ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.27/2021 ಕಲಂ. 323,324,341,504,506,34  ಐ.ಪಿ.ಸಿ :-

     ದಿನಾಂಕ 04/03/2021 ರಂದು ರಾತ್ರಿ 20-15 ಗಂಟೆಗೆ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು S.V.ವೆಂಕಟರವಣ ಬಿನ್ ವೇಣುಗೋಪಾಲ 37 ವರ್ಷ ಬೋವಿ ಜನಾಂಗ,ಟ್ರ್ಯಾಕ್ಟರ್ ಚಾಲಕ ಕೆಲಸ ವಾಸ ಮಾವುಕೆರೆ ಗ್ರಾಮ ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯ ದೂರನ್ನು ಠಾಣೆಯ ಸಿಬ್ಬಂದಿ ASI ವೆಂಕಟರವಣಪ್ಪರವರು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ್ದರ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ 04/03/2021 ರಂದು ನನ್ನ ಅನಾರೋಗ್ಯದ ನಿಮ್ಮಿತ ಬಟ್ಲಹಳ್ಳಿಗೆ ಬಂದು ಮೆಡಿಕಲ್ಸ್ ಸ್ಟೋರ್ ನಲ್ಲಿ ಮಾತ್ರೆಗಳನ್ನು ತಗೆದುಕೊಂಡು ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ವಾಪಸ್ಸು ಮನೆಗೆ ಹೋಗಲು ನಮ್ಮ ಗ್ರಾಮದ ಕಂಬಾಲಪಲ್ಲಿ ವೆಂಕಟರವಣಪ್ಪ ರವರ ಮನೆಯ ಸಿಮೆಂಟ್ ರಸ್ತೆಯಲ್ಲಿ ಹೋಗುತ್ತಿರುವಾಗ ನಮ್ಮ ಗ್ರಾಮದ ವಾಸಿ ಚಿಕ್ಕರೆಡ್ಡಪ್ಪ @ ಬಕ್ಕೋಡು ಬಿನ್ ಮುನಿಸ್ವಾಮಿ ಮತ್ತು ಆತನ ಹೆಂಡತಿ ಸರಸ್ವತಮ್ಮ ರವರು ಏಕಾಏಕಿಯಾಗಿ ನನ್ನನ್ನು ಅಡ್ಡಗಟ್ಟಿ ಚಿಕ್ಕರೆಡ್ಡಪ್ಪ ಏನೋ ಲೋಪರ್ ನನ್ನ ಮಗನೇ ನಿನ್ನಮ್ಮನ್ನ ನಾನು ದೆಂಗ ನಿಮ್ಮ ನಾಯಿ ನಮ್ಮ ಕೋಳಿಗಳನ್ನು ಸಾಯಿಸಿಬಿಟ್ಟಿದೆ ನೀನು ಏನು ಮಾಡುತ್ತಾ ಇದ್ದೆ ನಿಮ್ಮ ನಾಯಿಯನ್ನು ಕಟ್ಟಿಹಾಕಿಕೊಳ್ಳಬೇಕಾಗಿತ್ತು ಎಂದು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ಎಡತಲೆಗೆ,ಎಡಕಣ್ಣಿನ ಮೇಲೆ,ಗಡ್ಡದ ಕೆಳಗೆ ಗುದ್ದಿ ರಕ್ತಗಾಯಪಡಿಸಿ ಕೆಳಕ್ಕೆ ತಳ್ಳಿ ಕಾಲುಗಳಿಂದ ಎದೆಗೆ ಮತ್ತು ನನ್ನ ಎಡಕಾಲಿಗೆ ಒದ್ದು ಮೂಗೇಟುಗಳುಂಟು ಮಾಡಿ ನನ್ನ ಕೋಳಿ ಸತ್ತಂತೆ ನಿನ್ನನ್ನು ಸಹ ಸಾಯಿಸಿಬಿಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿದ. ಸರಸ್ವತಮ್ಮ ಕೋಂ ಚಿಕ್ಕರೆಡ್ಡಪ್ಪ ಕೈಗಳಿಂದ ನನ್ನ ಕೆನ್ನೆಗಳಿಗೆ ಮತ್ತು ಎದೆಗೆ ಹೊಡೆದು ಮೂಗೇಟುಗಳುಂಟು ಮಾಡಿದಳು ನಾನು ಕೆಳಗಡೆ ಬಿದ್ದು ಒದ್ದಾಡಿ ಕಿರುಚಿಕೊಂಡಾಗ ಅಲ್ಲೇ ಪಕ್ಕದಲ್ಲಿ ಇದ್ದ ನಮ್ಮ ಗ್ರಾಮದ ವಾಸಿಗಳಾದ ಗಂಗಾಧರ ಬಿನ್ ಲೇಟ್ ಗಂಗುಲಪ್ಪ,M.T.ವೆಂಕಟರವಣಪ್ಪ ಬಿನ್ ಲೇಟ್ ತಿರುಮಳಪ್ಪ,M.V.ಗಂಗಾಧರ ಬಿನ್ ಲೇಟ್ ಗಂಗುಲಪ್ಪ ರವರು ಬಂದು ಮೇಲ್ಕಂಡವರಿಂದ ನನ್ನನ್ನು ಬಿಡಿಸಿದರು ಮತ್ತು ಅವರೇ ನನ್ನನ್ನು ಯಾವುದೋ ದ್ವಿಚಕ್ರ ವಾಹನದಲ್ಲಿ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದು ಈಗ ಒಳರೋಗಿಯಾಗಿ ಚಿಕಿತ್ಸೆಪಡೆಯುತ್ತಿದ್ದೇನೆ ಆದ್ದರಿಂದ ಏಕಾಏಕಿ ನನ್ನನ್ನು ಅಡ್ಡಗಟ್ಟಿ ಅವಾಚ್ಯವಾಗಿ ಬೈದು ಕಲ್ಲು ಕೈಗಳಿಂದ ಹೊಡೆದು ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡ ಇಬ್ಬರ ಮೇಲೂ ಕಾನೂನುರೀತ್ಯ ಕ್ರಮ ಜರುಗಿಸಲು ನೀಡಿದ ಹೇಳಿಕೆಯ ದೂರಿನ ಸಾರಾಂಶವಾಗಿರುತ್ತದೆ.

 

2. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.13/2021 ಕಲಂ. 279,337   ಐ.ಪಿ.ಸಿ :-

     ಈ ದಿನ ದಿನಾಂಕ:-04/03/2021 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ. ಶರಣ್ ಗೌಡ ಬಿನ್ ಈರಣ್ಣಗೌಡ 25 ವರ್ಷ, ಲಿಂಗಾಯಿತರು, ಚಾಲಕ ವೃತ್ತಿ, ಅಣ್ಣೀಕೆರೆ ಗ್ರಾಮ, ಖರದಹಳ್ಳಿ ಪಂಚಾಯ್ತಿ, ಚಿತ್ತಾಪುರ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ ಹಾಲೀ ವಾಸ:-ಹಳೇ ಡಿ.ಸಿ ಕಛೇರಿ ಬಳಿ, ಚದಲಪುರ ಗೇಟ್, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ದಿನಾಂಕ:-04/03/2021 ರಂದು ತನ್ನ ಬಾಬತ್ತು KA-51-HP-6792 ರ ದ್ವಿಚಕ್ರವಾಹನದಲ್ಲಿ ಊಟಕ್ಕೆಂದು ಚದಲಪುರ ಗೇಟ್ ಬಳಿ ಬಂದಿದ್ದು ಊಟ ಮಾಡಿಕೊಂಡು ಪುನಃ ಹಳೇ  ಡಿಸಿ ಕಛೇರಿಯ ಬಳಿ ಹೋಗಲು ತನ್ನ ಬಾಬತ್ತು KA-51-HP-6792 ರ ರ ದ್ವಿಚಕ್ರವಾಹನದಲ್ಲಿ ಚದಲಪುರ ಗೇಟ್ ಬಳಿಯ ಯೊ-ಟರ್ನ್ ನಲ್ಲಿ ಸಂಜೆ ಸುಮಾರು 6:45 ಗಂಟೆಯ ಸಮಯದಲ್ಲಿ ಬೆಂಗಳೂರಿಗೆ ಹೋಗುವ ರಸ್ತೆಗೆ ತನ್ನ ದ್ವಿಚಕ್ರವಾಹನವನ್ನು ತಿರುಗಿಸುತ್ತಿದ್ದಾಗ ಅದೇ ಸಮಯಕ್ಕೆ ಬೆಂಗಳೂರು ಕಡೆಯಿಂದ ಬಂದ  AP-05-ES-6737 ರ ಕಾರಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ವಾಹನ  ಸಮೇತ ಠಾರ್ ರಸ್ತೆಯಲ್ಲಿ ಬಿದ್ದಾಗ  ತನ್ನ ತಲೆಯ ಹಿಂಭಾಗ ಹಾಗೂ ಬಲಕಾಲಿಗೆ ರಕ್ತ ಗಾಯಗಳಾಗಿ, ಎರಡೂ ಕೈಗಳಿಗೂ ತರಚಿದ ಗಾಯಗಳಾಗಿದ್ದು, ತಕ್ಷಣ ಅಲ್ಲಿನ ಸ್ಥಳೀಯರು ತನ್ನನ್ನು ಉಪಚರಿಸಿ ಅಲ್ಲಿಗೆ ಬಂದ 108 ಆಂಬ್ಯೂಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಸದರಿ ಅಪಘಾತ ಪಡಿಸಿದ AP-05-ES-6737 ರ ಕಾರಿನ ಚಾಲಕನ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಸತ್ಯನಾರಾಯಣ ಬಿನ್ ರಾಮಚಂದ್ರರಾವ್ 39 ವರ್ಷ, ರಾಜಮಂಡ್ರಿ, ಈಸ್ಟ್ ಗೋದಾವರಿ ಎಂತ ತಿಳಿಸಿದ್ದು, ಸದರಿ ಅಪಘಾತ ಪಡಿಸಿದ AP-05-ES-6737 ರ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಹೇಳಿಕೆಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.51/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 12/02/2021 ರಂದು ಸಂಜೆ 5-00 ಗಂಟೆಗೆ ಶ್ರೀ. ಶಶಿಧರ ಎಸ್.ಡಿ, ಸಿ.ಪಿ.ಐ, ಗೌರೀಬಿದನೂರು ವೃತ್ತ, ಗೌರೀಬಿದನೂರು ರವರು ಠಾಣೆಗೆ ಹಾಜರಾಗಿ ನೀಡಿದ ಮೆಮೋ ದೂರಿನ ಸಾರಾಂಶವೇನೆಂದರೆ ಇವರು ದಿನಾಂಕ: 12/02/2021 ರಂದು ಮದ್ಯಾಹ್ನ 2-30 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ವಿಧುರಾಶ್ವತ್ಥ ಹೊರ ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿಯಾದ ಹೆಚ್.ಸಿ-224 ವೆಂಕಟೇಶ್, ಪಿ.ಸಿ-512 ರಾಜಶೇಖರ , ಪಿ.ಸಿ-520 ಶ್ರೀನಾಥ್, ಜೀಪಿನ ಚಾಲಕ ಎ.ಪಿ.ಸಿ -133 ಹೇಮಂತ್ ಕುಮಾರ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-1222 ರಲ್ಲಿ ಗ್ರಾಮಗಳ ಬೇಟಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಚೌಳೂರು ಗೇಟಿನ ಬಳಿ ಇರುವ ರಜತಾದ್ರಿ ಢಾಬ ಮುಂಬಾಗ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಚೌಳೂರು ಗೇಟಿನ ಬಳಿ ಹೋಗಿ ಸಂಜ್ಞೆಯ ಅಪರಾಧವೆಂದು ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಮದ್ಯಾಹ್ನ 3-00 ಗಂಟೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಅದು ಅಸಂಜ್ಞೆ ಅಪರಾಧವಗಿರುತ್ತದೆ. ಆದ್ದರಿಂದ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಳ್ಳವಷ್ಟರಲ್ಲಿ ಆರೋಪಿಯು ಕೃತ್ಯವನ್ನು ಮರೆಮಾಚುವ ಸಾದ್ಯತೆ ಇರುವುದರಿಂದ ಪಂಚರ ಸಮಕ್ಷದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಇಬ್ಬರು ಆಸಾಮಿಗಳು ರಸ್ತೆಯ ಪಕ್ಕದಲ್ಲಿ ಸಾವರ್ಜನಿಕ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಗ್ಲಾಸ್ ಗಳನ್ನು ರಸ್ತೆಯ ಪಕ್ಕದಲ್ಲಿ ಇದ್ದ ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಕೊಡುತ್ತಿದ್ದ ವ್ಯಕ್ತಿಗಳು ಓಡಿ ಹೋಗಲು ಪ್ರಯತ್ನಿಸಿದಾಗ, ಸಿಬ್ಬಂದಿಯು ಹಿಂಬಾಲಿಸಿ ಹಿಡಿದುಕೊಂಡಿರುತ್ತಾರೆ. ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ ಶ್ರೀಧರ್ ಬಿನ್ ಲೇಟ್ ಗೋವಿಂದರಾಜು, 52 ವರ್ಷ, ಕ್ಷತ್ರೀಯ, ಜಿರಾಯ್ತಿ, ವಾಸ ಚೌಳೂರು ಗ್ರಾಮ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ, ಎ.ಪಿ. ಮತ್ತು ಮಂಜುನಾಥ ಬಿನ್ ರಾಮಾಂಜಿನಪ್ಪ , 36 ವರ್ಷ, ಆದಿ ಆಂದ್ರ, ಕೂಲಿ ಕೆಲಸ, ವಾಸ ಚೌಳೂರು ಗ್ರಾಮ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ, ಎ.ಪಿ. ಎಂದು ತಿಳಿಸಿದ್ದು, ಶ್ರೀಧರ್ ಮತ್ತು ಮಂಜುನಾಥ ರವರ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲಗಳನ್ನು ಪರಿಶೀಲಿಸಲಾಗಿ, ಅದರಲ್ಲಿ 180 ಎಂ.ಎಲ್.ಸಾಮರ್ಥ್ಯದ BAGPIPER DELUXE WHISKY ಯ 03 ಟೆಟ್ರಾ ಪಾಕೆಟ್ ಗಳು, 180 ಎಂ.ಎಲ್.ಸಾಮರ್ಥ್ಯದ OLD TAVERN WHISKY ಯ 03 ಟೆಟ್ರಾ ಪಾಕೆಟ್ ಗಳು ಇದ್ದು, 180 ಎಂ.ಎಲ್.ಸಾಮರ್ಥ್ಯದ MC DOWELLS DELUXE RUM ಯ 01 ಟೆಟ್ರಾ ಪಾಕೆಟ್ , 180 ಎಂ.ಎಲ್.ಸಾಮರ್ಥ್ಯದ MANSION HOUSE BRANDY ಯ 01 ಬಾಟಲ್, 180 ಎಂ.ಎಲ್.ಸಾಮರ್ಥ್ಯದ IMPERIAL BLUE WHISKY ಯ 01 ಬಾಟಲ್, 650 ಎಂ.ಎಲ್.ಸಾಮರ್ಥ್ಯದ KINGFISHER STRONG BEER ಯ 01 ಬಾಟಲ್ ಇದ್ದು, ಇವುಗಳ ಒಟ್ಟು ಸಾಮರ್ಥ್ಯ 2 ಲೀಟರ್ 270 ಎಂ.ಎಲ್ ಆಗಿರುತ್ತೆ. ಇವುಗಳ ಒಟ್ಟು ಬೆಲೆ 1250 /- ರೂ.ಗಳಾಗಿರುತ್ತೆ. ಸ್ಥಳದಲ್ಲಿ 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 02 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಆಸಾಮಿಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇದೆಯೇ ಎಂದು ಕೇಳಲಾಗಿ ತಮ್ಮ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾರೆ. ಆದ್ದರಿಂದ ಸ್ಥಳದಲ್ಲಿ ಮದ್ಯಾಹ್ನ 3-30 ರಿಂದ ಸಂಜೆ 4-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 180 ಎಂ.ಎಲ್.ಸಾಮರ್ಥ್ಯದ BAGPIPER DELUXE WHISKY ಯ 03 ಟೆಟ್ರಾ ಪಾಕೆಟ್ ಗಳು, 180 ಎಂ.ಎಲ್.ಸಾಮರ್ಥ್ಯದ OLD TAVERN WHISKY ಯ 03 ಟೆಟ್ರಾ ಪಾಕೆಟ್ ಗಳು ಇದ್ದು, 180 ಎಂ.ಎಲ್.ಸಾಮರ್ಥ್ಯದ MC DOWELLS DELUXE RUM ಯ 01 ಟೆಟ್ರಾ ಪಾಕೆಟ್ , 180 ಎಂ.ಎಲ್.ಸಾಮರ್ಥ್ಯದ MANSION HOUSE BRANDY ಯ 01 ಬಾಟಲ್, 180 ಎಂ.ಎಲ್.ಸಾಮರ್ಥ್ಯದ IMPERIAL BLUE WHISKY ಯ 01 ಬಾಟಲ್, , 650 ಎಂ.ಎಲ್.ಸಾಮರ್ಥ್ಯದ KINGFISHER STRONG BEER ಯ 01 ಬಾಟಲ್ ಮತ್ತು 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 02 ಖಾಲಿ ಟೆಟ್ರಾ ಪಾಕೆಟ್ ಗಳು ಅನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 5-00 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋ ದೂರಿನೊಂದಿಗೆ ಮಾಲನ್ನು ಮತ್ತು ಆರೋಪಿಗಳನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಎನ್.ಸಿ.ಆರ್ ದಾಖಲಿಸಿರುತ್ತೆ.ದಿನಾಂಕ 04/03/2021 ರಂದು ಬೆಳಿಗ್ಗೆ 10-00 ಗಂಟೆಗೆ ಘನ ನ್ಯಾಯಾಲದ ಪಿಸಿ ರವರು ಘನ  ನ್ಯಾಯಾಲಯದಿಂದ ನೀಡಿದ ಆದೇಶದ ವರದಿಯ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 05-03-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080