ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.151/2021 ಕಲಂ. 279,337,304(A) ಐ.ಪಿ.ಸಿ :-

          ದಿನಾಂಕ:03/06/2021 ರಂದು ರಾತ್ರಿ 8-45 ಗಂಟೆಗೆ ಪಿರ್ಯಾದಿದಾರರಾದ  ಬಾಬಾಜಾನ್ ಬಿನ್ ಹುಸೇನ್ ಸಾಬ್, 39 ವರ್ಷ, ಮುಸ್ಲೀಮರು, ಡ್ರೈವರ್ ಕೆಲಸ, ಆಜಾದ್ ನಗರ, ಶಿಡ್ಲಘಟ್ಟ ಟೌನ್, ಚಿಕ್ಕಬಳ್ಳಾಪುರ ಜಿಲ್ಲೆ ಮೊ: 9739335011 ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ. ಈಗ್ಗೆ ಸುಮಾರು 10 ವರ್ಷಗಳ ಹಿಂದೆ ನಾನು ಚಾಮರಾಜಪೇಟೆಗೆ ಡ್ರೈವರ್ ಕೆಲಸದಲ್ಲಿ ಹೋಗಿದ್ದಾಗ ಆಂದ್ರ ಮೂಲದ ನರೇಂದ್ರ ಪರಿಚಯವಾಗಿದ್ದು, ತಾನು ಭೋವಿ ಜನಾಂಗಕ್ಕೆ ಸೇರಿದ್ದು,  ನನ್ನ ತಂದೆ ತಾಯಿ ತೀರಿಹೋಗಿದ್ದು, ನೆಂಟರು ಯಾರೂ ಇರುವುದಿಲ್ಲ.  ನಾನು ಕ್ಲೀನರ್ ಕೆಲಸ ಮಾಡುವುದಾಗಿ ಹೇಳಿದ್ದು, ನಾನು ಡ್ರೈವರ್ ಕೆಲಸಕ್ಕೆ ಹೋಗುವ ವಾಹನಗಳಿಗೆ ನನ್ನೊಂದಿಗೆ ಕ್ಲೀನರ್ ಕೆಲಸ ಮಾಡಿಕೊಂಡು ನಮ್ಮ ಮನೆಯಲ್ಲಿಯೇ ವಾಸವಾಗಿದ್ದನು.  ನಂತರ ಡ್ರೈವರ್ ಕೆಲಸವನ್ನು ಕಲಿತುಕೊಂಡಿದ್ದು ಡ್ರೈವರ್ ಆಗಿ ಕೆಲಸವನ್ನು ಮಾಡಿಕೊಂಡಿದ್ದನು. ನಾನು ಮತ್ತು ನರೇಂದ್ರ ಜಂಗಮಕೋಟೆ ವಾಸಿ ರಘು ರವರ ಬಳಿ ಈಚರ್ ವಾಹನಕ್ಕೆ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದೆವು. ದಿನಾಂಕ:02/06/2021 ರಂದು ನಾನು ವಾಹನವನ್ನು ಚಲಾಯಿಸಿ ವಿಶ್ರಾಂತಿಯಲ್ಲಿದ್ದು, ರಘು ರವರು ಕೆ.ಎ-53 ಎ.ಎ-1720 ಈಚರ್ ವಾಹಕ್ಕೆ ಚಾಲಕನಾಗಿ ನರೇಂದ್ರನನ್ನು ಪೆನುಗೊಂಡಗೆ ಕಳುಹಿಸಿಕೊಟ್ಟಿದ್ದನು. ದಿನಾಂಕ:02/06/2021 ರಂದು ಬೆಳಿಗ್ಗೆ 10:45 ಗಂಟೆಗೆ ನನ್ನ ಪರಿಚಯಸ್ಥರಾದ ನವಾಜ್ ರವರು ಹೈದ್ರಾಬಾದ್ ನಿಂದ ಬೆಂಗಳೂರಿಗೆ ಹೋಗುವಾಗ  ಬಾಗೇಪಲ್ಲಿಯ ಮದರಸಾ ಬಳಿ ಎನ್.ಹೆಚ್ 44 ರಸ್ತೆಯಲ್ಲಿ ಈಚರ್ ವಾಹನ ಅಪಘಾತವಾಗಿರುವುದಾಗಿ ತಿಳಿಸಿದನು. ತಕ್ಷಣ ನಾನು ಬಾಗೇಪಲ್ಲಿಯ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಾಗಿತ್ತು. ನರೇಂದ್ರ ನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದನು. ನರೇಂದ್ರನ ಬಲಕಾಲಿಗೆ ರಕ್ತಗಾಯವಾಗಿತ್ತು.  ನರೇಂದ್ರನ ಜೊತೆಯಲ್ಲಿದ್ದ ಮಂಜುನಾಥ ಬಿನ್ ಈರಪ್ಪ, 30 ವರ್ಷ, ಆದಿದ್ರಾವಿಡರು, ಕೂಲಿ ಕೆಲಸ, ಹೊಸಪೇಟೆ, ಶಿಡ್ಲಘಟ್ಟ ತಾಲ್ಲೂಕು ರವರನ್ನು ವಿಚಾರ ಮಾಡಲಾಗಿ ಪೆನುಗೊಂಡಾ ದಿಂದ ಹೊಸಪೇಟೆಗೆ ಬರುವಾಗ ದಿನಾಂಕ:02/06/2021 ರಂದು ಬೆಳಿಗ್ಗೆ 9:30 ಗಂಟೆಯಲ್ಲಿ ಬಾಗೇಪಲ್ಲಿಯ ಸಮೀಪ ಮದರಸಾ  ಬಳಿ ಎನ್.ಹೆಚ್ 44 ರಸ್ತೆಯಲ್ಲಿ ಹೋಗುತ್ತಿದ್ದಾಗ, ವಾಹನ ಚಾಲನೆ ಮಾಡುತ್ತಿದ್ದ  ನರೇಂದ್ರನು ಮುಂಬದಿಯಲ್ಲಿ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ವಾಹನವನ್ನು ಬಲಗಡೆಗೆ ತಿರುಗಿಸಿ  ರಸ್ತೆಯ ಮಧ್ಯದ ಡಿವೈಡರ್ ಡಿಕ್ಕಿ ಹೊಡೆಸಿದ ಪರಿಣಾಮವಾಗಿ ನರೇಂದ್ರನ ಬಲಕಾಲಿಗೆ ಗಾಯವಾಗಿದ್ದು, ಈಚರ್ ವಾಹನದಲ್ಲಿದ್ದ ತನಗೆ ಹಾಗೂ ತನ್ನ  ತಮ್ಮ ಚೇತನ್, ಸಂಜಯ್, ಗೌರೀಶ್, ನವೀನ್ ಇತರರಿಗೂ ಗಾಯಗಳಾದವು ಎಂದು ತಿಳಿಸಿದನು. ಗಾಯಗೊಂಡಿದ್ದ ನರೇಂದ್ರನನ್ನು ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸುವಾಗ ಮಾರ್ಗಮದ್ಯದಲ್ಲಿ ಸಂಜೆ ಸುಮಾರು 6:30 ಯಲ್ಲಿ ನರೇಂದ್ರನು ಮೃತಪಟ್ಟನು. ಲಾಷನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿರುತ್ತೇವೆ. ಮಾಲೀಕರಾದ ರಘು ಬಿನ್ ತಿಮ್ಮಪ್ಪ, 32 ವರ್ಷ, ನಾಯಕರು, ಜಿರಾಯ್ತಿ ಮತ್ತು ವ್ಯಾಪಾರ, ಎದ್ದಲತಿಪ್ಪೇನಹಳ್ಳಿ ಗ್ರಾಮ, ಜಂಗಮಕೋಟೆ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು ರವರಿಗೆ ವಿಚಾರವನ್ನು ತಿಳಿಸಿ ಅವರನ್ನು ಬಾಗೇಪಲ್ಲಿಗೆ ಕರೆಯಿಸಿಕೊಂಡು ಈಗ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ತಾವಂದಿರು ಮುಂದಿನ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.257/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

          ದಿನಾಂಕ: 03/06/2021 ರಂದು ಮದ್ಯಾಹ್ನ 2.30 ಗಂಟೆಗೆ ಠಾಣೆಯ ಶ್ರೀ ಸಂದೀಪ್ ಕುಮಾರ್, ಸಿ.ಹೆಚ್.ಸಿ-249 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 03/06/2021 ರಂದು ಮದ್ಯಾಹ್ನ 13.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-239 ಮಣಿಕಂಠ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ನಾಯಿಂದ್ರಹಳ್ಳಿ ಗ್ರಾಮದ ಮುರಳಿ ಬಿನ್ ನಾರಾಯಣಸ್ವಾಮಿ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಮದ್ಯಾಹ್ನ 1.15 ಗಂಟೆಗೆ ನಾಯಿಂದ್ರಹಳ್ಳಿ ಗ್ರಾಮದ ಮುರಳಿ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮುರಳಿ ಬಿನ್ ನಾರಾಯಣಸ್ವಾಮಿ, 33 ವರ್ಷ, ಗೊಲ್ಲರ ಜನಾಂಗ, ಚಿಲ್ಲರೆ ಅಂಗಡಿ ಮಾಲೀಕರು, ವಾಸ: ನಾಯಿಂದ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.258/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

          ದಿನಾಂಕ: 03/06/2021 ರಂದು ಮದ್ಯಾಹ್ನ 3.30 ಗಂಟೆಗೆ ಠಾಣೆಯ ಶ್ರೀ ನರಸಿಂಹಮೂರ್ತಿ, ಸಿ.ಹೆಚ್.ಸಿ-124 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 03/06/2021 ರಂದು ಮದ್ಯಾಹ್ನ 2.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-504 ಸತೀಶ ಕೆ.ಎ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಹಾದಿಗೆರೆ ಗ್ರಾಮದ ಮುನಿಯಪ್ಪ ಬಿನ್ ಈರಪ್ಪ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಮದ್ಯಾಹ್ನ 2.15 ಗಂಟೆಗೆ ಹಾದಿಗೆರೆ ಗ್ರಾಮದ ಮುನಿಯಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮುನಿಯಪ್ಪ ಬಿನ್ ಈರಪ್ಪ, 50 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ಮಾಲೀಕರು, ವಾಸ: ಹಾದಿಗೆರೆ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.259/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

          ದಿನಾಂಕ: 03/06/2021 ರಂದು ಮದ್ಯಾಹ್ನ 3.45 ಗಂಟೆಗೆ ಠಾಣೆಯ ಶ್ರೀ ಸುರೇಶ, ಸಿ.ಹೆಚ್.ಸಿ-57 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 03/06/2021 ರಂದು ಮದ್ಯಾಹ್ನ 2.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-516 ವಿಶ್ವನಾಥ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಹಾದಿಗೆರೆ ಗ್ರಾಮದ ಮುನೀರ್ ಪಾಷ ಬಿನ್ ಲೇಟ್ ಮೈದುನ್ ಸಾಬ್ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಮದ್ಯಾಹ್ನ 14-30 ಗಂಟೆಗೆ ಹಾದಿಗೆರೆ ಗ್ರಾಮದ ಮುನೀರ್ ಪಾಷ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮುನೀರ್ ಪಾಷ ಬಿನ್ ಲೇಟ್ ಮೈದುನ್ ಸಾಬ್, 56 ವರ್ಷ, ಮುಸ್ಲಿಂ ಜನಾಂಗ, ಚಿಲ್ಲರೆ ಅಂಗಡಿ ಮಾಲೀಕರು, ವಾಸ: ಹಾದಿಗೆರೆ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.260/2021 ಕಲಂ. 143,147,341,323,504,506,149 ಐ.ಪಿ.ಸಿ:-

          ದಿನಾಂಕ: 03/06/2021 ರಂದು ರಾತ್ರಿ 8.15 ಗಂಟಗೆ ಪಾಪಣ್ಣ ಬಿನ್ ಲೇಟ್ ವೆಂಕಟರಾಯಪ್ಪ, 50 ವರ್ಷ, ಗೊಲ್ಲರು, ಜಿರಾಯ್ತಿ, ನಾಯಿಂದ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ಸರ್ವೇ ನಂ.12, 13, 14 ರ ಜಮೀನಿನಲ್ಲಿ ಕಾಟಮರಾಯನ ದೇವಸ್ಥಾನ ನಿರ್ಮಾಣ ಮಾಡಿಕೊಂಡು ಪುರಾತನ ಕಾಲದಿಂದಲೂ ಸಂಕ್ರಾಂತಿಯ ಹಬ್ಬದಂದು ಪೂಜಾ ಕಾರ್ಯಕ್ರಮಗಳನ್ನು ಗ್ರಾಮಸ್ಥರೆಲ್ಲರೂ ಸೇರಿ ನೆರವೇರಿಸಿಕೊಂಡು ಬಂದಿದ್ದೆವು. ದಿನಾಂಕ: 31/05/2021 ರಂದು ರಾತ್ರಿ 9.00 ಗಂಟೆಯ ಸಮಯದಲ್ಲಿ ತಾನು ಮನೆಯ ಬಳಿ ಇದ್ದಾಗ, ಮೇಲ್ಕಂಡ ಜಾಗದಲ್ಲಿ ತಮ್ಮ ಊರಿನ ವಾಸಿಗಳಾದ ಮೈಸೂರು ಗೋವಿಂದಪ್ಪನವರ ಕುಟುಂಬಸ್ಥರಾದ ನಾಗರಾಜ ಬಿನ್ ಮುನಿಯಪ್ಪ ಮತ್ತಿತರರು ಸೇರಿಕೊಂಡು ಶೆಡ್ ನಿರ್ಮಾಣ ಮಾಡುತ್ತಿರುವ ವಿಚಾರ ತಿಳಿದು ತಾನು ಮತ್ತು ತನ್ನ ತಮ್ಮನಾದ ನಾಗೇಶ ಬಿನ್ ಮುನಿವೆಂಕಟಪ್ಪ ರವರು ರಾತ್ರಿ 9.15 ಗಂಟೆಗೆ ಕಾಟಮರಾಯನ ದೇವಸ್ಥಾನದ ಸಮೀಪ ಇರುವ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ತಮ್ಮ ಗ್ರಾಮದ ವಾಸಿಗಳಾದ ನಾಗರಾಜ ಬಿನ್ ಮುನಿಯಪ್ಪ, ಚಂದ್ರಪ್ಪ ಬಿನ್ ಮುನಿಶಾಮಪ್ಪ, ಬಚ್ಚಿರೆಡ್ಡಿ ಬಿನ್ ಮುನಿಶಾಮಪ್ಪ, ಗೋಪಾಲರೆಡ್ಡಿ ಬಿನ್ ಸೊಣ್ಣಪ್ಪ, ಈಶ್ವರ ಬಿನ್ ಚೊಕ್ಕಪ್ಪ ಮತ್ತು ಮಂಜುನಾಥ ಬಿನ್ ದೊಡ್ಡಪ್ಪಯ್ಯ ರವರು ಅಕ್ರಮಗುಂಪು ಕಟ್ಟಿಕೊಂಡು ಬಂದು ತಮ್ಮನ್ನು ತಡೆದು ನಿಲ್ಲಿಸಿದ್ದು, ತಾವು ಅವರನ್ನು ಕುರಿತು ಏಕೆ ಇಲ್ಲಿ ಶೆಡ್ ನಿರ್ಮಾಣ ಮಾಡುತ್ತಿರುವುದು ಎಂದು ಕೇಳಿದ್ದಕ್ಕೆ ಅವರು ತಮ್ಮನ್ನು ಕುರಿತು “ಬೋಳಿ ನನ್ನ ಮಕ್ಕಳೇ ನಾವು ಇಲ್ಲಿ ಶೆಡ್ ನಿರ್ಮಾಣ ಮಾಡಿ ತೀರುತ್ತೇವೆ” ಎಂದು ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ತನ್ನ ಮತ್ತು ತನ್ನ ತಮ್ಮನ ಮೈ-ಕೈ ಮೇಲೆ ಹೊಡೆದು ನೋವುಂಟು ಮಾಡಿ ಇನ್ನೊಂದು ಸಲ ಈ ಜಾಗದ ತಂಟೆಗೆ ಬಂದರೆ ನಿಮ್ಮನ್ನು ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆಗ ತಮ್ಮ ಗ್ರಾಮದ ವಾಸಿಗಳಾದ ಅಶೋಕ ಬಿನ್ ಕೃಷ್ಣೇಗೌಡ ಮತ್ತು ಮುನಿರಾಜು ಬಿನ್ ರಾಮಪ್ಪ ರವರು ಬಂದು ಜಗಳ  ಬಿಡಿಸಿರುತ್ತಾರೆ. ಈ ವಿಚಾರದಲ್ಲಿ ಗ್ರಾಮದ ಹಿರಿಯರು ನ್ಯಾಯಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು, ಇದುವರೆಗೆ ಅವರು ನ್ಯಾಯಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.261/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 04/06/2021 ರಂದು ಬೆಳಿಗ್ಗೆ 10.30 ಗಂಟೆಗೆ ಠಾಣೆಗೆ ಶ್ರೀ. ನಾಗರಾಜ.ಎಂ, ಸಿ.ಹೆಚ್.ಸಿ-152 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 04/06/2021 ರಂದು ಬೆಳಗ್ಗೆ 09.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-24 ನರೇಶ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೈವಾರ ಕ್ರಾಸ್ ಬಳಿ ಯಾರೋ ಆಸಾಮಿ ಸಾರ್ವಜನಿಕರನ್ನು ಸೇರಿಸಿಕೊಂಡು ಹಂದಿಗಳನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಆದರಂತೆ ತಾವು ಬೆಳಗ್ಗೆ 09.15 ಗಂಟೆಗೆ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿ ಟಿ.ಎಸ್-06 ಯು.ಡಿ-4277 ಬೊಲೆರೋ ವಾಹನದಲ್ಲಿ ಹಂದಿಗಳನ್ನು ಹಾಕಿಕೊಂಡು ಸುಮಾರು 10-12 ಜನರನ್ನು ಸೇರಿಸಿಕೊಂಡು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು, ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ವಾಹನದ ಮಾಲೀಕ/ಚಾಲಕನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಚನ್ನಪ್ಪ ಬಿನ್ ವೆಂಕಟಯ್ಯ, 45 ವರ್ಷ, ಯರಕಲ ಜನಾಂಗ, ಚಾಲಕ ವೃತ್ತಿ, ವಾಸ: ರೆಡ್ಡಿಪಲ್ಲಿ ಗ್ರಾಮ, ಮಾಮನೂರು ಜಿಲ್ಲೆ, ಆಂದ್ರಪ್ರದೇಶ ರಾಜ್ಯ. ಮೊ.ಸಂಖ್ಯೆ: 09177829716 ಎಂತ ತಿಳಿಸಿರುತ್ತಾರೆ. ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮೇಲ್ಕಂಡ ಚನ್ನಪ್ಪ ಬಿನ್ ವೆಂಕಟಯ್ಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.262/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 04/06/2021 ರಂದು ಬೆಳಿಗ್ಗೆ 11.00 ಗಂಟೆಗೆ ಠಾಣೆಗೆ ಶ್ರೀ. ಸಂದೀಪ್ ಕುಮಾರ್, ಸಿ.ಹೆಚ್.ಸಿ-249 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 04/06/2021 ರಂದು ಬೆಳಗ್ಗೆ 09.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-440 ಆನಂದ್ ಕುಮಾರ್ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೈವಾರ ಕ್ರಾಸ್ ಬಳಿ ಯಾರೋ ಆಸಾಮಿ ಸಾರ್ವಜನಿಕರನ್ನು ಸೇರಿಸಿಕೊಂಡು ಹಂದಿಗಳನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಆದರಂತೆ ನಾವು ಬೆಳಗ್ಗೆ 09.15 ಗಂಟೆಗೆ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿ ಕೆಎ-07 ಎ-5635 ಟಾಟಾ ಏಸ್ ವಾಹನದಲ್ಲಿ ಹಂದಿಗಳನ್ನು ಹಾಕಿಕೊಂಡು ಸುಮಾರು 10-12 ಜನರನ್ನು ಸೇರಿಸಿಕೊಂಡು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು, ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ವಾಹನದ ಮಾಲೀಕ/ಚಾಲಕನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಕಾರ್ತಿಕ್ ಬಿನ್ ನಾರಾಯಣಸ್ವಾಮಿ, 25 ವರ್ಷ, ಗೊಲ್ಲ ಜನಾಂಗ, ಚಾಲಕವೃತ್ತಿ, ವಾಸ: ಬೀರ್ಜೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. ಮೊ.ಸಂಖ್ಯೆ: 8497023457 ಎಂತ ತಿಳಿಸಿರುತ್ತಾರೆ. ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮೇಲ್ಕಂಡ ಕಾರ್ತಿಕ್ ಬಿನ್ ನಾರಾಯಣಸ್ವಾಮಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.263/2021 ಕಲಂ. ಮನುಷ್ಯ ಕಾಣೆ:-

          ದಿನಾಂಕ: 04/06/2021 ರಂದು ಮದ್ಯಾಹ್ನ 12.00 ಗಂಟೆಗೆ ಶ್ರೀಮತಿ ಲಕ್ಷ್ಮೀದೇವಮ್ಮ ಬಿನ್ ಪ್ರವೀಣ್, 28 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಈಗ್ಗೆ 05 ವರ್ಷದ ಹಿಂದೆ ಪ್ರವೀಣ್ ಬಿನ್ ಚೌಡಪ್ಪ ರವರ ಜೊತೆ ಮದುವೆಯಾಗಿದ್ದು ತಮಗೆ ಇನ್ನೂ ಮಕ್ಕಳಾಗಿರುವುದಿಲ್ಲ. ಆದರೂ ಸಹ ಆನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿರುತ್ತೇವೆ. ತನ್ನ ಗಂಡನಿಗೆ 29 ವರ್ಷ ವಯಸ್ಸಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಹೀಗಿರುವಾಗ ತನ್ನ ಗಂಡ ದಿನಾಂಕ: 27/05/2021 ರಂದು ಬೆಳಗ್ಗೆ 10.00 ಗಂಟೆ ಸಮಯದಲ್ಲಿ ಊಟ ಮಾಡಿಕೊಂಡು ತಾನು ಕೂಲಿ ಕೆಲಸಕ್ಕೆ ಹೋಗುತ್ತಿದ್ದೇನೆ ಎಂದು ಮನೆಯಿಂದ ಹೋಗಿದ್ದು ಪುನಃ ಇದುವರೆಗೂ ವಾಪಸ್ಸು ಬಂದಿರುವುದಿಲ್ಲ. ನಂತರ ತಾವು ತಮ್ಮ ಗ್ರಾಮದಲ್ಲಿ ಹಾಗೂ ತಮ್ಮ ನೆಂಟರ ಮತ್ತು ಸ್ನೇಹಿತರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಆತನ ಮೊಬೈಲ್ ನಂಬರ್ 9663431551 ಆಗಿದ್ದು ಸ್ವಿಚ್ಚ್ ಆಫ್ ಆಗಿರುತ್ತೆ. ತಾನು ಇದುವರೆಗೂ ತನ್ನ ಗಂಡನನ್ನು ಹುಡುಕಾಡಿಕೊಂಡಿದ್ದು, ಪತ್ತೆಯಾದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಕಾಣೆಯಾಗಿರುವ ತನ್ನ ಗಂಡ ಪ್ರವೀಣ್ ರವರನ್ನು ಪತ್ತೆ ಮಾಡಲು ಕೋರಿರುವುದಾಗಿರುತ್ತೆ.

 

9. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.97/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 03/06/2021 ರಂದು ಬೆಳಿಗ್ಗೆ 11:30 ಗಂಟೆಗೆ ಪಿ ಎಸ್ ಐ (1) ಸಾಹೇಬರು  ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:03/06/2021 ರಂದು ಬೆಳಿಗ್ಗೆ ತಾನು ಮತ್ತು ಠಾಣಾ ಸಿಬ್ಬಂದಿ ಸಿ.ಪಿ.ಸಿ-236 ಸಂಜಯ್ ಕುಮಾರ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-138 ರಲ್ಲಿ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಎಂ.ಜಿ.ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ಎಂ.ಜಿ. ರಸ್ತೆಯ ಚೇಳೂರು ವೃತ್ತದ ಬಳಿಯಿರುವ ಚೌಡೇಶ್ವರಿ ಪ್ರಾವಿಜನ್ ಸ್ಟೋರ್ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದು, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ನಂತರ ಪಂಚರ ಸಮಕ್ಷಮ ಸದರಿ  ಸದರಿ ಅಂಗಡಿಯ ಮಾಲೀಕನ  ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಶ್ರೀನಿವಾಸ ಬಿನ್ ರಾಮರೆಡ್ಡಿ, 55ವರ್ಷ, ವಕ್ಕಲಿಗರು, ಚೌಡೇಶ್ವರಿ ಪ್ರಾವಿಜನ್ ಸ್ಟೋರ್ ಮಾಲೀಕರು, ವಾಸ ಪುಲಗುಂಡ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ಈ ಬಗ್ಗೆ ಪಂಚನಾಮೆಯನ್ನು ಜರುಗಿಸಿರುತ್ತೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ ಅಂಗಡಿಯ ಬಳಿ ಸಾಮಾಜಿಕ ಅಂತರವನ್ನು ಪಾಲಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಸದರಿ ಚೌಡೇಶ್ವರಿ ಪ್ರಾವಿಜನ್ ಸ್ಟೋರ್ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

10. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.98/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ:04/06/2021 ರಂದು ಚಿಂತಾಮಣಿಯ ರಾಧಾಕೃಷ್ಣ ಆರ್ಥೋಪಿಡಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಗಾಯಾಳು ಪ್ರಕಾಶ್ ಬಿನ್ ಸತ್ಯನ್ನ ರವರ ಹೇಳಿಕೆಯನ್ನು ಠಾಣೆಯ ಸಿ.ಹೆಚ್.ಸಿ-232 ರವರು ಪಡೆದುಕೊಂಡು ಇದೇ ದಿನ ಠಾಣೆಗೆ ಮಧ್ಯಾಹ್ನ 12-30 ಗಂಟೆಗೆ ವಾಪಸ್ಸಾಗಿ ಗಾಯಾಳುವಿನ ಹೇಳಿಕೆಯನ್ನು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ಗಾಯಾಳು ಪ್ರಕಾಶ್ ಮತ್ತು ನರೇಶ್ ರವರು ಚಿಂತಾಮಣಿಯ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಹೀಗಿರುವಾಗ ದಿನಾಂಕ:03/06/2021 ರಂದು ಬೆಳಿಗ್ಗೆ ಎಂದಿನಂತೆ ಕೂಲಿಕೆಲಸಕ್ಕೆ ನರೇಶ್ ರವರ ಬಾಬತ್ತು ಹೊಸ ಪಲ್ಸರ್ ದ್ವಿ-ಚಕ್ರ ವಾಹನ (ಇನ್ನೂ ನೋಂದಣಿ ಸಂಖ್ಯೆಯಿರುವುದಿಲ್ಲ) ದಲ್ಲಿ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ಸು ರಾತ್ರಿ ಸುಮಾರು 10-30 ಗಂಟೆಯ ಸಮಯದಲ್ಲಿ ಗಾಂಧಿನಗರ ಕಡೆಯ ರಸ್ತೆಯಿಂದ ಚೇಳೂರು ರಸ್ತೆಗೆ ತಮ್ಮ ವಾಹನದಲ್ಲಿ ಬರುತ್ತಿದ್ದಾಗ ಗಾಂಧಿನಗರದ ರಸ್ತೆ ವೃತ್ತದಲ್ಲಿ ಬಂದಾಗ ಚಿಂತಾಮಣಿ ನಗರದೊಳಗಿನಿಂದ ಬಂದ ಒಂದು ಟೆಂಪೋ ವಾಹನವನ್ನು ಅದರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ದ್ವಿ-ಚಕ್ರ ವಾಹನಕ್ಕೆ ಢಿಕ್ಕಿ ಹೊಡೆಸಿದ ಪರಿಣಾಮ ದ್ವಿ-ಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದ ನರೇಶ್ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ತಾನೂ ಸಹ ವಾಹನ ಸಮೇತವಾಗಿ ಕೆಳಗೆ ಬಿದ್ದು ಟೆಂಪೋ ನರೇಶ್ ರವರ ಎಡಗಾಲಿನ ಪಾದಕ್ಕೆ ತಗುಲಿ ರಕ್ತಗಾಯವಾಗಿದ್ದು, ತನ್ನ ಎಡಗಾಲಿನ ಪಾದ, ಹಿಮ್ಮಡಿ ಹಾಗೂ ಹಿಮ್ಮಡಿಯ ಮೇಲ್ಭಾಗದಲ್ಲಿ ತಗುಲಿ ರಕ್ತಗಾಯಗಳಾಗಿದ್ದು, ದ್ವಿ-ಚಕ್ರ ವಾಹನವು ಕೆಳಗೆ ಬಿದ್ದಿದರಿಂದ ವಾಹನದ ಕನ್ನಡಿ, ಸೈಲೆನ್ಸರ್ ಮತ್ತಿತರ ಕಡೆ ಜಖಂಗೊಂಡಿದ್ದು, ಆಗ ಅಲ್ಲಿಗೆ ಬಂದ ನವೀನ್ ಬಿನ್ ಮದ್ದೂರಪ್ಪ, ಸೊಣ್ಣಶೆಟ್ಟಿಹಳ್ಳಿ ಭರತ್ ಬಿನ್ ವೆಂಕಟೇಶಪ್ಪ ರವರುಗಳು ಬಂದು ನಮ್ಮನ್ನು ಉಪಚರಿಸಿ ಗಾಯಗೊಂಡಿದ್ದ ನಮ್ಮನ್ನು ಯಾವುದೋ ವಾಹನದಲ್ಲಿ ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು,ಅಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ವೈದ್ಯರ ಸಲಹೆಯ ಮೇರೆಗೆ ನಗರದ ರಾಧಾಕೃಷ್ಣ ಆರ್ಥೋಪಿಡಿಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು, ನಂತರ ನಮಗೆ ನಿನ್ನೆಯ ದಿನ ಅಪಘಾತವನ್ನುಂಟು ಮಾಡಿ ಮೇಲ್ಕಂಡಂತೆ ರಕ್ತಗಾಗಳನ್ನುಂಟು ಮಾಡಿದ ವಾಹನ ಮತ್ತು ಅದರ ಚಾಲಕನ ಬಗ್ಗೆ ತಿಳಿಯವಾಗಿ ಕೆಎ-01-ಎಎಫ್-8523  ಟೆಂಪೋ 407 ವಾಹನವಾಗಿದ್ದು, ಚಾಲಕ ಸಾದಿಕ್ ಪಾಷ ಬಿನ್ ಬಾಷುಸಾಭಿ ಲಕ್ಷ್ಮಿಪುರ ಗ್ರಾಮ ಶ್ರೀನಿವಾಸಪುರ ತಾಲ್ಲೂಕು ಎಂದು ತಿಳಿದು ಬಂದಿದ್ದು ಆದ್ದರಿಂದ ನಮಗೆ ಅಪಘಾತಪಡಿಸಿ ವಾಹನ ಹಾಗೂ ಚಾಲಕನ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

11. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.130/2021 ಕಲಂ. 323,427,447,504,506 ಐ.ಪಿ.ಸಿ:-

          ದಿನಾಂಕ 04/06/2021  ರಂದು ಬೆಳಗ್ಗೆ 6-30  ಗಂಟೆಗೆ ಪಿರ್ಯಾದಿದಾರರಾದ .ಆದಿನಾರಾಯಣರೆಡ್ಡಿ ಬಿನ್ ಲೇಟ್ ಗುಡ್ಡಾರೆಡ್ಡಿ, 58 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ದೇವಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು. ಮೊ.ನಂ. 8747971024 ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ವೆಳಪಿ ಗ್ರಾಮದ ಸರ್ವೆ ನಂ 208/1 ರಲ್ಲಿ 2.28 ಗುಂಟೆ ಜಮೀನಿನನ್ನು ತಮ್ಮ ಗ್ರಾಮದ ಲಕ್ಷ್ಮಣರೆಡ್ಡಿ ಬಿನ್ ಲೇಟ್ ನಾರಾಯಣರೆಡ್ಡಿ ರವರಿಂದ ಸುಮಾರು 30 ವರ್ಷಗಳ ಹಿಂದೆ ಕ್ರಯಕ್ಕೆ ಪಡೆದು ತನ್ನ ಹೆಂಡತಿ ನಿರ್ಮಲ ರವರ ಹೆಸರಿಗೆ ನೊಂದಣಿ ಮಾಡಿಸಿಕೊಂಡು ಅಂದಿನಿಂದ ತಾವೇ ಸದರಿ ಜಮೀನನ್ನು ಉಳುಮೆ ಮಾಡಿಕೊಂಡು ಪ್ರತಿ ವರ್ಷ ರಾಗಿ ಬೆಳೆಯನ್ನು ಮತ್ತು ಇತರೆ ಬೆಳೆಯನ್ನು ಬೆಳೆದು ಅನುಭವದಲ್ಲಿರುತ್ತೇವೆ. ಈ ಜಮೀನಿನ ಪಕ್ಕದ ಜಮೀನಿನವರಾದ ಅಶ್ವತ್ಥರೆಡ್ಡಿ ಬಿನ್ ಲೇಟ್ ಅಂತರೆಡ್ಡಿ ರವರು ತಾನು ಈ ದಿನ ಬೆಳಗ್ಗೆ ತಮ್ಮ ಜಮೀನು ಸರ್ವೆ ನಂ 208/1 ರಲ್ಲಿ ಉಳುಮೆ ಮಾಡುತ್ತಿದ್ದಾಗ ಸದರಿಯವರು ಅಡ್ಡ ಬಂದು ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಈ ಹಿಂದೆ ತನ್ನ ಜಮೀನಿಗೆ ಹಾಕಿದ್ದ ಪಹಣಿ ಕಲ್ಲುಗಳನ್ನು ಕಿತ್ತು ಹಾಕಿ ಬೋಳಿ ಮಗನೇ, ಸೂಳೇ ನನ್ನ ಮಗನೇ ಎಂತ ಅವಾಚ್ಯ ಶಬ್ದಗಳಿಂದ ಬೈದು ಇಲ್ಲಿದ್ದರೆ ತಾವು ಗುಂಪು ಜಾಸ್ತಿ ಇದ್ದೇವೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂತ ಹೇಳಿ ಕೈಗಳಿಂದ ಹೊಡೆದು ತನಗೆ ಮೈ ಕೈ ನೋವುಂಟು ಮಾಡಿರುತ್ತಾರೆ. ಆಗ ತಮ್ಮ ಗ್ರಾಮದ ಮಧು ಬಿನ್ ನರಸಿಂಹರೆಡ್ಡಿ ರವರು ಬಂದು ಜಗಳ ಬಿಡಿಸಿರುತ್ತಾರೆ. ತನ್ನ ಮೇಲೆ ಗಲಾಟೆ ಮಾಡಿದ ಅಶ್ವತ್ಥರೆಡ್ಡಿ ರವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ದೂರು.

 

12.  ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.108/2021 ಕಲಂ. 286 ಐ.ಪಿ.ಸಿ & 9B EXPLOSIVE ACT, 1884:-

          ದಿನಾಂಕ:04-06-2021 ರಂದು ಮದ್ಯಾಹ್ನ:12-45 ಗಂಟೆಗೆ ಪಿರ್ಯಾದಿದಾರರಾದ ಸಿ.ಆರ್.ರವಿಶಂಕರ್ ಪೊಲೀಸ್ ಉಪಾಧೀಕ್ಷಕರು ವಿಶೇಷ ವಿಚಾರಣೆಗಳ ವಿಭಾಗ ಸಿ.ಐ.ಡಿ.ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನಂದರೆ :ತಾವು ಗುಡಿಬಂಡೆ ಪೊಲೀಸ್ ಠಾಣೆಯ ಮೊ.ಸಂ:34/2021 ಕಲಂ: 286. 304 ಐ.ಪಿ.ಸಿ. ಮತ್ತು ಕಲಂ:3. 5. 6. ಎಕ್ಸ್ಪ್ಲೋಸೀವ್ ಸಬ್ಸ್ಟಾನ್ಸ್ ಸ್ ಆಕ್ಟ್-1908 ಹಾಗೂ ಕಲಂ:9(ಬಿ) ಎಕ್ಸ್ ಪ್ಲೋಸಿವ್ ಆಕ್ಟ್-1884 ಪ್ರಕರಣದ ತನಿಖಾದಿಕಾರಿಯಾಗಿ ತನಿಖೆಯನ್ನು ನಿರ್ವಹಿಸಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿರವುದಾಗಿ. ತಾವು ಮೇಲ್ಕಂಡ ಪ್ರಕಣರಣದಲ್ಲಿ ಕೂಲಕುಂಶವಾದ ತನಿಖೆಯನ್ನು ನಡೆಸಿ ಪ್ರಕರಣದ ತನಿಖೆಯಿಂದ ಶ್ರೀ ಶಿರಡಿ ಸಾಯಿ ಆಗ್ರಿಗೇಟ್ಸ ಕಂಪನಿಯ ರಿಜಿಸ್ಟ್ರಾರ್ ಆಪ್ ಪಮ್ರ್ಸ ಚಿಕ್ಕಬಳ್ಳಾಪುರ ಇಲ್ಲಿ ದಿನಾಂಕ:09-12-2013 ರಂದು ನೊಂದಾಯಿತವಾದ ಕಂಪನಿ ಆಗಿದ್ದು ಈ ಕಂಪನಿಯ ಮೈನ್ಸ್ ಮತ್ತು ಜಿಯಾಲಾಜಿ ಡಿಪಾರ್ಟಮೆಂಟಿನಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಜೊನ್ನಾಲಕುಂಟೆ ಗ್ರಾಮದ ಸವರ್ೆನಂ:11 ರಲ್ಲಿನ 3 ಎಕರೆ 20 ಗುಂಟೆ ಜಮೀನಿನಲ್ಲಿ ಕ್ವಾರಿ ನಡೆಸಲು ದಿನಾಂಕ:21-07-2020 ರಿಂದ ಮುಂದಿನ 20 ವರ್ಷಗಳಿಗೆ ಲೈಸನ್ಸ್ ಪಡೆದಿರವುದಾಗಿ  ಈ ಕಂಪನಿಗೆ ಸಕ್ರಿಯ ಪಾಲುದಾರರಾಗಿ ಜಿ.ಎಸ್.ನಾಗರಾಜು ರಾಘವೇಂದ್ರರೆಡ್ಡಿ  ರವರಗಳಿದ್ದು ಸ್ಲೀಪಿಂಗ್ ಪಾರ್ಟನರ್ ಗಳಾಗಿ ಮಧುಸೂದನ ರೆಡ್ಡಿ. ಡಿ.ವಿ.ರವೀಂದ್ರ. ಸುನಿಲ್ ಕುಮಾರ. ತಿರುಮಳಪ್ಪ. ಮತ್ತು ಇಮ್ತಿಯಾಜ್ ರವರುಗಳು ಇದ್ದು. ಶ್ರೀ ಶಿರಡಿ ಸಾಯಿ ಆಗ್ರಿಗೇಟ್ಸ್ ಕಂಪನಿಯ ಸಕ್ರಿಯ ಪಾಲುದಾರರಾದ ಜಿ.ಎಸ್.ನಾಗರಾಜು. ರಾಘವೇಂದ್ರರೆಡ್ಡಿ ಮತ್ತು ಬೋರ್ಡಸ್ ಕಂಟ್ರಾಕ್ಟ್ ರಾದ ಮಂಜುನಾಥರೆಡ್ಡಿ ಮತ್ತು ಸಾಂಬ ಶಿವಾರೆಡ್ಡಿ ರವರುಗಳು ಕ್ವಾರಿಯಲ್ಲಿ ಬಂಡೆಗಳನ್ನು ಸಿಡಿಸಲು ಸ್ಪೋಟ ನಡೆಸಲು ಬೇಕಾದ ಸ್ಪೋಟಕಗಳನ್ನು ಕಾನೂನು ಬಾಹಿರವಾಗಿ 1) ಗಂಗೋಜಿರಾವ್ ರವರ ದುರ್ಗಾ ಎಂಟರ್ ಪ್ರೈಸಸ್. ಎ.ಎಆರ್. ಮೈನಿಂಗ್ 21 ಎ.ಎಆರ್. ಮೈನಿಂಗ್ 22 ದ್ಯಾವಸಂದ್ರ ಗ್ರಾಮ ತೊಂಡೆಬಾವಿ ಹೋಬಳಿ ಗೌರಿಬಿದನೂರು ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ 2) ಮಯೂರರವರ ಎಸ್.ವಿ.ಎಲ್.ಎಸ್ ಎಕ್ಸ್ ಪ್ಲೋಸಿವ್ಸ್ ಚಿಕ್ಕಬಳ್ಳಾಪುರ  ಮತ್ತು 3) ಶಿವನಾರಾಯಣ ಎಂಟರ್ ಪ್ರೈಸಸ್. ಬಾಗೇಪಲ್ಲಿ ರವರಿಂದ ಖರೀದಿಸಿ ತಂದು ಸ್ಪೋಟಗಳನ್ನು ನಡೆಸಿರುವುದಾಗಿ.   2021 ಹಾಗೂ 2021 ರ ವರ್ಷದ ಹಿಂದಿನ ಅವದಿಯಲ್ಲಿ 1) ಗಂಗೋಜಿರಾವ್ ರವರ ದುರ್ಗಾ ಎಂಟರ್ ಪ್ರೈಸಸ್. ಎ.ಎಆರ್. ಮೈನಿಂಗ್ 21 ಎ.ಎಆರ್. ಮೈನಿಂಗ್ 22 ದ್ಯಾವಸಂದ್ರ ಗ್ರಾಮ ತೊಂಡೆಬಾವಿ ಹೋಬಳಿ ಗೌರಿಬಿದನೂರು ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ 2) ಮಯೂರರವರ ಎಸ್.ವಿ.ಎಲ್.ಎಸ್ ಎಕ್ಸ್ ಪ್ಲೋಸಿವ್ಸ್ ಚಿಕ್ಕಬಳ್ಳಾಪುರ 3) ಸಂಜಯ್ ಶಿವನಾರಾಯಣ ಎಂಟರ್ ಪ್ರೈಸಸ್. ಪುಟಪರ್ತಿ ಬಾಗೇಪಲ್ಲಿ ತಾಲ್ಲೂಕು ರವರುಗಳು ಸ್ಪೋಟಕ ವಸ್ತುಗಳನ್ನು ಇನ್ನೂ ಹಲವಾರು ಕ್ವಾರಿ  ಮಾಲೀಕರಿಗೆ ಹಾಗೂ ಇನ್ನಿತರೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಈ ಹಿಂದಿನ ಅವದಿಯಲ್ಲಿಯೂ ಸಹ ಅಕ್ರಮವಾಗಿ ಮಾರಾಟ ಮಾಡಿರಬಹುದಾದ ಸಾದ್ಯತೆ ಇರುತ್ತದೆ. ಜೊತೆಗೆ ಈ ರೀತಿಯ ಚಟುವಟಿಕೆಗಳಿಂದ ಆಸ್ತಿ-ಪಾಸ್ತಿ ಹಾಗೂ ಮಾನವ ಪ್ರಾಣಕ್ಕೂ ಅಪಾಯವಾಗುವ ಅಥವಾ ಅಪಘಾತವಾಗಿ ಮಾನವನ ಜೀವ ಹಾನಿ ಆಗುತ್ತೆಂದು ತಿಳಿದು ನಿರ್ಲಕ್ಷತೆ ತೋರಿ ಸ್ಪೋಟಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ. ಸಂಗ್ರಹಣಿ ಮತ್ತು ಸಾಗಾಣಿಕೆ ಮಾಡಿರವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ಪ್ರತ್ಯಕವಾದ ತನಿಖೆ ಅಗತ್ಯವಾಗಿರವುದು ಕಂಡುಬಂದಿರವುದರಿಂದ ಸರ್ಕಾರ ಪರವಾಗಿ ಈ ದೂರನ್ನು ನೀಡುತ್ತಿರವುದಾಗಿ.  ಆದ್ದರಿಂದ  1) ಗಂಗೋಜಿರಾವ್ ರವರ ದುರ್ಗಾ ಎಂಟರ್ ಪ್ರೈಸಸ್. ಎ.ಎಆರ್. ಮೈನಿಂಗ್ 21 ಎ.ಎಆರ್. ಮೈನಿಂಗ್ 22 ದ್ಯಾವಸಂದ್ರ ಗ್ರಾಮ ತೊಂಡೆಬಾವಿ ಹೋಬಳಿ ಗೌರಿಬಿದನೂರು ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ 2) ಮಯೂರರವರ ಎಸ್.ವಿ.ಎಲ್.ಎಸ್ ಎಕ್ಸ್ ಪ್ಲೋಸಿವ್ಸ್ ಚಿಕ್ಕಬಳ್ಳಾಪುರ 3) ಸಂಜಯ್ ಸಿಂಗ್  ರವರ ಶಿವನಾರಾಯಣ ಎಂಟರ್ ಪ್ರೈಸಸ್. ಪುಟಪರ್ತಿ  ಬಾಗೇಪಲ್ಲಿ ತಾಲ್ಲೂಕು ಹಾಗೂ ಇತರರ ವಿರುದ್ದ ಕಲಂ:286. ಐ.ಪಿ.ಸಿ. ಹಾಗೂ ಕಲಂ:9(ಬಿ) ಎಕ್ಸ್ ಪ್ಲೋಸಿವ್ ಆಕ್ಟ್-1884 ರಡಿ ಅಪರಾಧಿಕ ಪ್ರಕರಣವನ್ನು ದಾಖಲು ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

13. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.109/2021 ಕಲಂ. 504,323,324 ಐ.ಪಿ.ಸಿ:-

          ದಿನಾಂಕ 04/06/2021 ರಂದು ಮದ್ಯಾಹ್ನ 1-20 ಗಂಟೆಗೆ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಹೇಳಿಕೆಯನ್ನು ಪಡೆದಿದ್ದರ ಸಾರಾಂಶವೇನೆಂದರೆ, ಈ ದಿನ ದಿನಾಂಕ 04/06/2021 ರಂದು ಬೆಳಿಗ್ಗೆ 11-20 ಗಂಟೆಯ ಸಮಯದಲ್ಲಿ ತನ್ನ ಬಾವ ಕೃಷ್ಣಮೂರ್ತಿ ರವರ ಜಮೀನಿನ ಪಕ್ಕ ಇರುವ ಕರಬು ಜಮೀನಿನಲ್ಲಿ ಆರ್. ಕೆ. ಲೇ ಔಟ್ ಬಳಿ ಆರೋಪಿತನು ಹದ್ದುಬಸ್ತು ಮಾಡಿಕೊಳ್ಳುತ್ತಿದ್ದಾಗ  ತಾನು ಕೇಳಿದ್ದಕ್ಕೆ ನೀನು ಯಾರೋ ನನ್ನನ್ನು ಪ್ರಶ್ನಿಸಲು ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಹೊಡೆದು ಕಾಲಿನಿಂದ ಒದ್ದು ಮೂಗೇಟು ಉಂಟು ಮಾಡಿ ಅಲ್ಲಿ ಬಿದ್ದಿದ್ದ ಕಲ್ಲಿನಿಂದ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯ ಉಂಟು ಪಡಿಸಿ ಅದೇ ಕಲ್ಲಿನಿಂದ ಬಾಯಿ ತುಟಿಗಳಿಗೆ ಹೊಡೆದಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಠಾಣೆಗೆ ವಾಪಸ್ಸು ಮದ್ಯಾಹ್ನ 2-30 ಗಂಟೆಗೆ ಬಂದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 

14. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.57/2021 ಕಲಂ. 323,341,504,506 ಐ.ಪಿ.ಸಿ:-

          ದಿನಾಂಕ:03/06/2021 ರಂದು ಸಂಜೆ 18:30 ಗಂಟೆಗೆ ಪಿರ್ಯಾದಿ ಶ್ರೀ. ಸೋಮಶೇಖರ ಬಿನ್ ಪಿಳ್ಳಪ್ಪ, 24 ವರ್ಷ, ಪ.ಜಾತಿ, ಜಿರಾಯ್ತಿ, ವಾಸ: ನಕ್ಕನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮಗೂ ಮತ್ತು ತಮ್ಮ ಗ್ರಾಮದ ತಮ್ಮ ಜನಾಂಗದ ಚಿಕ್ಕಮುನಿಯಪ್ಪ ರವರ ಮನೆಯವರಿಗೂ ಸೈಟ್ ವಿಚಾರದಲ್ಲಿ ಮನಸ್ಥಾಪವಿದ್ದು ಪರಸ್ವರ ಮಾತನಾಡುವುದಿಲ್ಲ. ಹೀಗಿರುವಾಗ ದಿನಾಂಕ:02-06-2021 ರಂದು ಬೆಳಿಗ್ಗೆ ಸುಮಾರು 08:50 ಗಂಟೆಯಲ್ಲಿ ತಾನು ಎಂದಿನಂತೆ ತಮ್ಮ ಹೊಲದ ಬಳಿ ಭರ್ಹಿದೆಸೆ ಮಾಡುತ್ತಿದ್ದಾಗ ತಮ್ಮೂರಿನ ಎನ್.ಸಿ ರಘು ಬಿನ್ ಲೇಟ್ ಚಿಕ್ಕಮುನಿಯಪ್ಪ ರವರು ಮೋಬೈಲ್ ಪೋನ್ನಲ್ಲಿ ಮಾತನಾಡುತ್ತಾ ತನ್ನನ್ನು ಕುರಿತು ಹೀನಾಯಮಾನವಾಗಿ ಬೈದುಕೊಂಡು ಹೋಗುತ್ತಿದ್ದನು. ತಾನು ನನ್ನ ವಿಚಾರ ಏಕೆ ಎಂದು ಕೇಳಿದಾಗ ಬಾಯಿ ಮಾತಿನ ಜಗಳ ಮಾಡಿದನು. ಅಲ್ಲಿಂದ ತಾನು ಹೊರಟು ಮನೆಗೆ ಬಂದೆನು, ಬೆಳಿಗ್ಗೆ 09:30 ಗಂಟೆ ಸಮಯದಲ್ಲಿ ಮನೆ ಬಳಿ ಇದ್ದಾಗ ಮೇಲ್ಕಂಡ ರಘು ಮನೆಯ ಬಳಿ ಬಂದು ಏನೋ ಲೋಫರ್ ನನ್ನ ಮಗನೇ ಊರಿನಲ್ಲಿ ನಿನೇನೂ ದಾದಾಗಿರಿ ಮಾಡುತ್ತಿಯಾ ಎಂದು ಏಕಾಏಕಿ ಅಡ್ಡಗಟ್ಟಿ ತನ್ನನ್ನು ಹಿಡಿದು ಕೈಗಳಿಂದ ತಲೆ ಮತ್ತು ಬೆನ್ನಿಗೆ ಹೊಡೆದು ಕೆಳಕ್ಕೆ ಬಿಳಿಸಿ ಅದಮಿಕೊಂಡು ಬಲ ಎದೆಯ ಬಳಿ ಬಾಯಿ ಇಂದ ಕಚ್ಚಿ ಗಾಯಪಡಿಸಿದನು. ತಾನು ಕಿರುಚಿಕೊಂಡಾಗ ತನ್ನ ಅಕ್ಕ ನಾರಾಯಣಮ್ಮ, ಅಶೋಕ, ಸತೀಶ, ಚಂದ್ರಪ್ಪ ರವರುಗಳು ಬಂದು ಬಿಡಿಸಿದರು. ರಘು  ರವರು ತನ್ನನ್ನು ಕುರಿತು ಲೇ ಊರಲ್ಲಿ ನೀನು ಬದುಕುವುದಾದರು ನೋಡುತ್ತೇನೆ, ಯಾವತ್ತಿದ್ದರು ನಿನ್ನನ್ನು ನಾನೇ ಕೊಲೆ ಮಾಡುತ್ತೇನೆಂದು ಬೆದರಿಸಿದನು. ತಾನು ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಊರಿನಲ್ಲಿ ನ್ಯಾಯ ಪಂಚಾಯ್ತಿ ಮಾಡುತ್ತಾರೆನೋ ಎಂದು ಕಾದು ನ್ಯಾಯ ಪಂಚಾಯ್ತಿ ಮಾಡದ ಕಾರಣ ಈ ದಿನ ತಡವಾಗಿ ದೂರು ಕೊಡುತ್ತಿದ್ದು ಸದರಿ ರಘು ರೌಡಿಪ್ರವೃತ್ತಿಯವನಾಗಿದ್ದು ಇವನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

15. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.51/2021 ಕಲಂ. 188,269,270 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ 03/06/2021 ರಂದು ಸಂಜೆ 17-00 ಗಂಟೆ ಸಮಯದಲ್ಲಿ ಪಾತಪಾಳ್ಯ ಪೊಲೀಸ್ ಠಾಣೆಯ ಪಿ ಎಸ್ ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಕೋವಿಡ್-19 ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾನ್ಯ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ದಿನಾಂಕ:03-06-2021 ರಿಂದ ದಿ:06-06-2021 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ತಾವು ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಜೆ 4-30 ಗಂಟೆಯಲ್ಲಿ ಜೂಲಪಾಳ್ಯ ಗ್ರಾಮದಲ್ಲಿ ಒಂದು ಚಿಕೆನ್ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದು, ತಾವು ಸ್ಥಳಕ್ಕೆ ಹೋಗಿ ನೋಡಲಾಗಿ  ಸ್ಥಳದಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸದರಿ ಚಿಕೆನ್ ಅಂಗಡಿಯವರು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಚಿಕನ್ ಅಂಗಡಿ ತೆರೆದಿದ್ದು ಹೆಸರು & ವಿಳಾಸ ಕೇಳಲಾಗಿ ಖಾಜಾ ಬಿನ್ ಖಾಸೀಂ ಸಾಬ್, 38 ವರ್ಷ, ಮುಸ್ಲಿಂ ಜನಾಂಗ, ಚಿಕೆನ್ ವ್ಯಾಪಾರ, ಜೂಲಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತನ ತೋರ್ಪಡಿಸಿರುವುದು ಕಂಡುಬಂದಿದ್ದು, ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

ಇತ್ತೀಚಿನ ನವೀಕರಣ​ : 04-06-2021 05:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080