ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 175/2021 ಕಲಂ. 325,504,506,34 ಐ.ಪಿ.ಸಿ:-

     ದಿನಾಂಕ: 05/07/2021 ರಂದು ಬೆಳಿಗ್ಗೆ 11-15 ಗಂಟೆಗೆ ಪಿರ್ಯಾದಿದಾರರಾದ ಕೃಷ್ಣೇನಾಯ್ಕ ಬಿನ್ ನರಸೇನಾಯ್ಕ, 30 ವರ್ಷ, ಲಂಬಾಣಿ ಜನಾಂಗ, ಜಿರಾಯ್ತಿ, ವಾಸ: ಮರವಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಮ್ಮ  ತಂದೆ ಹೆಸರಿನಲ್ಲಿ ಮರವಪಲ್ಲಿ ಗ್ರಾಮದಲ್ಲಿ ಜಮೀನು ಇದ್ದು, ಸದರಿ ಜಮೀನನ್ನು ನಾನು ಸುಮಾರು ವರ್ಷಗಳಿಂದ ಉಳುಮೆ ಮಾಡಿತ್ತಿರುತ್ತೇನೆ. ನಮ್ಮ ತಂದೆ ನನಗೆ ನೀಡಿರುವ ಜಮೀನನ್ನು ಸುಮಾರು 10 ವರ್ಷ ಗಳಿಂದ ಉಳುಮೆ ಮಾಡಿಕೊಂಡಿರುತ್ತೇನೆ. ದಿನಾಂಕ: 30/06/2021 ರಂದು ನಾವು ಉಳುಮೆ ಮಾಡಿ ಬಿತ್ತನೆ ಮಾಡಿರುವ ಜಮೀನಿನಲ್ಲಿ ಸದರಿ ಗ್ರಾಮದ ವಾಸಿಗಳಾದ ಪ್ರಸಾದ್ ನಾಯ್ಕ ಬಿನ್ ನರಸೇನಾಯ್ಕ, ಮತ್ತು ಗಿರಿಜಮ್ಮ ಕೊಂ ಪ್ರಸಾದ್ ನಾಯ್ಕ, ರವರು ಇಬ್ಬರು ಸೇರಿ ನೀನು ಈ ಜಮೀನನ್ನು ಉಳುಮೆ ಮಾಡಬಾರದು ಮತ್ತು ಬಿತ್ತನೆ ಮಾಡಬಾರದುಎಂದು ಜಗಳ ಮಾಡಿರುತ್ತಾರೆ. ಅದೇ ದಿನ ರಾತ್ರಿ 8-9 ಗಂಟೆ ಸಮಯದಲ್ಲಿ ದೌರ್ಜನ್ಯದಿಂದ ಬಂದು ನನ್ನ ಎಡಗೈಯನ್ನು ಮುರಿದು ಹಾಕಿರುತ್ತಾರೆ. ಇವರು ಬಹಳ ದೌರ್ಜನ್ಯ ವ್ಯಕ್ತಿಗಳಾಗಿದ್ದು  ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಹೊಡೆದು ಸಾಯಿಸಲು ಮುಂದಾಗಿದ್ದಾರೆ. ಇದುವರೆಗೂ 3-4 ಬಾರಿ ದೌರ್ಜನ್ಯದಿಂದ ನಮ್ಮನ್ನು ಹೊಡೆದಿರುತ್ತಾರೆ. ಅವರು ನನ್ನನ್ನು ಸಾಯಿಸಲು 50 ಲಕ್ಷ ಖರ್ಚು ಆದರು ಪರವಾಗಿಲ್ಲ ನಿನ್ನನ್ನು ಸಾಯಿಸದೇ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಾನು ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ವಾಸಿಯಾಗದ ಕಾರಣ ಜಿಲ್ಲಾ ಆಸ್ಪತ್ರೆ ಚಿಕ್ಕಬಳ್ಳಾಪುರದಲ್ಲಿ ದಾಖಲಾಗಿರುತ್ತೇನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ನೀಡಿದ ದೂರು ನೀಡುತ್ತಿದ್ದು. ನನ್ನ ಮೇಲೆ ಜಗಳ ತೆಗೆದು ಕೈ ಮುರಿದು ಪ್ರಾಣ ಬೆದರಿಕೆಯನ್ನು ಹಾಕಿರುವ ಮೇಲ್ಕಂಡವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 175/2021 ಕಲಂ. 279,337,304(A) ಐ.ಪಿ.ಸಿ & 134 INDIAN MOTOR VEHICLES ACT:-

     ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನಮ್ಮ ತಂದೆ ಜಯಚಂದ್ರಪ್ಪ ಹೆಚ್.ಸಿ ಬಿನ್ ಚಿಕ್ಕ ಸುಬ್ಬಣ್ಣ 65 ವರ್ಷ, ನಿವೃತ್ತಿ ಜೀವನ ಹಾರೋಬಂಡೆ ಗ್ರಾಮ, ಕಸಭಾ ಹೋಬಳಿ, ಚಿಕ್ಕಬಳ್ಲಾಪುರ ತಾಲ್ಲೂಕು ಮತ್ತು ಜಿಲ್ಲೆ ಹಾಗೂ ನಮ್ಮ ತಾಯಿ ಶ್ರೀಮತಿ ಆಂಜೀನಮ್ಮ 60 ವರ್ಷ ರವರು ಕೆಲಸದ ನಿಮಿತ್ತ ಹಾರೋಬಂಡೆ ಗ್ರಾಮದಿಂದ ಚಿಕ್ಕಬಳ್ಳಾಪುರಕ್ಕೆ ಹೋಗಲು ದಿನಾಂಕ:-05/07/2021 ರಂದು ಏಂ-03-ಎಘ-3589 ರ ಹೊಂಡಾ ಆಕ್ಟೀವಾ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಮಧ್ಯಾಹ್ನ ಸುಮಾರು 3-00 ಗಂಟೆಯ ಸಮಯದಲ್ಲಿ ಹೈದರಾಬಾದ್ - ಬೆಂಗಳೂರು ಎನ್.ಹೆಚ್-44 ಬೈಪಾಸ್ ರಸ್ತೆಯ ಹೊನ್ನೇನಹಳ್ಳಿ ಗೇಟ್ ಬಳಿ ಇರುವ ಸಿ.ಎಸ್.ಎನ್ ಹೆಚ್.ಪಿ ಪೆಟ್ರೋಲ್ ಬಂಕ್ ಮುಂಭಾಗದ ಠಾರ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಹಿಂದಿನಿಂದ ಬಾಗೇಪಲ್ಲಿ ಕಡೆಯಿಂದ ಬಂದ ಏಂ-40-ಂ-2976 ರ ಟಿಪ್ಪರ್ ಲಾರಿ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ತಂದೆ ರವರು ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ದ್ವಿಚಕ್ರವಾಹನ ಸಮೇತ ಠಾರ್ ರಸ್ತೆಯಲ್ಲಿ ಬಿದ್ದಾಗ ನಮ್ಮ ತಂದೆ ರವರ ಹೊಟ್ಟೆಯ ಮೇಲೆ ಟಿಪ್ಪರ್ ಲಾರಿಯ ಚಕ್ರ ಹರಿದು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಹಾಗೂ ದ್ವಿಚಕ್ರವಾಹನದ ಹಿಂದೆ ಕುಳಿತಿದ್ದ ನಮ್ಮ ತಾಯಿ ರವರಿಗೆ ಮುಖಕ್ಕೆ, ಬಲ ಕೈಗೆ, ಸೊಂಟಕ್ಕೆ ಹಾಗೂ ಎಡ ಕಾಲಿಗೆ ಗಾಯಗಳಾಗಿ ಅಲ್ಲಿನ ಸ್ಥಳೀಯರ ಸಹಾಯದಿಂದ ಗಾಯಾಳುವನ್ನು ಉಪಚರಿಸಿ ಚಿಕಿತ್ಸೆಗಾಗಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಕಳುಹಿಸಿ ನಂತರ ಸ್ಥಳದಲ್ಲಿಯೇ ಮೃತ ಪಟ್ಟಿದ್ದ ನಮ್ಮ ತಂದೆಯ ದೇಹವನ್ನು ಚಿಕ್ಕಬಳ್ಳಾಪುರ ಶವಾಗಾರದಲ್ಲಿ ಇರಿಸಿರುವುದಾಗಿ ನಮ್ಮ ಗ್ರಾಮದ ಮಹೇಶ್ ಬಿನ್ ಬಿ ರೆಡ್ಡೆಪ್ಪ 39 ವರ್ಷ, ರವರು ನನಗೆ ಮೊಬೈಲ್ ಕರೆಮಾಡಿ ತಿಳಿಸಿದ್ದು ನಾನು ಚಿಕ್ಕಬಳ್ಳಾಪುರ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ಸದರಿ ಅಪಘಾತ ಪಡಿಸಿದ ಟಿಪ್ಪರ್ ಲಾರಿ ಚಾಲಕನ ಬಗ್ಗೆ ವಿಚಾರಿಸಲಾಗಿ ಸದರಿ ಚಾಲಕ ವಾಹನವನ್ನು ಸ್ಥಳದಲ್ಲಿಯೇ ನಿಲ್ಲಿಸಿ ಹೊರಟು ಹೋಗಿರುವುದಾಗಿ ತಿಳಿಸಿದ್ದು ಸದರಿ ನಮ್ಮ ತಂದೆಯ ಸಾವಿಗೆ ಕಾರಣನಾದ ಏಂ-40-ಂ-2976 ರ ಟಿಪ್ಪರ್ ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ.

 

3. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ. 94/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ:05/07/2021 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರಿಮತಿ ಲಾವಣ್ಯ ಕೊಂ  ವಿಶ್ವನಾಥ, 35 ವರ್ಷ, ವಕ್ಕಲಿಗರು, ಮನೆ ಕೆಲಸ, ವಾಸ: ತಾಜ್ ಸಪ್ಲೇಯರ್ಸ್ ಹಿಂಭಾಗ, ಸದಾಶಿವ ಬಡಾವಣೆ, ಗೌರಿಬಿದನೂರು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ  ತಾನು ಮೆಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ತನ್ನ ತಂದೆ ತಾಯಿಗೆ ಇಬ್ಬರು ಮಕ್ಕಳಿದ್ದು ತಾನು ದೊಡ್ಡವಳು ಆಗಿದ್ದು. ತಾನು 10 ನೇ ತರಗತಿಯ ವರೆಗೆ ಓದಿಕೊಂಡಿರುತ್ತೇನೆ. ತನ್ನ ತಂದೆಯವರು ಗೌರಿಬಿದನೂರು ತಾಲ್ಲೂಕಿನ ಬಿ.ಬೊಮ್ಮಸಂದ್ರ ಗ್ರಾಮದ ವಾಸಿಯಾದ ಎನ್. ವಿಶ್ವನಾಥ ಬಿನ್ ನಾರಾಯಣರೆಡ್ಡಿ, ಶಿಕ್ಷಕ ವೃತ್ತಿ, ವಕ್ಕಲಿಗರು, ರವರೊಂದಿಗೆ ಸುಮಾರು 16 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿರುತ್ತಾರೆ. ತಮ್ಮ ಸಂಸಾರದಲ್ಲಿ ತಮಗೆ ನಿತ್ಯಶ್ರೀ 15 ವರ್ಷ, ಮತ್ತು ನಿರ್ಮಲ್ 10 ವರ್ಷ ಎಂಬ ಇಬ್ಬರು ಮಕ್ಕಳಿರುತ್ತಾರೆ. ನಾವು ಇಬ್ಬರು ಸಂಸಾರದಲ್ಲಿ ಅನ್ಯೂನ್ಯವಾಗಿರುತ್ತೆವೆ. ತನ್ನ ಗಂಡ ಮಂಚೇನಹಳ್ಳಿ ಹೋಬಳಿಯ ಭೂಮೇನಹಳ್ಳಿಯಲ್ಲಿರುವ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸರ್ಕಾರಿ ಶಿಕ್ಷಕರಾಗಿ ಕೆಲಸವನ್ನು ನಿರ್ವಹಿಸುತ್ತೀರುತ್ತಾರೆ. ನಾವುಗಳು 02 ವರ್ಷಗಳಿಂದ ಗೌರಿಬಿದನೂರು ನಗರದ ಸದಾಶಿವ ಬಡಾವಣೆಯಲ್ಲಿ ವಾಸವಾಗಿರುತ್ತೆವೆ.       ದಿನಾಂಕ:04/07/2021 ರಂದು ಬೆಳಿಗ್ಗೆ ನಾವುಗಳು ತಮ್ಮ ಗ್ರಾಮವಾದ ಬಿ.ಬೊಮ್ಮಸಂದ್ರ ಗ್ರಾಮಕ್ಕೆ ಹೋಗಿ ಮತ್ತೆ ಸಂಜೆ 6-00 ಗಂಟೆ ಸಮಯದಲ್ಲಿ ತಮ್ಮ ಮನೆಗೆ ವಾಪಸ್ಸು ಬಂದಿರುತ್ತೇವೆ. ರಾತ್ರಿ 8-00 ಗಂಟೆ ಸಮಯದಲ್ಲಿ ನಾವುಗಳು ಊಟ ಮಾಡಿದೆವು. ನಂತರ ತನ್ನ ಗಂಡ ವಿಶ್ವನಾಥ ರವರು ರಸ್ತೆಯಲ್ಲಿ ದ್ವಿ ಚಕ್ರ ವಾಹನವನ್ನು ನಿಲ್ಲಿಸಿದ್ದು ಅದನ್ನು ತರುತ್ತೇನೆಂದು ಹೇಳಿ ಮನೆಯಿಂದ ಹೊರಗೆ ಹೋದರು ತನಗೆ ಸ್ವಲ್ಪ ನಿದ್ದೆ ಬಂದಿದ್ದರಿಂದ ತಾನು ಮಲಗಿದ್ದು, ನಂತರ ರಾತ್ರಿ ಸುಮಾರು 11-30 ಗಂಟೆ ಸಮಯದಲ್ಲಿ ಎಚ್ಚರವಾಗಿ ತನ್ನ ಗಂಡನನ್ನು ನೋಡಿದಾಗ ತನ್ನ ಗಂಡ ಕಾಣಲಿಲ್ಲ ತಾನು ತಮ್ಮ ಮನೆಯಲ್ಲಿ ಎಲ್ಲಾ ಕಡೆ ಹುಡುಕಾಡಿದೆ ಎಲ್ಲಿಯೂ ಕಾಣಲಿಲ್ಲ, ತನ್ನ ಪೊನ್ ನಂಬರ್ 9902863659,9482397915 ಗೆ ಪೊನ್ ಮಾಡಿದರೆ ಸ್ವೀಚ್ ಆಫ್ ಬರುತ್ತೀರುತ್ತೆ. ಮತ್ತೆ ತಮ್ಮ ಸಂಬಂದಿಕರ ಮನೆಗಳಲ್ಲಿ ಪೊನ್ ಮಾಡಿ ವಿಚಾರಿಸಿದಾಗ ತನ್ನ ಗಂಡ ವಿಶ್ವನಾಥ ರವರು ಬಂದಿರುವುದಿಲ್ಲ ಎಂದು ತಿಳಿಸಿತ್ತಾರೆ. ಈ ವಿಚಾರವನ್ನು ತನ್ನ ಅತ್ತೆ ಮಾವ ರವರಿಗೆ ತಿಳಿಸಿರುತ್ತೇನೆ. ಆದ್ದರಿಂದ ತನ್ನ ಗಂಡ ವಿಶ್ವನಾಥ ರವರನ್ನು ಪತ್ತೆ ಮಾಡಿಕೊಡಲು ಕೋರುತ್ತೇನೆ. ತಾನು ಎಲ್ಲಾ ಹುಡುಕಾಡಿದ್ದರಿಂದ ದೂರು ನೀಡಲು ತಡವಾಗಿರುತ್ತೆ. ತನ್ನ ಗಂಡನ ಚಹರೆ ಗುರುತುಗಳು 1) ಎತ್ತರ-172 ಸೆ.ಮೀ, 2) ಕೋಲು ಮುಖ, 3) ಗೊದಿ ಮೈಬಣ್ಣ, 4) ದೃಢಕಯ ಶರೀರ ಎಡ ಕೈ ಮೇಲೆ ಮಚ್ಚೆ ಇರುತ್ತೆ. ಮನೆಯಿಂದ ಹೊರಗೆ ಹೋಗುವಾಗ 1) ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, 2) ಹಳದಿ ಬಣ್ಣದ ಅರ್ಧ ತೋಳಿನ ಶರ್ಟ್ 3) ಕೆಂಪು ಬಣ್ಣದ ಬನಿಯಾನ್, ಧರಿಸಿರುತ್ತಾರೆ.  ನನ್ನ ಗಂಡನನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಾಗಿದೆ.

 

4. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 220/2021 ಕಲಂ. 379 ಐ.ಪಿ.ಸಿ:-

     ದಿನಾಂಕ:05-07-2021 ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದಿದಾರರಾದ ಅಭಿಷೇಕ್.ಕೆ.ಎನ್ ಬಿನ್ ನಾರಾಯಣಸ್ವಾಮಿ,ಸುಮಾರು 26 ವರ್ಷ, ಪ.ಜಾತಿ(ಎ.ಕೆ). ಗ್ರಂಥಪಾಲಕ,ಕಂಬದಹಳ್ಳಿ ಗ್ರಾಮ,ಶಿಡ್ಲಘಟ್ಟ ತಾಲ್ಲೂಕು ತಾನು ಮೇಲೂರು ಗ್ರಾಮದ  ಗ್ರಂಥಾಲಯದಲ್ಲಿ  ಗ್ರಂಥಪಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ ತಾನು 2016 ನೇ ಸಾಲಿನಲ್ಲಿ ನಂ : KA-40 EA-1804 BAJAJ PLUSAR-150 ದ್ವಿಚಕ್ರವಾಹನವನ್ನು ಖರೀದಿಗೆ ತೆಗೆದುಕೊಂಡಿರುತ್ತೇನೆ ಸದರಿ ದ್ವಿಚಕ್ರವಾಹನದ ದಾಖಲಾತಿಗಳು ತನ್ನ ಹೆಸರಿನಲ್ಲಿಯೇ ಇರುತ್ತೆ, ತಾನು ತನ್ನ ಬಾಬತ್ತು ದ್ವಿಚಕ್ರವಾಹನದಲ್ಲಿಯೇ ನಮ್ಮ ಗ್ರಾಮದಿಂದ ಕೆಲಸಕ್ಕೆ ಬಂದು ಹೋಗುತ್ತಿರುತ್ತೇನೆ, ಈಗಿರುವಲ್ಲಿ ದಿನಾಂಕ:03-07-2021 ರಂದು  ಬೆಳಿಗ್ಗೆ 10-00 ಗಂಟೆಯಲ್ಲಿ  ತಾನು ತನ್ನ ಬಾಬತ್ತು ದ್ವಿಚಕ್ರವಾಹನದಲ್ಲಿ ಮೇಲೂರು ಗ್ರಾಮಕ್ಕೆ ಬಂದು ಮೇಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಿಲ್ಲಿಸಿ ನಂತರ ಕೆಲಸದ ನಿಮಿತ್ತ ಬಸ್ಸಿನಲ್ಲಿ  ಬೆಂಗಳೂರು ಹೋಗಿದ್ದು ಕೆಲವು ವೈಯಕ್ತಿಕ ಕಾರಣಗಳಿಂದ ಸದರಿ ದಿನದಂದು ವಾಪಸ್ಸು ಬರಲು ಸಾಧ್ಯವಾಗದ ಕಾರಣ ದಿನಾಂಕ:04-07-2021 ರಂದು ಮದ್ಯಾಹ್ನ 12-30 ಗಂಟೆಯಲ್ಲಿ ವಾಪಸ್ಸು ಮೇಲೂರು ಗ್ರಾಮಕ್ಕೆ ಬಂದು ತನ್ನ ಬಾಬತ್ತು ದ್ವಿಕಚಕ್ರವಾಹನವನ್ನು ನಿಲ್ಲಿಸಿದ್ದ ಸ್ಥಳವಾದ ಮೇಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣಕ್ಕೆ ಹೋಗಿ ನೋಡಲಾಗಿ ಸದರಿ ಸ್ಥಳದಲ್ಲಿ ದ್ವಿಚಕ್ರವಾಹನ ಕಾಣಿಸಲಿಲ್ಲ,  ನಂತರ ತಾನು ತಮ್ಮ ಮನೆಯಲ್ಲಿ ತನ್ನ  ಸ್ನೇಹಿತರು, ಸಂಬಂದಿಕರ ಬಳಿ ವಿಚಾರ ಮಾಡಲಾಗಿ ಅವರು ತೆಗೆದುಕೊಂಡು ಹೋಗಿರುವುದಿಲ್ಲವೆಂದು ತಿಳಿಸಿರುತ್ತಾರೆ ನಂತರ ತಾನು ಮೇಲೂರು ಗ್ರಾಮದ ಸುತ್ತಮುತ್ತ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ, ತನ್ನ ಬಾಬತ್ತು ಸುಮಾರು 40000/- ರೂ ಬೆಲೆ ಬಾಳುವ KA-40 EA-1804 BAJAJ PLUSAR-150 ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತಾನು ತನ್ನ ದ್ವಿಚಕ್ರವಾಹನವನ್ನು ಹುಡುಕಾಡಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ತನ್ನ ದ್ವಿಚಕ್ರವಾಹನವನ್ನು ಮತ್ತು ಕಳ್ಳತನಮಾಡಿರುವವರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ:220/2021 ಕಲಂ:379 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

ಇತ್ತೀಚಿನ ನವೀಕರಣ​ : 05-07-2021 07:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080