ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 176/2021 ಕಲಂ. 279,337 ಐಪಿಸಿ ರೆ/ವಿ 187 ಐಎಂವಿ ಆಕ್ಟ್‌ :-

  ದಿನಾಂಕ: 05/07/2021 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿದಾರರಾದ ಆನಂದ ಬಿನ್ ಗಣೇಶ 22 ವರ್ಷ, ನೇಯ್ಗೆ ಜನಾಂಗ, ಜಿರಾಯ್ತಿ, ವಾಸ: ನಲ್ಲಮಲ್ಲೇಪಲ್ಲಿ ಗ್ರಾಮ ಮಿಟ್ಟೇಮರಿ ಹೋಬಳಿ ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆ ಗಣೇಶ ಬಿನ್ ಪೆದ್ದನಂಜುಂಡಪ್ಪ ರವರು ದಿನಾಂಕ: 05/07/2021 ರಂದು ಸುಮಾರು 10-00 ಗಂಟೆ ಸಮಯದಲ್ಲಿ ದ್ವಿಚಕ್ರ ವಾಹನದ ಸಂಖ್ಯೆ ಕೆಎ-40 ಎಕ್ಸ್-4328 ಸ್ಪ್ಲೆಂಡರ್ ನಲ್ಲಿ ನಮ್ಮ ಗ್ರಾಮದಿದಂದ ಮಿಟ್ಟೇಮರಿ ಗ್ರಾಮಕ್ಕೆ ಹೋಗುತ್ತಿರುವಾಗ ನಲ್ಲಮಲ್ಲೇಪಲ್ಲಿ ಕ್ರಾಸ್ ಮತ್ತು ಮೇರುವಪಲ್ಲಿ ಕ್ರಾಸ್ ಮಧ್ಯದಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಯಾರೋ ಅಪಘಾತ ಮಾಡಿ ಹೋಗಿರುತ್ತಾರೆ. ಈಗ ನನ್ನ ತಂದೆ ಗಣೇಶರವರಿಗೆ  ರಕ್ತಗಾಯಗಳಾಗಿದ್ದು, ಬದುಕುಳಿಯುವುದು ಅಸಾಧ್ಯ ವಾಗಿ ನಮ್ಮ ತಂದೆಯವರು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೃಜನಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಆದ್ದರಿಂದ ನಮ್ಮ ತಂದೆಗೆ ಅಪಘಾತವನ್ನುಂಟು ಮಾಡಿ ಹೊರಟು ಹೋಗಿರುವ ವಾಹನವನ್ನು ಪತ್ತೆಮಾಡಿ ವಾಹನದ ಚಾಲಕನ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 177/2021 ಕಲಂ. 323,504,506 ರೆ/ವಿ 34 ಐಪಿಸಿ :-

  ದಿನಾಂಕ: 06/07/2021 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿದಾರರಾದ ನಾಸೀರಾ ಭಾನು ಕೋಂ ಬಾಬಾಜಾನ್, 32ವರ್ಷ, ಮುಸ್ಲಿಂ ಜನಾಂಗ, ಗೃಹಿಣಿ, ವಾಸ: 10ನೇ ವಾರ್ಡ್ ಬಾಗೇಪಲ್ಲಿ ಪುರ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:06/07/2021 ರಂದು  ನಾನು, ನನ್ನ ಗಂಡನಾದ ಬಾಬಾಜಾನ್ ರವರ ಪಾಲಿಗೆ ಬರಬಹುದಾದ ಆಸ್ತಿಯನ್ನು ನಮಗೆ ಹಂಚಿಕೆ ಮಾಡಿ  ಎಂದು  ಕೇಳಲು 6ನೇ ವಾರ್ಡಿನಲ್ಲಿರುವ  ನಮ್ಮ ಅತ್ತೆಯಾದ ರಹಮತ್ ರವರ ಮನೆಯ ಬಳಿ ಹೋಗಿ ಕೇಳಿದಾಗ ಅಲ್ಲೇ ಇದ್ದ ರಹಮತ್ ರವರು, ಅವರ ಅಳಿಯನಾದ ಆರೀಫ್, ಆರೀಫ್ ರವರ ಹೆಂಡತಿಯಾದ ರಿಹಾನ, ಅವರ ಮಗನಾದ ಮಕ್ಸೂದ್, ಮಗಳಾದ ಅಫ್ರೀನಾ ರವರು ಸೇರಿ ನಿನ್ನ ಗಂಡನಿಗೆ ಆಸ್ತಿಯನ್ನು ಕೊಡುವುದಿಲ್ಲವೆಂದು ನನ್ನ ಮೇಲೆ  ಜಗಳ ತೆಗೆದು ಅವಾಚ್ಯಶಬ್ದಗಳಿಂದ ಬೈದು, ರಹಮತ್, ರಿಹಾನ ರವರು ಕೈಗಳಿಂದ ನನ್ನ ಮೈಮೇಲೆ ಹೊಡೆದಿದ್ದು, ನಂತರ ನನ್ನ ಗಂಡನಾದ ಬಾಬಾಜಾನ್ ರವರು ಜಗಳವನ್ನು ಬಿಡಿಸಲು ಬಂದಾಗ ನನ್ನ ಗಂಡನಿಗೂ ಸಹ ಆರೀಫ್ ರವರು ಕೈಗಳಿಂದ ಹೊಡೆದು ಮೈಕೈ ನೋವುಂಟು ಮಾಡಿರುತ್ತಾರೆ. ನಂತರ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ನಮ್ಮನ್ನು ಅವಾಚ್ಯಶಬ್ದಗಳಿಂದ ಬೈದು, ಕೈಗಳಿಂದ ಹೊಡೆದು, ಪ್ರಾಣಬೆದರಿಕೆಯನ್ನು ಹಾಕಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

3. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 95/2021 ಕಲಂ. 323,324,504,506 ಐಪಿಸಿ ಮತ್ತು ಸೆಕ್ಷನ್‌ 3Cl(1)(R)(S) The Scheduled Castes and the Scheduled Tribes (Prevention of Atrocities) Amendment Bill, 2015 :-

  ದಿನಾಂಕ: 05/07/2021 ರಂದು ಎ ಎಸ್ ಐ ವೆಂಕಟರವಣಪ್ಪ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಕೆ ಎಸ್ ಶಂಕರಪ್ಪರವರ ಹೇಳಿಕೆಯನ್ನು ಪಡೆದು ಸಂಜೆ 5-30 ಗಂಟೆಗೆ  ಠಾಣೆಗೆ ವಾಪಸ್ಸು ಬಂದು ಹಾಜರುಪಡಿಸಿದ   ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ನಾನು  ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ.  ನಾನು ಕೂಲಿಕೆಲಸ ಮಾಡಿಕೊಂಡು ಜೀವನ ಮಾಡುತ್ತಿರುತ್ತೇನೆ. ನಾನು ಮಾದಿಗ ಜನಾಂಗಕ್ಕೆ ಸೇರಿದವನಾಗಿರುತ್ತೇನೆ. ನನ್ನ ಖಾಸಾ ಅಣ್ಣ ನರಸಿಂಹಪ್ಪರವರ ಹೆಂಡತಿ ರಾಮಲಕ್ಷ್ಮಮ್ಮ ರವರ ಹೆಸರಿನಲ್ಲಿ ಕಡದನಮರಿ  ಗ್ರಾಮ ಪಂಚಾಯ್ತಿಯಲ್ಲಿ ವಾಸದ ಮನೆಗೆ ಸರ್ಕಾರದಿಂದ ಅನುದಾನ ಮಂಜೂರಾಗಿದ್ದು, ಅನುದಾನದಲ್ಲಿ 2 ಕಂತುಗಳ ಹಣ (ಬಿಲ್) ಮಂಜೂರಾಗುವುದು ತಡವಾಗಿದ್ದು, ಈ ವಿಚಾರವನ್ನು ಕೇಳಲು ನಾನು ದಿನಾಂಕ:04/07/2021 ರಂದು ಸಂಜೆ ಸುಮಾರು 4-00 ಗಂಟೆಯ ಸಮಯದಲ್ಲಿ ಕಡದನಮರಿ ಗ್ರಾಮ ಪಂಚಾಯ್ತಿ ಕಾರ್ಯಾಲಯಕ್ಕೆ ಹೋಗಿ ಅಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ಹಿಸುತ್ತಿರುವ ಪಾಪಿರೆಡ್ಡಿ ರವರನ್ನು ನಮ್ಮ ಮನೆಯ ಬಾಕಿ ಬಿಲ್ ಬಗ್ಗೆ ಕೇಳಿದಾಗ ಅವರು ನನ್ನನ್ನು ಎ ಲೋಪರ್ ನಾ ಕೊಡಕಾ ನಿಯಮ್ಮ ಮಾದಿಗ ಪುಕನೇ ದೆಂಗ ನೇನು ಚೆಪ್ಪೇವರಕು ಪಂಚಾಯ್ತಿ ದಗ್ಗರಿಕೆ ವಸ್ತೆ ಚೆಂಪೆಸ್ತಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿ ನನ್ನ ಕತ್ತಿನ ಪಟ್ಟಿ ಹಿಡಿದು ಹೊರಗಡೆ ತಳ್ಳಿದಾಗ ನಾನು ಪಂಚಾಯ್ತಿ ಕಾಂಪೌಂಡ್ ನಿಂದ ಹೊರಗಡೆ ಕೆಳಕ್ಕೆ ಬಿದ್ದಾಗ ಕಾಲಿನಿಂದ  ನನ್ನ ಮೈಮೇಲೆ  ಮತ್ತು ಮುಖಕ್ಕೆ ಒದ್ದು ನೋವುಂಟು ಮಾಡಿರುತ್ತಾನೆ. ಕಬ್ಬಿಣದ ಕಂಬಿಯಿಂದ  ನನ್ನ ಮುಂದಲೆಗೆ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಬಲಕಿವಿಗೆ ಸಹ ಹೊಡೆದು ಗಾಯಪಡಿಸಿರುತ್ತಾನೆ. ನಾನು ಕಿರುಚಿಕೊಂಡಾಗ ಅಷ್ಟರಲ್ಲಿ ಕಡದನಮರಿ ಗ್ರಾಮದ ವಾಸಿಗಳಾದ ವೆಂಕಟರವಣಪ್ಪ ಬಿನ್ ನಂಜಪ್ಪ, ಹಾಗೂ ಲಕ್ಷ್ಮಣ ಬಿನ್ ಬಿಲ್ಲಾಂಡ್ಲಹಳ್ಳಿ  ಈರಪ್ಪರವರುಗಳು ಬಂದು ಬಿಡಿಸಿ ನನ್ನನ್ನು ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ  ದ್ವಿಚಕ್ರವಾಹನದಲ್ಲಿ  ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ಅಲ್ಲಿನ ಸಿಬ್ಬಂದಿಯವ ರಿಂದ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ  ದ್ವಿಚಕ್ರ ವಾಹನದಲ್ಲಿ  ನನ್ನ ಬಾಮೈದ ಶಿವಕುಮಾರ್ ಬಿನ್ ಚನ್ನರಾಯಪ್ಪ ರವರೊಂದಿಗೆ ನಿನ್ನೆ ದಿನ ದಿನಾಂಕ:04/07/2021 ರಂದು ರಾತ್ರಿ 7-00 ಗಂಟೆಗೆ ಬಂದು ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಕೋರುತ್ತೇನೆಂದು ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

 

4. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 96/2021 ಕಲಂ. 323,353,504,506 ಐಪಿಸಿ :-

  ಈ ದಿನ ದಿನಾಂಕ 05/07/2021 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ.ಡಿ.ಕೆ.ನಾಗರಾಜಗೌಡ, ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು, ಕಡದನಮರಿ ಗ್ರಾಮ ಪಂಚಾಯ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಚಿಂತಾಮಣಿ ತಾಲ್ಲೂಕು ಕಡದನಮರಿ ಗ್ರಾಮ ಪಂಚಾಯ್ತಿಯಲ್ಲಿ ದಿನಾಂಕ 04/07/2021 ರಂದು ಭಾನುವಾರದಂದು ಮಾನ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳ ಮೌಖಿಕ ಆದೇಶದಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕಡತಗಳ ಪರಿಶೀಲನೆ ಇರುವ ಕಾರಣ ಸದರಿ ಎಲ್ಲಾ ಕಡತಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಭಾನುವಾರದಂದು ಗ್ರಾಮ ಪಂಚಾಯ್ತಿಯ ಎಲ್ಲಾ ಸಿಬ್ಬಂದಿಯವರು ಸರ್ಕಾರಿ ಕೆಲಸಕ್ಕೆ ಹಾಜರಾಗಿದ್ದು ನಾನು ಮತ್ತು ಕಛೇರಿಯ ಕಂಪ್ಯೂಟರ್ ನಿರ್ವಾಹಕನಾದ ಪಾಪಿರೆಡ್ಡಿ ರವರು ಕಛೇರಿಯ ಕಡತಗಳನ್ನು ಪರಶೀಲಿಸುತ್ತಿದ್ದಾ ಸಮಯದಲ್ಲಿ ಮಧ್ಯಾಹ್ನ ಸುಮಾರು 2-00 ಗಂಟೆಗೆ ಅಂಕಾಲಮಡಗು ಗ್ರಾಮದ ಶಂಕರ್ ಬಿನ್ ಲೇಟ್ ಕೋನಪ್ಪ ಎಂಬುವರು ಗ್ರಾಮ ಪಂಚಾಯ್ತಿಯ ಕಛೇಗೆ ಬಂದು ಅವರ ಅತ್ತಿಗೆಯಾದ ರಾಮಲಕ್ಷ್ಮಮ್ಮ ರವರ ಮನೆಯ ಬಿಲ್ಲನ್ನು ನೀಡಿರುವುದಿಲ್ಲ ಎಂದು ನಮ್ಮನ್ನು ಮತ್ತು ಕಛೇರಿಯ ಸಿಬ್ಬಂದಿಯವರನ್ನು ಅವಾಚ್ಯ ಶಬ್ದಗಳಿಂದ ಬೈದು ನಾವು ಸರ್ಕಾರಿ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿ ಕಛೇರಿಯ ಕಂಪ್ಯೂಟರ್ ನಿರ್ವಹಕಾರದ ಶ್ರೀ.ಪಾಪಿರೆಡ್ಡಿ ರವರನ್ನು ಕುರಿತು ನಿನ್ನ ಹೆಂಡತಿನೇ ಕೇಯ, ನಿನ್ನಮ್ಮನೇ ಕೇಯ ನೀನು ನಮ್ಮ ಅತ್ತಿಗೆಯ ಮನೆಯ ಪೋಟಗಳನ್ನು ಪ್ರತಿ ದಿನ ತೆಗೆಯುತ್ತಿದ್ದೀಯ ಬಿಲ್ಲನ್ನು ಯಾಕೆ ಮಾಡಿಲ್ಲ ಎಂದು ಬೈದು ಆತನ ಗಲ್ಲಾ ಪಟ್ಟಿಯನ್ನು ಹಿಡಿದು ಎಳೆದುಕೊಂಡು ಕಛೇರಿಯ ಆವರಣಕ್ಕೆ ಹೋಗಿ ಆತನನ್ನು ಕೈಗಳಿಂದ ಹೊಡೆದು ಕಛೇರಿಯ ಕಂಪ್ಯೂಟರ್ ನಿರ್ವಾಹಕ ಹಾಗೂ ನಾನು ಕಛೇರಿಯ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿ ಬಿಲ್ಲನ್ನು ಮಂಜೂರುಮಾಡದೆ ಇದ್ದರೆ ನಿನ್ನನ್ನು ಸಾಯಿಸಿ ಜೈಲಿಗೆ ಹೋಗುತ್ತೇನೆ ಎಂದು ಪ್ರಾಣ ಬೆದರಿಕೆಯನ್ನು ಹಾಕಿ ನಂತರ ಶಂಕರ್ ಬಿನ್ ಲೇಟ್ ಕೋನಪ್ಪ ರವರು ಅಲ್ಲಿಯೇ ಕಛೇರಿಯ ಆವರಣದ ಮುಂದೆ ಹೋಗಿ ಕಛೇರಿಯ ಸಿಬ್ಬಂದಿಯವರನ್ನು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ನಮ್ಮ ಮೇಲೆ ಹಲ್ಲೆಮಾಡಲು ಕಲ್ಲನ್ನು ತೆಗೆದುಕೊಳ್ಳಲು ಹೋಗಿ ಆಯತಪ್ಪಿ ಕೆಳಕ್ಕೆ ಬಿದ್ದು ಆತನ ತಲೆಗೆ ಗಾಯವಾಗಿರುತ್ತೆ. ಮೇಲ್ಕಂಡಂತೆ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ನಾನು ಮತ್ತು ಕಛೇರಿಯ ಗಣಕಯಂತ್ರ ನಿರ್ವಾಹಕರಾದ ಪಾಪಿರೆಡ್ಡಿ ರವರು ಸರ್ಕಾರಿ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿ ಅವಾಚ್ಯಶಬ್ದಗಳಿಂದ ಬೈದು ಕೈಗಳಿಂದ ಹಲ್ಲೆಮಾಡಿರುವ ಶಂಕರ ರವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿರುವ ದೂರಾಗಿರುತ್ತೆ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 103/2021 ಕಲಂ. ಮನುಷ್ಯ ಕಾಣೆ :-

  ದಿನಾಂಕ: 05/07/2021 ರಂದು  ರಾತ್ರಿ 8-30 ಗಂಟೆಯ ಸಮಯದಲ್ಲಿ  ಪಿರ್ಯಾದಿ ನಾರಾಯಣಸ್ವಾಮಿ  ಬಿನ್  ಲೇಟ್ ಮುನಿಯಪ್ಪ 58ವರ್ಷ ಕುಂಬಾರರು  ಜಿರಾಯ್ತಿ ವಾಸ: ತಿಪ್ಪೇನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ  ತಾಲ್ಲೂಕು. ರವರು  ಠಾಣೆಗೆ  ಹಾಜರಾಗಿ  ನೀಡಿದ  ದೂರಿನ ಸಾರಾಂಶವೇನೆಂದರೆ, ತನಗೆ ಇಬ್ಬರು ಗಂಡು ಮಕ್ಕಳಿದ್ದು 1ನೇ ರಾಜು. 2ನೇ ಲಕ್ಷ್ಮೀವೆಂಕಟೇಶ ರವರಾಗಿರುತ್ತಾರೆ. ನನ್ನ 2ನೇ ಮಗನಾದ ಲಕ್ಷ್ಮೀವೆಂಕಟೇಶನು ಚಿಕ್ಕಬಳ್ಳಾಪುರ   SJCIT  ಕಾಲೇಜಿನಲ್ಲಿ ಬಿ.ಇ. ಪದವಿ  ವ್ಯಾಸಂಗ ಮಾಡಿರುತ್ತಾನೆ. ನಂತರ  ತನ್ನ  ಮಗ ಊರಿನಲ್ಲಿದ್ದು  ವ್ಯವಸಾಯದ  ಕೆಲಸಗಳನ್ನು ಮಾಡಿಕೊಂಡಿದ್ದನು. ದಿನಾಂಕ: 03/07/2021 ರಂದು ಮದ್ಯಾಹ್ನ 12-00 ಗಂಟೆಯ ಸಮಯದಲ್ಲಿ  ತನ್ನ ಮಗ  ಲಕ್ಷ್ಮೀವೆಂಕಟೇಶನು  ದ್ವಿ ಚಕ್ರ  ವಾಹನದಲ್ಲಿ ಇಬ್ಬರ  ಜೊತೆ  ಹೋಗಿದ್ದು  ಪುನಃ  ವಾಪಸ್ಸು ಬಂದಿರುವುದಿಲ್ಲ.  ನಾವು ನಮ್ಮ ನೆಂಟರ, ಸಂಬಂಧಿಕರ, ಪರಿಚಯಸ್ಥರ ಮನೆಗಳಲ್ಲಿ  ಹುಡುಕಾಡುತ್ತಿದ್ದು  ಇದುವರೆವಿಗೂ ಸಿಗದೇ  ಕಾಣೆಯಾಗಿರುವುದಿಲ್ಲ.   ಕಾಣೆಯಾದವರ ಚಹರೆ ಗುರ್ತುಗಳು.  ಹೆಸರು: ಲಕ್ಷ್ಮೀವೆಂಕಟೇಶ.  ವಯಸ್ಸು: 26 ವರ್ಷ. ಚಹರೆ ಗುರ್ತುಗಳು. ಸಾದಾರಣ ಮೈ ಕಟ್ಟು. ಎತ್ತರ ಸುಮಾರು 5.5 ಅಡಿ. ಎಣ್ಣೆಗೆಂಪು ಮೈ ಬಣ್ಣ. ಕೋಲು ಮುಖ. ಕುರಚಲು ಗಡ್ಡ.  ಕಪ್ಪು ಕೂದಲು. ಮಾತನಾಡುವ ಬಾಷೆ: ಕನ್ನಡ. ತೆಲುಗು. ಇಂಗ್ಲೀಷ್. ಕಾಣೆಯಾದ ದಿನ ಧರಿಸಿದ್ದ ಬಟ್ಟೆಗಳು.: ತಿಳಿ ಪಿಂಕ್ ಕಲ್ಲರ್ ತುಂಬು ತೋಳಿನ ಷರಟು. ಬಿಳಿ ಬಣ್ಣದ ಪ್ಯಾಂಟ್. ಮೇಲ್ಕಂಡಂತೆ ಚಹರೆಗಳುಳ್ಳ ಕಾಣೆಯಾಗಿರುವ ಲಕ್ಷ್ಮೀವೆಂಕಟೇಶ. ರವರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ  ನೀಡಿದ ದೂರಿನ ಮೇರೆಗೆ  ಈ ಪ್ರ.ವ.ವರದಿ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 299/2021 ಕಲಂ. 279, 337 ಐಪಿಸಿ ಮತ್ತು ಸೆಕ್ಷನ್‌ 187 ಐಎಂವಿ ಆಕ್ಟ್‌ :-

  ದಿನಾಂಕ: 05/07/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಕೃಷ್ಣಪ್ಪ @ ಕಾರಳ್ಳಿ ಕೃಷ್ಣಪ್ಪ ಬಿನ್ ಲೇಟ್ ಮುನಿನಂಜಪ್ಪ, 65 ವರ್ಷ, ಗೊಲ್ಲರು, ಜಿರಾಯ್ತಿ, ಹುಲುಗುಮ್ಮನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 4.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಾನು ಈ ದಿನ ದಿನಾಂಕ: 05/07/2021 ರಂದು ಬೆಳಿಗ್ಗೆ 09.30 ಗಂಟೆ ಸಮಯದಲ್ಲಿ ಕೆಲಸದ ನೀಮಿತ್ತ ಚಿಂತಾಮಣಿ ತಾಲ್ಲೂಕಿನ ಬೂರಗಮಾಕಲಹಳ್ಳಿ ಗ್ರಾಮದ ಬಳಿ ಇರುವ ರೇಷ್ಮೇ ಇಲಾಖೆ ಕಛೇರಿಗೆ ತನ್ನ ಬಾಬತ್ತು ಸೈಕಲ್ ನಲ್ಲಿ ಹೋಗಿದ್ದು, ಅಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ತಮ್ಮ ಗ್ರಾಮಕ್ಕೆ ಹೋಗಲು ತನ್ನ ಸೈಕಲ್ ನಲ್ಲಿ ಇದೇ ದಿನ ಮದ್ಯಾಹ್ನ ಸುಮಾರು 12.00 ಗಂಟೆ ಸಮಯದಲ್ಲಿ ಚಿಂತಾಮಣಿ ಬೆಂಗಳೂರು ರಸ್ತೆಯ ನಾಯಿಂದ್ರಹಳ್ಳಿ ಗೇಟ್ ಬಳಿ ಹೋಗುತ್ತಿದ್ದಾಗ ತನ್ನ ಹಿಂಬದಿಯಿಂದ ಅಂದರೆ ಚಿಂತಾಮಣಿ ಕಡೆಯಿಂದ ಬಂದ ಹುಂಡೈ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿ ಕಾರನ್ನು ನಿಲ್ಲಿಸದೆ ಹೊರಟು ಹೋದ ಪರಿಣಾಮ ತಾನು ಸೈಕಲ್ ಸಮೇತ ಕೆಳಕ್ಕೆ ಬಿದ್ದು ಹೋಗಿದ್ದು, ಆಗ ತನ್ನ ಬಲಕಣ್ಣಿನ ಮೇಲ್ಬಾಗ, ಬಲ ಮೊಣಕೈ, ಎರಡೂ ಕಾಲುಗಳ ಮೊಣಕಾಲುಗಳು, ಪಾದಗಳಿಗೆ ಮತ್ತು ಎಡ ಕಾಲಿನ ತೊಡೆಯ ಬಳಿ ರಕ್ತಗಾಯಗಳಾಗಿರುತ್ತೆ ಹಾಗೂ ಬಲಭುಜಕ್ಕೆ ಊತಗಾಯವಾಗಿರುತ್ತೆ. ತನಗೆ ಅಪಘಾತ ಪಡಿಸಿ, ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋದ ಕಾರಿನ ನಂಬರ್ ಪ್ಲೇಟ್ ಸ್ಥಳದಲ್ಲಿ ಬಿದ್ದಿದ್ದು ನಂಬರ್ ನೋಡಲಾಗಿ KA-11 B-4441 ಎಂತ ಇರುತ್ತೆ. ನಂತರ ಬನಹಳ್ಳಿ ಗ್ರಾಮದ ಕೇಶವ ಮತ್ತು ತಮ್ಮ ಗ್ರಾಮದ ವಿನೋದ ಬಿನ್ ಕೃಷ್ಣಪ್ಪ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ಆದ್ದರಿಂದ ತನಗೆ ಅಪಘಾತ ಪಡಿಸಿ, ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋದ KA-11 B-4441 ಹುಂಡೈ ಕಾರಿನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಹೇಳೀಕೆಯ ದೂರಾಗಿರುತ್ತೆ.

 

7. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 82/2021 ಕಲಂ. 279, 304(ಎ) ಐಪಿಸಿ :-

  ದಿನಾಂಕ 06/07/2021 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಪಾಪಣ್ಣ ಬಿನ್ ಲೇಟ್ ಚೌಟಿ ವೆಂಕಟರಾಯಪ್ಪ, 60 ವರ್ಷ, ಅಲಗುರ್ಕಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತನಗೆ ನಾಲ್ಕು ಜನ ಮಕ್ಕಳಿದ್ದು ಎರಡು ಹೆಣ್ಣು, ಎರಡು ಗಂಡು ಮಕ್ಕಳು ಇದ್ದು ಕೊನೆಯ ಮಗನಾದ ನರಸಿಂಹಮೂರ್ತಿ, 29 ವರ್ಷ ರವರು ಗಾರೆ ಕೆಲಸ ಮಾಡಿಕೊಂಡು ನನ್ನೊಂದಿಗೆ ವಾಸವಾಗಿರುತ್ತಾನೆ. ಈತನಿಗೆ ಮದುವೆಯಾಗದೇ ಇದ್ದು ಒಂದು ವರ್ಷದ ಹಿಂದೆ ಹೊಸಕೋಟೆಯಿಂದ ಮೌನಿಕ ಎಂಬುವರನ್ನು ಕರೆದುಕೊಂಡು ಮನೆಯಲ್ಲಿ ಇಟ್ಟುಕೊಂಡಿರುತ್ತಾನೆ. ತನ್ನ ಮಗ ದಿನಾಂಕ 05/07/2021 ರಂದು ಕೆಲಸಕ್ಕೆ ಹೋಗದೆ ಮನೆಯಲ್ಲಿ ಇರುತ್ತಾನೆ. ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ತನ್ನ ಮಗ ದಿಬ್ಬೂರಹಳ್ಳಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿದ್ದು ನಂತರ ಸಂಜೆಯಾದರೂ ಮನೆಗೆ ವಾಪಸ್ಸು ಬಂದಿರುವುದಿಲ್ಲ. ನಂತರ ನಾವುಗಳು ತಮ್ಮ ಮಗನ ಜೋತೆ ಇದ್ದ ನಮ್ಮ ಗ್ರಾಮದ ವಾಸಿಗಳಾದ ರವಿ ಬಿನ್ ಆದಿನಾರಾಯಣಪ್ಪ ಮತ್ತು ರಮೇಶ ಬಿನ್ ಮುನಿಶಾಮಿ ರವರನ್ನು ವಿಚಾರಿಸಲಾಗಿ ಈ ದಿನ ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ನರಸಿಂಹಮೂರ್ತಿ ಮತ್ತು ನಾವುಗಳು ನರಸಿಂಹಮೂರ್ತಿಯ ದ್ವಿ ಚಕ್ರ ವಾಹನ ಸಂಖ್ಯೆ ಕೆ.ಎ 67 ಹೆಚ್ 0838 ರಲ್ಲಿ ನಕ್ಕಲಹಳ್ಳಿ ಗ್ರಾಮ ಬಳಿಯಿರುವ ಚಿಕ್ಕಯ್ಯನ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದು 3.45 ಗಂಟೆಗೆ ನಾವು ಮೀನು ಹಿಡಿಯುತ್ತಿದ್ದಾಗ ಮದ್ಯಪಾನ ಮಾಡಬೇಕೆಂತ ದ್ವಿಚಕ್ರ ವಾಹನ ತೆಗೆದುಕೊಂಡು ಬಂದಿರುತ್ತಾನೆ ಪುನಃ ಆತನ ಬಗ್ಗೆ ನಮಗೆ ಗೊತ್ತಿಲ್ಲವೆಂದು ತಿಳಿಸಿರುತ್ತಾರೆ. ದಿನಾಂಕ 06/07/2021 ರಂದು ಬೆಳಿಗ್ಗೆ ಸುಮಾರು 7.00 ಗಂಟೆ ಸಮಯದಲ್ಲಿ ನಕ್ಕಲಹಳ್ಳಿ ಗ್ರಾಮದ ಲಗುಮಪ್ಪ ರವರು ನಮ್ಮ ಮನೆಯ ಬಳಿ ಬಂದು ನರಸಿಂಹಮೂರ್ತಿ ಚಿಕ್ಕಯ್ಯನ ಕೆರೆಯಿಂದ ಬರುವ ರತ್ನಮ್ಮರವರ ಜಮೀನ ಪಕ್ಕದ ರಸ್ತೆಯ ಪಕ್ಕದಲ್ಲಿ ಬಂಡೆಯ ಮೇಲೆ ಬೋರಲಾಗಿ ಬಿದ್ದು ಮೃತಪಟ್ಟು ದ್ವಿಚಕ್ರ ವಾಹನವು ಅಲ್ಲಯೇ ಬಿದ್ದಿರುತ್ತದೆ ಎಂದು ತನಗೆ ತಿಳಿಸಿರುತ್ತಾರೆ. ನಾವು ಹೋಗಿ ನೋಡಲಾಗಿ ತನ್ನ ಮಗ ಮೃತ ಪಟ್ಟಿದ್ದು ದಿನಾಂಕ 05/07/2021 ರಂದು ಮದ್ಯಾಹ್ನ ಕೆರೆ ಕಡೆಯಿಂದ ಮನೆಗೆ ಬರುವಾಗ ತನ್ನ ಮಗ ಕಲ್ಲುಗಳ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ಆಯ ತಪ್ಪಿ ರಸ್ತೆಯ ಪಕ್ಕದ ಬಂಡೆಯ ಮೇಲೆ ಬಿದ್ದು ಬಾಯಿ ಮತ್ತು ಮೂಗಿಗೆ ಗಾಯಗಳಾಗಿ ಮೃತಪಟ್ಟಿರುತ್ತಾನೆ. ಈ ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಾಗಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 153/2021 ಕಲಂ. 324,448,504 ರೆ/ವಿ 34 ಐಪಿಸಿ :-

  ದಿನಾಂಕ; 05-07-2021 ರಂದು 17-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ.ವರಲಕ್ಷ್ಮಮ್ಮ ಕೋಂ ನಂಜುಂಡಪ್ಪ, 46ವರ್ಷ, ಬಲಜಿಗರು, ಹೂಕಟ್ಟುವ ಕೆಲಸ, ವಾಸ ವಾಟದಹೊಸಹಳ್ಳಿ ಗ್ರಾಮ, ನಗರಗೆರೆ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ತಮಗೂ ಮತ್ತು ತನ್ನ ಮೈದುನ ಶಿವರವರಿಗೆ ಪೆಟ್ಟಿಗೆ ಅಂಗಡಿಯ ಹಣಕಾಸಿನ ವ್ಯವಹಾರವಿದ್ದು , ದಿನಾಂಕ:05/07/2021 ರಂದು ಬೆಳಗ್ಗೆ ಸುಮಾರು 11-00 ಗಂಟೆಯಲ್ಲಿ  ತಾನು ಮತ್ತು ತನ್ನ ಸೊಸೆ ಲಕ್ಷ್ಮೀ ರವರು  ಮನೆಯಲ್ಲಿ ತಿಂಡಿ ತಿನ್ನುತ್ತಿದ್ದಾಗ, ಮಂಜುನಾಥ ಬಿನ್ ಶಿವಪ್ಪ, ರಾಮಲಕ್ಷ್ಮಮ್ಮ ಕೋಂ ಶಿವಪ್ಪ,  ಶಿಲ್ಪ ಕೋಂ ನರೇಶ ರವರುಗಳು ತನ್ನ ಮನೆಗೆ ಅಕ್ರಮ ಪ್ರವೇಶ ಮಾಡಿ, ತಿಂಡಿ ತಿನ್ನುತ್ತಿದ್ದ ತನ್ನನ್ನು ರಾಮಲಕ್ಷ್ಮಮ್ಮ ತಲೆಯ ಕೂದಲೇಳುದು ರಾಡಿನಿಂದ ಬೆನ್ನಿಗೆ ಹೊಡೆದಿರುತ್ತಾಳೆ, ಶಿಲ್ಪರವರು ತನ್ನ ಸೊಸೆ ಲಕ್ಷ್ಮೀರವರ  ಮಾಂಗಲ್ಯ ಚೈನ್ ಎಳೆದು ಕೈಯಿಂದ ಕೆನ್ನೆಗೆ ಹೊಡೆದಿರುತ್ತಾಳೆ, ಮಂಜುನಾಥರವರು ತಮ್ಮನ್ನು ಕೆಟ್ಟ ಮಾತುಗಳಿಂದ ಬೈದಿರುವುದಾಗಿ , ಸದರಿಯವರ ಮೇಲೆ ಕಾನೂನು ರೀತ್ಯ ಕ್ರಮಕ್ಕಾಗಿ ನೀಡಿದ ದೂರು.

 

9. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 154/2021 ಕಲಂ. 279, 337 ಐಪಿಸಿ :-

  ದಿನಾಂಕ: 05-07-2021 ರಂದು 19-45 ಗಂಟೆಗೆ ಗೌರಿಬಿದನೂರು ಸರ್ಕಾರಿ  ಆಸ್ಪತ್ರೆಯಲ್ಲಿ ಗಾಯಾಳು ಗಂಗಾಧರಪ್ಪ ಬಿನ್ ಲೇಟ್ ನರಸಿಂಹಪ್ಪ, 35ವರ್ಷ, ಆದಿಕರ್ನಾಟಕ ಜನಾಂಗ, ಆಟೋ ಚಾಲಕ , ಮೇಲಾಪುರಂ, ಉರ್ದುಶಾಲೆಯ ಬಳಿ, ಹಿಂದೂಪುರ ಟೌನ್, ಆಂದ್ರಪ್ರದೇಶ ರವರ ಹೇಳಿಕೆಯನ್ನು ಪಡೆದು ಠಾಣೆಗೆ 20-00 ಗಂಟೆಗೆ  ವಾಪಸ್ಸಾಗಿ   ಪ್ರಕರಣ ದಾಖಲಿಸಿದ್ದರ ಸಾರಾಂಶವೆನೇಂದರೆ  ತಾನು ದಿನಾಂಕ:05/07/2021 ರಂದು ಮದ್ಯಾನ್ಹ ಸುಮಾರು 3 ರಿಂದ 4 ಗಂಟೆ ಸಮಯದಲ್ಲಿ  ತಾನು ಹಿಂದೂಪುರ ತಾಲ್ಲೂಕು ಮಣಿಸಂದ್ರ ಗ್ರಾಮದಿಂದ ತನಗೆ ಪರಿಚಯವಿದ್ದ ಕುಲಾಯಪ್ಪ ಹಾಗೂ ಅವರ ಕುಟುಂಬದವರಾದ ಕೃಷ್ಣಮ್ಮ ಕೋಂ ಕುಲಾಯಪ್ಪ, ಅಂಜಲಿ ಕೋಂ ಸಿದ್ದರಾಜು, 26ವರ್ಷ, ಪರಿಣಿ ಬಿನ್ ಸಿದ್ದರಾಜು 12 ವರ್ಷ, ಮತ್ತು ಆಕಾಂಕ್ಷಿ ಬಿನ್ ಸಿದ್ದರಾಜು 10 ವರ್ಷ,  ರವರನ್ನು ಕರೆದುಕೊಂಡು ಕರ್ನಾಟಕ ರಾಜ್ಯದ  ಗೌರಿಬಿದನೂರು ತಾಲ್ಲೂಕು ರಮಾಪುರ ಗ್ರಾಮದ  ಅವರ ಸಂಬಂಧಿಕರ ಮನೆಗೆ  ಕರೆದು ತನ್ನ ಬಾಬ್ತು ಎಪಿ-39-ಟಿಜಿ-3107 ಆಟೋದಲ್ಲಿ  ಚಂದನದೂರು ರಮಾಪುರ ರಸ್ತೆಯಲ್ಲಿ ಆಕಾಂಕ್ಷಿ ಎಂಬ ಮಗುವು ಮೂತ್ರ ವಿಸರ್ಜನೆ ಮಾಡಬೇಕೆಂದು ಹೇಳಿದ್ದಕ್ಕೆ, ತಾನು ತನ್ನ ಆಟೋವನ್ನು ರಸ್ತೆಯ ಎಡಬದಿಯಲ್ಲಿ  ನಿಲ್ಲಿಸಿದಾಗ ತಮ್ಮ ಹಿಂದೆಯಿಂದ ಬಂದ ಕೆಎ-53-ಸಿ-3358 ಸಂಖ್ಯೆಯ ಬಲೊರೋ ಗೂಡ್ಸ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಆಟೋ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ ಕಾರಣ ಆಟೋದಲ್ಲಿದ್ದ, ಕುಲಾಯಪ್ಪ ಬಿನ್ ಸಿದ್ದಪ್ಪ, 65 ವರ್ಷ, ಆದಿಕರ್ನಾಟಕ ಜನಾಂಗ, ಮಣಿಸಂದ್ರ ಗ್ರಾಮ, ಕೃಷ್ಣಮ್ಮ ಕೋಂ ಕುಲಾಯಪ್ಪ, 55ವರ್ಷ, ಅಂಜಲಿ ಕೋಂ ಸಿದ್ದರಾಜು, 26ವರ್ಷ, ಪರಿಣೀ, ಆಕಾಂಕ್ಷಿ ಮತ್ತು ತನಗೆ ಗಾಯಗಳಾಗಿದ್ದು, ತನಗೆ ಬಲಮೊಣಕಾಲು, ಎಡಕೈ ಮತ್ತು ಸೊಂಟಕ್ಕೆ ಊತಗಾಯಗಳಾಗಿರುತ್ತೆ. ಉಳಿದವರಿಗೂ ಸಹ ಗಾಯಗಳಾಗಿದ್ದು, ಮೇಲ್ಕಂಡ 5 ಜನರನ್ನು  ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿರುತ್ತಾರೆ.  ತಮ್ಮ ಸ್ಥಳದಿಂದ   ಅಂಬುಲೆನ್ಸ್ ನಲ್ಲಿ ಗೌರಿಬಿದನೂರು ಆಸ್ಪತ್ರೆಗೆ ದಾಖಲು ಮಾಡಿದ್ದು, ತಮಗೆ ಅಪಘಾತವನ್ನುಂಟು ಮಾಡಿಒದ ಮೇಲ್ಕಂಡ ಬೊಲೆರೋ ವಾಹನ ಚಾಲಕನ ಮೇಲೆ ಸೂಕ್ತ ಕಾನೂನು  ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

10. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ. 147/2021 ಕಲಂ. 87 ಕೆ.ಪಿ. ಆಕ್ಟ್‌ :-

  ದಿನಾಂಕ:04/07/2021 ರಂದು ಸಂಜೆ 6-30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಇಂತಿಯಾಜ್ ಎ.ಎಸ್.ಐ ನೀಡಿದ ವರದಿಯ ದೂರು ಏನೆಂದರೆ, ಈ ದಿನ ದಿನಾಂಕ:04/07/2021 ರಂದು ಸಂಜೆ 4-00 ಗಂಟೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿದ್ದಾಗ ಗುಡಿಬಂಡೆ ಪೊಲೀಸ್ ಠಾಣೆಯ ಸಿಬ್ಬಂದಿ ಹನುಮಂತರಾಯಪ್ಪ ಸಿ,ಹೆಚ್ಸಿ-73 ರವರು ನನಗೆ ಪೋನ್ ಮಾಡಿ ಈ ದಿನ ದಿನಾಂಕ: 04/07/2021 ರಂದು ನಾನು ರೇಣುಮಾಕಲ ಹಳ್ಳಿ, ಬೊಮ್ಮಗಾನಹಳ್ಳಿ ಕಡೆ ಗಸ್ತು ಮಾಡುತ್ತಿರುವಾಗ ಯಲಕರಾಳ್ಳ ಹಳ್ಳಿ  ಗ್ರಾಮದ ಬಳಿ ಹುಣಸೆಮರದ ಬಳಿ ಕೆಲವರು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ನನಗೆ ಮಾಹಿತಿ ನೀಡಿದರ ಮೇರೆಗೆ, ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-141 ಸಂತೋಷ ಸಿ,ಹೆಚ್,ಸಿ-29 ಶ್ರೀನಿವಾಸ ಸಿ,ಹೆಚ್,ಸಿ-184 ಅನ್ಸರ್ ಬಾಷ ರವರನ್ನು ಕರೆಯಿಸಿಕೊಂಡು ಸಿಬ್ಬಂದಿಯವರಿಗೆ ಮಾಹಿತಿಯನ್ನು ತಿಳಿಸಿ ಸಂಜೆ 4-15 ಗಂಟೆಗೆ ಗುಡಿಬಂಡೆ ಪೊಲೀಸ್ ಠಾಣೆಯಿಂದ ಬಿಟ್ಟು ಸಂಜೆ 4-30 ಗಂಟೆಗೆ ಸಿ.ಹೆಚ್.ಸಿ-73 ಹನುಮಂತರಾಯಪ್ಪ ರವರನ್ನು ಮತ್ತು ಪಂಚರನ್ನು ಬರಮಾಡಿಕೊಂಡು ಯಲಕರಾಳ್ಳ ಹಳ್ಳಿ  ಗ್ರಾಮದ ಬಳಿ ಮರೆಯಲ್ಲಿ ನಿಂತು ನೋಡಲಾಗಿ, ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-100 ಬಾಹರ್-100 ಎಂದು ಕೂಗುತ್ತಾ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಸಂಜೆ 4-45 ಗಂಟೆಗೆ ದಾಳಿ ಮಾಡಿದಾಗ, ಜೂಜಾಟವನ್ನು ಆಡುತ್ತಿದ್ದವರು ಓಡಿ ಹೋಗಿದ್ದು ಓಡಿ ಹೋದವರ  ಪೈಕಿ ಒಬ್ಬನನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ಮಂಜುನಾಥ ಬಿನ್ ಅಶ್ವತ್ಥಪ್ಪ, 29 ವರ್ಷ, ವಕ್ಕಲಿಗರು, ಜಿರಾಯ್ತಿ,  ಯಲಕರಾಳ್ಳ ಹಳ್ಳಿ  ಎಂದು ತಿಳಿಸಿದ್ದು ಓಡಿ ಹೋದವರ ಹೆಸರು ಮತ್ತು ವಿಳಾಸ ಕೇಳಲಾಗಿ 2)ಚಂದ್ರಪ್ಪ ಬಿನ್ ನಾರಾಯಣರೆಡ್ಡಿ ,32 ವರ್ಷ, ವಕ್ಕಲಿಇಗರು, ಜಿರಾಯ್ತಿ, ಯಲಕರಾಳ್ಳ ಹಳ್ಳಿ , ಗುಡಿಬಂಡೆ ತಾಲ್ಲೂಕು. 3)ಗುರುಮೂತರ್ಿ ಬಿನ್ ಆಂಜಿನಪ್ಪ ಬೋವಿ ಜನಾಂಗ 30ವರ್ಷ, ಯಲಕರಾಳ್ಳ ಹಳ್ಳಿ , ಗುಡಿಬಂಡೆ ತಾಲ್ಲೂಕು.  4) ಚಂದ್ರ ಬಿನ್ ಹನುಮಪ್ಪ ,25ವರ್ಷ, ಬೋವಿ ಜನಾಂಗ ಜಿರಾಯ್ತಿ, ಯಲಕರಾಳ್ಳ ಹಳ್ಳಿ , ಗುಡಿಬಂಡೆ ತಾಲ್ಲೂಕು.  5)ಮಂಜುನಾಥ ಬಿನ್ ಮುನಿಕೃಷ್ಣಪ್ಪ, 32 ವರ್ಷ, ವಕ್ಕಲಿಗರು, ಯಲಕರಾಳ್ಳ ಹಳ್ಳಿ , ಗುಡಿಬಂಡೆ ತಾಲ್ಲೂಕು.  ರೂ ಗಳಿದ್ದು ಸ್ಥಳದಲ್ಲಿ 52 ಇಸ್ಪೀಟ್ ಎಲೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಂತರ ಜೂಜಾಟಕ್ಕೆ ಪಣಕ್ಕೆ ಇಟ್ಟಿದ್ದ 870/- ರೂ & 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಸಂಜೆ 5-00 ಗಂಟೆಯಿಂದ ಸಂಜೆ 6-00 ಗಂಟೆಯವರೆಗೆ ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 6-15 ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ  6-30 ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಎನ್.ಸಿ.ಆರ್ ದಾಖಲಿಸಿ ಮಾನ್ಯ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲು ಮಾಡುತ್ತಿರುವುದಾಗಿದೆ.

 

11. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 70/2021 ಕಲಂ. 323,324,504,506 ರೆ/ವಿ 34 ಐಪಿಸಿ :-

  ದಿನಾಂಕ 06-07-2021 ರಂದು ಸಂಜೆ 06.30 ಗಂಟೆಗೆ ಹೆಚ್.ಸಿ-200 ರವರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ವೆಂಕಟೇಶ್ ಬಿನ್ ಲೇಟ್ ನಾರಾಯಣರಾವ್, 36 ವರ್ಷ, ಚಿಲ್ಲೇಕೇತ ಜನಾಂಗ, ಜಿರಾಯ್ತಿ, ವಾಸ ದೋಮಲಪಲ್ಲಿಗಡ್ಡ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆ ಪಡೆದು ಠಾಣೆಗೆ ಹಾಜರುಪಡಿಸಿದ ಸಾರಾಂಶವೇನೆಂದರೆ, ತಮ್ಮ ತಂದೆಗೆ ಇಬ್ಬರು ಮಕ್ಕಳಿದ್ದು ಮೊದಲನೇ ತನ್ನ ಅಕ್ಕ ಮಂಜುಳಮ್ಮ ಎರಡನೇ ತಾನಾಗಿರುತ್ತೇನೆ. ತನ್ನ ಅಕ್ಕಳನ್ನು ಶ್ರೀನಿವಾಸಪಪುರ ತಾಲ್ಲೂಕು ಮೀಸಗಾನಹಳ್ಳಿ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದು, ತಮಗೆ ಇದ್ದ ಜಮೀನುಗಳು ಭಾಗ ಮಾಡಿಕೊಂಡು ಉಳುಮೆ ಮಾಡುತ್ತಿದ್ದೇವು. ಈಗೀರುವಾಗ ದಿನಾಂಕ 05-07-2021 ರಂದು ಬೆಳಗ್ಗೆ ಸುಮಾರು 09.30 ಗಂಟೆ ಸಮಯದಲ್ಲಿ ತಮ್ಮ ತಾಯಿ ರತ್ನಮ್ಮ ರವರ ಭಾಗಕ್ಕೆ ಬಂದಿದ್ದ ಜಮೀನನ್ನು ಉಳುಮೆ ಮಾಡಿಕೊಡುವಂತೆ ಹೇಳಿದ್ದರಿಂದ ತಾನು ಉಳುಮೆ ಮಾಡಿಸುತ್ತಿದ್ದಾಗ ತನ್ನ ಅಕ್ಕಳಾದ ಮಂಜುಳ, ಭಾವನಾದ ವೆಂಕಟೇಶ ಹಾಗೂ ಇವರ ಮಗನಾದ ಹರೀಶ ರವರುಗಳು ಜಗಳಕ್ಕೆ ಬಂದು ಈ ಜಮೀನಿನಲ್ಲಿ ತಮಗೂ ಭಾಗ ಬರಬೇಕೆಂದು ಹೇಳಿ ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಮೈಮೇಲೆ ಹೊಡೆದು ಕೆಳಕ್ಕೆ ತಳ್ಳಿ, ಆ ಪೈಕಿ ಹರೀಶ ಒಂದು ಕಲ್ಲಿನಿಂದ ತನ್ನ ಎಡ ತೆಲೆಗೆ ಹೊಡೆದು ರಕ್ತಗಾಯಪಡಿಸಿದ, ವೆಂಕಟೇಶ ಕೈಗಳಿಂದ ಮೂತಿಗೆ ಮತ್ತು ಎದೆಗೆ ಕಲ್ಲಿನಿಂದ ಹೊಡೆದು ಮೂಗೇಟು ಉಂಟುಮಾಡಿ ಈ ನನ್ನ ಮಗನನ್ನು ಈ ದಿನವೇ ಸಾಯಿಸಬೇಕೆಂತ ಪ್ರಾಣ ಬೆದರಿಕೆ ಹಾಕಿದಾಗ ಅಲ್ಲೆ ಇದ್ದ ತಮ್ಮ ತಾಯಿ ರತ್ನಮ್ಮ, ಮಗನಾದ ಅಶೋಕ ಮತ್ತು ಚಿಂತಾಮಣಿ ವಾಸಿ ನಾಗರಾಜ ಎಂಬುವವರು ಜಗಳ ಬಿಡಿಸಿ ಸಮಾದಾನ ಮಾಡಿರುತ್ತಾರೆ. ನಂತರ  ತನಗೆ ರಕ್ತ ಬರುತ್ತಿದ್ದರಿಂದ ಚಿಂತಾಮಣಿ ಆಸ್ವತ್ರೆಗೆ 108 ವಾಹನದಲ್ಲಿ ಚಿಕಿತ್ಸೆಗಾಗಿ ದಾಖಲಾಗಿ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ವತ್ರೆಗೆ ದಾಖಲಾಗಿರುತ್ತೇನೆ. ತನ್ನ ಮೇಲೆ ಹಲ್ಲೆ ಮಾಡಿದ ಈ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಹೆಳಿಕೆ ಸಾರಾಂಶವಾಗಿರುತ್ತೆ.

 

12. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ. 69/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

  ದಿನಾಂಕ 05-07-2021 ರಂದು ಸಂಜೆ 19-05  ಗಂಟೆಗೆ ಆ ಉ ನಿ ಸಾಹೇಬರು ದಾಳಿಯಿಂದ  ಆರೋಫಿ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಸಾಹೇಬರು ಸಂಜೆ 17-00 ಗಂಟೆ ಸಮಯದಲ್ಲಿ ನಾನು ಸರ್ಕಾರಿ ಜೀಪು ಸಂಖ್ಯೆ  KA-40-G-1555  ರ ವಾಹನದಲ್ಲಿ  ಚಾಲಕ  ಪಾರೂಖ್ ಮತ್ತು  ಸಿಬ್ಬಂದಿಯಾದ  ಹೆಚ್ ಸಿ-234  ಶೇಖರ ಮತ್ತು ಪಿಸಿ 436 ಬಾಲಕೃಷ್ಣ   ರವರೊಂದಿಗೆ  ತಿಮ್ಮನಹಳ್ಳಿ    ಗ್ರಾಮದ ಕಡೆ  ಗಸ್ತಿನಲ್ಲಿದ್ದಾಗ  ನನಗೆ ಬಂದ  ಖಚಿತವಾದ ಮಾಹಿತಿ ಎನೆಂದರೆ   ಕಡಶೀಗೇನಹಳ್ಳಿ ಹನುಮಪ್ಪ ಬಿನ್ ಲೇಟ್ ಯರ್ರಪ್ಪ ಎಂಬುವರು ಯಾವುದೇ ಪರವಾನಗಿಯನ್ನು ಪಡೆಯದೇ ತನ್ನ ಅಂಗಡಿಯ  ಮುಂದೆ  ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಮಾಹಿತಿಯಂತೆ ದಾಳಿ ನಡೆಸಲು ಕೊಂಡೇನಹಳ್ಳಿ ಗೇಟಿನ ಬಳಿ ಇದ್ದಂತಹ ಪಂಚರನ್ನು ಬರಮಾಡಿಕೊಂಡು ಅವರುಗಳ ಸಮಕ್ಷಮದಲ್ಲಿ  ಸಂಜೆ 17-30 ಗಂಟೆಗೆ ಕಡಶೀಗೇನಹಳ್ಳಿ ಹನುಮಪ್ಪ ಬಿನ್  ಲೇಟ್ ಯರ್ರಪ್ಪ ರವರ ಅಂಗಡಿಯ ಬಳಿ  ಹೋಗುವಷ್ಟರಲ್ಲಿ ಅಂಗಡಿಯ ಮುಂದೆ ಮದ್ಯವನ್ನು ಸೇವನೆ ಮಾಡುತ್ತಿದ್ದ  ಜನರು  ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಕುಡಿಯುತ್ತಿದ್ದ ಲೋಟಗಳನ್ನು ಬಿಸಾಡಿ ಓಡಿ ಹೋಗಿದ್ದು  ಅಂಗಡಿಯ  ಮಾಲೀಕನ   ಹೆಸರು ವಿಳಾಸವನ್ನು ಕೇಳಲಾಗಿ   ಹನುಮಪ್ಪ ಬಿನ್   ಲೇಟ್ ಯರ್ರಪ್ಪ 60  ವರ್ಷ  ಪಜಾತಿ ಜನಾಂಗ  ಚಿಲ್ಲರೆ ಅಂಗಡಿ ಮಾಲೀಕ ಕಡಶೀಗೇನಹಳ್ಳಿ ಎಂತ ತಿಳಿಸಿದ್ದು  ಇವನ  ಅಂಗಡಿಯ   ಮುಂದೆ  ಒಂದು  ಕವರಿದ್ದು  ಅದನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥದ HAYWARDS CHEERS WHISKY  ಯ 10  TETRA  POCKET ಗಳಿದ್ದು ಪ್ರತಿ  ಪಾಕೇಟಿನ ಬೆಲೆ /- 35-13 ರೂ.ಎಂದು ಮುದ್ರಿತ ವಾಗಿರುತ್ತದೆ. ಇದು ಒಟ್ಟು-900 ML ಮದ್ಯವಿದ್ದು ಒಟ್ಟು ಬೆಲೆ 351./- ರೂ ಆಗುತ್ತದೆ. 2) 5 ಖಾಲಿ ಲೋಟಗಳು 3) 5 ಖಾಲಿ ಟೆಟ್ರಾ ಪ್ಯಾಕೇಟುಗಳು ಸಿಕ್ಕಿದ್ದು ಇವುಗಳನ್ನು ತನ್ನ ಅಂಗಡಿಯ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳವಕಾಶ ಮಾಡಿಕೊಟ್ಟ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು  ಅಂಗಡಿಯ  ಮಾಲೀಕ  ಹನುಮಪ್ಪ ಬಿನ್ ಲೇಟ್ ಯರ್ರಪ್ಪ ರವರನ್ನು  ಕೇಳಿದಾಗ ತನ್ನ ಬಳಿ ಯಾವುದೇ ಪರವಾನಗಿ  ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 17-40 ಗಂಟೆಯಿಂದ 18-30 ಗಂಟೆಯವರೆವಿಗೆ ಅಂಗಡಿಯ ಬಳಿ ಮಹಜರ್ ಕ್ರಮವನ್ನು ಜರುಗಿಸಿ ಮೇಲ್ಕಂಡ ಸ್ಥಳದಲ್ಲಿ ದೊರೆತ 10 ಟೆಟ್ರಾ ಪ್ಯಾಕೇಟುಗಳನ್ನ್ ಲೋಟಗಳನ್ನು ಅಂಗಡಿಯ ಮಾಲೀಕ  ಹನುಮಪ್ಪನನ್ನು  ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

13. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ. 77/2021 ಕಲಂ. 379 ಐಪಿಸಿ :-

  ದಿನಾಂಕ:06-07-2021 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿ ಅಮರಾವತಿ ಕೋಂ ನಾರಾಯಣಸ್ವಾಮಿ, ವೆಂಕಟೇನಹಳ್ಳಿ ಗ್ರಾಮ, ದೇವನಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ನನ್ನ ಗಂಡನಾದ ನಾರಾಯಣಸ್ವಾಮಿ ಯವರನ್ನು ಶಿಡ್ಲಘಟಡ್ಟ ನಗರದ ಸರ್ಕಾದಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ದಿನಾಂಕ-05.07.2021 ರಂದು ಮಧ್ಯಾಹ್ನ ಸುಮಾರು 12.00 ಗಂಟೆ ಸಮಯದಲ್ಲಿ ಆಸ್ಪತ್ರೆಯ DCHC ವಾರ್ಡಿನಲ್ಲಿ ನಮ್ಮ ಗಂಡನ ಶುಶ್ರೂಷೆ ಮಾಡುವ ಸಮಯದಲ್ಲಿ ಮಂಚದ ಮೇಲಿದ್ದ ಸುಮಾರು 23,000/- ರೂ ಬೆಲೆಯ OPPO ಕಂಪನಿಯ ಮೊಬೈಲ್ ಸಂಖ್ಯೆ-9686155199 ನ್ನು ಕಳವು ಮಾಡಿರುತ್ತಾನೆ. ಕಳವು ಮಾಡಿರುವ ಹುಡುಗ 15-20 ವರ್ಷದ ಹುಡುಗ ಕಳ್ಳತನ ಮಾಡಿಕೊಂಡು ಓಡಿ ಹೋಗಿರುತ್ತಾನೆ. ನಾವು ಹಿಂಬಾಲಿಸಿದರೂ ಸಿಕ್ಕಿರುವುದಿಲ್ಲ ಆದ್ದರಿಂದ ಆ ಹುಡುಗನನ್ನು ಪತ್ತೆ ಮಾಡಿ ನಮ್ಮ ಮೊಬೈಲ್ ಪೋನ್ ಹುಡುಕಿಕೊಟ್ಟು ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 06-07-2021 07:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080