಡಪ್ಪ, ಕುರುಬ ಜನಾಂಗ, ಕಾರಕೂರು ಗ್ರಾಮ, ಇನ್ನೊಬ್ಬನ ಹೆಸರು ಅಭಿಷೇಕ ಎಂದು ತಿಳಿಯಿತು. ಇನ್ನೂ ಇಬ್ಬರ ಹೆಸರು ವಿಳಾಸ ತಿಳಿಯಬೇಕಾಗಿದೆ. ಆದ್ದರಿಂದ ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹಾಗೂ ಕಬ್ಬಿನ ಕೋಲು, ದೊಣ್ಣೆಯಿಂದ ಹೊಡೆದು ರಕ್ತ ಗಾಯಪಡಿಸಿ ಮೇಲ್ಕಂಡವ ಮೇಲೆ  ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ಹೇಳಿಕೆಯ ದೂರನ್ನು ಪಡೆದು ಸಂಜೆ: 5-50 ಗಂಟೆಗೆ ಪ್ರಕರಣ ದಾಖಲಿಸಿವುದಾಗಿರುತ್ತೆ.

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 24/2021 ಕಲಂ. 379 ಐಪಿಸಿ :-

    ದಿನಾಂಕ;07.02.2021 ರಂದು ಬೆಳಿಗ್ಗೆ 11:00 ಗಂಟೆಯಲ್ಲಿ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ವ್ಯವಸಾಯದಿಂದ ಜೀವನ ಮಾಡಿಕೊಂಡಿದ್ದು, ತಾನು ವ್ಯವಸಾಯದ  ಜೊತೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಿಕೊಂಡಿರುತ್ತೇನೆ ಚಿಕ್ಕಬಳ್ಲಾಪುರ ಎನ್ ಹೆಚ್ 44 ರಸ್ತೆಯಿಂದ ಹಾರೋಬಂಡೆ ಗ್ರಾಮದ  ಪಶ್ಚಿಮಕ್ಕೆ ಹೋಗುವ ರಸ್ತೆಯ ದಕ್ಷಿಣಕ್ಕೆ ತನ್ನ ಬಾಬತ್ತು ಸರ್ವೆ ನಂ 09/02 ರಲ್ಲ 26 ಗುಂಟೆ ಹೋಲದ ಜಮೀನು ಇದ್ದು ಸದರಿ ಜಮೀನುನಲ್ಲಿ 03 ಮನೆ  ಇದ್ದು ಎರಡು ಹಳೆ ಮನೆ ,ಮತ್ತು ಒಂದು ಹೊಸ ಮನೆ ಇರುತ್ತೆ, ಆ ಪೈಕಿ ಹಳೆ ಮನೆಯಲ್ಲಿ ಕುರಿ ಮತ್ತು ಮೇಕೆಗಳನ್ನು ಮೆಯಿಸಲು ಷೇಡ್ ಅನ್ನು ಕಟ್ಟಿಕೊಂಡಿರುತ್ತೇವೆ, ಈ ಷೇಡ್ ನಲ್ಲಿ 15 ಕುರಿ ಪಟ್ಲಿ 02 ಗಂಡು ಮೇಕೆ ಮತ್ತು 02 ಹೆಣ್ಣು ಮೇಕೆಗಳಿದ್ದು ಅವುಗಳಿಗೆ ಅಲ್ಲಿಯೇ ಮೇವು ಹಾಕಿಕೊಂಡು ಸಾಕುತ್ತಿದ್ದೆವು ದಿನಾಂಕ;06.02.2021 ರಂದು ನಾವು ಎಂದಿನಂತೆ ಬೆಳಿಗ್ಗೆ ಯಿಂದ ರಾತ್ರಿವರೆಗೆ ಮತ್ತು  ಮೇಕೆಗಳಿಗೆ ಷೇಡ್ ನಲ್ಲಿ ಮೇವು ಹಾಕಿ ಷೇಡ್ ಗಡ ಬಾಗಿಲು ಮತ್ತು ತಡಿಗೆಯನ್ನು ಹಾಕಿದ್ದೆವು ಆ ದಿನ ರಾತ್ರಿ 02 ಗಂಟೆವರೆಗೆ ಎಚ್ಚರದಿಂದ ಇದ್ದು ನಮ್ಮ ಹೊಸ ಮನೆಯಲ್ಲಿ ಮಲಗಿಕೊಂಡಿದ್ದೆವು ದಿನಾಂಕ:07.02.2021 ರಂದು ತಾನು ಬೆಳಿಗ್ಗೆ 05:30 ಗಂಟೆ ಸಮಯದಲ್ಲಿ ಮನೆಯಿಂದ ಹೊರಗೆ ಬರಲು ಬಂದಾಗ ತನ್ನ ಹೊಸ ಮನೆ ಚೀಲಕ ಹಾಕಿದ್ದು, ನಂತರ ತಾನು ತನ್ನ ಪಕ್ಕದ ಮನೆಯವರನ್ನು ಶ್ರೀಮತಿ ಅಂಜಿನಮ್ಮ ಕೊಂ ಲೇಟ್ ಜಗನ್ನಾಥ ರವರನ್ನು ಕೂಗಿ ಮನೆಯ ಚೀಲಕ ತೆಗೆದು ಹೊರಗೆ ಬಂದು ನೋಡಲಾಗಿ ನಮ್ಮ ಹಳೆಯ ಮನೆ ಷೇಡ್ ತಡಿಗೆ ಮ್ತತ್ತು ಬಾಗಿಲನ್ನು ಕಿತ್ತು ಹಾಕಿದ್ದು, ದಿನಾಂಕ;06.02.2021 ರಾತ್ರಿ 02:00 ಗಂಟೆಯಿಂದ ದಿನಾಂಕ:07.02.2021 ರ ಬೆಳಗಿನ ಜಾವ 05:00 ಗಂಟೆ ಮದ್ಯ ಯಾರೋ ಕಳ್ಳರು ನಮ್ಮ ಷೇಡ್ ನಲ್ಲಿ ಇದ್ದ  ರೂ/ ಬೆಳೆಬಾಳುವ 15 ಕುರಿ ,ಮತ್ತು 02 ಪಟ್ಲಿ ಎರಡು ಗಂಡು ಮೇಕೆ ಮತ್ತು 02 ಹೆಣ್ಣು ಮೇಕೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು, ಅಸಾಮಿಗಳನ್ನು ಪತ್ತೆ ಮಾಡಿ  ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದರ ಮೇರೆಗೆ ಈ ಪ್ರ,ವ,ವರದಿ.

3. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 24/2021 ಕಲಂ. 302 ಐಪಿಸಿ :-

    ದಿನಾಂಕ:06/02/2021 ರಂದು ರಾತ್ರಿ 8-00 ಘಂಟೆಗೆ ಕೃತ್ಯ ನಡೆದ ಸ್ಥಳದಲ್ಲಿ ಪಿರ್ಯಾದಿದಾರರಾದ ಶ್ರೀಮತಿ ವೆಂಕಟರನರಸಮ್ಮ ಕೋಂ ವೆಂಕಟರಾಯಪ್ಪ 50 ವರ್ಷ ಆದಿ ದ್ರಾವಿಡ ಜನಾಂಗ ಕೂಲಿ ಕೆಲಸ ವಾಸ ಗಂಧಂನಾಗೇನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು ರವರು ನೀಡಿದ ದೂರನ್ನು ಪೊಲೀಸ್ ಇನ್ಸಪೆಕ್ಟರ್ ಗುಡಿಬಂಡೆ ಪೊಲೀಸ್ ಠಾಣೆ ರವರು ಸ್ವಿಕರಿಸಿ ಪ್ರಕರಣ ದಾಖಲಿಸಲು ಹೆಚ್,ಸಿ 221 ಮಾರುತಿ ರವರ ಮೂಲಕ ಕಳುಹಿಸಿಕೊಟ್ಟಿದ್ದು ಈ ದಿನ ದಿನಾಂಕ:06/02/2021 ರಂದು ರಾತ್ರಿ 8-45 ಘಂಟೆಗೆ ಠಾಣೆಯಲ್ಲಿ ಸ್ವೀಕರಿಸಿಕೊಂಡ ದೂರಿನ ಸಾರಾಂಶವೇನೆಂದರೆ, ಪಿಯರ್ಾದಿದಾರರ ತಂದೆ ತಾಯಿಗೆ 1 ನೇ ತಾನು 2ನೇ ಮೇಲೂರಮ್ಮ 3ನೇ ವೆಂಕಟೇಶ 4ನೇ ಲಕ್ಷ್ಮೀ ನರಸಿಂಹಪ್ಪ ಎಂಬ ನಾಲ್ಕು ಜನ ಮಕ್ಕಳಿದ್ದು ಎಲ್ಲರಿಗೂ ಮದುವೆಯಾಗಿದ್ದು ತನ್ನ ತಮ್ಮನಾದ ಲಕ್ಷ್ಮೀನರಸಿಂಹಪ್ಪ ಬಿನ್ ಲೇಟ್ ದೊಡ್ಡ ನರಸಿಂಹಪ್ಪ 45 ವರ್ಷ ಆದಿದ್ರಾವಿಡ ಜನಾಂಗ ರವರು ತನ್ನ ತಾಯಿ ಮತ್ತು ಆತನ ಹೆಂಡತಿಯೊಂದಿಗೆ ಬೋಗೇನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದು ಈ ದಿನ ದಿನಾಂಕ:06/02/2021 ರಂದು ಸಂಜೆ 6-00 ಘಂಟೆಗೆ ತನ್ನ ತಮ್ಮ ಲಕ್ಷ್ಮೀನರಸಿಂಹಪ್ಪನ ಹೆಂಡತಿ ಜಯಲಕ್ಷ್ಮೀ ರವರು ತನಗೆ ದೂರವಾಣಿ ಮುಖಾಂತರ ಲಕ್ಷ್ಮೀನರಸಿಂಹಪ್ಪ ರವರನ್ನು ಬೋಗೇನಹಳ್ಳಿ ಮತ್ತು ವರದಯ್ಯಗಾರಹಳ್ಳಿ ಮದ್ಯ ಇರುವ ಶ್ರೀರಾಮರೆಡ್ಡಿ ಇಟ್ಟಿಗೆ ಪ್ಯಾಕ್ಟರಿ ಹತ್ತಿರ ರಸ್ತೆಯಲ್ಲಿ ದ್ವಿ ಚಕ್ರವಾಹನದಲ್ಲಿ ಬರುವಾಗ ಕೊಲೆ ಮಾಡಿರುವುದಾಗಿ ತಿಳಿಸಿದ್ದು ತಾನು ಕೂಡಲೇ ಬೋಗೇನಹಳ್ಳಿ ಗ್ರಾಮಕ್ಕೆ ಬಂದು ಸ್ಥಳಕ್ಕೆ ಬಂದು ನೋಡಲಾಗಿ ವರದಯ್ಯಗಾರಹಳ್ಳಿ ಕಡೆಯಿಂದ ಬೋಗೇನಹಳ್ಳಿ ಕಡೆಗೆ ಬರುವ ರಸ್ತೆಯಲ್ಲಿ ಬೋಗೇನಹಳ್ಳಿ ಶ್ರೀರಾಮರೆಡ್ಡಿ ರವರ ಇಟ್ಟಿಗೆ ಪ್ಯಾಕ್ಟರಿಗೆ ಹೋಗುವ ಮಣ್ಣಿನ ರಸ್ತೆಯ  ಪಕ್ಕದ (ದಾಂಬರು) ರಸ್ತೆಯಲ್ಲಿ ಕೆ.ಎ-40 ಇ.ಡಿ-9587 ನೊಂದಣಿ ಸಂಖ್ಯೆಯ ಯಮಹ ದ್ವಿ ಚಕ್ರ ವಾಹನದಲ್ಲಿ ರಕ್ತದ ಮಡವಿನಲ್ಲಿ ಬಿದ್ದಿದ್ದು  ಇದನ್ನು ದುರುದ್ದೇಶದಿಂದ ತನ್ನ ತಮ್ಮನ ಮೇಲೆ ಮಾರಕ ಆಯುಧಗಳಿಂದ ತಲೆಯ ಹಿಂಬಾಗಕ್ಕೆ ಹೊಡೆದು ಕೊಲೆ ಮಾಡಿರವುದು ಕಂಡು ಬಂದಿರುತ್ತದೆ ಈ ಕೃತ್ಯವು  ಈ ದಿನ ಸಂಜೆ ಸುಮಾರು 4-00 ಗಂಟೆಯಿಂದ  ಸಂಜೆ ಸುಮಾರು ಮದ್ಯದಲ್ಲಿ ಆಗಿದ್ದು ನನ್ನ ತಮ್ಮನ ಮೃತದೇಹವು ಪ್ರಸ್ತುತ ಕೃತ್ಯ ನಡೆದ ಸ್ಥಳದಲ್ಲಿಯೇ ಇದ್ದು ಆದ್ದರಿಂದ ತನ್ನ ತಮ್ಮನನ್ನು ರಾಜಕೀಯ ವೈಷಮ್ಯದಿಂದ ಹಾಗೂ ದುರದ್ದೇಶದಿಂದ ಕೊಲೆ ಮಾಡಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಿ ಕೋರಿ ನೀಡಿದ ದೂರಾಗಿರುತ್ತೆ.

4. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 25/2021 ಕಲಂ. 420,465,468,471,120B,209 ರೆ/ವಿ 34 ಐಪಿಸಿ :-

    ದಿನಾಂಕ: 07/02/2021 ರಂದು ಮದ್ಯಾಹ್ನ 3-00 ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿ.ಹೆಚ್.ಸಿ 211 ಮುರಳಿಧರ ರವರು ಠಾಣೆಗೆ ಹಾಜರಾಗಿ ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ವರ್ಗಾವಣೆಯಾಗಿ ಬಂದ ಕೇಸಿನ ದಾಖಲಾತಿಗಳನ್ನು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ-21-08-2020 ರಂದು  16-00 ಗಂಟೆಗೆ ನ್ಯಾಯಾಲಯದ ಪಿ.ಸಿ. 205 ಮೋಹನ್ ಕುಮಾರ್ ರವರು ಠಾಣೆಗೆ ಹಾಜರಾಗಿ ಘನ ನ್ಯಾಯಾಲಯದಿಂದ ಸಾದರಾದ  ಪಿ.ಸಿ. ಆರ್. ದೂರನ್ನು ಹಾಜರುಪಡಿಸಿದ್ದು ಪಿರ್ಯಾದಿದಾರರಾದ  ಆಂಜಿನಪ್ಪ ಬಿನ್  ಲೇಟ್ ಪಾಪಯ್ಯ, 72 ವರ್ಷ, ವಾಸ ನಂ. 118, 5 ನೇ ಮೈನ್ ರೋಡ್, ಮತ್ತಿಕೆರೆ, ಎಂ.ಎಸ್.ಆರ್.ಐ.ಟಿ. ಪೋಸ್ಟ್, ಬೆಂಗಳೂರು ರವರು ಘನ ನ್ಯಾಯಾಲಯದಲ್ಲಿ ದಾಖಲಿಸಿರುವ ದೂರಿನ ಸಾರಾಂಶವೇನೆಂದರೆ  ಗೌರಿಬಿದನೂರು ತಾಲ್ಲೂಕು ತೊಂಡೆಬಾವಿ ಹೋಬಳಿ ಚಿಕ್ಕಮಲ್ಲೇಕೆರೆ ಗ್ರಾಮದ ಸರ್ವೇ ನಂ. 23/1ಎ 1 ರಲ್ಲಿ 2 ಕರೆ ಜಮೀನಿದ್ದು ಸದರಿ ಜಮೀನನ್ನು  1 ರಿಂದ 6 ನೇ ಅರೋಪಿಗಳು ಜಮೀನಿನ ವಾರಸುದಾರರಾಗಿದ್ದು , 7 ರಿಂದ 10 ನೇ ಆರೋಪಿಗಳು  ರಿಯಲ್ ಎಸ್ಟೇಟ್  ವ್ಯಾಪಾರಿಗಳಾಗಿದ್ದು  ದಿನಾಂಕ 14-02-2019 ರಂದು  7 ನೇ ಆರೋಪಿಯು  8 ರಿಂದ 10 ರ ಆರೋಪಿಗಳಿಗೆ  ಜಮೀನನ್ನು ಮಾರಾಟ ಮಾಡುವ ಬಗ್ಗೆ ತಿಳಿಸಿದ್ದು 8 ರಿಂದ 10 ನೇ ಅರೋಪಿಗಳು   ಪಿರ್ಯಾದಿದಾರರಿಗೆ  ಗೌರಿಬಿದನೂರು ತಾಲ್ಲೂಕು ತೊಂಡೆಬಾವಿ ಹೋಬಳಿ ಚಿಕ್ಕಮಲ್ಲೇಕೆರೆ ಗ್ರಾಮದ ಸರ್ವೇ ನಂ. 23/1ಎ 1 ರಲ್ಲಿ  2 ಕರೆ ಜಮೀನಿದ್ದು ಸದರಿ ಜಮೀನನ್ನು 10 ಲಕ್ಷ ರೂಗಳಿಗೆ ಮಾರಾಟವನ್ನು ಮಾಡಿಸಿ ಗೌರಿಬಿದನೂರು ಸಬ್ ರಿಜಿಸ್ಟರ್ ಕಛೇರಿಯಲ್ಲಿ  ನೊಂದಣಿಯನ್ನು  ಮಾಡಿಸಿರುತ್ತಾರೆ. ಪಿರ್ಯಾದಿದಾರರಿಂದ   ಹಣವನ್ನು ಪಡೆದುಕೊಂಡು  ನೊಂದಣಿ ಸಮಯದಲ್ಲಿ 4 ನೇ ಆರೋಪಿಯು  ದಿನಾಂಕ 13-02-2019 ರಂದು  ನಕಲಿಯಾಗಿ ವಂಶವೃಕ್ಷವನ್ನು ಮಾಡಿಸಿಕೊಂಡು ಬಂದು 1 ನೇ ಅರೋಪಿಯು ಬಿ.ಕೆ. ರವಿರವರ ಹೆಂಡತಿಯಲ್ಲವೆಂದು  ವಂಶವೃಕ್ಷದಲ್ಲಿ ನಮೂದಿಸಿದ್ದು  ಮೇಲ್ಕಂಡ ಆರೋಪಿಗಳು  ಹಣವನ್ನು ಪಡೆದುಕೊಂಡು ಜಮೀನನ್ನು ನೊಂದಣಿ ಮಾಡಿಸಿಕೊಡದೇ  ನಕಲಿ ವಂಶವೃಕ್ಷವನ್ನು ಸೃಷ್ಟಿಸಿ ಮೋಸ  ಮಾಡಿರುತ್ತಾರೆಂದು ದೂರನ್ನು ನ್ಯಾಯಾಲಯದಲ್ಲಿ ದಾಖಲಿಸಿ ಸಾದರುಪಡಿಸಿರುವುದಾಗಿರುತ್ತದೆ.

5. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 32/2021 ಕಲಂ. 279,337 ಐಪಿಸಿ :-

    ದಿನಾಂಕ: 06-02-2021 ರಂದು ಮದ್ಯಾಹ್ನ 2.15 ಗಂಟೆಯಲ್ಲಿ ಫಿರ್ಯಾದಿದಾರರಾದ ರವಿಕಿರಣ್ ಎನ್.ಎಂ. ಬಿನ್ ಎನ್.ಸಿ. ಮುನಿರಾಜು, 28 ವರ್ಷ, ತೊಗಟರು, ಜಿರಾಯ್ತಿ, ನೆಲವಾಗಿಲು ಗ್ರಾಮ, ಹೊಸಕೋಟೆ ತಾಲ್ಲೂಕು. ಹಾಲಿ ವಾಸ: ಹೆಚ್.ಕ್ರಾಸ್, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಜಿರಾಯ್ತಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತಮ್ಮ ಸ್ವಂತ ಸ್ಥಳ ನೆಲವಾಗಿಲು ಗ್ರಾಮವಾಗಿದ್ದು ಹಾಲಿ ಹೆಚ್.ಕ್ರಾಸ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತೇವೆ. ನಮ್ಮ ಚಿಕ್ಕಪ್ಪನಾದ ಚನ್ನಕೃಷ್ಣಪ್ಪ ಬಿನ್ ಚೌಡಪ್ಪ ರವರಿಗೆ ಸುಮಾರು 50 ವರ್ಷ ವಯಸ್ಸಾಗಿದ್ದು ಬೆಂಗಳೂರು ಹೊಸೂರು ಮುಖ್ಯ ರಸ್ತೆಯ ಆಶ್ರಯ ಬಡಾವಣೆಯಲ್ಲಿ ವಾಸವಾಗಿದ್ದು, ಅವರಿಗೆ ಯಾರೂ ಮಕ್ಕಳು ಇರುವುದಿಲ್ಲ. ನಮ್ಮ ಅಣ್ಣನಾದ ಅಜರ್ುನ್ ರವರ ಮದುವೆ ನಿಶ್ವಯವಾಗಿದ್ದು ಮದುವೆ ಕಾರ್ಯಗಳ ಸಲುವಾಗಿ ಈಗ್ಗೆ ಒಂದು ವಾರದ ಹಿಂದೆ ನಮ್ಮ ಚಿಕ್ಕಪ್ಪ ಚನ್ನಕೃಷ್ಣಪ್ಪ ಮತ್ತು ನಮ್ಮ ಚಿಕ್ಕಮ್ಮ ಮಂಜುಳಮ್ಮ ರವರು ಇಬ್ಬರೂ ಸಹ ಬಂದಿದ್ದು, ನಮ್ಮ ಗ್ರಾಮವಾದ ನೆಲವಾಗಿಲು ಗ್ರಾಮದಲ್ಲಿ ವಾಸವಾಗಿದ್ದರು. ಹೀಗಿದ್ದು ದಿನಾಂಕ: 05-02-2021 ರಂದು ಸಂಜೆ 7.30 ಗಂಟೆಯಲ್ಲಿ ತಾನು ಹಾಗೂ ತಮ್ಮ ಅಣ್ಣನಾದ ಭೀಮಾನಂದ ರವರು ಹೆಚ್.ಕ್ರಾಸ್. ಗೆ ಸ್ವಂತ ಕೆಲಸದ ಸಲುವಾಗಿ ಹೋಗಿ ವಾಪಸ್ಸು ಮನೆಗೆ ಬರುವ ಸಲುವಾಗಿ ವಿದ್ಯಾಜ್ಯೋತಿ ಸ್ಕೂಲ್ ಬಳಿ ಬರುತ್ತಿದ್ದಾಗ ನಮ್ಮ ಚಿಕ್ಕಪ್ಪನಾದ ಚನ್ನಕೃಷ್ಣಪ್ಪ ರವರು ನೆಲವಾಗಿಲು ಗ್ರಾಮದಿಂದ ಹೆಚ್.ಕ್ರಾಸ್ ನಲ್ಲಿರುವ ತಮ್ಮ ಮನೆಗೆ ಬರುವ ಸಲುವಾಗಿ ತಮ್ಮ ತಂದೆಯವರಾದ ಎನ್.ಸಿ.ಮುನಿರಾಜು ರವರ ಬಾಬತ್ತು ನಂ. ಕೆಎ-07-ಎಲ್-1661 ಟಿವಿಎಸ್ ದ್ವಿಚಕ್ರ ವಾಹನದಲ್ಲಿ ರಸ್ತೆಯ ಎಡಬದಿಯಲ್ಲಿ ಬರುತ್ತಿದ್ದಾಗ ವಿಜಯಪುರ ಕಡೆಯಿಂದ ನಂ. ಕೆಎ-67-ಇ-2126 ಬಜಾಜ್ ಪಲ್ಸರ್ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಚಿಕ್ಕಪ್ಪ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು, ಕೂಡಲೇ ತಾನು ಹಾಗೂ ತಮ್ಮ ಅಣ್ಣ ಸ್ಥಳಕ್ಕೆ ಬಂದು ನೋಡಲಾಗಿ ಎರಡೂ ವಾಹನಗಳು ಜಖಂ ಆಗಿದ್ದು ಅಪಘಾತದಲ್ಲಿ ತಮ್ಮ ಚಿಕ್ಕಪ್ಪನಾದ ಚನ್ನಕೃಷ್ಣಪ್ಪ ರವರಿಗೆ ಬಲಗಾಲಿನ ಮೊಣಕಾಲು, ಸೊಂಟ, ಬಲಗೈ ಹಾಗೂ ಮುಖಕ್ಕೆ ಗಳಿಗೆ ಗಾಯಗಳಾಗಿದ್ದು ಗಾಯಾಳುವನ್ನು ಕೂಡಲೇ ತಾನು ಹಾಗೂ ತಮ್ಮ ಅಣ್ಣ ಭೀಮರಾಜ್ ರವರು 108 ಆಂಬ್ಯುಲೆನ್ಸ್ ವಾಹನದಲ್ಲಿ ಹೊಸಕೋಟೆ ಎಂ.ವಿ.ಜೆ. ಆಸ್ಪತ್ರೆಗೆ ಚಿಕಿತ್ಸೆಗಕಾಗಿ ಕರೆದುಕೊಂಡು ಹೋಗಿ ದಾಖಲಿಸಿದ್ದು, ತಮ್ಮ ಚಿಕ್ಕಪ್ಪನವರಿಗೆ ಚಿಕಿತ್ಸೆ ಕೊಡಿಸಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ನಂ. ಕೆಎ-67-ಇ-2126 ಬಜಾಜ್ ಪಲ್ಸರ್ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ತಮ್ಮ ಚಿಕ್ಕಪ್ಪ ಚಾಲನೆ ಮಾಡುತ್ತಿದ್ದ ಕೆಎ-07-ಎಲ್-1661 ಟಿವಿಎಸ್ ದ್ವಿಚಕ್ರ ವಾಹನಕ್ಕೆ ಅಪಘಾತವುಂಟುಮಾಡಿ ಅಪಘಾತ ಮಾಡಿರುವ ಆರೋಪಿ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಮೊ.ಸಂ. 32/2021 ಕಲಂ 279, 337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

6. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 33/2021 ಕಲಂ. 302 ಐಪಿಸಿ :-

    ದಿನಾಂಕ: 07-02-2021 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಿ.ಇಮ್ರಾನ್ ಪಾಷ ಬಿನ್ ಲೇಟ್ ಬಕ್ಷು, 30 ವರ್ಷ, ಮುಸ್ಲಿಂ, ಸಿಲ್ಕ್ ಮರ್ಚೆಂಟ್, ವಾಸ-ಆಜಾದ್ ನಗರ, ಶಿಡ್ಲಘಟ್ಟ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆಗೆ 3 ಜನ ಗಂಡು ಮತ್ತು ಒಂದು ಹೆಣ್ಣು ಮಗಳಿದ್ದು, ತಾನು ಮತ್ತು ತನ್ನ ತಮ್ಮನಾದ ಸೈಯದ್ ಫರ್ಮಾನ್ ರವರು (25 ವರ್ಷ) ಸಿಲ್ಕ್ ಮರ್ಚೇಂಟ್ ಆಗಿ ಕೆಲಸ ಮಾಡಿಕೊಂಡಿರುತ್ತೇವೆ. ದಿನಾಂಕ 06/02/2021 ರಂದು ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ಆತನ ಡಿಯೋ ದ್ವಿ ಚಕ್ರ ವಾಹನದಲ್ಲಿ ಮನೆಯಿಂದ ಎಲ್ಲಿಗೋ ಹೋಗಿರುತ್ತಾನೆ. ರಾತ್ರಿ ಎಷ್ಟು ಹೊತ್ತು ಕಳೆದರೂ ಸಹ ಮನೆಗೆ ಬಾರದೇ ಇದ್ದಾಗ ತಾವು ಆತನಿಗೆ ಸುಮಾರು ಬಾರಿ ಪೋನ್ ಮಾಡಿದರು ಸಹ ಪೋನ್ ತೆಗೆದಿರುವುದಿಲ್ಲ. ತಾವು ಎಲ್ಲಿಗೋ ಹೋಗಿರ ಬಹುದು ಎಂದು ಸುಮ್ಮನಿದ್ದೆವು. ಹೀಗಿರುವಾಗ ಈ ದಿನ ದಿನಾಂಕ: 07/02/2021 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಯಾರೋ ತನಗೆ ಪೋನ್ ಮಾಡಿ ತನ್ನ ತಮ್ಮನಾದ ಸೈಯದ್ ಪರ್ಮಾನ್ ರವರು ಹನುಮಂತಪುರ ಗ್ರಾಮದ ಬಳಿಯಿರುವ ಸೌಂದರ್ಯ ಲೇ ಔಟ್ ನಲ್ಲಿ ಹೊಸದಾಗಿ ಕಟ್ಟುತ್ತಿರುವ ಮಹಡಿ ಮೇಲೆ ಕೊಲೆಯಾಗಿ ಸತ್ತು ಬಿದ್ದಿರುವುದಾಗಿ ವಿಷಯ ತಿಳಿಸಿದರು. ಕೂಡಲೇ ತಾನು ತಮ್ಮ ಮನೆಯವರು ಹಾಗು ತನ್ನ ಸ್ನೇಹಿತರು ಸ್ಥಳಕ್ಕೆ ಬಂದು ನೋಡಲಾಗಿ ಯಾರೋ ಆಸಾಮಿಗಳು ಯಾವುದೋ ಹರಿತವಾದ ಆಯುಧದಿಂದ ತನ್ನ ತಮ್ಮನ ಕತ್ತಿನ ಮೇಲೆ ಕೊಯ್ದು, ಕತ್ತಿನ ಭಾಗದಲ್ಲಿ ತಿವಿದು, ತಲೆಗೆ ಹಾಗು ಎದೆಯ ಭಾಗದಲ್ಲಿ 3 ಬಾರಿ ತಿವಿದು, ಎಡ ಕೈಗೆ ಕತ್ತರಿಸಿ ಕೊಲೆ ಮಾಡಿರುತ್ತಾರೆ. ತನ್ನ ತಮ್ಮ ಈಗ್ಗೆ ಒಂದು ವಾರದ ಹಿಂದೆ ಯಾರೋ ಒಬ್ಬ ಹುಡುಗಿಯ ಪೋಟೋವನ್ನು ತನ್ನ ಪೇಸ್ ಬುಕ್ ಖಾತೆಯಲ್ಲಿ ಅಪ್ ಲೋಡ್ ಮಾಡಿರುತ್ತಾನೆ. ಈ ಹುಡುಗಿಯ ಕಡೆಯವರಿಂದ ತನ್ನ ತಮ್ಮನಿಗೆ ತೊಂದರೆಯಾಗಿರ ಬಹುದು ಅಥವಾ ತನ್ನ ತಮ್ಮನನ್ನು ಯಾರೋ ಆಸಾಮಿಗಳು ಯಾವುದೋ ಕಾರಣದಿಂದ ಕೊಲೆ ಮಾಡಿರುತ್ತಾರೆ. ತನ್ನ ತಮ್ಮನ ಶವವು ಸ್ಥಳದಲ್ಲಿಯೇ ಇರುತ್ತದೆ. ಆದ ಕಾರಣ ತಾವು ಸ್ಥಳಕ್ಕೆ ಬೇಟಿಯನ್ನು ನೀಡಿ ತನ್ನ ತಮ್ಮನನ್ನು ಕೊಲೆ ಮಾಡಿರುವ ಆಸಾಮಿಗಳನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 07-02-2021 05:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080