Feedback / Suggestions

1. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.346/2021 ಕಲಂ. 87 ಕೆ.ಪಿ ಆಕ್ಟ್ :-

  ದಿನಾಂಕ: 04/082021 ರಂದು ರಾತ್ರಿ 9.45 ಗಂಟೆಗೆ ನ್ಯಾಯಾಲಯ ಕರ್ತವ್ಯದ CPC-339 ರವರು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಅನುಮತಿಯ ಪತ್ರದ ಸಾರಾಂಶವೇನೆಂದರೆ, ದಿನಾಂಕ: 04/08/2021 ರಂದು ಮದ್ಯಾಹ್ನ 3.15 ಗಂಟೆಯಲ್ಲಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ.ನಾರಾಯಣಸ್ವಾಮಿ.ಕೆ ರವರು ಠಾಣೆಯಲ್ಲಿದ್ದಾಗ, ಠಾಣಾ ಸರಹದ್ದಿಗೆ ಸೇರಿದ ತಮ್ಮೆಪಲ್ಲಿ ಗ್ರಾಮದ ಬಳಿ ಇರುವ ಕನಿಕಲಮ್ಮ ದೇವಾಲಯದ ಬಳಿ ಇರುವ ಸರ್ಕಾರಿ ಜಮೀನಿನಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಇಸ್ಪೇಟ್ ಜೂಜಾಟ ಆಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಸದರಿ ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಪಂಚರನ್ನು ಮತ್ತು ಸಿಬ್ಬಂದಿಯವರಾದ ಅಶ್ವತ್ಥ ನಾರಾಯಣಸ್ವಾಮಿ, ಎ.ಎಸ್.ಐ, ಸಿ.ಹೆಚ್.ಸಿ-57 ಸುರೇಶ್, ಸಿ.ಪಿ.ಸಿ-16  ಲೋಕೇಶ್, ಸಿ.ಪಿ.ಸಿ-544 ವೆಂಕಟರವಣ, ಸಿ.ಪಿ.ಸಿ-02 ಅರುಣ್ ರವರೊಂದಿಗೆ KA-40-G-326 ನಂಬರಿನ ಸರ್ಕಾರಿ ಜೀಪಿನಲ್ಲಿ ತಮ್ಮಪಲ್ಲಿ ಗ್ರಾಮದ ಕನಿಕಲಮ್ಮ ದೇವಾಲಯದ ಬಳಿಗೆ ಹೋಗಿ ಜೀಪನ್ನು ನಿಲ್ಲಿಸಿ ಅಲ್ಲಿಂದ ಸರ್ಕಾರಿ ಜಮೀನಿನ ಬಳಿಗೆ ಹೋಗಿ ನೋಡಲಾಗಿ ಸದರಿ ಜಮೀನಿನಲ್ಲಿ ಸುಮಾರು  ಕೆಳಗೆ 8-10 ಜನರು  ಗುಂಪು ಕಟ್ಟಿಕೊಂಡು ನೆಲದ ಮೇಲೆ ಗೋಣಿ ಚೀಲದ  ಮೇಲೆ ಇಸ್ಪೀಟ್ ಜೂಜಾಟ ಆಡುತ್ತಿದ್ದು ಸದರಿಯವರ ಮೇಲೆ ಧಾಳಿ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದು ಪೊಲೀಸರು ಸುತ್ತುವರಿದು ಹಿಡಿದು ಕೊಳ್ಳುವಷ್ಟರಲ್ಲಿ ಕಲವರು ಓಡಿ ಹೋಗಿದ್ದು ಉಳಿದವರ ಹೆಸರು ವಿಳಾಸ ಕೇಳಲಾಗಿ (1) ವೆಂಕಟೇಶ್ ಬಿನ್ ಲೇಟ್ ಸಿ.ವಿ.ಮುನಿಶಾಮಿ, 40 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ವಾಸ ಅಂಬೇಡ್ಕರ್ ಕಾಲೋನಿ, ಚಿಂತಾಮಣಿ ನಗರ, (2) ಮುನಿಕೃಷ್ಣ ಬಿನ್ ಲೇಟ್ ಮುನಿಕದಿರಪ್ಪ, 48 ವರ್ಷ, ಆದಿಕರ್ನಾಟಕ, ಕೂಲಿಕೆಲಸ, ವಾಸ: ವೆಂಕಟಗಿರಿಕೋಟೆ, ಚಿಂತಾಮಣಿ ನಗರ ಎಂತಲೂ ಓಡಿ ಹೋದವರ ಹೆಸರು ಮತ್ತು ವಿಳಾಸ ತಿಳಿಯಲಾಗಿ (3) ದೇವರೆಡ್ಡಿ ಬಿನ್ ಶ್ರೀನಿವಾಸರೆಡ್ಡಿ, 40 ವರ್ಷ, ಜಿರಾಯ್ತಿ, ಒಕ್ಕಲಿಗರು, ಬಂಡಮಿಂದಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು, (4) ಮುನಿರೆಡ್ಡಿ ಬಿನ್ ಸೀತಪ್ಪ, 50 ವರ್ಷ, ವಕ್ಕಲಿಗರು, ಜಿರಾಯ್ತಿ, ಬಂಡಮಿಂದಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು, (5) ನರಸಿಂಹಪ್ಪ ಬಿನ್ ಕೊಂಡಪ್ಪ, ನಾಯಕರು, ಜಿರಾಯ್ತಿ, ವಾಸ ತಮ್ಮೆಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು, (6) ನರಸಿಂಹಪ್ಪ ಬಿನ್ ಲೇಟ್ ಬುಡಗನ್ನಗಾರಿ ವೆಂಕಟರಾಯಪ್ಪ, 45 ವರ್ಷ, ಜಿರಾಯ್ತಿ, ತಮ್ಮೆಪಲ್ಲಿ ಚಿಂತಾಮಣಿ ತಾಲ್ಲೂಕು ಎಂದು ತಿಳಿಯಿತು. ಸ್ಥಳದಲ್ಲಿ ಪರಿಶೀಲಿಸಲಾಗಿ  52 ಇಸ್ಪೇಟ್ ಎಲೆಗಳು, ಒಂದು ಗೋಣಿ ಚೀಲ ಹಾಗೂ ಪಂದ್ಯಕ್ಕೆ ಇಟ್ಟಿದ್ದ 3250 ರೂಗಳನ್ನು ಸಂಜೆ 4.00 ರಿಂದ 5.00 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿದ್ದು ಮೇಲ್ಕಂಡಂತೆ ಕಾನೂನು ಬಾಹಿರವಾಗಿ ಜೂಜಾಟವಾಡುತ್ತಿದ್ದವರ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಯದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿದ್ದು, ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.347/2021 ಕಲಂ. 341,323,504,506,34 ಐ.ಪಿ.ಸಿ:-

  ದಿನಾಂಕ 05-08-2021 ರಂದು ಮದ್ಯಾಹ್ನ 12-00 ಗಂಟೆಗೆ ಶ್ರೀಮತಿ ಶೋಭ ಕೊಂ ಲೇಟ್ ರಾಜಣ್ಣ, 30 ವರ್ಷ, ನಾಯಕರು, ಗೃಹಿಣಿ, ವಾಸ ಟಿ.ವಡ್ಡಹಳ್ಳಿ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ಈಗ್ಗೆ ಸುಮಾರು 13 ವರ್ಷಗಳ ಹಿಂದೆ ತಮ್ಮ ಗ್ರಾಮದ ಹನುಮಂತ ರಾಯಪ್ಪರವರ ಮಗನಾದ ರಾಜಣ್ಣ ರವರೊಂದಿಗೆ ಸಾಂಪ್ರದಾಯಿಕವಾಗಿ ಮದುವೆಯಾಗಿರುತ್ತೆ. ತಮಗೆ ಮಕ್ಕಳಿರುವುದಿಲ್ಲ. ಮದುವೆಯಾದ ಸುಮಾರು 4 ವರ್ಷಗಳಲ್ಲಿ ತನ್ನ ಗಂಡ ರಾಜಣ್ಣ ಅನಾರೋಗ್ಯದ ನಿಮಿತ್ತ ಮೃತಪಟ್ಟರು. ಆಮೇಲೆ ತಾನೊಬ್ಬಳೆ ಅದೇ ಮನೆಯಲ್ಲಿ ಕೂಲಿ ಮಾಡಿಕೊಂಡು ವಾಸವಾಗಿದ್ದೆನು. ತಮ್ಮ ಮಾವನ ಅಣ್ಣನಾದ ಶ್ರೀನಿವಾಸಪ್ಪ ಬಿನ್ ಲೇಟ್ ಚಿಕ್ಕನಾರಾಯಣಪ್ಪರವರ ಹೆಸರಿನಲ್ಲಿ ಒಟ್ಟು ಆಸ್ತಿ ಇದ್ದು ಅವರೇ ಉಳುಮೆ ಮಾಡುತ್ತಿದ್ದರು. ತಾನು ಉಳುಮೆ ಮಾಡಲು ಭಾಗ ಕೇಳಿದರೂ ಕೊಡಲಿಲ್ಲ. ಆಗ ತಾನು ತವರು ಮನೆಗೆ ಹೋಗಿ ತಮ್ಮ ತಂದೆ ತಾಯಿಯ ಜೊತೆಯಲ್ಲಿ ವಾಸವಾದೆನು. ನಂತರ ಸದರಿ ಜಮೀನಿನಲ್ಲಿ ತನಗೂ ಭಾಗ ಬರಬೇಕೆಂದು ಕೋರಿ ಚಿಂತಾಮಣಿ ತಹಸೀಲ್ದಾರ್ ಕಚೇರಿಯಲ್ಲಿ ದಾವೆ ಹಾಕಿ ಕೊಂಡಿದ್ದು, ತಾಲ್ಲೂಕು ಕಚೇರಿಯಲ್ಲಿ ಸುಮಾರು 19 ಗುಂಟೆ ಜಮೀನು ತನ್ನ ಭಾಗಕ್ಕೆ ಬಂದಿದ್ದು 2020 ನೇ ಸಾಲಿನಲ್ಲಿ ತನ್ನ ಹೆಸರಿಗೆ ಪಹಣಿ ಬಂದಿರುತ್ತೆ. ಶ್ರೀನಿವಾಸಪ್ಪ ಬಿನ್ ಲೇಟ್ ಚಿಕ್ಕನಾರಾಯಣಪ್ಪ ಮತ್ತು ಆತನ ಮಗ ನಾಗೇಶ್ ಬಿನ್ ಶ್ರೀನಿವಾಸಪ್ಪ ರವರು ತನಗೆ ಬೆಳೆಯನ್ನು ಇಟ್ಟುಕೊಳ್ಳಲು ಬಿಡಲಿಲ್ಲ. ಜಮೀನಿನ ಬಳಿ ಹೋದರೆ ತನ್ನನ್ನು ಅಡ್ಡಗಟ್ಟಿ ಹೊಡೆಯಲು ಬರುತ್ತಿದ್ದರು. ದಿನಾಂಕ:-02-08-2021 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ತಾನು ಈ ಮೊದಲು ಇದ್ದ ಗಂಡನ ಮನೆಯನ್ನು ಕ್ಲೀನ್ ಮಾಡೋಣವೆಂದು ಹೋದಾಗ ಮೇಲ್ಕಂಡವರಿಬ್ಬರೂ ತನಗೆ ಮನೆಯೊಳಗೆ ಹೋಗದಂತೆ ಅಡ್ಡಗಟ್ಟಿ ತಡೆದು, ಕೈಗಳಿಂದ ಮೈಮೇಲೆ ಹೊಡೆದು ಮುಗೇಟುಪಡಿಸಿದರು. ಹಾಗೂ ಲೇ ಲೋಫರ್ ಮುಂಡೆ ಈ ಮನೆ ಮತ್ತು ಜಮೀನು ಎಲ್ಲಾ ತಮ್ಮದು ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಗಲಾಟೆ ತೆಗೆದು ಮತ್ತೊಂದು ಸಾರಿ ಮನೆ ಮತ್ತು ಜಮೀನುಗಳ ಬಳಿ ಬಂದರೆ ನಿನ್ನನ್ನು ಸಾಯಿಸದೆ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿದರು. ಅಷ್ಟರಲ್ಲಿ ತಮ್ಮ ಅಣ್ಣ ರಮೇಶ್ ಬಿನ್ ವೆಂಕಟಸ್ವಾಮಪ್ಪ, ಹಾಗೂ ತಮ್ಮ ತಂದೆ ವೆಂಕಟಸ್ವಾಮಪ್ಪ ಬಿನ್ ಲೇಟ್ ನರಸಿಂಹಪ್ಪ ಮತ್ತು ಕೃಷ್ಣಪ್ಪ ರವರು ಬಿಡಿಸಿದರು. ತನಗೆ ಮೂಗೇಟು ಗಳಾದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿರುವುದಿಲ್ಲ. ಗ್ರಾಮದಲ್ಲಿ ಹಿರಿಯರು ನ್ಯಾಯ ಪಂಚಾಯ್ತಿ ಮಾಡುವುದಾಗಿ ಹೇಳಿದ್ದು, ನ್ಯಾಯ ಮಾಡದ ಕಾರಣ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ. ತನ್ನನ್ನು ಮನೆಯೊಳಗೆ ಮತ್ತು ಜಮೀನಿನೊಳಗೆ ಹೋಗಲು ಬಿಡದೆ ಅಡ್ಡಗಟ್ಟುತ್ತಿರುವ ಹಾಗೂ ಕೈಗಳಿಂದ ಹೊಡೆದಿರುವ, ಅವಾಚ್ಯ ಶಬ್ದಗಳಿಂದ ಬೈದಿರುವ, ಪ್ರಾಣಬೆದರಿಕೆ ಹಾಕಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

 

3. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.139/2021 ಕಲಂ. 379 ಐ.ಪಿ.ಸಿ:-

  ದಿನಾಂಕ 04/08/2021 ರಂದು ಪಿರ್ಯಾದುದಾರರಾದ ಸಂತೋಷ್ ಬಿನ್ ಬಿ.ಎಂ. ರಾಮಕೃಷ್ಣರೆಡ್ಡಿ, 43 ವರ್ಷ, ವಕ್ಕಲಿಗರು, ಜಿರಾಯ್ತಿ, ಅಂಜನಿ ಬಡಾವಣೆ, ಚಿಂತಾಮಣಿ ನಗರ  ರವರು ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಚಿಂತಾಮಣಿ ನಗರದ ಶಿವಗಂಗಾ ಬೋರ್ ವೆಲ್ಸ್ ಮಾಲೀಕರಾಗಿರುತ್ತೇನೆ.  ನಾನು ಪ್ರತಿ ದಿನ ಬೋರ್ ವೆಲ್ ಲಾರಿಯನ್ನು ಚಿಂತಾಮಣಿ ನಗರದ ವಿಕ್ರಮ್ ಕಾಲೇಜು ಮುಂಭಾಗದಲ್ಲಿರುವ ಖಾಲಿ ಆವರಣದಲ್ಲಿ ನಿಲ್ಲಿಸುತ್ತಿರುತ್ತೇನೆ. ಹೀಗಿರುವಾಗ ದಿನಾಂಕ 18/07/2021 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ನಮ್ಮ ಬಾಬತ್ತು ಬೋರ್ ವೆಲ್ ಲಾರಿಯನ್ನು ವಿಕ್ರಮ್ ಕಾಲೇಜು ಮುಂಭಾಗದಲ್ಲಿರುವ ಖಾಲಿ ಆವರಣದಲ್ಲಿ ನಿಲ್ಲಿಸಿದ್ದು ನಂತರ ದಿನಾಂಕ 19/07/2021 ರಂದು ಬೆಳಿಗ್ಗೆ 6-00 ಗಂಟೆಗೆ ಹೋಗಿ ಬೋರ್ವೆಲ್ ಲಾರಿಯನ್ನು ನೋಡಲಾಗಿ ಲಾರಿಯಲ್ಲಿ ಇಟ್ಟಿದ್ದ 28 ಬೋರ್ವೆಲ್ ಬಿಟ್ ಗಳು ಇಲ್ಲದೆ ಇದ್ದು ನನಗೆ ಗಾಬರಿಯಾಗಿ ಸುತ್ತಮುತ್ತಲು ಹುಡುಕಾಡಿದರೂ ಸಹ ಬಿಟ್ ಗಳು ಪತ್ತೆಯಾಗಿರುವುದಿಲ್ಲ. ಸುಮಾರು 2,30,000/- ರೂ ಬೆಲೆ ಬಾಳುವ ಬೋರ್ ವೆಲ್ ಬಿಟ್ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದುವರೆಗೂ ನಾವು ಬಿಟ್ ಗಳನ್ನು ಹುಡುಕಾಡಿಕೊಂಡಿದ್ದು ಪತ್ತೆಯಾಗದೇ ಇದ್ದುದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿರುತ್ತೇನೆ. ಆದ್ದರಿಂದ ಕಳ್ಳತನವಾಗಿರುವ ನನ್ನ ಬಾಬತ್ತು 28 ಬೋರ್ವೆಲ್ ಬಿಟ್ ಗಳನ್ನು ಹಾಗೂ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

4. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.110/2021 ಕಲಂ. 457,380 ಐ.ಪಿ.ಸಿ:-

  ದಿನಾಂಕ 05/08/2021 ರಂದು ಬೆಳಿಗ್ಗೆ 11:00 ಗಂಟೆಯಲ್ಲಿ ಪಿರ್ಯಾದಿ ವಿನೋದ್ ಕುಮಾರ್ G A ಬಿನ್ ಲೇಟ್ ಅಶ್ವತ್ಥಪ್ಪ, 47 ವರ್ಷ, ಬಲಜಿಗ, ಸೂರ್ಯ ಕಲ್ಯಾಣ ಮಂಟಪದ ಮಾಲೀಕರು, ಟೊಬ್ಯಾಕೋ ಕಾಲೋನಿ, ಕೋರ್ಟ್ ರಸ್ತೆ, ಗೌರಿಬಿದನೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ತಂದೆ ತಾಯಿಗೆ 3 ಜನ ಮಕ್ಕಳಿದ್ದು ನಾನು ಮೊದಲನೆಯವನಾಗಿದ್ದು ಎಲ್ಲರೂ ಬೇರೆ ಮನೆಗಳಲ್ಲಿ ವಾಸವಾಗಿರುತ್ತಾರೆ. ನಮ್ಮ ತಾಯಿಯ ಮನೆಯಲ್ಲಿ ತಾಯಿ ಸುದಾ ಹಾಗೂ ದೊಡ್ಡಮ್ಮ ಜಯಮ್ಮ ರವರು ವಾಸವಾಗಿರುತ್ತಾರೆ. ನನ್ನ ತಾಯಿ ಸುದಾ ಹಾಗೂ ದೊಡ್ಡಮ್ಮ ಜಯಮ್ಮ ರವರು ನನ್ನ ತಂಗಿಯಾದ ದೀಪಾ ರವರ ಮನೆಗೆ ಹೋಗಿರುತ್ತಾರೆ. ದಿನಾಂಕ 01/08/2021 ರಂದು ನಮ್ಮ ದೊಡ್ಡಮ್ಮನ ಮಗಳಾದ ಅನುರಾಧ ರವರು ಮನೆಗೆ ಬಂದು ಉಳಿದುಕೊಂಡಿರುತ್ತಾರೆ. ದಿನಾಂಕ 04/08/2021 ರಂದು ರಾತ್ರಿ 7:30 ಗಂಟೆಯಲ್ಲಿ ಅನುರಾಧ ರವರು ಊಟ ಮಾಡಲು ನಮ್ಮ ಮನೆಗೆ ಬಂದಿದ್ದು ರಾತ್ರಿ ನಮ್ಮ ಮನೆಯಲ್ಲೆ ಉಳಿದುಕೊಂಡಿರುತ್ತಾರೆ. ನಂತರ ದಿನಾಂಕ 05/08/2021 ರಂದು ಬೆಳಿಗ್ಗೆ 7:30 ಗಂಟೆಯಲ್ಲಿ ನಾನು ನಮ್ಮ ತಾಯಿಯ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು ಮನೆಯ ಒಳಗೆ ಬೀರುವಿನ ಬಾಗಿಲುಗಳು ತೆರೆದಿದ್ದು ಬೀರುವಿನಲ್ಲಿದ್ದ ಸುಮಾರು 50 ವರ್ಷ ಹಿಂದಿನ ಒಡವೆಗಳಾದ 1) ಬಂಗಾರದ ವಂಕಿ ಉಂಗುರ 8 ಗ್ರಾಂ, 2) ಎರಡೆಳೆ ಬಂಗಾರದ ಚೈನು 50 ಗ್ರಾಂ, 3) ಬಂಗಾರದ ಬ್ರಾಸ್ ಲೈಟ್ 35 ಗ್ರಾಂ, 4) 4 ಜೊತೆ ಬಂಗಾರದ ಓಲೆ 128 ಗ್ರಾಂ, 5) ಬೆಳ್ಳಿಯ ತಟ್ಟೆ ¾ ಕೆ.ಜಿ, 6) ತಟ್ಟೆ ಬೆಳ್ಳಿ ¼ ಕೆ.ಜಿ, 7) ಅಷ್ಟಲಕ್ಷ್ಮೀ ಚೆಂಬು 300 ಗ್ರಾಂ, 8) ಅರಿಶಿಣ ಕುಂಕುಮ ತಟ್ಟೆ 300 ಗ್ರಾಂ, 9) ಒಂದು ದೊಡ್ಡ ಬಟ್ಟಲು 300 ಗ್ರಾಂ, 10) 6 ಬೆಳ್ಳಿಯ ಲೋಟಗಳು 200 ಗ್ರಾಂ, 11) 2 ಗಂಧದ ಬಟ್ಟಲು 150 ಗ್ರಾಂ, 12) ಕುಂಕುಮದ ಬಟ್ಟಲು 60 ಗ್ರಾಂ, 13) ಪಂಚಪಾತ್ರೆ ಉದ್ದರಣೆ 100 ಗ್ರಾಂ, 14) ಬೆಳ್ಳಿಯ ಅನ್ನಪೂರ್ಣೆಶ್ವರಿ, ರಾಮಾಸೀತೆ, ಲಕ್ಷ್ಮಣ, ಆಂಜನೇಯ ವಿಗ್ರಹಗಳು 100 ಗ್ರಾಂ, 15) ಒಂದು ಬೆಳ್ಳಿಯ ಸೇರು 30 ಗ್ರಾಂ, 16) ಬೆಳ್ಳಿಯ ಕಳಸದ ಚೆಂಬು 150 ಗ್ರಾಂ, 17) ಸಣ್ಣ ಬೆಳ್ಳಿಯ ಪ್ಲೇಟ್ 25 ಗ್ರಾಂ, 18) Sansui ಒಂದು TV ಬೆಲೆ 18000, 19) ನಗದು ಹಣ 15,000, 20) 20 ರೇಷ್ಮೇ ಸೀರೆಗಳು. ಈ ಮೇಲಿನ ಎಲ್ಲಾ ವಸ್ತುಗಳ ಒಟ್ಟು ಬೆಲೆ ಸುಮಾರು 1,05,600 ರೂಪಾಯಿಗಳಾಗಿರುತ್ತದೆ. ಆದ್ದರಿಂದ ಕಳುವು ಮಾಡಿಕೊಂಡು ಹೋಗಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೇನೆ.

 

5. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.82/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:05-08-2021 ರಂದು ಬೆಳಗ್ಗೆ 11-25 ಗಂಟೆಗೆ ಸಾಹೇಬರು ದಾಳಿಯಿಂದ ಠಾಣೆಗೆ ಆರೋಫಿ ಅಮಾನತ್ತು ಪಡಿಸಿದ್ದ ಮಾಲು ಹಾಗೂ ಪಂಚನಾಮೆಯೊಂದಿಗೆ  ಹಾಜರಾಗಿ ನೀಡಿದ  ವರದಿಯ ಸಾರಾಂಶವೇನೆಂದರೆ ದಿನಾಂಕ:05/08/2021 ರಂದು ಬೆಳಗ್ಗೆ 10-00 ಗಂಟೆಯ ಸಮಯದಲ್ಲಿ ನಾನು ಸರ್ಕಾರಿ ಪೊಲೀಸ್ ಜೀಪ್ KA-40-G-1555 ರಲ್ಲಿ ಸಿಬ್ಬಂದಿಯಾದ ಪಿಸಿ-06 ರಾಮಕೃಷ್ಣ ಮತ್ತು ಹೆಚ್.ಸಿ-230 ಕೆ.ಪಿ ನಾಗರಾಜ ರವರೊಂದಿಗೆ ನಂದಿ ಕ್ರಾಸಿನ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಂದ ಖಚಿತ ವರ್ತಮಾನದಂತೆ ಬೀಡಗಾನಹಳ್ಳಿ ಗ್ರಾಮದ ಜಯರಾಮನು ಅಕ್ರಮವಾಗಿ ಗಿರಾಕಿಗಳಿಗೆ ಸ್ಥಳದಲ್ಲೇ ಮದ್ಯವನ್ನು ಸೇವಿಸಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯನ್ನು ಅನುಸರಿಸಿ ಸದರಿ ಅಂಗಡಿಯ ಮೇಲೆ ಧಾಳಿ ಮಾಡಿ ಕ್ರಮ ಜರುಗಿಸಲು ನಂದಿ ಕ್ರಾಸಿನ  ಬಳಿ ಪಂಚರನ್ನು ಬರಮಾಡಿಕೊಂಡು ಅವರ ಸಮಕ್ಷಮ  ಬೆಳಗ್ಗೆ 10-20 ಗಂಟೆಗೆ ಬೀಡಗಾನಹಳ್ಳಿ ಗ್ರಾಮದಲ್ಲಿನ ಜಯರಾಮನ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಸ್ಥಳದಿಂದ ಓಡಿ  ಪರಾರಿಯಾಗಿ ಹೋದರು. ಇವನ ಅಂಗಡಿಯ ಬಳಿ ಖಾಲಿ ಮದ್ಯದ ಟೆಟ್ರಾ ಪ್ಯಾಕೇಟುಗಳು ಹಾಗೂ ಖಾಲಿ ಲೋಟಗಳು ಇದ್ದವು, ಮದ್ಯವನ್ನು ಪೂರೈಸುತ್ತಿದ್ದವನ ಹೆಸರು ವಿಳಾಸವನ್ನು ಕೇಳಲಾಗಿ ಜಯರಾಮ ಬಿನ್ ಲೇಟ್ ಆಂಜೀನಪ್ಪ 54 ವರ್ಷ ವಕ್ಕಲಿಗರು ಚಿಲ್ಲರೆ ಅಂಗಡಿ ವ್ಯಾಪಾರ ಬೀಡಗಾನಹಳ್ಳಿ ಗ್ರಾಮ ಎಂದು ತಿಳಿಸಿದನು. ಅಂಗಡಿಯ ಮುಂಬಾಗದ ಜಗಲಿ ಕಲ್ಲಿನ ಕೆಳಗೆ  ಒಂದು ಕಪ್ಪು ಪ್ಲಾಸ್ಟಿಕ್ ಕವರ್ ಇದ್ದು  ಕವರಿನಲ್ಲಿ ಮದ್ಯದ ಟೆಟ್ರಾ ಪ್ಯಾಕೇಟುಗಳು ಇರುವುದು ಕಂಡುಬಂದಿರುತ್ತದೆ, ಕವರಿನಲ್ಲಿ 1) 90 ML ಸಾಮರ್ಥದ HAYWARDS CHEERS  WHISKY  ಹೆಸರಿನ 12 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ ಬೆಲೆ 35.13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-1080 ML ಮದ್ಯವಿದ್ದು ಒಟ್ಟು ಬೆಲೆ 421 ರೂ ಆಗುತ್ತದೆ.2) 90 ಎಂ ಎಲ್ ಸಾಮರ್ಥ್ಯದ HAYWARDS CHEERS  WHISKY  ಖಾಲಿ 5 ಟೆಟ್ರಾ ಪ್ಯಾಕೇಟುಗಳು ಇರುತ್ತವೆ, 3) 5 ಖಾಲಿ ಲೋಟಗಳು ಸಿಕ್ಕಿದ್ದು ಸಾಹೇಬರು ಜಯರಾಮನನ್ನು ಗಿರಾಕಿಗಳಿಗೆ, ಮದ್ಯವನ್ನು ಪೂರೈಸಲು ನಿನ್ನಬಳಿ ಪರವಾನಿಗೆ, ಇದೆಯೇ? ಇದ್ದರೆ ಹಾಜರುಪಡಿಸಲು ಕೋರಿದಾಗ ಸದರಿ ಜಯರಾಮನು ತನ್ನ ಬಳಿ ಯಾವುದೂ ಪರವಾನಗಿ ಇಲ್ಲವೆಂದು ಹೇಳಿದನು. ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ 1)ಮದ್ಯವಿದ್ದ HAYWARDS CHEERS WHISKY ಯ 12 ಟೆಟ್ರಾ ಪಾಕೇಟುಗಳನ್ನು2) 5 ಖಾಲೀ ಟೆಟ್ರಾ ಪಾಕೇಟುಗಳನ್ನು3) 5 ಪ್ಲಾಸ್ಟಿಕ್ ಲೋಟಾಗಳನ್ನು ಮುಂದಿನ ಕ್ರಮಕ್ಕಾಗಿ  ಅಮಾನತ್ತು ಪಡಿಸಿಕೊಂಡು. ಠಾಣೆಗೆ  ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಪಿಯ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

6. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.78/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:04-08-2021 ರಂದು PSI ರವರು ಮಾಲು, ಆರೋಪಿ, ಪಂಚನಾಮೆಯೊಂದಿಗೆ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:04-08-2021 ರಂದು ಬೆಳಿಗ್ಗೆ ತಾನು ಸಿಬ್ಬಂದಿಯವರಾದ ಸಿಪಿಸಿ-119 ಗಿರೀಶ.ಕೆ., ಹಾಗೂ ಚಾಲಕ ಎ.ಪಿ.ಸಿ-98 ಶ್ರೀನಾಥ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ KA-40-G-59 ರಲ್ಲಿ ಸೋಮನಾಥಪುರ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಸೋಮನಾಥಪುರ ಗ್ರಾಮದ ಬೀಷ್ಮಪ್ಪ ಬಿನ್ ಲೇಟ್ ವೆಂಕಟರವಣಪ್ಪ ಎಂಬುವವರು ತಮ್ಮ ಹೋಟೆಲ್ ನಲ್ಲಿ ಸಾರ್ವಜ ನಿಕರಿಗೆ ಮಧ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾರರನ್ನು ಬರಮಾಡಿ ಕೊಂಡು ಮೇಲ್ಕಂಡ ಸಿಬ್ಬಂದಿ ಹಾಗೂ ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೇಲ್ಕಂಡ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ನಂತರ ತಾವುಗಳು ಅಲ್ಲಿಗೆ ಹೋಗಿ ಜೀಪನ್ನು ನಿಲ್ಲಿಸುತ್ತಿದ್ದಂತೆ ಜೀಪನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಅಲ್ಲಿಂದ ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ ಬೀಷ್ಮಪ್ಪ ಬಿನ್ ಲೇಟ್ ವೆಂಕಟ ರವಣಪ್ಪ, 56 ವರ್ಷ, ಬೆಸ್ತರು, ವ್ಯಾಪಾರ, ಸೋಮನಾಥಪುರ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90ML ನ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ 10 ಟೆಟ್ರಾ ಪ್ಯಾಕೆಟ್ಗಳು ಇದ್ದು, (900 ML ಅದರ ಬೆಲೆ 350/-ರೂಗಳು), ಒಂದು ಲೀಟರ್ ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90 ML ನ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ ಒಂದು ಖಾಲಿ ಟೆಟ್ರಾ ಪ್ಯಾಕೆಟ್ ಇದ್ದು, ಆರೋಪಿಯನ್ನು ವಶಕ್ಕೆ ಪಡೆದು ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಬೆಳಿಗ್ಗೆ 11-00 ಗಂಟೆಯಿಂದ 11-45 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ, ಆರೋಪಿ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.257/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ04-08-2021 ರಂದು ರಾತ್ರಿ 8-00 ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಮದ್ಯದ ಮಾಲುಗಳನ್ನು ಮತ್ತು ಆರೋಪಿಯನ್ನು  ಠಾಣೆಯಲ್ಲಿ  ಹಾಜರುಪಡಿಸಿ ವರದಿಯ ಸಾರಾಂಶವೇನೆಂದರೆ, ದಿನಾಂಕ:04-08-2021  ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಹನುಮಂತಪುರ, ಚೀಮನಹಳ್ಳಿ, ವರದನಾಯಕನಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು  ರಾತ್ರಿ 7-30  ಗಂಟೆ ಸಮಯದಲ್ಲಿ ಅಬ್ಲೂಡು ಗ್ರಾಮದ ಕಡೆ ಹೋಗಲು ಗುಡಿಹಳ್ಳಿ  ಗೇಟ್ ನಲ್ಲಿದ್ದಾಗ ಬಾತ್ಮಿದಾರರಿಂದ ಅಬ್ಲೂಡು ಗ್ರಾಮದ ಪಶು ಚಿಕಿತ್ಸಾಲಯದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಅಬ್ಲುಡು ಗ್ರಾಮದ ಪಶು ಚಿಕಿತ್ಸಾಲಯ ಮುಂಭಾಗ ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ತಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ಆತನನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ  ನಾರಾಯಣಪ್ಪ ಬಿನ್ ಲೇಟ್ ಚಿಕ್ಕಮುನಿಯಪ್ಪ, ಸುಮಾರು 49 ವರ್ಷ, ನಾಯಕರು, ಜಿರಾಯ್ತಿ, ವಾಸ:ತಾತಹಳ್ಳಿ ಗ್ರಾಮ, ಶಿಡ್ಲಘಟ್ಟ  ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 180 ಎಂ.ಎಲ್. ಸಾಮರ್ಥ್ಯದ 8  OLD TAVERN WHISKY  ಟೆಟ್ರಾ ಪ್ಯಾಕೆಟ್ ಗಳಿದ್ದು, ಸ್ಥಳದಲ್ಲಿ  ಬಿದ್ದಿದ್ದ 2 ಖಾಲಿ ಪ್ಲಾಸ್ಟಿಕ್ ಲೋಟಗಳು , 4 ಖಾಲಿ ವಾಟರ್ ಪಾಕೇಟ್ ಗಳು ಮತ್ತು 180 ಎಂ.ಎಲ್. ಸಾಮರ್ಥ್ಯದ 2 ಖಾಲಿ OLD TAVERN WHISKY  ಟೆಟ್ರಾ ಪ್ಯಾಕೆಟ್  ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ರಾತ್ರಿ 8-00 ಗಂಟೆಯಲ್ಲಿ ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿರುತ್ತೇನೆ. ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ಎಂ.ಪವನ್ ಬಿನ್ ಲೇಟ್ ಮುನಿರಾಜು ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ  ವರದಿಯ ಮೇರೆಗೆ ಠಾಣಾ ಮೊ.ಸಂ. 257/2021   ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

Last Updated: 05-08-2021 06:39 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080