ಅಭಿಪ್ರಾಯ / ಸಲಹೆಗಳು

 

1. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.348/2021 ಕಲಂ. 15(A),32(3) ಕೆ.ಇ ಆಕ್ಟ್ :-

       ದಿನಾಂಕ 05-08-2021 ರಂದು ಸಂಜೆ 5-30 ಗಂಟೆಗೆ ಠಾಣೆಯ ಹೆಚ್.ಸಿ-57 ಸುರೇಶ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:05/08/2021 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ನಾನು, ಸಿ.ಪಿ.ಸಿ-544 ವೆಂಕಟರವಣ ರವರು ಠಾಣಾ ಸರಹದ್ದಿನ ತಿಮ್ಮಸಂದ್ರ, ನಾಯನಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 4-00 ಗಂಟೆಯ ಸಮಯದಲ್ಲಿ ಚೊಕ್ಕಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಮಂಜುನಾಥ ಬಿನ್ ಕೃಷ್ಣಪ್ಪರವರು ತನ್ನ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಚೊಕ್ಕಹಳ್ಳಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ  ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 8 ಟೆಟ್ರಾ ಪಾಕೆಟ್ ಗಳು, 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಮಂಜುನಾಥ ಬಿನ್ ಲೇಟ್ ಕೃಷ್ಣಪ್ಪ, 45 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಚೊಕ್ಕಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 4-15 ರಿಂದ 5-00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಮಂಜುನಾಥ ಬಿನ್ ಲೇಟ್ ಕೃಷ್ಣಪ್ಪರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.349/2021 ಕಲಂ. 279,304(A) ಐ.ಪಿ.ಸಿ :-

        ದಿನಾಂಕ: 06/08/2021 ರಂದು ಬೆಳಿಗ್ಗೆ 11.00 ಗಂಟೆಗೆ ಶ್ರೀಮತಿ ತಬಸೀಮ್ ಕೋಂ ನಾಸೀರ್ ಪಾಷಾ, 28 ವರ್ಷ, ಮುಸ್ಲಿಮರು, ಟೈಲರ್ ಕೆಲಸ, ವಾಸ: ವಾರ್ಡ ನಂ:2 ವೆಂಕಟಾದ್ರಿ ಕಾಲೇಜು ಹಿಂಭಾಗ, ಆಶ್ರಯ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತವರು ಮನೆ ಬೆಂಗಳೂರು ನಗರದ ಚಿಕ್ಕಬಾಣಾವಾರ ಆಗಿದ್ದು ತನ್ನನ್ನು ಈಗ್ಗೆ 12 ವರ್ಷಗಳ ಹಿಂದೆ ಚಿಂತಾಮಣಿ ನಗರದ ವಾರ್ಡ ನಂ:2 ವೆಂಕಟಾದ್ರಿ ಕಾಲೇಜು ಹಿಂಭಾಗ, ಆಶ್ರಯ ಬಡಾವಣೆ, ವಾಸಿ ಜಹೀರ್ ಅಹಮದ್ ಮತ್ತು ಶಮೀಮ್ ರವರ ಮೊದಲನೇ ಮಗನಾದ ನಾಸೀರ್ ಪಾಷಾ, 34 ವರ್ಷ, ತರಕಾರಿ ವ್ಯಾಪಾರ ರವರಿಗೆ ಕೊಟ್ಟು ಮದುವೆ ಮಾಡಿದ್ದು, ತಮಗೆ 1 ಗಂಡು 3 ಹೆಣ್ಣು ಮಕ್ಕಳಿದ್ದು, 1ನೇ ಸಾದಾಕತ್, 2ನೇ ಮಸೀರಾ ತಾಜ್, 3ನೇ ರುಕ್ಸಾನ್, 4ನೇ  ಸಾನಿಯಾ ರವರಾಗಿರುತ್ತಾರೆ. ತನ್ನ ಗಂಡ ಚಾಂದ್ ಪಾಷಾ ರವರ ಜೊತೆ ಆತನ ಬಾಬತ್ತು ಆಟೋದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ತಮ್ಮನ್ನು ಪೊಷಣೆ ಮಾಡುತ್ತಿದ್ದು, ತಮ್ಮ ಕುಟುಂಬಕ್ಕೆ ಆಧಾರವಾಗಿದ್ದು, ತನ್ನ ಕುಟುಂಬ ತನ್ನ ಗಂಡನನ್ನು ಅವಲಂಬಿಸಿತ್ತು.  ಹೀಗಿರುವಲ್ಲಿ ದಿನಾಂಕ:05/08/2021 ರಂದು ಬೆಳಿಗ್ಗೆ ಸುಮಾರು 09.00 ಗಂಟೆಯ ಸಮಯದಲ್ಲಿ ತನ್ನ ಗಂಡ ನಾಸೀರ್ ಪಾಷಾ ಎಂದಿನಂತೆ ಚಾಂದ್ ಪಾಷಾ ಬಿನ್ ನಜೀರ್ ಸಾಬ್, 28 ವರ್ಷ ಮುಸ್ಲಿಮರು, ತರಕಾರಿ ವ್ಯಾಪಾರ, ವಾಸ: ವಾರ್ಡ ನಂ:2 ವೆಂಕಟಾದ್ರಿ ಕಾಲೇಜು ಹಿಂಭಾಗ, ಆಶ್ರಯ ಬಡಾವಣೆ, ಚಿಂತಾಮಣಿ ನಗರ. ಮೊ ನಂ: 9738164995 ರವರ ಜೊತೆ ಆತನ ಬಾಬತ್ತು ಆಟೋದಲ್ಲಿ ತರಕಾರಿ ವ್ಯಾಪಾರಕ್ಕೆ ಹೋದನು. ದಿನಾಂಕ:05/08/2021 ರಂದು ರಾತ್ರಿ 7.00 ಗಂಟೆಯ ಸಮಯದಲ್ಲಿ ತನ್ನ ಮೈದ ನಿಸಾರ್ ಬಿನ್ ಜಹೀರ್ ಅಹಮದ್ ರವರು ತನಗೆ ಪೋನ್ ಮಾಡಿದ್ದು ವಿಚಾರ ತಿಳಿಯಲಾಗಿ ನಾಸೀರ್ ಪಾಷಾ ಮತ್ತು ಚಾಂದ್ ಪಾಷಾ ರವರು ಆಟೋದಲ್ಲಿ ಹಳ್ಳಿಗಳಲ್ಲಿ ತರಕಾರಿ ವ್ಯಾಪಾರ ಮುಗಿಸಿಕೊಂಡು ಚಿಂತಾಮಣಿ ಮನೆಗೆ ವಾಪಸ್ಸು ಬರಲು ಸಂಜೆ 6.30 ಗಂಟೆಯ ಸಮಯದಲ್ಲಿ ಚಿನ್ನಸಂದ್ರ ಮತ್ತು ಕೊಂಗನಹಳ್ಳಿ ಮದ್ಯದ ಥಾರ್ ರಸ್ತೆಯಲ್ಲಿ  ಚಾಂದ್ ಪಾಷಾ ರವರ ಬಾಬತ್ತು ನೊಂದಣಿ ಸಂಖ್ಯೆ: ಕೆಎ-01 ಎಸಿ-6187 ರ ತರಕಾರಿ ಆಪೆ ಆಟೋದಲ್ಲಿ ಬರುತ್ತಿದ್ದಾಗ ಚಾಂದ್ ಪಾಷಾ ರವರು ಆಟೋವನ್ನು ಅತಿವೇಗವಾಗಿ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿನ ಮೋರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ  ಆಟೋದ ಹಿಂಬದಿಯ ಸೀಟ್ ನಲ್ಲಿ ಕುಳಿತಿದ್ದ ತನ್ನ ಅಣ್ಣ ನಾಸೀರ್ ಪಾಷಾರವರು ಆಟೋದಿಂದ ಕೆಳಗೆ ರಸ್ತೆಯ ಮೇಲೆ ಬಿದ್ದು ಹೋದ ಪರಿಣಾಮ ನಾಸೀರ್ ಪಾಷಾ ರವರಿಗೆ ಎಡಕಾಲಿಗೆ, ಎರಡೂ ಕೈಗಳಿಗೆ, ಮುಖ, ಗದ್ದಕ್ಕೆ ಹಾಗೂ ತಲೆಯ ಹಿಂಬಾಗಕ್ಕೆ ತೀವ್ರ ರಕ್ತಗಾಯಗಳಾಗಿದ್ದು, ಅಲ್ಲಿಯೇ ಸ್ಥಳಕ್ಕೆ ಹೋದ ತಾನು ಮತ್ತು ಸಪೀರ್ ಬಿನ್ ಅಮೀರ್, 30 ವರ್ಷ, ವೆಂಕಟಗಿರಿಕೋಟೆ ಚಿಂತಾಮಣಿ ನಗರರವರು ಅಪಘಾತ ಸ್ಥಳಕ್ಕೆ ಹೋಗಿ ನಾಸೀರ್ ಪಾಷಾರವರನ್ನು ಉಪಚರಿಸಿ 108 ಅಂಬುಲೆನ್ಸ್ ವಾಹನವನ್ನು ಸ್ಥಳಕ್ಕೆ ಕರೆಯಿಸಿಕೊಂಡು ನಾಸೀರ್ ಪಾಷಾರವರನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ನಾಸೀರ್ ಪಾಷಾರವರು ಮೃತಪಟ್ಟಿರುತ್ತಾರೆ ಎಂದು ವಿಚಾರ ತಿಳಿಸಿದ್ದು ತಾನು ಕೂಡಲೇ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿರುತ್ತೆ. ತನ್ನ ಗಂಡ ನಾಸೀರ್ ಪಾಷಾ ರವರಿಗೆ ಎಡಕಾಲಿಗೆ, ಎರಡೂ ಕೈಗಳಿಗೆ, ಮುಖ, ಗದ್ದಕ್ಕೆ ಹಾಗೂ ತಲೆಯ ಹಿಂಬಾಗಕ್ಕೆ ತೀವ್ರ ರಕ್ತಗಾಯಗಳಾಗಿದ್ದು ಮೃತಪಟ್ಟಿರುತ್ತಾರೆ. ಆದ್ದರಿಂದ ದಿನಾಂಕ: 05/08/2021 ರಂದು 6.30 ಗಂಟೆಯ ಸಮಯದಲ್ಲಿ ನೊಂದಣಿ ಸಂಖ್ಯೆ: ಕೆಎ-01 ಎಸಿ-6187 ರ ತರಕಾರಿ ಆಪೆ ಆಟೋವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿ ಅಪಘಾತವನ್ನುಂಟುಮಾಡಿದ ಆಟೋ ಚಾಲಕ ಚಾಂದ್ ಪಾಷಾ ಬಿನ್ ನಜೀರ್ ಸಾಬ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.350/2021 ಕಲಂ. 143,147,148,323,324,504,506,149 ಐ.ಪಿ.ಸಿ :-

      ದಿನಾಂಕ: 06/08/2021 ರಂದು ಬೆಳಿಗ್ಗೆ 11.30 ಗಂಟೆಗೆ ಮುನಿಲಕ್ಷ್ಮಮ್ಮ ಕೊಂ ಗಣೇಶ, 45 ವರ್ಷ, ಗಾಮೆಂಟ್ಸ್ ನಲ್ಲಿ ಕೆಲಸ, ಆದಿ ಕರ್ನಾಟಕ ಜನಾಂಗ, ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಪಿಲ್ಲಗುಂಪ್ಪೆ ಕೈಗಾರಿಕಾ ಪ್ರದೇಶದ ಸಲೆಬ್ರೇಷನ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಪ್ರತಿ ದಿನ ತಮ್ಮ ಗ್ರಾಮದಿಂದ ಕಂಪನಿಗೆ ಹೋಗಿ ಬರುತ್ತಿರುತ್ತೇನೆ. ತನ್ನ ತಮ್ಮನಾದ ನಾರಾಯಣಸ್ವಾಮಿ ರವರು ತಮ್ಮ ಗ್ರಾಮದ ವಾಸಿ ಸವಿತಾ ಎಂಬುವವರ ಜೊತೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದು ಈ ಹಿನ್ನಲೆಯಲ್ಲಿ ತಾನು ನಾರಾಯಣಸ್ವಾಮಿ ರವರಿಗೆ ಹಲವಾರು ಬಾರಿ ಬುದ್ದಿವಾದ ಹೇಳಿರುತ್ತೇನೆ. ಹೀಗಿರುವಾಗ ದಿನಾಂಕ: 04/08/2021 ರಂದು ಸಂಜೆ ತಾನು ಕೆಲಸ ಮುಗಿಸಿಕೊಂಡು ವಾಪಸ್ಸು ಮನೆಗೆ ಬಂದು ರಾತ್ರಿ ಸುಮಾರು 8.30 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿ ಇದ್ದಾಗ ಮೇಲ್ಕಂಡ ತನ್ನ ತಮ್ಮ 1)ನಾರಾಯಣಸ್ವಾಮಿ ಬಿನ್ ಮುನಿಯಪ್ಪ, 2)ಸವಿತ ಕೋಂ ಸದಾನಂದ, ಸವಿತ ರವರ ಮಕ್ಕಳಾದ 3)ವಿನೋದ್ ಮತ್ತು 4)ಅಪ್ಪು, ಸವಿತ ರವರ ತಮ್ಮ 5)ಗಜೇಂದ್ರ ಬಿನ್ ವೆಂಕಟೇಶಪ್ಪ ಮತ್ತು ಸವಿತ ರವರ ತಂದೆ 6)ವೆಂಕಟೇಶಪ್ಪ ರವರು ಅಕ್ರಮ ಗುಂಪುಕಟ್ಟಿಕೊಂಡು ಬಂದು ಆ ಪೈಕಿ ನಾರಾಯಣಸ್ವಾಮಿ ರವರು ತನ್ನನ್ನು ಕುರಿತು “ಏನೇ ಲೋಪರ್ ಮುಂಡೆ ನಾನು ಯಾರ ಜೊತೆ ಸಂಬಂದ ಇಟ್ಟುಕೊಂಡರೆ ನಿನಗೇನು ತೊಂದರೆ” ಎಂದು ಅವಾಶ್ಚ ಶಬ್ದಗಳಿಂದ ಬೈದು ಕೈ ಗಳಿಂದ ಮೈ ಮೇಲೆ ಹೊಡೆದು, ಅಲ್ಲಿಯೇ ಬಿದ್ದಿದ್ದ ನೀಲಗಿರಿ ದೋಣ್ಣೆಯಿಂದ ತನ್ನ ಬೆನ್ನ ಮೇಲೆ ಹೊಡೆದು ಗಾಯಪಡಿಸಿದನು. ಸವಿತ ರವರು ತನ್ನ ತಲೆ ಕೂದಲನ್ನು ಹಿಡಿದು ಎಳೆದಾಡಿ ಕೈ ಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದಳು. ಉಳಿದವರು ತನ್ನನ್ನು ಕುರಿತು ಈ ದಿನ ಇವಳನ್ನು ಬಿಡಬಾರದು ಇಲ್ಲಿಯೇ ಮುಗಿಸಿಬಿಡಬೇಕು ಎಂದು ಪ್ರಾಣ ಬೆದರಿಕೆ ಹಾಕಿದ್ದು ಅಷ್ಟರಲ್ಲಿ ತಮ್ಮ ಗ್ರಾಮದ ಆನಂದ್ ಬಿನ್ ಲೇಟ್ ಕಲ್ಲುನಾಗಪ್ಪ ಮತ್ತು ಕೆಂಪಮ್ಮ ಕೊಂ ಲೇಟ್ ಮುನಿಯಪ್ಪ ರವರು ಬಂದು ಮೇಲ್ಕಂಡವರಿಂದ ತನ್ನನ್ನು ಬಿಡಿಸಿದರು. ನಂತರ ಗಾಯಗೊಂಡಿದ್ದ ತನ್ನನ್ನು ತಮ್ಮ ಸಂಬಂದಿ ಶ್ರೀಕಾಂತ್ ಬಿನ್ ಮುನಿಶಾಮಪ್ಪ ರವರು ಯಾವುದೋ ಆಟೋದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಚಿಕಿತ್ಸೆಗೆ ದಾಖಲಿಸಿದರು. ಸದರಿ ಗಲಾಟೆ ಬಗ್ಗೆ ತಮ್ಮ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡೋಣವೆಂದು ಹೇಳಿದ್ದು ಇದುವರೆಗೂ ನ್ಯಾಯ ಪಂಚಾಯ್ತಿ ಮಾಡದ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿದ್ದು ತನ್ನ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.351/2021 ಕಲಂ. 15(A) ಕೆ.ಇ ಆಕ್ಟ್:-

    ದಿನಾಂಕ: 06/08/2021 ರಂದು ಮದ್ಯಾಹ್ನ 3.00 ಗಂಟೆಗೆ ಠಾಣೆಯ ಸಿ.ಹೆಚ್.ಸಿ-249 ಸಂದೀಪ್ ಕುಮಾರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 06/08/2021 ರಂದು ಪಿ.ಎಸ್.ಐ  ಸಾಹೇಬರು ತನ್ನನ್ನು ಮತ್ತು ಲೊಕೇಶ್ ಸಿ.ಪಿ.ಸಿ-16 ರವರನ್ನು ಬೆಳಿಗ್ಗೆ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ತಾವು ಠಾಣಾ ವ್ಯಾಪ್ತಿಯ ಊಲವಾಡಿ, ಕರಿಯಪಲ್ಲಿ ಮುಂತಾದ ಗ್ರಾಮಗಳ ಕಡೆಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಮದ್ಯಾಹ್ನ 1.00 ಗಂಟೆಗೆ ಕಾಗತಿದಿಗೂರು ಗ್ರಾಮದ ಬಳಿಗೆ ಹೋದಾಗ ಕಾಗತಿದಿಗೂರು ಗ್ರಾಮದ ವಾಸಿ ಮುನಿಯಪ್ಪ ಎಂಬುವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವುದಾಗಿ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ  ಮನೆಯ ಮುಂದೆ ಕುಳಿತು ಮದ್ಯಪಾನ ಮಾಡುತ್ತಿದ್ದ ವ್ಯಕ್ತಿಗಳು ಓಡಿ ಹೋಗಿದ್ದು, ಸ್ಥಳಾವಕಾಶ ಮಾಡಿಕೊಟ್ಟಿದ್ದ ವ್ಯಕ್ತಿಯು ಓಡಿ ಹೋಗಿರುತ್ತಾನೆ. ಸದರಿ ವ್ಯಕ್ತಿಯ ಹೆಸರು ಮತ್ತು ವಿಳಾಸ ತಿಳಿಯಲಾಗಿ ಮುನಿಯಪ್ಪ ಬಿನ್ ಲೇಟ್ ಚಿನ್ನಪ್ಪ, 45 ವರ್ಷ, ಕೂಲಿ ಕೆಲಸ, ಕಾಗತಿ ದಿಗೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) ಹೈವಾಡ್ಡ್ ಚೀಯರ್ಸ್ ವಿಸ್ಕಿ 90 ಎಂ.ಎಲ್ ನ 08 ಟೆಟ್ರಾ ಪ್ಯಾಕೆಟ್ ಗಳು, 2) ಒಂದು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಒಂದು ಖಾಲಿ ನೀರಿನ ಪ್ಲಾಸ್ಟಿಕ್ ಬಾಟಲ್, 3) 02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಮದ್ಯಾಹ್ನ 1.30 ಗಂಟೆಯಿಂದ 2.30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೇವೆ. ಆದ್ದರಿಂದ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವ ಮೇಲ್ಕಂಡ ಮುನಿಯಪ್ಪ ಬಿನ್ ಲೇಟ್ ಚಿನ್ನಪ್ಪ ರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.101/2021 ಕಲಂ. 427,506,504,34 ಐ.ಪಿ.ಸಿ:-

    ದಿನಾಂಕ:05/08/2021 ರಂದು 15-30 ಗಂಟೆಗೆ ಸಿ.ಪಿ.ಸಿ 490 ಸೋಮಶೇಖರ್ ರವರು  ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಹಾಜರು ಪಡಿಸಿದ ಆದೇಶ ಪ್ರತಿಯ ಸಾರಾಂಶವೇನೆಂದರೆ, ದಿನಾಂಕ:04/08/2021  ಮಧ್ಯಾಹ್ನ 15-00 ಗಂಟೆಗೆ ಅರ್ಜಿದಾರರಾದ ಬಿ,ಜೆ ಶಾಂತಮ್ಮ ಕೊಂ ಎ ನಾರಾಯಣಮೂರ್ತಿ, 46 ವರ್ಷ,ಬಲಜಿಗರು  ಶಾಂತ ಸರ್ವಿಸ್ ಸ್ಟೇಷನ್  ಪೆಟ್ರೋಲ್ ಬಂಕ್ ನ ಮಾಲೀಕರು,ವಾಸ: 3 ನೇ ಕ್ರಾಸ್, ಹಿರೆಚಂದ್ರ ಲೇಔಟ್ , ಜೀವನಹಳ್ಳಿ COX TOWN , ಬೆಂಗಳೂರು  ರವರು  ಠಾಣೆಗೆ ಹಾಜರಾಗಿ ನೀಡಿದ ಗಣಕಯಂತ್ರಮುದ್ರಿತ ದೂರಿನ ಸಾರಾಂಶವೆನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಈಗ್ಗೆ 2016 ನೇ ಸಾಲಿನಲ್ಲಿ ಸಾದಲಿ ಗ್ರಾಮದಿಂದ ಪೇರೆಸಂದ್ರಕ್ಕೆ ಹೋಗುವ ರಸ್ತೆಯಲ್ಲಿ ಇರುವ ಸಾದಲಿ ಗ್ರಾಮದ ವಾಸಿ ನಂಜುಂಡಸ್ವಾಮಿ ರವರ ಜಮೀನನ್ನು ಖರೀದಿ ಮಾಡಿ ಸರ್ಕಾರದಂದ ಪರವಾನಿಗೆಯನ್ನು ಪಡೆದುಕೊಂಡು ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನ್ನು ಪಾರಂಭ ಮಾಡಿದ್ದು ಸದರಿ ಬಂಕ್ ನಲ್ಲಿ 5 ಜನರು ಕೆಲಸದವರನ್ನು ಕೆಲಸಕ್ಕೆ ಇಟ್ಟಿಕೊಂಡಿದ್ದು ಪ್ರತಿ ದಿನ ಬೆಳಗ್ಗೆ 6 ಗಂಟೆ ಸಾರ್ವಜನಿಕರ ವಾಹನಗಳಿಗೆ ಪೆಟ್ರೋಲ್ ಹಾಕಲು ಪ್ರಾರಂಭಿಸಿ ರಾತ್ರಿ10-30 ಗಂಟೆಗೆ ಪೆಟ್ರೋಲ್ ಹಾಕುವುದನ್ನು ಮುಕ್ತಾಯ ಮಾಡುತ್ತಿರುತ್ತೇವೆ. ನಾನು ಮತ್ತು ನನ್ನ ಗಂಡ ಬೆಂಗಳೂರಿನಲ್ಲಿ ವಾಸವಾಗಿದ್ದು ಆಗಾಗ ಬಂದು ಪೆಟ್ರೋಲ್ ಬಂಕ್ ನ ವ್ಯವಹಾರ ನೋಡಿಕೊಂಡು ಹೋಗುತ್ತಿದ್ದೆವು. ಪೆಟ್ರೋಲ್  ಬಂಕ್ ನಲ್ಲಿ ಮೇನೆಜರ್ ಆಗಿ ರಮೇಶ್ ರವರನ್ನು ನೇಮಿಸಿರುತ್ತೇವೆ ಬಂಕ್ ನಲ್ಲಿ ಉಸ್ತುವಾರಿಯನ್ನು ಅವರು ನೋಡಿಕೊಳ್ಳುತ್ತಿದ್ದರು. ನಮ್ಮ ಪೆಟ್ರೋಲ್ ಬಂಕ್ ನಲ್ಲಿ ಕ್ಯಾಶಿಯರ್ ಆಗಿ ಎಸ್ ದೇವಗಾನಹಳ್ಳಿ ಗ್ರಾಮದ ಹರೀಶ್ ರವರುನ್ನು ಹಾಗೂ ಗಂಗರಾಜು, ಶಶಿಕುಮಾರ್, ನವೀನ್  ರವರುಗಳನ್ನು  ಕೆಲಸಕ್ಕೆ ನೇಮಿಸಿಕೊಂಡಿರುತ್ತೇವೆ. ಪೆಟ್ರೋಲ್ ಬಂಕ್ ನ ಬಳಿ ರಾತ್ರಿ ಸಮಯದಲ್ಲಿ ಇಬ್ಬರು ಕೆಲಸದವರು  ಬಂಕ್ ನ ಕಾವಲುಗಾರರಾಗಿ ಇರುತ್ತಿದ್ದರು. ಪೆಟ್ರೋಲ್ ಬಂಕ್ ನಲ್ಲಿ ಬಂದ ಹಣವನ್ನು ಬ್ಯಾಂಕ್ ಗೆ ಮೇನೇಜರ್ ರವರು ನಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದರು. ಈಗಿರುವಲ್ಲಿ ದಿನಾಂಕ:04/08/2021 ರಂದು ಬೆಳಗ್ಗೆ 5-30 ಗಂಟೆಗೆ ನಮ್ಮ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಗಂಗರಾಜು ರವರು ನನ್ನ ಗಂಡನಿಗೆ  ಪೋನ್ ಮಾಡಿ ನಿನ್ನೇಯ ದಿನಾಂಕ:03/08/2021 ರಂದು ರಾತ್ರಿ ಸುಮಾರು 10-30 ಗಂಟೆಗೆ ಪೆಟ್ರೋಲ್ ಪಂಪ್ ನ್ನು ಲಾಕ್ ಮಾಡಿ ಬಂಕ್ ನ್ನು ಮುಕ್ತಾಯ ಮಾಡಿಕೊಂಡು ಅಫಿಸ್ ನ ಒಳಗೆ ತಾನು ಮತ್ತು ಅಲ್ಲಯೇ ಕೆಲಸ ಮಾಡುವ ಶಶಿಕುಮಾರರವರು ಮಲಗಿಕೊಂಡಿದ್ದಾಗ  ರಾತ್ರಿ ಸುಮಾರು 11-30 ಗಂಟೆಯ ಸಮಯದಲ್ಲಿ ಪೆಟ್ರೋಲ್ ಬಂಕ್ ನ ಬಳಿಗೆ  ಯಾರೂ ಮೂರು ಜನ ಆಸಾಮಿಗಳು ದ್ವಿ ಚಕ್ರ ವಾಹನದಲ್ಲಿ ಬಂದು ಪೆಟ್ರೋಲ್ ಹಾಕಲು ಕೇಳಿದ್ದು  ನಾವು ಆಪೀಸ್ ಒಳಗಿನಿಂದ ಅವರಿಗೆ ರಾತ್ರಿ 10-30 ಗಂಟೆಗೆ ಪೆಟ್ರೋಲ್ ಪಂಪ್ ನ್ನು ಮುಕ್ತಾಯ ಮಾಡಿರುತ್ತೇವೆ ಬೆಳಗ್ಗೆ ಬರುವಂತೆ ಸೂಚಿಸಿದಾಗ  ಸದರಿಯವರು ಈಗಲೇ ಪೆಟ್ರೋಲ್ ನ್ನು ಹಾಕಲೇಬೇಕು ಎಂದು ಅಪೀಸ್ ರೂಂ ಬಾಗಿಲನ್ನು ಜೋರಾಗಿ ತಟ್ಟಿ  ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು ಇವಾಗ ಪೇಟ್ರೋಲ್ ಹಾಕಿಲ್ಲವೆಂದರೆ ಪೆಟ್ರೋಲ್ ಬಂಕ್ ಗೆ ಬೆಂಕಿ ಹಾಕಿ ಸುಟ್ಟು ನಿಮ್ಮನ್ನು ಸಾಯಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ  ಆದ ಕಾರಣ ನಾವು ಭಯದಿಂದ ಅಫೀಸ್ ನ ಬಾಗಿಲನ್ನು ತೆಗೆದಿರುವುದಿಲ್ಲಾ ನಂತರ ಸದರಿ ಮೂರು ಜನ ಆಸಾಮಿಗಳು ಅಲ್ಲಿಯೇ ಇದ್ದ ಪೈರ್ ಬಕೇಟ್ ನಿಂದ ಪೆಟ್ರೋಲ್  ಪಂಪ್ ನ ಮೀಟರ್ ಗ್ಲಾಸ್ ನ್ನು, ಡಿಸ್ ಪ್ಲೇ , ಪ್ರಿಂಟರ್ ಹಾಗೂ ಪೆಟ್ರೋಲ್ ಪಂಪ್ ನ ಡೋರ್ ನ್ನು ಕಿತ್ತು ಹಾಕಿರುತ್ತಾರೆ ನೆಲದ ಮೇಲೆ ಪಂಪ್ ಗೆ ಅಳವಡಿಸಿದ್ದ ಗ್ರಾನೈಟ್ ಕಲ್ಲನ್ನು ಸಹ ಬಕೆಟ್ ನಿಂದ ಹೊಡೆದು ಹಾಕಿ ಅಲ್ಲಿಯೇ ಇದ್ದ ಬ್ಯಾರಿಕೇಟ್ ಗಳನ್ನು ಮತ್ತು ಪೈರ್ ಬಕೇಟ್ ಹೊಡದು ನಷ್ಟವನ್ನುಂಟು ಮಾಡಿರುತ್ತಾರೆಂದು ಹೇಳಿದ್ದು ಆದರಂತೆ ನಾವು  ಬೆಳಗ್ಗೆ ಸುಮಾರು 10-00 ಗಂಟೆಗೆ ಪೆಟ್ರೋಲ್ ಬಂಕ್ ಬಳಿ ಬಂದು ನೋಡಲಾಗಿ ವಿಷಯ ನಿಜವಾಗಿತ್ತು.  ನಂತರ ನಾವು ಪೆಟ್ರೋಲ್ ಬಂಕ್ ನಲ್ಲಿರುವ ಸಿ.ಸಿ ಕ್ಯಾಮೇರಾ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾಗ ನಮ್ಮ ಬಂಕ್ ನಲ್ಲಿ ಕೆಲಸ  ಮಾಡುವ ಗಂಗರಾಜು ರವರು ರಾತ್ರಿ ಗಲಾಟೆ ಮಾಡಿರುವವರಲ್ಲಿ ಒಬ್ಬರನ್ನು ಗುರುತಿಸಿ ಆತನ ಹೆಸರು ನೇರಳೆಮರದಹಳ್ಳಿ ಗ್ರಾಮದ ವೆಂಕಟೇಶ್ ಎಂದು ಆತನ ಪೋನ್ ನಂಬರ್:9845199692 ಎಂತ ತಿಳಿಸಿರುತ್ತಾನೆ ಉಳಿದ  ಇನ್ನೂ ಇಬ್ಬರು ಆಸಾಮಿಗಳ ಹೆಸರು ಮತ್ತು ವಿಳಾಸ ನಮಗೆ ತಿಳಿದಿರುವುದಿಲ್ಲ.ಈ ಘಟನೆಯಿಂದ ನಮಗೆ ಸುಮಾರು 1ಲಕ್ಷ 50ಸಾವಿರೂಗಳವರೆಗೆ ನಷ್ಟವುಂಟಾಗಿರುತ್ತೆ.  ಆದ್ದರಿಂದ ದಿನಾಂಕ:03-08-2021 ರಂದು ರಾತ್ರಿ ಸುಮಾರು 11-30 ಗಂಟೆಯ ಸಮಯದಲ್ಲಿ ನಮ್ಮ ಪೆಟ್ರೋಲ್ ಬಂಕ್ ನ ಬಳಿ ಬಂದು ಪೆಟ್ರೋಲ್ ಹಾಕಲು ಕೇಳಿ ಸಿಬ್ಬಂದಿಯವರು ಬಾಗಿಲು ತೆಗೆಯದಿದ್ದಾಗ ಸದರಿ ಆಸಾಮಿಗಳು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಯವರನ್ನು ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿ ಪೆಟ್ರೋಲ್ ಪಂಪನ ಡಿಸ್ ಪ್ಲೇ, ಪ್ರಿಂಟರ್ ಹಾಗೂ ಇತರೆ ವಸ್ತುಗಳನ್ನು ನಾಶಗೊಳಿಸಿ ನಮಗೆ ಸುಮಾರು 1ಲಕ್ಷ 50 ಸಾವಿರ ರೂಗಳಷ್ಟು ನಷ್ಟುವನ್ನುಂಟು ಮಾಡಿರುವ ಆಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ  ನೀಡಿದ ದೂರಿನ  ಮೇರೆಗೆ ಠಾಣಾ ಎನ್.ಸಿ.ಆರ್ ನಂಬರ್:73/2021 ರಂತೆ ಪ್ರಕರಣ ದಾಖಲಿಸಿದ್ದು ಆರೋಪಿಗಳ ವಿರುದ್ದ ಸಂಜ್ಞೆಯ ಪ್ರಕರಣವನ್ನುದಾಖಲು ಮಾಡಲು ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ಸಲ್ಲಿಸಕೊಂಡಿದ್ದು ಘನ ನ್ಯಾಯಾಲಯದ ಅನುಮತಿಯ ಮೇರೆಗೆ ಠಾಣಾ ಮೊ,ಸಂಖ್ಯೆ:101/2021 ಕಲಂ:427,504,506 ರೆ-ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.180/2021 ಕಲಂ. 337,338 ಐ.ಪಿ.ಸಿ:-

      ದಿನಾಂಕ:05/08/2021 ರಂದು ಸಂಜೆ 16-00 ಗಂಟೆಗೆ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ ದೂರವಾಣಿ ಕರೆಯ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಹೇಳಿಕೆ ಪಡೆದಿದ್ದರ ಸಾರಾಶವೇನೆಂದರೆ, ಪಿರ್ಯಾದಿದಾರರು  ಈಗ್ಗೆ ಸುಮಾರು 14 ವರ್ಷಗಳಿಂದ ಮೇಲ್ಕಂಡ ಪ್ರಿಕಾರ್ಟ್ ಮಿಲ್ ನಲ್ಲಿ ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದು, ತಾನು ಪ್ರತಿ ನಿತ್ಯ ಜನರಲ್ ಸಿಫ್ಟ್ ನಲ್ಲಿ ಬೆಳಿಗ್ಗೆ 8-00 ಗಂಟೆಗೆ ಬಂದು ಸಂಜೆ 4-30 ಗಂಟೆಯವರೆಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದು. ಈ ದಿನ ದಿನಾಂಕ 05/08/2021 ರಂದು ಎಂದಿನಂತೆ  ಕಾರ್ಖಾನೆಯಲ್ಲಿ ಕೆಲಸ ಮಾಡಿತ್ತಿದ್ದಾಗ ತಾನು ಹಾಗೂ ತನ್ನೋಂದಿಗೆ ಸುಮಾರು 35-40 ಜನ ಕಾರ್ಮಿಕರು ಕೆಲಸ  ಮಾಡುತ್ತಿದ್ದೆವು , ನಮ್ಮ ಕಾರ್ಖಾನೆಯ ಹೆಚ್ .ಆರ್ ಆಗಿ ಹರಿ ಪ್ರಸಾದ್ ಎಂಬುವರು, ಮೇನೇಜರ್ ಆಗಿ ರಮೇಶ್ ಹಾಗೂ ಪಾಳೆ ಸೂಪರ್ ವೈಸರ್ ಆಗಿ ಗೊರವಯ್ಯ ಬಿನ್ ಐವಾರಯ್ಯ , 29 ವರ್ಷ, ದೇವಾಂಗ ಜನಾಂಗ, ವೆಂಕಟಗಿರಿ ಗ್ರಾಮ, ನೆಲ್ಲೂರು ಜಿಲ್ಲೆ ಎಂಬುವರು ಕೆಲಸ ಮಾಡುತ್ತಿದ್ದಾಗ ಮದ್ಯಾಹ್ನ ಸುಮಾರು 3-00 ಗಂಟೆ ಸಮಯದಲ್ಲಿ ನಮ್ಮ ಪಾಳೆಯ ಸೂಪರ್ ವೈಸರ್ ಗೊರವಯ್ಯ ರವರ ಆದೇಶದ ಮೇರೆಗೆ ನಾವು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆವು , ರವಿಕುಮಾರ್ ಬಿನ್ ಲೇಟ್ ಗಂಗಪ್ಪ, 39 ವರ್ಷ, ಆದಿ ಕರ್ನಾಟಕ ಜನಾಂಗ, ವಾಸ ಚಿಕ್ಕಕುರುಗೋಡು ಗ್ರಾಮ ಮತ್ತು ಆರ್.ವೆಂಕಟೇಶ್ ಬಿನ್ ಆದೆಪ್ಪ , 42 ವರ್ಷ,ವಾಲ್ಮೀಕಿ ಜನಾಂಗ, ರಾಮಚಂದ್ರಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಸುಮಾರು 400 ಲೀಟರ್ ನೀರಿನ ಸಾಮರ್ಥ್ಯದ ಟ್ಯಾಂಕ್ ನಲ್ಲಿ ಕಾಸ್ಟಿಕ್ ಸೋಡ ಮಿಶ್ರಣ ಮಾಡುವಾಗ ನಿರ್ಲಕ್ಷತೆಯಿಂದ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೆ ಕಾಸ್ಟಿಕ್ ಸೋಡಾವನ್ನು ಮಿಶ್ರಣ ಮಾಡಿದ್ದರಿಂದ ಒಮ್ಮೆಗೆ ಟ್ಯಾಂಕ್ ನಿಂದ ಕಾಸ್ಟಿಕ್ ಸೋಡ ಮತ್ತು ನೀರು ಉಕ್ಕಿ ಟ್ರಾಂಕ್ ನ ಬಳಿ ಕಾಸ್ಟಿಕ್ ಸೋಡಾ ಮಿಶ್ರಣ ಮಾಡುತ್ತಿದ್ದ ರವಿಕುಮಾರ್ , ವೆಂಕಟೇಶ ರವರಿಗೆ  ಹಾಗೂ ಟ್ಯಾಂಕ್ ಕೆಳಗಡೆ  ಕೆಲಸ ಮಾಡುತ್ತಿದ್ದ ಹರೀಶ್ ಬಿನ್ ಶನಿವಾರಮಪ್ಪ ರವರ ಮೈ ಮೇಲೆ ಕ್ಯಾಸ್ಟಿಕ್ ಸೋಡ ಬಿದ್ದ ಕಾರಣ ಮೈಮೇಲೆ ಬಾರಿ ಸುಟ್ಟಗಾಯಗಳಾಗಿರುತ್ತೆ, ನನಗೂ ಮತ್ತು ಗುರುವಯ್ಯ ರವರಿಗೆ ಸಣ್ಣ ಪುಟ್ಟಗಾಯಗಳಾಗಿರುತ್ತವೆ. ಕೂಡಲೆ ಗಾಯಗೊಂಡಿದ್ದ ನಮ್ಮನ್ನು ಕಾರ್ಖಾನೆ ಸಿಬ್ಬಂದಿ ಕಾರ್ಖನೆ ವಾಹನದಲ್ಲಿ ಗೌರಿಬಿನೂರು ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದು ದಾಖಲು ಪಡಿಸಿರುತ್ತಾರೆ. ಈ ಘಟನೆಗೆ ಕಾರ್ಖಾನೆಯ ಮಾಲೀಕರು , ಕಾರ್ಖಾನೆಯ ಮೇನೇಜರ್ ರಮೇಶ್,  ಹೆಚ್.ಆರ್ ಆಗಿ ಕೆಲಸ ಮಾಡುತ್ತಿರುವ ಹರಿಪ್ರಸಾದ್ ಹಾಗೂ ಪಾಳೆಯ ಸೂಪರ್ ವೈಸರ್ ಗೊರವಯ್ಯ ಮತ್ತು ಇತರರ ನಿರ್ಲಕ್ಷತೆ ಹಾಗೂ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿರುತ್ತದೆ. ಈ ಬಗ್ಗೆ ಸೂಕ್ತ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆ ದೂರಾಗಿರುತ್ತದೆ.

 

7.  ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.181/2021 ಕಲಂ. 15(A),32(3) ಕೆ.ಇ ಆಕ್ಟ್:-

      ದಿನಾಂಕ 28/5/2021 ರಂದು ಮದ್ಯಾಹ್ನ 12-15 ಗಂಟೆಗೆ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ. ಮೋಹನ್ ಎನ್. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ , ಇವರಿಗೆ ದಿನಾಂಕ: 28/05/2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ಗೊಡ್ಡಾವಲಹಳ್ಳಿ ಗ್ರಾಮದ ಆಚೆ ರಸ್ತೆಯಲ್ಲಿ ಯಾರೋ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಯಾದ ಪಿ.ಸಿ.518 ಆನಂದ್, ಪಿ.ಸಿ-512 ರಾಜಶೇಖರ , ಪಿ,ಸಿ-433 ಬಾಬಾಜಾನ್, ಪಿ,ಸಿ-520 ಶ್ರೀನಾಥ್, ಪಿ,ಸಿ-208 ತಿಪ್ಪೆಸ್ವಾಮಿ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ಗೊಡ್ಡಾವಲಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ, ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಬೆಳಿಗ್ಗೆ 10-45 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿಯು ರಸ್ತೆಯಾದ ಸಾವರ್ಜನಿಕ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಗ್ಲಾಸ್ ಗಳನ್ನು ರಸ್ತೆಯಲ್ಲಿ ನಿಂತಿದ್ದ ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ‍ಗ್ಲಾಸ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಸದರಿ ಆಸಾಮಿ ಹೆಸರು ವಿಳಾಸ ಕೇಳಿ ತಿಳಿಯಲಾಗಿ, ಶ್ರೀ ಪ್ರಸನ್ನ ಕುಮಾರ್ ಬಿನ್ ತಿಮ್ಮಯ್ಯ , 21 ವರ್ಷ, ಬೋವಿ ಜನಾಂಗ, ಜಿರಾಯ್ತಿ, , ವಾಸ ಕುಂಟಿಚಿಕ್ಕನಹಳ್ಳಿ, ಮಂಚೇನಹಳ್ಳಿ ಹೋಬಳಿ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಪ್ರಸನ್ನ ಕುಮಾರ್ ರವರ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ.ಎಲ್.ಸಾಮರ್ಥ್ಯದ HAY WARDS PUNCH FINE WHISKY ಯ 20 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 1 ಲೀಟರ್ 800 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 702.6/- ರೂ.ಗಳಾಗಿರುತ್ತೆ. ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS PUNCH FINE WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇದೆಯೇ ಎಂದು ಕೇಳಲಾಗಿ ತಮ್ಮ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾರೆ. ಆದ್ದರಿಂದ ಸ್ಥಳದಲ್ಲಿ ಬೆಳಿಗ್ಗೆ 10-45 ರಿಂದ 11-45 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAY WARDS PUNCH FINE WHISKY ಯ 20 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS PUNCH FINE WHISKY ಯ 4 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಮದ್ಯಾಹ್ನ 12-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಈ ದೂರಿನೊಂದಿಗೆ ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಿರುತ್ತೆ .ದಿನಾಂಕ 06/08/2021 ರಂದು 11-00 ಗಂಟೆಗೆ ನ್ಯಾಯಾಲಯದ ಪಿಸಿ 129 ರಾಮಚಂದ್ರ ರವರು ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.182/2021 ಕಲಂ. 87 ಕೆ.ಪಿ  ಆಕ್ಟ್:-

     ದಿನಾಂಕ: 24/05/2021 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಹುದಗೂರು ಗ್ರಾಮ ಬಳಿ ಬಾದಿಮರಳೂರು ಕಾಲುವೆಯಲ್ಲಿ ಯಾರೋ ಆಸಾಮಿಗಳುಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಪಿಸಿ 512 ರಾಜಶೇಖರ್ ,ಪಿಸಿ 518 ಆನಂದ್, ಪಿಸಿ 246 ಸಿಂಕಂದ್ ಮುಲ್ಲಾ,ಪಿಸಿ582 ಮಂಜುನಾಥ ಕಾಲೇಲ ರವರೊಂದಿಗೆ ಗಸ್ತು ಮಾಡುತ್ತಿದ್ದಾಗ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ಮುದುಗೆರೆ ಗ್ರಾಮಕ್ಕೆ ಮದ್ಯಾಹ್ನ 3-30 ಹೋಗಿ ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸರ್ಕಾರಿ ಕೆರೆಯ ಅಂಗಳದಲ್ಲಿ4 ಜನರು ಗುಂಪಾಗಿ ಕುಳಿತುಕೊಂಡುಅಂದರ್ ಗೆ 100ರೂ, ಬಾಹರ್ ಗೆ100 ರೂಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಸುತ್ತುವರೆದು ಕುಳಿತಿದ್ದವರನ್ನು ಹಿಡಿದುಕೊಂಡು ವಿಚಾರಿಸಲಾಗಿ 1)ಕಲಂದರ್ ಬಿನ್ ರಾಷಿದಾ ಬಾಷಾ 29 ವರ್ಷ,ಮುಸ್ಲಿಂ ಜನಾಂಗ,ಕೂಲಿ ಕೆಲಸ,ಹುದಗೂರು ಗ್ರಾಮ,ಗೌರಿಬಿದನೂರು ತಾಲ್ಲೂಕು,2) ರವಿ ಬಿನ್ ಗಂಗಪ್ಪ,38ವರ್ಷ,ಆದಿಕರ್ನಾಟ ಜನಾಂಗ, ಡ್ರೈವರ್ ಕೆಲಸ,ಹುದಗೂರು ಗ್ರಾಮ,ಗೌರಿಬಿದನೂರು ತಾಲ್ಲೂಕು,3)ಲಕ್ಷ್ಮಣ@ ಪುಟ್ಟ ಬಿನ್ ನರಸಿಂಹಪ್ಪ, 38ವರ್ಷ, ಕೂಲಿ ಕೆಲಸ,ಹುದಗೂರು ಗ್ರಾಮ,ಗೌರಿಬಿದನೂರು ತಾಲ್ಲೂಕು,4) ತಿಪ್ಪಣ್ಣ ಬಿನ್ ನರಸಿಂಹಪ್ಪ,41ವರ್ಷ,ಆದಿಕರ್ನಾಟಕಜನಾಂಗ,ಹುದಗೂರುಗ್ರಾಮ,ಗೌರಿಬಿದನೂರುತಾಲ್ಲೂಕು,5)ನರಸಿಂಹಮೂರ್ತಿ ಬಿನ್ ನರಸಿಂಹಪ್ಪ,43 ವರ್ಷ,ಹುದಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿದ್ದಿದ್ದ ಪಣಕ್ಕಿಟ್ಟಿದ್ದ ಹಣ ಎಣಿಸಲಾಗಿ 2120/- ರೂ ಹಣ , 52 ಸ್ಪೀಟ್ ಎಲೆಗಳು, ಇರುತ್ತೆ. ಸ್ಥಳದಲ್ಲಿ ಮದ್ಯಾಹ್ನ 3-30 ಗಂಟೆಯಿಂದ 4-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ 2120/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನುವಶಪಡಿಸಿಕೊಂಡು, ಠಾಣೆಗೆ ಸಂಜೆ 5-00 ಗಂಟೆಗೆ ವಾಪಸ್ಸು ಬಂದಿದ್ದು, ಆರೋಪಿಗಳು, ಪಂಚನಾಮೆ ಮತ್ತು ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ ಕಲಂ: 87 ಕೆ.ಪಿ.ಆಕ್ಟ್ – 1963 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದೆ.ದಿನಾಂಕ 06/08/2021 ರಂದು ಬೆಳಿಗ್ಗೆ 11-30 ಗಂಟೆಗೆ  ನ್ಯಾಯಾಲಯದ ಪಿಸಿ 129 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

 

9. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.80/2021 ಕಲಂ. 143,144,147,148,323,324,504,506,149 ಐ.ಪಿ.ಸಿ:-

      ದಿನಾಂಕ 05/08/2021 ರಂದು ಸಂಜೆ 04.00 ಗಂಟೆಯಲ್ಲಿ ಹೆಚ್.ಸಿ 215 ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಪಿರ್ಯಾದಿ ಶ್ರೀಮತಿ ಈರಮ್ಮ ಕೋಂ ವೆಂಕಟೇಶಪ್ಪ, 50 ವರ್ಷ, ನಾಯಕರು, ಗೃಹಿಣಿ, ಬಂಡಕೋಟೆ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ ತಮಗೂ ಮತ್ತು ತಮ್ಮ ಗ್ರಾಮದ ನಾರಾಯಣಸ್ವಾಮಿ ಬಿನ್ ಚಿಕ್ಕನಾರಾಯಣಪ್ಪ ಎಂಬುವರಿಗೆ ಮನೆಯ ಮುಂದಿನ ದಾರಿ ವಿಚಾರದಲ್ಲಿ ಆಗಾಗ ಮಾತಿನ ಜಗಳಗಳು ನಡೆಯುತ್ತಿರುತ್ತೆ.ಈಗಿರುವಲ್ಲಿ ದಿನಾಂಕ 05/08/2021 ರಂದು ಬೆಳಿಗ್ಗೆ 09.00 ಗಂಟೆಯಲ್ಲಿ ನಾರಾಯಣಸ್ವಾಮಿ ರವರು ಅವರ ಮನೆಯ ಮುಂದೆ ಕಾಂಪೌಂಡ್ ಗೆ ಪಾಯ ಹಾಕುತ್ತಿದ್ದು, ತಾನು ಮತ್ತು ತಮ್ಮ ಬಾವ ಪೆದ್ದನಾರಾಯಣಪ್ಪರವರ ಮಗ ಶ್ರೀನಾಥ ಇಬ್ಬರು ಹೋಗಿ ದಾರಿಗೆ ಅಡ್ಡಕಟ್ಟ ಬೇಡಿ ದಾರಿಯನ್ನು ಬಿಡಿ ಎಂದು ಕೇಳಿದ್ದಕ್ಕೆ ನಾರಾಯಣಸ್ವಾಮಿ, ಜಯಲಕ್ಷ್ಮೀ, ಶ್ರೀಕಾಂತ, ಶಿರೀಷಾ, ಮತ್ತು ಶಾಂತಮ್ಮರವರು ಅಕ್ರಮವಾಗಿ ಗುಂಪುಕಟ್ಟಿಕೊಂಡು ಬಂದು “ಲೋಪರ್ ನನ್ನ ಮಕ್ಕಳೇ ನಿಮ್ಮಮನೇಕೇಯ” ಏಕೆ ದಾರಿ ಬಿಡಬೇಕು ಎಂದು ಅವಾಚ್ಯ ಶಬ್ದಗಳಿಂದ ಬೈದರು.ಆಗ ತಾನು ಏಕೆ ಬೈಯುತ್ತಿರುವುದು ಎಂದು ಕೇಳಿದ್ದಕ್ಕೆ ಎಲ್ಲಾರು ತನಗೆ ಮತ್ತು ತಮ್ಮ ಬಾವನ ಮಗ ಶ್ರೀನಾಥರವರಿಗೆ ಕೈಗಳಿಂದ ಮೈಮೇಲೆ ಹೊಡೆದು ಕಾಲುಗಳಿಂದ ಒದ್ದು ನೋವುಂಟು ಮಾಡಿದರು. ನಂತರ ಜಯಲಕ್ಷ್ಮಮ್ಮರವರು ತನ್ನ ಜುಟ್ಟನ್ನು ಎಳೆದಾಡಿ, ಶಿರೀಷಾ ರವರು ತನ್ನ ಬಟ್ಟೆಗಳನ್ನು ಕಿತ್ತು ಸೀರೆಯನ್ನು ಕಿತ್ತು ಹಾಕಿದರು.ಆಗ ಶ್ರೀಕಾಂತ ಬಿನ್ ನಾರಾಯಣಸ್ವಾಮಿ ರವರು ಅವರ ಮನೆಯ ಒಳಗೆ ಹೋಗಿ ಮಚ್ಚನ್ನು ತೆಗೆದುಕೊಂಡು ಬಂದು ತನ್ನ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯಪಡೆಸಿದನು. ಆಗ ತಮ್ಮ ತಾಯಿ ಚೌಡಮ್ಮರವರು ಅಡ್ಡ ಬಂದಾಗ ಅವರಿಗೂ ಸಹಾ ಅದೇ ಮಚ್ಚಿನಿಂದ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯಪಡೆಸಿದರು.ತನ್ನ ಬಾವನ ಮಗ ಶ್ರೀನಾಥರವರು ಅಡ್ಡ ಬಂದಾಗ ಅವರಿಗೂ ಸಹಾ ತಲೆಯ ಹಿಂಭಾಗಕ್ಕೆ ಶ್ರೀಕಾಂತರವರು ಮಚ್ಚಿನಿಂದ ಹೊಡೆದು ರಕ್ತ ಗಾಯಪಡೆಸಿದರು. ನಂತರ ನಾರಾಯಣಸ್ವಾಮಿ, ಜಯಲಕ್ಷ್ಮೀ, ಶ್ರೀಕಾಂತ, ಶಿರೀಷಾ, ಮತ್ತು ಶಾಂತಮ್ಮರವರು ಈ ರಸ್ತೆಯ ವಿಚಾರದಲ್ಲಿ ಮತ್ತೆ ಬಂದರೇ ನಿಮ್ಮನ್ನು ಸಾಯಿಸುತ್ತೇವೆಂತ ಬೆದರಿಕೆ ಹಾಕಿದರು. ಆಗ ತಮ್ಮ ಗ್ರಾಮದ ವೆಂಕಟರವಣಪ್ಪ(ಬೋರ್ಲಪಲ್ಲಿ), ಬೈರೆಡ್ಡಿ ಬಿನ್ ಬೈಯ್ಯಪ್ಪ, ಬಾಬು ಬಿನ್ ನಾರಾಯಣಪ್ಪ ರವರು ಬಂದು ಜಗಳ ಬಿಡಿಸಿ ಉಪಚರಿಸಿದರು. ನಂತರ ತಾವುಗಳು ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು,ತಮ್ಮ ತಾಯಿಗೆ ತಲೆಗೆ ಜಾಸ್ತಿ ಗಾಯವಾಗಿದ್ದರಿಂದ ವೈದ್ಯರು ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕಳುಹಿಸಿರುತ್ತಾರೆ.ತಮ್ಮ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ ನಾರಾಯಣಸ್ವಾಮಿ, ಅವರ ಹೆಂಡತಿ ಜಯಲಕ್ಷ್ಮೀ, ಮಕ್ಕಳಾದ ಶ್ರೀಕಾಂತ, ಶಿರೀಷಾ, ಮತ್ತು ನಾರಾಯಣಸ್ವಾಮಿಯ ತಂಗಿ ಶಾಂತಮ್ಮರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂತ ದೂರಿನ ಸಾರಾಂಶವಾಗಿರುತ್ತೆ.

 

10. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.135/2021 ಕಲಂ. 324,447,504 ಐ.ಪಿ.ಸಿ:-

       ದಿನಾಂಕ:06/08/2021 ರಂದು ಪಿರ್ಯಾದಿದಾರರಾದ ಶ್ರೀ ಗಂಗಾಧರಪ್ಪ ಬಿನ್ ಲೇಟ್ ಪೆದ್ದಾಯಪ್ಪ, 52 ವರ್ಷ, ಆದಿ ಕರ್ನಾಟಕ, ನರಸಿಂಹ ದೇವರ ಬೆಟ್ಟದ ನೆಡುತೋಪಿನ ದಿನ ಕೂಲಿ ಕಾವಲುಗಾರ ವಾಸ ಅನಘಟ್ಟನಹಳ್ಳಿ ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಬಚ್ಚರೆಡ್ಡಿಹಳ್ಳಿಗೆ ಸೇರಿದ ಸರ್ಕಾರಿ ಅರಣ್ಯದಲ್ಲಿ ದಿನ ಕೂಲಿ ಅರಣ್ಯ ಕಾವಲುಗಾರನಾಗಿ ಸುಮಾರು 3 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ದಿನಾಂಕ:05/08/2021 ರಂದು ಸಂಜೆ 6-00 ಗಂಟೆಗೆ ನರಸಿಂಹ ದೇವರ ಬೆಟ್ಟ 5ನೇ ಬ್ಲಾಕ್ 2ನೇ ಕಾರ್ಯ ವೃತ್ತದ ಬಚ್ಚರೆಡ್ಡಿಹಳ್ಳಿ ಗ್ರಾಮದ ಸರ್ವೆ ನಂಬರ್ 43 ರ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಬಚ್ಚರೆಡ್ಡಿಹಳ್ಳಿ ಗ್ರಾಮ ಆನಂದ ಬಿನ್ ಗುಡವಪ್ಪ ಸುಮಾರು 43 ವರ್ಷ, ನಾಯಕ ಜನಾಂಗ, ರವರು ಅರಣ್ಯ ನೇಡು ತೋಪಿಗೆ ಮೇಕೆಗಳನ್ನು ಬಿಟ್ಟು ಮೇಯಿಸುತ್ತಿದ್ದಾಗ ನಾನು ಮೇಕೆಗಳನ್ನು ಅರಣ್ಯದಲ್ಲಿ ಬಿಟ್ಟರೆ ಬೆಳೆದಿರುವ ಗಿಡಗಳು ನಾಶವಾಗುತ್ತದೆ ಇಲ್ಲಿ ಮೇಕೆಗಳನ್ನು ಬಿಡಬೇಡ ಎಂದು ತಿಳಿಸಿದಾಗ ನನಗೆ ನಿನ್ಯಾರು ಹೇಳುವುದಕ್ಕೆ ಎಂದು ಏಕಾಏಕಿ ಅವನ ಕೈಯಲ್ಲಿದ್ದ ಒಂದು ದೊಣ್ಣೆಯಿಂದ ನನ್ನ ಕೈಕಾಲುಗಳಿಗೆ ನಡುವಿಗೆ ಹೊಡೆದು ಅವಾಛ್ಯ ಶಬ್ದಗಳಿಂದ ಬೈದು ನನ್ನ ಕೆಲಸಕ್ಕೆ ಅಡ್ಡಿ ಪಡಿಸಿದಾಗ ಅಲ್ಲಿಯೇ ಇದ್ದ ನನ್ನ ಜೊತೆಯಲ್ಲಿ ಕೆಲಸ ಮಾಡುವ ಪೂಲಮಾಕಲಹಳ್ಳಿ ಗ್ರಾಮದ ನಾರಾಯಣಪ್ಪ ಬಿನ್ ನಾರಾಯಣಪ್ಪ ರವರು ಬಂದು ಈ ರೀತಿ ನೀನು ಮಾಡುತ್ತಿರುವುದು ಸರಿ ಇಲ್ಲವೆಂದು ಹೇಳಿ ಆನಂದ ರವರನ್ನು ಕಳುಹಿಸಿಕೊಟ್ಟು ನನಗೆ ಮೈಕೈ ನೋವಾಗಿದ್ದರಿಂದ ನನ್ನನ್ನು ಚಿಕಿತ್ಸೆಗಾಗಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಿ  ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ನನ್ನ ಮೇಲೆ  ಹಲ್ಲೇ ಮಾಡಿದ ಆನಂದ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 06-08-2021 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080