ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.263/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:03/09/2021 ರಂದು ಸಂಜೆ 7-00 ಗಂಟೆಗೆ  ಗೋಪಾಲರೆಡ್ಡಿ, ಆರಕ್ಷಕ ಉಪ-ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲಿ ಮತ್ತು ಅಸಲುಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ   ಈ ದಿನ ದಿನಾಂಕ; 03.09.2021 ರಂದು ಸಂಜೆ 5-30 ಗಂಟೆ ಸಮಯದಲ್ಲಿ ನಾನು ಮತ್ತು  ಸಿಬ್ಬಂದಿಯಾದ ಸಿಪಿಸಿ-192 ವಿನೋದ್ ಕುಮಾರ್, ಮಹೆಚ್ ಸಿ-164 ಮಮತ ಹಾಗೂ ಜೀಪ್ ಚಾಲಕ ಎ ಹೆಚ್ ಸಿ-14 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ವಾಹನದಲ್ಲಿ ಬಾಗೇಪಲ್ಲಿ ತಾಲ್ಲೂಕು, ಮಿಟ್ಟೇಮರಿ, ಚಿನ್ನೋಬ್ಬಯ್ಯಗಾರಿಪಲ್ಲಿ, ಚೊಕ್ಕಂಪಲ್ಲಿ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ, ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು, ಮಿಟ್ಟ್ಟೇಮರಿ ಹೋಬಳಿ, ಚಿನ್ನೇಪಲ್ಲಿ ಗ್ರಾಮದ, ಕ್ರಾಸ್ ಬಳಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-192 ವಿನೋದ್ ಕುಮಾರ್, ಮಹೆಚ್ ಸಿ-164 ಮಮತ ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಹೊರಟು, ಜೂಲಪಾಳ್ಯ ಕ್ರಾಸ್ ಬಳಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಸಂಜೆ 5-45 ಗಂಟೆಗೆ ಚಿನ್ನೇಪಲ್ಲಿ ಗ್ರಾಮದ ಕ್ರಾಸ್ ಬಳಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿ ಮುಂಭಾಗದಲ್ಲಿದ್ದ ಆರೋಪಿ ಮಹಿಳೆಯು ಓಡಿ ಹೋಗುತ್ತಿದ್ದವರನ್ನು ಸಿಬ್ಬಂದಿಯಾದ ಮಹೆಚ್ ಸಿ-164 ಮಮತ ರವರು ಹಿಡಿಯಲು ಪ್ರಯತ್ನಿಸಿದ್ದು, ಆಸಾಮಿಯು ಕೈಗೆ ಸಿಗದೇ ಓಡಿಹೋಗಿದ್ದು, ಓಡಿ ಹೋದ ಆರೋಪಿ ಮಹಿಳೆಯ  ಹೆಸರು ತಿಳಿಯಲಾಗಿ ಚೌಡಮ್ಮ ಬಿನ್ ಲೇಟ್ ನಾರಾಯಣಪ್ಪ, 60 ವರ್ಷ, ಓಕ್ಕಲಿಗ ಜನಾಂಗ, ಚಿಲ್ಲರೇ ಅಂಗಡಿ ವ್ಯಾಪಾರ, ವಾಸ: ಚಿನ್ನೇಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದುಬಂದಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲನ್ನು  ಸಂಜೆ 7-00 ಗಂಟೆ ಠಾಣೆಯಲ್ಲಿ   ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.264/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 03/09/2021 ರಂದು ರಾತ್ರಿ 7-30 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಸಬ್ಇನ್ಸ್ ಪೆಕ್ಟರ್ ಸರಸ್ವತಮ್ಮ ರವರು ಮಾಲು,ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾನೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ನಾನು ಮತ್ತು ಸಿಬ್ಬಂದಿಯವರು ಕೆಎ-40-ಜಿ-58 ಜೀಪ್ ಚಾಲಕರೊಂದಿಗೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ, ಕಾರಕೂರು ಕ್ರಾಸ್ ಕಡೆ ಗಸ್ತುಮಾಡಿಕೊಂಡು ಸಂಜೆ 4.45 ಗಂಟೆಗೆ ಗಡದಿಂ ಗ್ರಾಮಕ್ಕೆ ಬಂದಾಗ ಬಾತ್ಮಿದಾರರಿಂದ ಬಂದ ಮಾಹಿತಿಯೇನೆಂದರೆ, ಕೊಂಡಂವಾರಪಲ್ಲಿ ಗ್ರಾಮದ ವಾಸಿ ಶಂಕರಪ್ಪ ಬಿನ್ ಲೇಟ್ ವೆಂಕಟನರಸಪ್ಪರವರ ಬಾಬತ್ತು ಚಿಲ್ಲರೆ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಆಸಾಮಿಗಳು ಮದ್ಯಪಾನ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಸಂಜೆ 5.00 ಗಂಟೆಗೆ ಪಂಚರೊಂದಿಗೆ ಮೇಲ್ಕಂ ಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಕೆಲವರು ಆಸಾಮಿಗಳು ಮದ್ಯಪಾನಮಾಡುತ್ತಿದ್ದು, ನಮ್ಮಗಳನ್ನು ನೋಡಿ ಓಡಿಹೋದರು. ಸದರಿ ಸ್ಥಳದಲ್ಲಿ ದೊರೆತ 11 ಮದ್ಯ ತುಂಬಿರುವ OLD TAVERN WHISKY ಯ ಟೆಟ್ರಾ ಪಾಕೆಟ್ ಗಳು, ಒಂದು ಖಾಲಿ ವಾಟರ್ ಬಾಟಲ್, ಎರಡು ಪ್ಲಾಸ್ಟಿಕ್ ಗ್ಲಾಸು, ಖಾಲಿ OLD TAVERN WHISKY ಯ ಟೆಟ್ರಾ ಪಾಕೆಟ್ ಗಳಿದ್ದು, ಸದರಿ ಸ್ಥಳದಲ್ಲಿ ಪಂಚನಾಮೆಯ ಮೂಲಕ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿ ಒಬ್ಬ ಆಸಾಮಿಯು ಇದ್ದು, ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಶಂಕರಪ್ಪ ಬಿನ್ ಲೇಟ್ ವೆಂಕಟನರಸಪ್ಪ, 55 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಕೊಂಡಂವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದನು, ಸದರಿ ಆಸಾಮಿಗೆ ಮದ್ಯಪಾನ ಮಾಡಲು ಸ್ಥಳಾವಕಾಶಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂತ ತಿಳಿಸಿದನು. ನಂತರ ಸದರಿ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ, ಆರೋಪಿ ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕಾನೂನುರೀತ್ಯಾ ಕ್ರಮಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.143/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 04-09-2021 ರಂದು ಮದ್ಯಾಹ್ನ 1-00 ಗಂಟೆಗೆ ಪಿ,ಎಸ್,ಐ ಶ್ರೀ ಶರತ್ ಕುಮಾರ್ DCB/CEN ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ ಈ ದಿನ ದಿನಾಂಕ;04-09-2021 ರಂದು ನಾನು ಸಿಬ್ಬಂದಿಯಾದ ಮಧು ಸಿಪಿಸಿ-527 ಮತ್ತು ಕೆಎ-40 ಜಿ-58 ಜೀಪ್ ಚಾಲಕರಾದ ,ಎ,ಹೆಚ್,ಸಿ-13 ಸುಶೀಲ್ ಕುಮಾರ್ ರವರೊಂದಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ಗಸ್ತು ಮಾಡಿಕೊಂಡು ಬೆಳಿಗ್ಗೆ 11-00 ಗಂಟೆಗೆ ಅಗಲಗುರ್ಕಿ ಗ್ರಮದ ಕ್ರಾಸಿಗೆ ಬಂದು ಗಸ್ತಿನಲ್ಲಿದ್ದಾಗ ಆಗಲಗುರ್ಕಿ ಗ್ರಾಮದ ವಾಸಿಯಾದ ಆನಂದ್ ಬಿನ್ ಲೇಟ್ ನಾಗಪ್ಪ ರವರ ಮನೆಯ ಮುಂಬಾಗದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಮದ್ಯವನ್ನು ಸೇವನೆ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ಇಲ್ಲಿಯೇ ಇದ್ದ  ಪಂಚರನ್ನು ಬರ ಮಾಡಿಕೊಂಡು ಅವರಿಗೆ ಬಂದ ಮಾಹಿತಿಯನ್ನು ತಿಳಿಸಿ ನಾವು ಮತ್ತು ಪಂಚರು ಮೇಲ್ಕಂಡ ಸ್ಥಳಕ್ಕೆ  ಬೆಳಿಗ್ಗೆ 11-15 ಗಂಟೆಗೆ ಹೋಗಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ನೋಡಲಾಗಿ ಯಾರೋ ಕೆಲವರು ಸೇರಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದು ನಮ್ಮಗಳನ್ನು ನೋಡಿ ಸ್ಥಳದಿಂದ ಓಡಿ ಹೋದರು ಸದರಿ ಸ್ಥಳದಲ್ಲಿ ಒಬ್ಬ ಆಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಹನುಮೇಶ್ ಬಿನ್ ಹನುಮೇಗೌಡ, 21 ವರ್ಷ, ವಕ್ಕಲಿಗರು, ಎನ್.ಎನ್ ಬಾರ್ ಮತ್ತು ರೆಸ್ಟೊರೆಂಟ್ ಸಪ್ಲೆಯರ್ ಕೆಲಸ, ವಾಸ; ಕರಡಕೆರೆ ಗ್ರಾಮ, ಮಂಡ್ಯ ಜಿಲ್ಲೆ ಹಾಲಿ ವಾಸ ಎನ್.ಎನ್ ಬಾರ್ ಮತ್ತು ರೆಸ್ಟೊರೆಂಟ್ ಜಡಲತಿಮ್ಮನಹಳ್ಳಿ ಗೇಟ್ ಎಂತ ತಿಳಿಸಿದನು. 90 ಎಮ್,ಎಲ್ ಮದ್ಯ ತುಂಬಿದ HAYWARDS CHEERS WHISKY TETRA POCKETS ದು ಖಾಲಿ ವಾಟರ್ ಬಾಟೆಲ್, 02 ಖಾಲಿಯಾಗಿರುವ 90 ಎಮ್,ಎಲ್ ಮದ್ಯ ತುಂಬಿದ HAYWARDS CHEERS WHISKY TETRA POCKET. ಗಳಿರುತ್ತೆ. ಮದ್ಯ ತುಂಬಿರುವ ಪ್ರತಿಯೊಂದರ ಬೆಲೆ 35.13/- ರೂಗಳಂತೆ ಒಟ್ಟು 702/- ರೂಗಳಾಗಿದ್ದು ಒಟ್ಟು ಮದ್ಯವು 01 ಲೀಟರ್ 800  ಎಂ.ಎಲ್ ಆಗಿರುತ್ತೆ  ನಂತರ ಮೇಲ್ಕಂಡ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ ಮಾಲುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತೆ. ಆರೋಪಿ ಮಾಲುಗಳು ಮತ್ತು ಪಂಚನಾಮೆಯೊಂದಿಗೆ ವರದಿಯನ್ನು ನೀಡಿದ್ದು ಈ ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಿದರ ಮೇರೆಗೆ ಈ ಪ್ರ,ವ,ವರದಿ.

 

4. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.64/2021 ಕಲಂ. 379 ಐ.ಪಿ.ಸಿ:-

     ದಿನಾಂಕ 04-09-2021  ರಂದು ಪಿರ್ಯಾದಿ ಶ್ರೀ ರವಿಕುಮಾರ್ ಕೆ.ಅರ್ ಬಿನ್ ರಾಮಣ್ಣ, 39 ವರ್ಷ, ವಕ್ಕಲಿಗರು, ಪ್ರಶಾಂತ ನಗರ ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಶೇಪ್ರಡ್ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು ತನ್ನ ಬಾಬತ್ತು ಹಿರೊ ಪ್ಯಾಷನ್ ಪ್ರೊ ದ್ವಿಚಕ್ರ ವಾಹನ ಸಂಖ್ಯೆ KA40U1603  ಮತ್ತು ಅದರ ಚಾರ್ಸಿ ನಂ MBLHA10AWDHF39479 ಮತ್ತು ಅದರ ಇಂಜಿನ್ ನಂ HA10ENDHF49819 ಅಗಿದ್ದು ಇದರ ಬೆಲೆ ಸುಮಾರು 18,000/- ರೂಪಾಯಿಗಳಾಗಿದ್ದು  ಪ್ರತಿ ದಿನ ತನ್ನ ದ್ವಿಚಕ್ರ ವಾಹನವನ್ನು ಶಾಲೆಯ ಪಕ್ಕದಲ್ಲಿರುವ ಶನ್ವೇಶ್ವರ ದೇವಸ್ಥಾನದ ಬಳಿ ನಿಲ್ಲಿಸಿ ಶಾಲೆಗೆ ಹೋಗುತ್ತಿದ್ದು ಅದರಂತೆ  ದಿನಾಂಕ 31/08/2021 ರಂದು ಮದ್ಯಾಹ್ನ ಸುಮಾರು 2-15 ಗಂಟೆಯ ಸಮಯದಲ್ಲಿ ಮನೆಯಲ್ಲಿ ಊಟ ಮಾಡಿಕೊಂಡು ಬಂದು ಶಾಲೆಯ ಪಕ್ಕದ ದೇವಸ್ಥಾನದ ಬಳಿ ನಿಲ್ಲಿಸಿ ಶಾಲೆಗೆ ಹೋಗಿ ಶಾಲೆ ಮುಗಿಸಿಕೊಂಡು ವಾಪಸ್ಸು ಸಂಜೆ 5-00 ಗಂಟೆಯ ಸಮಯದಲ್ಲಿ ಬಂದು ನೋಡಲಾಗಿ ಸ್ಥಳದಲ್ಲಿ ಇರುವುದಿಲ್ಲ ನಂತರ ಮನೆ ಮತ್ತು ಶಾಲೆಯ ಸುತ್ತಮುತ್ತ, ಸ್ನೇಹಿತರು ಪರಿಚಯಸ್ತರು ಸಂಬಂದಿಕ ಮನೆಗಳು ಮತ್ತು ಗೊತ್ತಿರುವ ಎಲ್ಲಾ ಕಡೆ ಹುಡುಕಿದರೂ ದ್ವಿಚಕ್ರ ವಾಹನ ಪತ್ತೆಯಾಗಿರುವುದಿಲ್ಲ ತನ್ನ ದ್ವಿಚಕ್ರ ವಾಹನವನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದು  ಕಳವು ಆಗಿರುವ ದ್ವಿಚಕ್ರ ವಾಹನ ಮತ್ತು ಅರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆ  ಈ ಪ್ರ.ವ.ವರದಿ.

 

5. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.123/2021 ಕಲಂ. 454,380 ಐ.ಪಿ.ಸಿ:-

     ದಿನಾಂಕ:03/09/2021 ರಂದು ಸಂಜೆ 18-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ   ಗಣಕಯಂತ್ರ ಮುದ್ರಿತ ದೂರಿನ ಸಾರಾಂಶವೆನೇಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಕೂಲಿ ಕೆಲಸ  ಮತ್ತು ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಮ್ಮ  ಮನೆಯಲ್ಲಿ ನಾವು ಒಟ್ಟು 6 ಜನ ವಾಸವಾಗಿದ್ದು ನಾನು, ನನ್ನ ಹೆಂಡತಿ ಸಾಕಮ್ಮ, ನನ್ನ ಮಗ ಗಂಗಾಧರಪ್ಪ,ನನ್ನ ಸೊಸೆ ವೆಂಕಟಲಕ್ಷ್ಮೀ ಹಾಗೂ ನನ್ನ ಮಗನ ಮಕ್ಕಳು ಇಬ್ಬರು ಪಲ್ಲವಿ ಮತ್ತು ಸುಧೀರ್ ರವರುಗಳು ಆಗಿರುತ್ತಾರೆ. ನಾನು, ನನ್ನ ಹಂಡತಿ, ನನ್ನ ಮಗ ಮತ್ತು ನನ್ನ ಸೊಸೆಯರವರುಗಳು  ನಮ್ಮ ಗ್ರಾಮದ ಸುತ್ತಮುತ್ತಲಿನಲ್ಲಿ ಎಲ್ಲಿ ಕೂಲಿ ಸಿಕ್ಕಿದರೆ ಅಲ್ಲಿ ಗೆ ಬೇರೆ ಬೇರೆಯಾಗಿ ಬೆಳಗ್ಗೆ 9-00 ಗಂಟೆಗೆ ಕೂಲಿ ಕೆಲಸ ಹೋದರೆ ನಂತರ ಕೂಲಿ ಕೆಲಸ ಮಾಡಿಕೊಂಡು ಸಂಜೆ 5-00 ರಿಂದ 6-00 ಗಂಟೆಗೆ ಮನೆಗೆ ಬರುತ್ತಿದ್ದೆವು. ನಾವು ಕೂಲಿ ಕೆಲಸಕ್ಕೆ ಹೋದಾಗ ನಮ್ಮ ವಾಸದ ಮನೆಯ ಬೀಗದ ಕೀಯನ್ನು ನಮ್ಮ ಮನೆಯ ಮುಂದೆ ಇರುವ ದನಗಳ ಮನೆಯಲ್ಲಿ ಕಿಟಕಿಯಲ್ಲಿ ಇಡುತ್ತಿದ್ದೆವು ಯಾಕೆಂದರೆ ಯಾರು ಬೇಗ ಬಂದರೆ ಅವರಿಗೆ ಮನೆಯ ಬೀಗ ಸಿಗಲಿ ಎಂದು ನಮ್ಮ ಮನೆಯ ಮುಂದೆ ಇರುವ ದನಗಳ ಮನೆಯ ಕಿಟಿಕಿಯಲ್ಲಿ ವಾಸದ ಮನೆಯ ಬೀಗದ ಕೀಯನ್ನು ಇಡುತ್ತಿದ್ದೆವು. ನಾನು ಈ ಹಿಂದೆ 33 ½ ಗ್ರಾಂ ತೂಕ ಬಂಗಾರದ ಟೀಕಾ ಚೈನ್ ನ್ನು ಖರೀಸಿದ್ದು ಹಬ್ಬ ಮತ್ತು ಇತರ ವಿಶೇಷ ದಿನಗಳಲ್ಲಿ ನಮ್ಮ ಮನೆಯ ಹೆಂಗಸರು ಚೈನ್ ನ್ನು ಹಾಕಿಕೊಳ್ಳುತ್ತಿದ್ದರು ಉಳಿದ ದಿನಗಳಲ್ಲಿ ನಮ್ಮ ಮನೆಯಲ್ಲಿದ್ದ ಬೀರುವುನಲ್ಲಿ  ಇಡುತ್ತಿದ್ದೆವು. ಈಗ್ಗೆ 6 ತಿಂಗಳ ಹಿಂದೆ 38 ಗ್ರಾಂ ಲಾಂಗ್ ಚೈನ್ (ಚಂದ್ರಹಾರವನ್ನು) ಖರೀದಿಸಿ ನಮ್ಮ ಮನೆಯ ಬೀರುವಿನಲ್ಲಿ ಇಟ್ಟಿರುತ್ತೇವೆ ಎಂದಿನಂತೆ ದಿನಾಂಕ:02/09/2021 ರಂದು ಬೆಳಗ್ಗೆ 9-00 ಗಂಟೆಯಲ್ಲಿ ನಮ್ಮ ಸ್ವಂತ ಜಮೀನಿನಲ್ಲಿ ಹಾಕಿದ್ದ ಕಡಲೆ ಕಾಯಿ ಬೆಳೆಯಲ್ಲಿ ಕಸ ತೆಗೆಯುವ ಕೆಲಸಕ್ಕೆ ನಾವು ಎಲ್ಲರೂ ಮಕ್ಕಳ ಸಮೇತ ವಾಸದ ಮನೆಗೆ ಬೀಗವನ್ನು ಹಾಕಿಕೊಂಡು ಮನೆಯ ಬೀಗದ ಕೀ ಯನ್ನು ದನಗಳ ಮನೆಯ ಕಿಟಿಕಿಯಲ್ಲಿಟ್ಟು ಜಮೀನಿನ ಬಳಿ ಹೋಗಿರುತ್ತೇವೆ. ನಂತರ ಸಂಜೆ 5-00 ಗಂಟೆಯ ಸಮಯದಲ್ಲಿ ನನ್ನ ಮಗನಾದ ಗಂಗಾಧರಪ್ಪ ರವರು  ಹಾಲು ಹಿಂಡಲು ಹಸುವನ್ನು ಕರೆದುಕೊಂಡು ಮನೆಗೆ ಬಂದಿದ್ದು ನಂತರ ಸುಮಾರು 5-20 ಗಂಟೆಯ ಸಮಯದಲ್ಲಿ ನನ್ನ ಮಗ ಗಂಗಾಧರಪ್ಪ ರವರು ನನಗೆ ಪೋನ್ ಮಾಡಿ ದನಗಳ ಮನೆಯ ಕಿಟಕಿಯಲ್ಲಿ ಇಟ್ಟಿದ ಬೀಗದ ಕೀ ಕಾಣಸದೆ ಇದ್ದು  ಮನೆಯ ಬಾಗಿಲು ತೆರೆದಿರುತ್ತೆ ಮನೆಯ ಒಳಗೆ ಹೋಗಿ ನೋಡಿದಾಗ ಬೀರುವಿನ ಬಾಗಿಲು ಸಹ ತೆರೆದಿರುತ್ತೆಂದು ಹೇಳಿದ್ದು ತಕ್ಷಣ ನಾವೆಲ್ಲರೂ ಮನೆಯ ಬಳಿ ಬಂದು ಮನೆಯ ಒಳಗೆ ಹೋಗಿ ಬೀರುವಿನಲ್ಲಿ ಇಟ್ಟಿದ್ದ ಒಡವೆಗಳನ್ನು ನೋಡಲಾಗಿ  ಮನೆಯ ಬೀರುವಿನಲ್ಲಿ ಇಟ್ಟಿದ್ದ ಲಾಂಗ್ ಚೈನ್ ಮತ್ತು ಟೀಕಾ ಚೈನ್  ಹಾಗೂ ನಗದು ಹಣ 25 ಸಾವಿರ ರೂಗಳು ಕಾಣಿಸಿರುವುದಿಲ್ಲ. ದಿನಾಂಕ:02/09/2021 ರಂದು ಬೆಳಗ್ಗೆ 9-00 ಗಂಟೆಯ ಸಮಯದಲ್ಲಿ ನಾವು ಮನೆಗೆ ಬೀಗವನ್ನು ಹಾಕಿಕೊಂಡು ನಮ್ಮ ಜಮೀನಿನ ಬಳಿಗೆ ಕೆಲಸಕ್ಕೆ ಹೋಗುವಾಗ ದನಗಳ ಮನೆಯಲ್ಲಿ ಬೀಗದ ಕೀಯನ್ನು ಇಡುವುದನ್ನು ಯಾರೋ ಕಳ್ಳರು ಹೊಂಚುಹಾಕಿ ನೋಡಿಕೊಂಡು ನಾವು ಜಮೀನಿನ ಬಳಿಗೆ ಕೆಲಸಕ್ಕೆ ಹೋದ ಮೇಲೆ ನಮ್ಮ ಮನೆಯ ಮುಂದೆ ಇರುವ ದನಗಳ ಮನೆಯ ಕಿಟಕಿಯಲ್ಲಿ ಇಟ್ಟಿದ ವಾಸದ ಮನೆಯ ಬೀಗದ ಕೀಯನ್ನು ತೆಗೆದುಕೊಂಡು ಮನೆಯ ಬೀಗವನ್ನು ತೆಗೆದು ಮನೆ ಒಳಗೆ ಪ್ರವೇಶಿಸಿ ಮನೆಯಲ್ಲಿ ಬೀರುವಿನ ಮೇಲೆ ಇದ್ದ ಬೀರುವಿನ ಬೀಗದ ಕೀಯನ್ನು ತೆಗೆದುಕೊಂಡು ಬೀರುವಿನ ಬೀಗವನ್ನು ತೆಗೆದು ಬೀರುವಿನ ಡ್ರಾನಲ್ಲಿಟ್ಟಿದ್ದ  38 ಗ್ರಾಂ ಲಾಂಗ್ ಚೈನ್,  33 ½ ಗ್ರಾಂ ತೂಕ ಬಂಗಾರದ ಟೀಕಾ ಚೈನ್ ನ್ನು ಹಾಗೂ ನಗದು ಹಣ 25 ಸಾವಿರ ರೂಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಬೀರುವಿನ ಬೀಗದ ಕೀಯನ್ನು  ಮತ್ತು ಮನೆಯ ಬೀಗದ ಕೀಯನ್ನು ಅಲ್ಲಿಯೇ ಬಿಸಾಡಿ ಹೋಗಿರುತ್ತಾರೆ. ದಿನಾಂಕ:02/09/2021 ರಂದು ಹಗಲಿನಲ್ಲಿ ನಮ್ಮ ಮನೆಯ ಬೀಗವನ್ನು ತೆಗೆದು ಮನೆಯೊಳಗೆ ಬಂದು ಸುಮಾರು ಎರಡು ಲಕ್ಷ ಎಂಬತ್ತು ಸಾವಿರ ರೂ ಬೆಲೆ ಬಾಳುವ ಬಂಗಾರ ಓಡವೆಗಳನ್ನು ಮತ್ತು 25 ಸಾವಿರ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ನಾವು ಇದೂವರೆವಿಗೂ ನಮ್ಮ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಮ್ಮ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿರುವ ಕಳ್ಳರ ಬಗ್ಗೆ ವಿಚಾರಣೆ ಮಾಡುತ್ತಿದ್ದರಿಂದ ಹಾಗೂ ಒಂಗಾರದ ಒಡವೆಗಳ ಬಿಲ್ಲುಗಳನ್ನು ಹುಡುಕುತ್ತಿದ್ದರಿಂದ ಈ ದಿನ ಸಂಜೆ 18-00 ಗಂಟೆಗೆ ತಡವಾಗಿ ಠಾಣೆಗೆ ಹಾಜರಾಗಿ ನಿನ್ನೆಯ ದಿನ ಹಗಲು ವೇಳೆಯಲ್ಲಿ ನಾವು ಯಾರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆಯ ಬೀಗವನ್ನು ತೆಗೆದು ಮನೆಯ ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಒಡವೆಗಳನ್ನು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂಖ್ಯೆ:123/2021 ಕಲಂ:454,380 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.215/2021 ಕಲಂ. 279,337,304(A) ಐ.ಪಿ.ಸಿ:-

     ದಿನಾಂಕ: 03/09/2021 ರಂದು ಸಂಜೆ 06-00 ಗಂಟೆಗೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೇಮೊ ಪಡೆದುಕೊಂದು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ 03/09/2021 ರಂದು ಬೆಲಿಗ್ಗೆ ಸುಮಾರು 12-00 ಗಂಟೆ ಸಮಯದಲ್ಲಿ ಹಿಂದೂಪುರದಲ್ಲಿ ರೇಷ್ಮೇಗೆ ಬಳಕೆ ಮಾಡುವ ಜನರೇಟರ್ ಅನ್ನು ಈ ಮೋದಲೆ ರೀಪೆರಿಗೆ ಕೊಟ್ಟಿದ್ದು ಅದನ್ನು ನೋಡಿಕೊಂಡು ಬರಲು ನನ್ನ ಸ್ನೇಹಿತನಾದ ನಾಗರಾಜು @ ಟಿಂಕರ್ ನಾಗ, ಸುಮಾರು 50 ವರ್ಷ, ಪಾಲನಜೋಗಹಳ್ಳಿ ಗ್ರಾಮ ರವರನ್ನು ನನ್ನ ಜೋತೆಯಲ್ಲಿ ನನ್ನ ಬಾಬತ್ತು ಕೆಎ 05 ಇಎನ್ 7920 ನೋಂದಣಿ ಸಂಖ್ಯೆಯ ವೀಕ್ಟರ್ ದ್ವಿಚಕ್ರ ವಾಹನದಲ್ಲಿ ನಾಗರಾಜು ರವರು ಚಾಲನೆ ಮಾಡುತ್ತಿದ್ದು ನಾನು ಹಿಂಬದಿಯಲ್ಲಿ ಕುಳಿತುಕೊಂಡು ಹೀಂದುಪುರಕ್ಕೆ ಹೋಗಿ ಕೆಲಸವನ್ನು ನೋಡಿಕೊಂಡು ಮದ್ಯಾಹ್ನ ಸುಮಾರು 03-30 ಗಂಟೆ ಸಮಯದಲ್ಲಿ ವಾಪಸ್ಸು ನಮ್ಮ ಗ್ರಾಮಕ್ಕೆ ಹೋಗಲು ಹಿಂದೂಪುರ ಬಿಟ್ಟು ಬರುತ್ತಿರುವಾಗ ಸಂಜೆ ಸುಮಾರು 4-00 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ದೋಡ್ಡಕುರುಗೊಡು ಕೆರೆ ಕೋಡಿ ಸಮೀಪ ನನ್ನ ಸ್ನೇಹಿತ ನಾಗರಾಜು ರವರು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನದ ಎದುರುಗಡೆಯಿಂದ ಅಂದರೆ ಗೌರಿಬಿದನೂರು ಕಡೆಯಿಂದ ಬಂದ ಬಸ್ಸೊಂದನ್ನ ಕಂಡ ನಾನು ನನ್ನ ಸ್ನೇಹಿತನಿಗೆ ಹಿಂಬದಿಯಲ್ಲಿ ಕುಳಿತಿದ್ದ ನಾನು ನಿಧಾನವಾಗಿ ಚಾಲನೆ ಮಾಡುವಂತೆ ಹೇಳುತ್ತಿದ್ದರೂ ಸಹ ಅತಿ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿ ಮೋರಿಯ ಪಕ್ಕದಲ್ಲಿದ್ದ ಸೂಚನಾ ಪಲಕಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ನಾವು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಸಮೇತ ಮೋರಿ ಪಕ್ಕದಲ್ಲಿದ್ದ ಹಳ್ಳಕ್ಕೆ ಬಿದ್ದ ಪರಿಣಾಮ ತನಗೆ ತಲೆಗೆ ರಕ್ತ ಗಾಯ ವಾಗಿದ್ದು ಹಾಗೂ ತನ್ನ ಬಲಗಾಲಿನ ಹಿಮ್ಮಡಿ ಬಳಿ ತರಚಿದ ಗಾಯ ವಾಗಿದ್ದು ನಾನು ಕೂಡಲೆ ಎದ್ದು ನಾಗರಾಜು ರವರನ್ನು ಎತ್ತಿ ಕುಳ್ಳರಿಸಿ ಮಾತನಾಡಲು ಪ್ರಯತ್ನಿಸಿದಾಗ ಪ್ರತಿಕ್ರಿಯೆ ನೀಡದೆ ಇದ್ದು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾರೆ, ನಾಗರಾಜು ರವರು ದ್ವಿವಿಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಉಂಟಾಗಿದ್ದು ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತದೆ.

 

7. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.130/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:03/09/2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ  ಶ್ರೀ ಶಿವನಾಂದ ಬಿನ್ ಸಿದ್ದಪ್ಪ,  38 ವರ್ಷ, ಸಾದರು ಜನಂಗ, ವಾಸ: ಶ್ರಾವಂಡನಹಳ್ಳಿ ಗ್ರಾಮ, ಮದುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಮ್ಮ ತಮ್ಮನಾದ ಮಂಜುನಾಥ ಬಿನ್ ಸಿದ್ದಪ್ಪ, ರವರು ದಿನಾಂಕ;03/09/2021 ರಂದು ಬೆಳಗ್ಗೆ 9-00 ಗಂಟೆ ಸಮಯದಲ್ಲಿ ಶ್ರಾವಂಡನಹಳ್ಳಿಯಿಂದ ಗೌರಿಬಿದನೂರಿಗೆ ಬರುವಾಗ ಮಾರ್ಗ ಮದ್ಯೆ ಗುಂಡಾಪುರ ಕಾದಲವೇಣಿ ಗ್ರಾಮದ ಮದ್ಯೆ ಬೈಪಾಸ್ ತಿರುವು ಬಳಿ ಜಿ.ಬಿ.ಎನ್. ಲೇಔಟ್  ಹತ್ತಿರ ಇರುವ ಟ್ಯಾಂಕ್ ಬಳಿ ದ್ವಿ ಚಕ್ರ ವಾಹನ ನಂ:ಕೆ.ಎ-64 ಕೆ 1068 ವಾಹನದಲ್ಲಿ ಗೌರಿಬಿದನೂರಿಗೆ ಬರುವಾಗ ಗೌರಿಬಿದನೂರುನಿಂದ ಎದುರುಗಡೆ ಬರುತ್ತಿದ್ದ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ತಮ್ಮ ಚಾಲನೆ ಮಾಡುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತೆ. ಸದರಿ ಕಾರು ನೊಂದಣಿ ಸಂಖ್ಯೆ ಕೆ.ಎ-02 ಜೆಡ್-3013 ಆಗಿದ್ದು ಅಪಘಾತವಾದ ತಕ್ಷಣ ತನ್ನ ತಮ್ಮ ಸ್ಥಳದಲ್ಲಿ ಬಿದ್ದು ಹೋಗಿದ್ದು ಆತನ ಬಲಗಾಲಿಗೆ ತೀವ್ರ ಸ್ವರೂಪದ ರಕ್ತ ಗಾಯಾಗಳಾಗಿದ್ದು ತಕ್ಷಣ ಹತ್ತಿರ ಇದ್ದ ಜನ ಬಂದು ತನ್ನ ತಮ್ಮನನ್ನು ಎತ್ತಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ನಂತರ ವೈದ್ಯರ ಸಲಹೆಯಂತೆ ತನ್ನ ತಮ್ಮನನ್ನು ಬೆಂಗಳೂರು ಸಂಜಯ್ ಗಾಂದಿ ಆಸ್ಪತ್ರೆಗೆ ದಾಖಲು ಮಾಡಿದ್ದು, ತನ್ನ ತಮ್ಮನ ಬಲಗಾಲು ಮುರಿದಿದ್ದು ಸದರಿ ಅಪಘಾತಕ್ಕೆ ಕಾರನ್ನು ಚಾಲಕ/ಚಾಲಕಿ ಅತಿವೇಗ ಮತ್ತು ಅಜಾಗೂರುಕತೆಯಿಂಧ ಚಾಲನೆ ಮಾಡಿರುವುದು ಕಾರಣವಾಗಿದ್ದು ತಾವುಗಳು ದಯವಿಟ್ಟು ಸದರಿ ವಾಹನದ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿದೆ.

 

8. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.99/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:3/09/2021 ರಂದು ಸಂಜೆ 4:45 ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:03-09-2021 ರಂದು  ಮಧ್ಯಾಹ್ನ 3:40 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್.ಸಿ-230 ನಾಗರಾಜು ಕೆಪಿ ಮತ್ತು ಪಿಸಿ-06 ರಾಮಕೃಷ್ಣ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ಚದಲಪುರ  ಕ್ರಾಸಿನ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಗವಿಗಾನಹಳ್ಳಿ ಗ್ರಾಮದ ಮುನಿರಾಜು ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ತನ್ನ ಮನೆಯ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಗವಿಗಾನಹಳ್ಳಿ ಗ್ರಾಮದ ಗೇಟ್ ಬಳಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಮಧ್ಯಾಹ್ನ 3:55 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ಮುನಿರಾಜು ಬಿನ್ ಲೇಟ್ ದೊಡ್ಡಮುನಿಯಪ್ಪ , 50 ವರ್ಷ, ಕೂಲಿ ಕೆಲಸ, ಪ.ಜಾತಿ, ಗವಿಗಾನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 12 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 12 ಟೆಟ್ರಾ ಪ್ಯಾಕೇಟುಗಳ ಬೆಲೆ 421 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 80 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS WHISKY ಯ 5 ಖಾಲಿ  ಟೆಟ್ರಾ  ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 4:00 ಗಂಟೆಯಿಂದ ಸಂಜೆ 4:30 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

9. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.100/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:03-09-2021 ರಂದು ಸಂಜೆ 8-20 ಗಂಟೆಗೆ ಸಾಹೇಬರು ದಾಳಿಯಿಂದ ಠಾಣೆಗೆ ಆರೋಫಿ ಅಮಾನತ್ತು ಪಡಿಸಿದ್ದ ಮಾಲು ಹಾಗೂ ಪಂಚನಾಮೆಯೊಂದಿಗೆ  ಹಾಜರಾಗಿ ನೀಡಿದ  ವರದಿಯ ಸಾರಾಂಶವೇನೆಂದರೆ ದಿನಾಂಕ:03/09/2021 ರಂದು ಸಂಜೆ  ಸಂಜೆ 7-00 ಗಂಟೆಯ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಂದ ಖಚಿತ ಮಾಹಿತಿ ಏನೆಂದರೆ ಕೊಳವನಹಳ್ಳಿ ಗ್ರಾಮದ ಮುನಿರಾಜು@ಪೇಪರ್ ಮುನಿರಾಜು ತನ್ನ ಅಂಗಡಿಯ ಮುಂಭಾಗದಲ್ಲಿ ಅಕ್ರಮವಾಗಿ ಗಿರಾಕಿಗಳಿಗೆ ಸ್ಥಳದಲ್ಲೇ ಮದ್ಯವನ್ನು ಸೇವಿಸಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯನ್ನು ಅನುಸರಿಸಿ ಸರ್ಕಾರಿ ಪೊಲೀಸ್ ಜೀಪ್ KA-40-G-1555 ರಲ್ಲಿ ಸಿಬ್ಬಂದಿಯಾದ ಹೆಚ್ ಸಿ-32 ಕೇಶವಮೂರ್ತಿ ಮತ್ತು ಸಿಪಿಸಿ-314 ಜವಾರಪ್ಪ ರವರೊಂದಿಗೆ ಸದರಿ ಸ್ಥಳದ ಮೇಲೆ ಧಾಳಿ ಮಾಡಿ ಕ್ರಮ ಜರುಗಿಸಲು ಕೊಳವನಹಳ್ಳಿ ಗ್ರಾಮದ ಹೋರವಲಯದಲ್ಲಿ ಪಂಚರನ್ನು ಬರಮಾಡಿಕೊಂಡು ಅವರ ಸಮಕ್ಷಮ  ಸಂಜೆ 7-15 ಗಂಟೆಗೆ ಕೊಳವನಹಳ್ಳಿ ಗ್ರಾಮದಲ್ಲಿನ ಮುನಿರಾಜು@ಪೇಪರ್ ಮುನಿರಾಜು ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಹೋಗುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಸ್ಥಳದಿಂದ ಓಡಿ  ಪರಾರಿಯಾಗಿ ಹೋದರು. ಇವನ ಅಂಗಡಿಯ ಬಳಿ ಖಾಲಿ ಮದ್ಯದ ಟೆಟ್ರಾ ಪ್ಯಾಕೇಟುಗಳು ಹಾಗೂ ಖಾಲಿ ಲೋಟಗಳು ಇದ್ದವು, ಮದ್ಯವನ್ನು ಪೂರೈಸುತ್ತಿದ್ದವನ ಹೆಸರು ವಿಳಾಸವನ್ನು ಕೇಳಲಾಗಿ ಮುನಿರಾಜು@ಪೇಪರ್ ಮುನಿರಾಜು ಬಿನ್ ಲೇಟ್ ಮುನಿಯಪ್ಪ, 40 ವರ್ಷ, ವಕ್ಕಲಿಗರು ,ಚಿಲ್ಲರೆ ಅಂಗಡಿ ವ್ಯಾಪಾರ , ಕೊಳವನಹಳ್ಳಿ ಗ್ರಾಮ ನಂದಿ ಹೋಬಳಿ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದನು. ಅಂಗಡಿಯ ಮುಂಬಾಗದ ಬಳಿ  ಒಂದು ಕಪ್ಪು ಪ್ಲಾಸ್ಟಿಕ್ ಕವರ್ ಇದ್ದು  ಕವರಿನಲ್ಲಿ ಮದ್ಯದ ಟೆಟ್ರಾ ಪ್ಯಾಕೇಟುಗಳು ಇರುವುದು ಕಂಡುಬಂದಿರುತ್ತದೆ, ಕವರಿನಲ್ಲಿ 1) 90 ML ಸಾಮರ್ಥದ HAYWARDS CHEERS  WHISKY  ಹೆಸರಿನ 15 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ ಬೆಲೆ 35.13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-1350 ML ಮದ್ಯವಿದ್ದು ಒಟ್ಟು ಬೆಲೆ 526 ರೂ ಆಗುತ್ತದೆ.2) 90 ಎಂ ಎಲ್ ಸಾಮರ್ಥ್ಯದ HAYWARDS CHEERS  WHISKY  ಖಾಲಿ 5 ಟೆಟ್ರಾ ಪ್ಯಾಕೇಟುಗಳು ಇರುತ್ತವೆ, 3) 5 ಖಾಲಿ ಲೋಟಗಳು ಸಿಕ್ಕಿದ್ದು ಸಾಹೇಬರು ಮುನಿರಾಜು@ಪೇಪರ್ ಮುನಿರಾಜು ನನ್ನು ಗಿರಾಕಿಗಳಿಗೆ, ಮದ್ಯವನ್ನು ಪೂರೈಸಲು ನಿನ್ನಬಳಿ ಪರವಾನಿಗೆ, ಇದೆಯೇ? ಇದ್ದರೆ ಹಾಜರುಪಡಿಸಲು ಕೋರಿದಾಗ ಸದರಿ ಮುನಿರಾಜು@ಪೇಪರ್ ಮುನಿರಾಜನು ತನ್ನ ಬಳಿ ಯಾವುದೂ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 7:15 ಗಂಟೆಯಿಂದ ಸಂಜೆ 8:00 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

10. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.101/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ: 04-09-2021 ರಂದು  ಪಿರ್ಯಾದಿದಾರರಾದ ಶ್ರೀ ಶ್ರೀನಿವಾಸ ಬಿನ್ ನರಸಿಂಹರೆಡ್ಡಿ, 53 ವರ್ಷ, ವಕ್ಕಲಿಗರು, ಲಾರಿ ಚಾಲಕ, ಸುಬ್ಬರೆಡ್ಡಿಪಲ್ಲಿ ಗ್ರಾಮ, ಕಗ್ಗಲ್ ಪೊಸ್ಟ್ , ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದ್ರೆ,. ತನಗೆ ಇಬ್ಬರು ಗಂಡು ಮಕ್ಕಳಿದ್ದು, ಮೊದಲನೆ ಮಗನಾದ ಕೆ.ಎನ್ ನವೀನ್ ಕುಮಾರ್ 21 ವರ್ಷ, ಎರಡನೆಯವನಾದ ಚರಣ್ ಕುಮಾರ್ ಎಂಬ ಮಕ್ಕಳಿರುತ್ತಾರೆ. ಆಪೈಕಿ ನವೀನ್ ಕುಮಾರ್ ರವರು ಚಿಕ್ಕಬಳ್ಳಾಪುರ ತಾಲ್ಲೂಕು ತುಮಕಲಹಳ್ಳಿ ಗ್ರಾಮದಲ್ಲಿರುವ ಎಸ್.ಜೆ.ಸಿ.ಐ.ಟಿ ಕಾಲೇಜಿನಲ್ಲಿ ಎರಡನೇ ಸೆಮಿಸ್ಟರ್ ಡಿಪ್ಲೊಮೊ ವ್ಯಾಸಂಗ ಮಾಡುತ್ತಿರುತ್ತಾನೆ. ತನ್ನ ಮಗ ಚಿಕ್ಕಬಳ್ಳಾಪುರ ನಗರದಲ್ಲಿ ರೂಮ್ ಮಾಡಿಕೊಂಡಿದ್ದು ಅಲ್ಲಿಂದ ಕಾಲೇಜಿಗೆ ಹೋಗಿ ಆಗಾಗ ಗ್ರಾಮಕ್ಕೆ ಬರುತ್ತಿದ್ದನು. ಈಗ್ಗೆ ಒಂದು ವಾರದ ಹಿಂದೆ ರೂಮನ್ನು ಖಾಲಿ ಮಾಡಿ ಮನೆಗೆ ಬಂದಿದ್ದನು. ಅದರಂತೆ ದಿನಾಂಕ-01/09/2021 ರಂದು ಹೆಚ್.ನಾಗಸಂದ್ರದಲ್ಲಿರುವ  ತನ್ನ  ಬಾಮೈದನಾದ ವೆಂಕಟೇಶರೆಡ್ಡಿ ರವರ ಮನೆಗೆ ಹೋಗಿ ನಂತರ ಅಲ್ಲಿಂದ ಅದೇ ದಿನ ಕಾಲೇಜಿಗೆ ಹೋಗಿ ಬರುತ್ತೇನಂತ ಹೇಳಿ ಬೆಳಗ್ಗೆ 06:00 ಗಂಟೆಗೆ ಹೋದವನು ಕಾಲೇಜಿಗೆ ಹೋಗಿ ಕಾಲೇಜಿನಲ್ಲಿ ಪ್ರವಚನಕ್ಕೆ ಹೋಗಿ ಮತ್ತೆ ಮನೆಗೆ ಬಾರದಿದ್ದಾಗ ಕಾಲೇಜಿನ ಪ್ರಾಂಶುಪಾಲರಿಗೆ ಕರೆ ಮಾಡಿದಾಗ ಪ್ರಾಂಶುಪಾಲರು ನಿನ್ನ ಮಗ ಬೇರೆ ಯಾರೊ ಹುಡುಗ-ಹುಡುಗಿ ಪ್ರೀತಿಸುತ್ತಿದ್ದ ವಿಚಾರದಲ್ಲಿ ಮಧ್ಯಸ್ತಿಕನಾಗಿ ಹೋಗಿರುವ ವಿಚಾರ ತಿಳಿದು ನಾವು ಆತನ ಬಳಿ ಇದ್ದ ಅವನ ಫೋನನ್ನು ತೆಗೆದುಕೊಂಡು ಇಟ್ಟುಕೊಂಡು ಮನೆಗೆ ಹೋಗುವಂತೆ ಕಳುಹಿಸಿರುತ್ತೇವೆ ಅಂತ ತಿಳಿಸಿದರು. ನಂತರ ತನ್ನ ಮಗನಾದ ನವೀನ್ ಕುಮಾರ್ ಆತನ ಸ್ನೇಹಿತನಾದ ಭಾರ್ಗವ್ ಎಂಬುವವರ ಮೊಬೈಲ್ 9700444592 ನಿಂದ ನಮ್ಮ ಮನೆಯ ಪೋನ್ ನಂ 9392098920 ಗೆ ಕರೆ ಮಾಡಿ ನಮ್ಮ ಜೊತೆ ಮಾತನಾಡುತ್ತಿದ್ದ. ನಮ್ಮ ಮನೆಗೆ ಬಾರದಿದ್ದರಿಂದ ದಿನಾಂಕ-04/09/2021 ರಂದು ಬೆಳಿಗ್ಗೆ ಕಾಲೇಜಿನ ಬಳಿ ಬಂದು ಆತನ ಸ್ನೇಹಿತನಾದ ಭಾರ್ಗವನನ್ನು ನಮ್ಮ ಮಗನ ಬಗ್ಗೆ ವಿಚಾರಣೆ ಮಾಡಲಾಗಿ ಅವರು ದಿನಾಂಕ-03/09/2021 ರಂದು ಕಾಲೇಜಿಗೆ ಬಂದಿದ್ದು ನಂತರ ಅಲ್ಲಿಂದ ಮಧ್ಯಾಹ್ನ 03.30 ರ ಸಮಯದಲ್ಲಿ ನನ್ನ ಜೊತೆಯಲ್ಲಿ ಬಸ್ನಲ್ಲಿ ಬಂದು ನಮ್ಮ ಗ್ರಾಮಕ್ಕೆ ಹೋಗುತ್ತೇನಂತ ಚಿಕ್ಕಬಳ್ಳಾಪುರ  ಬಸ್ ನಿಲ್ದಾಣದಲ್ಲಿ ಇಳಿದು ಹೋಗಿದ್ದಾನೆಂದು ಎಂದು ತಿಳಿಸಿದ. ಆದರೆ ನಮ್ಮ ಮಗ ಮನೆಗೆ ಬಾರದಿದ್ದಾಗ ನಾವು ನಮ್ಮ ನೆಂಟರ ಮನೆಗಳು ಮತ್ತು ಆತನ ಸ್ನೇಹಿತರ ಬಳಿ ಆತನ ಬಗ್ಗೆ ವಿಚಾರಣೆ ಮಾಡಿ ಆತ ಪತ್ತೆ ಆಗಿರುವುದಿಲ್ಲ ತನ್ನ ಮಗನ  ಚಹರೆ ಗುರ್ತುಗಳು ಹೆಸರು-ಕೆ.ಎನ್.ನವೀನ್ ಕುಮಾರ್ ಬಿನ್ ಶ್ರೀನಿವಾಸ್,21ವರ್ಷ,  ಎತ್ತರ-5 1/2 ಅಡಿ ಎತ್ತರ,ಗುಂಡು ಮುಖ,ಕೆಂಪು ಬಣ್ಣ, ದೃಡವಾದ ಮೈಕಟ್ಟು, ಬಟ್ಟೆಗಳು- ಹಳದಿ ಬಣ್ಣದ ಪೂರ್ತಿ ತೋಳಿನ ಶರ್ಟ,ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ, ಮಾತನಾಡುವ ಬಾಷೆ- ಕನ್ನಡ,ತೆಲುಗು,ಇಂಗ್ಲೀಷ್,ಹಿಂದಿ.ತನ್ನ  ಮಗ ಕಾಣೆಯಾಗಿರುವ ಬಗ್ಗೆ ಈ ದಿನ ಠಾಣೆಗೆ ಬಂದು ತಡವಾಗಿ ದೂರು ನೀಡಿ ತನ್ನ ಮಗನನ್ನು ಪತ್ತೆ ಮಾಡಿಕೊಡಲು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

 

11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.285/2021 ಕಲಂ. 447,427 ಐ.ಪಿ.ಸಿ:-

     ದಿನಾಂಕ: 03-09-2021 ರಂದು ಸಂಜೆ 4.30 ಗಂಟೆಯಲ್ಲಿ ಫಿರ್ಯಾದಿದಾರರಾದ ಸಿ. ಮುನಿರಾಜು ಬಿನ್ ಚನ್ನಪ್ಪ, ಸುಮಾರು 50 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಶಿಗೇಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಬಾಬತ್ತು ಸರ್ವೆ ನಂ: 234 ರಲ್ಲಿ 1 ಎಕರೆ 28 ಗುಂಟೆ ಜಮೀನು ಇದ್ದು ಸದರಿ ಜಮೀನಿನ ದಾಖಲಾತಿಗಳು ತನ್ನ ತಂದೆವರಾದ ಚನ್ನಪ್ಪ ರವರ ಹೆಸರಿನಲ್ಲಿರುತ್ತೆ, ಸದರಿ ಜಮೀನಿನಲ್ಲಿ ತಾನೇ ಜಿರಾಯ್ತಿ ಮಾಡಿಕೊಂಡಿರುತ್ತೇನೆ. ಸದರಿ ಜಮೀನಿನಲ್ಲಿ ತಾನು ರಾಗಿ ಬಿತ್ತನೆ ಮಾಡಿರುತ್ತೇನೆ. ಈಗಿರುವಲ್ಲಿ ದಿನಾಂಕ: 02-09-2021 ರಂದು ಬೆಳಿಗ್ಗೆ 6-30 ಗಂಟೆಯಲ್ಲಿ ತಾನು ಎಂದಿನಂತೆ ತಮ್ಮ ಬಾಬತ್ತು ಸರ್ವೆ ನಂ. 234 ರ ಜಮೀನಿನ ಬಳಿ ಹೋದಾಗ ಸದರಿ ಜಮೀನಿನ ಪಶ್ಚಿಮದ ಕಡೆ ಯಾರೋ ಅಸಾಮಿಗಳು ಮಣ್ಣನ್ನು ಅಗೆದು ಮತ್ತೆ ಮಣ್ಣನ್ನು ಮುಚ್ಚಿ ಸದರಿ ಸ್ಥಳದಲ್ಲಿ ಅಕ್ಕಿ, ನಿಂಬೆಹಣ್ಣು, ತೆಂಗಿನ ಕಾಯಿ, ಹೂ ಇಟ್ಟು ಪೂಜೆ ಮಾಡಿರುತ್ತಾರೆ, ಸದರಿ ಸ್ಥಳದ ಪಕ್ಕದಲ್ಲಿಯೇ ಯಾರೋ ಮನುಷ್ಯರು ಓಡಾಡಿರುವ ಹೆಜ್ಜೆ ಗುರ್ತುಗಳು ಇರುತ್ತೆ, ತಾನು ತಾಲ್ಲೂಕು ಕಛೇರಿಯ ಸಿಬ್ಬಂಧಿಯಾದ ರೆವಿನ್ಯೂ ಇನ್ಸ್ಪೆಕ್ಟರ್ ಪ್ರಶಾಂತ್ ಮತ್ತು ಸಿಬ್ಬಂಧಿಯವರ ಸಹಕಾರದಿಂದ ಮಣ್ಣನ್ನು ಅಗೆಸಿ ನೋಡಲಾಗಿ ಸುಮಾರು 4 ಅಡಿ ಉದ್ದ 3 ಅಡಿಗಳ ಅಗಲದಷ್ಠು ಗುಣಿಯನ್ನು ಅಗೆದು ಮತ್ತೆ ಮಣ್ಣನ್ನು ಮುಚ್ಚಿ ಸದರಿ ಸ್ಥಳದಲ್ಲಿ ಅಕ್ಕಿ, ನಿಂಬೆಹಣ್ಣು, ತೆಂಗಿನ ಕಾಯಿ, ಹೂ ಇಟ್ಟು ಪೂಜೆ ಮಾಡಿರುತ್ತಾರೆ. ದಿನಾಂಕ: 01-09-2021 ರಂದು ರಾತ್ರಿ ಸಮಯದಲ್ಲಿ ಯಾರೋ ಅಸಾಮಿಗಳು ತಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ತಾನು ಇಟ್ಟಿದ್ದ ರಾಗಿ ಬೆಳೆಯನ್ನು ಅಗೆದು ತನಗೆ ಸುಮಾರು 5,000-00 ನಷ್ಟವನ್ನು ಉಂಟುಮಾಡಿರುತ್ತಾರೆ. ಆರೋಪಿಗಳು ಯಾವ ಉದ್ದೇಶದಿಂದ ತನ್ನ ಹೊಲದ ಜಮೀನಿನಲ್ಲಿ ಮಣ್ಣನ್ನು ಅಗೆದಿರುತ್ತಾರೆ ಎಂಬುದರ ಬಗ್ಗೆ ತಿಳಿದು ಬಂದಿರುವುದಿಲ್ಲ ಅದ್ದರಿಂದ ತಾವುಗಳ ಪರಿಶೀಲನೆ ಮಾಡಿ ತನ್ನ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ನಷ್ಟವನ್ನು ಉಂಟುಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಮೊ.ಸಂ. 285/2021 ಕಲಂ 447, 427 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.286/2021 ಕಲಂ. 15(A),32(3) ಐ.ಪಿ.ಸಿ:-

     ದಿನಾಂಕ: 03-09-2021 ರಂದು ಸಂಜೆ 5-30 ಗಂಟೆಯಲ್ಲಿ ಸಿ.ಹೆಚ್.ಸಿ-239 ಮಲ್ಲಿಕಾರ್ಜುನ, ಡಿಸಿಬಿ /ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ /ಸಿಇಎನ್  ಪೊಲೀಸ್ ಠಾಣೆಯ ಪಿಐ ಶ್ರೀ ರಾಜಣ್ಣ ರವರು ಸಿ.ಹೆಚ್.ಸಿ-239 ಮಲ್ಲಿಕಾರ್ಜುನ ಹಾಗೂ ಸಿ.ಹೆಚ್.ಸಿ-198 ಮಂಜುನಾಥ ರವರುಗಳಿಗೆ ಶಿಡ್ಲಘಟ್ಟ ತಾಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಪತ್ತೆ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ಈ ದಿನ ದಿನಾಂಕ: 03-09-2021 ರಂದು ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಬೋದಗೂರು ಮುಂತಾದ ಗ್ರಾಮಗಳಲ್ಲಿ ಗಸ್ತು ಮಾಡಿಕೂಂಡು ಮಧ್ಯಾಹ್ನ ಸುಮಾರು 3.00 ಗಂಟೆಯ ಸಮಯದಲ್ಲಿ ಮಳಮಾಚನಹಳ್ಳಿ ಗ್ರಾಮಕ್ಕೆ ಬಂದಾಗ ಬಾತ್ಮೀದಾರರಿಂದ ಬಂದಂತಹ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೂಂಡು ಪಂಚರೊಂದಿಗೆ ಮಾಳಮಾಚನಹಳ್ಳಿ ಗ್ರಾಮ ಬಚ್ಚೇಗೌಡ ಬಿನ್ ಲೇಟ್ ಮಲಿಯಪ್ಪ ರವರ ವಾಸದ ಮನೆಯ ಮುಂಬಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಸ್ಥಳದಲ್ಲಿ ದಾಳಿ ಮಾಡಿ ಸ್ಥಳದಲ್ಲಿದ್ದ ಜನರು ಓಡಿ ಹೋಗಿದ್ದು ಮೇಲ್ಕಂಡ ಸ್ಥಳದಲ್ಲಿ ಪರಿಶೀಲಿಸಲಾಗಿ 1) 2 ಖಾಲಿ ಹೈವಾರ್ಡ್ಸ್ ಪಂಚ್ ಪೈನ್ ವಿಸ್ಕಿಯ 90 ಎಂ.ಎಲ್ ಟೆಟ್ರಾ ಪ್ಯಾಕೇಟ್ ಗಳು 2) 02 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 3) ಒಂದು ಲೀಟರ್ ನೀರಿನ 01 ಖಾಲಿ ವಾಟರ್ ಬಾಟಲ್ 4) 90 ಎಂ.ಎಲ್ ನ ಮದ್ಯ ತುಂಬಿದ 24 ರಾಜ ವಿಸ್ಕಿ ಟೆಟ್ರಾ ಪಾಕೇಟ್ ಗಳಿದ್ದು ಸ್ಥಳದಲ್ಲಿ ಆಸಾಮಿ ಬಚ್ಚೇಗೌಡ ಬಿನ್ ಲೇಟ್ ಮಲಿಯಪ್ಪ, 62 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಶಿಡ್ಲಘಟ್ಟ ತಾಲ್ಲೂಕು ರವರನ್ನು ವಶಕ್ಕೆ ಪಡೆದಿದ್ದು, ವಶಪಡಿಸಿಕೊಂಡ ಮದ್ಯವು ಒಟ್ಟು 2 ಲೀಟರ್ 160 ಎಂ.ಎಲ್ ಇದ್ದು ಅದರ ಬೆಲೆ 843-00 ರೂಗಳಾಗಿರುತ್ತೆ. ಪಂಚಾನಮೆಯೊಂದಿಗೆ ವಶಪಡಿಸಿಕೊಂಡ ಮಾಲು ಮತ್ತು ಆಸಾಮಿಯನ್ನು ಮುಂದಿನ ಕ್ರಮ ಜರುಗಿಸಲು ತಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ ಸಂ: 286 ಕಲಂ ಕೆ.ಇ ಆಕ್ಟ್ 15(ಎ), 32(3) ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 04-09-2021 06:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080