ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.33/2021 ಕಲಂ. 392  ಐ.ಪಿ.ಸಿ :-

     ದಿನಾಂಕ:06-03-2021 ರಂದು ಬೆಳಿಗ್ಗೆ 6.00 ಗಂಟೆಯಲ್ಲಿ ಪಿರ್ಯಾದಿ ಶ್ರೀ. ಪಿ.ರಾಜೇಂದ್ರ ಪ್ರಸಾದ್ ಬಿನ್ ಪೆದ್ದನ್ನ, 40 ವರ್ಷ, ಗಾಣಿಗ ಜನಾಂಗ, ಚಾಲಕ  ಮೇಡಾಪುರಂ ಗ್ರಾಮ, ಚೆನ್ನಕೊತ್ತಪಲ್ಲಿ ಮಂಡಲಂ ಮತ್ತು ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ ರವರು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚಿನ ದೂರಿನ ಸಾರಾಂಶವೇನೆಂದರೆ ತಾನು 3 ವರ್ಷಗಳಿಂದ ನಿಮ್ಮಲಕುಂಟ ಗ್ರಾಮದ ವಾಸಿಯಾದ ಶ್ರೀ.ಚಿನ್ನಿಕೃಷ್ಣ ಬಿನ್ ಜ್ಯೋತಿ ಲಕ್ಷ್ಮೀನಾರಾಯಣ ರವರ ಬಾಬತ್ತು AP-02-TC-4667 ನೊಂದಣಿ ಸಂಖ್ಯೆಯ 407 ಟೆಂಪೋ ವಾಹನದಲ್ಲಿ ಚಾಲಕನಾಗಿದ್ದು ಮಾಲೀಕರು ತಮ್ಮ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ರೈತರುಗಳು ಬೆಳೆದ ತರಕಾರಿ ಬೆಳೆಗಳನ್ನು ವಾಹನದಲ್ಲಿ ಲೋಡ್ ಮಾಡಿಸಿ ರೈತರ ಪರವಾಗಿ ಕರ್ನಾಟಕ ರಾಜ್ಯದ ನೆಲಮಂಗಲ ಬಳಿ ಇರುವ ದಾಸನಾಪುರದ ಎ.ಪಿ.ಎಂ.ಸಿ ಮಾರ್ಕೆಟ್ ನಲ್ಲಿನ ಶ್ರೀ.ಗೋವಿಂದರಾಜು ರವರ ಬಿ.ಜಿ.ಆರ್ ತರಕಾರಿ ಮಂಡಿಗೆ ಕಳುಹಿಸಿ ತರಕಾರಿ ಮಂಡಿಯ ಮಾಲೀಕರು ರೈತರ ತರಕಾರಿಗಳನ್ನು ಮಾರಾಟ ಮಾಡಿ ನೀಡುವ ಹಣವನ್ನು ರೈತರಿಗೆ ನೀಡಿ ರೈತರುಗಳಿಂದ ಇಂತಿಷ್ಟು ಹಣವೆಂದು ಪಡೆದುಕೊಳ್ಳುತ್ತಿರುತ್ತಾರೆ. ಅದರಂತೆ ದಿನಾಂಕ: 05-03-2021 ರಂದು ತಾನು ದರ್ಶನಮಾಲ ಮತ್ತು ಇತರೆ  ಗ್ರಾಮಗಳ ರೈತರುಗಳ ತರಕಾರಿಗಳನ್ನು ಲೋಡ್ ಮಾಡಿಕೊಂಡು ಶ್ರೀ.ರಾಮಚಂದ್ರರೆಡ್ಡಿ ಬಿನ್ ಚಿನ್ನನಾರೆಪ್ಪ, 62 ವರ್ಷ, ರೆಡ್ಡಿ ಜನಾಂಗ, ವಾಸ ಪೋತುಲ ನಾಗೇಪಲ್ಲಿ ಗ್ರಾಮ, ಧರ್ಮವರಂ ಮಂಡಲಂ ಮತ್ತು ತಾಲ್ಲೂಕು, ಅನಂತಪುರ ಜಿಲ್ಲೆ ರವರೊಂದಿಗೆ ಸಂಜೆ 5-30 ಗಂಟೆಗೆ ಪೋತುಲ ನಾಗೇಪಲ್ಲಿ ಗ್ರಾಮ ಬಿಟ್ಟು ರಾತ್ರಿ 10-30 ಗಂಟೆಗೆ ದಾಸನಾಪುರದ ಶ್ರೀ.ಗೋವಿಂದರಾಜು ರವರ ತರಕಾರಿ ಮಂಡಿಗೆ ಹೋಗಿ ತರಕಾರಿಗಳನ್ನು ಅನ್ ಲೋಡ್ ಮಾಡಿದೆವು. ದಿನಾಂಕ: 03-03-2021 ರಂದು ಮಂಡಿಗೆ ತೆಗದುಕೊಂಡು ಹೋಗಿದ್ದ ಒಟ್ಟು 35 ಜನರ ತರಕಾರಿಗಳನ್ನು ಮಾರಾಟ ಮಾಡಿದ್ದ 101105/- ರೂಪಾಯಿಗಳ ಪೈಕಿ ಮುಂಗಡವಾಗಿ ನೀಡಿದ್ದ 5000/- ರೂಪಾಯಿಗಳನ್ನು ಹಿಡಿದುಕೊಂಡು 70000/- (ಎಪತ್ತು ಸಾವಿರ ರೂಪಾಯಿಗಳು) ರೂಪಾಯಿಗಳನ್ನು ನೀಡಿ ಉಳಿಕೆ 20000/- ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದ್ದರು.  ರೂ. 70000/- ರೂಪಾಯಿಗಳು  ಮತ್ತು  35 ಬಿಲ್ ಗಳನ್ನು  ವಾಹನದ ಡ್ಯಾಶ್ ಬೋರ್ಡ್ ನಲ್ಲಿಟ್ಟುಕೊಂಡು ತನನ್ನೊಂದಿಗೆ ಬಂದಿದ್ದ ಶ್ರೀ.ರಾಮಚಂದ್ರರೆಡ್ಡಿ ಬಿನ್ ಚಿನ್ನನಾರೆಪ್ಪ ಮತ್ತು ಈ ಮೊದಲೇ  ಮಾರ್ಕೆಟ್ ಗೆ ಬಂದಿದ್ದ ಶಿವಾರೆಡ್ಡಿ ಬಿನ್ ಪೆದ್ದನರಸಿಂಹಾರೆಡ್ಡಿ, 58 ವರ್ಷ, ಮಲಕಾಪುರಂ, ಧರ್ಮಾವರಂ ಮಂಡಲಂ ಮತ್ತು ತಾಲ್ಲೂಕು, ಅನಂತಪುರ ಜಿಲ್ಲೆ ರವರುಗಳೊಂದಿಗೆ ದಿನಾಂಕ:06-03-2021 ರಂದು ಮುಂಜಾನೆ 12-20 ಗಂಟೆಗೆ ದಾಸನಾಪುರ ಬಿಟ್ಟು ದೊಡ್ಡಬಳ್ಳಾಪುರ - ಚಿಕ್ಕಬಳ್ಳಾಪುರ ಮಾರ್ಗವಾಗಿ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಕ್ರಾಸ್ ಮೂಲಕ ಬೆಂಗಳೂರು - ಹೈದರಬಾದ್ ಎನ್.ಹೆಚ್-44 ಟಾರ್ ರಸ್ತೆಯಲ್ಲಿ ಬರುತ್ತಿದ್ದಾಗ ಟೆಂಪೋ ವಾಹನದ ಲೈಟ್ ಗಳು ಡಿಮ್ ಆಗುತ್ತಾ ಬಂದಿದ್ದು  ಬೆಂಗಳೂರಿನ ಮಾರ್ಕೆಟ್ ಗೆ ಬಂದಿದ್ದ ಗಂಗನೇಪಲ್ಲಿ ಗ್ರಾಮದ ವಾಸಿ ರಾಜಶೇಖರ್ ಬಿನ್ ಚೆನ್ನಪ್ಪ ರವರಿಗೆ ವಾಹನದ ಲೈಟ್ ಗಳು ಡಿಮ್ ಆಗುತ್ತಿರುವುದಾಗಿ ಬೇಗನೆ ಬರುವಂತೆ ಇಬ್ಬರು ಜೊತೆಯಲ್ಲಿ ಹೋಗೋಣವೆಂದು ತಿಳಿಸಿ ಹಾಗೆಯೆ ನಿಧಾನವಾಗಿ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಚಿಕ್ಕಬಳ್ಳಾಪುರ ತಾಲ್ಲೂಕು ಲಿಂಗಶೆಟ್ಟಿಪುರ ಗೇಟಿನ ಬಳಿ ಹೋಗುತ್ತಿದ್ದಂತೆ ವಾಹನದ ಲೈಟ್ ಗಳು ಪೂರ್ತಿ ಕೆಟ್ಟು ಹೋಗಿದ್ದರಿಂದ ಕತ್ತಲಿನಲ್ಲಿ ವಾಹನ ಚಾಲನೆ ಮಾಡಲು ಕಷ್ಟವಾಗಿದ್ದರಿಂದ ರಾತ್ರಿ ಅಲ್ಲಿಯೆ ಕಳೆದು ಬೆಳಗ್ಗೆ ಊರಿಗೆ ಹೋಗೋಣವೆಂದು ನಾವುಗಳು ಮಾತನಾಡಿಕೊಂಡು  ತಾನು  ಮುಂಭಾಗದ ಸೀಟಿನಲ್ಲಿ, ಶ್ರೀ.ರಾಮಚಂದ್ರರೆಡ್ಡಿ ಮತ್ತು ಶಿವಾರೆಡ್ಡಿ ರವರು  ವಾಹನದ ಹಿಂಭಾಗದಲ್ಲಿ ಮಲಗಿ ಕೊಂಡಿದ್ದಾಗ  ದಿನಾಂಕ:06-03-2021 ರಂದು ಬೆಳಗ್ಗೆ ಸುಮಾರು 02-20 ರಿಂದ 2-30 ಗಂಟೆಯ ಮಧ್ಯ ಯಾರೋ ಇಬ್ಬರು ಸುಮಾರು 35 - 40 ವರ್ಷ ವಯಸ್ಸಿನ ಯುವಕರು ಮುಂಭಾಗದ ಎರಡು ಕಡೆಯ ಡೋರ್ ಗಳ ಬಳಿ ಬಂದು ಡೋರ್ ಗಳನ್ನು ಬಡಿದು ತಾವುಗಳು ಪೊಲೀಸರೆಂದು ವಾಹನವನ್ನು ಚೆಕ್ ಮಾಡಬೇಕಾಗಿರುವುದಾಗಿ ಡೋರ್ ತೆಗೆಯುವಂತೆ ಹೇಳಿದ್ದರಿಂದ  ತಾನು  ಎಡಭಾಗದ ಡೋರ್ ಅನ್ನು ತೆಗೆಯಲಾಗಿ ಆತ ವಾಹನದೊಳಕ್ಕೆ ಬಂದು ತನ್ನನ್ನು ಪಕ್ಕಕ್ಕೆ ಸರಿಸಿ ಬಲಭಾಗದ ಡೋರ್ ಅನ್ನು ತೆಗೆದು ಇನ್ನೊಬ್ಬ ವ್ಯಕ್ತಿಯನ್ನು ಹತ್ತಿಸಿಕೊಂಡು ವಾಹನವನ್ನು ಚೆಕ್ ಮಾಡಬೇಕೆಂದು  ವಾಹನವನ್ನು ಚೆಕ್ ಮಾಡುತ್ತಾ ಆ ಪೈಕಿ ಎಡಭಾಗದಲ್ಲಿ ಕುಳಿತಿದ್ದ ವ್ಯಕ್ತಿಯು ಬಾನೆಟ್ ಮೇಲೆ ಇಟ್ಟಿದ್ದ ಕೀಯನ್ನು ಮತ್ತು ತನ್ನ ವಿವೋ ಮೊಬೈಲ್ ಫೋನ್ ಅನ್ನು ತೆಗೆದುಕೊಂಡು ವಾಹನದ ಕೀ ನಿಂದ ಡ್ಯಾಶ್ ಬೋರ್ಡ್ ಅನ್ನು ತೆಗೆದು ಅದರಲ್ಲಿಟ್ಟಿದ್ದ ರೈತರಿಗೆ ಸಂಭಂದಿಸಿದ 70,000/- ರೂಪಾಯಿಗಳನ್ನು ತನ್ನ  ಪ್ಯಾಂಟ್ ಜೇಬಿನೊಳಗೆ ಕೈ ಹಾಕಿ ಜೇಬಿನಲ್ಲಿಟ್ಟಿದ್ದ 10,000/- ರೂಪಾಯಿಗಳನ್ನು ತೆಗೆದುಕೊಂಡು ಇಬ್ಬರು ಆಸಾಮಿಗಳು ವಾಹನದಿಂದ ಕೆಳಗೆ ಇಳಿದಿದ್ದು ಅಷ್ಟರಲ್ಲಿ ತಾನು ಕೂಗಿಕೊಂಡಿದ್ದು  ಹಿಂಭಾಗ ಮಲಗಿದ್ದ ರೈತರನ್ನು ಎಬ್ಬಿಸುವಷ್ಟರಲ್ಲಿ ನಮ್ಮ ಟೆಂಪೋ ವಾಹನದ ಹಿಂಭಾಗ ನಿಲುಗಡೆ ಮಾಡಿದ್ದ ಅವರುಗಳು ಬಂದಿದ್ದ ಕಾರಿನಲ್ಲಿ ಕುಳಿತುಕೊಂಡು ಕಾರಿನ ಲೈಟ್ ಗಳನ್ನು ಆಫ್ ಮಾಡಿಕೊಂಡು ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಾಗೇಪಲ್ಲಿ ಕಡೆಗೆ ಹೊರಟು ಹೋದರು.  ಹಿಂಭಾಗದಲ್ಲಿ ಮಲಗಿದ್ದ ಶಿವಾರೆಡ್ಡಿ ರವರು ತನ್ನ ಮೊಬೈಲ್ ಗೆ ಕರೆ ಮಾಡಲಾಗಿ ಅಲ್ಲಿಯೆ ಸ್ವಲ್ಪ ದೂರದಲ್ಲಿ ಗಿಡಗಳ ಪೊದೆಯಲ್ಲಿ ಮೊಬೈಲ್ ರಿಂಗ್ ಆಗಿದ್ದು ಶಿವಾರೆಡ್ಡಿ ರವರು ತನ್ನ ಮೊಬೈಲ್ ಅನ್ನು ತೆಗೆದುಕೊಂಡು ಬಂದು ಕೊಟ್ಟಿದ್ದು ತಕ್ಷಣ  ತಾನು  ವಾಹನದ ಮಾಲೀಕ ಚೆನ್ನಕೃಷ್ಣ ರವರಿಗೆ ಮತ್ತು ಬೆಂಗಳೂರಿನ ಮಾರ್ಕೆಟ್ ಗೆ ಬಂದಿದ್ದ ಆತನ ತಮ್ಮನಾದ ಶ್ರೀ.ಮುರಳಿ ಬಿನ್ ಜ್ಯೋತಿ ಚಿನ್ನನಾರಾಯಣಪ್ಪ ಮತ್ತು ಶ್ರೀ.ರಾಜಶೇಖರ್ ಎಂಬುವವರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದು  ಬೆಳಗ್ಗೆ 04-30 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದ ಶ್ರೀ,ಮುರಳಿ, ಶ್ರೀ.ಚಿನ್ನನಾರಾಯಣಪ್ಪ ರವರೊಂದಿಗೆ ಎಲ್ಲರೂ ಮೊಬೈಲ್ ಟಾರ್ಚ್ ಗಳ ಬೆಳಕಿನಲ್ಲಿ ಆಸಾಮಿಗಳು ತನ್ನ ಮೊಬೈಲ್ ಅನ್ನು ಬಿಸಾಡಿದ್ದ ಸ್ಥಳದಲ್ಲಿಯೆ ಹುಡುಕಾಡಲಾಗಿ ವಾಹನದ ಕೀ ದೊರೆತ್ತಿರುತ್ತೆಂದು  ತನ್ನನ್ನು ಬೆದರಿಸಿ ವಾಹನದ ಡ್ಯಾಶ್ ಬೋರ್ಡ್ ನಲ್ಲಿಟ್ಟಿದ್ದ  80,000/- ರೂಗಳನ್ನು ಸುಲಿಗೆ ಮಾಡಿ ಪರಾರಿಯಾಗಿರುವ ಆಸಾಮಿಗಳನ್ನು ಪತ್ತೆ ಮಾಡಿ ಆಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು  ಕೋರಿದ್ದರ ಮೇರೆಗೆ  ಪ್ರ.ವ.ವರದಿ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.10/2021 ಕಲಂ. 379  ಐ.ಪಿ.ಸಿ :-

     ದಿನಾಂಕ; 05-03-2021 ರಂದು ಮಧ್ಯಾಹ್ನ 3.00 ಗಂಟೆಗೆ ಪಿರ್ಯಾದಿಯಾದ ಶ್ರೀಮತಿ ವೀಣಾ ಎಸ್.ಎನ್ ಕೋಂ ಲೇಟ್ ಜೈ ಕುಮಾರ.ವಿ  40 ವರ್ಷ, ಬಲಜಿಗರು, ಬೆಂಗಳೂರು ಘಟಕದ 1 ನೇ ಪಡೆ ಕಮಾಂಡೆಂಟ್ ರವರ ಕಛೇರಿಯ ಕೆ.ಎಸ್.ಐ.ಎಸ್.ಎಫ್ ರಲ್ಲಿ ದ್ವಿತಿಯ ದರ್ಜೆ ಸಹಾಯಕಿಯಾಗಿ  ಕೆಲಸ. ವಾಸ ಯಲಹಂಕ ಬೆಂಗಳೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಾನು ಈಗ್ಗೆ 2017 ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ಇರುವ ತನ್ನ ತಮ್ಮನಾದ ಪ್ರಶಾಂತ್ ಎಸ್.ಎಸ್ ರವರಿಗೆ ಹೊಂಡಾ ಆಕ್ಟೀವಾ 4 ಜಿ ವಾಹನ ಸಂಖ್ಯೆ ಕೆಎ-50-ವೈ-3458  ನಂಬರಿನ ದ್ವಿ ಚಕ್ರ ವಾಹನವನ್ನು ತಾನೇ ಖರೀದಿ ಮಾಡಿಕೊಟ್ಟಿದ್ದು. ಸದರಿ ದ್ವಿ ಚಕ್ರ ವಾಹನವನ್ನು ತನ್ನ ತಮ್ಮ ಪ್ರಶಾಂತ್ ರವರು ಚಿಕ್ಕಬಳ್ಳಾಪುರ ನಗರದಲ್ಲಿ ಇಟ್ಟುಕೊಂಡು ಉಪಯೋಗಿಸುತ್ತಿದ್ದು  ದಿನಾಂಕ:13-02-2021 ರಂದು ರಾತ್ರಿ ಸುಮಾರು 11-00 ಗಂಟೆಯಲ್ಲಿ ಕೆಎ-50-ವೈ-3458  ನಂಬರಿನ ದ್ವಿ ಚಕ್ರ ವಾಹನವನ್ನು ಮನೆಯ ಮುಂದೆ ಬದಿಯಲ್ಲಿ ನಿಲ್ಲಿಸಿದ್ದು ಮರುದಿನ ದಿನಾಂಕ:14-02-2021 ರಂದು ಬೆಳಗ್ಗೆ 6-00 ಗಂಟೆಯಲ್ಲಿ ತನ್ನ ತಮ್ಮ ಎದ್ದು ನೋಡಲಾಗಿ ತನ್ನ ದ್ವಿ ಚಕ್ರ ವಾಹನ ನಿಲ್ಲಿಸಿದ  ಸ್ಥಳದಲ್ಲಿ ಕಾಣೆಯಾಗಿದ್ದು ಸುತ್ತಾ-ಮುತ್ತಲಿನ  ರಸ್ತೆಗಳಲ್ಲಿ ಹುಡಕಾಡಿದರೂ ತನ್ನ ಕೆಎ-50-ವೈ-3458  ನಂಬರಿನ ದ್ವಿ ಚಕ್ರ ವಾಹನ ಸಿಕ್ಕಿರುವುದಿಲ್ಲ, ಇದರ ENGINE NO:JF50ET5455066, CHASSIS NO: ME4JF507HHT458244 ಆಗಿರುತ್ತದೆ. ಇದರ ಬೆಲೆ ಅಂದಾಜು: 35000/- ರೂಗಳಾಗಿರುತ್ತೆ. ನಂತರ ತನ್ನ ತಮ್ಮ ಮನೆಯ ಸುತ್ತಮುತ್ತ ಸ್ನೇಹಿತರು, ಪರಿಚಯಸ್ತರು ಸಂಬಂದಿಕರು ತನಗೆ ಗೊತ್ತಿರುವ ಎಲ್ಲ ಕಡೆಗಳಲ್ಲಿ ಹುಡುಕಿದರೂ ಸಹ ತನ್ನ ದ್ವಿ ಚಕ್ರ ವಾಹನ ಪತ್ತೆಯಾಗಿರುವುದಿಲ್ಲ ಅದ್ದರಿಂದ ತಾನು ಈ ದಿನ ದಿನಾಂಕ 05-03-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು,  ತನ್ನ ದ್ವಿಚಕ್ರ ವಾಹನವನ್ನು ಮತ್ತು ಕಳುವು ಮಾಡಿರುವ ಅರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

3. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.11/2021 ಕಲಂ. 420  ಐ.ಪಿ.ಸಿ :-

     ದಿನಾಂಕ 05/03/2021 ರಂದು ರಾತ್ರಿ 7-30 ಗಂಟೆಗೆ ಪಿರ್ಯಾಧಿದಾರರಾದ ಆನಂದ ಕೆ ಎ ಎಂಬುವವರು ಠಾಣೆಗೆ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಾನು ಬಿ.ಇ ವಿದ್ಯಾರ್ಥಿಯಾಗಿದ್ದು, ಪ್ರತಿ ದಿನ ಕಾಲೇಜಿಗೆ ಹೋಗಿ ಬರುತ್ತಿದ್ದು ದಿನಾಂಕ 01/03/2021 ರಂದು ತಾನು  ಮತ್ತು ಸಂದೀಪ್ ರವರು ಕಾಲೇಜಿ ಮುಗಿಸಿಕೊಂಡು ಸಂಜೆ 04-00 ಸಮಯದಲ್ಲಿ ಚಿಕ್ಕಬಳ್ಳಾಪುರದ ನಗರದ ಖಾಸಗೀ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ತನ್ನ ಸ್ಹೇಹಿತ ಶಶಿರವರು ಒಬ್ಬ ವ್ಯಕ್ತಿಯೊಂದಿಗೆ ತನ್ನ ಬಳಿ ಬಂದು ಇವರು ಉದ್ಯೋಗ ಕೊಡಿಸುತ್ತಾರೆಂದು ಎಂದು ತಿಳಿಸಿದ್ದು ಅವರನ್ನು ತಾನು ಮಾತನಾಡಿಸಿ ಅವರ ಹೆಸರು ಕೇಳಲಾಗಿ ಪರಮೇಶ್ವರಪ್ಪ ಬಿನ್ ಹನುಂತಪ್ಪ ನಡುವಿನ ಮನೆ ಎಂಬುದಾಗಿ ತಿಳಿಸಿ ತಾನು ಚಿಕ್ಕಬಳ್ಳಾಪುರ ಜಿಲ್ಲೆ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯಲ್ಲಿ ನಿರ್ದೇಶಕನಾಗಿ ಹೊಸದಾಗಿ ಧಾರವಾಡ ಜಿಲ್ಲೆಯಿಂದ ವರ್ಗಾವಣೆಯಾಗಿ ಬಂದಿರುವನೆಂದು ತಿಳಿಸಿ ಪಿರ್ಯಾದಿದಾರರಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಗಣ್ಯ ವ್ಯಕ್ತಿಗಳ ಮತ್ತು ಮಂತ್ರಿಗಳ ಹೆಸರುಗಳನ್ನು ಹಾಗೂ ದೊಡ್ಡ ದೊಡ್ಡ ಅಧಿಕಾರಿಗಳಿಗೆ ಕಮೀಷನ್ ಕೊಟ್ಟು ಕೆಲಸ ಕೊಡಿಸುವುದಾಗಿ ನಂಬಿಸಿ ಅದೇ ದಿನ ತನ್ನಿಂದ ಅರ್ಜಿಯನ್ನು ಆನ್ಲೈನ್ನಲ್ಲಿ ತುಂಬಲು 3000/- ರೂ ಪಡೆದು ಅದೇ ರೀತಿ ಸಂಧಿಪ್ ರವರನ್ನು ನಂಬಿಸಿ 2000/- ರೂಗಳನ್ನು ಬಿಲ್ ಕಲೆಕ್ಟರ್ ಉದ್ದೆ ಕೊಡಿಸುವುದಾಗಿ  ನಯವಂಚಕ ಮಾತುಗಳಿಂದ ನಂಬಿಸಿ ಪುನ: ದಿನಾಂಕ 04/03/2021 ರಂದು ತನ್ನಿಂದ 25000/- ರೂ ಗಳನ್ನು ಸಂದೀಪ್ ಕಡೆಯಿಂದ 6000/- ರೂ ಗಳನ್ನು ಪಡೆದು ಒಟ್ಟು ನನ್ನಿಂದ 28000/- ರೂಗಳನ್ನು ಮತ್ತು ಸಂದೀಪ್ ಕಡೆಯಿಂದ 8000/- ರೂಗಳನ್ನು ಪಡೆದಿದ್ದು,ತಮಗೆ ಯಾವುದೇ ಕೆಲಸ ಕೊಡದೆ ಇದ್ದುದ್ದರಿಂದ ಶಶಿರವರಿಗೆ ಪೋನ್ ಕರೆ ಮಾಡಿ ವಿಚಾರಿಸಿದಾಗ ಶಶಿ ಕಡೆಯಿಂದ ಸರ್ಕಾರಿ ಕೆಲಸ ಕೊಡಿಸುತ್ತೇನೆಂದು 10000/- ರೂಗಳನ್ನು ಪಡೆದಿರುತ್ತಾನೆಂದು ತನಗೆ ತಿಳಿಯಿತು. ಸದರಿ ಮೋಸ ಮಾಡಿದ ಆಸಾಮಿಯ ಬಗ್ಗೆ ವಿಚಾರಿಸಿದಾಗ ಗುಂಡಗಟ್ಟಿ ಗ್ರಾಮ. ರಟ್ಟಿಹಳ್ಳಿ ಹೋಬಳಿ ಹಾವೇರಿ ತಾ & ಹಾವೇರಿ ಜಿಲ್ಲೆ ಎಂಬುದಾಗಿ ತಿಳಿದು ಬಂದಿದ್ದು, ಇವರುಗಳ ಬಳಿ ಸುಳ್ಳು ಹೇಳಿ ಸರ್ಕಾರಿ ಕೆಲಸ ಕೊಡಿಸುತ್ತೇನೆಂದು ಹಣ ವಸೂಲಿ ಮಾಡಿಕೊಂಡು ವಂಚನೆ ಮಾಡಿ ಮೋಸ ಮಾಡಿರುತ್ತಾರೆ. ಆದ್ದರಿಂದ ತಮಗೆ ಮೋಸ ಮಾಡಿ ವಂಚನೆ ಮಾಡಿರುವ  ಪರಮೇಶ್ವರಪ್ಪ ಬಿನ್ ಹನುಮಂತಪ್ಪ ನಡುವಿನ ಮನೆ ಎಂಬುವವರನ್ನು ಪತ್ತೆ ಮಾಡಿ ನಮ್ಮ ಹಣವನ್ನು ವಾಪಾಸ್ ಕೊಡಿಸಿ,  ಈತನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿದೆ.

 

4. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.21/2021 ಕಲಂ. 323,324,427,504,506  ಐ.ಪಿ.ಸಿ :-

     ದಿನಾಂಕ.05.03.2021 ರಂದು ರಾತ್ರಿ 8.50 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಮೆಮೋ ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ಶಿವಣ್ಣ ರವರ ಹೇಳಿಕೆ ಪಡೆದು ಠಾಣೆಗೆ ವಾಪಸ್ಸು ರಾತ್ರಿ 9.50 ಗಂಟೆಗೆ ದಾಖಲಿಸಿದ ಹೇಳಿಕೆ ದೂರಿನ ಸಾರಾಂವೇನಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಶಿಡ್ಲಘಟ್ಟದ ಮಯೂರ ವೃತ್ತದಲ್ಲಿ ಸೀನಪ್ಪ ಎಂಬುವರ ಅಂಗಡಿಯನ್ನು ಬಾಡಿಗೆಗೆ ಪಡೆದು ಬೊಂಡ ಬಜ್ಜಿ ವ್ಯಾಪಾರ ಮಾಡಿಕೊಂಡಿರುತ್ತೇವೆ. ದಿನಾಂಕ 05/03/2021 ರಂದು ಮದ್ಯಾಹ್ನ ಸುಮಾರು 3 00 ಗಂಟೆಯಲ್ಲಿ ನಾನು ನಮ್ಮ ಅಂಗಡಿಯಲ್ಲ ಬೊಂಡ ಬಜ್ಜಿ ಹಾಕಿ ವಾಪಾರ ಮಾಡುತ್ತಿದ್ದಾಗ, ಮಯೂರ ವೃತ್ತ ಚಿಂತಾಮಣಿ ರಸ್ತ್ತೆಯಲ್ಲಿ ವಾಸವಾಗಿರುವ ನವೀನ್ ಬಿನ್ ಮಾರಪ್ಪ ಎಂಬುವರು ನಮ್ಮ ಅಂಗಡಿ ಹತ್ತಿರ ಬಂದು ಬೊಂಡ ಎತ್ತಿಕೊಂಡು ತಿನ್ನುತ್ತಿದ್ದು, ಆಗ ನಾನು ಏನಪ್ಪ ನನಗೆ ಕೇಳದೆ ಬೊಂಡಾ ಎತ್ತಿಕೊಂಡು ತಿನ್ನುತ್ತಿದ್ದಿಯಾ ಕಾಸು ಯಾರು ಕೊಡುವುದು ಎಂದು ಕೇಳಿದ್ದಕ್ಕೆ ನನ್ನ ಮಗನೇ ನನಗೆ ಕಾಸು ಕೇಳುತ್ತಿಯಾ ನಾನು ಮನಸ್ಸು ಮಾಡಿದರೆ ನಿಮ್ಮ ಅಂಗಡಿಯನ್ನು ಖಾಲಿ ಮಾಡಿಸುತ್ತೇನೆಂದು ಅವಾಚ್ಚ ಶಬ್ದಗಳಿಂದ ಬೈದು ಎಣ್ಣೆ ಬಾಂಡ್ಲಿ ಕೆಳಗೆ ತಳ್ಳಿರುತ್ತಾನೆ. ನಂತರ ಕಲ್ಲಿನಿಂದ ಬೀಸಿ ಹೊಡೆದಾಗ ಕಲ್ಲು ಎಡಗೈಗೆ ತಗುಲಿ ಬಲವಾದ ಪೆಟ್ಟಾಗಿರುತ್ತದೆ. ಅದರೂ ನವೀನ ನನ್ನನ್ನು ಕೈಗಳಿಂದ ಮೈಮೇಲೆ ಗುದ್ದಿ ಕೆಳಗೆ ತಳ್ಳಿದನು ಆಗ ನಾನು ಕೆಳಗೆ ಬಿದ್ದಾಗ ನನ್ನ ಬಲಗೈ ಭುಜಕ್ಕೆ ಮೂಗೇಟಾಗಿರುತ್ತದೆ. ನಂತರ ನವೀನ ನನ್ನನ್ನು ಹಣ ಕೇಳಿದರೆ ಇದೇ ರೀತಿ ಹೊಡೆದು ಸಾಯಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ. ಈ ಸಮಯದಲ್ಲಿ ನವೀನ ಎಣ್ಣೇ ಬಾಂಡ್ಲಿ ಕೆಳಗೆ ತಳ್ಳಿದ್ದರಿಂದ ಎಣ್ಣೆ ಚೆಲ್ಲಿ ಹೋಗಿ ನನಗೆ ಸುಮಾರು 5 ಕೆ ಜಿ ಎಣ್ಣೆ ಬೆಲೆ ಸುಮಾರು  900/-ರೂ ನಷ್ಟ ಉಂಟಾಗಿರುತ್ತದೆ. ಆಗ ಪಕ್ಕದ ಅಂಗಡಿಯ ವೆಂಕಟೇಶ, ಅಪ್ಪಿ @ ಚಂದ್ರಶೇಖರ ಮತ್ತು ರಾಮಕೃಷ್ಣಪ್ಪ ಎಂಬುವವರು ಬಂದು ಜಗಳ ಬಿಡಿಸಿ ಗಾಯ ಗೊಂಡಿದ್ದ ನನ್ನನ್ನು ಚಿಕಿತ್ಸೆ ಬಗ್ಗೆ ಶಿಡ್ಲಘಟ್ಟ ಸರ್ಕಾರಿ ಆಸ್ವತ್ರೆಗೆ ಕಳುಹಿಸಿರುತ್ತಾರೆ. ಆದ್ದರಿಂದ ನನ್ನ ಮೇಲೆ ವಿನಾಕಾರಣ ಜಗಳ ಮಾಡಿ ಹೊಡೆದಿರುವ ನವೀನ್ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ಹೇಳಿಕೆ ಮೇರೆಗೆ ಈ  ಪ್ರಕರಣ ದಾಖಲಿಸಿರುತ್ತೆ.

 

5. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.23/2021 ಕಲಂ. 379  ಐ.ಪಿ.ಸಿ :-

     ದಿನಾಂಕ:06/03/2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ಇಮ್ರಾನ್ ಪಾಷ, ಕೋಟೆ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ತಾನು ಶಿಡ್ಲಘಟ್ಟ ರೈಲ್ವೆ ಇಲಾಖೆಯಲ್ಲಿ ಗುತ್ತಿಗೆ ನೌಕರಿ ಕೆಲಸ ಮಾಡಿಕೊಂಡಿದ್ದು, ದಿನಾಂಕ.06.03.2021 ರಂದು ಬೆಳಿಗ್ಗೆ ಸುಮಾರು 9.00 ಗಂಟೆಗೆ ನಮ್ಮ ಮನೆಯಿಂದ ತನ್ನ ದ್ವಿಚಕ್ರ ವಾಹನ ನಂಬರ್ KA.40.ED.7786 ಬಜಾಜ್ ಸಿಟಿ-100 ದ್ವಿಚಕ್ರ ವಾಹನದಲ್ಲಿ ಶಿಡ್ಲಘಟ್ಟ ರೈಲ್ವೆ ಸ್ಟೇಷನ್ ಬಳಿ ಬಂದು ಕಚೇರಿಯಲ್ಲಿ ಹೋಗಿ ಕೆಲಸ ಮಾಡಿಕೊಂಡು ಬೆಳಿಗ್ಗೆ ಸುಮಾರು 9.30 ಗಂಟೆಗೆ ಹೊರಗೆ ಬಂದಾಗ ರೈಲ್ವೆ ಸ್ಟೇಷನ್ ಮುಂದೆ ನಿಲ್ಲಿಸಿರುವ ತನ್ನ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಇದರ ಬೆಲೆ ಸುಮಾರು 45,000/-ರೂ ಬೆಲೆ ಬಾಳುವುದಾಗಿದ್ದು, ಹುಡುಕಾಡುತ್ತಿದ್ದಾಗ ನನ್ನ ಸ್ನೇಹಿತ ತಬ್ರೇಜ್ ಸೀತಾರ್ ರವರು ನಿನ್ನ ದ್ವಿಚಕ್ರ ವಾಹನ ಖಾಸಿಂಪಾಳ್ಯ ವಾಸಿ ಗೋಕುಲ್ ಬಿನ್ ಕುಮಾರ್ ಎಂಬುವನು ಚಿಕ್ಕಬಳ್ಳಾಪುರ ಕಡೆ ಚಾಲನೆ ಮಾಡಿಕೊಂಡು ಹೋಗುತ್ತಿರುವುದು ನೋಡಿರುತ್ತೇನೆಂದು ತಿಳಿಸಿದ. ಗೋಕುಲ್ ರವರನ್ನು ಹುಡುಕಾಡಿದರೂ ಸಿಗದ ಕಾರಣ ಇವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ ತನ್ನ ದ್ವಿಚಕ್ರ ವಾಹನ ವಾಪಸ್ಸು ಕೊಡಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 06-03-2021 05:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080