Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.118/2021 ಕಲಂ. 32,34 ಕೆ.ಇ ಆಕ್ಟ್ :-

  ದಿನಾಂಕ: 04/05/2021 ರಂದು ಬೆಳಿಗ್ಗೆ 11-30 ಗಂಟೆಗೆ ಶ್ರೀ ರೆಡ್ಡಪ್ಪ. ಸಹಾಯಕ ಪೊಲೀಸ್ ಉಪ-ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ. ಈ ದಿನ ದಿನಾಂಕ; 04-05-2021 ರಂದು ಠಾಣಾಧಿಕಾರಿಗಳು ನನಗೆ ಮತ್ತು ಪಿಸಿ-131 ರಾಜಪ್ಪ ರವರಿಗೆ  ಹಗಲು ಗಸ್ತು ಕರ್ತವ್ಯಕ್ಕೆ  ನೇಮಿಸಿದ್ದು ಅದರಂತೆ ನಾನು ಮತ್ತು ಪಿಸಿ-131 ರವರು ಬಾಗೇಪಲ್ಲಿ ಪುರದಲ್ಲಿ ಗಸ್ತು ಮಾಡುತ್ತಿದ್ದಾಗ ಬೆಳಿಗ್ಗೆ 11-00 ಗಂಟೆಯಲ್ಲಿ  ಯಾರೋ ಒಬ್ಬ ಆಸಾಮಿಯು ಯಾರೋ ಒಬ್ಬ  ಆಸಾಮಿಯು ಅಕ್ರಮವಾಗಿ  ಪ್ಲಾಸ್ಟಿಕ್ ಚೀಲದಲ್ಲಿ  ಮದ್ಯವನ್ನು ತೆಗೆದುಕೊಂಡು ಗೂಳೂರು ಸರ್ಕಲ್ ಕಡೆಗೆ ಹೋಗುತ್ತಿರುವುದಾಗಿ ಮಾಹಿತಿ ಬಂದಿದ್ದು, ನಾನು ಮತ್ತು ಪಿಸಿ-131 ರಾಜಪ್ಪ ರವರು  ದ್ವಿ ಚಕ್ರ ವಾಹನದಲ್ಲಿ ಗೂಳೂರು ಸರ್ಕಲ್ ಬಳಿ 11-05 ಗಂಟೆಗೆ ಹೋದಾಗ ಆಸಾಮಿಯು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಹೆಗಲ ಮೇಲೆ ತೆಗೆದುಕೊಂಡು ಹೋಗುತ್ತಿದ್ದ ಪ್ಲಾಸ್ಟಿಕ್ ಚೀಲವನ್ನು ರಸ್ತೆಯಲ್ಲಿ ಬಿಸಾಕಿ ಓಡಿಹೋಗಲು ಪ್ರಯತ್ನಿಸುತ್ತಿದವನ್ನು ಸಿಬ್ಬಂದಿಯಾದ ಪಿಸಿ-131 ರಾಜಪ್ಪ ರವರು ಹಿಂಬಾಲಿಸಿ ಹಿಡಿದುಕೊಂಡು ಬಂದಿದ್ದು  ಆಸಾಮಿಯ ಹೆಸರು ವಿಳಾಸ ಕೇಳಲಾಗಿ ರಂಗಪ್ಪ ಬಿನ್ ಲೇಟ್ ಮುನಿಯಪ್ಪ, 55 ವರ್ಷ, ನೇಯ್ಗೆ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರಿ, ವಾಸ ಗೊರ್ತಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ನಂತರ  ಪ್ಲಾಸ್ಟಿಕ್ ಚೀಲವನ್ನು ತೆಗದು ನೋಡಲಾಗಿ ಪರಿಶೀಲಿಸಲಾಗಿ ಇದರಲ್ಲಿ 3 ಬಾಕ್ಸ್ ಇದ್ದು, 1ನೇ ಬಾಕ್ಸ್ ನ್ನು ತೆಗೆದು ನೋಡಲಾಗಿ 180ML ನ 8PM  WHISKY ಯ 48 ಟೆಟ್ರಾ ಪಾಕೇಟ್ ಗಳಿರುತ್ತವೆ, 2ನೇ ಬಾಕ್ಸ್ ನಲ್ಲಿ 180ML ನ 8PM  WHISKY ಯ 48 ಟೆಟ್ರಾ ಪಾಕೇಟ್ ಗಳಿರುತ್ತವೆ, 3ನೇ ಬಾಕ್ಸ್ ನಲ್ಲಿ  180 ML ನ OLD TAVERN WHISKY 48 ಮದ್ಯದ  ಟೆಟ್ರಾ ಪಾಕೇಟ್ ಗಳಿರುತ್ತೆ. ಇವುಗಳು ಒಟ್ಟು 25 ಲೀಟರ್ 920 ಎಂ.ಎಲ್ ಮದ್ಯವಿದ್ದು, ಇದರ ಒಟ್ಟು ಮೌಲ್ಯ 12,492/- ರೂ.ಗಳಾಗಿರುತ್ತದೆ. ಸದರಿ ಮದ್ಯವನ್ನು ಮಾರಾಟ ಮಾಡಲು  ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ  ಇಲ್ಲವೆಂದು ಹೇಳಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಮಾಲು ಹಾಗೂ ಅಸಲು ಪಂಚನಾಮೆಯೊಂದಿಗೆ  ಮದ್ಯಾಹ್ನ 12-50 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸುತ್ತಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.119/2021 ಕಲಂ. 379 ಐ.ಪಿ.ಸಿ :-

  ದಿನಾಂಕ: 04/05/2021 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎನ್ ಲಕ್ಷ್ಮೀ ನಾರಾಯಣ, ಸಹಾಯಕ ಇಂಜಿನಿಯರ್ ಬೆಸ್ಕಾಂ ಬಾಗೇಪಲ್ಲಿ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ಶ್ರೀ ವೆಂಕಟರವಣ ಬಿನ್ ಜಯರಾಂ, ಇವರ ಹೆಸರಲ್ಲಿ ಊಗಲನಾಗೇಪಲ್ಲಿ ಗ್ರಾಮದ ಹತ್ತಿರ ಗಂಗಾ ಕ್ಲಾಣ ಯೋಜನೆಯಡಿಯಲ್ಲಿ 10 ಹೆಚ್ ಪಿ ಪಂಪ್ ಸೆಟ್ಟಿಗೆ ನಮ್ಮ ಇಲಾಖೆಯಿಂದ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿರುತ್ತಾರೆ. ದಿನಾಂಕ: 02/05/2021 ರಂದು ಜೆ ವೆಂಕಟರವಣ ರವರು ನಮ್ಮ ಆಫೀಸಿಗೆ ಬಂದು ನಮ್ಮ ಪಂಪ್ ಸೆಟ್ಟಿನ ಹತ್ತಿರ ವೈರ್ ಕಳ್ಳತನವಾಗಿರುತ್ತದೆ. ಎಂದು ದೂರು ನೀಡಿದ್ದು, ನಾನು ಖುದ್ದು ಸ್ಥಳ ಪರಿಶೀಲಿಸಿದಾಗ ಸದರಿಯವರಿಗೆ ಅಳವಡಿಸಿರುವ 25 ಕೆವಿಎ ಪರಿವರ್ತಕ ಸೇರಿ 7 ಕಂಬಗಳನ್ನು ಹಾಗೂ ರ್ಯಾಬಿಕ್ ವಾಹಕ 1.2 ಕಿ,ಮೀ ಅಳವಡಿಸಿದ್ದು ಇದರ  ಪೈಕಿ 4 ಕಂಬಗಳಲ್ಲಿ ಸುಮಾರು 300 ಮೀಟರಿನಷ್ಟು ರ್ಯಾಬಿಟ್ ವಾಹಕವನ್ನು ಕಳ್ಳರು ಕತ್ತರಿಸಿ  ಕೊಂಡು  ಹೋಗಿರುತ್ತಾರೆ. ನಮ್ಮ ಇಲಾಖೆಗೆ ಸುಮಾರು 11,810 ರೂ ನಷ್ಟವಾಗಿರುತ್ತದೆ. ಆದ್ದರಿಂದ ತಾವುಗಳು ಕಳ್ಳತನ ಮಾಡಿರುವವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಂಡು ನಮಗೆ ಸೂಕ್ತ ನ್ಯಾಯ ದೊರಕಿಸಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.120/2021 ಕಲಂ. 11,32,34 ಕೆ.ಇ ಆಕ್ಟ್:-

  ದಿನಾಂಕ:05/05/2021 ರಂದು ಬೆಳಿಗ್ಗೆ 10-45 ಗಂಟೆಗೆ ಶ್ರೀ ಜಿ.ಪಿ.ರಾಜು,  ಪೊಲೀಸ್ ವೃತ್ತ ನಿರೀಕ್ಷಕರು, ಬಾಗೇಪಲ್ಲಿ ವೃತ್ತ. ರವರು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ.  ಈ ದಿನ ದಿನಾಂಕ; 05-05-2021 ರಂದು ಬಾಗೇಪಲ್ಲಿ ಟೌನ್ ನಲ್ಲಿ  ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-6399 ವಾಹನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಪಿಸಿ-134 ಧನಂಜಯ್  ಹಾಗೂ ಜೀಪ್ ಚಾಲಕ ಎ.ಪಿ.ಸಿ-110 ನರಸಿಂಹಮೂರ್ತಿ ರವರೊಂದಿಗೆ  ಬಾಗೇಪಲ್ಲಿ ಪುರದಲ್ಲಿ ಗಸ್ತು ಮಾಡುತ್ತಿದ್ದಾಗ ಬೆಳಿಗ್ಗೆ 9-00 ಗಂಟೆಯಲ್ಲಿ  ತಬ್ರೀಜ್ ಬಿನ್ ಬಾಬು, ಬುಜ್ಜಿ ಕ್ಯಾಂಟೀನ್ ಬಳಿ,  20ನೇ ವಾರ್ಡ, ಬಾಗೇಪಲ್ಲಿ ಟೌನ್, ಎಂಬ ಆಸಾಮಿಯು  KA-52-Q-1178 ನೊಂದಣಿ ಸಂಖ್ಯೆಯ ಟಿ.ವಿ.ಎಸ್. ದ್ವಿ ಚಕ್ರ ವಾಹನದಲ್ಲಿ ನ್ಯಾಷನಲ್ ಹೈವೆ ಕಡೆಯಿಂದ ತೀಮಾಕಪಲ್ಲಿ ರಸ್ತೆಯಲ್ಲಿ  ಅಕ್ರಮವಾಗಿ  ಮದ್ಯವನ್ನು ಸಾಗಾಟ ಮಾಡುತ್ತಿರುವುದಾಗಿ ಖಚಿತ  ಮಾಹಿತಿ ಬಂದಿದ್ದು, ಬಾಗೇಪಲ್ಲಿ ಎಸ್.ಬಿ.ಎಂ ಸರ್ಕಲ್  ಬಳಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಮೇಲ್ಕಂಡ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಹಾಜರಿದ್ದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ನಂತರ ಪಂಚರು ಮತ್ತು ನಾವು  ಜೀಪಿನಲ್ಲಿ ಎಸ್.ಬಿ.ಎಂ ರಸ್ತೆಯಿಂದ  ತೀಮಾಕಪಲ್ಲಿ ಗ್ರಾಮದ ಕಡಗೆ ಬೆಳಿಗ್ಗೆ  9-15 ಗಂಟೆಯಲ್ಲಿ ತಿಮಾಕಪಲ್ಲಿ ಕ್ರಾಸ್ ಬಳಿ ಹೋಗುತ್ತಿದ್ದಾಗ ಎದುರಿನಿಂದ KA-52-Q-1178 ನೊಂದಣಿ ಸಂಖ್ಯೆಯ ಟಿ.ವಿ.ಎಸ್. ದ್ವಿ ಚಕ್ರ ವಾಹನದಲ್ಲಿ ಬರುತ್ತಿದ್ದ ಆಸಾಮಿಯು ದ್ವಿ ಚಕ್ರ ವಾಹನ ರಸ್ತೆಯಲ್ಲೇ ಬಿಟ್ಟು ಓಡಿಹೋದಾಗ ಪಿಸಿ-134 ಧನಂಜಯ್ ರವರು ಆಸಾಮಿಯನ್ನು ಹಿಡಿಯಲು ಹಿಂಭಾಲಿಸಿದಾಗ ಕೈಗೆ ಸಿಗದೇ ಓಡಿಹೋಗಿರುತ್ತಾನೆ. ನಂತರ ರಸ್ತೆಯಲ್ಲಿ ಬಿಟ್ಟು ಹೋಗಿದ್ದ ದ್ವಿ ಚಕ್ರ ವಾಹನವನ್ನು ಪಂಚರ ಸಮಕ್ಷಮ  ಪರಿಶೀಲಿಸಿ ನೋಡಲಾಗಿ KA-52-Q-1178 ನೊಂದಣಿ ಸಂಖ್ಯೆಯ ಟಿ.ವಿ.ಎಸ್.ಎಕ್ಸ್ ಎಲ್ ಹೆವಿಡ್ಯೂಟಿ  ದ್ವಿ ಚಕ್ರ ವಾಹನವಾಗಿರುತ್ತದೆ. ಹಾಗೂ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲವನ್ನು ತೆಗೆದು ನೋಡಲಾಗಿ  HAYWARDS CHEERS WHISKY ಯ 5 ಬಾಕ್ಸ್ ಗಳಿದ್ದು, ಪ್ರತಿಯೊಂದು  ಬಾಕ್ಸ್ ನಲ್ಲಿ 90 ML ಸಾಮರ್ಥ್ಯದ 96 HAYWARDS CHEERS WHISKY ಯ ಟೆಟ್ರಾ ಪಾಕೇಟ್ ಗಳಿರುತ್ತವೆ. ಇದು ಒಟ್ಟು 43 ಲೀಟರ್ 200 ಎಂ.ಎಲ್ ಇದ್ದು, ಇದರ ಒಟ್ಟು ಬೆಲೆ 16.862/- ರೂಪಾಯಿಗಳಾಗಿರುತ್ತದೆ. ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ  ಬೆಳಿಗ್ಗೆ 10-45 ಗಂಟೆಗೆ ಠಾಣೆಯಲ್ಲಿ  ಹಾಜರುಪಡಿಸುತ್ತಿದ್ದು, ತಬ್ರೀಜ್ ಬಿನ್ ಬಾಬು, ಬುಜ್ಜಿ ಕ್ಯಾಂಟೀನ್ ಬಳಿ,  20ನೇ ವಾರ್ಡ, ಬಾಗೇಪಲ್ಲಿ ಟೌನ್  ರವರ ವಿರುದ್ದ ಕಾನೂನು ರೀತ್ಯಾ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲು ಸೂಚಿಸಿ ನಿಡಿದ ವರದಿಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.121/2021 ಕಲಂ. 32,34 ಕೆ.ಇ ಆಕ್ಟ್:-

  ದಿನಾಂಕ:05/05/2021 ರಂದು ಮದ್ಯಾಹ್ನ 12-45 ಗಂಟೆಗೆ ಶ್ರೀ ಜಯರಾಂ. ಸಹಾಯಕ ಪೊಲೀಸ್ ಉಪ-ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ಆದ ನಾನು ನೀಡುತ್ತಿರುವ ವರದಿ ಏನೆಂದರೆ ಈ ದಿನ ದಿನಾಂಕ; 05-05-2021 ರಂದು ಸಿಪಿಐ ರವರು ನನಗೆ ಮತ್ತು ಪಿಸಿ131 ರಾಜಪ್ಪ ರವರಿಗೆ  ಹಗಲು ಗಸ್ತು ಕರ್ತವ್ಯಕ್ಕೆ  ನೇಮಿಸಿದ್ದು ಅದರಂತೆ ನಾನು ಮತ್ತು ಪಿಸಿ-131 ರವರು ಬಾಗೇಪಲ್ಲಿ ಪುರದಲ್ಲಿ ಗಸ್ತು ಮಾಡುತ್ತಿದ್ದಾಗ ಮಾನ್ಯ ಸಿ.ಪಿ.ಐ. ಸಾಹೇಬರಿಗೆ ಬೆಳಿಗ್ಗೆ 11-00 ಗಂಟೆಯಲ್ಲಿ  ಸಮಯದಲ್ಲಿ ಅಶೋಕ ಬಿನ್ ನಾಗರಾಜಪ್ಪ, 26 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಕೊಂಡಂವಾರಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಅಕ್ರಮವಾಗಿ  ಪ್ಲಾಸ್ಟಿಕ್ ಚೀಲದಲ್ಲಿ ಮದ್ಯವನ್ನು ಮಾರಾಟ ಮಾಡಲು ತೆಗೆದುಕೊಂಡು ಸಾಯಿಬಾಬಾ ದೇವಸ್ಥಾನದ ಆರ್ಚ್ ಕಡೆಗೆ ಹೋಗುತ್ತಿರುವುದಾಗಿ ಮಾಹಿತಿ ಬಂದಿದ್ದು, ಸಿಪಿಐ ಸಾಹೇಬರು ಮೇಲ್ಕಂಡ ಮಾಹಿತಿಯನ್ನು ತಿಳಿಸಿ ಸದರಿಯವರ ಮೇಲೆ ದಾಳಿ ಮಾಡಲು ಮೌಖಿಕವಾಗಿ ಸೂಚಿಸಿದ್ದರ ಮೇರೆಗೆ ಸದರಿ ಮಾಹಿತಿಯನ್ನು ಅನುಸರಿಸಿ ನಾನು ಮತ್ತು ಪಿಸಿ-131 ರಾಜಪ್ಪ ರವರು  ದ್ವಿ ಚಕ್ರ ವಾಹನದಲ್ಲಿ ಗೂಳೂರು ವೃತ್ತದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮೇಲ್ಕಂಡ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಹಾಜರಿದ್ದು, ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಸದರಿಯವರು ಒಪ್ಪಿಕೊಂಡಿದ್ದು,  ನಂತರ ಪಂಚರು ಮತ್ತು ನಾವುಗಳು ದ್ವಿಚಕ್ರ ವಾಹನಗಳಲ್ಲಿ  ಬಾಗೇಪಲ್ಲಿ ಪುರದ ಡಿವಿಜಿ ರಸ್ತೆಯ ಸಾಯಿಬಾಬಾ ದೇವಸ್ಥಾನಕ್ಕೆ ಹೋಗುವ ಆರ್ಚ್ ಬಳಿ ಬೆಳಿಗ್ಗೆ 11-15 ಗಂಟೆಯ ಸಮಯದಲ್ಲಿ ಹೋಗುತ್ತಿದ್ದ ಆಸಾಮಿಯು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಹೆಗಲ ಮೇಲೆ ತೆಗೆದುಕೊಂಡು ಹೋಗುತ್ತಿದ್ದ ಪ್ಲಾಸ್ಟಿಕ್ ಚೀಲವನ್ನು ರಸ್ತೆಯಲ್ಲಿ ಬಿಸಾಡಿ ಓಡಿಹೋಗುತ್ತಿದ್ದಾಗ ಸಿಬ್ಬಂದಿಯಾದ ಪಿಸಿ-131 ರಾಜಪ್ಪ ರವರು ಹಿಂಬಾಲಿಸಿದಾಗ ಕೈಗೆ ಸಿಗದೇ ಓಡಿಹೋಗಿರುತ್ತಾನೆ. ನಂತರ ಸ್ಥಳದಲ್ಲಿ ಆಸಾಮಿಯು ಬಿಸಾಡಿ ಹೋಗಿದ್ದ ಪ್ಲಾಸ್ಟಿಕ್  ಚೀಲವನ್ನು, ಪಂಚರ ಸಮಕ್ಷಮ ಪರಿಶೀಲಿಸಲಾಗಿ ಪ್ಲಾಸ್ಟಿಕ್ ಚೀಲದಲ್ಲಿ ಮೂರು ಬಾಕ್ಸ್ ಗಳಿದ್ದು, 1ನೇ ಬಾಕ್ಸ್ ನಲ್ಲಿ 180 M.L.ನ OLD TAVERN WHISHY ಯ 44 ಟೆಟ್ರಾ ಪಾಕೆಟ್ ಗಳಿರುತ್ತವೆ, ಇವುಗಳ ಒಟ್ಟು ಮದ್ಯ 7 ಲೀಟರ್ 920 ಎಂ.ಎಲ್. ಆಗಿದ್ದು, ಒಟ್ಟು ಮೌಲ್ಯ 3,817/- ರೂಪಾಯಿಗಳಾಗಿರುತ್ತೆ. 2ನೇ ಬಾಕ್ಸ್ ನಲ್ಲಿ ಪರಿಶೀಲಿಸಲಾಗಿ KING FISHER STORNG PREMEUM BEER ನ 650 ಎಂ.ಎಲ್.ನ 12 ಬಾಟಲ್ ಗಳಿದ್ದು, ಒಟ್ಟು ಮದ್ಯ 7 ಲೀಟರ್ 920 ಎಂ.ಎಲ್. ಆಗಿದ್ದು, ಒಟ್ಟು ಮೌಲ್ಯ 1,800/- ರೂಪಾಯಿಗಳಾಗಿರುತ್ತೆ, ನಂತರ 3ನೇ ಬಾಕ್ಸ್ ನಲ್ಲಿ ಪರಿಶೀಲಿಸಲಾಗಿ KING FISHER STORNG PREMEUM BEER ನ 650 ಎಂ.ಎಲ್.ನ 12 ಬಾಟಲ್ ಗಳಿದ್ದು, ಟ್ಟು ಮದ್ಯ 7 ಲೀಟರ್ 920 ಎಂ.ಎಲ್. ಆಗಿದ್ದು, ಒಟ್ಟು ಮೌಲ್ಯ 1,800/- ರೂಪಾಯಿಗಳಾಗಿರುತ್ತೆ, ಮೇಲ್ಕಂಡ ಮೂರು ಬಾಕ್ಸ್ ಗಳಲ್ಲಿ 23,520 ಎಂ.ಎಲ್. ಮದ್ಯವಿದ್ದು,  ಒಟ್ಟು ಮೌಲ್ಯ 7417 ರೂಪಾಯಿಗಳಾಗಿರುತ್ತೆ. ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ 12-45 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸಿದ್ದು,  ಓಡಿ ಹೋದ ಅಶೋಕ ಬಿನ್ ನಾಗರಾಜಪ್ಪ, 26 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಕೊಂಡಂವಾರಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ ವಿರುದ್ದ ಕಾನೂನಿನ ರೀತ್ಯಾ ಕ್ರಮ ಜರುಗಿಸಲು ಸೂಚಿಸಿ ನೀಡಿದ ವರದಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

5. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.39/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:04/05/2021 ರಂದು ಬೆಳಗ್ಗೆ 9:40 ಗಂಟೆಗೆ ಚೇಳೂರು ಪೊಲೀಸ್ ಠಾಣೆಯ ಪಿಎಸ್ ಐ ರವರಾದ ಪ್ರತಾಪ್ ಕೆ ಆರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:04-05-2021 ರಂದು ನಾನು ಬೆಳಗ್ಗೆ 8-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಚೇಳೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ಚೇಳೂರು ಗ್ರಾಮದ ಹೊರವಲಯದಲ್ಲಿ ಅಂದರೆ ಅಂದ್ರದ ಗುಗ್ಗಿಳ್ಳಪಲ್ಲಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುವ  ರಸ್ತೆಯಲ್ಲಿ ಯಾರೋ ಒಬ್ಬ ಮಹಿಳಾ ಅಸಾಮಿಯು ಒಂದು ಮನೆಯ ಮುಂದೆ ಸಾರ್ವಜಿನಿಕರ ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಆಕ್ರಮ ಮಧ್ಯಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಮದ್ಯಪಾನವನ್ನು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿರುತ್ತದೆ. ಅದ್ದರಿಂದ ಸದರಿ ಮಹಿಳಾ ಅಸಾಮಿಯ ಮೇಲೆ ದಾಳಿ ಮಾಡುವ ಸಲುವಾಗಿ ಠಾಣೆಯಲ್ಲಿದ್ದ ಸಿಪಿಸಿ-07 ವಿಧ್ಯಾಧರ ಮತ್ತು ಚಾಲಕನಾದ ಎಪಿಸಿ-87 ಮೋಹನ್ ಕುಮಾರ್ ಜಿ.ಎ ರವರೊಂದಿಗೆ ಮತ್ತು  ಪಂಚಾಯ್ತಿದಾರರನ್ನು ಬರಮಾಡಿಕೊಂಡು  ಸರ್ಕಾರಿ ಜೀಪ್ ಸಂಖ್ಯೆ ಕೆಎ-42 ಜಿ-0061 ರಲ್ಲಿ ಚೇಳೂರು ಗ್ರಾಮದಿಂದ ಆಂದ್ರದ ಗುಗ್ಗಿಳ್ಳಪಲ್ಲಿ ಕಡೆ ಹೋಗುವ ರಸ್ತೆಯಲ್ಲಿ ಇರುವ ಚಿಕನ್ ಆಂಗಡಿಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಮಹಿಳಾ ಆಸಾಮಿಯು ತನ್ನ ಬಳಿ ಅಕ್ರಮವಾಗಿ ಮಧ್ಯದ ಪ್ಯಾಕೆಟಗಳನ್ನು ಇಟ್ಟುಕೊಂಡು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟಗಳನ್ನು ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟಿದ್ದ ಅಸಾಮಿಯ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಸ್ಥಳದಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಅಸಾಮಿಯು ಮದ್ಯದ ಪಾಕೆಟುಗಳನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾರೆ. ಗ್ರಾಮದಲ್ಲಿ ಸದರಿ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಚೌಡಮ್ಮ ಕೊಂ ಶ್ರೀರಾಮಪ್ಪ, 50 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಚೇಳೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದು ಬಂದಿರುತ್ತದೆ. ನಂತರ ಸ್ಥಳದಲ್ಲಿ ಬಿಸಾಡಿ ಹೋಗಿದ್ದ ಮಧ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ  90 ಎಂ.ಎಲ್ ನ HAYWARDS CHEERS WHISKY ಯ 20 ಟೆಟ್ರಾ ಪ್ಯಾಕೇಟುಗಳಿದ್ದು,  ಪ್ರತಿ ಪಾಕೆಟು ಮೇಲೆ 35.13/-ರೂ ಬೆಲೆ ಇರುತ್ತದೆ. ಸದರಿ ಪಾಕೆಟುಗಳಲ್ಲಿ ಇರುವ ಮದ್ಯದ ಸಾಮರ್ಥ್ಯ 1800 ML ಇದ್ದು, ಇವುಗಳ ಒಟ್ಟು ಬೆಲೆ 702.6/- ರೂಗಳಾಗಿರುತ್ತೆ. ಸದರಿ 90 ಎಂ.ಎಲ್ ನ HAYWARDS CHEERS WHISKY ಯ 20 ಮಧ್ಯದ ಟೆಟ್ರಾ ಪ್ಯಾಕೇಟಗಳನ್ನು ಹಾಗೂ ಸದರಿ ಸ್ಥಳದಲ್ಲಿದ್ದ ಒಂದು ಲೀಟರನ ಖಾಲಿ ವಾಟರ್ ಬಾಟಲ್  ಹಾಗೂ  ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸಗಳನ್ನು  ಬೆಳಗ್ಗೆ 8-20 ಗಂಟೆಯಿಂದ 9-20 ಗಂಟೆಯವರೆಗೆ ದಾಳಿ ಮಾಡಿ ಪಂಚನಾಮೆಯ ಮೂಲಕ ಮೇಲ್ಕಂಡವುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:39/2021 ಕಲಂ 15(ಎ),32(3) ಕೆಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೇನೆ.

 

6. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.40/2021 ಕಲಂ. 32,34  ಕೆ.ಇ ಆಕ್ಟ್:-

  ದಿನಾಂಕ:04/05/2021 ರಂದು ಚೇಳೂರು ಪೊಲೀಸ್ ಠಾಣೆಯ ಸಿಬ್ಬಂದಿಯವರಾದ  ಹೆಚ್ ಸಿ 149 ಇನಾಯತ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:04-05-2021 ರಂದು ನಾನು ಈ ದಿನ ಮದ್ಯಾಹ್ನ 1-00 ಗಂಟೆಯಲ್ಲಿ ಸರ್ಕಾರಿ ದ್ವಿಚಕ್ರ ವಾಹನ  ಕೆಎ 40 ಜಿ 0662 ರಲ್ಲಿ ನಾನು ಮತ್ತು 8ನೇ ಗ್ರಾಮಗಸ್ತು ಪೇದೆಯಾದ  ಸಿಪಿಸಿ 437 ಸತೀಶ್ ರವರೊಂದಿಗೆ  ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ  ಗುಪ್ತ ಮಾಹಿತಿ ಸಂಗ್ರಹಣೆಗಾಗಿ ಪಾಳ್ಯಕೆರೆ ಗ್ರಾಮದ  ಕಡೆ ಗಸ್ತು  ಮಾಡುತ್ತಿದ್ದಾಗ ಮದ್ಯಾಹ್ನ 2:00 ಗಂಟೆ ಸಮಯದಲ್ಲಿ ಪಾಳ್ಯಕೆರೆ ಗ್ರಾಮದ ಹೊರವಲಯದ ಕೆರೆಯ ಬಳಿಯಿರುವ ಎಮ್ ಎಸ್ ಐ ಎಲ್  ಮಧ್ಯ ಮಾರಾಟ ಮಳಿಗೆಗೆ ಹೊಂದಿಕೊಂಡಿರುವ ಹೋಟಲ್ ನಲ್ಲಿ ಮಂಜುನಾಥ ಎಂಬುವರು  ತಮ್ಮ  ಹೋಟಲ್ ನಲ್ಲಿ  ಕಾನೂನು ಬಾಹಿರಷವಾಗಿ ಮಧ್ಯವನ್ನು ಮಾರಾಟ ಮಾಡಲು ಸಂಗ್ರಹಣೆ ಮಾಡಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಂಚರ ಸಮಕ್ಷಮ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ  ಸದರಿ ಎಮ್ ಎಸ್ ಐ ಎಲ್  ಮಧ್ಯ ಮಾರಾಟ ಮಳಿಗೆಯು ಲಾಕ್ ಡೌನ್ ಪ್ರಯುಕ್ತ  ಮುಚ್ಚಿದ್ದು ಸದರಿ ಮಳಿಗೆಗೆ ಹೊಂದಿಕೊಂಡಿರುವ ಹೋಟಲ್ ನಲ್ಲಿ ದ್ದ  1) 650 ML ನ KINGFISHER  PREMIUM BEER ನ 12 ಬಾಟಲ್ ಗಳಿದ್ದು  ಪ್ರತಿ ಬಾಟಲ್ ನ ಮೇಲೆ 150 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು 7800 ಎಮ್ ಎಲ್ ಯಿದ್ದು  1800 ರೂ ಗಳಾಗಿರುತ್ತೆ 2) KINGFISHER STRONG BEER ನ 14 ಬಾಟಲ್ ಗಳಿದ್ದು  ಪ್ರತಿ ಬಾಟಲ್ ಮೇಲೆ 150 ರೂ ಎಂದು ನಮೂದಿಸಿದ್ದು  ಇವುಗಳು ಒಟ್ಟು 9100 ಎಮ್ ಎಲ್ ಯಿದ್ದು 2100 ರೂ ಗಳಾಗಿರುತ್ತೆ. 3) 180 ML ನ BAGPIPER WHISKY ಕಂಪನಿಯ 65 ಟೆಟ್ರಾ ಪ್ಯಾಕೆಟ್ ಗಳಿದ್ದು ಇವುಗಳು ಒಟ್ಟು 11700 ML ಯಿದ್ದು ಪ್ರತಿ ಪ್ಯಾಕೆಟ್ ನ ಮೇಲೆ 106.23 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು 6904.95 ರೂ ಗಳಾಗಿರುತ್ತೆ. 4) 180 ML ನ OLD ADMIRAL BRANDY ಯ 19 ಟೆಟ್ರಾ ಪ್ಯಾಕೆಟ್ ಗಳಿದ್ದು ಇವುಗಳು ಒಟ್ಟು 3420 ML ಯಿದ್ದು ಪ್ರತಿ ಪ್ಯಾಕೆಟ್ ನ ಮೇಲೆ 86.75 ರೂ ಎಂದು ನಮೂದಿಸಿದ್ದು , ಒಟ್ಟು 1648.25 ರೂ ಗಳಾಗಿರುತ್ತೆ. 5) 180 ML ನ DSP BLACK WHISKY ಯ 07 ಬಾಟಲ್  ಗಳಿದ್ದು ಒಟ್ಟು 1260 ಎಮ್ ಎಲ್ ಯಿದ್ದು  ಪ್ರತಿ ಪ್ಯಾಕೆಟ್ ನ ಮೇಲೆ 175.10 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು ಬೆಲೆ 1225.07   ರೂ ಗಳಾಗಿರುತ್ತೆ. 6) 180 ಎಮ್ ಎಲ್ ನ IMPERIAL BLUE ಕಂಪನಿಯ  05 ಬಾಟಲ್ ಗಳಿದ್ದು ಪ್ರತಿ ಬಾಟಲ್ ನ ಮೇಲೆ 198.21 ಎಂದು ನಮೂದಿಸಿದ್ದು ಒಟ್ಟು 900 ಎಮ್ ಎಲ್ ಯಿದ್ದು  ಇವುಗಳು ಒಟ್ಟು 941.05 ರೂ ಗಳಾಗಿರುತ್ತೆ. 7) 180 ML ನ MC DOWELLS  WHISKY ಕಂಪನಿಯ 04 ಬಾಟಲ್ ಗಳಿದ್ದು ಒಟ್ಟು 720 ಎಮ್ ಎಲ್ ಯಿದ್ದು ಪ್ರತಿ ಬಾಟಲ್ ನ ಮೇಲೆ 198. 23  ಎಂದು ನಮೂದಿಸಿದ್ದು ಇವುಗಳು ಒಟ್ಟು 720 ಎಮ್ ಎಲ್ ಯಿದ್ದು  ಇವುಗಳ ಒಟ್ಟು ಬೆಲೆ 792.92 ರೂ ಗಳಾಗಿರುತ್ತೆ 8) 180 ML ನ  OLD TAVERN WHISKY ಕಂಪನಿಯ 28   ಟೆಟ್ರಾ ಪಾಕೆಟ್ ಗಳಿದ್ದು ಒಟ್ಟು 5040  ಎಮ್ ಎಲ್ ಯಿದ್ದು   ಪ್ರತಿಯೊಂದು ಟೆಟ್ರಾ ಪಾಕೆಟ್ ಮೇಲೆ 86.75  ರೂ ಎಂದು ಇದ್ದು ಇವುಗಳ ಬೆಲೆ  ರೂ 2429 ರೂ ಆಗುತ್ತದೆ. 9)  90 ಎಂ.ಎಲ್ ಸಾಮರ್ಥ್ಯದ  HAYWARDS CHEERS whisky 66 ಟೆಟ್ರಾ ಪಾಕೆಟ್ ಗಳಿದ್ದು, ಪ್ರತಿಯೊಂದು ಟೆಟ್ರಾ ಪಾಕೆಟ್ ಮೇಲೆ 35.13 ರೂ ಎಂದು ಬೆಲೆ ಇದ್ದು ಇವುಗಳ ಒಟ್ಟು ಬೆಲೆ 2318.58 ರೂಗಳಾಗುತ್ತದೆ. ಮೇಲ್ಕಂಡ ಎಲ್ಲಾ ಮದ್ಯದ ವಸ್ತುಗಳು ಒಟ್ಟು 45,880 ಎಮ್ ಎಲ್ ಯಿದ್ದು ಒಟ್ಟು ಬೆಲೆ 20,159.82 ರೂಗಳಾಗಿರುತ್ತೆ. ಎಫ್.ಎಸ್.ಎಲ್ ಪರೀಕ್ಷೆಗೆ ಕಳುಹಿಸಿಕೊಡುವ ಸಲುವಾಗಿ ಮೇಲ್ಕಂಡ ಎಲ್ಲಾ ಮಧ್ಯದ ಟೆಟ್ರಾ ಪಾಕೆಟ್ ಗಳು ಮತ್ತು ಬಾಟಲ್ ಗಳ ಪೈಕಿ ತಲಾ ಒಂದೊಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಣ್ಣದ ಬಟ್ಟೆಯ ಚೀಲದಲ್ಲಿ ಇಟ್ಟು ಮೂತಿಯನ್ನು ದಾರದಿಂದ ಕಟ್ಟಿ “D’’ಎಂಬ ಆಂಗ್ಲಭಾಷೆಯ ಅಕ್ಷರದಿಂದ ಸೀಲ್ ಮಾಡಿರುತ್ತದೆ. ಮೇಲ್ಕಂಡ ಎಲ್ಲಾ ಮದ್ಯದ ವಸ್ತುಗಳನ್ನು ಹಾಗೂ ಮಾದರಿ ವಸ್ತುಗಳನ್ನು ಮದ್ಯಾಹ್ನ 2:15 ರಿಂದ  ಮದ್ಯಾಹ್ನ 3:45 ಗಂಟೆಯವರೆಗೂ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಸದರಿ ಹೋಟಲ್  ಬಳಿ ಇದ್ದ ಸಾರ್ವಜನಿಕರನ್ನು ಸದರಿ ಹೋಟಲ್  ಮಾಲೀಕರ ಹೆಸರು ವಿಳಾಸ ಕೇಳಲಾಗಿ  ಮಂಜುನಾಥ್ ಬಿನ್  ನರಸಿಂಹಪ್ಪ, 36 ವರ್ಷ, ಆದಿ ಕರ್ನಾಟಕ ಜನಾಂಗ, ಗೊಲ್ಲಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಫೋ ನಂ:9591803358 ಎಂದು ತಿಳಿಸಿರುತ್ತಾರೆ.   ಸದರಿ ಆಸಾಮಿಯು ಹೋಟಲ್ ನಲ್ಲಿಲ್ಲದೇ  ಎಲ್ಲಿಗೂ ಹೊರಟು ಹೋಗಿದ್ದು ಆತನು ಸಾರ್ವಜನಿಕರಿಗೆ ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ ಹೋಟಲ್ ನಲ್ಲಿ  ಮಧ್ಯವನ್ನು ದಾಸ್ತಾನು ಮಾಡಿರುವುದಾಗಿ  ಮೇಲ್ಕಂಡ ಮದ್ಯದ ವಸ್ತುಗಳು ಮತ್ತು ಪಂಚನಾಮೆಯೊಂದಿಗೆ ಸಂಜೆ  4-30 ಗಂಟೆಗೆ ಠಾಣೆಗೆ ಬಂದು ವರದಿಯೊಂದಿಗೆ ಅಸಲು ಪಂಚನಾಮೆಯನ್ನು ಮತ್ತು ಮಾಲನ್ನು ನೀಡುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ಮದ್ಯವನ್ನು ಅಕ್ರಮವಾಗಿ ಹೋಟಲ್ ನಲ್ಲಿ  ದಾಸ್ತಾನು ಮಾಡಿರುವ ಮೇಲ್ಕಂಡ ಆಸಾಮಿಯ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:40/2021 ಕಲಂ 32,34 ಕೆಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

7. ಸಿ.ಇ.ಎನ್ ಪೊಲೀಸ್‌ ಠಾಣೆ ಮೊ.ಸಂ.29/2021 ಕಲಂ. 419,420 ಐ.ಪಿ.ಸಿ & 66(D),66(C) (INFORMATION TECHNOLOGY ACT 2008:-

     ದಿನಾಂಕ:5/5/2021 ರಂದು ಪಿರ್ಯಾಧಿ ಕೃಷ್ಣ ಎಂ ಆರ್ ಬಿನ್ ರಾಮಕೃಷ್ಣಪ್ಪ, 29 ವರ್ಷ, ಒಕ್ಕಲಿಗರು, ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ ಮಾರಪ್ಪನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, ಮೊ ಸಂಖ್ಯೆ: 8749099632. ರವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನೆಂದರೆ  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಿದ್ದು ಖಾಸಗಿ ಕಂಪನಿಯಲ್ಲಿ ಕೆಲಸವನ್ನು ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಾನು ಎಸ್ ಗೊಲ್ಲಹಳ್ಳಿ ಎಸ್ ಬಿ ಐ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ಖಾತೆ ನಂ:30300855168 ಆಗಿದ್ದು. ಈ ಖಾತೆಗೆ ನನ್ನ ಮೇಲ್ಕಂಡ ಮೊಬೈಲ್ ನಂಬರ್ ಲಿಂಕ್ ಮಾಡಿಕೊಂಡು ಇದರಲ್ಲಿ ಪೋನ್ ಫೇ ವ್ಯಾಲೆಟ್ ಬಳಸುತ್ತಿರುತೇನೆ. ಈಗಿರುವಲ್ಲಿ ದಿನಾಂಕ:2/5/2021 ರಂಧು ಬೆಂಗಳೂರಿನಿಂದ ಊರಿಗೆ ಬರಲು ದೇವನಹಳ್ಳಿವರಿಗೆ ಬಸ್ಸಿನಲ್ಲಿ ಬಂದೆ. ಆದರೆ ದೇವನಹಳ್ಳಿಯಿಂದ  ಚಿಕ್ಕಬಳ್ಳಾಪುರಕ್ಕೆ ಬಸ್ಸ್  ಇಲ್ಲದ ಕಾರಣ ನಾನು ಆಟೋದಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದು  & ನಮ್ಮೂರಿಗೆ  ಬಂದಿದ್ದು, ಅದರ ಭಾಡಿಗೆ ಮೊತ್ತವನ್ನು ನಾನು ಆಟೋದಲ್ಲಿದ್ದ ಕ್ಯೋ ಆರ್ ಕೋಡ್ ಸ್ಕ್ಯಾನ್ ಮಾಡಿ, ಬಾಡಿಗೆ ಹಣವನ್ನು ಸಂದಾಯ ಮಾಡಿದ್ದು, ಸದರಿ ಹಣ ನನ್ನ ಖಾತೆಯಲ್ಲಿ ಕಟಾವು ಆಗಿದ್ದು, ಆಟೋ ಚಾಲಕನ ಖಾತೆಗೆ  ಜಮೇ ಆಗದ ಕಾರಣ ನಾನು ವಿಚಾರಣೆ ಮಾಡಲು ಗೂಗಲ್ ನಲ್ಲಿ  ಸರ್ಚ ಮಾಡಿ ಪೋನ್ ಫೇ ಕಸ್ಟಮರ್ ಸರ್ವೀಸ್  ಮೊ ಸಂಖ್ಯೆ: 9339571825 ನ್ನು ಹುಡಕಿ ನಂತರ ಕರೆ ಮಾಡಲಾಗಿ ಅವರು ನಿಮ್ಮ ಹಣ 500 ರೂಗಳು ರೀಫಂಡ್ ಆಗುತ್ತದೆ. ನಾವು HI ಅಂತ SMS ಕಳುಹಿಸುತ್ತೇವೆ. ಎಂತ ಹೇಳಿ ಮೊ ಸಂಖ್ಯೆ: 6001385864 ರಿಂದ HI  ಅಂತ SMS ಕಳುಹಿಸಿದ. ನಂತರ ಮೊ ಸಂಖ್ಯೆ: 8082807669 ರಿಂದ  ಪುನಃ ಒಂದು SMS  ಕಳುಹಿಸಿದ. ಅದರಲ್ಲಿ ಒಂದು ಲಿಂಕ್ ಕಳುಹಿಸಿ, ಅದನ್ನು ಅಪ್ಡೇಟ್ ಮಾಡಿ ಕಳುಹಿಸು ಅಂತ ಹೇಳಿದ. ನಾನು ಅವನು ಕಳುಹಿಸಿದ ಲಿಂಕ್ ನ್ನು ಓಪನ್ ಮಾಡಿ ಅದರಲ್ಲಿ ಹೆಸರು, ಪೋನ್ ನಂಬರ್, ಪೋನ್ ಫೇ  ಪಾಸ್ ವರ್ಢ ನ್ನು  ಹಾಕಿದೆ.ನಂತರ ಮತ್ತೊಂದು ಕಾಲಂ ನಲ್ಲಿ 500 ರೂ,  REASAN  ಕಾಲಂ ನಲ್ಲಿ MONEY REFOUND ಅಂತ ಹಾಕಿದೆ.SUBMIT ಕೊಟ್ಟೆ. ಕೂಡಲೆ SUCECSESS FULL  ಅಂತ ಬಂತು. ಕೂಡಲೆ ನನ್ನ ಖಾತೆಯಿಂದ ಕ್ರಮವಾಗಿ 40,000/-,40,000/- & 19,000/- ರೂಗಳು ಒಟ್ಟು 99,000/- ರೂಗಳು ಕಟಾವು ಆಗಿರುವ ಬಗ್ಗೆ ಸಂದೇಶಗಳು ಬಂದಿರುತ್ತವೆ.ಸದರಿ ನನಗೆ PHONEPAY ಕಸ್ಟಮರ್ ಕೇರ್ ಅಂತ ನಂಬಿಸಿ, ಮೇಲ್ಕಂಡ ಮೊಬೈಲ್ ಸಂಖ್ಯೆಗಳು & ಈ ಮೊ ಸಂಖ್ಯೆಗಳಾದ 9365913538,6001385864 & 6289788605 ನಂಬರ್ ಗಳಿಂದ ಕರೆ ಮಾಡಿ ನನ್ನ ಖಾತೆಯಲ್ಲಿದ್ದ 99,000/- ರೂಗಳನ್ನು ವರ್ಗಾಯಿಸಿ ಕೊಂಡು ವಂಚಿಸಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ, ನಮ್ಮ ಹಣವನ್ನು ವಾಪಸ್ಸು ಕೊಡಿಸಿ ಕೊಡಬೇಕಾಗಿ ಕೋರಿ  ನೀಡಿದ ದೂರು.

 

8. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.72/2021 ಕಲಂ. 420,511,34 ಐ.ಪಿ.ಸಿ:-

     ದಿನಾಂಕ: 04/05/2021 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಪಿರ್ಯಾದಿ  ಶ್ರೀ. ಕೆ.ವಿ. ಪ್ರಶಾಂತ್  ಬಿನ್  ವೆಂಕಟರಾಯಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಈ ಮೊದಲು ತಾನು ಪತ್ರಿಕಾ ವರದಿಗಾರನಾಗಿ ಕೆಲಸ ಮಾಡಿಕೊಂಡಿದ್ದು ಹಾಲಿ ರಿಯಲ್ ಎಸ್ಟೇಟ್ ವ್ಯವಹಾರ  ಮಾಡಿಕೊಂಡಿರುತ್ತೇನೆ.  ತಾನು  ಇತ್ತಿಚ್ಚಿಗೆ  ಚಿಕ್ಕಬಳ್ಳಾಪುರ ಬಾಗೇಪಲ್ಲಿ ಹೆದ್ದಾರಿಯ ಬದಿಯಲ್ಲಿ ಪೆಟ್ರೋಲ್  ಬಂಕ್ ಮಾಡಲು ಜಮೀನನ್ನು ಹುಡುಕಾಡುತ್ತಿದ್ದಾಗ ತನಗೆ 06 ತಿಂಗಳ ಹಿಂದೆ  ಚಿಕ್ಕಬಳ್ಳಾಪುರ ತಾಲ್ಲೂಕು  ಸಾಮಸೇನಹಳ್ಳಿ  ಗ್ರಾಮದ ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿಕೊಂಡಿದ್ದ ಹೊನ್ನಪ್ಪ ಬಿನ್ ಲೇಟ್ ಹೊನ್ನಪ್ಪ  ಬಲಿಜಿಗರು ಪರಿಚಯನಾಗಿದ್ದನು. ತಾನು  ಹೊನ್ನಪ್ಪನಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ  ಹೆದ್ದಾರಿ ಪಕ್ಕದಲ್ಲಿ ಪೆಟ್ರೋಲ್ ಬಂಕ್ ಮಾಡಲು ಯಾವುದಾದರೂ  ಜಮೀನು ನೋಡುವಂತೆ ಹೇಳಿದ್ದು ದಿನಾಂಕ: 04/05/2021 ರಂದು  ಬೆಳಗ್ಗೆ ಹೊನ್ನಪ್ಪ ಎಂಬುವವರು ತನ್ನನ್ನು ಪೆಟ್ರೋಲ್ ಬಂಕ್ ಗೆ  ಜಮೀನು ತೋರಿಸುವುದಾಗಿ ಹೇಳಿ ಪೆರೆಸಂದ್ರಕ್ಕೆ  ಕರೆಯಿಸಿಕೊಂಡು ತಾನು ಮತ್ತು ಹೊನ್ನಪ್ಪ ಪೆರೆಸಂದ್ರದಲ್ಲಿ ಮಾತನಾಡುತ್ತಿದ್ದಾಗ ಹೊನ್ನಪ್ಪನು ಅವರ ಊರಿಗೆ ಬನ್ನಿ ತನಗೆ ಚಿಂತಾಮಣಿ ತಾಲ್ಲೂಕು ಹೊಸಹುಡ್ಯ  ಗ್ರಾಮದ  ಮಂಜುನಾಥ ಎಂಬುವನು   ಸ್ನೇಹಿತ ನಾಗಿದ್ದು ಅವನ ಬಳಿ  ವಜ್ರದ ಕಲ್ಲು ಸಿಕ್ಕಿದೆ ಅದನ್ನು  ಯಾರಿಗಾದರೂ ಮಾರಾಟ ಮಾಡಿ ಕೊಟ್ಟರೆ  ನಿನಗೆ  ಹಣ ಕೊಡಿಸಿಕೊಡುತ್ತೇನೆಂದು ಹೇಳಿದನು.  ಅದರಂತೆ ನಾವಿಬ್ಬರು ಬೆಳಗ್ಗೆ 11-30 ಗಂಟೆಗೆ ಸಾಮಸೇನಹಳ್ಳಿ ಗ್ರಾಮಕ್ಕೆ ಬಂದೆವು.  ತಾನು ಹೊನ್ನಪ್ಪರವರ ಗುಡಿಸಲು ಮನೆಯ ಬಳಿ  ಇದ್ದಾಗ ಮದ್ಯಾಹ್ನ ಸುಮಾರು 12-00 ಗಂಟೆಗೆ  ಮಂಜುನಾಥ  ಕೆ.ಎ.41.ಬಿ.1507 ನಂಬರಿನ ಕಾರಿನಲ್ಲಿ ಒಬ್ಬ ಚಾಲಕನ ಜೊತೆ ನಾಲ್ಕು ಜನರು ಕಾರಿನಲ್ಲಿ  ಬಂದರು. ಮಂಜುನಾಥರವರು ಕಾರಿನಲ್ಲಿ ತಂದಿದ್ದ ಒಂದು ಬ್ಯಾಗಿನಲ್ಲಿದ್ದ ಕಲ್ಲನ್ನು ತೋರಿಸಿ ಇದು ಕಲ್ಲು ವಜ್ರದ ಕಲ್ಲು ಆಗಿರುತ್ತದೆ. ಈ ಕಲ್ಲು ಮಾರುಕಟ್ಟೆಯಲ್ಲಿ ಸುಮಾರು  ಆರು ಕೋಟಿ ರೂಪಾಯಿ ಬೆಲೆ ಬಾಳುತ್ತದೆ.  ಎಂದು ಹೇಳಿ ಅದರ ಮೇಲೆ ಬ್ಯಾಟರಿ ಲೈಟು ಹಾಕಿ ತೋರಿಸಿದರು. ಇದನ್ನು ನಿಮಗೆ  03 ಕೋಟಿ ರೂಪಾಯಿಗಳಿಗೆ  ಕೊಡುತ್ತೇವೆಂತ ನಂಬಿಸಿದರು. ತಾನು  ಕಲ್ಲನ್ನು ನೋಡಿದೆ. ಇದು ವಜ್ರದ ಕಲ್ಲು ಆಗಿರಲಿಲ್ಲ. ಅದಕ್ಕೆ  ಬಣ್ಣ ಹಾಕಿ ಚುಮುಕಿ ಪುಡಿಯನ್ನು ಲೇಪನ ಮಾಡಿರುವಂತೆ ಕಂಡು ಬಂದಿದ್ದು ಆಗ ತಾನು ಯೋಚನೆ ಮಾಡಿ ಇವರು ತನಗೆ ಮೋಸ ಮಾಡುವ ಉದ್ದೇಶದಿಂದ ಕಲ್ಲುನ್ನು ಮಾರಾಟ ಮಾಡಲು ಬಂದಿರುತ್ತಾರೆಂತ ತಿಳಿಯಿತು. ಆಗ ತಾನು ಅವರಿಗೆ  ಬೇರೆ ಕಡೆಗೆ ಹೋಗಿ ವ್ಯವಹಾರ ಮಾತನಾಡೋಣ ಎಂದು  ಅವರೊಂದಿಗೆ  ದೊಡ್ಡಪ್ಯಾಯಲಗುರ್ಕಿಗೆ ಗೇಟ್ ಗೆ ಮದ್ಯಾಹ್ನ 1-30 ಗಂಟೆಗೆ ಬಂದೆವು. ಮೇಲ್ಕಂಡವರು  ಮೋಸ ಮಾಡುವ ಉದ್ದೇಶದಿಂದ ತನಗೆ ತೊಂದರೆ ಮಾಡುತ್ತಾರೆಂದು ಆ ಕೂಡಲೇ ತಾನು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ.ರವರಿಗೆ ಮೊಬೈಲ್ ಮೂಲಕ ವಿಷಯ ತಿಳಿಸಿ ದೊಡ್ಡಪ್ಯಾಯಲಗುರ್ಕಿ  ಗೇಟ್ ನಲ್ಲಿದ್ದಾಗ  ಮದ್ಯಾಹ್ನ 2-00 ಗಂಟೆಯಲ್ಲಿ ಪೊಲೀಸರು ಬಂದು ಮೇಲ್ಕಂಡ  ಐದು ಜನ ಆಸಾಮಿಗಳನ್ನು ಮತ್ತು ಅವರು ಬಂದಿದ್ದ  ವಾಹನವನ್ನು ವಶಕ್ಕೆ ಪಡೆದುಕೊಂಡರು. ಮೇಲ್ಕಂಡ ಆಸಾಮಿಗಳ ತನಗೆ ಮೋಸ ಮಾಡುವ ಉದ್ದೇಶದಿಂದ ನಕಲಿ  ವಜ್ರದ ಕಲ್ಲುನ್ನು ತೋರಿಸಿ ಹಣ ಲಪಟಾಯಿಸಲು ಪ್ರಯತ್ನಿಸಿರುತ್ತಾರೆ. ಸದರಿ ಆಸಾಮಿಗಳ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ  ದೂರಿನ ಮೇರೆಗೆ  ಈ ಪ್ರ.ವ.ವರದಿ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.183/2021 ಕಲಂ. 143,147,148,323,324,504,506,149  ಐ.ಪಿ.ಸಿ:-

     ದಿನಾಂಕ: 04/05/2021 ರಂದು ರಾತ್ರಿ 9.30 ಗಂಟೆಗೆ ಶ್ರೀಮತಿ ದೇವಮ್ಮ ಕೋಂ ಸತೀಶ, 30 ವರ್ಷ, ಕೂಲಿ ಕೆಲಸ, ಬೋವಿ ಜನಾಂಗ, ವಾಸ:ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮಗೂ ಮತ್ತು ತಮ್ಮ ಗ್ರಾಮದ ವೆಂಕಟೇಶಪ್ಪ ಬಿನ್ ಲೇಟ್ ಅಲ್ಲೇ ರಾಮಪ್ಪ ರವರಿಗೆ ಹಳೇಯ ವೈಷಮವಿರುತ್ತೆ. ಹೀಗಿರುವಾಗ ದಿನಾಂಕ:03/05/2021 ರಂದು ರಾತ್ರಿ 8.00 ಗಂಟೆ ಸಮಯದಲ್ಲಿ ತನ್ನ ಅಕ್ಕನ ಮಗನಾದ ಹರೀಶ ಬಿನ್ ನಾರಾಯಣಪ್ಪರವರು ಮೇಲ್ಕಂಡ ವೆಂಕಟೇಶಪ್ಪರವರ ಮನೆಯ ಬಳಿ ಹೋಗಿದ್ದು ಆ ಸಮಯದಲ್ಲಿ ಹರೀಶ ಮತ್ತು ವೆಂಕಟೇಶಪ್ಪರವರು ಜಗಳ ಮಾಡಿಕೊಳ್ಳುತ್ತಿದ್ದು ಜಗಳವನ್ನು ಬಿಡಿಸಲು ತಾನು ಮತ್ತು ತನ್ನ ಅಕ್ಕನ ಮಗ ಸೀನ ಬಿನ್ ವೆಂಕಟಸ್ವಾಮಿ ರವರು ಅಲ್ಲಿಗೆ ಹೋಗಿದ್ದು ವೆಂಕಟೇಶಪ್ಪರವರನ್ನು ಕುರಿತು ಏಕೆ ಹರೀಶರವರ ಮೇಲೆ ಗಲಾಟೆ ಮಾಡುತ್ತಿರುವುದು ಎಂದು ಕೇಳಿದ್ದಕ್ಕೆ ವೆಂಟೇಶಪ್ಪ ಮತ್ತು ಅವರ ಕಡೆಯವರಾದ ಚಿನ್ನಮ್ಮ ಕೋಂ ವೆಂಟೇಶಪ್ಪ, ಆಂಜಪ್ಪ ಬಿನ್ ಲೇಟ್ ಈಶ್ವರಪ್ಪ, ನಾಗರಾಜ್ ಬಿನ್ ಈಶ್ವರಪ್ಪ, ಮುನಿಯಪ್ಪ ಬಿನ್ ಲೇಟ್ ಅಲ್ಲೇ ರಾಮಪ್ಪ, ಮತ್ತು ಆಂಜಪ್ಪ ಬಿನ್ ಲೇಟ್ ಅಲ್ಲೇ ರಾಮಪ್ಪ ರವರು ಅಕ್ರಮ ಗುಂಪುಕಟ್ಟಿಕೊಂಡು ತನ್ನನ್ನು ಕುರಿತು ಲೋಫರ್ ಮುಂಡೆ ಸೂಳೆ ಮುಂಡೆ ಹರೀಶನ ಪರವಾಗಿ ಬಂದು ನಮಗೆ ಎದುರು ಉತ್ತರ ಕೊಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಆ ಪೈಕಿ ಚಿನ್ನಮ್ಮ ರವರು ತನಗೆ ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದರು, ವೆಂಕಟೇಶಪ್ಪ ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ತನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿದನು, ಆಗ ತಾನು ಕಿರುಚಿಕೊಂಡಿದ್ದು ತನ್ನ ಅಕ್ಕನ ಮಗ ಸೀನ ಬಿನ್ ವೆಂಕಟಸ್ವಾಮಿರವರು ಜಗಳ ಬಿಡಿಸಲು ಬಂದಾಗ ಅಂಜಪ್ಪ, ನಾಗರಾಜ, ಆಂಜಪ್ಪ ಬಿನ್ ಈಶ್ವರಪ್ಪ ಮತ್ತು ಮುನಿಯಪರವರು ಸೀನ ರವರಿಗೆ ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದರು. ಅಷ್ಟರಲ್ಲಿ ತಮ್ಮ ಗ್ರಾಮದ ಶಿವಣ್ಣ ಮತ್ತು ತಮ್ಮ ಗ್ರಾಮಸ್ಥರು ಅಡ್ಡ ಬಂದು ಜಗಳ ಬಿಡಿಸಿದರು ಮೇಲ್ಕಂಡವರು ಅಲ್ಲಿಂದ ಹೋಗುವಾಗ ಈ ದಿನ ಉಳಿದುಕೊಂಡಿದ್ದಿರಾ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ಪ್ರಾಣಬೆದರಿಗೆ ಹಾಕಿರುತ್ತಾರೆ. ನಂತರ ಗಾಯಗೊಂಡಿದ್ದ ತಮಗೆ ಮೈಯಲ್ಲಿ ನೋವು ಜಾಸ್ತಿ ಇದ್ದರಿಂದ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿರುತ್ತೇವೆ. ಸದರಿ ಗಲಾಟೆ ಬಗ್ಗೆ ತಮ್ಮ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡೋಣ ಎಂದು ಹೇಳಿದ್ದು ಇದುವರೆಗೂ ನ್ಯಾಯ ಪಂಚಾಯ್ತಿ ಮಾಡದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

10. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.184/2021 ಕಲಂ. 143,147,323,504,506,149 ಐ.ಪಿ.ಸಿ:-

     ದಿನಾಂಕ: 05/05/2021 ರಂದು ಬೆಳಿಗ್ಗೆ 10.00 ಗಂಟೆಗೆ ಮುನಿರಾಜು ಬಿನ್ ಲೇಟ್ ವೆಂಕಟರಾಯಪ್ಪ, 32 ವರ್ಷ, ಕೂಲಿ ಕೆಲಸ, ಆದಿ ಕರ್ನಾಟಕ, ದೊಡ್ಡಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಈಗ್ಗೆ 4 ವರ್ಷದ ಹಿಂದೆ ಚಿಂತಾಮಣಿ ನಗರದ ಜೆ.ಜೆ ಕಾಲೋನಿಯ ವಾಸಿ ಮೇಘ ಬಿನ್ ಶ್ರೀನಿವಾಸ @ ಗಿತ್ತ ಸೀನಪ್ಪ ರವರ ಜೊತೆ ಮದುವೆಯಾಗಿರುತ್ತೆ. ತಮಗೆ 02 ವರ್ಷದ ಒಬ್ಬ ಹೆಣ್ಣು ಮಗಳು ಸಹ ಇರುತ್ತಾಳೆ. ತನಗೂ ಮತ್ತು ತನ್ನ ಹೆಂಡತಿ ಮೇಘ ರವರಿಗೂ ಸಂಸಾರದ ವಿಚಾರದಲ್ಲಿ ಸಣ್ಣ ಪುಟ್ಟ ಜಗಳಗಳು ಆಗುತ್ತಿದ್ದು, ದಿನಾಂಕ: 02/05/2020 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ತನಗೂ ಮತ್ತು ತನ್ನ ಹೆಂಡತಿಗೂ ಜಗಳವಾಗಿದ್ದು ಸದರಿ ವಿಚಾರವನ್ನು ತನ್ನ ಹೆಂಡತಿ ಅವರ ತಂದೆಗೆ ಹೇಳಿರುತ್ತಾಳೆ. ನಂತರ ದಿನಾಂಕ: 03/05/2021 ರಂದು ಮದ್ಯಾಹ್ನ 12.00 ಗಂಟೆ ಸಮಯದಲ್ಲಿ ತಾನು ತಮ್ಮ ಗ್ರಾಮದಲ್ಲಿ ತಮ್ಮ ಮನೆಯ ಬಳಿ ಇದ್ದಾಗ ಚಿಂತಾಮಣಿ ನಗರದ ಜೆ.ಜೆ ಕಾಲೋನಿಯ ವಾಸಿ ತನ್ನ ಮಾವನಾದ ಶ್ರೀನಿವಾಸ @ ಗಿತ್ತ ಸೀನಪ್ಪ ಮತ್ತು ಆತನ ಮಕ್ಕಳಾದ ವಂಶಿ, ಚರ್ರಿ, ಕಿರಣ್, ಸಂತೋಷ್ ಮತ್ತು ಅರ್ಜುನ್ ರವರು ಬಂದು ತನ್ನನ್ನು ಕುರಿತು “ಏನೋ ಬೋಳಿ ನನ್ನ ಮಗನೇ ನೀನು ಮೇಘ ರವರನ್ನು ಏಕೆ ಹೊಡೆದಿದ್ದು” ಎಂದು ಅವಾಶ್ಚ ಶಬ್ದಗಳಿಂದ ಬೈದು, ಆ ಪೈಕಿ ತನ್ನ ಮಾವ ಶ್ರೀನಿವಾಸ ರವರು  ಕೈ ಗಳಿಂದ ಮೈ ಮೇಲೆ ಹೊಡೆದು ಮೂಗೇಟು ಮಾಡಿದರು. ಉಳಿದವರು ಸಹ “ಈ ನನ್ನ ಮಗನನ್ನು ಈ ದಿನ ಬಿಡಬಾರದು” ಎಂದು ಎಲ್ಲರೂ ಕೈ ಗಳಿಂದ ಮೈ ಮೇಲೆ ಹೊಡೆದರು. ಅಷ್ಟರಲ್ಲಿ ತಮ್ಮ ಗ್ರಾಮದ ವಾಸಿಗಳಾದ ನರೇಂದ್ರ ಬಿನ್ ಅಮರ ಮತ್ತು ರವಿ ಬಿನ್ ಗೋವಿಂದಪ್ಪ ರವರು ಬಂದು ಜಗಳ ಬಿಡಿಸಿದರು. ಸದರಿ ಗಲಾಟೆ ಬಗ್ಗೆ ತಮ್ಮ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡೋಣವೆಂದು ಹೇಳಿದ್ದು ಇದುವರೆಗೂ ನ್ಯಾಯಪಂಚಾಯ್ತಿ ಮಾಡದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ತನ್ನ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

11. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.109/2021 ಕಲಂ. 15(A),32(3) ಕೆ.ಇ ಆಕ್ಟ್:-

     ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಮೋಹನ್ ಎನ್ ರವರು ಠಾಣೆಗೆ ಹಾಜರಾಗಿ ಮದ್ಯಾಹ್ನ 3-45 ಗಂಟೆಗೆ ನೀಡಿದ ದೂರಿನ ಸಾರಾಂಶವೇನೆಂದರೆ . ದಿನಾಂಕ 10/04/2021 ರಂದು ಈ ದಿನ ದಿನಾಂಕ: 10-04-2021 ರಂದು ಮದ್ಯಾನ್ಹ 12-30 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ಕಂತಾರ್ಲಹಳ್ಳಿ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಪಿಸಿ-33, ಕೃಷ್ಣಪ್ಪ, ಎಂ .ಎನ್ , ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ಕಂತಾರ್ಲಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ, ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ಮದ್ಯಾನ್ಹ 1-30 ಗಂಟೆಗೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ತನ್ನ ಅಂಗಡಿಯ ಮುಂದೆ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು ಶ್ರೀನಿವಾಸಪ್ಪ ಬಿನ್ ಈರಪ್ಪ, 50 ವರ್ಷ, ಬೋವಿ, ಚಿಲ್ಲರೆ ಅಂಗಡಿ ವ್ಯಾಪಾರ, ಕಂತಾರ್ಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ.ಎಲ್.ಸಾಮರ್ಥ್ಯದ ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಯ 19 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 1 ಲೀಟರ್ 710 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 667.47 /- ರೂ.ಗಳಾಗಿರುತ್ತೆ. ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ ಹೈವಾರ್ಡ್ಸ್ ಚೀರ್ಸ್ ವಿಸ್ಕಿ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಮದ್ಯಾನ್ಹ 1-45 ಗಂಟೆಯಿಂದ 2-15 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 90 ಎಂ.ಎಲ್.ಸಾಮರ್ಥ್ಯದ ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಯ 19 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಯ 4 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 3-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಎನ್. ಸಿ. ಆರ್ ದಾಖಲಿಸಿರುತ್ತೆ.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.143/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 04-05-2021 ರಂದು ಮದ್ಯಾಹ್ನ 2-00  ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 04-05-2021 ರಂದು ಠಾಣಾಧಿಕಾರಿಗಳು ತನಗೆ ಮತ್ತು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಪಿಸಿ-14 ಗೋವಿಂದಪ್ಪ ರವರಿಗೆ  ಗ್ರಾಮಗಳ ಗಸ್ತು  ಕರ್ತವ್ಯಕ್ಕೆ  ನೇಮಿಸಿದ್ದು ಅದರಂತೆ ತಾವು  ಹನುಮಂತಪುರ, ಚೀಮನಹಳ್ಳಿ, ವರದನಾಯಕನಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ಅಬ್ಲೂಡು ಗ್ರಾಮದ ಕಡೆ ಹೋಗಲು ಗುಡಿಹಳ್ಳಿ  ಗೇಟ್ ನಲ್ಲಿದ್ದಾಗ ಬಾತ್ಮಿದಾರರಿಂದ ಅಬ್ಲೂಡು ಗ್ರಾಮದ ಪಶು ಚಿಕಿತ್ಸಾಲಯದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು  ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಅಬ್ಲುಡು ಗ್ರಾಮದ ಪಶು ಚಿಕಿತ್ಸಾಲಯ ಮುಂಭಾಗ ಸಮೀಪ ಹೋದಾಗ ಇಬ್ಬರು ಅಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ತಮ್ಮನ್ನು  ನೋಡಿ ಸದರಿ ಆಸಾಮಿಗಳು ತಮ್ಮ ಬಳಿ ಇದ್ದ  ಒಂದು ಪ್ಲಾಸ್ಟಿಕ್ ಚೀಲವನ್ನು ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ತಾವು ಸದರಿ ಅಸಾಮಿಗಳನ್ನು ಹಿಂಬಾಲಿಸಿಕೊಂಡು ಹೋಗಿ ಇಬ್ಬರನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1] ಮುನಿರಾಜು ಬಿನ್ ನಾಗಪ್ಪ, ಸುಮಾರು 28 ವರ್ಷ, ಪದ್ಮಶಾಲಿ ಜನಾಂಗ, ರೇಷ್ಮೇ ಕೆಲಸ, ವಾಸ: ಹನುಮಂತಪುರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು 2]  ತನ್ವೀರ್ ಬಿನ್ ಖಲೀಮ್, ಸುಮಾರು 20 ವರ್ಷ, ಮುಸ್ಲಿಂ ಜನಾಂಗ, ರೇಷ್ಮೇ ಕೆಲಸ,ವಾಸ:ಹನುಮಂತಪುರ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂಬುದಾಗಿ ತಿಳಿಸಿರುತ್ತಾರೆ ಸದರಿ ಆಸಾಮಿಗಳ ಬಳಿ ಇದ್ದ ಒಂದ ಬಟ್ಟೆಯ ಬ್ಯಾಗ್ ಅನ್ನು  ಪರಿಶೀಲಿಸಲಾಗಿ 90 ಎಂ.ಎಲ್. ನ  10 ORIGINAL CHOICE DELUXE WHISKY ಟೆಟ್ರಾ ಪ್ಯಾಕೆಟ್ ಗಳಿದ್ದು, ಸದರಿ  ಸ್ಥಳದಲ್ಲಿ ಬಿದ್ದಿದ್ದ ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು ಗಳು ಮತ್ತು 4  ಖಾಲಿ ವಾಟರ್ ಪಾಕೇಟ್ ಗಳನ್ನು ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮದ್ಯಾಹ್ನ 2-00 ಗಂಟೆಯಲ್ಲಿ ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿರುತ್ತೇವೆ. ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ಮುನಿರಾಜು ಬಿನ್ ನಾಗಪ್ಪ ಮತ್ತು ತನ್ವೀರ್ ಬಿನ್ ಖಲೀಮ್  ರವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ  ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ. 143/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

Last Updated: 05-05-2021 06:25 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080