ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.56/2021 ಕಲಂ. 435,436,504  ಐ.ಪಿ.ಸಿ :-

     ದಿನಾಂಕ 04/03/2021 ರಂದು ಬೆಳಿಗ್ಗೆ 10-15 ಗಂಟೆಗೆ ಫಿರ್ಯಾಧಿದಾರರಾದ ಶ್ರೀ  ಅಂಜಿನಪ್ಪ ಬಿನ್ ಗಂಗಪ್ಪ, 48 ವರ್ಷ, ಆದಿಕರ್ನಾಟಕ ಜನಾಂಗ, ಸರ್ವೆಯರ್ ಕೆಲಸ, ವಾಸ ಯಲ್ಲಂಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ.03/03/2021 ರಂದು ಸಂಜೆ 7-30 ಗಂಟೆ ಸಮಯದಲ್ಲಿ ನಾನು ನಮ್ಮ ಗ್ರಾಮದ ಬಸ್ ನಿಲ್ದಾಣದ ಬಳಿ ಇದ್ದಾಗ ನನ್ನ ಹೆಂಡತಿ ಪೋನ್ ಮಾಡಿ, ನಾವು ಬಾಡಿಗೆಗೆ ನೀಡಿರುವ ಕ್ಲಿನಿಕ್ ಬಳಿ ನರಸಿಂಹಮೂರ್ತಿ ರವರು ಡಾಕ್ಟರ್ ಹರ್ಷವರ್ಧನ ರವರ ಮೇಲೆ ಗಲಾಟೆ ಮಾಡುತ್ತಿರುವುದಾಗಿ ಪೋನ್ ಮಾಡಿ ತಿಳಿಸಿರುತ್ತಾರೆ. ತಕ್ಷಣ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನರಸಿಂಹಮೂರ್ತಿ ಡಾಕ್ಟರ್ ರವರ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು. ನಾನು ನರಸಿಂಹಮೂರ್ತಿಯನ್ನು ನಮ್ಮ ಮನೆ ಮುಂದೆ ಗಲಾಟೆ ಮಾಡಬೇಡ ಹೊರಟು ಹೋಗು ಎಂದು ಹೇಳಿದ್ದಕ್ಕೆ, ಆಯ್ತು ನಿನ್ನನ್ನು ನೋಡಿಕೊಳ್ತಿನಿ ಎಂದು ಹೇಳಿದನು. ನಂತರ ಪುನಃ ರಾತ್ರಿ 10-30 ಗಂಟೆಯಲ್ಲಿ ನಮ್ಮ ಮನೆಯ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈಯ್ದು, ನಿನ್ನನ್ನು ಬಿಡೋದಿಲ್ಲ ಎಂದು ಬೈಯ್ದು ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಹೇಳಿ ಹೊರಟು ಹೋದನು. ನಂತರ ರಾತ್ರಿ ಸುಮಾರು 3-00 ಗಂಟೆಯಲ್ಲಿ ನಾನು ನಮ್ಮ ಹೊಸಮನೆಯಲ್ಲಿ ಮಲಗಿದ್ದಾಗ ನನ್ನ ಮಗನಾದ ಪವನ್ ಕುಮಾರನಿಗೆ ಕಿಟಕಿ ಗಾಜು ಒಡೆದು ಹೋದ ಶಬ್ದ ಕೇಳಿ ಎಚ್ಚರಗೊಂಡು ನೋಡಿ ಮನೆಗೆ ಬೆಂಕಿ ಹಾಕಿದ್ದಾರೆ ಎಂದು ಕಿರುಚಾಡಿದನು. ನಾನು ಮತ್ತು ನನ್ನ ಹೆಂಡತಿ ರೂಂ ನಿಂದ ಹಾಲಿಗೆ ಬಂದು ನೋಡಲಾಗಿ ಕಿಟಕಿ ಬಳಿ ಗಾಜು ಹೊಡೆದು ಬೆಂಕಿ ಉರಿಯುತ್ತಿದ್ದು ಬಾಗಿಲುತೆಗೆಯಲು ಹೋದಾಗ ಆಚೆಯಿಂದ ಚಿಲಕ ಹಾಕಿದ್ದು, ಅಡುಗೆ ಮನೆ ಕಿಟಕಿಯಿಂದ ನೋಡಲಾಗಿ ನರಸಿಂಹಮೂರ್ತಿ ಮನೆಯ ಬಳಿ ಇದ್ದವನು ನನ್ನ ನೋಡಿ ಓಡಿ ಹೋಗಿರುತ್ತಾನೆ. ನಂತರ ನಾನು ಕೂಗಿಕೊಂಡಾಗ ಪಕ್ಕದ ಮನೆಯ ನನ್ನ ಚಿಕ್ಕಪ್ಪನ ಮಗನಾದ  ರಾಮಾಂಜಿಪ್ಪ ಬಂದು ಬಾಗಿಲಿನಿ  ಚಿಲಕ ತೆಗೆದಿದ್ದು ಹೊರಗೆ ಬಂದು ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ್ದ ನನ್ನ ಬಾಬತ್ತು ಕೆ..ಎ-40-ಇ.ಇ.-3480 ದ್ವಿ ಚಕ್ರ ವಾಹನ ಬೆಂಕಿಯಿಂದ ಉರಿಯುತ್ತಿದ್ದು, ದ್ವಿ ಚಕ್ರ ವಾಹನ ಮೇಲೆ  ರಾಮಾಂಜಿ ಮತ್ತು ಪಕ್ಕದ ಮನೆಯವರು ನೀರು ಹಾಕಿ ಬೆಂಕಿ ನಂದಿಸಿರುತ್ತಾರೆ. ಹಾಗೂ ಕಿಟಕಿಗೂ ಸಹ ನೀರು ಹಾಕಿರುತ್ತಾರೆ. ಆದ್ದರಿಂದ ನಮಗೆ ನಷ್ಟ ಉಂಟು ಮಾಡುವ ಉದ್ದೇಶದಿಂದ ನನ್ನ ಬಾಬತ್ತು ಕೆ.ಎ-40-ಇ.ಇ.-3480 ದ್ವಿ ಚಕ್ರ ವಾಹನಕ್ಕೆ ಬೆಂಕಿ ಇಟ್ಟು ಹಾಗೂ ಮನೆಯ ಕಿಟಿಕಿಗೆ ಬೆಂಕಿ ತಗುಲಿ ನಷ್ಟವನ್ನುಂಟು  ಮಾಡಿರುವ ನರಸಿಂಹಮೂರ್ತಿ  ಬಿನ್  ಆದಿಮೂರ್ತಿ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ  ನೀಡಿದ ದೂರಾಗಿರುತ್ತದೆ.

 

2. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.26/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

     ದಿನಾಂಕ: 03/03/2021 ರಂದು ಮದ್ಯಾಹ್ನ 15-00 ಗಂಟೆಗೆ ಸಿ ಹೆಚ್ ಸಿ – 176 ಮುನಿರಾಜು ರವರು ಚಿಂತಾಮಣಿ ನಗಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ವಿ.ನವೀನ್ ಬಿನ್ ವೆಂಕಟಶಿವಾರೆಡ್ಡಿ, 33 ವರ್ಷ, ಗೊಲ್ಲರು, ರಾಸಾಯನಿಕ ಗೊಬ್ಬರಗಳ ವ್ಯಾಪಾರ, ವಾಸ:  ಗೊಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ ನಂ: 9916039252 , 7019308933 ರವರು ನೀಡಿದ ಹೆಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ವ್ಯಾಪಾರದಿಂದ ಜೀವನ ಮಾಡಿಕೋಂಡಿರುತ್ತೇನೆ. ನಮ್ಮ ತಂದೆ ವೆಂಕಟಶಿವಾರೆಡ್ಡಿ ಮತ್ತು ತಾಯಿ ಲೇಟ್ ಮದುಮತಿ ರವರಿಗೆ ಇಬ್ಬರು ಮಕ್ಕಳಿದ್ದು,ಒಂದನೇ ನಾನು ನವೀನ್, 2 ನೇ ಸ್ವಾತಿ ರವರಾಗಿದ್ದು, ನಮ್ಮ ಕುಟುಂಬವನ್ನು ನಾನು ಪೊಷಣೆ ಮಾಡುತ್ತಿರುತ್ತೇನೆ. ದಿನಾಂಕ:02/03/2021  ರಂದು ರಾತ್ರಿ 18-10 ಗಂಟೆಯ ಸಮಯದಲ್ಲಿ  ಎಂ ಗೊಲ್ಲಹಳ್ಳಿಯಿಂದ  ಬಟ್ಲಹಳ್ಳಿಗೆ ಹೋಗಲು ನಾನು ನನ್ನ ಬಾಬತ್ತು ಹೀರೋ ಪ್ಯಾಷನ್ ಪ್ರೋ ಕೆಎ-67  ಇ-4211 ನೊಂದಣಿ ಸಂಖ್ಯೆಯ ಕಪ್ಪು ಬಣ್ಣದ ದ್ವಿಚಕ್ರವಾಹನದಲ್ಲಿ ನಮ್ಮ ಸಂಬಂದಿ ಚಿಕ್ಕಪ್ಪನಾದ ನಮ್ಮ ಗ್ರಾಮದ ರಾಜೇಶ್ ಎಂ ಎನ್ ಬಿನ್ ನಾರಾಯಣಸ್ವಾಮಿ, 34 ವರ್ಷ, ವ್ಯವಸಾಯ, ರವರನ್ನು ದ್ವಿಚಕ್ರವಾಹನದ ಹಿಂಬದಿಯಲ್ಲಿ ಕುಳ್ಳರಿಸಿಕೊಂಡು  ದ್ವಿಚಕ್ರವಾಹನವನ್ನು ನಾನು ಚಾಲನೆ ಮಾಡಿಕೊಂಡು ರಾತ್ರಿ 6-30 ಗಂಟೆಯ ಸಮಯದಲ್ಲಿ ಸೀತಂಪಲ್ಲಿ ಕೋನಾಪುರ ಗ್ರಾಮಗಳ ಮದ್ಯೆ ಕೋನಾಪುರ ಶ್ರಿರಾಮಪ್ಪ ರವರ ಜಮೀನಿನ ಪಕ್ಕದ ಥಾರ್ ರಸ್ತೆಯಲ್ಲಿ ಎಡಬದಿಯಲ್ಲಿ  ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ, ನಮ್ಮ ಮುಂಭಾಗ ಬಟ್ಲಹಳ್ಳಿ ಕಡೆಯಿಂದ ಕೆಎ-67 ಇ-7022 ನೊಂದಣಿ ಸಂಖ್ಯೆಯ ಕಪ್ಪು ಮತ್ತು ಕೆಂಪು ಬಣ್ಣದ ಬಜಾಜ್ ಪಲ್ಸರ್ ದ್ವಿಚಕ್ರವಾಹನವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮಗೆ ಎದುರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ನನಗೆ ಬಲಕೈನ ಮುಂಗೈನ ಬೆರಳುಗಳಿಗೆ  ಹಾಗೂ ಮುಂಗೈಗೆ  ತೀವ್ರ ರಕ್ತಗಾಯವಾಗಿರುತ್ತೆ. ಬಲ ಕಾಲಿನ ಪಾದಕ್ಕೆ ಮತ್ತು ಬೆರಳುಗಳಿಗೆ ತೀವ್ರ  ಗಾಯಗಳಾಗಿರುತ್ತೆ. ನನ್ನ ದ್ವಿಚಕ್ರವಾಹನದ ಹಿಂಬದಿ ಕುಳಿತಿದ್ದ ರಾಜೇಶ್ ಎಂ, ಎನ್ ರವರಿಗೆ ಬಲ ಕಾಲಿನ ಮದ್ಯದ ಬೆರಳಿಗೆ ತೀವ್ರ ಗಾಯವಾಗಿದ್ದು, ಬಲಕಾಲಿಗೆ ತರಚಿದ ಗಾಯವಾಗಿರುತ್ತೆ. ನನ್ನ ದ್ವಿಚಕ್ರವಾಹನದ ಸೈಲನ್ಸರ್ ಜಖಂ ಆಗಿರುತ್ತದೆ. ಅಪಘಾತದಿಂದ ನಮಗಾದ ಗಾಯಗಳಿಂದ ನಾವು ಕಿರುಚಿಕೊಂಡು ಒದ್ದಾಡುತ್ತಿದ್ದಾಗ ನಮ್ಮ ಹಿಂಬದಿ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ನಮ್ಮ ಗ್ರಾಮದ ಎಂ, ಕೆ ಶಂಕರಪ್ಪ ಬಿನ್ ದ್ಯಾಪ ಕೋನಪ್ಪ ಲೇಟ್ 43 ವರ್ಷ, ಜಿರಾಯ್ತಿ. ಮತ್ತು ಅಮರನಾಥ ಬಿನ್ ಲೇಟ್ ವೆಂಕಟಸ್ವಾಮಿ, 31 ವರ್ಷ, ಜಿರಾಯ್ತಿ ರವರುಗಳು ಬಂದು ನಮ್ಮನ್ನು ಉಪಚರಿಸಿ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ  ಚಿಂತಾಮಣಿ ರಾಧಾ ಕೃಷ್ಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ನಮಗೆ ಅಪಘಾತವುಂಟು ಮಾಡಿದ  ಕೆಎ-67 ಇ-7022 ನೊಂದಣಿ ಸಂಖ್ಯೆಯ ಕಪ್ಪು ಮತ್ತು ಕೆಂಪು ಬಣ್ಣದ ಬಜಾಜ್ ಪಲ್ಸರ್ ದ್ವಿಚಕ್ರವಾಹನದ ಸವಾರನು ದ್ವಿಚಕ್ರವಾಹನವನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಆದ್ದರಿಂದ ನಮಗೆ ಅಪಘಾತವುಂಟು ಮಾಡಿದ ಮೇಲ್ಕಂಡ ದ್ವಿಚಕ್ರವಾಹನ ಮತ್ತು ಚಾಲಕನ ಮೇಲೆ  ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

 

3. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.14/2021 ಕಲಂ. 419,420 ಐ.ಪಿ.ಸಿ & 66(D) INFORMATION TECHNOLOGY ACT 2008 :-

     ದಿನಾಂಕ:3/3/2021 ರಂದು ಪಿರ್ಯಾಧಿ ಶ್ರೀ ಮತೀನ್ ಪಾಷ  ಎನ್ ಬಿನ್  ನಾಸೀರ್ ಪಾಷ,24 ವರ್ಷ, ರೇಷ್ಮೇ ವ್ಯಾಪಾರ, ವಾಸ ಆಜಾದ್ ನಗರ, ವಾರ್ಡ ನಂ;19, ಶಿಢ್ಲಘಟ್ಟ ಟೌನ್, ಮೊ ಸಂಖ್ಯೆ: 8050585022 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಶಿಡ್ಲಘಟ್ಟ ಟೌನ್ ನಲ್ಲಿ ಕೆನರಾ ಬ್ಯಾಂಕ್ ಅಕೌಂಟ್ ನಂ:0486101207777 ರಂತೆ ತನ್ನ ಪತ್ನಿಯಾದ ಶ್ರೀಮತಿ ರಾಹೀಲ ರವರ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ಹಾಗೂ ಕಾರ್ಪೋರೇಷನ್ ಬ್ಯಾಂಕ್ ಅಕೌಂಟ್ ನಂ:520101042629620 ನನ್ನ  ಹೆಸರಿನಲ್ಲಿ ಉಳಿತಾಯ ಖಾತೆ ಇರುತ್ತದೆ.ಸದರಿ ಎರಡು ಖಾತೆಗಳಿಗೆ ನನ್ನ ಮೊಬೈಲ್ ನಂ: 8050585022 ಲಿಂಕ್ ಮಾಡಿಕೊಂಡು ಇದಕ್ಕೆ PHONEPAY WALLET ನಲ್ಲಿ ನನ್ನ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಿರುತ್ತೇನೆ. ಈಗಿರುವಲ್ಲಿ ನಮ್ಮ ಸ್ನೇಹಿತರು ಫ್ಲೇಸ್ಟೋರ್ ನಲ್ಲಿ THE SHOPPERS  APP  ಅಂತ ಒಂದು ಆಪ್ ಇದೆ. ಅದರಲ್ಲಿ  ಒಂದು ಲಕ್ಷ ಹೋಡಿಕೆ ಮಾಡಿದರೆ ಪ್ರತಿ ದಿನ 4000/- ರೂಗಳ ಬಡ್ಡಿ ಬರುತ್ತದೆಂತ ತಿಳಿಸಿದರು. ನಾವು ಆಸೆ ಬಿದ್ದು  ಹಣ ಇನ್ವೆಸ್ಟ್ ಮಾಡೋಣವೆಂತ ಭಾವಿಸಿ, ಸದರಿ ಆಪ್ ನ್ನು ನನ್ನ ಮೊಬೈಲ್ ನಲ್ಲಿನ ಫ್ಲೇಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಂಡಿದ್ದು.  ಅದರಲ್ಲಿ  ಅವರ ವ್ಯಾಟ್ಸಾಪ್ ಪೊನ್ ನಂಬರ್ ಗಳು ಇದ್ದು: 8966048523, 9335953162, 7354709554 & 8225831659 ಸಂಖ್ಯೆಗಳಿದ್ದು, ಈ ನಂಬರ್ ಗಳಲ್ಲಿ ವ್ಯಾಟ್ಶಾಪ್ ಮುಖಾಂತರ ಚಾಟಿಂಗ್ ಮಾಡಿ ಕೇಳಲಾಗಿ ಅವರು ಇನ್ವಸ್ಟ್ ಮಾಡಲು ತಿಳಿಸಿದ ನಂತರ ನಾನು  ದಿನಾಂಕ:01/01/2021 ರಂದು 10 ಸಾವಿರ ರೂಗಳನ್ನು ಹೂಡಿಕೆ ಮಾಡಿದೆನು. ನಂತರ 08 ದಿನಗಳಿಗೆ ಅಸಲು ಮತ್ತು ಬಡ್ಡಿ ಸೇರಿ 14,000/- ರೂಗಳು ವಾಪಸ್ಸು ಬಂತು. ಇದನ್ನು ಮನಗಂಡು  ದಿನಾಂಕ;10/1/2021 ರಂದು ಪುನಃ 50,000/- ರೂಗಳನ್ನು ಸದರಿ ಮೇಲ್ಕಂಡ   ಆಪ್ ನಲ್ಲಿ  ಮೇಲ್ಕಂಡ ನಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ಸದರಿ ಆಪ್ ನಲ್ಲಿ ಹೂಡಿಕೆ ಮಾಡಿದೆನು. ಅದಕ್ಕೆ ಪ್ರತಿ ದಿನ ಬಡ್ಡಿಯನ್ನು ಹಾಕುತ್ತಿದ್ದರು, ಅದನ್ನು ನೋಡಿ ಪುನಃ ದಿನಾಂಕ;13/1/2021 ರಂದು  99,450/- ರೂಗಳನ್ನು ಮೇಲ್ಕಂಡ ನಮ್ಮ ಬ್ಯಾಂಕ್  ಖಾತೆ ಲಿಂಕ್ ಆಗಿರುವ ಪೋನ್ ಫೇ ಯಿಂದ ವರ್ಗಾಯಿಸಿರುತ್ತೇನೆ. ನಂತರ ಪುನಃ ಸದರಿ APP  ನಲ್ಲಿ ಚಕ್ ಮಾಡಿದಾಗ ಬಡ್ಡಿಯನ್ನು ಆಕುತ್ತಿದ್ದು ಹಣ ಬೆಳೆಯುತ್ತಿತ್ತು. ಅದನ್ನು ನೋಡಿ ನಾನು ಹೆಚ್ಚಿಗೆ ಹೂಡಿಕೆ ಮಾಡೋಣವೆಂತ ದಿನಾಂಕ:17/1/2021 ರಂದು 50,000/- ರೂಗಳನ್ನು ಸದರಿ ನಮ್ಮ ಮೇಲ್ಕಂಡ ಬ್ಯಾಂಕ್ ಖಾತೆಗಳಿಂದ ಸದರಿ ಆಪ್ ನ  RAZORPAY  ವ್ಯಾಲೆಟ್ ಗೆ ನನ್ನ ಪೋನ್ ಫೇ ಇಂದ ಹಣ ವರ್ಗಾಯಿಸಿರುತ್ತೇವೆ. ಪುನಃ ದಿನಾಂಕ:20/1/2021 ರಂದು ಮೇಲ್ಕಂಡ  ಎರಡು ಬ್ಯಾಂಕ್ ಖಾತೆಗಳಿಂದ 100000/- ರೂಗಳನ್ನು ಸದರಿ ಆಪ್ ನ  RAZORPAY  ವ್ಯಾಲೆಟ್ ಗೆ ಹಣ ವರ್ಗಾಯಿಸಿರುತ್ತೇವೆ. ಅದೇ ರೀತಿ ಪುನಃ 22/1/2021 ರಂದು ಮೇಲ್ಕಂಡ  ಎರಡು ಬ್ಯಾಂಕ್ ಖಾತೆಗಳಿಂದ  ಒಟ್ಟು 100000/- ರೂಗಳನ್ನು ವರ್ಗಾಯಿಸಿರುತ್ತೇನೆ.  ಒಂದೆ ಭಾರಿ ಹಣವನ್ನು ಪಡೆಯೋಣವೆಂತ ಪುನಃ ದಿನಾಂಕ:25/1/2021 ರಂದು 60,000/-  ರೂಗಳನ್ನು ಅಂದರೆ ಒಟ್ಟು 4,59,350/-  ರೂಗಳನ್ನು ಮೇಲ್ಕಂಡ  ಎರಡು ಬ್ಯಾಂಕ್ ಖಾತೆಗಳಿಂದ ಸದರಿ ಆಪ್ ನಲ್ಲಿನ RAZORPAY  ವ್ಯಾಲೆಟ್ ಗೆ ಹಣ ವರ್ಗಾಯಿಸಿರುತ್ತೆನೆ.  ನಂತರ ದಿನಾಂಕ:2/2/2021 ರಂದು ಹಣ ವಾಪಸ್ಸು ಪಡೆಯಲು ಹೋದಾಗ ಸದರಿ THE SHOPPERS  APP  ಬ್ಲಾಕ್ ಆಗಿತ್ತು. ನಮಗೆ ಆಗ ಇವರು ನಮಗೆ ವಂಚನೆ ಮಾಡಿದ್ದಾರೆಂತ ತಿಳಿಯಿತು. ನಾವು ಶಿಢ್ಲಘಟ್ಟ ನಗರ ಪೊಲೀಸ್ ಠಾಣೆಗೆ ಹೋಗಿ ವಿಚಾರವನ್ನು ತಿಳಿಸಲಾಗಿ ಅವರು ಚಿಕ್ಕಬಳ್ಳಾಪುರ ಸೈಬರ್ ಪೊಲೀಸ್ ಠಾಣೆಯಲ್ಲಿ  ದೂರನ್ನು ನೀಡಲು ತಿಳಿಸಿರುತ್ತಾರೆ. ಆದ ಕಾರಣ ನಮಗೆ ಹೆಚ್ಚಿನ ಬಡ್ಡಿ ಆಸೆ ತೊರಿಸಿ ನಮ್ಮಿಂದ ಒಟ್ಟು 4,59,350/-  ರೂಗಳ ಹಣವನ್ನು ಪಡೆದು ವಂಚಿಸಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಲು ಕೋರಿ ನೀಡಿದ ದೂರು.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.32/2021 ಕಲಂ. 457,380 ಐ.ಪಿ.ಸಿ :-

     ದಿನಾಂಕ:04.03.2021 ರಂದು ಮದ್ಯಾಹ್ನ 13:30 ಗಂಟೆಗೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೆನೆಂದರೆ  ತಾನು 2014 ರಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ತಮ್ಮನಾಯಕನಹಳ್ಳಿ ಗ್ರಾಮದ ಬಳಿ ಜಮೀನುಗಳನ್ನು ಕೊಂಡುಕೊಂಡು ಅದರಲ್ಲಿ ಈಗ್ಗೆ 8 ತಿಂಗಳ ಹಿಂದಿನಿಂದ ಲೇಔಟ್ ಗಳನ್ನು ಮಾಡುತ್ತಿದ್ದು. ಲೇಔಟ್ ಗೆ ಸೇರಿದ ಸರ್ವೆ ನಂ. 96 ರಲ್ಲಿನ 3 ಎಕರೆ ಜಾಗದಲ್ಲಿ ಕ್ಲಬ್ ಹೌಸ್ ನಿರ್ಮಾಣ ಮಾಡಿರುತ್ತಾರೆ. ತನ್ನ ಲೇಔಟ್ ಬಳಿ ಕೆಲಸಗಳನ್ನು ನೋಡಿಕೊಳ್ಳಲು ಪಳನಿ ಮತ್ತು ಅವರ ಕಡೆಯವರನ್ನು ಕೆಲಸಕ್ಕೆಂದು ಇಟ್ಟಿದ್ದು. ಕ್ಲಬ್ ಹೌಸ್ ನಲ್ಲಿ ತಂಗುವವರಿಗಾಗಿ 1] LED 32 INCH TV, 2] FRONT LOAD WASHING MACHINE, 3] DOUBLE DOOR FRIDGE, 4] SOLO MICROWAVE OVEN ಮತ್ತು ಇತರೇ ವಸ್ತುಗಳನ್ನು ತಂದಿಟ್ಟಿದ್ದು. ದಿನಾಂಕ: 14/02/2021 ರಂದು ಲೇಔಟ್ ನಲ್ಲಿ ಕೆಲಸ ಮಾಡುವ ಪಳನಿ ಮತ್ತು ಅವರ ಕಡೆಯವರು ಊರಿಗೆ ಹೋಗುವುದಾಗಿ ಹೇಳಿ ಹೋಗಿದ್ದು. ದಿನಾಂಕ: 15/02/2021 ರಂದು ಬೆಳಿಗ್ಗೆ ಪಳನಿ ಮತ್ತು ಅವರ ಕಡೆಯವರು ಲೇಔಟ್ ಬಳಿ ಕೆಲಸ ಮಾಡಲು ಬಂದಾಗ ಯಾರೋ ಕಳ್ಳರು ತಮ್ಮ ಕ್ಲಬ್ ಹೌಸ್ ನ ಮೇಲ್ಚಾವಣಿಗೆ ಹೊದಿಸಿರುವ ಹೆಂಚುಗಳನ್ನು ತೆಗೆದಿದ್ದು, ಕ್ಲಬ್ ಹೌಸ್ ನ ಗಾಜಿನ ಕಿಟಕಿಯ ಗಾಜನ್ನು ಹೊಡೆದು ಹಾಕಿರುತ್ತಾರೆಂದು ತಿಳಿಸಿದ್ದು. ತಾನು ತನ್ನ ಸ್ವಂತ ಕೆಲಸಕ್ಕಾಗಿ ಬೇರೆ ಊರಿಗೆ ಹೋಗಿದ್ದರಿಂದ ಈ ದಿನ ದಿನಾಂಕ: 02/03/2021 ರಂದು ತಮ್ಮ ಲೇಔಟ್ ಬಳಿ ಬಂದು ಕ್ಲಬ್ ಹೌಸ್ ನೊಳಗೆ ಹೋಗಿ ನೋಡಿದಾಗ ತಾನು ತಮ್ಮ ಕ್ಲಬ್ ಹೌಸ್ ನಲ್ಲಿ ತಂಗುವವರ ಉಪಯೋಗಕ್ಕಾಗಿ ಇಟ್ಟಿದ್ದ 1] LED 32 INCH TV, 2] FRONT LOAD WASHING MACHINE, 3] DOUBLE DOOR FRIDGE, 4] SOLO MICROWAVE OVEN ಮತ್ತು ಇತರೇ ಕಟ್ಟಡ ಸಾಮಾಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡುಬಂದಿರುತ್ತದೆ. ದಿನಾಂಕ: 14/02/2021 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ತಮ್ಮ ಕ್ಲಬ್ ಹೌಸ್ ನ ಮೇಲ್ಚಾವಣೆಯ ಹೆಂಚುಗಳನ್ನು ತೆಗೆದು ಕ್ಲಬ್ ಹೌಸ್ ಒಳಗೆ ಪ್ರವೇಶ ಮಾಡಿ ಅದರಲ್ಲಿಟ್ಟಿದ್ದ ತಮ್ಮ ಬಾಬತ್ತು ಸುಮಾರು 60,000/- ರೂ.ಗಳು ಬೆಲೆ ಬಾಳುವ ಮೇಲ್ಕಂಡ ವಸ್ತುಗಳನ್ನು ಗಾಜಿನ ಕಿಟಕಿಯ ಗಾಜನ್ನು ಹೊಡೆದು ಹಾಕಿ ಅದರ ಮೂಲಕ ಕಳವು ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದರ ಮೇರೆಗೆ ಈ ಪ್ರ,ವ,ವರದಿ.

 

5. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.28/2021 ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ 03-03-2021 ರಂದು ಮದ್ಯಾಹ್ನ 03.30 ಗಂಟೆಗೆ ಪಿ.ಎಸ್.ಐ ರಂಜನ್ ಕುಮಾರ್ ಡಿ. ರವರು ಠಾಣೆಗೆ ಆರೋಪಿಗಳು, ಮಾಲು ಮತ್ತು ಮಹಜರ್ ನ್ನು ಹಾಜರುಪಡಿಸಿ ನೀಡಿದ ವರದಿ ಸಾರಾಂಶವೇನೆಂದರೆ, ದಿನಾಂಕ 03/03/2021 ರಂದು ಮಧ್ಯಾಹ್ನ 1-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದು ಸಿದ್ದೇಪಲ್ಲಿ ಗ್ರಾಮದ ಕೋಳಿಫಾರಂ ಬಳಿ ಮರದ ಕೆಳಗೆ  ಯಾರೋ ಕೆಲವರು ಕಾನೂನು ಬಾಹಿರವಾಗಿ ಇಸ್ಟೀಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನ ಮೇರೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡುವ ಸಲುವಾಗಿ ಕೆಎ-40-ಜಿ-539 ಸರ್ಕಾರಿ ವಾಹನದಲ್ಲಿ ತಾನು ಠಾಣಾ ಸಿಬ್ಬಂದಿಯವರಾದ ಸಿಹೆಚ್ಸಿ-210 ಕೆ.ಬಿ.ಶಿವಪ್ಪ, ಸಿಪಿಸಿ-519 ಚಂದ್ರಶೇಖರ್, ಸಿಪಿಸಿ-588 ಗಿರೀಶ್.ಆರ್, ಸಿಪಿಸಿ-568 ರವಿಕುಮಾರ್.ಎಂ ಮತ್ತು ಚಾಲಕ ಎಪಿಸಿ-163 ಆಯರಾಜ್ ರವರೊಂದಿಗೆ ಸಿದ್ದೇಪಲ್ಲಿ ಕ್ರಾಸ್ ಬಳಿ ಹೋಗಿ ಅಲ್ಲಿದ್ದವರನ್ನು ಪಂಚಾಯ್ತಿದಾರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಅವರೊಂದಿಗೆ ಸಿದ್ದೇಪಲ್ಲಿ ಗ್ರಾಮದ ಬಳಿ ಹೋಗಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ವಾಹನದಿಂದ ಇಳಿದು  ಸ್ವಲ್ಪ ದೂರ ನಡೆದುಕೊಂಡು ಹೋಗಿ ಕೋಳಿಫಾರಂ ಬಳಿ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿನ ಒಂದು ಮರದ ಕೆಳಗೆ ಯಾರೋ ಕೆಲವರು ಹಣವನ್ನು, ದ್ವಿಚಕ್ರವಾಹನಗಳನ್ನು ಹಾಗೂ ಮೊಬೈಲ್ ಗಳನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಂದರ್ ಬಾಹರ್ ಎಂದು ಇಸ್ಟೀಟು ಜೂಜಾಟವಾಡುತ್ತಿದ್ದು, ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಜೂಜಾಡುತ್ತಿದ್ದ ಸದರಿಯವರು ಇಸ್ಟೀಟ್ ಎಲೆ. ಮೊಬೈಲ್ ಪೋನ್, ದ್ವಿಚಕ್ರವಾಹನಗಳು  ಹಾಗೂ ಹಣವನ್ನು ಸ್ಥಳದಲ್ಲಿಯೇ ಬಿಟ್ಟು ಓಡಲು ಪ್ರಯತ್ನಿಸಿದ್ದು, ಅವರನ್ನು ಬೆನ್ನಟ್ಟಿ ವಶಕ್ಕೆ ಪಡೆದು  ಸ್ಥಳಕ್ಕೆ ಕರೆದುಕೊಂಡು ಬಂದು ಹೆಸರು ಮತ್ತು ವಿಳಾಸ ಕೇಳಲಾಗಿ 1) ವೆಂಕಟೇಶ ಬಿನ್ ನಾರಾಯಣಪ್ಪ, 40 ವರ್ಷ, ನಾಯಕರು, ಜಿರಾಯ್ತಿ, ವಾಸ ಸಿದ್ದೇಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು.  2) ಬಾಬಾ ಬಿನ್ ಪ್ಯಾರೂಸಾಬ್, 35 ವರ್ಷ, ಮುಸ್ಲೀಂರು, ಗುಜರಿ ವ್ಯಾಪಾರ, ವಾಸ ಮೆಹಬೂಬ್ ನಗರ, ಚಿಂತಾಮಣಿ ಟೌನ್.  3) ರಫೀಕ್ ಬಿನ್ ಪ್ಯಾರೂಸಾಬ್, 49 ವರ್ಷ, ಮುಸ್ಲೀಂರು, ಚಾಲಕ ವೃತ್ತಿ, ವಾಸ ಮೆಹಬೂಬ್ ನಗರ, ಚಿಂತಾಮಣಿ ಟೌನ್. ಎಂದು ತಿಳಿಸಿದರು. ಸ್ಥಳದಲ್ಲಿ ಪಂಚರ  ಸಮಕ್ಷಮ ಪರಿಶೀಲಿಸಲಾಗಿ 15200/- ರೂ ನಗದು ಹಣ, 52 ಇಸ್ಟೀಟ್ ಎಲೆಗಳು, ಸ್ಯಾಮ್ ಸಂಗ್ ಗೆಲಾಕ್ಸಿ ಸ್ಮಾರ್ಟ ಪೋನ್, ವಿವೋ ಸ್ಮಾರ್ಟ ಪೋನ್, ಸ್ಯಾಮ್ ಸಂಗ್ ಕೀಪ್ಯಾಡ್ ಪೋನ್, ಹೆಸರಿಲ್ಲದ ಎರಡು ಸ್ಮಾರ್ಟ ಪೋನ್, ಕೆಎ-40-ಎಸ್-1329 ನೋಂದಣಿ ಸಂಖ್ಯೆಯ ಕಪ್ಪು ಬಣ್ಣದ ಹೋಂಡಾ ಯೂನಿಕಾರ್ನ, ಕೆಎ-40-ಇಸಿ-5909 ನೋಂದಣಿ ಸಂಖ್ಯೆಯ ನೀಲಿ ಬಣ್ಣದ ಹೋಂಡಾ ಆಕ್ಟೀವಾ, ಟಿಎನ್-29 ಬಿವೈ-2916 ನೋಂದಣಿ ಸಂಖ್ಯೆಯ ಸಿಮೆಂಟ್ ಬಣ್ಣದ ಹೊಂಡಾ ಆಕ್ಟೀವಾ ದ್ವಿಚಕ್ರವಾಹನ ಹಾಗೂ ಒಂದು ನ್ಯೂಸ್ ಪೇಪರ್ ಇದ್ದು, ಸ್ಥಳದಲ್ಲಿ, 52 ಇಸ್ಟೀಟ್ ಎಲೆ, ಜೂಜಾಟವಾಡಲು ಪಣವಾಗಿಟ್ಟಿದ್ದ 15200/- ನಗದು ಹಣ, 5 ಮೊಬೈಲ್ ಪೋನ್ ಗಳು, 3 ದ್ವಿಚಕ್ರವಾಹನಗಳು, ಒಂದು ನ್ಯೂಸ್ ಪೇಪರ್ ನ್ನು ಈ ಕೇಸಿನ ಮುಂದಿನ ನಡಾವಳಿಗಾಗಿ ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿಯೇ ಮಧ್ಯಾಹ್ನ 2-00 ರಿಂದ 3-00 ಗಂಟೆ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಆರೋಪಿತರು, ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿದ್ದು, ಆರೋಪಿತರು, ಮಾಲು ಹಾಗೂ ಮಹಜರ್ ನ್ನು ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಎನ್.ಸಿ.ಆರ್ 22/2021 ರಂತೆ ದಾಖಲಿಸಿಕೊಂಡು  ಘನ ನ್ಯಾಯಾಲಯದಿಂದ ಅನುಮತಿ ಪಡೆದು ಸಂಜೆ 06.30 ಗಂಟೆಗೆ ಠಾಣಾ ಮೊ.ಸಂ 28/2021  ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 04-03-2021 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080