ಅಭಿಪ್ರಾಯ / ಸಲಹೆಗಳು

 

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.391-2021 ಕಲಂ: 379 ಐ.ಪಿ.ಸಿ:-

   ದಿನಾಂಕ: 04/09/2021 ರಂದು ಸಂಜೆ 6.00 ಗಂಟೆಗೆ ನಾರಾಯಣಸ್ವಾಮಿ ಬಿನ್ ವೆಂಕಟರವಣಪ್ಪ, 45 ವರ್ಷ, ಕುರುಬರು, ಜಿರಾಯ್ತಿ, ಕೆಂಪದೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ತಮ್ಮ ಹಾಗೂ ದೊಡ್ಡಕೊಂಡ್ರಹಳ್ಳಿ, ಸಿ.ಕುಂಟೆ ಗ್ರಾಮಗಳ ಜಮೀನುಗಳು ಅಕ್ಕಪಕ್ಕದಲ್ಲಿದ್ದು ದಿನಾಂಕ: 03/09/2021 ರಂದು ರಾತ್ರಿ 10.00 ಗಂಟೆಯಿಂದ ಬೆಳಗಿನ ಜಾವ 06.00 ಗಂಟೆಯ ಮದ್ಯೆ ಯಾರೋ ಕಳ್ಳರು ಈ ಕೆಳಕಂಡ ವ್ಯಕ್ತಿಗಳ ಜಮೀನುಗಳಲ್ಲಿ ಹಾಗೂ ಕೃಷಿಹೊಂಡದಲ್ಲಿದ್ದ ಕೇಬಲ್ ವೈರ್ ಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಆ ಪೈಕಿ 1). ತನ್ನ ಬಾಬತ್ತು ಜಮೀನಿನಲ್ಲಿದ್ದ ಸುಮಾರು 18000/ ರೂ ಬೆಲೆ ಬಾಳುವ 80 ಮೀಟರ್  ಕೇಬಲ್ ವೈರ್ ಹಾಗೂ ಕೃಷಿಹೊಂಡಾದಲ್ಲಿದ್ದ ಸುಮಾರು 5000 ರೂ ಬೆಲೆ ಬಾಳುವ  30 ಮೀಟರ್ ಕೇಬಲ್ ವೈರ್, 2). ಶ್ರೀನಿವಾಸ ಬಿನ್ ದೊಡ್ಡಹನುಮಪ್ಪ, ದೊಡ್ಡಕೊಂಡ್ರಹಳ್ಳಿರವರ ಬಾಬತ್ತು ಜಮೀನಿನಲ್ಲಿದ್ದ ಸುಮಾರು 8000 ರೂ ಬೆಲೆ ಬಾಳುವ 40 ಮೀಟರ್ ಕೇಬಲ್ ವೈರ್, 3). ನಾಗರಾಜ ಬಿನ್ ವೆಂಕಟರವಣಪ್ಪ, ಕೆಂಪದೇನಹಳ್ಳಿರವರ ಬಾಬತ್ತು ಜಮೀನಿನಲ್ಲಿದ್ದ 5000 ರೂ ಬೆಲೆ ಬಾಳುವ ಸುಮಾರು 25 ಮೀಟರ್ ಕೇಬಲ್ ವೈರ್, 4). ಕೃಷ್ಣಪ್ಪ.ಎನ್ ಬಿನ್ ನಾರಾಯಣಸ್ವಾಮಿ, ದೊಡ್ಡಕೊಂಡ್ಹಳ್ಳಿರವರ ಬಾಬತ್ತು ಜಮೀನಿನಲ್ಲಿದ್ದ 4000 ರೂ ಬೆಲೆ ಬಾಳುವ 20 ಮೀಟರ್ ಕೇಬಲ್ ವೈರ್, 5). ಮುನಿಯಪ್ಪ ಬಿನ್ ಯರ್ರಪ್ಪ, ದೊಡ್ಡಕೊಂಡ್ರಹಳ್ಳಿ ರವರ ಬಾಬತ್ತು ಜಮೀನಿನಲ್ಲಿದ್ದ 5000 ರೂ ಬೆಲೆ ಬಾಳುವ ಸುಮಾರು 25 ಮೀಟರ್ ಕೇಬಲ್ ವೈರ್, 6). ನವೀನ್ ಕುಮಾರ್ ಬಿನ್ ನಾರಾಯಣಸ್ವಾಮಿ, ದೊಡ್ಡಕೊಂಡ್ರಹಳ್ಳಿರವರ ಬಾಬತ್ತು ಜಮೀನಿನಲ್ಲಿದ್ದ 6000 ರೂ ಬೆಲೆ ಬಾಳುವ ಸುಮಾರು 25 ಮೀಟರ್ ಕೇಬಲ್ ವೈರ್, 7). ದ್ಯಾವಪ್ಪ ಬಿನ್ ಯರ್ರಪ್ಪ ದೊಡ್ಡಕೊಂಡ್ರಹಳ್ಳಿರವರ ಬಾಬತ್ತು ಜಮೀನಿನಲ್ಲಿದ್ದ 5000 ರೂ ಬೆಲೆ ಬಾಳುವ ಸುಮಾರು 18 ಮೀಟರ್ ಕೇಬಲ್ ವೈರ್, 8). ಶಿವರಾಜ್ ಬಿನ್ ದ್ಯಾವಪ್ಪ, ದೊಡ್ಡಕೊಂಡ್ರಹಳ್ಳಿರವರ ಬಾಬತ್ತು ಜಮೀನಿನಲ್ಲಿದ್ದ ಸುಮಾರು 4500 ರೂ ಬೆಲೆ ಬಾಳುವ 23 ಮೀಟರ್ ಕೇಬಲ್ ವೈರ್, 9). ಸುಬ್ರಮಣಿ ಬಿನ್ ಗೋಪಾಲರೆಡ್ಡಿ, ಸಿ.ಕುಂಟೆ ಗ್ರಾಮದಲ್ಲಿರುವ ಜಮೀನಿನಲ್ಲಿದ್ದ ಸುಮಾರು  4000 ರೂ ಬೆಲೆ ಬಾಳುವ 20 ಮೀಟರ್ ಕೇಬಲ್ ವೈರ್, 10).ಈರಣ್ಣ ಬಿನ್ ಆಂಜಿನಪ್ಪ, ಕೆಂಪದೇನಹಳ್ಳಿ ಗ್ರಾಮದಲ್ಲಿರುವ ಜಮೀನಿನಲ್ಲಿದ್ದ ಸುಮಾರು 7500 ರೂ ಬೆಲೆ ಬಾಳುವ 38 ಮೀಟರ್ ಕೇಬಲ್ ವೈರ್ ಮತ್ತು ಕೃಷಿ ಹೊಂಡಾದಲ್ಲಿ ಹಾಕಿದ್ದ 4000 ರೂ ಬೆಲೆ ಬಾಳುವ ಸುಮಾರು 20 ಮೀಟರ್ ಉದ್ದದ ಕೇಬಲ್ ವೈರ್ ಗಳು ಕಳ್ಳತನವಾಗಿರುತ್ತದೆ. ಆದ್ದರಿಂದ ತಾವುಗಳು ಸ್ಥಳಕ್ಕೆ ಭೇಟಿ ನೀಡಿ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿರುವುದಾಗಿರುತ್ತೆ.

 

2. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.124-2021 ಕಲಂ: 15(ಎ),32(3) ಕೆ.ಇ ಆಕ್ಟ್:-

    ದಿನಾಂಕ:04/09/2021 ರಂದು ಮಧ್ಯಾಹ್ನ 12-30 ಗಂಟೆಗೆ ಡಿಸಿಬಿ- ಸಿಇಎನ್ ಪೊಲೀಸ್ ಠಾಣೆಯ ಸಿ,ಹೆಚ್.ಸಿ 239 ಮಲ್ಲಿ ಕಾರ್ಜುನ ರವರು ಮಾಲು, ಆಸಾಮಿ, ಪಂಚನಾಮೆಯೊಂದಿಗೆ  ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೇಂದರೆ ದಿನಾಂಕ:04/09/2021 ರಂದು   ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ ರಾಜಣ್ಣ ರವರು ಸಿ.ಹೆಚ್.ಸಿ239 ಮಲ್ಲಿ ಕಾರ್ಜುನ ಹಾಗೂ ಸಿ.ಹೆಚ್.ಸಿ 198 ಮಂಜುನಾಥ ರವರುಗಳಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಪತ್ತೆ ಕರ್ತವ್ಯಕ್ಕೆ ನೇಮಿಸಿದ್ದು ಆದರಂತೆ ನಾವುಗಳು ಶಿಡ್ಲಘಟ್ಟ ತಾಲ್ಲೂಕಿನ ಎಸ್, ದೇವಗಾನಹಳ್ಳಿ, ಸೋಮೇಶ್ವರ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಬೆಳಗ್ಗೆ ಸುಮಾರು 11-00 ಗಂಟೆಯ ಸಮಯದಲ್ಲಿ ಸಾದಲಿ ಗ್ರಾಮದ ಮುನಿಕೃಷ್ಣ ಬಿನ್ ಲೇಟ್ ಚಿಕ್ಕ ನರಸಪ್ಪ,50 ವರ್ಷ, ಎಸ್.ಸಿ ಜನಾಂಗ, ಹೋಟೆಲ್ ಕೆಲಸ ವ್ಯಾಪಾರ, ವಾಸ: ಸಾದಲಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕುರವರನ್ನು ವಶಕ್ಕೆ ಪಡೆದು ಸ್ಥಳದಲ್ಲಿದ್ದ 1) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು 2)ಒಂದು ಲೀಟರ್ ನೀರಿನ ಖಾಲಿ ವಾಟರ್ ಬಾಟೆಲ್ 3) ಎರಡು ಖಾಲಿ ಒರಿಜಿನಲ್  ಚಾಯ್ಸ್  ಡಿಲೆಕ್ಸ್  ವಿಸ್ಕಿಯ 90 ಎಂ,ಎಲ್  ಟೆಟ್ರಾ ಪ್ಯಾಕೇಟ್ ಗಳು4) 23 ಮಧ್ಯ ತುಂಬಿದ 90 ಎಂ,ಎಲ್ ಒರಿಜಿನಲ್ ಚಾಯ್ಸ್  ಡಿಲೆಕ್ಸ್  ವಿಸ್ಕಿಯ ಟೆಟ್ರಾ ಪ್ಯಾಕೇಟ್ ಗಳಿದ್ದು ಒಟ್ಟು ಮಧ್ಯವು 2 ಲೀಟರ್ 70 ಎಂ.ಎಲ್ ಇರುತ್ತೆ ಅದರ ಬೆಲೆ 807-00 ರೂ ಗಳಾಗಿರುತ್ತೆ ಮುಂದಿನ ಕ್ರಮ ಜರುಗಿಸಲು ಮಾಲು ಮತ್ತು ಆರೋಪಿಯನ್ನು ಪಂಚರ ಸಮಕ್ಷಮ  ನಮ್ಮ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಲು ತಮ್ಮ ವಶಕ್ಕೆ ಈ ವರದಿಯೊಂದಿಗೆ ನೀಡಿರುತ್ತೆ. ಈ ವರದಿಯೊಂದಿಗೆ ಅಸಲು ಪಂಚನಾಮೆಯನ್ನು ಲಗತ್ತಿಸಿಕೊಂಡಿರುತ್ತೇಂದು ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:124/2021 ಕಲಂ:15(A),32(3) KE AT ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.216-2021 ಕಲಂ: 279,337 ಐ.ಪಿ.ಸಿ:-

   ದಿನಾಂಕ 04/09/2021 ರಂದು ಪಿರ್ಯಾಧಿದಾರರಾದ ಗುರ್ರಪ್ಪ ಬಿನ್ ಲೇಟ್ ಹನುಮಂತಪ್ಪ, 67 ವರ್ಷ,ಬೋಡಬಂಡನಹಳ್ಳಿ ಗ್ರಾಮ,ನಗರಗೆರೆ ಹೋಬಳಿ , ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಅರ್ಜಿಯ ಸಾರಾಂಶವೇನೆಮದರೆ-ದಿನಾಂಕ 11/08/2021 ರಂದು ಸಂಜೆ 5-45 ಗಂಟೆಯಲ್ಲಿ ನನ್ನ ಮಗಳಾದ ಅನಿತಾ ರವರು ನಮ್ಮ ಹೊಲದ ಕಡೆಯಿಂದ ಮನೆಗೆ ಬರುತ್ತಿರುವ ಸಮಯದಲ್ಲಿ ಕದಿರೇನಹಳ್ಳಿ ಕಡೆಯಿಂದ ನಮ್ಮ ಗ್ರಾಮದ ಗಜೇಂದ್ರ ಬಿನ್ ಆನಂದಪ್ಪ ರವರು KA 40 R 4077 ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಮಗಳಿಗೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದ ಪರಿಣಾಮ ನನ್ನ ಮಗಳ ಬಲಕಾಲಿನ ಮೂಳೆ ಮುರಿದ ಪರಿಣಾಮವಾಗಿದ್ದುಅಲ್ಲಿಯೇ ಇದ್ದ ಕೃಷ್ಣಪ್ಪ ಬಿನ್ ನಾರಾಯಣಪ್ಪ ನನಗೆ ತಿಳಿಸಿದ್ದು ಕೂಡಲೇ ನಾನು ಸ್ಥಳಕ್ಕೆ ಬಂದು ನೋಡಿದಾಗ ನಿಜವಾಗಿರುತ್ತದೆ ನಾನು ಹಾಗೂ ನಮ್ಮ ಗ್ರಾಮದವರು ನನ್ನ ಮಗಳನ್ನು ಪರೀಕ್ಷಿಸಿ ಚಿಕಿತ್ಸೆ ಗೆ ಗುಡಿಬಂಡೆ ಸರ್ಕಾರಿ ಆಸ್ವತ್ರೆಗೆ ದಾಖಲಿಸುತ್ತೇನೆ. ನಮ್ಮ ಗ್ರಾಮದವರು ರಾಜಿ ಪಂಚಾಯ್ತಿ ಮಾಡುತ್ತೀರುವುದರಿಂದ ನನ್ನ ಮಗಳಿಗೆ  ಆಸ್ವತ್ರೆ ಖರ್ಚು ಸಹಾ ನೋಡಿಕೊಳ್ಳದೆ ಇರುವುದರಿಂದ ಈ ದಿನ  ದಿನಾಂಕ 04/09/2021 ರಂದು ತಡವಾಗಿ ಬಂದು ದೂರು ನೀಡುತ್ತಿದ್ದು ನನ್ನ ಮಗಳಿಗೆ ಅಪಘಾತ ಪಡಿಸಿದ ಗಜೇಂದ್ರ ಬಿನ್ ಆನಂದಪ್ಪ ರವರ ಮೇಲೆ ಕಾನೂನು ಕ್ರಮ ಜರಗಿಸಲು ಈ ದೂರು ನೀಡಿರುತ್ತೇನೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.217-2021 ಕಲಂ: 279,337,304(A) ಐ.ಪಿ.ಸಿ:-

  ದಿನಾಂಕ 05-096-2021 ರಂದು ಬೆಳಿಗ್ಗೆ 09-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಯಶೋದಮ್ಮ ಕೋಂ ಬಾಲಕೃಷ್ಣ, 38 ವರ್ಷ, ನಾಯಕರು, ಕೂಲಿ ಕೆಲಸ, ವಾಸ ತೇಕಲಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕುರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು 20 ವರ್ಷಗಳ ಹಿಂದೆ  ಬಾಲಕೃಷ್ಣ ಬಿನ್ ಜೂಲಪ್ಪರವರನ್ನು ಮದುವೆ ಮಾಡಿಕೊಂಡಿದ್ದು  ನಮಗೆ 3 ಜನ ಮಕ್ಕಳಿರುತ್ತಾರೆ. 1 ನೇ ನೇತ್ರ, 2 ನೇ ದಿವ್ಯ, 3 ನೇ ಕಾರ್ತೀಕ್ ಆಗಿರುತ್ತಾರೆ. ನನ್ನ ಗಂಡ ಬಾಲಕೃಷ್ಣ ಬಿನ್ ಜೂಲಪ್ಪ, 43 ವರ್ಷರವರು ವ್ಯವಸಾಯವನ್ನು ಮಾಡಿಕೊಂಡಿರುತ್ತಾರೆ.  ದಿನಾಂಕ 04-09-2021 ರಂದು ಸಂಜೆ ಸುಮಾರು 07-00 ಗಂಟೆಯಲ್ಲಿ ನನ್ನ ಗಂಡ ಬಾಲಕೃಷ್ಣರವರು  ನಮ್ಮ ಗ್ರಾಮದ ವಾಸಿ ಹರೀಶ ಬಿನ್ ಮುದ್ದಪ್ಪರವರ ಮದುವೆಯು ಗೌರಿಬಿದನೂರು ತಾಲ್ಲೂಕು ಬೋಡಬಂಡನಹಳ್ಳಿ ಗ್ರಾಮದಲ್ಲಿರುವ ಶ್ರೀಮತಿ ಗಂಗಮ್ಮ ಹನುಮಂತರೆಡ್ಡಿ ಕಲ್ಯಾಣ ಮಂಟಪದಲ್ಲಿ  ನಡೆಯುತ್ತಿದ್ದು ಹರೀಶರವರ ಮದುವೆಯ ರಿಸೆಪ್ಷನ್ ಗೆ ನನ್ನ ಗಂಡ ಬಾಲಕೃಷ್ಣರವರು ನವೀನ್ ಕುಮಾರ್  ಬಿನ್ ನಾಗೇಶ, 19 ವರ್ಷ, ನಾಯಕರು, ಮತ್ತು ಗಣೇಶ ಬಿನ್ ಅಂಗಡಿ ಕಿಟ್ಟಪ್ಪ 21 ವರ್ಷ ರವರ ಜೊತೆಯಲ್ಲಿ ಗಣೇಶನ ಬಾಬತ್ತು ಕೆ.ಎ 05-ಜೆ.ಜೆ.-8478 ಬೈಕಿನಲ್ಲಿ ಹೋದರು.  ರಾತ್ರಿ ಸುಮಾರು  11-00  ಗಂಟೆಯಲ್ಲಿ ನಾನು ಮನೆಯಲ್ಲಿದ್ದಾಗ ನಮ್ಮ ಗ್ರಾಮದ ವಾಸಿ ಶ್ರೀನಿವಾಸ್ ರವರು  ನನಗೆ  ಪೋನ್ ಮಾಡಿ ಬಾಲಕೃಷ್ಣರವರಿಗೆ ಅಪಘಾತವಾಗಿರುವ ಬಗ್ಗೆ  ತಿಳಿಸಿದ್ದು  ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದಿರುವುದಾಗಿ ತಿಳಿಯಿತು. ನಾನು ರಾತ್ರಿ ಬಂದು ನೋಡಿದಾಗ ನನ್ನ ಗಂಡ ಮೃತಪಟ್ಟಿದ್ದರು. ನಂತರ ವಿಚಾರ ತಿಳಿಯಲಾಗಿ  ಮದುವೆಯ ರಿಸೆಪ್ಷನ್ ಮುಗಿಸಿಕೊಂಡು  ವಾಪಸ್ ಮನೆಗೆ ರಾತ್ರಿ 10-30 ಗಂಟೆಯಲ್ಲಿ ``ನಕ್ಕಲಹಳ್ಳಿ ಕ್ರಾಸ್ ಮತ್ತು ಆಂಜನೇಯ ದೇವಸ್ಥಾನದ ಮಧ್ಯೆ ಗೌರಿಬಿದನೂರು- ಗುಡಿಬಂಡೆ ರಸ್ತೆಯಲ್ಲಿ  ತೇಕಲಹಳ್ಳಿಗೆ ಬರುವಾಗ ಗಣೇಸ ಬಿನ್ ಅಂಗಡಿ ಕಿಟ್ಟಪ್ಪ ತನ್ನ ದ್ವಿಚಕ್ರವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆಯನ್ನು ಮಾಡಿದ್ದರಿಂದ  ರಸ್ತೆಯ ಪಕ್ಕದಲ್ಲಿರುವ  ಹಳ್ಳಕ್ಕೆ ಬೀಳಿಸಿ ಅಪಘಾತವನ್ನು ಮಾಡಿದ್ದರಿಂದ ನನ್ನ ಗಂಡನಿಗೆ ಬಲಗಡೆ ಮುಖದ ಮೇಲೆ  ರಕ್ತಗಾಯವಾಗಿ ಮೃತಪಟ್ಟಿರುತ್ತಾರೆ. ಇನ್ನೊಬ್ಬ ನವೀನ್ ಕುಮಾರ್ ಗೆ ಎಡಗಡೆ ತೋಲಿನ ಬಳಿ ಮೂಗೇಟು ಆಗಿರುತ್ತೆ. ಗಾಯಗೊಂಡಿದ್ದ ನವೀನ್ ಕುಮಾರ್ ಮತ್ತು ಬಾಲಕೃಷ್ಣರವರನ್ನು ನಮ್ಮ ಗ್ರಾಮದ ವಾಸಿ ಶ್ರೀನಿವಾಸ್ ಮತ್ತು ಇತರರು  ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿರುತ್ತಾರೆ. ನವೀನ್ ಕುಮಾರ್ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಿರುತ್ತಾರೆ. ನನ್ನ ಗಂಡನಿಗೆ ಮತ್ತು ನವೀನ್ ಕುಮಾರ್ ರವರಿಗೆ ಅಪಘಾತಪಡಿಸಿ ರಕ್ತಗಾಯವನ್ನು ಮಾಡಿರುವ ಕೆ.ಎ.05-ಜೆ.ಜೆ. 8478 ದ್ವಿಚಕ್ರವಾಹನ ಸವಾರ ನಮ್ಮ ಗ್ರಾಮದ ವಾಸಿ ಗಣೇಶ ಬಿನ್ ಅಂಗಡಿ ಕಿಟ್ಟಪ್ಪರವರ ವಿರುದ್ದ  ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿರುತ್ತೆ.

 

5. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.207-2021 ಕಲಂ: 364,302,34 ಐ.ಪಿ.ಸಿ:-

  ದಿನಾಂಕ 04/09/2021  ರಂದು ಸಂಜೆ 4-00 ಗಂಟೆಗೆ  ಪಿರ್ಯಾದಿದಾರರು ಶ್ರೀಮತಿ ಎಸ್.ಬಿ ಅನಿತಾ ಕೋಂ ಶ್ರೀನಾಥರೆಡ್ಡಿ, ಕಡೇಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ  ಮುದ್ರಿತ ದೂರಿನ ಸಾರಾಂಶವೇನೆಂದರೆ ತನ್ನ ಗಂಡ ಶ್ರೀನಾಥರೆಡ್ಡಿ ಬಿನ್ ಲೇಟ್ ವೆಂಕಟರೆಡ್ಡಿ ರವರು  ಬಾಗೇಪಲ್ಲಿ ಪಟ್ಟಣದಲ್ಲಿ ರೇಷ್ಮೆ ಸೀರೆ ವ್ಯಾಪಾರ ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದರು. ದಿನಾಂಕ: 20/08/2021 ರಂದು ಅಂಗಡಿಯಲ್ಲಿ ವ್ಯಾಪಾರವನ್ನು ಮಾಡುತ್ತಿದ್ದ ಸಮಯದಲ್ಲಿ ಈ ಕೆಳಕಂಡ ವ್ಯಕ್ತಿಗಳು ಅಂಗಡಿ ಹತ್ತಿರ ಬಂದು ಗಲಾಟೆ ಮಾಡಿ ಸಾಲವನ್ನು ಈ ಕ್ಷಣವೇ ಕೊಡಬೇಕೆಂದು ಒತ್ತಾಯಿಸಿ ಆ ಸಮಯದಲ್ಲಿ ಹಣ ಇಲ್ಲವೆಂದು ತಿಳಿಸಿದರು ಮತ್ತು ಕೆಲವು ದಿನಗಳು ಸಮಯ ನೀಡಿ ತಪ್ಪದೇ ನಿಮ್ಮ ಹಣವನ್ನು ನಿಡುತ್ತೇವೆಂದು ಬೇಡಿಕೊಂಡರೂ ಬಿಡದೇ ಅಂಗಡಿಯನ್ನು ಬಲವಂತವಾಗಿ ಮುಚ್ಚಿಸಿ ಅಂಗಡಿಯ ಬೀಗದ ಕೈಯನ್ನು ಸಹ ಅವರು ತೆಗೆದುಕೊಂಡು ಹೋಗಿರುತ್ತಾರೆ. ದಿನಾಂಕ:21/08/2021 ರಂದು ಶ್ರೀನಾಥರೆಡ್ಡಿರವರ  ವಾಸ ಕಡೇಹಳ್ಳಿ ಗ್ರಾಮಕ್ಕೆ ಬಂದು ಮನೆ ಹತ್ತಿರ ಗಲಾಟೆ ಮಾಡಿರುತ್ತಾರೆ. ಇದೂ ಅಲ್ಲದೆ ದೂರವಾಣಿ ಕರೆಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಣ ಕೊಡಿ ಎಂದು ಬೆದರಿಕೆ ಹಾಕುತ್ತಿದ್ದರು. ಇಲ್ಲ ಎಂದರೆ ನಿನ್ನನ್ನು ಮುಗಿಸಿಬಿಡುತ್ತೇವೆಂದು ಬೆದರಿಕೆ ಹಾಕಿರುತ್ತಾರೆ. ಇದನ್ನು ಹೆಂಡತಿಗೆ ತಿಳಿಸಿರುತ್ತಾರೆ.ಇದೇ ಸಮಯದಲ್ಲಿ ಶ್ರಿನಾಥರೆಡ್ಡಿರವರ ಪತ್ನಿಯಾದ ಅನಿತಾ ರವರ ತವರೂರಾದ ಬೋಯಿನಪಲ್ಲಿ ಗ್ರಾಮಕ್ಕೆ ಹೋಗಿದ್ದ ಸಮಯದಲ್ಲಿ ಅಲ್ಲೂ ಬಿಡದ ಈ ಕೆಳಕಂಡ ವ್ಯಕ್ತಿಗಳು ನೀನು ಸಿಕ್ಕಿದಾ ಅವನು ಒಬ್ಬನೂ ಸಿಗಬೇಕು ಎಂದು ಗಲಾಟೆ ಮಾಡಿರುತ್ತಾರೆ.ಇಲ್ಲೂ ಸಹ ದಯವಿಟ್ಟು ಒಂದು ವಾರ ಸಮಯ ಕೊಡಿ ಎಂದು ಬೇಡಿಕೊಂಡರು ಈ ಕೆಳಕಂಡವರು ಅವಕಾಶವನ್ನು ನೀಡಿರುವುದಿಲ್ಲ. ದಿನಾಂಕ: 02/09/2021 ರಂದು ತನ್ನ ಗಂಡನಾದ ಶ್ರೀನಾಥರೆಡ್ಡಿರವರು ತನ್ನ ತವರೂರಾದ ಬಾಗೇಪಲ್ಲಿ ತಾಲ್ಲೂಕು ಗೋರ್ತಪಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೋಯಿಪಲ್ಲಿ ಗ್ರಾಮದಲ್ಲಿದ್ದಾಗ ಅಲ್ಲಿಗೆ ಬಂದು ಗಲಾಟೆ ಮಾಡಿದ್ದರು. ಅಲ್ಲಿಂದ ತನ್ನ ಗಂಡನಾದ ಶ್ರೀನಾಥರೆಡ್ಡಿ  ಆಂದ್ರ ಪ್ರದೇಶದ ಹಿಂದೂಪುರ ತಾಲ್ಲೂಕು ಚಿಲಮತ್ತೂರು ಮಂಡಲಂ ಸ್ವಾಮಲಪಲ್ಲಿ ಗ್ರಾಮಕ್ಕೆ ದ್ವಿ ಚಕ್ರ ವಾಹನದಲ್ಲಿ ಬೇರೆ ಕೆಲಸಕ್ಕೆ KA-40 AA-9293 ವಾಹನದಲ್ಲಿ ಹೋಗಿದ್ದ ಸಮಯದಲ್ಲಿ ಅಲ್ಲಿ ಗಲಾಟೆ ಮಾಡಿ ಅಲ್ಲಿರುವ ದ್ವಿ ಚಕ್ರ ವಾಹನವನ್ನು ಕಿತ್ತುಕೊಂಡು ಶ್ರೀನಾಥ್ ಎಂಬುವವರನ್ನು ಏನು ಮಾಡಿರುತ್ತಾರೆಂಬುವುದು ತಮಗೆ ಗೊತ್ತಿರುವುದಿಲ್ಲ. ವಾಹನವನ್ನು ಕಿತ್ತುಕೊಂಡು ಗಲಾಟೆ ಆಗುವ ಸಮಯದಲ್ಲಿ 1 ನೇ ನೀರಜಾ ಕೋಂ ವೆಂಕಟೇಶ ಬಾಬು , 2 ನೇ ವೆಂಕಟೇಶ ಬಾಬು ಬಿನ್ ಲೇಟ್ ಗೋವಿಂದರೆಡ್ಡಿ , 3 ನೇ ಶಂಕರರೆಡ್ಡಿ ಬಿನ್ ಲೇಟ್ ಗೋವಿಂದರೆಡ್ಡಿ ಈ ಮೂರು ವ್ಯಕ್ತಿಗಳು 21 ನೇ ವಾರ್ಡ್ ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಾಗೇಪಲ್ಲಿ ವಾಸವಾಗಿರುತ್ತಾರೆ. 4 ನೇ ಹಿಡಿಗಾ  ವೆಂಕಟೇಶಪ್ಪ ಮತ್ತು ಇವರ ಧರ್ಮ ಪತ್ನಿ ಬಿ,ಜಿ,ಎಸ್, ಶಾಲೆ ಹತ್ತಿರ ಬಾಗೇಪಲ್ಲಿ ಮತ್ತು ಇವರ ಜೊತೆಗೆ ಸುಮಾರು 6-8 ಜನರು ಎರಡು ಕಾರುಗಳಲ್ಲಿ ಬಂದು ಶ್ರೀನಾಥರೆಡ್ಡಿ ಎಂಬುವವರನ್ನು ಅಪಹರಿಸಿರುತ್ತಾರೆ. ದಿನಾಂಕ:02/09/2021 ರಂದು ಸುಮಾರು ರಾತ್ರಿ 8-00 ಗಂಟೆಯ ಸಮಯದಲ್ಲಿ ಮೃತ ಶ್ರಿನಾಥರೆಡ್ಡಿರವರು ತನ್ನ ಧರ್ಮ ಪತ್ನಿಗೆ ದೂರವಾಣಿ ಕರೆ ಮಾಡಿ ತನ್ನನ್ನು ಅಪಹರಿಸಿ ಹಣ ಕೊಡಬೇಕೆಂದು ಒತ್ತಾಯಿಸಿ ದೈಹಿಕ, ಮಾನಸಿಕ ತೀವ್ರ ರೀತಿಯಲ್ಲಿ ಹಿಂಸಿಸುತ್ತಿದ್ದಾರೆಂದು ವಿಚಾರ  ಹೇಳಿ ನಂತರ ನೀನು ಮತ್ತು  ನಿಮ್ಮ ತಂದೆ ಅದಷ್ಟು ಬೇಗ ಬಾಗೇಪಲ್ಲಿಗೆ ಬನ್ನಿ ಎಂದು ತಿಳಿಸಿರುತ್ತಾರೆ. ನಂತರ ದೂರವಾಣಿ ಕರೆ ಮಾಡಿದರೇ ಸ್ವೀಚ್ ಆಫ್ ಬರುತ್ತಿತ್ತು.  ದಿನಾಂಕ:03/09/2021 ರಂದು ತನ್ನ ಗಂಡನಿಗೆ ಪೋನ್ ಮಾಡಿದರೆ ಆನ್ ನಲ್ಲಿತ್ತು ಅದರೂ ಕರೆ ಸ್ವೀಕರಿಸಲಿಲ್ಲ.  ಮತ್ತೆ ಪೋನ್ ಮಾಡಿದರೆ ಸ್ವೀಚ್ ಆಫ್ ಬರುತ್ತಿತ್ತು.  ಮತ್ತೆ ರಾತ್ತಿ 11-45 ಗಂಟೆಗೆ ಪೋನ್ ಮಾಡಿದರೆ  ಫೋನ್ ಆನ್ ಅಗಿತ್ತು. ಆಗ ತನ್ನ ಗಂಡನಿಗೆ ಪೋನ್ ಮಾಡಿದಾಗ ಬೆಳಿಗ್ಗೆ 5-30 ಗಂಟೆಗೆ  ನಿಮ್ಮ ತಂದೆ, ನೀನು ನ್ಯಾಯಕ್ಕೆ ಬನ್ನಿ ಎಂದು ವಿಚಾರ ತಿಳಿಸಿದರು. ಮತ್ತೆ ದಿನಾಂಕ: 04/09/2021 ರಂದು ತನ್ನ ಗಂಡನಿಗೆ ಪೋನ್ ಮಾಡಿದರೆ ಸ್ವೀಕರಿಸಲಿಲ್ಲ, ತದನಂತರ 8-30 ಕ್ಕೆ ನೇಣು ಹಾಕಿಕೊಂಡಿದ್ದಾರೆಂದು ತಿಳಿಯಪಡಿಸಿದರು.ಆಗ ತಾವು ಸ್ಥಳಕ್ಕೆ ದಾವಿಸಿ ನೋಡಿದಾಗ ತನ್ನ ಗಂಡನನ್ನು ಮೇಲಿನ ವ್ಯಕ್ತಿಗಳು ಅಪಹರಣ ಮಾಡಿ ಎಲ್ಲೋ ಸಾಯಿಸಿ ಕಡೇಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಹಿಂಭಾಗ ಪಿ,ಎಸ್, ಬಾಲಕೃಷ್ಣರೆಡ್ಡಿ ರವರ ಅನುಬೋಗದಲ್ಲಿರುವ ಶೆಡ್ ನಲ್ಲಿ ನೇಣು ಹಾಕಿರುವ ಸ್ಥಿತಿಯಲ್ಲಿ ಎರಡು ಕಾಲು ಭೂಮಿ ಮೇಲೆ ಇತ್ತು, ಕತ್ತಿಗೆ ಮೂರು ಸುತ್ತು ಹಗ್ಗ ಸುತ್ತಿ ಮೂರು ಗಂಟ್ಟು ಹಾಕಿ ಸಾಯಿಸಿರುತ್ತಾರೆ. 1 ನೇ ನೀರಜಾ ಕೋಂ ವೆಂಕಟೇಶ ಬಾಬು , 2 ನೇ ವೆಂಕಟೇಶ ಬಾಬು ಬಿನ್ ಲೇಟ್ ಗೋವಿಂದರೆಡ್ಡಿ ,  3 ನೇ ಶಂಕರರೆಡ್ಡಿ ಬಿನ್ ಲೇಟ್ ಗೋವಿಂದರೆಡ್ಡಿ. 4 ನೇ ಹಿಡಿಗಾ  ವೆಂಕಟೇಶಪ್ಪ, ಮತ್ತು ಇವರ ಧರ್ಮ ಪತ್ನಿ ಮತ್ತು ಇತರರು  ಈ ಮೇಲ್ಕಂಡ ಅನುಮಾನಸ್ತರನ್ನು  ತಮ್ಮ ಸೂರ್ಪದಿಗೆ ತೆಗೆದುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು  ಕೋರಿ ನೀಡಿದ ದೂರಾಗಿರುತ್ತೆ.

 

6. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.102-2021 ಕಲಂ: 15(ಎ), 32(3) ಕೆ.ಇ ಆಕ್ಟ್:-

  ದಿನಾಂಕ:04-09-2021 ರಂದು ಸಂಜೆ 5-10 ಗಂಟೆಗೆ ಸಾಹೇಬರು ದಾಳಿಯಿಂದ ಠಾಣೆಗೆ ಆರೋಫಿ ಅಮಾನತ್ತು ಪಡಿಸಿದ್ದ ಮಾಲು ಹಾಗೂ ಪಂಚನಾಮೆಯೊಂದಿಗೆ  ಹಾಜರಾಗಿ ನೀಡಿದ  ವರದಿಯ ಸಾರಾಂಶವೇನೆಂದರೆ ದಿನಾಂಕ:05/09/2021 ರಂದು ಮಧ್ಯಾಹ್ನ 3-00 ಗಂಟೆಯ ಸಮಯದಲ್ಲಿ ನಾನು ಸರ್ಕಾರಿ ಪೊಲೀಸ್ ಜೀಪ್ KA-40-G-1555 ರಲ್ಲಿ ಸಿಬ್ಬಂದಿಯಾದ ಹೆಚ್ ಸಿ-166 ಸಂಪಂಗಿರಾಮಯ್ಯ ಮತ್ತು ಪಿಸಿ-413 ಶೇಖಪ್ಪ ಗುರಿಕಾರ ರವರೊಂದಿಗೆ ಕೊಂಡೇನಹಳ್ಳಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಂದ ಖಚಿತ ವರ್ತಮಾನದಂತೆ ದೊಡ್ಡಕಿರಿಗುಂಬಿ ಗ್ರಾಮದ ಮುನಿರಾಜನು ಅಕ್ರಮವಾಗಿ ಗಿರಾಕಿಗಳಿಗೆ ಸ್ಥಳದಲ್ಲೇ ಮದ್ಯವನ್ನು ಸೇವಿಸಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯನ್ನು ಅನುಸರಿಸಿ ಸದರಿ ಅಂಗಡಿಯ ಮೇಲೆ ಧಾಳಿ ಮಾಡಿ ಕ್ರಮ ಜರುಗಿಸಲು ಚೇಲುಮೆನಹಳ್ಳಿ ಗ್ರಾಮದ ಬಳಿ ಪಂಚರನ್ನು ಬರಮಾಡಿಕೊಂಡು ಅವರ ಸಮಕ್ಷಮ  ಮಧ್ಯಾಹ್ನ 3-30 ಗಂಟೆಗೆ ದೊಡ್ಡಕಿರಗುಂಬಿ ಗ್ರಾಮದಲ್ಲಿನ ಮುನಿರಾಜನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಹೋಗುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಸ್ಥಳದಿಂದ ಓಡಿ  ಪರಾರಿಯಾಗಿ ಹೋದರು. ಇವನ ಅಂಗಡಿಯ ಬಳಿ ಖಾಲಿ ಮದ್ಯದ ಟೆಟ್ರಾ ಪ್ಯಾಕೇಟುಗಳು ಹಾಗೂ ಖಾಲಿ ಲೋಟಗಳು ಇದ್ದವು, ಮದ್ಯವನ್ನು ಪೂರೈಸುತ್ತಿದ್ದವನ ಹೆಸರು ವಿಳಾಸವನ್ನು ಕೇಳಲಾಗಿ ಮುನಿರಾಜು ಬಿನ್ ನರಸಿಂಹಪ್ಪ, 28 ವರ್ಷ, ಪ.ಜಾತಿ, ಕೂಲಿ ಕೆಲಸ, ದೊಡ್ಡಕಿರಗುಂಬಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದನು. ಅಂಗಡಿಯ ಮುಂಬಾಗದಲ್ಲಿ ಒಂದು ಕಪ್ಪು ಪ್ಲಾಸ್ಟಿಕ್ ಕವರ್ ಇದ್ದು  ಕವರಿನಲ್ಲಿ ಮದ್ಯದ ಟೆಟ್ರಾ ಪ್ಯಾಕೇಟುಗಳು ಇರುವುದು ಕಂಡುಬಂದಿರುತ್ತದೆ, ಕವರಿನಲ್ಲಿ 1) 90 ML ಸಾಮರ್ಥದ HAYWARDS CHEERS  WHISKY  ಹೆಸರಿನ 12 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ ಬೆಲೆ 35.13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-1080 ML ಮದ್ಯವಿದ್ದು ಒಟ್ಟು ಬೆಲೆ 421 ರೂ ಆಗುತ್ತದೆ.2) 90 ಎಂ ಎಲ್ ಸಾಮರ್ಥ್ಯದ HAYWARDS CHEERS  WHISKY  ಖಾಲಿ 5 ಟೆಟ್ರಾ ಪ್ಯಾಕೇಟುಗಳು ಇರುತ್ತವೆ, 3) 5 ಖಾಲಿ ಲೋಟಗಳು ಸಿಕ್ಕಿದ್ದು ಸಾಹೇಬರು ಮುನಿರಾಜನನ್ನು ಗಿರಾಕಿಗಳಿಗೆ, ಮದ್ಯವನ್ನು ಪೂರೈಸಲು ನಿನ್ನಬಳಿ ಪರವಾನಿಗೆ, ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಮಧ್ಯಾಹ್ನ 3:35 ಗಂಟೆಯಿಂದ ಸಂಜೆ 4:25 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ  ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಪಿಯ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

ಇತ್ತೀಚಿನ ನವೀಕರಣ​ : 06-09-2021 07:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080