ಅಭಿಪ್ರಾಯ / ಸಲಹೆಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 31/2021 ಕಲಂ.286,336 ಐ.ಪಿ.ಸಿ & 4,3,5 EXPLOSIVE SUBSTANCES ACT, 1908:-

     ದಿನಾಂಕ 03/02/2021 ರಂದು ಮದ್ಯಾಹ್ನ 13-15 ಗಂಟೆಗೆ ಫಿರ್ಯಾಧಿದಾರರಾದ ಶ್ರೀ. ನಯಾಜ್ ಬೇಗ್, ಸಿಪಿಐ ಬಾಗೇಪಲ್ಲಿ ವೃತ್ತ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನಾದ ಸಾರಾಂಶವೆನೆಂದರೆ  ಬಾಗೇಪಲ್ಲಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಸೂಚಿಸುವುದೇನೆಂದರೆ ಈ ದಿನ ದಿನಾಂಕ 03/02/2021 ಬೆಳಗ್ಗೆ ಸುಮಾರು 9;00 ಗಂಟೆ ಸಮಯದಲ್ಲಿ ನಾನು ಕಛೇರಿಯಲ್ಲಿದ್ದಾಗ ವರ್ಣಂಪಲ್ಲಿ ಗ್ರಾಮದ ಬಳಿ ಸವರ್ೆ ನಂಬರ್ 46 ರ ಕಲ್ಲುಗುಟ್ಟೆಯ ಬಂಡೆ ಇರುವ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಿಡಿಮದ್ದು ಮತ್ತು ಸ್ಪೋಟಕ ಸಾಮಾಗ್ರಿಗಳನ್ನು ಬಳಿಸಿ ಕಲ್ಲುಗಣಿ ಮಾಡಲು ಪ್ರಯತ್ನಸುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರ ಮೇಲೆ ದಾಳಿ ಮಾಡಲು ಬಾಗೇಪಲ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ ಶ್ರೀ ಸುನಿಲ್ ಕುಮಾರ್ ಜಿ.ಕೆ ಮತ್ತು ಸಿಬ್ಬಂದಿಯಾದ ಶ್ರೀ ನಟರಾಜ್ ಹೆಚ್ ಸಿ 156, ಶ್ರೀ ಶಂಕರರೆಡ್ಡಿ ಹೆಚ್ ಸಿ 103, ಶ್ರೀ ವೆಂಕಟರವಣಪ್ಪ ಎ ಎಸ್ ಐ ರವರು ಮತ್ತು ಜೀಪ್  ಚಾಲಕರಾದ ನರಸಿಂಹಮೂತರ್ಿ ಎಪಿಸಿ 110 ಕೆ.ಎ-40-ಜಿ -6399 ಜೀಪ್ ಚಾಲಕ ಮತ್ತು ಕೆ.ಎ-40-ಜಿ-537 ನ ಜೀಪ್ ಚಾಲಕ ಅಲ್ತಾಪ್ ರವರೊಂದಿಗೆ ವರ್ಣಂಪಲ್ಲಿ ಕ್ರಾಸ್ಗೆ ಹೋಗಿ ವರ್ಣಂಪಲ್ಲಿ ಕ್ರಾಸ್ನಲ್ಲಿದ್ದ ಪಂಚರನ್ನು ಬರಮಾಡಿಕೊಂಡು  ಮೇಲ್ಕಂಡ ವಿಚಾರವನ್ನು ತಿಳಿಸಿ ಪಂಚರಾಗಿ ಬಂದು ತನಿಖೆಗೆ ಸಹಕರಿಸಲು ಕೋರಿದ್ದು, ಪಂಚರೊಂದಿಗೆ ನಾವು ಸಕರ್ಾರಿ ಜೀಪ್ ಸಂಖ್ಯೆ ಕೆ.ಎ.-40-ಜಿ-537 ರಲ್ಲಿ ಕುಳಿತುಕೊಂಡು ಸ್ಥಳಕ್ಕೆ ಹೋಗಲಾಗಿ ಪೊಲೀಸ್ ಜೀಪ್ಗಳನ್ನು ನೋಡಿ ಸದರಿ ಕಲ್ಲು ಬಂಡೆಯ ಬಳಿ ಇದ್ದ ಅಸಾಮಿ ಸ್ಥಳದಿಂದ ಬೆಟ್ಟದಲ್ಲಿ ಓಡಿ ಪರಾರಿಯಾದನು, ನಮ್ಮೊಂದಿಗೆ ಇದ್ದ ಪಂಚರಾದ ಶ್ರೀ ವೆಂಕಟಶಿವ ಮತ್ತು ಶ್ರೀನಿವಾಸರೆಡ್ಡಿ ರವರನ್ನು ಓಡಿ ಹೋದವನ ಹೆಸರು ವಿಳಾಸ ಕೇಳಲಾಗಿ ಆತನ ಹೆಸರು ಮಂಜುನಾಥರೆಡ್ಡಿ ಬಿನ್ ಅಶ್ವತ್ಥರೆಡ್ಡಿ ಪಿಚ್ಚಲವಾರಿಪಲ್ಲಿ ಗ್ರಾಮ, ಗೂಳೂರು ಹೊಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದರು ಸದರಿ ಬಂಡೆಯನ್ನು ಸೀಳಿಸಲು ಕೊಳವೆ ತರಹ ರಂಧ್ರಗಳನ್ನು ಡ್ರಿಲ್ಲಿಂಗ್ ಮಾಡಿ ಅದರಲ್ಲಿ  ಸ್ಪೋಟಕ ಸಿಡಿ ಮದ್ದುಗಳನ್ನು ಇಟ್ಟು ಸ್ಪೋಟಿಸಿರುವ ನಿಶಾನೆ ಕಂಡು ಬಂದಿರುತ್ತೆ, ಸ್ಥಳದಲ್ಲಿ ಪರಿಶೀಲಿಸಲಾಗಿ ಬಂಡೆಯನ್ನು ಸ್ಪೋಟಿಸಲು ಉಪಯೋಗಿಸಿ ತುಂಡು ತುಂಡಾಗಿ ಬಿದ್ದಿರುವ ವೈರುನ ಸುಮಾರು 10 ಕ್ಕೊ ಹೆಚ್ಚು ಪೀಸುಗಳು ಮತ್ತು 100 ಗ್ರಾಂ ನಷ್ಟು ಸ್ಟೀಲ್ ತರಹ ವೈರು ದಾರದ ದಪ್ಪವಿರುತ್ತೆ, ಹಾಗೂ ಸ್ಟೀಲ್ ತರಹ ವೈರು ಅಳವಡಿಸಿರುವ ಸುಮಾರು ಎರಡು ಇಂಚು ಉದ್ದದ ಮೂರು ಕೇಪ್ಗಳು  ಇರುತ್ತವೆ,  ಸುಮಾರು 7 ಇಂಚು ಉದ್ದವಿರುವ ಎರಡು ಬೆರಳು ದಪ್ಪದ ವಿಷ್ಣು ಪವರ್ 90, ಶ್ರೀ ವಿಷ್ಣು  ಎಕ್ಸ್ಪ್ಲೋಸೀವ್ಸ್ ಪ್ರೈವೇಟ್ ಲಿಮಿಟೆಡ್ ಲಕ್ಷ್ಮೀಪುರಂ ನಂದನಂ ವಿಲೇಜ್, ಯಾದಗಿರಿ ಜಿಲ್ಲೆ ಎಂದು  ಇಂಗ್ಲೀಷ್ನಲ್ಲಿ ವಿಳಾಸವಿರುತ್ತದೆ, ಸದರಿ ಸ್ಪೋಟಕಗಳನ್ನು ಬಂಡೆಯನ್ನು ಸ್ಪೋಟಿಸಲು ಯಾವುದೇ ಪರವಾನಿಗೆ ಇಲ್ಲದೆ, ಮಾನವನ ಪ್ರಾಣಕ್ಕೆ ಹಾನಿಯಾಗುವ ರೀತಿ ಉಪಯೋಗಿಸುತ್ತಿರುವುದಾಗಿ ತಿಳಿದು ಬಂದಿರುತ್ತದೆ, ಸದರಿ ಸಿಡಿಮದ್ದುಗಳನ್ನು  ಬಂಡೆಯನ್ನು ಹೋಲ್ ಮಾಡಿ ಅದಕ್ಕೆ ತುಂಬಿ ಬತ್ತಿಯನ್ನು ಸಂಪರ್ಕಕೊಟ್ಟು ದೂರದಿಂದ ಸ್ಪೋಟಿಸಿ ಸಿಡಿಸುತ್ತಿದ್ದರೆಂದು ತಿಳಿಸಿದರು, ನಂತರ ಸದರಿಯವರು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ  ಗಣಿಗಾರಿಕೆ ಮಾಡುತ್ತಿರುವುದು ದೃಡಪಟ್ಟಿದೆ. ಸದರಿ ವಸ್ತುಗಳ ಪೈಕಿ ಪೊಲೀಸರು ತುಂಡು ತುಂಡಾಗಿರುವ ವೈರು ಪೀಸ್ಗಳ ಪೈಕಿ ಒಂದು ವೈರು ಪೀಸನ್ನು ಮತ್ತು ಒಂದು ಎರಡು ಇಂಚು ಉದ್ದವಿರುವ ವೈರು ಅಳವಡಿಸಿರುವ ಸ್ಟೀಲ್ ಕೇಪ್ನ್ನು ಮತ್ತು ಒಂದು ಸಿಡಿಮದ್ದು ಇರುವ ಡಿ ಗಾಡರ್್ನ್ನು ಮತ್ತು ಸುಮಾರು 100 ಗ್ರಾಂ ನಷ್ಟು ದಾರದ ದಪ್ಪವಿರುವ ಸ್ಟೀಲ್ ವೈರುನ ಪೈಕಿ ಮಾದರಿಗಾಗಿ  2 ಆಡಿ ಉದ್ದದ ವೈರನ್ನು ಅಲಾಯಿದೆಯಾಗಿ ಪ್ಲಾಸ್ಟೀಕ್ ಬಟ್ಟೆ ತರಹ ಇರುವ ಕವರ್ನಲ್ಲಿಟ್ಟು ಮೂತಿಯನ್ನು ಕಟ್ಟಿ ಬಿ ಎಂಬ ಅಕ್ಷರದಿಂದ ಮೊಹರು ಮಾಡಿ ಅಮಾನತ್ತುಪಡಿಸಿಕೊಂಡರು,  ಸದರಿ ಜಮೀನಿನಲ್ಲಿ ಸುಮಾರು 20 ಆಡಿಗಳಷ್ಟು ನೆಲದಿಂದ ಅಳದ ವರೆಗೆ ಕಲ್ಲುಗಣಿ ಮಾಡಿ ಬಂಡೆಯನ್ನು ಸ್ಪೋಟಕ ಸಾಮಾಗ್ರಿಗಳನ್ನು ಬಳಸಿ ಸ್ಪೋಟಿಸಿರುವುದಾಗಿರುತ್ತದೆ,  ಸದರಿ ಸಮಯದಲ್ಲಿ ನಡೆಸಿರುವ ಮೂಲ ಮಹಜರ್ನ್ನು ಮತ್ತು ಮೇಲ್ಕಂಡ ಮಾಲುಗಳನ್ನು ನಿಮ್ಮ ವಶಕ್ಕೆ ಈ ಜ್ಞಾಪನಾದೊಂದಿಗೆ ನೀಡುತ್ತಿದ್ದು, ನೀವು ಮುಂದಿನ ಕಾನೂನು ಜರುಗಿಸಲು ಸೂಚಿಸಿದ ದೂರಾಗಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 32/2021 ಕಲಂ.379 ಐ.ಪಿ.ಸಿ:-

     ಈ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ಶ್ರೀಕಾಂತ ನಾಯ್ಡು ಬಿನ್ ಸೂರ್ಯನಾರಾಯಣ ನಾಯ್ದು ಆದ ನಾನು ತಮ್ಮಲ್ಲಿ ನೀಡುತ್ತಿರುವ ದೂರು ಏನೇಂದರೆ ನಾನು ಬಾಗೇಪಲ್ಲಿ ಟೌನ್ ಸಾಯಿಬಾಬಾ ಶಾಲೆ ಬಳಿ ರೂರಲ್ ಸೋರ್ಸ ಬಿಸಿನೆಸ್ ಲಿಮಿಟೆಡ್  ಕಾಲ್ ಸೆಂಟರ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ.  2019 ನೇ ನವಂಬರ್ ತಿಂಗಳೀನಲ್ಲಿ ಕೆ.ಎ-40-ಇ.ಇ.-4592 ನೊಂದಣಿ ಸಂಖ್ಯೆಯ ಹೋಂಡಾ ಡಿಯೋ ಡಿಎಲ್ಎಕ್ಸ್ ದ್ವಿ ಚಕ್ರ ವಾಹನವನ್ನು ತೆಗೆದುಕೊಂಡಿರುತ್ತೆ. ದಿನಾಂಕ. 01/02/2021 ರಂದು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಕಛೇರಿಗೆ ಹೋಗಿದ್ದು, ರಾತ್ರಿ ಸುಮಾರು 10-30 ಗಂಟೆಯಲ್ಲಿ ಕಛೇರಿಯಿಂದ ಮನೆಗೆ ವಾಪಸ್  ಬಂದಿದ್ದು, ನನ್ನ ಬಾಬತ್ತು ಕೆ.ಎ-40=ಇ.ಇ-4592 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನವನ್ನು ನಮ್ಮ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿ ಮನೆಯಲ್ಲಿ ಮಲಗಿರುತ್ತೇನೆ. ನಂತರ ದಿನಾಂಕ 02/02/2021 ರಂದು ಬೆಳಿಗ್ಗೆ 7-00 ಗಂಟೆಗೆ ಎದ್ದು ಮನೆಯ ಮುಂದೆ ಬಂದು ನೋಡಲಾಗಿ ನನ್ನ ದ್ವಿ ಚಕ್ರ ವಾಹನ ಕಾಣಿಸಿರುವುದಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ಎಲ್ಲಾ ಹುಡುಕಾಡಿ, ವಿಚಾರಿಸಿ ಈ ದಿನ ತಡವಾಗಿ  ದೂರನ್ನು ನೀಡುತ್ತಿದ್ದು, ಕಳ್ಳತನವಾಗಿರುವ ನನ್ನ ಬಾಬತ್ತು ಕೆ.ಎ-40-ಇ.ಇ-4592 ನೊಂದಣೀ ಸಂಖ್ಯೆಯ ಹೋಂಡಾ ಡಿಯೋ ದ್ವಿ ಚಕ್ರ ವಾಹನವನ್ನು ಹಾಗೂ ಕಳ್ಳರನ್ನು ಪತ್ತೆ ಮಾಢಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರುತ್ತೇನೆ. ದ್ವಿ ಚಕ್ರ ವಾಹನದ ಬೆಲೆ ಸುಮಾರು 35,000/- ರೂ ಗಳಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 55/2021 ಕಲಂ. 143,147,148,323,324,504,506,149 ಐ.ಪಿ.ಸಿ:-

     ದಿನಾಂಕ: 03/02/2021 ರಂದು ಬೆಳಿಗ್ಗೆ 11.30 ಗಂಟೆಗೆ ಮುದ್ದಪ್ಪ ಬಿನ್ ಲೇಟ್ ನಾರಾಯಣಪ್ಪ, 55 ವರ್ಷ, ಗೊಲ್ಲರು, ಜಿರಾಯ್ತಿ, ಬ್ಯಾಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮಗೂ ಮತ್ತು ತಮ್ಮ ಗ್ರಾಮದ ನರಸಿಂಹಮೂರ್ತಿ ಬಿನ್ ಲೇಟ್ ಮುನಿನಾರಾಯಣಪ್ಪರವರಿಗೆ ಹಳೇಯ ವೈಷಮ್ಯಗಳಿರುತ್ತದೆ. ಹೀಗಿರುವಾಗ ಈ ದಿನ ದಿನಾಂಕ: 03/02/2021 ರಂದು ಬೆಳಿಗ್ಗೆ 7.00 ಗಂಟೆ ಸಮಯದಲ್ಲಿ ತಮ್ಮ ಗ್ರಾಮ ಲಕ್ಷ್ಮೀದೇವಮ್ಮ ಕೋಂ ಗೋಪಾಲಪ್ಪ ಮತ್ತು ಮುನಿಲಕ್ಷ್ಮಮ್ಮ ಕೋಂ ವೆಂಕಟಪ್ಪರವರು ನೀರಿನ ವಿಚಾರದಲ್ಲಿ ಗಲಾಟೆಗಳನ್ನು ಮಾಡಿಕೊಂಡಿದ್ದು ಈ ವಿಚಾರವಾಗಿ ಲಕ್ಷ್ಮೀದೇವಮ್ಮರವರು ತಮ್ಮ ಮನೆಯ ಬಳಿ ಬಂದು ನ್ಯಾಯ ಪಂಚಾಯ್ತಿ ಮಾಡುವಂತೆ ತನಗೆ ಕೇಳಿರುತ್ತಾರೆ. ನಂತರ ಇದೇ ದಿನ ಬೆಳಿಗ್ಗೆ 9.30 ಗಂಟೆ ಸಮಯದಲ್ಲಿ ಮೇಲ್ಕಂಡ ನರಸಿಂಹಮೂರ್ತಿ ಮತ್ತು ಅತನ ಮಕ್ಕಳಾದ ನವೀನ್, ಆಶೋಕ್, ನರಸಿಂಹಮೂರ್ತಿ ರವರ ಹೆಂಡತಿಯಾದ ಲಕ್ಷ್ಮಮ್ಮ ಮತ್ತು ಮುನಿರಾಜು ಬಿನ್ ಮುನಿನಾರಾಯಣಪ್ಪ, ಮಂಜುನಾಥ ಬಿನ್ ಮುನಿನಾರಾಯಣಪ್ಪ, ಮಂಜುಳಮ್ಮ ಕೋಂ ಮಂಜುನಾಥರವರು ಅಕ್ರಮ ಗುಂಪು ಕಟ್ಟಿಕೊಂಡು ತನ್ನ ಮೇಲೆ ಜಗಳ ತೆಗೆದು ಆ ಪೈಕಿ ನರಸಿಂಹಮೂರ್ತಿ ರವರು ತನ್ನನ್ನು ಕುರಿತು “ಲೇ ಲೋಫರ್ ನನ್ನ ಮಗನೇ ನೀನ್ಯಾರು ನ್ಯಾಯ ಪಂಚಾಯ್ತಿ ಮಾಡಕ್ಕೆ” ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾನೆ. ಅಷ್ಟರಲ್ಲಿ ಗಲಾಟೆ ಶಬ್ದಗಳನ್ನು ಕೇಳಿ ಗಲಾಟೆ ಬಿಡಿಸಲು ಅಡ್ಡ ಬಂದ ತನ್ನ ಮಗನಾದ ಶ್ರೀನಾಥರವರಿಗೆ ನವಿನ್ ಮತ್ತು ಅಶೋಕರವರು ಅಲ್ಲಿಯೇ ಬಿದ್ದಿದ್ದ ದೊಣ್ಣೆಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ನಂತರ ಲಕ್ಷ್ಮಮ್ಮ, ಮುನಿರಾಜು, ಮಂಜುನಾಥ ಮತ್ತು ಮಂಜುಳಮ್ಮರವರು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ಕಾಲುಗಳಿಂದ ಒದ್ದು ನೋವುಂಟು ಮಾಡಿರುತ್ತಾರೆ, ಅಷ್ಟರಲ್ಲಿ ತಮ್ಮ ಗ್ರಾಮದ ದೇವರಾಜು ಬಿನ್ ಮುನಿಯಪ್ಪ, ಮಲ್ಲೇಶಪ್ಪ ಬಿನ್ ಮುನಿಯಪ್ಪ ಮತ್ತು ನಾರಾಯಣಸ್ವಾಮಿ ಬಿನ್ ಆಂಜಿನಪ್ಪರವರು ಅಡ್ಡ ಬಂದು ಮೇಲ್ಕಂಡವರಿಂದ ಗಲಾಟೆ ಬಿಡಿಸಿರುತ್ತಾರೆ. ಮೇಲ್ಕಂಡವರು ಸ್ಥಳದಿಂದ ಹೋಗುವಾಗ ತನ್ನನ್ನು ಕುರಿತು “ನನ್ನ ಮೇಲೆ ಈ ಮೊದಲು ಹಲವಾರು ಕೇಸುಗಳಿದೆ, ಯಾರಿಂದಲೂ ನನ್ನದು ಕಿತ್ತುಕೊಳ್ಳಲು ಆಗಲಿಲ್ಲ ನೀನ್ಯಾರು ಈ ದಿನ ನೀನು ಉಳಿದುಕೊಂಡಿದ್ದೀಯಾ ಇನ್ನೊಂದು ಸಲ ಊರಿನಲ್ಲಿ ನ್ಯಾಯ ಪಂಚಾಯ್ತಿ ಮಾಡಲು ಬಂದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ” ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡ ವಿರುದ್ದ ಸೂಕ್ತ ಕಾನೂನು ರೀತ್ಯ ಕ್ರಮ ಜುರುಗಿಸಲು ಕೋರಿರುವುದಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 56/2021 ಕಲಂ. 143,147,148,323,324,504,506,149 ಐ.ಪಿ.ಸಿ:-

     ದಿನಾಂಕ: 03/02/2021 ರಂದು ಸಂಜೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಲಕ್ಷ್ಮಿದೇವಮ್ಮ ಕೋಂ ಗೋಪಾಲಪ್ಪ, 38 ವರ್ಷ, ಗೊಲ್ಲರು, ಜಿರಾಯ್ತಿ, ಬ್ಯಾಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 5.30 ಗಂಟಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮಗೂ ಮತ್ತು ತಮ್ಮ ಸಂಬಂಧಿಯಾದ ನರಸಿಂಹಮೂರ್ತಿ ಎಂಬುವವರ ನಡುವೆ ಹಳೇಯ ವೈಷಮ್ಯಗಳಿರುತ್ತದೆ. ಹೀಗಿರುವಾಗ ಈ ದಿನ ದಿನಾಂಕ: 03/02/2021 ರಂದು ಬೆಳಿಗ್ಗೆ 08.00 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿ ಇರುವ ನಳಿಕೆಯಲ್ಲಿ ನೀರನ್ನು ಹಿಡಿಯಲು ಹೋದಾಗ ಅಲ್ಲಿಗೆ ತಮ್ಮ ಸಂಬಂಧಿ ಮುನಿಲಕ್ಷ್ಮಮ್ಮ ಕೋಂ ವೆಂಕಟೇಶಪ್ಪ ರವರು ಸಹ ಬಂದಿದ್ದು, ನೀರನ್ನು ಹಿಡಿದುಕೊಂಡು ತಮ್ಮ ಪಾಡಿಗೆ ತಾನು ತಮ್ಮ ಮನೆಯ ಕಡೆಗೆ ಹೋಗಿದ್ದು, ತಾನು ಮನೆಯ ಬಳಿಗೆ ಹೋದಾಗ ತಮ್ಮ ಮೇಕೆಗಳೊಂದಿಗೆ ತಮ್ಮ ಗ್ರಾಮದ ಕೆಲವರ ಮೇಕೆಗಳು ಸಹ ಬಂದಿದ್ದು, ತಾನು ಸದರಿ ಮೇಕೆಗಳನ್ನು ಅಲ್ಲಿಂದ ಓಡಿಸುತ್ತಾ ತನ್ನ ಪಾಡಿಗೆ ತಾನು ಮೇಕೆಗಳನ್ನು ಬೈಯ್ಯುತ್ತಿದ್ದಾಗ ಇದನ್ನು ಕೇಳಿಸಿಕೊಂಡ ತಮ್ಮ ಸಂಬಂಧಿ ವೆಂಕಟೇಶಪ್ಪ ಹಾಗೂ ಆತನ ಪತ್ನಿ ಮುನಿಲಕ್ಷ್ಮಮ್ಮ ತಮ್ಮ ಬಳಿಗೆ ಬಂದು ತನ್ನನ್ನು ಕುರಿತು ಲೋಫರ್ ಸೂಳೆ ಮುಂಡೆ ನಮ್ಮನ್ನು ನೋಡಿ ಏಕೆ ಬೈಯ್ಯುತ್ತಿದ್ದೀಯಾ ಎಂದು ಕೆಟ್ಟ ಮಾತುಗಳಿಂದ ಬೈದಿದ್ದು, ಆ ಪೈಕಿ ವೆಂಕಟೇಶಪ್ಪ ಆತನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಎಡಕೈ ಮೇಲೆ ಹೊಡೆದು ರಕ್ತಗಾಯಪಡಿಸಿದ್ದು, ಆತನ ಪತ್ನಿ ಮುನಿಲಕ್ಷ್ಮಮ್ಮ ಆಕೆಯ ಬಲಕೈ ಮುಷ್ಠಿತಿಂದ ತನ್ನ ತಲೆಗೆ ಗುದ್ದಿ, ತನ್ನ ಜುಟ್ಟನ್ನು ಹಿಡಿದು ಎಳೆದಾಡಿ, ತಾನು ಮೈ ಮೇಲೆ ಧರಿಸಿದ್ದ ಜಾಕೇಟ್ ನ್ನು ಹರಿದು ಹಾಕಿರುತ್ತಾಳೆ. ನಂತರ ಇದೇ ಸಮಯಕ್ಕೆ ನವೀನ್ ಕುಮಾರ್ ಬಿನ್ ನರಸಿಂಹಮೂರ್ತಿ, ಮುನಿರಾಜಪ್ಪ ಬಿನ್ ಲೇಟ್ ಮುನಿನಾರಾಯಣಪ್ಪ, ದೇವರಾಜ ಬಿನ್ ಹನುಮಂತಪ್ಪ, ಮುನಿಕೃಷ್ಣ ಬಿನ್ ಲೇಟ್ ಗೋಪಾಲಪ್ಪ, ಗೋಪಾಲಕೃಷ್ಣಪ್ಪ ಬಿನ್ ಗೋಪಾಲಪ್ಪ, ಅಶೋಕ ಬಿನ್ ನರಸಿಂಹಮೂರ್ತಿ, ಹರೀಶ ಬಿನ್ ಗೋಪಾಲಪ್ಪ, ನರಸಿಂಹಮೂರ್ತಿ ಬಿನ್ ಮುನಿನಾರಾಯಣಪ್ಪ ಮತ್ತು ಮಂಜುನಾಥ ಬಿನ್ ಹನುಮಂತಪ್ಪ ರವರು ಅಕ್ರಮ ಗುಂಪುಕಟ್ಟಿಕೊಂಡು ಬಂದು ತನ್ನನ್ನು ಸುತ್ತುವರೆದು ಎಲ್ಲರೂ ಸೇರಿಕೊಂಡು ಕೈಗಳಿಂದ ಮೈ ಕೈ ಮೇಲೆ ಹೊಡೆದು, ಕೆಳಕ್ಕೆ ತಳ್ಳಿ ಕಾಲುಗಳಿಂದ ಒದ್ದಿರುತ್ತಾರೆ. ಅಷ್ಟರಲ್ಲಿ ವಿಚಾರ ತಿಳಿದು ಅಲ್ಲಿಗೆ ಬಂದ ಗೋಪಾಲಪ್ಪನಿಗೂ ಸಹ ಮೇಲ್ಕಂಡವರು ಸುತ್ತುವರೆದು ಕೈಗಳಿಂದ ಹೊಡೆದಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದ ಗಂಗಮ್ಮ, ಅಂಬರೀಶ, ಆಂಜಿನಪ್ಪ ರವರುಗಳು ಅಡ್ಡ ಬಂದು ಜಗಳ ಬಿಡಿಸಿ ತಮ್ಮನ್ನು ಉಪಚರಿಸಿರುತ್ತಾರೆ. ಮೇಲ್ಕಂಡವರು ಗಲಾಟೆಯ ಸ್ಥಳದಿಂದ ಹೋಗುವಾಗ ಮೇಲ್ಕಂಡವರ ಪೈಕಿ ನರಸಿಂಹಮೂರ್ತಿ ಎಂಬುವವರು ತಮ್ಮನ್ನು ಕುರಿತು ಈ ದಿನ ತಪ್ಪಿಸಿಕೊಂಡಿದ್ದೀರಾ, ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಮುಗಿಸಿಬಿಡುವುದಾಗಿ ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳೀಕೆಯ ದೂರಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.57/2021 ಕಲಂ. 143,147,148,323,324,504,506,149 ಐ.ಪಿ.ಸಿ:-

     ದಿನಾಂಕ: 03/02/2021 ರಂದು ಸಂಜೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಮುನಿಲಕ್ಷ್ಮಮ್ಮ ಕೋಂ ವೆಂಕಟೇಶಪ್ಪ, 32 ವರ್ಷ, ಗೊಲ್ಲರು, ಜಿರಾಯ್ತಿ, ಬ್ಯಾಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 6.00 ಗಂಟಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮಗೂ ಹಾಗೂ ತಮ್ಮ ಭಾವ ಗೋಪಾಲಪ್ಪ ರವರಿಗೆ ಈ ಹಿಂದಿನಿಂದಲೂ ಹಳೆಯ ವೈಷಮ್ಯಗಳಿರುತ್ತೆ. ಹೀಗಿರುವಾಗ ಈ ದಿನ ದಿನಾಂಕ: 03/02/2021 ರಂದು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿ ಇರುವ ನಳಿಕೆಯಲ್ಲಿ ನೀರನ್ನು ಹಿಡಿಯುತ್ತಿದ್ದಾಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ಗೋಪಾಲಪ್ಪನ ಪತ್ನಿ ಲಕ್ಷ್ಮಿದೇವಮ್ಮ ರವರು ತನ್ನನ್ನು ಕುರಿತು ಲೋಫರ್ ಸೂಳೆ ಮುಂಡೆ ನಮ್ಮ ಮನೆಯ ಮುಂದೆ ಇರುವ ನಲ್ಲಿಯಲ್ಲಿ ನೀರನ್ನು ಹಿಡಿಯಲು ಮಾನ ಮರ್ಯಾದೆ ಇಲ್ಲ ಎಂದು ಅವಾಚ್ಯಶಬ್ದಗಳಿಂದ ಬೈದು, ಏಕಾಏಕೀಯಾಗಿ ಕೈಗಳಿಂದ ತನ್ನ ಮೈ ಮೇಲೆ ಹೊಡೆದಳು. ಆಗ ತಮ್ಮಿಬ್ಬರ ನಡುವೆ ಜಗಳ ಶುರು ಆದಾಗ ಗಲಾಟೆಯ ಶಬ್ದವನ್ನು ಕೇಳಿಸಿಕೊಂಡ ಲಕ್ಷ್ಮಿದೇವಮ್ಮನ ಗಂಡ ಗೋಪಾಲಪ್ಪ, ಆವರ ಮಗ ಶ್ರೀನಿವಾಸ, ನವೀನ್ ಬಿನ್ ಮುದ್ದಪ್ಪ, ಮುದ್ದಪ್ಪ ಬಿನ್ ನಾರಾಯಣಪ್ಪ, ಶ್ರೀನಾಥ ಬಿನ್ ಮುದ್ದಪ್ಪ, ಮನೋಜ್ ಬಿನ್ ಮುನಿರಾಜಪ್ಪ ರವರುಗಳು ಅಕ್ರಮ ಗುಂಪುಕಟ್ಟಿಕೊಂಡು ಅಲ್ಲಿಗೆ ಬಂದು ಆ ಪೈಕಿ ಲಕ್ಷ್ಮಿದೇವಮ್ಮ ತನ್ನ ಮೈ ಮೇಲಿದ್ದ ನೈಟಿಯನ್ನು ಹರಿದು ಹಾಕಿ, ಕೈಗಳಿಂದ ಮೈ ಮೇಲೆ ಹೊಡೆದಿರುತ್ತಾಳೆ. ಗೋಪಾಲಪ್ಪ ಆತನ ಕೈಯಲ್ಲಿದ್ದ ದೊಣ್ಣೆಯಿಂದ ತನಗೆ ಹಾಗೂ ಜಗಳ ಬಿಡಿಸಲು ಬಂದ ತನ್ನ ಗಂಡ ವೆಂಟೇಶಪ್ಪ ರವರ ಬೆನ್ನಿನ ಮೇಲೆ ಹಾಗೂ ತನ್ನ ಎಡಕಾಲಿಗೆ ಹೊಡೆದು ಗಾಯಪಡಿಸಿರುತ್ತಾರೆ. ಉಳಿದವರೆಲ್ಲರೂ ತನ್ನನ್ನು ಹಾಗೂ ತನ್ನ ಗಂಡನನ್ನು ಸುತ್ತುವರೆದು ಕೈಗಳಿಂದ ಮೈ ಮೇಲೆ ಹೊಡೆದು, ಕಾಲುಗಳಿಂದ ಒದ್ದು ನೋವನ್ನುಂಟು ಮಾಡಿರುತ್ತಾರೆ. ಆಷ್ಟರಲ್ಲಿ ತಮ್ಮ ಗ್ರಾಮದ ಗೋಪಾಲಪ್ಪ, ಗೋಪಾಲಸ್ವಾಮಿ, ಗೋಪಾಲಕೃಷ್ಣಪ್ಪ ರವರುಗಳು ಬಂದು ಜಗಳ ಬಿಡಿಸಿ, ತಮ್ಮನ್ನು ಉಪಚರಿಸಿರುತ್ತಾರೆ. ಮೇಲ್ಕಂಡವರು ಗಲಾಟೆಯ ಸ್ಥಳದಿಂದ ಹೋಗುವಾಗ ತಮ್ಮ ಭಾವ ಗೋಪಾಲಪ್ಪ ತಮ್ಮನ್ನು ಕುರಿತು ನಿಮ್ಮನ್ನು ಒಂದು ಗತಿ ಕಾಣಿಸುವುದಾಗಿ ಹಾಗೂ ಮುಗಿಸಿ ಬಿಡುವುದಾಗಿ ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.58/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ: 04/02/2021 ರಂದು ಬೆಳಿಗ್ಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಕೆಂಪರಾಜು ಬಿನ್ ನರಸಿಂಹಪ್ಪ, 28 ವರ್ಷ, ನಾಯಕರು, ಆಟೋ ಚಾಲಕ, ಜಂಗಮಾರಪ್ಪನಹಳ್ಳಿ ಗ್ರಾಮ, ಕೇತನಹಳ್ಳಿ ಅಂಚೆ, ಚಿಕ್ಕಬಳ್ಳಾಪುರ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 10.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಾನು ತನ್ನ ಬಾಬತ್ತು ನಂಬರ್ KA-40 A-5075 ಆಟೋವನ್ನು ಬಾಡಿಗೆಗೆ ಚಾಲನೆ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು, ದಿನಾಂಕ: 03/02/2021 ರಂದು ತನ್ನ ತಮ್ಮನಾದ ಚಿಂತಾಮಣಿ ತಾಲ್ಲೂಕು, ಶ್ರೀನಿವಾಸಪುರ ಗ್ರಾಮದ ಕೆಂಪರಾಜು ರವರು ಅವರ ಮಗನ ಕೂದಲು ನೀಡುವ ಶಾಸ್ತ್ರಕ್ಕೆ ತನ್ನನ್ನು ಬರುವಂತೆ ಕರೆದಿದ್ದು, ಅದರಂತೆ ತಾನು ತನ್ನ ಬಾಬತ್ತು ನಂಬರ್ KA-40 A-5075 ಆಟೋವನ್ನು ತೆಗೆದುಕೊಂಡು ಶಿಡ್ಲಘಟ್ಟ ಮಾರ್ಗವಾಗಿ ಚಿಂತಾಮಣಿ ಕಡೆ ಬರುತ್ತಿದ್ದಾಗ ಉಪ್ಪಾರಪೇಟೆ ಗ್ರಾಮದ ಬಳಿ ಯಾರೋ ಇಬ್ಬರು ಪ್ರಯಾಣಿಕರು, ಆಟೋವನ್ನು ನಿಲ್ಲಿಸಿ ತಮ್ಮನ್ನು ಚಿಂತಾಮಣಿ ನಗರದ ಬಾಗೇಪಲ್ಲಿ ಸರ್ಕಲ್ ಬಳಿ ಬಿಡುವಂತೆ ಹೇಳಿ ಆಟೋವನ್ನು ಹತ್ತಿಕೊಂಡಿದ್ದು, ಅದರಂತೆ ತಾವು ಮೂರು ಜನ ಚಿಂತಾಮಣಿ ಕಡೆಗೆ ತಿಮ್ಮಸಂದ್ರ ಗ್ರಾಮದ ಬಳಿ ಇರುವ ಬಿ.ವಿ.ಎಂ ಕಲ್ಯಾಣ ಮಂಟಪದ ಬಳಿ ಬರುತ್ತಿದ್ದಾಗ ತಮ್ಮ ಎದರುಗಡೆಯಿಂದ ಅಂದರೆ ಚಿಂತಾಮಣಿ ನಗರದ ಕಡೆಯಿಂದ ಮಹೇಂದ್ರ ಕಂಪನಿಯ ಕ್ಯಾಂಟರ್ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡಿಕೊಂಡು ಬರುತ್ತಿದ್ದ ಆಟೋವಿಗೆ ಡಿಕ್ಕಿ ಹೊಡೆಸಿ, ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋದ ಪರಿಣಾಮ ಆಟೋ ಮುಂಭಾಗ ಜಖಂ ಗೊಂಡು, ತನ್ನ ತಲೆಯೆ ಹಣೆಗೆ ಮತ್ತು ಬಲಕೈ ಕಿರು ಬೆರಳಿಗೆ ರಕ್ತಗಾಯವಾಗಿರುತ್ತೆ. ಆಟೋನಲ್ಲಿದ್ದ ಪ್ರಯಾಣಿಕರಾದ ಸಲೀಂ ಬಿನ್ ನಾಸೀರ್ ಹಾಗೂ ಪ್ರದೀಪ್ ರವರಿಗೂ ಸಹ ಸಣ್ಣಪುಟ್ಟ ಗಾಯಗಳಾಗಿರುತ್ತೆ. ಆದ್ದರಿಂದ ತಮಗೆ ಅಪಘಾತಪಡಿಸಿ, ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿರುವ ಕ್ಯಾಂಟರ್ ನ್ನು ಪತ್ತೆಮಾಡಿ, ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.58/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ: 04/02/2021 ರಂದು ಬೆಳಿಗ್ಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಕೆಂಪರಾಜು ಬಿನ್ ನರಸಿಂಹಪ್ಪ, 28 ವರ್ಷ, ನಾಯಕರು, ಆಟೋ ಚಾಲಕ, ಜಂಗಮಾರಪ್ಪನಹಳ್ಳಿ ಗ್ರಾಮ, ಕೇತನಹಳ್ಳಿ ಅಂಚೆ, ಚಿಕ್ಕಬಳ್ಳಾಪುರ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 10.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಾನು ತನ್ನ ಬಾಬತ್ತು ನಂಬರ್ KA-40 A-5075 ಆಟೋವನ್ನು ಬಾಡಿಗೆಗೆ ಚಾಲನೆ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು, ದಿನಾಂಕ: 03/02/2021 ರಂದು ತನ್ನ ತಮ್ಮನಾದ ಚಿಂತಾಮಣಿ ತಾಲ್ಲೂಕು, ಶ್ರೀನಿವಾಸಪುರ ಗ್ರಾಮದ ಕೆಂಪರಾಜು ರವರು ಅವರ ಮಗನ ಕೂದಲು ನೀಡುವ ಶಾಸ್ತ್ರಕ್ಕೆ ತನ್ನನ್ನು ಬರುವಂತೆ ಕರೆದಿದ್ದು, ಅದರಂತೆ ತಾನು ತನ್ನ ಬಾಬತ್ತು ನಂಬರ್ KA-40 A-5075 ಆಟೋವನ್ನು ತೆಗೆದುಕೊಂಡು ಶಿಡ್ಲಘಟ್ಟ ಮಾರ್ಗವಾಗಿ ಚಿಂತಾಮಣಿ ಕಡೆ ಬರುತ್ತಿದ್ದಾಗ ಉಪ್ಪಾರಪೇಟೆ ಗ್ರಾಮದ ಬಳಿ ಯಾರೋ ಇಬ್ಬರು ಪ್ರಯಾಣಿಕರು, ಆಟೋವನ್ನು ನಿಲ್ಲಿಸಿ ತಮ್ಮನ್ನು ಚಿಂತಾಮಣಿ ನಗರದ ಬಾಗೇಪಲ್ಲಿ ಸರ್ಕಲ್ ಬಳಿ ಬಿಡುವಂತೆ ಹೇಳಿ ಆಟೋವನ್ನು ಹತ್ತಿಕೊಂಡಿದ್ದು, ಅದರಂತೆ ತಾವು ಮೂರು ಜನ ಚಿಂತಾಮಣಿ ಕಡೆಗೆ ತಿಮ್ಮಸಂದ್ರ ಗ್ರಾಮದ ಬಳಿ ಇರುವ ಬಿ.ವಿ.ಎಂ ಕಲ್ಯಾಣ ಮಂಟಪದ ಬಳಿ ಬರುತ್ತಿದ್ದಾಗ ತಮ್ಮ ಎದರುಗಡೆಯಿಂದ ಅಂದರೆ ಚಿಂತಾಮಣಿ ನಗರದ ಕಡೆಯಿಂದ ಮಹೇಂದ್ರ ಕಂಪನಿಯ ಕ್ಯಾಂಟರ್ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡಿಕೊಂಡು ಬರುತ್ತಿದ್ದ ಆಟೋವಿಗೆ ಡಿಕ್ಕಿ ಹೊಡೆಸಿ, ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋದ ಪರಿಣಾಮ ಆಟೋ ಮುಂಭಾಗ ಜಖಂ ಗೊಂಡು, ತನ್ನ ತಲೆಯೆ ಹಣೆಗೆ ಮತ್ತು ಬಲಕೈ ಕಿರು ಬೆರಳಿಗೆ ರಕ್ತಗಾಯವಾಗಿರುತ್ತೆ. ಆಟೋನಲ್ಲಿದ್ದ ಪ್ರಯಾಣಿಕರಾದ ಸಲೀಂ ಬಿನ್ ನಾಸೀರ್ ಹಾಗೂ ಪ್ರದೀಪ್ ರವರಿಗೂ ಸಹ ಸಣ್ಣಪುಟ್ಟ ಗಾಯಗಳಾಗಿರುತ್ತೆ. ಆದ್ದರಿಂದ ತಮಗೆ ಅಪಘಾತಪಡಿಸಿ, ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿರುವ ಕ್ಯಾಂಟರ್ ನ್ನು ಪತ್ತೆಮಾಡಿ, ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.11/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 03/02/2021 ರಂದು ಸಂಜೆ 6-30 ಗಂಟೆಗೆ ಶ್ರೀ ಎನ್.ರತ್ನಯ್ಯ, ಪಿ.ಎಸ್.ಐ ಪಾತಪಾಳ್ಯ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೇ, ತಾನು ಈ ದಿನ ದಿನಾಂಕ: 03/02/2021 ರಂದು ಸಂಜೆ 4-45 ಗಂಟೆಯ ಸಮಯದಲ್ಲಿ ನಾನು ಸಿಬ್ಬಂದಿಯಾದ ಸಿಪಿಸಿ-234 ಸುರೇಶ ಕೊಂಡಗುಳಿ, ಸಿಪಿಸಿ-436 ನಂದೀಶ್ವರ ನೆಲ್ಕುದ್ರಿ ಹಾಗೂ ಚಾಲಕ ಎ.ಹೆಚ್.ಸಿ-21 ಸತ್ಯಾನಾಯಕ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-59 ರಲ್ಲಿ ನಾರೇಮದ್ದೇಪಲ್ಲಿ ಗ್ರಾಮದ ಬಳಿ ಗಸ್ತಿನಲ್ಲಿ ಇದ್ದಾಗ ಜಂಗಾಲಪಲ್ಲಿ ಗ್ರಾಮದ ನಾಗರಾಜ ಬಿನ್ ಲೇಟ್ ವೆಂಕಟರವಣಪ್ಪ, ಎಂಬುವವರು ತನ್ನ ಮನೆಯ ಬಳಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ನನಗೆ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿ ಹಾಗೂ ಪಂಚರೊಂದಿಗೆ ಮೇಲ್ಕಂಡ ನಾಗರಾಜ ಬಿನ್ ಲೇಟ್ ವೆಂಕಟರವಣಪ್ಪ, ರವರ ಮನೆಯ ಬಳಿ ಹೋಗಿ ಜೀಪನ್ನು ನಿಲ್ಲಿಸುತ್ತಿದ್ದಂತೆ ಜೀಪನ್ನು ಕಂಡು ಮನೆಯ ಮುಂಭಾಗದಲ್ಲಿ ಮದ್ಯಪಾನ ಮಾಡುತ್ತಿದ್ದ ಯಾರೋ ಒಬ್ಬ ಆಸಾಮಿಯು  ಓಡಿ ಹೋಗಿದ್ದು, ಮನೆಯ ಮುಂದೆ ಒಬ್ಬ ಆಸಾಮಿ ಇದ್ದು ಹೆಸರು ವಿಳಾಸ ಕೇಳಲಾಗಿ ನಾಗರಾಜ ಬಿನ್ ಲೇಟ್ ವೆಂಕಟರವಣಪ್ಪ, 55 ವರ್ಷ, ಜಿರಾಯ್ತಿ, ಬಲಜಿಗರು, ಜಂಗಾಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ  90 ಎಂ.ಎಲ್ ನ 23 ಒರಿಜಿನಲ್ ಚಾಯ್ಸ್ ಮದ್ಯದ ಟೆಟ್ರಾ ಪಾಕೆಟ್ ಗಳು ( 1 ಲೀಟರ್ 800 ಎಂ.ಎಲ್ ಮದ್ಯ, ಅದರ ಬೆಲೆ ಸುಮಾರು  807/- ರೂ), ಒಂದು ಲೀಟರ್ ನ 01 ಖಾಲಿ ವಾಟರ್ ಬಾಟಲ್, 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ 90 ಎಂ.ಎಲ್ ನ 01 ಖಾಲಿ ಒರಿಜಿನಲ್ ಚಾಯ್ಸ್ ವಿಸ್ಕಿ ಟೆಟ್ರಾ ಪಾಕೆಟ್  ಇದ್ದು ನಾಗರಾಜ ರವರನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಸಂಜೆ 5-00 ರಿಂದ 6-00 ಗಂಟೆಯವರೆಗೂ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಪಂಚನಾಮೆ, ಆರೋಪಿ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.11/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ: 03/02/2021 ರಂದು  ಸಂಜೆ 4-30 ಗಂಟೆಗೆ ಪಿರ್ಯಾದಿ ಅಜೀತ್ , ಅಪ್ಪೇಗೌಡನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ಅಕ್ಕನಾದ ಶ್ರೀಮತಿ. ಆಶ್ವಿನಿ ರವರನ್ನು ಸುಮಾರು 18 ವರ್ಷಗಳ ಹಿಂದೆ ಶಿಡ್ಲಘಟ್ಟ ಟೌನ್ ಉಲ್ಲೂರು ಪೇಟೆ ವಾಸಿ ಚಂದ್ರಶೇಖರ್ ಬಿನ್ ನಾರಾಯಣಪ್ಪ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದು, ಅವರಿಗೆ 1ನೇ ಹೇಂಮತ್ ಮತ್ತು 2ನೇ ನಮನ್ ಎಂಬ ಇಬ್ಬರು ಗಂಡು ಮಕ್ಕಳಾಗಿದ್ದು, ನಮ್ಮ ಅಕ್ಕ ಭಾವ ರೇಷ್ಮೇ ವ್ಯಾಪಾರ ಮಾಡಿಕೊಂಡು ಸಂಸಾರದಲ್ಲಿ ಅನ್ಯೋನ್ಯವಾಗಿದ್ದರು. ಹೀಗಿರುವಾಗ ದಿನಾಂಕ.02.02.2021 ರಂದು ಮದ್ಯಾಹ್ನ ಸುಮಾರು 1.15 ಗಂಟೆಯಲ್ಲಿ ನಮ್ಮ ಅಕ್ಕ ಅಶ್ವಿನಿ ರವರು ಬೆಂಗಳೂರು ವಿಜಯನಗರದಲ್ಲಿರುವ ನಿರ್ಮಲಾನಂದ ಸ್ವಾಮೀಜಿ ಮಠದಲ್ಲಿ ಕೆಲಸ ಇದೆ ಬೆಂಗಳೂರುಗೆ ಹೋಗಿ ಬರಲು 5000/-ರೂ ಹಣ ಕಳುಹಿಸು ನಾನು ನಿಮ್ಮ ಭಾವ ಮಕ್ಕಳು ಹೋಗಿ ಬರುತ್ತೇವೆಂದು ತಿಳಿಸಿದಾಗ ನಾನು ನನ್ನ ಮೊಬೈಲ್ ನಿಂದ ಗೂಗಲ್ ಪೇ ಮಾಡಿರುತ್ತೇನೆ. ನಂತರ ನಮ್ಮ ಅಕ್ಕ ಭಾವ ಮಕ್ಕಳೊಂದಿಗೆ ಶಿಡ್ಲಘಟ್ಟ ಉಲ್ಲೂರು ಪೇಟೆಯ ಅವರ ಮನೆಯಿಂದ ಹೋಗಿ ಬರುವುದಾಗಿ ನನಗೆ ಪೋನ್ ಮೂಲಕ ತಿಳಿಸಿ ಅವರ ಕೆಎ.01.ಎಂ.ಡಿ.3358 ಕಾರಿನಲ್ಲಿ ಹೋದವರು ರಾತ್ರಿಯಾದರೂ ಮನೆಗೆ ವಾಪಸ್ಸು ಬಂದಿರುವುದಿಲ್ಲ. ನಂತರ ನಾನು ನಮ್ಮ ಬಾವನ ಮೊಬೈಲ್ ನಂ.9886919364 ಮತ್ತು ನಮ್ಮ ಅಕ್ಕನ ಮೊಬೈಲ್ ನಂ.9141349595 ಗೆ ಕರೆ ಮಾಡಿದಾಗ ಸ್ವೀಚ್ ಆಪ್ ಆಗಿರುತ್ತೆ. ನಾನು ಶಿಡ್ಲಘಟ್ಟಕ್ಕೆ ಬಂದು ಅಕ್ಕಪಕ್ಕದಲ್ಲಿ ವಿಚಾರ ಮಾಡಿದಾಗ ಇನ್ನೂ ಮನೆಗೆ ವಾಪಸ್ಸು ಬಂದಿಲ್ಲ ಎಂದು ತಿಳಿಸಿದರು. ಇವರು ಎಲ್ಲಿಯೋ ಹೊರಟು ಹೋಗಿ ಕಾಣೆಯಾಗಿರುತ್ತಾರೆ. ನಾವು ಮಠಕ್ಕೆ ಹೋಗಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ.  ಆದ್ದರಿಂದ ಕಾಣೆಯಾದ ನಮ್ಮ ಅಕ್ಕ ಭಾವ ಮತ್ತು ಮಕ್ಕಳನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.12/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:03/02/2020 ರಂದು ಸಂಜೆ 5-45 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ದಿನಾಂಕ:03/02/2020 ರಂದು ಸಂಜೆ 4-00 ಗಂಟೆಯಲ್ಲಿ ಸಿಬ್ಬಂದಿಯವರಾದ  ಸುಬ್ರಮಣಿ, ಹೆಚ್.ಸಿ.97, ಹೆಚ್.ಸಿ.243 ರೆಡ್ಡಪ್ಪ ಮತ್ತು ಜೀಪು ಚಾಲಕ ಮಂಜುನಾಥ ರವರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ಹಳೆ ಬಸ್ಸ್ ನಿಲ್ದಾಣದ ಬಳಿ ಇರುವ ಖಾಲಿ ಜಾಗದಲ್ಲಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ನಾವು ಮೇಲ್ಕಂಡ ಸ್ಥಳಕ್ಕೆ ಸಂಜೆ 4-25 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ಇಬ್ಬರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವ ಆಸಾಮಿಗಳನ್ನು ವಶಕ್ಕೆ ಪಡೆದು ಇವರ ಹೆಸರು ವಿಳಾಸ ಕೇಳಲಾಗಿ 1ನೇ ಕೃಷ್ಣಪ್ಪ ಬಿನ್ ಲೇಟ್ ಪಿಳ್ಳವೆಂಕಟಪ್ಪ,55 ವರ್ಷ,ಪ.ಜಾತಿ, ಅಂಗಡಿ ವ್ಯಾಪಾರ, ವಾಸ:ಸಿದ್ದಾರ್ಥನಗರ, ಶಿಡ್ಲಘಟ್ಟ ಟೌನ್ ಮತ್ತು 2ನೇ ಸಾದಿಕ್ ಬಿನ್ ಅನ್ವರ್ ಪಾಷ, 30 ವರ್ಷ, ಮುಸ್ಲಿಂ ಜನಾಂಗ, ಗಾರೆಕೆಲಸ,ವಾಸ: ಗಾಂಧೀನಗರ, ಶಿಡ್ಲಘಟ್ಟ ಟೌನ್. ಎಂದು ತಿಳಿಸಿರುತ್ತಾರೆ. ಇವರು ಒಂದು ರಟ್ಟಿನ ಬಾಕ್ಸ್ನಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು ಬ್ಯಾಗ್ನಲ್ಲಿ ಪರಿಶೀಲಿಸಲಾಗಿ ಔಡಿರಟಿಚಿಟ ಅಠಛಿಜ 90 ಒಐ ನ 12 ಮದ್ಯದ ಪಾಕೆಟ್ ಗಳಿದ್ದು ಒಂದರ ಬೆಲೆ 35.13 ರೂಗಳಾಗಿದ್ದು, 12 ರ ಬೆಲೆ ಒಟ್ಟು 421-00 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ 90 ಒಐ ನ 04 ಖಾಲಿ ಮದ್ಯದ ಪಾಕೇಟ್ಗಳಿರುತ್ತೆ. ಹಾಗೂ 04-ಪ್ಲಾಸ್ಟಿಕ್ ಗ್ಲಾಸ್ಗಳಿರುತ್ತೆ. ಇವುಗಳನ್ನು ಮುಂದಿನ ತನಿಖೆ ಬಗ್ಗೆ ವಶಕ್ಕೆ ಪಡೆದು ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಮೇಲ್ಕಂಡ ಆಸಾಮಿಗಳನ್ನು ವಶಕ್ಕೆ ಪಡೆದು ಮಾಲು ಸಮೇತ ಠಾಣೆಗೆ ಕರೆದುಕೊಂಡು ಬಂದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 06-02-2021 01:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080