ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 92/2021 ಕಲಂ. 87 ಕೆ.ಪಿ ಆಕ್ಟ್:-

     ಘನ ನ್ಯಾಯಾಲಯದಲ್ಲಿ  ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ಇನ್ಸ್ ಪೆಕ್ಟರ್ ಶ್ರೀ ನಾರಾಯಣಸ್ವಾಮಿ ಅರ್   ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ: 03/06/2021 ರಂದು ಸಂಜೆ  4-30 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಟ್ಲಹಳ್ಳಿ ಪೊಲೀಸ್  ಠಾಣೆಯ ಸರಹದ್ದಿನ  ದಿಗುವದೇವಪಲ್ಲಿ ಗ್ರಾಮದ ಡಿ ವಿ ಸುಬ್ಬರೆಡ್ಡಿರವರ ಜಮೀನನ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ಯಾರೋ ಕೆಲವರು ಕಾನೂನು ಬಾಹಿರವಾಗಿ ಕೋಳಿಪಂದ್ಯ ಜೂಜಾಟ ಆಡುತ್ತಿರುವುದಾಗಿ ಖಚಿತ ವರ್ತಮಾನ ಬಂದಿದ್ದು ನಾನು ಠಾಣೆಯ ಸಿಬ್ಬಂದಿಯವರಾದ  ಹೆಚ್ ಸಿ-36 ವಿಜಯ್ ಕುಮಾರ್, ಹೆಚ್ ಸಿ- 139 ಶ್ರೀನಾಥ, ಹೆಚ್ ಸಿ 176 ಮುನಿರಾಜು ಹೆಚ್.ಸಿ-98 ಶ್ರೀನಿವಾಸ ಪಿಸಿ -02ಅರುಣ್ ಪಿಸಿ-262ಅಂಬರೀಶ್ ಪಿಸಿ-387 ಅನಿಲ್ ಕುಮಾರ್ ಪಿಸಿ- 396 ರಮೇಶ್ ಕಂಪ್ಲಿ, ಪಿಸಿ-388 ಗದ್ದೇಪ್ಪ ಶಿಪಪುರ ಪಿಸಿ-561ರಮೇಶ್ ತಲವಾರ್  ಹಾಗೂ ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರುಗಳನ್ನು  ಕರೆದುಕೊಂಡು ದಿಗುವದೇವಪಲ್ಲಿ ಗ್ರಾಮಕ್ಕೆ ಸಂಜೆ 5-00 ಗಂಟೆಗೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ದಿಗುವದೇವಪಲ್ಲಿ ಗ್ರಾಮದ ಡಿ ವಿ ಸುಬ್ಬರೆಡ್ಡಿರವರ ಜಮೀನನ ಪಕ್ಕದಲ್ಲಿರುವ ಸರ್ಕಾರಿ ಜಾಗದ ಬಳಿಗೆ ನಡೆದುಕೊಂಡು ಹೋಗಿ ಅಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ದಿಗುವದೇವಪಲ್ಲಿ ಗ್ರಾಮದ ಡಿ ವಿ ಸುಬ್ಬರೆಡ್ಡಿರವರ ಜಮೀನನ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ಯಾರೋ ಕೆಲವು ಜನರು ಗುಂಪಾಗಿ ಸೇರಿದ್ದು  ಗುಂಪಿನ ಮಧ್ಯದಲ್ಲಿ ಕೋಳಿಗಳು ಇದ್ದು ಗುಂಪಿನಲ್ಲಿದ್ದವರು ನನ್ನ ಕೋಳಿ ಗೆಲ್ಲುತ್ತೆ 100 ರೂ, ಮತ್ತೊಬ್ಬ ಅವರ ಕೋಳಿ ಗೆಲ್ಲುತ್ತೆ 200 ರೂ. ಎಂದು ಜೋರಾಗಿ ಮಾತನಾಡಿಕೊಳ್ಳುತ್ತಿದ್ದು ಸದರಿಯವರು ಕೋಳಿ ಪಂದ್ಯದ ಜೂಜಾಟವಾಡುತ್ತಿರುವುದು ಖಚಿತವಾಗಿದ್ದರ ಮೇರೆಗೆ ನಾನು ನನ್ನೊಂದಿಗೆ ಬಂದಿದ್ದ ಸಿಬ್ಬಂದಿ ಮತ್ತು ಪಂಚಾಯ್ತಿದಾರರೊಂದಿಗೆ ಸದರಿ ಗುಂಪನ್ನು ಸುತ್ತುವರೆದು ಕೋಳಿಪಂದ್ಯ ಜೂಜಾಟ ಅಡುತಿದ್ದವರಿಗೆ ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿದರೂ ಸಹ ಗುಂಪಿನಲ್ಲಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಜೂಜಾಡುತ್ತಿದ್ದವರು ಕೋಳಿ ಹುಂಜಗಳನ್ನು ಹಾಗೂ ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣವನ್ನು ಅಲ್ಲಿಯೇ ಬಿಸಾಡಿ ಓಡಲು ಪ್ರಯತ್ನಿಸಿದ್ದು,ಅವರುಗಳನ್ನು ಹಿಂಬಾಲಿಸಿ ಎಂಟು ಜನರನ್ನು ವಶಕ್ಕೆ ಪಡೆದುಕೋಂಡಿದ್ದು, ಅವರುಗಳ  ಹೆಸರು ಮತ್ತು ವಿಳಾಸ ಕೇಳಲಾಗಿ 1) ನರಸಿಂಹಪ್ಪಬಿನ್ ವೆಂಕಟರವಣಪ್ಪ 32 ವರ್ಷ ಆದಿದ್ರಾವಿಡ  ಜನಾಂಗ, ಗಾರೆಕೆಲಸ, ವಾಸ ಬೂಶಿಪಲ್ಲಿ   ಗ್ರಾಮ,  ತಂಬಾಲಪಲ್ಲಿ  ತಾಲ್ಲೂಕು, ಚಿತ್ತೂರು ಜಿಲ್ಲೆ ಮೊ ನಂ:9676592488. 2) ಶ್ರೀ.ಮುನಿರಾಜು ಬಿನ್ ವೆಂಕಟರವಣಪ್ಪ, 32ವರ್ಷ, ವಡ್ಡರು ವಾಸ ಯಾಲಗಿರಿವೊಳ್ಳಪಲ್ಲಿ ಗ್ರಾಮ ತಂಬಾಲಪಲ್ಲಿ  ತಾಲ್ಲೂಕು, ಚಿತ್ತೂರು ಜಿಲ್ಲೆ ಅಂದ್ರಪ್ರದೇಶ ರಾಜ್ಯ 3)ವೆಂಕಟರವಣ ಬಿನ್ ಲೇಟ್ ಶಿವಣ್ಣ 30 ದಿ ದ್ರಾವಿಡ  ಜನಾಂಗಕೂಲಿಕೆಲಸ ವಾಸ ಯಗುವ ದೇವಪಲ್ಲಿ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ ನಂ9481008810. 4)ಶ್ರೀನಿವಾಸ ಬಿನ್ ತಿಪ್ಪಣ್ಣ 25 ವರ್ಷ ಕೂಲಿ ಕೆಲಸ  ವಾಸ ಮರಸನಪಲ್ಲಿ ಗ್ರಾಮ ಶ್ರೀನಿವಾಸಪುರ  ತಾಲ್ಲುಕು ಕೋಲಾರ  ಜಿಲ್ಲೆ ಮೊ ನಂ :9008926210. 5)ಶಿವಣ್ಣ  ಬಿನ್ ಲೇಟ್ ಕಿಟ್ಟಣ್ಣ  30 ವರ್ಷ ಚೆನ್ನ ದಾಸರ   ಜನಾಂಗ ಕೂಲಿ ಕೆಲಸ ವಾಸ ಆವಗಾನಪಲ್ಲಿಗ್ರಾಮ  ಶ್ರೀನಿವಾಸಪುರ  ತಾಲ್ಲೂಕು ಕೋಲಾರ  ಜಿಲ್ಲೆ ಮೊ ನಂ:8296625282. 6) ಪೆದ್ದಗಂಗಿರೆಡ್ಡಿ ಆರ್ ಬಿನ್ ಲೇಟ್ ರಾಮ ರೆಡ್ಡಿ 65 ವರ್ಷ ಒಕ್ಕಲಿರು ಜನಾಂಗ  ಕೂಲಿ ಕೆಲಸ ವಾಸ ಬಾಲವಾರಿಪಲ್ಲಿಗ್ರಾಮ  ಶ್ರೀನಿವಾಸಪುರ  ತಾಲ್ಲೂಕು ಕೋಲಾರ  ಜಿಲ್ಲೆ 7) ಸುನಿಲ್ ಕುಮಾರ್ ಬಿನ್ ರಾಮಕೃಷ್ಣ 26 ವರ್ಷ ಬೋವಿ ಜನಾಂಗ  ಕೂಲಿ ಕೆಲಸ ವಾಸ ಚೋಳುರು ಗ್ರಾಮ ಬಾಗೆಪಲ್ಲಿ  ತಾಲ್ಲೂಕು ಮೊ ನಂ 7259690360.  8) ಸುಭಾಷ್ ಬಿನ್ ಲಷ್ಮಣ್ ರೆಡ್ಡಿ 28ವರ್ಷ ಒಕ್ಕಲಿಗರು  ಜನಾಂಗ ಕೂಲಿ ಕೆಲಸ ವಾಸ ಗುಂದಿಗೆರೆ  ಗ್ರಾಮ ಚಿಂತಾಮಣಿ ತಾಲ್ಲೂಕು ಮೊ.ಸಂ9738921292. ಎಂತ ತಿಳಿಸಿದ್ದು. ನಂತರ  ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಸದರಿಯವರು ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ ಇದ್ದು,  ಪಂಚರ  ಸಮಕ್ಷಮ ಎಣಿಕೆ ಮಾಡಲಾಗಿ   3030/- ರೂ ನಗದು ಹಣ ಇದ್ದು, ಎರಡು ಸತ್ತ ಕೊಳಿ ಮತ್ತು ಒಂದು ಜೀವಂತ ಕೊಳಿ ಹುಂಜಗಳಿದ್ದು ಸದರಿಯವುಗಳನ್ನು ಈ ಕೇಸಿನ ಮುಂದಿನ ಕ್ರಮಕ್ಕಾಗಿ  ಸಂಜೆ  5-30  ಗಂಟೆ ಯಿಂದ 06-30 ಗಂಟೆವರೆಗೆ ಪಂಚರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ  ಅಮಾನತ್ತು ಪಡಿಸಿಕೊಂಡು ಎಂಟು ಜನ ಆರೋಪಿಗಳನ್ನು ವಶಕ್ಕೆಪಡೆದುಕೊಂಡು ನಂತರ ಠಾಣೆಗೆ ರಾತ್ರಿ 7-00ಗಂಟೆಗೆ ವಾಪಸ್ಸು ಬಂದು  ಸ್ವತಃ ಠಾಣೆಯ ಎನ್.ಸಿ.ಆರ್ ನಂ: 104/2021 ರಂತೆ ದಾಖಲಿಸಿಕೊಂಡಿರುತ್ತೇನೆ. ನಂತರ ಬಟ್ಲಹಳ್ಳಿ ಪೊಲೀಸ್ ಠಾಣೆಯ ಎನ್.ಸಿ.ಆರ್ ಸಂಖ್ಯೆ: 104/2021 ಪ್ರಕರಣದಲ್ಲಿ ಅಕ್ರಮವಾಗಿ ಕೋಳಿಪಂದ್ಯ ಜೂಜಾಟ ಆಡುತ್ತಿದ್ದ ಆರೋಪಿಗಳ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿಯನ್ನು ನೀಡಬೇಕಾಗಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಹೆಚ್ ಸಿ 107 ಮುಸ್ತಪ ರವರ ಮೂಲಕ ರವಾನಿಸಿಕೊಂಡು ಘನ ನ್ಯಾಯಾಲಯದಿಂದ ಠಾಣೆಯ ಎನ್ ಸಿ ಆರ್ ನಂ:104/2021 ರಲ್ಲಿ  ಆರೋಪಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿಕೋಳ್ಳಲು ಅನುಮತಿಯನ್ನು ಪಡೆದುಕೊಂಡು ರಾತ್ರಿ 11-00 ಗಂಟೆಗೆ ಠಾಣಾ ಮೊ ಸಂಖ್ಯೆ:92/2021 ಕಲಂ:87 ಕೆ ಪಿ ಆಕ್ಟ್ (ಕೋಳಿ ಜೂಜಾಟ ಪಂದ್ಯ )ರೀತ್ಯಾ ಪ್ರಕರಣ ದಾಖಲು ಮಾಡಿಕೋಂಡಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 93/2021 ಕಲಂ. 15(A),32(3) ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ನಾರಾಯಣಸ್ವಾಮಿ.ಆರ್ ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:04/07/2021 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ  ಠಾಣಾ ಸಿಬ್ಬಂದಿ ಹೆಚ್.ಸಿ-36 ವಿಜಯ್ ಕುಮಾರ್, ಮತ್ತು ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಠಾಣಾ ವ್ಯಾಪ್ತಿಯ ಇರಗಂಪಲ್ಲಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ನನಗೆ ಠಾಣಾ ವ್ಯಾಪ್ತಿಯ ಯಗವಕೋಟೆ ಗ್ರಾಮದ ವಾಸಿಯಾದ ಪುರುಷೋತ್ತಮ ಬಿನ್ ಲೇಟ್ ಮನಿಯಾಚಾರಿ ರವರು ಅವರ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಠಾಣೆಯ ಜೀಪ್ ಚಾಲಕ ಎಪಿಸಿ-65 ವೆಂಕಟೇಶ್ ಮತ್ತು ಹೆಚ್ ಸಿ-36 ವಿಜಯ್ ಕುಮಾರ್ ರವರೊಂದಿಗೆ ಯಗವಕೋಟೆ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಮಧ್ಯಾಹ್ನ 03-30 ಗಂಟೆಗೆ ಪಂಚಾಯ್ತಿದಾರರು ಮತ್ತು ಸಿಬ್ಬಂದಿಯೊಂದಿಗೆ ಯಗವಕೋಟೆ ಗ್ರಾಮದ ವಾಸಿ ಪುರುಷೋತ್ತಮ ಬಿನ್ ಲೇಟ್ ಮನಿಯಾಚಾರಿ ರವರ ಮನೆಯ ಬಳಿಗೆ ಹೋಗಿ ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮದ್ಯ ನೀಡುತ್ತಿದ್ದ ಒಬ್ಬ ಆಸಾಮಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಮನೆಯ ಬಳಿ ಮಧ್ಯವನ್ನು ನೀಡುತ್ತಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಶ್ರೀ.ಪುರುಷೋತ್ತಮ ಬಿನ್ ಲೇಟ್ ಮನಿಯಾಚಾರಿ 32 ವರ್ಷ ವಿಶ್ವಕರ್ಮ ಜನಾಂಗ ಶಿವ ಬಾರ್ ನಲ್ಲಿ ಸಪ್ಲೇಯರ್ ಕೆಲಸ ವಾಸ ಯಗವಕೋಟೆ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು  ಸದರಿ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 90 ಎಂ.ಎಲ್ ಸಾಮರ್ಥ್ಯದ 09 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳು ಇದ್ದು ಒಟ್ಟು 810 ಎಂ.ಎಲ್ ನ 316.17 ರೂಗಳು ಆಗಿರುತ್ತೆ,  2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು , 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಸಂಜೆ 03-45 ಗಂಟೆಯಿಂದ ಸಂಜೆ 04-30 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಅಮಾನತ್ತುಪಡಿಸಿಕೊಂಡು ಸಂಜೆ 05-00 ಗಂಟೆಗೆ ಠಾಣೆಗೆ  ವಾಪಸ್ಸು ಬಂದು ಸ್ವತಃ ವರದಿಯ ಮೇರೆಗೆ ಠಾಣೆಯ ಮೊ,ಸಂಖ್ಯೆ: 93/2021 ಕಲಂ:15(A) 32(3) KE ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

3. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 94/2021 ಕಲಂ. 323,341,504,506,34 ಐ.ಪಿ.ಸಿ:-

     ದಿನಾಂಕ 04/07/2021 ರಂದು ಕೋಲಾರದ E.T.C.M ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ರಾಮಪ್ಪ.ವಿ ಬಿನ್ ಲೇಟ್ ವೆಂಕಟರಾಯಪ್ಪ 61 ವರ್ಷ ಆದಿದ್ರಾವಿಡ ಜನಾಂಗ,ವ್ಯವಸಾಯ ವಾಸ-ಎಸ್.ರಾಘುಟ್ಟಹಳ್ಳಿ ಗ್ರಾಮ ಮುಂಗಾನಹಳ್ಳಿ ಹೋಬಳಿ ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ದಿನಾಂಕ 02/07/2021 ರಂದು ಬೆಳಿಗ್ಗೆ ಸುಮಾರು 07-00 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಮಗ ಮಾರುತಿ ನನ್ನ ಮನೆಯ ಬಳಿ ಇದ್ದಾಗ ನನ್ನ ಚಿಕ್ಕಪ್ಪನ ಮಗನಾದ ನಾರಾಯಣಪ್ಪ ಬಿನ್ ಲೇಟ್ ವೀರಣ್ಣಗಾರಿ ವೆಂಕಟರಾಯಪ್ಪ ಮತ್ತು ಶ್ರೀಕಾಂತ ಬಿನ್ ನಾರಾಯಣಪ್ಪ ರವರು ನಮ್ಮ ಮನೆಯ ಹಿಂಭಾಗದಲ್ಲಿರುವ ಖಾಲಿ ಜಾಗದ ಬಳಿಗೆ ಬಂದು ವಿನಾಕಾರಣ ನಮ್ಮ ಮನೆಯ ಮೇಲ್ಚಾವಣಿಯ ನೀರು ಪೈಪ್ ಗಳಲ್ಲಿ ಬಂದು ನಮ್ಮ ಖಾಲಿ ಜಾಗಕ್ಕೆ ಬಂದು ನಿಲ್ಲುತ್ತೆ ಈ ನೀರನ್ನು ನೀವು ಚರಂಡಿಗೆ ಯಾಕೆ ಬಿಡಬಾರದು ಎಂದು ನನ್ನ ಮಗನನ್ನು ಮನೆಗೆ ಹೋಗದಂತೆ ಅಡ್ಡಗಟ್ಟಿ ಶ್ರೀಕಾಂತ ನನ್ನ ಮಗನನ್ನು ಕತ್ತಿನಪಟ್ಟಿ ಹಿಡಿದು ಎಳೆದಾಡಿ ಕೈಗಳಿಂದ ಹೊಡೆಯುತ್ತಿದ್ದಾಗ ನಾನು ಯಾಕಪ್ಪ ನನ್ನ ಮಗನನ್ನು ಹೊಡೆಯುತ್ತಿದ್ದೀರಾ ಎಂದು ಬಿಡಿಸಲು ಅಡ್ಡ ಬಂದಾಗ ನಾರಾಯಣಪ್ಪ ಲೋಫರ್ ನನ್ನ ಮಗನೇ ನಿಯಮ್ಮನೇ ದೆಂಗಾ ನಿನ್ನ ಜಾಗ ಎಲ್ಲಿದೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ನನ್ನ ಎದೆಗೆ ಗುದ್ದಿರುತ್ತಾನೆ ಶ್ರೀಕಾಂತ ಸಹ ನನ್ನ ಮೈಮೇಲೆ ಕೈಗಳಿಂದ ಹೊಡೆದು ನೋವುಂಟು ಮಾಡಿರುತ್ತಾನೆ ನಾರಾಯಣಪ್ಪ ಮತ್ತು ಶ್ರೀಕಾಂತ ಈ ನನ್ನ ಮಕ್ಕಳನ್ನು ಪ್ರಾಣಸಹಿತ ಬಿಡಬಾರದೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ ಶ್ರೀಕಾಂತ ಕಾಲಿನಿಂದ ನನಗೆ ಜೋರಾಗಿ ಬಲಕಾಲಿಗೆ ಒದ್ದಾಗ ನಾನು ಚರಂಡಿಗೆ ಬಿದ್ದು ಹೋದಾಗ ನನ್ನ ಬಲಕಾಲಿನ ತೊಡೆಗೆ ಮೂಗೇಟು ಉಂಟಾಗಿ ತರಚಿದ ಗಾಯಗಳಾಗಿರುತ್ತೆ ಅಷ್ಟರಲ್ಲಿ ನಾನು ನೋವಿನಿಂದ ಕಿರುಚಿಕೊಂಡಾಗ ಅಷ್ಟರಲ್ಲಿ ನನ್ನ ಅಣ್ಣ ವೆಂಕಟರವಣಪ್ಪ ಮತ್ತು ಅಪ್ಪಾಲ@ ವೆಂಕಟರವಣಪ್ಪ ಬಿನ್ ಲೇಟ್ ವೆಂಕಟರಾಮಣ್ಣ ರವರು ಬಂದು ಬಿಡಿಸಿರುತ್ತಾರೆ ಶ್ರೀಕಾಂತ ಅಲ್ಲಿಯೇ ಇದ್ದ ನನ್ನ ಪತ್ನಿ ಲಕ್ಷ್ಮೀದೇವಮ್ಮ ರವರ ಕೆನ್ನೆಗೆ ಹೊಡೆದು ನೋವುಂಟು ಮಾಡಿರುತ್ತಾನೆ ಅಷ್ಟರಲ್ಲಿ ವೆಂಕಟರವಣಪ್ಪ ಮತ್ತು ಅಪ್ಪಾಲರವರುಗಳು ನನ್ನನ್ನು ಅವರಿಂದ ಪಾರು ಮಾಡಿ ನನ್ನನ್ನು ಚಿಕಿತ್ಸೆಗಾಗಿ ಅಂಬುಲೆನ್ಸ್ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ SNR ಆಸ್ಪತ್ರೆ ಕೋಲಾರಕ್ಕೆ ಕಳುಹಿಸಿದ್ದು ಅಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಕೋಲಾರ E.T.C.M ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿರುತ್ತೇನೆ ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನುರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿದೆ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 97/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:03-07-2021 ರಂದು ಸಂಜೆ 16-00 ಗಂಟೆಗೆ ಠಾಣಾ ಎನ್,ಸಿ,ಆರ್ 134/2021 ರಲ್ಲಿ ಪ್ರಕರಣ ದಾಖಲಿಸಲು ಘನ ಒಂದನೇ ಸಿ,ಜೆ ಮತ್ತು ಜೆಮ್,ಎಫ್,ಎಫ್,ಸಿ ನ್ಯಾಯಾಲಯ ಚಿಕ್ಕಬಳ್ಳಾಪುರ ರವರಿಂದ ಅನುಮತಿಯ ಸಾರಾಂಶವೆನೆಂದರೆ ದಿನ ದಿನಾಂಕ: 03-07-2021  ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಪಿ.ಎಸ್.ಐ ಸಾಹೇಬರು ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ತಾಲ್ಲೂಕು ರೆಡ್ಡಿಗೊಲ್ಲವಾರಹಳ್ಳಿ ಗ್ರಾಮದ  ಹೊರವಲಯದಲ್ಲಿರುವ ಹೊಂಗೆ ಮರಗಳ ಕೆಳಗೆ ಹಣವನ್ನು ಪಣವಾಗಿಟ್ಟುಕೊಂಡು ಯಾರೋ ಅಂದರ್ ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಂದ ಮಾಹಿತಿ ಬಂದಿದ್ದು ಸದರಿ ಆಸಾಮಿಗಳ ವಿರುದ್ಧ ಠಾಣಾ ಮೊ.ಸಂ 97/2021 ಕಲಂ:87 ಕೆ.ಪಿ.ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತೆ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 98/2021 ಕಲಂ. 32,34 ಕೆ.ಇ ಆಕ್ಟ್:-

     ದಿನಾಂಕ:03.07.2021 ರಂದು ಸಂಜೆ 6-30 ಗಂಟೆಗೆ ಪಿ.ಎಸ್.ಐ ಸಾಹೇಬರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:03.07.2021 ರಂದು ಸಂಜೆ 6-15 ಗಂಟೆಯಲ್ಲಿ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿಗೆ ಸೇರಿದ ನಾಯನಹಳ್ಳಿ ಗ್ರಾಮದ ರಾಜಪ್ಪ ಬಿನ್ ಲೇಟ್ ನಾರಾಯಣಪ್ಪ 38 ವರ್ಷ.ಪರಿಶಿಷ್ಠ ಜಾತಿ ಚಿಲ್ಲರೆ ಅಂಗಡಿ ವ್ಯಾಪಾರ ಚಿಕ್ಕಬಳ್ಳಾಪುರ ತಾಲ್ಲೂಕು ಎಂಬುವವರು ತನ್ನ ಚಿಲ್ಲರೆ ಅಂಗಡಿಯ ಬಳಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಮಾನ್ಯ ಶ್ರೀ ಎಂ.ಎಂ ಪ್ರಶಾಂತ್ ಸಿ.ಪಿ.ಐ ಚಿಕ್ಕಬಳ್ಳಾಪುರ ರವರಿಗೆ ಖಚಿತ ಮಾಹಿತಿ ಬಂದಿರುತ್ತದೆ ಈ ಬಗ್ಗೆ ಅಸಾಮಿಯ ವಿರುದ್ದ ಕಲಂ: 32.34 ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ.

 

6. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 99/2021 ಕಲಂ. 32,34 ಕೆ.ಇ ಆಕ್ಟ್:-

     ದಿನಾಂಕ:-04/07/2021 ರಂದು ಬೆಳಿಗ್ಗೆ 9-45 ಗಂಟೆ ಸಮಯದಲ್ಲಿ ಪಿ.ಎಸ್.ಐ ಸಾಹೇಬರವರು ಠಾಣೆಯಲ್ಲಿ ನೀಡಿದ ದೂರನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ಈ ದಿನ ದಿನಾಂಕ: 04/07/2021 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದಿಗೆ ಸೇರಿದ ಚಿಕ್ಕಬಳ್ಳಾಪುರ ತಾಲ್ಲೂಕು ಪೂಜನಹಳ್ಳಿ ಗ್ರಾಮದ  ವಾಸಿ ನಾಗರಾಜಪ್ಪ ಬಿನ್ ಲೇಟ್ ಹನುಮಂತಪ್ಪ. 48 ವರ್ಷ. ಬೋವಿ ಜನಾಂಗ. ಚಿಲ್ಲರೆ ಅಂಗಡಿ ವ್ಯಾಪಾರ  ಪೂಜನಹಳ್ಳಿ ಗ್ರಾಮ ರವರು ತನ್ನ ಚಿಲ್ಲರೆ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿದ್ದು, ಈ ಬಗ್ಗೆ ಸದರಿ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರ.ವ.ವರದಿ

 

7. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 100/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:04.07.2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ ಪಿ ವೆಂಕಟೇಶ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:04.07.2021 ರಂದು ತನ್ನ ಬಾಬತ್ತು ಕೆಎ 40 ಟಿ 8267/8268 ನೊಂದಣಿ ಸಂಖ್ಯೆಯ ಟ್ರಾಕ್ಟರ್ ಇಂಜನ್ ಮತ್ತು ಟ್ರಾಲಿಗೆ ಟಮೋಟವನ್ನು ಲೋಡ್ ಮಾಡಿಕೊಂಡು ಚಿಕ್ಕಬಳ್ಳಾಪುರ ಮಾರ್ಕೇಟ್ ಗೆ ಹೋಗಲು ಬೆಳಿಗ್ಗೆ 6-15 ಗಂಟೆ ಸಮಯದಲ್ಲಿ ಎನ್ ಹೆಚ್ 44 ರಸ್ತೆಯ ಹೈದರಾಬಾದ್ – ಬೆಂಗಳೂರು ರಸ್ತೆಯ ಮರಸನಹಳ್ಳಿ ಗೇಟ್ ನಿಂದ ಸ್ವಲ್ಪ ಮುಂದೆ ಚಿಕ್ಕಬಳ್ಳಾಪುರ ಕಡೆಗೆ ಟ್ರಾಕ್ಟರ್ ಅನ್ನು ತಾನು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಹಿಂದುಗಡೆಯಿಂದ ಬರುತ್ತಿದ್ದ ಟಿ.ಎಸ್ 06 ಯು.ಎ 1566 ನೊಂದಣಿ ಸಂಖ್ಯೆಯ ಈಚರ್ ಕ್ಯಾಂಟರ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಟ್ರಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ಟ್ರಾಲಿ ರಸ್ತೆಯ ಎಡಕ್ಕೆ ಮುಗುಚಿ ಬಿದ್ದಿದ್ದು, ಟ್ರಾಲಿಯ ಹಿಂಭಾಗ , ಹೌಜಿಂಗ್ ಜಖಂಗೊಂಡಿದ್ದು, ಇಂಜನ್ ನ ಎಡಗಡೆಯ ದೊಡ್ಡ ಚಕ್ರ ಮುರಿದು ಹೋಗಿರುತ್ತದೆ. ಟ್ರಾಕ್ಟರ್ ಇಂಜನ್ ನಲ್ಲಿ ತನ್ನ ಪಕ್ಕದಲ್ಲಿ ಕುಳಿತಿದ್ದ ತನ್ನ ಮಗ ಶ್ಯಾಮ್ ಸುಂದರ್ ರವರಿಗೆ  ಬಲ ಮೊಣಕೈಗೆ, ಬೆನ್ನಿನ ಮೇಲೆ ತರಚಿದ ಗಾಯಗಳಾಗಿದ್ದು, ಈಚರ್ ಕ್ಯಾಂಟರ್ ಮುಂಭಾಗ ಪೂರ್ತಿ ಜಖಂಗೊಂಡಿದ್ದು, ವಾಹನದಲ್ಲಿದ್ದ ನೂರ್ ಅಹಮದ್ ಎಂಬುವರಿಗೆ ರಕ್ತ ಗಾಯಗಳಾಗಿರುತ್ತವೆ. ತಕ್ಷಣ ನಾನು ನನ್ನ ಮಗನನ್ನು ಮತ್ತು ನೂರ್ ಅಹಮದ್ ರವರನ್ನು ಅಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆ ಕೊಡಸಿದ್ದು, ನೂರ್ ಅಹಮದ್ ರವರನ್ನು ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಈ ಅಪಘಾತಕ್ಕೆ ಕಾರಣನಾದ  ಟಿ.ಎಸ್ 06 ಯು.ಎ 1566 ನೊಂದಣಿ ಸಂಖ್ಯೆಯ ಈಚರ್ ಕ್ಯಾಂಟರ್ ವಾಹನದ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 

8. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 101/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:04-07-2021 ರಂದು ಮದ್ಯಾಹ್ನ 15:00 ಗಂಟೆಗೆ ಠಾಣಾ ಎನ್,ಸಿ,ಆರ್ 138/2021 ರಲ್ಲಿ ಪ್ರಕರಣ ದಾಖಲಿಸಲು ಘನ ಒಂದನೇ ಸಿ,ಜೆ ಮತ್ತು ಜೆಮ್,ಎಫ್,ಎಫ್,ಸಿ ನ್ಯಾಯಾಲಯ ಚಿಕ್ಕಬಳ್ಳಾಪುರ ರವರಿಂದ ಪಡೆದ ಅನುಮತಿಯ ಸಾರಾಂಶವೆನೆಂದರೆ ದಿನಾಂಕ:04.07.2021 ರಂದು ಡಿ.ಸಿ.ಬಿ/ಸಿ.ಇ.ಎನ್ ಪೊಲೀಸ್ ಠಾಣೆಯ ಪಿ.ಎಸ್.ಐ ರವರು ತಾನು ಮತ್ತು ಸಿಬ್ಬಂದಿಯವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ  ಕೆ.ಎ 40 ಜಿ 58 ವಾಹನದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿಗಾಗಿ ತಾಲ್ಲೂಕಿನಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಮದ್ಯಾಹ್ನ ಸುಮಾರು 12-00 ಗಂಟೆಗೆ ಮರಸನಹಳ್ಳಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಬರ ಮಾಡಿಕೊಂಡು ಚಿಕ್ಕಬಳ್ಳಾಪುರ ತಾಲ್ಲೂಕಿನ ಇನಮಿಂಚನಹಳ್ಳಿ ಗ್ರಾಮದ ಉತ್ತರಕ್ಕೆ ಸುಮಾರಿ 01ಕಿ.ಮೀ ದೂರದಲ್ಲಿರುವ ಸರ್ಕಾರಿ ಹಳ್ಳದ ಪಕ್ಕದಲ್ಲಿರುವ  ಹೊಂಗೆ ಮರದ ಕೆಳಗೆ ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿದ್ದು ದಾಳಿಯಲ್ಲಿ 04 ಜನ ಆರೋಪಿಗಳು ಸಿಕ್ಕಿ ಬಿದ್ದಿದ್ದು ಸ್ಥಳದಿಂದ 03 ಜನ ಆರೋಪಿತರು ಸ್ಥಳದಿಂದ ಪರಾರಿಯಾಗಿರುತ್ತಾರೆ. ಜೂಜಾಟಕ್ಕೆ ಬಳಸಿದ್ದ 1) ಒಂದು ಪ್ಲಾಸ್ಟಿಕ್ ಚೀಲ 2) 52 ಇಸ್ಪೀಟ್ ಎಲೆಗಳು 3) 4,500/- ರೂ ನಗದು ಹಣವನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಜೂಜಾಟದ ಸ್ಥಳದಲ್ಲಿ 04 ಜನ ಆರೋಪಿತರನ್ನು ಮಾಲುಗಳನ್ನು ಮತ್ತು ಅಸಲು ಪಂಚನಾಮೆಯೊಂದಿಗೆ ನೀಡಿದ ವರದಿಯಂತೆ ಸದರಿ ಆಸಾಮಿಗಳ ವಿರುದ್ಧ ಠಾಣಾ ಮೊ.ಸಂ 101/2021 ಕಲಂ:87 ಕೆ.ಪಿ.ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತೆ.

 

9. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 102/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:-04/07/2021 ರಂದು ಸಂಜೆ 16-30 ಗಂಟೆ ಸಮಯದಲ್ಲಿ ಪಿ.ಎಸ್.ಐ ಸಾಹೇಬರವರು ಠಾಣೆಯಲ್ಲಿ ನೀಡಿದ ದೂರನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ಈ ದಿನ ದಿನಾಂಕ: 04/07/2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದಿಗೆ ಸೇರಿದ ಚಿಕ್ಕಬಳ್ಳಾಪುರ ತಾಲ್ಲೂಕು ಮಂಚನಬಲೆ ಗ್ರಾಮದ  ವಾಸಿ ದೊಡ್ಡಪ್ಪ @ ದೊಡ್ಡಪ್ಪಯ್ಯ. 54 ವರ್ಷ, ವಕ್ಕಲಿಗರು, ಜಿರಾಯ್ತಿ. ಮಂಚನಬಲೆ ಗ್ರಾಮ ರವರು ತನ್ನ ಮನೆಯ ಮುಂದೆ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿದ್ದು, ಈ ಬಗ್ಗೆ ಸದರಿ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರ.ವ.ವರದಿ.

 

10. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 81/2021 ಕಲಂ. 383,506 ಐ.ಪಿ.ಸಿ:-

     ದಿನಾಂಕ 03/07/2021 ರಂದು ಮದ್ಯಾಹ್ನ 12.30 ಗಂಟೆಗೆ ಠಾಣಾ ಸಿಬ್ಬಂಧಿ ಪಿ.ಸಿ-490 ರವರು ಶಿಡ್ಲಘಟ್ಟ ಘನ ನ್ಯಾಯಾಲಯದ ಪಿ.ಸಿ ಆರ್ ಸಂಖ್ಯೆ 39/2020 ರ ಆದೇಶ ಪ್ರತಿಯನ್ನು ತಂದು ಹಾಜರುಪಡಿಸಿದ ಆದೇಶದ ಸಾರಾಂಶವೆನೆಂದರೆ, ಈ ಪಿ.ಸಿ.ಆರ್ ಸಂಖ್ಯೆ ದೂರುದಾರರು ತನ್ನ ಮಗಳ ಮದುವೆಯ ತಯಾರಿಯಲ್ಲಿರುವಾಗ ದಿನಾಂಕ 29/11/2019 ರಂದು ಆರೋಪಿ ಮತ್ತು ಅವರ ಬಾಡಿ ಗಾರ್ಡ ಗಳ ಜೊತೆಯಲ್ಲಿ ಬಂದು ಜಮೀನುಗಳಿಗೆ ಸಂಬಂಧಿಸಿದಂತೆ ಕ್ರಯದ ಕರಾರು ಪತ್ರ ಮತ್ತು ಜನರಲ್ ಜನರಲ್ ಫವರ್ ಆಪ್ ಅಟಾರ್ನಿ ಪತ್ರ ಬರೆದುಕೊಡಬೇಕು ಇಲ್ಲವಾದಲ್ಲಿ ಮದುವೆಗೆ ಬಂದಿರುವ ಸಂಬಂಧೀಕರ ಮುಂದೆ ಗಲಾಟೆ ಮಾಡಿ ಮದುವೆಗೆ ಅಡಚನೆ ಮಾಡುತ್ತೇವೆಂದು ಹೇಳಿ ಪ್ರಾಣ ಬೆದರಿಕೆ ಹಾಕಿ ಹೊರಟು ಹೋಗಿದ್ದು, ನಂತರ ದಿನಾಂಕ 30/11/2019 ರಂದು ಆರೋಪಿಗಳು ಮದುವೆಯ ಮನೆಗೆ ನುಗ್ಗಿ ಬಲವಂತವಾಗಿ ಪಿರ್ಯಾದುದಾರರನ್ನು ಮತ್ತು ಅವರ ಮಕ್ಕಳನ್ನು ಕರೆದುಕೊಂಡು ಶಿಡ್ಲಗಟ್ಟ ಉಪ ನೊಂದಣಾಧಿಕಾರಿಗಳ ಕಛೇರಿ ರವರ ಬಳಿ ಕರೆದುಕೊಂಡು ಹೋಗಿ ಒತ್ತಾಯ ಪೂರ್ವಕವಾಗಿ ಹೆಚ್ಚಿನ ಹಣ ಪಡೆಯುವ ಉದ್ದೇಶದಿಂದ ಕ್ರಯದ ಕರಾರು ಪತ್ರ ಮತ್ತು ಜನರಲ್ ಜನರಲ್ ಫವರ್ ಆಪ್ ಅಟಾರ್ನಿ ಪತ್ರ ಬರೆಸಿಕೊಂಡಿದ್ದು, ಆದ್ದರಿಂದ ಮೇಲ್ಕಂಡ ಆರೋಪಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ನೀಡಿರುವ ಆದೇಶವಾಗಿರುತ್ತೆ.

 

11. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 150/2021 ಕಲಂ. 420 ಐ.ಪಿ.ಸಿ:-

     ದಿನಾಂಕ:03-07-2021 ರಂದು 16-00 ಗಂಟೆಗೆ ಪಿ.ಎಸ್.ಐ. ರವರು ನೀಡಿದ  ದೂರನ್ನು ಪಡೆದು ಪ್ರಕರಣ ದಾಖಲಿಸಿದ್ದರ ಸಾರಾಂಶವೆನೇಂದರೆ  ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ  ಮೊ.ಸಂ. 149/2021 ಕಲಂ: 363-364[ಎ] ಐಪಿಸಿ ಪ್ರಕರಣದಲ್ಲಿ ತನಿಖೆಯನ್ನು ಮುಂದುವರೆಸಿ,  ಅಪಹರಣಗೊಂಡಿದ್ದ 16 ವರ್ಷದ ಬಾಲಕ ವಿಜೇಂದ್ರ ಮತ್ತು ಆರೋಪಿಗಳ ತಲಾಷೆ ಬಗ್ಗೆ ಖಚಿತ ಮಾಹಿತಿ ಪಡೆದು, ಪಿ.ಎಸ್.ಐ ಮತ್ತು  ಸಿಬ್ಬಂದಿಯಾದ ಹೆಚ್ ಸಿ-60 ರಿಜ್ವಾನುಲ್ಲಾ,ಹೆಚ್ ಸಿ-20 ಶ್ರೀನಿವಾಸರೆಡ್ಡಿ,ರವರೊಂದಿಗೆ ದಿನಾಂಕ: 02/07/2021 ರಂದು ಸಂಜೆ ಗೌರಿಬಿದನೂರು ಬಿಟ್ಟು ಆಂದ್ರಪ್ರದೇಶದ ತಿರುಪತಿಗೆ ಹೋಗಿ , ಅಲ್ಲಿ ಅಪಹರಣಗೊಂಡಿದ್ದ ಬಾಲಕ ಮತ್ತು ಆರೋಪಿಗಳ ಬಗ್ಗೆ ತಲಾಷೆ ಕೈಗೊಂಡು ತಿರುಪತಿಯಲ್ಲಿ ಹಳೆ ತಿರುಚಾನೂರು ರಸ್ತೆಯಲ್ಲಿಅಪಹರಣಗೊಂಡಿದ್ದ 16 ವರ್ಷದ ಬಾಲಕ ವಿಜೇಂದ್ರ ಬಿನ್ ಪಾಪಣ್ಣ,  ಮತ್ತು ಆರೋಪಿಗಳಾದ  1] ಶ್ರೀ.ಪಾಳ್ಯಂ ದಾಮೋದರಂ ಬಿನ್ ಕುಪ್ಪಯ್ಯ,34 ವರ್ಷ, ದೋಬಿ ಜನಾಂಗ, ಕಾರು ಚಾಲಕ ವೃತ್ತಿ, ವಾಸ: ಲಿಲೀನ್ ನಗರ, ಪದ್ಮಾವತಿ ಮೈನ್ ರೋಡ್, ತಿರುಪತಿ, ಚಿತ್ತೂರು ಜಿಲ್ಲೆ, ಆಂದ್ರಪ್ರದೇಶ, 2] ಮುತ್ತು ಶೆಟ್ಟಿ ಮಣಿಕುಮಾರ್ ಬಿನ್ ಸತ್ಯನಾರಾಯಣ, 43 ವರ್ಷ, ಕಾಪು ಜನಾಂಗ, ಕಂಕಿಪಾಡು ಗ್ರಾಮ, ಕಂಕಿಪಾಡು ಮಂಡಲಂ, ಕೃಷ್ಣಜಿಲ್ಲ, ಆಂದ್ರಪ್ರದೇಶ, 3} ಷೇಕ್ ಬಾಷಾ ಬಿನ್ ಷೇಕ್ ರಫಿಕ್, 45 ವರ್ಷ, ಮುಸ್ಲಿ ಜನಾಂಗ, ನೂಜಿವಾಡ ಗ್ರಾಮ, & ಮಂಡಲಂ, ಕೃಷ್ಣ ಜಿಲ್ಲೆ, ಆಂದ್ರಪ್ರದೇಶ, 4} ಜಾಸ್ಸಿ ಲೋಕೇಶ್ ಕುಮಾರ್ ಬಿನ್ ನಾಗೇಶ್ವರ ರಾವ್, 36 ವರ್ಷ, ಕಮ್ಮ ಜನಾಂಗ, ನೂಜಿವಾಡ ಗ್ರಾಮ, & ಮಂಡಲಂ, ಕೃಷ್ಣ ಜಿಲ್ಲೆ, ಆಂದ್ರಪ್ರದೇಶ, ರವರುಗಳನ್ನು ಪತ್ತೆ ಹಚ್ಚಿ, ಅವರುಗಳನ್ನು ವಶಕ್ಕೆ ಪಡೆದುಕೊಂಡು ದಿನಾಂಕ: 03-07-2021 ರಂದು ಬೆಳಗ್ಗೆ 10-30 ಗಂಟೆಗೆ ಠಾಣೆಗೆ ವಾಪಸ್ ಬಂದಿರುತ್ತೇನೆ. ಸದರಿ ಆರೋಪಿಗಳನ್ನು ಠಾಣೆಯಲ್ಲಿ ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ ಮೊ.ಸಂ.149/2021ಕಲಂ:363-364[ಎ] ಐಪಿಸಿ ಪ್ರಕರಣದಲ್ಲಿ ಅಪಹರಣಗೊಂಡಿದ್ದ ಬಾಲಕ ವಿಜೇಂದ್ರ ರವರ ತಂದೆಯವರಾದ  ಪಾಪಣ್ಣ  ಬಿನ್ ಲೇಟ್ ವೆಂಕಟರಮಣಪ್ಪ, 45 ವರ್ಷ, ಬೋವಿ ಜನಾಂಗ, ದೇವಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಹಾಗೂ  ರಮೇಶ ಬಿನ್ ಲೇಟ್ ಶಂಕರ್, 28 ವರ್ಷ ನಾಯಕ ಜನಾಂಗ, ಮದ್ದಿರೆಡ್ಡಿಪಲ್ಲಿ, ಹಿಂದೂಪುರ ಮಂಡಲಂ, ಅನಂತಪುರ ಜಿಲ್ಲೆ ,ಆಂದ್ರಪ್ರದೇಶ, ನಂಜುಂಡಪ್ಪ ಬಿನ್ ಲೇಟ್ ಜಂಗಮರಂಗಪ್ಪ, 50ವರ್ಷ, ಆದಿಕರ್ನಾಟಕ , ಮುದ್ದಲೋಡು ಗ್ರಾಮ, ಗೌರಿಬಿದನೂರು ತಾಲ್ಲೂಕು ಹಾಲಿ ವಾಸ ಕಾಟನಕಲ್ಲು ಗ್ರಾಮ,  ನಾಗಪ್ಪ ಬಿನ್ ನರಸಿಂಹಪ್ಪ, 32ವರ್ಷ, ಪ.ಜಾತಿ, ಕಡಗತ್ತೂರು ಗ್ರಾಮ, ಕೊಡಿಗೇನಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ ರವರುಗಳೊಂದಿಗೆ ಸೇರಿ  ನಕಲಿ ರೈಸ್ ಪುಲ್ಲಿಂಗ್ ಮಾಡಿ ಅಕ್ರಮವಾಗಿ ಲಾಭಗಳಿಸುವ ಉದ್ದೇಶದಿಂದ ಶ್ರೀ.ಪಾಳ್ಯಂ ದಾಮೋದರಂ ಬಿನ್ ಕುಪ್ಪಯ್ಯ,34 ವರ್ಷ, ದೋಬಿ ಜನಾಂಗ, ಕಾರು ಚಾಲಕ ವೃತ್ತಿ, ವಾಸ: ಲಿಲೀನ್ನಗರ, ಪದ್ಮಾವತಿ ಮೈನ್ ರೋಡ್, ತಿರುಪತಿ, ಚಿತ್ತೂರು ಜಿಲ್ಲೆ, ಆಂದ್ರಪ್ರದೇಶರವರಿಂದ ಗೌರಿಬಿದನೂರು ತಾಲ್ಲೂಕು ದೇವಗಾನಹಳ್ಳಿ ಗ್ರಾಮ ಚಿಕ್ಕವೆಂಕಟರವಣಪ್ಪ ರವರ ಹೊಲದಲ್ಲಿ   ದಿನಾಂಕ; 29-06-2021 ರಂದು ಮದ್ಯಾನ್ಹ ಸುಮಾರು 3-30 ಗಂಟೆಯಲ್ಲಿ 2ಲಕ್ಷ 50 ಸಾವಿರ ರೂಗಳ ನಗದು ಹಣವನ್ನು ಪಡೆದು , ಸದರಿಯವರಿಗೆ ಮೋಸ ಮಾಡಿರುವುದು  ಕಂಡುಬಂದಿರುತ್ತೆ. ಆದ್ದರಿಂದ ಅಕ್ರಮ ಲಾಭಗಳಿಕೆಯ ನಕಲಿ ರೈಸ್ ಪುಲ್ಲಿಂಗ್ ನಲ್ಲಿ ಭಾಗಿಯಾಗಿರುವ ಆರೋಪಿಗಳಾದ 1] ಪಾಪಣ್ಣ  ಬಿನ್ ಲೇಟ್ ವೆಂಕಟರಮಣಪ್ಪ, 45 ವರ್ಷ, ಬೋವಿ ಜನಾಂಗ, ದೇವಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 2]  ನಂಜುಂಡಪ್ಪ ಬಿನ್ ಲೇಟ್ ಜಂಗಮರಂಗಪ್ಪ, 50ವರ್ಷ, ಆದಿಕರ್ನಾಟಕ , ಮುದ್ದಲೋಡು ಗ್ರಾಮ, ಗೌರಿಬಿದನೂರು ತಾಲ್ಲೂಕು ಹಾಲಿ ವಾಸ ಕಾಟನಕಲ್ಲು ಗ್ರಾಮ, ನಗರಗೆರೆ ಹೋಬಳಿ, ಗೌರಿಬಿದನೂರು ತಾಲ್ಲೂಕು  3] ರಮೇಶ ಬಿನ್ ಲೇಟ್ ಶಂಕರ್, 28 ವರ್ಷ ನಾಯಕ ಜನಾಂಗ, ಮದ್ದಿರೆಡ್ಡಿಪಲ್ಲಿ, ಹಿಂದೂಪುರ ಮಂಡಲಂ, ಅನಂತಪುರ ಜಿಲ್ಲೆ ,ಆಂದ್ರಪ್ರದೇಶ, 4] ನಾಗಪ್ಪ ಬಿನ್ ನರಸಿಂಹಪ್ಪ, 32ವರ್ಷ, ಪ.ಜಾತಿ, ಕಡಗತ್ತೂರು ಗ್ರಾಮ, ಕೊಡಿಗೇನಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆರವರುಗಳು ನಕಲಿ ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಶ್ರೀ.ಪಾಳ್ಯಂ ದಾಮೋದರಂ ಬಿನ್ ಕುಪ್ಪಯ್ಯ ರವರಿಂದ ಹಣವನ್ನು ಪಡೆದು , ಅವರಿಗೆ  ಮೋಸ ಮಾಡಿರುವ ಮೇಲ್ಕಂಡ ಆರೋಪಿಗಳ  ವಿರುದ್ದ ಕಲಂ:420 ಐಪಿಸಿ ರೀತ್ಯ ಪ್ರಕರಣ ದಾಖಲಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

 

12. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 69/2021 ಕಲಂ. 32,34 ಕೆ.ಇ ಆಕ್ಟ್:-

     ದಿನಾಂಕ 04-07-2021 ರಂದು ಮಧ್ಯಾಹ್ನ 12.30 ಗಂಟೆಗೆ ಪಿ.ಎಸ್.ಐ ರವರು ಮಾಲು, ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ 04-07-2021 ರಂದು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯ ಶ್ರೀ ಎಂ. ನಾರಾಯಣಪ್ಪ,  ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದ ತಾನು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಪಾಪತಿಮ್ಮನಹಳ್ಳಿ ಗ್ರಾಮದ ರಮೇಶ್ ಬಾಬು ಬಿನ್ ಗಂಗುಲಪ್ಪ ರವರು ತಮ್ಮ ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ದಾಸ್ತಾನು ಮಾಡಿ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು ಪ್ರೋಬೆಷನರಿ ಪಿ.ಎಸ್.ಐ ಶ್ರೀ. ಅರುಣ್ ಗೌಡ ಪಾಟೀಲ್, ಠಾಣೆಯ ಸಿಬ್ಬಂದಿಯವರಾದ ಸಿಹೆಚ್ಸಿ-161 ಕೃಷ್ಣಪ್ಪ, ಸಿಹೆಚ್ಸಿ-148 ಕೃಷ್ಣಪ್ಪ, ಸಿಪಿಸಿ-110 ಸುರೇಶ ರವರೊಂದಿಗೆ ಕೆಎ-40-ಜಿ-539 ನೋಂದಣಿ ಸಂಖ್ಯೆಯ ಸರ್ಕಾರಿ ವಾಹನದಲ್ಲಿ ಚಾಲಕನಾದ ಎಪಿಸಿ-163 ಆಯ್ ರಾಜ್ ರವರೊಂದಿಗೆ ಪಾಪತಿಮ್ಮನಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿದ್ದವರಿಗೆ ವಿಚಾರ ತಿಳಿಸಿ ಅವರನ್ನು ಪಂಚಾಯ್ತಿದಾರರಾಗಿ ಬರಮಾಡಿಕೊಂಡು ಪಂಚಾಯ್ತಿರೊಂದಿಗೆ ಪಾಪತಿಮ್ಮನಹಳ್ಳಿ ಗ್ರಾಮದ ಕದಿರೇನಹಳ್ಳಿ ಕ್ರಾಸ್ ಗೆ ಹೋಗುವ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ ಚಿಲ್ಲರೆ ಅಂಗಡಿಯಲ್ಲಿ ಯಾರೋ ಒಬ್ಬ ಆಸಾಮಿ ಮದ್ಯವನ್ನು ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದು, ಸದರಿ ಅಂಗಡಿಯ ಮೇಲೆ  ಸಮವಸ್ತ್ರದಲ್ಲಿದ್ದ ಪೊಲೀಸರು ದಾಳಿ ಮಾಡಿದಾಗ ಪೋಲೀಸರನ್ನು ಕಂಡು ಸಾರ್ವಜನಿಕರು ಮತ್ತು ಅಂಗಡಿಯಲ್ಲಿದ್ದ ಆಸಾಮಿ ಓಡಿ ಹೋಗಿದ್ದು, ಆತನನ್ನು ಹಿಂಬಾಲಿಸಿದರೂ ಸಿಕ್ಕಿರುವುದಿಲ್ಲಾ. ನಂತರ ಅಂಗಡಿಯೊಳಗೆ ಹೋಗಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ  ಅಂಗಡಿಯಲ್ಲಿ ಒಂದು ಪ್ಲಾಸ್ಟಿಕ್ ಚೀಲದಲಿ ಮದ್ಯ ಇರುವುದು ಕಂಡುಬಂದಿರುತ್ತದೆ. ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟ  ಮಾಡಲು ಯಾವುದೇ ಪರವಾನಗಿ ಇಲ್ಲದೇ ಇರುವುದರಂದ ಅಂಗಡಿಯಲ್ಲಿದ್ದ ಆಸಾಮಿ ಓಡಿಹೋಗಿದ್ದು, ಆತನ ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ ರಮೇಶ್ ಬಾಬು ಬಿನ್ ಗಂಗುಲಪ್ಪ, 35 ವರ್ಷ, ಆದಿ ಕರ್ನಾಟಕ ಜನಾಂಗ, ಅಂಗಡಿ ವ್ಯಾಪಾರ, ವಾಸ ಪಾಪತಿಮ್ಮಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದುಬಂದಿರುತ್ತದೆ. ಪ್ಲಾಸ್ಟಿಕ್ ಚೀಲದಲ್ಲಿ ಪರಿಶೀಲಿಸಿಲಾಗಿ 90 ML HAYWARDS CHEERS WHISKY 106 TETRA POCKET’S ಇರುತ್ತದೆ. ಒಂದು ಟೆಟ್ರಾ ಪ್ಯಾಕೆಟ್ ಬೆಲೆ 35.13/- ರೂ ಆಗಿದ್ದು, ಒಟ್ಟು ಮದ್ಯದ ಬೆಲೆ 3724/- ರೂ ಆಗಿದ್ದು, ಒಟ್ಟು  9 ಲೀಟರ್ 540 ಎಂ.ಎಲ್ ಮದ್ಯ ಆಗಿರುತ್ತದೆ.  ಸದರಿ ಪ್ಲಾಸ್ಟಿಕ್ ಚೀಲದಲ್ಲಿನ  90 ML HAYWARDS CHEERS WHISKY TETRA POCKET’S ಪೈಕಿ ಎರಡನ್ನು ತೆಗೆದು ಅವುಗಳಿಗೆ ಕ್ರ.ಸಂ 1 ಮತ್ತು ಕ್ರಸಂ 2 ಎಂದು ನಮೂದಿಸಿ ಎಫ್.ಎಸ್.ಎಲ್ ಪರೀಕ್ಷೆಯ ಮಾದರಿಗಾಗಿ ಪ್ರತ್ಯೇಕವಾಗಿ ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಹೊಲೆದು “VH” ಎಂದು ಮೊಹರು ಮಾಡಲಾಯಿತು.  ಸದರಿ ಮದ್ಯದ ಪೈಕಿ ಎಫ್.ಎಸ್.ಎಲ್ ಪರೀಕ್ಷೆಗಾಗಿ ತೆಗೆದಿರಿಸಿದ ಕ್ರ.ಸಂ 1 ರಿಂದ 2 ರ TETRA POCKET’S ಹಾಗೂ ಉಳಿದ ಪ್ಲಾಸ್ಟಿಕ್ ಚೀಲದಲ್ಲಿನ 90 ML HAYWARDS CHEERS WHISKY 104 TETRA POCKET’S ಗಳನ್ನು ಪಂಚಾಯ್ತಿದಾರರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಬೆಳಿಗ್ಗೆ 10-30 ರಿಂದ 12-00 ಗಂಟೆವರೆಗೆ ವಿವರವಾದ ಪಂಚನಾಮೆ ಕ್ರಮ ಜರುಗಿಸಿ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಅಕ್ರಮ ಮದ್ಯವನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಆಸಾಮಿಯಾದ ರಮೇಶ್ ಬಾಬು ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ವರದಿ ಸಾರಾಂಶವಾಗಿರುತ್ತೆ.

 

13. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ. 60/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:03-07-2021 ರಂದು ಮಧ್ಯಾಹ್ನ 2-45 ಗಂಟೆಗೆ ಪಿ.ಎಸ್.ಐರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:03-07-2021 ರಂದು ಮಧ್ಯಾಹ್ನ 12-45 ಗಂಟೆಯಲ್ಲಿ ತಾನು ನಾರೇಮದ್ದೇಪಲ್ಲಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ನಾರೇಮದ್ದೇಪಲ್ಲಿ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದಲ್ಲಿರುವ ಹೊಂಗೆ ಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವನ್ನಾಗಿಟ್ಟುಕೊಂಡು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರಾದ ಸಿ.ಹೆಚ್.ಸಿ-520 ಶ್ರೀನಾಥ,  ಹೆಚ್.ಸಿ-183 ರಾಘವೇಂದ್ರ ಪಿ.ಎಸ್, ಸಿಪಿಸಿ-148 ದನಂಜಯ, ಸಿಪಿಸಿ-181 ಪ್ರಸಾದ್ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-59 ವಾಹನದಲ್ಲಿ ಚಾಲಕ AHC-21 ಸತ್ಯಾನಾಯ್ಕ್ ರವರೊಂದಿಗೆ ಮೇಲ್ಕಂಡ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು 100 ರೂ ಅಂದರ್, 100 ರೂ ಬಾಹರ್ ಎಂದು ಕೂಗಿಕೊಂಡು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ತಾವು ದಾಳಿ ಮಾಡಲು ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ಎಲ್ಲಿಯೂ ಕದಲಬೇಡಿ ಎಂದು ಎಚ್ಚರಿಕೆ ನೀಡಿದರೂ ಸಹಾ ಆ ಪೈಕಿ ಒಬ್ಬ ಆಸಾಮಿಯು ಓಡಿ ಹೋಗಿದ್ದು,  ಸ್ಥಳದಲ್ಲಿ ಸಿಕ್ಕಿಬಿದ್ದ ಮೂವರ  ಹೆಸರು ಮತ್ತು ವಿಳಾಸ ಕೇಳಲಾಗಿ 1)ಶ್ರೀನಿವಾಸ@ಶ್ರೀನು ಬಿನ್ ವೆಂಕಟರವಣಪ್ಪ, 27ವರ್ಷ, ಆದಿ ಕರ್ನಾಟಕ, ಗಾರ್ಮೆಂಟ್ಸ್ ನಲ್ಲಿ ಕೆಲಸ, ವಾಸ: ನಾರೆಮದ್ದೇಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 2)  ಸುರೇಶ ಬಿನ್ ಗಂಗುಲಪ್ಪ, 25ವರ್ಷ, ಆದಿ ಕರ್ನಾಟಕ, ಕೂಲಿಕೆಲಸ, ವಾಸ: ಯಗವ ಮದ್ದಲಖಾನ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 3) ಲಕ್ಷ್ಮಿನಾರಾಯಣ ಬಿನ್ ಪೆದ್ದ ವೆಂಕಟರಾಯಪ್ಪ, 38ವರ್ಷ, ಆದಿ ಕರ್ನಾಟಕ,  ವಾಸ:ನಾರೆಮದ್ದೇಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಎಂದು ತಿಳಿಸಿರುತ್ತಾರೆ. ಸದರಿಯವರನ್ನು ಓಡಿ ಹೋದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಗಂಗರಾಜು ಬಿನ್ ವೆಂಕಟರವಣಪ್ಪ, 32ವರ್ಷ, ಜಿರಾಯ್ತಿ, ದೋಬಿ ಜನಾಂಗ, ನಾರೆಮದ್ದೇಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಸಿಕ್ಕಿಬಿದ್ದಿದ್ದ ಮೂವರನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ  1600/- ರೂ ನಗದು ಹಣ, ಒಂದು ಹಳೆಯ ಪ್ಲಾಸ್ಟಿಕ್ ಚೀಲ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಮಧ್ಯಾಹ್ನ 1-15 ರಿಂದ 2-15 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳು, ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

14. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ. 61/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:03-07-2021 ರಂದು ಸಂಜೆ 6-30 ಗಂಟೆಗೆ ಶ್ರೀ ಮದ್ದಿರೆಡ್ಡಿ ಬಿನ್ ಲೇಟ್ ವೆಂಕಟರಾಯಪ್ಪ, 68 ವರ್ಷ, ವಕ್ಕಲಿಗರು, ವ್ಯವಸಾಯ, ಬೂದಿಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿರುತ್ತೇನೆ. ತನ್ನ ಹೆಸರಿನಲ್ಲಿ ಕೆಎ-40-ಟಿಎ-8612 ಟ್ರ್ಯಾಕ್ಟರ್ ಇಂಜಿನ್ ಇದ್ದು, ಸದರಿ ಇಂಜಿನ್ ಅನ್ನು ತನ್ನ ಮಗ ಆದಿನಾರಾಯಣರೆಡ್ಡಿ ಬಿ.ಎಂ. ರವರು ಚಾಲನೆ ಮಾಡುತ್ತಿರುತ್ತಾರೆ. ದಿನಾಂಕ:01-07-2021 ರಂದು ತಮ್ಮ ಬಾಬತ್ತು ಟ್ರ್ಯಾಕ್ಟರ್ ನಲ್ಲಿ ತನ್ನ ಮಗ ಆದಿನಾರಾಯಣರೆಡ್ಡಿ ಬಿ.ಎಂ. ರವರು ಜಮೀನು ಉಳುಮೆ ಮಾಡಿಕೊಂಡು ಟ್ರ್ಯಾಕ್ಟರ್ ಇಂಜಿನ್ ಚಾಲನೆ ಮಾಡಿಕೊಂಡು ಸೋಮನಾಥಪುರ ಕಡೆಯಿಂದ ತಮ್ಮ ಜಮೀನಿನಲ್ಲಿ ತಾವು ವಾಸವಾಗಿರುವ ಮನೆಯ ಬಳಿಗೆ ಬರುತ್ತಿದ್ದು, ಅವರ ಹಿಂಬದಿಯಲ್ಲಿ ತಾನು ಮತ್ತು ತಮ್ಮ ಅಳಿಯ ಗಂಗಿರೆಡ್ಡಿ ಬಿನ್ ಚಿನ್ನಾಯಪ್ಪ ರವರು ದ್ವಿಚಕ್ರವಾಹನದಲ್ಲಿ ಬರುತ್ತಿದ್ದೆವು. ಸಂಜೆ 5-00 ಗಂಟೆಯಲ್ಲಿ ಶ್ರೀ.ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ಬ್ರಿಡ್ಜ್ ಹತ್ತಿರ ತನ್ನ ಮಗ ಆದಿನಾರಾಯಣರೆಡ್ಡಿ ಬಿ.ಎಂ ರವರು ಟ್ರ್ಯಾಕ್ಟರ್ ನ್ನು ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿದ್ದರ ಪರಿಣಾಮ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ರಸ್ತೆಯಿಂದ ಬ್ರಿಡ್ಜ್ ಕೆಳಗೆ ಬೋರಲಾಗಿ ಬಿದ್ದಿದ್ದು, ಹಿಂಬದಿಯಲ್ಲಿ ಇದ್ದ ತಾನು & ತನ್ನ ಅಳಿಯ ಗಂಗಿರೆಡ್ಡಿ ಇಬ್ಬರು ಹೋಗಿ ತನ್ನ ಮಗ ಆದಿನಾರಾಯಣರೆಡ್ಡಿರವರನ್ನು ಉಪಚರಿಸಿ ನೋಡಲಾಗಿ ಎಡಭಾಗದ ದವಡೆ, ಎಡಭಾಗದ ಕಿವಿಯಲ್ಲಿ ರಕ್ತ ಸೋರುತ್ತಿತ್ತು. ಟ್ರಾಕ್ಟರ್ ಜಖಂಗೊಂಡಿತ್ತು, ತಕ್ಷಣ ನಾವುಗಳು ತನ್ನ ಮಗ ಆದಿನಾರಾಯಣರೆಡ್ಡಿ ಬಿ.ಎಂ ರವರನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಿಸಿ ನಂತರ ವೈದ್ಯರ ಸಲಹೆ ಮೇರೆಗೆ ಅಲ್ಲಿಂದ ಬೆಂಗಳೂರಿನ ಚಂದಾಪುರ ಬಳಿ ಇರುವ ಬೆಸ್ಟ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದು, ನಂತರ ಸದರಿ ಟ್ರಾಕ್ಟರ್ ನ್ನು ಜನರ ಸಹಾಯದಿಂದ ಮೇಲಕ್ಕೆ ಎತ್ತಿ ತಮ್ಮ ಮನೆಯ  ಬಳಿ ನಿಲ್ಲಿಸಿರುತ್ತೇವೆ. ಈ ಅಪಘಾತದ ಬಗ್ಗೆ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಮೇಲ್ಕಂಡ ಅಪಘಾತದ ವಿಚಾರದಲ್ಲಿ ನನ್ನ ಮಗ ಆದಿನಾರಾಯಣರೆಡ್ಡಿ ಬಿ.ಎಂ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

15. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ. 62/2021 ಕಲಂ. 143,147,323,324,504,506,149 ಐ.ಪಿ.ಸಿ:-

     ದಿನಾಂಕ:04/07/2021 ರಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶ್ರೀ ಮಂಜುನಾಥ ಬಿನ್ ರಂಗಪ್ಪ, 25ವರ್ಷ,  ಬೋವಿ ಜನಾಂಗ, ಜಿರಾಯ್ತಿ ಮತ್ತು ಚಾಲಕ, ಯರ್ರಪೆಂಟ್ಲ  ಗ್ರಾಮ, ಬಾಗೇಪಲ್ಲಿ ತಾಲೂಕುರವರ ಹೇಳಿಕೆಯನ್ನು  ಠಾಣೆಯ ಹೆಚ್.ಸಿ-250 ಶ್ರೀನಾಥರವರು ಪಡೆದುಕೊಂಡು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ  ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಿ ಪ್ರಕರಣ ದಾಖಲಿಸಿದ್ದರ ಸಾರಾಂಶವೆನೆಂದರೆ, ತಮ್ಮ ಗ್ರಾಮದ ನಾಗರಾಜರವರಿಗೂ ಹಾಗೂ ಅವರ ಮಾವ ನಾರಾಯಣಪ್ಪರವರಿಗೂ ನಾಗರಾಜರವರ ಸಂಸಾರದ ವಿಚಾರದಲ್ಲಿ ಗಲಾಟೆಗಳಿರುತ್ತವೆ. ನಿನ್ನೆ ನಾಗರಾಜ ತನ್ನನ್ನು ಬಾಗೇಪಲ್ಲಿಯಿಂದ ಯರ್ರಪೆಂಟ್ಲ ಗ್ರಾಮಕ್ಕೆ ಡ್ರಾಪ್ ಕೊಡಲು ಕೇಳಿದ್ದು ಅದರಂತೆ ತಾನು ನಾಗರಾಜರವರನ್ನು ದ್ವಿಚಕ್ರವಾಹನದಲ್ಲಿ ಕರೆದುಕೊಂಡು ಹೋಗಿ ಬಿಟ್ಟಿರುತ್ತೇನೆ. ಅದನ್ನು ನಾರಾಯಣಪ್ಪರವರು ನೋಡಿರುತ್ತಾನೆ. ಈ ದಿನ ದಿನಾಂಕ:04/07/2021 ರಂದು ಬೆಳಿಗ್ಗೆ 09-00 ಗಂಟೆಯ ಸಮಯದಲ್ಲಿ ತಾನು ತಮ್ಮ ಗ್ರಾಮದ ಅಶ್ವಥಕಟ್ಟೆಯ ಬಳಿಯಿದ್ದಾಗ ಮೇಲ್ಕಂಡ ನಾರಾಯಣಪ್ಪ, ಅವರ ಕಡೆಯವರಾದ ಲಕ್ಷ್ಮಿ , ಸುನಿತಾ, ಚೌಡಮ್ಮ ಹಾಗೂ ವೆಂಕಟರಮಣಮ್ಮರವರು ನನ್ನನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ತಾನು ಕೇಳಿದ್ದಕ್ಕೆ ಕೈಗಳಿಂದ ತನ್ನ ಕೆನ್ನೆಗೆ ಹೊಡೆದರು. ಸುನಿತಾರವರು ಕಟ್ಟಿಗೆಯಿಂದ ತನ್ನ ತಲೆಯ ಹಿಂಭಾಗ ಹೊಡೆದರು. ನಾರಾಯಣಪ್ಪ, ಲಕ್ಷ್ಮೀ, ಚೌಡಮ್ಮ, ವೆಂಕಟರವಣಮ್ಮ, ಹರೀಶ ಮತ್ತು ಪುರುಷೋತ್ತಮರವರು ತನ್ನ ಮೇಲೆ ಗಲಾಟೆ ಮಾಡಿ ಕೈಗಳಿಂದ ಹೊಡೆದು ನಿನ್ನನ್ನು ಮುಗಿಸಿ ಬಿಡುತ್ತೇವೆ ನಮ್ಮ ಅಳಿಯನನ್ನು ನೀನೇ ಹಾಳು ಮಾಡುತ್ತಿದ್ದಿಯಾ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಸದರಿಯವರ ವಿರುದ್ದ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

16. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ. 63/2021 ಕಲಂ. 143,147,148,323,324,504,506,149 ಐ.ಪಿ.ಸಿ:-

     ದಿನಾಂಕ: 04-07-2021 ರಂದು ಹೆಚ್ ಸಿ-250 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಚೌಡಮ್ಮ ರವರ ಹೇಳಿಕೆಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ ಹೇಳಿಕೆಯ ದೂರನ್ನು ಪಡೆದು ದಾಕಲಿಸಿದ ದೂರಿನ ಸಾರಾಂಶವೇನೆಂದರೆ, ತಮ್ಮ ಮಗಳು ಲಕ್ಷ್ಮಿ ರವರನ್ನು ತಮ್ಮ ಗ್ರಾಮದ ನಾಗರಾಜ ಎಂಬುವವರಿಗೆ ಕೊಟ್ಟು ಮದುವೆ ಮಾಡಿದ್ದು ಅಳಿಯ ತಮ್ಮ ಮಗಳನ್ನು ಸರಿಯಾಗಿ ನೊಡಿಕೊಳ್ಳದ ಕಾರಣ ತಮ್ಮ ಮಗಳು ಲಕ್ಷ್ಮಿ ರವರನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿರುವ ವಿಚಾರದಲ್ಲಿ ತಮ್ಮ ಅಳಿಯ ನಾಗರಾಜ  ಮೇಲೆ ದ್ವೇಷ ಸಾಧಿಸುತ್ತಿರುವುದಾಗಿ,  ಹೀಗಿರುವಾಗ ಈ  ದಿನ  ದಿನಾಂಕ:04-07-2021 ರಂದು ಬೆಳಿಗ್ಗೆ 09-00, ಗಂಟೆಯಲ್ಲಿ ತಾನು, ತನ್ನ ಗಂಡ, ತನ್ನ ಮಗಳು ಮೂರು ಜನರು ನಮ್ಮ ಮನೆಯಿಂದ ತಮ್ಮ ತಾಯಿರವರ ಮನೆಗೆ ಹೋಗುತ್ತಿದ್ದಾಗ ತಮ್ಮ ಗ್ರಾಮದ ಅಶ್ವತ್ತ ಕಟ್ಟಿ ಬಳಿ ತಮ್ಮ ಗ್ರಾಮದ 1)ಮಂಜುನಾಥ ಬಿನ್ ರಂಗಪ್ಪ 02)ಅಭಿಲಾಷ 03)ಆಕಾಶ 04) ಮುರಳಿ 5)ಅನಿಲ್ ಕುಮಾರ್ 6)ರಮೇಶ 7)ಪವನ್ 8) ಸುನಿಲ್ 9)ರಾಜು 10) ಸಂತೋಷ 11) ಮಂಜುನಾಥ12) ವೆಂಕಟೇಶ 13) ನಾಗರಾಜ 14)ನಾರಾಯಣಪ್ಪ 15)ರಂಗಯ್ಯ 16)ಚಂದ್ರಪ್ಪ 17)ಅಂಜಿ 18) ಕೃಷ್ಣಪ್ಪ 19) ರತ್ನಮ್ಮ 20)ಸಾಕಮ್ಮ21) ವೆಂಕಟರವಣಮ್ಮ22)ನಂದಿನಿ 23) ಪವಿತ್ರಾ24) ಅನುಷಾ 25)ಗಂಗುಲಮ್ಮ 26)ಶೋಭಾ 27)ಲಕ್ಷ್ಮಿ ನರಸಮ್ಮ 28)ನಂಜಮ್ಮ ರವರುಗಳು ಅಕ್ರಮವಾಗಿ ಗುಂಪುಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆಗಳು, ಕಲ್ಲುಗಳನ್ನು ಹಿಡಿದುಕೊಂಡು ತನ್ನನ್ನು ತನ್ನ ಗಂಡ ಹಾಗೂ ತಮ್ಮ ಮಗಳು ಸುನಿತಾರವರನ್ನು ಹೊಡಯುತ್ತಿದ್ದಾಗ ಅಡ್ಡ ಬಂದ ಪುರುಷೋತ್ತಮ, ಹರೀಶ ,ಲಕ್ಷ್ಮಿ ಮತ್ತು ವೆಂಕಟರವಣಮ್ಮ ರವರನ್ನು ಸಹ ಹೊಡೆದು ಲೋಪರ್ ನನ್ನ ಮಕ್ಕಳು, ಸೂಳೆ ಮುಂಡೆಗಳು ಎಂದು ಕೆಟ್ಟ ಮಾತುಗಳಿಂದ ಬೈದು ನಿಮ್ಮನ್ನು ಮುಗಿಸಿಬಿಡುತ್ತೇವೆ. ಎಂದು ಬೆದರಿಕೆ ಹಾಕಿ ಕೈಗಳಿಂದ ಮೈಮೇಲೆ ಹೊಡೆದಿರುವುದಾಗಿ ಮೇಲ್ಕಂಡರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ಪಿರ್ಯಾದು.

 

17. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ. 76/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ.03-07-2021 ರಂದು ರಾತ್ರಿ 9-50 ಗಂಟೆಗೆ ಪಿ.ಎಸ್.ಐ ರವರು ಆರೋಪಿಗಳು ಮತ್ತು ಮಾಲುಗಳನ್ನು ಠಾಣೆಯಲ್ಲಿ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಕೆ.ಸತೀಶ್ ಆದ ನಾನು ದಿನಾಂಕ:-03-07-2021 ರಂದು ರಾತ್ರಿ 8-10 ಗಂಟೆಯಲ್ಲಿ ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ಗಾಂದೀನಗರದ ಕೆಂಪೇಗೌಡ ಬಡಾವಣೆ ಮುರಳಿ ರೇಷ್ಮೇ ಹುಳು ಸಾಕಾಣಿಕೆ ಶೆಡ್ ಮುಂಭಾಗದಲ್ಲಿ   ವಿದ್ಯುತ್ ಲೈಟ್ ಬೆಳಕಿನಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ 97, ಸುಬ್ರಮಣಿ, ಪಿಸಿ-555 ಅಶ್ವಥರೆಡ್ಡಿ, ಪಿಸಿ.327 ಮುರಳಿಕೃಷ್ಣೇಗೌಡ, ಜೀಪ್ ಚಾಲಕ ಮಂಜುನಾಥ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ರಾತ್ರಿ 8-30 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಸಿಬ್ಬಂದಿಯವರು ಹಿಂಬಾಲಿಸಿ ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ನವೀನ್ ಕುಮಾರ್ ಬಿನ್ ಚಿಕ್ಕನರಸಿಂಹಪ್ಪ, 30 ವರ್ಷ, ಬಲಜಿಗರು, ರೇಷ್ಮೆಕೆಲಸ, ವಾಸ-ಗಾಂದೀನಗರ, ಶಿಡ್ಲಘಟ್ಟ ಟೌನ್, 2] ಚೇತನ್ ಬಿನ್ ನಾಗರಾಜ್, 19ವರ್ಷ, ಬಲಜಿಗರು, ರೇಷ್ಮೇ ಕೆಲಸ, ವಾಸ- ಗಾಂದೀನಗರ, ಶಿಡ್ಲಘಟ್ಟ ಟೌನ್ 3] ನಾಗೇಶ್ ಬಿನ್ ಗೋಪಾಲಪ್ಪ, 28 ವರ್ಷ, ಗೊಲ್ಲರು, ರೇಷ್ಮೇ ಕೆಲಸ, ಗಾಂದೀನಗರ, ಶಿಡ್ಲಘಟ್ಟ ಟೌನ್ 4] ಮಂಜುನಾಥ ಬಿನ್ ಮುನಿರಾಜು, 32ವರ್ಷ, ಮಡಿವಾಳರು, ಗಾಂದೀನಗರ, ಶಿಡ್ಲಘಟ್ಟ ಟೌನ್ 5] ರಾಜು ಬಿನ್ ವೆಂಕಟರವಣಪ್ಪ, 31ವರ್ಷ, ರೇಷ್ಮೇ ಕೆಲಸ, ಗಾಂದೀನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 3,600/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ರಾತ್ರಿ 8-40 ಗಂಟೆಯಿಂದ 9-15 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 05 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ.76/2021 ಕಲಂ.87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 05-07-2021 07:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080