ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.122/2021 ಕಲಂ. 143,147,148,323,324,353,448,504,506,149 ಐ.ಪಿ.ಸಿ :-

  ದಿನಾಂಕ: 05/05/2021 ರಂದು ಪಿರ್ಯಾದಿದಾರರಾದ ಶ್ರೀ ಗಂಗಾಧರಪ್ಪ ಬಿನ್ ಗಂಗಪ್ಪ, 42 ವರ್ಷ, ಆದಿಕರ್ನಾಟಕ ಜನಾಂಗ, ವಾಟರ್ ಮ್ಯಾನ್ ಕೆಲಸ, ವಾಸ ಘಂಟಂವಾರಿಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ಮೊಬೈಲ್ ನಂ.9449365314.ನಾನು ಬಾಗೇಪಲ್ಲಿ ತಾಲ್ಲೂಕು ಘಂಟಂವಾರಿಪಲ್ಲಿ ಗ್ರಾಮ ಪಂಚಾಯ್ತಿಯಲ್ಲಿ ವಾಟರ್ ಮ್ಯಾನ್ ಕೆಲಸ ಮಾಡಿಕೊಂಡಿರುತ್ತೇನೆ. ನಮ್ಮ ಗ್ರಾಮದ ಸಾರ್ವಜನಿಕ ಕೊಳಾಯಿಯನ್ನು ಒಂದು ತಿಂಗಳ ಹಿಂದೆ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ಆದೇಶದ ಮೇರೆಗೆ ಗೆದುಹಾಕಿರುತ್ತೇನೆ. ಈ ವಿಚಾರವಾಗಿ ದಿನಾಂಕ; 04.05.2021 ರಂದು ಸಂಜೆ 4-00 ಗಂಟೆಯ ಸಮಯದಲ್ಲಿ ನಾನು ನಮ್ಮ ಗ್ರಾಮದಲ್ಲಿ ಮನೆಗಳಿಗೆ ನೀರು ಬಿಟ್ಟು ನಮ್ಮ ಮನೆಯ ಬಳಿ ಬಂದಾಗ ನಮ್ಮ ಗ್ರಾಮದ ನಮ್ಮ ಜನಾಂಗದವರೇ ಆದ ನರಸಿಂಹಮೂರ್ತಿ ಬಿನ್ ನರಸಿಂಹಪ್ಪ, 42 ವರ್ಷ, ಲಕ್ಷ್ಮೀನರಸಮ್ಮ ಕೋಂ ನರಸಿಂಹಮೂರ್ತಿ, 38 ವರ್ಷ, ಮಂಜು ಬಿನ್ ನರಸಿಂಹಮೂರ್ತಿ, 21 ವರ್ಷ, ಅರುಣ್ ಬಿನ್ ನರಸಿಂಹಮೂರ್ತಿ, 19 ವರ್ಷ, ಗಣೇಶ ಬಿನ್ ನರಸಿಂಹಪ್ಪ, 32 ವರ್ಷ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆ ಮತ್ತು ಇಟ್ಟಿಗೆಯನ್ನು ಹಿಡಿದುಕೊಂಡು ಏಕಾಏಕಿ ನಮ್ಮ ಮನೆಯ ಬಳಿ ಬಂದು ನನ್ನನ್ನು ಕುರಿತು ಏಕೆ ಸಾರ್ವಜನಿಕ ಕೊಳಾಯಿಯನ್ನು ಕಿತ್ತುಹಾಕಿರುವುದು ಲೋಫರ್ ನನ್ನ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ನಾನು ನೀರಿನ ಕೊಳಾಯಿಯ  ವಿಚಾರ ಏನಾದರೂ ಇದ್ದರೆ ಪಂಚಾಯ್ತಿಯಲ್ಲಿ ಬಂದು ಪಿ.ಡಿ.ಓ ರವರನ್ನು ಮಾತನಾಡು ಎಂದು ಹೇಳುತ್ತಿದ್ದಂತೆ ನರಸಿಂಹಮೂರ್ತಿ ರವರು ದೊಣ್ಣೆಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ನೋವುಂಟು ಮಾಡಿರುತ್ತಾನೆ, ಲಕ್ಷ್ಮೀನರಸಮ್ಮ ರವರು ಇಟ್ಟಿಗೆಯಿಂದ ನನ್ನ ಎಡಕಣ್ಣಿನ ಬಳಿ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾಳೆ, ನನ್ನನ್ನು ಬಿಡಿಸಲು ಅಡ್ಡ ಬಂದ ನನ್ನ ಮಗ ಗಣೇಶ ರವರಿಗೆ ಮಂಜು ಬಿನ್ ನರಸಿಂಹಮೂರ್ತಿ ರವರು ದೊಣ್ಣೆಯಿಂದ ತಲೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ, ಅಷ್ಟರಲ್ಲಿ ನಮ್ಮ ತಾಯಿ ನಂಜಮ್ಮ ರವರು ಬಂದು ನನ್ನನ್ನು ಮತ್ತು ನನ್ನ ಮಗನನ್ನು ಮನೆಯೊಳಗೆ ಕಳುಹಿಸಿ ಬಾಗಿಲು ಹಾಕಿರುತ್ತಾರೆ. ನಂತರ ಅರುಣ್ ಬಿನ್ ನರಸಿಂಹಮೂರ್ತಿ, ಗಣೇಶ ಬಿನ್ ನರಸಿಂಹಪ್ಪ, ಮಂಜು ಬಿನ್ ನರಸಿಂಹಮೂರ್ತಿ ರವರುಗಳು ಏಕಾಏಕಿ ಬಾಗಿಲನ್ನು ಹೊಡೆದು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ನನ್ನನ್ನು ಮತ್ತು ನನ್ನ ಮಗ ಗಣೇಶನನ್ನು ಹಿಡಿದುಕೊಂಡು ಎಳೆದಾಡಿ ಕೈಗಳಿಂದ ಮೈಮೇಲೆ ಹೊಡೆದು ನೋವುಂಟು ಮಾಡಿರುತ್ತಾನೆ,  ಗಣೇಶ ಬಿನ್ ನರಸಿಂಹಪ್ಪ ನನ್ನ್ನ ಕುತ್ತಿಗೆ ಪಟ್ಟಿಯನ್ನು ಹಿಡಿದು ಎಳೆದಾಡಿ ಕೈಗಳಿಂದ ಬೆನ್ನಿನ ಮೇಲೆ ಹೊಡೆದು ನೋವುಂಟು ಮಾಡಿರುತ್ತಾನೆ. ನಂತರ ಮಂಜು ಇಟ್ಟಿಗೆಯಿಂದ ನನ್ನ ಎಡತಲೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ, ಮೇಲ್ಕಂಡವರೆಲ್ಲಾ ಸೇರಿಕೊಂಡು ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿ ಹೊರಟು ಹೋಗಿರುತ್ತಾರೆ. ನಂತರ ಗಾಯಗೊಂಡ ನನ್ನನ್ನು ಮತ್ತು ನನ್ನ ಮಗ ಗಣೇಶ ರವರನ್ನು ನಮ್ಮ ಪಕ್ಕದ ಮನೆಯ ವಾಸಿ ಹರೀಶ ಬಿನ್ ರಾಜು ರವರು ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ಆದ್ದರಿಂದ ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆ ಮತ್ತು ಇಟ್ಟಿಗೆಯನ್ನು ತೆಗೆದುಕೊಂಡು ಬಂದು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ನನ್ನನ್ನು ಮತ್ತು ನನ್ನ ಮಗ ಗಣೇಶ ರವರನ್ನು ಹೊಡೆದು ರಕ್ತಗಾಯವನ್ನುಂಟು ಮಾಡಿ ಪ್ರಾಣ ಬೆದರಿಕೆಯನ್ನು ಹಾಕಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿರುವ ಮೇಲ್ಕಂಡವರ ವಿರುದ್ದ ಕಾನೂನಿನ ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.123/2021 ಕಲಂ. 78(3) ಕೆ.ಪಿ ಆಕ್ಟ್ :-

  ದಿನಾಂಕ: 05/05/2021 ರಂದು ಸಂಜೆ 4-30 ಗಂಟೆಗೆ ನ್ಯಾಯಾಲಯದ ಪಿಸಿ-235 ರವರು ಠಾಣೆಗೆ ಹಾಜರಾಗಿ ನ್ಯಾಯಾಲಯದ ಆದೇಶದ ಪ್ರತಿಯನ್ನು ಸಾದರು ಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ:04-05-2021 ರಂದು ರಾತ್ರಿ 8-10 ಗಂಟೆ ಸಮಯದಲ್ಲಿ ಶ್ರೀ.ರಾಜು ಸಿ.ಪಿ.ಐ ಬಾಗೇಪಲ್ಲಿ ವೃತ್ತರವರು ಆಸಾಮಿ ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ, ಈ ದಿನ  ದಿ:04-05-2021 ರಂದು ಸಂಜೆ 6:30 ಗಂಟೆಯಲ್ಲಿ ಗಂಟೆಯ ಸಮಯದಲ್ಲಿ ನಾನು ಕಛೇರಿಯಲ್ಲಿದ್ದಾಗ, ಬಾಗೇಪಲ್ಲಿ ತಾಲ್ಲೂಕು ಗಡಿದಂ ಬಸ್ ನಿಲ್ದಾಣದ ಚಿಂತಾಮಣಿ ಬಾಗೇಪಲ್ಲಿ  ರಸ್ತೆಯಲ್ಲಿ  ಯಾರೋ ಒಬ್ಬ ಆಸಾಮಿ ಮಟ್ಕಾ ಜೂಜಾಟವಾಡುತ್ತಿರುವುದಾಗಿ  ಬಂದ ಮಾಹಿತಿ ಮೇರೆಗೆ  ಸಿಬ್ಬಂದಿಗಳಾದ ಹೆಚ್.ಸಿ 156 ನಟರಾಜ, ಪಿ.ಸಿ-214 ಅಶೋಕ, ಮತ್ತು ಪಿ.ಸಿ 276 ಸಾಗರ ಮತ್ತು ಜೀಪ್ ಚಾಲಕ ನರಸಿಂಹಮೂರ್ತಿ ಎ.ಪಿ.ಸಿ 110 ರವರೊಂದಿಗೆ ಬಾಗೇಪಲ್ಲಿ  ಪುರದ ಡಿ.ವಿ.ಜಿ ರಸ್ತೆಯಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಸರ್ಕಾರಿ ಜೀಫ್ ಸಂಖ್ಯೆ ಕೆಎ-40 ಜಿ-6399 ವಾಹನದಲ್ಲಿ  ಮೇಲ್ಕಂಡ ಸ್ಥಳಕ್ಕೆ  ಸಂಜೆ 7:00  ಗಂಟೆಗೆ ಹೋಗಿ, ಸ್ವಲ್ಪ  ದೂರದಲ್ಲಿ ಚಿಂತಾಮಣಿ ಬಾಗೇಪಲ್ಲಿ ರಸ್ತೆಯ ಮರೆಯಲ್ಲಿ ಜೀಫ್ ನ್ನು ನಿಲ್ಲಿಸಿ ಸದರಿ ಸ್ಥಳಕ್ಕೆ  ಪಂಚರೊಂದಿಗೆ  ಮತ್ತು ಸಿಬ್ಬಂದಿಯೊಂದಿಗೆ ನಡೆದುಕೊಂಡು  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ,  ಯಾರೋ ಒಬ್ಬ ಆಸಾಮಿ  ರಸ್ತೆಯಲ್ಲಿ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ ಒಂದು ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ  ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ ನಾಗಾರ್ಜುನ ಬಿನ್ ನರಸಿಂಹಪ್ಪ, 43 ವರ್ಷ, ಬಲಜಿಗರು, ಡ್ರೈವರ್, ದೇವರಗುಡಿಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ  ಎಂತ ತಿಳಿಸಿದ್ದು ಆಸಾಮಿಯ ಅಂಗಶೋಧನೆ ಮಾಡಲಾಗಿ   ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ನು,  2810/-  ರೂ.ಹಣ ಮತ್ತು VIVO ಕಂಪನಿಯ ಒಂದು ಸ್ಕ್ರೀನ್ ಟಚ್ ಮೊಬೈಲ್ ಇದ್ದು,   ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣವೆಂದು ತಿಳಿಸಿರುತ್ತಾನೆ. ಸದರಿ ಆಸಾಮಿಗೆ  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ.  ಸಂಜೆ 6:45 ಗಂಟೆಯಿಂದ 7:55  ಗಂಟೆಯವರೆಗೆ ವಿದ್ಯುತ್ ದೀಪದ ಬೆಳಕಿನಲ್ಲಿ ಪಂಚನಾಮೆಯನ್ನು ಜರುಗಿಸಿ, ಅಸಲು ಪಂಚನಾಮೆ,  ಮಾಲು ಮತ್ತು ಆಸಾಮಿಯೊಂದಿಗೆಮುಂದಿನ ಕ್ರಮಕ್ಕಾಗಿ  ಠಾಣೆಯಲ್ಲಿ ಹಾಜರು ಪಡಿಸಿ ನೀಡಿದ ದೂರನ್ನು ಪಡೆದು ಠಾಣಾ ಎನ್ ಸಿ ಆರ್ ನಂಬರ್ 107-2021 ರಂತೆ ದಾಖಲಿಸಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 05-05-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.66/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:  05/05/2021 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ಟಿ ಎನ್ ಪಾಪಣ್ಣ ಆದ ನಾನು  ಮದ್ಯಾಹ್ನ 15-00 ಗಂಟೆಯಲ್ಲಿ  ಸಮಯದಲ್ಲಿ  ಠಾಣೆಯ ಸರಹದ್ದಿನ ಪೆದ್ದೂರು ಗ್ರಾಮದಲ್ಲಿ ಕರೋನ ಮಹಾಮಾರಿ ಸಾಂಕ್ರಾಮಿಕ ಖಾಯಿಲೆಯ ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಗಸ್ತಿನಲ್ಲಿದ್ದಾಗ ನನಗೆ  ಪೆದ್ದೂರು ಗ್ರಾಮದ ವಾಸಿ ಎನ್ ವೆಂಕಟರವಣ ಬಿನ್  ಲೇಟ್ ದೋಬಿ ನಾರೆಪ್ಪ ರವರು ಆತನ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಠಾಣೆಯ ಜೀಪ್ ಚಾಲಕ ಎಪಿಸಿ-65 ವೆಂಕಟೇಶ್ ಮತ್ತು ಹೆಚ್ ಸಿ 36 ವಿಜಯ್ ಕುಮಾರ್ ರವರುಗಳನ್ನು  ಕೆರೆದುಕೊಂಡು   ಪೆದ್ದೂರು ಗ್ರಾಮದಲ್ಲಿ   ಪಂಚರನ್ನು ಕರೆದುಕೊಂಡು  ಮದ್ಯಾಹ್ನ 15-30 ಗಂಟೆಗೆ ಎನ್ ವೆಂಕಟರವಣ ಬಿನ್  ಲೇಟ್ ದೋಬಿ ನಾರೆಪ್ಪ ರವರ ಅಂಗಡಿಯ  ಬಳಿಗೆ ಹೋಗಿ ನೋಡಲಾಗಿ ಅಂಗಡಿಯ   ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ  ಎನ್ ವೆಂಕಟರವಣ ಬಿನ್  ಲೇಟ್ ದೋಬಿ ನಾರೆಪ್ಪ, 44 ವರ್ಷ,ದೋಬಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:  ಪೆದ್ದೂರು  ಗ್ರಾಮ, ಚಿಂತಾಮಣಿ ತಾಲ್ಲೂಕು. ಮೊ ನಂ: 8971999956 ಎಂದು ತಿಳಿಸಿದ್ದು, ಈತನು  ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಗಿಯನ್ನು ಹೊಂದಿದ್ದಾನೇಯೇ ಎಂಬುದರ  ಬಗ್ಗೆ ವಿಚಾರಿಸಲಾಗಿ  ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಮದ್ಯಾಹ್ನ 15-45 00 ಗಂಟೆಯಿಂದ ಮಧ್ಯಾಹ್ನ 16-45 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 1 ಲೀಟರ್ 260 ಎಂ.ಎಲ್ ನ 743.61 ರೂಗಳ ಬೆಲೆ ಬಾಳುವ ಬ್ಯಾಗ್ ಪೈಪರ್ ವಿಸ್ಕಿ  180 ಎಂ.ಎಲ್ ನ 7 ಟೆಟ್ರಾ ಪ್ಯಾಕೇಟ್ ಗಳು,( 1 ಪಾಕೆಟ್ ಬೆಲೆ 106.23 ರೂಗಳು) ಮತ್ತು ಬ್ಯಾಗ್ ಪೈಪರ್ ವಿಸ್ಕಿ  180 ಎಂ.ಎಲ್ ನ 2 ಖಾಲಿ ಟೆಟ್ರಾ ಪಾಕೇಟ್ ಗಳು, ಮತ್ತು 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೋಂಡು ಠಾಣೆಗೆ  ಮದ್ಯಾಹ್ನ  17-30 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:66/2020 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

4. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.69/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005:-

  ಘನ ನ್ಯಾಯಾಲಯದ ಕರ್ತವ್ಯ ನಿರ್ವಹಿಸುತ್ತಿರುವ ಚೇತನ್ ನಿಂಗಾರೆಡ್ಡಿ ಪಿಸಿ-367 ರವರು ಎನ್.ಸಿ.ಆರ್ ನಂ-57/2021 ಪ್ರತಿಯ ಮೇರೆಗೆ ಪ್ರ ವ ವರದಿಯನ್ನು ದಾಖಲಿಸಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಹಾಜರುಪಡಿಸಿದ ಪ್ರತಿಯ ಸಾರಾಂಶವೆನಂದರೆ ದಿನಾಂಕ 05/05/2021 ರಂದು ಬೆಳಗ್ಗೆ 10.30 ಗಂಟೆಗೆ ಪಿ ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ  ಜ್ಷಾಪನ ದ ಸಾರಾಂಶವೇನೆಂದರೆ, ತಾನು ಈ ದಿನ   ದಿನಾಂಕ: 05/05/2021 ರಂದು ಬೆಳಿಗ್ಗೆ  ಠಾಣೆಯ ಸಿಬ್ಬಂದಿಯಾದ  ಸರ್ವೇಶ, ಸಿಪಿಸಿ-426 ಜೀಪ್ ಚಾಲಕ ಆಂಜೀನಪ್ಪ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ನಂಬರ್ ಕೆಎ-40-ಜಿ-3699  ರಲ್ಲಿ ನಗರ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಿಕೊಂಡು ಇದೇ ದಿನ  ಬೆಳಿಗ್ಗೆ 09-45  ಗಂಟೆ ಸಮಯದಲ್ಲಿ ಎಂ.ಜಿ.ರಸ್ತೆಯ ಕಡೆ ಗಸ್ತು ಮಾಡುತ್ತಿದ್ದಾಗ ಎಂ.ಜಿ ರಸ್ತೆಯಲ್ಲಿರುವ ಶ್ರೀ ಸಾಯಿ ಗಣೇಶ್  ಪ್ರಾವಿಜನ್ ಸ್ಟೋರಿನ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು  ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ಸದರಿ ಅಂಗಡಿ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ಸುರೇಂದ್ರ ಬಿನ್ ಕೆ ಬಿ ವೆಂಕಟೇಶ ಶೆಟ್ಟಿ 43 ವೈಶ್ಯರು, ಶ್ರೀಗಣೇಶ ಪ್ರಾವಿಜನ್ ಸ್ಟೋರಿನ ಮಾಲಿಕರು ವಾಸ ಎನ್ ಆರ್.ಬಡಾವಣೆ.  ಚಿಂತಾಮಣಿ ನಗರ. ಮೊ: 9964179393. ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರೀಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಸದರಿ ಪ್ರಾವಿಜನ್ ಸ್ಟೋರಿನ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸದ್ದರ ಮೇರೆಗೆ ಠಾಣಾ ಎನ್ ಸಿ ಆರ್  ನಂಬರ್ 57/2021 ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದ ನಂತರ ಪ್ರ ವ ವರದಿಯನ್ನು ದಾಖಲಿಸಿರುತ್ತೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.110/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ 06/05/2021 ರಂದು ಬೆಳಿಗ್ಗೆ 11-00ಗಂಟೆಗೆ ಗೌರೀಬಿದನೂರುಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಸಿ-129 ರಾಮಚಂದ್ರ ರವರು ಠಾಣೆಗೆ ಹಾಜರಾಗಿ ಸಾದರಪಡಿಸಿ  ನ್ಯಾಯಾಲಯದ ಅನುಮತಿಯ ಸಾರಾಂಶವೇನೆಂದರೆ ,  ದಿನಾಂಕ: 13/04/2021  ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ  ಗೌರಿಬಿದನೂರು ತಾಲ್ಲೂಕು ಹೊಸೂರು  ಹೋಬಳಿ, ರಂಗಪ್ಪನಪಾಳ್ಯ ಗ್ರಾಮದಲ್ಲಿ  ಕೆರೆಯ ಅಂಗಳದಲ್ಲಿ   ಯಾರೋ ಆಸಾಮಿಗಳು  ಹಣವನ್ನು ಪಣವಾಗಿಟ್ಟು ಇಸ್ಪೀಟ್  ಎಲೆಗಳಿಂದ  ಅಕ್ರಮ ಜೂಜಾಟವನ್ನು  ಆಡುತ್ತಿದ್ದಾರೆಂದು  ಖಚಿತವಾದ ಮಾಹಿತಿ ಬಂದ ಮೇರೆಗೆ  ನಾನು ಮತ್ತು ಪ್ರೊಬೆಷನರಿ ಸಬ್ ಇನ್ಸೆಪೆಕ್ಟರ್ ಮುತ್ತರಾಜು .ಕೆ  ಹಾಗೂ  ಸಿಬ್ಬಂದಿಯವರಾದ, ಹೆಚ್.ಸಿ-166 ಸಂಪಂಗಿರಾಮಯ್ಯ, ಹೆಚ್.ಸಿ-171 ಬಾಬು.ಸಿ, ಹೆಚ್.ಸಿ-170 ಜೂಲಪ್ಪ, ಪಿ.ಸಿ-512  ರಾಜಶೇಖರ, ಪಿ.ಸಿ-518 ಆನಂದ,  ಪಿ.ಸಿ-246 ಸಿಕಂದರ್ ಮುಲ್ಲಾ, ಪಿ.ಸಿ-433 ಬಾಬಾಜಾನ್,  ಪಿ.ಸಿ-381 ಜಗದೀಶ, ಪಿ.ಸಿ-281 ಗುರುಸ್ವಾಮಿ, ಪಿ.ಸಿ-426 ಲೋಹಿತ್,  ಜೀಪಿನ ಚಾಲಕ ಎ.ಪಿ.ಸಿ- 143 ಮಹೇಶ, ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538  ರಲ್ಲಿ  ಮತ್ತು ಸಿಬ್ಬಂದಿಯ ದ್ವಿಚಕ್ರ ವಾಹನಗಳಲ್ಲಿ ರಂಗಪ್ಪನಪಾಳ್ಯ ಗ್ರಾಮಕ್ಕೆ ಮದ್ಯಾಹ್ನ 3-20 ಗಂಟೆಗೆ ಹೋಗಿ  ಸ್ವಲ್ಪ ದೂರದಲ್ಲಿ  ಸರ್ಕಾರಿ ವಾಹನವನ್ನು ಮತ್ತು ಸಿಬ್ಬಂದಿಯ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ  ಮರೆಯಲ್ಲಿ ನಿಂತು ನೋಡಲಾಗಿ  ಗ್ರಾಮದಲ್ಲಿ ಇರುವ ಕೆರೆಯ ಅಂಗಳದಲ್ಲಿ   ಜನರು ಗುಂಪಾಗಿ ಕುಳಿತುಕೊಂಡು  ಅಂದರ್ ಗೆ 100  ರೂ, ಬಾಹರ್ ಗೆ 100  ರೂ  ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು  ಪಂಚರ ಸಮಕ್ಷಮದಲ್ಲಿ  ನಾನು ಮತ್ತು ಸಿಬ್ಬಂದಿಯವರು ಜೂಜಾಡುತ್ತಿದ್ದವರನ್ನು ಸುತ್ತುವರೆದು ಹಿಡಿದುಕೊಂಡು ಒಬ್ಬೊಬ್ಬರನ್ನಾಗಿ ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ 1) ವೆಂಕಟೇಶ ಬಿನ್ ತಿಮ್ಮಪ್ಪ, 25 ವರ್ಷ, ಕುರುಬರು, ಜಿರಾಯ್ತಿ/ ಚಾಲಕ ವೃತ್ತಿ, ವಾಸ ರಂಗಪ್ಪನಪಾಳ್ಯ ಗ್ರಾಮ, ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. 2) ಹನುಮಂತು ಬಿನ್ ಕೃಷ್ಣಪ್ಪ, 28 ವರ್ಷ, ಉಪ್ಪಾರ ಜನಾಂಗ, ಕೂಲಿ ಕೆಲಸ ವಾಸ ರಂಗಪ್ಪನಪಾಳ್ಯ ಗ್ರಾಮ, ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. 3) ಚಂದ್ರಣ್ಣ ಬಿನ್ ಲೇಟ್ ಹನುಮಂತರಾಯಪ್ಪ, 35 ವರ್ಷ, ಉಪ್ಪಾರ ಜನಾಂಗ, ಕೂಲಿ ಕೆಲಸ, ವಾಸ ರಂಗಪ್ಪನಪಾಳ್ಯ ಗ್ರಾಮ, ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. 4) ಗಂಗಾಧರ ಬಿನ್ ಹನುಮಪ್ಪ, 39 ವರ್ಷ, ಉಪ್ಪಾರ ಜನಾಂಗ, ಜಿರಾಯ್ತಿ, ವಾಸ ರಂಗಪ್ಪನಪಾಳ್ಯ ಗ್ರಾಮ, ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. 5) ಕೆಂಪರಾಜು ಬಿನ್ ತಿಮ್ಮಪ್ಪ, 35 ವರ್ಷ, ಕುರುಬರು, ಜಿರಾಯ್ತಿ, ವಾಸ ರಂಗಪ್ಪನಪಾಳ್ಯ ಗ್ರಾಮ, ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. 6) ಗೋಪಾಲ ಬಿನ್ ರಂಗಪ್ಪ, 42 ವರ್ಷ, ನಾಯಕರು, ಟೈಲರ್ ಕೆಲಸ ವಾಸ ತೊಂಡೇಬಾವಿ ಸ್ವಂತ ಸ್ಥಳ ರಂಗಪ್ಪನಪಾಳ್ಯ ಗ್ರಾಮ,ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. 7) ಗಂಗಾಧರ ಬಿನ್ ಗಂಗಾಧರಪ್ಪ, 42 ವರ್ಷ, ಕುರುಬರು, ಕೂಲಿ ಕೆಲಸ ವಾಸ ರಂಗಪ್ಪನಪಾಳ್ಯ ಗ್ರಾಮ, ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. 8) ರಾಮಾಂಜಿ ಬಿನ್ ಲೇಟ್ ರಂಗಪ್ಪ, 48 ವರ್ಷ, ನಾಯಕರು ಕೂಲಿ ಕೆಲಸ ವಾಸ ರಂಗಪ್ಪನಪಾಳ್ಯ ಗ್ರಾಮ, ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. 9) ನಾರಾಯಣಪ್ಪ ಬಿನ್ ಲೇಟ್ ರಂಗಪ್ಪ, 45 ವರ್ಷ, ನಾಯಕರು, ಗಾರೆ ಕೆಲಸ ವಾಸ ರಂಗಪ್ಪನಪಾಳ್ಯ ಗ್ರಾಮ, ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. ಎಂದು ತಿಳಿಸಿರುತ್ತಾರೆ. ಇನ್ನೂ ಕೆಲವರು ಸ್ಥಳದಿಂದ ಓಡಿ ಹೋಗಿರುತ್ತಾರೆ.  ಸ್ಥಳದಲ್ಲಿ ಜೂಜಾಟಕ್ಕೆ ಪಣಕ್ಕೆ ಕಟ್ಟಿದ್ದ ಹಣ ಇದ್ದು  ಎಣಿಸಲಾಗಿ 1)  4750/- ರೂ ಹಣ , 2) 52 ಸ್ಪೀಟ್ ಎಲೆಗಳು, 3) ಒಂದು ಪ್ಲಾಸ್ಟಿಕ್ ಚೀಲ ಇರುತ್ತೆ. ಸ್ಥಳದಲ್ಲಿ  ಮದ್ಯಾಹ್ನ 3-20   ಗಂಟೆಯಿಂದ 4-00  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಮೇಲ್ಕಂಡ ನಗದು, ಇಸ್ಪೀಟು ಎಲೆಗಳನ್ನು ವಶಪಡಿಸಿಕೊಂಡು, ಸಂಜೆ 4-20   ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,  ಆರೋಪಿಗಳು, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ  ಕಾನೂನು ರೀತ್ಯಾ ಕ್ರಮ  ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ  ಎನ.ಸಿ.ಆರ್ ಅನ್ನು ನೊಂದಾಯಿಸಿಕೊಂಡಿರುತ್ತೆ. ಘನ ನ್ಯಾಯಾಲಯದ ಅನುಮತಿಗಾಗಿ ನಿವೇದಿಸಿಕೊಂಡಿದ್ದು ಘನ ನ್ಯಾಯಾಲಯದ ಅನುಮತಿ ಮೇರೆಗೆ ಠಾಣಾ ಮೊ.ಸಂ.110/2021 ಕಲಂ. 87 ಕೆ.ಪಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

6. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.86/2021 ಕಲಂ. 304A,279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

  ದಿ:06.05.2021 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿದಾರರಾದ ಎಸ್, ಶ್ರೀನಿವಾಸ ಬಿನ್ ಎಸ್.ಸುರೇಂದ್ರನಾಥ. 41 ವರ್ಷ, ಬ್ರಾಹ್ಮಣರು, ಪ್ರೈವೇಟ್ ಕಂಪನಿಯಲ್ಲಿ ಕೆಲಸ, ವಾಸ ರೂಬಿ ಲೇಔಟ್ ಮಾಲುರು ರಸ್ತೆ, ಹೊಸಕೋಟೆ ರವರು ಗುಡಿಬಂಡೆ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನನ್ನ ಅಕ್ಕ ಸುಧಾರವರನ್ನು ಈಗ್ಗೆ 20 ವರ್ಷಗಳ ಹಿಂದೆ ಆಂದ್ರಪ್ರದೇಶದ ಅನಂತಪುರ ಜಿಲ್ಲೆ ಕಲ್ಯಾಣ ದುರ್ಗಕ್ಕೆ ಮದುವೆ ಮಾಡಿಕೊಟ್ಟಿದ್ದು ಅವರು ಸಂಸಾರ ಸಮೇತ ಕಲ್ಯಾಣ ದುರ್ಗದಲ್ಲಿ ವಾಸವಾಗಿರುತ್ತಾರೆ. ನನ್ನ ತಾಯಿಯಾದ ಎಸ್.ಜಮುನಾರವರು ದಿನಾಂಕ:05-05-2021 ರಂದು ರಾತ್ರಿ ಸುಮಾರು 10-30 ಗಂಟೆಯಲ್ಲಿ ಹೊಸಕೊಟೆಯ ನಮ್ಮ ಮನೆಯಲ್ಲಿ ವಯಸ್ಸಾಗಿದ್ದರಿಂದ ಮೃತಪಟ್ಟಿದ್ದು ಈ ವಿಚಾರವನ್ನು ನಾನು ನನ್ನ ಅಕ್ಕ ಶ್ರೀಮತಿ ಸುಧಾರವರಿಗೆ ಪೋನ್ ತಿಳಿಸಿರುತ್ತೇನೆ. ನಂತರ ನನ್ನ ಅಕ್ಕ ಸುಧಾ ರವರು ನನಗೆ ದಿನಾಂಕ:05-05-2021 ರಂದು ರಾತ್ರಿ ಸುಮಾರು 11-30 ಗಂಟೆಯಲ್ಲಿ ನನಗೆ ಪೋನ್ ಮಾಡಿ ನನ್ನ ತಾಯಿ ಶವ ಸಂಸ್ಕಾರಕ್ಕೆ ತಾನು ಮತ್ತು ತನ್ನ ಮಕ್ಕಳಾದ ಕರಣ್ ಸುಮಾರು 20 ವರ್ಷ. ಕುಮಾರಿ ಕಾವ್ಯ ಸುಮಾರು 17 ವರ್ಷ, ಬಾನು ಕಲ್ಯಾಣ್ ಸುಮಾರು 15 ವರ್ಷ ರವರೊಂದಿಗೆ ತಮಗೆ ಪರಿಚಯಸ್ಥರ ಎ.ಪಿ-02 ಬಿ.ಆರ್-3448 ನೊಂದಣಿ ಸಂಖ್ಯೆಯ ಟೋಯಟ್ ಇಟಿಯಾಸ್ ಕಾರಿನಲ್ಲಿ ಚಾಲಕನಾದ ಯರ್ರಿಸ್ವಾಮಿ ಬಿನ್ ಚೆನ್ನಯ್ಯ 26 ವರ್ಷ ಮಾದಿಗ ಜನಾಂಗ ಚಾಲಕ ವೃತ್ತಿ ವಾಸ, ಮರವಕುಂ ಕಾಲೋನಿ, ಕಲೆಕ್ಟ್ರ ಆಪೀಸ್ ಹತ್ತಿರ ಅನಂತಪುರ ಆಂದ್ರಪ್ರದೇಶ್ ರಾಜ್ಯ ರವರೊಂದಿಗೆ ಕಲ್ಯಾಣದುರ್ಗದಿಂದ ಹೊಸಕೊಟೆಗೆ ಬರುವುದಾಗಿ ತಿಳಿಸಿದರು. ಈ ದಿನ ದಿನಾಂಕ:06-05-2021 ರಂದು ಬೆಳಗ್ಗೆ ಸುಮಾರು 5-30 ಗಂಟೆಯಲ್ಲಿ ನನ್ನ ಅಕ್ಕನ ಮಗನಾದ ಕರಣ್ ರವರು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ: ತಾನು ಮತ್ತು ತನ್ನ ತಾಯಿಯಾದ  ಸುಧಾ ಹಾಗೂ ತನ್ನ ತಂಗಿಯಾದ ಕಾವ್ಯ, ತನ್ನ ತಮ್ಮನಾದ ಭಾನು ಕಲ್ಯಾಣ ರವರೊಂದಿಗೆ ತಮಗೆ ಪರಿಚಯಸ್ಥರ ಬಾಬ್ತು ಎ.ಪಿ-02 ಬಿ.ಆರ್-3448 ನೊಂದಣಿ ಸಂಖ್ಯೆಯ ಟೋಯಟ್ ಇಟಿಯಾಸ್ ಕಾರಿನಲ್ಲಿ ದಿನಾಂಕ:05-05-2021 ರಂದು ಮದ್ಯೆರಾತ್ರಿ ಸುಮಾರು    12-00 ಗಂಟೆಯಲ್ಲಿ ಆಂದ್ರಪ್ರದೇಶದ ಕಲ್ಯಾಣದುರ್ಗವನ್ನು ಬಿಟ್ಟು ಅನಂತಪುರ ಮಾರ್ಗವಾಗಿ ಹೈದರಾಬಾದ್-ಬೆಂಗಳೂರು ಎನ್.ಹೆಚ್-44 ರಸ್ತೆಯಲ್ಲಿ ಬರುತ್ತಿದ್ದಾಗ ಗುಡಿಬಂಡೆ ತಾಲ್ಲೂಕು ಯರ್ರಲೆಕ್ಕೆನಹಳ್ಳಿ ಕ್ರಾಸ್ ಬಳಿ ಹೈದರಾಬಾದ್ ನಿಂದ ಬೆಂಗಳೂರು ಕಡೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ ಈ ದಿನ ದಿನಾಂಕ:06-05-2021 ರಂದು ಬೆಳಗ್ಗೆ ಸುಮಾರು 4-00 ಗಂಟೆಯಲ್ಲಿ ಯಾವುದೋ ಲಾರಿಯ ಚಾಲಕ ತನ್ನ ಲಾರಿಯನ್ನು ಯಾವುದೇ ಮುನ್ಸೂಚನೆ ಇಲ್ಲದೇ ರಸ್ತೆಯಲ್ಲಿ ನಿಲ್ಲಿಸಿದ್ದ ಪರಿಣಾಮ  ತಾವು ಬರುತ್ತಿದ್ದ ಎ.ಪಿ-02 ಬಿ.ಆರ್-3448 ನೊಂದಣಿ ಸಂಖ್ಯೆಯ ಟೋಯಟ್ ಇಟಿಯಾಸ್ ಕಾರು ಮೇಲ್ಕಂಡ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತವಾಗಿದ್ದು ಸದರಿ ಲಾರಿಯ ಚಾಲಕ ತನ್ನ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದು ನೊಂದಣಿ ಸಂಖ್ಯೆಯನ್ನು ನೋಡಿರವುದಿಲ್ಲ, ಈ ಅಪಘಾತದಲ್ಲಿ ತಾವು ಬರುತ್ತಿದ್ದ ಕಾರು ಜಖಂಗೊಂಡು ಕಾರಿನಲ್ಲಿದ್ದ ತನ್ನ ತಾಯಿ ಸುಧಾ ರವರಿಗೆ  ಮತ್ತು ಕಾರು ಚಾಲಕ ಯರ್ರಿಸ್ವಾಮಿ ರವರಿಗೆ ತೀವ್ರವಾದ ರಕ್ತಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ಕಾರಿನಲ್ಲಿ ತನಗೆ ಮತ್ತು ಕಾವ್ಯ, ಹಾಗೂ ಭಾನು ಕಲ್ಯಾಣ ರವರಿಗೆ ಸಹ ರಕ್ತಗಾಯಗಳಾಗಿದ್ದು ಗಾಯಗೊಂಡಿದ್ದ ತಮ್ಮನ್ನು ಅಂಬ್ಯೂಲೇನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಮೃತರಾದ ತನ್ನ ತಾಯಿ ಸುಧಾ ಮತ್ತು ಚಾಲಕ ಯರ್ರಿಸ್ವಾಮಿ ರವರ ಮೃತದೇಹಗಳನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿರವುದಾಗಿ  ಹಾಗೂ ಗಾಯಗೊಂಡಿದ್ದ ಕಾವ್ಯಳನ್ನು ಹೆಚ್ಚಿನ ಚಿಕತ್ಸೆಯ ಬಗ್ಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿರವುದಾಗಿ ತಿಳಿಸಿದ್ದು, ಕೂಡಲೆ ನಾನು ಅಪಘಾತ ನಡೆದ ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿರುತ್ತೆ. ಈ ಅಪಘಾತದಲ್ಲಿ ಮೃತರಾದ ನನ್ನ ಅಕ್ಕ ಶ್ರೀಮತಿ ಸುಧಾ ಕೋಂ ಲೇಟ್ ಅಶೋಕ  42 ವರ್ಷ ಬ್ರಾಹ್ಮಣರು ಗೃಹಿಣಿ ವಾಸ ಚೆನ್ನಾಕೇಶವ ದೇವಸ್ಥಾನದ ಹತ್ತಿರ ಮೇಡಾ ಬೀದಿ, ಕಲ್ಯಾಣದುರ್ಗ ಅನಂತಪುರ ಜಿಲ್ಲೆ ಆಂದ್ರಪ್ರದೇಶ ರಾಜ್ಯ  ಆದ್ದರಿಂದ ಈ ಅಪಘಾತಕ್ಕೆ ಯಾವುದೇ ಮುನ್ಸೂಚನೆ ಇಲ್ಲದೆ ಅಜಾಗರೂಕತೆಯಿಂದ ತನ್ನ ಲಾರಿಯನ್ನು ಅದರ ಚಾಲಕ ರಸ್ತೆಯಲ್ಲಿ ನಿಲ್ಲಿಸಿದ್ದ ಪರಿಣಾಮ ಆಗಿದ್ದು, ಲಾರಿಯನ್ನು ಪತ್ತೆ ಮಾಡಿ ಅದರ ಚಾಲಕನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

7. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.44/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ 05-05-2021 ರಂದು ಸಂಜೆ 05.00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಮಾಲು, ಮಹಜರ್ ನೊಂದಿಗೆ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:05/05/2021 ರಂದು ಮಧ್ಯಾಹ್ನ 15-00 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಚಿಲಕಲನೇರ್ಪು ಗ್ರಾಮದ ಸುಧಾಕರರೆಡ್ಡಿ ಬಿನ್ ಲೇಟ್ ಸುಬ್ಬರಾಯಪ್ಪ  ರವರು ತಮ್ಮ ಚಿಲ್ಲರೆ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಸ್ಥಳದ ಮೇಲೆ  ದಾಳಿ ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿಹೆಚ್ಸಿ-161 ಕೃಷ್ಣಪ್ಪ ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ಜೀಪ್ ನಲ್ಲಿ ಚಿಲಕಲನೇರ್ಪು ಗ್ರಾಮದ ಬಳಿ ಹೋಗಿ ಅಲ್ಲಿದ್ದ ಇಬ್ಬರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನಾಗಿ ಬರಮಾಡಿಕೊಂಡು ಪಂಚರೊಂದಿಗೆ ಗ್ರಾಮದೊಳಗೆ ಹೋಗಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ನಡೆದುಕೊಂಡು ಚಿಲಕಲನೇರ್ಪು ಗ್ರಾಮದ ಸುಧಾಕರರೆಡ್ಡಿ ಬಿನ್ ಲೇಟ್ ಸುಬ್ಬರಾಯಪ್ಪ  ರವರ ಚಿಲ್ಲರೆ ಅಂಗಡಿ ಬಳಿ ಹೋಗಿ ನೋಡಲಾಗಿ ಚಿಲ್ಲರೆ ಅಂಗಡಿ ಮಾಲೀಕನಾದ ಸುಧಾಕರರೆಡ್ಡಿ ರವರು  ತಮ್ಮ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿಹೋಗಿದ್ದು, ಅಂಗಡಿ ಮಾಲೀಕನಾದ ಸುಧಾಕರರೆಡ್ಡಿ ಬಿನ್ ಲೇಟ್ ಸುಬ್ಬರಾಯಪ್ಪ  ರವರು ಸಹ ಓಡಿಹೋಗಿರುತ್ತಾರೆ. ಓಡಿಹೋದ ಅಂಗಡಿ ಮಾಲೀಕನ  ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ  ಸುಧಾಕರರೆಡ್ಡಿ ಬಿನ್ ಲೇಟ್ ಸುಬ್ಬರಾಯಪ್ಪ, 52 ವರ್ಷ, ಅಂಗಡಿ ವ್ಯಾಪಾರ, ವಕ್ಕಲಿಗ ಜನಾಂಗ, ವಾಸ ಚಿಲಕಲನೇರ್ಪು ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿಸಿದನು. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  90 ಎಂ.ಎಲ್ ನ HAYWARDS CHEERS WHISKEY ಮಧ್ಯದ 14 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 14 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 492/-ರೂ ಆಗಿರುತ್ತೆ. ಮದ್ಯ ಒಟ್ಟು 1260 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದೇ ಪರವಾನಗಿ ಇಲ್ಲದೇ ಇರುವುದರಿಂದ ಅಂಗಡಿ ಮಾಲೀಕನಾದ ಸುಧಾಕರರೆಡ್ಡಿ ಓಡಿಹೋಗಿರುತ್ತಾನೆ. ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 15-45 ರಿಂದ 16-30 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲುನ್ನು ನಿಮ್ಮ ಮುಂದೆ ಮಹಜರ್ & ಈ ನನ್ನ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಕಾನೂನುಬಾಹಿರವಾಗಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟ ಚಿಲ್ಲರೆ ಅಂಗಡಿ ಮಾಲೀಕನಾದ ಸುಧಾಕರರೆಡ್ಡಿ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಸಾರಾಂಶವಾಗಿರುತ್ತೆ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.144/2021 ಕಲಂ. 32,34,43(A) ಕೆ.ಇ ಆಕ್ಟ್:-

  ದಿನಾಂಕ:05-05-2021 ರಂದು ಬೆಳಿಗ್ಗೆ 11-45 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಗೆ  ಹಾಜರಾಗಿ  ನೀಡಿದ ವರದಿಯ ಸಾರಾಂಶವೇನೆಂದರೆ ತನಗೆ ದಿನಾಂಕ 05/05/2021 ರಂದು ಬೆಳಿಗ್ಗೆ ಪಿ.ಎಸ್.ಐ ರವರು ಪಿಸಿ-543 ಸುಧಾಕರ್ ಆದ ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ತಾನು ಈ ದಿನ ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಬೆಳಿಗ್ಗೆ 11-15 ಗಂಟೆ ಸಮಯದಲ್ಲಿ ಆನೂರು ಕ್ರಾಸ್ ನಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಕಡೆಯಿಂದ ಒಬ್ಬ ಆಸಾಮಿಯು ಒಂದು ಗೋಣಿ ಚೀಲದಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ತಾನು ಆನೂರು ಕ್ರಾಸ್ ನಲ್ಲಿಯೇ ಶಿಡ್ಲಘಟ್ಟ ಕಡೆಯಿಂದ ಬರುತ್ತಿದ್ದ ದ್ವಿ ಚಕ್ರ ವಾಹನಗಳನ್ನು ಗಮನಿಸಿಕೊಂಡಿದ್ದಾಗ ಒಬ್ಬ ಆಸಾಮಿಯು ತನ್ನ ದ್ವಿ ಚಕ್ರ ವಾಹನದ ಮುಂಬದಿಯಲ್ಲಿ ಒಂದು ಬಿಳಿ ಬಣ್ಣದ ಚೀಲವನ್ನು ಇಟ್ಟುಕೊಂಡು ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದ ಸದರಿ ದ್ವಿ ಚಕ್ರ ವಾಹನದ ಸವಾರನಿಗೆ ದ್ವಿ ಚಕ್ರ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ಸದರಿ ಆಸಾಮಿಯು ಸಮವಸ್ತ್ರದಲ್ಲಿದ್ದ ತನ್ನನ್ನು ಕಂಡು ತನ್ನ ದ್ವಿ ಚಕ್ರ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಓಡಿ ಹೋಗಿರುತ್ತಾನೆ. ನಂತರ ದ್ವಿ ಚಕ್ರ ವಾಹನದ ಮೇಲಿದ್ದ ಗೋಣಿ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 2 ಮದ್ಯದ ಟೆಟ್ರಾ ಪಾಕೇಟ್ ಗಳಿರುವ ರೆಟ್ಟಿನ ಬಾಕ್ಸ್ ಗಳಿದ್ದು, ಒಂದು ಬಾಕ್ಸ್ ಅನ್ನು ತೆರೆದು ಪರಿಶೀಲಿಸಲಾಗಿ ಅದರಲ್ಲಿ 180 ಎಂಎಲ್ ಸಾಮಥ್ರ್ಯದ 48 ಓಲ್ಟ್ ಟಾರ್ವನ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಮೇಲೆ 86.75 ರೂ ಎಂದು ಬೆಲೆ ನಮೂದು ಆಗಿದ್ದು, ಮತ್ತೋಂದು ರೆಟ್ಟಿನ ಬಾಕ್ಸ್ ಅನ್ನು ಪರಿಶೀಲಿಸಲಾಗಿ ಅದರಲ್ಲಿ 180 ಎಂಎಲ್ ಸಾಮಥ್ರ್ಯದ 48 ಓಲ್ಡ್ ಅಡ್ಮಿರಲ್ ವಿಎಸ್ಓಡಿ ಬ್ರಾಂದಿಯ ಮದ್ಯದ ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಮೇಲೆ 86.75 ರೂ ಎಂದು ಬೆಲೆ ನಮೂದು ಆಗಿದ್ದು ಮೇಲ್ಕಂಡ ಎಲ್ಲಾ ಮದ್ಯವು 8328 ರೂ ಬೆಲೆ ಬಾಳುವುದ್ದಾಗಿದ್ದು, ಇದು 17.280 ಲೀಟರ್ ನಷ್ಟಿರುತ್ತದೆ. ದ್ವಿ ಚಕ್ರ ವಾಹನವನ್ನು ಪರಿಶೀಲಿಸಲಾಗಿ ಇದರ ಮೇಲೆ ಯಾವುದೇ ನೊಂದಣಿ ಸಂಖ್ಯೆ ಇಲ್ಲದೇ ಇದ್ದು, ಇದು ಹಿರೋ ಕಂಪನಿಗೆ ಸೇರಿದ ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನವಾಗಿದ್ದು, ಇದರ ಚಾಸೀಸ್ ನಂಬರ್-ಎಂಬಿಎಲ್ಹೆಚ್ಎಡಬ್ಯೂ019ಕೆಹಚ್ ಹೆಚ್21176 ಆಗಿದ್ದು ಇಂಜಿನ್ ನಂಬರ್- ಹೆಚ್ಎ10ಎಸಿಕೆಹೆಚ್ ಹೆಚ್33984 ಆಗಿರುತ್ತದೆ. ನಂತರ ಸ್ಥಳಕ್ಕೆ ಬಂದ ಸಾರ್ವಜನಿಕರನ್ನು ಓಡಿ ಹೋದ ಆಸಾಮಿಯ ಹೆಸರು ವಿಳಾದ ಕೇಳಲಾಗಿ ದೇವರಾಜ ಬಿನ್ ಸೂರ್ಯನಾರಾಯಣಪ್ಪ,47 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಬೆಳ್ಳೂಟಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಸದರಿ ಆಸಾಮಿಯು ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ತಮ್ಮ ಗ್ರಾಮದಲ್ಲಿ ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸಲು ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದಾಗಿ ಕಂಡು ಬಂದಿದ್ದು ಮೇಲ್ಕಂಡ ಮದ್ಯವನ್ನು ಮತ್ತು ದ್ವಿ ಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ಬಂದು ತಮ್ಮ ಮುಂದೆ ಹಾಜರು ಪಡಿಸುತ್ತಿದ್ದು ಸದರಿ ಆಸಾಮಿಯ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ವರದಿಯ ಮೇರಗೆ ಠಾಣಾ ಮೊ.ಸಂ:144/2021 ಕಲಂ:32,34, 43(ಎ) ಕೆ.ಇ.ಆಕ್ಟ್ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.145/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ: 06-05-2021 ರಂದು ಬೆಳಿಗ್ಗೆ 8-30  ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 06-05-2021 ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಹನುಮಂತಪುರ, ಚೀಮನಹಳ್ಳಿ, ಅಬ್ಲೂಡು ಕಡೆಗಳಲ್ಲಿ ಗಸ್ತು ಮಾಡಿಕೊಂಡು ಬೆಳ್ಳಿಗೆ 8-00 ಗಂಟೆ ಸಮಯದಲ್ಲಿ ಶೆಟ್ಟಿಹಳ್ಳಿ ಗ್ರಾಮದ ಕಡೆ ಹೋಗಲು ಶೆಟ್ಟಿಹಳ್ಳಿ  ಗೇಟ್ ನಲ್ಲಿದ್ದಾಗ ಬಾತ್ಮಿದಾರರಿಂದ ಶೆಟ್ಟಿಹಳ್ಳಿ ಗ್ರಾಮದ ರಾಮಪ್ಪ ಬಿನ್ ಲೇಟ್ ಭೈರಪ್ಪ ರವರ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಶೆಟ್ಟಿಹಳ್ಳಿ ಗ್ರಾಮದ ರಾಮಪ್ಪ ರವರ ಮುಂಭಾಗ ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಕವರ್  ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ನಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ರಾಮಪ್ಪ ಬಿನ್ ಲೆಟ್ ಭೈರಪ್ಪ, ಸುಮಾರು 55 ವರ್ಷ, ವಕ್ಕಲಿಗರು, ಜಿರಾಯ್ತಿ ವಾಸ: ಶೆಟ್ಟಿಹಳ್ಳಿ  ಗ್ರಾಮ, ಶಿಡ್ಲಘಟ್ಟ  ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರ್  ಪರಿಶೀಲಿಸಲಾಗಿ 90 ಎಂ.ಎಲ್.  ಸಾಮರ್ಥ್ಯದ 10 ORIGINAL CHOICE DELUXE WHISKY ಟೆಟ್ರಾ ಪ್ಯಾಕೆಟ್ ಗಳಿದ್ದು,  ಸದರಿ ಸ್ಥಳದಲ್ಲಿ 2 ಖಾಲಿ ಪ್ಲಾಸ್ಟಿಕ್ ಲೋಟಗಳು ,4 ಖಾಲಿ ವಾಟರ್ ಪಾಕೇಟ್ ಗಳನ್ನು ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಬೆಳ್ಳಿಗೆ 8-30 ಗಂಟೆಯಲ್ಲಿ ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿರುತ್ತೇನೆ. ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ರಾಮಪ್ಪ ಬಿನ್ ಲೆಟ್ ಭೈರಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ. 145/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 06-05-2021 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080