ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.116/2021 ಕಲಂ. 32,34 ಕೆ.ಇ ಆಕ್ಟ್ :-

  ದಿನಾಂಕ: 04/05/2021 ರಂದು ಬೆಳಿಗ್ಗೆ 10-40 ರಂದು ಶ್ರೀ ರೆಡ್ಡಪ್ಪ ಜೆ ವಿ ಎಎಸ್ಐ. ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ. ದಿನಾಂಕ; 04.05.2021 ರಂದು ಸಿಪಿಐ ಸಾಹೇಬರು ಬಾಗೇಪಲ್ಲಿ ರವರು ಬೆಳಗ್ಗೆ 8.30 ಗಂಟೆ ಸಮಯದಲ್ಲಿ ನನಗೆ ಮತ್ತು ಸಿಪಿಸಿ 214 ಅಶೋಕ್ ರವರಿಗೆ ಕೋವಿಡ್-19 ಲಾಕ್ ಡೌನ್ ಪ್ರಯುಕ್ತ ಬಾಗೇಪಲ್ಲಿ ಟೌನ್ ನಲ್ಲಿ ಹಗಲು ಗಸ್ತು ನಿರ್ವಹಿಸಲು ಆದೇಶಿದ್ದು ನೇಮಕದಂತೆ  ನಾನು ಮತ್ತು ಅಶೋಕ್ ಸಿಪಿಸಿ 214 ರವರು ದ್ವಿಚಕ್ರವಾಹನದಲ್ಲಿ ಬಾಗೇಪಲ್ಲಿ ಪುರದಲ್ಲಿನ ಟಿ.ಬಿ.ಕ್ರಾಸ್, ಘಂಟಂವಾಡಿಲ್ಲಿ, ಏಟಿಗಡ್ಡಪಲ್ಲಿ  ಮುಂತಾದ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಬೆಳಗ್ಗೆ ಸುಮಾರು 9.30 ಗಂಟೆಯಲ್ಲಿ ಬಾಗೇಪಲ್ಲಿ ಪುರದಲ್ಲಿ ಡಿ.ವಿ.ಜಿ ರಸ್ತೆಯ ಮಟನ್ ಮಾರ್ಕೇಟ್ ರಸ್ತೆಯ ಮುಂಭಾಗದ ರಸ್ತೆಯಲ್ಲಿ ಗಸ್ತು ನಿರ್ವಹಿಸುತ್ತಿದ್ದಾಗ ಯಾರೋ ಒಬ್ಬ  ಆಸಾಮಿಯು ಪ್ಲಾಸ್ಟೀಕ್ ಚೀಲವನ್ನು ತನ್ನ ಹೆಗಲ ಮೇಲೆ ಇಟ್ಟುಕೊಂಡು ಗೂಳೂರು ವೃತ್ತದ ಕಡೆ ನಡೆದುಕೊಂಡು ಹೋಗುತ್ತಿದ್ದು, ಅನುಮಾನ ಬಂದು ಆತನ್ನು ತಡೆದು ನಿಲ್ಲಿಸಿದ್ದು, ಆಸಾಮಿಯು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಓಡಿಹೋಗಲು ಪ್ರಯತ್ನಿಸುತ್ತಿದವನ್ನು ಸಿಬ್ಬಂದಿಯಾದ ಅಶೋಕ್ ಪಿ.ಸಿ 214 ರವರು ಹಿಡಿದುಕೊಂಡಿದ್ದು, ಅದೇ ಸಮಯದಲ್ಲಿ ಗೂಳೂರು ವೃತ್ತದ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಇಬ್ಬರು ದ್ವಿಚಕ್ರ ವಾಹನ ಸವಾರರಿಗೆ ಮೇಲ್ಕಂಡ ವಿಚಾರವನ್ನು ತಿಳಿಸಿ ಪಂಚಾಯ್ತಿದಾರರಾಗಿ ಸಹಕರಿಸಲು ಕೋರಿದ್ದು ಒಪ್ಪಿಕೊಂಡಿರುತ್ತಾರೆ. ಪಂಚರ ಸಮಕ್ಷಮದಲ್ಲಿ ಆಸಾಮಿಯನ್ನು ಪ್ಲಾಸ್ಟೀಕ್ ಚೀಲದಲ್ಲಿ ಏನಿದೆ ಎಂದು ಕೇಳಲಾಗಿ ತನ್ನ ಅಂಗಡಿಗೆ ಸರಕು-ಸಾಮಾನುಗಳನ್ನು ತೆಗದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು, ಆಸಾಮಿಯ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ನಾಗರಾಜ ಎಸ್.  ಬಿನ್ ಆರ್.ಶಿವಣ್ಣ, 38 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಗೊರ್ತಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾನೆ, ತಾನು ಚಿಲ್ಲರೆ ಅಂಗಡಿಯ ಸಾಮಾನುಗಳೆಂದು ಹೇಳಿ ಚೀಲಗಳಲ್ಲಿ ಮದ್ಯವನ್ನು ಇಟ್ಟು ನಮ್ಮ ಗ್ರಾಮದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ. ಪ್ಲಾಸ್ಟೀಕ್ ಚೀಲದಲ್ಲಿ ಎರಡು ಮದ್ಯದ ಬಾಕ್ಸ್ ಗಳಿರುತ್ತವೆ.  ಸದರಿ ಆಸಾಮಿಯನ್ನು ಮದ್ಯ ಮಾರಾಟ ಮಾಡಲು ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಬಾಕ್ಸ್ ಗಳನ್ನು ಪರಿಶೀಲಿಸಲಾಗಿ  ಒಂದನೇ ಬಾಕ್ಸ್ ನಲ್ಲಿ 90 ML ಸಾಮಥ್ಯದ  HAYWARDS CHEERS WHISKY ಯ  96 ಟೆಟ್ರಾ ಪಾಕೆಟ್ ಗಳಿದ್ದು, ಬಾಕ್ಸ್ ಮೇಲೆ 1 ನೇ ಬಾಕ್ಸ್ ನಂಬರ್ 040/200 ಆಗಿದ್ದು, SL NO (9041702401-9041721600) IML 0090KRN0221/9041706240, HNY022181-0128581 ಎಂದು ಇದ್ದು ಇದರಲ್ಲಿ . 8 ಲೀಟರ್ 640 ಮಿಲೀಲೀಟರ್ ಮದ್ಯವಿದ್ದು, ಬೆಲೆ ಸುಮಾರು 3372.48 ರೂಗಳಾಗಿರುತ್ತೆ.  ನಂತರ 2 ನೇ ಬಾಕ್ಸ್ ಅನ್ನು 90 ML ಸಾಮಥ್ಯದ  HAYWARDS CHEERS WHISKY ಯ  96 ಟೆಟ್ರಾ ಪಾಕೆಟ್ ಗಳಿದ್ದು, ಪರಿಶೀಲಿಸಲಾಗಿ ಬಾಕ್ಸ್ ಮೇಲೆ ಬಾಕ್ಸ್ ನಂಬರ್  078/200, ಆಗಿದ್ದು, SL NO (9041702410-9041721600) IML 0090KRN0221/9041709888, HNY022181-0128581 ಬಾಕ್ಸ್ ಆಗಿದ್ದು, ಬಾಕ್ಸ್ ನಲ್ಲಿ ಈ ಬಾಕ್ಸ್ ನಲ್ಲಿ 8 ಲೀಟರ್ 640 ಮಿಲೀಲೀಟರ್ ಮದ್ಯವಿದ್ದು, ಬೆಲೆ ಸುಮಾರು 3372.48 ರೂಗಳಾಗಿರುತ್ತೆ. ಒಟ್ಟು ಮದ್ಯ 17 ಲೀಟರ್ 280 ಮಿಲೀಲೀಟರ್ ಮದ್ಯವಿದ್ದು, ಒಟ್ಟು ಮೌಲ್ಯ 6744.96 ರೂಪಾಯಿಗಳಾಗಿರುತ್ತೆ. ಸದರಿ ಮದ್ಯವನ್ನು  ಪಂಚರ ಸಮಕ್ಷಮ ಮೇಲ್ಕಂಡ  ಎರಡೂ ಬಾಕ್ಸ್ ಗಳಿಂದಲೂ ಒಂದರಂತೆ  90 ML ಸಾಮಥ್ಯದ  HAYWARDS CHEERS WHISKY  2 ಟೆಟ್ರಾ ಪಾಕೆಟ್ ಗಳನ್ನು ಅಲಾಯಿದೆಯಾಗಿ 2 ಬಿಳಿ ಬಟ್ಟೆಯ ಚೀಲಗಳಲ್ಲಿ ಹಾಕಿ ದಾರದಿಂದ ಮೂತಿಯನ್ನು ದಾರದಿಂದ ಹೊಲೆದು B ಎಂಬ ಅಕ್ಷರದಿಂದ ಮೊಹರು ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲು ಅಮಾನತ್ತುಪಡಿಸಿಕೊಂಡಿರುತ್ತೆ. ನಂತರ ಬೆಳಗ್ಗೆ 10.40 ಗಂಟೆಗೆ ಠಾಣೆಗೆ ಆರೋಪಿ ಮಾಲು, ಅಸಲು ಧಾಳಿ ಪಂಚನಾಮೆಯೊಂದಿಗೆ ಹಾಜರಾಗಿ ಆಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರಧಿಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.117/2021 ಕಲಂ. 32,34 ಕೆ.ಇ ಆಕ್ಟ್ :-

  ದಿನಾಂಕ: 04/05/2021 ರಂದು ಬೆಳಿಗ್ಗೆ 11-30 ಗಂಟೆಗೆ ಶ್ರೀ ಜಯರಾಂ ಎ.ಎಸ್.ಐ, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ; 04-05-2021 ರಂದು ಬೆಳಿಗ್ಗೆ ಸಿ.ಪಿ.ಐ ಸಾಹೇಬರು ನನಗೆ ಹಗಲು ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿರುತ್ತಾರೆ. ಆದೇಶದಂತೆ ನಾನು ಪಿ.ಸಿ 134 ಧನಂಜಯ ರವರೊಂದಿಗೆ ದ್ವಿ ವಾಹನದಲ್ಲಿ ಬಾಗೇಪಲ್ಲಿ ಟೌನ್ ನ  ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಕೊಡಿಕೊಂಡ ರಸ್ತೆ, ಮುಂತಾದ ಕಡೆ ಗಸ್ತು ಮಾಡಿಕೊಂಡು, ತಾಲ್ಲೂಕು ಕಛೇರಿಯ ಮುಂಬಾಗ ಬಂದಾಗ, ಬೆಳಿಗ್ಗೆ 10:00 ಗಂಟೆಗೆ ಯಾರೋ ಒಬ್ಬ ಆಸಾಮಿಯು ಚೀಲದಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವುದಾಗಿ ಬಂದ ಖಚಿತ ಬಾತ್ಮೀ ಮೇರೆಗೆ ನಾನು ತಾಲ್ಲೂಕು ಕಛೇರಿಯ ಮುಂಬಾಗ ಡಿ.ವಿ.ಜಿ ರಸ್ತೆಯಲ್ಲಿ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಪಂಚಾಯ್ತಿದಾರರಾಗಿ ಸಹಕರಿಸಲು ಕೋರಿ ನಾನು ಮತ್ತು ಪಂಚರು ತಾಲ್ಲೂಕು ಕಛೇರಿ ಮುಂಬಾಗದ  ಗೂಳೂರು ಸರ್ಕಲ್ ಗೆ ಹೋಗುವ ಕಡೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗಿ ಗಣೇಶ ಮೆಡಿಕಲ್ಸ್ ಬಳಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿಯು ಎಸ್.ಬಿ.ಎಂ ವೃತ್ತದ ಡಿ.ವಿ.ಜಿ ರಸ್ತೆಯ ಎಡಬದಿಯಲ್ಲಿ ಪ್ಲಾಸ್ಟಿಕ್ ಚೀಲವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ವಾಹನಕ್ಕಾಗಿ ಕಾಯುತ್ತಿದ್ದನು. ನಾವುಗಳು ಹತ್ತಿರ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಆಸಾಮಿಯು ಚೀಲವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದ್ದು, ಪಿ.ಸಿ 134 ರವರು ಸದರಿ ಆಸಾಮಿಯನ್ನು ಬೆನ್ನತ್ತಿ ಹಿಡಿದುಕೊಂಡು ಬಂದಿದ್ದು, ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಹನುಮಂತನಾಯ್ಕ ಬಿನ್ ಲೇಟ್ ಲಕ್ಷ್ಮಣ ನಾಯ್ಕ, 48 ವರ್ಷ, ಲಂಬಾಣಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಗೊರ್ತಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಮೊ:9449318393 ಎಂದು ತಿಳಿಸಿದ್ದು, ಸದರಿ ಆಸಾಮಿಯು ಹಿಡಿದುಕೊಂಡಿದ್ದ ಚೀಲವನ್ನು ಪಂಚರ ಸಮಕ್ಷಮದಲ್ಲಿ ಬಿಚ್ಚಿ ನೋಡಲಾಗಿ ಮೂರು ಕಾಟನ್ ಬಾಕ್ಸ್ ಗಳಿದ್ದು, 1ನೇ ಬಾಕ್ಸನ್ನು ಪರಿಶೀಲಿಸಲಾಗಿ BOX NO-159/200, SL NO-(9041702401-9041721600) IML-0090 KRN 0221/9041717664, HNY 022181-0128581 ಎಂದು ಇದ್ದು, ಬಾಕ್ಸಿನಲ್ಲಿ 90 ML ಸಾಮರ್ಥ್ಯದ HAYWARDS CHEERS WHISKY ಯ 96 TETRA POCKETS ಇರುತ್ತೆ. ಈ ಬಾಕ್ಸ್ ನಲ್ಲಿನ ಮದ್ಯ 8 ಲೀಟರ್ 640 ಮಿಲಿ ಲೀಟರ್ ಮದ್ಯವಿದ್ದು, ಬೆಲೆ ಸುಮಾರು 3,372.48/- ರೂಗಳಾಗುತ್ತೆ.              2ನೇ ಬಾಕ್ಸನ್ನು ಪರಿಶೀಲಿಸಲಾಗಿ  BOX NO – 022/200, SL NO 6041702401-9041721600) IML 0090 KRN 0221/9041704512 HNY 022181-128581  ಎಂದು ಇದ್ದು, ಬಾಕ್ಸ್ ನಲ್ಲಿ  90 ML ಸಾಮರ್ಥ್ಯದ HAYWARDS CHEERS WHISKY ಯ 96 TETRA POCKETS ಇರುತ್ತೆ. ಈ ಬಾಕ್ಸ್ ನಲ್ಲಿನ ಮದ್ಯ 8 ಲೀಟರ್ 640 ಮಿಲಿ ಲೀಟರ್ ಮದ್ಯವಿದ್ದು, ಬೆಲೆ ಸುಮಾರು 3,372.48/- ರೂಗಳಾಗುತ್ತೆ. 3 ನೇ ಬಾಕ್ಸನ್ನು ಪರಿಶೀಲಿಸಲಾಗಿ BOX NO 148/400 SLNO (1183046401-1183065600) IML 0180 KRN 0221/1183058504 HNY 022182-0135776 ಎಂದು ಇದ್ದು, ಬಾಕ್ಸನಲ್ಲಿ 180 ML ಸಾಮರ್ಥ್ಯದ 48 OLD ADMIRAL VSOP BRANDY TETRA POCKETS ಇದ್ದು, ಬಾಕ್ಸನಲ್ಲಿನ ಮದ್ಯ 8 ಲೀಟರ್ 640 ಮಿಲಿ ಲೀಟರ್ ಮದ್ಯವಿದ್ದು, ಬೆಲೆ ಸುಮಾರು 4,164/- ರೂ.ಗಳಾಗುತ್ತೆ. ಮೂರು ಬಾಕ್ಸ್ ಗಳಲ್ಲಿ  ಒಟ್ಟು 25 ಲೀಟರ್ 920 ಮಿಲಿ ಮದ್ಯವಿದ್ದು,   ಒಟ್ಟು ಅಂದಾಜು ಮೌಲ್ಯ   10,908/- ರೂ.ಗಳಾಗುತ್ತೆ. ಆಸಾಮಿಯನ್ನು ಮದ್ಯವನ್ನು ಸಾಗಾಣಿಕೆ ಮಾಡಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇರುವುದಿಲ್ಲ. ಮದ್ಯವನ್ನು ತಮ್ಮ ಗ್ರಾಮದಲ್ಲಿ ಮಾರಾಟ ಮಾಡಲು ತೆಗೆದುಕೊಂಡು ವಾಹನಕ್ಕಾಗಿ ಕಾಯುತ್ತಿದ್ದುದಾಗಿ ತಿಳಿಸಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ.  ಮೇಲ್ಕಂಡ ಮೂರು ಬಾಕ್ಸಗಳಿಂದ ರಾಸಾಯನಿಕ ಪರೀಕ್ಷೆಗಾಗಿ ಎಫ್.ಎಸ್.ಎಲ್ ಗೆ ಕಳುಹಿಸಿಕೊಟ್ಟು ವರದಿ ಪಡೆಯಲು ಮಾದರಿಗಾಗಿ ಒಂದೊಂದು ಟೆಟ್ರಾ ಪಾಕೆಟ್ ಅನ್ನು ಅಲಾಯಿದೆಯಾಗಿ  ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು B ಅಕ್ಷರದಿಂದ ಅರಗು ಮಾಡಿರುತ್ತೆ. ನಂತರ ಆಸಾಮಿಯನ್ನು ವಶಕ್ಕೆ ಪಡೆದು ಮೇಲ್ಕಂಡ ಮಾಲು ಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ, ಮಾಲು ಮತ್ತು ಆರೋಪಿಯನ್ನು  ಠಾಣೆಯಲ್ಲಿ  ಬೆಳಿಗ್ಗೆ 11:30 ಗಂಟೆಗೆ ಹಾಜರುಪಡಿಸುತ್ತಿದ್ದು, ಆಸಾಮಿಯ ವಿರುದ್ದ ಕಾನೂನು ರೀತ್ಯಾ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.36/2021 ಕಲಂ. 379 ಐ.ಪಿ.ಸಿ:-

  ದಿನಾಂಕ; 03-05-2021 ರಂದು ಮದ್ಯಾಹ್ನ 1.45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಾಜಣ್ಣ.ಎಸ್. ಬಿನ್ ಶ್ಯಾಮಣ್ಣ, 55 ವರ್ಷ, ವಕ್ಕಲಿಗರು, ವ್ಯವಸಾಯ, ವಾಸ: ಅಂದಾರ್ಲಹಳ್ಳಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತನ್ನ ಹೆಂಡತಿಯಾದ ಶ್ರೀಮತಿ ಲಕ್ಷ್ಮಮ್ಮ 50 ವರ್ಷ, ರವರಿಗೆ ದಿನಾಂಕ; 28-04-2021 ರಂದು ರಾತ್ರಿ 8.30 ಗಂಟೆ ಸಮಯದಲ್ಲಿ ಕೋವಿಡ್ ಕೇಂದ್ರಕ್ಕೆ ಪಾಸಿಟಿವ್ ಬಂದ ಕಾರಣ ಚಿಕಿತ್ಸೆಯ ಸಲುವಾಗಿ ಚಿಕ್ಕಬಳ್ಳಾಪುರ ನಗರದ ಹಳೇ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದು, ನಾವು ಗಾಬರಿಯಲ್ಲಿ ತನ್ನ ಹೆಂಡತಿ ಬಳಿಯಿದ್ದ ಮಾಂಗಲ್ಯ, ಮಾಂಗಲ್ಯದ ಸರ, ಓಲೆ, ಕಾಲಿನ ಚೇನುಗಳು ಹಾಗೆಹೇ ಬಿಟ್ಟಿರುತ್ತೇವೆ. ಹೀಗಿರುವಾಗ ದಿನಾಂಕ; 02-05-2021 ರಂದು ಬೆಳಗ್ಗೆ 6.30 ಗಂಟೆಗೆ ಆಸ್ಪತ್ರೆಯಿಂದ ಕರೆ ಮಾಡಿ, ಹೆಂಡತಿ ಲಕ್ಷ್ಮಮ್ಮ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ವಿಚಾರ ತಿಳಿಸಿದರು. ನಂತರ ನಾವುಗಳು ಆಸ್ಪತ್ರೆಗೆ ಬಂದು ಬೆಳಗ್ಗೆ 9.30 ಗಂಟೆಗೆ ವಿಚಾರಿಸಿದಾಗ ಬೆಳಗಿನ ಜಾವ 3.30 ಗಂಟೆ ಸಮಯದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದರು. ನಂತರ ತನ್ನ ಹೆಂಡತಿಯ ಮೃತ ದೇಹವನ್ನು ವಶಕ್ಕೆ ನೀಡಿದ್ದು, ಒಡವೆಗಳ ಬಗ್ಗೆ ಕೇಳಿದಾಗ ಕಾಲಿನ ಚೈನು ಮತ್ತು ಓಲೆಯನ್ನು ನೀಡಿದ್ದು, ನಂತರ ಮಾಂಗಲ್ಯ ಮತ್ತು ಮಾಂಗಲ್ಯ ಸರ ಬಗ್ಗೆ ಕೇಳಿದಾಗ ಆಸ್ಪತ್ರೆಯ ಸಿಬ್ಬಂದಿ ಸಮಜಾಯಿಷಿ ಉತ್ತರ ಕೊಡದೇ ಚೈನ್ ಬಗ್ಗೆ ನಮಗೆ ಗೊತ್ತಿಲ್ಲ ರಾತ್ರಿ ಸಿಬ್ಬಂದಿಯನ್ನು ವಿಚಾರಿಸಿ ಹೇಳುವುದಾಗಿ ತಿಳಿಸಿದರು. ಮಾಂಗಲ್ಯ ಮತ್ತು ಮಾಂಗಲ್ಯದ ಸರ ಸುಮಾರು 65 ಗ್ರಾಂ, ತೂಕವುಳ್ಳದ್ದಾಗಿದ್ದು, ಇದರ ಅಂದಾಜು ಬೆಲೆ 2,25,000/- ರೂಗಳು ಆಗಿರುಬಹುದಾಗಿರುತ್ತೆ. ಆದ್ದರಿಂದ ಹೆಂಡತಿಯ ಕೊರಳಲ್ಲಿದ್ದ ಮಾಂಗಲ್ಯ ಮತ್ತು ಮಾಂಗಲ್ಯ ಸರವನ್ನು ಚಿಕ್ಕಬಳ್ಳಾಪುರ ನಗರದ ಹಳೇಯ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸಲುವಾಗಿ ಚಿಕಿತ್ಸೆಗೆ ದಾಖಲಿಸಿದಾಗ ಆಸ್ಪತ್ರೆಯ ಸಿಬ್ಬಂದಿ ಅಥವಾ ಯಾರೋ ದುಷ್ಕರ್ಮಿಗಳು ಮಾಂಗಲ್ಯ ಸರವನ್ನು ಕಳುವು ಮಾಡಿರುತ್ತಾರೆ. ಆದ್ದರಿಂದ ಆರೋಪಿತರನ್ನು ಪತ್ತೆ ಮಾಡಿ, ಕಾನೂನು ರೀತ್ಯಾ ಕ್ರಮ ಜರುಗಿಸಿ ಮಾಂಗಲ್ಯ ಸರವನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ. ದಿನಾಂಕ; 02-05-2021 ರಂದು ತನ್ನ ಹೆಂಡತಿಯ ಅಂತ್ಯಕ್ರಿಯೆ ಇದ್ದುದರಿಂದ ಈ  ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.181/2021 ಕಲಂ. 269,270,188  ಐ.ಪಿ.ಸಿ & 51(b) THE DISASTER MANAGEMENT ACT, 2005:-

  ದಿನಾಂಕ: 03/05/2021 ರಂದು ಸಂಜೆ 7.45 ಗಂಟೆಗೆ ಠಾಣೆಯ ಶ್ರೀ.ನರೇಶ್ ನಾಯ್ಕ್.ಎಸ್, ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 03/05/2021 ರಂದು ಸಂಜೆ 6.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ತಮ್ಮ ಸಿಬ್ಬಂದಿಯವರಾದ ಸಿ.ಹೆಚ್.ಸಿ-249 ಸಂದೀಪ್ ಕುಮಾರ್, ಮತ್ತು ಸಿ.ಪಿ.ಸಿ-544 ವೆಂಕಟರವಣ ರವರೊಂದಿಗೆ ತನಗೆ ಒದಗಿಸಿರುವ ಜೀಪ್ ಸಂಖ್ಯೆ ಕೆ.ಎ-40-ಜಿ-326 ರಲ್ಲಿ ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ತಿಮ್ಮಸಂದ್ರ ಗ್ರಾಮದ ಗಾಯಿತ್ರಿ ಸಿಲ್ಕ್ಸ್ ಅಂಡ್ ಸ್ಯಾರಿಸ್ ಬಟ್ಟೆ ಅಂಗಡಿಯ ಮಾಲೀಕರು ಅಂಗಡಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಸಂಜೆ 6.30 ಗಂಟೆಗೆ ತಿಮ್ಮಸಂದ್ರ ಗ್ರಾಮದ ಗಾಯಿತ್ರಿ ಸಿಲ್ಕ್ಸ್ ಅಂಡ್ ಸ್ಯಾರಿಸ್ ಬಟ್ಟೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 7-8 ಜನರನ್ನು ಅಂಗಡಿಯಲ್ಲಿ ಅಕ್ಕಪಕ್ಕದಲ್ಲಿಯೇ ಕೂರಿಸಿಕೊಂಡು ಮತ್ತು ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಲಕ್ಷ್ಮಣ್ ಬಾಬು ಬಿನ್ ಟಿ.ಎಂ ಮುನಿನಾರಾಯಣಪ್ಪ, 33 ವರ್ಷ, ತೊಗಟವೀರ ಜನಾಂಗ, ಬಟ್ಟೆ ಅಂಗಡಿ ಮಾಲೀಕರು, ವಾಸ: ತಿಮ್ಮಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು, ಮೊ.ಸಂ.9902142993 ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಬಟ್ಟೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.182/2021 ಕಲಂ. 143,323,341,506,149 ಐ.ಪಿ.ಸಿ :-

  ದಿನಾಂಕ: 04/05/2021 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀಮತಿ ಆಶ್ರಫ್ ಉನ್ನೀಸಾ ಕೋಂ ಸೈಯದ್ ಉಬೇದುಲ್ಲಾ, 60 ವರ್ಷ, ಮುಸ್ಲಿಂ ಜನಾಂಗ, ಮನೆಕೆಲಸ, ಸಂತೇಕಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈಗ್ಗೆ ಸುಮಾರು 2 ವರ್ಷಗಳ ಹಿಂದೆ ತಾವು ಶಿಡ್ಲಘಟ್ಟ ವಾಸಿಯಾದ ಶಪೀವುಲ್ಲಾ ಎಂಬುವರಿಂದ ತಮ್ಮ ಮನೆಯ ಹಿಂದುಗಡೆ ಇರುವ ಖಾಲಿ ಜಾಗವನ್ನು ಕೊಂಡುಕೊಂಡಿದ್ದು, ಆ ಜಾಗದಲ್ಲಿ ಒಂದು ರಾಗಿ ಮರ ಇರುತ್ತೆ. ಆ ಜಾಗ ಮತ್ತು ಅದರಲ್ಲಿನ ಮರದ ಬಗ್ಗೆ ತಮ್ಮ ಮನೆಯ ಮುಂದೆ ಇರುವ ಬಾಬು ಬಿನ್ ಬಾಬಾಸಾಬ್ ಎಂಬುವರು ತಕರಾರು ಮಾಡುತ್ತಿದ್ದರಿಂದ ತಮ್ಮ ಗ್ರಾಮದ ಮುಖ್ಯಸ್ಥರು ಈಗ್ಗೆ ಸುಮಾರು ಒಂದು ವಾರದ ಹಿಂದೆ ಗ್ರಾಮದಲ್ಲಿ ನ್ಯಾಯಪಂಚಾಯ್ತಿ ಮಾಡಿ ಆ ಜಾಗದಲ್ಲಿದ್ದ ಮರವನ್ನು ಹರಾಜು ಮುಖಾಂತರ ಮಾರಾಟ ಮಾಡಲು ತಿಳಿಸಿದ್ದು, ಹರಾಜಿನಲ್ಲಿ ಸದರಿ ಮರವನ್ನು ತಾನು 1,900/- ರೂಗಳಿಗೆ ಕೊಂಡುಕೊಂಡಿರುತ್ತೇನೆ. ದಿನಾಂಕ: 01/05/2021 ರಂದು ಸಂಜೆ 5.10 ಗಂಟೆ ಸಮಯದಲ್ಲಿ ತನ್ನ ಗಂಡನಾದ ಉಬೇದುಲ್ಲಾ ರವರು ಸದರಿ ಮರದಲ್ಲಿನ ಸೊಪ್ಪನ್ನು ಮೇಕೆಗಳಿಗೆ ಹಾಕಲು ಮರದಲ್ಲಿ ಸೊಪ್ಪನ್ನು ಕೊಯ್ಯುತ್ತಿದ್ದಾಗ, ತಮ್ಮ ಗ್ರಾಮದ ವಾಸಿಗಳಾದ ಬಾಬು ಬಿನ್ ಬಾಬಾಸಾಬಿ, ಖಾದರ್ ಬಿನ್ ಬಾಬು, ದಾದಾಪೀರ್ ಬಿನ್ ಶಪೀವುಲ್ಲಾ, ಅಮನುಲ್ಲಾ ಬಿನ್ ಸನಾವುಲ್ಲಾ, ಮಹಬೂಬ್ ಬಿನ್ ಸಿಕಂದರ್, ಸಲೀಂ ಬಿನ್ ಸಮೀ ಮತ್ತು ಅಕ್ತರ್ ಬಿನ್ ಶಪೀವುಲ್ಲಾ ಎಂಬುವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ತನ್ನ ಗಂಡನ ಮೇಲೆ ಜಗಳ ತೆಗೆದು ಕೈಗಳಿಂದ ಹೊಡೆಯುತ್ತಿದ್ದಾಗ, ತಾನು ಜಗಳ ಬಿಡಸಲು ಬರುತ್ತಿದ್ದಾಗ ಮೇಲ್ಕಂಡವರು ತನ್ನನ್ನು ಅಕ್ರಮ ತಡೆ ಮಾಡಿ ಕೈಗಳಿಂದ ತನ್ನ ಮೈ-ಮೇಲೆ ಹೊಡೆದು ನೋವುಂಟು ಮಾಡಿ ಇನ್ನೊಂದು ಸಲ ಈ ಜಾಗ ಮತ್ತು ಮರದ ತಂಟೆಗೆ ಬಂದರೆ ನಿಮ್ಮನ್ನು ಬಿಡುವುದಿಲ್ಲ ಸಾಯಿಸಿಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಈ ವಿಚಾರದಲ್ಲಿ ಗ್ರಾಮದ ಹಿರಿಯರು ನ್ಯಾಯಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು, ಇದುವರೆಗೆ ಅವರು ನ್ಯಾಯಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಮೇಲ್ಕಂಡವರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.107/2021 ಕಲಂ. 87 ಕೆ.ಪಿ ಆಕ್ಟ್ :-

  ದಿನಾಂಕ:ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿದಾರರು ಮಾಲು ಮತ್ತು ಆರೋಪಿಗಳೊಂದಿಗೆಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,  ದಿನಾಂಕ: 13-04-2021 ರಂದು ಮದ್ಯಾಹ್ನ 1-00 ಗಂಟೆಯಲ್ಲಿ  ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಸಾಗಾನಹಳ್ಳಿ ಗ್ರಾಮದಲ್ಲಿ  ಸಾರ್ವಜನಿಕ ಕೆರೆಯ ಅಂಗಳದಲ್ಲಿ  ಯಾರೋ ಆಸಾಮಿಗಳು  ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿದ್ದಾರೆಂದು  ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪ್ರೊಬೆಷಿನರಿ ಸಬ್ ಇನ್ಸ್ ಪೆಕ್ಟರ್ ಮುತ್ತುರಾಜು  ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-166 ಸಂಪಂಗಿರಾಮಯ್ಯ, ಹೆಚ್.ಸಿ-171 ಬಾಬು.ಸಿ, ಹೆಚ್.ಸಿ-170 ಜೂಲಪ್ಪ, ಎನ್, ಪಿ.ಸಿ-512 ರಾಜಶೇಖರ, ಪಿ.ಸಿ-518 ಆನಂದ, ಪಿ.ಸಿ-246 ಸಿಕಂದರ್ ಮುಲ್ಲಾ, ಪಿ.ಸಿ-433 ಬಾಬಾಜಾನ್, ಪಿ.ಸಿ-381 ಜಗದೀಶ, ಪಿ.ಸಿ-281 ಗುರುಸ್ವಾಮಿ, ಪಿ.ಸಿ-426 ಲೋಹಿತ್, ಜೀಪಿನ ಚಾಲಕ .ಪಿ.ಸಿ-143 ಮಹೇಶ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ಹಾಗೂ ಸಿಬ್ಬಂದಿಯವರ ದ್ವಿ ಚಕ್ರ ವಾಹನಗಳಲ್ಲಿ ಸಾಗಾನಹಳ್ಳಿ ಗ್ರಾಮಕ್ಕೆ ಹೋಗಿ  ಸ್ವಲ್ಪ ದೂರದಲ್ಲಿ   ಸರ್ಕಾರಿ ವಾಹನವನ್ನು ಮತ್ತು ಸಿಬ್ಬಂದಿಯವರ ದ್ವಿ ಚಕ್ರ ವಾಹನಗಳನ್ನು ನಿಲ್ಲಿಸಿ  ಮರೆಯಲ್ಲಿ ನಿಂತು ನೋಡಲಾಗಿ  ಸಾರ್ವಜನಿಕ  ಕೆರೆಯ  ಅಂಗಳದಲ್ಲಿ  ಜನರು ಗುಂಪಾಗಿ ಕುಳಿತುಕೊಂಡು  ಅಂದರ್ ಗೆ 100 ರೂ, ಬಾಹರ್ ಗೆ 100 ರೂ  ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು  ಪಂಚರ ಸಮಕ್ಷಮದಲ್ಲಿ  ನಾನು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಸುತ್ತುವರೆದು ಕುಳಿತಿದ್ದವರನ್ನು  ಹಿಡಿದುಕೊಂಡು ವಿಚಾರಿಸಲಾಗಿ 1) ವೇಣುಗೋಪಾಲ್ ಬಿನ್ ಆಂಜಿನಪ್ಪ, 34 ವರ್ಷ, ಉಪ್ಪಾರರು, ಕೂಲಿ ಕೆಲಸ, ಸಾಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 2) ಚಂದ್ರಶೇಖರ್ ಬಿನ್ ಮೈಲಪ್ಪ, 44 ವರ್ಷ, ಸಾದರು, ಜಿರಾಯ್ತಿ, ಸಾಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 3) ಕಂಬಣ್ಣ  ಬಿನ್ ಲೇಟ್ ಗಿಡ್ಡಪ್ಪ, 52 ವರ್ಷ, ನಾಯಕರು, ಕೂಲಿ, ಬೈಯಪ್ಪನಹಳ್ಳಿ ಗ್ರಾಮ,  ಅಕ್ಕಿಋಆಮಪುರ ಪಂಚಾಯ್ತಿ, ಕೊರಟಗೆರೆ ತಾಲ್ಲೂಕು, 4) ನರಸಿಂಹಪ್ಪ ಬಿನ್ ಸಂಜೀವಪ್ಪ, 35 ವರ್ಷ, ಆದಿಕರ್ನಾಟಕ , ಕೂಲಿ, ಸಾಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 5) ಬಾಲಕೃಷ್ಣ ಬಿನ್ ವೆಂಕಟೇಶಪ್ಪ, 30 ವರ್ಷ, ಬಲಜಿಗರು, ಕೂಲಿ, ಸಾಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 6) ನಾಗೇಶ ಬಿನ್ ನಾರಾಯಣಪ್ಪ, 39 ವರ್ಷ, ಕುರುಬರು, ಕೂಲಿ, ಸಾಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 7) ರವಿಕುಮಾರ್  ಬಿನ್ ಗಂಗಪ್ಪ, 26 ವರ್ಷ, ಕುರುಬರು, ಕೂಲಿ, ಸಾಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 8) ರಾಮಕೃಷ್ಣಪ್ಪ ಬಿನ್ ಆಂಜಿನಪ್ಪ, 65 ವರ್ಷ, ಬಲಜಿಗರು, ಜಿರಾಯ್ತಿ, ಸಾಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 9) ಶ್ರೀರಾಮಪ್ಪ ಬಿನ್ ಬಾಲಪ್ಪ, 60 ವರ್ಷ, ಸಾದರ ಗೌಡರು, ಜಿರಾಯ್ತಿ, ಸಾಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 10) ನರಸಿಂಹಮೂರ್ತಿ ಬಿನ್ ಗಂಗಾಧರಪ್ಪ, 22 ವರ್ಷ, ಉಪ್ಪಾರರು, ಕೂಲಿ, ಸಾಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 11) ವೆಂಕಟೇಶ  ಬಿನ್ ಚಿಕ್ಕಣ್ಣ, 45 ವರ್ಷ, ಕುರುಬರು, ಜಿರಾಯ್ತಿ, ಸಾಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 12) ನಾಗರಾಜಪ್ಪ  @ ಆವುಲಪ್ಪನವರ ನಾಗರಾಜಪ್ಪ ಬಿನ್ ಲೇಟ್ ನಾಗಣ್ಣ, 62 ವರ್ಷ , ಸಾದರು, ಕೂಲಿ, ಸಾಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 13) ನಾರಾಯಣಪ್ಪ ಬಿನ್ ಲೇಟ್  ನಾಗಪ್ಪ, 35 ವರ್ಷ, ಆದಿ ಕರ್ನಾಟಕ, ಜಿರಾಯ್ತಿ, ಎನ್. ಗುಂಡ್ಲಹಳ್ಳಿ ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು, 14) ನಾರಾಯಣಪ್ಪ ಬಿನ್ ಲೇಟ್ ಹನುಮಂತಪ್ಪ, 45 ವರ್ಷ, ಒಕ್ಕಲಿಗರು, ವ್ಯಾಪಾರ, ಸಾಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಇನ್ನು ಕೆಲವರು ಸ್ಥಳದಿಂದ ಓಡಿಹೋಗಿರುತ್ತಾರೆ.  ಸ್ಥಳದಲ್ಲಿ ಬಿದ್ದಿದ್ದ ಪಣಕ್ಕಿಟ್ಟಿದ್ದ ಹಣ  ಎಣಿಸಲಾಗಿ  22,830/- ರೂ ಹಣ , 52 ಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲ  ಇರುತ್ತೆ.  ಸ್ಥಳದಲ್ಲಿ  ಮದ್ಯಾಹ್ನ 1-30  ಗಂಟೆಯಿಂದ 2-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ 1) 22,830/- ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು , ಒಂದು ಪ್ಲಾಸ್ಟಿಕ್ ಚೀಲವನ್ನು  ವಶಪಡಿಸಿಕೊಂಡು, ಠಾಣೆಗೆ ಮದ್ಯಾಹ್ನ 3-00  ಗಂಟೆಗೆ  ವಾಪಸ್ಸು ಬಂದಿದ್ದು,  ಆರೋಪಿಗಳು, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ  ಕಲಂ: 87 ಕೆ.ಪಿ.ಆಕ್ಟ್ – 1963 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ ಎನ್.ಸಿ.ಆರ್. ನಂ.203/2021 ರಂತೆ ದಾಖಲು ಮಾಡಿರುತ್ತೆ.  ನಂತರ ಇದು ಅಸಂಜ್ಞೆಯ ಅಪರಾದವಾದ್ದರಿಂದ ಘನನ್ಯಾಯಾಲಯದ ಅನುಮತಿ ಪಡೆದು ಮೇಲ್ಕಂಡ ಕಲಂ ರಿತ್ಯಾ ಪ್ರಕರಣ ದಾಖಲಿಸಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.108/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

  ದಿನಾಂಕ 04/05/2021 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀ ಸುಧಾಕರ ಬಿನ್ ನರಸಿಂಹಪ್ಪ ,   39 ವರ್ಷ, ನಾಯಕರು, ಸೆಕ್ಯೂರಿಟಿ ಕೆಲಸ,  ವಾಸ ಚಿಕ್ಕಕುರಗೋಡು  ಗ್ರಾಮ, ಗೌರಿಬಿದನೂರು ತಾಲ್ಲೂಕು. ಹಾಲಿ ವಾಸ ಬ್ಯಾಂಕ್ ಸರ್ಕಲ್, ಬಾಶೆಟ್ಟಿಹಳ್ಳಿ ಗ್ರಾಮ, ದೊಡ್ಡಬಳ್ಳಾಪುರ  ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ತಾನು ಮತ್ತು  ತನ್ನ ಹೆಂಡತಿ ಶ್ರೀಮತಿ ಬಾಗ್ಯಮ್ಮ ತನ್ನ ಬಾಬತ್ತು ಕೆ.ಎ-50-ಎಸ್-6696 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ  ಬಾಶೆಟ್ಟಹಳ್ಳಿ ಗ್ರಾಮದಿಂದ ಆಂದ್ರದ ಚಿಲಮತ್ತೂರು ಗ್ರಾಮಕ್ಕೆ ಹೋಗಲು ದಿನಾಂಕ:22/04/2021 ರಂದು ಬೆಳಿಗ್ಗೆ ಸುಮಾರು 11-30 ಗಂಟೆಗೆ ಗೌರಿಬಿದನೂರು ತಾಲ್ಲೂಕು ವಾಟದಹೊಸಹಳ್ಳಿಯಿಂದ  ನಗರಗೆರೆ ಕಡೆಗೆ ಹೋಗುವ ರಸ್ತೆಯ ಕೆರೆಒಳಗಿನಹಳ್ಳಿ  ಬಳಿ ತಿರುವ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದರು ಕಡೆಯಿಂದ ಬಂದ ಕೆ.ಎ-40-ಇಡಿ- 7751 ನೊಂದಣೀ ಸಂಖ್ಯೆ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ  ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ್ದರಿಂದ ದ್ವಿಚಕ್ರ ವಾಹನ ಜಖಂಗೊಂಡು ತಾನು ಮತ್ತು ತನ್ನ ಹೆಂಡತಿ ಕೆಳಗೆ ಬಿದ್ದು ತನಗೆ  ಬಲಭುಜಕ್ಕೆ ನೋವುಂಟು ಗಾಯವಾಗಿರುತ್ತೆ. ಹಿಂಬದಿಯಲ್ಲಿ ಕುಳಿತಿದ್ದ ತನ್ನ ಹೆಂಡತಿಗೆ ಬಲಕಾಲು, ಬೆರಳುಗಳಿಗೆ ರಕ್ತಗಾಯವಾಗಿದ್ದು, ಬಲಪಾದಕ್ಕೆ  ಬಲಕೈ ಮುಂಗೈಗೆ ಊತಗಾಯ ಮತ್ತು ರಕ್ತಗಾಯವಾಗಿರುತ್ತದೆ. ಅಪಘಾತಪಡಿಸಿ  ಕೆ.ಎ-40-ಇಡಿ- 7751 ನೊಂದಣೀ ಸಂಖ್ಯೆ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಗಾಯಗಳಾಗಿದ್ದ ತನ್ನ ಹೆಂಡತಿಯನ್ನು ಯಾವುದೋ ಒಂದು ವಾಹನದಲ್ಲಿ ಕರೆದುಕೊಂಡು ಬಂದು ಗೌರಿಬಿದನೂರು ಸೋಮೆಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತೇನೆ. ತನಗೆ  ಬಲಭುಜಕ್ಕೆ ನೋವುಂಟು ಗಾಯವಾಗಿದ್ದರಿಂದ ತಾನು ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿರುವುದಿಲ್ಲ. ಆಸ್ಪತ್ರೆಯಲ್ಲಿ ತನ್ನ ಹೆಂಡತಿಗೆ ಚಿಕಿತ್ಸೆ ಕೊಡಿಸಿ ನೋಡಿಕೊಳ್ಳುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು,  ಅಪಘಾತಪಡಿಸಿ   ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ  ಕೆ.ಎ-40-ಇಡಿ- 7751 ನೊಂದಣೀ ಸಂಖ್ಯೆ ದ್ವಿಚಕ್ರ ವಾಹನದ ಸವಾರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರು.

 

8. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.83/2021 ಕಲಂ. 34,323,324  ಐ.ಪಿ.ಸಿ :-

  ದಿನಾಂಕ: 03.05.2021 ರಂದು ಪಿರ್ಯಾದಿಧಾರರಾದ ಇಮ್ರಾನ್ ರವರು ಬೆಳಿಗ್ಗೆ 10-30 ಗಂಟಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ನಮ್ಮ ತಂದೆ ತಾಯಿಯವರಿಗೆ ಮೂರು ಜನ ಮಕ್ಕಳಿದ್ದು, ನಾನು ಒಂದನೇ ಯವನಾಗಿರುತ್ತೇನೆ. ಎರಡನೇಯವರು ಮಹಮದ್  ಜಬೀವುಲ್ಲ, ಮೂರನೇಯವರು ಮುಭಾರಖ್ ಆಗಿರುತ್ತೇವೆ. ನನ್ನ ತಂಗಿ ಮುಭಾರಕ್ ರವರನ್ನು ನಮ್ಮ ಗ್ರಾಮದ ಅರವಿಂದ ಎಂಬುವರು ಈಗ್ಗೆ ಒಂದು ವರ್ಷದ ಹಿಂದೆ ಚುಡಾಯಿಸುತ್ತಿದ್ದುದ್ದರಿಂದ ನಾನು ಮತ್ತು ನಮ್ಮ ಗ್ರಾಮದ ಕೆಲವು ಹಿರಿಯರು ಸೇರಿ ಬುದ್ದಿವಾದ ಹೇಳಿದ್ದೆವು.  ಆದ್ದರಿಂದ ಅರವಿಂದನು ನನ್ನ ಮೇಲೆ ದ್ವೇಶವನ್ನು ಇಟ್ಟುಕೊಂಡು ದಿ:02.05.2021 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಬಳಿ ನಾನು ಮತ್ತು ನನ್ನ ತಮ್ಮ ಮುಜಾಹಿದ್, ಸ್ನೇಹಿತರಾದ ಪ್ರತಾಪ್, ಸುಭಾನ್ ರವರು ಇದ್ದಾಗ ಅರವಿಂದ ಬಿನ್ ಆದೆಪ್ಪ, 20 ವರ್ಷ, ನಾಯಕರು, ಮತ್ತು ಭೂಪತಿ ಬಿನ್ ಲೇಟ್  ಗಂಗಪ್ಪ, 19 ವರ್ಷ, ನಾಯಕರು ಎಂಬುವರು ಬಂದು ಏಕಾಏಕಿ ನಮ್ಮನ್ನು ಗಲಾಟೆ ಮಾಡಿ ಅರವಿಂದನು ಮುಜಾಹಿದ್ ಗೆ ದೊಣ್ಣೆಯಿಂದ ಹೊಡೆದು ರಕ್ತಗಾಯವನ್ನುಂಟು ಮಾಡಿದನು. ಗಲಾಟೆಯಾಗುತ್ತಿದ್ದುದ್ದನ್ನು ಕೇಳಿಸಿಕೊಂಡ ಅರವಿಂದ ರವರ ತಂದೆ ಆದೆಪ್ಪ ಬಿನ್ ರಂಗಪ್ಪ, 48 ವರ್ಷ, ನಾಯಕರು ರವರು ಬಂದು ನನಗೆ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದನು. ಸುಭಾನ್ ಮತ್ತು ಪ್ರತಾಪನಿಗೆ ಕೈಗಳಿಂದ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾರೆ. ಆಗ ನಮ್ಮ ಗ್ರಾಮಸ್ಥರು ಮತ್ತು ನಮ್ಮ ತಂದೆ ತಾಯಿಯವರು ಬಂದು ಗಾಯಗಳಾಗಿದ್ದ ನಮ್ಮನ್ನು  ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಆಸ್ಪತ್ರೆಗೆ ಬಂದು ಚಿಕಿತ್ಸೆಯನ್ನು ಪಡೆದುಕೊಂಡಿರುತ್ತೇವೆ. ನಮ್ಮನ್ನು ಕಲ್ಲು ಮತ್ತು ದೊಣ್ಣೆಯಿಂದ ಹೊಡೆದು ರಕ್ತಗಾಯ ಮತ್ತು ಮೂಗೇಟುಗಳನ್ನುಂಟು ಮಾಡಿರುವ ಮೇಲ್ಕಂಢರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿದೆ ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿಯನ್ನು ದಾಖಲಿಸಿರುತ್ತೆ.

 

9. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.84/2021 ಕಲಂ. 34,323,324  ಐ.ಪಿ.ಸಿ :-

  ದಿನಾಂಕ: 03.05.2021 ರಂದು ಪಿರ್ಯಾದಿಧಾರರಾದ ಅರವಿಂದ್  ರವರು ಬೆಳಿಗ್ಗೆ 11-30 ಗಂಟಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ನಾನು ಮತ್ತು ನಮ್ಮ ಗ್ರಾಮದ ಭೂಪತಿ ರವರು ದಿ:02.05.2021 ರಂದು ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಂಬಾಗ ನಡೆದುಕೊಂಡು ಹೋಗುತ್ತಿದ್ದೆವು. ಆಗ ಶಾಲೆಯ ಬಳಿ ಇದ್ದ ನಮ್ಮ ಗ್ರಾಮದ ಇಮ್ರಾನ್ ಬಿನ್ ಮಹಬೂಬ್ ಪೀರ್, 21 ವರ್ಷ ಮತ್ತು ಅವನ ಸ್ನೇಹಿತರಾದ ಮುಜಾಹಿದ್ ಬಿನ್ ಮಹಬೂಬ್ ಪೀರ್, 20 ವರ್ಷ,  ಸುಭಾನ್ ಬಿನ್ ಮಹಬೂಬ್ ಪೀರ್, 19 ವರ್ಷ,  ಪ್ರತಾಪ್ ಬಿನ್ ರಾಜಪ್ಪ, 20 ವರ್ಷ, ರವರು  ಇದ್ದಕ್ಕಿದ್ದಂತೆ ಏಕಾಏಕಿ ನಮ್ಮನ್ನು ಅವಾಚ್ಯ ಶಬ್ದಗಳಿಂಧ ಬೈದು, ಕೈಗಳಿಂದ ಮತ್ತು ದೊಣ್ಣೆಗಳಿಂದ ಹೊಡೆದರು ನನಗೆ ಹಣೆಗೆ ಮತ್ತು ಕೈಗೆ ರಕ್ತ ಗಾಯಗಳಾಗಿರುತ್ತೆ. ನಂತರ ಇಮ್ರಾನ್ರವರು ಇನ್ನು ಮುಂದೆ ನನ್ನ ತಂಗಿಯ ಕಡೆ ನೋಡಿದರೆ ಹಾಗು ಪ್ರೀತಿಸುತ್ತೇನೆಂದು ಹೇಳಿದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಹೇಳಿ ನನ್ನನ್ನು ಗಲಾಟೆ ಮಾಡುತ್ತಿದ್ದಾಗ ನನ್ನ ತಂದೆ ಆದೆಪ್ಪನವರು ಬಂದು ಮೇಲ್ಕಂಢವರಿಂದ ನನ್ನನ್ನು ಬಿಡಿಸುತ್ತಿದ್ದಾಗ ನಮ್ಮ ತಂದೆ ಆದೆಪ್ಪನನ್ನು ಸಹ ಹೊಡೆದು, ಮೂಗೇಟುಗಳನ್ನುಂಟು ಮಾಡಿದರು, ಅಷ್ಟರಲ್ಲಿ ನಮ್ಮ ಗ್ರಾಮದ ಹರೀಶ್ ಮತ್ತು ಇತರರು ಬಂದು ಬಂದು ಗಲಾಟೆಯನ್ನು ಬಿಡಿಸಿರುತ್ತಾರೆ. ನಾನು ಈಗ್ಗೆ ಸುಮಾರು 2 ವರ್ಷಗಳ ಹಿಂದೆ ಇಮ್ರಾನ್ ರವರ ತಂಗಿ ಮುಭಾರಕ್ ಎಂಬುವರನ್ನು ಪ್ರೀತಿಸುತ್ತಿದ್ದೆನು. ಇಮ್ರಾನ್ ಮತ್ತು ಇತರರು 1 ವರ್ಷದ ಹಿಂದೆ ನನ್ನನ್ನು ಬೈದು ಮುಭಾರಕ್ ರವರನ್ನು ಪ್ರೀತಿಸದಂತೆ ಬುದ್ದಿವಾದ ಹೇಳಿ ಬೈದಿದ್ದರು. ಹಾಗೂ ಅಂದಿನಿಂದ ಇಮ್ರಾನ್ ರವರು ನನ್ನ ಮೇಲೆ ಹಗೆ ಸಾದಿಸುತ್ತಿದ್ದರು. ನಾನು ಮುಭಾರಕ್ ಳನ್ನು ಪ್ರೀತಿಸುತ್ತಿದ್ದೇನೆಂದು ಪುನಃ ನನ್ನ ಮೇಲೆ ಗಲಾಟೆ ಮಾಡಿ, ಹೊಡೆದು ಬಿಡಿಸಲು ಬಂದ ಭೂಪತಿ ಬಿನ್ ಗಂಗಪ್ಪ ಹಾಗೂ ನನ್ನ ತಂದೆ ಆದೆಪ್ಪನನ್ನು ಸಹ ಹೊಡೆದು ಮೂಗೇಟುಗಳುಂಟು ಮಾಡಿರುತ್ತಾರೆ. ಆದ್ದರಿಂದ ನನ್ನನ್ನು ಮತ್ತು ನಮ್ಮ ತಂದೆ ಆದೆಪ್ಪ ಹಾಗೂ ಭೂಪತಿಯನ್ನು ದೊಣ್ಣೆಗಳಿಂದ ಮತ್ತು ಕೈಗಳಿಂದ ಹೊಡೆದು ರಕ್ತ ಗಾಯಗಳನ್ನು ಹಾಗೂ ಮೂಗೇಟುಗಳನ್ನುಂಟು ಮಾಡಿರುವ ಮೇಲ್ಕಂಢವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

10. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.85/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:04/05/2021 ರಂದು ಬೆಳಿಗ್ಗೆ 9-30 ಗಂಟೆಗೆ ನ್ಯಾಯಾಲಯದ ಪಿಸಿ-89 ರವರು ಠಾಣಾಎಗೆ ಹಾಜರಾಗಿ  ಠಾಣೆಯ NCR NO-106/2021ರಲ್ಲಿ ಘನ ನ್ಯಾಯಾಲಯದಿಂದ ಆದೇಶ ಹಾಜರುಪಡಿಸಿದ್ದು ಆದೇಶದ ಸಾರಾಂಶವೇನೆಂದರೆ:ದಿನಾಂಕ:01/05/2021 ರಂದು  ಸಾಯಂಕಾಲ 4-00ಗಮಟೆಯಲ್ಲಿ ಎ,ಎಸ್,ಐ ನಂಜುಂಡಶರ್ಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ:ಗುಡಿಬಂಡೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಎಸ್.ಐ, ನಂಜುಂಡಶರ್ಮ ಆದ ತಾನು ಈ ಮೂಲಕ ನಿಮಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ:01.05.2021 ರಂದು ಮಧ್ಯಾಹ್ನ 2-20 ಗಂಟೆಯಲ್ಲಿ ಸಾರ್ವಜನಿಕರು ತನಗೆ ಪೋನ್ ಮಾಡಿ, ಗುಡಿಬಂಡೆ ಟೌನಿನ ಸಂಪಂಗಿ ಸರ್ಕಲ್ ಬಳಿ ಇರುವ ಗಂಗಾಧರಪ್ಪ ಬಿನ್ ಕೃಷ್ಣಪ್ಪನವರ ಮನೆಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ತಾನು ಸಿಬ್ಬಂದಿಯಾದ ಹೆಚ್.ಸಿ. 102, ಆನಂದರವರನ್ನು ಕರೆದುಕೊಂಡು ಸಂಪಂಗಿ ಸರ್ಕಲ್ ಗೆ ಹೋಗಿ ಪಂಚರನ್ನು ಬರಮಾಡಿಕೊಂಡು ಸ್ಥಳಕ್ಕೆ 2-30 ಗಂಟೆಯಲ್ಲಿ ಪಂಚರೊಂದಿಗೆ ಹೋಗಿ ಮರೆಯಲ್ಲಿ ನಿಂತು ಗಂಗಾಧರಪ್ಪನವರ ಮನೆಯ ಬಳಿ ನೋಡಲಾಗಿ, ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಲೋಟದಲ್ಲಿ ಹಾಕುತ್ತಾ, ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಪಂಚರೊಂದಿಗೆ ನಾವುಗಳು ಸದರಿಯವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು. ಆ ಪೈಕಿ ಒಬ್ಬನನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ ಗಂಗಾಧರಪ್ಪ ಬಿನ್ ಗೆದ್ದೋಳ್ಳ ಕೃಷ್ಣಪ್ಪ, ಬಲಜಿಗರು, ಜಿರಾಯ್ತಿ, 1 ನೇ ವಾರ್ಡ, ಸಂಪಂಗಿ ಸರ್ಕಲ್, ಗುಡಿಬಂಡೆ ಟೌನ್ ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡಲು ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದು ಇಲ್ಲವೆಂದು ತಿಳಿಸಿದನು. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ ಸದರಿ ಸ್ಥಳದಲ್ಲಿ 1) ಹೈ ವಾಡ್ರ್ಸ ಕಂಪನಿಯ 90 ಎಮ್, ಎಲ್ ಅಳತೆಯ ಓಪನ್ ಮಾಡದೇ ಇರುವಂತಹವು 10 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ 90 ಎಮ್, ಎಲ್ ಅಳತೆಯ ಒಟ್ಟು 3 ಖಾಲಿ ಪಾಕೆಟ್ ಗಳಿದ್ದವು. 3) ಮದ್ಯವನ್ನು ಕುಡಿದು ಬಿಸಾಡಿರುವಂತಹ 4 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಒಂದು ಖಾಲಿ ವಾಟರ್ ಬಾಟಲ್ ಇದ್ದವು. ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು 900 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 351/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 2-30 ಗಂಟೆಯಿಂದ 3-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮೇಲ್ಕಂಡ ಆರೋಪಿ & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮಧ್ಯಾಹ್ನ 3-45  ಗಂಟೆಗೆ ಠಾಣೆಗೆ ಹಾಜರಾಗಿ, ವರದಿಯನ್ನು ಸಿದ್ದ ಪಡಿಸಿ ಮದ್ಯಾಹ್ನ 4-00 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ ಮೇರೆಗೆ ಪ್ರ.ವ.ವರದಿ.

 

11. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.82/2021 ಕಲಂ. 324,504,506,34 ಐ.ಪಿ.ಸಿ:-

  ದಿನಾಂಕ:04/05/2021 ರಂದು ಬೆಳಿಗ್ಗೆ 9:30 ಗಂಟೆಗೆ ಪಿರ್ಯಾದಿದಾರರಾದ ಶ್ರೀನಿವಾಸ ಬಿನ್ ಗಂಗಪ್ಪ 40 ವರ್ಷ,ಆದಿ ಕರ್ನಾಟಕ ಜನಾಂಗ,ಪೆದ್ದರೆಡ್ಡಿನಾಗೇನಹಳ್ಳಿ,ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು, ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 02/05/2021 ರಂದು ಸಂಜೆ 5:00 ಗಂಟೆ ಸಮಯದಲ್ಲಿ ನನ್ನ ಹೆಂಡತಿ ಶಿಲ್ಪ 30 ವರ್ಷ ಹಾಗೂ ನನ್ನ ಮಕ್ಕಳು, ಪೆದ್ದರೆಡ್ಡಿನಾಗೇನಹಳ್ಳಿ ಪಕ್ಕದ ಬೀಡಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ, ಅದೇ ಸಮಯದಲ್ಲಿ ಮಂಚೇನಹಳ್ಳಿ ಹೋಬಳಿ ರಾಯನಕಲ್ಲು ಗ್ರಾಮದ ನಾಯಕ ಜನಾಂಗದ ತಿಪ್ಪಪ್ಪ ಎಂಬುವರು  ಹಸುಗಳನ್ನು ಮೇಯಿಸುತ್ತಿದ್ದ ಸ್ಥಳಕ್ಕೆ ಬಂದು ನನ್ನ ಹೆಂಡತಿ ಮತ್ತು ಮಕ್ಕಳಿಗೆ ಯಾಕೇ ಹಸುಗಳನ್ನು ಬೀಡಿನಲ್ಲಿ ಬಿಟ್ಟಿರುವುದು, ಎಂದು ಅವಾಚ್ಯ ಶಬ್ದಗಳಿಂದ ಬೈದು ಹಾಗೂ ಕೆಟ್ಟ ಪದಗಳನ್ನು ಉಪಯೋಗಿಸಿರುತ್ತಾನೆ. ಮತ್ತು ಹಸುಗಳನ್ನು ಮನೆಗೆ ಹೊಡೆದುಕೊಂಡು  ಬಂದು ಬಿಟ್ಟರು. ಇದೇ ದಿನ ಸಂಜೆ 6:30 ಗಂಟೆಯಲ್ಲಿ ನಾನು ಹಾಲು ಹಿಂಡುಕೊಳ್ಳುತ್ತಿದ್ದಾಗ ತಿಪ್ಪಪ್ಪ ಮನೆಯ ಹತ್ತಿರ ಬಂದು ಗಲಾಟೆ ಮಾಡಿದ ನಂತರ ತಿಪ್ಪಪ್ಪ ಊರಿಗೆ ಪೋನ್ ಮಾಡಿ ಅವರ ಸಂಬಂಧಿಕರಾದ ಅಶ್ವತ್ಥ ಬಿನ್ ನರಸಿಂಹಪ್ಪ ಮತ್ತು ಬಾಲಪ್ಪ ರವರನ್ನು ಕರೆಯಿಸಿ ಮತ್ತೆ ಗಲಾಟೆ ಮಾಡಿ ತಿಪ್ಪಪ್ಪ ನನಗೆ ಕಲ್ಲಿನಿಂದ ಹೊಡೆದು ಮೂಗೇಟು ಪಡಿಸಿದ. ಇದರಿಂದ ನನಗೆ ಬಲಕೈ ಎತ್ತಲು, ಇಳಿಸಲು ಆಗುತ್ತಿಲ್ಲ. ಅಶ್ವತ್ಥ ಎಂಬುವವನು ನೀನು ನಮ್ಮ ಗ್ರಾಮದ ಪಕ್ಕದ ದಾರಿಯಿಂದ ಒಡಾಡಿದರೇ ನಿನ್ನ ಕೈ ಕಾಲು ಮುರಿದು ಹಾಕಿಸುತ್ತೇನೆಂದು, ನನಗೆ ಪ್ರಾಣ ಬೆದರಿಕೆ ಹಾಕಿರುತ್ತಾನೆ. ನಾನು ಪ್ರತಿದಿನ ಬೆಳಗ್ಗೆ ಸಂಜೆ ರಾಯನಕಲ್ಲು ಗ್ರಾಮದ ಡೈರಿಗೆ ಹಾಲು ತೆಗೆದುಕೊಂಡು ಹೋಗುವುದು. ನಾನು ಒಬ್ಬಂಟಿಗ ನನಗೆ ಇವರಿಂದ ಪ್ರಾಣಪಾಯದ ಬೀತಿ ಇರುತ್ತೆ. ಆದ್ದರಿಂದ ನಮ್ಮ ಮೇಲೆ ವಿನಾಕಾರಣ ಗಲಾಟೆ ಮಾಡಿ ಮೂಗೇಟು ಉಂಟು ಮಾಡಿ ಬೆದರಿಕೆ ಹಾಕಿದವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಪ್ರ.ವ.ವರದಿ.

 

12. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.83/2021 ಕಲಂ. 279,337,304(A)  ಐ.ಪಿ.ಸಿ:-

  ದಿನಾಂಕ:04/05/2021 ರಂದು ಮದ್ಯಾಹ್ನ 3.15 ಗಂಟೆಗೆ ಪಿರ್ಯಾದಿದಾರರಾದ ವೆಂಕಟೇಶ ಬಿನ್ ಆವುಲಪ್ಪ, 41 ವರ್ಷ, ಬೋವಿ ಜನಾಂಗ, ಇಂದಿರಾನಗರ,ತೊಂಡೇಬಾವಿ ಹೋಬಳಿ, ಗೌರೀಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:04/05/2021 ರಂದು ಬೆಳಗ್ಗೆ ನಾನು ಮತ್ತು ನಮ್ಮ ತಂದೆ ಆವುಲಪ್ಪರವರು ನಮ್ಮ ಗ್ರಾಮದ ನರಸಿಂಹರವರ ಬಾಬತ್ತು ಕೆ.ಎ-42-ಎ-6168 ಆಟೋದಲ್ಲಿ ಅಲ್ಲೀಪುರ ಗ್ರಾಮಕ್ಕೆ ನಮ್ಮ ತಂದೆಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ಸ್ಪತ್ರೆಗೆ ತೋರಿಸಲು ಹೋಗಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಮೆಡಿಕಲ್ ಶಾಪ್ ನಲ್ಲಿ ಮಾತ್ರೆಗಳನ್ನು ತೆಗೆದುಕೊಂಡು ಪುನಃ ಅದೇ ಆಟೋದಲ್ಲಿ ನಮ್ಮ ಗ್ರಾಮಕ್ಕೆ ಬರಲು ಸುಮಾರು 11.45 ಗಂಟೆ ಸಮಯದಲ್ಲಿ ಅಲ್ಲೀಪುರ ಬಿಟ್ಟು ಬರುತ್ತಿದ್ದಾಗ ಬೇವಿನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಬಳಿ ಬರುವಷ್ಟರಲ್ಲಿ  ತೊಂಡೇಬಾವಿ ಕಡೆಯಿಂದ ಬಂದ ಕೆ.ಎ-51.ಪಿ-8420 ಮಾರುತಿ ಓಮಿನಿ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾವು ಹೋಗುತ್ತಿದ್ದ ಆಟೋಗೆ ಡಿಕ್ಕಿ ಪಡಿಸಿದ. ಇದರ ಪರಿಣಾಮ ನನಗೆ ಕೈಕಾಲಿಗೆ ಸಣ್ಣ ಪುಟ್ಟ ಗಾಯಗಳಾದವು, ಆಟೋದಲ್ಲಿದ್ದ ನಮ್ಮ ತಂದೆ ಆವುಲಪ್ಪರವರ ತಲೆಗೆ ತೀವ್ರತರವಾದ ರಕ್ತಗಾಯಗಳಾದವು ಹಾಗೂ ಕೈಕಾಲಿಗೆ ಮೂಳೆ ಮುರಿತದ ಗಾಯಗಳಾದವು. ಆಟೋ ಚಾಲನೆ ಮಾಡುತ್ತಿದ್ದ ಚಾಲಕನಿಗೂ ಸಹ ರಕ್ತಗಾಯಗಳಾದವು. ಎರಡೂ ವಾಹನಗಳು ಜಖಂ ಆಗಿದ್ದು, ಅಷ್ಟರಲ್ಲಿ ಯಾರೋ 108 ಆಂಬುಲೆನ್ಸ್ ಗೆ ಕರೆಮಾಡಿದ್ದು, ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ನಮ್ಮ ತಂದೆ ಅಪಘಾತವಾಗಿದ್ದ ಗಾಯಗಳ ದೆಸೆಯಿಂದ ಮೃತಪಟ್ಟಿರುತ್ತಾರೆ. ನನಗೆ ಸಣ್ಣ ಪುಟ್ಟ ಗಾಯಗಳಾದ ಕಾರಣ ಯಾವುದೇ ಚಿಕಿತ್ಸೆ ಪಡೆಯಲಿಲ್ಲ. ಮೃತದೇಹವನ್ನು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿದ್ದು, ಅಪಘಾತಕ್ಕೆ ಕಾರಣನಾದ ಕೆ.ಎ-51-ಪಿ-8420 ಓಮಿನಿ ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

ಇತ್ತೀಚಿನ ನವೀಕರಣ​ : 04-05-2021 05:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080