ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.220/2021 ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ; 2/08/2021 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಪಿ ಸಿ-235 ರವರು ನ್ಯಾಯಾಲಯದಿಂದ ಠಾಣಾ ಎನ್ ಸಿ ಆರ್ ನಂ-214/2021 ನ್ನು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ ದೂರಿನಸಾರಾಂಶವೆನೇಂದರೆ,  ಈ ದಿನ ದಿನಾಂಕ: 30/07/2021 ರಂದು ಸಂಜೆ 7-15 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ಕೊತ್ತಪಲ್ಲಿ ಗ್ರಾಮದ ಮೂರ್ತಿ ಬಿನ್ ಲೇಟ್ ನಾಗರಾಜಪ್ಪ ರವರ ಜಮೀನಿನ ಬಳಿ ಇರುವ ಹುಣಸೇಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವಾಗಿ ಇಟ್ಟು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿಸಿ-235 ಅಶ್ವತ್ ನಾರಾಯಣ, ಪಿಸಿ-237 ವಿನಯ್ ಕುಮಾರ್ ಯಾದವ್, ಪಿಸಿ-278 ಶಬ್ಬೀರ್, ಪಿಸಿ-276 ಸಾಗರ್, ಪಿಸಿ-319 ವಿನಾಯಕ ವಿಶ್ವ ಬ್ರಾಹ್ಮಣ ಮತ್ತು ಜೀಪ್ ಚಾಲಕ ಎ.ಪಿ.ಸಿ-14 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ಜೀಪಿನಲ್ಲಿ ಬಾಗೇಪಲ್ಲಿ ತಾಲ್ಲೂಕು ಕೊತ್ತಪಲ್ಲಿ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಧಾಳಿ ಮಾಡಲು ತಮ್ಮೊಂದಿಗೆ ಸಹಕರಿಸಿ ಧಾಳಿ ಕಾಲದಲ್ಲಿ ಪಂಚರಾಗಿ  ಹಾಜರಿದ್ದು ತನಿಖೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ಅದರಂತೆ ನಾವುಗಳು ಮತ್ತು ಪಂಚರು ಸರ್ಕಾರಿ ಜೀಪ್ ಸಂಖ್ಯೆ ಕೆಎ 40 ಜಿ 537 ರಲ್ಲಿ ಕುಳಿತುಕೊಂಡು ಗ್ರಾಮದ ಹೊರಭಾಗದಲ್ಲಿರುವ ಮೂರ್ತಿ ಬಿನ್ ನಾಗರಾಜಪ್ಪ ಜಮೀನಿಗೆ ಹೋಗುವ ರಸ್ತೆಯಲ್ಲಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ, ಎಲ್ಲರೂ ಜೀಪಿನಿಂದ ಇಳಿದು ದಾರಿಯಲ್ಲಿ ಎಲ್ಲರೂ ನಡೆದುಕೊಂಡು ಸಂಜೆ 7-30 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ನಾವುಗಳು & ಪಂಚರು ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಹುಣಸೇಮರದ ಕೆಳಗೆ ಕುಳಿತು ಹಣವನ್ನು ಪಣವಾಗಿ ಇಟ್ಟು, 100 ರೂ. ಅಂದರ್ಗೆ 100 ರೂ. ಬಾಹರ್ಗೆ ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಮಾಹಿತಿಯನ್ನು ಖಚಿತಪಡಿಸಿಕೊಂಡು, ನಾನು ನೀಡಿದ ಸೂಚನೆಯ ಮೇರೆಗೆ ಪೊಲೀಸ್ ಸಿಬ್ಬಂದಿಯರೆಲ್ಲರೂ ಒಟ್ಟಾಗಿ ಪಂಚರ ಸಮಕ್ಷಮ ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಸುತ್ತುವರೆದಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸುತ್ತಿದ್ದವರನ್ನು ಓಡಿ ಹೋಗದಂತೆ ನಾವು ಸೂಚನೆ ನೀಡಿ ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ಜಹೀರ್ ಬಿನ್ ಷಪೀಉಲ್ಲಾ, 31 ವರ್ಷ, ಮುಸ್ಲಿಂ ಜನಾಂಗ, ಜಿರಾಯ್ತಿ, ವಾಸ: 7 ನೇ ವಾರ್ಡ, ಬಾಗೇಪಲ್ಲಿ ಪುರ 2) ಅಲ್ಲಾಭಾಕಾಷ್ ಬಿನ್ ಪಕ್ರುದ್ದೀನ್, 31 ವರ್ಷ, ಮುಸ್ಲಿಂ ಜನಾಂಗ. ಎಲೆಕ್ಟ್ರೀಷಿಯನ್ ಕೆಲಸ, ವಾಸ: ಕೊತ್ತಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು 3) ಪ್ರಸಾದ್ ಬಿನ್ ರಾಮಮೂರ್ತಿ, 30 ವರ್ಷ, ಬಲಜಿಗರು, ಜಿರಾಯ್ತಿ, ವಾಸ: ಕೊತ್ತಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು 4) ಶ್ರೀಕಾಂತ್ ಬಿನ್ ಮುನಿಯಪ್ಪ, 29 ವರ್ಷ, ಬೋವಿ ಜನಾಂಗ, ಜಿರಾಯ್ತಿ, ವಾಸ: ಕೊತ್ತಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು 5) ಪವನ್ ಬಿನ್ ನರಸಿಂಹಮೂರ್ತಿ, 30 ವರ್ಷ, ಆದಿ ದ್ರಾವಿಡ ಜನಾಂಗ, ಚಾಲಕ, ವಾಸ: 7 ನೇ ವಾರ್ಡ, ಕೊತ್ತಪಲ್ಲಿ ರೋಡ್, ಬಾಗೇಪಲ್ಲಿ ತಾಲ್ಲೂಕು   ಎಂತ ತಿಳಿಸಿರುತ್ತಾರೆ, ಸ್ಥಳದಲ್ಲಿದ್ದ ಮೇಲ್ಕಂಡ 5 ಜನ ಆರೋಪಿಗಳನ್ನು ವಶಕ್ಕೆ ಪಡೆದು, ಪಂಚಾಯ್ತಿದಾರರ ಸಮಕ್ಷಮ ಪರಿಶೀಲಿಸಲಾಗಿ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು 2400/- ರೂ ಹಣವನ್ನು, ಸ್ಥಳದಲ್ಲಿ ಬಿದ್ದಿದ್ದ ಜೂಜಾಟವಾಡಲು ಬಳಸಿದ್ದ 52 ಇಸ್ಪೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಪಂಚನಾಮೆಯ ಮೂಲಕ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು, ಅಸಲು ಧಾಳಿ ಪಂಚನಾಮೆ, ಮಾಲು & ಆರೋಪಿತರನ್ನು ಠಾಣೆಯಲ್ಲಿ ರಾತ್ರಿ 8-30 ಗಂಟೆಗೆ ಹಾಜರುಪಡಿಸುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿರುವ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.221/2021 ಕಲಂ. 73(3) ಕೆ.ಪಿ ಆಕ್ಟ್ :-

     ದಿನಾಂಕ;2/08/2021 ರಂದು ಮಧ್ಯಾಹ್ನ 4-00 ಗಂಟೆ ಸಮಯದಲ್ಲಿ ಪಿ ಸಿ-235 ರವರು ನ್ಯಾಯಾಲಯದಿಂದ ಠಾಣಾ ಎನ್ ಸಿ ಆರ್ ನಂ-217/2021 ನ್ನು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ ದೂರಿನ ಸಾರಾಂಶವೆನೇಂದರೆ ದಿನಾಂಕ 31,07.2021 ರಂದು ಸಂಜೆ 7-15 ಗಂಟೆಯಲ್ಲಿ ಶ್ರೀ ಜಿ.ಆರ್. ಗೋಪಾಲರೆಡ್ಡಿ  ಪಿ.ಎಸ್.ಐ ಬಾಗೇಪಲ್ಲಿ ಪೊಲೀಸ್ ಠಾಣೆ ಆದ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ, ಕುಂಬಾರಪೇಟೆ ರಸ್ತೆಯಲ್ಲಿರುವ ಪಕ್ರುದ್ದೀನ್ ರವರ ಚಿಕನ್ ಆಂಗಡಿಯ ಮುಂಭಾಗದಲ್ಲಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿ,ಪಿ.ಸಿ-18 ಅರುಣ್,ಸಿ.ಪಿ.ಸಿ-214 ಅಶೋಕ್ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-537 ವಾಹನದಲ್ಲಿ  ಜೀಪ್ ಚಾಲಕ ವೆಂಕಟೇಶ್ ಎ.ಹೆಚ್.ಸಿ-14 ರವರೊಂದಿಗೆ  ಎಸ್ ಬಿ ಈ ಮೂಲಕ ನಿಮಗೆ ತಿಳಿಯಪಡಿಸುವುದೆನೆಂದರೆ ಎಮ್ ಸರ್ಕಲ್ ನಲ್ಲಿ ಇದ್ದ ಪಂಚಾಯ್ತಿದಾರರನ್ನು ಕರೆದುಕೊಂಡು ಮೇಲ್ಕಂಡ ವಿಚಾರವನ್ನು ತಿಳಿಸಿ, ಪಂಚರೊಂದಿಗೆ ಸಂಜೆ 7-30 ಗಂಟೆಗೆ ಹೋಗಿ ಕುಂಬಾರಪೇಟೆ ರಸ್ತೆಯಲ್ಲಿ ಜೀಪನ್ನು ನಿಲ್ಲಿಸಿ ನಾವು ಮತ್ತು ಪಂಚರು ನಡೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಪಕ್ರುದ್ದೀನ್ ರವರ ಚಿಕನ್ ಅಂಗಡಿಯ ಮುಂಭಾಗದಲ್ಲಿ  ಯಾರೋ ಒಬ್ಬ ಆಸಾಮಿ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ, 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ ಬಳಿ ಪರಿಶೀಲಿಸಲಾಗಿ  ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 1320/-ರೂ.ಹಣ ಇದ್ದು,  ಆಸಾಮಿಯ ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ  ಫಕ್ರುದ್ದೀನ್ ಬಿನ್ ಟೈಲರ್ ಮಹಮ್ಮದ್ ಸಾಬ್, 58 ವರ್ಷ, ಮುಸ್ಲಿಂ ಜನಾಂಗ, ಚಿಕನ್ ಅಂಗಡಿ ವ್ಯಾಪಾರ ವಾಸ: 17 ನೇ ವಾರ್ಡ, ಬಿಂದು ಕ್ಲಿನಿಕ್ ಮುಂಭಾಗ, ಬಾಗೇಪಲ್ಲಿ ಪುರ ಎಂದು ತಿಳಿಸಿದ್ದು, ಸದರಿ ಆಸಾಮಿಗೆ  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿರುತ್ತಾನೆ. ಆತನ ಬಳಿ ಇದ್ದ ಹಣದ ಬಗ್ಗೆ ವಿಚಾರ ಮಾಡಲಾಗಿ ಸಾರ್ವಜನಿಕರಿಂದ ಜೂಜಾಟದ ಸಮಯದಲ್ಲಿ ವಸೂಲಿ ಮಾಡಿದ ಹಣವೆಂದು ತಿಳಿಸಿರುತ್ತಾನೆ.  ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆಯನ್ನು ಜರುಗಿಸಿ, ಅಸಲು ಪಂಚನಾಮೆ,  ಮಾಲು ಮತ್ತು ಆಸಾಮಿಯನ್ನು ರಾತ್ರಿ 8-30  ಗಂಟೆಗೆ ಠಾಣೆಯಲ್ಲಿ ಮುಂದಿನ ಕ್ರಮ ಜರುಗಿಸಲು ಸೂಚಿಸಿರುವ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.222/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ 02/08/2021 ರಂದು ಸಂಜೆ 6-00 ಗಂಟೆಗೆ ಸಿ ಹೆಚ್ ಸಿ-205 ರಮೇಶ್ ರವರು ಠಾಣೆಗೆ ಹಾಜರಾಗಿ ಮಾಲು, ಅಸಲು ಪಂಚನಾಮೆ ಮತ್ತು ಆರೋಪಿಯೊಂದಿಗೆ ನೀಡಿದ ವರದಿಯ ದೂರಿನ ಸಾರಾಂಶವೆನೇಂದರೆ ಈ ದಿನ ಚಿಕ್ಕಬಳ್ಲಾಪುರ ಡಿ,ವೈಎಸ್ ಪಿ ಸಾಹೇಬರು  ಸಿ ಹೆಸಿ 205 ರಮೇಶ್ ಆದ ನನಗೆ ಮತ್ತು ಸಿ ಹೆಚ್ ಸಿ-59 ಶ್ರೀನಿವಾಸ ರವರರಿಗೆ ಬಾಗೆಪಲ್ಲಿ ತಾಲ್ಲೂಕುನ ಕಡೆ ಅಕ್ರಮ ಚಟುವಟಿಕೆಗಳ ಬಗ್ಗ ಮಾಹಿತಿ ಸಂಗ್ರಹಣೆಗಾಗಿ ಮತ್ತು ದಾಳಿಗಾಗಿ ನೇಮಿಸಿದ್ದು, ಅದರಂತೆ ನಾವು ಬಾಗೇಪಲ್ಲಿ ಪಟ್ಟಣದ ಟಿ, ಬಿ, ಕ್ರಾಸ್ ಕಡೆ ಮಾಹಿತಿಗಾಗಿ ಗಸ್ತುಮಾಡುತ್ತಿದ್ದಾಗ ಸಂಜೆ ಸುಮಾರು 4-30 ಗಂಟೆಯ ಸಮಯದಲ್ಲಿ ಭಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಅಲ್ಲಿಯೇ ಪಂಚರನ್ನು ಬರಮಾಡಿಕೊಂಡ ಅದರಂತೆ ನಾವು ಬಾಗೇಪಲ್ಲಿ ತಾಲ್ಲೂಕು,ಎನ್ ಹೆಚ್ 44 ರಸ್ತೆಯ ಅಗ್ನಿ ಶಾಮಕ ಟಾಣೆಯ ಮುಂಭಾಗವುರುವ ಶ್ರೀನಿವಾಸ ಬಿನ್ ಲೇಟ್ ನಂಜಪ್ಪ,ರವರು ಬಾಬತ್ತು ನಂದಿನಿ ಪ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಸ ಮಾಡಿಕೊಟ್ಟಿದ್ದ, ಈ ಬಗ್ಗೆ ಪಂಚರ ಸಮಕ್ಷಮ ದಾಳಿ ಮಾಡಿ ,ತಮ್ಮ ಬಳಿ ಯಾವುದಾದರೂ ತಮ್ಮ ಬಳಿ ಪರವಾನಗಿ ಇದೆಯೇ ಎಂದು ಕೇಳಲಾಗಿ ಸದರಿರವರು ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾರೆ. ಪಂಚರ ಸಮಕ್ಷಮ ಸದರಿ ಮದ್ಯಪಾನ ಮಾಡುತ್ತಿದ್ದ  ಸ್ಥಳದಲ್ಲಿ ಪರಿಶೀಲಿಸಲಾಗಿ 1] 90 ML HAYWARDS CHEERS WHISKY ಯ 2 ಖಾಲಿ ಟೆಟ್ರಾ ಪಾಕೇಟ್ ಗಳು, 2 ಖಾಲಿ ½ ಲೀಟರ್ ನ ವಾಟರ್ ಬಾಟಲಿಗಳು, ಮದ್ಯಸೇವನೆ ಮಾಡಿರುವ 2 ಖಾಲಿ ಪ್ಲಾಸ್ಟೀಕ್ ಗ್ಲಾಸ್ ಗಳಿರುತ್ತವೆ. ಸ್ಥಳಾವಕಾಶ ಮಾಡಿಕೊಟ್ಟ ರೆಸ್ಟೋರೆಂಟ್ ನ ಮಾಲೀಕರ ಹೆಸರು ವಿಳಾಸ ತಿಳಿಯಲಾಗಿ ಶ್ರೀನಿವಾಸ ಎನ್ ಬಿನ್ ಲೇಟ್ ನಂಜಪ್ಪ 47 ವರ್ಷ, ಬಲಜಿಗರು, 9 ನೇ ವಾರ್ಡ ಬಾಗೇಪಲ್ಲಿ ಟೌನ್ ನಂತರ ರೆಸ್ಟೋರೆಂಟ್ ನಲ್ಲಿಕ್ಯಾಷ್ ಕೌಂಟರ್ ನ ಪಕ್ಕದಲ್ಲಿನ ಒಂದ ಪ್ಲಾಸ್ಟೀಕ್ ಚೀಲದಲ್ಲಿ ನೋಡಲಾಗಿ 90 ML ನ HAYWARDS CHEERS WHISKY 6 ಮಧ್ಯದ ಟೆಟ್ರಾ ಪಾಕೇಟ್ ಗಳು, ಒಟ್ಟು 540 ಎಂ ಎಲ್ ಆಗಿದ್ದು ಇದರ ಬೆಲೆ210/ ರೂ ಗಳಾಗಿರುತ್ತೆ, 2] 180 ML OLD TAVERN WHISKY ಯ 8 ಮಧ್ಯದ ಟೆಟ್ರಾ ಪಾಕೇಟ್ ಗಳು ಇದ ಒಟ್ಟು ಮದ್ಯ 1 ಲೀಟರ್ 440 ಎಂ ಎಲ್ ಆಗಿದ್ದ ಇದರ ಬೆಲೆ 694/- ರೂ ಗಳಾಗಿರುತ್ತದೆ. ಸದರಿ ಒಟ್ಟುಮದ್ಯ 1 ಲೀಟರ್ 980 ಎಂ ಎಲ್ ಆಗಿದ್ದು ಇದರ ಒಟ್ಟು ಬೆಲೆ 904/- ರೂ ಆಗಿರುತ್ತದೆ. ಸದರಿ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ ಶ್ರೀನಿವಾಸ ರವರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಶಕ್ಕೆ ಪಡೆದುಕೊಂಡಿರುತ್ತೇವೆ ಅಮಾನತ್ತು ಪಡಿಸಿಕೊಂಡಿರುವ ಮೇಲ್ಕಂಡ ಮಾಲು, ಅಸಲು ಪಂಚನಾಮೆ  ಮತ್ತು ಆರೋಪಿಯನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ವರದಿಯ ದೂರಾಗಿರುತ್ತೆ.

 

4. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.223/2021 ಕಲಂ. ಮನುಷ್ಯ ಕಾಣೆ :-

     ದಿನಾಂಕ 02/08/2021 ರಂದು ರಾತ್ರಿ 7-15 ಗಂಟೆಗೆ ಫಿರ್ಯಾದಿದಾರರಾದ ನಾಗಮುನಿಯಪ್ಪ ಬಿನ್ ಲೇಟ್ ರಾಮಪ್ಪ, 50 ವರ್ಷ, ಬೋವಿ ಜನಾಂಗ, ಡಿ, ಕೊತ್ತಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನನಗೆ ಇಬ್ಬರು ಮಕ್ಕಳಿದ್ದು ಒಂದು ಹೆಣ್ಣು ಮತ್ತು ಒಂದು ಗಂಡು ಮಗನಿರುತ್ತಾರೆ, ಅವರಲ್ಲಿ ನನ್ನ ಮಗನಾದ  ಎನ್ ಮನೋಹರ ದಿನಾಂಕ 29/07/2021 ರಂದು ಮದ್ಯಾಹ್ನ 12-00 ಗಂಟೆಗೆ ಮನೆಯಿಂದ ಹೊಗೆ ಹೋದವನು ವಾಪಸ್ಸು ಮನೆಗೆ ಬಾರದೆ, ಕಾಣೆಯಾಗಿರುತ್ತಾನೆ. ಈ ಬಗ್ಗೆ ಪರಿಚಯಸ್ಥರು , ಸಂಬಂದಿಕರು ಹಾಗೂ ನಮಗೆ ತಿಳಿದವರಲ್ಲಿ ವಿಚಾರಿಸಲಾಗಿ ಮಾಹಿತಿ ಲಭ್ಯವಾಗಿರುವುದಿಲ್ಲ. ಆದುದರಿಂದ ನನ್ನ ಮಗನಾದ  ಎನ್ ಮನೋಹರ  ನನ್ನ ಪತ್ತೆ ಮಾಡಿಕೊಂಡಬೇಕಾಗಿ ನೀಡಿದ ದೂರಾಗಿರುತ್ತದೆ.

 

5. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.56/2021 ಕಲಂ.379 ಐ.ಪಿ.ಸಿ:-

     ದಿನಾಂಕ:02/08/2021 ರಂದು ಬೆಳಗ್ಗೆ 10.30ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶ ವೇನೆಂದರೆ ತಾನು ದಿನಾಂಕ; 30-07-2021 ರಂದು ಮದ್ಯಾಹ್ನ ಸುಮಾರು 1.00 ಗಂಟೆ ಸಮಯದಲ್ಲಿ ಜಮೀನು ಕೆಲಸಕ್ಕಾಗಿ ಚಿಕ್ಕಬಳ್ಳಾಪುರ ನಗರದ ಎ.ಸಿ ಮತ್ತು ತಾಲ್ಲೂಕು ಕಛೇರಿಯಲ್ಲಿ ಕೆಲಸಕ್ಕಾಗಿ ಬಂದಿದ್ದು ತಾಲ್ಲೂಕು ಕಛೇರಿಯ ಅವರಣದಲ್ಲಿ ತನ್ನ ಬಾಬ್ತು ದ್ವಿ ಚಕ್ರವಾಹನ ಸಂಖ್ಯೆ  ಕೆ.ಎ-40-ಆರ್-6973 ಹೀರೋ ಹೂಂಡಾ ಸ್ಪೇಂಡರ್ ಪ್ಲಸ್  ವಾಹನವನ್ನು ಬಿಟ್ಟು ಎ.ಸಿ.ಕಛೇರಿಗೆ ಹೋಗಿ ಅಲ್ಲಿ ಕೆಲಸ ಮುಗಿಸಿಕೊಂಡು ಮಧ್ಯಾಹ್ನ 1.45 ಗಂಟೆಗೆ ವಾಪಸ್ಸು ಬಂದು ನೋಡಿದಾಗ ತನ್ನ ದ್ವಿ ಚಕ್ರ ವಾಹನ ನಿಲ್ಲಿಸಿದ ಸ್ಥಳದಲ್ಲಿ ಕಾಣಿಸಿರುವುದಿಲ್ಲ ಸುತ್ತಮುತ್ತಲ ಎಲ್ಲಾ ಕಡೆ ಹುಡುಕಾಡಿ  ಮತ್ತು ತನ್ನ ಸ್ನೇಹಿತರನ್ನು,ಇತರರನ್ನು ವಿಚಾರಿಸಿ ಹುಡಕಾಡಿದರೂ ಸಿಕ್ಕಿರುವುದಿಲ್ಲ. ತನ್ನ ವಾಹನದ ಚಾಸ್ಸಿಸ್ ನಂ:MBLHA10EZCHC25298  ಮತ್ತು ಇಂಜಿನ್ ಸಂಖ್ಯೆ:HA10EFCHC20782  ಅಗಿದ್ದು  ಇದರ ಈಗಿನ ಅಂದಾಜು ಬೆಲೆ ಸುಮಾರು 28.000/-ರೂ ಗಳಾಗಿದ್ದು ಅದುದರಿಂದ ತನ್ನ ದ್ವಿಚಕ್ರವಾಹನವನ್ನು ಹುಡುಕಾಡುತ್ತಿದ್ದು ಪತ್ತೆಯಾಗದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿದ್ದು, ತನ್ನ ದ್ವಿ ಚಕ್ರ ವಾಹನವನ್ನು ಮತ್ತು ಕಳುವು ಮಾಡಿರುವ ಅರೋಪಿತನನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.341/2021 ಕಲಂ.379 ಐ.ಪಿ.ಸಿ:-

     ದಿನಾಂಕ: 02/08/2021 ರಂದು ಮದ್ಯಾಹ್ನ 2.30 ಗಂಟೆಗೆ ನವೀನ್ ಬಿನ್ ಲೇಟ್ ರಮೇಶ್, 29 ವರ್ಷ, ವಕ್ಕಲಿಗರು, ನಿಸಾ ಸೆಕ್ಯೂರಿಟಿ ಕಂಪನಿಯಲ್ಲಿ ಸೂಪರ್ ವೈಸರ್, ವಾಸ: ದಿನ್ನೂರು ಗ್ರಾಮ, ಚನ್ನರಾಯಪಟ್ಟಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ 3 ವರ್ಷಗಳಿಂದ ನಿಸಾ ಸೆಕ್ಯೂರಿಟಿ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ನಿರ್ವಹಿಸುತ್ತಿರುತ್ತೇನೆ. ಚಿಂತಾಮಣಿ ತಾಲ್ಲೂಕು ಕೈವಾರ ಬಳಿ ಇಂಡಸ್ ಮೊಬೈಲ್ ಟವರ್ ನ್ನು ಅಳವಡಿಸಿದ್ದು, ಸದರಿ ಟವರ್ ಗೆ ಸುಮಾರು 15 ವರ್ಷಗಳ ಹಿಂದೆ 24 ಬ್ಯಾಟರಿಗಳನ್ನು ಅಳವಡಿಸಿರುತ್ತೆ. ಕೈವಾರ ಟವರ್ ಡೀಸಲ್ ಜನರೇಟರ್ ಗೆ  ಟೆಕ್ನೀಷಿಯನ್ ವೆಂಕಟರೆಡ್ಡಿ ಡೀಸೆಲ್ ತುಂಬಿಸುತ್ತಿರುತ್ತಾರೆ. ಅದರಂತೆ ದಿನಾಂಕ: 29/07/2021 ರಂದು ಮದ್ಯಾಹ್ನ 14.30 ಗಂಟೆಯ ಸಮಯದಲ್ಲಿ ಟೆಕ್ನೀಷಿಯನ್ ವೆಂಕಟರೆಡ್ಡಿ ಡೀಸೆಲ್ ತುಂಬಿಸಿ ಬಂದಿರುತ್ತಾರೆ. ದಿನಾಂಕ: 31/07/2021 ರಂದು ಬೆಳಿಗ್ಗೆ ಸುಮಾರು 11.45 ಗಂಟೆಗೆ ಟೆಕ್ನೀಷಿಯನ್ ವೆಂಕಟರೆಡ್ಡಿ ರವರು ತನಗೆ ಪೊನ್ ಮಾಡಿದ್ದು ವಿಚಾರ ತಿಳಿಯಲಾಗಿ ದಿನಾಂಕ: 31/07/2021 ರಂದು ಬೆಳಿಗ್ಗೆ ಸುಮಾರು 11.30 ಸಮಯಕ್ಕೆ ಕೈವಾರ ಟವರ್ ಆಫ್ ಆಗಿರುವ ಬಗ್ಗೆ ಅಲಾರಮ್ ಮಾಹಿತಿ ತನ್ನ ಮೊಬೈಲ್ ಗೆ ಬಂದಿರುತ್ತದೆ ಎಂದು ತಿಳಿಸಿದ್ದು, ನಂತರ ತಾನು ಮತ್ತು ವೆಂಕಟರೆಡ್ಡಿ ರವರು ಕೈವಾರ ಟವರ್ ಬಳಿಗೆ ಹೋಗಿ ನೋಡಲಾಗಿ  ಟವರ್ ಗೆ ಅಳವಡಿಸಿದ್ದ 24 ಬ್ಯಾಟರಿಗಳು ಇರುವುದಿಲ್ಲ. ದಿನಾಂಕ: 29/07/2021 ರಂದು ಮದ್ಯಾಹ್ನ 14.30 ಗಂಟೆಯಿಂದ ದಿನಾಂಕ:31/07/2021 ರಂದು ಬೆಳಿಗ್ಗೆ ಸುಮಾರು 11.45 ಗಂಟೆಯ ಮದ್ಯೇ ಯಾರೋ ಕಳ್ಳರು ಯಾವುದೋ ಸಮಯದಲ್ಲಿ ಕೈವಾರ ಟವರ್ ಗೆ ಅಳವಡಿಸಿದ್ದ ಸುಮಾರು 24000/- ರೂಗಳ ಬೆಲೆ ಬಾಳುವ  24 ಬ್ಯಾಟರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ತಮ್ಮ ಕಂಪನಿಯ ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು,  ಬ್ಯಾಟರಿಗಳನ್ನು ಕಳ್ಳತನ ಮಾಡಿರುವ ಕಳ್ಳರನ್ನು ಮತ್ತು ಬ್ಯಾಟರಿಗಳನ್ನು ಪತ್ತೆಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದಾಗಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.342/2021 ಕಲಂ.279,337 ಐ.ಪಿ.ಸಿ:-

     ದಿನಾಂಕ: 02/08/2021 ರಂದು ಸಂಜೆ 4.00 ಗಂಟೆಗೆ ಚಂದ್ರಪ್ಪ ಬಿನ್ ನಾರಾಯಣಪ್ಪ, 48 ವರ್ಷ, ಗೊಲ್ಲರು, ಕೂಲಿ ಕೆಲಸ, ಮಣಿಯನಹಳ್ಳಿ ಗ್ರಾಮ, ಮದ್ದೇರಿ ಪಂಚಾಯ್ತಿ, ಕೋಲಾರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಇಬ್ಬರು ಗಂಡು ಮಕ್ಕಳಿದ್ದು 1 ನೇ ಸಂತೋಷ್ ಯಾದವ್, 2 ನೇ ಸಂದೀಪ್ ಯಾದವ್ ಎಂಬುವರಾಗಿರುತ್ತಾರೆ. ಆ ಪೈಕಿ 1ನೇ ಸಂತೋಷ್ ಯಾದವ್ ಗೆ 23 ವರ್ಷ ವಯಸ್ಸಾಗಿದ್ದು, ವೇಮಗಲ್ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುತ್ತಾನೆ. ದಿನಾಂಕ: 31/07/2021 ರಂದು ಬೆಳಿಗ್ಗೆ ಸುಮಾರು 07.00 ಗಂಟೆಗೆ ಸಂತೋಷ್ ಯಾದವ್ ತಮ್ಮ ಗ್ರಾಮದ ಶ್ರೀನಾಥ ಬಿನ್ ಈರಪ್ಪರೆಡ್ಡಿರವರ ಬಾಬತ್ತು ನೊಂದಣಿ ಸಂಖ್ಯೆ ಇಲ್ಲದ ಪಲ್ಸರ್ ದ್ವಿ-ಚಕ್ರ ವಾಹನದ ಇಂಜಿನ್ ನಂ JLXCLE11862 ಚಾರ್ಸೀಸ್ ನಂ MD2A36FX1LCE32311 ರಲ್ಲಿ ಚಿಂತಾಮಣಿ ತಾಲ್ಲೂಕಿನ ಚೊಕ್ಕಹಳ್ಳಿ ಗ್ರಾಮದ ವಾಸಿ ಸುಬ್ಬಣ್ಣ ರವರನ್ನು ಸ್ವಂತ ಕೆಲಸದ ನಿಮಿತ್ತ ಮಾತನಾಡಿಕೊಂಡು ಬರುವುದಾಗಿ ಹೇಳಿ ಆತನ ಸ್ನೇಹಿತನಾದ ಕಿರಣ್ ಬಿನ್ ವೆಂಕಟರೆಡ್ಡಿರವರ ಜೊತೆಯಲ್ಲಿ ತನ್ನ ಮಗ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಕಿರಣ್ ಹಿಂದೆ ಕುಳಿತುಕೊಂಡು ಹೋದರು. ನಂತರ ಬೆಳಿಗ್ಗೆ ಸುಮಾರು 09.00 ಗಂಟೆಗೆ ಕಿರಣ್ ತನಗೆ ಪೋನ್ ಮಾಡಿ ತಾವು ಹೋಗುತ್ತಿದ್ದ ಬೈಕ್ ಗೆ ಅಪಘಾತವಾಗಿದ್ದು, ಸಂತೋಷ್ ಯಾದವ್ ನನ್ನು ಚಿಂತಾಮಣಿಯ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತೇನೆಂದು ಹೇಳಿದನು. ನಂತರ ತಾನು ಮತ್ತು ತನ್ನ ಹೆಂಡತಿ ಮೀನಾಕ್ಷಿ ರವರು ಚಿಂತಾಮಣಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು, ತನ್ನ ಮಗ ಸಂತೋಷ್ ಯಾದವ್ ರವರ ತಲೆ ಮತ್ತು ಬಲಗಾಲಿನ ತೊಡೆಯ ಬಳಿ ರಕ್ತಗಾಯಗಳಾಗಿ ಎಡಕೈನ ಮೊಣಕೈ ಬಳಿ ತರಚಿದ ಗಾಯಗಳಾಗಿದ್ದವು. ನಂತರ ತನ್ನ ಮಗನಿಗೆ ಅಪಘಾತದ ಬಗ್ಗೆ ಕೇಳಲಾಗಿ ತಾನು ತಮ್ಮ ಗ್ರಾಮದಿಂದ ಚೊಕ್ಕಹಳ್ಳಿ ಗ್ರಾಮಕ್ಕೆ ಬರಲು ಚಿಂತಾಮಣಿ-ಬಾಗೇಪಲ್ಲಿ ರಸ್ತೆಯಲ್ಲಿರುವ ಗಿಡ್ಡು ರವರ ವರ್ಕ್ ಶಾಪ್ ಬಳಿ ಬೆಳಿಗ್ಗೆ 08.30 ಗಂಟೆಯಲ್ಲಿ ಹೋಗುತ್ತಿದ್ದಾಗ, ತಮ್ಮ ಬೈಕ್ ಮುಂದೆ ಹೋಗುತ್ತಿದ್ದ ಕಾರಿನ ಚಾಲಕನು ವಾಹನವನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಯಾವುದೇ ಸೂಚನೆಗಳನ್ನು ನೀಡದೆ ಬಲಕ್ಕೆ ತಿರುಗಿಸಿಕೊಂಡು ಬಂದು ತನ್ನ ದ್ವಿ-ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ್ದರಿಂದ ತಾವು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋದಾಗ ತನಗೆ ರಕ್ತಗಾಯಗಳಾಗಿ, ತನ್ನ ಹಿಂದೆ ಕುಳಿತಿದ್ದ ಕಿರಣ್ ರವರಿಗೆ ಮೂಗೇಟುಗಳಾಗಿರುತ್ತೆ ಮತ್ತು ದ್ವಿಚಕ್ರ ವಾಹನದ ಜಖಂ ಆಗಿದ್ದು, ಕಾರಿನ ಮುಭಾಗದ ಬಲಭಾಗ ಜಖಂ ಆಗಿದ್ದು, ಕಾರಿನ ನಂಬರ್ ನೋಡಲಾಗಿ TN-07-BX-5244 ನೊಂದಣಿ ಸಂಖ್ಯೆಯ ಕಾರು ಆಗಿರುತ್ತೆ. ನಂತರ ಕಿರಣ್ ಮತ್ತು ಸಾರ್ವಜನಿಕರು ತನ್ನನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ತಿಳಿಸಿದನು. ನಂತರ ವೈದ್ಯರು ಸಂತೋಷ್ ಯಾದವ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರ ಮೇರೆಗೆ ತಾನು ತನ್ನ ಮಗನನ್ನು ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸಿಕೊಂಡು ತಾನು ಈ ದಿನ ದಿನಾಂಕ:02/08/2021 ರಂದು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡುತ್ತಿದ್ದು, ತನ್ನ ಮಗನ ದ್ವಿಚಕ್ರವಾಹನಕ್ಕೆ ಅಪಘಾತಪಡಿಸಿದ TN-07-BX-5244 ನೊಂದಣಿ ಸಂಖ್ಯೆಯ ಕಾರು ಮತ್ತು ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿರುವುದಾಗಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.343/2021 ಕಲಂ. 143,147,148,323,341,504,506,149 ಐ.ಪಿ.ಸಿ:-

     ದಿನಾಂಕ: 02/08/2021 ರಂದು ಸಂಜೆ 5.00 ಗಂಟೆಗೆ ಕೆ.ಎಸ್ ಭಾಸ್ಕರರೆಡ್ಡಿ ಬಿನ್ ಸುರೇಶ್ ಕೆ.ವಿ, 19 ವರ್ಷ, ಒಕ್ಕಲಿಗರು, ವಿಕ್ರಮ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವ್ಯಾಸಂಗ, ವಾಸ: ಕಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈಗ್ಗೆ ಸುಮಾರು ಒಂದು ತಿಂಗಳ ಹಿಂದೆ ಕನ್ನಂಪಲ್ಲಿ ಗ್ರಾಮದ ಆಕಾಶ್ ಎಂಬುವರು ತಮ್ಮ ಗ್ರಾಮದ ಪ್ರಜ್ವಲ್ ಬಿನ್ ಲೇಟ್ ಶಿವಣ್ಣರವರಿಗೆ ರಾತ್ರಿ ಸುಮಾರು 8.00 ಗಂಟೆಯಲ್ಲಿ ತಮ್ಮ ಗ್ರಾಮದ ಸರ್ಕಾರಿ ಶಾಲೆಯ ಬಳಿ ಗಲಾಟೆ ನಡೆಯುತ್ತಿತ್ತು. ಅದೇ ವೇಳಗೆ ಅಲ್ಲಿಗೆ ಬಂದ ತಾನು ವಿಚಾರ ಮಾಡಲಾಗಿ ಆಕಾಶ್ ರವರ ತಮ್ಮನಾದ ಪುನೀತ್ ನಿಗೂ ಮತ್ತು  ಪ್ರಜ್ವಲ್ ರವರಿಗೆ ಪೋನಿನ ವಿಚಾರವಾಗಿ ಗಲಾಟೆಯಾಗಿದ್ದು ಈ ವಿಚಾರದಲ್ಲಿ ಅವರ ಅಣ್ಣನಾದ ಆಕಾಶ್ ರವರು ಬಂದು ಪ್ರಜ್ವಲ್ ನೊಂದಿಗೆ ಗಲಾಟೆ ಮಾಡುತ್ತಿರುವುದಾಗಿ ತಿಳಿಯಿತು. ತಾನು ಜಗಳ ಬಿಡಿಸಲು ಹೋದಾಗ ತನ್ನನ್ನು ಆಕಾಶ್ ರವರು ತನ್ನೊಂದಿಗೂ ಗಲಾಟೆ ಮಾಡಿದರು. ಇದೇ ವಿಚಾರದಲ್ಲಿ ತಮ್ಮ ತಂದೆ ಮತ್ತು ಆಕಾಶ್ ರವರ ತಂದೆಯವರು ಹಿರಿಯರ ಸಮಕ್ಷಮ ಮಾತನಾಡಿ ರಾಜಿ ಮಾಡಿದ್ದರು. ಆದರೂ ಸಹ ಮೇಲ್ಕಂಡವರು ಆಗಾಗ ತನ್ನನ್ನು ನೋಡಿದಾಗ ಗುರಾಯಿಸುತ್ತಿದ್ದರು. ಈಗಿರುವಲ್ಲಿ ದಿನಾಂಕ: 02/08/2021 ರಂದು ಬೆಳಿಗ್ಗೆ ಎಂದಿನಂತೆ ತಾನು ವಿಕ್ರಮ್ ಕಾಲೇಜಿಗೆ ಹೋಗಿದ್ದು ಮದ್ಯಾಹ್ನ ಸುಮಾರು 1.00 ಗಂಟೆಯಲ್ಲಿ ಊಟಕ್ಕೆಂದು ಕಾಲೇಜಿನ ಆವರಣದಲ್ಲಿ ಬರುತ್ತಿದ್ದಾಗ ಆಕಾಶ್ ಮತ್ತು ಆತನ ತಮ್ಮನಾದ ಪುನೀತ್ ಬಂದು ನಿನ್ನನ್ನು ಸ್ವಲ್ಪ ಮಾತನಾಡಬೇಕು ಹೊರಗಡೆ ಬಾ ಎಂದು ಕರೆದರು. ಅದಕ್ಕೆ ತಾನು ಏನೂ ಮಾತನಾಡಬೇಕು ನಾನು ಬರುವುದಿಲ್ಲವೆಂದು ಹೇಳಿದೆ. ಆದರೂ ತನ್ನನ್ನು ಬಿಡದೆ ಆವರಣದ ಹೊರಗಡೆಗೆ ಕರೆದುಕೊಂಡು ಹೋದರು. ಅಲ್ಲಿ ಆಕಾಶ್ ಮತ್ತು ಪುನೀತ್ ರವರನ್ನು ಬಿಟ್ಟು ಇತರೆ 3 ಜನರು ದ್ವಿ-ಚಕ್ರ ವಾಹನಗಳಲ್ಲಿ ಇದ್ದು ಅವರ ಹೆಸರು ವಿಳಾಸ ನನಗೆ ಗೊತ್ತಿರುವುದಿಲ್ಲ. ಆದರೆ ನೋಡಿದರೆ ಅವರನ್ನು ಗುರುತಿಸುತ್ತೇನೆ. ಆ ಪೈಕಿ ಆಕಾಶ್ ತನ್ನನ್ನು ಸ್ಕೂಟಿನಲ್ಲಿ ಹತ್ತುವಂತೆ ಹೇಳಿದನು. ತಾನು ಹತ್ತುವುದಿಲ್ಲವೆಂದು ಹೇಳಿ ಕಾಲೇಜಿನ ಒಳಗೆ ಹೋಗಲೂ ಪ್ರಯತ್ನಿಸಿದರೆ ತನ್ನನ್ನು ಮುಂದಕ್ಕೆ ಹೋಗದಂತೆ ಮೇಲ್ಕಂಡವರೆಲ್ಲರೂ ತಡೆದು ಆಕಾಶ್ ರವರ ದ್ವಿ ಚಕ್ರ ವಾಹನದಲ್ಲಿ ಹತ್ತಿಸಿಕೊಂಡು ರೈಲ್ವೆ ಬ್ರಿಡ್ಜ್ ಮಾರ್ಗವಾಗಿ ಬುಕ್ಕನಹಳ್ಳಿ ಬಳಿ ಇರುವ ಯಾವುದೋ ನೀಲಗಿರಿ ತೋಪಿಗೆ ಕರೆದುಕೊಂಡು ಹೋದರು ಮೇಲ್ಕಂಡವರೆಲ್ಲರೂ ತನ್ನನ್ನು ಕುರಿತು ಲೇ ಲೋಪರ್ ನನ್ನ ಮಗನೇ ಮೊನ್ನೆ ನಿಮ್ಮ ಗ್ರಾಮದಲ್ಲಿ ತಪ್ಪಿಸಿಕೊಂಡಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಗಲಾಟೆ ತೆಗೆದು ಕೈಗಳಿಂದ ಮೈಮೇಲೆ ಹೊಡೆದು ಮೂಗೇಟು ಮಾಡಿದರು. ಅವರು ತಂದಿದ್ದ ಮಾರಕಾಸ್ತ್ರಗಳಿಂದ ತನ್ನನ್ನು ಹೊಡೆಯಲು ಪ್ರಯತ್ನಿಸಿದಾಗ ತಾನು ಅವರಿಂದ ತಪ್ಪಿಸಿಕೊಂಡು ತೋಪಿನಿಂದ ಹೊರಗಡೆಗೆ ಓಡಿ ಬರುತ್ತಿದ್ದಾಗ ಈ ದಿನ ನಮ್ಮಿಂದ ತಪ್ಪಿಸಿಕೊಂಡಿದ್ದೀಯಾ ನಿನ್ನನ್ನು ಸಾಯಿಸದೆ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿ ಅವರು ತನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದರು. ಅಷ್ಟರಲ್ಲಿ ಅಲ್ಲಿ ಸಾರ್ವಜನಿಕರು ಬರುತ್ತಿದ್ದನ್ನು ಕಂಡು ಅವರೆಲ್ಲರೂ ತೋಪಿನೊಳಗೆ ಓಡಿ ಹೋದರು. ನಂತರ ಬರುವಾಗ  ತಮ್ಮ ತಂದೆಗೆ ಪೋನ್ ಮಾಡಿ ವಿಷಯ ತಿಳಿಸಿದೆನು. ತಮ್ಮ ತಂದೆ ಮತ್ತು ತಮ್ಮ ಗ್ರಾಮದ ಅನಿಲ್ ರವರು ಅಲ್ಲಿಗೆ ಬಂದು ತನ್ನನ್ನು ಕರೆದುಕೊಂಡು ಬಂದರು. ಈ ಹಿಂದೆ ಗ್ರಾಮದಲ್ಲಿ ನಡೆದಿದ್ದ ಗಲಾಟೆಯ ಹಿನ್ನೆಲೆಯಲ್ಲಿ ಹಳೆ ದ್ವೇಷದಿಂದ ಈ ದಿನ ಗಲಾಟೆ ಮಾಡಿರುವುದಾಗಿರುತ್ತೆ. ತನ್ನನ್ನು ಅಡ್ಡಗಟ್ಟಿ ತಡೆದು, ಕೈಗಳಿಂದ ಹೊಡೆದು, ಬೈದು ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

9. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.78/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 02/08/2021 ರಂದು ಸಂಜೆ 16.00 ಗಂಟೆಗೆ ಪಿ.ಎಸ್.ಐ ರವರು ಆರೋಪಿ, ಮಾಲು, ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೇನೆಂದರೆ, ದಿನಾಂಕ:02/08/2021 ರಂದು ಮಧ್ಯಾನ್ನ :01-30 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಸಿದ್ದೇಪಲ್ಲಿ ಕ್ರಾಸ್ ನಲ್ಲಿ  ಮಧು ಬಿನ್ ಲೇಟ್ ಚಿಕ್ಕವೆಂಕಟರವಣಪ್ಪ,  ರವರು ತಮ್ಮ ಹೋಟೆಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಸ್ಥಳದ ಮೇಲೆ ದಾಳಿ ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿ.ಹೆಚ್.ಸಿ - 215 ಮಂಜುನಾಥರೆಡ್ಡಿ, ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ಜೀಪ್ ನಲ್ಲಿ ಸಿದ್ದೇಪಲ್ಲಿ ಕ್ರಾಸ್ ಬಳಿ ಹೋಗಿ ಅಲ್ಲಿದ್ದ ಇಬ್ಬರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಸಿದ್ದೇಪಲ್ಲಿ ಕ್ರಾಸ್ ಬಳಿ ಹೋಗಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ನಡೆದುಕೊಂಡು ಸಿದ್ದೇಪಲ್ಲಿ ಕ್ರಾಸ್ ನಲ್ಲಿರುವ ಮಧು ಬಿನ್ ಲೇಟ್ ಚಿಕ್ಕವೆಂಕಟರವಣಪ್ಪ, ರವರ ಹೋಟೆಲ್ ಬಳಿ ಹೋಗಿ ನೋಡಲಾಗಿ ಹೋಟೆಲ್ ಮಾಲೀಕನಾದ ಮಧು ಬಿನ್ ಲೇಟ್ ಚಿಕ್ಕವೆಂಕಟರವಣಪ್ಪ,  ರವರು ತಮ್ಮ ಹೋಟೆಲ್ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಓಡಿಹೋಗಿದ್ದು, ಹೋಟೆಲ್ ಮಾಲೀಕನಾದ ಮಧು ರವರನ್ನು ವಶಕ್ಕೆ ಪಡೆದುಕೊಂಡು  ಆತನ ಹೆಸರು ಮತ್ತು ವಿಳಾಸ ಕೇಳಗಾಗಿ  ಮಧು ಬಿನ್ ಲೇಟ್ ಚಿಕ್ಕವೆಂಕಟರವಣಪ್ಪ, 24 ವರ್ಷ, ಹೋಟೆಲ್ ಕೆಲಸ, ಗೊಲ್ಲರು, ವಾಸ ಸಿದ್ದೇಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದನು. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 02 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAIWAREDS CHEERS WISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ 90 ಎಂ.ಎಲ್ ನ HAIWAREDS CHEERS WISKEY ಮಧ್ಯದ 20 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 20 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 702/-ರೂ ಆಗಿರುತ್ತೆ. ಮದ್ಯ ಒಟ್ಟು 1.800 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು  ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಹೋಟೆಲ್ ಮಾಲೀಕನಾದ ಮಧು ಬಿನ್ ಲೇಟ್ ಚಿಕ್ಕವೆಂಕಟರವಣಪ್ಪ, ರವರು ಇಲ್ಲವೆಂದು ತಿಳಿಸಿರುತ್ತಾನೆ. ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾನ್ನ : 02-15 ರಿಂದ 03-15 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು ಆಸಾಮಿಯನ್ನು ನಿಮ್ಮ ಮುಂದೆ ಮಹಜರ್ & ಈ ನನ್ನ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ಮಧು ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿ ಸಾರಾಂಶವಾಗಿರುತ್ತೆ.

 

10. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.79/2021 ಕಲಂ. 392 ಐ.ಪಿ.ಸಿ:-

     ದಿನಾಂಕ 02-08-2021 ರಂದು ಸಂಜೆ 06.45 ಗಂಟೆಗೆ ಪಿರ್ಯಾಧಿದಾರರಾದ ನಾರಾಯಣಮ್ಮ  ಕೋಂ ಲೇಟ್ ಚಿಕ್ಕಉತ್ತನ್ನ, 86 ವರ್ಷ, ಗೃಹಿಣಿ, ಬಲಜಿಗರು, ಗೊಲ್ಲಪಲ್ಲಿ ಗಡ್ಡ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ತನಗೆ ವಯಸ್ಸಾಗಿದ್ದು ಮನೆಯಲ್ಲಿ ಇದ್ದು ಆಗಾಗ ತಮ್ಮ ಜಮೀನಿನ ಬಳಿ ಹೋಗಿ ಬರುತ್ತಿರುತ್ತೇನೆ. ತಮ್ಮ ಜಮೀನು ಚಿಂತಾಮಣಿ ರಸ್ತೆಯಲ್ಲಿ  ಸುಮಾರು 300 ಮೀಟರ್ ದೂರದಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪ ಇರುತ್ತೆ. ಈ ದಿನ ದಿನಾಂಕ:02/08/2021 ರಂದು ಮಧ್ಯಾನ್ನ ಸುಮಾರು 01-00 ಗಂಟೆಯ ಸಮಯದಲ್ಲಿ ತಾನು ತಮ್ಮ ಜಮೀನಿನ ಬಳಿಗೆ ಹೋಗಲು ಚಿಂತಾಮಣಿ ಕಡೆಗೆ ಹೋಗುವ ಟಾರ್ ರಸ್ತೆಯ ಎಡಭಾಗದಲ್ಲಿ ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದಾಗ ಮುರಗಮಲ್ಲ ಗ್ರಾಮದಿಂದ ಯಾರೋ ಇಬ್ಬರು ಅಪರಿಚಿತ ಗಂಡಸರು ದ್ವಿಚಕ್ರವಾಹನದಲ್ಲಿ ತನ್ನ ಪಕ್ಕದಲ್ಲಿ ಬಂದು ದ್ವಿಚಕ್ರವಾಹನ ಚಾಲನೆ ಮಾಡುತ್ತಿದ್ದ ಹುಡುಗ  ತನ್ನ ಕತ್ತಿನಲ್ಲಿದ್ದ  ಬಂಗಾರದ ಸರವನ್ನು  ಕಿತ್ತುಕೊಂಡು  ದ್ವಿಚಕ್ರವಾಹನವನ್ನು  ನಿಲ್ಲಿಸದೇ ಅಲ್ಲಿಂದ ಹೊರಟು ಹೋದರು. ಬಂಗಾರದ ಚೈನನ್ನು  ತನ್ನ ಕತ್ತಿನಿಂದ ಕಿತ್ತುಕೊಳ್ಳುವಾಗ ತನ್ನ ಬಲಕಿವಿಯ ಬಳಿ ರಕ್ತಗಾಯವಾಯಿತು. ಆ ಗಾಬರಿಯಲ್ಲಿ ತನಗೆ ಕೂಗಿ ಕೊಳ್ಳಲು ಸಹ ಆಗಲಿಲ್ಲ, ತನಗೆ ಸದರಿಯವರ ದ್ವಿಚಕ್ರವಾಹನ ನೊಂದಣಿ ಸಂಖ್ಯೆ ಗುರ್ತಿಸಲು ತಾನು ಓದಿರುವುದಿಲ್ಲ. ಮತ್ತು ತನಗೆ ಸರಿಯಾಗಿ ಕಣ್ಣುಗಳು ಕಾಣಿಸುತ್ತಿರುವುದಿಲ್ಲ.  ನಂತರ ತಾನು ಅಲ್ಲಿಯೇ ಹತ್ತಿರದಲ್ಲಿದ್ದ ತನ್ನ ಮಕ್ಕಳಾದ ರಮೇಶ, ಲಕ್ಷ್ಮೀನಾರಾಯಣ ರವರಿಗೆ ಹೋಗಿ ತಿಳಿಸಿದೆನು.   ನಂತರ ಅವರು ತನಗೆ  ಉಪಚರಿಸಿದರು.  ಕತ್ತಿನಲ್ಲಿದ್ದ ಬಂಗಾರದ  ಸರ ಈಗ್ಗೆ ಸುಮಾರು 03 ವರ್ಷಗಳ ಹಿಂದೆ ಸುಮಾರು 35 ಗ್ರಾಂ ತೂಕದ ಸರವನ್ನು ಖರೀದಿಸಿದ್ದು, ಇದರ ಬೆಲೆ ಸುಮಾರು 1,10,000/-ರೂಗಳಷ್ಠು ಅಂದಾಜು ಬೆಲೆ ಆಗಿರುತ್ತದೆ. ತನಗೆ ಗಾಯಗಳಾಗಿದ್ದರಿಂದ ತನ್ನ ಮಗ ರಮೇಶ ಮುರಗಮಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತನಗೆ ಚಿಕಿತ್ಸೆಯನ್ನು ಕೊಡಿಸಿದರು.  ತನ್ನ ಬಂಗಾರದ ಚೈನನ್ನು ಕಿತ್ತುಕೊಂಡ ವ್ಯಕ್ತಿ  ಬಿಳಿ ಷರ್ಟು ಮತ್ತು  ಕಪ್ಪು ಪ್ಯಾಂಟ್ ಧರಿಸಿದ್ದು ಹಿಂಭಾಗದಲ್ಲಿ ಕುಳಿತಿದ್ದ ವ್ಯಕ್ತಿಯ ಬಗ್ಗೆ ಏನು ನನಗೆ ತಿಳಿದಿರುವುದಿಲ್ಲ. ತನ್ನ ಕತ್ತಿನಲ್ಲಿದ್ದ ಚೈನು ಕಿತ್ತುಕೊಂಡು ಕಳ್ಳತನ ಮಾಡಿಕೊಂಡು ಹೋದ ಆರೋಪಿಗಳನ್ನು ಪತ್ತೆಹಚ್ಚಿ ನನ್ನಿಂದ ಕಿತ್ತುಕೊಂಡು ಹೋದ ಬಂಗಾರದ ಚೈನನ್ನು ತನಗೆ ಕೊಡಿಸಿಕೊಟ್ಟು ಆರೋಪಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ. ತನ್ನ ಕತ್ತಿನಲ್ಲಿದ್ದ ಬಂಗಾರದ ಚೈನನ್ನು ಕಿತ್ತುಕೊಂಡ ಹೋದ ವ್ಯಕ್ತಿಗಳನ್ನು ನೋಡಿದ್ದು, ಆ ವ್ಯಕ್ತಿಗಳನ್ನು ಮತ್ತೆ ನೋಡಿದರೇ ಗುರುತಿಸುತ್ತೇನೆಂದು ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

11. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.131/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ:02/08/2021 ರಂದು ಪಿರ್ಯಾಧಿದಾರರಾದ ಗಂಗರತ್ನಮ್ಮ ಬಿನ್ ಗಂಗಪ್ಪ, 30 ವರ್ಷ, ಆದಿ ಕರ್ನಾಟಕ ಜನಾಂಗ,ತೊಂಡೇಭಾವಿ ಗ್ರಾಮ,ತೊಂಡೇಭಾವಿ ಹೋಬಳಿ ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ತಂದೆಯವನಾದ ಗಂಗಪ್ಪ ರವರಿಗೆ ಹಾರ್ಟ್ ಪ್ರಾಬ್ಲಮ್ ಇದ್ದು, ಇವರಿಗೆ 70 ವರ್ಷ ವಯಸ್ಸಾಗಿದೆ, ಇವರು ಮೆಡಿಸೆನ್ ತರಲು ದಿನಾಂಕ:29/07/2021 ರಂದು ಬೆಳ್ಳಿಗೆ 11.00 ಗಂಟೆಯ ಸಮಯದಲ್ಲಿ ಗೌರಿಬಿದನೂರಿಗೆ ಹೋದವರು ಇದುವರೆಗೂ ಮನೆಗೆ ಬಂದಿಲ್ಲ ನಾವು  ನಮ್ಮ ಸುತ್ತಮುತ್ತಲೂ, ಸಂಬಂಧಿಕರ ಮನೆಗೆ ಹಾಗೂ ಇಲ್ಲಾ ಕಡೆ ಎಷ್ಟು ಹುಡುಕಿದರು ಪತ್ತೆಯಾಗಿರುವುದಿಲ್ಲ. ಇವರಿಗೆ ವಯಸ್ಸು ಆಗಿದೆ ಎಲ್ಲಿಗೆ ಹೋದರು ಎಂಬುವುದು ನಮ್ಮಗೆ ಗೊತ್ತಿಲ್ಲ. ಆದ್ದರಿಂದ ತಾವುಗಳು ಇದರ ಬಗ್ಗೆ ವಿಚಾರಣೆ ಮಾಡಿ ನಮ್ಮ ತಂದೆಯಾದ ಗಂಗಪ್ಪ ರವರನ್ನು ಹುಡುಕಿಕೊಡಲು ಕೋರಿ ಕೊಟ್ಟ ದೂರಿನ ಮೇರೆಗೆ ಪ್ರ.ವ.ವರದಿಯನ್ನು ದಾಖಲಿಸಿರುತ್ತೆನೆ.

 

12. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.133/2021 ಕಲಂ. 323,324,504,34 ಐ.ಪಿ.ಸಿ:-

     ದಿನಾಂಕ: 02/08/2021 ರಂದು ಸಾಯಂಕಾಲ 5-00 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಸಕ್ಕುಬಾಯಿ ಕೋಂ ಚಿಕ್ಕ ರಂಗೋಜಿರಾವ್, 50 ವರ್ಷ, ಮರಾಠಿ ಜನಾಂಗ, ಚಿಕ್ಕರ್ಯಾಗಡಹಳ್ಳಿ ಗ್ರಾಮರವರು ನೀಡಿದ ಹೇಳೀಕೆ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ: 02/08/2021 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ನನ್ನ ಮಕ್ಕಳಾದ ಮನೋಜ್ ರಾವ್ ಮತ್ತು ಮೊಮ್ಮಗ ಲೋಕೇಶ್ ರಾವ್ ರವರು 10 ನೇ ತರಗತಿ ಯ ಆನ್ ಲೈನ್ ಕ್ಲಾಸ್ ಇದ್ದುದರಿಂದ ಮನೆಯ ಒಳಗೆ ನೆಟ್ ವರ್ಕ್ ಸಿಗದ ಕಾರಣ ಮಕ್ಕಳು ಮನೆಯ ಹಿಂದೆ ಖಾಲಿ ನಿವೇಶನದಲ್ಲಿ ಕೂತುಕೊಂಡು ಆನ್ ಲೈನ್ ಕ್ಲಾಸ್ ಕೇಳುತ್ತಿದ್ದಾಗ ನಮ್ಮ ಗ್ರಾಮದ ಸಿದ್ದುಬಾಯಿ ಕೋಂ ಲೇಟ್ ಸಿದ್ದೋಜಿರಾವ್ ನನ್ನ ಮಗ ಮತ್ತು ಮೊಮ್ಮಗನಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದು, ನಾನು ಏಕಿ ಮಕ್ಕಳನ್ನು ಬೈಯ್ಯುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ಏಕಾಏಕಿ ಸಿದ್ದುಬಾಯಿ, ಗಂಗೂಬಾಯಿ ಮತ್ತು ಅಶ್ವಥಬಾಯಿರವರು ಕಲ್ಲಿನಿಂದ ಮತ್ತು ದೊಣ್ಣೆಯಿಂದ ನನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು, ಕೈಗಳಿಂದ ಮೈಮೇಲೆ ಹೊಡೆದು ಮೂಗೇಟನ್ನುಂಟು ಮಾಡಿರುತ್ತಾರೆ. ಆಗ ನನ್ನ ನಾದಿನಿ ಶಾಂತಬಾಯಿ ರವರು ಬಂದು ಜಗಳ ಬಿಡಿಸಿ ನನಗೆ ಶಾರೀರಿಕ ನೋವು ಹೆಚ್ಚಾಗಿದ್ದರಿಂದ ಯಾವುದೋ ಒಂದು ಆಟೋದಲ್ಲಿ ಚಿಕಿತ್ಸೆಗಾಗಿ ನನ್ನನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ನನಗೆ ಹೊಡೆದು ಗಾಯಗೊಳಿಸಿದ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು  ಕೋರಿದ್ದರ ಮೇರೆಗೆ ಪ್ರ.ವ.ವರದಿ.

ಇತ್ತೀಚಿನ ನವೀಕರಣ​ : 03-08-2021 07:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080