ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.224/2021 ಕಲಂ. 15(A),32(3) ಕೆ.ಇ ಆಕ್ಟ್ :-

  ದಿನಾಂಕ: 03/08/2021 ರಂದು ಸಂಜೆ 6-15 ಗಂಟೆಗೆ ಶ್ರೀ ಗೋಪಾಲರೆಡ್ಡಿ ಪಿಎಸ್ಐ, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು,ಆರೋಪಿ, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಈ ದಿನ ದಿನಾಂಕ; 03-08-2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-237 ವಿನಯ್ ಕುಮಾರ್ ಯಾದವ್ ಹಾಗೂ ಜೀಪ್ ಚಾಲಕ ಎ ಹೆಚ್ ಸಿ-14 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ವಾಹನದಲ್ಲಿ ಬಾಗೇಪಲ್ಲಿ ತಾಲ್ಲೂಕು ದೇವರಗುಡಿಪಲ್ಲಿ, ಕಾರಕೂರು, ಲಗುಮದ್ದೇಪಲ್ಲಿ, ಆಚೇಪಲ್ಲಿ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ, ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು, ಮಿಟ್ಟೇಮರಿ ಹೋಬಳಿ, ಬೂರಗಮಡಗು ಗ್ರಾಮದ ಬಳಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-237 ವಿನಯ್ ಕುಮಾರ್ ಯಾದವ್ ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಹೊರಟು, ಆಚೇಪಲ್ಲಿ ಕ್ರಾಸ್ ನ ಬಳಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಸಂಜೆ 5-00 ಗಂಟೆಗೆ ಬೂರಗಮಡಗು ಗ್ರಾಮದ ಬಳಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿ ಮುಂಭಾಗದಲ್ಲಿದ್ದ ಅಸಾಮಿಯನ್ನು ಸಿಬ್ಬಂದಿಯಾದ ವಿನಯ್ ಕುಮಾರ್ ಯಾದವ್ ರವರು ಹಿಡಿದುಕೊಂಡಿದ್ದು, ಅಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ನಾಗರಾಜಪ್ಪ ಬಿನ್ ಗಂಗಪ್ಪ, 45 ವರ್ಷ, ನಾಯಕ ಜನಾಂಗ, ಚಿಲ್ಲರೇ ಅಂಗಡಿ ವ್ಯಾಪಾರ, ವಾಸ: ಬೂರಗಮಡಗು ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಸಂಜೆ 6-15 ಗಂಟೆಗೆ ಠಾಣೆಯಲ್ಲಿ   ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.118/2021 ಕಲಂ. 279,337,304(A) ಐ.ಪಿ.ಸಿ:-

  ದಿನಾಂಕ:04-03-2021 ರಂದು ಬೆಳಿಗ್ಗೆ 9.15 ಗಂಟೆಯಲ್ಲಿ ಪಿರ್ಯಾದಿ  ಶ್ರೀ.ಬಿ.ಹೆಚ್.ಗಂಗಾಧರ್  ಬಿನ್  ಲೇಟ್ ಚಿಕ್ಕಹನುಮಂತರಾಯಪ್ಪ, 46ವರ್ಷ. ವಕ್ಕಲಿಗರು, ಬಂಡೆ ಕೋಡಿಗೇನಹಳ್ಳಿ  ಜಾಲ ಹೋಬಳಿ   ಯಲಹಂಕ ತಾಲ್ಲೂಕು ಬೆಂಗಳೂರು ನಗರ ಜಿಲ್ಲೆ. ರವರು  ಠಾಣೆಗೆ  ಹಾರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ತನ್ನ ಅಣ್ಣನಾದ  ಬಿ.ಹೆಚ್. ಶಿವಣ್ಣ ರವರಿಗೆ ಇಬ್ಬರು ಮಕ್ಕಳಿದ್ದು 1ನೇ ಅನುರಾಧ ಎಂಬ ಹೆಣ್ಣು ಮಗಳು ಮತ್ತು 2ನೇ ಮಗ ಬಿ.ಎಸ್. ಹೇಮಂತಕುಮಾರ್  ರವರಾಗಿರುತ್ತಾರೆ. ಬಿ.ಎಸ್. ಹೇಮಂತಕುಮಾರ್ ರವರು ತನ್ನ ತಂದೆಯೊಂದಿಗೆ ವ್ಯವಸಾಯ ಮಾಡಿಕೊಂಡು ಇದ್ದ. ದಿನಾಂಕ:03-08-2021 ರಂದು  ಬಿ.ಎಸ್.ಹೇಮಂತಕುಮಾರ್ ರವರು ಸಂಜೆ ಸುಮಾರು 4.30 ಗಂಟೆ ಸಮಯದಲ್ಲಿ ಮನೆಯಲ್ಲಿ ಇದ್ದ. ದಿನಾಂಕ:03-08-2021 ರಂದು ರಾತ್ರಿ ಸುಮಾರು 8.45 ಗಂಟೆ ಸಮಯದಲ್ಲಿ ತಾನು ಊರಿನಲ್ಲಿ ಇದ್ದಾಗ   ಸಾರ್ವಜನಿಕರು ತನಗೆ ಪೋನ್ ಮಾಡಿ ವಿಷಯ ತಿಳಿಸಿದ್ದು ಎನೆಂದರೆ, ಚಿಕ್ಕಬಳ್ಳಾಪುರ ತಾಲ್ಲೂಕು ನಲ್ಲಿಮರದಹಳ್ಳಿ ಗ್ರಾಮದ ಸಮೀಪ ದಿಬ್ಬೂರಹಳ್ಳಿ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿ ತನ್ನ ಅಣ್ಣನ ಮಗನಾದ  ಬಿ.ಎಸ್. ಹೇಮಂತಕುಮಾರ್ ರವರು ಆತನ ಬಾಬತ್ತು KA-50-W-7980  ಪಲ್ಸರ್ ದ್ವಿಚಕ್ರವಾಹನದಲ್ಲಿ  ಯಲಹಂತ ತಾಲ್ಲೂಕು ಮೈಲನಹಳ್ಳಿ ಗ್ರಾಮದ ಸೋಮಶೇಖರ್ ಬಿನ್ ಜಯರಾಮಪ್ಪ ಮತ್ತು ದೇವನಹಳ್ಳಿಯ ಮೋಹನ್ ಬಾಬು ಬಿನ್ ನಾರಾಯಣಸ್ವಾಮಿ ರವರೊಂದಿಗೆ ದಿಬ್ಬೂರಹಳ್ಳಿ ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ದ್ವಿಚಕ್ರವಾಹನವನ್ನು ಸವಾರಿ ಮಾಡಿಕೊಂಡು  ಬರುತ್ತಿದ್ದಾಗ  ರಾತ್ರಿ ಸುಮಾರು 8.00 ಗಂಟೆ ಸಮಯದಲ್ಲಿ ದಿಬ್ಬೂರು ಗ್ರಾಮದ ಕಡೆಯಿಂದ ದಿಬ್ಬೂರಹಳ್ಳಿ ಕಡೆಗೆ ನಲ್ಲಿಮರದಹಳ್ಳಿ ಸಮೀಪ KA-03-ME-9002 ರ  ಓಮ್ನಿ ಕಾರಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತ  ಮಾಡಿದ್ದು ಅಪಘಾತದಿಂದ  ಎರಡು ವಾಹನಗಳು ಜಕ್ಕಂಗೊಂಡು ದ್ವಿಚಕ್ರ ವಾಹನ ಸವಾರಿ  ಮಾಡುತ್ತಿದ್ದ ಬಿ.ಎಸ್. ಹೇಮಂತಕುಮಾರ್  ಬಿನ್  ಬಿ.ಹೆಚ್.ಶಿವಣ್ಣ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು. ದ್ವಿಚಕ್ರವಾಹನದಲ್ಲಿದವರಿಗೆ ಮತ್ತು  ಓಮ್ನಿ ಕಾರಿನ ಚಾಲಕನಿಗೂ ಸಹ ಗಾಯಗಳಾಗಿದ್ದು ಸಾರ್ವಜನಿಕರು ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆಂದು ವಿಷಯ ತಿಳಿಯಿತು.  ಅಪಘಾತ ಮಾಡಿದ ಚಾಲಕನ ಹೆಸರು ಮತ್ತು ವಿಳಾಸ ತಿಳಿದುಬಂದಿರುವುದಿಲ್ಲ. ಅಪಘಾತ ಮಾಡಿದ KA-03-ME-9002 ರ  ಓಮ್ನಿ ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.344/2021 ಕಲಂ. 504,506 ಐ.ಪಿ.ಸಿ & 3(1)(r) The SC & ST (Prevention of Atrocities) Amendment Act 2015:-

  ದಿನಾಂಕ: 03/08/2021 ರಂದು ಸಂಜೆ 4.00 ಗಂಟೆಗೆ ವಿ.ನರಸಿಂಹಪ್ಪ ಬಿನ್ ವೆಂಕಟರಾಯಪ್ಪ, 52 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ಶ್ರೀರಾಮನಗರ, ವಾರ್ಡ್ ನಂ:20, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಪರಿಶಿಷ್ಟ ಜಾತಿ ಆದಿಕರ್ನಾಟಕ ಜಾತಿಗೆ ಸೇರಿರುತ್ತೇನೆ. ತಮ್ಮ ತಾತನಾದ ಶ್ರೀಮತಿ ಲೇಟ್ ಕದಿರಮ್ಮ ಮತ್ತು ಲೇಟ್ ಎ.ಕೆ.ಕದರಿಗ ಎಂಬುವವರು ಇದೇ ಚಿಂತಾಮಣಿ ತಾಲ್ಲೂಕು, ಕಸಬಾ ಹೋಬಳಿ, ಮಾಡಿಕೆರೆ ಗ್ರಾಮದಲ್ಲಿ ಖಾಯಂ ವಿಳಾಸದಲ್ಲಿ ವಾಸವಾಗಿರುತ್ತಾರೆ. ಇವರುಗಳ ಕುಟುಂಬಸ್ಥರಾದ ಶ್ರೀಮತಿ ಲೇಟ್ ಆಕ್ಕೆಮ್ಮ (ಅಕ್ಕಾಯ್ಯಾಮ್ಮ), ಲೇಟ್ ವೆಂಕಟರಾಯಪ್ಪ ಎಂಬ ಕುಟುಂಬದ ಜನ್ಮ ತಾನು ಚಿಕ್ಕಗಂಜೂರು ಗ್ರಾಮದ ಸರ್ವೆ ನಂ:10/ಪಿ 5 ರಲ್ಲಿ ರೈತಯೀ ಹಿಂದೆ-ಮುಂದೆ ಉಳಿಮೆ ಮಾಡುತ್ತಿರುತ್ತೇವೆ. ಆದರೆ ಪಹಣಿ ಇಲ್ಲದ ಸಲುವಾಗಿ ಡಿ.ಸಿ. ನ್ಯಾಯಾಲಯದ ಧಾವೆ ಇರುವುದರಿಂದ ಪಹಣಿ ಇಲ್ಲದ ಕಾರಣ ದಿನಾಂಕ:29/07/2021 ರಂದು ಇಂದಿನ ಹಾಗೆ ಎಂದಿನಂತೆ ಮಾನ್ಯ ತಹಶೀಲ್ದಾರ್ ಕಾರ್ಯಾಲಯ ಚಿಂತಾಮಣಿ ರವರಿಗೆ ಸರ್ಕಾರದ ಎಸ್.ಸಿ.-ಎಸ್.ಟಿ ಯೋಜನೆಯಡಿಯಲ್ಲಿ ನವಧಾನ್ಯಗಳನ್ನು ಪಡೆದುಕೊಳ್ಳುವ ಇಂದಿನ ಎಂದಿನಂತೆ ಆರ್.ಐ ಮತ್ತು ವಿ.ಎ ಷರಾಕ್ಕಾಗಿ ತನ್ನ ಸ್ವಂತ ಹೆಡ್ನಲ್ಲಿ ಲಿಖಿತ ರೂಪದಲ್ಲಿ ಕಛೇರಿಗೆ ಅರ್ಜಿ ಸಲ್ಲಿಸಿರುತ್ತೇನೆ. ಈ ಬಗ್ಗೆ ಮಾನ್ಯ ತಹಶೀಲ್ದಾರ್ ರವರು ಅರ್ಜಿದಾರರ ಕೋರಿಕೆಯಂತೆ ಅಗತ್ಯ ಕ್ರಮ ತೆಗೆದುಕೊಳ್ಳಲು ಆರ್.ಐ ಮತ್ತು ವಿ.ಎ ಗೆ ತಿಳಿಸಿರುವುದು ಸರಿಯಷ್ಟೆ, ಇದರ ಅನ್ವಯ ದಿನಾಂಕ: 02/08/2021 ಸೋಮವಾರ ಸುಮಾರು ಸಂಜೆ 4.00 ಗಂಟೆ ಸಮಯದಲ್ಲಿ ತಮ್ಮ ಜಮೀನು ಇರುವ ಚಿಕ್ಕಗಂಜೂರು ಗ್ರಾಮದ ಸ್ಥಳಕ್ಕೆ ತಾನು, ವಿ.ಎ, ಆರ್.ಐ ಮತ್ತು ಗ್ರಾಮ ಸಹಾಯಕರುಗಳಾದ ಮಾಡಿಕೆರೆ ಶ್ರೀನಿವಾಸ, ಗೋಪಸಂದ್ರ ಆಂಜಿ ಜೊತೆಗೂಡಿ ಜಮೀನಿನಲ್ಲಿ ಇರುವಾಗ ಮೇಲ್ಕಂಡ 1.ವೆಂಕಟರವಣಪ್ಪ ಬಿನ್ ಪೆದ್ದನಾರೆಪ್ಪ, ಭಜಂತ್ರಿ ಜನಾಂಗ, ಮಾಡಿಕೆರೆ ಗ್ರಾಮ ಮತ್ತು ಇದೇ 2ನೇ ಅರ್ಜಿದಾರರಾದ ತಮ್ಮ ವಿರುದ್ಧ ಇರುವ ಸಂಬಂಧಿಕ ಕ್ರಯದಾರರಾದ 2.ಅಪ್ಪಾಜಿರೆಡ್ಡಿ, 3.ಆಶೋಕ್ರೆಡ್ಡಿ, 4.ಶ್ರೀನಿವಾಸರೆಡ್ಡಿ ಈ ನಾಲ್ಕು ಜನರು ಗುಂಪು ತಮ್ಮ ಬಳಿ ಬಂದಿರುತ್ತಾರೆ. ಆದರೆ ಇದರಲ್ಲಿ ಭಜಂತ್ರಿ ಜನಾಂಗದ ವೆಂಕಟರವಣಪ್ಪ ಬಿನ್ ಪೆದ್ದನಾರಪ್ಪ ಎಂಬುವವರು ಮಾತ್ರ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಕೀಳುಜಾತಿ ನನ್ನ ಮಕ್ಕಳು, ನಿನ್ನಮ್ಮ, ನಿನ್ನಕ್ಕ ಎಂದು ನಿಂದಿಸುತ್ತಾ, ಅಲ್ಲೇ ಇರುವ ಅಧಿಕಾರಿಗಳು ಮತ್ತು ಗ್ರಾಮದ ವಕ್ಕಲಿಗರ ಮುಂದೆ ತನ್ನನ್ನು ಅವಮಾನ ಮಾಡಿ, ಕೀಳುಮಟ್ಟ, ಕೀಳುಜಾತಿ ನನ್ನ ಮಕ್ಕಳು ಜಮೀನು ತೆಗೆದುಕೊಂಡರೆ ನಮ್ಮ ಜಾತಿಗೆ ಕಷ್ಟ ಎಂದು ಕೊಲೆ ಮಾಡಲು ಜೋಬಿನಿಂದ ಚಾಕು ತೆಗೆದು ತಿವಿಯಲು ಸುಮಾರು 4 ಬಾರಿ ಬಂದಿರುತ್ತಾನೆ. ಅಲ್ಲೇ ಇರುವ ಶ್ರೀನಿವಾಸರೆಡ್ಡಿ ತನಗೆ ಅಡ್ಡ ಬಂದು ರಕ್ಷಣೆ ಮಾಡಿರುತ್ತಾರೆ. ಈ ಹಿಂದೆ ಸಹ ಇದೇ ಸದರಿ ವೆಂಕಟರವಣಪ್ಪ ರೀತಿ ದೌರ್ಜನ್ಯ ಮಾಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯ್ದೆಯಡಿಯಲ್ಲಿ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದೊಮ್ಮೆ ದಿನಾಂಕ:22/01/2010 ರಂದು ಸಂಖ್ಯೆ:ಜಿ.ಸ.ಕ6/ದೌರ್ಜನ್ಯ ಸಿಆರ್/33/2009-10 ನಡೆದಿದ್ದು, ಇದೇ ತಮ್ಮ ಮೇಲೆ ಗ್ರಾಮದಿಂದ ಗುಂಪು ಕಟ್ಟಿಕೊಂಡು ತಮ್ಮನ್ನು ಕೊಲೆ ಮಾಡಲು ಪ್ರತಿ ಸಾರಿ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಇವರ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿ ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ಕೊಡಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.345/2021 ಕಲಂ. 379 ಐ.ಪಿ.ಸಿ :-

  ದಿನಾಂಕ: 03/08/2021 ರಂದು ಸಂಜೆ 4.30 ಗಂಟೆಗೆ ಸೈಯದ್ ಅಕ್ಟರ್ ಬಿನ್ ಲೇಟ್ ಸೈಯದ್ ಖಾದರ್ ಸಾಬ್, 57 ವರ್ಷ, ಮುಸ್ಲೀಂ ಜನಾಂಗ, ಬ್ಯಾಂಕ್ ನೌಕರ, ಅಡ್ಡಗಲ್ ಗ್ರಾಮ, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಕರ್ನಾಟಕ ಗ್ರಾಮೀಣ ಬ್ಯಾಂಕ್, ರೋಣೂರು ಶಾಖೆ, ಶ್ರೀನಿವಾಸಮರ ತಾಲ್ಲೂಕು, ಇಲ್ಲಿ ಬ್ಯಾಂಕ್ ಕ್ಯಾಷಿಯರ್ ಆಗಿ ಕೆಲಸ ನಿರ್ವಹಿಸುತ್ತಿರುತ್ತೇನೆ. ಹೀಗಿರುವಾಗ ತಾನು ಮತ್ತು ತನ್ನ ಮಗನಾದ ಸೈಯದ್ ಸಫೀರ್ ಆದ ನಾವು ದಿನಾಂಕ: 01/08/2021 ರಂದು ಮದ್ಯಾಹ್ನ 1.30 ಗಂಟೆ ಸಮಯದಲ್ಲ ಚಿಂತಾಮಣಿ ತಾಲ್ಲೂಕು, ಕಸಬಾ ಹೋಬಳಿ, ಕರಿಯಪಲ್ಲಿ ಗ್ರಾಮಕ್ಕೆ ಕೆಲಸ ಮೇಲೆ ತಮ್ಮ ಬಾಬತ್ತು ಡಿಯೋ ದ್ವಿ-ಚಕ್ರ ವಾಹನದ ಸಂಖ್ಯೆ KA-40-EC-5817, Chassis No: ME4JF39DDJT061897, Engine No: JF39ET2091894, Model-2018 ವುಳ್ಳ ವಾಹನದಲ್ಲಿ ಬಂದಿರುತ್ತೇವೆ. ತಾವು ದ್ವಿ-ಚಕ್ರ ವಾಹನವನ್ನು ಸದರಿ ಕರಿಯಪ್ಪ ಗ್ರಾಮದ ರಜಾಕ್ ಫಾತೀಮಾ ಶಾದಿ ಮಹಲ್ ಬಳಿ ನಿಲ್ಲಸಿ, ಕೆಲಸ ಮುಗಿಸಿಕೊಂಡು ಬಂದು ನೋಡಿದಾಗ ಸದರಿ ತಮ್ಮ ವಾಹನ ಇರುವುದಿಲ್ಲ. ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಎಲ್ಲಿ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ. ತಾನು ಬ್ಯಾಂಕಿನಲ್ಲಿ ಕ್ಯಾಷಿಯರ್ ಆಗಿದ್ದ ಕಾರಣ ಬ್ಯಾಂಕಿಗೆ ಸಂಬಂಧಪಟ್ಟ ಬೀಗದ ಕೈಗಳು ತನ್ನ ಬಳಿಯೇ ಇದ್ದು [Safe Keys-217223/SP2, 217223/SPA1, 217223/SPB1, 5494/2, 5494/A1, 5494/B1 and Premises Keys-435642, 238425, 944015, 97109, 97069, 233) ಸದರಿ ಬೀಗದ ಕೈಗಳು ಸಹ ಸದರಿ ದ್ವಿ-ಚಕ್ರ ವಾಹನದಲ್ಲಿಯೇ ಇದ್ದು, ಇವುಗಳು ಸಹ ಕಳ್ಳತನವಾಗಿರುತ್ತವೆ. ಸದರಿ ದ್ವಿಚಕ್ರ ವಾಹನ ಸುಮಾರು 40.000/- ರೂ ಬೆಲೆ ಬಾಳುವುದಾಗಿರುತ್ತೆ. ಸದರಿ ವಾಹನವನ್ನು ತಾವು ಜರೀನ್ ತಾಜ್ ಕೋಂ ಸರ್ಧಾರ್ಪಾಷ, ಚನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರಿಂದ ಖರೀದಿ ಮಾಡಿದ್ದು, ಸದರಿ ವಾಹನವನ್ನು ತಮ್ಮ ಹೆಸರಿಗೆ ಬದಲಾವಣೆ ಮಾಡಿಸಿಕೊಂಡಿರುವುದಿಲ್ಲ. ಆದ್ದರಿಂದ ತಾವುಗಳು ಮೇಲ್ಕಂಡ ತನ್ನ ದ್ವಿ-ಚಕ್ರ ವಾಹನವು ಮತ್ತು ವಾಹನದಲ್ಲಿರುವ ವಸ್ತುಗಳನ್ನು ಹುಡುಕಿಕೊಟ್ಟು, ಕಳ್ಳತನ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.179/2021 ಕಲಂ. 279 ಐ.ಪಿ.ಸಿ :-

  ದಿನಾಂಕ 03-08/2021 ರಂದು 18-30 ಗಂಟೆಗೆ ಪಿರ್ಯಾದಿದಾರರಾದ ನರೇಂದ್ರ ದಾಸ್ ಬಿನ್ ಲೇಟ್ ಹೆಚ್. ಪ್ರೇಮದಾಸ್, 61 ವರ್ಷ, ಕ್ರಿಶ್ಚಿಯನ್, ನಿವೃತ್ತ ರೈಲ್ವೇ ನೌಕರರು, ವಾಸ ನಂ. 3248, ಬಿಲೀವ್ ಕಾಟೇಜ್, ಸಿ.ಎಸ್.ಐ. ಚರ್ಚ್, ಶ್ರೀನಗರ ಕಾಲೋನಿ, ಗೌರಿಬಿದನೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂಧರೆ  ದಿನಾಂಕ 31-07-2021ರಂದು ಕೆಲಸದ ನಿಮಿತ್ತ ತಾನು ಮತ್ತು ತನ್ನ ಮಗನಾದ ಸಂತೋಷ್  ಬಿನ್ ನರೇಂದ್ರಪ್ರಸಾದ್ ರವರೊಂದಿಗೆ ತನ್ನ ಬಾಬತ್ತು  ಕೆ.ಎ.-40-ಎಂ.-7342 ಸ್ವಿಫ್ಟ್ ಡಿಜೈರ್ ಕಾರಿನಲ್ಲಿ  ತುಮಕೂರಿಗೆ ಹೋಗಿದ್ದು  ಸಂಜೆ 06-30 ಗಂಟೆಯಲ್ಲಿ  ವಾಪಸ್ ಗೌರಿಬಿದನೂರಿಗೆ  ಬರುತ್ತಿರುವಾಗ ಗೌರಿಬಿದನೂರು ತಾಲ್ಲೂಕು  ಸೈನ್ಸ್ ಪಾರ್ಕ್ ಬಳಿ  ಎನ್.ಹೆಚ್. 234  ರಸ್ತೆಯಲ್ಲಿ  ನಾಯಿ ರಸ್ತೆ ಮಧ್ಯಕ್ಕೆ ಆಕಸ್ಮಿಕವಾಗಿ ಅಡ್ಡಬಂದಿದ್ದು ಕಾರನ್ನು ಚಾಲನೆ ಮಾಡುತ್ತಿದ್ದ ತನ್ನ ಮಗ ಕಾರನ್ನು ಅತಿವೇಗ ಮತ್ತು ಅಜಾಗರಕತೆಯಿಂದ  ಚಾಲನೆ ಮಾಡಿ  ನಾಯಿಯನ್ನು ತಪ್ಪಿಸಲು  ಹೋಗಿ ರಸ್ತೆಯ ಎಡಬದಿಯ ವರಂಡಿಗೆ ಪಲ್ಟಿ ಹೊಡೆಸಿದ್ದರಿಂದ ಕಾರಿನ ನಾಲ್ಕು ಡೋರ್ ಗಳು,  ಮುಂದಿನ ಭಾಗ, ಮೇಲ್ಭಾಗ ಸಂಪೂರ್ಣವಾಗಿ ಜಖಂ ಆಗಿರುತ್ತೆ.  ಕಾರಿನಲ್ಲಿ ನಾನು ಮತ್ತು ಸಂತೋಷ್ ಇಬ್ಬರೇ ಇದ್ದು ನಮಗೆ ಯಾವುದೇ ಪ್ರಾಣಾಪಾಯಗಳಾಗಿರುವುದಿಲ್ಲ, ನನ್ನ ಕಾರನ್ನು  ಜಖಂಗೊಳಿಸಿರುವ ಚಾಲಕ ಸಂತೋಷ್ ಬಿನ್ ನರೇಂದ್ರ ಪ್ರಸಾದ್, 32 ವರ್ಷ, ವಾಸ ನಂ. 3248, ಬಿಲೀವ್ ಕಾಟೇಜ್, ಸಿ.ಎಸ್.ಐ. ಚರ್ಚ್, ಶ್ರೀನಗರ ಕಾಲೋನಿ, ಗೌರಿಬಿದನೂರು ಟೌನ್ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ತಡವಾಗಿ ನೀಡಿದ ದೂರು.

 

6. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.109/2021 ಕಲಂ. 457,380 ಐ.ಪಿ.ಸಿ :-

  ದಿನಾಂಕ:04/08/2021 ರಂದು ಬೆಳಿಗ್ಗೆ 9:30 ಗಂಟೆಗೆ ಪಿರ್ಯಾದಿ ಎಂ.ಜಿ ಮುರಳೀಧರ ಬಿನ್ ಲೇಟ್ ಎಂ.ಎಸ್ ಗೋಪಾಲಭಟ್ಟರ್,  55 ವರ್ಷ, ಬ್ರಾಹ್ಮಣರು, ಅರ್ಚಕ ವೃತ್ತಿ, ಶ್ರೀ. ಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನ, ಗೌರಿಬಿದನೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ:03/08/2021 ರಂದು ರಾತ್ರಿ 8:30 ಗಂಟೆಗೆ ನಾನು ಪೂಜೆಯ್ನು ಮುಗಿಸಿ ದೇವಸ್ಥಾನದ ಬಾಗಿಲು ಹಾಕಿಕೊಂಡು ಹೋದೆನು. ದಿನಾಂಕ:04/08/2021 ರಂದು ಬೆಳಿಗ್ಗೆ ಸುಮಾರು 5:00 ಗಂಟೆಗೆ ಪೂಜೆ ಮಾಡಲು ದೇವಸ್ಥಾನದ ಬಳ ಬಂದಾಗ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗ ಕೆಳಗಡೆ ಬಿದ್ದಿದ್ದು ಬಾಗಿಲು ಜಖಂಗೊಂಡಿದ್ದು, ನಂತರ ಒಳಗಡೆ ಹುಂಡಿಯಿದ್ದು, ಅದರ ಬಾಗಿಲು ಸ್ವಲ್ಪ ತೆರೆದಿದ್ದು, ಅದರಲ್ಲಿದ್ದ ಹಣ ಕೆಳಗಡೆ ಬಿದ್ದು ಚೆಲ್ಲಾಪಿಲ್ಲಿಯಾಗಿರುತ್ತದೆ. ಇದರಲ್ಲಿ ಸುಮಾರು 50,000/- ಗೂ. ಗಳಷ್ಟು ಹಣ ಕಳ್ಳತನವಾಗಿರಬಹುದೆಂದು ಅನುಮಾನವಿರುತ್ತದೆ. ಈ ಕಳ್ಳತನ ಮಾಡಿದ ಆರೋಪಿಯನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಕೋರಲಾಗಿದೆಯೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲು ಮಾಡಿರುವುದಾಗಿರುತ್ತೆ.

 

7. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.176/2021 ಕಲಂ. 506,341,504,143,147,148,149,323,324 ಐ.ಪಿ.ಸಿ :-

  ದಿನಾಂಕ 03/08/2021 ರಂದು ಸಂಜೆ 4-45 ಗಂಟೆಗೆ ಪಿರ್ಯಾಧಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಬೊಮ್ಮಹಳ್ಳಿ ಗ್ರಾಮದ ಚಂದ್ರಶೇಖರ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ 02/08/2021 ರಂದು ಸಂಜೆ ಸುಮಾರು 5-30 ಗಂಟೆಯ ಸಮಯದಲ್ಲಿ ಆರೋಪಿತರು ಅಕ್ರಮಗುಂಪು ಕಟ್ಟಿಕೊಂಡು ಕಲ್ಲು,ಕೋಲು, ಇಟ್ಟಿಗೆಗಳನ್ನು ಹಿಡಿದು ಕೊಂಡು ಬಂದು ತಮ್ಮ ಗ್ರಾಮದ ರಾಜೇಶ ಮತ್ತು ಈತನ ಹೆಂಡತಿ ಶೈಲಜಾ ಹಾಗೂ ಇವರು ಪುಟ್ಟ ಮಕ್ಕಳಿಗೆ ಹೊಡೆಯುತ್ತಿದ್ದಾಗ ತಾನು ಮತ್ತು ತನ್ನ ತಂದೆ ಬಿಡಿಸಲು ತಮ್ಮನ್ನು ನೋಡಿ ಸಾಯಿಸುತ್ತಿಲ್ಲ ಇಲ್ಲದಿದ್ದರೆ ನಿಮ್ಮ ಅಳಿಯ ಮತ್ತು ಮಗಳನ್ನು ಹೊಟ್ಟೆ ಸೀಲು ಹಾಕುತ್ತಿದ್ದೆವು, ಎಂತ ಬೆದರಿಸಿದ್ದು, ಆಸ್ಪತ್ರೆಗೆ ಹೋಗಲು ಮನೆಯಿಂದ ಬಂದಾಗ ಅಡ್ಡಕಟ್ಟಿ ನಿಮ್ಮನ್ನು ಸಾಯಿಸುತ್ತೇವೆಂದು ಏಕಾಏಕಿ ಬಂದು ಗಾಯಾಳು ರಾಜೇಶ ಮತ್ತು ಶೈಲಜಾ ಬೇಡ ಎಂದು ಕೇಳಿಕೊಂಡರು ಅನಿಲ್ ಕಾಲಿನಲ್ಲಿ ಶೈಲಜಾ ರವರ ಹೊಟ್ಟೆಗೆ ಕಾಲಿನಿಂದ ಒದ್ದು, ರಾಜೇಶನಿಗೆ ಕಾರದ ಪುಡಿ ಹಾಕಿ ತಲೆಗೆ ಬ್ಯಾಟ್ ನಿಂದ ಹೊಡೆದು ರಕ್ತಗಾಯ ಉಂಟು ಮಾಡಿದರು ಆಗ ಬಿಡಿಸಲು ಹೋದ ತನ್ನ ಕಣ್ಣಿಗೆ ಕಾರದ ಪುಡಿ ಹಾಕಿ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಉಂಟು ಮಾಡಿದ್ದು, ಆಗ ತನ್ನ ತಂದೆ ಬಿಡಿಸಲು ಬಂದಾಗ ಬಾ ನನ್ನ ಮಗನೇ ನಿನ್ನ ಮಗನ ಜೊತೆ ಕಳುಹಿಸುತ್ತೇವೆಂದು ಹೊಟ್ಟೆಗೆ ಮತ್ತು ಕಾಲುಗಳಿಗೆ ಬ್ಯಾಟ್ ಗಳಿಂದ ಹೊಡೆದಿದ್ದು, ತನ್ನ ತಾತ ಚಿಕ್ಕಬೈಯಣ್ಣ ಬಿಟ್ಟು ಬಿಡಿ ಎಂದು ಕೇಳಿದರು ಕೇಳದೆ ಕಲ್ಲು ಮತ್ತು ಇಟ್ಟಿಗೆ ಇಂದ ಬುಝಕ್ಕೆ ಹೊಡೆದು ರಕ್ತಗಾಯ ಉಂಟು ಪಡಿಸಿರುತ್ತೆ. ಆಗ ತನ್ನ ಅಣ್ಣ ಸುರೇಶ್ ರವರು ಏನೋ ಯಾಕೋ ಹೊಡೆದಿದ್ದೀರಿ ಎಂದು ಕೇಳಿದ್ದಕ್ಕೆ ಬ್ಯಾಟ್ ನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ ನಿಮ್ಮನ್ನು ಈಗೆ ಬಿಡುವುದಿಲ್ಲ ಎಂದು ಮನೆಯ ಬಾಗಿಲುಗೆ ಮತ್ತು ದ್ವಿಚಕ್ರವಾಹನಕ್ಕೆ ಕಲ್ಲುಗಳಿಂದ ಹೊಡೆದಿದ್ದು,ನಿಮ್ಮನ್ನು ಜೀವಂತಹ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

8. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.177/2021 ಕಲಂ. 506,143,147,148,149,323,324 ಐ.ಪಿ.ಸಿ :-

  ದಿನಾಂಕ:03-08-2021 ರಂದು ಸಾಯಂಕಾಲ 5-30 ಗಂಟೆಯಲ್ಲಿ ಅರ್ಜಿದಾರರು ಠಾಣೆಗೆ ಹಾಜರಾಗಿ ನೀಡಿದ ಅರ್ಜಿಯ ಸಾರಾಂಶವೇನೆಂದರೆ ತಮ್ಮ ಗ್ರಾಮದ ಶೈಲಜ ಮತ್ತು ಆಕೆಯ ಗಂಡ ರಾಜಪ್ಪ ಎಂಬುವರು ಇಬ್ಬರೂ ತಮ್ಮ ಮನೆಯ ಎದುರು ಮನೆಯಲ್ಲಿದ್ದು ದಿನಾಂಕ:02-08-2021 ರಂದು ಮಧ್ಯಾಹ್ನ ತನ್ನ ತಂಗಿಯ ಮಗ ಯಶವಂತ್ ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಅಶ್ಲೀಲ ಪೋಟೋ ತೋರಿಸಿ ನೋಡುವಂತೆ ಒತ್ತಾಯಿಸಿ ಯಶವಂತ್ ನಿಗೆ ಕೆನ್ನೆಗೆ ಹೊಡೆದಿದ್ದು ಆ ಹುಡುಗ ಅಳುತ್ತಿರುವುದನ್ನು ನೋಡಿ ತನ್ನ ತಮ್ಮ ನಿಖಿಲ್ ರವರು ಶೈಲಜ ಮತ್ತು ರಾಜಪ್ಪ ರವರ ಮನೆ ಬಳಿ ಹೋಗಿ ವಿಚಾರಿಸಿದಾಗ ಶೈಲಜ ಮತ್ತು ರಾಜಪ್ಪ ಮೇಲ್ಕಂಡ ಅಶ್ಲೀಲ ಪೋಟೋ ನೋಡುತ್ತಿದ್ದು ನಿಖಿಲ್ ರವರು ನಿಮ್ಮ ಮಕ್ಕಳಿಗೆ ತೋರಿಸಿ ನಮ್ಮ ಮಕ್ಕಳಿಗೆ ಯಾಕೆ ತೋರಿಸಿ ಕೆಡಿಸುತ್ತಿರಾ ಯಾಕೆ ಕೆನ್ನೆಗೆ ಹೊಡೆಯುತ್ತೀರಾ ಎಂದು ಕೇಳಿದಾಗ ರಾತ್ರಿ ನಿಮ್ಮ ಹುಡುಗ ನಮ್ಮ ನೀರಿನ ಪೈಪ್ ಮುರಿದು ಹಾಕಿದ್ದಾನೆ ಆದ್ದರಿಂದ ನಾವು ಅವನಿಗೆ ಎರಡು ಏಟು ಹಾಕಿರೋದು ಎಂದಾಗ ನಿಖಿಲ್ ರವರು ನಿಮ್ಮ ಕೈಯಲ್ಲಿರುವ ಪೋಟೋ ಏನು ಎಂದಾಗ ನಾವು ಮೊಬೈಲ್ ನಲ್ಲಿ ಸಿನಿಮಾ ನೋಡುತ್ತಿದ್ದೇವೆ ಎಂದು ಮಾಡಿರುತ್ತಾರೆ. ನಂತರ ತಾನು ಬಂದಾಗ ವಿಷಯ ತಿಳಿದು ತಮ್ಮ ತಾಯಿಗೆ ಗೊತ್ತಾಗಿ ತಮ್ಮ ತಾಯಿ ರವರ ಮನೆಯ ಹತ್ತಿರ ಶೈಲಜ, ರಾಜಪ್ಪ, ಚಂದ್ರಶೇಖರ್, ಸುರೇಶ್, ಕೃಷ್ಣಪ್ಪ, ನರಸಮ್ಮ, ಇವರೆಲ್ಲಾ ಪೂರ್ವ ನಿಯೋಜನೆಯಂತೆ ಮಚ್ಚು, ಕಬ್ಬಿಣದ ರಾಡು, ದೊಣ್ಣೆ, ಚಾಕು, ಅವರ ಮನೆಯಲ್ಲಿಟ್ಟುಕೊಂಡು ರಾತ್ರಿ ಸುಮಾರು 9-00 ಗಂಟೆಗೆ ತಮ್ಮ ತಾಯಿಯವರ ಮನೆಯ ಹತ್ತಿರ ಕೇಳಲು ಹೋದಾಗ ಇವರೆಲ್ಲ ಸುತ್ತುವರೆದು ತಮ್ಮ ತಾಯಿ ನರಸಮ್ಮ ರವರ ತಲೆಗೆ ರಾಡಿನಿಂದ ಕೃಷ್ಣಪ್ಪ ಮತ್ತು ರಾಜಪ್ಪ ಹೊಡೆದರು ತಾನು ನೋಡಿ ಓಡಿಹೋದಾಗ ಚಂದ್ರಶೇಖರ್ ತನಗೆ ಹಿಂದುಗಡೆಯಿಂದ ಮಚ್ಚಿನಲ್ಲಿ ತಲೆಗೆ ಹೊಡೆದರು ಇವರೆಲ್ಲ ಸುತ್ತುವರೆದು ತಮ್ಮ ಕುಟುಂಬದವರನ್ನು ದೊಣ್ಣೆಗಳಿಂದ, ಕಲ್ಲುಗಳಿಂದ, ತನ್ನ ತಮ್ಮ ನಿಖಿಲ್, ತಂದೆ ವೆಂಕಟೇಶಪ್ಪ, ಭಾವ ಆನಂದ್ ರವರಿಗೆ ಹೊಡೆದಿರುತ್ತಾರೆ ನಂತರ ತಮ್ಮ ಗ್ರಾಮಸ್ಥರು ಗಲಾಟೆ ಬಿಡಿಸಲು ಬಂದಾಗ ಮೇಲ್ಕಂಡವರು ಯಾರನ್ನು ಲೆಕ್ಕಿಸದೇ ತಮ್ಮನ್ನು ಹೊಡೆಯುತ್ತಿದ್ದರು ಆಗ ತಮ್ಮ ಗ್ರಾಮದವರು 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ಕೊಟ್ಟಾಗ ಪೊಲೀಸ್ ಕಂಪ್ಲೆಂಟ್ ಕೊಟ್ಟರೆ ನಿಮ್ಮನ್ನು ಸಾಯಿಸುತ್ತೇವೆಂದು ಬೆದರಿಕೆ ಹಾಕಿ ನಂತರ ಅಲ್ಲಿಂದ ದ್ವಿಚಕ್ರ ವಾಹನಗಳಲ್ಲಿ ತಮಗಿಂತ ಮೊದಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ ನಂತರ ತಾವು 108 ಸಂಖ್ಯೆಗೆ ಕರೆ ಮಾಡಿ ಆಂಬುಲೆನ್ಸ್ ನಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ ಆದ್ದರಿಂದ ಈ ಮೇಲ್ಕಂಡ ಶೈಲಜ, ರಾಜಪ್ಪ, ಚಂದ್ರಶೇಖರ್, ಸುರೇಶ್, ಕೃಷ್ಣಪ್ಪ, ನರಸಮ್ಮ, ರವರುಗಳ ವಿರುದ್ದ ಸೂಕ್ತ ಕಾನೂನು ರಿಚಿತಚಿ ಕ್ರಮ ಜರುಗಿಸಿ ನ್ಯಾಯ ಕೊಡಿಸಬೇಕಾಗಿ ದೂರು.

 

9. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.81/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:04-08-2021 ರಂದು ಬೆಳಿಗ್ಗೆ 11-50  ಗಂಟೆಗೆ ಪಿಎಸ್ಐ ಸಾಹೇಬರು ದಾಳಿಯಿಂದ  ಠಾಣೆಗೆ  ಆರೋಪಿಯೊಂದಿಗೆ  ವಾಪಸ್ಸು ಬಂದು ಪಂಚನಾಮೆ  ಮಾಲುಗಳೊಂದಿಗೆ ನೀಡಿದ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:04-08-2021 ರಂದು ಬೆಳಗ್ಗೆ 10-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತವಾದ ಮಾಹಿತಿ ಎನೆಂದರೆ  ಕೊಂಡೇನಹಳ್ಳಿ ಗ್ರಾಮದ  ಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ  ಜಗದೀಶ ರವರು ತನ್ನ ಚಿಲ್ಲರೆ ಅಂಗಡಿಯ ಬಳಿ ಯಾವುದೇ ಪರವಾನಗಿಯನ್ನು ಪಡೆಯದೇ ಅಕ್ರಮವಾಗಿ  ತನ್ನ  ಚಿಲ್ಲರೆ ಅಂಗಡಿಯ ಬಳಿ  ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ  ಮಾಹಿತಿ ಬಂದಿದ್ದು  ಮಾಹಿತಿಯಂತೆ ಠಾಣೆಯಲ್ಲಿದ್ದ ಸಿಬ್ಬಂದಿಯಾದ ಕೇಶವಮೂರ್ತಿ ಮತ್ತು ಮಧುಸೂದನ ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆಎ-40-ಜಿ-1555 ರಲ್ಲಿ ಚಾಲಕ ಪಾರೂಖ್ ರೊಂದಿಗೆ  ಹೊರಟು ಕೊಂಡೇನಹಳ್ಳಿ ಗ್ರಾಮದ ಗೇಟಿನ ಬಳಿ ಇದ್ದಂತಹ  ಪಂಚರನ್ನು ಬರಮಾಡಿಕೊಂಡು  ಅವರುಗಳ ಸಮಕ್ಷಮದಲ್ಲಿ ಬೆಳಗ್ಗೆ 10-30 ಗಂಟೆಗೆ  ಜಗದೀಶ  ರವರ ಬಾಬತ್ತು  ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು  ಕುಡಿಯುತ್ತಿದ್ದ  ಲೋಟಗಳನ್ನು  ಬಿಸಾಡಿ ಓಡಿ ಹೋಗಿದ್ದು ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವನ   ಹೆಸರು ವಿಳಾಸವನ್ನು ಕೇಳಲಾಗಿ  ಜಗದೀಶ ಬಿನ್ ರಾಮಯ್ಯ 46 ವರ್ಷ  ವಕ್ಕಲಿಗರು  ಚಿಲ್ಲರೆ ಅಂಗಡಿ ವ್ಯಾಪಾರ ಕೊಂಡೇನಹಳ್ಳಿ ಗ್ರಾಮ ,ಚಿಕ್ಕಬಳ್ಳಾಪುರ ತಾಲ್ಲೂಕು ಎಂತಾ ತಿಳಿಸಿದ್ದು ಅಂಗಡಿಯ  ಮುಂದೆ ಒಂದು ಪ್ಲಾಸ್ಟಿಕ್ ಕವರೊಂದಿದ್ದು ಅದನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥದ HAYWARDS CHEERS  WHISKY  ಹೆಸರಿನ  10 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ ಬೆಲೆ 35.13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು- 900 ML ಮದ್ಯವಿದ್ದು ಒಟ್ಟು ಬೆಲೆ 351 ರೂ ಆಗುತ್ತದೆ.,2) HAYWARDS CHEERS  WHISKY  ಹೆಸರಿನ ಮದ್ಯದ 5 ಖಾಲಿ ಟೆಟ್ರಾ ಪ್ಯಾಕೇಟುಗಳು 3) 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಇವುಗಳನ್ನು ತನ್ನ ಅಂಗಡಿಯ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು  ಚಿಲ್ಲರೆ ಅಂಗಡಿ ಮಾಲೀಕ ಜಗದೀಶನನ್ನು  ಕೇಳಿದಾಗ ತನ್ನ ಬಳಿ ಯಾವುದೇ ಪರವಾನಗಿ  ಇಲ್ಲವೆಂದು ಹೇಳಿದ್ದು ಸದರಿ  ಮಾಲನ್ನು ಪಂಚರ ಸಮಕ್ಷಮ ಬೆಳಗ್ಗೆ 10-40 ರಿಂದ 11-30 ಗಂಟೆ ವರೆವಿಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಅಂಗಡಿಯ  ಮಾಲೀಕ  ಜಗದೀಶ  ಮತ್ತು  ಸಿಕ್ಕ ಮಾಲುಗಳನ್ನು ನಮ್ಮ ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಫಿಯ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರವವರದಿ.

 

10. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.94/2021 ಕಲಂ. 323,324,504 ಐ.ಪಿ.ಸಿ:-

  ದಿನಾಂಕ.04.08.2021 ರಂದು ಬೆಳಿಗ್ಗೆ 11-45 ಗಂಟೆಗೆ  ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಗಾಯಾಳು ಷೇಕ್ ಹುಸೇನ್ ಸಾಬ್ ಬಿನ್ ಲೇಟ್ ಅಬ್ದುಲ್ ಖಾದರ್, ರವರಿಂದ ಪಡೆದು ಬಂದ ಹೇಳಿಕೆ ದೂರಿನ ಸಾರಾಂಶವೇನೆಂದರೆ, ನಾನು ಪ್ರತಿ ದಿನ ಶಿಡ್ಲಘಟ್ಟದ ರೇಷ್ಮೆ ಮಾರುಕಟ್ಟೆಗೆ ಹೋಗಿ ಗೂಡನ್ನು ತೆಗೆದುಕೊಂಡು ಬಂದು ರೇಷ್ಮೆ ಕೆಲಸ ಮಾಡಿಕೊಂಡಿರುತ್ತೇನೆ. ಅದೇ ರೀತಿ ದಿನಾಂಕ: 04/08/2021 ರಂದು ಬೆಳಿಗ್ಗೆ ಸುಮಾರು 10-00 ಗಂಟೆಗೆ ರೇಷ್ಮೆ ಗೂಡು ಖರೀದಿಸುವ ಸಲುವಾಗಿ ಮಾರುಕಟ್ಟೆಯ ಬಳಿ ಹೋಗಿ ನಾನು ನನ್ನ ಸ್ನೇಹಿತರಾದ ಶಂಕರ್ ಮತ್ತು ರಾಮಚಂದ್ರರವರುಗಳು ಮಾತನಾಡುತ್ತಿದ್ದೇವು ಬೆಳಿಗ್ಗೆ 10-15 ಗಂಟೆಗೆ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಮಂಜು @ ಮಂಜುನಾಥ ರವರು ನಮ್ಮ ಬಳಿ ಬಂದಾಗ ಶಂಕರ್ ರವರು ಮಂಜುನಾಥನನ್ನು ಕುರಿತು ಏಕೆ ರೀಲರ್ಸ್ ಗಳಿಗೆ ತೊಂದರೆ ಕೊಡುತ್ತೀಯಾ ಎಲ್ಲರೂ ನಿನ್ನನ್ನು ಬೈದುಕೊಳ್ಳುತ್ತಿದ್ದಾರೆ ಎಂದು ಕೇಳಿದ್ದು, ಆಗ ಮಂಜು ನನ್ನ ಬಗ್ಗೆ ಯಾರಾದರೂ ಮಾತನಾಡಿಕೊಂಡರೆ ಚೆನ್ನಾಗಿರುವುದಿಲ್ಲವೆಂದು ಕೆಟ್ಟ ಮಾತುಗಳಿಂದ ಬೈದನು ಆಗ ನಾನು ಏಕೆ ಈ ರೀತಿ ಮಾತನಾಡುತ್ತೀದ್ದೀಯಾ ಎಂದು ಕೇಳಿದಕ್ಕೆ ನೀನು ಯಾರು ಕೇಳುವುದಕ್ಕೆ ಎಂದು ಬಾಯಿಗೆ ಬಂದಂತೆ ಬೈದು ಕೈಗಳಿಂದ ಹೊಡೆದು ನೋವನ್ನುಂಟು ಮಾಡಿ ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ಎಡಕಾಲಿನ ಪಾದಕ್ಕೆ ಹೊಡೆದಾಗ ಪಾದ ಊದಿಕೊಂಡಿದ್ದು, ರಕ್ತಗಾಯವಾಗಿರುತ್ತೆ. ಅಷ್ಟರಲ್ಲಿ ಶಂಕರ್ ಮತ್ತು ರಾಮಚಂದ್ರ ರವರುಗಳು ಅಡ್ಡ ಬಂದು ಜಗಳ ಬಿಡಿಸಿರುತ್ತಾರೆ. ನಂತರ ನಾನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಯಾವುದೋ ದ್ವಿ ಚಕ್ರ ವಾಹನದಲ್ಲಿ ಬಂದು ಚಿಕಿತ್ಸೆ ಪಡೆದು ಕೊಂಡಿರುತ್ತೇನೆ. ವಿನಾಃ ಕಾರಣ ನನ್ನ ಮೇಲೆ ಜಗಳ ಮಾಡಿ ಹೊಡೆದು ಬೈದಿರುವ ಮಂಜುನಾಥ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ನೀಡಿದ ಹೇಳಿಕೆ ದೂರಿನ ಮೇರೆಗೆ  ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 04-08-2021 06:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080