ಅಭಿಪ್ರಾಯ / ಸಲಹೆಗಳು

1. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 91/2021 ಕಲಂ. 87 ಕೆ.ಪಿ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರಿ ಆರ್.ನಾರಾಯಣಸ್ವಾಮಿ ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ, ನಾನು ಈ ದಿನ ದಿನಾಂಕ:02/07/2021 ರಂದು ಠಾಣಾ ವ್ಯಾಪ್ತಿಯ ಗಸ್ತು ಕರ್ತವ್ಯದಲ್ಲಿದ್ದಾಗ ಠಾಣಾ ವ್ಯಾಪ್ತಿಯ ವೈಗೊಲ್ಲಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ಜಾಲಿ ಮರಗಳ ಮರೆಯಲ್ಲಿ ಯಾರೋ ಆಸಾಮಿಗಳು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ನಾನು ಠಾಣಾ ಸಿಬ್ಬಂದಿಯವರಾದ ಹೆಚ್ ಸಿ -36 ಶ್ರೀ.ವಿಜಯ್ ಕುಮಾರ್, ಹೆಚ್.ಸಿ 176 ಮುನಿರಾಜು, ಸಿಪಿಸಿ – 262 ಅಂಬರೀಶ್, ಪಿ.ಸಿ 561 ರಮೇಶ್ ತಳವಾರ, ಪಿ.ಸಿ 388 ಗದ್ದೆಪ್ಪ ಶಿವಪುರ, ಪಿ.ಸಿ 396 ರಮೇಶ್ ಕಂಪ್ಲಿ ರವರನ್ನು ವೈ.ಗೊಲ್ಲಹಳ್ಳಿ ಗ್ರಾಮಕ್ಕೆ ಬರಮಾಡಿಕೊಂಡು ನಾನು ಮತ್ತು ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರು ಜೀಪ್ ನಲ್ಲಿ ವೈಗೊಲ್ಲಹಳ್ಳಿ  ಗ್ರಾಮಕ್ಕೆ ಹೋಗಿ ಅಲ್ಲಿ ಪಂಚರನ್ನು ಕರೆದುಕೊಂಡು ಪಂಚಾಯ್ತಿದಾರರೊಂದಿಗೆ ನಾನು ಮತ್ತು ಸಿಬ್ಬಂದಿಯವರು ವೈ.ಗೊಲ್ಲಹಳ್ಳಿ ಗ್ರಾಮದ ಕೆರೆಯ ಅಂಗಳಕ್ಕೆ ಸಂಜೆ ಸುಮಾರು 4-30 ಗಂಟೆಗೆ ಹೋಗಿ ದೂರದಲ್ಲಿ ಜೀಪ್ ನಿಲ್ಲಿಸಿ ಜಾಲಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಕೆರೆಯ ಅಂಗಳದಲ್ಲಿ ಇರುವ ಜಾಲಿ ಮರದ ಕೆಳಗಡೆ ಗುಂಪಾಗಿ ವೃತ್ತಾಕಾರವಾಗಿ ಕುಳಿತು ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸದರಿಯವರನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ಎಲ್ಲಿಯೂ ಹೋಗದಂತೆ ಸೂಚಿಸಿದಾಗ  ಅಲ್ಲಿದ್ದ ಆಸಾಮಿಗಳು ಓಡಿ ಹೋಗಲು ಯತ್ನಿಸಿದ್ದು ಸದರಿಯವರ ಪೈಕಿ 3 ಜನ ಸಾಮಿಗಳನ್ನು ಸಿಬ್ಬಂದಿಯ ಸಹಾಯದಿಂದ ಹಿಡಿದುಕೊಂಡಿದ್ದು ಮೂರು ಜನ ಆಸಾಮಿಗಳು ನಮ್ಮಿಂದ ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ. ನಾವು ಹಿಡಿದುಕೊಂಡ ಆಸಾಮಿಗಳ ಹೆಸರು ಮತ್ತು ವಿಳಾಸ ಕೇಳಲಾಗಿ 1) ಅಶೋಕ ಬಿನ್ ಲಕ್ಷ್ಮಣ, 40ವರ್ಷ, ಒಕ್ಕಲಿಗರು, ಜಿರಾಯ್ತಿ, ಯಸಗಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ.ನಂ 9535333887 2) ಶ್ರೀ.ನರಸಿಂಹ ಬಿನ್ ವೆಂಕಟರವಣಪ್ಪ, 26ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಬ್ರಾಹ್ಮಣರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, ಮೊ.ನಂ 9535837600 3)ಶ್ರೀ.ನವೀನ್ ಬಿನ್ ನರಸಿಂಹಪ್ಪ, 26ವರ್ಷ, ಕೂಲಿ ಕೆಲಸ, ಆದಿ ಕರ್ನಾಟಕ ಜನಾಂಗ, ಯಸಗಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ.ನಂ 8861679201 ಎಂದು ತಿಳಿಸಿದ್ದು ನಮ್ಮಿಂದ ತಪ್ಪಿಸಿಕೊಂಡು ಹೋದವರ ಹೆಸರು ವಿಳಾಸಗಳನ್ನು ವಿಚಾರಿಸಲಾಗಿ 1)ಜಯಣ್ಣ, ಬ್ರಾಹ್ಮಣರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂ, 2)ಚೌಡಾರೆಡ್ಡಿ ಬಿನ್ ರಾಮರೆಡ್ಡಿ, 42ವರ್ಷ, ಒಕ್ಕಲಿಗರು, ಜಿರಾಯ್ತಿ, ಬ್ರಾಹ್ಮಣರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, 3) ಆರೀಫ್, ಯಸಗಲಹಳ್ಳಿ ಗ್ರಾಮ ಎಂದು ತಿಳಿಸಿದ್ದು  ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಬಿಳಿ ಗೋಣಿಚೀಲ ನೆಲದಲ್ಲಿ ಹಾಸಿದ್ದು, ಸದರಿ ಗೋಣಿಚೀಲದ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆ ಇದ್ದು, ಅವುಗಳನ್ನು  ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 3600 ರೂಗಳಿದ್ದು   ಇಸ್ಪೀಟ್ ಜೂಜಾಟ ಆಡುತ್ತಿದ್ದ 6 ಜನರ ಪೈಕಿ 3 ಜನ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು, ಅವರು ಇಸ್ಪೀಟ್ ಜೂಜಾಟಕ್ಕೆ ಪಣವಾಗಿಟ್ಟಿದ್ದ, 3600/- ರೂಗಳ ನಗದು ಹಣವನ್ನು, ಒಂದು ಗೋಣಿಚೀಲ ಹಾಗೂ 52 ಇಸ್ಟೀಟ್ ಎಲೆಗಳನ್ನು ಈ ಕೇಸಿನ ಮುಂದಿನ ಕ್ರಮಕ್ಕಾಗಿ ಸಂಜೆ 4-45 ಗಂಟೆಯಿಂದ 5-45 ಗಂಟೆಯವರೆಗೆ ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು ಠಾಣೆಗೆ ಸಂಜೆ 6-15 ಗಂಟೆಗೆ ಹಾಜರಾಗಿ ಸ್ವತಃ ಠಾಣೆಯ ಎನ್ ಸಿ ಆರ್ ನಂ: 102/2021 ರಂತೆ ದಾಖಲಿಸಿಕೊಂಡು ಆರೋಪಿಗಳ ಮತ್ತು ಮಾಲಿನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ವಾಟ್ಸ್ ಹ್ಯಾಪ್ ಮುಖಾಂತರ ರವಾನಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಕೊಂಡು ರಾತ್ರಿ 07-00 ಗಂಟೆಗೆ ಠಾಣೆಗೆ ಅನುಮತಿಯನ್ನು ಪಡೆದು ಠಾಣೆಯ ಮೊ ಸಂಖ್ಯೆ: 91/2021 ಕಲಂ: 87 ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

2. ಚೇಳೂರು ಪೊಲೀಸ್‌ ಠಾಣೆ ಮೊ.ಸಂ. 63/2021 ಕಲಂ. 32,34 ಕೆ.ಇ ಆಕ್ಟ್:-

     ಈ ದಿನ ಚೇಳೂರು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಪ್ರತಾಪ್ ಕೆಆರ್  ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ  ನಾನು ಮತ್ತು ಸಿಬ್ಬಂದಿಯವರಾದ ಹೆಚ್ ಸಿ 47 ಪ್ರಭಾಕರ್ , ಹಾಗೂ ಜೀಪ್ ಚಾಲಕನಾದ ಎಪಿಸಿ 87 ಮೋಹನ್ ರವರೊಂದಿಗೆ  ಈ ದಿನ ದಿನಾಂಕ:02/07/2021 ರಂದು   ಮದ್ಯಾಹ್ನ 2:00 ಗಂಟೆಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-42-ಜಿ-0061 ವಾಹನದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಮದ್ದಿರೆಡ್ಡಿಪಲ್ಲಿ ಗ್ರಾಮದ  ಕಡೆ ಗಸ್ತು ಮಾಡುತ್ತಿದ್ದಾಗ  ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಮದ್ದಿರೆಡ್ಡಿಪಲ್ಲಿ  ಗ್ರಾಮದ ವಾಸಿಯಾದ ಬಾಬು ರೆಡ್ಡಿ ಬಿನ್ ಚಿನ್ನಪ್ಪರೆಡ್ಡಿ ಎಂಬುವರು ತನ್ನ ಮನೆಯಲ್ಲಿ ಕಾನೂನು ಬಾಹಿರವಾಗಿ ಮಧ್ಯವನ್ನು ಮಾರಾಟ ಮಾಡಲು ಸಂಗ್ರಹಣೆ ಮಾಡಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಅದರಂತೆ ಪಂಚರ ಸಮಕ್ಷಮ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಮನೆಯ ಬಾಗಿಲು ಮುಚ್ಚಿದ್ದು ಮನೆಯ ಬಳಿಯಿದ್ದ ಬಾಬುರೆಡ್ಡಿ ರವರ ಹೆಂಡತಿಯಾದ ಮಂಜುಳ ಹಾಗೂ ಪಂಚರ  ಸಮಕ್ಷಮ ಪರಿಶೀಲಿಸಲಾಗಿ 1) 650 ಎಮ್ ಎಲ್ ನ KNOCK OUT HIGH PUNCH STRONG BEER  ಕಿಂಗ್ ಫಿಶರ್ ಸ್ಟ್ರಾಂಗ್ ಬೀರ್ ನ 09 ಬಾಟಲ್ ಗಳಿದ್ದು ಪ್ರತಿ ಬಾಟಲ್ ಮೇಲೆ 145 ರೂ ಎಂದು ನಮೂದಿಸಿದ್ದು, ಒಟ್ಟು 1305 ರೂಗಳಾಗಿರುತ್ತೆ, 2) 180 ಎಮ್ ಎಲ್  OLD ADMIRAL BRANDY  ಕಂಪನಿಯ 10 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿ ಪ್ಯಾಕೆಟ್ ಮೇಲೆ 86.75  ರೂ ಎಂದು ನಮೂದಿಸಿದ್ದು  ಒಟ್ಟು 867.5 ರೂಗಳಾಗಿರುತ್ತೆ, 3) 90 ಎಮ್ ಎಲ್ ನ  HAYWARDS CHEERS WHISKY  ಕಂಪನಿಯ 96 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿ ಪ್ಯಾಕೆಟ್ ನ ಮೇಲೆ 35.13 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು 3372.48 ರೂಗಳಾಗಿರುತ್ತೆ,  ಈ ಮೇಲ್ಕಂಡ ಎಲ್ಲಾ ಮದ್ಯದ ಪ್ಯಾಕೆಟ್ / ಬಾಟಲ್ ಗಳು ಒಟ್ಟು 16.290 ಲೀಟರ್ ಇದ್ದು, ಈ ಮೇಲ್ಕಂಡ ಎಲ್ಲಾ ಮಧ್ಯದ ಮಾಲುಗಳ ಒಟ್ಟು ಬೆಲೆ 5544.98 ರೂ ಗಳಾಗಿರುತ್ತೆ. ಸದರಿ ಮನೆಯ  ಮಾಲೀಕನ ಹೆಸರು ಮತ್ತು ವಿಳಾಸವನ್ನು ಅಲ್ಲಿಯೇಯಿದ್ದ ಮಂಜುಳ ರವರ ಬಳಿ ವಿಚಾರಿಸಲಾಗಿ ಬಾಬುರೆಡ್ಡಿ ಬಿನ್ ಚಿನ್ನಪ್ಪರೆಡ್ಡಿ,43 ವರ್ಷ, ವಕ್ಕಲಿಗರು, ಮದ್ದಿರೆಡ್ಡಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. ಎಂದು ತಿಳಿಸಿದ್ದು  ಸದರಿಯವರು ಕೆಲಸದ ನಿಮಿತ್ತ ಎಲ್ಲಿಯೋ ಹೋಗಿದ್ದಾರೆಂದು ತಿಳಿಸಿರುತ್ತಾರೆ. ನಂತರ ಸದರಿ ಮಾಲುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಎಲ್ಲಾ ಮಾಲುಗಳ ಪೈಕಿ ಒಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಕಟ್ಟಿ ಅದರ ಮೂತಿಯನ್ನು D ಎಂಬ ಅಕ್ಷರದಿಂದ ಸೀಲು ಮಾಡಿರುತ್ತೆ. ನಂತರ ಮಾಲುಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡಿದ ಬಾಬುರೆಡ್ಡಿ ಬಿನ್ ಚಿನ್ನಪ್ಪರೆಡ್ಡಿ  ರವರ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡಿದ್ದು , ಈ ಬಗ್ಗೆ ಮುಂದಿನ ಕ್ರಮಜರುಗಿಸಲು ಕೋರಿ.

 

3. ಚೇಳೂರು ಪೊಲೀಸ್‌ ಠಾಣೆ ಮೊ.ಸಂ. 64/2021 ಕಲಂ. 32,34 ಕೆ.ಇ ಆಕ್ಟ್:-

     ಈ ದಿನ ದಿನಾಂಕ 02-07-2021 ರಂದು ಚೇಳೂರು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಪ್ರತಾಪ್ ಕೆಆರ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರ ನಾನು ಸಿಬ್ಬಂದಿಯವರಾದ ಪ್ರಭಾಕರ್ ಹೆಚ್ ಸಿ 47, ಇನಾಯತ್ ಹೆಚ್ ಸಿ 149 , ಹೆಚ್ ಸಿ 129 ರವಣಪ್ಪ ಹಾಗೂ ಜೀಪ್ ಚಾಲಕನಾದ ಎಪಿಸಿ 87 ಮೋಹನ್ ರವರೊಂದಿಗೆ  ಈ ದಿನ ದಿನಾಂಕ:02/07/2021 ರಂದು  ಸಂಜೆ 5:30 ಗಂಟೆಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-42-ಜಿ-0061 ವಾಹನದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಚಾಕವೇಲು ಗ್ರಾಮದ  ಕಡೆ ಗಸ್ತು ಮಾಡುತ್ತಿದ್ದಾಗ  ಬಾತ್ಮಿದಾರರಿಂದ ಬಂದ ಮಾಹಿತಿ ಏನೇಂದರೆ ಇದೇ ಚಾಕವೇಲು  ಗ್ರಾಮದ ಪ್ಯೂನ್ ವೆಂಕಟರವಣಪ್ಪ ಎಂಬುವರ ಬಾಡಿಗೆ ಮನೆಯಲ್ಲಿದ್ದ ಮಧುರೆಡ್ಡಿ @ ಮಧು @ ಕೋಳಿಪಂದ್ಯ ಮಧು ಬಿನ್ ಈಶ್ವರರೆಡ್ಡಿ, 34 ವರ್ಷ, ವಕ್ಕಲಿಗರು, ಸ್ವಂತ ಗ್ರಾಮ: ಮರವಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂಬುವರು ಹಾಗೂ ಚಾಕವೇಲು ಗ್ರಾಮದ  ಶ್ರೀನಿವಾಸ @ ಡಾನ್ ಸೀನು ಎಂಬುವರು ಮತ್ತು ಇತರೆ ಇಬ್ಬರು  ತಾವುಗಳು ಬಾಡಿಗೆಗೆಯಿದ್ದ  ಪ್ಯೂನ್ ವೆಂಕಟರವಣಪ್ಪ ರವರ ಮನೆಯಲ್ಲಿ ಕಾನೂನು ಬಾಹಿರವಾಗಿ ಮಧ್ಯವನ್ನು ಮಾರಾಟ ಮಾಡಲು ಸಂಗ್ರಹಣೆ ಮಾಡಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಅದರಂತೆ ಚಾಕವೇಲು ಬಸ್ ನಿಲ್ದಾಣದಲ್ಲಿ  ಪಂಚರನ್ನು ಬರಮಾಡಿಕೊಂಡು ಚಾಕವೇಲುನಿಂದ  ವೆಂಕಟೇಶ್ ಪಲ್ಲಿ ಗ್ರಾಮದ ರಸ್ತೆಯ ಬಳಿ ಜೀಪನ್ನು ನಿಲ್ಲಿಸಿ ಪಂಚರೊಂದಿಗೆ ಮರೆಯಲ್ಲಿ ನಿಂತು ಪ್ಯೂನ್ ವೆಂಕಟರವಣಪ್ಪ ರವರ ಮನೆಯ ಬಳಿ ನೋಡಲಾಗಿ ಯಾರೋ ಇಬ್ಬರು ದ್ವಿಚಕ್ರ ವಾಹನದಲ್ಲಿ ತಂದಿದ್ದ ಮಧ್ಯದ ಪ್ಯಾಕೆಟ್ ಗಳಿದ್ದ ರಟ್ಟಿನ ಬಾಕ್ಸ್ ಗಳನ್ನು ಒಳಗೊಂಡಿದ್ದ ಪ್ಲಾಸ್ಟಿಕ್ ಚೀಲಗಳನ್ನು ಮನೆಯ ಒಳಗೆ ತೆಗೆದುಕೊಂಡು ಹೋಗುತ್ತಿದ್ದು ಪಂಚರ ಸಮಕ್ಷಮ ಮೇಲ್ಕಂಡವರ ಮೇಲೆ ದಾಳಿ ಮಾಡಲಾಗಿ ಮಧ್ಯದ ಚೀಲಗಳನ್ನು ಸಾಗಿಸುತ್ತಿದ್ದ ನಾಲ್ಕು ಜನರು  ಮಧ್ಯದ ರಟ್ಟಿನ ಬಾಕ್ಸ್ ಗಳಿರುವ ಚೀಲವೊಂದನ್ನು ದ್ವಿಚಕ್ರ ವಾಹನದ ಮೇಲೆಯೇ ಬಿಟ್ಟು ಸ್ಥಳದಿಂದ ಓಡಿ ಕತ್ತಲಿನಲ್ಲಿ ಮರೆಯಾದರು. ಸದರಿ ದ್ಚಿಚಕ್ರ ವಾಹನದ ನೊಂದಾಣಿ ಸಂಖ್ಯೆಯನ್ನು ಪರಿಶೀಲಿಸಲಾಗಿ KA 40 Y-0443 DISCOVER 150 F ಆಗಿರುತ್ತೆ  ಸದರಿ ಸ್ಥಳದಲ್ಲಿದ್ದ ಮಧ್ಯದ ಬಾಕ್ಸ್ ಗಳನ್ನು  ಪಂಚರ  ಸಮಕ್ಷಮ ಪರಿಶೀಲಿಸಿ ನೋಡಲಾಗಿ 1) 90 ಎಮ್ ಎಲ್ ನ HAYWARDS CHEERS WHISKY  15  ರಟ್ಟಿನ ಬಾಕ್ಸ್ ಗಳಿದ್ದು  ಪ್ರತಿಯೊಂದು ರಟ್ಟಿನ ಬಾಕ್ಸ್ ನಲ್ಲಿಯೂ  96 ಟೆಟ್ರಾ ಪ್ಯಾಕೆಟ್ ಗಳಂತೆ ಒಟ್ಟು 1440 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿ ಟೆಟ್ರಾ ಪ್ಯಾಕೆಟ್ ನ ಮೇಲೆ 35.13 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು 1,29,600 ಎಮ್ ಎಲ್ ಯಿದ್ದು ಇವುಗಳ ಒಟ್ಟು ಬೆಲೆ 50,587.2  ರೂ ಗಳಾಗಿರುತ್ತೆ,  2) 180 ಎಮ್ ಎಲ್ ನ   OLD ADMIRAL VSOP BRANDY  ಕಂಪನಿಗೆ ಸೇರಿದ 5 ರಟ್ಟಿನ ಬಾಕ್ಸ್ ಗಳಿದ್ದು ಪ್ರತಿ ಬಾಕ್ಸ್ ನಲ್ಲಿಯೂ 48  ಟೆಟ್ರಾ ಪ್ಯಾಕೆಟ್ ಗಳಂತೆ ಒಟ್ಟು 240 ಟೆಟ್ರಾ ಪ್ಯಾಕೆಟ್ ಗಳಿದ್ದು, ಇವುಗಳು ಒಟ್ಟು 43,200 ಎಮ್ ಎಲ್ ಯಿದ್ದು  ಒಟ್ಟು 20,820 ರೂ ಗಳಾಗಿರುತ್ತೆ  ಈ ಮೇಲ್ಕಂಡ ಎಲ್ಲಾ ಮದ್ಯದ ಪ್ಯಾಕೆಟ್ಗಳು  ಒಟ್ಟು 1,72,800 ಎಮ್ ಎಲ್ ಯಿದ್ದು  ಈ ಮೇಲ್ಕಂಡ ಎಲ್ಲಾ ಮಧ್ಯದ ಮಾಲುಗಳ ಒಟ್ಟು ಬೆಲೆ 71,407.2 ರೂ ಗಳಾಗಿರುತ್ತೆ. ಸದರಿ ಮನೆಯಲ್ಲಿ ಬಾಡಿಗೆಗೆಯಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಸ್ಥಳದಲ್ಲಿದ್ದ  ನೆರೆಹೊರೆಯವರ ಬಳಿ ಕೇಳಲಾಗಿ 1) ಮಧುರೆಡ್ಡಿ @ ಮಧು @ ಕೋಳಿಪಂದ್ಯ ಮಧು ಬಿನ್ ಈಶ್ವರರೆಡ್ಡಿ, 34 ವರ್ಷ, ವಕ್ಕಲಿಗರು, ಸ್ವಂತ ಗ್ರಾಮ: ಮರವಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು ಸ್ಥಳದಿಂದ ಓಡಿ ಹೋದವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 2) ಶ್ರೀನಿವಾಸ @ ಡಾನ್ ಸೀನ ಹಾಗೂ ಇತರೆ ಇಬ್ಬರ ಹೆಸರು ಮತ್ತು ವಿಳಾಸ ತಿಳಿದಿರುವುದಿಲ್ಲವೆಂದು ತಿಳಿಸಿರುತ್ತಾರೆ. ನಂತರ ಸದರಿ ಮಾಲುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಎಲ್ಲಾ ಮಾಲುಗಳ ಪೈಕಿ ಒಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಕಟ್ಟಿ ಅದರ ಮೂತಿಯನ್ನು D ಎಂಬ ಅಕ್ಷರದಿಂದ ಸೀಲು ಮಾಡಿರುತ್ತೆ. ನಂತರ ಮಾಲುಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡುತ್ತಿದ್ದ  ಮೇಲ್ಕಂಡ ಆಸಾಮಿಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕ್ರಮಜರುಗಿಸಲು ಕೋರಿ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.96/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:-03/07/2021 ರಂದು ಮದ್ಯಾಹ್ನ 12-40  ಗಂಟೆ ಸಮಯದಲ್ಲಿ ಪಿ.ಎಸ್.ಐ ಸಾಹೇಬರವರು ಠಾಣೆಯಲ್ಲಿ ನೀಡಿದ ದೂರನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ಈ ದಿನ ದಿನಾಂಕ: 03/07/2021 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದಿಗೆ ಸೇರಿದ ಚಿಕ್ಕಬಳ್ಳಾಪುರ ತಾಲ್ಲೂಕು   ದೊಮ್ಮರ ಗುಡಿಸಲು ಮರಸನಹಳ್ಳಿ ಗ್ರಾಮದಲ್ಲಿ ಲಿಂಗಶೆಟ್ಟಿಪುರ ಗ್ರಾಮದ  ವಾಸಿ ಶ್ರೀ ನಾರಾಯಣಸ್ವಾಮಿ ಬಿನ್ ಚಿಕ್ಕ ಬಸಪ್ಪ. 56 ವರ್ಷ. ಬೋವಿ ಜನಾಂಗ. ಚಿಲ್ಲರೆ ಅಂಗಡಿ ವ್ಯಾಪಾರ  ಲಿಂಗಶೆಟ್ಟಿಪುರ ರವರು ಮರಸನಹಳ್ಳಿ ಗ್ರಾಮದ ದೊಮ್ಮರ ಗುಡಿಸಲು ಬಳಿ ತನ್ನ ಚಿಲ್ಲರೆ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿದ್ದು, ಈ ಬಗ್ಗೆ ಸದರಿ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರ.ವ.ವರದಿ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.298/2021 ಕಲಂ. 323,324,504,506 ಐ.ಪಿ.ಸಿ:-

     ದಿನಾಂಕ: 02/07/2021 ರಂದು ಸಂಜೆ 5.00 ಗಂಟೆಗೆ ಐಯಾಜ್ ಬಿನ್ ನವಾಬ್, 34 ವರ್ಷ, ಕೂಲಿ ಕೆಲಸ, ಮುಸ್ಲಿಂ ಜನಾಂಗ, ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೂ ಮತ್ತು ತಮ್ಮ ಗ್ರಾಮದ ವಾಸಿ ನರೇಶ ಬಿನ್ ಲಿಂಗರಾಜು ರವರಿಗೆ ಈ ಹಿಂದೆ ನಡೆದ ಗಲಾಟೆ ವಿಚಾರದಲ್ಲಿ ತಮ್ಮ ಮದ್ಯೆ ಹಳೇ ದ್ವೇಷವಿರುತ್ತೆ. ಹೀಗಿರುವಾಗ ತಾನು ದಿನಾಂಕ 01/07/2021 ರಂದು ರಾತ್ರಿ 9.30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಅಮರನಾರಾಯಣಸ್ವಾಮಿ ದೇವಾಲಯದ ಬಳಿ ಇದ್ದಾಗ ಮೇಲ್ಕಂಡ ನರೇಶ ಬಿನ್ ಲಿಂಗರಾಜು ರವರು ಅಲ್ಲಿಗೆ ಬಂದು ತನ್ನನ್ನು ಕುರಿತು “ಏನೋ ಬೋಳಿ ಮಗನೇ ಎಷ್ಟು ದೈರ್ಯ ನೀನು ಈ ಹಿಂದೆ ನನ್ನನ್ನು ಪೋಲಿಸರಿಗೆ ಹಿಡಿದುಕೊಟ್ಟಿದ್ದಿಯಾ” ಎಂದು ಅವಾಶ್ಚ ಶಬ್ದಗಳಿಂದ ಬೈದು, ಕೈ ಗಳಿಂದ ಮೈ ಮೇಲೆ ಹೊಡೆದು, ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ತನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಅಷ್ಟರಲ್ಲಿ ತಮ್ಮ ಗ್ರಾಮದ ಯೂನಿಸ್ ಬಿನ್ ಯೂಸೂಪ್ ಮತ್ತು ಸೈಯದ್ ಅಮ್ಜದ್ ಬಿನ್ ಸೈಯದ್ ಹೈದರ್ ಸಾಬ್ ರವರು ಅಡ್ಡಬಂದು ಆತನಿಂದ ತನ್ನನ್ನು ರಕ್ಷಿಸಿದರು. ನಂತರ ನರೇಶ ಅಲ್ಲಿಂದ ಹೋಗುವಾಗ ಈ ದಿನ ಬದುಕಿಕೊಂಡಿದ್ದಿಯಾ ಇನ್ನೋಂದು ಸಲ ನನ್ನ ತಂಟೆ ತಕರಾರಿಗೆ ಬಂದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದನು. ನಂತರ ಗಾಯಗೊಂಡಿದ್ದ  ತನ್ನನ್ನು ತಮ್ಮ ಗ್ರಾಮದ ಪಜುಲು ಮತ್ತು ಯೂನಿಸ್ ಬಿನ್ ಯೂಸೂಪ್ ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದರು. ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್.ಎನ್.ಆರ್ ಆಸ್ವತ್ರೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿಂದ ಆರ್.ಎಲ್.ಜಾಲಪ್ಪ ಆಸ್ವತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಈ ದಿನ ದಿನಾಂಕ 02/07/2021 ರಂದು ಠಾಣೆಗೆ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ತನ್ನ ಮೇಲೆ ಹಲ್ಲೆ ಮಾಡಿದ ಮೇಲ್ಕಂಡ ನರೇಶ ಬಿನ್ ಲಿಂಗರಾಜು ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

6. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.123/2021 ಕಲಂ. 302,201 ಐ.ಪಿ.ಸಿ:-

     ಪಿರ್ಯಾದಿದಾರರಾದ ಡಾ// ಜಯರಾಂ ವೈಧ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 03/07/2021 ರಂದು ಬೆಳಿಗ್ಗೆ 9.00 ಗಂಟೆಗೆ ನಾನು ಆಸ್ಪತ್ರೆಯ ಕರ್ತವ್ಯಕ್ಕೆ ಬಂದಿರುತ್ತೇನೆ ನಮ್ಮ ಆಸ್ಪತ್ರೆಯ ಗ್ರೂಪ್.ಡಿ ನೌಕರರಾದ ವೆಂಕಟೇಶಪ್ಪ ರವರು ನನ್ನ ಬಳಿ ಬಂದು ನಮ್ಮ ಆಸ್ಪತ್ರೆಯ ಬಾತ್ ರೂಂ ಕಿಟಕಿಯಲ್ಲಿ ಯಾವುದೋ ಒಂದು ನವದೀತ ಹೆಣ್ಣು ಮಗುವಿನ ದೇಹವಿರುತ್ತಂತ ಹೇಳಿರುತ್ತಾನೆ ನಾನು ಬೆಳಿಗ್ಗೆ 9.15 ಗಂಟೆ ಸಮಯದಲ್ಲಿ ಹೋಗಿ ನೋಡಲಾಗಿ ಆ ಮಗು ಒಂದು ದಿನದ ನವದೀತ ಹೆಣ್ಣು ಮಗುವಾಗಿದ್ದು ನಾವು ನೋಡುವಷ್ಟರಲ್ಲಿ ಮಗುವಿನ ಕತ್ತಿಗೆ ಒಂದು ಸಣ್ಣ ದಾರದಿಂದ ಕಟ್ಟಿದ್ದು ಮಗು ಮೃತಪಟ್ಟಿರುತ್ತೆ  ಯಾರೋ ದುಷ್ಕರ್ಮಿಗಳು (ಮಗುವನ್ನು) ಒಂದು ದಿನದ ನವದೀತ ಹೆಣ್ಣು ಮಗುವನ್ನು ಯಾವುದೋ ಉದ್ದೇಶದಿಂದ ಕೊಲೆ ಮಾಡಿ ಬಿಸಾಡಿರುವ ನಿಶಾನೆ ಕಂಡು ಬಂದಿರುತ್ತೆ ಆದ್ದರಿಂದ ಸದರಿ ಮಗುವಿನ ವಾರಸುದಾರರನ್ನು ಮತ್ತು ದುಷ್ಕರ್ಮಿಗಳನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣದ ದಾಖಲಿಸಿರುತ್ತೆ.

 

7. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.80/2021 ಕಲಂ. 32,34 ಕೆ.ಇ ಆಕ್ಟ್:-

     ದಿನಾಂಕ 03/07/2021 ರಂದು ಬೆಳಗ್ಗೆ 11.00 ಗಂಟೆಯಲ್ಲಿ ಡಿ.ಸಿ.ಬಿ-ಸಿ.ಇ.ಎನ್ ಪೊಲೀಸ್ ಠಾಣೆಯ ಪಿ.ಎಸ್.ಐ ರವರು ಆರೋಪಿ. ಮಾಲು ಹಾಗೂ ಪಂಚನಾಮೆಯೊಂದಿಗೆ ಠಾನೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ, ದಿನಾಂಕ 03/07/2021 ರಂದು ತಾನು ಹಾಗೂ ತಮ್ಮ ಠಾಣಾ ಸಿಬ್ಬಂಧಿಯವರಾದ ಮಲ್ಲಿಖಾರ್ಜಿನ ಹೆಚ್.ಸಿ-239, ಜೀಪ್ ಚಾಲಕ ಸುಶೀಲ್ ಕುಮಾರ್ ಎ.ಹೆಚ್.ಸಿ-13 ರವರೊಂದಿಗೆ ಪೊಲೀಸ್ ಜೀಪ್ ಸಂಖ್ಯೆ ಕೆ.ಎ-40 ಜಿ 58 ರಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಗಸ್ತಿನಲ್ಲಿದ್ದಾ ಬೆಳಗ್ಗೆ 08.30 ಗಂಟೆಯಲ್ಲಿ ಬಾತ್ಮಿದರರಿಂದ ಬಂದ ಮಾಹಿತಿಯಂತೆ ಶಿಡ್ಲಘಟ್ಟ ತಾಲ್ಲೂಕಿನ ಈ ತಿಮ್ಮಸಂದ್ರ ಗ್ರಾಮದಲ್ಲಿ ಅಕ್ರಮವಾಗಿ ಮದ್ಯವನ್ನು ಕೆ.ಎ-30 ಡಬ್ಲೂ 8625 ರ ದ್ವ-ಚಕ್ರ ವಾಹನದಲ್ಲಿ ಇಬ್ಬರು ಆಸಾಮಿಗಳು ಸಾಗಾಣಿಕೆ ಮಾಡುತ್ತಿದ್ದು, ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಮದ್ಯದ ಬಗ್ಗೆ ವಿಚಾರ ಮಾಡುತ್ತಿದ್ದಾಗ ದ್ವಿ ಚಕ್ರ ವಾಹನದ ಸವಾರ ವಾಹನದ ಸಮೇತ ಪರಾರಿಯಾಗಿದ್ದು, ವಶಕ್ಕೆ ಪಡೆದುಕೊಂಡ ಹಿಂಬದಿಯ ಸವಾರನ ಹೆಸರು ಮತ್ತು ವಿಳಾಸವನ್ನು ವಿಚಾರ ಮಾಡಲಾಗಿ ಮುನಿರಾಜು ಬಿನ್ ಲೇಟ್ ಚಿನ್ನಪ್ಪ, 35 ವರ್ಷ, ಪ.ಜಾತಿ, ಕೂಲಿ ಕೆಲಸ, ದಿಬ್ಬೂರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಪರಾರಿಯಾದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಗೋವಿಂದ ಬಿನ್ ನಾರಾಯಣಪ್ಪ, 40 ವರ್ಷ, ಕುರುಬರು, ಕೂಲಿ ಕೆಲಸ, ದಿಬ್ಬೂರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಮುನಿರಾಜು ರವರ ಬಳಿ ಇದ್ದ 4 ರಟ್ಟಿನ ಬಾಕ್ಸ್ ಗಳಿದ್ದು, 13,237/-ರೂ ಬೆಲೆಯ 33 ಲೀಟರ್ 720 ಎಂ.ಎಲ್ ಸಾಮರ್ಥ್ಯದ ವಿವಧ ಕಂಪನಿಯ ಮದ್ಯವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಮಡಿದ್ದು, ಸ್ಥಳದಲ್ಲಿ ಸಿಕ್ಕಿದ್ದ ಆರೋಪಿ ಮತ್ತು ಮಾಲುಗಳನ್ನು ಹಾಗೂ ಪಂಚನಾಮೆಯನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮಕ್ಕಾಗಿ ಕೋರಿರುವುದಾಗಿರುತ್ತೆ.

 

8. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.91/2021 ಕಲಂ. 379 ಐ.ಪಿ.ಸಿ:-

     ದಿನಾಂಕ:02/07/2021 ರಂದು ಮದ್ಯಾಹ್ನ 1-30 ಗಂಟೆಯ ಸಮಯದಲ್ಲಿ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:28/06/2021 ರಂದು ಸಂಜೆ 5-30 ಗಂಟೆ ಸಮಯದಲ್ಲಿ ನಾನು ದ್ವಿ ಚಕ್ರ ವಾಹನದಲ್ಲಿ ಲಕ್ಷ್ಮಿ ಲಾಡ್ಜ್ ಬಳಿ  ನನ್ನ ಬಾಬತ್ತು ನೊಂದಣಿ ಸಂಖ್ಯೆ ಕೆ.ಎ-40 ಎಸ್-0670 ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನವನ್ನು  ನಿಲ್ಲಿಸಿ ತನ್ನ ಗೆಳೆಯರ ಹತ್ತಿರ ಮಾತನಾಡಿಕೊಂಡು ಬರುವಾಗ ತನಗೆ ಅಯಾಸವಾಗಿದ್ದು ಆಗ ತಾನು ಸ್ವಲ್ಪ ಹೊತ್ತು ಮಲಗಿ ಹೋಗೋಣ ಎಂದು ಮಲಗಿರುತ್ತೇನೆ. ನಂತರ  ರಾತ್ರಿ ಸುಮಾರು 9-00 ಗಂಟೆಯವರೆಗೂ ಮಲಗಿ ಎದ್ದು ನೋಡಿದಾಗ ನನ್ನ ಬಾಬತ್ತು   ಕೆ.ಎ-40 ಎಸ್-0670 ನೊಂದಣಿ ಸಂಖ್ಯೆಯ ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನವು ಕಳುವಾಗಿರುತ್ತೆ. ನಾನು ಎಲ್ಲಾ ಕಡೆ ನೋಡಲಾಗಿ ಎಲ್ಲಿಯೂ ಪತ್ತೆಯಾಗದ ಕಾರಣ ತಮ್ಮ ಠಾಣೆಗೆ ತಡವಾಗಿ ದೂರು ನೀಡಿರುತ್ತೇನೆ. ನನ್ನ ದ್ವಿ ಚಕ್ರ ವಾಹನದ ಅಂದಾಜು ಬೆಲೆ 20000=00/- ರೂಪಾಯಗಳು ಆಗಿರುತ್ತೆ. ಅದ್ದರಿಂದ ಕಳುವಾಗಿರುವ ನನ್ನ ದ್ವಿ ಚಕ್ರ ವಾಹನವನ್ನು ಹುಡಿಕಿಕೊಟ್ಟು ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ದೂರನ್ನು ನೀಡಿರುವುದಾಗಿದ್ದು  ಸದರಿ ದೂರಿನ ಸಂಬಂಧ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿರುತ್ತೆ.

 

9. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.92/2021 ಕಲಂ. 379 ಐ.ಪಿ.ಸಿ:-

     ದಿನಾಂಕ: 02/07/2021 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿದಾರರಾದ ನಾಗರಾಜ ಪಿ. ಬಿನ್ ಲೇಟ್ ತಿಮ್ಮಯ್ಯ,40 ವರ್ಷ, ಪ.ಜಾತಿ, ಆಸ್ಪ್ರತೆಯಲ್ಲಿ ಜವಾನ ಕೆಲಸ,ವಾಸ ನಾಗಿರೆಡ್ಡಿ ಬಡಾವಣೆ, ಗೌರಿಬಿದನೂರು ನಗರ. ಪೋ.ನಂ. 9902888068 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇರೆಗೆ ಜವಾನ ಕೆಲಸವನ್ನು ಮಾಡುತ್ತಿದ್ದು, ದಿನಾ ನನ್ನ ಬಾಬತ್ತು KA 40 ED 5979 ಹಿರೋ ಸ್ಪ್ಲೆಂಡರ್  ಪ್ಲಸ್  ದ್ವಿಚಕ್ರವಾಹನದಲ್ಲಿ ಕೆಲಸಕ್ಕೆ ಹೋಗಿ ಬರುತ್ತಿರುತ್ತೇನೆ.  ಅದೇ ರೀತಿ ದಿನಾಂಕ: 26/06/2021 ರಂದು ಬೆಳಿಗ್ಗೆ 07-30 ಗಂಟೆಯಲ್ಲಿ ಎಂದಿನಂತೆ ನಾನು  ನನ್ನ ದ್ವಿಚಕ್ರವಾಹನದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ಆಸ್ಪತ್ರೆಯ ಎಡಭಾಗದಲ್ಲಿರುವ ಆಸ್ಪತ್ರೆಯ ಕ್ವಾಟ್ರಾಸ್ ಬಳಿ ದ್ವಿಚಕ್ರವಾಹನವನ್ನು ನಿಲ್ಲಿಸಿ ಆಸ್ಪತ್ರೆಯ ಒಳಗೆ ಹೋಗಿ ಕೆಲಸ ಮುಗಿಸಿಕೊಂಡು 10-00 ಗಂಟೆಗೆ ತಿಂಡಿಗೆ ಮನೆಗೆ ಹೋಗಲು ಕ್ವಾಟ್ರಾಸ್ ಬಳಿ ಬಂದು ನೋಡಲಾಗಿ ನನ್ನ ದ್ವಿಚಕ್ರವಾಹನವು ಅಲ್ಲಿ ಇರಲಿಲ್ಲ.  ಎಲ್ಲಾ ಕಡೆ ಹುಡುಕಾಡಿದರೂ  ಪತ್ತೆಯಾಗದ ಕಾರಣ ಈ ದಿನ ತಡವಾಗಿ ಪೊಲೀಸ್ ಠಾಣೆಗೆ ಬಂದು ನನ್ನ ಬಾಬತ್ತು KA 40 ED 5979 ಹಿರೋ  ಸ್ಪ್ಲೆಂಡರ್ ಪ್ಲಸ್  ದ್ವಿಚಕ್ರವಾಹನವನ್ನು ಪತ್ತೆ ಮಾಡಿ ಕೊಡಬೇಕೆಂದು ಹಾಗೂ ಇದರ ಅಂದಾಜು ಬೆಲೆ ಸುಮಾರು 20,000 ರೂಗಳಾಗಿರುತ್ತೆಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿರುವುದಾಗಿರುತ್ತೆ.

 

10. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.93/2021 ಕಲಂ. 15(A),32(3) ಕೆ.ಇ ಆಕ್ಟ್:-

     ಈ ದಿನ ದಿನಾಂಕ:02/07/2021 ರಂದು ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ನ್ಯಾಯಾಲುದ ಪಿಸಿ-318 ರವರು ಎನ್ ಸಿ ಆರ್-109-2021 ರಲ್ಲಿ ಕ್ರಿಮಿನಲ್ ಕೇಸನ್ನು ದಾಖಲು ಮಾಡಿಕೊಳ್ಳಲು ಘನ ನ್ಯಾಯಾಲಯದಲ್ಲಿ ಅನುಮತಿ ಪತ್ರವನ್ನು ಹಾಜರ್ ಪಡಿಸಿದರ ಸಂಬಂದದ ಸಾರಾಂಶವೆನೆಂದರೆ ದಿನಾಂಕ:11/05/2021 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಮಾನ್ಯ ಸಿಪಿಸೈ ಸಾಹೇಬರು ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:011/05/2021 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ತಾನು ಗೌರಿಬಿದನೂರು ನಗರದಲ್ಲಿ ಗಸ್ತಿನಲ್ಲಿ ಇದ್ದಾಗ ಸಾರ್ವಜನಿಕರು ಪೋನ್ ಮಾಡಿ ಗೌರಿಬಿದನೂರು ನಗರದ  ಅಬಿಲಾಷ್ ಟಾಕೀಸ್ ಪಕ್ಕದಲ್ಲಿ  ಯಾರೋ ಆಸಾಮಿಗಳು ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದರು .ಕೂಡಲೇ ತಾನು ಮಾನಸ ವೃತ್ತದಲ್ಲಿ  ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ತಮ್ಮ ಕಚೇರಿಯ ಸಿಬ್ಬಂದಿಯವರಾದ ಹೆಚ್.ಸಿ-224 ವೆಂಕಟೇಶ್  ರವರನ್ನು ಕರೆದುಕೊಂಡು ಮಾಹಿತಿಯಂತೆ ಸರ್ಕಾರಿ ಜೀಪಿನಲ್ಲಿ  ಅಬಿಲಾಷ್ ಟಾಕೀಸ್ ಪಕ್ಕದಲ್ಲಿ  ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ಅಬಿಲಾಷ್ ಟಾಕೀಸ್ ಪಕ್ಕದಲ್ಲಿ   ಸಾರ್ವಜನಿಕ ಸ್ಥಳದಲ್ಲಿ  ಮದ್ಯ ಸೇವನೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಮದ್ಯ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿ ಇದ್ದ ತಮ್ಮನ್ನು ಕಂಡು ಮದ್ಯ ಸೇವನೆ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು ಮಾಹಿತಿಯಂತೆ ಮದ್ಯ ಸರಬರಾಜು ಮಾಡುತ್ತಿದ್ದ ಆಸಾಮಿಗಳನ್ನು ಸುತ್ತುವರೆದು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ 1) ಕೇಧರನಾಥ್ ಬಿನ್ ರಾಮಾಂಜಿನಪ್ಪ. 31 ವರ್ಷ, ವಿದ್ಯಾರ್ಥಿ,ಮುಚ್ಚಟ್ಟಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ಪೋನ್;9353329113  2) ಲಕ್ಷ್ಮೀ ನಾರಯಣ ಬಿನ್ ಸತ್ಯ ನಾರಯಣಪ್ಪ.36 ವರ್ಷ.ನಾಯಕರು ಜಿರಾಯ್ತಿ,ವಾಸ; ಮುಚ್ಚಟ್ಟಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ಪೋನ್; 9591856187 ಎಂದು ತಿಳಿಸಿದರು ಆಸಾಮಿಗಳಿಗೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ರೀತಿಯ ಪರವಾನಿಗೆ ಇಲ್ಲವೆಂದರೆ ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ 1) 90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 16 ಟೆಟ್ರಾ ಪಾಕೆಟ್ ಗಳು 2)  90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 04 ಖಾಲಿ ಟೆಟ್ರಾ ಪಾಕೆಟ್ ಗಳು 3) 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು 4)ಎರಡು ಲೀಟರ್ ಸಾಮರ್ಥ್ಯದ ಒಂದು ಖಾಲಿ ಪ್ಲಾಸ್ಟಿಕ್  ವಾಟರ್ ಬಾಟಲ್ ಇರುತ್ತೆ. ಮದ್ಯವಿರುವ ಪಾಕೆಟ್ಗಗಳ ಮೇಲೆ ಇರುವ ಬೆಲೆಯನ್ನು ನೋಡಲಾಗಿ 35.13 ರೂಪಾಯಿಗಳೆಂತ ಇರುತ್ತೆ ಇದರ ಒಟ್ಟು ಬೆಲೆ 562 ರೂ ಗಳಾಗಿರುತ್ತೆ. ಇದರ ಒಟ್ಟು ಮದ್ಯೆ ಪ್ರಮಾಣ 1440 ಎಮ್,ಎಲ್,ಆಗಿರುತ್ತೆ. ಆಸಾಮಿ ಮತ್ತು ಮಾಲುಗಳನ್ನು ಪಂಚನಾಮೆಯ ಮೂಲಕ ಬೆಳಿಗ್ಗೆ 11-00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ಠಾಣಾಧಿಕಾರಿಗಳಿಗೆ ಸೂಚಿಸಿ ನೀಡಿದ ವರದಿಯನ್ನು ಪಡೆದುಕೊಂಡು ಠಾಣಾ ಎನ್ ಸಿ ಆರ್ ನಂ:109/2021 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ. ಕ್ರಿಮಿನಲ್ ಪ್ರಕರಣವನ್ನು ದಾಕಳು ಮಾಡಿಕೊಳ್ಳಲು  ಘನ ನ್ಯಾಯಾಲಯದಲ್ಲಿ ಅನುಮತಿಯನ್ನು ಪಡೆದುಕೊಂಡು ಈ ದಿನ ದಿ:02/07/2021 ರಂದು ಸಂಜೆ 05-30 ಗಂಟೆ ಸಮಯದಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

11. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.145/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ: 02/07/2021 ರಂದು ಮದ್ಯಾಹ್ನ 3-00ಗಂಟೆಗೆ  ನ್ಯಾಯಾಲಯದ ಪಿಸಿ-89 ರವರು ಠಾಣಾ NCR NO-161/2021 ರಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಘನ ನ್ಯಾಯಾಲಯದಿಂದ  ಅನುಮತಿ ಪಡೆದುಕೊಂಡು  ಬಂದು ಹಾಜರುಪಡಿಸಿದ ಆದೇಶದ ಸಾರಾಂಶವೇನೆಂದರೆ ದಿನಾಂಕ:30/06/2021 ರಂದು ಸಂಜೆ 7-00ಗಂಟೆ ಸಮಯದಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್  ಶ್ರೀ ನಂಜುಂಡಶರ್ಮ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ:30-06-2021 ರಂದು ಸಾಯಂಕಾಲ4-30 ಗಂಟೆ ಗಂಟೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿದ್ದಾಗ ಗುಡಿಬಂಡೆ ಪೊಲೀಸ್ ಠಾಣೆಯ ಠಾಣಾ ಗುಪ್ತ ಮಾಹಿತಿ  ಸಿಬ್ಬಂದಿ ಹನುಮಂತರಾಯಪ್ಪ ಸಿ,ಹೆಚ್ಸಿ-73 ರವರು ನನಗೆ ಪೋನ್ ಮಾಡಿ ಈ ದಿನ ದಿನಾಂಕ:30/06/2021 ರಂದು ನಾನು ಚೆಂಡೂರು ಗ್ರಾಮದ ಕಡೆ  ಗಸ್ತು ಮಾಡುತ್ತಿರುವಾಗ ಗಂಧಂನಾಗೇನಹಳ್ಳಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿರುವ ಹೊಂಗೇ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ  ಕೆಲವರು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ತನಗೆ ಮಾಹಿತಿ ನೀಡಿದರ ಮೇರೆಗೆ, ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-141 ಸಂತೋಷ್ ಕುಮಾರ್ ಎಂ,ಎಸ್, ಸಿ,ಎಚ್,ಸಿ-102 ಆನಂದ ಎನ್  ಸಿ,ಹೆಚ್,ಸಿ-28 ದಕ್ಷಿಣಾಮೂತರ್ಿ, ಸಿ,ಹೆಚ್,ಸಿ-29 ಶ್ರೀನಿವಾಸ, ಸಿ,ಹೆಚ್,ಸಿ-35 ನಾರಾಯಣಸ್ವಾಮಿರವರನ್ನು ಕರೆದುಕೊಂಡು ಸಿಬ್ಬಂದಿಯವರಿಗೆ ಮಾಹಿತಿಯನ್ನು ತಿಳಿಸಿ ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಎಚ್,ಸಿ-43 ವೆಂಕಟಾಚಲ ರವರೊಂದಿಗೆ ಸಾಯಂಕಾಲ 4-30 ಗಂಟೆಗೆ ಗುಡಿಬಂಡೆ ಪೊಲೀಸ್ ಠಾಣೆಯಿಂದ ಬಿಟ್ಟು ಸಂಜೆ -ಗಂಧಂನಾಗೇನಹಳ್ಳಿ ಗ್ರಾಮದ ಬಳಿ ಹೋಗಿ  ಗ್ರಾಮದಲ್ಲಿದ್ದ ಸಿ,ಹೆಚ್,ಸಿ-73 ಹನುಮಂತರಾಯಪ್ಪ ರವರನ್ನು ಕರೆದುಕೊಂಡು ಹಾಗೂ ಅಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಗಂಧಂನಾಗೇನಹಳ್ಳಿ ಗ್ರಾಮದ ಬೆಟ್ಟದಿಂದ ಸ್ವಲ್ಪ ದೂರದಲ್ಲಿ ಜೀಪ್ ನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ, ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-500 ಬಾಹರ್-500 ಎಂದು ಕೂಗುತ್ತಾ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಸಂಜೆ 5-15 ಗಂಟೆಗೆ ದಾಳಿ ಮಾಡಿದಾಗ, ಜೂಜಾಟವನ್ನು ಆಡುತ್ತಿದ್ದವರು ಓಡಿ ಹೋಗಿದ್ದು ಓಡಿ ಹೋದವರ  ಪೈಕಿ ನಾವುಗಳು ಕೆಲವರನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ಗೋಪಾಲಪ್ಪ ಬಿನ್ ಲೇಟ್ ವೆಂಕಟಸ್ವಾಮಿ 70ವರ್ಷ ಗಾಣಿಗರು ಪಂಚರ್ ಅಂಗಡಿಯಲ್ಲಿ ಕೆಲಸ ವಾಸ-ಚೆಂಡೂರು ಗ್ರಾಮ ಗುಡಿಬಂಡೆ ತಾಲ್ಲೂಕು. 2) ನಾರಾಯಣಸ್ವಾಮಿ ಬಿನ್ ಆದೆಪ್ಪ  44ವರ್ಷ ಭೋವಿ ಜನಾಂಗ ಜಿರಾಯ್ತಿ ಕೆಲಸ ವಾಸ-ಗಂಧಂನಾಗೇನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು.3) ನಂದೀಶ ಬಿನ್ ಅಂಜಿನಪ್ಪ 34ವರ್ಷ ಕುಂಬಾರ ಜನಾಂಗ ಜಿರಾಯ್ತಿ ವಾಸ-ಹಂಪಸಂದ್ರ ಗ್ರಾಮ ಗುಡಿಬಂಡೆ ತಾಲ್ಲೂಕು.  4) ಸಂತೋಷ್ ಬಿನ್ ಅಂಜಿನಪ್ಪ 21ವರ್ಷ ಭೋವಿ ಜನಾಂಗ ಜಿರಾಯ್ತಿ ಕೆಲಸ ಗಂಧಂನಾಗೇನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು. ಎಂದು ತಿಳಿಸಿದ್ದು ಓಡಿ ಹೋದವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1).ಅಂಬರೀಶ ಬಿನ್ ವೆಂಕಟೇಶಪ್ಪ 25ವರ್ಷ ವಕ್ಕಲಿಗರು ಲಾರಿ ಚಾಲಕ ವಾಸ-ಗಂಧಂನಾಗೇನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು, 2) ಮಣಿ @ ಮಣಿಕಂಠ ಬಿನ್ 25ವರ್ಷ ಭಜಂತ್ರಿ ಜಿರಾಯ್ತಿ ಕೆಲಸ ವಾಸ-ಚೆಂಡೂರು ಗ್ರಾಮ ಗುಡಿಬಂಡೆ ತಾಲ್ಲೂಕು. 3) ಸತೀಶ್ ಬಿನ್ ನಾಗಪ್ಪ 24ವರ್ಷ ನಾಯಕರು ಜಿರಾಯ್ತಿ ವಾಸ-ಚೆಂಡೂರು ಗ್ರಾಮ ಗುಡಿಬಂಡೆ ತಾಲ್ಲೂಕು. 4) ರಾಮಚಂದ್ರ ಬಿನ್ ವೆಂಕಟಸ್ವಾಮಿ 30ವರ್ಷ ವಕ್ಕಲಿಗರು ಜೀರಾಯ್ತಿ ಕೆಲಸ ವಾಸ-ಕೋರೇನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು  ಎಂದು ತಿಳಿಸಿರುತ್ತಾರೆ.  ನಂತರ ಪಂಚರ ಸಮಕ್ಷಮ ವಶದಲಿದ್ದ್ಲ ಆಸಾಮಿಗಳನ್ನು ಪರಿಶೀಲನೆ ಮಾಡಲಾಗಿ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಹಣವನ್ನು  ಲೆಕ್ಕ ಮಾಡಲಾಗಿ 10,680/- ರೂ ಗಳಿದ್ದು ಸ್ಥಳದಲ್ಲಿ 52 ಇಸ್ಪೀಟ್ ಎಲೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಂತರ ಜೂಜಾಟಕ್ಕೆ ಪಣಕ್ಕೆ ಇಟ್ಟಿದ್ದ 10,680/- ರೂ & 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ  ಸಂಜೆ 5-30ಗಂಟೆಯಿಂದ ಸಂಜೆ 6-15 ಗಂಟೆಯವರೆಗೆ ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 6-45 ಗಂಟೆಗೆ  ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 7-00 ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದರ ಮೇರೆಗೆ ಎನ್,ಸಿ,ಆರ್ ದಾಖಲಿಸಿಕೊಂಡಿರುತ್ತೆ.

 

12. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.146/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:02/07/2021 ರಂದು ಮದ್ಯಾಹ್ನ 3-30 ಗಂಟೆಗೆ ನ್ಯಾಯಾಲಯದ ಪಿಸಿ-89 ರವರು ಠಾಣಾ NCR NO-164/2021 ರಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಘನ ನ್ಯಾಯಾಲಯದಿಂದ ಅನುಮತಿಪಡೆದುಕೊಂಡು ಬಂದು ಹಾಜರುಪಡಿಸಿದ ಆದೇಶದ ಸಾರಾಂಶವೇನೆಂದರೆ: ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ,ಎಸ್,ಐ  R, ಗಂಗಾಧರಪ್ಪ  ಆದ ತಾನು ಈ ದಿನ ದಿನಾಂಕ:01.07.2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಪೆರೇಸಂದ್ರ ಕ್ರಾಸ್ ಕಡೆ ಹೆಚ್.ಸಿ.222, ನಾಗರಾಜ್ ರವರೊಂದಿಗೆ ಗಸ್ತಿನಲ್ಲಿದ್ದಾಗ ಗುಡಿಬಂಢೆ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಪಿ.ಸಿ. 272, ಶ್ರೀನಿವಾಸ ರವರು ತನಗೆ ಪೋನ್ ಮಾಡಿ ಅರೂರು ಕ್ರಾಸ್ ಬಳಿ ಯಾರೋ ಒಬ್ಬ ಆಸಾಮಿ ಅರೂರು ಗ್ರಾಮದ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ತಾನು, ಹೆಚ್.ಸಿ.222, ನಾಗರಾಜ್ ರವರನ್ನು ಜೊತೆಯಲ್ಲಿ ಕರೆದುಕೊಂಡು ದ್ವಿಚಕ್ರವಾಹನದಲ್ಲಿ ಸಂಜೆ 5-10 ಗಂಟೆ ಸಮಯಕ್ಕೆ ಅರೂರು ಗ್ರಾಮದ ಬಳಿಗೆ ಹೋಗಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು, ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ನಂತರ ನನಗೆ ಮಾಹಿತಿಯನ್ನು ನೀಡಿದ ಬೀಟ್ ಕರ್ತವ್ಯದ ಪಿ.ಸಿ. 272, ಶ್ರೀನಿವಾಸರವರನ್ನು ಕರೆದುಕೊಂಡು, ಪಂಚರೊಂದಿಗೆ ಅರೂರು ಗ್ರಾಮದ ಬಸ್ ನಿಲ್ದಾಣಕ್ಕೆ ಹೋಗಿ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಸಂಜೆ 5-15 ಗಂಟೆಗೆ ಪಂಚರೊಂದಿಗೆ ನಾವು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿ ಸ್ಥಳದಲ್ಲಿಯೇ ಇದ್ದು, ಸದರಿ ಆಸಾಮಿಯನ್ನು ಹಿಡಿದು ಹೆಸರು & ವಿಳಾಸವನ್ನು ಕೇಳಿ ತಿಳಿಯಲಾಗಿ ವೆಂಕಟೇಶ್ ಬಿನ್ ನರಸಿಂಹಪ್ಪ, 36 ವರ್ಷ, ಬಲಜಿಗರು, ಜಿರಾಯ್ತಿ, ಸಾಮಸೇನಹಳ್ಳಿ ಗ್ರಾಮ, ಕಸಬ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿರುತ್ತಾನೆ. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಸೇವನೆಗೆ ಸ್ಥಳಾವಕಾಶ ನೀಡಲಿಕ್ಕೆ ನಿನ್ನ ಬಳಿ ಪರವಾನಗಿ ಇದೆಯೇ ಎಂದು  ಕೆಳಲಾಗಿ, ಇಲ್ಲವೆಂದು ತಿಳಿಸಿರುತ್ತಾನೆ. ಸದರಿ ಆರೋಪಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 10 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಡಿರುವಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದವು.  ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 900 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*10=351.3/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 5-30 ಗಂಟೆಯಿಂದ ಸಂಜೆ 6-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಮಾಲು, ಅಸಲು ಪಂಚನಾಮೆ ಮತ್ತು ಆರೋಪಿಯೊಂದಿಗೆ ರಾತ್ರಿ 7-00 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ರಾತ್ರಿ 7-30 ಗಂಟೆಗೆ ಠಾಣಾಧಿಕಾರಿಗಳಿಗೆ ವರದಿ ನೀಡುತ್ತಿದ್ದು ಸದರಿ ಆರೋಪಿ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ.

 

13. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.68/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 02-07-2021 ರಂದು ಸಂಜೆ 17-30 ಗಂಟೆಗೆ ಆ ಉ ನಿ ಸಾಹೇಬರು ದಾಳಿಯಿಂದ  ಆರೋಫಿ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:-02-07-2021  ರಂದು  ಮದ್ಯಾಹ್ನ   15-00 ಗಂಟೆ ಸಮಯದಲ್ಲಿ ನಾನು ಸರ್ಕಾರಿ ಜೀಪು ಸಂಖ್ಯೆ  KA-40-G-1555 ರ ವಾಹನದಲ್ಲಿ  ಚಾಲಕ  ಪಾರೂಖ್ ಮತ್ತು  ಸಿಬ್ಬಂದಿಯಾದ  ಹೆಚ್ ಸಿ-32 ಕೇಶವಮೂರ್ತಿ ಹಾಗೂ ಸಿಪಿಸಿ-240 ಮಧುಸೂದನ್    ರವರೊಂದಿಗೆ  ತಿಮ್ಮನಹಳ್ಳಿ    ಗ್ರಾಮದ ಕಡೆ ಹಗಲು  ಗಸ್ತಿನಲ್ಲಿದ್ದಾಗ  ನನಗೆ ಬಂದ  ಖಚಿತವಾದ ಮಾಹಿತಿ ಎನೆಂದರೆ  ಕಣಿತಹಳ್ಳಿ ಗ್ರಾಮದ  ಪಿಳ್ಳಪ್ಪ ಎಂಬುವರು ಯಾವುದೇ  ಪರವಾನಗಿಯನ್ನು ಪಡೆಯದೇ ತನ್ನ ಅಂಗಡಿಯ  ಮುಂದೆ  ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರು ವುದಾಗಿ ಮಾಹಿತಿ ಬಂದಿದ್ದು ಮಾಹಿತಿಯಂತೆ ದಾಳಿ ನಡೆಸಲು  ತಿಮ್ಮನಹಳ್ಳಿ  ಗೇಟಿನ ಬಳಿ ಇದ್ದಂತಹ ಪಂಚರನ್ನು ಬರಮಾಡಿಕೊಂಡು ಅವರುಗಳ ಸಮಕ್ಷಮದಲ್ಲಿ  ಮದ್ಯಾಹ್ನ 15-30 ಗಂಟೆಗೆ  ಕಣಿತಹಳ್ಳಿ  ಗ್ರಾಮದ  ಪಿಳ್ಳಪ್ಪ  ರವರ ಅಂಗಡಿಯ ಬಳಿ  ಹೋಗುವಷ್ಟರಲ್ಲಿ ಅಂಗಡಿಯ ಮುಂದೆ ಮದ್ಯವನ್ನು ಸೇವನೆ ಮಾಡುತ್ತಿದ್ದ  ಜನರು  ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಕುಡಿಯುತ್ತಿದ್ದ ಲೋಟಗಳನ್ನು ಬಿಸಾಡಿ ಓಡಿ ಹೋಗಿದ್ದು  ಅಂಗಡಿಯ  ಮಾಲೀಕನ   ಹೆಸರು ವಿಳಾಸವನ್ನು ಕೇಳಲಾಗಿ   ಪಿಳ್ಳಪ್ಪ    ಬಿನ್ ಲೇಟ್ ಕುಂಟಿ ಮುನಿಯಪ್ಪ 45  ವರ್ಷ   ಪಜಾತಿ ಜನಾಂಗ  ಚಿಲ್ಲರೆ ಅಂಗಡಿ ಮಾಲೀಕ ಕಣಿತಹಳ್ಳಿ ಎಂತ ತಿಳಿಸಿದ್ದು  ಇವನ  ಅಂಗಡಿಯ   ಮುಂದೆ  ಒಂದು  ಕವರಿದ್ದು  ಅದನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥದ   HAYWARDS CHEERS WHISKY  ಯ  10  TETRA  POCKET ಗಳಿದ್ದು ಪ್ರತಿ  ಪಾಕೇಟಿನ ಬೆಲೆ /- 35-13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-900 ML ಮದ್ಯವಿದ್ದು ಒಟ್ಟು ಬೆಲೆ 351.5/- ರೂ ಆಗುತ್ತದೆ. 2) 5 ಖಾಲಿ ಲೋಟಗಳು 3) 5 ಖಾಲಿ ಟೆಟ್ರಾ ಪ್ಯಾಕೇಟುಗಳು ಸಿಕ್ಕಿದ್ದು ಇವುಗಳನ್ನು ತನ್ನ  ಅಂಗಡಿಯ  ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳವಕಾಶ ಮಾಡಿಕೊಟ್ಟ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು  ಅಂಗಡಿಯ  ಮಾಲೀಕ  ಪಿಳ್ಳಪ್ಪ ಬಿನ್ ಕುಂಟಿ ಮುನಿಯಪ್ಪ  ರವರನ್ನು  ಕೇಳಿದಾಗ ತನ್ನ ಬಳಿ ಯಾವುದೇ ಪರವಾನಗಿ  ಇಲ್ಲವೆಂದು ಹೇಳಿದ್ದು ಸದರಿ  ಮಾಲನ್ನು ಪಂಚರ ಸಮಕ್ಷಮ  ಮದ್ಯಾಹ್ನ 15-40 ಗಂಟೆಯಿಂದ 16-30 ಗಂಟೆಯವರೆವಿಗೆ ಅಂಗಡಿಯ ಬಳಿ ಮಹಜರ್ ಕ್ರಮವನ್ನು ಜರುಗಿಸಿ ಮೇಲ್ಕಂಡ ಸ್ಥಳದಲ್ಲಿ ದೊರೆತ 10 ಟೆಟ್ರಾ ಪ್ಯಾಕೇಟುಗಳನ್ನ್ ಲೋಟಗಳನ್ನು ಅಂಗಡಿಯ ಮಾಲೀಕ  ಪಿಳ್ಳಪ್ಪ  ನನ್ನು  ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು  ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ,

 

14. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.58/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:02-07-2021 ರಂದು ರಾತ್ರಿ 8-15 ಗಂಟೆಗೆ PSI ರವರು ಮಾಲು & ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:02-07-21 ರಂದು ಸಂಜೆ CHC-88, CPC-189 & AHC-21 ರವರೊಂದಿಗೆ KA-40-G-59 ರಲ್ಲಿ ಗಸ್ತಿನಲ್ಲಿದ್ದಾಗ ಬಂದ ಮಾಹಿತಿ ಮೇರೆಗೆ  ಪಂಚಾಯ್ತಿದಾರರೊಂದಿಗೆ ರಾಮಾನುಪಾಡಿ ಗ್ರಾಮಕ್ಕೆ ಹೋಗಿ ಜೀಪನ್ನು ನಿಲ್ಲಿಸುತ್ತಿದ್ದಂತೆ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಅಂಗಡಿ ಮಾಲೀಕರನ್ನು  ಹೆಸರು & ವಿಳಾಸ ಕೇಳಲಾಗಿ ನರಸಿಂಹಪ್ಪ ಬಿನ್ ಲೇಟ್ ಪೆದ್ದ ನರಸಪ್ಪ, 58 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ರಾಮಾನುಪಾಡಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90ML Old Tavern Whisky 13 Tetra Pockets (1 Litre 170 ML  Value 689/-Rs),  1 Litre emty Plastic Water Bottle, Emty Plastic Glass, 90ML Old Tavern Whisky 1 Emty Tetra Pocket ಇದ್ದು, ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಸಂಜೆ 6-00 ಗಂಟೆಯಿಂದ 7-00 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

ಇತ್ತೀಚಿನ ನವೀಕರಣ​ : 03-07-2021 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080