ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.51/2021 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ;03.04.2021 ರಂದು ಮದ್ಯಾಹ್ನ 15:15 ಗಂಟೆಗೆ ಶ್ರೀ ಸೋಮಶೇಖರ್ ASI ರವರು ನೀಡಿದ ದೂರಿನ ಸಾರಾಂಶವೆನೆಂದರೆ ತಾನು ಈಗ್ಗೆ ಒಂದು ವರ್ಷದಿಂದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ:30.03.2021 ರಂದು ತನಗೆ ಪಿ.ಎಸ್.ಐ ಸಾಹೇಬರು ಹೈವೇ ಪೆಟ್ರೋಲಿಂಗ್ ಕರ್ತವ್ಯಕ್ಕೆ ನೇಮಿಸಿ ಕಳುಹಿಸಿದ್ದು, ಅದರಂತೆ ತಾನು ಬೆಳಿಗ್ಗೆ 8-00 ಗಂಟೆಯಿಂದ ಹೈವೇ ಪೆಟ್ರೋಲಿಂಗ್ ಕರ್ತವ್ಯವನ್ನು ಎನ್ ಹೆಚ್ 44 ರಸ್ತೆಯಲ್ಲಿ ನಿರ್ವಹಿಸಿ ರಾತ್ರಿ 8-40 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಕಡೆಗೆ ಬರಲು ಬರುತ್ತಿದ್ದಾಗ ಹೈದರಾಬಾದ್-ಚಿಕ್ಕಬಳ್ಳಾಪುರ ಎನ್ ಹೆಚ್ 44 ರಸ್ತೆಯ ಹುನೇಗಲ್ ಗೇಟ್ ಸಮೀಪ ಬರುತ್ತಿದ್ದಾಗ ಡಿವೈಡರ್ ಸಮೀಪ ಯಾರೋ ಸುಮಾರು 25 ರಿಂದ 30 ವರ್ಷ ವಯಸ್ಸಿನ ಅಪರಿಚಿತ ಗಂಡಸಿಗೆ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತದೆಂದು ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು ತಿಳಿಸಿದ್ದು  ಅದರಂತೆ ತಾನು ಸ್ಥಳಕ್ಕೆ ಹೋಗಿ ಗಾಯಾಳುವಿಗೆ ತಲೆಗೆ ತೀವ್ರ ಸ್ವರೂಪದ ರಕ್ತ ಗಾಯಗಳಾಗಿದ್ದು, 108 ಅಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು , ನಂತರ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಚಿಕಿತ್ಸೆ ಪಡೆಯುತ್ತಾ ದಿನಾಂಕ:02.04.2021 ರಂದು ಬೆಳಗಿನಜಾವ 3-45 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆಂದು ಸಿದ್ದಾಪುರ ಪೊಲೀಸ್ ಠಾಣೆಯಿಂದ ತಿಳಿಸಿರುತ್ತಾರೆ. ಮೃತನು ಅಪರಿಚಿತನಾಗಿದ್ದು, ಮೃತನ ಮತ್ತು ಅವನ ವಾರಸುದಾರರ ಪತ್ತೆ ಕಾರ್ಯವನ್ನು ಕೈಗೊಂಡಿದ್ದು, ಯಾವುದೇ ಉಪಯುಕ್ತ ಮಾಹಿತಿ ಸಿಕ್ಕಿರುವುದಿಲ್ಲ. ಆದ್ದರಿಂದ ಈ ದಿನ ತಡವಾಗಿ ಠಾಣೆಯಲ್ಲಿ ದೂರನ್ನು ನೀಡುತ್ತಿದ್ದು, ಮೃತನು ತನಗೆ ಅಪಘಾತದಲ್ಲಿ ಆಗಿರುವ ಗಾಯಗಳ ದೆಸೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಮೃತನನ್ನು ಮತ್ತು ಮೃತನ ವಾರಸುದಾರರನ್ನು ಮತ್ತು ಅಪಘಾತ ಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ವಾಹನವನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿದರ ಮೇರೆಗೆ ಈ ಪ್ರ,ವ,ವರದಿ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.52/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ;03.04.2021 ರಂದು ಸಂಜೆ 17:10 ಗಂಟೆಗೆ ಮಾನ್ಯ ಪಿ,ಎಸ್,ಐ ರವರು ಗ್ರಾಮಾಂತರ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:03.04.2021 ರಂದು ಸಂಜೆ 17;00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ರಾಮಗಾನಪರ್ತಿ ಗ್ರಾಮದ ವಾಸಿ ಶ್ರೀ ಮುನಿನಾರಾಯಣ ಬಿನ್ ವೆಂಕಟರವಣಪ್ಪ,32 ವರ್ಷ,ಬೋವಿ ಜನಾಂಗ, ಜಿರಾಯ್ತಿ ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ, ಈ ಬಗ್ಗೆ  ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15[ಎ] , 32[3] ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ,ವ,ವರದಿ.

 

3. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.52/2021 ಕಲಂ. 279,336 ಐ.ಪಿ.ಸಿ:-

          ದಿನಾಂಕ:-03/04/2021 ರಂದು ಸಂಜೆ 7-00 ಗಂಟೆಗೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಾನು ತನ್ನ ಬಾಬತ್ತು KA-03-ND-9236 ರ ಕಾರನ್ನು ಚಾಲನೆ ಮಡಿಕೊಂಡು ತಮ್ಮ ಗ್ರಾಮಕ್ಕೆ ಹೋಗಲು ದಿನಾಂಕ:-03/04/2021 ರಂದು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ಬೆಂಗಳೂರು - ಬಾಗೇಪಲ್ಲಿ ಎನ್.ಹೆಚ್-44 ಹೈವೇ ರಸ್ತೆಯ ಅಗಲಗುರ್ಕಿ ಫ್ಲೈ ಓವರ್ ಬಳಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಯಾವುದೇ ಸೂಚನೆಯನ್ನು ನೀಡದೇ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸದೇ ಅಜಾಗರೂಕತೆಯಿಂದ ಹೈವೇ ರಸ್ತೆಯಲ್ಲಿ ನಿಲ್ಲಿಸಿದ್ದ HR-38-V-2512 ರ ಲಾರಿಯ ಹಿಂಭಾಗದ ಬಲಭಾಗಕ್ಕೆ ತನ್ನ ಕಾರನ್ನು ತಗುಲಿಸಿದ ಪರಿಣಾಮ ಯಾರಿಗೂ ಗಾಯಗಳಾಗದೇ ತನ್ನ ಕಾರಿನ ಮುಂಭಾಗದ ಬಂಪರ್, ಛಾಸಿ, ಇಂಜಿನ್, ಮುಂಭಾಗದ ಗ್ಲಾಸ್, ಹೆಡ್ ಲೈಟ್ಸ್, ಮುಂಭಾಗದ ಟಾಪ್, ಮುಂಭಾಗದ ಎಡಗಡೆಯ ಡೋರ್ ಜಕಂಗೊಂಡಿದ್ದು, ಸದರಿ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕ ಹೆಸರು ಮತ್ತು ವಿಳಾಸ ತಿಳಿಯಲಾಗಿ ತುಲಾರಾಮ್ ಬಿನ್ ಗಂಗಾಚಲಂ, 27 ವರ್ಷ, ಫರಿದಾಬಾದ್, ಹರಿಯಾಣ ರಾಜ್ಯ ಎಂತ ತಿಳಿಸಿದು,್ದ ಸದರಿ ಅಪಘಾತಕ್ಕೆ  ಕಾರಣನಾದ HR-38-V-2512  ರ ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಸಿಕೊಂಡಿರುತ್ತೆ.

 

4. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.45/2021 ಕಲಂ. 379 ಐ.ಪಿ.ಸಿ:-

          ದಿನಾಂಕ:03/04/2021 ರಂದು 18-35 ಗಂಟೆಯಲ್ಲಿ ಪಿರ್ಯಾದಿದಾರರಾದ ಲಕ್ಷ್ಮಿಕಾಂತ ಬಿನ್ ಕಪನಿಪತಯ್ಯ , 48 ವರ್ಷ, ಬ್ರಾಹ್ಮಣರು, ಇನ್ಸ್ರೇನ್ಸ್ ಕಂಪನಿಯಲ್ಲಿ ಕೆಲಸ, ವಾಸ: ಬೈಚಾಪುರ ಗ್ರಾಮ, ಚಿಕ್ಕನಹಳ್ಳಿ ಪೋಸ್ಟ್, ಕೊರಟಗೆರೆ ತಾಲ್ಲೂಕು ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ತನಗೆ ಸಂಬಂದಿಸಿದಂತಹ ಕೆ.ಎ-06 ಇಯು-9877 ನೊಂದಣಿ ಸಂಖ್ಯೆಯ ಟಿ.ವಿಎಸ್ ಕಂಪನಿಯ ಜುಪಿಟರ್ ದ್ವಿ ಚಕ್ರ ವಾಹನವನ್ನು  2015 ರಲ್ಲಿ ಖರೀದಿಯನ್ನು ಮಾಡಿದ್ದು  ತಾನು ಕೆಲಸ ನಿಮಿತ್ತು ಗೌರಿಬಿದನೂರು ಟೌನ್ ಮತ್ತು ಇತರ ಕಡೆಗಳಲ್ಲಿ ಓಡಾಡುತ್ತೀರುತ್ತೇನೆ. ದಿನಾಂಕ:25/03/2021 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಕೆಲಸದ ನಿಮಿತ್ತ ಗೌರಿಬಿದನೂರು ಟೌನ್ಗೆ ಬಂದು ನಗರಸಭೆಯ ಪಕ್ಕದ ಸೋಸೈಟಿಯ ಮುಂಭಾಗದಲ್ಲಿ ನಿಲ್ಲಿಸಿ ನಗರ ಸಬೆಗೆ ಹೊಗಿದ್ದು ನಂತರ ತಾನು ತನ್ನ ಕೆಲಸವನ್ನು ಮುಗಿಸಿಕೊಂಡು  ಮದ್ಯಾಹ್ನ 01 ಗಂಟೆಯಲ್ಲಿ ಬಂದು ನೋಡಲಾಗಿ ತನ್ನ ಗಾಡಿಯು ಕಾಣಲಿಲ್ಲ. ತಾನು ಎಲ್ಲಾ ಕಡೆಯಲ್ಲಿ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗಿರುವುದಿಲ್ಲ,  ಯಾರೋ ಕಳ್ಳರು ಸದರಿ ತನ್ನ ಗಾಡಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತನ್ನ ಗಾಡಿಯ ಬೆಲೆಯು ಸುಮಾರು 18,000-00 ರೂಗಳು ಆಗಿರುತ್ತೆ. ಆದ್ದರಿಂದ ತನ್ನ ಗಾಡಿಯನ್ನು ಪತ್ತೆಮಾಡಿಕೊಡಲು ಮತ್ತು ಕಳ್ಳತನ ಮಾಡಿದ ಆರೋಪಿಯ ವಿರುದ್ದ ಕಾನೂನು ಕ್ರಮವನ್ನು ಜರುಗಿಸಲು ಕೋರಿ ಮತ್ತು ತಾನು ಎಲ್ಲಾ ಕಡೆಯಲ್ಲಿ ಹುಡುಕಾಡಿದ್ದರಿಂದ ದೂರ ನೀಡಲು ತಡವಾಗಿರುತ್ತೆಂದು ನೀಡಿದ ದೂರಾಗಿದೆ.

 

5. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.51/2021 ಕಲಂ. 279 ಐ.ಪಿ.ಸಿ:-

          ದಿನಾಂಕ: 03/04/2021 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೇನೆಂದರೆ: ದಿನಾಂಕ:01-04-2021 ರಂದು ಗುರುವಾರ ಸುಮಾರು 4-30ಸಾಯಂಕಾಲ ಸಮಯದಲ್ಲಿ ತನ್ನ  ಬಾಬತ್ತು KA-51 AA-0143 ವಾಹನವನ್ನು  ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ಕಡೆಗೆ  ಹೋಗುತ್ತಿರುವಾಗ ಚಾಲಕ ಆರ್, ರವೀಂದ್ರ ಗುಟ್ಟೇನಹಳ್ಳಿ ರವರು ವಾಹನವನ್ನು ಅತಿ ವೇಗ ಮತ್ತು ಅಜಾಗರುಕತೆಯಿಂದ  ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ  ಭತ್ತಲಹಳ್ಳಿ ಗೇಟ್ ಶಾಶಿಬ್ ಕಾಲೇಜು ಎದುರುಗಡೆ  ಹೋಗುತ್ತಿರುವಾಗ ವಾಹನದ ಎಡ ಭಾಗದ ಮುಂಭಾಗದ ಟಯರ್ ಹೊಡೆದು ಹೋಗಿ ನಿಯಂತ್ರಣ ತಪ್ಪ ರಸ್ತೆಯ ಎಡ ಭಾಗದಲ್ಲಿ ವಾಲಿ ಪಕ್ಕಕ್ಕೆ ಉರುಳಿ ಬಿದ್ದಿರುತ್ತದೆ.ಈ ಅಪಘಾತದಲ್ಲಿ ಚಾಲಕ ಮತ್ತು ಕ್ಲಿನರ್ ಗೂ ಯಾವುದೇ ಗಾಯಗಳು ಆಗಿರುವುದಿಲ್ಲ. ಅಪಘಾತ ಉಂಟಾಗಿರುವುದರಿಂದ ವಾಹನದ ಮುಂಭಾಗದ ಕ್ಯಾಬೀನ್ ಮತ್ತು ಹೆಡ್ ಲೈಟ್ ಹಿಂಭಾಗದ ಟ್ಯಾಂಕ್,  ಬಾಡಿ ಹೌಸಿಂಗ್ ಪೂರ್ತಿ ಜಖಂಗೊಂಡಿರುತ್ತದೆ. ಹಾಗೂ ಸದರಿ ವಾಹನದಲ್ಲಿ ಕೋ ಕೋ ಕೋಲಾ ತಂಪು ಪಾನೀಯಗಳು, ನೀರಿನ ಬಾಟೇಲ್ ಗಳು,  ಅಪಘಾತದ ಕಾರಣದಿಂದ ಸುಮಾರು 50-000  ರೂಪಾಯಿಗಳ ಮೌಲ್ಯದ ಸರಕು ಹಾಳಾಗಿರುತ್ತದೆ.ಆದುದ್ದರಿಂದ ಸದರಿ ವಾಹನ ಮತ್ತು ಚಾಲಕನ ಮೇಲೆ ಕಾನೂನು  ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

ಇತ್ತೀಚಿನ ನವೀಕರಣ​ : 04-04-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080