ಅಭಿಪ್ರಾಯ / ಸಲಹೆಗಳು

 

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.264/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ದಿನಾಂಕ: 05/06/2021 ರಂದು ಬೆಳಿಗ್ಗೆ 10.30 ಗಂಟೆಗೆ ಠಾಣೆಯ ಶ್ರೀ ನರಸಿಂಹಮೂರ್ತಿ, ಸಿ.ಹೆಚ್.ಸಿ-124 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 05/06/2021 ರಂದು ಬೆಳಗ್ಗೆ 09.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-339 ಕರಿಯಪ್ಪ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ನಾಯನಹಳ್ಳಿ ಗ್ರಾಮದ ಸುಬ್ರಮಣ್ಯ ಬಿನ್ ಲೇಟ್ ರಾಜಣ್ಣ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಬೆಳಗ್ಗೆ 09.15 ಗಂಟೆ ಗಂಟೆಗೆ ನಾಯನಹಳ್ಳಿ ಗ್ರಾಮದ ಸುಬ್ರಮಣ್ಯ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಸುಬ್ರಮಣ್ಯ ಬಿನ್ ಲೇಟ್ ರಾಜಣ್ಣ, 50 ವರ್ಷ, ಬ್ರಾಹ್ಮಣ ಜನಾಂಗ, ಚಿಲ್ಲರೆ ಅಂಗಡಿ ಮಾಲೀಕರು, ವಾಸ: ನಾಯನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.265/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ದಿನಾಂಕ: 05/06/2021 ರಂದು ಬೆಳಿಗ್ಗೆ 11.30 ಗಂಟೆಗೆ ಠಾಣೆಯ ಶ್ರೀ ವಿಜಯಕುಮಾರ್, ಸಿ.ಹೆಚ್.ಸಿ-167 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 05/06/2021 ರಂದು ಬೆಳಗ್ಗೆ 10.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-239 ಮಣಿಕಂಠ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಹಾದಿಗೆರೆ ಗ್ರಾಮದ ವೆಂಕಟೇಶಪ್ಪ ಬಿನ್ ಲೇಟ್ ಚೌಡಪ್ಪ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಬೆಳಗ್ಗೆ 10.15 ಗಂಟೆ ಗಂಟೆಗೆ ಹಾದಿಗೆರೆ ಗ್ರಾಮದ ವೆಂಕಟೇಶಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ವೆಂಕಟೇಶಪ್ಪ ಬಿನ್ ಲೇಟ್ ಚೌಡಪ್ಪ, 55 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ಮಾಲೀಕರು, ವಾಸ: ಹಾಗಿಗೆರೆ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.99/2021 ಕಲಂ. 457,380 ಐ.ಪಿ.ಸಿ :-

     ದಿನಾಂಕ:05/06/2021 ರಂದು ಮದ್ಯಾಹ್ನ 1:00 ಗಂಟೆಗೆ ಪಿರ್ಯಾದಿದಾರರಾದ ಚಾಂದ್ ಪಾಷ ಬಿನ್ ಅದಾಮ್ ಸಾಬ್ , 43 ವರ್ಷ, ಮುಸ್ಲಿಂರು, ಚೌಡರೆಡ್ಡಿಪಾಳ್ಯ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಚೌಡರೆಡ್ಡಿಪಾಳ್ಯದ 5 ನೇ ಕ್ರಾಸ್ ನಲ್ಲಿ ಸ್ವಂತ ಮನೆಯನ್ನು ವಾಸ ಮಾಡಿಕೊಂಡಿದ್ದು, ಹೀಗಿರುವಾಗ ದಿ: 01/06/2021 ರಂದು  ತಮ್ಮ ಸ್ವಂತ ಗ್ರಾಮ ಬುರಡಗುಂಟೆ ಯಲ್ಲಿ ತನ್ನ ತಂದೆಗೆ ಅನಾರೋಗ್ಯದ ಕಾರಣ ನೋಡಿಕೊಂಡು ಬರಲು ಸಂಜೆ 6;00 ಗಂಟೆಯಲ್ಲಿ ಕುಟುಂಬ ಸಮೇತ ಮನೆಗೆ ಬೀಗ ಹಾಕಿಕೊಂಡು ಹೋಗಿ ನಂತರ ಮಾರನೇಯ ದಿನ ಸಂಜೆ 4:30 ಗಂಟೆಗೆ ವಾಪಸ್ಸು ಮನೆಯ ಬಳಿ ಬಂದು ನೋಡಲಾಗಿ ಮನೆಬೀಗ ಮುರಿದಿದ್ದು ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶ ಮಾಡಿ ಮನೆಯ ರೂಂ ನಲ್ಲಿದ್ದ ಬೀರುವಿನ ಬೀಗ ಮುರಿದು ಅದರಲ್ಲಿದ್ದ 2 ಬಂಗಾರದ ಉಂಗುರ , ಸಣ್ಣ ಮಕ್ಕಳ 5 ಬಂಗಾರದ ಉಂಗುರ  ಒಟ್ಟು 15 ಗ್ರಾಂ ಇದ್ದು ಇದರ ಬೆಲೆ ಸುಮಾರು 30,000 ರೂ , ಬೆಳ್ಳಿ ಕಾಲುಚೈನ್ 200 ಗ್ರಾಂ ಇದರ ಬೆಲೆ 5000 ರೂ ಹಾಗೂ ನಗದು 10,000 ಸಾವಿರ ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು, ಆದ್ದರಿಂದ ಸದರಿ ವಸ್ತುಗಳನ್ನು ಪತ್ತೆಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿರುತ್ತಾರೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.131/2021 ಕಲಂ. 307,348 ಐ.ಪಿ.ಸಿ :-

     ದಿನಾಂಕ 04-06-2021 ರಂದು 14-30 ಗಂಟೆಗೆ ಪಿರ್ಯಾದಿದಾರರಾದ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ .ಸಿ. 179 ಶಿವಶೇಖರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ  ತಾನು  ಈಗ್ಗೆ 4 ತಿಂಗಳಿನಿಂದ  ವಿಧುರಾಶ್ವಥ ಹೊರಠಾಣೆಯಲ್ಲಿ ಕರ್ತವ್ಯವನ್ನು ಮಾಡುತ್ತಿರುತ್ತೇನೆ.  ದಿನಾಂಕ 04-06-2021 ರಂದು ಮಧ್ಯಾಹ್ನ 01-30 ಗಂಟೆಯಲ್ಲಿ ವಿಧುರಾಶ್ವಥ ಗೇಟ್ ನಲ್ಲಿ ಗಸ್ತು ಮಾಡುತ್ತಿದ್ದಾಗ ಗೌರಿಬಿದನೂರು ತಾಲ್ಲೂಕು ಹೆಚ್.ನಾಗಸಂದ್ರ–ಹುದೂತಿ ಮುಖ್ಯರಸ್ತೆಯಲ್ಲಿರುವ ಚಂದ್ರಶೇಖರ ರೆಡ್ಡಿ ಬಿನ್ ತಿಪ್ಪಾರೆಡ್ಡಿರವರ ಬಾಳೆತೋಟದಲ್ಲಿ ಯಾರೋ ಅಪರಿಚಿತ ಹೆಂಗಸನ್ನು ಕೈಕಾಲುಗಳನ್ನು ಕಟ್ಟಿಹಾಕಿರುತ್ತಾರೆಂದು ಬಂದ ಮಾಹಿತಿಯ ಮೇರೆಗೆ ನಾನು  ಹೆಚ್.ನಾಗಸಂದ್ರ – ಹುದೂತಿ ಮುಖ್ಯರಸ್ತೆಯಿಂದ ಸುಮಾರು 50 ಮೀಟರ್ ದೂರದಲ್ಲಿರುವ  ಚಂದ್ರಶೇಖರರೆಡ್ಡಿ ಬಿನ್ ತಿಪ್ಪಾರೆಡ್ಡಿರವರ ಬಾಳೆ ತೋಟದಲ್ಲಿ ಹೋಗಿ ನೋಡಲಾಗಿ ಸುಮಾರು 25 ರಿಂದ 27 ವರ್ಷ ವಯಸ್ಸಿನ ಹೆಂಗಸು ಒಂದು ಬೆಡ್ ಶಿಟ್  ಮೇಲೆ ಮಲಗಿದ ಸ್ಥಿತಿಯಲ್ಲಿದ್ದು ತಲೆಯ ಕೆಳಗೆ ಬ್ಯಾಗ್ ಅನ್ನು ದಿಂಬಿನ ರೀತಿಯಲ್ಲಿ ಇಟ್ಟುಕೊಂಡಿದ್ದು ನಿತ್ರಾಣ ಗೊಂಡಿರುತ್ತಾರೆ. ಆಕೆಯ ಎರಡೂ ಕೈಗಳನ್ನು ಹಿಂಭಾಗದಲ್ಲಿ ಹಸಿರು ಬಣ್ಣದ ವೇಲಿನಿಂದ ಕಟ್ಟಿದ್ದು , ಕಾಲುಗಳನ್ನು ನೀಲಿ ಬಣ್ಣದ ವೇಲಿನಿಂದ ಕಟ್ಟಿರುತ್ತೆ. ಅಪರಿಚಿತ ಮಹಿಳೆಯ ಕುತ್ತಿಗೆಯಲ್ಲಿ ಎಡಭಾಗದಲ್ಲಿ ,ಬಲಭುಜದಮೇಲೆ ಮತ್ತು ಎಡಭುಜದ ಬಳಿ, ಎರಡೂ ಮೊಣಕೈಗಳ ಮೇಲೆ ತರಚಿದ ಗಾಯಗಳಾಗಿರುತ್ತೆ. ಆಕೆಯ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಸದರಿ ಮಹಿಳೆಯ ಬಲಗೈಯಲ್ಲಿ ಮಹದೇವ ಎಂಬ ಹಚ್ಚೆ ಗುರುತು ಇರುತ್ತೆ, ಆಕೆಯನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡುವ ಉದ್ದೇಶದಿಂದ ಚಂದ್ರಶೇಖರರೆಡ್ಡಿ ಬಿನ್ ತಿಪ್ಪಾರೆಡ್ಡಿರವರ ಬಾಳೆತೋಟದಲ್ಲಿ ಕೈಕಾಲುಗಳನ್ನು ಕಟ್ಟಿಹಾಕಿರುತ್ತಾರೆ. ಅಪರಿಚಿತ ಮಹಿಳೆಯನ್ನು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತೇನೆ.  ಅಪರಿಚಿತ ಮಹಿಳೆಯನ್ನುಕೈಕಾಲುಗಳನ್ನು ಕಟ್ಟಿಹಾಕಿ ಕೊಲೆ ಮಾಡಲು ಪ್ರಯತ್ನಿಸಿರುವ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು  ಕೋರಿ ನೀಡಿದ ದೂರಾಗಿರುತ್ತೆ.

 

5. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.58/2021 ಕಲಂ. 420 ಐ.ಪಿ.ಸಿ & 7,3,6(A) ESSENTIAL COMMODITIES ACT, 1955 :-

     ದಿನಾಂಕ:04-06-2021 ರಂದು ರಾತ್ರಿ 23:30 ಗಂಟೆಗೆ ಪಿಯರ್ಾದಿದಾರರಾದ ಗೌತಮ್ ಬಿ ಜಿ, ಆಹಾರ ಶಿರಸ್ತೆದಾರ್, ಚಿಕ್ಕಬಳ್ಲಾಪುರ ತಾಲ್ಲುಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:04-06-2021 ರಂದು ನಮ್ಮ ಮೇಲಾಧಿಕಾರಿಗಳಾದ ಉಪನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ರವರು ನನಗೆ ಮತ್ತು ಆಹಾರ ನಿರೀಕ್ಷಕರಾದ ಶ್ರೀ ರಘು ರವರಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿರುವ ಎಲ್ಲಾ ಅಕ್ಕಿ ಗಿರಿಣಿಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ನೀಡಿದ ಮೌಖಿಕ ಆದೇಶದಂತೆ ನಾವು ಈ ದಿನ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂ:36 ಕಂದವಾರ ಕೈಗಾರಿಕಾ ಅಭಿವೃದ್ದಿ ಪ್ರದೇಶದಲ್ಲಿರುವ ಶ್ರೀ ಸಪ್ತಗಿರಿ ಗ್ರಾಮೋದಯ ಅಕ್ಕಿ ಗಿರಣಿ ಹೋಗಿ 12:30 ಗಂಟೆಗೆ ಹೋಗಿ ಪರಿಶೀಲಿಸಿದಾಗ ಅಕ್ಕಿ ಗಿರಣಿಯಲ್ಲಿ ಮಾಲೀಕರಾದ ಶ್ರೀ ವೇಣುಗೋಪಾಲ್ ಹಾಜರಿದ್ದರು ಸದರಿ ಅಕ್ಕಿ ಗಿರಿಣಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ವಿತರಿಸುವ ಅಕ್ಕಿಯನ್ನು ಪಾಲೀಶ್ ಮತ್ತು ನುಚ್ಚು ಆಗಿ ಪರಿವರ್ತಿಸಿ ಅವುಗಳನ್ನು ಕಾಳಸಂತೆಯಲ್ಲಿ ರೀ ಬ್ಯಾಗ್ ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು ಈ ಬಗ್ಗೆ ಮಾಲೀಕರನ್ನು ವಿಚಾರ ಮಾಡಿದಾಗ ಅಕ್ಕಿ ಗಿರಣಿ ಮಾಲೀಕರು ವಹಿವಾಟಿಗೆ ಸಂಬಂದಿಸಿದಂತೆ ತೃಪ್ತಿಕರ ವಿವರಣೆ ನೀಡದ ಕಾರಣ ಹಾಗೂ ಗಿರಣಿಯ ಅಕ್ಕಿ ಉತ್ಪಾದಿಸುವ ಕೆಲಸ ಮಾಡದೆ ಸರ್ಕಾರವು ಬಡವರಿಗೆ ಬಿಡುಗಡೆ ಮಾಡುವ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ಪಾಲೀಷ್ ಮಾಡಿ ವಿವಿದ ಬ್ರಾಂಡ್ಗಳಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಈ ಬಗ್ಗೆ ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿದಾಗ ಅವರು ಜಪ್ತಿ ಮಾಡಿ ಎಂದು ತಿಳಿಸಿದ್ದರ ಮೇರೆಗೆ ನಂತರ ಪಂಚರನ್ನು ಬರಮಾಡಿಕೊಂಡು ಅವರ ಸಮಕ್ಷಮದಲ್ಲಿ ಅಕ್ಕಿ ಗಿರಿಣಿಯಲ್ಲಿ ದೊರೆತ ಪಾಲೀಸ್ ಮಾಡಲಾದ ಅಕ್ಕಿ, ನುಚ್ಚ ನ್ನು ವೇಬ್ರಿಡ್ಜ್ನಲ್ಲಿ ತೂಕ ಮಾಡಿಸಿದಾಗ ಒಟ್ಟು 7440 ಕೆಜಿ ಅಕ್ಕಿ, ಒಟ್ಟು 28150 ಕೆಜಿ ನುಚ್ಚು ಇರುವುದು ಕಂಡು ಬಂದಿರುತ್ತೆ. ನಂತರ ರಾಗಿಯನ್ನು ಸದರಿ ಅಕ್ಕಿ ಗಿರಿಣಿಯಲ್ಲಿಯೇ ಇದ್ದ ತೂಕದ ಯಂತ್ರದ ಸಹಾಯದಿಂದ ತೂಕ ಮಾಡಿದಾಗ 322 ಕೆ.ಜಿ ಇರುವುದು ಕಂಡು ಬಂದಿರುತ್ತೆ. ಸದರಿ ವಸ್ತುಗಳನ್ನು ಮತ್ತು ಅಕ್ಕಿ ಗಿರಿಣಿಯಲ್ಲಿ ಅಕ್ಕಿ ತುಂಬುವ ಚೀಲಗಳಾದ 1) 25 ಕೆ.ಜಿ ತೂಗಬಹುದಾದ 14 ಬಂಡಲ್ಗಳಿರುವ ಸುಮಾರು 7000 ಖಾಲಿ ಚೀಲಗಳು (14 X 500), 1) 25 ಕೆ.ಜಿ ತೂಗಬಹುದಾದ 5 ಬಂಡಲ್ಗಳಿರುವ ಸುಮಾರು 2500 ಖಾಲಿ ಚೀಲಗಳು (5 X 500), 1) 25 ಕೆ.ಜಿ ತೂಗಬಹುದಾದ ನಂ-1 ಬ್ರಾಂಡ್ನ 9 ಬಂಡಲ್ಗಳಿರುವ ಸುಮಾರು 4500 ಖಾಲಿ ಚೀಲಗಳು (9 X 500), 1) 25 ಕೆ.ಜಿ ತೂಗಬಹುದಾದ ಕನರ್ೂಲ್ ಬ್ರಾಂಡ್ನ 8 ಬಂಡಲ್ಗಳಿರುವ ಸುಮಾರು 800 ಖಾಲಿ ಚೀಲಗಳು (8 X 100) ಚೀಲಗಳನ್ನು ಹಾಗೂ 7440 ಕೆಜಿ ಅಕ್ಕಿ, ಒಟ್ಟು 28150 ಕೆಜಿ ನುಚ್ಚು ಮತ್ತು 322 ಕೆ.ಜಿ ರಾಗಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿರುತ್ತೆ. ಅಕ್ಕಿ ಮತ್ತು ನುಚ್ಚು ನಲ್ಲಿ 2 ಕೆ.ಜಿಯಂತೆ ಮಾದರಿಗಾಗಿ ಪ್ರತ್ಯೇಕ ಕವರುಗಳಲ್ಲಿ ಪಂಚರ ಸಮಕ್ಷಮ ಸಂಗ್ರಹಿಸಿರುತ್ತೆ.  ಅಕ್ಕಿ ಗಿರಿಣಿ ಮಾಲೀಕ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸಕರ್ಾರ ಬಿಡುಗಡೆ ಮಾಡಿರುವ ಅಕ್ಕಿಯನ್ನು ವಿವಿದ ಮೂಲಗಳಿಂದ ಅಕ್ರಮವಾಗಿ ಖರೀದಿ ಮಾಡಿ ತಮ್ಮ ಅಕ್ಕಿ ಗಿರಣಿಯಲ್ಲಿ ಪಾಲಿಶ್ ಮಾಡಿ ವಿವಿಧ ಬ್ರಾಂಡ್ನಲ್ಲಿ ಅಕ್ಕಿ ಚೀಲಗಳು ತಯಾರಿಸಿ ಕಾಳಸಂತೆ ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸುತ್ತಿರುವುದು ಕಂಡು ಬಂದಿರುತ್ತೆ. ಇದೊಂದು ಅಕ್ಕಿ ಗಿರಣಿಯಾಗಿದ್ದು ಭತ್ತದಿಂದ ಅಕ್ಕಿಯನ್ನು ಉತ್ಪಾದಿಸಿ ಮಾರಾಟ ಮಾಡುವುದು ಇವರ ಜವಾಬ್ದಾರಿಯಾಗಿರುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೋ ಚಿತ್ರಿಕರಣ ಹಾಗೂ ಛಾಯ ಚಿತ್ರಗಳನ್ನು ಮಾಡಿರುತ್ತೆ. ಜಪ್ತಿ ಮಾಡಿದ ಅಕ್ಕಿ, ನುಚ್ಚು ಮತು ರಾಗಿಯನ್ನು ಮತ್ತು ಚೀಲಗಳನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಕೆ.ಎಫ್.ಸಿ.ಎಸ್.ಸಿ ಸಗಟು ಗೋದಾಮಿನಲ್ಲಿ ಸುರಕ್ಷತೆಯಲ್ಲಿ ಇಡಲಾಗಿರುತ್ತದೆ. ಜಪ್ತಿ ಮಾಡಿದ ಅಕ್ಕಿ ಮತ್ತು ನುಚ್ಚಿನ ಬೆಲೆ ಅಂದಾಜು 4 ಲಕ್ಷ ರೂಗಳಾಗಿರುತ್ತೆ. ಮಾದರಿಗಾಗಿ ಸಂಗ್ರಹಿಸಿದ ಅಕ್ಕಿಯನ್ನು ನಮ್ಮ ಇಲಾಖೆಯಿಂದ ಪರೀಕ್ಷೆಯ ಸಲುವಾಗಿ ಪರಿಶೀಲನೆಗಾಗಿ ಸಂಬಂದಪಟ್ಟ ಇಲಾಖೆಗೆ ಕಳುಹಿಸಿಕೊಡಲಾಗುವುದು. ಈ ಹಿನ್ನಲೆಯಲ್ಲಿ ಶ್ರೀ ಸಪ್ತಗಿರಿ ಗ್ರಾಮೋದಯ ಅಕ್ಕಿ ಗಿರಣಿ ಮಾಲೀಕರ ಶ್ರೀ. ವೇಣುಗೋಪಾಲ್ ರವರ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ 1955 ಸೆಕ್ಷನ್ 3 ಮತ್ತು 6ಎ, 7, ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿ ಮತ್ತು ಕಾಳಸಂತೆಕೋರರ ವಿರುದ್ದ ತಕ್ಷಣ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

6. ಮಹಿಳಾ ಪೊಲೀಸ್ ಠಾಣೆ ಮೊ.ಸಂ.48/2021 ಕಲಂ. 323,324,504 ಐ.ಪಿ.ಸಿ :-

     ದಿನಾಂಕ: 05/06/2021 ರಂದು ಬೆಳಗ್ಗೆ 11:45 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ನಾನು ಸುಮಾರು 30 ವರ್ಷಗಳ ಹಿಂದೆ ಮುನಿನರಸಿಂಹಪ್ಪ ರವರ ಮಗನಾದ ರಾಮಯ್ಯ ರವರನ್ನು ನಮ್ಮ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿರುತ್ತೇನೆ. . ನಮ್ಮ ಸಂಸಾರದಲ್ಲಿ 04 ಜನ ಮಕ್ಕಳಿದ್ದು 01 ನೇ ಮಹಾಲಕ್ಷ್ಮೀ ,02 ನೇ ನರ್ಮದಾ, 03 ನೇ ರಾಘವೇಂದ್ರ, 04 ನೇ ನವೀನ್ ಕಿರಣ್ ರವರರಾಗಿರುತ್ತಾರೆ.  ನನ್ನ ಮಗಳಾದ ಮಹಾಲಕ್ಷ್ಮಿ ಗೆ ಮದುವೆ ಮಾಡಿರುತ್ತೇನೆ. 03 ನೇ ಮಗನಾದ ರಾಘವೇಂದ್ರ ರವರು ಸಿದ್ದಿಕ್ ರವರ ಮಗಳಾದ ಉಮ್ರಾಸ್ ರವರನ್ನು  ಪ್ರೀತಿಸಿ ಮದುವೆ ಮಾಡಿಕೊಂಡಿರುತ್ತಾನೆ.  ನಾನು ಸಹ ಹಾಲಿ ಎಸ್ ಬಿ ಐ  ಬ್ಯಾಂಕಿನಲ್ಲಿ ಅಟೆಂಡರ್ ಕೆಲಸ ಮಾಡಿಕೊಂಡಿರುತ್ತೇನೆ.  ಈಗಿರುವಲ್ಲಿ ದಿನಾಂಕ: 04/06/2021 ರಂದು ರಾತ್ರಿ ಸುಮಾರು 09:00 ಗಂಟೆ ಸಮಯದಲ್ಲಿ ನನ್ನ ಮಗನಾದ ರಾಘವೇಂದ್ರ ರವರು ಪ್ರತಿದಿನ ಹಣ ಕೊಡು ಎಂತ ಕೇಳುತ್ತಿದ್ದನು.  ನಾನು ಈಗ ನನ್ನ ಬಳಿ ಹಣ ಇಲ್ಲ ಎಂತ ಹೇಳಿದ್ದಕ್ಕೆ ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆದು ನನ್ನ ಮಗ ನನಗೆ ಬಾಗಿಲಿನ ಮೇಲೆ ತಳ್ಳಿದಾಗ ನನ್ನ ತಲೆ ಬಾಗಿಲಿಗೆ ತಗುಲಿ ರಕ್ತ ಗಾಯವಾಗಿರುತ್ತದೆ. ಅವನ ಹೆಂಡತಿ ಉಮ್ರಾಸ್ ರವರೂ ಸಹ 2 ಲಕ್ಷ ರೂ ಗಳನ್ನು ಕೊಡು ಎಂತ ಪ್ರತಿದಿನ ಕೊಡು ಎಂತ ಕೇಳುತ್ತಿರುತ್ತಾರೆ.  ಹಾಗೂ ನನ್ನ ಗಂಡನಾದ ರಾಮಯ್ಯಗೂ ಸಹ ನನ್ನ ಮಗ ಮತ್ತು ಸೊಸೆ ಕೈಗಳಿಂದ ಬೆನ್ನಿಗೆ ಮತ್ತು ಕೈಗಳಿಗೆ ಹೊಡೆದಿರುತ್ತಾರೆ.  ನಂತರ ನನಗೆ ಏಟು ತಗುಲಿದ ತಕ್ಷಣ ನನ್ನ ಗಂಡ ರಾಮಯ್ಯ ಕೂಗಿಕೊಂಡಾಗ ನನ್ನ ಇಬ್ಬರು ಹೆಣ್ಣು ಮಕ್ಕ ಳು ಕೆಳಗಡೆ ಮನೆಯಲ್ಲಿದ್ದವರು ತಕ್ಷಣ  ಬಂದು ನನಗೆ ಮತ್ತು ನನ್ನ ಮಗನಿಗೆ ಜಗಳ ಬಿಡಿಸಿ ಹಾಗೂ ಪಕ್ಕದ ಮನೆಯವರಾದ ತ್ರಿವೇಣಿ    ರವರೂ ಸಹ ಬುದ್ದಿವಾದ ಹೇಳಿ ಜಗಳ ಬಿಡಿಸಿದರು.  ನಂತರ ನನ್ನ ಇಬ್ಬರು ಹೆಣ್ಣು ಮಕ್ಕಳಾದ ಮಹಾಲಕ್ಷ್ಮಿ ಮತ್ತು ನರ್ಮದಾ ರವರು ಯಾವುದೋ ಆಟೋದಲ್ಲಿ ಚಿಕಿತ್ಸಿಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು ಪಡಿಸಿರುತ್ತಾರೆ. ಹಾಲಿ ನಾನು ಚಿಕಿತ್ಸೆ ಪಡೆದುಕೊಂಡು ಚೇತರಿಕೊಳ್ಳುತ್ತಿರುತ್ತೇನೆ.  ಆದ್ದರಿಂದ ಮೇಲ್ಕಂಡ ನನ್ನ ಮಗನಾದ ರಾಘವೇಂದ್ರ ಮತ್ತು ನನ್ನ ಸೊಸೆಯಾದ ಉಮ್ರಾಸ್ ರವರ ಮೇಲೆ ಕಾನೂನು  ರೀತ್ಯ ಕ್ರಮ ಜರುಗಿಸಬೇಕೆಂತ ಕೋರಿ ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

ಇತ್ತೀಚಿನ ನವೀಕರಣ​ : 05-06-2021 05:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080