Feedback / Suggestions

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.86/2021 ಕಲಂ. 143,147,148,323,420,504,506,34 ಐ.ಪಿ.ಸಿ:-

          ದಿನಾಂಕ:05/04/2021 ರಂದು ಬೆಳಿಗ್ಗೆ 10:30 ಗಂಟೆಯಲ್ಲಿ ಪಿ.ಸಿ 235 ನ್ಯಾಯಾಲಯದ ಪೇದೆ ರವರು  ನ್ಯಾಯಾಲಯದಿಂದ ಸಾದರುಪಡಿಸಿದ ಪಿ.ಸಿ.ಆರ್ ನಂ 19/2021 ರ ಪ್ರತಿಯನ್ನು ಹಾಜರುಪಡಿಸಿದ್ದನ್ನು  ಸ್ವೀಕರಿಸಿದ್ದು, ಪಿರ್ಯಾದಿದಾರರಾದ ಶ್ರೀ. ಗಂಗಪ್ಪ ಬಿನ್ ಲೇಟ್ ನರಸಿಂಹಪ್ಪ, 75 ವರ್ಷ, ಜಿಲಾಜಿರ್ಲಾ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಸಾದರುಪಡಿಸಿದ ದೂರಿನ ಸಾರಾಂಶ - The complainant submits that the property bearinge survey number 191 measuringe 3 acres 22 guntas, situated at jilajirla village, Gulur Hobli, Bagepalli Taluk, bounded on East by Venkatamma,s land, West By Gangappa,s land, North by Eswatamma,s land and South by Ramachandrappa,s land is the ancestral property, inherited to the complainant and he enjoyed the said porperty from several decades as tha absolute owner therof. The Khatha stood continued in his name up till today.

The above said land is cultivable land, the complainant installed three borewells and used the water for progressinge the agricultural development and to proliferate the crops. He developed and grown multhi fruit trees as well as Neem, Jali, honge Araku etd in the saed land. He and his family depend upon this land only.

In the first week of january 2021, the complainant has been approached the revenue authority for obtaining the documents pertaining to the above said land for the purpose of to ger the benefit scheme from the government. When he ger the certigied copies of the RTC it is shocked to the complainant that their names /unknown persons named were entered in to the said documents. Immediately, the complaint made clear enquiry and acertained that the accused No 1 to 9, Who are the total strangers, having no manner of right title interest muchless possession over the said land knowingly well colluded with the accused No.10 to 16 got created a bogus fraudulent sale deed dated 15-07-2008 in the name of the accused No 15 and 16. The accused No 1 to 9 are no where, eihter the members of the family of the complainant nor having any right over the property they are intentionally, dishonestly played a fraud and executed a rigestered sale deed by preparing fraudulent documents colluded with the survey department prepared revenue sketchand duly registered before the sub-registrar at bagepalli by false representation. There is no need to sell the said property to any body by the complainant in his old age that to in the age of 8 years taking undue advantage of his innocence. Lack of wordly knowledge the acused no 1 to 9 take this opportunity made a conspiracy with false representation and coercion created alleged sale deed in the name of acused no 15 and 16 the photograph found on the back of the registered sale deed. Who are not the members of the family of this complainant therefore the alleged sale deed dated 15/07/2008 in the circumstances is a fraudulent deed, collusive in character and bogus in nature. It is a sham transaction and has not acted upon. The acused are not acqire any right, title and interest in the said land. On the contrary, this compalinant has been possessing the said property sought to be conveyed by the aforesaid fraudulent deed. The entaire sale transaction is void under law and all the ravenue proceedings are not bound by the findings and oreds to this complainant. The complinant immidiatly met the acused and questined about the illegal transaction and demanded to cancel the alleged sale transaction as wel as the illegal entries made in the ravenue records, but they deliberately refused the same and all of a sudden all the acused were assembled unlawfully trying to assaulted   complainant with the deadly weapons and threatens and defamed with filtehy language and insalted before the public thereby the complainant had hurt grievously mentally and physically. Therefore the complainant have apporached the bagepalli police and lodge a complaint against the aucsed on 18/02/2021. The aused are the powerful persons having huge men, money as well as political power and they are influenced persons thereby the concerned police, due to political pressure have not taken any action against the accused and issued ncr no 40/2021 date 18/02/2021 to complainant. The  acused are therefore liable to punish under section 143,144,147,323,420,504 and 506 read with section 34 of indian penal code. Where fore, the complainant prays that this hon’bly court may be pleased to register the complaint and refer the matter to the police sub inspector, bagepalli police station bagepalli to enquire into the matter in accordance with law against the accused no 1 to 16 and punish them for the offencess punishable under section 143,144,147,323,420, and 506 read with section 34 of ipc and grant any such other relief’s my deem fit toin the circumstances of this case in the interest of justice  ಎಂದು ಸಾದರುಪಡಿಸಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲು ಮಾಡಿರುವುದಾಗಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.87/2021 ಕಲಂ. 454,380 ಐ.ಪಿ.ಸಿ:-

          ದಿನಾಂಕ:05/04/2021 ರಂದು ಮದ್ಯಾಹ್ನ 3:00 ಗಂಟೆಗೆ ಪಿರ್ಯಾದಿದಾರರಾದ ಷನವಾಜ್ ಬಿನ್ ಅಲ್ಲಾಭಕಾಷ್, 36 ವರ್ಷ, ಮುಸ್ಲೀಮರು, ಕಾರ್ಪೆಂಟರ್ ಕೆಲಸ, ರಾಯಲ್ ಪಂಕ್ಷನ್ ಹಾಲ್ ಹಿಂಬಾಗ, 3ನೇ ವಾರ್ಡ್, ಬಾಗೇಪಲ್ಲಿ ಟೌನ್ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:03/04/2021 ರಂದು ನಾನು ನನ್ನ ಹೆಂಡತಿ ಚಾಂದಿನಿ ನನ್ನ ಮಕ್ಕಳಾದ 1ನೇ ಮೆಹಫೂಜ್ ಅಲೀ, 2ನೇ ಮೆಹತಾಜ್ ಭಾನು, 3ನೇ ಐಯಾನ್ ಅಲೀ ರವರೊಂದಿಗೆ ಮನೆಗೆ ಬೀಗ ಹಾಕಿಕೊಂಡು  ನನ್ನ ಹೆಂಡತಿಯ ತವರೂರಾದ ಆಂದ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಪುಟ್ಟಪರ್ತಿ ಬಳಿ ಇರುವ ಬೀಡಪಲ್ಲಿ ಗ್ರಾಮಕ್ಕೆ ಹೋದೆವು. ದಿನಾಂಕ:05/04/2021 ನನ್ನ ಹಿರಿಯ ಮಗನಾದ ಮೆಹಪೂಜ್ ಅಲೀ, 13 ವರ್ಷ ರವರನ್ನು ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಬಾಗೇಪಲ್ಲಿಗೆ ಕಳುಹಿಸಿಕೊಟ್ಟೆನು. ದಿನಾಂಕ:05/04/2021 ರಂದು ಬೆಳಿಗ್ಗೆ ಸುಮಾರು 10:30 ಗಂಟೆಯಲ್ಲಿ ಬಾಗೇಪಲ್ಲಿಗೆ ಹೋದ ನನ್ನ ಮಗ ಮೆಹಪೂಜ್ ಅಲೀ ಪೋನ್ ಮಾಡಿ  ನಮ್ಮ ಮನೆಯ ಗೇಟ್ ಓಪನ್ ಆಗಿದ್ದು, ಮನೆಯ ಬಾಗಿಲು ಓಪನ್ ಆಗಿದೆ ಎಂದು ಹೇಳಿದನು. ನಾನು ನೀನು ಒಬ್ಬನೇ ಒಳಗೆ ಹೋಗಬೇಡ ಪಕ್ಕದ ಮನೆಯವರನ್ನು ಕರೆದುಕೊಂಡು  ಹೋಗು ಎಂದು ಹೇಳಿದೆನು. ನಾನು ನನ್ನ ಸ್ನೇಹಿತರು ಅಕ್ಕಪಕ್ಕದ ಮನೆಯವರಿಗೆ ಪೋನ್ ಮಾಡಿ ವಿಚಾರ ತಿಳಿಸಿದೆನು. ತಕ್ಷಣ ನಾನು ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿಗೆ ಬಂದು ನೋಡಲಾಗಿ ನನ್ನ ಮನೆಯ ಗೇಟಿನ ಬೀಗವನ್ನು ಮತ್ತು ಮನೆಗೆ ಹಾಕಿದ್ದ ಬೀಗ ಮತ್ತು ಡೋರ್ ಲಾಕ್ ಗಳನ್ನು ಯಾರೋ ಕಳ್ಳರು  ಯಾವುದೋ ಆಯುಧದಿಂದ ಮೀಟಿ ಬೀಗಗಳನ್ನು ಕಿತ್ತು ಮನೆಗೆ ಒಳಗೆ ಹೋಗಿ ಹಾಸಿಗೆ ಕೆಳಗೆ ಇಟ್ಟಿದ್ದ ಬೀರುವಿನ ಬೀಗಗಳನ್ನು ತೆಗೆದುಕೊಂಡು ಬೀರುವನ್ನು ತೆಗೆದು  ರೂಮಿನ ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಸುಮಾರು 15 ಗ್ರಾಂ. ತೂಕದ   ಹ್ಯಾಂಗಿಗ್ಸ್, ಸುಮಾರು 15 ಗ್ರಾಂ.ತೂಕದ  ನಕ್ಲೆಸ್, 42,000/- ರೂ. ನಗದು ಹಣ ವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ನನ್ನ ಮಗನಾದ ಮೆಹಫೂಜ್ ಅಲೀ ರವರನ್ನು ವಿಚಾರ ಮಾಡಲಾಗಿ ಮೆಹಪೂಜ್ ಅಲೀ ನನಗೆ ಪೋನ್ ಮಾಡಿ ನಂತರ ಪಕ್ಕದ ಮನೆಯವರನ್ನು ಕರೆದುಕೊಂಡು ಬರಲು ಹೋಗುತ್ತಿರಲಾಗಿ ನಮ್ಮ ಮನೆಯಿಂದ ಯಾರೋ ಒಬ್ಬ ವ್ಯಕ್ತಿ ಒಂದು ಸೈಡ್ ಬ್ಯಾಗನ್ನು ಹಾಕಿಕೊಂಡು ಹೋಗುತ್ತಿದ್ದು, ತಾನು ಗಾಬರಿಯಿಂದ ಅಕ್ಕಪಕ್ಕದವರಿಗೆ ವಿಚಾರ ತಿಳಿಸಿ ಕರೆದುಕೊಂಡು ಬರವಷ್ಟರಲ್ಲಿ ಓಡಿ ಹೋಗಿರುವುದಾಗಿ ತಿಳಿಸಿರುತ್ತಾನೆ. ದಿನಾಂಕ:05/04/2021 ರಂದು ಬೆಳಿಗ್ಗೆ 10:00 ಗಂಟೆಯಿಂದ 10:30 ಗಂಟೆಯೊಳಗೆ  ಯಾರೋ ಕಳ್ಳರು  ನಮ್ಮ ಮನೆಯ ಗೇಟಿನ ಬೀಗವನ್ನು ಮತ್ತು ಮನೆಯ ಡೋರ್ ಲಾಕ್, ಮತ್ತು ಬೀಗವನ್ನು ಯಾವುದೋ ಆಯುಧದಿಂದ ಮೀಟಿ, ಬೀಗಗಳನ್ನು ಕಿತ್ತು ಸುಮಾರು 60,000/- ರೂ. ಬೆಲೆ ಬಾಳುವ ಬಂಗಾರದ ವಡವೆಗಳನ್ನು ಹಾಗೂ 42,000/- ರೂ.ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ನೀಡಿದ ದೂರಾಗಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.89/2021 ಕಲಂ. 323,420,504,506 ಐ.ಪಿ.ಸಿ:-

          ದಿನಾಂಕ: 06-04-2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿಸಿ-235 ನ್ಯಾಯಾಲಯದ ಪೇದೆ ರವರು ನ್ಯಾಯಾಲಯದಿಂದ ಸಾದರು ಪಡಿಸಿದ ಪಿಸಿಆರ್-20/2021 ರ ಪ್ರತಿಯನ್ನು ಹಾಜರುಪಡಿಸಿದ್ದನ್ನು ಸ್ವೀಕರಿಸಿದ್ದು, ಪಿರ್ಯಾದಿ ಶ್ರೀ ಕೆ ನಾರಾಯಣಸ್ವಾಮಿ ಬಿನ್ ಲೇಟ್ ಗಂಗಪ್ಪ, 86 ವರ್ಷ, ಪಾತಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. ರವರು ಸಾದರುಪಡಿಸಿದ ದೂರಿನ ಸಾರಾಂಶ- The complainant submits that, the accused No.1 had taken the complainant on 04-03-2020 and promising the complainant that, his signatures are required for some papers in taluk office and accordingly believing the words of the accused No.1, the complainant accompanied by car and singed some documents in the office which complainant is unable to recognize, Subsequently on 12-11-2020 headed by accused No.4 came to Pathapaly Village and promised the complainant that, they will take care him in future. So all the accused took the complainant to the residence of Accused No.4 and the complainant has taken care for few days. On 09-12-2020 all the accused told the complainant to sign some applications in taluk office. Believing the words of the grandchildren the complainant accompanied them by car some office and then later on some signatures and LTM marks were taken. 1.The complainant submits that, on 12-12-2020 the accused put the complainant back at the residence of the complainant. When the complainant was questioned the act of the accused, the accused are physically pushed the complainant and took away all the machinery items, oil engines and motor cycle, Rs.1,00,000/- cash and they have taken away all the documents related to the properties belongs the complainant. They looked the complainant in his house and then assaulted him physically and threatened him not to disclose any of the developments  took place on 12-12-2020 and they returned back. 2.The complainant submits that, he was wrongfully confined in his own premises without food and medical care. After four days the neiboures notices and informed K.Ravi who is the sone on the complainant.   The said Ravi rushed the spot rescued him with the support of the neibhoures and took him the hospital and first aid was given. 3.The complainant further  submits  that, 3rd week of December when said Ravi visited the taluk office for some other pretext he came to know about the alleged gift deeds made in favour of the accused illegally. Subsequently he applied for the certified copies of the same. 4.The complainant submits that, the accused have cheated the complainant by getting his thumb impression without his knowledge and consent and have created the gift deeds vide NO.4110/2020-21 dated 09-12-2020 and another gift deed No.6678/2019-20 dated 04-03-2020.

5.The complainant submits that, he is not in a position to execute any papers nor there is no necessities for him to execute any deeds in fovour of anybody.   The complainant stated that, all the accused has cheated him by executing alleged gift deeds in their favour illegally and without the knowledge and consent of the complainant and wrongfully confined him assaulted him and threatened him for the grave consequences. The complainant has approached the jurisdictional police. In turn they did not respond to the complaint of the complainant, because the accused No.4 Madhusudana is working in the office of the Superintendent of Police Chickkaballapur, Subsequently the complainant approached Circle Inspector of Bagepalli and also the Superintendent of Police Chickkaballapur. The higher officials neither took action nor replied to the complainant. The complainant without any alternative sent a copy of the complaint by registered post on 18-01-2021 to the Superintendent of Police Chickkaballapur and he has the acknowledgement for receiving the complaint. The copy of the complaint and acknowledgment is hereby producd before the Hon~ble court. The said police so far not acted upon the complaint of the complainant. Without any alternative the complainant has filing this private complaint before  this Hon~ble court. 6.The complainant submits that, Hence this complaint. 7.The complainant apprehends the life threat from the accused and he has no other go but to approached this Hon~ble court for the relief. Wherefore the complainant prays that this Hon`ble court may be pleased to register the case against the accused persons under section 420, 323, 504 and 506 of IPC and to direct to concerned Police to enquiry the same in accordance in law in the interest of justice and equity. ಎಂದು ಸಾದರುಪಡಿಸಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲು ಮಾಡಿರುವುದಾಗಿರುತ್ತೆ.

 

4. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.22/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 05-04-2021 ರಂದು ರಾತ್ರಿ 11.00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆಯೊಂದಿಗೆ ನೀಡಿದ ಮಾಲು, ಆರೋಪಿತರು, ನ್ಯಾಯಾಲಯದಿಂದ ಅನುಮತಿ ಪತ್ರ ಹಾಗೂ ವರದಿಯ ದೂರಿನ ಸಾರಾಂಶವೇನೆಂದರೆ  ದಿನಾಂಕ 05-04-2021 ರಂದು  ರಾತ್ರಿ 8.15 ಗಂಟೆಯಲ್ಲಿ ಸಿಬ್ಬಂಧಿಯಾದ ಹೆಚ್.ಸಿ-48 ಶ್ರೀ ದಿನೇಶ್, ಸಿ.ಹೆಚ್.ಸಿ-193 ಶ್ರೀ ಶಿವರಾಜ್, ಸಿ.ಪಿ.ಸಿ-138 ಶ್ರೀ ಮುರಳಿ, ಸಿ.ಪಿ.ಸಿ-277 ಶ್ರೀ ಲಕ್ಷ್ಮಿಕಾಂತ್, ಸಿ.ಪಿ.ಸಿ-541 ಗಂಗಾಧರ, ಪಿ.ಸಿ-150 ಶ್ರೀ ಸಾಧಿಕ್ ಉಲ್ಲಾ, ರವರುಗಳೊಂದಿಗೆ ಇವನಿಂಗ್ ರೌಂಡ್ಸ್ ಪುಟ್ ಪೆಟ್ರೋಲಿಂಗ್, ರೌಂಡ್ಸ್ ಪ್ರಯುಕ್ತ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಚಿಕ್ಕಬಳ್ಳಾಪುರ ನಗರದ ಎಂ.ಜಿರಸ್ತೆಯ ಪಕ್ಕದಲ್ಲಿರುವ ಎ.ಪಿ.ಎಂ.ಸಿ ಮಾರುಕಟ್ಟೆಯ ಆವರಣದ ನಿರ್ಜನ ಪ್ರದೇಶದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್  ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ಮಾಹಿತಿಯ ಮೇರೆಗೆ  ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಜೂಜಾಟ ದಾಳಿಗೆ ಪಂಚರನ್ನು ಬರಮಾಡಿಕೊಂಡು  ಅವರಿಗೆ ಕೇಸಿನ ಸಾರಾಂಶವನ್ನು ತಿಳಿಸಿ ಪಂಚರಾಗಿ ಬರುವಂತೆ ಕೋರಿರುತ್ತೆ ಕಡೆಗೆ ಸ್ವಲ್ಪ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಎ.ಪಿ.ಎಂ.ಸಿ ಮಾರುಕಟ್ಟೆ ಆವರಣದ ಖಾಲಿ ನಿರ್ಜನ ಪ್ರದೇಶದಲ್ಲಿ  ಕೆಲವರು ಗುಂಪಾಗಿ ಕುಳಿತುಕೊಂಡು ಅಂದರ್ ಗೆ 100 ರೂ ಬಾಹರ್ ಗೆ 100 ರೂ ಎಂದು ಕೂಗುತ್ತಿದ್ದು,  ಅರೋಪಿಗಳು ಅಕ್ರಮ ಜೂಜಾಟ ಅಡುತ್ತಿರುವುದು ಖಚಿತ ಪಡಿಸಿಕೊಂಡು ಸಿಬ್ಬಂಧಿಯವರಿಗೆ  ಕೊಟ್ಟ ಸೂಚನೆಯಂತೆ  ಸಿಬ್ಬಂದಿಯವರು ಅವರನ್ನು ಸುತ್ತುವರೆದಿದ್ದು ಅಷ್ಟರಲ್ಲಿ  ಪೊಲೀಸರನ್ನು ನೋಡಿ ಜೂಜಾಟುತ್ತಿದ್ದ 5 ಜನರು ಓಡಿ ಹೋಗಲು ಪ್ರಯತ್ನಿಸಿದ್ದು ಕೂಡಲೆ ಸಿಬ್ಬಂದಿಯವರು ಹಿಂಬಾಲಿಸಿ ಇಬ್ಬರನ್ನು ಹಿಡಿದುಕೊಂಡು ನನ್ನ ಮುಂದೆ ಹಾಜರು ಪಡಿಸಿರುತ್ತಾರೆ. ಸದರಿ ಆಸಾಮಿಗಳನ್ನು ಪಂಚರ ಸಮಕ್ಷಮ ವಿಚಾರಣೆ ಮಾಡಲಾಗಿ  ಅವರು ಒಬ್ಬೊಬ್ಬರಾಗಿ ತಮ್ಮ ಹೆಸರು ವಿಳಾಸ ತಿಳಿಸಿದ್ದು, 1, ದೇವರಾಜ್ ಬಿನ್ ಅಶ್ವತ್ಥಪ್ಪ, 22 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ; ಮಂಚನಬಲೆ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. 2) ಕುಮಾರ್ ಬಿನ್ ಮಂಜುನಾಥ, 24 ವರ್ಷ, ಕುರುಬರು, ಹೂವಿನ ವ್ಯಾಪಾರ, ವಾಸ: ರಾಜಣ್ಣ ಬಿಲ್ಡಿಂಗ್, ಪಕ್ಕ ವಾರ್ಡ್ ನಂ: 06, ಎ.ಪಿ.ಎಂ.ಸಿ ಮಾರುಕಟ್ಟೆ ಪಕ್ಕ, ಚಿಕ್ಕಬಳ್ಳಾಪುರ ನಗರ. ಸ್ವಂತ ಸ್ಥಳ ವಿನೋಭಾ ನಗರ,ದಾವಣಗೆರೆ, 3) ಶಿವರಾಜ್ ಬಿನ್ ನಾರಾಯಣಸ್ವಾಮಿ, 19 ವರ್ಷ, ಕುರುಬರು, ಅಮೇಜಾನ್ ನಲ್ಲಿ ಕೆಲಸ, ವಾಸ; ಮಂಚನಬಲೆ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. 4) ಶೇಖರ್ ಬಿನ್ ಸುಬ್ಬಣ್ಣ, 28 ವರ್ಷ, ಜಿರಾಯ್ತಿ, ಮಂಚನಬಲೆ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 5) ಸಂಜಯ್ ಕುಮಾರ್ ಬಿನ್ ಲೋಕೇಶ್, 24 ವರ್ಷ, ಹೂವಿನ ವ್ಯಾಪಾರ, ನಾಮದಾರ ಗೌಡ, ವಾಸ: ಎ.ಪಿ.ಎಂ.ಸಿ ಮಾರುಕಟ್ಟೆ ಪಕ್ಕ ರಾಜಣ್ಣ ಬಿಲ್ಡಿಂಗ್, ಚಿಕ್ಕಬಳ್ಳಾಪುರ ನಗರ. ಸ್ವಂತ ಸ್ಥಳ: ಕೊಡಗು ಕುಶಾಲ ನಗರ, ಹೆಬ್ಬಾಲೆ ಗ್ರಾಮ, ಕೊಡಗು ಜಿಲ್ಲೆ ವಾಸಿಗಳು ಎಂದು ತಿಳಿಸಿದರು. ಸದರಿ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಅಕ್ರಮವಾಗಿ ಅಂದರ್ ಬಾಹರ್  ಜೂಜಾಟ ವನ್ನು ಆಡುತ್ತಿದ್ದು ಆಸಾಮಿಗಳು ಜೂಜಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ  ಪಣಕ್ಕಿಟ್ಟಿದ್ದ ಹಣ ಮತ್ತು ಇಸ್ಪೀಟ್ ಎಲೆಗಳನ್ನು ಚೆಲ್ಲಾ ಪಿಲ್ಲಿಯಾಗಿ ಎಸೆದಿದ್ದನ್ನು  ಸಂಗ್ರಹಿಸಿಕೊಂಡು ಎಣಿಸಲಾಗಿ ನಗದು 2330/- ರೂ ಮತ್ತು 52 ಇಸ್ಪೀಟ್ ಎಲೆಗಳು ದೊರೆತಿರುತ್ತದೆ.  ಆಸಾಮಿಗಳು ಪಣಕ್ಕಿಟ್ಟಿದ್ದ ಹಣ 2330/- ರೂ ಮತ್ತು 52 ಇಸ್ಪೀಟ್ ಎಲೆಗಳನ್ನು  ಹಾಗೂ ಒಂದು ಪ್ಲಾಸ್ಟಿಕ್ ಚೀಲವನ್ನು ಅಮಾನತ್ತು ಪಡಿಸಿಕೊಂಡು ವಶಕ್ಕೆ ಪಡೆದುಕೊಂಡಿರುತ್ತದೆ. ಪಂಚನಾಮೆಯನ್ನು ರಾತ್ರಿ 9.15 ಗಂಟೆಯಿಂದ ರಾತ್ರಿ 10.15 ಗಂಟೆಯವರೆಗೆ ಠಾಣೆಗೆ ಒದಗಿಸಿರುವ ಬ್ಯಾಟರಿ ಟಾರ್ಚ್ ಬೆಳಕಿನಲ್ಲಿ ಕೈಗೊಂಡಿರುತ್ತೆ. ಅಮಾನತ್ತು ಪಡಿಸಿಕೊಂಡ ಮಾಲು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ರಾತ್ರಿ 10.45 ಗಂಟೆಗೆ ವಾಪಾಸ್ಸಾಗಿ ಆಸಾಮಿಗಳು, ಮಾಲು, ಪಂಚನಾಮೆ ಮತ್ತು ಘನ ನ್ಯಾಯಾಲಯದ ಅನುಮತಿ ಪತ್ರವನ್ನು ಹಾಜರು ಪಡಿಸುತ್ತಿದ್ದು  ಅರೋಪಿಗಳ ವಿರುದ್ದ  ಕಲಂ 87 ಕೆಪಿ ಅಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಈಪ್ರ.ವ.ವರದಿ.

 

5. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.50/2021 ಕಲಂ. 323,504 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act:-

          ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಾನು ಪರಿಶಿಷ್ಟ ಜಾತಿಗೆ ಸೇರಿರುತ್ತೇನೆ ನಾನು ಬೆ.ವಿ.ಕಂ ಚಿಂತಾಮಣಿ ನಗರ ಉಪ ವಿಭಾಗದ ಕಾರ್ಯ ಮತ್ತು ಪಾಲನಾ ಘಟಕ-02 ರಲ್ಲಿ ಮಾರ್ಗದಾಳು ಆಗಿ ಕಾರ್ಯನಿರ್ವಹಿಸುತ್ತಿದ್ದು ದಿನಾಂಕ: 04.04.2021 ರಂದು 9:00 ಗಂಟೆಗೆ ಕೆಲಸಕ್ಕೆ ಹಾಜರಾಗಿ ಆಶ್ರಯ ಬಡಾವಣೆಯ 100 ಕೆವಿಎ ಪರಿವರ್ತಕ ಸಿಂಗಲ್ ಆಗಿರುವವುದನ್ನು ಸರಿಪಡಿಸಿದ ನಂತರ ನಾನು ಕಚೇರಿ ಹತ್ತಿರ ಇರುವಾಗ ಸುಮಾರು 10:30 ಗಂಟೆಯಲ್ಲಿ ಶ್ರೀ ಆಸ್ಲಂ ಪಾಷ ರವರು ಎನ್ ಎನ್ ಟಿ ರಸ್ತೆಯಲ್ಲಿರುವ ಸ್ಮಶಾನದ ಹತ್ತಿರವಿರುವ 100 ಕೆವಿಎ ಪರಿವರ್ತಕದ ದುರಸ್ತಿ ಕಾರ್ಯವಿದೆ ಎಂದು ಕೆರದುಕೊಂಡು ಹೋಗಿ ತದನಂತರ ತಮ್ಮ ದ್ವಿಚಕ್ರ ವಾಹನದಲ್ಲಿ ಕುರಿಸಿಕೊಂಡು ಪಕ್ಕಕ್ಕೆ ಕರೆದುಕೊಂಡು ಹೋಗಿ ಪರಿವರ್ತಕದ ದುರಸ್ತಿ ಕಾರ್ಯನಿರ್ವಹಿಸಲು ಸೂಚಿಸಿದನು ಸುಮಾರು 1.45 ಗಂಟೆ ಅಗಿದ್ದು ಜೆ ಇ ಆಸ್ಲಂ ಪಾಷ ರವರು ಕೆ ಜಿ ಎನ್ ಸ್ಕೂಲ್ ಹತ್ತಿರ ದುರಸ್ತಿ ಕಾರ್ಯ ನಿರ್ವಹಿಸಲು ಸೂಚಿಸಿದರು ನಾನು ಆದಾಗಲೆ ಕಾರ್ಯ ನಿರ್ವಹಿಸಿ ಸುಸ್ತಾಗಿದ್ದು ಸ್ವಲ್ಪ ಸಮಯದ ನಂತರ ಹೋಗುತ್ತೇನೆ ಸರ್ ಎಂದು ಹೇಳಿದೆನು ಅಷ್ಟಕ್ಕೆ ಅವರು ನನ್ನ ಮೇಲೆ ಕೋಪಗೊಂಡು ಏ ನಿವೇಲ್ಲಾ ಏನಕ್ಕೂ ಬರ್ತಿರಾ ಅಂತ ಹೇಳಿ ಬೈದರು ಅದಕ್ಕೆ ನಾನು ಹಾಗೆಲ್ಲ ಮಾತನಾಡಬೇಡಿ ಸರ್ ಈಗ ಊಟದ ಸಮಯ ಊಟ ಮುಗಿಸಿಕೊಂಡು ನೀವು ಹೇಳಿದ ಕೆಲಸ ಮಾಡುತ್ತೇನೆ ಎಂದು ತಿಳಿಸಿದೆನು ಆದರೆ ಜೆ ಇ ಆಸ್ಲಂ ಪಾಷ ರವರು ಏಕಾ ಏಕಿ ಕೋಪಗೊಂಡು ನಿಮ್ಮಮ್ಮನ್ನೆ ಜಾತಿನಾ ಕೇಯ್ಯ ಎಂದು ಜಾತಿ ನಿಂದನೆ ಮಾಡುತ್ತಲೆ ಎಲ್ಲಿಂದಲೂ ಬಂದು ನೀನು ನನ್ನ ಶಾಟ ಕಿತ್ಕೋಳ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಸಮವಸ್ರದ ಗಲ್ಲಾಪಟ್ಟಿ ಹಿಡಿದುಕೊಂಡು ಶರ್ಟ್ ಗುಂಡಿಗಳನ್ನು ಕಿತ್ತುಹಾಕಿ ನನ್ನ ಕಪಾಳಕ್ಕೆ ಹೋಡೆದು ಎದೆಯ ಭಾಗಕ್ಕೆ ಜೋರಾಗಿ ಹೊಡೆದು ಪಕ್ಕಕ್ಕೆ ತಳ್ಳದರು ನಂತರ ನಾನು ಪಕ್ಕದಲ್ಲಿದ್ದ ಚರಂಡಿಗೆ ಬುದ್ದು ಹೋದೆನು ಇದರಿಂದ ನನ್ನ ಎದೆಯ ಭಾಗದಲ್ಲಿ ತುಂಬಾ ನೋವಾಗುತ್ತಿದ್ದು ಮೈ ಕೈ ಎಲ್ಲಾ ನೋವಾಗುತ್ತಿರುತ್ತದೆ ಈ ಘಟನೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆಗೊಳಗಾಗಿದ್ದೇನೆ ಸಾರ್ವಜನಿಕ ಸ್ಥಳದಲ್ಲಿ ಎಲ್ಲರ ಮುಂದೆ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುವ ಹಾಗೂ ಮುಂದಿನ ದಿನಗಳಲ್ಲಿ ನನಗೆ ಆಸ್ಲಂ ಪಾಷ  ರವರಿಂದ ಪ್ರಾಣಾ ಪಾಯವಾಗುವ ಸಾಧ್ಯತೆ ಇರುತ್ತದೆ. ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿದರೂ ಫಲಕಾರಿಯಾಗದ ಕಾರಣ ದೂರನ್ನು ತಡವಾಗಿ ನೀಡಿರುತ್ತೆ ಆದ್ದರಿಂದ ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 

6. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.51/2021 ಕಲಂ. 341,504,506  ಐ.ಪಿ.ಸಿ:-

          ಪಿರ್ಯಾದಿದಾರರಾದ  ಅಸ್ಲಾಂ ಪಾಷ.ಎಸ್.ಎ ಬಿನ್ ಅನ್ವರ್ ಪಾಷ, ಪ್ರಭಾರಿ ಸಹಾಯಕ ಅಭಿಯಂತರರು ಘಟಕ-2 ನಗರ ಉಪ ವಿಭಾಗ ಬೆ.ವಿ.ಕಂ ಚಿಂತಾಮಣಿ ನಗರ ಠಾಣೆಗೆ ಬೆಳಿಗ್ಗೆ 10:30 ಗಂಟೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 04.04.2021 ರಂದು ಬೆಳಿಗ್ಗೆ ಸುಮಾರು 10:30 ಗಂಟೆ ಸಮಯದಲ್ಲಿ ಬಿಲಾರ ಮಸೀದಿ ರಸ್ತೆಯಲ್ಲಿ ತಂತಿ ಜಾಲಾಡುತ್ತಿರು ಸ್ಥಿತಿಯಲ್ಲಿದ್ದು ಅದನ್ನು ನಮ್ಮ ಸಹಾಯಕ ನಿರ್ವಾಹಕ ಇಂಜಿನಿಯರ್(ವಿ) ನಗರ ಉಪ ವಿಭಾಗ ಇವರ ಗಮನಕ್ಕೆ ತಂದು ಸರಿಪಡಿಸಲು ಶ್ರೀ ಅನಂದಪ್ಪ, ಅಂಬರೀಶ್, ವಿದ್ಯಾಧರ ಕೆ.ಪಿ ಮತ್ತು ಮಲ್ಲಿಕಾರ್ಜುನ ದುರ್ಗಪ್ಪ ಬಡಿಗೇರ್ ಹಾಗೂ ನಾನು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಅದನ್ನು ಕಂಪನಿಯ ನಿಯಮಾನುಸಾರ ತಂತಿಗಳನ್ನು ಕೆಳಗಿಳಿಸಿ ಅದನ್ನು ಸರಿಪಡಿಸಿ ವಿದ್ಯುತ್ ಕಲ್ಪಿಸಲಾಯಿತು ಹಾಗೂ ಗಣೇಶ್ ನಗರ 100 ಕೆ ವಿ ಎಂ ಪರಿವರ್ತಕದ ಮೇಲೆ ಲೋಡ್ ಬೈಫರೆಷನ್ ಮಾಡಲು ಸುಮಾರು 04 ಕಂಬಗಳಲ್ಲಿ ಕೆಲಸವಿದ್ದು ಮಲ್ಲಿಕಾರ್ಜುನ ಬಡಿಗೇರ್ ರವರು ಒಂದು ಕಂಬವನ್ನು ಸಹ ಹತ್ತಿ ಕೆಲಸ ಮಾಡಿರುವುದಿಲ್ಲ ನೀನು ಒಂದು ಕಂಬವನ್ನಾದರೂ ಹತ್ತಿ ಕೆಲಸ ಮಾಡು ಅಂತ ಹೇಳಿದಾಗ ನನ್ನ ಕೈಲ್ಲಿ ಆಗುವುದಿಲ್ಲ ನನಗೆ ಕಂಬ ಹತ್ತಲು ಬರುವುದಿಲ್ಲ ನಾನು ಕಂಬ ಹತ್ತಿ ಕೆಲಸ ಮಾಡುವುದಿಲ್ಲ ನಿನ್ನ ಕೈಯಲ್ಲಿ ಏನಾಗುತ್ತೋ ಅದನ್ನು ಮಾಡು ಎಂದು ತನಗೆ ಏಕವಚನದಲ್ಲಿ ನಿಂದಿಸುತ್ತಾ ನಿನ್ನ ಅಮ್ಮ ಅಕ್ಕ ಎನ್ನುತ್ತಾ ನನ್ನ ಮಗನೇ ಎಂದು ಕೂಡಾ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಮೇಲೆ ಹಲ್ಲೆ ಮಾಡಲು ತನ್ನನ್ನು ತಳ್ಳಿಕೊಂಡು ಬಂದಿರುತ್ತಾರೆ ಹಾಗೂ ಕೈಯಲ್ಲಿರುವ ಕಟ್ಟಿಂಗ್ ಪ್ಲೇಯರ್ ನ್ನು ತನ್ನ ಮೇಲೆ ಎಸೆದಿರುತ್ತಾರೆ ಹಾಗೂ ನೀನು ತುರಕ ನನ್ನ ಮಗ ನಿಮ್ಮಂತವರನ್ನು ಈ ಭಾರತ ದೇಶದಲ್ಲಿ ನಿಲ್ಲಿಸಿಬಿಟ್ಟು ಗುಂಡಿಟ್ಟು ಸುಟ್ಟು ಹಾಕಬೇಕು ನೀವು ಪಾಕಿಸ್ತಾನ್ ನನ್ನ ಮಕ್ಕಳು ಭಾರತ ದೇಶದಲ್ಲಿ ಇರಬಾರದು ನಿಮ್ಮನ್ನು ಈ ದೇಶದಿಂದ ಓಡಿಸಬೇಕು ಆಂತ ತನಗೆ ಜಾತಿ ನಿಂದನೆ ಮಾಡಿ ನಮಗೆ ತುಂಬಾ ನೋವುಂಟು ಮಾಡಿರುತ್ತಾರೆ , ಜೊತೆಗೆ ಈ ಹಿಂದೆಯೂ ಕೂಡಾ ಮಲ್ಲಿಕಾರ್ಜುನ ಬಡಿಗೇರ  ಅವರಿಗೆ ಏನಾದರೂ ಕೆಲಸವನ್ನು ಮಾಡಲು ಹೇಳಿದಾಗ ಬ್ಲಾಕ್ ಮೇಲ್ ಮಾಡುವಂತಹ ಸಂದೇಶಗಳನ್ನು ತನಗೆ ಕಳಿಸಿರುತ್ತಾರೆ,ಈ ಹಿಂದೆ ಸಹ ಘಟಕ -2 ರಲ್ಲಿ ಕಾರ್ಯನಿರ್ವಹಿಸುವ ಹನುಮಂತ ಭಂಜತ್ರಿ ರವರ ಮೇಲೆ ಸಹ ಅವಾಚ್ಯ ಶಬ್ದಗಳಿಂದ ಹಲ್ಲೆ ಮಾಡಿರುವುದು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿರುತ್ತೆ. ತಾನು ಈ ಎಲ್ಲಾ ವಿಷಯವನ್ನು ಹಿರಿಯ  ಅಧಿಕಾರಿಗಳಿಗೆ ತಿಳಿಸಿರುತ್ತೇನೆ, ಈ ಎಲ್ಲಾ ಅಧಿಕಾರಿಗಳು ತನ್ನ ಜೇಬಿನಲ್ಲಿದ್ದಾರೆ ಏನೂ ಕಿತ್ತುಕೊಳ್ಳುತ್ತೀಯಾ ಕಿತ್ತಿಕೋ ಎಂದು ಹೇಳಿರುತ್ತಾರೆ, ಆದ ನಂತರ ರವಿಕುಮಾರ ಮತ್ತು ಸುನಿಲ್ ಕುಮಾರ್ ಜಿ.ಎನ್ ರವರಿಗೆ ಕರೆಯನ್ನು ಮಾಡಿ ವಿದ್ಯಾಧರ ಹಾಗೂ ಅಂಬರೀಶ ರವರ ಕೈಯಲ್ಲಿ ಪೂರ್ಣಗೂಳಿಸಿ ನಡೆದಿರುವ ಘಟನೆಯನ್ನು ತಮ್ಮ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಇದರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.83/2021 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ 05/04/2021 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ. ಮೋಹನ್.,ಎನ್.  ಪಿಎಸ್ಐ, ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ,  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಈ ದಿನ ದಿನಾಂಕ:05/04/2021 ರಂದು ನಾನು  ನಗರಗೆರೆ  ಹೋಬಳಿಯ ಗ್ರಾಮಗಳ ಬೇಟಿ ಕಾರ್ಯದಲ್ಲಿದ್ದಾಗ, ಸಂಜೆ ಸುಮಾರು 4-00 ಗಂಟೆಯಲ್ಲಿ ಯಾರೋ ಒಬ್ಬ ಆಸಾಮಿಯು ಕೋಟಪ್ಪನಹಳ್ಳಿ ಸಮೀಪ ಮಧ್ಯದ ಪಾಕೆಟ್ ಗಳನ್ನು ಚೀಲದಲ್ಲಿ ಹಾಕಿಕೊಂಡು, ಮಾರಾಟ ಮಾಡಲು  ತೆಗೆದುಕೊಂಡು ಹೋಗುತ್ತಿರುವುದಾಗಿ ಮಾಹಿತಿ ಬಂದಿದ್ದು, ನಾನು ಹಾಗು  ಪೊಲೀಸ್ ಸಿಬ್ಬಂದಿಯವರಾದ, ಪಿ.ಸಿ.281 ಗುರುಸ್ವಾಮಿ ಹಾಗು ಪಿ.ಸಿ.426 ಲೋಹಿತ್ ರವರೊಂದಿಗೆ ಜೀಪಿನಲ್ಲಿ ಕೋಟಪ್ಪನಹಳ್ಳಿ ಬಳಿ ಬರುತ್ತಿದ್ದಂತೆ ಯಾರೋ ಒಬ್ಬ ಆಸಾಮಿಯು ಚೀಲವನ್ನು ಹಿಡಿದುಕೊಂಡು ನಡದುಕೊಂಡು ಹೋಗುತ್ತಿದ್ದು,  ಪೊಲೀಸ್ ಜೀಪನ್ನು ಕಂಡು  ಪರಾರಿಯಾಗಲು ಯತ್ನಿಸಿದಾಗ,  ಪೊಲೀಸ್ ಸಿಬ್ಬಂದಿಯವರಾದ ಗುರುಸ್ವಾಮಿ ಹಾಗು ಲೋಹಿತ್ ರವರು ಆತನನ್ನು ಹಿಂಬಾಲಿಸಿ ಹಿಡಿದುಕೊಂಡಿದ್ದು, ಹೆಸರು & ವಿಳಾಸ ತಿಳಿಯಲಾಗಿ ತನ್ನ ಹೆಸರು ನರಸಿಹಮೂರ್ತಿ ಬಿನ್ ಲೇಟ್ ನರಸಿಂಹಪ್ಪ,  30 ವರ್ಷ,  ಪರಿಶಿಷ್ಟಜಾತಿ,  ಬಂದಾರ್ಲಹಳ್ಳಿ ಗ್ರಾಮ, ನಗರಗೆರೆ ಹೋಬಳಿ,  ಗೌರೀಬಿದನೂರು ತಾಲ್ಲೂಕು, ಎಂದು ತಿಳಿಸಿದ್ದು, ಈತನ ಬಳಿ ಇದ್ದ  ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ   90 ML. ಸಾಮರ್ಥ್ಯದ HAYWARDS CHEERS WHISKY ಯ 96 ಟೆಟ್ರಾ ಪಾಕೆಟ್ ಗಳು ಇರುವ  ರಟ್ಟಿನ ಬಾಕ್ಸ್ ಇದ್ದು,  ಇವುಗಳನ್ನು ಮಾರಾಟ ಮಾಡಲು, ಹಾಗು ಸಾಗಿಸಲು ಪರವಾನಗಿ ಇದೆಯೇ ಎಂದು ಕೇಳಲಾಗಿ, ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದು,  ಈ ವ್ಯಕ್ತಿಯು ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮಾರಾಟ ಮ಻ಡಲು ಮಧ್ಯವನ್ನು ಸಾಗಿಸುತ್ತಿರುವುದು ಕಂಡು ಬಂದಿರುವುದಿರಿಂದ  ಸ್ಥಳಕ್ಕೆ ಪಂಚರನ್ನು ಕರೆಸಿಕೊಂಡು, ಪಂಚರ ಸಮಕ್ಷಮದಲ್ಲಿ ವಶಕ್ಕೆ ತೆಗೆದುಕೊಂಡಿರುತ್ತೆ. ಇವುಗಳ ಒಟ್ಟು ಸಾಮಧ್ಯ  8 ಲೀಟರ್  640 ಎಂ.ಎಲ್. ಇರುತ್ತೆ.  ಇವುಗಳ ಒಟ್ಟು ಬೆಲೆ 3,372 ರೂಗಳು ಆಗಿರುತ್ತೆ. ಪರೀಕ್ಷೆಗೆ ಕಳುಹಿಸುವ ಸಲುವಾಗಿ ಇವುಗಳ ಪೈಕಿ,ಎರಡು HAYWARDS CHEERS WHISKY ಯ ಟೆಟ್ರಾ ಪಾಕೆಟ್ ಗಳನ್ನು   ಪ್ರತ್ಯೇಕವಾಗಿ ತೆಗೆದು  ಎರಡನ್ನೂ ಬಿಳೀ ಬಟ್ಟೆಯಿಂದ ಪ್ಯಾಕ್ ಮಾಡಿ, “ M ” ಅಕ್ಷರದಿಂದ ಸೀಲು ಮಾಡಿ ಪಂಚರ ಸಮಕ್ಷಮದಲ್ಲಿ ಸಂಜೆ 5-00 ಗಂಟೆಯಿಂದ 5-30 ಗಂಟೆಯವರೆಗೆ ಪಂಚನಾಮೆ ಮೂಲಕ ವಶಪಡಿಸಿಕೊಂಡಿರುತ್ತೆ.  ಆರೋಪಿ, ಮಾಲು, ಹಾಗು ಪ್ಲಾಸ್ಟಿಕ್ ಚೀಲವನ್ನು   ವಶಕ್ಕೆ ತೆಗೆದುಕೊಂಡು, ಆರೋಪಿಯ ವಿರುದ್ಧ ಕಲಂ:32,34 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಕೇಸು ದಾಖಲಿಸಿರುತ್ತೆ.

 

8. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.52/2021 ಕಲಂ. 279,304(A) ಐ.ಪಿ.ಸಿ:-

          ದಿನಾಂಕ:05-04-2021 ರಂದು ರಾತ್ರಿ:7-00 ಗಂಟೆಗೆ ಪಿರ್ಯಾದಿದಾರರಾದ ಗಜಾನಂದ ಬಿನ್ ಲೇಟ್ ಆದಿನಾರಾಯಣರೆಡ್ಡಿ 45 ವರ್ಷ ವಕ್ಕಲಿಗರು ಜಿರಾಯ್ತಿ ವಾಸ ಗಂಧಂನಾಗೇನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ:ದಿನಾಂಕ:04-04-2021 ರಂದು ಸಂಜೆ ಸುಮಾರು 5-50 ಗಂಟೆಯಲ್ಲಿ ತನ್ನ ತಮ್ಮನಾದ ವೇಣುಗೋಪಾಲ ಕೃಷ್ಣ ರವರ  ಮಗನಾದ  ಗೋವರ್ದನ್ ರವರು ಕೆ.ಎ-40 ಯು-4363 ನೊಂದಣಿ ಸಂಖ್ಯೆಯ ಹೀರೋ ಸ್ಪ್ಲೆಂಡರ್ ಪ್ಲಸ್  ದ್ವಿ ಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಗಂದಂ ನಾಗೇನಹಳ್ಳಿ ಕಡೆಯಿಂದ ದೂಮಕುಂಟಹಳ್ಳಿ ಗ್ರಾಮದ ಕಡೆ ಹೋಗುತ್ತಿದ್ದಾಗ ದೂಮಕುಂಟಹಳ್ಳಿ ಕ್ರಾಸ್ ಹತ್ತಿರ ರಸ್ತೆಯಲ್ಲಿ  ಚೆಂಡೂರು ಕ್ರಾಸ್ ಕಡೆಯಿಂದ ಅದೇ ರಸ್ತೆಯಲ್ಲಿ ಗಂಧಂ ನಾಗೇನಹಳ್ಳಿ ಗ್ರಾಮದ ಕಡೆ ಹೋಗಲು  ಕೆ.ಎ-40 ಎಲ್-7246 ನೊಂದಣಿ ಸಂಖ್ಯೆಯ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರವಾಹನವನ್ನು ಅದರ ಸವಾರನಾದ ನಾರಾಯಣಸ್ವಾಮಿ ಬಿನ್ ವೆಂಕಟರಾಯಪ್ಪ ವಾಸ ಗಂದಂನಾಗೇನಹಳ್ಳಿ ಗ್ರಾಮ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಗೋವರ್ದನ್ ರವರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಕೆ.ಎ-40 ಯು-4363 ನೊಂದಣಿ ಹೀರೋ ಸ್ಪ್ಲೆಂಡರ್ ಪ್ಲಸ್  ಸಂಖ್ಯೆಯ ದ್ವಿ ಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ ಪರಿಣಾಮ ಮೇಲ್ಕಂಡ ಎರಡು ದ್ವಿ ಚಕ್ರವಾಹನಗಳು ಜಖಂಗೊಂಡು ಗೋವರ್ದನ್ ರವರಿಗೆ ತಲೆಗೆ ಮತ್ತು ಮುಖಕ್ಕೆ ರಕ್ತಗಾಯಗಳಾಗಿ ಮತ್ತು ಅಪಘಾತಪಡಿಸಿದ ನಾರಾಯಣಸ್ವಾಮಿ ರವರಿಗೂ ಸಹ ಗಾಯಗಳಾಗಿರವುದಾಗಿ ಗಾಯಗೊಂಡಿದ್ದ ಇಬ್ಬರನ್ನು ಚಿಕತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರವುದಾಗಿ ವಿಚಾರವನ್ನು ತಿಳಿದುಕೊಂಡು ತಾನು  ತನ್ನ ತಮ್ಮನಾದ ವೇಣುಗೋಪಾಲ ಕೃಷ್ಣ ರವರನ್ನು ಕರೆದುಕೊಂಡು ಬಾಗೇಪಲ್ಲಿ ಸರ್ಕಾರಿ  ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿರವುದಾಗಿ  ನಂತರ ಗಾಯಗೊಂಡ ಗೋವರ್ದನ್ ರವರನ್ನು ಹೆಚ್ಚಿನ ಚಿಕತ್ಸೆಯ ಬಗ್ಗೆ ಬೆಂಗಳೂರಿನ ಯಲಹಂಕದ ಕೆ.ಕೆ.ಆಸ್ಪತ್ರೆಗೆ ದಾಖಲಿಸಿ ಚಿಕತ್ಸೆಯನ್ನು ನೀಡಿಸಿದ್ದು ನಂತರ ಈ ದಿನ ದಿನಾಂಕ:05-04-2021 ರಂದು ಕೆ.ಕೆ.ಆಸ್ಪತ್ರೆಯ ವೈದ್ಯರ ಸಲಹೆ ಮೇರಿಗೆ  ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುತ್ತಿದ್ದಾಗ ಮೇಲ್ಕಂಡ ರಸ್ತೆ ಅಪಘಾತದಲ್ಲಿ ಆದ ಗಾಯಗಳ ದೆಸೆಯಿಂದ ಗೋವರ್ದನ್ ರವರು ಈ ದಿನ ಮದ್ಯಾಹ್ನ ಸುಮಾರು 3-00 ಗಂಟೆಯಲ್ಲಿ ದಾರಿ ಮದ್ಯ ಬೆಂಗಳೂರಿನಲ್ಲಿ ಮೃತಪಟ್ಟಿರವುದಾಗಿ  ನಂತರ ಗೋವರ್ದನ್ ರವರ ಮೃತದೇಹವನ್ನು ಬೆಂಗಳೂರಿನಿಂದ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ತಗೆದುಕೊಂಡು ಬಂದಿದ್ದು ತನ್ನ ತಮ್ಮನ ಮಗನಾದ ಗೋವರ್ಧನ್ ಬಿನ್ ವೇಣುಗೋಪಾಲಕೃಷ್ಣ ಸುಮಾರು 17 ವರ್ಷ ವಕ್ಕಲಿಗರು ವ್ಯಾಸಂಗ ವಾಸ ಗಂದಂನಾಗೇನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು ರವರಿಗೆ ಅಪಘಾತಪಡಿಸಿದ ಮೇಲ್ಕಂಡ  ಕೆ.ಎ-40 ಎಲ್-7246 ನೊಂದಣಿ ಸಂಖ್ಯೆಯ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್  ದ್ವಿ ಚಕ್ರವಾಹನದ ಸವಾರನಾದ ನಾರಾಯಣಸ್ವಾಮಿ ಬಿನ್ ವೆಂಕಟರಾಯಪ್ಪ ವಾಸ ಗಂದಂನಾಗೇನಹಳ್ಳಿ ಗ್ರಾಮ ರವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

9. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.64/2021 ಕಲಂ. 143,147,323,324,354,355,504,506,149 ಐ.ಪಿ.ಸಿ:-

          ದಿನಾಂಕ:05/04/2021 ರಂದು ಪಿರ್ಯಾದಿದಾರರಾದ ಶ್ರೀ ವೆಂಕಟೇಶ ಬಿನ್ ನರಸಪ್ಪ, 42 ವರ್ಷ, ಪ.ಜಾತಿ ಬೆಳಚಿಕ್ಕನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ;01/04/2021 ರಂದು ಸಂಜೆ ಸುಮಾರು 8-20 ಗಂಟೆಗೆ ನಾನು ದಿನನಿತ್ಯದ ಕೆಲಸಗಳನ್ನು ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ನಮ್ಮ ಗ್ರಾಮದ 1) ಮೈಲಾರಿ ಬಿನ್ ಸಿರ್ವಾಯಿ ಮೈಲಾರಪ್ಪ, 45 ವರ್ಷ, 2) ಗಂಗಾಧರಪ್ಪ ಬಿನ್ ಲೇಟ್ ಸಿರ್ವಾಯಿ ಮೈಲಾರಪ್ಪ, 55 ವರ್ಷ, 3) ಚಿನ್ನಪ್ಪಯ್ಯ ಬಿನ್ ಲೇಟ್ ಗಂಗಪ್ಪ, 40 ವರ್ಷ, 4) ಅನಿಲ್ ಕುಮಾರ್ ಬಿನ್ ಗಂಗಾಧರಪ್ಪ, 26 ವರ್ಷ, 5) ಮಲ್ಲಪ್ಪ ಬಿನ್ ಲೇಟ್ ಗಂಗಪ್ಪ, 48 ವರ್ಷ, 6) ನರಸಯ್ಯ ಬಿನ್ ಗಂಗಪ್ಪ, 32 ವರ್ಷ, 7) ಸತ್ಯಪ್ಪ ಬಿನ್ ಲೇಟ್ ಗಂಗಪ್ಪ, 55 ವರ್ಷ, 8) ನಾಗಾರ್ಜುನ ಬಿನ್ ದೇವಪ್ಪ, 25 ವರ್ಷ, ಮತ್ತು 9) ಮೈಲಾರಪ್ಪ ಬಿನ್ ಲೇಟ್ ಗಂಗಪ್ಪ, 50 ವರ್ಷ, ರವರು ಸೇರಿ ಏಕಾಏಕಿ ಗುಂಪು ಕಟ್ಟಿಕೊಂಡು ನನ್ನ ಮತ್ತು ನನ್ನ ಕುಟುಂಬದವರ ಮೇಲೆ ಯಾವುದೋ ದ್ವೇಷವನ್ನಿಟ್ಟುಕೊಂಡು ತನ್ನ ಮನೆಯ ಹತ್ತಿರ ಬಂದು ಸಿಕ್ಕಸಿಕ್ಕವರನ್ನು ದೊಣ್ಣೆಗಳಿಂದ ಮತ್ತು ಕೈಗಳಿಂದ ಪಾದರಕ್ಷೆಗಳಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಮೇಲೆ ಹಲ್ಲೇ ಮಾಡಿದ್ದು, ತನ್ನನ್ನು ಇವರು ಹೊಡೆಯುವಾಗ ತಾನು ಕಿರುಚಿಕೊಂಡಾಗ ತನ್ನ ತಾಯಿ ಲಕ್ಷ್ಮಮ್ಮ        ಮತ್ತು ತನ್ನ ಹೆಂಡತಿ ಸುಮಿತ್ರ ರವರು ಬಂದು ಏಕೆ ನಮ್ಮ ಕುಟುಂಬದವರ ಮೇಲೆ ಗಲಾಟೆ ಮಾಡುತ್ತೀರ ದು ಕೇಳಿದ್ದಕ್ಕೆ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ಜುಟ್ಟು ಹಿಡಿದುಕೊಂಡು ಎಳೆದಾಡಿ ಹೊಡೆದಿದ್ದು, ಅನಿಲ್ ಕುಮಾರ್ ಮತ್ತು ಚಿನ್ನಪ್ಪಯ್ಯ ರವರು ಮನಬಂದಂತೆ ಬೈದು ಹೊಡೆದಿರುತ್ತಾರೆ. ಆಗ ತನ್ನ ಹೆಂಡತಿ ಜ್ಞಾನ ತಪ್ಪಿ ಬಿದ್ದಿರುತ್ತಾರೆ. ಆಗ ನನ್ನ ತಮ್ಮ ಅಶೋಕ್ ರವರು ಬಂದು ಕೇಳಿದಾಗ ನಾಗಾರ್ಜುನ ರವರು ನನ್ನ ತಮ್ಮನಿಗೂ ಸಹ ಹೊಡೆದಿರುತ್ತಾರೆ. ಏನಾದರೂ ನಮ್ಮ ತಂಟೆಗೆ ಬಂದರೆ ನಿಮ್ಮ ಕುಟುಂಬದವರನ್ನು ಸಾಯಿಸಿ ಇಲ್ಲಿಯೇ ಹೂತು ಬಿಡುತ್ತೇವೆಂದು ಪ್ರಾಣ ಬೆದರಿಕೆ ಹಾಕಿದ್ದು, ಆಗ ಗಾಯಗೊಂಡಿದ್ದ ನಾವು ಅವರಿಂದ ಬಿಡಿಸಿಕೊಂಡು ಯಾವುದೋ ಒಂದು ಆಟೋದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತೇವೆ. ಈ ಬಗ್ಗೆ ನಮ್ಮ ಗ್ರಾಮದ ಹಿರಿಯರು ಪಂಚಾಯ್ತಿ ಮಾಡೋಣವೆಂದು ಹೇಳಿ ಇದುವರೆವಿಗೂ ಪಂಚಾಯ್ತಿ ಮಾಡದ ಕಾರಣ  ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ನಮ್ಮ ಮೇಲೆ ಗಲಾಟೆ ಮಾಡಿ ಹಲ್ಲೇ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

10. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.20/2021 ಕಲಂ. 323,324,504,506 ಐ.ಪಿ.ಸಿ:-

          ದಿನಾಂಕ:05/04/2021 ರಂದು ಹೆಚ್.ಸಿ-250 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ವೆಂಕಟರವಣಪ್ಪ ಬಿನ್ ನರಸಿಂಹಪ್ಪ, ಬೆಸ್ತಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ರಾತ್ರಿ 23-30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಹಾಜರುಪಡಿಸಿದ್ದು, ಪರಿಶೀಲಿಸಿ ದಾಖಲಿಸಿದ ದೂರಿನ ಸಾರಾಂಶವೇನೆಂದರೆ,  ತಮಗೂ & ಯಲಗಲಪಲ್ಲಿ ಗ್ರಾಮದ ಮಂಜುನಾಥ ರವರಿಗೂ ಮದುವೆ ಹೆಣ್ಣಿನ ವಿಚಾರದಲ್ಲಿ 2 ತಿಂಗಳಿಂದ ವೈಮನಸ್ಸು ಮತ್ತು ದ್ವೇಷಗಳಿದ್ದು, ದಿನಾಂಕ:05-04-2021 ರಂದು ಸಂಜೆ 5-30 ಗಂಟೆಯಲ್ಲಿ ತಮ್ಮ ಮನೆಯ ಬಳಿ ತಮ್ಮ ಗ್ರಾಮದ ಚಂದ್ರಶೇಖರ ಬಿನ್ ನಾರಾಯಣಸ್ವಾಮಿ ರವರು ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಮಂಜುನಾಥ ನನ್ನು ನಿಲ್ಲಿಸಿ ಮಾತನಾಡುತ್ತಿದ್ದಾಗ ತನ್ನ ಮಗ ಅನಿಲ್ ರವರು ಅಲ್ಲಿಗೆ ಹೋಗಿದ್ದು,  ಆಗ ಮಂಜುನಾಥ ಅನಿಲ್ ನನ್ನು ಕುರಿತು "ಲೋಪರ್ ನನ್ನ ಮಗನೇ, ಅಲಕಾ ನನ್ನ ಮಗನೇ" ಎಂದು ಅವಾಚ್ಯವಾಗಿ ಬೈಯ್ದು ನಿನ್ನನ್ನು ಮುಗಿಸುವವರೆಗೆ ಬಿಡುವುದಿಲ್ಲವೆಂದು ಬೆದರಿಕೆ ಹಾಕುತ್ತಿದ್ದಾಗ ತಾನು ಜಗಳ ಬಿಡಿಸಲು ಅಡ್ಡ ಹೋಗಿದ್ದು, ಆಗ ಮಂಜುನಾಥ ಕೈಗಳಿಂದ ತನಗೂ & ತನ್ನ ಮಗನಿಗೂ ಹೊಡೆದು ಚಾಕುವಿನಿಂದ ತನ್ನ ಕಿವಿಗೆ, ಅನಿಲ್ ರವರ ಎಡಗಾಲಿಗೆ ಹೊಡೆದು ರಕ್ತಗಾಯವನ್ನುಂಟು ಮಾಡಿರುವುದಾಗಿ ಮೇಲ್ಕಂಡವರ ವಿರುದ್ದ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

11. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.21/2021 ಕಲಂ. 143,147,323,324,341,504,506,149 ಐ.ಪಿ.ಸಿ:-

          ದಿನಾಂಕ: 06-04-2021 ರಂದು ಬೆಳಿಗಿನ ಜಾವ ಹೆಚ್.ಸಿ-183 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಮಂಜುನಾಥ ಬಿನ್ ಉತ್ತನ್ನ ರವರ ಹೇಳಿಕೆ ದಾಖಲಿಸಿ ಬೆಳಗಿನ ಜಾವ 01-30 ಗಂಟೆಯಲ್ಲಿ ಠಾಣೆಗೆ ವಾಪಸ್ಸಾಗಿ ಹಾಜರುಪಡಿಸಿದ ಹೇಳಿಕೆ ದೂರನ್ನು ಪಡೆದು ದಾಖಲಿಸಿದ ದೂರಿನ ಸಾರಾಂಶವೇನೆಂದರೆ,  ತಾನು ಪ್ರತಿ ನಿತ್ಯದಂತೆ ದಿನಾಂಕ:06-04-2021 ರಂದು ಸಂಜೆ ಚಾಕವೇಲು ನಿಂದ ತಮ್ಮ ಗ್ರಾಮಕ್ಕೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಸಂಜೆ ಸುಮಾರು 5-30 ಗಂಟೆಯಲ್ಲಿ ಬೆಸ್ತಲಪಲ್ಲಿ ಗ್ರಾಮದ ಅನಿಲ್ ರವರ ಮನೆಯ ಮುಂಭಾಗ ತನ್ನನ್ನು ಅಡ್ಡಗಟ್ಟಿ ಅನಿಲ್ ರವರು ಕೈಗಳಿಂದ ಹೊಡೆದಿರುವುದಾಗಿ, ಅನಿಲ್ ರವರ ತಂದೆ ವೆಂಕಟರವಣಪ್ಪ ರವರು ಕೈಗಳಿಂದ ಕುಡುಗೋಲಿನಿಂದ ಹೊಡೆದಿರುವುದಾಗಿ, ಅನಿಲ್ ರವರ ತಮ್ಮ ಅಜಯ್ ರವರು ಕೈಗಳೀಂದ ಹೊಡೆದಿರುವುದಾಗಿ ಲೋಪರ್ ನನ್ನ ಮಗನೇ, ಸೂಳೇ ನನ್ನ ಮಗನೇ ಎಂದು ಅವಾಚ್ಯವಾಗಿ ಬೈಯ್ದು, ನಂತರ ಧನಂಜಯ, ಸಿದ್ದಯ್ಯ, ದ್ವಾರಕೀಶ್ ರವರು ಸಹ ಕೈಗಳಿಂದ ಹೊಡೆದಿರುವುದಾಗಿ ನಂತರ ನಿನ್ನನ್ನು ಮುಗಿಸುವವರೆಗೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುವುದಾಗಿ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ಪಿರ್ಯಾದು.

 

12.  ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.22/2021 ಕಲಂ. 457,380 ಐ.ಪಿ.ಸಿ:-

          ದಿನಾಂಕ:06/04/2021 ರಂದು ಪಿರ್ಯಾದುದಾರರಾದ ಸೋಮನಾಥಪುರ ಅಂಗನವಾಡಿ ಕಾರ್ಯಕರ್ತೆಯಾದ ಸ್ವರ್ಣಮ್ಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯ ಹೋಬಳಿ ಶಿವಪುರ ವೃತ್ತಕ್ಕೆ ಸೇರಿದ ಸೋಮನಾಥಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ 30 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುತ್ತೆನೆ.ಎಂದಿನಂತೆ ದಿನಾಂಕ:01/04/2021 ರಂದು ಅಂಗನವಾಡಿ ಕೇಂದ್ರವನ್ನು ತೆರೆದು ದಾಖಲಾತಿಗಳನ್ನು ಭರ್ತಿ ಮಾಡಿ ಮದ್ಯಾಹ್ನ:02-00 ಗಂಟೆಗೆ ಅಂಗನವಾಡಿ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ: 02/04/2021 ರಂದು ಶಾಲೆಗೆ ರಜೆ ಇದ್ದುದ್ದರಿಂದ ಶಾಲೆ ತೆರೆಯದೆ ಇದ್ದು, ದಿನಾಂಕ: 03/04/2021 ರಂದು ಶಾಲೆ ತೆರೆಯಲು ಹೋದಾಗ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾವುದೋ ಅಕ್ಸಲ್ ಬ್ಲೇಡ ನಿಂದ ಕೊಯ್ದು ಯಾರೋ ಕಳ್ಳರು ಅಂಗನವಾಡಿ ಕೇಂದ್ರದೊಳಕ್ಕೆ ಪ್ರವೇಶ  ಮಾಡಿ ಕೇಂದ್ರದಲ್ಲಿದ್ದ HP  ಗ್ಯಾಸ್ ಸಿಲಿಂಡರ್ & ಗ್ಯಾಸ್ ಸ್ಟೌವ್ ವನ್ನು ಕಳವು ಮಾಡಿಕೊಂಡು ಹೋಗಿರುವುದನ್ನು ಗಮನಿಸಿ ಊರಿನ ಹಿರಿಯರಿಗೆ ಮತ್ತು ನಮ್ಮ ಕಮಿಟಿ ಸದಸ್ಯರುಗಳಿಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿ ನಂತರ ನಮ್ಮ ಮೇಲಾದಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿರುತ್ತೇನೆ, ನಮ್ಮ ಅಂಗನವಾಡಿ ಕೇಂದ್ರದಲ್ಲಿ ಕಳುವಾಗಿರುವ ಸಿಲಿಂಡರ್ 2272/- ರೂ ಗಳಿದ್ದು ಸ್ಟೌವ್ ನ ಬೆಲೆ ಸುಮಾರು2850/- ರೂ ಗಳಾಗಿದ್ದು ಒಟ್ಟು ಸೇರಿ 5123/- ರೂ. ಗಳಾಗುತ್ತೆ, ನಮ್ಮ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಈ ದಿನ ತಡವಾಗಿ ದೂರು ನೀಡುತ್ತಿರುತ್ತೆನೆ. ನಮ್ಮ ಅಂಗನವಾಡಿ ಕೇಂದ್ರದಲ್ಲಿ ಕಳವು  ಮಾಡಿರುವ ಕಳ್ಳರನ್ನು ಪತ್ತೆ  ಮಾಡಿ ಕಳುವಾಗಿರುವ ಮಾಲುಗಳನ್ನು ಕೊಡಿಸಿ ಕೊಡಬೇಕಾಗಿ ಕೋರುತ್ತೇನೆ.

Last Updated: 06-04-2021 06:37 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080