ಅಭಿಪ್ರಾಯ / ಸಲಹೆಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 33/2021 ಕಲಂ. 11,14,32,34 ಕೆ.ಇ ಆಕ್ಟ್:-

     ದಿನಾಂಕ 04/02/2021 ರಂದು ರಾತ್ರಿ 8-10 ಗಂಟೆಯಲ್ಲಿ ಬಾಗೇಪಲ್ಲಿ ಪಿಎಸ್ಐ, ಶ್ರೀ ಸುನೀಲ್ ಕುಮಾರ್ ರವರು ಆರೋಪಿ ಮತ್ತು ಮಾಲಿನೊಂದಿಗೆ ನೀಡಿದ ಮುದ್ರಿತ ದೂರಿನ ಸಾರಾಂಶವೆನೆಂದರೆ ನಾನು ದಿನಾಂಕ; 04-02-2021 ರಂದು  ಸಂಜೆ 6-30 ಗಂಟೆಯಲ್ಲಿ ಠಾಣೆಯಲ್ಲಿರುವಾಗ ಯಾರೋ ಆಸಾಮಿಯು ಬಾಗೇಪಲ್ಲಿ ಟೌನ್ ನಲ್ಲಿ  ಕಾನೂನು ಬಾಹಿರವಾಗಿ ಮದ್ಯಪಾನ ಮಾರಾಟ ಮಾಡಲು ಸಾಗಿಸುತ್ತಿರುವಾಗಿ  ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ-18 ಅರುಣ್ ಮತ್ತು ಪಿಸಿ-214, ಅಶೋಕ, ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-537 ವಾಹನದಲ್ಲಿ ಹೊರಟು ತಾಲ್ಲೂಕು ಕಛೇರಿ ಮುಂಭಾಗದಲ್ಲಿದ್ದ  ಪಂಚರನ್ನು  ಬರಮಾಡಿಕೊಂಡು  ಮೇಲ್ಕಂಡ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಕೊಡಿಕೊಂಡ ರಸ್ತೆಯಲ್ಲಿ ಹೋಗುವಾಗ ಷಾದಿ ಮಹಲ್ ಬಳಿ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದ ಆಸಾಮಿಯನ್ನು ದ್ವಿ ಚಕ್ರ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದಾಗ ದ್ವಿ ಚಕ್ರ ವಾಹನವನ್ನು ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದವನನ್ನು ನಾನು ಮತ್ತು ಸಿಬ್ಬಂದಿ ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಬಾಸ್ಕರ್ ರೆಡ್ಡಿ @ ಕೊಟಪ್ಪ ಬಿನ್ ನಾರಪ್ಪ ರೆಡ್ಡಿ, 32 ವರ್ಷ, ವಕ್ಕಲಿಗರು, ವಾಸ ಮುದ್ದರೆಡ್ಡಿಪಲ್ಲಿ ಗ್ರಾಮ, ಚಿಲಮತ್ತೂರು ಮಂಡಲ, ಹಿಂದೂಪುರ ತಾಲ್ಲೂಕು ಎಂದು ತಿಳಿಸಿದ್ದು, ದ್ವಿ ಚಕ್ರ ವಾಹನದಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಬಿಚ್ಚಿ ನೋಡಲಾಗಿ  ಮದ್ಯದ ಟೆಟ್ರಾ ಪಾಕೇಟ್ ಗಳಿದ್ದು ಸದರಿ ಆಸಾಮಿಯನ್ನು ಮದ್ಯವನ್ನು ಸಾಗಿಸಲು ಪರವಾನಗಿ ಇದೆಯೇ ಎಂದು ಕೇಳಲಾಗಿ , ಸದರಿ ಆಸಾಮಿಯು ಯಾವುದೇ  ಪರವಾನಗೆ ಇಲ್ಲವೆಂದು ತಿಳಿಸಿರುತ್ತಾನೆ.   ನಂತರ  ಪಂಚರ ಸಮಕ್ಷಮದಲ್ಲಿ ಪರಿಶೀಲಿಸಲಾಗಿ ಕೆ.ಎ-01-ಇ.ಇ-4283 ಟಿವಿಎಸ್ ದ್ವಿ ಚಕ್ರ ವಾಹನದಲ್ಲಿದ್ದ  ಪ್ಲಾಸ್ಟಿಕ್ ಚೀಲದಲ್ಲಿ 90 ML ಸಾಮರ್ಥ್ಯದ  HAYWARDS CHEERS WHISKY ಯ 80  ಟೆಟ್ರಾ ಪಾಕೇಟ್ ಗಳಿದ್ದು, ಇದು 7 ಲೀಟರ್ 200 ಎಂ.ಎಲ್ ಆಗಿದ್ದು, ಇದರ ಬೆಲೆ 2.810/- ರೂಗಳಾಗಿರುತ್ತೆ,  ಮೇಲ್ಕಂಡ  ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿ ಮತ್ತು  ಮಾಲಿನೊಂದಿಗೆ ರಾತ್ರಿ 8-10 ಗಂಟೆಗೆ ಠಾಣೆಯಲ್ಲಿ  ಹಾಜರುಪಡಿಸುತ್ತಿದ್ದು ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ ದೂರಾಗಿರುತ್ತೆ.

 1. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ. 11/2021 ಕಲಂ. 419,420 ಐ.ಪಿ.ಸಿ & 66(D) INFORMATION TECHNOLOGY ACT 2008:-

     ದಿನಾಂಕ:-5/2/2021 ರಂದು ಪಿರ್ಯಾದಿ ಹರೀಶ ಬಿ ಚಲಂ ಬಿನ್ ಭದ್ರಾಚಲಂ,37 ವರ್ಷ, ಬಲಜಿಗರು, ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ ನಂ:8, ಮುನಿಸಿಪಲ್ ವಸತಿ ಗೃಹಗಳು, ಕಂದವಾರಪೇಟೆ, ಚಿಕ್ಕಬಳ್ಳಾಪುರ ಟೌನ್ ಮೊ ಸಂಖ್ಯೆ: 8884227667 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಸಾಪ್ಟ್ವೇರ್ ಕಂಪನಿಯಲ್ಲಿ ವ್ಯವಸ್ಥಾಪಕರಾಗಿ ಬೆಂಗಳೂರಿನಲ್ಲಿ ಕೆಲಸವನ್ನು ಮಾಡುತ್ತಿರುತ್ತೇನೆ. ನಾನು ಬೆಂಗಳೂರು ಹೆಚ್ ಡಿ ಎಪ್ ಸಿ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ಖಾತೆ ನಂ:05091610094380 ಆಗಿದ್ದು, ಈ ಖಾತೆಗೆ ಎ ಟಿ ಎಂ ಕಾರ್ಡ ನ್ನು ಹಾಗೂ ನನ್ನ ಮೇಲ್ಕಂಡ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿಕೊಂಡು ಗೂಗಲ್ ಫೇ ವ್ಯಾಲೆಟ್ ಸಹ ಬಳಸುತ್ತಾ ನನ್ನ ಹಣಕಾಸಿನ ವ್ಯವಹಾರವನ್ನು ಮಾಡುತ್ತಿರುತ್ತೇನೆ. ಈಗಿರುವಲ್ಲಿ ದಿನಾಂಕ;02/02/2021 ರಂದು  ಮೊ ಸಂಖ್ಯೆ:+12405890738 ಸಂಕ್ಯೆಯಿಂದ ನನ್ನ ಮೊಬೈಲ್ ಗೆ ವ್ಯಾಟ್ಸಾಪ್ ಸಂದೇಶ ಮಾಡಿದ್ದು, ನೋಡಲಾಗಿ ನನ್ನ ಚಿಕ್ಕಪ್ಪ ರಾಘವ ರವರ ಪೋಟೋ ಇರುವ ವ್ಯಾಟ್ಸಾಪ್ ನಂಬರ್ ನಲ್ಲಿ ಬಂದಿದ್ದ ಸಂದೇಶವನ್ನು ನೋಡಲಾಗಿ ನನ್ನ ಸ್ನೇಹಿತರು ಇಂಡಿಯಾ ದೇಶದಲ್ಲಿ ಇದ್ದಾರೆ ಅವರಿಗೆ 100000/- ರೂಗಳ ಹಣ ನೀಡಬೇಕಾಗಿದೆ. ನಾನು ಕಳುಹಿಸುವ ಬ್ಯಾಂಕ್ ಖಾತೆಗೆ   ಸ್ವಲ್ಪ ಅಜರ್ೆಂಟಾಗಿ 100000/- ರೂಗಳ ಹಣ ಕಳುಹಿಸಿ ನಾನು ನಿಮಗೆ 02 ದಿನದಲ್ಲಿ ವಾಪಸ್ಸು ಕೊಡುತ್ತೇನೆಂತ ನನ್ನ ಚಿಕ್ಕಪ್ಪ ರಾಘವ ಎನ್ನುವವರ ಹೆಸರಿನಲ್ಲಿ ಸಂದೇಶ ಕಳುಹಿಸಿದ್ದು, ನಾನು ಇಂಡಿಯಾ ದೇಶದಲ್ಲಿ ಅವರ ಸ್ನೇಹಿತರು ಇರಬಹುದೆಂತ ನಂಬಿ ಕೂಡಲೆ ಆ ಸಂದೇಶದಲ್ಲಿ ತಿಳಿಸಿದಂತೆ ನಾನು ಅವರು ಕಳುಹಿಸಿದ್ದ ಬ್ಯಾಂಕ್ ಆಪ್ ಬರೋಡಾ ಅಕೌಂಟ್ ನಂ:47100100000318 & ಈಖಅ ಅಔಆಇ: ಃಂಖಃ0ಐಖಿಊಂಓ ಖಾತೆಗೆ  100000/- ರೂಗಳನ್ನು ಇಂಟರ್ ನೆಟ್ ಬ್ಯಾಂಕ್ಂಗ್ ಮುಖಾಂತರ ಅದೇ ದಿನ ಕಳುಹಿಸಿರುತ್ತೇನೆ. ಇದಕ್ಕೆ ಮೊದಲು ನಮ್ಮ ಚಿಕ್ಕಪ್ಪನಿಗೆ ಕರೆ ಮಾಡಿದಾಗ ಪೋನ್ ಸಿಗ್ನಲ್ ಸಿಗದ ಕಾರಣ ಪೊನ್ ರೀಚ್ ಆಗಿರುವುದಿಲ್ಲ ನಂತರ ನಾನು ಅನೇಕ ಬಾರಿ ಕರೆ ಮಾಡಿದರೂ ಕರೆ ಸಿಕ್ಕಿರಲಿಲ್ಲ. ನಂತರ ನಾನು ನಮ್ಮ ಚಿಕ್ಕಪ್ಪ ರಾಘವ ರವರ ಬೇರೆ ನಂಬರ್ ಪಡೆದು ಅದಕ್ಕೆ ಹಣ ವರ್ಗಾಯಿಸಿರುವ ಬಗ್ಗೆ ಮೇಸೇಜ್ ಕಳುಹಿಸಿದೆ. ನಂತರ ಅವರಿಂದ ನನಗೆ ಕರೆ ಬಂದಿದ್ದು ವಿಷಯ ತಿಳಿಸಲಾಗಿ ಅವರು ನಾನು ಹಣ ಕೇಳಿರುವುದಿಲ್ಲ ನನಗೆ ಗೊತ್ತಿಲ್ಲವೆಂತ ತಿಳಿಸಿದರು. ಆಗ ನನಗೆ ತಿಳಿಯಿತು ಯೋರೋ  ಸೈಬರ್ ಕಳ್ಳರು ಮೊ ಸಂಖ್ಯೆ: :+12405890738  ಕ್ಕೆ ನನ್ನ ಚಿಕ್ಕಪ್ಪನ ಪೋಟೋವನ್ನು ಅಪ್ ಲೋಡ್ ಮಾಡಿ ಅವರ  ಹೆಸರಿನಲ್ಲಿ ನನ್ನನ್ನು ನಂಬಿಸಿ ನನ್ನಿಂದ 100000/- ರೂಗಳನ್ನು ವಂಚಿಸಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಿ ನನ್ನ ಹಣವನ್ನು ನನಗೆ ವಾಪಸ್ಸು ಕೊಡಿಸಲು ಕೋರಿ ದೂರು.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 22/2021 ಕಲಂ. 379 ಐ.ಪಿ.ಸಿ :-

     ದಿನಾಂಕ;05.02.2021 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ  ತಾನು ತಮ್ಮಲ್ಲಿ  ಮನವಿ ಮಾಡಿಕೊಳ್ಳುವುದೇನೆಂದರೆ, ತನ್ನ ಚಿಕ್ಕಪ್ಪನ ಮಗನಾದ  ವೆಂಕಟೇಶ ಬಿನ್ ಲೇಟ್ ರಾಮಪ್ಪ ಮತ್ತು ತನ್ನ ನಾದನಿಯಾದ ಶ್ರೀಮತಿ ಮುನಿರತ್ನಮ್ಮ  ಕೋಂ ಲೇಟ್ ನಾರಾಯಣಸ್ವಾಮಿ ರವರು ತಮ್ಮ ಊರಿನಲ್ಲಿ  ವ್ಯವಸಾಯದ ಕೆಲಸಗಳನ್ನು ಮಾಡಿಕೊಂಡು ಪ್ರತ್ಯೇಕವಾಗಿ ವಾಸವಾಗಿರುತ್ತಾರೆ. ವೆಂಕಟೇಶ ರವರು ಎರಡು ಸೀಮೆ ಹಸುಗಳು ಮತ್ತು  ಎರಡು  ಕುರಿ ಪೊಟ್ಲಿಗಳನ್ನು  ಸಾಕಿಕೊಂಡಿರುತ್ತಾರೆ. ಅದೇ ರೀತಿ ಶ್ರೀಮತಿ ಮುನಿರತ್ನಮ್ಮ ರವರು ಎರಡು ಸೀಮೆಹಸುಗಳು ಮತ್ತು ಒಂದು ಮೇಕೆ ಹೋತವನ್ನು ಸಾಕಿಕೊಂಡಿದ್ದರು. ಇವರಿಬ್ಬರು ಅವರ ಧನ ಕರುಗಳನ್ನು  ವೆಂಕಟೇಶ ರವರ  ಮನೆಯ  ಮುಂಭಾಗ ಕೊಟ್ಟಿಗೆಯಲ್ಲಿ  ಕಟ್ಟು ಹಾಕುತ್ತಿದ್ದರು. ಹೀಗಿರುವಲ್ಲಿ ದಿನಾಂಕ: 04/02/2021 ರಂದು  ಶ್ರೀ ವೆಂಕಟೇಶ ಮತ್ತು ಮುನಿರತ್ನಮ್ಮ ರವರು ಎಂದಿನಂತೆ ದನಗಳನ್ನು ಮನೆಯ ಹತ್ತಿರ ಕಟ್ಟಿಹಾಕೊಂಡು ರಾತ್ರಿ 12-00 ಗಂಟೆಯ ಸಮಯದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ  ದನಗಳಿಗೆ ಮೇವು  ಹಾಕಿಕೊಂಡು  ಕೊಟ್ಟಿಗೆಗೆ ತಡಿಕೆ ಹಾಕಿಕೊಂಡು ಮನೆಗೆ ಬಂದು ಮಲಗಿಕೊಂಡಿದ್ದರು.  ನಂತರ ದಿನಾಂಕ: 05/02/2021 ರಂದು ಬೆಳಗ್ಗೆ  04-00 ಗಂಟೆಯದಲ್ಲಿ  ಸೀಮೆ ಹಸುಗಳಲ್ಲಿ  ಹಾಲು ಕರೆಯಲು ಹೋದಾಗ  ಧನದ ಕೊಟ್ಟಿಗೆಗೆ ಹಾಕಿದ್ದ ತಡಿಕೆಯು ತರೆದುಕೊಂಡಿದ್ದು, ಕೊಟ್ಟಿಗೆಯಲ್ಲಿ  ನೋಡಲಾಗಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ  ವೆಂಕಟೇಶ ರವರ  ಬಾಬತ್ತು ಸುಮಾರು 40.000/- ರೂ ಬೆಲೆ  ಬಾಳುವ  ಒಂದು ಸೀಮೆ  ಹಸು ಮತ್ತು  ಎರಡು ಕುರಿ ಪೊಟ್ಲಿ ಹಾಗೂ ಶ್ರೀಮತಿ  ಮುನಿರತ್ನಮ್ಮ ರವರ ಬಾಬತ್ತು ಸುಮಾರು 80.000/-ರೂಪಾಯಿ ಬೆಲೆ ಬಾಳುವ  ಎರಡು ಸೀಮೆ ಹಸು ಮತ್ತು  ಒಂದು ಮೇಕೆ ಇರಲಿಲ್ಲ.  ಯಾರೋ  ಕಳ್ಳರು ದಿನಾಂಕ: 04/02/2021 ರ ರಾತ್ರಿ 12-00 ಗಂಟೆಯಿಂದ ದಿನಾಂಕ: 05/02/2021 ರ ಬೆಳಗಿನ ಜಾವ 04-00 ಗಂಟೆಯ ಅವಧಿಯಲ್ಲಿ   ಮೇಲ್ಕಂಡಂತೆ ಒಟ್ಟು 1.20.000/-ರೂಪಾಯಿ ಬೆಳೆ ಬಾಳುವ  ಮೂರು ಸೀಮೆ ಹಸು. ಎರಡು ಕುರಿ ಪೊಟ್ಲಿ ಮತ್ತು ಒಂದು  ಮೇಕೆಯನ್ನು  ಕಳವು ಮಾಡಿಕೊಂಡು ಹೋಗಿರುತ್ತಾರೆ. ನಾವುಗಳು ಈ ದಿನ ಸಂತೆ ಇದ್ದ  ಶಿರಾ, ಗೋರಂಟ್ಲ ಮತ್ತು ಅನಂತಪುರ  ಮುಂತಾದ ಕಡೆಗಳಿಗೆ ಹೋಗಿ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ. ಮೇಲ್ಕಂಡಂತೆ ಕಳವು ಮಾಡಿರುವ ಆಸಾಮಿಗಳನ್ನು  ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದರ ಮೇರೆಗೆ ಈ ಪ್ರ,ವ,ವರದಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 59/2021  ಕಲಂ. 379 ಐ.ಪಿ.ಸಿ :-

     ದಿನಾಂಕ: 04/02/2021 ರಂದು ಸಂಜೆ 6.00 ಗಂಟೆಗೆ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಪಿ.ಐ ಶ್ರೀ ಆನಂದಕುಮಾರ್ ರವರು ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ಮುಂದಿನ ಕ್ರಮಕ್ಕಾಗಿ ಸಿ.ಪಿ.ಸಿ-37 ಪ್ರಸಾದ್ ರವರ ಮುಖೇನ ಕಳುಹಿಸಿಕೊಟ್ಟ ಮಾಲು ಮತ್ತು ದಾಖಲಾತಿಗಳನ್ನು ಪಡೆದು ದಾಖಲಿಸಿಕೊಂಡು ದೂರಿನ ಸಾರಾಂಶವೇನೆಂದರೆ, ದಿನಾಂಕ: 06/10/2020 ರಂದು ಚಿಂತಾಮಣಿ ನಗರ ಪೊಲೀಸ್ ಠಾಣೆಯ ಮೊ.ಸಂ.134/2020, ಕಲಂ 379 ಐ.ಪಿ.ಸಿ ಪ್ರಕರಣದಲ್ಲಿ ಎ1 ಆರೋಪಿಯಾದ ನರಸಿಂಹಮೂರ್ತಿ @ ಮೂರ್ತಿ ಬಿನ್ ಮುದ್ದಪ್ಪ, 31 ವರ್ಷ, ಪರಿಶಿಷ್ಠ ಜಾತಿ, ಪೈಂಟಿಂಗ್ ಕೆಲಸ, ಜೋಡಿಕಾಚಹಳ್ಳಿ ಗ್ರಾಮ, ಕುಂದಲಗುರ್ಕಿ ಪಂಚಾಯ್ತಿ, ಶಿಡ್ಲಘಟ್ಟ ತಾಲ್ಲೂಕು ರವರ ಸ್ವ ಇಚ್ಚಾ ಹೇಳಿಕೆಯನ್ನು ಪಡೆಯಲಾಗಿ ಸದರಿ ಆರೋಪಿಯು ಈಗ್ಗೆ ಸುಮಾರು 02 ತಿಂಗಳ ಹಿಂದೆ ಇದೇ ಚಿಂತಾಮಣಿ ತಾಲ್ಲೂಕು, ಕೈವಾರ ಗ್ರಾಮದ ಶ್ರೀ ಅಮರನಾರಾಯಣಸ್ವಾಮಿ ದೇವಾಲಯದ ಮುಂಭಾಗದಲ್ಲಿ ನಿಲ್ಲಿಸಿದ್ದ ಕಪ್ಪು ಹಾಗೂ ಹಸಿರು ಬಣ್ಣದ ನಂಬರ್ KA-06 U-8364 ನೊಂದಣಿ ಸಂಖ್ಯೆಯ KAWASAKI 115 ದ್ವಿಚಕ್ರ ವಾಹನವನ್ನು ತಾನು ಕಳ್ಳತನ ಮಾಡಿಕೊಂಡು ಹೋಗಿ ಸದರಿ ದ್ವಿಚಕ್ರ ವಾಹನವನ್ನು ತನಗೆ ಪರಿಚಯವಿರುವ ವಿರೋಪಾಕ್ಷಪುರ ಗ್ರಾಮದ ನಾರಾಯಣಸ್ವಾಮಿ ರವರ ಮನೆಯ ಬಳಿ ನಿಲ್ಲಿಸಿರುವುದಾಗಿ ತನ್ನ ಹೇಳಿಕೆಯನ್ನು ನೀಡಿದ್ದರ ಮೇರೆಗೆ ಸದರಿ ಸ್ಥಳಕ್ಕೆ ಬೇಟಿ ನೀಡಿ ನಂಬರ್ KA-06 U-8364 ನೊಂದಣಿ ಸಂಖ್ಯೆಯ KAWASAKI 115 ದ್ವಿಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಂಡಿರುತ್ತೆ. ಆದ್ದರಿಂದ ಸದರಿ ಕೃತ್ಯ ನಡೆದ ಸ್ಥಳದ ಆಧಾರ ಮೇರೆಗೆ ದ್ವಿಚಕ್ರ ವಾಹನ ಹಾಗೂ ಕೇಸಿನ ಕಡತವನ್ನು ನ್ಯಾಯಾಲಯದ ಆದೇಶದ ಮೇರೆಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಟ್ಟಿದ್ದನ್ನು ಪಡೆದು ಪ್ರಕರಣ ದಾಖಲಿಸಿರುವುದಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 33/2021 ಕಲಂ. 406,419,420  ಐ.ಪಿ.ಸಿ :-

     ದಿನಾಂಕ 04-02-2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ  ಹೆಚ್.ಪಿ. ನಂದೀಶ್ ಕುಮಾರ್ ಬಿನ್ ಎನ್. ಪಾಪಯ್ಯ, 38 ವರ್ಷ, ಆದಿ ಕರ್ನಾಟಕ, ಚಾಲಕ ವೃತ್ತಿ, ವಾಸ ಹೊಸೂರು ಗ್ರಾಮ, ಗೌರಿಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ  ಲಿಖಿತ ದೂರಿನ ಸಾರಾಂಶವೇನೆಂಧರೆ ತಾನು  2016 ನೇ ಸಾಲಿನಲ್ಲಿ ನಾನು  ಕೆ.ಎ. 40-ಎ.-0005 ಇಂಡಿಕಾ ಕಾರನ್ನು ಇದೇ ಗೌರಿಬಿದನೂರು ತಾಲ್ಲೂಕು ವಾಟದಹೊಸಹಳ್ಳಿ ಗ್ರಾಮದ ವಾಸಿ ಕೃಷ್ಣ ಮೂತರ್ಿ ರವರಿಂದ 3,50,000/-(ಮೂರು ಲಕ್ಷ ಐವತ್ತು ಸಾವಿರ)ಕ್ಕೆ ಖರೀದಿಸಿದ್ದು ಸದರಿ ಕಾರನ್ನು ಖರೀದಿಸಲು ಗೌರಿಬಿದನೂರಿನ  ಕೆನರಾ ಬ್ಯಾಂಕಿನಲ್ಲಿ 2 ಲಕ್ಷ ರೂ.ಗಳನ್ನು ಸಾಲವಾಗಿ ಕಾರಿನ ಮೇಲೆ ಪಡೆದುಕೊಂಡಿರುತ್ತೇನೆ. ಸದರಿ ಕಾರನ್ನು ನನ್ನ ಸ್ನೇಹಿತನಾದ  ಲಕ್ಷ್ಮಿನಾರಾಯಣ ಕಡೆಯಿಂದ  ರವಿಕುಮಾರ್ ಬಿನ್ ಹುಲಿಯಪ್ಪ ಕಾಳೇನಹಳ್ಳಿ, ಮಧುಗಿರಿ ತಾಲ್ಲೂಕು ಎಂಬುವರು ಪರಿಚಯವಾಗಿರುತ್ತಾರೆ. ದಿನಾಂಕ 15-07-2016 ರಂದು ಸಂಜೆ 05-30 ಗಂಟೆಯಲ್ಲಿ ರವಿಕುಮಾರ್ ಹೊಸೂರಿನಲ್ಲಿರುವ ನಮ್ಮ ಮನೆಗೆ ಬಂದು ನನ್ನ ಬಳಿ ಇದ್ದ ಕೆ.ಎ. 40-ಎ.-0005 ಇಂಡಿಕಾ ಕಾರನ್ನು ಕೊಡು ಸ್ವಲ್ಪ ಕೆಲಸ ಇದೆ ಬೆಂಗಳೂರಿಗೆ ಹೋಗಿಬರುತ್ತೇನೆಂದು  ಕೇಳಿದನು. ನಾನು ನನ್ನ ಕಾರನ್ನು ರವಿಕುಮಾರ್ ರವರಿಗೆ ಕೊಟ್ಟಿದ್ದು ನಂತರ ಮಾರನೇ ದಿನ ನಾನು ರವಿಕುಮಾರ್ ಮೊಬೈಲ್ ನಂ. 6360030778 ಗೆ ಪೋನ್  ಮಾಡಿದಾಗ ರವಿಕುಮಾರ್ ನನಗೆ ಈ ಕಾರನ್ನು ನನಗೆ ಕೊಡು  ನಾನು ಇದರ ಮೇಲಿರುವ ಕೆನರಾ ಬ್ಯಾಂಕಿನಲ್ಲಿ ಈ ಕಾರಿನ ಮೇಲಿರುವ ಸಾಲದ ಹಣದ ಬಾಕಿ ಕಂತುಗಳನ್ನು ನಾನೇ ಕಟ್ಟಿಕೊಂಡು ಹೋಗುತ್ತೇನೆಂದು ಹೇಳಿ ಕರಾರು ಪತ್ರವನ್ನು ಬರೆಯಿಸಿಕೊಂಡಿದ್ದು ಮೂಲ ಕರಾರು ಪತ್ರವನ್ನು ರವಿಕುಮಾರ್ ಕಂಪನಿಗೆ ಕೊಡಬೇಕೆಂದು ಹೇಳಿ ನನಗೆ ನಂಬಿಸಿ ಮೂಲ ಕರರು ಪತ್ರವನ್ನು ಆತನೇ ತೆಗೆದುಕೊಂಡು ನನಗೆ ಜೆರಾಕ್ಸ್ ಅನ್ನು ಕೊಟ್ಟಿದ್ದನು. ನಂತರ ರವಿಕುಮಾರ್ ಕಾರಿನ ಮೇಲಿನ ಯಾವುದೇ ಸಾಲದ ಕಂತನ್ನು ಬ್ಯಾಂಕಿಗೆ ಕಟ್ಟದೇ ಇದ್ದುದ್ದರಿಂದ ನನಗೆ ಲೋನ್ ಕಟ್ಟುವಂತೆ ಬ್ಯಾಂಕಿನಿಂದ ನೋಟೀಸ್ ಗಳನ್ನು ನೀಡಿರುತ್ತಾರೆ. ಈ ಬಗ್ಗೆ ನಾನು ರವಿಕುಮಾರನಿಗೆ ಪೋನ್ ಮುಖಾಂತರ ಕೇಳಿದ್ದಕ್ಕೆ ಕಂತುಗಳನ್ನು ಕಟ್ಟುತ್ತೇನೆಂದು ಹೇಳಿದವನು ಇದುವರೆವಿಗೂ ಕಟ್ಟಿರುವುದಿಲ್ಲ. ಸದರಿ ನಂತರ ವಿಚಾರ ತಿಳಿಯಲಾಗಿ ನನ್ನ ಕಾರನ್ನು ಬೇರೆಯವರಿಗೆ ಮಾರಾಟ ಮಾಡಿರುವುದಾಗಿ ತಿಳಿಯಿತು.  ರವಿಕುಮಾರ್ ನನ್ನನ್ನು ನಂಬಿಸಿ ನನ್ನ ಕಾರಿನ ಮೇಲಿನ ಸಾಲದ ಕಂತುಗಳನ್ನು ತೀರಿಸಿಕೊಳ್ಳುತ್ತೇನೆಂದು ಹೇಳಿ ನನ್ನ ಕಾರನ್ನು ತೆಗೆದುಕೊಂಡು ಹೋಗಿ ಸಾಲದ ಕಂತುಗಳನ್ನು ತೀರಿಸದೇ ಕಾರನ್ನು ಸಹಾ ವಾಪಸ್ ಕೊಡದೇ ಸದರಿ ಕಾರನ್ನು ತನ್ನದೇ ಕಾರು ಎಂದು  ನಂಬಿಸಿ  ಬೇರೆಯವರಿಗೆ ಮಾರಾಟ ಮಾಡಿ ನನಗೆ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾನೆ. ನಾನು ರವಿಕುಮಾರ್ ಮತ್ತು ನನ್ನ ಕಾರನ್ನು ಹುಡುಕುತ್ತಿದ್ದರಿಂದ ದೂರು ನೀಡಲು ತಡವಾಗಿರುತ್ತೆ. ನನಗೆ ಮೋಸ ಮಾಡಿ ನಂಬಿಕೆ ದ್ರೋಹ ಮಾಡಿರುವ ರವಿಕುಮಾರ್ ನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಕೋರುತ್ತೇನೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.22/2021 ಕಲಂ. 323,324,504,506 ಐ.ಪಿ.ಸಿ :-

     ದಿನಾಂಕ:04/02/2021 ರಂದು ಮದ್ಯಾಹ್ನ 14.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನಿಖಿಲ್ ಬಿನ್ ನರಸಿಂಹಪ್ಪ 20 ವರ್ಷ ನಾಯಕ ಜನಾಂಗ, ಕೂಲಿ ಕೆಲಸ ವಾಸ: 5 ನೇ ವಾರ್ಡ ಮಾರುತಿ ವೃತ್ತ ಗುಡಿಬಂಡೆ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ತಂದೆ ತಾಯಿರವರಿಗೆ 1 ನೇ ಮಂಜುನಾಥ, 2 ನೇ ಲಕ್ಷ್ಮೀ, 3 ನೇ ತಾನು ಆಗಿದ್ದು, ತಮ್ಮ ಅಣ್ಣ ಗುಡಿಬಂಡೆ ಟೌನ್ ನಲ್ಲಿ ಆಟೋ ಚಾಲನೆ ಮಾಡಿಕೊಂಡಿದ್ದು ಈಗಿರುವಾಗ ದಿನಾಂಕ:03/02/2021 ರಂದು ಸಂಜೆ 5-45 ಗಂಟೆ ಸಮಯದಲ್ಲಿ ತಮ್ಮ ಅಣ್ಣ ಮಂಜುನಾಥ ರವರು ಗುಡಿಬಂಡೆ ಟೌನ್ ನ ದೊಡ್ಡ ಮಸೀದಿ ಬಳಿ ರಸ್ತೆಯ ಬದಿಯ ಆಟೋ ನಿಲ್ದಾಣದಲ್ಲಿ ಆಟೋವಿನಲ್ಲಿ ಕುಳಿತುಕೊಂಡಿರುವಾಗ ತಮ್ಮ ಗ್ರಾಮದ ಗಂಗರಾಜು ಬಿನ್ ಲೇಟ್ ಚಿಕ್ಕಗಂಗಪ್ಪ 28 ವರ್ಷ, ನಾಯಕ ಕೂಲಿ ಕೆಲಸ ವಾಸ: ಗುಡಿಬಂಡೆ ಟೌನ್ ರವರು ತಮ್ಮ ಅಣ್ಣನ ಬಳಿ ಬಂದು ಆಟೋದಲ್ಲಿ ನಮ್ಮ ಮನೆಯ ಬಳಿ ಬಿಡು ಎಂದು ಕೇಳಿದಾಗ ನೀನು ಬಾಡಿಗೆ ಕೊಡುವುದಿಲ್ಲ ನಾನು ಬಿಡುವುದಿಲ್ಲ ಎಂದಾಗ ಕೋಪಗೊಂಡ ಗಂಗರಾಜು ರವರು ತಮ್ಮ ಅಣ್ಣನ ಮೇಲೆ ಗಲಾಟೆ ಮಾಡುತ್ತಿರುವುದಾಗಿ ತನಗೆ ತಮ್ಮ ಗ್ರಾಮದ ಮಂಜುನಾಥ ಬಿನ್ ನರಸಪ್ಪ 22 ವರ್ಷ ರವರು ಕರೆ ಮಾಡಿ ತಿಳಿಸಿದನು ನಂತರ ತಾನು ಕೂಡಲೇ ಸ್ಥಳಕ್ಕೆ ಬಂದು ಗಂಗರಾಜು ರವರನ್ನು ಗಲಾಟೆ ಮಾಡಬೇಡ ಎಂದು ಹೇಳಿದೆ ಆದರೂ ಗಂಗರಾಜು ರವರು ಕೇಳದೇ ತಮ್ಮ ಅಣ್ಣನನ್ನು ನಿಯ್ಯಮ್ಮ ನೇ ದೆಂಗಾ ಲೋಫರ್ ನಾ ಕೊಡುಕಾ ನನ್ನೇ ಇಂಟಿತಾಕಿ ಇಡಿಸೇಲ್ದು ಅಂಟಾವ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮುಖಕ್ಕೆ ಹೊಡೆದು ರಸ್ತೆಯ ಪಕ್ಕದಲ್ಲಿದ್ದ ಇಟ್ಟಿಗೆ ಕಲ್ಲಿನಿಂದ ತಮ್ಮ ಅಣ್ಣ ಮಂಜುನಾಥನಿಗೆ ಮುಖಕ್ಕೆ ಮತ್ತು ತಲೆಗೆ ಹೊಡೆದು ರಕ್ತಗಾಯ ಪಡಿಸಿ ನಿನ್ನನ್ನು ಸಾಯಿಸದೇ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದನು ನಂತರ ಸ್ಥಳದಲ್ಲಿದ್ದ ತಾನು ಮತ್ತು ತಮ್ಮ ಗ್ರಾಮದ ಮಂಜುನಾಥ ಬಿನ್ ನರಸಪ್ಪ 22 ವರ್ಷ ಹಾಗೂ ಮೂರ್ತಿ ಬಿನ್ ದೊಡ್ಡನರಸಪ್ಪ 27 ವರ್ಷ ರವರು ಜಗಳ ಬಿಡಿಸಿ ತಮ್ಮ ಅಣ್ಣನನ್ನು ಕೊಡಲೇ ಆಟೋವಿನಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ತಮ್ಮ ಅಣ್ಣ ಮಂಜುನಾಥ ರವರ ಮೇಲೆ ಹಲ್ಲೆ ಮಾಡಿದ ಗಂಗರಾಜು ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.23/2021 ಕಲಂ. 379 ಐ.ಪಿ.ಸಿ :-

     ದಿನಾಂಕ 05/02/2021 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾಧಿ ಆಂದ್ರ ಪ್ರದೇಶದ ಚಿತ್ತೂರು ಜಿಲ್ಲೆ ನಕ್ಕಲವಾರಿಕೋಟೆಯ ನಾಗೇಶ್ವರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಈಗ್ಗೆ ಸುಮಾರು ಒಂದು ವರ್ಷದ ಹಿಂದೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮುತ್ತಗದಹಳ್ಳಿ  ಗ್ರಾಮಕ್ಕೆ ಕೆಲಸಕ್ಕೆ ಬಂದಿದ್ದು, ಅಂದಿನಿಂದ  ತನ್ನ ತಂಗಿಯ ಹೆಸರಿನಲ್ಲಿರುವ ಸುಮಾರು 55000/- ರೂ ಬೆಲೆ ಬಾಳು AP 39-AW-1817 ರ ಪಲ್ಸರ್ ದ್ವಿಚಕ್ರವಾಹನವನ್ನು ನಾನು ಉಪಯೋಗಿಸಿಕೊಳ್ಳಲು ಇಲ್ಲಿಗೆ ತಂದಿದ್ದು, ಎಂದಿನಂತೆ ನಾನು ದಿನಾಂಕ 27/08/2020 ರಂದು ರಾತ್ರಿ ನಾನು ವಾಸವಾಗಿರುವ ಮುತ್ತಗದಹಳ್ಳಿ ಗ್ರಾಮದ ಗುಡಿಬಂಡೆ ರಸ್ತೆಯಲ್ಲಿರುವ ಮಂಜುನಾಥೇಶ್ವರ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಮನೆಯ ಮುಂದೆ ನಿಲ್ಲಿಸಿದ್ದು, ದಿನಾಂಕ ತಾನು ಕೆಲಸಕ್ಕೆ ಹೋಗಲೆಂತ ಬೆಳಿಗ್ಗೆ 04-00 ಗಂಟೆಯ ಸಮಯದಲ್ಲಿ ತನ್ನ ದ್ವಿಚಕ್ರವಾಹನವನ್ನು ನಿಲ್ಲಿಸಿದ್ದ ಜಾಗದಲ್ಲಿ ಸದರಿ ದ್ವಿಚಕ್ರವಾಹನ ಇರಲಿಲ್ಲ. ಈ ಬಗ್ಗೆ ತಾನು ಅಕ್ಕ-ಪಕ್ಕ ದ ಮನೆಯವರನ್ನು ತನ್ನ ಸ್ನೇಹಿರ ಬಳಿ ವಿಚಾರಿಸಿದ್ದು, ಪತ್ತೆ ಆಗಲಿಲ್ಲ ಆದಾಗೈ ಈ ದಿನದ ವರೆಗೆ ಎಲ್ಲಾ ಕಡೆ ಹುಡಿಕಿದರೂ ಪತ್ತೆಯಾಗದಿದ್ದ ಕಾರಣ ತಡವಾಗಿ ದೂರು ನೀಡುತ್ತಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.28/2021 ಕಲಂ. 392 ಐ.ಪಿ.ಸಿ :-

     ದಿನಾಂಕ:04-02-2021 ರಂದು ರಾತ್ರಿ 8-45 ಗಂಟೆಯಲ್ಲಿ ಪಿರ್ಯಾದಿದಾರರಾದ ಚಿಟ್ಟಿಬಾಬು ಬಿನ್ ಕೆಂಪಣ್ಣ, ಸುಮಾರು 39 ವರ್ಷ, ಪ.ಜಾತಿ, ಚೇಪೆಕಾಯಿ ವ್ಯಾಪಾರ,ವಾಸ:ಲಕ್ಷ್ಮೀಪುರ ಗ್ರಾಮ, ನಂದಗುಡಿ ಹೋಬಳಿ, ಹೊಸಕೋಟೆ ತಾಲ್ಲೂಕು, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು  ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಈಗ್ಗೆ ಸುಮಾರು 20 ವರ್ಷದಿಂದ ಶಿಡ್ಲಘಟ್ಟ ತಾಲ್ಲೂಕು ಹೆಚ್.ಕ್ರಾಸ್ ಸರ್ಕಲ್ ನಲ್ಲಿ ಚೇಪೆಕಾಯಿ ವ್ಯಾಪಾರ ಮಾಡಿಕೊಂಡಿದ್ದುಮ ತಾನು ಪ್ರತಿ ದಿನ ತಮ್ಮ ಗ್ರಾಮದಿಂದ  ಹೆಚ್.ಕ್ರಾಸ್ ಗೆ ಬಂದು ವ್ಯಾಪಾರ ಮಾಡಿಕೊಂಡು ವಾಪಸ್ಸು ಮನೆಗೆ ಹೋಗುತ್ತಿದ್ದು ತಾನು ವ್ಯಾಪಾರ ಮಾಡಿ ಬಂದ ಹಣದಿಂದ ಮೂರು ಚಿನ್ನದ ಸರಗಳನ್ನು ತೆಗೆದುಕೊಂಡಿದ್ದು ತಾನು ಯಾವಾಗಲೂ ತನ್ನ ಕತ್ತಿನಲ್ಲಿಯೇ ಹಾಕಿಕೊಳ್ಳುತ್ತಿದ್ದೆನು, ಈಗಿರುವಲ್ಲಿ ಎಂದಿನಂತೆ ದಿನಾಂಕ: 03-02-2021 ರಂದು ತಾನು ಹೆಚ್.ಕ್ರಾಸ್ ಗೆ ಬಂದು ಚೇಪೆ ಕಾಯಿ ವ್ಯಾಪಾರ ಮಾಡಿಕೊಂಡಿದ್ದು ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ಹೆಚ್.ಕ್ರಾಸ್ ಗ್ರಾಮದ ವಿ.ಎಸ್.ಆರ್ ಬಾರ್ ಬಳಿ ವ್ಯಾಪಾರ ಮಾಡುತ್ತಿದ್ದಾಗ ತನಗೆ ತಲೆ ಸುತ್ತು ಬಂದಿದ್ದು ಆಗ ತಾನು ಸುಸ್ತಾಗಿ ಕೆಳಗಡೆ ಕುಳಿತುಕೊಂಡಿದ್ದಾಗ ಯಾರೋ ಇಬ್ಬರು  ವ್ಯಕ್ತಿಗಳು ತನ್ನನ್ನು ಮೇಲಕ್ಕೆ ಎತ್ತಿದ್ದು ಆಗ ತಾನು ಅಲ್ಲಿಯೇ ಪಕ್ಕದಲ್ಲಿ ತನ್ನ ಕಾರು ಇದೇ ಅಲ್ಲಿ ತನ್ನನ್ನು ಬಿಡಿ ಎಂದು ಹೇಳಿದ್ದು ಆಗ ಸದರಿ ವ್ಯಕ್ತಿಗಳು ತನ್ನನ್ನು ಕಾರಿನ ಬಳಿ ಬಿಟ್ಟು  ತನ್ನ ಕತ್ತಿನಲ್ಲಿದ್ದ ಮೂರು ಚಿನ್ನದ ಸರಗಳನ್ನು ಕಿತ್ತುಕೊಂಡಿದ್ದು ಆಗ ತಾನು ಕಿರಿಚಿಕೊಂಡು ಅವರನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದಾಗ ಸದರಿ ವ್ಯಕಿಗಳು ತನ್ನಿಂದ ತಪ್ಪಿಸಿಕೊಂಡು ಅಲ್ಲಿಯೇ ಇದ್ದ ಯಾವುದೋ ಒಂದು ದ್ವಿಚಕ್ರವಾಹನದಲ್ಲಿ ಹೊರಟು ಹೋಗಿರುತ್ತಾರೆ ಸದರಿ ಅಪರಿಚಿತ ವ್ಯಕ್ತಿಗಳು ತನ್ನ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಕಿತ್ತುಕೊಂಡ ಸಮಯದಲ್ಲಿ ಒಂದು ಚಿನ್ನದ ಸರ ಕಟ್ ಆಗಿ ಸಣ್ಣ ಪೀಸು ತನ್ನ ಕತ್ತಿನಲ್ಲಿಯೇ ಉಳಿದಿರುತ್ತೆ, ತನ್ನ ಕತ್ತಿನಲ್ಲಿದ್ದ 1] 30 ಗ್ರಾಂ ತೂಕದ ಒಂದು  ಚಿನ್ನದ ಸರ, ಅದರ ಬೆಲೆ ಸುಮಾರು ರೂ 1,15,000/-, 2] 18 ಗ್ರಾಂ ತೂಕದ ಚಿನ್ನದ ಸರ, ಅದರ ಬೆಲೆ ಸುಮಾರು ರೂ 68,000/- 3] 12 ಗ್ರಾಂ ತೂಕದ ಚಿನ್ನದ ಸರ, ಅದರ ಬೆಲೆ ಸುಮಾರು ರೂ 45,000/-, ನನ್ನ ಕತ್ತಿನಲ್ಲಿದ್ದ ಒಟ್ಟು 60 ಗ್ರಾಂ ತೂಕದ ರೂ 2,28,000/- ರೂ ಬೆಲೆ ಬಾಳುವ ಮೂರು ಚಿನ್ನದ ಚಿನ್ನದ ಸರಗಳನ್ನು ಕಿತ್ತುಕೊಂಡು ದ್ವಿಚಕ್ರವಾಹನದಲ್ಲಿ ಪರಾರಿಯಾದ ಇಬ್ಬರು ಅಪರಿಚಿತ ವ್ಯಕ್ತಿಗಳನ್ನು ಮತ್ತು ತನ್ನ ಬಾಬತ್ತು ಮೂರು ಚಿನ್ನದ ಸರಗಳನ್ನು ಪತ್ತೆಮಾಡಿ ಸದರಿ ಅಪರಿಚಿತ ವ್ಯಕ್ತಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದು ಸದರಿ ಅಪರಿಚಿತ ವ್ಯಕ್ತಿಗಳನ್ನು ತಾನು ಹುಡುಕಾಡಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ನೀಡಿದ ಗಣಕೀಕೃತ ದೂರನ್ನು ಪಡೆದುಕೊಂಡು ಠಾಣಾ ಮೊ.ಸಂ. 28/2021 ಕಲಂ 392 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.    

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.29/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ:05-02-2021 ರಂದು ಪಿರ್ಯಾದಿದಾರರಾದ ಮುನೇಗೌಡ ಆರ್.ಎಂ ಬಿನ್ ಲೇಟ್ ಮುನಿಯಪ್ಪ, ಸುಮಾರು 39 ವರ್ಷ, ಕುರುಬರು, ಟೈಲರ್,ವಾಸ:ರಾಳ್ಳಕುಂಟೆ ಗ್ರಾಮ, ಸೂಲಿಬೆಲೆ ಹೋಬಳಿ, ಹೊಸಕೋಟೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ, ಟೈಲರ್ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು  ತನ್ನ ಅಣ್ಣನಾದ ಮುನಿಕೃಷ್ಣ.ಆರ್.ಎಂ ಬಿನ್ ಲೇಟ್ ಮುನಿಯಪ್ಪ, ಸುಮಾರು 52 ವರ್ಷ  ರವರು ಎಲ್.ಐ.ಸಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿರುತ್ತಾನೆ. ತನ್ನ ಅಣ್ಣನಿಗೆ ನಳಿನ ಎಂಬುವರೊಂದಿಗೆ ಮದುವೆಯಾಗಿದ್ದು ಅವರಿಗೆ ಸುಮಾರು 9 ವರ್ಷದ  ಮಹತ್ ಗೌಡ ಎಂಬ ಒಂದು ಗಂಡು ಮಗನಿರುತ್ತಾನೆ. ತನ್ನ ಅಣ್ಣನ ಬಾಬತ್ತು ಕೆಎ-53 ಇ.ವೈ-3576 ನೊಂದಣಿ ಸಂಖ್ಯೆಯ ಹಿರೋ ಪ್ಯಾಶನ್ ಪ್ರೋ ದ್ವಿಚಕ್ರವಾಹನ ಇದ್ದು ಸದರಿ ದ್ವಿಚಕ್ರವಾಹನದಲ್ಲಿಯೇ  ಅಲ್ಲಲ್ಲಿ  ಕೆಲಸಕ್ಕೆ ಹೋಗಿ  ಎಲ್.ಐ.ಸಿ ಪಾಲಿಸಿದಾರರ ಬಳಿ ಹಣವನ್ನು ಪಾವತಿ ಮಾಡಿಸಿಕೊಂಡು ಬರುತ್ತಿದ್ದನು ಈಗಿರುವಲ್ಲಿ ದಿನಾಂಕ: 04-02-2021 ರಂದು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆಂದು ಶಿಡ್ಲಘಟ್ಟ ತಾಲ್ಲೂಕು ಹೆಚ್,ಕ್ರಾಸ್ ಕಡೆಗೆ ಹೋಗಿರುತ್ತಾನೆ. ಈಗಿರುವಲ್ಲಿ ದಿನಾಂಕ:04-02-2021 ರಂದು ಸಂಜೆ 4-40 ಗಂಟೆಯಲ್ಲಿ ತನ್ನ ಅಣ್ಣನಾದ ಮುನಿಕೃಷ್ಣ.ಆರ್.ಎಂ ತನಗೆ ಪೋನ್ ಮಾಡಿ ಹೆಚ್.ಕ್ರಾಸ್ ಗ್ರಾಮದ ಸರ್ಕಲ್ ಬಳಿ ತನ್ನ ದ್ವಿಚಕ್ರವಾಹನಕ್ಕೆ ಅಪಘಾತವಾಗಿರುವುದಾಗಿ ಹೇಳಿದ್ದು  ಆಗ ತಕ್ಷಣ ತಾನು ಮತ್ತು ಗಂಬೀರನಹಳ್ಳಿ ಗ್ರಾಮದ ತನ್ನ ಸ್ನೇಹಿತನಾದ ಬಾಬು ಬಿನ್ ನಾಗರಾಜಪ್ಪ  ರವರುಗಳು  ಹೆಚ್.ಕ್ರಾಸ್ ಸರ್ಕಲ್ ಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು, ತನ್ನ ಅಣ್ಣನಿಂದ ವಿಚಾರ ತಿಳಿದುಕೊಳ್ಳಲಾಗಿ  ತನ್ನ ಅಣ್ಣನಾದ ಮುನಿಕೃಷ್ಣ .ಆರ್.ಎಂ. ರವರು ತನ್ನ  ಬಾಬತ್ತು ಕೆಎ-53 ಇ.ವೈ-3576 ಹಿರೋ ಪ್ಯಾಶನ್ ಪ್ರೋ ದ್ವಿಚಕ್ರವಾಹನದಲ್ಲಿ ದಿನಾಂಕ:04-02-2021 ರಂದು ಸಂಜೆ ಸುಮಾರು 4-30 ಗಂಟೆಯಲ್ಲಿ ಚಿಂತಾಮಣಿ-ಹೊಸಕೋಟೆ ಮುಖ್ಯ ರಸ್ತೆಯ  ಚಿಂತಾಮಣಿ ಕಡೆಯಿಂದ ಹೆಚ್.ಕ್ರಾಸ್ ಗ್ರಾಮದ ಸರ್ಕಲ್ ನಲ್ಲಿ ಬರುತ್ತಿದ್ದಾಗ ಹೊಸಕೋಟೆ ಕಡೆಯಿಂದ ಬಂದಂತಹ ಕೆಎ-02 ಎ.ಡಿ-4635  ಇಟಿಯಾಸ್ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಅಣ್ಣ ಬರುತ್ತಿದ್ದ ದ್ವಿಚಕ್ರವಾಹನಕ್ಕೆ  ಎದರುಬದಿಯಿಂದ ಡಿಕ್ಕಿಹೊಡೆಸಿದ ಪರಿಣಾಮ ತನ್ನ ಅಣ್ಣ ಮುನಿಕೃಷ್ಣ ಕೆಳಗಡೆ ಬಿದ್ದು ಹೋಗಿ ತನಗೆ ಎಡಕಾಲಿನ ಮೊಣಕಾಲು ಕೆಳಗಡೆ, ಎಡಕಾಲಿನ ಹಿಮ್ಮಡಿಗೆ ರಕ್ತಗಾಗಳಾಗಿದ್ದು, ಬಲಕಾಲಿಗೆ ತರುಚಿದ ಗಾಯಗಳಾಗಿರುತ್ತೆ, ದ್ವಿಚಕ್ರವಾಹನ ಸಹ ಜಖಂಗೊಂಡಿರುತ್ತೆ. ವಿಚಾರ ತಿಳಿದುಕೊಂಡು ಸ್ಥಳಕ್ಕೆಬಂದ ತಾನು ಮತ್ತು ತನ್ನ ಸ್ನೇಹಿತ ಬಾಬು ಸೇರಿ ತನ್ನ ಅಣ್ಣನನ್ನು ಯಾವುದೋ ಒಂದು ಆಟೋದಲ್ಲಿ ಹಾಕಿಕೊಂಡು ಹೋಗಿ ಹೆಚ್.ಕ್ರಾಸ್ ನ ಸೃಷ್ಠಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಪಡಿಸಿಕೊಂಡು ನಂತರ ಹೆಚ್ಚಿನ ಚಿಕಿತ್ಸೆಗಾಗಿ 108 ಅಂಬ್ಯೂಲೇನ್ಸ್ ವಾಹನದಲ್ಲಿ ಹಾಕಿಕೊಂಡು ಹೋಗಿ ಕೋಲಾರದ ಗೌರವ್ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ತಾನು ತನ್ನ ಅಣ್ಣನಿಗೆ ಅಪಘಾತದಲ್ಲಿವುಂಟಾದ ಗಾಯಗಳಿಗೆ ಚಿಕಿತ್ಸೆಪಡಿಸಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ತನ್ನ ಅಣ್ಣನಿಗೆ ಅಪಘಾತವುಂಟು ಮಾಡಿದ ಕೆಎ-02 ಎ.ಡಿ-4635  ಇಟಿಯಾಸ್ ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ 29/2021 ಕಲಂ 279,337 ಐ.ಪಿ.ಸಿ  ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 06-02-2021 01:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080