ಅಭಿಪ್ರಾಯ / ಸಲಹೆಗಳು

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.13/2021  ಕಲಂ. 392 ಐ.ಪಿ.ಸಿ:-

     ದಿನಾಂಕ: 05/02/2021 ರಂದು  ಸಂಜೆ 17-15 ಗಂಟೆಗೆ ಪಿರ್ಯಾದಿದಾರರು ಶ್ರೀಮತಿ ಸುಜಾತಮ್ಮ  ಪಿ ಕೋಂ ಮುನಿಸ್ವಾಮಿ 53 ವರ್ಷ  ಬೆಸ್ತರು ಜಿರಾಯ್ತಿ ಇರಗಂಪಲ್ಲಿ  ಗ್ರಾಮ  ಚಿಂತಾಮಣಿ ತಾಲ್ಲೂಕು 7259531517  ರವರು  ಠಾಣೆಗೆ  ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ  ನಾನು ಈ ಮೇಲ್ಕಂಡ ವಿಳಾಸದಾರಳಾಗಿದ್ದು ಜಿರಾಯ್ತಿ ಮಾಡಿಕೊಂಡು ನನ್ನ ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿರುವಲ್ಲಿ  ಈ ದಿನ ದಿನಾಂಕ: 05/02/2021 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ನಮ್ಮ ಬಾಬತ್ತು ಜುಂಜುನಹಳ್ಳಿ ಗ್ರಾಮಕ್ಕೆ  ಹೋಗುವ ರಸ್ತೆಯ ಬದಿಯಲ್ಲಿ ಇರುವ ಸರ್ವೇ ನಂ: 493 ರ ಜಮೀನಿನಲ್ಲಿ ತೊಗರಿ ಕೀಳಲೆಂದು ನನ್ನನ್ನು ನನ್ನ ಗಂಡನ ದ್ವಿಚಕ್ರವಾಹನದಲ್ಲಿ  ಕೆರೆದುಕೊಂಡು ಬಂದು ಬಿಟ್ಟು ಹೋಗಿರುತ್ತಾನೆ ನಂತರ ನಾನು ನಮ್ಮ ಬಾಬತ್ತು ಜಮೀನಿನಲ್ಲಿ ತೊಗರಿ   ಕಾಯಿಗಳನ್ನು ಮಧ್ಯಾಹ್ನ 2-30 ಗಂಟೆಯ ವರೆಗೂ    ಕಿತ್ತುಕೊಂಡಿದ್ದು ನಂತರ  2-30 ಗಂಟೆ ಸಮಯದಲ್ಲಿ  ನಾನು ಊಟಮಾಡಲೆಂದು  ನಮ್ಮ ಬಾಬತ್ತು ಜಮೀನಿನಲ್ಲಿ ಇರುವ ಬೇವಿನ ಮರದ ಬಳಿಗೆ ಹೋದಾಗ ನಮ್ಮ ಬಾಬತ್ತು ಜಮೀನ ಪಕ್ಕದಲ್ಲಿ  ಇರುವ   ಶ್ರೀರಾಮಪ್ಪ ರವರ ಬಾಬತ್ತು ಶೆಡ್ ಬಳಿ ಯಾರೊ ಒಬ್ಬ ವ್ಯಕ್ತಿ ಕುಳಿತುಕೊಂಡು ಇದ್ದನು ನಾನು ಯಾರೊ ಏನಕ್ಕೊ ಕುಳಿತುಕೊಂಡು ಇರುಬಹುದು ಎಂದು ಕೊಂಡು ನನ್ನ ಪಾಡಿಗೆ ನಾನು ಊಟಮಾಡಿ ಮಧ್ಯಾಹ್ನ  ಸುಮಾರು  3-00 ಗಂಟೆ ಸಮಯದಲ್ಲಿ  ಮರದ ಕೆಳಗೆ ಕುಳಿತುದ್ದನಾನು ಮೇಲಕ್ಕೆ ಎಳುತ್ತಿದ್ದಂತ್ತೆ ಪಕ್ಕ ಜಮೀನಿನ ಶೆಡ್ ಬಳಿ ಇದ್ದ ವ್ಯಕ್ತಿ ನನ್ನ ಹಿಂದೆ ಯಿಂದ ಬಂದು ನನ್ನ ಕೈಯನ್ನು ಹಿಡಿದುಕೊಂಡುನು ಆಗ ನಾನು ಆತನ ಕಡೆಗೆ ತಿರುಗುತ್ತಿದ್ದಂತ್ತೆ ಸದರಿ ವ್ಯಕ್ತಿ ನನ್ನ ಕಣ್ಣುಗಳಿಗೆ ಕಾರದ ಪುಡಿಯನ್ನು ಹಾಕಿ ನನ್ನ ಕತ್ತಿನಲ್ಲಿ  ಇದ್ದ ಮಾಂಗಲ್ಯ ಚೈನ್ನ್ನು  ಕಿತ್ತುಕೊಳ್ಳಲು ಯತ್ನಿಸಿದನು ಆಗ ನಾನು ಆತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡೆ ಆದರೂ ಸಹ ಆತನು  ನನ್ನನ್ನು ಕೆಳಕ್ಕೆ ತಳ್ಳಿ  ಒಂದು  ಕೈ ಯಿಂದ  ನನ್ನ ಬಾಯಿಯನ್ನು ಮುಚ್ಚಿ  ಗಟ್ಟಿಯಾಗಿ ಹಿಡಿದುಕೊಂಡು  ಮತ್ತೊಂದು ಕೈಯಲ್ಲಿ  ನನ್ನ ಕತ್ತಿನಲ್ಲಿ ಇದ್ದ ಬಂಗಾರದ ಚೈನ್ ನ್ನು  ಮಾಂಗಲ್ಯದ ಸಮೇತ ಕಿತ್ತು ಕೊಂಡು ನಮ್ಮ  ಜಮೀನಿನಲ್ಲಿ ಉತ್ತರದ ಕಡೆಗೆ ಇರುವ ಕೆರೆಯ ಕಡೆಗೆ ಹೊರಟು ಹೋದನು ಅಲ್ಲಿ ಸುತ್ತಮುತ್ತಲು ಯಾರೂ ಜನರು ಇಲ್ಲದ ಕಾರಣ ನಾನು ಕಿರುಚಿಕೊಂಡು  ರಸ್ತೆಯಲ್ಲಿ ಸುಮಾರು 200  ಮೀಟರ್  ದೂರದಲ್ಲಿ ಇರುವ ನಮ್ಮ ತಮ್ಮ ರಮೇಶ್ ಪಿ ರವರ ಜಮೀನಿನ ಬಳಿಗೆ ಹೋಗಿ ಜಮೀನಿನ ಬಳಿ ಇದ್ದ ನನ್ನ ತಮ್ಮ ಮತ್ತು ಆತನ ಹೆಂಡತಿಗೆ ವಿಚಾರ ತಿಳಿಸಿ ನಂತರ ಸುತ್ತುಮುತ್ತಲ ಜಮೀನುಗಳಲ್ಲಿ ಕೆಲಸಮಾಡುತ್ತಿದ್ದವರೆಲ್ಲ ಸೇರಿ ನನ್ನ ಚೈನನ್ನು ಕಿತ್ತುಕೊಂಡು  ಹೋದ ವ್ಯಕ್ತಿಯನ್ನು ಹುಡುಕಾಡಲಾಗಿ  ಎಲ್ಲಿಯೂ ಪತ್ತೇಯಾಗಿರುವುದಿಲ್ಲ ನನ್ನ ಕತ್ತಿನಲ್ಲಿ ಇದ್ದ ಬಂಗಾರ  ಚೈನ್ 35 ಗ್ರಾಂ ತೂಕ  ಹಾಗೂ  ಮಾಂಗಲ್ಯ ಮತ್ತು ಗುಂಡುಗಳು 12 ಗ್ರಾಂ ತೂಕ ವಿದ್ದು ಒಟ್ಟು  ಸುಮಾರು 47 ಗ್ರಾಮ ತೂಕದಾಗಿರುತ್ತೆ. ಮೇಲ್ಕಂಡಂತ್ತೆ ನನ್ನ ಕಣ್ಣುಗಳಿಗೆ ಕಾರದ ಪುಡಿಯನ್ನು ಹಾಕಿ ನನ್ನ ಕತ್ತಿನಲ್ಲಿದ ಮಾಂಗಲ್ಯದ ಚೈನು ಮಾಂಗಲ್ಯ ಮತ್ತು ಗುಂಡುಗಳನ್ನು ಕಿತ್ತುಕೊಂಡು  ಹೋಗಿರುವ ವ್ಯಕ್ತಿಯನ್ನು ಪತ್ತೇಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೊಟ್ಟು ದೂರಿನ ಸಾರಾಂಶವಾಗಿರುತ್ತೆ.

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.23/2021  ಕಲಂ. 379 ಐ.ಪಿ.ಸಿ:-

     ದಿನಾಂಕ:05.02.2021 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ವ್ಯವಸಾಯದಿಂದ ಜೇವನ ಮಾಡಿಕೊಂಡಿದ್ದು ಲಿಂಗಶೆಟ್ಟಿಪುರದಿಂದ ಪಶ್ಚಿಮಕ್ಕೆ ತನ್ನ ಬಾಬತ್ತು 54/1 ರ ತೋಟದ ಜಮೀನಿನಲ್ಲಿ ತಮ್ಮ ಅಣ್ಣ ತಮ್ಮಂದಿರು ದನಗಳ ಕೊಟ್ಟಿಗೆಯನ್ನು ಕಟ್ಟಿಕೊಂಡಿರುತ್ತೇವೆ. ತಾನು ಒಂದು ಸಿಮೇ ಹಸು ಮತ್ತು ಒಂದು ಸಿಮೇ ಕರುವನ್ನು  ತನ್ನ ಅಣ್ಣನಾದ ಶ್ರೀ.ಅಶ್ವಥನಾರಾಯಣ ಎಲ್.ಎನ್ ಬಿನ್ ಬಿ.ವಿ.ನಾರಾಯಣಪ್ಪ ರವರು ಒಂದು ಸಿಮೇ ಹಸು ಮತ್ತು ಒಂದು ಕರು  ಹಾಗು ತಮ್ಮನಾದ  ಶ್ರೀ. ಜಯರಾಮಪ್ಪ ಎನ್.ಎಲ್ ಬಿನ್ ಬಿ.ವಿ.ನಾರಾಯಣಪ್ಪ ರವರು ಒಂದು ಸಿಮೇ ಹಸುವನ್ನು ಸಾಕಿಕೊಂಡಿದ್ದು  ಪ್ರತಿ ದಿನ ಅದೇ ಕೊಟ್ಟಿಗೆ ಮನೆಯಲ್ಲಿ ದನಗಳನ್ನು ಕಟ್ಟಿಹಾಕಿಕೊಂಡಿರುತ್ತಾರೆ ದಿನಾಂಕ: 04/02/2021 ರಂದು ತಾವುಗಳು ಎಂದಿನಂತೆ ಹಸುಗಳನ್ನು  ತನ್ನ ತೋಟದ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಮೇವು ಹಾಕಿಕೊಂಡು ರಾತ್ರಿ 11-00 ಗಂಟೆಯ ಸಮಯದಲ್ಲಿ ಕೊಟ್ಟಿಗೆಗೆ ತಡಿಕೆ ಹಾಕಿಕೊಂಡು ಮನೆಗೆ  ಬಂದಿರುತ್ತಾರೆ ದಿನಾಂಕ: 05/02/2021 ರಂದು ಬೆಳಗ್ಗೆ  05-00 ಗಂಟೆಯಲ್ಲಿ  ಸೀಮೆ ಹಸುಗಳಲ್ಲಿ  ಹಾಲು ಕರೆಯಲು ಹೋದಾಗ  ದನದ ಕೊಟ್ಟಿಗೆಗೆ ಹಾಕಿದ್ದ ತಡಿಕೆಯು ತರೆದುಕೊಂಡಿದ್ದು, ಕೊಟ್ಟಿಗೆಯಲ್ಲಿ ಹೋಗಿ  ನೋಡಲಾಗಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ  ತನ್ನ ಬಾಬತ್ತು ರೂ. 50,000/ ಬೆಲೆ ಬಾಳುವ ಒಂದು ಸಿಮೇ ಹಸು ಮತ್ತು ಒಂದು ಸಿಮೇ ಕರು, ಶ್ರೀ.ಅಶ್ವಥನಾರಾಯಣ ಎಲ್.ಎನ್ ಬಿನ್ ಬಿ.ವಿ.ನಾರಾಯಣಪ್ಪ ರವರ ಬಾಬತ್ತು ರೂ. 60,000/ ಬೆಲೆ ಬಾಳುವ ಒಂದು ಸಿಮೇ ಹಸು ಮತ್ತು ಒಂದು ಕರು  ಹಾಗು ಶ್ರೀ. ಜಯರಾಮಪ್ಪ ಎನ್.ಎಲ್ ಬಿನ್ ಬಿ.ವಿ.ನಾರಾಯಣಪ್ಪ ರವರ ಬಾಬತ್ತು ರೂ. 50,000/ ಬೆಲೆ ಬಾಳುವ ಒಂದು ಸಿಮೇ ಹಸುವನ್ನು ಇರಲಿಲ್ಲ.  ಯಾರೋ  ಕಳ್ಳರು ದಿನಾಂಕ: 04/02/2021 ರ ರಾತ್ರಿ 11-00 ಗಂಟೆಯಿಂದ ದಿನಾಂಕ: 05/02/2021 ರ ಬೆಳಗಿನ ಜಾವ 05-00 ಗಂಟೆಯ ಅವಧಿಯಲ್ಲಿ   ಮೇಲ್ಕಂಡಂತೆ ಒಟ್ಟು 1.60.000/-ರೂಪಾಯಿ ಬೆಳೆ ಬಾಳುವ ಮೂರು ಹೆಚ್.ಎಪ್. ತಳಿಯ ಸೀಮೆ  ಹಸುಗಳು ಮತ್ತು  ಎರಡು ಸಿಮೇ ಕರುಗಳನ್ನು  ಕಳವು ಮಾಡಿಕೊಂಡು ಹೋಗಿರುತ್ತಾರೆ. ನಾವು ಈ ದಿನ  ನಮ್ಮ ಗ್ರಾಮ ಮತ್ತು ಸುತ್ತಮುತ್ತಲ  ಗ್ರಾಮಗಳಲ್ಲಿ ಹೋಗಿ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ. ಆದ್ದರಿಂದ ಆಸಾಮಿಗಳನ್ನು  ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಈ ಪ್ರ,ವ,ವರದಿ.

3. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.04/2021  ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ 05-02-2021 ರಂದು ರಾತ್ರಿ 11.00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆಯೊಂದಿಗೆ ನೀಡಿದ ಮಾಲು, ಆರೋಪಿತರು, ನ್ಯಾಯಾಲಯದಿಂದ ಅನುಮತಿ ಪತ್ರ ಹಾಗೂ ವರದಿಯ ದೂರಿನ ಸಾರಾಂಶವೇನೆಂದರೆ  ದಿನಾಂಕ 05-02-2021 ರಂದು  ರಾತ್ರಿ 8.15 ಗಂಟೆಯಲ್ಲಿ ಸಿಬ್ಬಂಧಿಯಾದ ಹೆಚ್.ಸಿ-48 ಶ್ರೀ ದಿನೇಶ್, ಸಿ.ಹೆಚ್.ಸಿ-151 ಶ್ರೀ ವೆಂಕಟರೆಡ್ಡಿ, ಪಿ.ಸಿ-150 ಶ್ರೀ ಸಾಧಿಕ್ ಉಲ್ಲಾ, ರವರುಗಳೊಂದಿಗೆ ಇವನಿಂಗ್ ರೌಂಡ್ಸ್ ಪುಟ್ ಪೆಟ್ರೋಲಿಂಗ್, ರೌಂಡ್ಸ್ ಪ್ರಯುಕ್ತ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಚಿಕ್ಕಬಳ್ಳಾಪುರ ನಗರದ ಬಿಬಿರಸ್ತೆಯಲ್ಲಿರುವ ಜೂನಿಯರ್ ಕಾಲೇಜ್ ಆವರಣದ ನಿರ್ಜನ ಪ್ರದೇಶದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್  ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ಮಾಹಿತಿಯ ಮೇರೆಗೆ  ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಜೂಜಾಟ ದಾಳಿಗೆ ಪಂಚರನ್ನು ಬರಮಾಡಿಕೊಂಡು  ಅವರಿಗೆ ಕೇಸಿನ ಸಾರಾಂಶವನ್ನು ತಿಳಿಸಿ ಪಂಚರಾಗಿ ಬರುವಂತೆ ಕೋರಿರುತ್ತೆ ಕಡೆಗೆ ಸ್ವಲ್ಪ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಜೂನಿಯರ್ ಕಾಲೇಜಿನ ಆವರಣದ ಖಾಲಿ ನಿರ್ಜನ ಪ್ರದೇಶದಲ್ಲಿ  ಕೆಲವರು ಗುಂಪಾಗಿ ಕುಳಿತುಕೊಂಡು ಅಂದರ್ ಗೆ 100 ರೂ ಬಾಹರ್ ಗೆ 100 ರೂ ಎಂದು ಕೂಗುತ್ತಿದ್ದು,  ಅರೋಪಿಗಳು ಅಕ್ರಮ ಜೂಜಾಟ ಅಡುತ್ತಿರುವುದು ಖಚಿತ ಪಡಿಸಿಕೊಂಡು ಸಿಬ್ಬಂಧಿಯವರಿಗೆ  ಕೊಟ್ಟ ಸೂಚನೆಯಂತೆ  ಸಿಬ್ಬಂದಿಯವರು ಅವರನ್ನು ಸುತ್ತುವರೆದಿದ್ದು ಅಷ್ಟರಲ್ಲಿ  ಪೊಲೀಸರನ್ನು ನೋಡಿ ಜೂಜಾಟುತ್ತಿದ್ದ 3 ಜನರು ಓಡಿ ಹೋಗಲು ಪ್ರಯತ್ನಿಸಿದ್ದು ಕೂಡಲೆ ಸಿಬ್ಬಂದಿಯವರು ಹಿಂಬಾಲಿಸಿ ಇಬ್ಬರನ್ನು ಹಿಡಿದುಕೊಂಡು ನನ್ನ ಮುಂದೆ ಹಾಜರು ಪಡಿಸಿರುತ್ತಾರೆ. ಇನ್ನೊಬ್ಬ ಆಸಾಮಿ ಕತ್ತಲೆಯಲ್ಲಿ ಓಡಿ ಹೋಗಿರುತ್ತಾನೆ. ಸದರಿ ಆಸಾಮಿಗಳನ್ನು ಪಂಚರ ಸಮಕ್ಷಮ ವಿಚಾರಣೆ ಮಾಡಲಾಗಿ  ಅವರು ಒಬ್ಬೊಬ್ಬರಾಗಿ ತಮ್ಮ ಹೆಸರು ವಿಳಾಸ ತಿಳಿಸಿದ್ದು, 1, ಶಂಕರ್ ಬಿನ್ ನಾಗರಾಜ, 29 ವರ್ಷ, ವಕ್ಕಲಿಗರು, ಪೋಟೋ ಗ್ರಾಫರ್, ವಾಸ:ವಾರ್ಡ್ ನಂ: 26, ಹೆಚ್.ಎಸ್. ಗಾರ್ಡನ್, ಚಿಕ್ಕಬಳ್ಳಾಪುರ ನಗರ. 2) ಅರುಣ್ ಕುಮಾರ್ ಬಿನ್ ಚಂದ್ರಪ್ಪ, 26 ವರ್ಷ, ಬಲಜಿಗರು, ತರಕಾರಿ ವ್ಯಾಪಾರ, ವಾಸ: ವಾರ್ಡ್ ನಂ: 21, ಸೊಪ್ಪಿನ ಬೀದಿ, ಚಿಕ್ಕಬಳ್ಳಾಪುರ ವಾಸಿಗಳು ಎಂದು ತಿಳಿಸಿದರು. ಓಡಿ ಹೋದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ 3) ವಿಷ್ಣು ಬಿನ್ ವಾಸದೇವ, 22 ವರ್ಷ,ವಕ್ಕಲಿಗರು, ವಿದ್ಯಾರ್ಥಿ, ವಾಸ: ಕಾರ್ಖಾನೆ ಪೇಟೆ, ಚಿಕ್ಕಬಳ್ಳಾಪುರ ನಗರ. ಮೊ.ನಂ: 8088201664  ಸದರಿ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಅಕ್ರಮವಾಗಿ ಅಂದರ್ ಬಾಹರ್  ಜೂಜಾಟ ವನ್ನು ಆಡುತ್ತಿದ್ದು ಆಸಾಮಿಗಳು ಜೂಜಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ  ಪಣಕ್ಕಿಟ್ಟಿದ್ದ ಹಣ ಮತ್ತು ಇಸ್ಪೀಟ್ ಎಲೆಗಳನ್ನು ಚೆಲ್ಲಾ ಪಿಲ್ಲಿಯಾಗಿ ಎಸೆದಿದ್ದನ್ನು  ಸಂಗ್ರಹಿಸಿಕೊಂಡು ಎಣಿಸಲಾಗಿ ನಗದು 2360/- ರೂ ಮತ್ತು 52 ಇಸ್ಪೀಟ್ ಎಲೆಗಳು ದೊರೆತಿರುತ್ತದೆ.  ಆಸಾಮಿಗಳು ಪಣಕ್ಕಿಟ್ಟಿದ್ದ ಹಣ 2360/- ರೂ ಮತ್ತು 52 ಇಸ್ಪೀಟ್ ಎಲೆಗಳನ್ನು  ಹಾಗೂ ಒಂದು ಪ್ಲಾಸ್ಟಿಕ್ ಚೀಲವನ್ನು ಅಮಾನತ್ತು ಪಡಿಸಿಕೊಂಡು ವಶಕ್ಕೆ ಪಡೆದುಕೊಂಡಿರುತ್ತದೆ. ಪಂಚನಾಮೆಯನ್ನು ರಾತ್ರಿ 9.15 ಗಂಟೆಯಿಂದ ರಾತ್ರಿ 10.15 ಗಂಟೆಯವರೆಗೆ ಠಾಣೆಗೆ ಒದಗಿಸಿರುವ ಬ್ಯಾಟರಿ ಟಾರ್ಚ್ ಬೆಳಕಿನಲ್ಲಿ ಕೈಗೊಂಡಿರುತ್ತೆ. ಅಮಾನತ್ತು ಪಡಿಸಿಕೊಂಡ ಮಾಲು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ರಾತ್ರಿ 10.45 ಗಂಟೆಗೆ ವಾಪಾಸ್ಸಾಗಿ ಆಸಾಮಿಗಳು, ಮಾಲು, ಪಂಚನಾಮೆ ಮತ್ತು ಘನ ನ್ಯಾಯಾಲಯದ ಅನುಮತಿ ಪತ್ರವನ್ನು ಹಾಜರು ಪಡಿಸುತ್ತಿದ್ದು  ಅರೋಪಿಗಳ ವಿರುದ್ದ  ಕಲಂ 87 ಕೆಪಿ ಅಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಈಪ್ರ.ವ.ವರದಿ.

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.60/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ: 05/02/2021 ರಂದು ರಾತ್ರಿ 8.15 ಗಂಟೆಗೆ ಆರೀಫ್ ಖಾನ್ ಬಿನ್ ಲೇಟ್ ಕರೀಂಖಾನ್, 38 ವರ್ಷ, ಮುಸ್ಲಿಂ ಜನಾಂಗ, ಗುಜರಿ ವ್ಯಾಪಾರ, ಘಫಾರ್ ಖಾನ್ ಮೊಹಲ್ಲಾ, ಶ್ರೀನಿವಾಸಪುರ ನಗರ, ಕೋಲಾರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:31/01/2021 ರಂದು ಬೆಳಿಗ್ಗೆ 9.00 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಸ್ನೇಹಿತ ಮಹಮ್ಮದ್ ಯೂಸೂಫ್ ಬಿನ್ ಮಹಮ್ಮದ್ ದಸ್ತಗಿರ್ ಸಾಬ್, 70 ವರ್ಷ ರವರು ಕೆಲಸದ ನಿಮಿತ್ತ ತನ್ನ ಬಾಬತ್ತು ಕೆಎ-03 ಹೆಚ್ಆರ್-7907 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿ ತಾಲ್ಲೂಕಿನ ಕೈವಾರ ಗ್ರಾಮಕ್ಕೆ ಬಂದು ಅಲ್ಲಿ ಕೆಲಸ ಮುಗಿಸಿಕೊಂಡು ಪುನಃ ಶ್ರೀನಿವಾಸಪುರ ಗ್ರಾಮಕ್ಕೆ ಹೋಗಲು ಅದೇ ದಿನ ಮದ್ಯಾಹ್ನ 1.00 ಗಂಟೆ ಸಮಯದಲ್ಲಿ ಬೆಂಗಳೂರು-ಕಡಪ ರಾಜ್ಯ ಹೆದ್ದಾರಿಯ ಚಿನ್ನಸಂದ್ರ ಗ್ರಾಮದ ಬಳಿ ಇರುವ ಮೆಟ್ರೋ ಹೋಟಲ್ ಬಳಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ ತಮ್ಮ ದ್ವಿಚಕ್ರ ವಾಹನದ ಹಿಂಬದಿಯಿಂದ ಬಂದ ಕಾರಿನ ಚಾಲಕನು ತನ್ನ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ದ್ವಿಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದ ತಾನು ಮತ್ತು ಹಿಂಬದಿಯಲ್ಲಿ ಕುಳಿತ್ತಿದ್ದ ಮಹಮ್ಮದ್ ಯೂಸೂಫ್ ರವರು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋಗಿದ್ದು, ಇದರಿಂದ ತನ್ನ ಬಲ ಮೊಣಕೈಗೆ, ಎಡ ಕೈಗೆ ಮತ್ತು ಸೊಂಟದ ಬಳಿ ತರಚಿದ ರಕ್ತಗಾಯಗಳಾಗಿರುತ್ತದೆ. ಹಿಂಬದಿಯಲ್ಲಿ ಕುಳಿತ್ತಿದ್ದ ಮಹಮ್ಮದ್ ಯೂಸೂಫ್ ರವರಿಗೆ ಬಲ ಮೊಣಕಾಲಿಗೆ ತರಚಿದ ಗಾಯ ಮತ್ತು ಎಡಮೊಣಕಾಲಿಗೆ ಮೂಳೆ ಮುರಿತದ ರಕ್ತಗಾಯವಾಗಿರುತ್ತದೆ. ತಮಗೆ ಅಪಘಾತಪಡಿಸಿದ ಕಾರನ್ನು ನೋಡಲಾಗಿ ಅದು ನೊಂದಣಿ ಸಂಖ್ಯೆ ಕೆಎ-09 ಜೆಡ್-4426 ಹೊಂಡೈ ಐ-20 ಕಾರು ಆಗಿರುತ್ತದೆ. ನಂತರ ಅಲ್ಲಿದ್ದ ಚಿನ್ನಸಂದ್ರ ಗ್ರಾಮದ ಸಾರ್ವಜನಿಕರು ತಮ್ಮನ್ನು ಉಚಚರಿಸಿ ದಾರಿಯಲ್ಲಿ ಬರುತ್ತಿದ್ದ ಯಾವುದೋ ಆಟೋವಿನಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ತಾನು ಸದರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಡಿಸ್ಚಾರ್ಜ್ ಆಗಿದ್ದು, ಸದರಿ ಅಪಘಾತದ ವಿಚಾರವನ್ನು ತಿಳಿದು ಆಸ್ಪತ್ರೆಗೆ ಬಂದ ಮಹಮ್ಮದ್ ಯೂಸೂಫ್ ರವರ ಮಗನಾದ ಮಹಮ್ಮದ್ ಅಜರ್ ಮತ್ತು ಮಹಮ್ಮದ್ ಅಯಾಜ್ ರವರು ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಗಾಯಾಳು ಮಹಮ್ಮದ್ ಯೂಸೂಫ್ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಕೆರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಗಾಯಗೊಂಡಿದ್ದ ಮಹಮ್ಮದ್ ಯೂಸೂಫ್ ರವರಿಗೆ ಇದುವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ಇದುವರೆಗೂ ಪೊಲೀಸ್ ಠಾಣೆಗೆ ದೂರನ್ನು ನೀಡಲು ಸಾದ್ಯವಾಗದೇ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿರುತ್ತೇವೆ. ತಮಗೆ ಅಪಘಾತಪಡಿಸಿದ ಕಾರು ಅಪಘಾತದ ಘಟನೆಯ ಸ್ಥಳದಲ್ಲಿರುತ್ತೆ. ಆದ್ದರಿಂದ ತಮಗೆ ಅಪಘಾತಪಡಿಸಿದ ಮೇಲ್ಕಂಡ ಕೆಎ-09 ಜೆಡ್-4426 ನೊಂದಣಿ ಸಂಖ್ಯೆ ಹೊಂಡೈ ಐ-20 ಕಾರಿನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.61/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ 06-02-2021 ರಂದು ಮದ್ಯಾಹ್ನ 2-30 ಗಂಟೆಗೆ ಐಶ್ವರ್ಯ ಕೋಂ ಶಬರೀಶ್, 20 ವರ್ಷ, ನಾಯಕರು, ಗೃಹಿಣಿ, ವಾಸ: ಕೇತನಾಯಕನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಈಗ 5 ತಿಂಗಳ ಗರ್ಭಿಣಿಯಾಗಿದ್ದು ಚಿಕಿತ್ಸೆ ಸಲುವಾಗಿ ಈ ದಿನ ದಿನಾಂಕ:06/02/2021 ರಂದು ಬೆಳಿಗ್ಗೆ 8.00 ಗಂಟೆಗೆ ತಾನು ತನ್ನ ಮಾವ ಹನುಮಂತಪ್ಪ ಬಿನ್ ಈರಪ್ಪ ರವರೊಂದಿಗೆ ಆತನ ಬಾಬತ್ತು ಕೆಎ-40 ಆರ್-7647 ನೊಂದಣಿ ಸಂಖ್ಯೆಯ ಹಿರೋ ಪ್ಯಾಷನ್ ಪ್ರೋ ದ್ವಿಚಕ್ರ ವಾಹನದಲ್ಲಿ ನಮ್ಮ ಗ್ರಾಮವನ್ನು ಬಿಟ್ಟು ಚಿಂತಾಮಣಿ ನಗರಕ್ಕೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಊರಿಗೆ ವಾಪಸ್ಸು ಹೋಗಲು ಬೆಳಿಗ್ಗೆ 09.30 ಗಂಟೆ ಸಮಯದಲ್ಲಿ ಚಿಂತಾಮಣಿ-ಬಾಗೇಪಲ್ಲಿ ಮುಖ್ಯ ರಸ್ತೆಯ ನೆಲಮಾಚನಹಳ್ಳಿ ಗೇಟ್ ಬಿಟ್ಟು ಮುನಿಮಂಗಲ ಕ್ರಾಸ್ನಿಂದ ಸ್ವಲ್ಪ ದೂರದಲ್ಲಿರುವ ನೀಲಗಿರಿ ತೋಪಿನ ಪಕ್ಕದಲ್ಲಿ ಹಾದುಹೋಗಿರುವ ರಸ್ತೆಯಲ್ಲಿ ಹೋಗುತ್ತಿದ್ದಾಗ, ಅದೇ ಸಮಯಕ್ಕೆ ಬಾಗೇಪಲ್ಲಿ ರಸ್ತೆ ಕಡೆಯಿಂದ ಒಂದು ಖಾಸಗಿ ಬಸ್ಸು ಬರುತ್ತಿದ್ದು, ಸದರಿ ಬಸ್ಸಿನ ಹಿಂದೆ ಒಂದು ದ್ವಿಚಕ್ರ ವಾಹನದಲ್ಲಿ ಇಬ್ಬರು ವ್ತಕ್ತಿಗಳು ಬರುತ್ತಿದ್ದು, ಸದರಿ ವಾಹನದ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಸ್ಸನ್ನು ಓವರ್ ಟೇಕ್ ಮಾಡಿಕೊಂಡು ಬಂದು ತಾವು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆಸಿ ಅಪಘಾತಪಡಿಸಿದ್ದರ ಪರಿಣಾಮ ತಾವು ಮತ್ತು ಅಪಘಾತವನ್ನುಂಟು ಮಾಡಿದ ವಾಹನದ ಸವಾರ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ವಾಹನಗಳ ಸಮೇತ ಬಿದ್ದು ಹೋಗಿದ್ದು, ಇದರಿಂದ ತನ್ನ ಮಾವ ಹನುಮಂತಪ್ಪನ ಬಲಕಾಲಿನ ಮುಂಗಾಲು ಮತ್ತು ಬೆರಳುಗಳಿಗೆ ರಕ್ತಗಾಯವಾಗಿ, ಮೈ-ಕೈಗೆ ತರಚಿದ ಗಾಯಗಳಾಗಿರುತ್ತೆ. ಹಿಂಬದಿಯಲ್ಲಿ ಕುಳಿತಿದ್ದ ತನ್ನ ಕೈ-ಕಾಲುಗಳಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿರುತ್ತೆ. ಅಪಘಾತಪಡಿಸಿದ ವಾಹನದಲ್ಲಿದ್ದವರಿಗೂ ಸಹ ಸಣ್ಣಪುಟ್ಟ ಗಾಯಗಳಾಗಿರುತ್ತೆ. ಸ್ಥಳದಲ್ಲಿ ಬಿದ್ದಿದ್ದ ಅಪಘಾತಪಡಿಸಿದ ದ್ವಿಚಕ್ರ ವಾಹನವನ್ನು ನೋಡಲಾಗಿ ಇದು ಬಜಾಜ್ ಡಿಸ್ಕವರ್ ಕಂಪನಿಯ ವಾಹನವಾಗಿದ್ದು, ಇದರ ನೊಂದಣಿ ಸಂಖ್ಯೆ ಕೆಎ-50 ಇ-5238 ಆಗಿರುತ್ತೆ. ಈ ಅಪಘಾತದಿಂದ ತನ್ನ ದ್ವಿಚಕ್ರ ವಾಹನ ಜಖಂ ಆಗಿರುತ್ತೆ. ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಗಳ ಹೆಸರು ವಿಳಾಸ ತಿಳಿದಿರುವುದಿಲ್ಲ. ನಂತರ ಗಾಯಗೊಂಡಿದ್ದ ತನ್ನ ಮಾವನನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಪಡೆಸಿದ್ದು, ತನಗೆ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ತಾನು ಚಿಕಿತ್ಸೆ ಪಡೆದಿರುವುದಿಲ್ಲ ತನ್ನ ಗಂಡ ಶಬರೀಶ ರವರು ಗಾಯಗೊಂಡಿದ್ದ ತನ್ನ ಮಾವನನ್ನು ಹೆಚ್ಚಿನ ಚಿಕಿತ್ಸೆಗಾಗಿ  ಹೊಸಕೋಟೆ ಬಳಿಯಿರುವ ಎಂ.ವಿ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಆದ್ದರಿಂದ ತಮಗೆ ಅಪಘಾತಪಡಿಸಿದ ಮೇಲ್ಕಂಡ ದ್ವಿಚಕ್ರ ವಾಹನದ ಸವಾರನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದೆ.

6. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.17/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:05-02-2021 ರಂದು ಮದ್ಯಾಹ್ನ 01-00 ಗಂಟೆಗೆ ಪಿರ್ಯಾಧಿಯಾದ ಶಿವಕುಮಾರ್ ಬಿನ್ ವೆಂಕಟಸ್ವಾಮಿ, 24 ವರ್ಷ, ನಾಯಕರು, ಟೆಂಪೋ ಚಾಲಕನ ಕೆಲಸ, ದಢಂಘಟ್ಟ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಾರಳಾಗಿದ್ದು ಟೆಂಪೋ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ.  ದಿನಾಂಕ 31/01/2021 ರಂದು ಬೆಳಿಗ್ಗೆ ತಾನು ತಮ್ಮ ಅಕ್ಕಳಾದ ಮಂಜುಳ ರವರ  ಗ್ರಾಮವಾದ  ಈ. ತಿಮ್ಮಸಂದ್ರ ಗ್ರಾಮಕ್ಕೆ ಹೋಗಬೇಕಾಗಿದ್ದು ತಮ್ಮ ಗ್ರಾಮದಿಂದ ದಿಬ್ಬೂರಹಳ್ಳಿ ಗ್ರಾಮಕ್ಕೆ ಬಂದು ಅಲ್ಲಿಂದ ತನ್ನ ಸ್ನೇಹಿತನಾದ ರಾಯಪ್ಪಲ್ಲಿ ಗ್ರಾಮದ ವಾಸಿ ಗೋವರ್ಧನ್ ರವರ ಬಾಬತ್ತು ದ್ವಿಚಕ್ರ ವಾಹನ ಸಂಖ್ಯೆ ಕೆಎ-67-ಇ-8836 ಪಲ್ಸರ್ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿರುತ್ತೇನೆ. ನಂತರ ಈ ತಿಮ್ಮ ಸಂದ್ರ ಗ್ರಾಮದಲ್ಲಿ ಕೆಲಸ ಮುಗಿಸಿಕೊಂಡು ಇದೇ ದಿನ ಬೆಳಿಗ್ಗೆ ಸುಮಾರು 11.00 ಗಂಟೆ ಸಮಯದಲ್ಲಿ ತಮ್ಮ ಗ್ರಾಮಕ್ಕೆ ವಾಪಸ್ಸು ಬರಲು ತಾನು ತೆಗೆದುಕೊಂಡು ಹೋಗಿದ್ದ ದ್ವಿಚಕ್ರ ವಾಹನದಲ್ಲಿ ಗಾಂಡ್ಲಚಿಂತೆ ಗ್ರಾಮ ಬಿಟ್ಟು ರಸ್ತೆಯ ಎಡಭಾಗದಲ್ಲಿ ಬರುತ್ತಿದ್ದಾಗ ಅರಣ್ಯ ಪ್ರದೇಶದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಿಂದ ಸ್ವಲ್ಪ ದೂರದಲ್ಲಿ ದಿಬ್ಬೂರಹಳ್ಳಿ ಕಡೆಯಿಂದ ಬಂದ ದ್ವಿಚಕ್ರ ವಾಹನದ ಚಾಲಕ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡುತ್ತಿದ್ದ  ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆಯಿಸಿದ್ದರ ಪರಿಣಾಮ ತಾನು ದ್ವಿಚಕ್ರ ವಾಹನದ ಸಮೇತ ಕೆಳಗೆ ಬಿದ್ದು ಹೋಗಿದ್ದು ತನ್ನ ದ್ವಿಚಕ್ರ ವಾಹನದ ಮುಂಬಾಗದ ಡೂಂ ಹಾಗೂ ದ್ವಿಚಕ್ರ ವಾಹನದ ಬಲಭಾಗ ಜಖಂ ಆಗಿ ತನ್ನ ಬಲಕಾಲಿನ ಪಾದಕ್ಕೆ ಮತ್ತು ಬಲಕೈನ ಬೆರಳುಗಳಿಗೆ ರಕ್ತ ಗಾಯವಾಗಿ ಬಲಕೈ ಮೊಣ ಕೈ ಕೆಳಗೆ ಊತದ ಗಾಯವಾಗಿರುತ್ತೆ. ತನಗೆ ಡಿಕ್ಕಿ ಹೊಡೆಸಿದ ದ್ವಿಚಕ್ರ ವಾಹನ ಚಾಲಕನಿಗೂ ಸಹ ಬಲಕಾಲಿಗೆ ರಕ್ತ ಗಾಯವಾಗಿದ್ದು  ನಂತರ ಅದೇ ದಾರಿಯಲ್ಲಿ ಬರುತ್ತಿದ್ದ ಆಂಜಿನಪ್ಪ ಬಿನ್ ನಾರಾಯಣಸ್ವಾಮಿ, ರಾಯಪ್ಪನಹಳ್ಳಿ ಗ್ರಾಮ ಮತ್ತು ಲೋಕೇಶ ಬಿನ್ ವೆಂಕಟೇಶಪ್ಪ, ಎಲ್. ಎನ್ ಹೊಸೂರು ಗ್ರಾಮ ರವರು ಬಂದು ತಮ್ಮಿಬ್ಬರನ್ನು ಉಪಚರಿಸಿರುತ್ತಾರೆ. ತನಗೆ ಡಿಕ್ಕಿ ಹೊಡೆಸಿದ ದ್ವಿಚಕ್ರ ವಾಹನವನ್ನು ನೋಡಲಾಗಿ ಕೆಎ-40-ಇಡಿ-1859 ಯಮಹಾ ಕಂಪನಿಯ ದ್ವಿಚಕ್ರ ವಾಹನವಾಗಿದ್ದು ಆತನ ಹೆಸರು ಕೇಳಲಾಗಿ ಕಾರ್ತಿಕ್ ಕಂದವಾರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿರುತ್ತಾನೆ. ನಂತರ ತಮ್ಮಿಬ್ಬರನ್ನು ಅಲ್ಲಿದ್ದವರು ಯಾವುದೂ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿದ್ದು ದಿಬ್ಬೂರಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತೇವೆ. ನಂತರ ತನಗೆ ಬಲಕೈ ನೋವು ಜಾಸ್ತಿ ಆಗಿದ್ದರಿಂದ ದಿನಾಂಕ: 04/02/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಸಿಕೊಂಡು ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ತನಗೆ ಅಪಘಾತವುಂಟು ಮಾಡಿದ ಕೆಎ-40-ಇಡಿ-1859 ದ್ವಿಚಕ್ರ ವಾಹನದ ಚಾಲಕ  ಕಾರ್ತಿಕ್  ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳ ಬೇಕಾಗಿ ಕೋರಿರುವುದಾಗಿರುತ್ತೆ.

7. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.17/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 05-02-2021 ರಂದು ರಾತ್ರಿ 09-00 ಗಂಟೆಗೆ ಶ್ರೀ ಮಲ್ಲಿಕಾರ್ಜುನ CHC- 239 ರವರು ಠಾಣೆಗೆ ಹಾಜರಾಗಿ ಆರೋಪಿ, ಮಾಲು ಹಾಗೂ ಮಹಜರ್ ನೊಂದಿಗೆ ನೀಡಿದ ವರಧಿಯ ಸಾರಾಂಶವೇನೆಂದರೆ,   ಚಿಕ್ಕಬಳ್ಳಾಫುರ ಜಿಲ್ಲೆಯ DCB/CEN ಪೊಲೀಸ್ ಠಾಣೆಯ PI ಶ್ರೀ ರಾಜಣ್ಣ ರವರ ಆದೇಶದಂತೆ ತನಗೆ ಹಾಗೂ CHC-198 ಮಂಜುನಾಥ ರವರುಗಳಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಾನೂನು ಬಾಹೀರ ಚಟುವಟಿಕೆಗಳ ಪತ್ತೆ ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ದಿನಾಂಕ:  05/02/2021  ರಂದು  ಶಿಡ್ಲಘಟ್ಟ ತಾಲ್ಲೂಕಿನ    ತಿಮ್ಮಸಂದ್ರ , ಬೈರಗಾನಹಳ್ಳಿ  ಗ್ರಾಮಗಳಲ್ಲಿ ಕಡೆ  ಗಸ್ತು ಮಾಡಿಕೊಂಡು ಸಂಜೆ ಸುಮಾರು 06-00 ಗಂಟೆಯ ಸಮಯದಲ್ಲಿ   ಶೆಟ್ಟಿಕೆರೆ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಬಾತ್ಮೀದಾರರಿಂದ ಬಂದಂತಹ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಶೆಟ್ಟಿಕೆರೆ ಗ್ರಾಮದ  ಹೋದಾಗ ರಾಮಾಚಾರಿ ಬಿನ್ ಗೋಪಾಲಚಾರಿ  ರವರ ಚಿಲ್ಲರೆ ಅಂಗಡಿಯ   ಮುಂಬಾಗ  ಮದ್ಯಪಾನ ಮಾಡುತ್ತಿದ್ದ ಸ್ಥಳದಲ್ಲಿ ದಾಳಿ ಮಾಡಲಾಗಿ ಸ್ಥಳದಲ್ಲಿದ್ದ ಜನರು ಓಡಿಹೋಗಿದ್ದು,  1) 90 ML HAYWARDS CHEERS WHISKY 22 TETRA PACKETS 2) TWO PLASTICK GLASS 3) ONE LITER EMPTY WATER BATEL 4) EMPTY 90 ML HAYWARDS CHEERS WHISKY 2 TETRA PACKETS  ಇದ್ದು, ವಶಪಡಿಸಿಕೊಂಡ ಮಧ್ಯವು ಒಟ್ಟು1.980 ML ಇದ್ದುಅದರ ಬೆಲೆ 772 /- ರೂಗಳಾಗಿರುತ್ತೆ. ಮಾಲನ್ನು  ಪಂಚರ ಸಮಕ್ಷಮ  ವಶ ಪಡೆದು ಹಾಗು  ಮದ್ಯಪಾನ ಮಾಡಲು  ಸ್ದಳಾವಕಾಶ ಮಾಡಿಕೊಟ್ಟ ಆಸಾಮಿ ರಾಮಾಚಾರಿ ಬಿನ್ ಗೋಪಾಲಚಾರಿ , 28 ವರ್ಷ, ಆರ್ಚಾಯರು, ಚಿಲ್ಲರೆ ಅಂಗಡಿ, ವ್ಯಾಪಾರ, ಶೆಟ್ಟಿಕೆರೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಆಸಾಮಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಮಾಲ ಮತ್ತು ಆಸಾಮಿಯನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಸಲು ನೀಡಿರುವ ವರಧಿಯಾಗಿರುತ್ತೆ.

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.34/2021 ಕಲಂ. 78(1),78(3) ಕೆ.ಪಿ ಆಕ್ಟ್:-

          ದಿನಾಂಕ:30/01/2021 ರಂದು ಸಂಜೆ 5-30 ಗಂಟೆಯಲ್ಲಿ ಶ್ರೀ.. ರವಿಶಂಕರ್ .ಡಿ.ವೈ.ಎಸ್.ಪಿ ಚಿಕ್ಕಬಳ್ಳಾಪುರ ಉಪ ವಿಭಾಗ ರವರು ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ, ವರು ದಿನಾಂಕ 30/01/2021 ರಂದು ಗೌರಿಬಿದನೂರು ನಗರದಲ್ಲಿ ಗ್ರಾಮಪಂಚಾಯ್ತಿ ಅದ್ಯಕ್ಷ ಪಾದ್ಯಕ್ಷರ ಮೀಸಲಾತಿ ಬಗ್ಗೆ ಬಂದೋಬಸ್ತ್ ಕರ್ತವ್ಯಕ್ಕೆ ಬಂದಿದ್ದು, ಮದ್ಯಾಹ್ನ 3-00 ಗಂಟೆಯಲ್ಲಿ ಗೌರಿಬಿದನೂರು ಕಡೆಯಿಂದ ಗುಡಿಬಂಡೆ ಕಡೆಗೆ ಹೋಗುತ್ತಿದ್ದಾಗ ಇವರಿಗೆ ಮಧ್ಯಾಹ್ನ 3-30 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ವಾಟದಹೊಸಹಳ್ಳಿ ಗ್ರಾಮದ ಹರಿಜನ ಕಾಲೋನಿಯಲ್ಲಿ ನರೇಶ ಎಂಬುವವರ ಮನೆಯ ಮುಂಬಾಗದ ರಸ್ತೆಯಲ್ಲಿ ಯಾರೋ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ತಾನು ಹಾಗು ಸಿಬ್ಬಂದಿ ,ಹಾಗು ಪಂಚರೊಂದಿಗೆ ದಾಳಿ ಮಾಡಲಾಗಿ ಮಟ್ಕಾ ಅಂಕಿಗಳನ್ನು ಬರೆಯುತ್ತಿದ್ದ 1) ನರೇಶ ಬಿನ್ ಲೇಟ್ ನರಸಿಂಹಪ್ಪ, 36 ವರ್ಷ, ಆದಿ ಕರ್ನಾಟಕ, ತರಕಾರಿ ವ್ಯಾಪಾರ, ವಾಟದಹೊಸಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ,2) ಮಟಕಾ ಅಂಕಿಗಳನ್ನು ಬರೆಸಲು ಬಂದಿದ್ದ ಗೋವಿಂದಪ್ಪ ಬಿನ್ ಗಂಗಪ್ಪ, 24 ವರ್ಷ, ಆದಿ ಕರ್ನಾಟಕ, ಕದಿರೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ,3) ಸುರೇಶ್ ಬಾಬು @ ಬಾಬು ಬಿನ್ ನರಸಪ್ಪ, 26 ವರ್ಷ, ಆದಿ ಕರ್ನಾಟಕ, ಜಿರಾಯ್ತಿ, ವಾಟದಹೊಸಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು .ರವರನನ್ಉ ಪಂಚರ ಸಮಕ್ಷ ವಶಕ್ಕೆ ಪಡೆದು, ಇವರು ಮಟಕಾ ಜೂಜಾಟಕ್ಕೆ ಬಳಸಿದ್ದ 1) ಒಂದು ಪೆನ್ 2) 3920/- ರೂ ನಗದು ಹಣವನ್ನು 3) 04 ಮಟಕಾ ಚೀಟಿಗಳು ಪಂಚರ ಸಮಕ್ಷಮದಲ್ಲಿ ಸಂಜೆ 4-00 ಗಂಟೆಯಿಂದ 5-00 ಗಂಟಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ ಸಂಜೆ 5-30 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು, ದೂರಿನ ಮೂಲಕ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

9. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.23/2021 ಕಲಂ. 379 ಐ.ಪಿ.ಸಿ:-

     ದಿನಾಂಕ 05/02/2021 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾಧಿ ಆಂದ್ರ ಪ್ರದೇಶದ ಚಿತ್ತೂರು ಜಿಲ್ಲೆ ನಕ್ಕಲವಾರಿಕೋಟೆಯ ನಾಗೇಶ್ವರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಈಗ್ಗೆ ಸುಮಾರು ಒಂದು ವರ್ಷದ ಹಿಂದೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮುತ್ತಗದಹಳ್ಳಿ  ಗ್ರಾಮಕ್ಕೆ ಕೆಲಸಕ್ಕೆ ಬಂದಿದ್ದು, ಅಂದಿನಿಂದ  ತನ್ನ ತಂಗಿಯ ಹೆಸರಿನಲ್ಲಿರುವ ಸುಮಾರು 55000/- ರೂ ಬೆಲೆ ಬಾಳು AP 39-AW-1817 ರ ಪಲ್ಸರ್ ದ್ವಿಚಕ್ರವಾಹನವನ್ನು ನಾನು ಉಪಯೋಗಿಸಿಕೊಳ್ಳಲು ಇಲ್ಲಿಗೆ ತಂದಿದ್ದು, ಎಂದಿನಂತೆ ನಾನು ದಿನಾಂಕ 27/08/2020 ರಂದು ರಾತ್ರಿ ನಾನು ವಾಸವಾಗಿರುವ ಮುತ್ತಗದಹಳ್ಳಿ ಗ್ರಾಮದ ಗುಡಿಬಂಡೆ ರಸ್ತೆಯಲ್ಲಿರುವ ಮಂಜುನಾಥೇಶ್ವರ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಮನೆಯ ಮುಂದೆ ನಿಲ್ಲಿಸಿದ್ದು, ದಿನಾಂಕ ತಾನು ಕೆಲಸಕ್ಕೆ ಹೋಗಲೆಂತ ಬೆಳಿಗ್ಗೆ 04-00 ಗಂಟೆಯ ಸಮಯದಲ್ಲಿ ತನ್ನ ದ್ವಿಚಕ್ರವಾಹನವನ್ನು ನಿಲ್ಲಿಸಿದ್ದ ಜಾಗದಲ್ಲಿ ಸದರಿ ದ್ವಿಚಕ್ರವಾಹನ ಇರಲಿಲ್ಲ. ಈ ಬಗ್ಗೆ ತಾನು ಅಕ್ಕ-ಪಕ್ಕ ದ ಮನೆಯವರನ್ನು ತನ್ನ ಸ್ನೇಹಿರ ಬಳಿ ವಿಚಾರಿಸಿದ್ದು, ಪತ್ತೆ ಆಗಲಿಲ್ಲ ಆದಾಗೈ ಈ ದಿನದ ವರೆಗೆ ಎಲ್ಲಾ ಕಡೆ ಹುಡಿಕಿದರೂ ಪತ್ತೆಯಾಗದಿದ್ದ ಕಾರಣ ತಡವಾಗಿ ದೂರು ನೀಡುತ್ತಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

10. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.12/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:05-02-2021 ರಂದು ರಾತ್ರಿ 7:45 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ ಸಿಇಎನ್  ಪೊಲೀಸ್ ಠಾಣೆಯ ಹೆಚ್.ಸಿ-208 ಗಿರೀಶ್ ರವರು ಠಾಣೆಗೆ ಹಾಜರಾಗಿ ನೀಡಿದ  ವರದಿ ಮಾಲು  ಮತ್ತು ಪಂಚನಾಮೆಯನ್ನು ತಂದು ಹಾಜರ್ಪಡಿಸಿದ್ದರ ಸಾರಾಂಶವೇನೆಂದರೆ ತಾನು ದಿನಾಂಕ:05/02/2021 ರಂದು ತಮ್ಮ ಠಾಣೆಯ ಇನ್ಸಪೆಕ್ಟರ್ ಆದ ಶ್ರೀ. ರಾಜಣ್ಣ ರವರ ಆದೇಶದ ಮೇರೆಗೆ ತಾನು ಮತ್ತು ಹೆಚ್.ಸಿ-85 ಶ್ರೀ. ನರಸಿಂಹಯ್ಯ ರವರು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಸಂಜೆ 5:30 ಗಂಟೆಯಲ್ಲಿ ತಿರ್ನಹಳ್ಳಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ನಂಜೇಗೌಡ ಕೆ.ಆರ್ ಬಿನ್ ಲೇಟ್ ರಾಮಾಂಜಿನಪ್ಪ, 35 ವರ್ಷ, ಒಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಕಂಗಾನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ತಮ್ಮ ಬಾಬತ್ತು ಚಿಲ್ಲರೆ ಅಂಗಡಿ ಮುಂಭಾಗದ ಸ್ಥಳದಲ್ಲಿ ಯಾವುದೇ ಪರವಾನಗಿ ಪಡೆಯದೇ ಸಾರ್ವಜನಿಕರಿಗೆ ಮದ್ಯೆ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟಿದ್ದು ಈ ಸಂಬಂಧ ಪಂಚರ ಸಮಕ್ಷಮ ದಾಳಿ ಮಾಡಿ ಕೆ.ಆರ್ ನಂಜೇಗೌಡ ರವರನ್ನು ವಶಕ್ಕೆ ಪಡೆದು ಸ್ಥಳದಲ್ಲಿದ್ದ 1) 90 ML ಸಾಮರ್ಥ್ಯದ HAYWARDS CHEERS WHISKY ಯ 2 ಖಾಲಿ ಮದ್ಯದ ಟೆಟ್ರಾ ಪ್ಯಾಕೇಟುಗಗಳು,, 2) ಮದ್ಯೆ ಸೇವನೆ ಮಾಡಿರುವ 2 ಪ್ಲಾಸ್ಟಿಕ್ ಖಾಲಿ ಗ್ಲಾಸು, 3) ಒಂದು ಖಾಲಿ ನೀರಿನ ಪ್ಲಾಸ್ಟಿಕ್ ಬಾಟಲ್, 4) 4) 90 ML ಸಾಮರ್ಥ್ಯದ HAYWARDS CHEERS WHISKY ಯ 24 ಮದ್ಯದ ಟೆಟ್ರಾ ಪ್ಯಾಕೇಟುಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ. ಮದ್ಯವು ಓಟ್ಟು 2 ಲೀಟರ್ 160 ಎಂ.ಎಲ್ ಇದ್ದು ಇದರ ಒಟ್ಟು ಬೆಲೆ 844 ರೂಗಳಾಗಿರುತ್ತದೆ. ಆರೋಪಿ ಮತ್ತು ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರ.ವ.ವರದಿ.

ಇತ್ತೀಚಿನ ನವೀಕರಣ​ : 06-02-2021 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080