ಅಭಿಪ್ರಾಯ / ಸಲಹೆಗಳು

 

1. ಚೇಳೂರು ಪೊಲೀಸ್ ಠಾಣೆ ಮೊ.ಸಂ.19/2021 ಕಲಂ. ಮನುಷ್ಯ ಕಾಣೆ:-

          ದಿನಾಂಕ:05/04/2021 ರಂದು ಮದ್ಯಾಹ್ನ 12:00 ಗಂಟೆಗೆ ಪಿರ್ಯಾಧಿದಾರರಾದ ಕಮಲಮ್ಮ ರವರು ಠಾಣೆಗೆ  ಹಾಜರಾಗಿ ನೀಡಿದ  ಮುದ್ರಿತ ದೂರಿನ ಸಾರಾಂಶವೇನೆಂದರೆ  ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಮಗೆ ಇಬ್ಬರು ಮಕ್ಕಳಿದ್ದು 1ನೇ ಅಜಯ್ ನಾಯಕ. ಬಿ  (19 ವರ್ಷ) 2ನೇ ವಿಜಯ್ ನಾಯಕ (16 ವರ್ಷ) ರವರಾಗಿರುತ್ತಾರೆ. ನನ್ನ ಹಿರಿಯ ಮಗನಾದ ಅಜಯ್ ನಾಯಕ್ ರವರು ಬಾಗೇಪಲ್ಲಿಯ ವಿಕಾಸ್ ಕಾಲೇಜಿನಲ್ಲಿ ದ್ವೀತೀಯ  ವರ್ಷದ ಬಿ ಕಾಂ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದನು. ನನ್ನ ಕಿರಿಯ ತಮ್ಮನಾದ ಗಿರೀಶ್ ನಾಯಕ್ ರವರು ಗೌರಿಬಿದನೂರಿನ  ಬೆಸ್ಕಾಮ್ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದು ದಿನಾಂಕ:26/03/2021 ರಂದು  ನನಗೆ ಫೋನ್ ಮಾಡಿ ಆತನ ಹೆಂಡತಿ ಗೀತಾ ರವರು ಆಕೆಯ ತಾಯಿಯನ್ನು ನೋಡಿಕೊಂಡು ಬರಲು ಮುಂಬೈ ಗೆ ಹೋಗಿದ್ದು ನಿನ್ನ ಮಗ ಅಜಯ್ ನಾಯ್ಕ್ ರವರನ್ನು ಗೀತಾಳನ್ನು ಕರೆದುಕೊಂಡು ಬರಲು ಕಳಿಸುವಂತೆ ಕೇಳಿದ್ದು ಅದರಂತೆ ನಾನು ನನ್ನ ಮಗನನ್ನು ಒಪ್ಪಿಸಿದ್ದು ನನ್ನ ಮಗ ಅಜಯ್ ನಾಯಕ ರವರು ದಿನಾಂಕ:28/03/2021 ರಂದು ಬೆಳಗ್ಗೆ 7:30 ಗಂಟೆಗೆ ಮನೆಯಿಂದ ಹೋಗಿದ್ದು  ದಿನಾಂಕ:29/03/2021 ರಂದು ಮುಂಬೈಗೆ ಹೋಗಿರುವುದಾಗಿ ನನಗೆ ಫೋನ್ ಮಾಡಿರುತ್ತಾನೆ ನಂತರ ದಿನಾಂಕ:31/03/2021 ರಂದು ಬೆಳಗ್ಗೆ 6:00 ಗಂಟೆಯಲ್ಲಿ ನನಗೆ ಫೋನ್ ಮಾಡಿ ನಾನು  ಮತ್ತು ಗೀತಾ ರವರು ಬೆಂಗಳೂರಿಗೆ  ಟ್ರೈನ್ ಹತ್ತಿದ್ದು ಬರುತ್ತಿರುವುದಾಗಿ ಫೊನ್ ಮಾಡಿ ತಿಳಿಸಿರುತ್ತಾರೆ. ಆದರೆ ಇಲ್ಲಿಯವರೆಗೂ ಅವರು ಮನೆಗೆ ಬಂದಿರುವುದಿಲ್ಲ ಹಾಗೂ ನನ್ನ ಮಗನ ಫೋನ್ ನಂಬರ್ 9353664128, 9353794828 ನಂಬರ್ ಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತಿದ್ದು ನನ್ನ ತಮ್ಮ ಗಿರೀಶ್ ರವರಿಗೆ ಫೋನ್ ಮಾಡಿ ವಿಚಾರಿಸಿದ್ದು ಅವನೂ ಸಹ ಗೀತಾ ಮತ್ತು ಅಜಯ್ ಮನೆಗೆ ಬಂದಿಲ್ಲವೆಂದು ತಿಳಿಸಿರುತ್ತಾನೆ.  ನಾವುಗಳು ಸಂಬಂಧಿಕರ ಮನೆಗಳಲ್ಲಿ ಪರಿಚಯಸ್ಥರ ಮನೆಗಳಲ್ಲಿ ಹುಡುಕಾಡಿದರೂ  ಪತ್ತೆಯಾಗಿರುವುದಿಲ್ಲ.  ನನ್ನ ಮಗ ಕಾಣೆಯಾಗಿರುವ ಬಗ್ಗೆ ಮುಂಬೈ ಯಲ್ಲಿರುವ  ಗೀತಾ ರವರ ತಾಯಿ  ಹೇಮಲಮ್ಮ(55 ವರ್ಷ) ಫೋ ನಂ:9833344618 ಮತ್ತು ಅವರ  ಅಳಿಯ ರಮೇಶ್(40 ವರ್ಷ) ರವರ ಮೇಲೆ ಅನುಮಾನವಿರುತ್ತೆ ಎಂದು ದಿನಾಂಕ:05/04/2021 ರಂದು ಮದ್ಯಾಹ್ನ 12:00 ಗಂಟೆಗೆ ಠಾಣೆಗೆ ತಡವಾಗಿ ಹಾಜರಾಗಿ ಕಾಣೆಯಾಗಿರುವ ತನ್ನ ಮಗನಾದ ಅಜಯ್ ನಾಯ್ಕ್ ರವರನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:19/2021 ಕಲಂ ಮನುಷ್ಯ ಕಾಣೆ ರೀತ್ಯ ಪ್ರಕರಣ ದಾಖಲಿಸಿರುತ್ತೇನೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.140/2021 ಕಲಂ. 323,324,504,506,34 ಐ.ಪಿ.ಸಿ:-

          ದಿನಾಂಕ: 04/04/2021 ರಂದು ಸಂಜೆ 7.30 ಗಂಟೆಗೆ ಎಂ.ರವಿ ಬಿನ್ ಮುನಿಶಾಮಿ, 34 ವರ್ಷ, ಭೋವಿ ಜನಾಂಗ, ಗಾರೆಕೆಲಸ, ಮುಂತಕದಿರೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 04/04/2021 ರಂದು ಸಂಜೆ 5.00 ಗಂಟೆಯಲ್ಲಿ ತಾನು ತಮ್ಮ ಮನೆಯ ಬಳಿ ಇದ್ದಾಗ ತಮ್ಮ ಗ್ರಾಮದ ವಾಸಿಗಳಾದ ರಾಧಾಕೃಷ್ಣ ಬಿನ್ ನಾಗಪ್ಪ, ಭಾಗ್ಯಮ್ಮ ಕೋಂ ರಾಧಾಕೃಷ್ಣ ಮತ್ತು ಸುನಿಲ್ ಬಿನ್ ರಾಧಾಕೃಷ್ಣ ರವರುಗಳು ಒಬ್ಬರನ್ನೊಬ್ಬರು ಬೈಯ್ದುಕೊಳ್ಳುತ್ತಿದ್ದಾಗ, ತಾನು ಅವರನ್ನು ಕುರಿತು ನಮ್ಮ ಮನೆಯ ಬಳಿ ಏಕೆ ವಿನಾಕಾರಣ ಜಗಳ ಮಾಡಿಕೊಳ್ಳುತ್ತಿದ್ದೀರಾ ಇಲ್ಲಿಂದ ಹೋಗಿ ಎಂದು ತಿಳಿಸಿದಾಗ ಮೇಲ್ಕಂಡವರು ತನ್ನ ಮೇಲೆ ಜಗಳ ತೆಗೆದು “ಏನೋ ಬೋಳಿ ನನ್ನ ಮಗನೆ ನಿಮ್ಮ ಮನೆಯ ಮುಂದೆ ಬೈದುಕೊಂಡರೆ ನಿನಗೇನೋ, ನಾವೇನಾದರೂ ನಿನ್ನನ್ನು ಬೈಯುತ್ತಿದ್ದೀವಾ” ಎಂದು ಅವಾಚ್ಯ ಶಬ್ದಗಳಿಂದ ಬೈದು ಆ ಪೈಕಿ ಸುನಿಲ್ ದೊಣ್ಣೆಯಿಂದ ತನ್ನ ಬಲಕಿವಿಯ ಮೇಲ್ಭಾಗದಲ್ಲಿ ಹೊಡೆದು ರಕ್ತ ಗಾಯಪಡಿಸಿರುತ್ತಾನೆ. ರಾಧಾಕೃಷ್ಣ ತನ್ನನ್ನು ಹಿಡಿದುಕೊಂಡಾಗ ಭಾಗ್ಯಮ್ಮ ಕಲ್ಲಿನಿಂದ ತನ್ನ ಬೆನ್ನಿನ ಮೇಲೆ ಹೊಡೆದು ರಕ್ತಗಾಯಪಡಿಸಿ ತನ್ನನ್ನು ಕೆಳಕ್ಕೆ ತಳ್ಳಿದಾಗ ತನ್ನ ಮೈ-ಕೈಗೆ ತರಚಿದ ಗಾಯಗಳು ಆಗಿರುತ್ತೆ. ನಂತರ ಮೂರು ಜನರು ಸೇರಿ ಕೈಗಳಿಂದ ತನ್ನ ಮೈ ಕೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿ ತನ್ನನ್ನು ಕುರಿತು ಇವತ್ತು ತಪ್ಪಿಸಿಕೊಂಡಿದ್ದೀಯಾ ನಿನ್ನನ್ನು ಮುಗಿಸುವವರೆಗೆ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿದರು. ಆಗ ತಮ್ಮ ಗ್ರಾಮದ ವೆಂಕಟಾಚಲಪತಿ ಬಿನ್ ನಾರಾಯಣಸ್ವಾಮಿ ಮತ್ತು ಮನೋಜ್ ಬಿನ್ ಕೃಷ್ಣಪ್ಪ ರವರು ಅಡ್ಡ ಬಂದು ಜಗಳವನ್ನು ಬಿಡಿಸಿರುತ್ತಾರೆ. ನಂತರ ಗಾಯಗೊಂಡಿದ್ದ ತಾನು ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆದು ಠಾಣೆಗೆ ಹಾಜರಾಗಿ ದೂರು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.82/2021 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ 05/04/2021  ರಂದು ರಾತ್ರಿ 12-30 ಗಂಟೆಗೆ ಪಿರ್ಯಾದಿದಾರರಾದ  ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಎನ್. ರಾಜಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಎನ್. ರಾಜಣ್ಣ ರವರು ಮತ್ತು ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40-ಜಿ-270 ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ, ಡಿ.ಪಾಳ್ಯ, ನಾಮಗೊಂಡ್ಲು, ಹುದಗೂರು ಇತ್ಯಾದಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ರಾತ್ರಿ 9-45 ಗಂಟೆಗೆ ಡಿ.ಪಾಳ್ಯ ಕ್ರಾಸಿಗೆ ಬಂದು ಗಸ್ತಿನಲ್ಲಿದ್ದಾಗ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಯಾರೋ ಒಬ್ಬ ಆಸಾಮಿ ಮುದಲೋಡು ಗ್ರಾಮದ ಕಡೆಯಿಂದ ಕಾನೂನು ಬಾಹಿರವಾಗಿ ಮದ್ಯವನ್ನು ಸಂಗ್ರಹಣೆ ಮಾಡಿಕೊಂಡು ಮಾರಾಟ ಮಾಡಲು ದ್ವಿಚಕ್ರ ವಾಹನದಲ್ಲಿ ಸಾಗಾಣಿಕೆ ಮಾಡಿಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಂಚರನ್ನು ಕರೆದುಕೊಂಡು ರಾತ್ರಿ 10-15 ಗಂಟೆ ಸಮಯದಲ್ಲಿ ಮುದಲೋಡು ಗ್ರಾಮದ ಕಡೆಗೆ ಹೋಗಲು ನಕ್ಕಲಹಳ್ಳಿ-ಮುದಲೋಡು ರಸ್ತೆಯ ಪಕ್ಕದಲ್ಲಿರುವ ನಾರಪರೆಡ್ಡಿ ರವರ ಮನೆಯ ಬಳಿ ಹತ್ತಿರ ಹೋದಾಗ ಯಾರೋ ಒಬ್ಬ ಆಸಾಮಿ ಮುದಲೋಡು ಗ್ರಾಮದ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಮದ್ಯವನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿದವನು ಜೀಪನ್ನು ನೋಡಿ ಸದರಿ ಆಸಾಮಿ ವಾಹನವನ್ನು ರಸ್ತೆಯಲ್ಲಿ ಬಿಟ್ಟು ಓಡಿ ಹೋದನು. ನಂತರ ಪಂಚರ ಸಮಕ್ಷಮ ಸದರಿ ವಾಹನವನ್ನು ಪರಿಶೀಲನೆ ಮಾಡಲಾಗಿ ಇದು ಕೆಎ-07-ಇಎ-7384 ನೊಂದಣಿ ಸಂಖ್ಯೆಯ ಟಿವಿಎಸ್ ಹೆವಿಡ್ಯೂಟಿ ಆಗಿದ್ದು, ಸದರಿ ವಾಹನದಲ್ಲಿ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವಿದ್ದು, ಸದರಿ ಚೀಲವನ್ನು ಬಿಚ್ಚಿ ಪರಿಶೀಲನೆ ಮಾಡಲಾಗಿ ಮದ್ಯ ತುಂಬಿದ 6 ರೆಟ್ಟಿನ ಬಾಕ್ಸ್ ಗಳಿದ್ದು,  50 ಲೀಟರ್ 280 ಎಂ.ಎಲ್. ಸಾಮರ್ಥ್ಯದ  ಮದ್ಯವಿದ್ದು  ಒಟ್ಟು ಇದರ ಬೆಲೆ 17.329/- ರೂಗಳಾಗಿರುತ್ತೆ  ಸದರಿ ಮಾಲುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಎಲ್ಲಾ ಮಾಲುಗಳ ಪೈಕಿ ತಲಾ ಒಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು K ಎಂಬ ಅಕ್ಷರದಿಂದ ಸೀಲು ಮಾಡಿರುತ್ತೆ. ನಂತರ ಮಾಲುಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಪರಾರಿಯಾದ ಆಸಾಮಿ ಮಾಲನ್ನು ಎಲ್ಲಿಂದ ತಂದಿರುತ್ತಾನೆಂಬುದು ತಿಳಿದು ಬಂದಿರುವುದಿಲ್ಲ. ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡಲು ಮಧ್ಯವನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿದ್ದ ಕೆಎ-07-ಇಎ-7384 ವಾಹನ ಸವಾರನನ್ನು ಹಾಗೂ ಸರ್ಕಾರದ ಕಾನೂನು ಮತ್ತು ಕಾಯ್ದೆಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡಲು ಮಧ್ಯವನ್ನು ವಿತರಿಸಿರುವ ಬಾರ್ ಮಾಲೀಕರನ್ನು ಪತ್ತೆ ಮಾಡಿ ಸದರಿಯವರುಗಳ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

4. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.95/2021 ಕಲಂ. 279 ಐ.ಪಿ.ಸಿ:-

          ದಿನಾಂಕ: 05-04-2021 ರಂದು ಬೆಳಿಗ್ಗೆ 11.30 ಗಂಟೆಯಲ್ಲಿ ಫಿರ್ಯಾದಿದಾರರಾದ ಮನು ಹೆಚ್ ಬಿನ್ ಹುಚ್ಚಯ್ಯ, 30 ವರ್ಷ, ಪ.ಜಾತಿ, ಚಾಲಕ ವೃತ್ತಿ, ತಿರುಮಲಸಾಗರ ಛತ್ರ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ನಂ. ಕೆಎ-03-ಎಇ-7809 ಮಾರುತಿ ಎರ್ಟಿಗಾ ಕಾರನ್ನು ಕೊಂಡುಕೊಂಡಿದ್ದು, ಸದರಿ ಕಾರನ್ನು ಓಲಾ ಮತ್ತು ಊಬರ್ ಕಂಪನಿಗೆ ಅಟ್ಯಾಚ್ ಮಾಡಿ ಬಾಡಿಗೆಗೆ ಹೋಗುತ್ತಿದ್ದು ಸದರಿ ಕಾರನ್ನು ತಾನೆ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ. ಹೀಗಿದ್ದು ಈ ದಿನ ದಿನಾಂಕ: 03-04-2021 ರಂದು ಬೆಂಗಳೂರು ಕೆ.ಆರ್. ಪುರಂ ನಿಂದ ಚಿಂತಾಮಣಿಗೆ ಬಾಡಿಗೆಗೆ ಬಂದಿದ್ದು ತಾನು ನನ್ನ ಕಾರಿನಲ್ಲಿ ಅಮ್ಜದ್ ಬಿನ್ ಮುಸ್ತಫಾ, ಆವಲಹಳ್ಳಿ ಬೆಂಗಳೂರು ರವರನ್ನು ಚಿಂತಾಮಣಿಗೆ ಬಾಡಿಗೆ ಕರೆದುಕೊಂಡು ಹೋಗುವ ಸಲುವಾಗಿ ಹೊಸಕೋಟೆ ಹೆಚ್.ಕ್ರಾಸ್ ಮಾರ್ಗವಾಗಿ ಹೋಗುತ್ತಿದ್ದಾಗ ಹೆಚ್.ಕ್ರಾಸ್ ನ ಸರ್ಕಲ್ ಸಮೀಪ ಹಂಪ್ಸ್ ಬಳಿ ಬೆಳಿಗ್ಗೆ 11.30 ಗಂಟೆಯಲ್ಲಿ ತಾನು ತನ್ನ ಕಾರನ್ನು ನಿದಾನವಾಗಿ ಚಾಲನೆ ಮಾಡಿದಾಗ ತನ್ನ ಹಿಂಭಾಗ ಬರುತ್ತಿದ್ದ ನಂ. ಕೆಎ-04-ಎಂ.ಎಕ್ಸ್-6037 ಮಾರುತಿ ಸ್ವಿಪ್ಟ್ ಕಾರನ್ನು ಅದರ ಚಾಲಕನಾದ ಎಂ. ಭರತ್ ಬಿನ್ ಮುನಿರಾಜು ಎಂಬುವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ತನ್ನ ವಾಹನದ ಹಿಂಭಾಗ ಡಿಕ್ಕಿ ಹೊಡೆಸಿದ ಪರಿಣಾಮ ತನ್ನ ಬಾಬತ್ತು ನಂ. ಕೆಎ-03-ಎಇ-7809 ಮಾರುತಿ ಎರ್ಟಿಗಾ ಕಾರಿನ ಹಿಂಭಾಗ ಹಾಗೂ ಅಪಘಾತವನ್ನು ಉಂಟುಮಾಡಿದ ನಂ. ಕೆಎ-04-ಎಂ.ಎಕ್ಸ್-6037 ಮಾರುತಿ ಸ್ವಿಪ್ಟ್ ಕಾರಿನ ಮುಂಭಾಗ ಎರಡೂ ವಾಹನಗಳು ಜಖಂಗೊಂಡಿದ್ದು ವಾಹನದಲ್ಲಿದ್ದ ತನಗಾಗಲೀ, ತನ್ನ ಕಾರಿನಲ್ಲಿದ್ದವರಿಗಾಗಲೀ ಅಥವಾ ಸ್ವಿಪ್ಟ್ ಕಾರಿನ ಚಾಲಕನಿಗಾಗಲೀ ಯಾವುದೆ ರೀತಿಯ ಗಾಯಗಳು ಆಗಿರುವುದಿಲ್ಲ. ಅಪಘಾತದ ವಿಚಾರವನ್ನು ನಮ್ಮ ಮನೆಯವರಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ತನ್ನ ಕಾರಿಗೆ ಹಿಂಭಾಗದಿಂದ ಡಿಕ್ಕಿ ಹೊಡೆಸಿದ ನಂ. ಕೆಎ-04-ಎಂ.ಎಕ್ಸ್-6037 ಕಾರಿನ ಚಾಲಕನಾದ ಭರತ್ ಎಂ ಬಿನ್ ಮುನಿರಾಜು ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಮೊ.ಸಂ. 95/2021 ಕಲಂ 279 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 05-04-2021 06:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080