ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.42/2021 ಕಲಂ. 379 ಐ.ಪಿ.ಸಿ :-

     ದಿನಾಂಕ-05/06/2021 ರಂದು ಪಿರ್ಯಾದಿದಾರರಾದ ಶ್ರೀ ರಾಜಣ್ಣ ಹೆಚ್.ಜಿ ಬಿನ್ ಗಂಗಾಧರಪ್ಪ 35 ವರ್ಷ,ವಕ್ಕಲಿಗರು,ಆಟೋ ಚಾಲಕ ವೃತ್ತಿ,ವಾರ್ಡ್ ನಂ-01 ರೇಷ್ಮೇಗೂಡು ಮಾರುಕಟ್ಟೆ ರಸ್ತೆ,ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೆನೆಂದರೆ ತಾನು ಅಟೋ ಚಾಲನೆ ಮಾಡಿಕೊಂಡು ತನ್ನ ಕುಟುಂಬವನ್ನು ಪೋಷಣೆ ಮಾಡಿಕೊಂಡು ಜೀವನ ನಡೆಸುತ್ತಿರುತ್ತೇನೆ. ತನ್ನ ಸ್ವಂತ ಊರು ಹೆಗ್ಗನಹಳ್ಳಿ ಗ್ರಾಮ ಮಂಚೇನಹಳ್ಳಿ ಹೋಬಳಿ ಗೌರಿಬಿದನೂರು ತಾಲ್ಲೂಕು. ತಾನು ಅಂಗವಿಕಲನಾಗಿದ್ದು ಕೈಯಲ್ಲಿ ಕೆಲಸ ಮಾಡಲು ಸಾದ್ಯವಾಗದ ಕಾರಣ ತನ್ನ ಸಂಸಾರವನ್ನು ಸುಮಾರು 8 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಬಂದು ಬಾಡಿಗೆ ಮನೆಯನ್ನು ಮಾಡಿಕೊಂಡು ಮೂರು ಚಕ್ರದ ವಾಹನವನ್ನು ಚಾಲನೆ ಮಾಡಿಕೊಂಡು ದುಡಿಯುತ್ತಿದ್ದು ಬಳಿಕ ತಾನು 2002 ನೇ ಇಸವಿಯ ಮೂರು ಚಕ್ರದ ಆಟೋವನ್ನು ಸ್ವಂತ ದುಡಿಮೆಗಾಗಿ ಕೆಎ-03-ಸಿ-1866 ನಂಬರ್ ನ ಬಜಾಜ್ ಕಂಪನಿಯ 2 ಸ್ಟೋಕ್ ಮೂರು ಚಕ್ರದ ಆಟೋ ವಾಹನವನ್ನು 2015 ನೇ ಇಸವಿಯಲ್ಲಿ 30.000/- ರೂಗಳಿಗೆ ಖರೀದಿಸಿರುತ್ತೇನೆ, ಅಂದಿನಿಂದ ತಾನು ಅಟೋ ಚಾಲನೆಮಾಡಿಕೊಂಡು ದುಡಿದು ರಾತ್ರಿ ವೇಳೆ ನಮ್ಮ ಮನೆಯ ಮುಂದೆ ರಸ್ತೆಯಲ್ಲಿ ನಿಲ್ಲಿಸುತ್ತಿದ್ದು ಇತ್ತಿಚೆಗೆ ಲಾಕ್ ಡೌನ್ ಇದ್ದ ಕಾರಣ ಸುಮಾರು 1 ತಿಂಗಳನಿಂದ ಆಟೋವನ್ನು ನಮ್ಮ ಮನೆಯ ಮುಂದೆ ನಿಲ್ಲಿಸಿದ್ದು ದಿನಾಂಕ:01/06/2021 ರಂದು ರಾತ್ರಿ ಎಂದಿನಂತೆ ರಾತ್ರಿ ಸುಮಾರು 9-30 ಗಂಟೆಗೆ ಉಟ ಮಾಡಿಕೊಂಡು ಮನೆಯ ಮುಂದೆ ವಾಕ್ ಮಾಡುತ್ತಿದ್ದ ಸಮಯದಲ್ಲಿ ಮನೆಯ ಮುಂದೆ ಆಟೋ ಅಲ್ಲೆಯಿದ್ದು ನಂತರ ದಿನಾಂಕ:02/06/2021 ರಂದು ಬೆಳಗ್ಗೆ ಸುಮಾರು 6-00 ಗಂಟೆಗೆ ಎದ್ದು ಮನೆಯ ಮುಂದೆ ನೋಡಲಾಗಿ ನನ್ನ ಮೂರು ಚಕ್ರ ಆಟೋ ವಾಹನ ಇರುವುದಿಲ್ಲ ಇದರ ಚಾಸ್ಸಿ ನಂ:24FBJG46407 ಇದರ ಇಂಜಿನ್ ಸಂಖ್ಯೆ:AEMBJG56034 ಆಗಿದ್ದು, ಸದರಿ ವಾಹನವನ್ನು ತಾನು ತನ್ನ ಮನೆಯ ಸುತ್ತಮುತ್ತ ಸ್ನೇಹಿತರು, ಪರಿಚಯಸ್ಥರು ಸಂಬಂಧಿಕರು ತನಗೆ ಗೊತ್ತಿರುವ ಎಲ್ಲ ಕಡೆಗಳಲ್ಲಿ ಹುಡುಕಿದರೂ ಸಹ ತನ್ನ ಮೂರು ಚಕ್ರ ಆಟೋ ವಾಹನ ಪತ್ತೆಯಾಗಿರುವುದಿಲ್ಲ ಅದ್ದರಿಂದ ಈ ದಿನ ದಿನಾಂಕ 05/06/2021 ರಂದು ತಡವಾಗಿ ಠಾಣೆಗೆ ಬಂದು  ತನ್ನ ಬಜಾಜ್ ಕಂಪನಿಯ 2 ಸ್ಟೋಕ್ ಮೂರು ಚಕ್ರದ ಆಟೋವನ್ನು ಮತ್ತು ಕಳುವು ಮಾಡಿರುವ ಅರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ  ದೂರಿನ ಮೇರೆಗೆ ಈ ಪ್ರ,ವ,ವರದಿ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.43/2021 ಕಲಂ. 420,506,34 ಐ.ಪಿ.ಸಿ :-

     ದಿನಾಂಕ:05-06-2021 ರಂದು ಸಂಜೆ 6-30 ಗಂಟೆಯಲ್ಲಿ ಈ ಕೇಸಿನ ಪಿರ್ಯಾಧಿಯಾದ ಶ್ರೀಮತಿ ಕೆ.ಅರ್ ವಸಂತಾ ರವರು ಠಾಣೆಗೆ ಹಾಜರಾಗಿಕೊಟ್ಟ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ಚಿಕ್ಕಬಳ್ಳಾಪುರ ನಗರದ  ಕೆ. ನರೇಶ್  ಬಿನ್ ಸಾರಾಯಿ ಕೃಷ್ಣಪ್ಪ  ಹಾಗೂ ಅವರ ತಂದೆ ಕೃಷ್ಣಪ್ಪ ಎಂಬುವವರು  2019 ನೇ ಸಾಲಿನಲ್ಲಿ ತಾನು ಪ್ರತಿವರ್ಷ ‘’ಮಾತೃಶ್ರೀ ಬೆನಿಫಿಟ್ ಸ್ಕೀಂ(ಪಟಾಕಿ ಚೀಟಿ)ಯನ್ನು ನಡೆಸುತ್ತಿರುತ್ತೇನೆ. ನೀವು ಚೀಟಿಯನ್ನು ಹಾಕುವಂತೆ ಹಾಗೂ  ನೀವು 20 ಚೀಟಿಗಳನ್ನು ಪರಿಚಯ ಮಾಡಿಕೊಟ್ಟರೆ 1 ಚೀಟಿ ಉಚಿತವಾಗಿ ಕೊಡುವುದಾಗಿ  ಅಮಿಷ ನೀಡಿದ್ದ 1) ಒಂದು ಚೀಟಿಗೆ 6000/-  ಗಳ ಚೀಟಿಗೆ ಪ್ರತಿ ತಿಂಗಳು 500/- ರೂನಂತೆ 12 ತಿಂಗಳು ಕಟ್ಟಿದರೆ 6500/- ಪಟಾಕಿ ಬಾಕ್ಸ್ + ಸ್ಟೀಲ್ ಗಿಪ್ಟ್+ 20 ಗ್ರಾಂ ತೂಕದ ಬೆಳ್ಳಿದೀಪಗಳು ನೀಡಿವುದಾಗಿ. 2) ಒಂದು ಚೀಟಿ 3600 ಗಳ ಚೀಟಿಗೆ ಪ್ರತಿ ತಿಂಗಳು 300 ರೂ ನಂತೆ  12 ತಿಂಗಳು ಕಟ್ಟಿದರೆ 3600/- ರೂ ಹಾಗೂ ಪಟಾಕಿ ಬಾಕ್ಸ್ ಹಾಗೂ ಸ್ಟೀಲ್ ಗಿಪ್ಟ್ ನೀಡುವುದಾಗಿ. ಹಾಗೂ 3.  ಯುಗಾದಿ ಚೀಟಿ 300 ರೂ ನಂತೆ 12 ತಿಂಗಳು 3600/-ರೂಗಳಾಗಿದ್ದು ಅದಕ್ಕೆ ಪ್ರತಿ ಚೀಟಿಧಾರರಿಗೆ  ರೆಷನ್ +ಸ್ಟೀಲ್ ಗಿಪ್ಟ್+ 20 ಗ್ರಾಂ ನ ಬೆಳ್ಳಿ ದೀಪ ಸ್ಥಂಭಗಳನ್ನು ನೀಡುವುದಾಗಿ  ನಂಬಿಸಿದ್ದ  ಅದರಂತೆ ನನ್ನ ಮುಂದಾಳತ್ವದಲ್ಲಿ  6000/- ರೂಗಳ 65 ಚೀಟಿಗಳು, 3600/- ರೂಗಳ  9 ಚೀಟಿಗಳು, 100/- 1 ಚೀಟಿ, 150/- 1 ಚೀಟಿ, 17 ಯುಗಾದಿ ಹಬ್ಬದ ಚೀಟಿ ಸೇರಿ ಸುಮಾರು 93 ಚೀಟಿದಾರರನ್ನು ಸೇರಿಸಿರುತ್ತೇನೆ ಚೀಟಿಗಳಿಂದ ರೂ 453900/-( ರೂ ನಾಲ್ಕು ಲಕ್ಷದ ಐವತ್ತಮೂರು ಸಾವಿರದ ಒಂಬತ್ತು ನೂರು) ರೂ ಗಳನ್ನು  ಸಾರ್ವಜನಿಕರಿಂದ ಕಟ್ಟಿಸಿಕೊಂಡು  ಅವರಿಂದ ಹಣವನ್ನು ಸಂಗ್ರಹಿಸಿಕೊಂಡು  ನರೇಶ ಎಂಬುವವನು  ಸಾರ್ವಜನಿಕರಿಗೆ ಕಟ್ಟಿರುವ ಹಣ ಹಾಗೂ ಬಹುಮಾನವನ್ನು  ನೀಡದೆ ಪರಾರಿಯಾಗಿದ್ದು ನಂತರ ತಾನು ಸಾರ್ವಜನಿಕರನ್ನು ಅರೋಪಿ ನರೇಶ ಹಾಗೂ ಅವರ ತಂದೆ ಸಾರಾಯಿ ಕೃಷ್ಣಪ್ಪ ರವರಿಗೆ ಪರಿಚಯಿಸಿದ್ದರಿಂದ ಸಾರ್ವಜನಿಕರು ತನ್ನ ಮನೆಯ ಬಳಿ ಬಂದು  ಗಲಾಟೆ ಮಾಡುತ್ತಿದ್ದರಿಂದ  ತನ್ನ ಒಡವೆಗಳನ್ನು  ಅಡವಿಟ್ಟು ಎಲ್ಲರ ಸಾಲಗಳನ್ನು ತೀರಿಸಿರುತ್ತೇನೆ ಒಟ್ಟು 4,82,000/- ರೂ. ಗಳಾಗಿದ್ದು  ಪರಾರಿಯಾಗಿದ್ದ ನರೇಶನು ವಾಪಸ್ಸು ಬಂದಿದ್ದು ಅವನನ್ನು  ಮತ್ತು ಅವರ ತಂದೆ ಸಾರಾಯಿ ಕೃಷ್ಣಪ್ಪ ರವರನ್ನು ಸದರಿ ಪಟಾಕಿ ಚೀಟಿ ಹಣ ಮತ್ತು ಸಾರ್ವಜನಿಕರಿಗೆ ತಿಳಿಸಿದಂತೆ ಬಹುಮಾನದ ಹಣವನ್ನು  ನೀಡುವಂತೆ   ಕೇಳಲಾಗಿ ಹಣವನ್ನು ನೀಡದೆ ತನ್ನ ಮನೆಯ ಬಳಿ ಬಂದರೆ ದೊಣ್ಣೆಗಳಿಂದ ಹೊಡೆದು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುವುದಾಗಿ  ಕೊಟ್ಟ ದೂರಿನ ಮೇರಗೆ ಪ್ರ.ವ.ವರದಿ.

 

3. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.100/2021 ಕಲಂ. 454,457,380 ಐ.ಪಿ.ಸಿ :-

     ದಿನಾಂಕ: 06/06/2021 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರಾದ ಮನ್ಸೂರ್ ಪಾಷ ಬಿನ್ ಲೇಟ್ ಚಾಂದ್ ಪಾಷ , 40 ವರ್ಷ, ಮುಸ್ಲಿಂರು, ವ್ಯಾಪಾರ, ಚೌಡರೆಡ್ಡಿಪಾಳ್ಯ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ಬಡಾವಾಣೆಯಲ್ಲಿ ವಾಸವಾಗಿರುವ ನಮ್ಮ ಚಿಕ್ಕಪ್ಪ ಅಬ್ದುಲ್ ಸುಬಾನ್ ರವರಿಗೆ ಕೋವಿಡ್-19 ಪಾಜಟೀವ್ ಬಂದಿದ್ದರಿಂದ ಚಿಕಿತ್ಸೆ ಸಲುವಾಗಿ ಬೆಂಗಳೂರು ಲೈಫ್ ಕೇರ್ ಆಸ್ಪತ್ರೆಯಲ್ಲಿ ಸೇರಿಸಿದ್ದು, ಅವರಿಗೆ ತುಂಬಾ ಸಿರಿಯಸ್ ಆಗಿದ್ದರಿಂದ ಅವರನ್ನು ನೋಡಿಕೊಳ್ಳುವ ಸಲುವಾಗಿ ದಿನಾಂಕ:01/06/2021 ರಂದು ಬೆಳಿಗ್ಗೆ ನಾನು ಕುಟುಂಬ ಸಮೇತ ಮನೆಗೆ ಬಾಗಿಲು ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದೇವು. ಈ ದಿನ ದಿನಾಂಕ:06/06/2021 ರಂದು ಬೆಳಿಗ್ಗೆ 06-00 ಗಂಟೆ ಸಮಯದಲ್ಲಿ ನಮ್ಮ ಮನೆಯ ಮುಂದೆ ವಾಸವಿರುವ ವೆಂಕಟೇಶ್ ರವರು ನನಗೆ ಪೋನ್ ಮಾಡಿ ಯಾರೋ ನಿಮ್ಮ ಮನೆಯ ಬಾಗಿಲು ಕಿತ್ತುಹಾಕಿರುವುದಾಗಿ ತಿಳಿಸಿದ್ದು, ನಾನು ಕೂಡಲೇ ಚಿಂತಾಮಣಿಗೆ ಬಂದು ಮನೆಯಲ್ಲಿ ನೋಡಲಾಗಿ ಯಾರು ಕಳ್ಳರು ನಾವು ಇಲ್ಲದ ಸಮಯದಲ್ಲಿ ನಮ್ಮ ಮನೆಯ ಮುಂದಿನ ಬಾಗಿಲನ್ನು ಯಾವುದೋ ಆಯುಧದಿಂದ ಕಿತ್ತುಹಾಕಿ ಮನೆಯೊಳಗೆ ಹೋಗಿ ಬೀರುವಿನಲ್ಲಿಟ್ಟಿದ್ದ 60,000 ನಗದು ಹಣ ಹಾಗು ಬಂಗಾರದ ಒಡವೆಗಳು 15 ಗ್ರಾಂ ತೂಕದ ಒಂದು ಕತ್ತಿನ ಚೈನು, ಎರಡು ಉಂಗುರ 10 ಗ್ರಾಂ, ಚಿಕ್ಕಮಕ್ಕಳ 4 ಉಂಗುರಗಳು, ಸುಮಾರು 6,000 ರೂ, 4 ಜೊತೆ ಬೆಳ್ಳಿ ಕಾಲು ಚೈನುಗಳು ಸುಮಾರು 10,000 ರೂಗಳು. ಒಟ್ಟು ಬಂಗಾರದ ಒಡವೆಗಳ ಬೆಲೆ ಸುಮಾರು 86,000 ರೂಗಳಾಗಿರುತ್ತೆ. ದಿನಾಂಕ:04/05/2021 ರಿಂದ ದಿನಾಂಕ:05/06/2021 ರ ಒಳಗೆ ಹಗಲು ಅಥವಾ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬೀಗ ಕಿತ್ತುಹಾಕಿ ಮನೆಯ ಬೀರುವಿನಲ್ಲಿ ಇಟ್ಟಿದ್ದ ನಗದು ಹಣ ಮತ್ತು ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ನಮ್ಮ ಮನೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು  ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.101/2021 ಕಲಂ. 457,380 ಐ.ಪಿ.ಸಿ :-

     ದಿನಾಂಕ 0606/2021 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿದಾರರಾದ ಸೈಯದ್ ಆಶ್ವಕ್ ಪಾಷ  ಬಿನ್ ಸೈಯದ್ ಆಪಸರ್ ಪಾಷ 20 ವರ್ಷ, ಮುಸ್ಲಿಂ ಜನಾಂಗ ವಿದ್ಯಾರ್ಥಿ, ವಾಸ ಎಸ್ ಆರ್ ಕೆ ಗಾರ್ಡನ್, 1 ನೇ ಕ್ರಾಸ್ ಜಯನಗರ ಬೆಂಗಳೂರು ರವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ  ನಾನು ಈಗ್ಗೆ 2 ತಿಂಗಳ ಹಿಂದೆ ನಮ್ಮ ತಾತನ ಮನೆಯಾದ ಚಿಂತಾಮಣಿ ನಗರದ ಚೌಡರೆಡ್ಡಿ ಪಾಳ್ಯದ ಚಾಂದ್ ಪಾಷ ರವರ ಮನೆಗೆ ಬಂದಿದ್ದು ಸ್ವಲ್ಪ ದಿನಗಳ ಕಾಲ ನಮ್ಮ ತಾತನ ತಮ್ಮ ಅಬ್ದುಲ್ ಸುಬಾನ್ ರವರಿಗೆ ಮತ್ತು  ನಮ್ಮ ಮಾವ ಪಾರೂಕ್ ರವರಿಗೆ ಕೊರೋನಾ ಕಾಯಿಲೆ ಬಂದಿದ್ದು ಮನೆಯವರೆಲ್ಲರು ಸೇರಿ ಈಗ್ಗೆ 15 ದಿನಗಳ ಹಿಂದೆ ನಮ್ಮ ತಾತ ಮತ್ತು ನಮ್ಮ ಮಾವ ರವರನ್ನು ಚಿಕಿತ್ಸೆಗೆಂದು ಬೆಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿರುತ್ತಾರೆ. ಈ ದಿನ ದಿನಾಂಕ;06/06/2021 ರಂದು ಬೆಳಿಗ್ಗೆ ಸುಮಾರು 6.00 ಗಂಟೆ ಸಮಯದಲ್ಲಿ  ನಾನು ನಮ್ಮ ತಾತ ಚಾಂದ್ ಪಾಷ ರವರ ಮನೆಯಲ್ಲಿ ಇದ್ದಾಗ ಅಲ್ಲಿ ಅಬ್ದುಲ್ ಸುಬಾನರವರ ಮನೆಯ ಬಾಗಿಲನ್ನು ಯಾರೋ ಕಳ್ಳರು ಕಿತ್ತು ಮನೆಯಲ್ಲಿ ಬಂಗಾರದ ಮತ್ತು ಬೆಳ್ಳಿ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂತ ತಿಳಿಸಿದರು, ಕೂಡಲೇ ನಾನು ಈ ವಿಚಾರವನ್ನು ನಮ್ಮ ಮಾವ ಪಾರೂಕ್ ರವರಿಗೆ ತಿಳಿಸಿ, ಅವರಿಗೆ ಕೊರೋನಾ ಇದ್ದ ಕಾರಣ ಅವರು ಬರಲು ಸಾದ್ಯವಾಗದೇ ನಾನು ಮನೆಯೊಳಗೆ ಹೋಗಿ ನೋಡಲಾಗಿ ಮನೆಯ ರೂಂನಲ್ಲಿದ್ದ ಗಾಡ್ರೇಜ್ ಬೀರುವಿನ ಲಾಕನ್ನು ಕಳ್ಳರು ಕಿತ್ತು ಅದರಲ್ಲಿದ್ದ ಬಂಗಾರದ 30 ಗ್ರಾಂ ನಕ್ಲೇಸ್, ಬಂಗಾರದ ಮಾಂಗಟೀಲ್ 8 ಗ್ರಾಂ, ಬಂಗಾರದ ಕಿವಿ ಓಲೆ. 10 ಗ್ರಾಂ ಒಟ್ಟು 48 ಗ್ರಾಂ ಆಗಿದ್ದು , ಬೆಲೆ ಸುಮಾರು 1,50,000 ರೂಗಳು ಹಾಗೂ ಬೆಳ್ಳಿ ಕಾಲು ಚೈನು ಮತ್ತು ಬೆಳ್ಳಿಯ ಉಂಗುರಗಳು ಒಟ್ಟು 70 ಗ್ರಾಂ ಬೆಲೆ 8,000  ಆಗಿದ್ದು ಮತ್ತು  ನಗದು ಹಣ 60,000/ ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳ್ಳರು ನಿನ್ನೆ ರಾತ್ರಿ ದಿನಾಂಕ:05/06/2021 ರಂದು ಯಾವುದೋ ವೇಳೆಯಲ್ಲಿ ಮನೆಯ ಬೀಗವನ್ನು ಹೊಡೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳರು ನಮ್ಮ ತಾತನ ಮನೆಯಲ್ಲಿ ಕಳ್ಳತನ ಮಾಡಿರುವ ಬಂಗಾರದ ಮತ್ತು ಬೆಳ್ಳಿಯ ವಡವೆಗಳ ಹಾಗೂ ನಗದು ಸೇರಿ ಸುಮಾರು 2,18,000 ಬೆಲೆ ಬಾಳುವುದಾಗಿರುತ್ತೆ, ಆದ್ದರಿಂದ ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.56/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ದಿನಾಂಕ 05-06-2021 ರಂದು ಸಂಜೆ 04.30 ಗಂಟೆಗೆ ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೇನೆಂದರೆ, ಕೋವಿಡ್-19 ಪ್ರಯುಕ್ತ ಸರ್ಕಾರ ಆದೇಶ ಮತ್ತು ನಿರ್ಭಂದಗಳು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ & ಮುರಗಮಲ್ಲಾ ಗ್ರಾಮದಲ್ಲಿ ಕೋವಿಡ್-19 ರೋಗದ ಬಗ್ಗೆ ತಿಳಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಸರ್ಕಾರ   ಹೊರಡಿಸಿರುವ ಆದೇಶಗಳನ್ನು ಪಾಲಿಸಲು ಹಾಗೂ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಹಾಗೂ ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅರಿವು ಮೂಡಿಸಿರುತ್ತೇವೆ.   ಹೀಗಿರುವಾಗ ದಿನಾಂಕ:05-06-2021 ರಂದು ಮಧ್ಯಾಹ್ನ 15-45 ಗಂಟೆಯಲ್ಲಿ ಏನಿಗದಲೆ ಗ್ರಾಮದಲ್ಲಿ ಸಿಪಿಸಿ-568 ರವಿ, ಚಾಲಕನಾದ ಎಪಿಸಿ-163 ರವರೊಂದಿಗೆ ಕೆಎ-40 ಜಿ-539 ಸರ್ಕಾರಿ ವಾಹನದಲ್ಲಿ ಗಸ್ತು ಮಾಡುತ್ತಿರುವಾಗ ಒಂದು ಚಿಲ್ಲರೆ ಅಂಗಡಿ ಬಳಿ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಆದೇಶವನ್ನು ಧಿಕ್ಕರಿಸಿ ಚಿಲ್ಲರೆ ಅಂಗಡಿ ಬಾಗಿಲು ತೆಗೆದು ವ್ಯಾಪಾರ ಮಾಡುತ್ತಿದ್ದು, ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಚಿಲ್ಲರೆ ಅಂಗಡಿ ಮಾಲೀಕ  ಕೋವಿಡ್-19 ರೋಗವು ಒಬ್ಬರಿಂದ ಒಬ್ಬರಿಗೆ ಹರಡುವ ಬಗ್ಗೆ ಗೊತ್ತಿದ್ದರೂ ಕೋವಿಡ್ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತೆಯನ್ನು ವಹಿಸಿ, ಮಾಸ್ಕ್ ಧರಿಸದೇ, ನಿಯಮ ಬಾಹಿರವಾಗಿ ವ್ಯಾಪಾರ ಮಾಡುತ್ತಿದ್ದು, ಸದರಿ ಚಿಲ್ಲರೆ ಅಂಗಡಿಯಲ್ಲಿ ನಿಯಮ ಬಾಹಿರವಾಗಿ ವ್ಯಾಪಾರ ಮಾಡುತ್ತಿದ್ದ ಮಾಲೀಕನ ಹೆಸರು & ವಿಳಾಸ ಕೇಳಲಾಗಿ ರಾಮಿರೆಡ್ಡಿ ಬಿನ್ ಬೈಯ್ಯಣ್ಣ, 45 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಏನಿಗದಲೆ ಗ್ರಾಮ, ಚಿಂತಾಮಣಿ ತಾಲ್ಲೂಕು, ಎಂದು ತಿಳಿಸಿದರು. ಸದರಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕ ರಾಮಿರೆಡ್ಡಿ ರವರು ಕೋವಿಡ್-19 ರೋಗ ತಡೆಗಟ್ಟುವ ಬಗ್ಗೆ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳ ಆದೇಶಗಳನ್ನು ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಕರೋನಾ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ಚಿಲ್ಲರೆ ಅಂಗಡಿ ಓಪನ್ ಮಾಡಿ ವ್ಯಾಪಾರ ಮಾಡುತ್ತಾ ನಿರ್ಲಕ್ಷ್ಯತನ ತೋರ್ಪಡಿಸಿರುವುದು ಕಂಡುಬಂದಿರುತ್ತದೆ.  ಆದ್ದರಿಂದ ಸದರಿ ಚಿಲ್ಲರೆ ಅಂಗಡಿ ಮಾಲೀಕರಾದ ರಾಮಿರೆಡ್ಡಿ ಬಿನ್ ಬೈಯ್ಯಣ್ಣ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿ ಸಾರಾಂಶವಾಗಿರುತ್ತೆ.

 

6. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.57/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ದಿನಾಂಕ 05-06-2021 ರಂದು ಸಂಜೆ 05.45 ಗಂಟೆಗೆ ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೇನೆಂದರೆ, ಕೋವಿಡ್-19 ಪ್ರಯುಕ್ತ ಸರ್ಕಾರ ಆದೇಶ ಮತ್ತು ನಿರ್ಭಂದಗಳು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ & ಮುರಗಮಲ್ಲಾ ಗ್ರಾಮದಲ್ಲಿ ಕೋವಿಡ್-19 ರೋಗದ ಬಗ್ಗೆ ತಿಳಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಸರ್ಕಾರ   ಹೊರಡಿಸಿರುವ ಆದೇಶಗಳನ್ನು ಪಾಲಿಸಲು ಹಾಗೂ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಹಾಗೂ ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅರಿವು ಮೂಡಿಸಿರುತ್ತೇವೆ.  ಹೀಗಿರುವಾಗ ದಿನಾಂಕ:05-06-2021 ರಂದು ಸಂಜೆ  05.00 ಗಂಟೆಯಲ್ಲಿ ತಾನು ಮತ್ತು ಚಾಲಕನಾದ ಎಪಿಸಿ-163 ರವರೊಂದಿಗೆ ಕೆಎ-40 ಜಿ-539 ಸರ್ಕಾರಿ ವಾಹನದಲ್ಲಿ ಗೌಡನಹಳ್ಳಿ ಗ್ರಾಮದಲ್ಲಿ ಗಸ್ತು ಮಾಡುತ್ತಿರುವಾಗ ಒಂದು ಚಿಲ್ಲರೆ ಅಂಗಡಿ ಬಳಿ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಆದೇಶವನ್ನು ಧಿಕ್ಕರಿಸಿ ಚಿಲ್ಲರೆ ಅಂಗಡಿ ಬಾಗಿಲು ತೆಗೆದು ವ್ಯಾಪಾರ ಮಾಡುತ್ತಿದ್ದು, ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಚಿಲ್ಲರೆ ಅಂಗಡಿ ಮಾಲೀಕ  ಕೋವಿಡ್-19 ರೋಗವು ಒಬ್ಬರಿಂದ ಒಬ್ಬರಿಗೆ ಹರಡುವ ಬಗ್ಗೆ ಗೊತ್ತಿದ್ದರೂ ಕೋವಿಡ್ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತೆಯನ್ನು ವಹಿಸಿ, ಮಾಸ್ಕ್ ಧರಿಸದೇ, ನಿಯಮ ಬಾಹಿರವಾಗಿ ವ್ಯಾಪಾರ ಮಾಡುತ್ತಿದ್ದು, ಸದರಿ ಚಿಲ್ಲರೆ ಅಂಗಡಿಯಲ್ಲಿ ನಿಯಮ ಬಾಹಿರವಾಗಿ ವ್ಯಾಪಾರ ಮಾಡುತ್ತಿದ್ದ ಮಾಲೀಕನ ಹೆಸರು & ವಿಳಾಸ ಕೇಳಲಾಗಿ ದೇವರಾಜ್ ಬಿನ್ ಸುಬ್ಬಣ್ಣ 45 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಗೌಡನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, ಎಂದು ತಿಳಿಸಿದರು. ಸದರಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕ ದೇವರಾಜ್ ರವರು ಕೋವಿಡ್-19 ರೋಗ ತಡೆಗಟ್ಟುವ ಬಗ್ಗೆ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳ ಆದೇಶಗಳನ್ನು ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಕರೋನಾ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ಚಿಲ್ಲರೆ ಅಂಗಡಿ ಓಪನ್ ಮಾಡಿ ವ್ಯಾಪಾರ ಮಾಡುತ್ತಾ ನಿರ್ಲಕ್ಷ್ಯತನ ತೋರ್ಪಡಿಸಿರುವುದು ಕಂಡುಬಂದಿರುತ್ತದೆ.  ಆದ್ದರಿಂದ ಸದರಿ ಚಿಲ್ಲರೆ ಅಂಗಡಿ ಮಾಲೀಕರಾದ ದೇವರಾಜ್ ಬಿನ್ ಸುಬ್ಬಣ್ಣ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿ ಸಾರಾಂಶವಾಗಿರುತ್ತೆ.

 

7. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.91/2021 ಕಲಂ. 143,147,324,504,307,149 ಐ.ಪಿ.ಸಿ :-

     ದಿನಾಂಕ:05.06.2021 ರಂದು ಮದ್ಯಾಹ್ನ 15.45  ಗಂಟೆಗೆ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್.ಸಿ-76 ಹನುಮಂತಪ್ಪರವರು ಗಾಯಾಳು ಎನ್.ದಿನೇಶ್ ಬಿನ್ ನಾಗರಾಜ, 27 ವರ್ಷ, ಪರಿಶಿಷ್ಟ ಜಾತಿ, ಚಾಲಕ ವೃತ್ತಿ, ಗುಲಗಿಂಜಲಹಳ್ಳಿ ಗ್ರಾಮ, ಡಿ ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರ ಹೇಳಿಕೆ ದೂರಿನ ಸಾರಾಂಶವೇನೆಂದರೆ  ನಾನು ನಮ್ಮ ಗ್ರಾಮದ ನರಸಿಂಹಪ್ಪರವರ ಮನೆಯ ಬಳಿ ದಿನಾಂಕ:05/06/2021 ರಂದು ಬೆಳಗ್ಗೆ 09.00 ಗಂಟೆಯಲ್ಲಿ ಇದ್ದಾಗ ನಮ್ಮ ಗ್ರಾಮದ ನಮ್ಮ ಜನಾಂಗದ ಹರೀಶ ಬಿನ್ ಗಂಗಪ್ಪ, ನಾಗಕುಮಾರ್ ಬಿನ್ ಗಂಗಪ್ಪ, ಲಕ್ಷ್ಮಮ್ಮ ಕೋಂ ಗಂಗಪ್ಪ, ಮೀನಾಕ್ಷಿ ಬಿನ್ ಗಂಗಪ್ಪ ರವರುಗಳು ನನ್ನ ಮೇಲೆ ವಿನಾಕಾರಣ ಜಮೀನಿನ ವಿಚಾರದಲ್ಲಿ ಹಾಗೂ ಹಳೇ ದ್ವೇಷದಿಂದ ಗಲಾಟೆಯನ್ನು ಮಾಡಿ ಬೈದುಕೊಂಡು ಬಂದು ನನ್ನನ್ನು ಎಳೆದುಕೊಂಡು ಹರೀಶ ಮತ್ತು ನಾಗಕುಮಾರ್ ರವರು ತಂದಿದ್ದ ಚಾಕುವಿನಿಂದ ನನ್ನ  ತೋಳಿಗೆ, ಹೊಟ್ಟೆಗೆ, ಹಣೆಗೆ, ಮತ್ತು ಬೆನ್ನಿಗೆ ಚುಚ್ಚಿ ರಕ್ತಗಾಯಪಡಿಸಿ ನಂತರ ನಮ್ಮ ತಂದೆ ನಾಗರಾಜರವರು ಬಂದು ಏಕೆ ನನ್ನ ಮಗನ ಮೇಲೆ ಗಲಾಟೆ ಮಾಡುತ್ತಿರುವುದು ಎಂದು ಕೇಳಿದ್ದಕ್ಕೆ, ಲಕ್ಷ್ಮಮ್ಮ  ಕೋಂ ಗಂಗಪ್ಪ, ಮೀನಾಕ್ಷಿರವರುಗಳು ಕಟ್ಟಿಗೆಯಿಂದ ನನಗೆ ಬೆನ್ನಿಗೆ ಹೊಡೆದು ಗಾಯಪಡಿಸಿದರು. ನಾನು ಗಾಯಗಳ ದೆಸೆಯಿಂದ ಕೆಳಗೆ ಬಿದ್ದಾಗ ನನ್ನ ತಂದೆ ನಾಗರಾಜ ಬಿನ್ ಚಿಕ್ಕಗಂಗಪ್ಪ, 52 ವರ್ಷ ರವರು ಹಾಗೂ ನಮ್ಮ ಗ್ರಾಮದ ಗಂಗಾಧರಪ್ಪ ಬಿನ್ ಚಿಕ್ಕಗಂಗಪ್ಪರವರು ನನ್ನನ್ನು ದ್ವಿಚಕ್ರ ವಾಹನದಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿದ್ದು, ನನ್ನನ್ನು ಮತ್ತು ನನ್ನ ತಂದೆಯವರನ್ನು ವಿನಾಕಾರಣ ಗಲಾಟೆಯನ್ನು ಮಾಡಿ ಬೈದು ಕೊಲೆ ಮಾಡುವ ಉದ್ದೇಶದಿಂದ ನನ್ನನ್ನು ಚಾಕುವಿನಿಂದ ತಿವಿದವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

8. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.92/2021 ಕಲಂ. 143,147,324,504,506,149 ಐ.ಪಿ.ಸಿ :-

     ದಿನಾಂಕ:05.06.2021 ರಂದು ಮದ್ಯಾಹ್ನ  16.00 ಗಂಟೆಗೆ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್.ಸಿ-76 ಹನುಮಂತಪ್ಪರವರು ಗಾಯಾಳು ಕುಮಾರಿ ಮೀನಾಕ್ಷಿ ಬಿನ್ ಗಂಗಪ್ಪ, 22  ವರ್ಷ, ಪರಿಶಿಷ್ಟ ಜಾತಿ, ಜಿರಾಯ್ತಿ, ಗುಲಗಿಂಜಲಹಳ್ಳಿ ಗ್ರಾಮ, ಡಿ ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರ ಹೇಳಿಕೆ ದೂರಿನ ಸಾರಾಂಶವೇನೆಂದರೆ  ನಾನು ದಿನಾಂಕ:05/06/2021 ರಂದು ಮನೆಯಲ್ಲಿ ಇದ್ದಾಗ ಊರಿನಲ್ಲಿ ಗಲಾಟೆಯಾಗುತ್ತಿರುವ ಶಬ್ದವನ್ನು ಕೇಳಿ ನಮ್ಮ ಗ್ರಾಮದ ನರಸಿಂಹಪ್ಪರವರ ಮನೆಯ ಬಳಿ ಹೋದಾಗ ಬೆಳಗ್ಗೆ 09.00 ಗಂಟೆಯ ಸಮಯದಲ್ಲಿ ನನ್ನ ತಮ್ಮ ನಾಗಕುಮಾರ್ ರವರನ್ನು ನಮ್ಮ ಗ್ರಾಮದ ನಮ್ಮ ಜನಾಂಗದ ದಿನೇಶ್ ಬಿನ್ ನಾಗರಾಜು, ನಾಗರಾಜು ಬಿನ್ ಚಿಕ್ಕ ಗಂಗಪ್ಪ, ಗಂಗಾದರಪ್ಪ ಬಿನ್ ಚಿಕ್ಕಗಂಗಪ್ಪ, ರಾಜೇಶ್ ಬಿನ್ ನಾಗರಾಜ, ಆದಿನಾರಾಯಣ ಬಿನ್ ಗಂಗಾಧರಪ್ಪ, ಎಂಜಾರಮ್ಮ ಕೋಂ ನಾಗರಾಜರವರುಗಳು ಸೇರಿಕೊಂಡು ಕಟ್ಟಿಗೆಯಲ್ಲಿ ಹೊಡೆಯುತ್ತಿದ್ದರು, ನಾನು ನನ್ನ ತಮ್ಮನನ್ನು ಬಿಡಿಸಲು ಹೋದಾಗ ನನ್ನನ್ನು ಬೈದು ನಿನ್ನನ್ನು ಸಾಯಿಸುತ್ತೇವೆಂತ ಪ್ರಾಣ ಬೆದರಿಕೆ ಹಾಕಿ ದಿನೇಶ್ ರವರು ಚಾಕುವಿನಿಂದ ನನ್ನ ಬಲಕೈಗೆ ಹೊಡೆದು ಗಾಯಪಡಿಸಿದ ನಂತರ ನಾಗರಾಜುರವರು ಕಟ್ಟಿಗೆಯಿಂದ ಹೊಡೆದು ರಕ್ತಗಾಯಪಡಿಸಿದ. ಗಲಾಟೆಯನ್ನು ನೋಡಿ ಅಲ್ಲಿಗೆ ಬಂದ ನಮ್ಮ ತಂದೆ ಗಂಗಪ್ಪ ಬಿನ್ ನಾಗಪ್ಪ, 50 ವರ್ಷರವರು ನನ್ನನ್ನು ಮತ್ತು ನನ್ನ ತಮ್ಮನನ್ನು ಬಿಡಿಸಲು ಬಂದಾಗ ನಮಗೂ ಸಹ ಪ್ರಾಣ ಬೆದರಿಕೆಯನ್ನು ಹಾಕಿ ನಾಗರಾಜರವರು ಒಂದು ಕಲ್ಲಿನಂದ ಹೊಡೆದು ಗಾಯ ಪಡಿಸಿದರು. ನಂತರ ಅಲ್ಲಿಗೆ ಬಂದ ನಮ್ಮ ಚಿಕ್ಕಪ್ಪ ಕಂಬಪ್ಪ ಬಿನ್ ಚಿಕ್ಕಗಂಗಪ್ಪರವರು ಗಲಾಟೆಯನ್ನು ಬಿಡಿಸಿ ಗಾಯಾಳುವಾದ ನಾನು ಮತ್ತು ನಮ್ಮ ತಂದೆ ಚಿಕಿತ್ಸೆಗಾಗಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ದ್ವಿಚಕ್ರವಾಹನದಲ್ಲಿ ಬಂದು ದಾಖಲಾಗಿರುತ್ತೇವೆ. ನಮ್ಮಗಳನ್ನು ಗುಂಪು ಕಟ್ಟಿಕೊಂಡು ಹಳೇ ದ್ವೇಷದಿಂದ ಬಂದು ಹೊಡೆದು, ಬೈದು ಪ್ರಾಣ ಬೆದರಿಕೆಯನ್ನು ಹಾಕಿದವರ  ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.180/2021 ಕಲಂ. 143,147,148,323,324,307,504,506,114,149 ಐ.ಪಿ.ಸಿ :-

     ದಿನಾಂಕ: 04-05-2021 ರಂದು ಸಂಜೆ 6-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ ಪ್ರಭಾಕರ ಡಿ ಬಿನ್ ದೊಡ್ಡಕಾಮಿರೆಡ್ಡಿ, 40 ವರ್ಷ, ವಕ್ಕಲಿಗರು, ಜಿರಾಯ್ತಿ, ಅಪ್ಪೇಗೌಡನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಅವರ ಅಣ್ಣನಾದ ರಾಜಣ್ಣ ರವರ ಮುಖಾಂತರ ಕಳುಹಿಸಿಕೊಟ್ಟಿದ್ದ ದೂರಿನ ಸಾರಾಂಶಂವೇನೆಂದರೆ, ಸರ್ವೆ ನಂ. 267 (ಹಳೆ ನಂ. 236) ರ ಜಮೀನಿಗೆ ಸಂಬಂಧಿಸಿದಂತೆ ಚಿಕ್ಕಕಾಮರೆಡ್ಡಿ ಕುಟುಂಬಕ್ಕೂ ಮತ್ತು ನಮ್ಮ ಕುಟುಂಬದ ಮದ್ಯೆ ಮಾನ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವ್ಯಾಜ್ಯ ಮುಂದುವರೆಯುತ್ತಿದ್ದು ಸರ್ವೆ ನಂ. 267 ನಮ್ಮ ಜಮೀನಾಗಿದ್ದು ಈ ಜಮೀನಿನ ಜೊತೆಗೆ ಸರ್ವೆ ನಂ. 268 ನ್ನು ಸೇರಿಸಿ ಈ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ಈ ಜಮೀನನ್ನು ಚಿಕ್ಕಕಾಮಿರೆಡ್ಡಿ ರವರು ತಮ್ಮ ಇಬ್ಬರು ಪತ್ನಿಯರಿಗೆ ಅಕ್ರಮವಾಗಿ ಸಾಗುವಳಿ ಮುಖಾಂತರ ಮಂಜೂರು ಮಾಡಿಸಿರುತ್ತಾರೆ. ಇದರ ವಿರುದ್ದ ನಾವು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ಹೂಡಿ ಆರ್.ಎ. ನಂ. 28/2020-21 ರಂತೆ ಪ್ರಕರಣ ದಾಖಲಿಸಿ ತಡೆಯಾಜ್ಞೆ ತಂದಿರುತ್ತೇವೆ. ಇದನ್ನೆ ಅವರು ಮನಸ್ಸಿನಲ್ಲಿ ಇಟ್ಟುಕೊಂಡು ಯಾವಾಗಲೂ ನಮ್ಮನ್ನು ಕೆಟ್ಟ ಪದಗಳಿಂದ ಬೈದುಕೊಳ್ಳುವುದು, ನಿಂದಿಸುವುದು, ಬೆದರಿಕೆ ಹಾಕುವುದು ಹಾಗೂ ಸಮಯ ಸಿಕ್ಕಾಗೆಲ್ಲಾ ನಮ್ಮ ಮೇಲೆ ಸುಮಾರು ಬಾರಿ ಗಲಾಟೆ ಮಾಡಿರುತ್ತಾರೆ. ಇಂದು ನಾನು ಮತ್ತು ನಮ್ಮ ಅಣ್ಣನಾದ ರಾಜಣ್ಣ ರವರು ದ್ರಾಕ್ಷಿ ಚಪ್ಪರಕ್ಕೆ ಔಷದಿ ಸಿಂಪರಣೆ ಮಾಡುತ್ತಿದ್ದಾಗ ಬೆಳಿಗ್ಗೆ ಸುಮಾರು 9.30 ಗಂಟೆಗೆ ವೆಂಕಟೇಶಬಾಬು ಬಿನ್ ಚಿಕ್ಕಕಾಮಿರೆಡ್ಡಿ, ಪ್ರಸನ್ನಕುಮಾರ್ ಬಿನ್ ಚಿಕ್ಕಕಾಮಿರೆಡ್ಡಿ, ಲೀಲಾವತಿ ಕೋಂ ಚಿಕ್ಕಕಾಮಿರೆಡ್ಡಿ, ಚಿಕ್ಕಕಾಮಿರೆಡ್ಡಿ ಬಿನ್ ಪಿಳ್ಳಪ್ಪ ಹಾಗೂ ಸಂದ್ಯಾವತಿ ಕೋಂ ಚಿಕ್ಕಕಾಮಿರೆಡ್ಡಿ ರವರು ಗಲಾಟೆ ಮಾಡುವ ಉದ್ದೇಶದಿಂದಲೆ ಕಳೆ ನಾಶ ಮತ್ತು ಗಿಡಗಳನ್ನು ಕೀಳುತ್ತಿದ್ದರು ವೆಂಕಟೇಶ ಬಾಬು ಮತ್ತು ಪ್ರಸನ್ನಕುಮಾರ್ ರವರು ಅವರ ತೋಟದಲ್ಲಿ ಕಿತ್ತ ಗಿಡಗಳನ್ನು ನಮ್ಮ ತೋಟದಲ್ಲಿ ತಂದು ಹಾಕುತ್ತಿದ್ದರು. ಅದನ್ನು ಕೇಳಿದ್ದಕ್ಕೆ ನಮ್ಮನ್ನು ಅವಾಚ್ಯ ಶಬ್ದಳಿಂದ ಬೈದು ನಾನಾ ರೀತಿ ನಿಂದಿಸಿ ಇವತ್ತು ನಿಮ್ಮನ್ನು ಸಾಯಿಸಿ ಬಿಡುತ್ತೇವೆ ಎಂದು ಕೊಲೆ ಮಾಡುವ ಉದ್ದೇಶದಿಂದ ಮಾರಾಕಾಸ್ತ್ರಗಳಾದ ಕುಡುಗೋಲಿನಿಂದ ವೆಂಕಟೇಶ ಬಾಬು ಎಂಬುವನು ನನ್ನ ತಲೆಗೆ ಬಲವಾಗಿ ಹೊಡೆದು ತೀವ್ರಗಾಯಗಳನ್ನು ಉಂಟು ಮಾಡಿರುತ್ತಾನೆ ಹಾಗೂ ಕಾಲಿನಿಂದ ಎದೆ, ಹೊಟ್ಟೆ ಮತ್ತು ಪಕ್ಕೆಲುಬುಗಳಿಗೆ ಒದ್ದು ತೀವ್ರ ನೋವುಂಟುಮಾಡಿದ್ದಾನೆ. ಅದೇ ಸಮಯದಲ್ಲಿ ಪ್ರಸನ್ನಕುಮಾರ್ ಎಂಬುವನು ದೊಣ್ಣೆಯಿಂದ ನನ್ನ ಮೇಲೆ ಹಲ್ಲೆ ಮಾಡಿರುತ್ತಾರೆ ಹಾಗೂ ಕಾಲಿನಿಂದ ದೇಹದ ನಾನಾ ಭಾಗಗಳಿಗೆ ಒದ್ದಿರುತ್ತೇನೆ. ಪ್ರಸನ್ನ ಕುಮಾರ್ ಎಂಬುವನು ನನ್ನ ಅಣ್ಣನಾದ ರಾಜಣ್ಣ ಎಂಬುವನಿಗೆ ದೊಣ್ಣೆಯಿಂದ ಹೊಡೆದಿರುತ್ತಾನೆ ಮತ್ತು ಕಾಲಿನಿಂದ ಒದ್ದಿರುತ್ತಾನೆ. ಈ ಘಟನೆ ನಡೆಯುತ್ತಿದ್ದಾಗ ಲೀಲಾವತಿ, ಸಂದ್ಯಾವತಿ ಮತ್ತು ಚಿಕ್ಕಕಾಮಿರೆಡ್ಡಿ ಎಂಬುವರು ಇವರಿಗೆ ಇನ್ನೂ ಹೊಡೆಯುವಂತೆ ಪ್ರಚೋದನೆ ಮಾಡುತ್ತಿರುತ್ತಾರೆ. ಇವರಿಬ್ಬರ ಹಲ್ಲೆಯಿಂದ ಮತ್ತು ರಕ್ತಸ್ರಾವದಿಂದ ಬಳಲುತ್ತಿದ್ದ ನನ್ನನ್ನು ಸರ್ಕಾರಿ ಆಸ್ಪತ್ರೆ ಶಿಡ್ಲಘಟ್ಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಲ್ಲಿಗೆ ಬಂದ ವೆಂಕಟೇಶ ಬಾಬು ಎಂಬುವನು ನಾನು ಲಾಯರ್ ಆಗಿದ್ದೀನಿ, ನನ್ನನ್ನು ಯಾರೇ ಆಗಲಿ ಯಾವ ಪೊಲೀಸ್ ಕೂಡ ಏನೂ ಮಾಡಲು ಆಗಲ ಎಂದು ಹೇಳಿ ಇನ್ನು ಮುಂದೆ ನಿಮ್ಮ ಮೇಲೆ ಗಲಾಟೆ ಮಾಡುವುದಾಗಿ ವರ್ಷಕ್ಕೊಂದು ಕೇಸ್ ಹಾಕುವುದಾಗಿ ದಮ್ಕಿ ಹಾಕಿರುತ್ತಾನೆ ಹಾಗೂ ಕಂಪ್ಲೇಂಟ್ ಕೊಡಲು ಪೊಲಿಸ್ ಸ್ಟೇಷನ್ ಹತ್ತಿರ ಹೋದಾಗ ಅಲ್ಲಿ ಕೂಡ ಮೇಲಿನಂತೆ ದಮ್ಕಿ ಹಾಕಿರುತ್ತಾನೆ ಮತ್ತು ಮಾರಣಾಂತಿಕ ಹಲ್ಲೆ ಹಾಗೂ ಜೀವಬೆದರಿಕೆ ಹಾಕಿರುತ್ತಾನೆಂದು ಮೇಲ್ಕಂಡವರ ಮೇಲೆ ಕ್ರಮ ಕೈಗೊಂಡು ರಕ್ಷಣೆ ನೀಡಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 180/2021 ಕಲಂ 143, 148, 149, 323, 324, 307, 504, 506, 114 ರ/ಜೊ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ.

 

10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.181/2021 ಕಲಂ. 143,147,148,307,323,324,504,506,149 ಐ.ಪಿ.ಸಿ :-

     ದಿನಾಂಕ: 04-05-2021 ರಂದು ರಾತ್ರಿ 9-00 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಲೀಲಾವತಿ ಕೋಂ ಚಿಕ್ಕಕಾಮರೆಡ್ಡಿ, 52 ವರ್ಷ, ವಕ್ಕಲಿಗರು, ಜಿರಾಯ್ತಿ, ಅಪ್ಪೇಗೌಡನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶಂವೇನೆಂದರೆ, ತಮಗೂ ಮತ್ತು ತನ್ನ ಭಾವನಾದ ದೊಡ್ಡಕಾಮಿರೆಡ್ಡಿ ರವರಿಗೂ ಸುಮಾರು 20 ವರ್ಷಗಳಿಂದ ಜಮೀನಿಗೆ ಸಂಬಂಧಿಸಿದಂತೆ ವಿವಾದವಿದ್ದು, ಈಗ್ಗೆ 8 ತಿಂಗಳ ಹಿಂದೆಯು ಸಹ ಗಲಾಟೆಗಳು ಆಗಿರುತ್ತದೆ. ಹೀಗಿರುವಾಗ ಈ ದಿನ ದಿನಾಂಕ: 05-06-2021 ರಂದು ಬೆಳಿಗ್ಗೆ ಸುಮಾರು 9-00 ಗಂಟೆ ಸಮಯದಲ್ಲಿ ತಾನು ತಮ್ಮ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದಾಗ ದೊಡ್ಡಕಾಮಿರೆಡ್ಡಿ ರವರ ಮಗನಾದ ಪ್ರಭಾಕರ್ ಮತ್ತು ಅವರ ಅಣ್ಣ ಮುನಿರಾಜು @ ರಾಜಣ್ಣ ಎಂಬುವರು ಅವರ ತೋಟದಲ್ಲಿನ ಕಸವನ್ನು ನಮ್ಮ ಜಮೀನಿನಲ್ಲಿ ಎಸೆಯುತ್ತಿದ್ದನು, ಆಗ ತಾನು ಇದನ್ನು ಪ್ರಶ್ನಿಸಿದ್ದಕ್ಕೆ ಇಬ್ಬರು ಸಹ ತನಗೆ ಕೆಟ್ಟ ಕೆಟ್ಟ ಮಾತುಗಳಿಂದ ಬೈದಿರುತ್ತಾರೆ. ಆ ಸಮಯದಲ್ಲಿ ಜಮೀನಿನ ಬಳಿಯೇ ಇದ್ದ ತನ್ನ ಮಕ್ಕಳಾದ ಪ್ರಸನ್ನ ಕುಮಾರ್ ಮತ್ತು ವೆಂಕಟೇಶ್ ಬಾಬು ರವರು ಬಂದು ತನ್ನ ತಾಯಿಯವರ ಮೇಲೆ ಯಾಕೇ ಗಲಾಟೆ ಯನ್ನು ಮಾಡುತ್ತಿದ್ದೀರಾ ಎಂದು ಕೇಳಿದ್ದಕ್ಕೆ ದೊಡ್ಡಕಾಮರೆಡ್ಡಿ ಬಿನ್ ಪಿಳ್ಳಪ್ಪ, ರತ್ನಮ್ಮ ಕೋಂ ದೊಡ್ಡಕಾಮರೆಡ್ಡಿ, ಮುನಿರಾಜು @ ರಾಜಣ್ಣ ಬಿನ್ ದೊಡ್ಡಕಾಮರೆಡ್ಡಿ, ಪ್ರಭಾಕರ್ ಬಿನ್ ದೊಡ್ಡಕಾಮರೆಡ್ಡಿ, ಮಮತಾ ಕೋಂ ಪ್ರಭಾಕರ್ ರವರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಕಬ್ಬಿಣದ ಸಲಾಕೆ ಹಾಗು ಇತರೆ ಆಯುಧಗಳನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ತಮ್ಮ ಬಳಿ ಬಂದು ತಮ್ಮ ಮೇಲೆ ಹಳೇ ದ್ವೇಷದ ಹಿನ್ನಲೆಯಲ್ಲಿ ನಮಗೆ ಕೆಟ್ಟ ಕೆಟ್ಟ ಮಾತುಗಳಿಂದ ಬೈದು, ಗಲಾಟೆಯನ್ನು ತೆಗೆದು ಆ ಪೈಕಿ ರಾಜಣ್ಣ ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ನಮ್ಮನ್ನು ಸಾಯಿಸುವ ಉದ್ದೇಶದಿಂದ ತನ್ನ ಮಗನ ತಲೆಗೆ ಹೊಡೆದಾಗ ತನ್ನ ಮಗ ಅವರಿಂದ ತಪ್ಪಿಸಿಕೊಂಡಿದ್ದು, ಆಗ ಪ್ರಭಾಕರ್ ರವರು ತನ್ನ ಕೈಯಲ್ಲಿದ್ದ ಕಬ್ಬಿಣದ ಸಲಾಕೆಯಿಂದ ತನ್ನ ಮಗ ವೆಂಕಟೇಶ್ ಬಾಬು ರವರ ಬಲ ಮೊಣಕಾಲಿನ ಕೆಳಭಾಗದಲ್ಲಿ ಹೊಡೆದು ಗಾಯವನ್ನುಂಟು ಮಾಡಿದಾಗ, ರಾಜಣ್ಣ ರವರು ದೊಣ್ಣೆಯಿಂದ ತನ್ನ ಮಗ ಪ್ರಸನ್ನ ಕುಮಾರ್ ರವರ ಬಲ ಕಾಲಿನ ಹಿಮ್ಮಡಿಯ ಬಳಿ ಹೊಡೆದು ಗಾಯವನ್ನುಂಟು ಮಾಡಿದಾಗ, ರತ್ನಮ್ಮ ರವರು ಕಲ್ಲಿನಿಂದ ವೆಂಕಟೇಶ್ ಬಾಬು ರವರ ಎಡ ಕಿವಿಯ ಹಿಂಭಾಗದಲ್ಲಿ ಹೊಡೆದು ರಕ್ತಗಾಯವನ್ನುಂಟು ಮಾಡಿದಾಗ ಮುನಿರಾಜು ರವರು ಇಬ್ಬರಿಗೂ ಸಹ ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದಾಗ ನಾನು ಜಗಳವನ್ನು ಬಿಡಿಸಲು ಅಡ್ಡ ಹೋದಾಗ ಮಮತಾ ರವರು ನನ್ನ ತಲೆಯ ಕೂದಲನ್ನು ಹಿಡಿದು ಎಳೆದಾಡಿ ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿ, ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸಿ ಇದೇ ಜಮೀನಿನಲ್ಲಿ ಹೂತಿ ಬಿಡುವುದಾಗಿ ಪ್ರಾಣ ಬೆದರಿಕೆಯನ್ನು ಹಾಕಿ ಜಗಳವನ್ನು ಮಾಡುತ್ತಿದ್ದಾಗ ನಮ್ಮ ರಸ್ತೆಯಲ್ಲಿ ಹೋಗುತ್ತಿದ್ದ ನಮ್ಮ ಗ್ರಾಮದ ವಾಸಿ ವಿಜಯರಾಘವ ರೆಡ್ಡಿ ಬಿನ್ ಪಿಳ್ಳೇಗೌಡ, ಚಿಕ್ಕ ವೆಂಕಟಪ್ಪ ಬಿನ್ ಮುನಿಯಪ್ಪ ರವರು ಅಡ್ಡ ಬಂದು ಜಗಳವನ್ನು ಬಿಡಿಸಿದ್ದು, ನಂತರ ತನ್ನ ಮಕ್ಕಳು ಶಿಡ್ಲಘಟ್ಟ ಸಕರ್ಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಯನ್ನು ಪಡೆಸಿಕೊಂಡಿದ್ದು, ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 181/2021 ಕಲಂ 143, 147, 148, 307, 323, 324, 504, 506 ರ/ಜೊ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ.

 

11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.182/2021 ಕಲಂ. 279,304(A) ಐ.ಪಿ.ಸಿ & 187 INDIAN MOTOR VEHICLES ACT :-

     ದಿನಾಂಕ: 06-06-2021 ರಂದು ಬೆಳಿಗ್ಗೆ 9.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಭೀಮರಾಜ್ ಜಿ ಬಿನ್ ರಾಮಾಂಜನೇಯಲು ಜಿ., 35 ವರ್ಷ, ಗೊಲ್ಲರು, ವಾಸ: ವೈ.ಹುಣಸೇನಹಳ್ಳಿ ಸ್ಟೇಷನ್, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆ ರಾಮಾಂಜನೇಯಲು ಮತ್ತು ನಮ್ಮ ತಾಯಿ ಶ್ರೀಮತಿ ರಮಾದೇವಿ ರವರಿಗೆ 1ನೇ ಅಶೋಕ್ ಕುಮಾರ್ ಆದ ನಮ್ಮ ಅಣ್ಣ, 2ನೇ ನಮ್ಮ ಅಕ್ಕ ಭಾರತಿ, 3ನೇ ನಮ್ಮ ಅಕ್ಕ ಅನುರಾಧ, 4ನೇ ಭೀಮರಾಜ್ ಆದ ನಾನು ಮತ್ತು 5ನೇ ತನ್ನ ತಮ್ಮ ಗಿರೀಶ್ ಕುಮಾರ್ ರವರಾಗಿರುತ್ತೇವೆ. ತನ್ನನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಮದುವೆಗಳಾಗಿದ್ದು ಎಲ್ಲರೂ ಬೇರೆ ಬೇರೆ ವಾಸವಾಗಿರುತ್ತೇವೆ. ತನ್ನ ತಮ್ಮನಾದ ಗಿರೀಶ್ ಕುಮಾರ್ ರವರಿಗೆ ಸುಮಾರು 33 ವರ್ಷ ವಯಸ್ಸಾಗಿದ್ದು ಅನಂತಪುರ ಜಿಲ್ಲೆ, ಪಾಮಿಡಿ ತಾಲ್ಲೂಕು ಕನ್ನಂಪಲ್ಲಿ ಗ್ರಾಮದ ವೆಂಕಟಸ್ವಾಮಿ ರವರ ಮಗಳಾದ ರಮಾದೇವಿ ಎಂಬಾಕೆಯೊಂದಿಗೆ ಮದುವೆಯಾಗಿದ್ದು, ಮದುವೆಯಾದ ನಂತರ ತನ್ನ ತಮ್ಮ ಬೆಂಗಳೂರಿನಲ್ಲಿ ಸೆಕ್ಯುರಿಟಿ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದನು. ಅವರಿಗೆ 1ನೇ ಸಂತೋಷ್ ಎಂಬ ಗಂಡು ಮಗನಿದ್ದು ತನ್ನ ತಮ್ಮನ ಹೆಂಡತಿ ರಮಾದೇವಿ ರವರು 2ನೇ ಮಗುವಿನ ಹೆರಿಗೆಯ ಸಲುವಾಗಿ ಆಕೆಯ ತವರು ಮನೆಗೆ ಹೋಗಿದ್ದು, 3 ತಿಂಗಳ ಒಂದು ಹೆಣ್ಣು ಮಗು ಇರುತ್ತೆ. 2021 ನೇ ಮಾಚರ್್ ತಿಂಗಳಿನಲ್ಲಿ ಲಾಕ್ಡೌನ್ ಆದ ಕಾರಣ ಬೆಂಗಳೂರಿನಲ್ಲಿ ವಾಸವಾಗಿದ್ದ ತನ್ನ ತಮ್ಮ ಗಿರೀಶ್ ಕುಮಾರ್ ರವರು ವೈ.ಹುಣಸೇನಹಳ್ಳಿ ಸ್ಟೇಷನ್ ನಲ್ಲಿರುವ ನಮ್ಮ ಮನೆಗೆ ಬಂದು ನಮ್ಮ ಜೊತೆಯಲ್ಲಿಯೇ ವಾಸವಾಗಿದ್ದನು. ಹೀಗಿದ್ದು ದಿನಾಂಕ: 05-06-2021 ರಂದು ಸಂಜೆ ಸುಮಾರು 7.30 ಗಂಟೆಯಲ್ಲಿ ತನ್ನ ತಮ್ಮ ಗಿರೀಶ್ ಕುಮಾರ್ ರವರು ವೈ.ಹುಣಸೇನಹಳ್ಳಿ ಸ್ಟೇಷನ್ ಬಳಿ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ಸಂಜೆ ಸುಮಾರು 7.45 ಗಂಟೆಯಲ್ಲಿ ನಮ್ಮ ಏರಿಯದಲ್ಲಿ ವಾಸವಿರುವ ಮಂಜುನಾಥ ಬಿನ್ ಲೇಟ್ ಆಂಜಿನಪ್ಪ ರವರು ತನಗೆ ಪೋನ್ ಮಾಡಿ ವೈ.ಹುಣಸೇನಹಳ್ಳಿ ಸ್ಟೇಷನ್ ಸಮೀಪದ ಕೆನರಾ ಬ್ಯಾಂಕ್ ಮುಂಭಾಗದ ರಸ್ತೆಯಲ್ಲಿ ಯಾವುದೋ ದ್ವಿಚಕ್ರ ವಾಹನವನ್ನು ಅದರ ಚಾಲಕನು ಶಿಡ್ಲಘಟ್ಟ ಕಡೆಯಿಂದ ಚಿಂತಾಮಣಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗಿರಿಶ್ ಕುಮಾರ್ ರವರಿಗೆ ಡಿಕ್ಕಿ ಹೊಡೆಸಿ ಅಪಘಾತವನ್ನು ಉಂಟುಮಾಡಿ ದ್ವಿಚಕ್ರ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿರುತ್ತಾನೆಂದು ಹೇಳಿದ್ದು ಕೂಡಲೇ ತಾನು ಹಾಗೂ ನಮ್ಮ ಅಣ್ಣನಾದ ಅಶೋಕ್ ಕುಮಾರ್ ರವರು ಸ್ಥಳಕ್ಕೆ ಬಂದು ನೋಡಿದ್ದು ತನ್ನ ತಮ್ಮನಿಗೆ ನಾಲಿಗೆ ಮತ್ತು ತಲೆಯ ಹಿಂಭಾಗ ಹಾಗೂ ಇತರೆ ಕಡೆ ಗಾಯಗಳಾಗಿದ್ದು ಗಾಯಗೊಂಡಿದ್ದ ತನ್ನ ತಮ್ಮನಿಗೆ ಉಪಚರಿಸಿ ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಪಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿದ್ದು ರಾತ್ರಿ 9.40 ರಲ್ಲಿ ತನ್ನ ತಮ್ಮ ಗಿರೀಶ್ ಕುಮಾರ್ ರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ರಸ್ತೆ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತನ್ನ ತಮ್ಮ ಗಿರೀಶ್ ಕುಮಾರ್ ರವರಿಗೆ ಯಾವುದೋ ಅಪರಿಚಿತ ದ್ವಿಚಕ್ರ ವಾಹನದ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ತ್ನ ತಮ್ಮ ಗಿರೀಶ್ ಕುಮಾರ್ ರವರು ಗಾಯಗೊಂಡಿದ್ದು, ಗಾಯಾಳುವನ್ನು ಉಪಚರಿಸಿ ಚಿಕಿತ್ಸೆಯ ಸಲುವಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆ ಮತ್ತು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಸುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಅಪಘಾತವನ್ನು ಉಂಟುಮಾಡಿದ ದ್ವಿಚಕ್ರ ವಾಹನ ಮತ್ತು ಸವಾರನನ್ನು ಪತ್ತೆ ಮಾಡಿ ಕಾನೂನು ಕ್ರಮ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 182/2021 ಕಲಂ 279, 304(ಎ) ಐಪಿಸಿ ರ/ಜೊ 187 ಐಎಂವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 06-06-2021 04:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080