ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.261/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ:02.09.2021 ರಂದು ಸಂಜೆ 4.00 ಗಂಟೆಗೆ  ಪಿರ್ಯಾದಿದಾರರಾದ ಶ್ರೀ ಈಶ್ವರಪ್ಪ ಬಿನ್  ಕೃಷ್ಣಪ್ಪ, 30 ವರ್ಷ, ಕುರುಬರು, ಜಿರಾಯ್ತಿ, ವಾಸ ಪೆರುಮಾಲಪಲ್ಲಿ ಗ್ರಾಮ, ಪುಲೇರಿ ಪೋಸ್ಟ್, ಗೋರೆಂಟ್ಲ ಮಂಡಲಂ, ಹಿಂದೂಪುರ ತಾಲ್ಲೂಕು. ಅನಂತಪುರ ಜಿಲ್ಲೆ, ಆಂದ್ರಪ್ರದೇಶ, ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ  ನಮ್ಮ ತಂದೆಗೆ ಇಬ್ಬರು ಮಕ್ಕಳಿದ್ದು,  1ನೇ ನಮ್ಮ ಅಕ್ಕ ಕಾಂತಮ್ಮ ಮತ್ತು 2ನೇ ನಾನು ಆಗಿರುತ್ತೇನೆ. ನಮ್ಮಿಬ್ಬರಿಗೂ ಮದುವೆಯಾಗಿರುತ್ತದೆ. ನಮ್ಮ ತಂದೆ ಕೃಷ್ಣಪ್ಪ ಬಿನ್ ಲೇಟ್ ಹನುಮಂತಪ್ಪ,  60 ವರ್ಷ, ರವರು ತಕರಾರಿ ವ್ಯಾಪಾರ ಮಾಡುತ್ತಿದ್ದು,  ಈ ದಿನ ಬೆಳಿಗ್ಗೆ 05-00 ಗಂಟೆಯ ಸಮಯದಲ್ಲಿ ನಮ್ಮ ತಂದೆ ನಮ್ಮ ಸ್ವಂತ ಬಾಬತ್ತು ಎಪಿ.02.ಎ.ಎಕ್ಸ್.1167 ನೊಂದಣಿ ಸಂಖ್ಯೆಯ ಟಿ.ವಿ.ಎಸ್. ಸೂಪರ್ ಎಕ್ಸೆಲ್ ದ್ವಿಚಕ್ರ ವಾಹನದಲ್ಲಿ ಪೆಸಲಪರ್ತಿ ಗ್ರಾಮಕ್ಕೆ ಹೋಗಿ ರೈತರ ಬಳಿ ಟಮೋಟೋ ಹಣ್ಣುಗಳನ್ನು ತೆಗೆದುಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೋಗಿರುತ್ತಾರೆ. ನಂತರ ಬೆಳಗ್ಗೆ ಸುಮಾರು 6:00 ಗಂಟೆ ಸಮಯದಲ್ಲಿ ನಮ್ಮ ತಂದೆಗೆ ಪರಿಚಯವಿರುವ ಸೋಮು, ವಡ್ಡೋಳ್ಳಪಲ್ಲಿ ಗ್ರಾಮ ರವರು ನಮ್ಮ ಮನೆಯ ಬಳಿ ಬಂದು ನಿಮ್ಮ ತಂದೆಯವರು ವಡ್ಡೋಳ್ಳಪಲ್ಲಿ ಗ್ರಾಮದ ಸಮೀಪ ದ್ವಿ ಚಕ್ರ ವಾಹನದ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿ ನಿಮ್ಮ ತಂದೆಗೆ ಕಿವಿಯಲ್ಲಿ ಮತ್ತು ಮೂಗಿನಲ್ಲಿ ರಕ್ತ ಬರುತ್ತಿರುವುದಾಗಿ ನನಗೆ ತಿಳಿಸಿರುತ್ತಾರೆ. ನಂತರ ನಾನು ಮತ್ತು ನಮ್ಮ ತಾಯಿ ಆಧಿಲಕ್ಷ್ಮಮ್ಮ ರವರು ಯಾವುದೂ ಆಟೋದಲ್ಲಿ  ಅಲ್ಲಿಗೆ ಹೋಗಿ ನೋಡಲಾಗಿ ನಮ್ಮ ತಂದೆ ದ್ವಿಚಕ್ರ ವಾಹನದಿಂದ ಪಕ್ಕಕ್ಕೆ ಬಿದ್ದಿದ್ದು,  ಕಿವಿಯಲ್ಲಿ ಮತ್ತು ಮೂಗಿನಲ್ಲಿ ರಕ್ತ ಬರುತ್ತಿರುವುದು ನಿಜವಾಗಿರುತ್ತದೆ,  ತಕ್ಷಣ ನಾನು ಮತ್ತು ನಮ್ಮ ತಾಯಿ ಆದಿಲಕ್ಷ್ಮಮ್ಮ ರವರು ಅದೇ ಆಟೋದಲ್ಲಿ ಚಿಕಿತ್ಸೆಗಾಗಿ ಗೋರೆಂಟ್ಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,  ವೈದ್ಯರು ಇಲ್ಲಿ ಆಗುವುದಿಲ್ಲವೆಂದು ತಿಳಿಸಿದ್ದು,  ನಾವುಗಳು ಅಲ್ಲಿಂದ ಆಂಬುಲೈನ್ಸ್ ವಾಹನದಲ್ಲಿ ಅನಂತಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕರ್ನೂಲ್ ಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಅಲ್ಲಿಂದ ನಾವುಗಳು ಆಂಬುಲೈನ್ಸ್ ವಾಹನದಲ್ಲಿ ಗುತ್ತಿ ಸಮೀಪ ಹೋಗುತ್ತಿದ್ದಂತೆ ನಮ್ಮ ತಂದೆ ಮಾರ್ಗ ಮದ್ಯದಲ್ಲಿ ಸುಮಾರು ಬೆಳಗ್ಗೆ ಸುಮಾರು 11:20 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ. ನಮ್ಮ ತಂದೆಯವರು ಬೆಳಗ್ಗೆ ಸುಮಾರು 5:30 ಗಂಟೆ ಸಮಯದಲ್ಲಿ ಪೆಸಲಪರ್ತಿಯಿಂದ ನಮ್ಮ ಗ್ರಾಮಕ್ಕೆ ಬರಲು ವಡ್ಡೋಳ್ಳಪಲ್ಲಿ  ಸಮೀಪ ಬರುತ್ತಿದ್ದಾಗ ದ್ವಿಚಕ್ರ ವಾಹನವನ್ನು ಜೋರಾಗಿ ಸವಾರ ಮಾಡಿಕೊಂಡು ಬಂದು ವಾಹನವನ್ನು ನಿಯಂತ್ರಿಸಲಾಗದೇ ರಸ್ತೆಯಲ್ಲಿ ಬಿದ್ದು ಹೋಗಿ ಅಪಘಾತವಾಗಿರುತ್ತದೆ,  ಅಪಘಾತದ ಬಗ್ಗೆ ನಮಗೆ ಯಾವುದೇ ಅನುಮಾನ ಇರುವುದಿಲ್ಲ,  ಮೃತ ದೇಹವು ಪೆನುಕೊಂಡ ಸರ್ಕಾರಿ ಅಸ್ಪತ್ರೆಯ ಶವಗಾರದಲ್ಲಿ ಇರುತ್ತದೆ,  ಮೃತದೇಹದ ಮೇಲೆ ಮುಂದಿನ ಕ್ರಮ ಜರುಗಿಸಲು ಕೋರುತ್ತೇನೆಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.142/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:03.09.2021 ರಂದು ಬೆಳಿಗ್ಗೆ 10-40 ಗಂಟೆ ಸಮಯದಲ್ಲಿ ಮಾನ್ಯ ಪಿ,ಎಸ್,ಐ ರವರು ಠಾಣೆಯಲ್ಲಿ ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:03.09.2021 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಮೂಸ್ಟೂರು ಗ್ರಾಮದ ವಾಸಿ ಮುನಿಕೃಷ್ಣಪ್ಪ ಬಿನ್ ಲೇಟ್ ಮುನಿಯಪ್ಪ, 38 ವರ್ಷ, ಕೂಲಿ ಕೆಲಸ, ಆದಿ ಕರ್ನಾಟಕ ಜನಾಂಗ, ವಾಸ: ಮೂಸ್ಟೂರು ಗ್ರಾಮ ರವರು ತಮ್ಮ ಮನೆಯ ಮುಂದೆ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಕೊಳ್ಳಲು  ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ.

 

3. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.61/2021 ಕಲಂ. 379 ಐ.ಪಿ.ಸಿ:-

     ದಿನಾಂಕ 03-09-2021 ರಂದು ಪಿರ್ಯಾದಿದಾರರಾದ ಮಂಜು.ವಿ. ಬಿನ್ ಸಿ ವೆಂಕಟೇಶ, 23 ವರ್ಷ, ವಕ್ಕಲಿಗರು, ಕಂದವಾರ ಪೇಟೆ  ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ಕಂಪ್ಯೂಟರ್ ಟೈಪಿಂಗ್ ನಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರರು ತನ್ನ ಸ್ವಂತ ಉಪಯೋಗಕ್ಕಾಗಿ ಬಜಾಜ್ ಪಲ್ಸರ್ 150  ಕೆಎ 40 ಇಎಲ್ 5202 ನೊಂದಣಿ ಸಂಖ್ಯೆಯ ಅದರ ಇಂಜಿನ್ ನಂ DHYWJL73516 ಮತ್ತು ಚಾರ್ಸಿ ನಂ MD2A11CY7JWL22295 ನಂಬರ್ ನ ಸುಮಾರು 40000/- ಬೆಲೆ ಬಾಳುವ  ದ್ವಿಚಕ್ರ ವಾಹನವನ್ನು ಹೊಂದಿದ್ದು ಪ್ರತಿ ದಿನ ಕೆಲಸಕ್ಕೆ ಹೋಗುವಾಗ ತೆಗೆದುಕೊಂಡು ಹೋಗಿ ವಾಪಸ್ಸು ಬಂದು ಮನೆಯ ಮುಂದೆ ನಿಲ್ಲಿಸುತ್ತಿದ್ದು ಈಗಿರುವಾಗ ದಿನಾಂಕ 29-08-2021 ರಂದು ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ಕೆಲಸದಿಂದ ಮನೆಗೆ  ಬಂದು ದ್ವಿಚಕ್ರ ವಾಹನವನ್ನು ಮನೆ ಮುಂದೆ ನಿಲ್ಲಿಸಿದ್ದು ನಂತರ ದಿನಾಂಕ 30-08-2021 ರಂದು ಬೆಳಗ್ಗೆ ಸುಮಾರು 6-00 ಗಂಟೆ ಸಮಯದಲ್ಲಿ ನೋಡಲಾಗಿ ದ್ವಿಚಕ್ರ ವಾಹನವು ಸ್ಥಳದಲ್ಲಿ ಇರುವುದಿಲ್ಲ ನಂತರ ತಾನು ಮನೆಯ ಸುತ್ತಮುತ್ತ ಸ್ನೇಹಿತರು, ಪರಿಚಯಸ್ಥರು, ಸಂಬಂದಿಕರು ಗೊತ್ತಿರುವ ಎಲ್ಲ ಕಡೆಗಳಲ್ಲಿ ಹುಡುಕಿದರೂ ಸಹ ಪತ್ತೆಯಾಗಿರುವುದಿಲ್ಲ. ಅದ್ದರಿಂದ ದಿನಾಂಕ 03-09-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೆ. ತನ್ನ ದ್ವಿಚಕ್ರ ವಾಹನವನ್ನು ಕಳವು ಮಾಡಿರುವ ಅರೋಪಿತನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

4. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.62/2021 ಕಲಂ. 32,34 ಕೆ.ಇ ಆಕ್ಟ್:-

     ದಿನಾಂಕ; 03-09-2021 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಸಿಬಿ/ಸಿ.ಇಎನ್ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಶ್ರೀಮತಿ ಸರಸ್ವತಮ್ಮ ರವರು ಠಾಣೆಗೆ ಹಾಜರಾಗಿ ಕೊಟ್ಟ ಆರೋಪಿತನು, ಪಂಚನಾಮೆ, ಮಾಲು, ಹಾಗೂ ವರದಿಯ ದೂರನ್ನು ಪಡೆದುಕೊಂಡಿದ್ದರ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ; 03-09-2021 ರಂದು ತಾನು ಮತ್ತು ಸಿಬ್ಬಂದಿಯವರಾದ ಸಿ.ಹೆಚ್.ಸಿ-195 ಶ್ರೀ ಮುರಳಿಧರ,ಹಾಗೂ ಸಿ.ಪಿ.ಸಿ-527 ಶ್ರೀ ಮಧು ಹೆಚ್.ಕೆ, ಜೀಪಿ ನ ಚಾಲಕ ಎ.ಹೆಚ್.ಸಿ-13 ಶ್ರೀ ಸುಶೀಲ್ ಕುಮಾರ್ ರವರೊಂದಿಗೆ ಕೆ.ಎ-40-ಜಿ-58 ರ ಸರ್ಕಾರಿ ಜೀಪಿನಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ವಾಪಸಂದ್ರ, ಎಂ.ಜಿ ರಸ್ತೆ, ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ ಸುಮಾರು 12.45 ಗಂಟೆಗೆ ಶಿಡ್ಲಘಟ್ಟ ವೃತ್ತಕ್ಕೆ ಬಂದಾಗ ಬಾತ್ಮಿದಾರರಿಂದ ಮಾಹಿತಿ ಮೇರೆಗೆ ಮದ್ಯಾಹ್ನ ಸುಮಾರು 12.55 ಗಂಟೆಗೆ ಬಿಬಿ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ನ ಬಳಿ ಬರುತ್ತಿದ್ದ ಅಡವಿಗೊಲ್ಲಾರಹಳ್ಳಿ ಗ್ರಾಮದ ವಾಸಿಯಾದ ವೆಂಕಟರಾಯಪ್ಪ ಬಿನ್ ಲೇಟ್ ಹೊನ್ನಪ್ಪ, 56 ವರ್ಷ, ಪ.ಜಾತಿ, ಕೂಲಿ ಕೆಲಸ, ರವರನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡು ಆತನ ಬಳಿ ಇದ್ದ 1545.72 ರೂ ಬೆಲೆ ಬಾಳುವ 3 ಲೀಟರ್ 960 ಎಂ.ಎಲ್ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಪಂಚನಾಮೆ ಕ್ರಮವನ್ನು ಜರುಗಿಸಿರುತ್ತೆ. ಚಿಕ್ಕಬಳ್ಳಾಪುರ ನಗರದ ಮಂಜುನಾಥ ವೈನ್ಸ್ ನ ಮಾಲೀಕರು ಮತ್ತು ಇದೇ ವೈನ್ಸ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುವ ಅಭಿ ರವರುಗಳು ಈ ಅಕ್ರಮ ವ್ಯವಹಾರಕ್ಕೆ ಸಹಕರಿಸಿ ಕರ್ನಾಟಕ ಅಬಕಾರಿ ನಿಯಮಗಳನ್ನು ಉಲ್ಲಂಘನೆ ಮಾಡಿರುತ್ತಾರೆ. ಆರೋಪಿ, ಮಾಲು, ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡಿದ್ದರ ಮೇರೆಗೆ ಈ ಪ್ರ.ವ.ವರದಿ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.389/2021 ಕಲಂ. 341,323,504,506,34 ಐ.ಪಿ.ಸಿ:-

     ದಿನಾಂಕ: 02/09/2021 ರಂದು ಮದ್ಯಾಹ್ನ 3.00 ಗಂಟೆಗೆ ಶ್ರೀಮತಿ ಶಾಹಿದಾ ಕೊಂ ಸೈಯದ್ ಬಾಬು, 50 ವರ್ಷ, ಗೃಹಣಿ, ಮುಸ್ಲಿಂ ಜನಾಂಗ, ಸಂತೇಕಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ತಮಗೂ ಮತ್ತು ತಮ್ಮ ಸಂಬಂದಿ ಮಕ್ಬಲ್ ತಾಜ್ ಬಿನ್ ಲೇಟ್ ಅಬ್ದುಲ್ ಅಜೀಜ್ ರವರಿಗೆ ಪಿತ್ರಾರ್ಜಿತ ಆಸ್ತಿ ಹಂಚಿಕೆಯಲ್ಲಿ ವಿವಾದವಿದ್ದು ಈ ಹಿಂದೆ ಹಲವಾರು ಬಾರಿ ಸಣ್ಣ ಪುಟ್ಟ ಗಲಾಟೆಗಳಾಗಿದ್ದು ತಮ್ಮ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡಿರುತ್ತಾರೆ. ಹೀಗಿರುವಾಗ ದಿನಾಂಕ 25/08/2021 ರಂದು ಸಂಜೆ 5.00 ಗಂಟೆ ಸಮಯದಲ್ಲಿ ತನ್ನ ಮೊಮ್ಮಕ್ಕಳು ತಮ್ಮ ಮನೆಯ ಮುಂದೆ ಆಟ ಆಡುತ್ತಿದ್ದು ಆಗ ತಮ್ಮ ಗ್ರಾಮದ ತಮ್ಮ ಸಂಬಂದಿ ಷಜಿಯಾ ಬಿನ್ ಲೇಟ್ ಅಬ್ದುಲ್ ಅಜೀಜ್, ಬಷೀರಾ ಬಿನ್ ಲೇಟ್ ಅಬ್ದುಲ್ ಅಜೀಜ್ ಮತ್ತು ಸಾದೀಕ್ ಬಿನ್ ಲೇಟ್ ಅಬ್ದುಲ್ ಅಜೀಜ್ ರವರು ಈ ಹಿಂದೆ ನಡೆದ ಜಮೀನಿನ ಗಲಾಟೆಯನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಮೊಮ್ಮಕ್ಕಳನ್ನು ಕುರಿತು ಅವಾಶ್ಚ ಶಬ್ದಗಳಿಂದ ಬೈಯುತ್ತಿದ್ದು ಆಗ ತಾನು ಅಲ್ಲಿಗೆ ಹೋದಾಗ ತನ್ನನ್ನು ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿ, ತನ್ನನ್ನು ಕುರಿತು ಚಿನಾಲ್ ರಾಂಡ್ ನೀನು ಇಲ್ಲಿಗೆ ಬಂದರೆ ನಿನ್ನನು ಸಾಯಿಸಿ ಬಿಡುತ್ತೇವೆ ಎಂದು ಅವಾಶ್ಚ ಶಬ್ದಗಳಿಂದ ಬೈದು ಆ ಪೈಕಿ ಸಾದೀಕ್ ರವರು ಕೈ ಗಳಿಂದ ತನ್ನ ಮೇಲೆ ಹೊಡೆದು ನೋವುಂಟು ಮಾಡಿದನು. ಷಜಿಯಾ ಮತ್ತು ಬಷೀರಾ ರವರು ತನ್ನ ತಲೆ ಕೂದಲನ್ನು ಹಿಡಿದು ಎಳೆದಾಡಿ, ಕೈ ಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದರು. ಅಷ್ಟರಲ್ಲಿ ತಮ್ಮ ಗ್ರಾಮದ ವಾಸಿಗಳಾದ ಕೃಷ್ಣಪ್ಪ ಬಿನ್ ವೆಂಕಟೇಶಪ್ಪ ಮತ್ತು ಬಾಬಾ ಬಿನ್ ಬಾಬು ರವರು ಬಂದು ಮೇಲ್ಕಂಡವರಿಂದ ತನ್ನನ್ನು ರಕ್ಷಿಸಿದರು. ಸದರಿ ಗಲಾಟೆ ಬಗ್ಗೆ ತಮ್ಮ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡೋಣವೆಂದು ಹೇಳಿದ್ದು ಇದುವರೆಗೂ ನ್ಯಾಯ ಪಂಚಾಯ್ತಿ ಮಾಡದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.390/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ 02/09/2021 ರಂದು ರಾತ್ರಿ 8.00 ಗಂಟೆಗೆ ಠಾಣೆಯ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯಾದ ಕರಿಯಪ್ಪ ರವರು ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ: 02/09/2021 ರಂದು  ಪಿ.ಎಸ್.ಐ, ಶ್ರೀ ನಾರಾಯಣಸ್ವಾಮಿ.ಕೆ ರವರು ಆರೋಪಿ, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ 02/09/2021 ರಂದು ಮದ್ಯಾಹ್ನ 2.00 ಗಂಟೆ ಸಮಯದಲ್ಲಿ ತಾನು ಠಾಣಾ ಸರಹದ್ದು ಗಸ್ತಿನಲ್ಲಿದ್ದಾಗ ಚಿಂತಾಮಣಿ ತಾಲ್ಲೂಕು ಚಿನ್ನಸಂದ್ರ ಗ್ರಾಮದ ಕಣ್ಣಪ್ಪ @ ಕದಿರಪ್ಪ ರವರ ಟಿ ಅಂಗಡಿ ಮುಂಬಾಗದಲ್ಲಿ ಯಾರೋ ಆಸಾಮಿ ಮಟ್ಕಾ ಸಂಖ್ಯೆಗಳನ್ನು ಬರೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಠಾಣೆಯ ಸುರೇಶ್ ಸಿ.ಹೆಚ್.ಸಿ-57 ಮತ್ತು ಜಗದೀಶ್ ಸಿ.ಹೆಚ್.ಸಿ-41 ರವರನ್ನು ಹಾಗೂ ಪಂಚರನ್ನು ಕರೆದುಕೊಂಡು ಕನ್ನಂಪಲ್ಲಿ ಮಾರ್ಗವಾಗಿ ಕಡಪ-ಬೆಂಗಳೂರಿನ ರಸ್ತೆಯ ಚಿನ್ನಸಂದ್ರ ಗ್ರಾಮದ ಹೆದ್ದಾರಿಯ ಬಳಿ ಇರುವ ಕಣ್ಣಪ್ಪ @ ಕದಿರಪ್ಪ ರವರ ಟಿ ಅಂಗಡಿ ನಿಂದ ಸ್ವಲ್ಪ ದೂರದಲ್ಲಿ ನಿಂತುಕೊಂಡು ನೋಡಲಾಗಿ ಯಾರೋ ಓಬ್ಬ ವ್ಯಕ್ತಿ ಕೈಯಲ್ಲಿ  ಚೀಟಿ ಮತ್ತು ಪೆನ್ನನ್ನು ಹಿಡಿದುಕೊಂಡು 1 ರೂಗೆ 80 ರೂ ಕೊಡುವುದಾಗಿ ಕೂಗಿಕೊಂಡು ಚೀಟಿಯಲ್ಲಿ ಮಟ್ಕಾ ಸಂಖ್ಯೆಗಳನ್ನು ಬರೆಯುತ್ತಿದ್ದನು. ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಯಾರೋ ಸಾರ್ವಜನಿಕರು ಪೋಲಿಸರು ಎಂದು ಕೂಗಿಕೊಂಡಿದ್ದು ಆಗ ಟಿ ಅಂಗಡಿಯಲ್ಲಿದ್ದ ಆಸಾಮಿ ಓಡಿ ಹೋಗಿರುತ್ತಾನೆ. ತಾವು ಅಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದ ಆಸಾಮಿಯನ್ನು ಹಿಡಿದು ಹೆಸರು ಮತ್ತು ವಿಳಾಸ ತಿಳಿಯಲಾಗಿ (1) ಮುನಿನಾರಾಯಣ ಬಿನ್ ಲೇಟ್ ನಾರಾಯಣಪ್ಪ, 50 ವರ್ಷ, ಆದಿ ಕರ್ನಾಟಕ ಜನಾಂಗ, ರೇಷ್ಮೇ ಕೆಲಸ, ಚಿನ್ನಸಂದ್ರ ಗ್ರಾಮ ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿರುತ್ತಾನೆ. ತಾವುಗಳು ಪಂಚರ ಸಮಕ್ಷಮ ಅಂಗಶೋಧನೆ ಮಾಡಲಾಗಿ ಅವರ ಬಳಿ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 845 ರೂಗಳಿದ್ದು, ಸದರಿ  ಮಟ್ಕಾ ಹಣದ ಬಗ್ಗೆ ವಿಚಾರಿಸಲಾಗಿ ನಾನು ಮಟ್ಕಾ ಚೀಟಿ ಬರೆದು, ಅದರಿಂದ ಬಂದ ಹಣ ಮತ್ತು ಚೀಟಿಯನ್ನು ಇದೇ ಟಿ ಅಂಗಡಿ ಮಾಲೀಕ ಕಣ್ಣಪ್ಪ @ ಕದಿರಪ್ಪ, ನಾಯಕ ಜನಾಂಗ, ಟಿ ಅಂಗಡಿ ಮಾಲೀಕ, ಚಿನ್ನಸಂದ್ರ ಗ್ರಾಮ ರವರಿಗೆ ಕೋಡುತ್ತೇನೆ. ಕಣ್ಣಪ್ಪ ರವರು ಸದರಿ ಹಣ ಮತ್ತು ಚೀಟಿಯನ್ನು ಚಿಂತಾಮಣಿ ನಗರದ ಮೆಹಬೂಬ್ ನಗರ ವಾಸಿ ತನ್ವಿರ್ @ ತನ್ನು ಬಿನ್ ಪೈರೋಜ್, 37 ವರ್ಷ ರವರಿಗೆ ಕೊಡುವುದಾಗಿ ತಿಳಿಸಿರುತ್ತಾನೆ. ನಂತರ ಮದ್ಯಾಹ್ನ 2.30 ಗಂಟೆಯಿಂದ 3.30 ಗಂಟೆಯವರೆಗೆ ಧಾಳಿ ಪಂಚನಾಮೆಯನ್ನು ಕೈಗೊಂಡು ಸದರಿ ಆಸಾಮಿ ಮತ್ತು ವರದಿಯೊಂದಿಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ಕಲಂ 78(3) ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಯದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿದ್ದು, ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.212/2021 ಕಲಂ. 15(A),32(3)  ಕೆ.ಇ  ಆಕ್ಟ್:-

     ದಿನಾಂಕ:28/08/2021 ರಂದು ಸಂಜೆ 5-00 ಗಂಟೆಗೆ ಫಿರ್ಯಾದುದಾರರಾದ ಶ್ರೀ ಕೆ. ಸಿ. ವಿಜಯ್ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ: 28/08/2021 ರಂದು  ಮದ್ಯಾಹ್ನ 2-00  ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ಕಸಬಾ ಹೋಬಳಿ ಹಾಲಗಾನಹಳ್ಳಿ ಪೋಸ್ಟ್, ಗಾಂಧಿ ನಗರ  ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಹೆಚ್.ಸಿ-171 ಬಾಬು.ಸಿ. ಮತ್ತು ಪಿ.ಸಿ-60 ನರಸಿಂಹ ಮೂರ್ತಿ  ರವರೊಂದಿಗೆ   ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538  ರಲ್ಲಿ  ಗಾಂದಿನಗರ ಗ್ರಾಮದಲ್ಲಿ  ಹೋಗಿ , ಅಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಮದ್ಯಾಹ್ನ 3-00   ಗಂಟೆಗೆ   ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ.  ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ  ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ಗೋಪಾಲರೆಡ್ಡಿ ಬಿನ್ ಲೇಟ್ ಹನುಮಂತರೆಡ್ಡಿ ,45 ವರ್ಷ, ವಕ್ಕಲಿಗರು, ವ್ಯವಸಾಯ, ಗಾಂದಿನಗರ ಗ್ರಾಮ, ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು    ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 20   ಟೆಟ್ರಾ ಪಾಕೆಟ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 800 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 702.6/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ   ಸ್ಥಳದಲ್ಲಿ ಸಂಜೆ  3-30 ಗಂಟೆಯಿಂದ   ಸಂಜೆ 4-30   ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ   90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 20  ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 5-00 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,   ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ದೂರಾಗಿರುತ್ತೆ. ದಿನಾಂಕ:02/09/2021 ರಂದು ಮದ್ಯಾಹ್ನ 13-15 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ಮೋಹನ ಕುಮಾರ್ ರವರು ತಂದು ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪತ್ರ ನೀಡಿದ ಮೇರೆಗೆ ಠಾಣಾ ಮೊ.ಸಂ 212/2021 ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.213/2021 ಕಲಂ. 15(A),32(3)  ಕೆ.ಇ  ಆಕ್ಟ್:-

     ದಿನಾಂಕ:28/08/2021 ರಂದು ಮಾನ್ಯ ಸಿ.ಪಿ.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ಮೆಮೋ ದೂರಿನ ಸಾರಾಂಶ ಏನೆಂಧರೆ: ಆದ ನಾನು ಸೂಚಿಸುವುದೇನೆಂದರೆ, ದಿನಾಂಕ:28/08/2021 ರಂದು ಮದ್ಯಾಹ್ನ 1-00 ಗಂಟೆಯಲ್ಲಿ ವೃತ್ತ ಕಛೇರಿಯಲ್ಲಿದ್ದಾಗ ದೊಡ್ಡಕುರುಗೋಡು ಗ್ರಾಮದ ಬಳಿ ಇರುವ ರಾಜಲಪ್ಪ ದೇವಸ್ಥಾನದ ಬಳಿ ಇರುವ ಪೆಟ್ಟಿಗೆ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಯಾದ,ಹೆಚ್.ಸಿ-224 ಮತ್ತು ಎಪಿಸಿ-133 ಹೇಮಂತ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-1234 ರಲ್ಲಿ ದೊಡ್ಡಕುರುಗೋಡು ಗ್ರಾಮದ ಬಳಿ ಮದ್ಯಾಹ್ನ 1-30 ಗಂಟೆಗೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ತನ್ನ ಅಂಗಡಿಯ ಮುಂದೆ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಅಂಗಡಿ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಹಾಗೂ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು ನರಸಿಂಹಮೂರ್ತಿ ಕೆ.ಎನ್. ಬಿನ್ ನರಸಿಂಹಪ್ಪ, 34 ವರ್ಷ, ಈಡಿಗರು, ವ್ಯಾಪಾರ, ದೊಡ್ಡಕುರುಗೋಡು ಗ್ರಾಮ, ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ.ಎಲ್. ಸಾಮರ್ಥ್ಯದ HAY WARDS CHEERS WHISKY ಯ 10 ಟೆಟ್ರಾ ಪಾಕೆಟ್ ಗಳು ಮತ್ತು 180 ಎಂ.ಎಲ್ ನ ಓಲ್ಡ್ ಟವರೆನ್ ವಿಸ್ಕಿಯ 2 ಪಾಕೆಟ್ ಗಳು ಇದ್ದು ಇವುಗಳ ಒಟ್ಟು ಸಾಮರ್ಥ್ಯ 1 ಲೀಟರ್ 260 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 422/- ರೂಗಳಾಗಿರುತ್ತೆ. 90 ಎಂ.ಎಲ್. ಸಾಮರ್ಥ್ಯದ HAY WARDS CHEERS WHISKY ಯ ಒಂದು ಟೆಟ್ರಾ ಪಾಕೆಟ್ ಬೆಲೆ ರೂ 35.13 ಗಳಾಗಿದ್ದು,. ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಮದ್ಯಾಹ್ನ 1-40 ಗಂಟೆಯಿಂದ 2-40 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 90 ಎಂ.ಎಲ್. ಸಾಮರ್ಥ್ಯದ HAY WARDS CHEERS WHISKY ಯ 10 ಟೆಟ್ರಾ ಪಾಕೆಟ್ ಗಳು ಮತ್ತು 180 ಎಂ.ಎಲ್ ನ ಓಲ್ಡ್ ಟವರೆನ್ 2 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 04  ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 04 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಮದ್ಯಾಹ್ನ 3-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತೇನೆ. ದಿನಾಂಕ:03/09/2021 ರಂದು ಬೆಳಿಗ್ಗೆ 09-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ರವರು ತಂದು ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪತ್ರ ನೀಡಿದ ಮೇರೆಗೆ ಠಾಣಾ ಮೊ.ಸಂ 211/2021 ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿರುತ್ತೆ.

 

9. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.214/2021 ಕಲಂ. 15(A),32(3) ಕೆ.ಇ  ಆಕ್ಟ್:-

     ದಿನಾಂಕ:28/08/2021 ರಂದು ಸಂಜೆ 7-00 ಗಂಟೆಗೆ ಫಿರ್ಯಾದುದಾರರಾದ ಶ್ರೀ ಕೆ.ಸಿ ವಿಜಯ್ ಕುಮಾರ್ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ: 28/08/2021 ರಂದು  ಸಂಜೆ 4-00  ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ಹೊಸೂರು ಹೋಬಳಿ ಮುದುಗೆರೆ ಗ್ರಾಮದಲ್ಲಿ ಯಾರೋ ತನ್ನ ವಾಸದ ಮನೆಯ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಡಬ್ಲ್ಯೂ.ಹೆಚ್.ಸಿ-07 ಕೆ.ಅನಿತ ಪಿ.ಸಿ-520 ಶ್ರೀನಾಥ್  ರವರೊಂದಿಗೆ   ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538  ರಲ್ಲಿ  ಮುದುಗೆರೆ ಗ್ರಾಮದಕ್ಕೆ  ಹೋಗಿ , ಅಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಸಂಜೆ 5-00  ಗಂಟೆಗೆ   ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ವಾಸದ ಮನೆಯ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ.  ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ  ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ಲಕ್ಷ್ಮಿನಾರಾಯಣ ಬಿನ್ ಲೇಟ್ ನ್ಯಾತಪ್ಪ, 48 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ಮುದುಗೆರೆ ಗ್ರಾಮ, ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು    ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 21  ಟೆಟ್ರಾ ಪಾಕೆಟ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 890 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 737.73/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ   ಸ್ಥಳದಲ್ಲಿ ಸಂಜೆ  5-30 ಗಂಟೆಯಿಂದ   ಸಂಜೆ 6-30   ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ   90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 21  ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 7-00 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ದೂರಾಗಿರುತ್ತೆ. ದಿನಾಂಕ:03/09/2021 ರಂದು ಬೆಳಿಗ್ಗೆ 11-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ರವರು ತಂದು ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪತ್ರ ನೀಡಿದ ಮೇರೆಗೆ ಠಾಣಾ ಮೊ.ಸಂ 214/2021 ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿರುತ್ತೆ.

 

10. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.88/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 02/09/2021 ರಂದು ಸಂಜೆ 16.00 ಗಂಟೆಗೆ ಪಿ.ಎಸ್.ಐ ರವರು ಆರೋಪಿ, ಮಾಲು, ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೇನೆಂದರೆ, ದಿನಾಂಕ:02/09/2021 ರಂದು ಮಧ್ಯಾನ್ನ 14-00 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಉಪ್ಪಾರ್ಲಹಳ್ಳಿ ಗ್ರಾಮದ ನಾರಾಯಣಸ್ವಾಮಿ ಬಿನ್ ನರಸಿಂಹಪ್ಪ ರವರು ತಮ್ಮ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಸ್ಥಳದ ಮೇಲೆ ದಾಳಿ ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿ.ಹೆಚ್.ಸಿ –148 ಕೃಷ್ಣಪ್ಪ ಮತ್ತು ಸಿ.ಪಿ.ಸಿ 484 ಶಿವಣ್ಣ ವಿ.ಎಸ್ ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ಜೀಪ್ ನಲ್ಲಿ ಗುಡಿಸಲಹಳ್ಳಿ ಕ್ರಾಸ್ ಬಳಿ ಹೋಗಿ ಕ್ರಾಸ್ ನಲ್ಲಿದ್ದವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಉಪ್ಪಾರ್ಲಹಳ್ಳಿ ಗ್ರಾಮದ ನಾರಾಯಣಸ್ವಾಮಿ ಬಿನ್ ನರಸಿಂಹಪ್ಪರವರ ಮನೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮನೆ ಮಾಲೀಕನಾದ ನಾರಾಯಣಸ್ವಾಮಿ ಬಿನ್ ನರಸಿಂಹಪ್ಪ ರವರು ತಮ್ಮ ಮನೆಯ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿಹೋಗಿದ್ದು, ಮನೆಯ ಮಾಲೀಕನನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ನಾರಾಯಣಸ್ವಾಮಿ ಬಿನ್ ನರಸಿಂಹಪ್ಪ, 36 ವರ್ಷ, ನಾಯಕ ಜನಾಂಗ, ವಾಸ ಉಪ್ಪಾರ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿಸಿದನು. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  90 ಎಂ.ಎಲ್ ನ HAYWARDS CHEERS WHISKEY ಮಧ್ಯದ 15 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 15 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 527/-ರೂ ಆಗಿರುತ್ತೆ. ಮದ್ಯ ಒಟ್ಟು 1350 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಗಿ ಇದೆಯೇ ಎಂದು ನಾರಾಯಣಸ್ವಾಮಿ ಬಿನ್ ನರಸಿಂಹಪ್ಪ ರವರನ್ನು ಕೇಳಲಾಗಿ ಇಲ್ಲವೆಂದು ತಿಳಿಸಿರುತ್ತಾನೆ.  ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 14-30 ರಿಂದ 15-30 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು ಮಹಜರ್, ಆಸಾಮಿಯನ್ನು  ನಿಮ್ಮ ಮುಂದೆ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು, ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ನಾರಾಯಣಸ್ವಾಮಿ ಬಿನ್ ನರಸಿಂಹಪ್ಪ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುಲು ನೀಡಿದ ವರದಿ ಸಾರಾಂಶವಾಗಿರುತ್ತೆ.

 

11. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.89/2021 ಕಲಂ. 379 ಐ.ಪಿ.ಸಿ:-

     ದಿನಾಂಕ 02/09/2021 ರಂದು ಸಂಜೆ 17.45 ಗಂಟೆಗೆ ಪಿರ್ಯಾದುದಾರರಾದ ಜಿ.ಎಂ ನರಸಿಂಹಪ್ಪ ಬಿನ್ ನರಸಿಂಹಪ್ಪ,37 ವರ್ಷ, ಆದಿಕರ್ನಾಟಕ ಜನಾಂಗ, ಜಿರಾಯ್ತಿ, ವಾಸ ಗಡಿಗವಾರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲುಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಾನು ಮೇಲ್ಕಂಡಂತೆ ವಾಸವಾಗಿದ್ದು, ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ತಮ್ಮ ಗ್ರಾಮದ ಸರ್ವೆ ನಂ 253/2 ರಲ್ಲಿ ತಮ್ಮ ಮಾವನಾದ ಬೊಡಂಗಿ ವೆಂಕಟಪ್ಪರವರ ಹೆಸರಿನಲ್ಲಿ 3.17 ಎಕರೆ ಜಮೀನು ಇದ್ದು, ಸದರಿ ಜಮೀನಿನಲ್ಲಿ ತಾವು ಈಗ್ಗೆ ಸುಮಾರು ಹತ್ತು ತಿಂಗಳ ಹಿಂದೆ ಕೊಳವೆ ಬಾವಿ ಕೊರೆಸಿದ್ದು, ಸದರಿ ಕೊಳವೆ ಬಾವಿಗೆ ಚಿಂತಾಮಣಿ ಬಳಿಯ ಉಪ್ಪರಪೇಟೆಯಲ್ಲಿ 35000/- ರೂ ಕೊಟ್ಟು ಹಳೇಯ 17.5 ಹೆಚ್.ಪಿ ಮೋಟಾರ್ ಮತ್ತು 35 ಹೆಚ್.ಪಿ ಪಂಪ್ ನ್ನು  ತಂದು ಅಳವಡಿಸಿದ್ದು, ಸದರಿ ಪಂಪ್ ಈಗ್ಗೆ ಸುಮಾರು ಎರಡು ತಿಂಗಳ ಹಿಂದೆ ಕೆಟ್ಟಿದ್ದರಿಂದ ಅದನ್ನು ಸರಿಪಡಿಸಿಕೊಂಡು ಕೊಳವೆ ಬಾವಿಗೆ ಬಿಡುವ ಸಲುವಾಗಿ ಕೊಳವೆ ಬಾವಿ  ಬಳಿ ಆಚೆ ಇಟ್ಟಿದ್ದೆವು. ದಿನಾಂಕ 29/08/2021 ರಂದು ಸಂಜೆ 6-00 ಗಂಟೆಯಲ್ಲಿ ಕೊಳವೆ ಬಾವಿ ಬಳಿಯಿಂದ ಮನೆಗೆ ಬರುವಾಗ ಮೋಟಾರ್ ಪಂಪು ಅಲ್ಲಿಯೇ ಇದ್ದು, ನಂತರ ಸಂಜೆ 7-30 ಗಂಟೆ ಸಮಯದಲ್ಲಿ ಹೋಗಿ ನೋಡಲಾಗಿ 17.5 ಹೆಚ್.ಪಿ ಮೋಟಾರ್ ಮತ್ತು 35 ಹೆಚ್.ಪಿ ಪಂಪ್ ನ್ನು  ಯಾರೋ ಕಳ್ಳರು ಎತ್ತಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಸುತ್ತಮುತ್ತಲ ಗ್ರಾಮಗಳಲ್ಲಿ ಹಾಗೂ ಮೋಟಾರ್ ರಿವೈಂಡಿಂಗ್ ಅಂಗಡಿಗಳಲ್ಲಿ ಹುಡಕಾಡಿ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಿ ಮೋಟಾರ್ ಮತ್ತು ಪಂಪ್ ನ್ನು ಪತ್ತೆ ಮಾಡಿಕೊಡಲು ಕೋರಿ ದೂರಿನ ಸಾರಾಂಶವಾಗಿರುತ್ತದೆ.

 

12. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.112/2021 ಕಲಂ. 420 ಐ.ಪಿ.ಸಿ:-

     ದಿನಾಂಕ.03.09.2021 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ಈಶ್ವರಪ್ಪ, ಶೆಟ್ಟಿಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ನಾನು ಸುಮಾರು 15 ವರ್ಷಗಳ ಹಿಂದೆ ನಮ್ಮ ಗ್ರಾಮದ ಚಿನ್ನಪ್ಪ ರವರ ಮಗಳಾದ ಅಂಗವೀಕಲೆ ಮಮತ ಎಂಬಾಕೆಯನ್ನು ಮದುವೆ ಮಾಡಿಕೊಂಡಿದ್ದು, ನಮಗೆ ಇಬ್ಬರೂ ಗಂಡು ಮಕ್ಕಳಾಗಿರುತ್ತಾರೆ. ನನ್ನ ಹೆಂಡತಿ ಮದುವೆ ಮುಂಚೆಯಿಂದ ಮೂರ್ಛೆ ಕಾಯಿಲೆ ಬಳಲುತ್ತಿದ್ದು, ಕೈಕಾಲುಗಳು ಸ್ವಾಧೀನ ಇರುವುದಿಲ್ಲ. ನಾನೇ ಇವರ ಆರೋಗ್ಯವನ್ನು ನೋಡಿಕೊಳ್ಳುತ್ತಿರುತ್ತೇನೆ. ದಿನಾಂಕ:02/09/2021 ರಂದು ನಾನು ಬೆಳಿಗ್ಗೆ 10-00 ಗಂಟೆಗೆ ನನ್ನ ಕೆಲಸದ ಮೇಲೆ ಚಿಕ್ಕಬಳ್ಳಾಪುರಕ್ಕೆ ಹೋಗಿ ಮದ್ಯಾಹ್ನ 3-00 ಗಂಟೆಗೆ ನಮ್ಮ ಊರಿಗೆ ವಾಪಸ್ಸು ಬಂದಾಗ ನನ್ನ ಹೆಂಡತಿ ಮಮತ ನನ್ನ ಬಳಿ ನಮ್ಮ ಗ್ರಾಮದ ವೆಂಕಟೇಶ ಬಿನ್ ಲೇಟ್ ಶ್ರೀರಾಮಪ್ಪ ಮತ್ತು ಅವರ ಜೊತೆ ಬಂದಿದ್ದ ಸುರೇಶ್ ಬಿನ್ ಸಾವುಕಾರ್ ಮಾರಪ್ಪ ಹೊಸಹುಡ್ಯ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ನನಗೆ ಅಂಗವಿಕಲರಿಗೆ ಸರ್ಕಾರದಿಂದ ಪೇನ್ಷನ್ ಬರುತ್ತೆ. ಶಿಡ್ಲಘಟ್ಟದಲ್ಲಿ ಮಾಡಿಕೊಡುತ್ತೇವೆ ನಿನಗೆ 50,000/-ರೂ ಕೊಡಿಸುತ್ತೇವೆ ಎಂದು ನನ್ನನ್ನು ಕರೆದುಕೊಂಡು ಹೋಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ಕರೆದುಕೊಂಡು ಹೋಗಿ ಯಾರಿಗೋ ಹಣ ಕೊಡಬೇಕು ನಿನ್ನ ಬಳಿ ಇರುವ ಬಂಗಾರದ ಓಲೆಗಳು ತೆಗೆದುಕೊಡು ಅದನ್ನು ಪೈನಾನ್ಸ್ ನಲ್ಲಿ ಅಡ ಇಟ್ಟು ಹಣ ತಂದು ಕೊಡುತ್ತೇವೆ ನಂತರ ಪೇನ್ಷನ್ ಬಂದ ಮೇಲೆ ವಡವೆಗಳು ಬಿಡಿಸಿಕೊಡುವುದಾಗಿ ತಿಳಿಸಿ ನನಗೆ ನಂಬಿಸಿ ನನ್ನಿಂದ ಬಂಗಾರದ ಒಲೆಗಳನ್ನು ತೆಗೆದುಕೊಂಡು ಹೋಗಿ ಶಿಡ್ಲಘಟ್ಟ ಮುತ್ತೂಟ್ ಪೈನಾನ್ಸ್ ನಲ್ಲಿ ಅಡ ಇಟ್ಟು ನನಗೆ 50 ರೂಪಾಯಿ ಕೈಗೆ ಕೊಟ್ಟು ಆಟೋದಲ್ಲಿ ನಮ್ಮೂರಿಗೆ ಕಳುಹಿಸಿಕೊಟ್ಟಿರುತ್ತಾರೆಂದು ತಿಳಿಸಿದರು. ನಂತರ ನಾನು ಯಾಕೆ ಒಡವೆಗಳು ಕೊಟ್ಟಿದ್ದು ನಿನಗೆ ಯಾವುದೇ ಪೆನ್ಷನ್ ಬರುವುದಿಲ್ಲ ನಿನಗೆ ಮೋಸ ಮಾಡಿರುತ್ತಾರೆ ಎಂದು ತಿಳಿಸಿ ನಾನು ನಮ್ಮ ಗ್ರಾಮದ ವೆಂಕಟೇಶ ಮತ್ತು ಸುರೇಶ್ ರವರನ್ನು ಹುಡುಕಾಡಲಾಗಿ ಸಿಕ್ಕಿರುವುದಿಲ್ಲ. ನಮ್ಮ ಗ್ರಾಮದ ವೆಂಕಟೇಶ್ ಮತ್ತು ಆತನ ಸ್ನೇಹಿತ ಸುರೇಶ್ ರವರು ನನ್ನ ಹೆಂಡತಿ ಅಂಗವಿಕಲೆ ಆಗಿದ್ದರಿಂದ ನನ್ನ ಹೆಂಡತಿಗೆ ಪೇನ್ಷನ್ ಮಾಡಿಕೊಡುವುದಾಗಿ ನಂಬಿಸಿ ನನ್ನ ಹೆಂಡತಿಯ ಕಿವಿಗಳಲ್ಲಿದ್ದ ಸುಮಾರು 30,000/-ರೂ ಬೆಲೆಯ ಸುಮಾರು 6 ಗ್ರಾಂ ತೂಕದ ಬಂಗಾರದ ಗುಂಡುಗಳು ಮತ್ತು ಡ್ರಾಪ್ಸ್ ಗಳನ್ನು ತೆಗೆದುಕೊಂಡು ಮುತ್ತೂಟ್ ಪೈನಾನ್ಸ್ ನಲ್ಲಿ ಹಣವನ್ನು ದುರುಪಯೋಗಪಡಿಸಿಕೊಂಡು ನನ್ನ ಹೆಂಡತಿಗೆ ಮೋಸ ಮಾಡಿರುತ್ತಾರೆ. ಅದ್ದರಿಂದ ವೆಂಕಟೇಶ್ ಮತ್ತು ಸುರೇಶ್ ರವರನ್ನು ಪತ್ತೆ ಮಾಡಿ ನನ್ನ ಹೆಂಡತಿಯ ವಡವೆಗಳನ್ನು ವಾಪಸ್ಸು ಕೊಡಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 03-09-2021 05:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080