Feedback / Suggestions

1. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.83/2021 ಕಲಂ. 279,304(A) ಐ.ಪಿ.ಸಿ:-

  ಈ ದಿನಾಂಕ 06-09-2021 ರಂದು ಬೆಳಿಗ್ಗೆ 2:00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 05-09-2021 ರಂದು ರಾತ್ರಿ 9-30 ರ ಸಮಯದಲ್ಲಿ ನನ್ನ ತಂಗಿ ಮಗನಾದ ಸಂತೋಷ್ ಬಿನ್ ಶ್ರೀರಾಮುಲು 19 ವರ್ಷ, ರವರು  ಜಮೀನಿನ ಕೊಳವೆ ಬಾವಿಯ ಹತ್ತಿರ ಹೋಗಿ ಬರುತ್ತಿದ್ದಾಗ ಮಾಚನಪಲ್ಲಿ ಗ್ರಾಮದ ಶ್ರೀನಾಥ ಎಂಬುವವರಿಗೆ ಸೇರಿದ  ಟೇಂಪೋ  KA-51 D-5585  ವಾಹನ ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ  ಬಂದು ಅಬ್ಬರವಾರಪಲ್ಲಿ ಹತ್ತಿರ ರಸ್ತೆ ಬದಿಯಲ್ಲಿ ಬರುತ್ತಿದ್ದ ಸಂತೋಷನಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಟೆಂಪೋ ಚಾಲಕ ವಿಜಯಕುಮಾರ್.ಎನ್ ಟೆಂಪೋ ಚಾಲನೆ ಮಾಡುತ್ತಿದ್ದು ಟೇಂಫೊವನ್ನು ಸ್ಥಳದಲ್ಲಿಯೆ ಬಿಟ್ಟು ನಮ್ಮ ಊರಿನ ಮುಂದೆ ರಸ್ತೆ ಮುಖಾಂತರ  ಓಡಿ ಹೋಗುತ್ತಿರುವಾಗ ನಮ್ಮ ಊರಿನ ಗ್ರಾಮಸ್ಥರಾದ 1)ಈರಪ್ಪ ಬಿನ್  ಕೋತ್ತ ವೆಂಕಟರಾಯಪ್ಪ 2)ನಾಗಪ್ಪ ಬಿನ್ ವೆಂಕಟರಾಯಪ್ಪ ರವರು ನೋಡಿರುತ್ತಾರೆ ನಂತರ ಘಟನೆ ನಡೆದ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಭಾಮೈದ ಸಂತೋಷ್  ಮೃತಪಟ್ಟಿರುತ್ತಾನೆ ಆದ್ದರಿಂದ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಕೋರಿ.

 

2. ಸಿ.ಇ.ಎನ್ ಪೊಲೀಸ್‌ ಠಾಣೆ ಮೊ.ಸಂ.37/2021 ಕಲಂ. 419,420 ಐ.ಪಿ.ಸಿ & 66(D) INFORMATION TECHNOLOGY ACT 2000:-

    ದಿನಾಂಕ:6/9/2021 ರಂದು ಪಿರ್ಯಾಧಿ ಶ್ರೀಮತಿ ಪ್ರಿಯದರ್ಶಿನಿ ಎಸ್ ಕೋಂ ಭಾಸ್ಕರ್, 36 ವರ್ಷ, ಅಮೇಜೀಂಗ್ ಡ್ರೀಮ್ ಹಾಲಿಡೇಸ್ ಟೂರ್ ಮತ್ತು ಟ್ರಾವಲ್ ಕಂಪನಿಯ ಮಾಲೀಕರು, ವಾಸ ಮಹಕಾಳಿ ರಸ್ತೆ, ಚಿಕ್ಕಬಳ್ಳಾಪುರ ಟೌನ್, ಮೊ ಸಂಖ್ಯೆ:7259485584. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ  ದೂರಿನ ಸಾರಾಂಶವೇನೆಂದರೆ ತಾನು ಚಿಕ್ಕಬಳ್ಳಾಪುರ ನಗರದಲ್ಲಿ  ಈಗ್ಗೆ 02 ವರ್ಷಗಳಿಂದ  ಅಮೇಜೀಂಗ್ ಡ್ರೀಮ್ ಹಾಲಿಡೇಸ್ ಟೂರ್ ಮತ್ತು ಟ್ರಾವಲ್ ಕಂಪನಿಯನ್ನು ನೆಡೆಸುತ್ತಿರುತ್ತೇನೆ.ಈ ಕಂಪನಿಯಲ್ಲಿ ಟ್ರೈನ್ ಟಿಕೆಟ್ ಬುಕಿಂಗ್, ಫ್ಲೈಟ್ ಟಿಕೆಟ್ ಬುಕಿಂಗ್ ಪಾಸ್ ಪೋರ್ಟ, ವೀಸಾ ,ಹಾಲಿಡೇ ಟೂರ್ ಪ್ಯಾಕೇಜ್,ಇಂಟರ್ ನ್ಯಾಷನಲ್ ಟೂರ್ ಪ್ಯಾಕೇಜ್, ತಿರುಮಲ ದರ್ಶನ ಬುಕಿಂಗ್ ಮೊಲಾದವುಗಳನ್ನು ನಮ್ಮ ಕಂಪನಿಯಿಂದ ನೆಡೆಸಿಕೊಂಡು ಬರುತ್ತಿರುತ್ತೇವೆ. ನಮ್ಮ ಮಾವ ಶ್ರೀನಿವಾಸಲು ರವರ ಹೆಸರಿನಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿನ ಹೆಚ್ ಡಿ  ಎಪ್ ಸಿ ಬ್ಯಾಂಕ್ ನಲ್ಲಿ ಕರಂಟ್ ಅಕೌಂಟ್ ನಂ;-50200049818496 ರಂತೆ ಖಾತೆಯನ್ನು ಹೊಂದಿದ್ದು, ಇದಕ್ಕೆ ಎಟಿಎಂ ಕಾರ್ಢ ನಂ:4160 2107 1123 4578. ಮತ್ತು ಸದರಿ ಖಾತೆಗೆ ನಮ್ಮ ಮೊಬೈಲ್ ನಂಬರ್  7259485584 ನ್ನು ಲಿಂಕ್ ಮಾಡಿಕೊಂಡು ಗೂಗಲ್ ಫೇ ವ್ಯಾಲೆಟ್ ನಲ್ಲಿ ನಮ್ಮ ಕಂಪನಿಯ ಹಣ ಕಾಸಿನ ವ್ಯವಹಾರಗಳನ್ನು ಮಾಡುತ್ತಿದ್ದೆವು.ಹಾಗೂ ನನ್ನ ಹೆಸರಿನಲ್ಲಿ ಬೆಂಗಳೂರಿನ ಕಲ್ಯಾಣ ನಗರದಲ್ಲಿ ಆಕ್ಸೀಸ್ ಬ್ಯಾಂಕ್ ಅಕೌಂಟ್ ನಂ:917010038090440 ರಂತೆ ಉಳಿತಾಯ ಖಾತೆಯನ್ನು ಸಹ ಹೊಂದಿದ್ದು, ಇದಕ್ಕೆ ಎಟಿಎಂ ಕಾರ್ಡ ನಂ:5346 8000 2801 5431  ಮತ್ತು ಇದಕ್ಕೆ ಮೇಲ್ಕಂಡ ಗೂಗಲ್ ಫೇ ಸಹ ಇನ್ಸಾಟಾಲ್ ಮಾಡಿಕೊಂಡು ಇದರಲ್ಲಿ ಸಹ ಕಂಪನಿಯ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಿರುತ್ತೇನೆ. ಈಗಿರುವಲ್ಲಿ ದಿನಾಂಕ:31/8/2021 ರಂದು ಮದ್ಯಾನಃ ಸುಮಾರು 01-49 ಗಂಟೆಯ ಸಮಯದಲ್ಲಿ ನಾನು ನಮ್ಮ ಕಂಪನಿಯ ಕಛೇರಿಯಲ್ಲಿ ಕೆಲಸದಲ್ಲಿ ಇದ್ದಾಗ ಮೊ ಸಂಖ್ಯೆ:9182567882 ಸಂಖ್ಯೆಯಿಂದ  ನನಗೆ ಕರೆ ಬಂದಿದ್ದು, ನಾನು ಕರೆಯನ್ನು ಸ್ವೀಕರಿಸಲಾಗಿ ಅವರು ತನ್ನ ಹೆಸರು ಪಂಜಾ ರಮಣಾ ಪ್ರಸಾದ್, ನಾನು ಟಿಟಿಡಿ ಎಕ್ಸಿಕ್ವೋಟೀವ್ ಆಪೀಸರ್ ಅಂತ ಹೇಳಿ ಪರಿಚಯ ಮಾಡಿಕೊಂಡು ನಾನು  ನಿಮ್ಮ ಕಂಪನಿಯ  ಬುಕಿಂಗ್ ಟ್ರಾನ್ಸೆಕ್ಷನ್ ಪರಿಶೀಲಿಸಿದೆ ಬಹಳ ಚನ್ನಾಗಿದೆ. ಅದಕ್ಕೆ ನಿಮ್ಮ ನಂಬರ್ ನ್ನು ಪಡೆದು ನಿಮಗೆ ತಿರುಮಲ ದೇವಾಲಯದ ದರ್ಶನದ ಟಿಕೆಟ್ ಬುಕ್ಕಿಂಗ್  ಮಾಡಿಕೊಡುತ್ತೇನೆ. ಅಂತ ಹೇಳಿದ. ನಾನು ನಿಮ್ಮನ್ನು ಹೇಗೆ ನಂಬುವುದು ಅಂತ ಹೇಳಿದೆ & ನೀವು ಈ ಹಿಂದೆ ಯಾರಿಗೆ ಟಿಕೆಟ್ ಬುಕ್ ಮಾಡಿದ್ದೀರಿ ಅದರ ದಾಖಲೆಗಳು ಟಿಕೆಟ್ ಗಳನ್ನು & ನಿಮ್ಮ ಟಿಟಿಡಿ ಐ ಡಿ ಕಾರ್ಢಗಳನ್ನು ಕಳುಹಿಸಲು ತಿಳಿಸಿದೆ.ನಂತರ ಅವರು ಈ ಮೊದಲು ಬುಕ್ ಮಾಡಿರುವ ಟಿಕೆಟ್ ಗಳ ಕಸ್ಟಮರ್  ರಾಜು ಚನ್ನೈ ಮೊ ನಂ:6374726154 ನಂಬರ್ ಕಳುಹಿಸಿದ. ನಾನು ಸದರಿ ನಂಬರ್ಗೆ ಕರೆ ಮಾಡಿವಿಚಾರಿಸಿದಾಗ ಅವರು  ಓಕೆ ಬುಕ್ ಮಾಡಿ ಉತ್ತಮವಾಗಿದೆ ಅಂತ ತೆಮಿಳು ಬಾಷೆಯಲ್ಲಿತಿಳಿಸಿದ ನನಗೆ ನಂಬಿಕೆ ಬಂತು.ನಂತರ ನಾನು ಮೇಲ್ಕಂಡ ವ್ಯಕ್ತಿಗೆ ಬುಕ್ಕಿಂಗ್ ಮಾಡಲು ತಿಳಿಸಿದೆ. ಅವರು ತಿರುಮಲ ದರ್ಶನಕ್ಕೆ ಹೋಗುವವರ ಪ್ರತಿಯೊಬ್ಬರ ಆಧಾರ್  ವಿವರಗಳನ್ನು ಕಳುಹಿಸಲು ತಿಳಿಸಿ ಪ್ರತಿಯೊಬ್ಬರಿಗೆ 900/- ರೂಗಳನ್ನು ಎಸ್ ಬಿ ಐ ಬ್ಯಾಂಕ್ ಅಕೌಂಟ್ ನಂಬರ್;30972359889 IFSC CODE: SBIN0000818 & PUNJAB NATIONAL BANK A/C NO:1593010020873 IFSC CODE:PUNB0159320.ಕ್ಕೆ ಲಿಂಕ್ ಆಗಿರುವ ಗೂಗಲ್ ಫೇ ಅಕೌಂಟ್ ನಂ: 7569469386 ಕ್ಕೆ ಹಣವನ್ನು ಜಮೇ ಮಾಡಿ, ಸದರಿ ಜಮೇ ಮಾಡಿದ ಬಗ್ಗೆ  ಸ್ಕ್ರೀನ್ ಶಾಟ್ ಪ್ರತಿಗಳನ್ನು ಕಳುಹಿಸಲು ತಿಳಿಸಿದ ಅದೇ ರೀತಿ ಅವನು ಹೇಳಿದಂತೆ 5-6 ಜನರ ಟಿಕೆಟ್ ಅಮೌಂಟ್ ನ್ನು ನಾನು ಒಂದೇ ಭಾರಿ ನನ್ನ ಗೂಗಲ್ ಫೇ ಮೂಲಕ  ಅವನ ಮೇಲ್ಕಂಡ ಗೂಗಲ್ ಫೇ ಅಕೌಂಟ್ಗೆ ಕಳುಹಿಸಿದ ನಂತರ  ಅವನು 2-3 ಗಂಟೆಯ ನಂತರ ಟಿಕೆಟ್ ಗಳನ್ನು  ವ್ಯಾಟ್ಸಾಪ್ ಮೂಲಕ ಕಳುಹಿಸುತ್ತಿದ್ದ. ಅದೇ ರೀತಿ ನಾನು 143 ಜನರ ತಿರುಮಲ ದರ್ಶನದ ಟಿಕೆಟ್ ಗಳನ್ನು ಬುಕ್ ಮಾಡಿ ಅದರ ಬಾಬತ್ತು ತಲಾ 900/- ರೂಗಳಂತೆ  ಒಟ್ಟು 1,28,700/- ರೂಗಳನ್ನು ಅವನ ಮೇಲ್ಕಂಡ ಅಕೌಂಟ್ ಗಳಿಗೆ ಜಮೇ ಮಾಡಿದ್ದು, ಈ ವೇಳೆಯಲ್ಲಿ ನನ್ನ ಗೂಗಲ್ ಫೇ ಲಿಮಿಟ್ ಮುಗಿದ ಕಾರಣ ನಮ್ಮ ಮಾವನ ಮಗಳಾದ ಲೇಖನ ರವರ ಎಸ್ ಬಿ ಐ ಬ್ಯಾಂಕ್ ಶಾಖೆ ಚಿಕ್ಕಬಳ್ಳಾಪುರ ಖಾತೆ ನಂ:64157906247 ಖಾತೆಯಿಂದ ಸಹ ಹಣವನ್ನು ವರ್ಗಾಯಿಸಿರುತ್ತೇನೆ. ಅವನು ಸದರಿ ಹಣ ಜಮೇ ಆದ ಬಗ್ಗೆ ಸ್ಕ್ರೀನ್ ಕಳುಹಿಸಿದ ನಂತರ ಅವನು ಟಿಕೆಟ್ ಗಳನ್ನು ಎಲ್ಲರಿಗೂ ಕಳುಹಿಸಿರುತ್ತಾನೆ. ಈ ಫೈಕಿ ದಿನಾಂಕ:3/9/2021 ರಂದು ಇಬ್ಬರಿಗೆ ದರ್ಶನದ ಟಿಕೆಟ್ ಇತ್ತು ಆದರೆ ದರ್ಶನದ ಬಗ್ಗೆ ಟಿಟಿಡಿ ಆಪ್ ನಲ್ಲಿ ಚಕ್ ಮಾಡಲಾಗಿ ಟಿಕೆಟ್ ಫೇಕ್ ಅಂತ ತಿಳಿಯಿತು, ನಂತರ ನಾನು ಕೂಡಲೆ ತಿರುಮಲಕ್ಕೆ ಹೋಗಿ ಅವನಿಗೆ ಕರೆ ಮಾಡಿದಾಗ ಕರೆಯನ್ನು ಅವನು ಸ್ವೀಕರಿಸಲಿಲ್ಲ. ನಂತರ  ಪೋನ್  ಸ್ವೀಚ್ ಆಪ್ ಮಾಡಿರುತ್ತಾನೆ.ನಾನು ಏನೂ ಮಾಡಲು ದಿಕ್ಕು ತೋಚದೆ ನಾನು ಚಿಕ್ಕಬಳ್ಳಾಪುರಕ್ಕೆ ವಾಪಸ್ಸು ಬಂದು ತಿರುಮಲ ದರ್ಶನಕ್ಕೆ ಹೋಗಬೇಕಾದವರಿಗೆ ವಿಷಯ ತಿಳಿಸಿ ಅವರವರ ಹಣವನ್ನು ವಾಪಸ್ಸು ನೀಡಿರುತ್ತೇನೆ.ಸದರಿ ನನಗೆ ತಿರುಮಲ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿಕೊಡುವುದಾಗಿ ನಂಬಿಸಿ ನನ್ನಿಂದ  ಒಟ್ಟು 1,28,700/-ರೂಗಳನ್ನು ಮೇಲ್ಕಂಡ ಅವನ ಬ್ಯಾಂಕ್ ಖಾತೆಗಳಿಗೆ ಜಮೇ ಮಾಡಿಸಿಕೊಂಡು, ನಕಲಿ ಟಿಕೆಟ್ ಗಳನ್ನು ಕಳುಹಿಸಿ ವಂಚಿಸಿರುವ ಆರೋಪಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಿ ನಮ್ಮ ಹಣವನ್ನು ನಮಗೆ ವಾಪಸ್ಸು ಕೊಡಿಸಿಕೊಡಲು ಕೋರಿ ನೀಡಿದ ದೂರು.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.144/2021 ಕಲಂ. 323,504,506 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act 2015:-

    ದಿನಾಂಕ:05-09-2021 ರಂದು 15-00 ಗಂಟೆಗೆ ಶ್ರೀಮತಿ ರಾಮಕ್ಕ ಕೊಂ ಗೋಪನ್ನ ಸಾದೇನಹಳ್ಳಿ ಗ್ರಾಮರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ರಾಮಚಂದ್ರರೆಡ್ಡಿ ಬಿನ್ ಹನುಮಂತಪ್ಪ ಎಂಬುವವರು  ಆನೆಮಡಗು ಕೊತ್ತೂರು ಗ್ರಾಮದ ಸರ್ವೆ  ನಂ 24 ರ 40 ಎಕರೆ ಜಮೀನು ಸಾಗುವಳಿ ಮಾಡುತ್ತಿರುತ್ತಾರೆ ಸದರಿ ಸರ್ವೆ ನಂ 24 ರಲ್ಲಿ ತಾನು 03 ಎಕರೆಗೆ 53 ಮತ್ತು 57 ಅರ್ಜಿ ಸಲ್ಲಿಸಿ ಸರ್ವೆ ಸ್ಕೇಚ್ ಮಾಡಿಸಿದ್ದು ಅದರಂತೆ ಉಪ ವಿಭಾಗಾಧಿಕಾರಿಗಳು ಆದೇಶ ಮಾಡಿ ದರಖಾಸ್ತು ಪಟ್ಟಿಯಲ್ಲಿ ಮಂಜೂರು ಮಾಡಲು ಸೂಚಿಸಿರುತ್ತಾರೆ. ಸರ್ವೆ ನಂ 24 ರಲ್ಲಿ 208 ಎಕರೆ ಜಮೀನಿದ್ದು ಸದರಿ ಜಮೀನು ಸರ್ಕಾರದ ಗೋಮಾಳವಾಗಿರುತ್ತದೆ. ಹೀಗಿರುವಾಗ ದಿನಾಂಕ:27/08/2021 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ತಮ್ಮ ಜಮೀನಿನ ಹತ್ತಿರ  ಕೆಲಸ ಮಾಡುತ್ತಿದ್ದಾಗ ರಾಮಚಂದ್ರರೆಡ್ಡಿ ರವರು ಏಕಾಏಕಿಯಾಗಿ ಹಿಂಭಾಗದಿಂದ ಒದ್ದು, ಜೋರಾಗಿ ಕೂಗಾಡಿ  ನಿನ್ನ ಅಮ್ಮನ್  ನಾಯಕ ಜಾತಿ ಮುಂಡೆ ಎಂದು ಜಾತಿ ನಿಂದನೆ ಮಾಡಿ ಕಪಾಳಕ್ಕೆ ಹೊಡೆದು ತಲೆ ಕೂದಲು ಹಿಡಿದು ಎಳೆದಾಡಿ ದೈಹಿಕ ಹಿಂಸೆ ನೀಡಿ ಮೂಗೇಟುಗಳುಂಟು ಮಾಡಿರುತ್ತಾರೆ. ತಾನು  ಜೋರಾಗಿ ಕಿರುಚಿಕೊಂಡರು ಬಿಡದೇ ಈ ಜಮೀನಿನಲ್ಲಿ ಸಾಯಿಸಿ ಉತು ಹಾಕುತ್ತೇನೆಂದು ಜಮೀನಿನ ಆಚೆಗೆ ತಳ್ಳಿರುತ್ತಾರೆ. ಆಗ ತಾನು ಪ್ರಜ್ಞೆ ತಪ್ಪಿ ಬಿದ್ದಿದ್ದು ಸ್ವಲ್ಪ ಸಮಯದ ನಂತರ ಹಳ್ಳದಲ್ಲಿ ನೀರು ಕುಡಿದು ಊರಿಗೆ ಬಂದು ತನ್ನ ಮಗ ವೇಣುಗೋಪಾಲರವರಿಗೆ ವಿಷಯ ತಿಳಿಸಿದ್ದು. ತನ್ನ ಮಗ ಚಿಕಿತ್ಸೆಗೆ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ತಾನು ಸುಮಾರು ವರ್ಷಗಳಿಂದ ಸದರಿ ಜಮೀನಿನಲ್ಲಿ ರಾಗಿ ಬೆಳೆ ಜೋಳ ಬೆಳೆದು ಜೀವನ ಮಾಡಿಕೊಂಡಿದ್ದು ಈ ರೀತಿ ಸುಮಾರು ಸಾರಿ ರಾಮಚಂದ್ರರೆಡ್ಡಿ ರವರು ಬೇಕಾಗಿ ಅಂತ ಗಲಾಟೆ ಮಾಡಿರುತ್ತಾರೆ. ಈ ವಿಚಾರವಾಗಿ ತಮ್ಮ ಗ್ರಾಮದ ಹಿರಿಯರು ನ್ಯಾಯ ಮಾಡುತ್ತೇನೆ ಎಂದು ಹೇಳಿದ್ದು ಆದರೆ ಯಾವುದೇ ನ್ಯಾಯ ಸಿಗದ ಕಾರಣ ಈ ದಿನ ಠಾಣೆಗೆ ಬಂದು  ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.145/2021 ಕಲಂ. 143,144,147,447,307,504,149 ಐ.ಪಿ.ಸಿ:-

     ದಿನಾಂಕ: 05/09/2021 ರಂದು ಸಂಜೆ 4-00 ಗಂಟೆ ಸಮಯಕ್ಕೆ ಪಿರ್ಯಾದಿ ಶ್ರೀ.ರಾಮಚಂದ್ರ ಗೌಡ ಬಿನ್  ಹನುಮಂತಯ್ಯ ಹೆಚ್.ಆರ್. ವಾಸ: ಪತಿ ಆಸ್ಪತ್ರೆ  ಹಿಂಭಾಗ  ಪ್ರಶಾಂತನಗರ ಚಿಕ್ಕಬಳ್ಳಾಪುರ ಟೌನ್  ರವರು  ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೇನೆಂದರೆ.  ತನಗೂ ಮತ್ತು ಗೋಪಣ್ಣ  ಬಿನ್ ನಡಿಪಿ ಗೋಪಾಲಪ್ಪ ರವರ ಮನೆಯವರಿಗೆ 2013  ನೇ ಸಾಲಿನಿಂದ ಜಮೀನು ವಿಚಾರದಲ್ಲಿ  ತೊಂದರೆ  ನೀಡುತ್ತಿದ್ದು ಆನೆಮೊಡಗು ಗ್ರಾಮದ ಸರ್ವೆ ನಂಬರ್: 24/8 ಪಿ-1 ರ 04 ಎಕರೆ 30 ಗುಂಟೆ  ಜಮೀನಿನಲ್ಲಿ ವ್ಯವಸಾಯ ಮಾಡಲು ಮುಂದಾದಾಗ ಅಡ್ಡಿ ಪಡಿಸುತ್ತಿದ್ದು ಈ ಬಗ್ಗೆ ಓ.ಎಸ್.ನಂಬರ್; 459/2013 ರಂತೆ  ದಾವೆ ಹೂಡಿ  ಶಾಶ್ವತ ತಡೆಯಾಜ್ಞೆ ಪಡೆದಿದ್ದು ಈ ದಾವೆಯು  ರಾಜ್ಯ ಉಚ್ಚ ನ್ಯಾಯಾಲಯದಲ್ಲಿ  RSA 2426/2017 ರಂತೆ ಮೇಲ್ಮನವಿಯನ್ನು ರಾಮಕ್ಕ ಮತ್ತು ಇತರರ ವಿರುದ್ದ  ದಾವೆ ಹೂಡಿದ್ದು  ಯತಾಸ್ಥಿತಿಗೆ  ಆದೇಶ ಮಾಡಿ  ವಿಚಾರಣೆ ಹಂತದಲ್ಲಿರುತ್ತೆ.  ಹೀಗಿದ್ದು ದಿನಾಂಕ: 23/08/2021 ರಂದು  ಸದರಿ  ಜಮೀನಿನಲ್ಲಿ  ತನ್ನ ತಂದೆಯವರ  ಜೊತೆ ಗುಂತಪ್ಪನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಬಿನ್ ಮುನಿವೆಂಕಟಪ್ಪ ಮತ್ತು ಅವರ  ಬೀಗರಾದ ವೆಂಕಟೇಶಪ್ಪ ರವರುಗಳು  ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿ ಹುರುಳಿ ಕಾಳು ಚೆಲ್ಲುತ್ತಿದ್ದಾಗ  ರಾಮಪ್ಪ , ವೇಣಪ್ಪ, ಗೋವಿಂದ. ವಿಷ್ಣುವರ್ಧನ . ಮತ್ತು ರಾಮಕ್ಕನ ಸೊಸೆಯವರಾದ ಅಶ್ವಥ್ಥಮ್ಮ ಮತ್ತು ಮಂಜುಳಮ್ಮ ರವರುಗಳು ಅತಿಕ್ರಮ  ಪ್ರವೇಶ ಮಾಡಿ  ಸಾಗುವಳಿಗೆ ಅಡ್ಡಿಪಡಿಸಿ  ನನ್ನ ತಂದೆಯವರಿಗೆ  ತೊಂದರೆ ಕೊಡುತ್ತಿದ್ದಾರೆ ಎಂದು  ಹೇಳಿದಾಗ   ನೀವು  ಎನು ಬೇಕೋ ಮಾಡಿಕೋ ಎಂದು ಬೆದರಿಕೆ  ಹಾಕಿ  ಹೊರಟು ಹೋಗಿರುತ್ತಾರೆ. ತದ ನಂತರ ದಿನಾಂಕ: 27/08/2021 ರಂದು ಬೆಳಗ್ಗೆ 10-30 ಗಂಟೆಯಲ್ಲಿ ಹುರಳಿ  ಕಾಳನ್ನು  ಚೆಲ್ಲಿದ್ದ ಜಾಗದಲ್ಲಿ  ರಾಮಕ್ಕ ಕೋಂ ಗೋಪಣ್ಣ ರವರು ಏಕಾಏಕಿ ಬಂದು   ಪೈರು ನೆಡುತ್ತಿದ್ದು   ತಾನು  ಕೇಳಿದ್ದಕ್ಕೆ  ನಿಮಗೆ ಸಾದೇನಹಳ್ಳಿ ಗ್ರಾಮದ ಸರ್ವೆ ನಂಬರ್: 47 ರಲ್ಲಿ 03 ಎಕರೆ ಹಾಗೂ ಅದೇ  ಗ್ರಾಮದ ಸರ್ವೆ ನಂಬರ್: 27/4ಬಿ ರಲ್ಲಿ 01 ಎಕರೆ 20 ಗುಂಟೆ  ಜಮೀನಿದ್ದು ಅಲ್ಲಿ ಎನು ಬೇಕಾದರೂ ಮಾಡಿಕೊಳ್ಳಿ ನಮ್ಮ ಸ್ವತ್ತಿಗೆ  ರಾಜ್ಯ  ಉಚ್ಚ  ನ್ಯಾಯಾಲಯದಲ್ಲಿ ದಾವೆ ಚಾಲ್ತಿಯಲ್ಲಿರುವಾಗ  ಈ ರೀತಿ  ಮಾಡುವುದು ತಪ್ಪಾಗುತ್ತದೆ ಎಂದು ಹೇಳುತ್ತಿದ್ದಂತೆ  ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ  ತಮ್ಮ ಕರೆದುಕೊಂಡು ಬಂದು ನಿಮಗೆ ಒಂದು ಗತಿ ಕಾಣಿಸುತ್ತೇನೆಂದು  ಹೇಳಿ  15-20  ನಿಮಿಷಗಳಲ್ಲಿ  ರಾಮಕ್ಕ ಅವರ ಮಕ್ಕಳಾದ   ವೇಣಪ್ಪ ಮತ್ತು ಗೋವಿಂದ ರವರು ಕೈಗಳಲ್ಲಿ ಮಚ್ಚುಗಳನ್ನು  ಹಿಡಿದುಕೊಂಡು  ಸೊಸೆಯಂದಿರಾದ ಅಶ್ವಥ್ಥಮ್ಮ ಮತ್ತು ಮಂಜಳಮ್ಮ ರವರುಗಳು ಕೈಗಳಲ್ಲಿ  ದೊಣ್ಣೆಗಳನ್ನು  ಹಿಡಿದಿದ್ದು  ಆಗ ರಾಮಕ್ಕ ರವರು  ಜೋರಾಗಿ ಕೂಗಿ  ಇವರನ್ನು  ಬಿಡಬೇಡಿ ಕೊಂದು ಹಾಕಿ ಇದೇ ಜಮೀನಿನಲ್ಲಿ ಹೂತು ಹಾಕಿ ಎಂದು ಪ್ರಚೋದಿಸಿದಾಗ  ವೇಣಪ್ಪ  ತನ್ನ ಕೈಯಲ್ಲಿದ್ದ   ಮಚ್ಚಿನಿಂದ  ತನ್ನ  ಮೇಲೆ  ಬೀಸಿದನು. ಆಗ ಸ್ಥಳದಲ್ಲಿದ್ದ  ತನ್ನ ತಂದೆ  ತನ್ನನ್ನು  ಪಕ್ಕಕ್ಕೆ ತಳ್ಳಿದ್ದು  ಆಗ ತಾನು ಮಚ್ಚೇಟಿನಿಂದ  ತಪ್ಪಿಸಿಕೊಂಡೆ. ಆಗ ಕೆಲಸಕ್ಕೆ ಬಂದಿದ್ದ  ನಾರಾಯಣಸ್ವಾಮಿ, ವೆಂಕಟೇಶಪ್ಪ  ನಮಗೆ ಅಣ್ಣ ಅವರು ನಿಮ್ಮನ್ನು ಕೊಲೆ ಮಾಡುವ ಉದ್ದೇಶದಿಂದಲೇ ಬಂದಿರುವುದು ಇಲ್ಲಿಂದ  ಓಡಿ ಹೋಗಿ  ತಪ್ಪಿಸಿಕೊಳ್ಳಿ ಎಂದು  ಹೇಳಿದರು. ಆ ಕೂಡಲೇ  ಗೋವಿಂದ ನಮ್ಮನ್ನು  ಕೊಲ್ಲಲು  ಆತನ ಕೈಯಲ್ಲಿದ್ದ  ಮಚ್ಚಿನಿಂದ ಮತ್ತು  ಸೊಸೆಯಂದಿರು  ದೊಣ್ಣೆಗಳನ್ನು  ಬೀಸುತ್ತಾ  ಕೊಲ್ಲಲು  ಮುಂದಾದಾಗ ಅವರಿಂದ ತಪ್ಪಿಸಿಕೊಂಡು ಓಡಿ ಹೋದೆವು. ಈ ಬಗ್ಗೆ ಪೊಲೀಸ್ ಠಾಣೆಗ ದೂರು ಕೊಡಲು ಹೋದಾಗ ಹಿರಿಯರು ದಯವಿಟ್ಟು ದೂರು ಕೊಡಬೇಡಿ ಎಂದು ತಿಳಿಸಿ ಬುದ್ದಿವಾದ ಹೇಳಿದರು.  ಒಂದು ವಾರ ಕಳೆದರೂ ಗ್ರಾಮದಲ್ಲಿ ಯಾವುದೇ  ಪಂಚಾಯ್ತಿ ಮಾಡದ ಕಾರಣ  ಹಿರಿಯರು ದೂರು ನೀಡುವುದನ್ನು ತಪ್ಪಿಸಲು ಹೀಗೆ ಮಾಡಿದ್ದಾರೆ ಎಂದು ತಿಳಿದು  ತಡವಾಗಿ  ದೂರು ನೀಡುತ್ತಿರುವುದಾಗಿ  ಇತ್ಯಾದಿಯಾಗಿದ್ದ ದೂರಿನ  ಮೇರೆಗೆ ಈ ಪ್ರ.ವ.ವರದಿ.

 

5. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.65/2021 ಕಲಂ. 379 ಐ.ಪಿ.ಸಿ & 41(D),102 CODE OF CRIMINAL PROCEDURE, 1973:-

     ದಿನಾಂಕ 05-09-2021 ರಂದು ಪಿರ್ಯಾದಿ ಮಂಜುನಾಥ ಲಾಲ್ ಸಿ.ಹೆಚ್.ಸಿ 160 ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ  ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಟೈಪಿಂಗ್ ದೂರು ವರದಿಯ ಸಾರಾಂಶವೇನೆಂದರೆ ದಿನಾಂಕ 05-09-2021 ರಂದು ಠಾಣಾಧಿಕಾರಿಗಳು ಬೆಳಗಿನ ಹಾಜರಾತಿಯಲ್ಲಿ ನನಗೆ ಅಪರಾದ ಪತ್ತೆ  ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ಠಾಣೆಯ ಮೊಸಂ 64/2021 ಕಲಂ 379 ಐಪಿಸಿ ಪ್ರಕರಣದಲ್ಲಿ ನನಗೂ ಮತ್ತು ಹೆಚ್ ಸಿ 118 ಪೆಂಚಲಪ್ಪ ರವರಿಗೆ ನಗರದಲ್ಲಿ  ಕಳವು ಪ್ರಕರಣದ ಅರೋಪಿ ಮತ್ತು ಮಾಲು ಪತ್ತೆಯ ಬಗ್ಗೆ ವಿಶೇಷ ಗಸ್ತಿಗೆ  ನೇಮಕ ಮಾಡಿದ್ದು ಅದರಂತೆ ನಾವು ಚಿಕ್ಕಬಳ್ಳಾಪುರ ನಗರದ ಎಂ ಜಿ ರಸ್ತೆ. ಗಂಗನಮಿದ್ದೆ, ಬಾಪೂಜಿ ನಗರ, ಕೋಟೆ, ಬಜಾರ್ ರಸ್ತೆ, ಬಿ ಬಿ ರಸ್ತೆ  ಕೆಳಗಿನ ತೋಟಗಳು, ಕಡೆ ಗಸ್ತು ಮಾಡಿಕೊಂಡು ಬೆಳಗ್ಗೆ 9-30 ಗಂಟೆಯ ಸಮಯದಲ್ಲಿ ವಾಪಸಂದ್ರ ಕಡೆಯಿಂದ ಕೆ ಎಸ್ ಅರ್ ಟಿ ಸಿ ಗ್ಯಾರೇಜ್ ಕಡೆ ಗಸ್ತು ಮಾಡುತ್ತಿದ್ದಾಗ ಕೆ ಎಸ್ ಅರ್ ಟಿ ಸಿ ಗ್ಯಾರೇಜ್ ಪಕ್ಕದ ಪ್ರಶಾಂತ ನಗರಕ್ಕೆ ಹೋಗುವ ರಸ್ತೆಯಲ್ಲಿ ಒಬ್ಬ ಅಸಾಮಿ ಪ್ಲಾಸ್ಟಿಕ್ ಚೀಲವನ್ನು ಹೊತ್ತುಕೊಂಡು ಬರುತ್ತಿದ್ದ ಆಸಾಮಿಯು ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದವನ್ನು ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸವನ್ನು ಹಾಗೂ ಅತನ ಬಳಿ ಇದ್ದ ಚೀಲದಲ್ಲಿ ಏನಿದೇ ಎಂದು ಕೇಳಲಾಗಿ ಅತನು ತೊದಲುತ್ತಾ ಎರಡು ಬ್ಯಾಟರಿಗಳು ಇರುವುದಾಗಿ ತನ್ನ ಹೆಸರು ಶಶಿಕುಮಾರ್ ಬಿನ್ ಗಂಜೂರಪ್ಪ, 20 ವರ್ಷ, ಭೋವಿ ಜನಾಂಗ, ಗುಜರಿಕೆಲಸ, ನಲ್ಲಗುಟ್ಟ, ಚಿಂತಾಮಣಿ ನಗರ ಚಿಕ್ಕಬಳ್ಳಾಪುರ ಜಿಲ್ಲೆ ಎಂತ ತಿಳಿಸಿ ಬ್ಯಾಟರಿಗಳ ಬಗ್ಗೆ ಮತ್ತು ಈ ಸಮಯದಲ್ಲಿ ಸ್ಥಳದಲ್ಲಿ ಇದ್ದ ಬಗ್ಗೆ ಕೇಳಲಾಗಿ ಸಮಂಜಸವಾದ ಉತ್ತರವನ್ನು  ಕೊಟ್ಟಿರುವುದಿಲ್ಲ  ಸದರಿ ಆಸಾಮಿಯು ಚೀಲದಲ್ಲಿದ್ದು ಬ್ಯಾಟರಿಗಳನ್ನು ಎಲ್ಲಿಯೋ ನಿಲ್ಲಿಸಿದ್ದ ವಾಹನಗಳಲ್ಲಿ ಕಳವು ಮಾಡಿಕೊಂಡು ಬಂದಿರಬಹುದೆಂದು ಅನುಮಾನವಿರುತ್ತೆ ಅದ್ದರಿಂದ ಅಸಾಮಿಯನ್ನು ಮತ್ತು ಅತನ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ಇದ್ದ ಎರಡು ಬ್ಯಾಟರಿಗಳನ್ನು ತಂದು ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸುವಂತೆ  ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

6. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.66/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:06-09-2021 ರಂದು ಪಿರ್ಯಾಧಿ ಶ್ರೀ ಮುರುಳೀಧರ ಹೆಚ್.ಸಿ-195 ಡಿಸಿಬಿ/ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ  ರವರು ಮಧ್ಯಾಹ್ನ 12-30 ಗಂಟೆಯಲ್ಲಿ ಠಾಣೆಗೆ ಹಾಜರಾಗಿಕೊಟ್ಟ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:-06/09/2021 ರಂದು ತಾನು ಹಾಗೂ ತಮ್ಮ ಠಾಣೆಯ ಸಿಬ್ಬಂದಿ ಸಿ.ಪಿ.ಸಿ-527 ಶ್ರೀ ಮಧು ರವರು ತಮ್ಮ ಠಾಣೆಯ ಸಿ.ಪಿ.ಐ ಶ್ರೀ ರಾಜಣ್ಣ ರವರ ಆದೇಶದಂತೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಚಿಕ್ಕಬಳ್ಳಾಪುರ ನಗರದ ಬಿ.ಬಿ ರಸ್ತೆ, ಎಂ.ಜಿ ರಸ್ತೆಯಲ್ಲಿ ಗಸ್ತು ಮಾಡಿಕೊಂಡು ಬೆಳಿಗ್ಗೆ 11-00 ಗಂಟೆಗೆ ಎ.ಪಿ.ಎಂ.ಸಿ ಮಾರುಕಟ್ಟೆಯ ಬಳಿ ಗಸ್ತಿನಲ್ಲಿದ್ದಾಗ ಎ.ಪಿ.ಎಂ.ಸಿ ಮಾರುಕಟ್ಟೆಯ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಯಾರೋ ಆಸಾಮಿಗಳು ಮದ್ಯವನ್ನು ಸೇವನೆ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಇಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಬಂದ ಮಾಹಿತಿಯನ್ನು ತಿಳಿಸಿ ತಾವು ಮತ್ತು ಪಂಚರು ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 11-15 ಗಂಟೆಗೆ ಹೋಗಿ ಮರೆಯಲ್ಲಿ ನೋಡಲಾಗಿ ಯಾರೋ ಕೆಲವರು ಸೇರಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದು ತಮ್ಮಗಳನ್ನು ನೋಡಿ ಸ್ಥಳದಿಂದ ಓಡಿ ಹೋದರು, ಸದರಿ ಸ್ಥಳದಲ್ಲಿ ಒಬ್ಬ ಆಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ರಾಹುಲ್ ಬಿನ್ ತಿಪ್ಪೇಸ್ವಾಮಿ 20 ವರ್ಷ, ಲಂಬಾಣಿ ಜನಾಂಗ, ವಿನಾಯಕ ಬಾರ್ ಅಂಡ್ ರಸ್ಟೋರೆಂಟ್ ನಲ್ಲಿ ಕೆಲಸ, ವಾಸ:- ನಾಯಕನಹಟ್ಟಿ ಗ್ರಾಮ, ಚಳ್ಳಿಕೆರೆ ತಾಲ್ಲೂಕು, ಚಿತ್ರದುರ್ಗಾ ಜಿಲ್ಲೆ ಎಂತ ತಿಳಿಸಿದ್ದು, ಸದರಿ ಸ್ಥಳದಲ್ಲಿ 90 ಎಂ.ಎಲ್ ಮದ್ಯತುಂಬಿರುವ 18 HAYWARDS CHEERS WHISKY TETRA POCKET ಗಳಿರುತ್ತೆ, ಮದ್ಯ ತುಂಬಿರುವ ಪ್ರತಿಯೊಂದರ ಬೆಲೆ 35.13 ರೂಗಳಂತೆ ಒಟ್ಟು 632/- ರೂ ಗಳಾಗಿದ್ದು ಒಟ್ಟು ಮಧ್ಯವು 01 ಲೀಟರ್ 620 ಎಂ.ಎಲ್ ಆಗಿರುತ್ತೆ ನಂತರ ಮೇಲ್ಕಂಡ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿ, ಮಾಲುಗಳು, ಅಸಲು ಪಂಚನಾಮೆ ಹಾಗೂ ವರದಿಯೊಂದಿಯನ್ನು ನೀಡಿದ್ದರ ಮೇರೆಗೆ ಈ ಪ್ರ.ವ.ವರದಿ.

 

7. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.47/2021 ಕಲಂ. 279,338 ಐ.ಪಿ.ಸಿ:-

   ದಿನಾಂಕ ;06-09-2021 ರಂದು ಮದ್ಯಾಹ್ನ 15-30 ಗಂಟೆಗೆ ಪಿರ್ಯಾದಿಯಾದ ಶ್ರೀಮತಿ ಸುನಂದ ಕೊಂ ಚಂದ್ರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಮನೆ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ಹೀಗಿರುವಲ್ಲಿ ದಿನಾಂಕ:-03-07-2021 ರಂದು ನಿಮ್ಮ ತಂದೆಯವರಿಗೆ ಅಪಘಾತವಾಗಿರುವುದಾಗಿ ತಳ್ಳುವ ಗಾಡಿಯ ರತ್ನಮ್ಮ ಎಂಬುವರು ದೂರವಾಣಿ ಕರೆ ಮಾಡಿ ತಿಳಿಸಿದ್ದು. ನಂತರ ನಾನು ತಮ್ಮ ದೊಡ್ಡಪ್ಪನ ಮಗನಾದ ಮುನಿರಾಜು ರವರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದು.ತಮ್ಮ ದೊಡ್ಡಪ್ಪನ ಮಗ ಮತ್ತು ಅಪಘಾತ ಪಡಿಸಿದ ರಿಜ್ವಾನ್ ರವರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿ ಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಸಂಜಯ್ ಗಾಂಧಿ ಅಸ್ವತ್ರೆಗೆ ಕರೆತಂದು ಚಿಕಿತ್ಸೆಗಾಗಿ ದಾಖಲಿಸಿದ್ದರು, ನಾನು ಆಸ್ಪತ್ರೆಯ ಬಳಿ ಹೋಗಿ  ನೋಡಲಾಗಿ ವಿಚಾರ ನಿಜವಾಗಿದ್ದು, ತಮ್ಮ ತಂದೆಯನ್ನು ಅಪಘಾತದ ಬಗ್ಗೆ ವಿಚಾರ ಮಾಡಲಾಗಿ ನಗರದಲ್ಲಿ ನಮ್ಮ ತಂದೆ ಟಮೋಟೊ ವ್ಯಾಪಾರ ಮಾಡಿಕೊಂಡು ನಗರದ ಕೋರ್ಟ್ ಸರ್ಕಲ್ ಬಳಿ ಚಪ್ಪಲಿ ಕಿತ್ತು ಹೋಗಿದ್ದು ತಳ್ಳು ಬಂಡಿಯನ್ನು ರಸ್ತೆಯ ಬದಿಯಲ್ಲಿ ಬಿಟ್ಟು ಹೊಸ ಚಪ್ಪಲಿ ತೆಗೆದುಕೊಂಡು ಈ ದಿನ ಸಂಜೆ ಸುಮಾರು 4-00 ಗಂಟೆ ಸಮಯದಲ್ಲಿ ಕೋರ್ಟ ಬಳಿ ಇರುವ ಎಸ್ ಬಿ ಎಂ ಎಟಿಎಂ ಬಳಿ ರಸ್ತೆ ದಾಟುತ್ತಿದ್ದಾಗ ಕೋರ್ಟ ಸರ್ಕಲ್ ಕಡೆಯಿಂದ ಬಾಗೇಪಲ್ಲಿ ಸರ್ಕಲ್ ಕಡೆಗೆ ಬರುತ್ತಿದ್ದ ಕೆಎ-40 ವಿ-6332 ಹಿರೋ ಪ್ಯಾಷನ್ ಎಕ್ಸ್ ಪ್ರೋದ್ವಿಚಕ್ರ ವಾಹನ ಚಾಲಕ ಅತಿವೇಗ ಮತ್ತು ಅಜಾಗರೂ ಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನಗೆ ಡಿಕ್ಕಿ ಹೊಡೆಸಿದ ಪರಿಣಾಮ ನಾನು ಟಾರು ರಸ್ತೆಯ ಮೇಲೆ ಬಿದ್ದು ನನ್ನ ಬಲ ಕಾಲಿಗೆ ರಕ್ತಗಾಯ, ಎಡಕೈ.ಮತ್ತು ತಲೆಯ ಹಿಂಬಾಗಕ್ಕೆ ಗಾಯಾಗಳಾಗಿದ್ದು ಸದರಿ ದ್ವಿಚಕ್ರ ವಾಹನ ಸವಾರ ಯಾವುದೋ ಅಟೋದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಅಸ್ವತ್ರೆಯಲ್ಲಿ ಚಿಕಿತ್ಸಯನ್ನು ಕೊಡಿಸಿ, ನಂತರ ಅಲ್ಲಿಂದ ಅಂಬುಲೆನಲ್ಲಿ ನನ್ನ ಅಣ್ಣನ ಮಗ ಮುನಿರಾಜು ಮತ್ತು ದ್ವಿಚಕ್ರ ವಾಹನ ಸವಾರ ರಿಜ್ವಾನ್  ಸಂಜಯ್ಗಾಂದಿ ಅಸ್ವತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುವುದಾಗಿ ತಿಳಿಸಿರುತ್ತಾರೆ. ಈ ಒಂದು ಅಪಘಾತದ ಬಗ್ಗೆ ಆರೋಫಿ ರಿಜ್ವಾನ್ ರವರು ಅಪಘಾತದ ಬಗ್ಗೆ ಪರಿಹಾರವನ್ನು ಕೊಡುತ್ತೇನೆಂದು ಹೇಳಿ ಪಂಚಾಯ್ತಿದಾರರಾದ ನಮ್ಮ ಅಣ್ಣ ಮುನಿರಾಜು ಗಂಗರೆಕಾಲುವೆ ಮೂತರ್ಿ ರವರು ಮಾಡಿದ್ದು ನಾನು ಸದರಿಯವರು ಹಣವನ್ನು ಕೊಡುತ್ತಾರೆಂದು ನಂಬಿ ನಮ್ಮ ತಂದೆಗೆ  ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡಿಸಿಕೊಂಡಿದ್ದು  ನಮ್ಮ ತಂದೆಗೆ  ಬಲಗಾಲು  ಶಸ್ತ್ರ ಚಿಕಿತ್ಸೆಯನ್ನು  ಮಾಡಿದ್ದು  ಆಸ್ಪತ್ರೆಯಿಂದ ನಮ್ಮ  ತಂದೆಯವರನ್ನು 20-07-2021 ರಂದು  ಬಿಡುಗಡೆ ಗೊಳಿಸಿಕೊಂಡು  ಮನೆಗೆ ಕರೆದುಕೊಂಡು ಹೋಗಿರುತ್ತೇನೆ,  ನಂತರ ನಮ್ಮ ತಂದೆಯವರಿಗೆ ಮತ್ತೊಮ್ಮೆ ಶಸ್ತ್ರ ಚಿಕಿತ್ಸೆಯನ್ನು ಮಾಡಬೇಕೆಂದು ಹೇಳಿದ್ದು  ಅಪಘಾತಪಡಿಸಿದ ರಿಜ್ವಾನ್ ರವರಿಗೆ ಕರೆ ಮಾಡಿ ಹಣವನ್ನು ಕೊಡುವಂತೆ ಕೇಳಿದ್ದು ಸದರಿಯವನು ಹಣವನ್ನು ಕೊಡದೆ ಸತಾಯಿಸಿದ್ದರಿಂದ  ನಾನು ತಡವಾಗಿ ಬಂದು ದಿನಾಂಕ;06-09-2021 ರಂದು ದೂರನ್ನು ನೀಡುತ್ತಿದ್ದು  ನಮ್ಮ ತಂದೆಗೆ ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರ ರಿಜ್ವಾನ್ ಬಿನ್  ಸುಬಾನ್ 23 ವರ್ಷ ಮುಸ್ಲಿಂ ಜನಾಂಗ  ಪಾತಪಾಳ್ಯ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.392/2021 ಕಲಂ. 15(A),32(3) ಕೆ.ಇ ಆಕ್ಟ್:-

    ದಿನಾಂಕ 05-09-2021 ರಂದು ಸಂಜೆ 6-20 ಗಂಟೆಗೆ ಠಾಣೆಯ ಎ.ಎಸ್.ಐ ಕೃಷ್ಣಪ್ಪ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ: 05/09/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು ಮತ್ತು ಸಿ.ಪಿ.ಸಿ-16 ಲೋಕೇಶ್ ರವರು ಠಾಣಾ ಸರಹದ್ದಿನ ಕೈವಾರ, ಕೆಂಪದೇನಹಳ್ಳಿ, ಬೂರಗಮಾಕಲಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5.00 ಗಂಟೆಯ ಸಮಯದಲ್ಲಿ ಬೋಮ್ಮೆಕಲ್ಲು ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ನಾರಾಯಣಸ್ವಾಮಿ ಬಿನ್ ಲೇಟ್ ನಾಗಪ್ಪ ರವರು ಅವರ ಮನೆಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಬೋಮ್ಮೆಕಲ್ಲು ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಮನೆಯ ಮುಂದೆ  ನೋಡಲಾಗಿ 1)90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 06 ಟೆಟ್ರಾ ಪಾಕೆಟ್ ಗಳು, 2) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು 3)ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 4)ಒಂದು ಲೀಟರ್ ಸಾಮರ್ಥ್ಯದ ಒಂದು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಓಪನ್ ಆಗಿರುವ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ನಾರಾಯಣಸ್ವಾಮಿ ಬಿನ್ ಲೇಟ್ ನಾಗಪ್ಪ, 65 ವರ್ಷ, ನಾಯಕರು, ಜಿರಾಯ್ತಿ, ಬೊಮ್ಮೇಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ  5.15 ರಿಂದ ಸಂಜೆ 6.00 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ನಾರಾಯಣಸ್ವಾಮಿ ಬಿನ್ ಲೇಟ್ ನಾಗಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 

9. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.161/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ 05/09/2021 ರಂದು  ಪಿಸಿ 367 ರವರು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಠಾಣೆಯ್ಲಲ್ಲಿ ನೀಡಿದ್ದರ ಸಾರಾಂಶವೇನೆಂದರೆ, , ಈ ದಿನ ಪಿ.ಐ ಸಾಹೇಬರು ಹೆಚ್.ಸಿ 110 ವೇಣು ಆದ ನನಗೆ  ಹಾಗೂ ಹೆಚ್.ಸಿ 198 ಮಂಜುನಾಥ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ನೇಮಿಸಿದ್ದು ಅದರಂತೆ ನಾವು  ಚಿಂತಾಮಣಿ ನಗರದ   ಬಾಗೇಪಲ್ಲಿ ವೃತ್ತ, ವೆಂಕಟಗಿರಿಕೋಟೆ ಅದರ್ಶ ಟಾಕೀಸ್  ಕಡೆ ಗಸ್ತು ಮಾಡುತ್ತಿದ್ದ   ಬೆಳಿಗ್ಗೆ 11-05 ಗಂಟೆ ಸಮಯದಲ್ಲಿ ನಗರದ ಮೆಹಬೂಬ್ ನಗರದ ಅಮ್ಜಾದ್ ಟೀ ಅಂಗಡಿಯ ಮುಂಭಾಗದಲ್ಲಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಅಂಕಿಗಳನ್ನು ಬರೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ ಪಂಚರೊಂದಿಗೆ ಮೆಹಬೂಬ್ ನಗರದ ಬಳಿ ಹೋಗಿ ಮೊರೆಯಲ್ಲಿ ನಿಂತು  ನೋಡಲಾಗಿ ಟೀ ಅಂಗಡಿಯ ಮುಂಭಾಗದಲ್ಲಿ ಯಾರೋ ಒಬ್ಬ ಆಸಾಮಿಯು ಒಂದು ಪೆನ್  ಪೇಪರ್ ಹಿಡಿದುಕೊಂಡು  1 ರೂ ಗೆ 80 ರೂ ಕೊಡುವುದಾಗಿ ಕೂಗಿಕೊಂಡು ಚೀಟಿಯಲ್ಲಿ ಅಂಕಿಗಳನ್ನು ಬರೆಯುತ್ತಿದ್ದವನನ್ನು ಹಿಡಿದು  ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಮುಜಾಮಿಲ್ @ ಮುಜ್ಜು ಬಿನ್ ಅನ್ವರ್ 32 ವರ್ಷ, ಚಾಲಕ, ಮೆಹಬೂಬ್ ನಗರ, ಚಿಂತಾಮಣಿ ನಗರ ಎಂತ ತಿಳಿಸಿರುತ್ತಾನೆ.  ನಂತರ ಆತನ ಬಳಿ ಪರಿಶೀಲಿಸಲಾಗಿ 1 ಮಟ್ಕಾಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಮತ್ತು 1160/- ರೂ ನಗದು ಹಣ ಇದ್ದು ಸದರಿ ಹಣದ ಬಗ್ಗೆ ವಿಚಾರಿಸಲಾಗಿ ಮಟ್ಕಾ ಬರೆದಿದ್ದರಿಂದ ಬಂದ ಹಣವೆಂದು ಹಾಗೂ ಈ ಹಣವನ್ನು ನಾನು ಶಬ್ಬೀರ್ [ಪೋನ್ ನಂ 8792217656]  ಚಿಂತಾಮಣಿ  ನಗರ ರವರಿಗೆ ನೀಡುತ್ತಿರುವುದಾಗಿ ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಸದರಿ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೊಂಡಿರುತ್ತೆ. ಮೇಲ್ಕಂಡ ಆಸಾಮಿ ಮತ್ತು ಮಾಲನ್ನು ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಮೇರೆಗೆ ಇದು ಅಸಂಜ್ಞೆಯ ಅಪರಾಧವಾಗಿರುವುದರಿಂದ ಠಾಣೆಯ ಎನ್.ಸಿ.ಆರ್ ಸಂಖ್ಯೆ 120/2021 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿ ಪಡೆದು ಮೊ.ಸಂ 161/2021 ಕಲಂ 78(3) ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

10. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.162/2021 ಕಲಂ. 143,147,323,324,504,506,149 ಐ.ಪಿ.ಸಿ:-

    ದಿನಾಂಕ 05/09/2021  ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಪುರುಷೋತ್ತಮ್ ಬಿನ್ ನಾರಾಯಣಸ್ವಾಮಿ, 20 ವರ್ಷ, ಎಸ್.ಸಿ ಜನಾಂಗ, ಕೂಲಿ ಕೆಲಸ, ಇಡ್ಲಿಪಾಳ್ಳ, ಚಿಂತಾಮಣಿ ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 04/09/2021 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಕೆಲಸ ಮುಗಿಸಿಕೊಂಡು ಚೇಳೂರು ವೃತ್ತದಲ್ಲಿ ಊಟ ಮಾಡಿಕೊಂಡು ಮೆಡಿಕಲ್ ಸ್ಟೋರ್ ಮುಂಭಾಗದಲ್ಲಿ ನಾನು ಹಾಗೂ ನಮ್ಮ ಅಣ್ಣನಾದ  ಗಂಗರಾಜು ರವರು ನಡೆದುಕೊಂಡು ಹೋಗುತ್ತಿದ್ದಾಗ ಕೋಲಾರ ರಸ್ತೆ ಕಡೆಯಿಂದ ಬಂದ ಆಟೋ ಚಾಲಕ ಚಕ್ರವನ್ನು ನನ್ನ ಕಾಲಿನ ಮೇಲೆ ಹತ್ತಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ನನಗರ ಗಾಬರಿಯಾಗಿ ಏಕೆ ನೀನು ಆಟೋ ನನ್ನ ಮೇಲೆ ಹತ್ತಿಸಲು ಬಂದಿದ್ದೀಯಾ ಎಂದು ಕೆಳುವಷ್ಟರಲ್ಲಿ ನಮ್ಮ ಏರಿಯಾದ ವಾಸಿಗಳಾದ ಸುರೇಶ್ ಹಾಗೂ ಮಲ್ಲಿ ರವರು ಆಟೋದಿಂದ ಕೆಳಕ್ಕೆ ಇಳಿದು ಏ ಲೋಪರ್ ನನ್ನ ಮಗನೇ ರೋಡ್ ಗೆ ಅಡ್ಡ ಹೋಗುತ್ತಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ರಸ್ತೆಯಲ್ಲಿದ್ದ ಕರೆಂಟ್ ಪೋಲ್ ಗೆ ನನ್ನ ತಲೆಯನ್ನು ಹಿಡಿದು ಹೊಡೆದು ರಕ್ತಗಾಯಮಾಡಿರುತ್ತಾರೆ. ಸುರೇಶ್ ರವರ ಜೊತೆ ಇದ್ದ ಇತರೇ 03 ಜನರು ದೊಣ್ಣೆಯಿಂದ ನನ್ನ ಅಣ್ಣನಾದ ಗಂಗರಾಜು ರವರಿಗೆ ತಲೆಗೆ ಕೈ ಗೆ ಹೊಡೆದು ಕಾಲಿನಿಂದ ಹಾಗೂ ಕೈಗಳಿಂದ ಬೆನ್ನಿಗೆ ಹೊಡೆದು ಮೂಗೇಟುಂಟು ಮಾಡಿದರು. ಅಷ್ಟರಲ್ಲಿ ಜಗಳ ಬಿಡಿಸಲು ಅಡ್ಡ ಬಂದ ಮೂರ್ತಿ ಬಿನ್ ಶಿವ ರವರಿಗೂ ಸಹ ಮಲ್ಲಿರವರ ಕೈಗಳಿಂದ ಹೊಡೆದಿರುತ್ತಾರೆ. ನಂತರ ಎಲ್ಲರೂ ಸೇರಿ ಇನ್ನೋಂದು ಸಾರಿ ನನ್ನ ತಂಟೆಗೆ ಬಂದರೆ ನಿಮ್ಮನ್ನು  ಪ್ರಾಣ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

11. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.163/2021 ಕಲಂ. 380 ಐ.ಪಿ.ಸಿ:-

    ಪಿರ್ಯಾದಿದಾರರಾದ ಶ್ರೀ ರಾಮಕೃಷ್ಣಪ್ಪ ಬಿನ್ ಲೇಟ್ ಆಂಜನಪ್ಪ, 57 ವರ್ಷ, ಗಾಣಿಗರು, ಎ.ಎಸ್.ಐ ಪೊಲೀಸ್ ವಸತಿ ಗೃಹ ಶಿಢ್ಲಘಟ್ಟ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಂಸಾರ ಸಮೇತ ಶಿಡ್ಲಘಟ್ಟ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿರುತ್ತೇವೆ. ನನ್ನ ಬಾಬತ್ತು ಕೆ.ಜಿ.ಐ.ಡಿ ಹಾಗು ಎಲ್.ಐ.ಸಿ ಪಾಲಸಿಗಳ ಹಣ ಬಂದಿದ್ದು, ಸದರಿ ಹಣದಿಂದ ನನ್ನ ಪತ್ನಿ ಶ್ರೀಮತಿ.ಲಕ್ಷ್ಮಮ್ಮ ರವರಿಗೆ ಬಂಗಾರದ ಬಳೆಗಳನ್ನು ಮಾಡಿಸುವ ಸಲುವಾಗಿ ನನಗೆ ಪರಿಚಯವಿರುವ ಚಿಂತಾಮಣಿ ಟೌನ್ ಪ್ಲವರ್ ಸರ್ಕಲ್ ನಲ್ಲಿರುವ ವಾಸವಿ ಜ್ಯೂವಲರ್ಸ್ ಮಾಲೀಕರಾದ ಶ್ರೀ.ಅಶೋಕ್ ಕುಮಾರ್ ರವರ ಬಳಿ ಹೀಗ್ಗೆ ಸುಮಾರು 2 ತಿಂಗಳ ಹಿಂದೆ ತಾನು ಮತ್ತು ತನ್ನ ಪತ್ನಿಯವರು ಬಂದು ಸುಮಾರು 80 ಗ್ರಾಂ ತೂಕದ ಎರಡು ಜೊತೆ ಬಂಗಾರದ ಬಳೆಗಳನ್ನು ಆರ್ಡರ್ ಕೊಟ್ಟು ಅಂಗಡಿ ಮಾಲೀಕರಿಗೆ 85,000 ರೂ ಅಡ್ವಾನ್ಸ್ ಹಣ ಕೊಟ್ಟು ರಸೀದಿ ಪಡೆದುಕೊಂಡಿರುತ್ತೇನೆ. ನೆನ್ನೆ ದಿನ ಅಂಗಡಿ ಮಾಲೀಕರಾದ ಶ್ರೀ.ಅಶೋಕ್ ಕುಮಾರ್ ರವರು ನನಗೆ ಪೋನ್ ಮಾಡಿ ನೀವು ಆರ್ಡರ್ ಕೊಟ್ಟಿರುವ ಬಂಗಾರದ ಬಳೆಗಳು ಸಿದ್ದವಾಗಿದೆ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದು, ಅದರಂತೆ ದಿನಾಂಕ:05/09/2021 ರಂದು ಬೆಳಿಗ್ಗೆ ಚಿಂತಾಮಣಿಗೆ ಬಂದು ವಾಸವಿ ಜ್ಯೂಯಲರ್ಸ್ ಅಂಗಡಿಗೆ ಹೋಗಿ ತಾನು ಆರ್ಡರ್ ಕೊಟ್ಟಿರುವ ಬಂಗಾರದ ಬಳೆಗಳನ್ನು ನೋಡಿ ಅಂಗಡಿ ಮಾಲೀಕರಿಂದ ತೂಕ ಮಾಡಿಸಿದ್ದು, ಒಟ್ಟು 80 ಗ್ರಾಂ ತೂಕವಿದ್ದು, ಒಟ್ಟು ಬೆಲೆ 3,95,950 ರೂಗಳಾಗಿರುವುದಾಗಿ ತಿಳಿಸಿ ಅಂಗಡಿ ಮಾಲೀಕರು ನನಗೆ 80 ಗ್ರಾಂ ತೂಕವುಳ್ಳ ಬಂಗಾರದ ಬಳೆಗಳನ್ನು ಒಂದು ಕವರ್ ನಲ್ಲಿ ಹಾಕಿ ಪರ್ಸ್ ನಲ್ಲಿ ಇಟ್ಟು ತನಗೆ ಕೊಟ್ಟಿದ್ದು, ಸದರಿ ಪರ್ಸನ್ನು ತಾನು ತಂದಿದ್ದ ಬ್ಯಾಗ್ ನಲ್ಲಿ ಇಟ್ಟಾಗ ಆ ವೇಳೆಗೆ ಯಾರೋ ಒಬ್ಬ ವ್ಯಕ್ತಿ ನನ್ನ ಪಕ್ಕದಲ್ಲಿ ಬಂದು ನಿಂತುಕೊಂಡಾಗ ತಾನು ಆತನನ್ನು ಗದರಿಸಿ ಪಕ್ಕಕ್ಕೆ ಹೋಗುವಂತೆ ಹೇಳಿದಾಗ ಆತನು ತನ್ನ ಹಿಂಬದಿ ಇದ್ದ ಚೇರ್ ನಲ್ಲಿ ಕುಳಿತುಕೊಂಡ, ನಂತರ ತಾನು ಹಣವನ್ನು ಲೆಕ್ಕ ಹಾಕುತ್ತಿದ್ದಾಗ, ಇನ್ನೊಬ್ಬ ವ್ಯಕ್ತಿ ಪಕ್ಕದಲ್ಲಿ ನಿಂತುಕೊಂಡು ಮಾಲೀಕರನ್ನು ಮಾತನಾಡಿಸಲು ಬಂದಿದ್ದು, ತಾನು ತನ್ನ ಪಾಡಿಗೆ ಹಣವನ್ನು ಲೆಕ್ಕ ಹಾಕುತ್ತಿದ್ದರಿಂದ ಆತನನ್ನು ಗಮನಿಸಲಿಲ್ಲ, ನಂತರ ತಾನು ಮಾಲೀಕರಿಗೆ ಪೂರ್ತಿ ಹಣವನ್ನು ಕೊಟ್ಟು ತನ್ನ ಬ್ಯಾಗನ್ನು ತೆಗೆದುಕೊಂಡು ಹೊರಗಡೆ ಬಂದು ಸ್ವಲ್ಪ ಸಮಯದ ನಂತರ ಬ್ಯಾಹ್ ನಲ್ಲಿದ್ದ ಬಳೆಗಳ ಪರ್ಸ್ ನ್ನು ನೋಡಲಾಗಿ ಪರ್ಸ್ ಇರುವುದಿಲ್ಲ. ಕೂಡಲೇ ತಾನು ಅಂಗಡಿಗೆ ಬಂದು ಮಾಲೀಕರಿಗೆ ವಿಷಯವನ್ನು ತಿಳಿಸಿ ಅಂಗಡಿಯಲ್ಲಿದ್ದ ಸಿ.ಸಿ ದೃಶ್ಯಾವಳಿಯನ್ನು ಗಮನಿಸಲಾಗಿ ಈ ದಿನ ಬೆಳಿಗ್ಗೆ ಸುಮಾರು 11-45 ಗಂಟೆ ಸಮಯದಲ್ಲಿ ಯಾರೋ ಇಬ್ಬರು ಅಸಾಮಿಗಳು ಸುಮಾರು 30-35 ವರ್ಷ ವಯಸ್ಸಿನ  ಒಬ್ಬರು ಮತ್ತು 15-20 ವರ್ಷ ವಯಸ್ಸಿನ ಅಸಾಮಿಗಳು ಅಂಗಡಿಯೊಳಗೆ ಬಂದು ಮಾಲೀಕರ ಬಳಿ ಮಾತನಾಡಿ, ಆ ಪೈಕಿ ಒಬ್ಬ ಅಸಾಮಿ ತನ್ನ ಗಮನವನ್ನು ಬೇರೆಕಡೆ ಸೆಳೆದು ತನ್ನ ಬಾಬತ್ತು ಬ್ಯಾಗ್ ನಲ್ಲಿ ಇಟ್ಟಿದ್ದ ಬಂಗಾರದ ಬಳೆಗಳ ಪರ್ಸನ್ನು ತನಗೆ ಗೊತ್ತಾಗದಂತೆ ಕಳ್ಳತನ ಮಾಡಿಕೊಂಡು ಅಲ್ಲಿಂದ ಹೊರಟು ಹೋಗಿರುತ್ತಾರೆ. ಆದ್ದರಿಂದ ತನ್ನ ಬ್ಯಾಗಿನಲ್ಲಿಟ್ಟಿದ್ದ 4 ಲಕ್ಷ ರೂ ಬೆಲೆ ಬಾಳುವ 80 ಗ್ರಾಂ ತೂಕದ ಬಂಗಾರದ ಬಳೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಅಸಾಮಿಗಳನ್ನು ಹಾಗು ಬಂಗಾರದ ಬಳೆಗಳನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೇ.

 

12. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.164/2021 ಕಲಂ. 457,380 ಐ.ಪಿ.ಸಿ:-

    ದಿನಾಂಕ: 06/09/2021 ರಂದು ಪಿರ್ಯಾದಿದಾರರಾದ ಮುನಿರಾಜು ಬಿನ್ ಗೋಪಾಲಕೃಷ್ಣ, 36 ವರ್ಷ, ಎಸ್.ಸಿ ಜನಾಂಗ, ಚೌಡರೆಡ್ಡಿ ಪಾಳ್ಯ ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ಚಿಂತಾಮಣಿ ನಗರದ ಎ.ಪಿ.ಎಂ.ಸಿಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ಹೀಗಿರುವಾಗ ದಿನಾಂಕ 30/05/2021 ರಂದು ಸಂಜೆ 8-00 ಗಂಟೆ ಸಮಯದಲ್ಲಿ  ಮನೆಗೆ ಬೀಗ ಹಾಕಿಕೊಂಡು ತಾನು ಹಾಗೂ ತನ್ನ ಹೆಂಡತಿ  ಟಿ.ವಡ್ಡಹಳ್ಳಿ ಗ್ರಾಮಕ್ಕೆ   ಹೋಗದ್ದು ನಂತರ ದಿನಾಂಕ 31/05/2021 ರಂದು ಬೆಳಿಗ್ಗೆ 7-00 ಗಂಟೆಗೆ ಮನೆಗೆ ವಾಪಸ್ಸು ಬಂದು ನೊಡಲಾಗಿ ನಮ್ಮ ಮನೆಯ ಬಾಗಿಲು ತೆಗೆದಿದ್ದು ನಮಗೆ ಗಾಬರಿಯಾಗಿ ಮನೆಯೊಳಗೆ ಹೋಗಿ ನೋಡಲಾಗಿ  ರೂಂ ನಲ್ಲಿರುವ ಬೀರುವಿನ ಬಾಗಿಲನ್ನು ಕಿತ್ತು ಯಾರೋ ಕಳ್ಳರು ಅದರಲ್ಲಿ ಇಟ್ಟಿದ್ದ  10 ಗ್ರಾಂ ನ ಒಂದು ಜೊತೆ ಬಂಗಾರದ ಓಲೆ, 06 ಗ್ರಾಂ ನ ಒಂದು ಜೊತೆ ಮಾಟಿ ಮತ್ತು 06 ಗ್ರಾಂ ನ ಒಂದು ಉಂಗುರ ಹಾಗೂ 50 ಗ್ರಾಂ ಬೆಳ್ಳಿ ಕಾಲು ಚೈನುಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ 1,10,000 ರೂಗಳು ಬೆಳ್ಳಿ 3000 ರೂ ಆಗಿರುತ್ತೆ. ತಾವು ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ಆ ದಿನ ನಾವು  ಈ ಬಗ್ಗೆ ಠಾಣೆಯಲ್ಲಿ ದೂರು ನೀಡಿರುವುದಿಲ್ಲ. ಈ ದಿನ  ದಿನಾಂಕ 06/09/2021 ರಂದು ಪೊಲೀಸರು ನಮ್ಮ ಬಳಿ ವಿಚಾರಣೆ ಬಂದು ವಿಚಾರ ತಿಳಿಸಿದ್ದು ಈ ದಿನ ಠಾಣೆಗೆ ಬಂದು ದೂರು ನೀಡುತ್ತಿರುತ್ತೇನೆ.  ಆದ್ದರಿಂದ ಕಳ್ಳತನವಾಗಿರುವ ನನ್ನ ಬಾಬತ್ತು ಬಂಗಾರದ ಹಾಗೂ ಬೆಳ್ಳಿ ವಡವೆಗಳನ್ನು ಹಾಗೂ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೇ

 

13. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.165/2021 ಕಲಂ. 457,380 ಐ.ಪಿ.ಸಿ:-

    ದಿನಾಂಕ: 06/09/2021 ರಂದು ಪಿರ್ಯಾದಿದಾರರಾದ ಮೊಹಮ್ಮದ್ ಉಲ್ಲಾ ಬಿನ್ ಲೇಟ್. ಮೊಹಮ್ಮದ್ ಅಬ್ಬಾಸ್, 43 ವರ್ಷ, ಕೆಂಪಮ್ಮ ಬಡಾವಣೆ ಸರ್ಕಾರಿ ಉರ್ದು ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ,ವಾಸ: 05ನೇ ಕ್ರಾಸ್ ಚೌಡರೆಡ್ಡಿ ಪಾಳ್ಯ ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ತನ್ನ ಸ್ವಂತ ಊರು ಶ್ರೀನಿವಾಸಪುರ ನಗರವಾಗಿದ್ದು ನಾವು ಚಿಂತಾಮಣಿಗೆ ಹೀಗ್ಗೆ ಸುಮಾರು 2 ವರ್ಷಗಳಿಂದ ಚಿಂತಾಮಣಿಯ ಈ ಮೇಲ್ಕಂಡ ವಿಳಾಸದಲ್ಲಿ ಬಾಡಿಗೆಗೆ ವಾಸವಾಗಿರುತ್ತೇವೆ.   ತಾನು ಕೆಲಸ ಮಾಡಿಕೊಂಟು ಕೂಡಿಟ್ಟದ್ದ ಹಣದಲ್ಲಿ ಹೀಗ್ಗೆ ಸುಮಾರು 7-8 ವರ್ಷಗಳಲ್ಲಿ ತಮ್ಮ ಹೆಂಗಸರಿಗೆ ಸುಮಾರು 12 ಗ್ರಾಂ. ತೂಕದ ಬಂಗಾರದ ಹಳೇ ಕಾಲದ ನಕ್ಲೇಸ್, ಸುಮಾರು 4 ಗ್ರಾಂ. ತೂಕದ 1 ಜೊತೆ ಬಂಗಾರದ ಕಿವಿ ಓಲೆ, ಸುಮಾರು 04 ಗ್ರಾಂ. ತೂಕದ ಬಂಗಾರದ ಜುಮುಕಿಯನ್ನು ತೆಗೆದುಕೊಂಡಿದ್ದೆ. ಈ ಬಂಗಾರದ ಒಡವೆಗಳನ್ನು ತಮ್ಮ ಮನೆಯ ರೂಂ.ನ ಬೀರುವಾದಲ್ಲಿ ಇಟ್ಟಿದ್ದೆವು.ಹೀಗಿರುವಾಗ ದಿನಾಂಕ:28/05/2021 ರಂದು ತಾವು ನಮ್ಮ ಸ್ವಂತ ಊರಾದ ಶ್ರೀನಿವಾಸಪುರ ಗ್ರಾಮಕ್ಕೆ ಕುಟುಂಬ ಸಮೇತರಾಗಿ ಹೋಗಿ ನಂತರ ದಿನಾಂಕ:01/06/2021 ರಂದು ಬೆಳಿಗ್ಗೆ ಸುಮಾರು 10-00 ಗಂಟೆಗೆ ಚಿಂತಾಮಣಿಯ ಮನೆಯ ಬಳಿ ಬಂದು ನೋಡಲಾಗಿ ಮನೆಯ ಬಾಗಿಲಿನ ಡೋರ್ ಲಾಕ್ ಬೀಗವನ್ನು ಕಿತ್ತಿರುವಂತೆ ಇದ್ದು, ಒಳಗೆ ಹೋಗಿ ನೋಡಲಾಗಿ ಮನೆಯ ರೂಂ.ನಲ್ಲಿರುವ ಬೀರುವಿನ ಲಾಕ್ ನ್ನು ಯಾವುದೋ ಆಯುಧದಿಂದ ಕಿತ್ತು ಅದರಲ್ಲಿದ್ದ  ಸುಮಾರು 12 ಗ್ರಾಂ. ತೂಕದ ಬಂಗಾರದ ಹಳೇ ಕಾಲದ ನಕ್ಲೇಸ್, ಸುಮಾರು 4 ಗ್ರಾಂ. ತೂಕದ 1 ಜೊತೆ ಬಂಗಾರದ ಕಿವಿ ಓಲೆ,  ಸುಮಾರು 04 ಗ್ರಾಂ. ತೂಕದ ಬಂಗಾರದ ಜುಮುಕಿಯನ್ನು ಯಾರೋ ಕಳ್ಳರು ನಾವು ಮನೆಯಲ್ಲಿ ಇಲ್ಲದ ಸಮಯವನ್ನು ನೋಡಿಕೊಂಡು ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಡೋರ್ ಲಾಕ್ ನ್ನು  ಯಾವುದೋ ಆಯುಧದಿಂದ ಕಿತ್ತು ಹಾಕಿ ಅದರಲ್ಲಿದ್ದ  20 ಗ್ರಾಂ. ತೂಕದ ಬೆಲೆ ಸುಮಾರು 1,00,000-00 ರೂ.ಗಳಷ್ಟು ಬೆಲೆ ಬಾಳುವ ಈ ಮೇಲ್ಕಂಡ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನವಾಗಿರುವ ವಿಷಯವನ್ನು ನಾನು ನಮ್ಮ ಮನೆಯ ಸುತ್ತ ಮುತ್ತಲ ಜನರಿಗೆ ತಿಳಿಸಿ ಕೇಳಿದಾಗ ಕಳ್ಳತನ ಮಾಡಿರುವ ಕಳ್ಳರು ಯಾರು ಎಂಬುದು ಗೊತ್ತಾಗಲಿಲ್ಲ. ಈ ಬಗ್ಗೆ ನಾವು ಠಾಣೆಯಲ್ಲಿ ಯಾವುದೇ ದೂರು ನೀಡಿರಲಿಲ್ಲ. ಚಿಂತಾಮಣಿಯ ಪೊಲೀಸರು ಯಾರೋ ಕಳ್ಳರನ್ನು ಹಿಡಿದು ವಿಚಾರಣೆ ಮಾಡುತ್ತಿರುವ ವಿಷಯ ತಿಳಿದು ಈ ದಿನ ಠಾಣೆಗೆ ತಡವಾಗಿ ದೂರು ನೀಡುತ್ತಿದ್ದು ಆದ್ದರಿಂದ ದಿನಾಂಕ:28/05/2021 ರಂದು ರಾತ್ರಿ ಸಮಯದಲ್ಲಿ ತಾವು ಯಾರೂ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಬೀಗ ಹಾಕಿದ್ದ ಮನೆಯ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಕಿತ್ತು ಹಾಕಿ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಮತ್ತು ಬಂಗಾರದ ಒಡವೆಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ತಮ್ಮಲ್ಲಿ ಕೋರಿ ನೀಡದ ದೂರಾಗಿರುತ್ತೇ.

 

14. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.132/2021 ಕಲಂ. 279,337 ಐ.ಪಿ.ಸಿ:-

    ದಿನಾಂಕ:05/09/2021 ರಂದು ಮದ್ಯಾಹ್ನ 13-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀ ಮಹಮದ್ ಖಯ್ಯೂಮ್ ಬಿನ್ ಅಬ್ದುಲ್ ಬಷೀರ್ ಸಾಬ್, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:05/09/2021 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ಬಸವಾಪುರ ಗ್ರಾಮಕ್ಕೆ ಕೆ.ಎ-40 ಇಇ-8730 ಜುಪೀಟರ್ ವಾಹನದಲ್ಲಿ ಹೋಗುತ್ತೀದ್ದಾಗ ನಗರದ ಸೇಂಟ್ ಆನ್ಸ್ ಶಾಲೆಯ ಬಳಿ ರಾಜ್ಯ ಹೆದ್ದಾರಿ -09 ರಲ್ಲಿ ಹೋಗುತ್ತೀದ್ದಾಗ ತನ್ನ ಹಿಂದಿನಿಂದ ಕೆ.ಎ-01 ಎಂ. ಬಿ- 1860 ನೊಂದಣಿ ಸಂಖ್ಯೆ ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಅಕ್ಕ ಮುನೀರ ಬಾನು ಮತ್ತು ತನ್ನ ಮಗ ಸೈಯದ್ ಶಹಬಾಜ್ ರವರು ಚಲಾಯಿಸಿಕೊಂಡು ಹೋಗುತ್ತೀದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡಿದಿರುತ್ತಾನೆ.  ಆದ ಪರಿಣಾಮ ತನ್ನ ಅಕ್ಕ ಮುನೀರ ಬಾನು ಮತ್ತು ಶಹಬಾಜ್ ರವರಿಗೆ ತಲೆಗೆ ಭಾರಿ ಪೆಟ್ಟು ಬಿದ್ದು ರಕ್ತ ಸ್ರಾವವಾಗಿರುತ್ತೆ. ತಕ್ಷಣ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದಾಗ ವೈದ್ಯರು ತುರ್ತು ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗೆ  ಬೆಂಗಳೂರಿಗೆ ಕರೆದುಕೊಂಡು ಹೋಗಲು ಸೂಚಿಸಿರುತ್ತಾರೆ. ಹಾಲಿ ತನ್ನ ಅತ್ತಿಗೆಯವರನ್ನು ಇವರಿಬ್ಬರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತಾರೆ.  ಆದ್ದರಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿಕೊಂಡು ಅಪಘಾತ ಮಾಡಿದ ಕಾರು ಮತ್ತು ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.  

 

15. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.133/2021 ಕಲಂ. 279,337,304(A) ಐ.ಪಿ.ಸಿ:-

    ದಿನಾಂಕ 05/09/2021 ರಂದು ರಾತ್ರಿ 8:00 ಗಂಟೆಯಲ್ಲಿ ಪಿರ್ಯಾದಿ ಹರೀಶ ಎನ್. ಬಿನ್ ಲೇಟ್ ನಂಜುಂಡಪ್ಪ, 33 ವರ್ಷ, ಪ್ರೈವೆಟ್ ಕಂಪನಿಯಲ್ಲಿ ಕೆಲಸ, ಸಾದರಗೌಡರು, ಕಲ್ಲೂಡಿ ಗ್ರಾಮ, ಗೌರಿಬಿದನೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಮ್ಮ ತಂದೆತಾಯಿರವರಿಗೆ ಇಬ್ಬರು ಮಕ್ಕಳಾಗಿದ್ದು, 1ನೇ ನಾನು 2ನೇ ನನ್ನ ತಮ್ಮ ರಘುರವರಾಗಿರುತ್ತಾರೆ. ನಾನು ನನ್ನ ತಾಯಿ, ತಮ್ಮ ಹೆಂಡತಿ ಮಕ್ಕಳೊಂದಿಗೆ ಕಲ್ಲೂಡಿಯಲ್ಲಿ ವಾಸ ಮಾಡುತ್ತಿದ್ದೇವೆ. ನನ್ನ ತಮ್ಮ ರಘು ಐ.ಟಿ. ವಿದ್ಯಾಭ್ಯಾಸ ಮಾಡಿಕೊಂಡು ವಾಸವಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ದಿನಾಂಕ: 05/09/2021 ರಂದು ಸಂಜೆ 7-00 ಗಂಟೆಗೆ ನಮ್ಮ ಗ್ರಾಮದ ರಂಗಪ್ಪರವರು ನನಗೆ ಪೋನ್ ಮಾಡಿ ಕಲ್ಲೂಡಿಯ ಹತ್ತಿರ ಯಮಹಾ ಶೋರೂಂ ಮುಂಭಾಗದಲ್ಲಿ ಹಾದು ಹೋಗಿರುವ ಬಿ.ಹೆಚ್. ರಸ್ತೆಯ ಎಡಬದಿಯ ಪುಟ್ ಪಾತ್ ನಲ್ಲಿರುವ ಸಿಮೆಂಟ್ ದಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ  ನಿನ್ನ ತಮ್ಮನಿಗೆ ಅಪಘಾತವಾಗಿ  ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.  ಲಾಷನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸುತ್ತಿರುವುದಾಗಿ ತಿಳಿಸಿದರು. ನಂತರ ನಾನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಬಂದು ನೋಡಲಾಗಿ ವಿಷಯ ನಿಜವಾಗಿತ್ತು.  ವಿಚಾರ ಮಾಡಲಾಗಿ ನನ್ನ ತಮ್ಮ ರಘು ಅವನ ಸ್ನೇಹಿತ ಪ್ರವೀಣ್ ರವರ ಬಾಬತ್ತು KA-40-U-9733 ದ್ವಿಚಕ್ರವಾಹನದಲ್ಲಿ ಗೌರಿಬಿದನೂರಿನಿಂದ ಕಲ್ಲೂಡಿಗೆ ಹೋಗುತ್ತಿದ್ದಾಗ ಸಂಜೆ ಸುಮಾರು 6-35 ಸಮಯದಲ್ಲಿ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಪ್ರವೀಣ್ ಬಿನ್ ಲೇಟ್ ಕೃಷ್ಣಪ್ಪ,  28 ವರ್ಷ, ಸಾದರ ಗೌಡರು, ಕಲ್ಲೂಡಿ ಗ್ರಾಮ ಗೌರಿಬಿದನೂರು ತಾಲ್ಲೂಕು ರವರು ತನ್ನ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಿ.ಹೆಚ್. ರಸ್ತೆಯ ಎಡಬದಿಯ ಪುಟ್ ಪಾತ್ ನಲ್ಲಿರುವ ಸಿಮೆಂಟ್ ದಿಂಡಿಗೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ನನ್ನ ತಮ್ಮ ರಘುರವರು ದ್ವಿಚಕ್ರವಾಹನದಿಂದ ಕೆಳಗೆ ಬಿದ್ದು,  ತಲೆಗೆ ರಕ್ತ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.  ಹಾಗೂ ದ್ವಿಚಕ್ರವಾಹನದ ಸವಾರನಾದ ಪ್ರವೀಣ್ ರವರಿಗೂ ಸಹ ರಕ್ತ ಗಾಯಗಳಾಗಿರುತ್ತೆಂದು ತಿಳಿಯಿತು. ಅಪಘಾತವುಂಟುಮಾಡಿ ನನ್ನ ತಮ್ಮನ ಸಾವಿಗೆ ಕಾರಣವಾದ ಪ್ರವೀಣ್ ರವರ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

 

16. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.134/2021 ಕಲಂ. 15(A),32(3) ಕೆ.ಇ ಆಕ್ಟ್:-

    ದಿನಾಂಕ:06/09/2021 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ನ್ಯಾಯಾಲಯದ ಪಿಸಿ-318 ರವರು ಎನ್ ಸಿ ಆರ್ ನಂಬರ್ 151/2021 ರಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಬಂದು ಹಾಜರ್ ಪಡಿಸಿದ ಆದೇಶದ ಸಾರಾಂಶವೆನಂದರೆ ದಿನಾಂಕ:17/07/2021 ರಂದು ಮದ್ಯಾಹ್ನ 1-00 ಗಂಟೆಯಲ್ಲಿ ಪಿ ಎಸ್ ಐ ರವರು ನೀಡಿದ ದೂರಿನ ವಿಚಾರವೆನೆಂದರೆ ದಿನಾಂಕ: 17/07/2021 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಗೌರಿಬಿದನೂರು ಗೌರಿಬಿದನೂರು ನಗರ ಪೊಲಿಸ್ ಗಸ್ತಿನಲ್ಲಿದ್ದಾಗ ಸಿ ಹೆಚ್ ಸಿ-214 ಲೋಕೇಶ್ ರವರು ಪೊನ್ ಮಾಡಿ ಗೌರಿಬಿದನೂರ ನಗರದ ಶನಿಮಹಾತ್ಮ ದೇವಸ್ಥಾನದ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡು ಸ್ಥಳವಾಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ನಾನು ಸಕರ್ಾರಿ ಜೀಪ್ ಸಂಖ್ಯೆ ಕೆ.ಎ.-40 ಜಿ- 281 ಜೀಪ್ನಲ್ಲಿ  ಕಛೇರಿ ಸಿಬ್ಬಂದಿಯನ್ನು ಸಿ.ಪಿ.ಸಿ-507 ಹನುಮಂತರಾಯಪ್ಪ ರವರೊಂದಿಗೆ ಜೀಪ್ನ್ನು ಎಪಿಸಿ-73 ಹರೀಶ್ ರವರು ಚಾಲನೆ ಮಾಡಿಕೊಂಡು ಸಂಗೋಳ್ಳಿರಾಯಣ್ಣ ವೃತ್ತ ಬಿಳಿ ಹೋಗಿ  ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ನಮ್ಮ ಜೀಪ್ ನಲ್ಲಿ  ಕರೆದುಕೊಂಡು  ಬೆಳಿಗ್ಗೆ 11-15 ಗಂಟೆಯಲ್ಲಿ ಶನಿ ಮಹಾತ್ಮ ದೇವಸ್ಥಾನದ ಬಳಿ ಇದ್ದ ಮಾಹಿತಿ ಸಿಹೆಚ್ ಸಿ214 ರವರನ್ನು ಕರೆದುಕೊಂಡು ಹೋಗಿ ಮರೆಯಲ್ಲಿ ಜೀಪ್ನ್ನು ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಅಸಾಮಿಯು ಶನಿ ಮಹಾತ್ಮ ದೆವಸ್ಥಾನದ ಪಕ್ಕದಲ್ಲಿರುವ ಸಾರ್ವಜನಿಕ ರಸ್ತೆಯಲ್ಲಿ  ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಾಕಾಶ  ಮಾಡಿಕೊಟ್ಟಿದ್ದು ಅಲ್ಲಿ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತೀರುವುದು ಕಂಡು ಬಂದಿದ್ದು ಪಂಚರ ಸಮಕ್ಷಮ ದಾಳಿ ಮಾಡಲು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಅಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರು ಓಡಿ ಹೋಗಿದ್ದು ಮದ್ಯವನ್ನು ಸರಬರಾಜು ಮಾಡುತ್ತೀದ್ದವನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶ್ರೀನಿವಾಸ ಬಿ,ಸಿ ಬಿನ್ ಚಿಕ್ಕರಂಗಪ್ಪ, 38 ವರ್ಷ, ನಾಯಕರು, ಆಟೋ ಡ್ರೈವರ್ ಕೆಲಸ, ವಾಸ: ಬಾದಿ ಮರಳೂರು ಗ್ರಾಮ, ಗೌರಿಬಿದನೂರು ತಾಲ್ಲೂಕು. ಪೊನ್: 9686724777 ಎಂದು ತಿಳಿಸಿದ್ದು ಸದರಿಯವರನ್ನು ಸಾರ್ವಜನಿಕರಿಗೆ ಮದ್ಯ ಸೇವನೆ  ಮಾಡಲು ಸ್ಥಳವಕಾಶವನ್ನು ಮಾಡಿಕೊಟ್ಟ ಬಗ್ಗೆ ಯಾವುದಾರರೂ  ಪರವಾನಿಗೆ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ  ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 1) ಹೈವಾಡ್ಸರ್್ ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ,ಎಲ್, ಸಾಮಥ್ರ್ಯದ ಮದ್ಯವಿರುವ 15 ಟೆಟ್ರಾ ಪಾಕೇಟ್ಗಳು,  2) ಹೈವಾಡ್ಸರ್್ ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ,ಎಲ್, ಸಾಮಥ್ರ್ಯದ ಖಾಲಿ 04 ಟೆಟ್ರಾ ಪಾಕೇಟ್ಗಳು, 3) ಮದ್ಯವನ್ನು ಕುಡಿದು ಬಿಸಾಕಿದಂತಹ ಖಾಲಿ 03 ಪ್ಲಾಸ್ಟಿಕ್ ಗ್ಲಾಸ್ಗಳು, ಮತ್ತು 4) ಒಂದು ಲೀಟರ್ ಸಾಮಥ್ರ್ಯದ ಒಂದು ಖಾಲಿ ವಾಟರ್ ಬಾಟೆಲ್ ಇದ್ದು ಇವುಗಳನ್ನು ಬೆಳಿಗ್ಗೆ 11-30 ಗಂಟೆಯಿಂದ ಮದ್ಯಾಹ್ನ 12-15 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ  ಮದ್ಯಾಹ್ನ 12-30 ಗಂಟೆಗೆ ಬಂದು ಮದ್ಯಾಹ್ನ 1-00 ಗಂಟೆಗೆ ವರದಿಯನ್ನು ಸಿದ್ದಪಡಿಸಿ  ಆರೋಪಿಯ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕಾಗಿ ಸೂಚಿಸಿ ನೀಡಿದ ವರದಿ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ. ಎನ್ ಸಿ ಆರ್ ನಂಬರ್:151/2021 ರಲ್ಲಿಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತೆ. ದಿನಾಂಕ:06/09/2021 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ನ್ಯಾಯಾಲಯದ ಪಿಸಿ-318 ರವರು ಅನುಮತಿಯ ಆದೇಶವನ್ನು ಪಡೆದುಕೊಂಡು ಬಂದು ಹಾಜರ್ ಪಡಿಸಿದ್ದನ್ನು ಪಡೆದುಕೊಂಡು ಠಾಣಾ ಮೊ.ಸಂ:134/2021 ಕಲಂ 15(ಎ) 32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

17. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.135/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿ:06/09/2021 ರಂದು ಬೆಳಗ್ಗೆ 11 -00 ಗಂಟೆಯ ಸಮಯದಲ್ಲಿ ಗೌರಿಬಿದನೂರು ನಗರ ಪೊಲೀಸ್ ಠಾಣೆಯ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಸಿಪಿಸಿ-318.ಶ್ರೀ.ದೇವರಾಜ ರವರು ಠಾಣಾ ಎನ್.ಸಿ.ಆರ್.ನಂ.174/2021 ರಲ್ಲಿನ  ಆರೋಪಿಯ ವಿರುದ್ದ ಕ್ರಿಮಿನಲ್  ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿದ್ದ  ಮನವಿಯ ವಿಚಾರದಲ್ಲಿ  ಘನ ನ್ಯಾಯಾಲಯವು ಅನುಮತಿಯನ್ನು ನೀಡಿರುವ ಆದೇಶವನ್ನು ತಂದು ಠಾಣೆಯಲ್ಲಿ ನನ್ನ ಬಳಿ ಹಾಜರ್ಪಡಿಸಿದ್ದನ್ನು ಪಡೆದುಕೊಂಡಿದ್ದು ಎನ್.ಸಿ.ಆರ್. 174/2021 ರಲ್ಲಿನ ದೂರು ವರದಿಗೆ ಸಂಬಂಧಿಸಿದ  ವಿಚಾರವೇನೆಂದರೆ   ಶ್ರೀ.ಕೆ.ಪ್ರಸನ್ನಕುಮಾರ್, ಪಿ.ಎಸ್.ಐ, ಗೌರಿಬಿದನೂರು ನಗರ ಪೊಲೀಸ್ ಠಾಣೆ  ಆದ ತಾನು ದಿ:12/08/2021 ರಂದು ಮದ್ಯಾಹ್ನ 2-00 ಗಂಟೆಯಲ್ಲಿ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ.-40.ಜಿ-281 ಜೀಪ್ ನಲ್ಲಿ  ಚಾಲಕನಾದ ಎಪಿಸಿ-76. ಹರೀಶ, ಠಾಣಾ ಸಿಬ್ಬಂದಿಯಾದ ಹೆಚ್.ಸಿ-213.ಶಿವಣ್ಣ, ಪಿ.ಸಿ-507.ಹನುಮಂತರಾಯಪ್ಪ ರವರೊಂದಿಗೆ ಗೌರಿಬಿದನೂರು ನಗರದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಪಿ.ಸಿ-282 ಶ್ರೀ.ರಮೇಶ್  ರವರು ಪೋನ್ ಮಾಡಿ ಗೌರಿಬಿದನೂರು ನಗರ ಪೊಲೀಸ್ ಠಾಣಾ ಸರಹದ್ದಿನ, ಗೌರಿಬಿದನೂರು-ಗುಡಿಬಂಡೆ-ಬಾಗೇಪಲ್ಲಿ ಮಾರ್ಗದ ರಸ್ತೆಯಿಂದ ಕಲಂತರಾಯನಬೆಟ್ಟಕ್ಕೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ತಾನು  ಜೀಪ್ ಚಾಲಕ ಎಪಿಸಿ-76. ಹರೀಶ, ಹೆಚ್.ಸಿ-213.ಶಿವಣ್ಣ, ಪಿ.ಸಿ-507.ಹನುಮಂತರಾಯಪ್ಪ  ರವರೊಂದಿಗೆ ಸಂಗೋಳ್ಳಿರಾಯಣ್ಣ ವೃತ್ತದ ಬಳಿಗೆ ಈದಿನ ದಿ:12/08/2021 ರಂದು ಮದ್ಯಾಹ್ನ 2-10 ಗಂಟೆಗೆ ಹೋಗಿ  ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು  ಮತ್ತು ಮೇಲ್ಕಂಡ ಸಿಬ್ಬಂದಿಯನ್ನು ನಮ್ಮ ಜೀಪ್ ನಲ್ಲಿ  ಕರೆದುಕೊಂಡು ಈದಿನ ದಿ:12/08/2021 ರಂದು ಮದ್ಯಾಹ್ನ 2-20 ಗಂಟೆಗೆ ಗೌರಿಬಿದನೂರು-ಗುಡಿಬಂಡೆ-ಬಾಗೇಪಲ್ಲಿ ಮಾರ್ಗದ ರಸ್ತೆಯಿಂದ ಕಲಂತರಾಯನಬೆಟ್ಟಕ್ಕೆ ಹೋಗುವ ರಸ್ತೆಯ ಬಳಿಗೆ ಬಂದು ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಅಸಾಮಿಯು ಗೌರಿಬಿದನೂರು-ಗುಡಿಬಂಡೆ-ಬಾಗೇಪಲ್ಲಿ ಮಾರ್ಗದ ರಸ್ತೆಯಿಂದ ಕಲಂತರಾಯನಬೆಟ್ಟಕ್ಕೆ ಹೋಗುವ  ಸಾರ್ವಜನಿಕ ರಸ್ತೆಯಲ್ಲಿ  ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಾಕಾಶ  ಮಾಡಿಕೊಟ್ಟು ಮಧ್ಯವನ್ನು ಸರಬರಾಜು ಮಾಡುತ್ತಿದ್ದು ಅಲ್ಲಿದ್ದ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತಿರುವುದು ಕಂಡು ಬಂದಿದ್ದು ಪಂಚರ ಸಮಕ್ಷಮ  ತಾನು ಮತ್ತು ಸಿಬ್ಬಂದಿಯವರು ದಾಳಿ ಮಾಡಲು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರು ಓಡಿ ಹೋಗಿದ್ದು ಮದ್ಯವನ್ನು ಸರಬರಾಜು ಮಾಡುತ್ತಾ, ಸ್ಥಳವಕಾಶವನ್ನು  ಮಾಡಿಕೊಟ್ಟಿದ್ದ ಅಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶ್ರೀ.ಹರೀಶ ಬಿನ್ ಕೃಷ್ಣಪ್ಪ,  ಸುಮಾರು 35 ವರ್ಷ, ಈಡೀಗರು, ಜಿರಾಯ್ತಿ ಕೆಲಸ, ಕೋನಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು, ಮೊಬೈಲ್ ನಂ.8105203413  ಎಂದು ತಿಳಿಸಿದ್ದು ಸದರಿಯವರನ್ನು ಸಾರ್ವಜನಿಕರಿಗೆ ಮದ್ಯ ಸೇವನೆ  ಮಾಡಲು ಸ್ಥಳವಕಾಶವನ್ನು ಮಾಡಿಕೊಟ್ಟು ಮದ್ಯವನ್ನು ಸರಬರಾಜು ಮಾಡುತ್ತಿರುವುದಕ್ಕೆ  ಸಂಬಂಧಪಟ್ಟಂತೆ ಯಾವುದಾದರೂ  ಪರವಾನಿಗೆ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ  ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 1] ಹೈವಾರ್ಡ್ಸ್ ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್. ಸಾಮರ್ಥ್ಯದ ಮದ್ಯವಿರುವ 16 ಟೆಟ್ರಾ ಪಾಕೇಟುಗಳು, ಇವುಗಳ ಒಟ್ಟು ಮೌಲ್ಯ 562-08/-ರೂಗಳು, ಮಧ್ಯದ ಪ್ರಮಾಣವನ್ನು  ಲೆಕ್ಕ ಮಾಡಲಾಗಿ ಒಟ್ಟು ಸಾಮರ್ಥ್ಯ 01 ಲೀಟರ್ 440 ಎಂ.ಎಲ್ ಆಗಿರುತ್ತೆ.  2] ಹೈವಾರ್ಡ್ಸ್  ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್. ಸಾಮರ್ಥ್ಯದ ಖಾಲಿ 04 ಟೆಟ್ರಾ ಪಾಕೇಟುಗಳು. 3] ಮದ್ಯವನ್ನು ಕುಡಿದು ಬಿಸಾಕಿದಂತಹ 04 ಖಾಲಿ  ಪ್ಲಾಸ್ಟಿಕ್ ಗ್ಲಾಸುಗಳು ಮತ್ತು 4] 01 ಲೀಟರ್ ಸಾಮರ್ಥ್ಯದ ಒಂದು ಖಾಲಿ  ಪ್ಲಾಸ್ಟಿಕ್ ವಾಟರ್ ಬಾಟೆಲ್ ಇದ್ದು ಇವುಗಳನ್ನು ಮದ್ಯಾಹ್ನ 2-30 ಗಂಟೆಯಿಂದ ಮದ್ಯಾಹ್ನ 3-30 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಮೇಲ್ಕಂಡ ಮಾಲುಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ  ಮದ್ಯಾಹ್ನ 3-45 ಗಂಟೆಗೆ ಬಂದು ಸಂಜೆ  4-15 ಗಂಟೆಗೆ ವರದಿಯನ್ನು ಸಿದ್ದಪಡಿಸಿ  ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯನ್ನು  ನಿಮ್ಮ ಮುಂದೆ ಹಾಜರ್ಪಡಿಸುತ್ತಿದ್ದು ಆರೋಪಿಯ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕಾಗಿ  ಠಾಣಾಧಿಕಾದಿಕಾರಿಗಳಿಗೆ ಸೂಚಿಸಿ ನೀಡಿದ ದೂರು ವರದಿಯಾಗಿದ್ದು,ಈದೂರು ವರದಿಯನ್ನು ಪಡೆದುಕೊಂಡು ಠಾಣೆಯಲ್ಲಿ ಎನ್.ಸಿ.ಆರ್.ನಂ.174/2021 ರೀತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿರುತ್ತೆ. ನಂತರ ಠಾಣೆಯ  ಎನ್.ಸಿ.ಆರ್.ನಂ.174/2021 ರಲ್ಲಿನ  ಆರೋಪಿಯ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳುವ ಸಲುವಾಗಿ ಅನುಮತಿಯನ್ನು  ನೀಡಲು ಕೋರಿ ಘನ ನ್ಯಾಯಾಲಯಕ್ಕೆ  ವರದಿಯನ್ನು ನಿವೇದಿಸಿಕೊಂಡಿದ್ದು, ಈ ಸಂಬಂಧ ಘನ  ನ್ಯಾಯಾಲಯವು  ಆರೋಪಿಯ ವಿರುದ್ದ  ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಿರುವ ಅದೇಶವನ್ನು  ದಿ:06/09/2021 ರಂದು ಪಡೆದುಕೊಂಡು ಅರೋಪಿಯ ವಿರುದ್ದ ಠಾಣೆಯಲ್ಲಿ  ಮೊ.ಸಂ.135/2021 ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

18. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.90/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ 05-09-2021 ರಂದು ಸಂಜೆ 6.30 ಗಂಟೆಗೆ  ಹೆಚ್.ಸಿ 110 ವೇಣು ಡಿಸಿಬಿ/ಸಿಇಎನ್  ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆ ರವರು ಆರೋಪಿ, ಮಾಲು ಮತ್ತು ಮಹಜರ್ ನೊಂದಿಗೆ ಠಾಣಗೆ ಹಾಜರಾಗಿ  ನೀಡಿದ ವರದಿಯ ಸಾರಾಂಶವೇನೆಂದರೆ, ಶ್ರೀ ರಾಜಣ್ಣ ಪಿ.ಐ ಡಿಸಿಬಿ/ಸಿಇಎನ್  ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆ ರವರು ದಿನಾಂಕ:05/09/2021 ರಂದು ತನಗೆ ಮತ್ತು ಹೆಚ್.ಸಿ 198 ಮಂಜುನಾಥರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು, ಅದರಂತೆ ದಿನಾಂಕ:05/09/2021 ರಂದು ಮದ್ಯಾಹ್ನ 3.45 ಗಂಟೆ ಸಮಯದಲ್ಲಿ ಕೋಡೇಗಂಡ್ಲು ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದಂತಹ ಖಚಿತ ಮಾಹಿತಿ ಮೇರೆಗೆ ಪಂಚರೊಂದಿಗೆ ಕೋಡೇಗಂಡ್ಲು ಗ್ರಾಮದ ಕೃಷ್ಣಪ್ಪ ಬಿನ್ ಲೇಟ್ ಶ್ರೀರಾಮಪ್ಪ ರವರ ಮನೆಯ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಬಗ್ಗೆ ವಿಚಾರಿಸಲಾಗಿ ಕೃಷ್ಣಪ್ಪ ಬಿನ್ ಲೇಟ್ ಶ್ರೀರಾಮಪ್ಪ  ರವರ ಮನೆಯ ಮುಂಭಾಗ ಸ್ಥಳದಲ್ಲಿ ಪರಿಶೀಲಿಸಲಾಗಿ 1) HAYWARDS CHEERS WHISKY ಯ ಮದ್ಯ ತುಂಬಿದ 90 ML ನ 24 ಟೆಟ್ರಾ ಪಾಕೇಟ್ ಗಳು  2) 2 ಪ್ಲಾಸ್ಟಿಕ್ ಗ್ಲಾಸ್ ಗಳು 3) ಖಾಲಿ ಇದ್ದ ಎರಡು HAYWARDS CHEERS WHISKY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ಗಳು 4) ಒಂದು ಲೀಟರ್ ನ ಖಾಲಿ ಬಾಟೆಲ್ ಇದ್ದು ವಶಪಡೆಸಿಕೊಂಡು ಒಟ್ಟು 2.160 ಎಂ ಎಲ್ ಇದ್ದು ಇದರ ಬೆಲೆ 543/- ರೂಗಳಾಗಿರುತ್ತದೆ. ಮಾಲನ್ನು ಪಂಚನಾಮೆ ಮೂಲಕ ಅಮಾನತ್ತು ಪಡೆಸಿಕೊಂಡಿರುತ್ತದೆ. ಯಾವುದೇ ಪರವಾನಿಗೆ ಪಡೆಯದೇ ಮನೆಯ ಮುಂದೆ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ  ಮಾಡಿಕೊಟ್ಟಿರುವ ಆಸಾಮಿಯಾದ ಕೃಷ್ಣಪ್ಪ ಬಿನ್ ಲೇಟ್ ಶ್ರೀರಾಮಪ್ಪ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುಲು ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

19. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.154/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ:06/09/2021 ರಂದು ಹೆಚ್.ಸಿ.137 ಮಂಜುನಾಥ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ಘನ ನ್ಯಾಯಾಲಯದಲ್ಲಿ ಲಕ್ಷ್ಮೀನಾರಾಯಣ ಪಿ.ಎಸ್.ಐ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:05/09/2021 ರಂದು ಸಂಜೆ 3-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಹೋಬಳಿ ಎ.ಕೆ ಗೊಲ್ಲಹಳ್ಳಿ  ಗ್ರಾಮದ ಬಳಿ ಇರುವ ಭೀಮೇಶ್ವರ ಬೆಟ್ಟದ ಬಳಿ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿ.ಸಿ-311 ಗೂಳಪ್ಪ ನಿಂಗನೂರ್, ಪಿ.ಸಿ-283 ಅರವಿಂದ, ಪಿಸಿ-111 ಲೋಕೇಶ್, ಪಿ.ಸಿ-483 ರಮೇಶ್, ಪಿ.ಸಿ-238 ದಿಲೀಪ್ ಕುಮಾರ್ ಮತ್ತು ಜೀಪ್ ಚಾಲಕ ಎಪಿಸಿ-120 ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಜೆ 4-00 ಗಂಟೆಗೆ ಮೇಲ್ಕಂಡ ಸ್ಥಳದಿಂದ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಕಾಲು ನಡುಗೆಯಲ್ಲಿ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ ಗೆ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿದರೂ ಸಹಾ ಕೆಲವರು ಸ್ಥಳದಿಂದ ಓಡಿಹೋಗಿದ್ದು ಸ್ಥಳದಲ್ಲಿದ್ದವರನ್ನು  ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಮೂರ್ತಿ  ಬಿನ್ ಯುವರಾಜ, 30 ವರ್ಷ, ಆದಿ ಕರ್ನಾಟಕ, ಗಾರೆಕೆಲಸ, ಎಂ.ಗೊಲ್ಲಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ. 2) ಅಶೋಕ ಬಿ.ಎಸ್ ಬಿನ್ ಸುಬ್ಬರಾಯಪ್ಪ, 30 ವರ್ಷ, ಕುರುಬ, ಕೂಲಿ, ಭೂಮನಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ. 3) ಉಮೇಶ ಎಂ.ಇ ಬಿನ್ ಈಶ್ವರಪ್ಪ, 32 ವರ್ಷ, ಮಡಿವಾಳ, ಜಿರಾಯ್ತಿ, ಮಿಣಕನಗುರ್ಕಿ ಗ್ರಾಮ, ಮಂಚೇನಹಳ್ಳಿ ಹೋಬಳಿ. 4) ಪಾಪಣ್ಣ ಬಿನ್ ಆವುಲಪ್ಪ, 52 ವರ್ಷ, ಗೊಲ್ಲರು, ಕೂಲಿ, ಮಂಚೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, ಎಂದು ತಿಳಿಸಿದ್ದು ಸದರಿಯವರಿಗೆ ಜೂಜಾಟವಾಡುತ್ತಿದ್ದು ಓಡಿಹೋದವರ ಹೆಸರು ವಿಳಾಸ ಕೇಳಲಾಗಿ 5) ಭರತ್ ಬಿನ್ ಅಶ್ವತ್ಥನಾರಾಯಣಗೌಡ, 28 ವರ್ಷ, ಗೊಲ್ಲರು, ಮಿಣಕನಗುರ್ಕಿ ಗ್ರಾಮ, 6) ಆಂಜಿ, ಕಂಬತ್ತನಹಳ್ಳಿ, 7) ಬಾಬು, ಮಂಚೇನಹಳ್ಳಿ, 8)  ಮೂರ್ತಿ @ ಡವಪ್ಪ ಬಿನ್ ಲೇಟ್ ಗಂಗಯ್ಯ, ಎಂ.ಗೊಲ್ಲಹಳ್ಳಿ ಗ್ರಾಮ, ಎಂದು ತಿಳಿಸಿದ್ದು ಸದರಿ ಎಲ್ಲರನ್ನೂ  ಸಹಾ   ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಸೇರಿಕೊಂಡು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ಇಸ್ಪೀಟ್ ಜೂಜಾಟದ ಪಕ್ಕದಲ್ಲಿ ನಿಲ್ಲಿಸಿದ್ದ ಇಸ್ಪೀಟ್ ಆಟವಾಡಲು ತಂದು ನಿಲ್ಲಿಸಿದ್ದ ವಾಹನಗಳನ್ನು ಪರಿಶೀಲಿಸಲಾಗಿ ಉಮೇಶನ ದ್ವಿಚಕ್ರವಾಹನ ಕೆಎ-40-ಎಲ್-3970 ಎಕ್ಸೆಲ್ ಹೆವಿ ಡ್ಯೂಟಿ ದ್ವಿಚಕ್ರ ವಾಹನ, ಅಶೋಕನ ದ್ವಿಚಕ್ರ ವಾಹನ ಕೆಎ-13-ಯು-8602 ಪ್ಯಾಷನ್ ದ್ವಿಚಕ್ರ ವಾಹನಗಳಾಗಿದ್ದು ಓಡಿ ಹೋದವರ ದ್ವಿಚಕ್ರ ವಾಹನಗಳಾದ ಭರತ್ ರವರ ಕೆಎ-04-ಹೆಚ್.ಇ-2029 ಸ್ಪ್ಲೆಂಡರ್ ಪ್ಲಸ್, ಬಾಬು ರವರ ಕೆಎ-40-ಹೆಚ್-8953 ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನ ಹಾಗೂ ಆಂಜಿ ರವರ ಕೆಎ-40-ಇಇ-5123 ಎಕ್ಸೆಲ್ ಹೆವಿಡ್ಯೂಟಿ ದ್ವಿಚಕ್ರ ವಾಹನಗಳಾಗಿದ್ದು ಪಂಚನಾಮೆಯ ಮೂಲಕ ಸದರಿ ವಾಹನಗಳನ್ನು ಮತ್ತು ಸ್ಥಳದಲ್ಲಿ ದೊರೆತ 4200/- (ನಾಲ್ಕು ಸಾವಿರದ ಎರಡು ನೂರು ರೂಪಾಯಿಗಳು ಮಾತ್ರ.) ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಸಂಜೆ 4-30 ಗಂಟೆಯಿಂದ 5-30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಸಂಜೆ 6-00 ಗಂಟೆಗೆ ಠಾಣೆಗೆ ವಾಪಾಸ್ ಬಂದು ಎನ್.ಸಿ.ಆರ್ ಪ್ರಕರಣ ದಾಖಲಿಸಿಕೊಂಡು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 

20. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.92/2021 ಕಲಂ. 323,324,504,34 ಐ.ಪಿ.ಸಿ:-

  ದಿನಾಂಕ:05-09-2021 ರಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಗಂಗಾಧರಪ್ಪ ಬಿನ್ ಗಂಗುಲಪ್ಪ, ರಾಚವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ಬೆಳಿಗ್ಗೆ 11-30 ಗಂಟೆಗೆ ದಾಖಲಿಸಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ, ತನಗೆ ಈಗ್ಗೆ 25 ವರ್ಷಗಳ ಹಿಂದೆ ಆಂದ್ರಪ್ರದೇಶದ ಯರಬಲ್ಲಿ ಗ್ರಾಮದ ಗಂಗುಲಪ್ಪ ರವರ ಮಗಳಾದ ಕದಿರಮ್ಮ ರವರೊಂದಿಗೆ ವಿವಾಹವಾಗಿದ್ದು, ತನ್ನ ಹೆಂಡತಿ ಅಣ್ಣನ ಮಗಳಾದ ಲಾವಣ್ಯರವರನ್ನು ಆಕೆಯ ತಾಯಿ ತೀರಿಕೊಂಡ ಕಾರಣ ಈಗ್ಗೆ 3 ತಿಂಗಳ ಹಿಂದೆ ತಮ್ಮ ಮನೆಯಲ್ಲಿಯೇ ತಂದು ಇಟ್ಟುಕೊಂಡು ಸಾಕುತ್ತಿದ್ದು, ಹೀಗಿರುವಾಗ ಈಗ್ಗೆ ಸುಮಾರು 2 ತಿಂಗಳ ಹಿಂದೆ ಲಾವಣ್ಯ ತಮ್ಮ ಗ್ರಾಮದ ಮನೆಯ ಪಕ್ಕದ ಹರೀಶ್ ರವರೊಂದಿಗೆ ಓಡಿ ಹೋಗಿ ಮದುವೆಯಾಗಿದ್ದು, ನಂತರ ಅವರು ವಾಪಸ್ ಬಂದು ಮನೆಯಲ್ಲಿಯೇ ಇದ್ದು, ಹರೀಶ್ ಕುಡಿದು ಬಂದು ಯಾವಾಗಲೂ ತಮ್ಮನ್ನು ಅವಾಚ್ಯವಾಗಿ ಬೈಯ್ದುತ್ತಿದ್ದು, ಆದರೂ ಸಹ ತಾವು ಗಲಾಟೆ ಮಾಡದೇ ಸುಮ್ಮನಿದ್ದು, ದಿನಾಂಕ:04-09-2021 ರಂದು ರಾತ್ರಿ 8-30 ಗಂಟೆಯಲ್ಲಿ ತಾನು ತನ್ನ ಹೆಂಡತಿ ತಮ್ಮ ಮನೆಯ ವರಾಂಡದಲ್ಲಿದ್ದಾಗ ಹರೀಶ ಬಿನ್ ಚೆನ್ನರಾಯಪ್ಪ, ರವರು ತಮ್ಮ ಬಗ್ಗೆ ಅವಾಚ್ಯವಾಗಿ ಬೈಯ್ಯುತ್ತಿದ್ದು, ತನ್ನ ಹೆಂಡತಿ ಕದಿರಮ್ಮ ರವರು ಯಾಕೇ ನಮ್ಮನ್ನು ಬೈಯ್ಯುತ್ತಿರುವುದು ಎಂದು ಕೇಳಿದ್ದಕ್ಕೆ ನನ್ನ ಹೆಂಡತಿ ಲಾವಣ್ಯಳ ಒಡವೆಗಳನ್ನು ಕೊಡಿ ಯಾಕೆ ನೀವು ಇಟ್ಟುಕೊಂಡಿದ್ದಿರಾ ಎಂದು ಬೈಯ್ದು  ಪಿರ್ಯಾದಿ ಹೆಂಡತಿ ಕದಿರಮ್ಮ ರವರನ್ನು ಹರೀಶನು ರಸ್ತೆಯಲ್ಲಿ ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆಯುತ್ತಿದ್ದಾಗ ಕೈಯಲ್ಲಿದ್ದ ಚಾಕುವಿನಿಂದ ಹೊಟ್ಟೆಯ ಬಳಿ ರಕ್ತಗಾಯವಾಗಿದ್ದು, ನಂತರ ಹರೀಶ ರವರ ತಂದೆ ಚೆನ್ನರಾಯಪ್ಪ ರವರು ಪಿರ್ಯಾದಿಯ ಹೆಂಡತಿಯನ್ನು ಹಾಗೂ ಪಿರ್ಯಾದಿಯ ಮಗ ಸುನೀಲ್ಕುಮಾರ್ನಿಗೂ ಕೈಗಳಿಂದ ಹೊಡೆದಿರುವುದಾಗಿ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ಪಿರ್ಯಾದು.

 

21. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.93/2021 ಕಲಂ. 323,324,504,34 ಐ.ಪಿ.ಸಿ & 3(1)(f),3(1)(r),3(1) The SC & ST (Prevention of Atrocities) Amendment Act 2015:-

  ದಿನಾಂಕ:06/09/2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ.ನಾರಾಯಣಮ್ಮ ಕೋಂ ವಡ್ಡಿ ಗಂಗಪ್ಪರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ತಾನು ತನ್ನ ಗಂಡ ದೇಶಾಂತರ ಹೊರಟುಹೋಗಿದ್ದು, ತಮ್ಮ ಮನೆಯ ಖಾಲಿ ಜಾಗ ತಮ್ಮ ಪೂರ್ವಿಕರದ್ದಾಗಿದ್ದು, ತಮ್ಮ ಗ್ರಾಮದ  ಕೆ.ವಿ. ಗಂಗಿರೆಡ್ಡಿಯವರ ಮಗ ಉಮೇಶರೆಡ್ಡಿರವರು ಪರಿಚಯ ಮಾಡಿಕೊಂಡು ತನ್ನನ್ನು ನಂಬಿಸಿ ತನಗೆ ಓದು ಬರದೇ ಇರುವ ಕಾರಣ ಪೂರ್ವಿಕರಿಂದ ಬಂದಿದ್ದ ಮನೆ ಮತ್ತು ಖಾಲಿ ಜಾಗವನ್ನು ತನ್ನ ಹೆಸರಿಗೆ ಬದಲಾಯಿಸಿ ಮತ್ತು ಅವರ ತಾಯಿ ವೆಂಕಟರವಣಮ್ಮರ ಹೆಸರಿಗೆ ಬದಲಾಯಿಸಿ ತನ್ನನ್ನು ಮೋಸ ಮಾಡಿ ಬೆಳಗಿನ ಜಾವ 05-00 ಗಂಟೆಗೆ ಎದ್ದು ನೀನು 06-00 ಗಂಟೆಗೆ ಬಾಗೇಪಲ್ಲಿಗೆ ಬಂದು ಸಹಿ ಹಾಕಿ ತನ್ನ ಹೆಸರಿಗೆ ಮಾತ್ರ ಅಂತ ನಂಬಿಸಿ ಅವರ ಹೆಸರಿಗೆ ಮಾಡಿಕೊಂಡಿರುವುದಾಗಿ, ಮೇಲ್ಕಂಡ ಆಸಾಮಿ ಗ್ರಾಮ ಪಂಚಾಯ್ತಿಯಿಂದ ತನ್ನ ಹೆಸರಿಗೆ ಜನತಾ ಮನೆಯನ್ನು ಮಾಡಿಸಿ ಗ್ರಾಮ ಪಂಚಾಯ್ತಿಯಲ್ಲಿ ಮೇಲ್ಕಂಡ ಆಸಾಮಿಯ ಊರಿನವರು ಅವರ ಸಮುದಾಯದವರು ಇರುವುದರಿಂದ ತನ್ನ ಹತ್ತಿರ ಪಂಚಾಯ್ತಿಯಲ್ಲಿ ಬಿಲ್ ಮಾಡಿಸಿ ಹಣವನ್ನು ಡ್ರಾ ಮಾಡಿಸಿ ಆತನ ಹೆಸರಿಗೆ ಜನತಾ ಮನೆಯನ್ನು ಬದಲಾಯಿಸಿಕೊಂಡು  ಮೋಸ ಮಾಡಿರುವುದಾಗಿ, ದಿನಾಂಕ:15-08-2021 ರಂದು ಬೆಳಿಗ್ಗೆ ಸುಮಾರು 08-00 ಗಂಟೆ ಸಮಯದಲ್ಲಿ ತನ್ನ ಜನತಾ ಮನೆಯ ಮುಂದೆ ತಮ್ಮ ಗುಡಿಸಲು ಇದ್ದು ಅದರ ಪಕ್ಕದಲ್ಲಿ ತಾನು ಇರುವ ಖಾಲಿ ಜಾಗದಲ್ಲಿ ಕ್ಲೀನ್ ಮಾಡುತ್ತಿದ್ದರೆ ಉಮೇಶರೆಡ್ಡಿ, ಗೆಂಗಿರೆಡ್ಡಿ, ವೆಂಕಟರವಣಮ್ಮ ಕೋಂ ಗೆಂಗಿರೆಡ್ಡಿ ರವರು ಬಂದು ತನ್ನ ಮೇಲೆ ಬಿದ್ದು ಜಾತಿಯಿಂದ ಅಸಭ್ಯ ಮಾತುಗಳಿಂದ ಬೈಯುತ್ತ ತನ್ನ ಮೇಲೆ ಬಿದ್ದು ಸಿಕ್ಕಾಪಟ್ಟೆ ಹೊಡೆಯುತ್ತಿದ್ದರೆ ತನ್ನ ಮನೆಯಲ್ಲಿದ್ದ ಆದಿನಾರಾಯಣಸ್ವಾಮಿಯವರು ತನ್ನ ತಂದೆ ಗಂಗಪ್ಪನು ಅಡ್ಡ ಬಂದರೆ ಅವರನ್ನು ಎತ್ತಿ ಬಿಸಾಕಿ ಅವರ ಮೊಣಕಾಲುಗಳ ಎರಡಕ್ಕೆ ಗಾಯಗಳಾಗಿ ರಕ್ತ ಬಂದಿರುವುದಾಗಿ, ತನ್ನ ತಂದೆಯವರಿಗೆ ಕಲ್ಲಿನಿಂದ ಬಲಮೊಣಕಾಲಿಗೆ ಹೊಡೆದು ಗಾಯವಾಗಿ ರಕ್ತ ಬಂದಿರುವುದಾಗಿ, ತಮ್ಮನ್ನು ಕೆಳಗೆ ಹಾಕಿ ಕಾಲುಗಳಿಂದ ಒದ್ದು ಮೂಗೇಟುಗಳು ಬಿದ್ದಿರುವುದಾಗಿ, ತಮ್ಮ ಗ್ರಾಮದಲ್ಲಿ ರಾಜೀ ಪಂಚಾಯ್ತಿ ಮಾಡಿಸಿ ಅದಕ್ಕೆ ತಾನು ಒಪ್ಪದ ಕಾರಣ ಪಿರ್ಯಾದು ಕೊಡುವುದು ತಡವಾಗಿದ್ದು, ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಪಿರ್ಯಾದು.

Last Updated: 06-09-2021 07:29 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080