ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.71/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ:03.05.2021 ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದಿದಾರರಾದ ಜ್ಯೋತಿ ಪ್ರಸಾದ್ ಕೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಈಗ್ಗೆ ದಿನಾಂಕ:11.12.2020 ರಿಂದ ರೈನ್ ಬೋ ಚಿಲ್ಡ್ರನ್ಸ್ ಆಸ್ಪಿಟಲ್ ದೊಡ್ಡನೆಕ್ಕುಂಡಿ , ಮಾರತ್ತಹಳ್ಳಿ ಬೆಂಗಳೂರಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, 1.ಟ್ರಾನ್ಸ್ ಪೋರ್ಟ್ , 2. ಹೌಸ್ ಕೀಪಿಂಗ್ , 3. ಸೆಕ್ಯೂರಿಟಿ ವಿಭಾಗಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು, ದಿನಾಂಕ:02.05.2021 ರಂದು ತಮಗೆ ಆಂದ್ರಪ್ರದೇಶದ ಅನಂತಪುರದ ಭೇಬಿ ಆಸ್ಪತ್ರೆಯಿಂದ ರೋಗಿಯನ್ನು ತಮ್ಮ ಆಸ್ಪತ್ರೆಗೆ ಕರೆದುಕೊಂಡು ಹೊಗಲು ದೂರವಾಣಿ ಕರೆ ಬಂದಿದ್ದು, ಅದರಂತೆ ರೋಗಿಯನ್ನು ಕರೆದುಕೊಂಡು ಬರಲು ತಮ್ಮ ಆಸ್ಪತ್ರೆಯ ಅಂಬುಲೆನ್ಸ್ ಸಂಖ್ಯೆ ಕೆಎ 03 ಎ.ಹೆಚ್. 6326 ನೊಂದಣಿ ಸಂಖ್ಯೆಯ ಟ್ರಾವೆಲ್ಲರ್ ನಲ್ಲಿ ಚಾಲಕ ನೀಲಮೇಘ ಬಿನ್ ಅನ್ನಾಮಲೈ 45 ವರ್ಷ ನಂ 327 , ಪರಂಗಿಪಾಳ್ಯ 24 ನೇ ಮೈನ್ 23 ನೇ ಕ್ರಾಸ್ ಗೋದಾವರಿ ರೋಡ್ ಬೆಂಗಳೂರು ಉತ್ತರ-560102 ರವರಿಗೆ ಮತ್ತು ವೈದ್ಯರಾದ ಡಾ.ಸಾಯಿ , ಮತ್ತು ಬ್ರದರ್ ವೀರೇಶ್ ರವರನ್ನು ಕಳುಹಿಸಿದ್ದು, ಸದರಿಯವರು ಎನ್ ಹೆಚ್ 44 ರಸ್ತೆಯ ಚಿಕ್ಕಬಳ್ಳಾಪುರ ತಾಲ್ಲೂಕು ಸೇಠ್ ದಿನ್ನೆ ಸಮೀಪ ಮದ್ಯಾಹ್ನ 2-20 ಗಂಟೆ ಸಮಯದಲ್ಲಿ ಹೋಗುತ್ತಿದ್ದಾಗ ತಮ್ಮ ಚಾಲಕ ನೀಲಮೇಘರವರು ತಮ್ಮ ಅಂಬುಲೆನ್ಸ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದು, ಆ ಸಮಯದಲ್ಲಿ ಯಾವುದೋ ಹದ್ದು ಬಂದು ಮುಂಭಾಗದ ಗ್ಲಾಸ್ ಗೆ ಬಡಿದಿದ್ದು, ಆಗ ತಮ್ಮ ಚಾಲಕ ವಿಚಲಿತನಾಗಿ ರಸ್ತೆಯ ಬಲಕ್ಕೆ ತಿರುಗಿಸಿದ್ದು, ನಿಯಂತ್ರಣ ತಪ್ಪಿ ರಸ್ತೆಯ ಮದ್ಯದ ಡಿವೈಡರ್ ಮೇಲೆ ಬಿದ್ದು ಹೋಗಿದ್ದು, ತಮ್ಮಅಂಬುಲೆನ್ಸ್ ವಾಹನದ ಮುಂಭಾಗದ ಗ್ಲಾಸ್ ಹಿಂಭಾಗದ ಗ್ಲಾಸ್ ಬಲಗಡೆಯ ಪೂರ್ತಿ ಬಾಡಿ , ಎಡಗಡೆಯ ಮುಂಭಾಗದ ಟೈರ್ , ಹಿಂಭಾಗದ ಡೋರ್ ಗಳು ಮತ್ತಿ ಇತರೆ ಭಾಗಗಳು ಜಖಂಗೊಂಡಿದ್ದು, ತಮ್ಮ ಚಾಲಕ ನೀಲಮೇಘರವರಿಗೆ  ಬೆನ್ನಿನ ಮೇಲೆ ಮೂಗೇಟುಗಳಾಗಿದ್ದು, ಡಾ. ಸಾಯಿ ಮತ್ತು ಬ್ರದರ್ ವೀರೇಶ್ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲವೆಂದು ಡಾ. ಸಾಯಿರವರು ಫೋನ್ ಮಾಡಿ ತಿಳಿಸಿದ್ದು, ನಂತರ ತಾನು ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ನಂತರ ತಮ್ಮ ಚಾಲಕ ನೀಲಮೇಘರವರನ್ನು ಅಂಬುಲೆನ್ಸ್ ನಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿರುತ್ತಾರೆ. ತಾನು ಅವರೊಂದಿಗೆ ಆಸ್ಪತ್ರೆಯಲ್ಲಿಯೇ ಇದ್ದು ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣನಾದ ತಮ್ಮ ಚಾಲಕ ನೀಲಮೇಘರವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.177/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ದಿನಾಂಕ: 02/05/2021 ರಂದು ಬೆಳಿಗ್ಗೆ 08.45 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 02/05/2021 ರಂದು ಬೆಳಗ್ಗೆ 07.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ತಮ್ಮ ಸಿಬ್ಬಂದಿಯವರಾದ ಸಿ.ಹೆಚ್.ಸಿ-249 ಸಂದೀಪ್ ಕುಮಾರ್ ರವರು ಜೀಪ್ ಚಾಲಕ ಮುಕೇಶ್ ರವರೊಂದಿಗೆ ತನಗೆ ಒದಗಿಸಿರುವ ಜೀಪ್ ಸಂಖ್ಯೆ ಕೆ.ಎ-40-ಜಿ-326 ರಲ್ಲಿ ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ತಿಮ್ಮಸಂದ್ರ ಗ್ರಾಮದ ಕೃಷ್ಣ ಸಿಲ್ಕ್ ಬಟ್ಟೆ ಅಂಗಡಿಯ ಮಾಲೀಕರು ಅಂಗಡಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಬೆಳಗ್ಗೆ 7.15 ಗಂಟೆಗೆ ತಿಮ್ಮಸಂದ್ರ ಗ್ರಾಮದ ಕೃಷ್ಣ ಸಿಲ್ಕ್ ಬಟ್ಟೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 7-8 ಜನರನ್ನು ಅಂಗಡಿಯಲ್ಲಿ ಅಕ್ಕಪಕ್ಕದಲ್ಲಿಯೇ ಕೂರಿಸಿಕೊಂಡು ಮತ್ತು ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಜಗದೀಶ್ ಬಿನ್ ಗೋಪಾಲಕೃಷ್ಣಯ್ಯ, 38 ವರ್ಷ, ಪದ್ಮಶಾಲಿ ಜನಾಂಗ, ಕೃಷ್ಣ ಸಿಲ್ಕ್ ಬಟ್ಟೆ ಅಂಗಡಿ ಮಾಲೀಕರು, ವಾಸ: ಕೃಷ್ಣಮ್ಮನ ಹೊಸಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಬಟ್ಟೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.179/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ದಿನಾಂಕ: 03/05/2021 ರಂದು ಬೆಳಿಗ್ಗೆ 09.30 ಗಂಟೆಗೆ ಠಾಣೆಯ ಶ್ರೀ.ನಾರಾಯಣಸ್ವಾಮಿ.ಕೆ, ಪಿ.ಎಸ್.ಐ-2 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:03/05/2021 ರಂದು ಬೆಳಗ್ಗೆ 08.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ತಮ್ಮ ಸಿಬ್ಬಂದಿಯವರಾದ ಸಿ.ಪಿ.ಸಿ-430 ನರಸಿಂಹಯ್ಯ ರವರೊಂದಿಗೆ ತನಗೆ ಒದಗಿಸಿರುವ ಜೀಪ್ ಸಂಖ್ಯೆ  ಕೆ.ಎ-40-ಜಿ-64 ರಲ್ಲಿ ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ತಿಮ್ಮಸಂದ್ರ ಗ್ರಾಮದ ಶ್ರೀ ವೆಂಕಟೇಶ್ವರ ರೇಷ್ಮೆ ಸೀರೆ ತಯಾರಕರು ಬಟ್ಟೆ ಅಂಗಡಿಯ ಮಾಲೀಕರು ಅಂಗಡಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಬೆಳಗ್ಗೆ 08.15 ಗಂಟೆಗೆ  ತಿಮ್ಮಸಂದ್ರ ಗ್ರಾಮದ ಶ್ರೀ ವೆಂಕಟೇಶ್ವರ ರೇಷ್ಮೆ ಸೀರೆ ತಯಾರಕರು ಬಟ್ಟೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 7-8 ಜನರನ್ನು ಅಂಗಡಿಯಲ್ಲಿ ಅಕ್ಕಪಕ್ಕದಲ್ಲಿಯೇ ಕೂರಿಸಿಕೊಂಡು ಮತ್ತು ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶಿವಾರೆಡ್ಡಿ ಬಿನ್ ಲೇಟ್ ಲಕ್ಷ್ಮಣ, 46 ವರ್ಷ, ವಕ್ಕಲಿಗರು, ಬಟ್ಟೆ ಅಂಗಡಿ ಮಾಲೀಕರು, ವಾಸ: ತಿಮ್ಮಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು, ಮೊ.ಸಂ.9844905077 ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಬಟ್ಟೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.180/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ದಿನಾಂಕ: 03/05/2021 ರಂದು ಬೆಳಿಗ್ಗೆ 10.00 ಗಂಟೆಗೆ ಚಿಂತಾಮಣಿ ಗ್ರಾಮಾಂತರ ವೃತ್ತದ ಸಿ.ಪಿ.ಐ ಶ್ರೀ.ಕೆ.ಎಂ.ಶ್ರೀನಿವಾಸಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 03/05/2021 ರಂದು ಬೆಳಿಗ್ಗೆ 06.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ತನ್ನ ಸಿಬ್ಬಂದಿಯವರಾದ ಸಿ.ಹೆಚ್.ಸಿ-190 ವೀರಭದ್ರಸ್ವಾಮಿ ರವರು ಜೀಪ್ ಚಾಲಕ ವೇಣುಗೋಪಾಲ್ ರವರೊಂದಿಗೆ ತನಗೆ ಒದಗಿಸಿರುವ ಜೀಪ್ ಸಂಖ್ಯೆ ಕೆ.ಎ-40-ಜಿ-3339 ಜೀಪ್ ನಲ್ಲಿ ವೃತ್ತದ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಬೆಳಿಗ್ಗೆ 06.30 ಗಂಟೆ ಸಮಯದಲ್ಲಿ ತಿಮ್ಮಸಂದ್ರ ಗ್ರಾಮದ ಪಿ.ವಿ.ಆರ್ ಸಿಲ್ಕ್ ಬಟ್ಟೆ ಅಂಗಡಿಯನ್ನು ಮಹೇಶರವರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 5-6 ಜನರನ್ನು ಅಂಗಡಿಯಲ್ಲಿ ಅಕ್ಕಪಕ್ಕದಲ್ಲಿಯೇ ಕೂರಿಸಿಕೊಂಡು ಮತ್ತು ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವರ ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ ಮಹೇಶ್ ಬಿನ್ ಪುಟ್ಟಸ್ವಾಮಿ, 19 ವರ್ಷ, ಕುರುಬರು, ಪಿ.ವಿ.ಆರ್ ಬಟ್ಟೆ ಅಂಗಡಿಯಲ್ಲಿ ವ್ಯಾಪಾರ, ವಾಸ: ತಿಮ್ಮಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು. ಸ್ವಂತ ಊರು: ಚಮಚಲಿ ಗ್ರಾಮ, ಅಮಬ್ಲೆ ಪೋಸ್ಟ್, ಯಲಂದೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.105/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 06/4/2021 ರಂದು ಸಂಜೆ 5-30 ಗಂಟೆಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ. ಮೋಹನ್ ಎನ್. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ , ಇವರಿಗೆ ದಿನಾಂಕ: 06/04/2021 ರಂದು ಮದ್ಯಾಹ್ನ 2-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ಕುದರೆಬ್ಯಾಳ್ಯ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಯಾದ ಹೆಚ್.ಸಿ-170 ಜೂಲಪ್ಪ , ಪಿ.ಸಿ-520 ಶ್ರೀನಾಥ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ಕುದರೆಬ್ಯಾಳ್ಯ ಗ್ರಾಮದಲ್ಲಿ ಹೋಗಿ ಅಲ್ಲಿ, ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಮದ್ಯಾಹ್ನ 2-30 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿಯು ಅಂಗಡಿಯ ಮುಂದೆ ಸಾವರ್ಜನಿಕ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಅಂಗಡಿ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ‍ಗ್ಲಾಸ್ ಗಳನ್ನು ಕೊಡುತ್ತಿದ್ದ ವ್ಯಕ್ತಿಗಳು ಓಡಿ ಹೋಗಲು ಪ್ರಯತ್ನಿಸಿದಾಗ, ಹೆಚ್.ಸಿ-170 ಜೂಲಪ್ಪ , ಪಿ.ಸಿ-520 ಶ್ರೀನಾಥ ರವರು ಹಿಂಬಾಲಿಸಿ ಹಿಡಿದುಕೊಂಡಿರುತ್ತಾರೆ. ಸದರಿ ಆಸಾಮಿ ಹೆಸರು ವಿಳಾಸ ಕೇಳಲಾಗಿ, ರಂಗನಾಥ ಬಿನ್ ಪಾಂಡುರಂಗ, 38 ವರ್ಷ, ಈಡಿಗರು, ಕೂಲಿ ಕೆಲಸ, ವಾಸ ಕೋಟಾಲದಿನ್ನೆ ಗ್ರಾಮ ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ರಂಗನಾಥ ರವರ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ.ಎಲ್.ಸಾಮರ್ಥ್ಯದHAY WARDS CHEERS WHISKY ಯ 21 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 1 ಲೀಟರ್ 890 ಎಂ.ಎಲ್ ಆಗಿರುತ್ತೆ. ಇವುಗಳ ಒಟ್ಟು ಬೆಲೆ 737.73 /- ರೂ.ಗಳಾಗಿರುತ್ತೆ. ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇದೆಯೇ ಎಂದು ಕೇಳಲಾಗಿ ತಮ್ಮ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾರೆ. ಆದ್ದರಿಂದ ಸ್ಥಳದಲ್ಲಿ ಮದ್ಯಾಹ್ನ 2-30 ರಿಂದ 3-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 21 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS WHISKY ಯ 4 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 5-30 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಈ ದೂರಿನೊಂದಿಗೆ ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಿರುತ್ತೆ.         

 

6. ಕೆಂಚಾರ್ಲಹಳ್ಳಿ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.43/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 03-05-2021 ರಂದು ಮಧ್ಯಾಹ್ನ 02.00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಮಾಲು, ಮಹಜರ್ ಮತ್ತು ಆರೋಪಿಯೊಂದಿಗೆ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:03/05/2021 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಬಾಲರೆಡ್ಡಿಪಲ್ಲಿ ಗ್ರಾಮದ ಚಿಕ್ಕನಾರಾಯಣಸ್ವಾಮಿ ಬಿನ್ ನೀರಗಂಟಿ ವೆಂಕಟರಾಯಪ್ಪ  ರವರು ತಮ್ಮ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ  ಸ್ಥಳದ ಮೇಲೆ  ದಾಳಿ ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿಹೆಚ್ಸಿ-161 ಕೃಷ್ಣಪ್ಪ ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ಜೀಪ್ ನಲ್ಲಿ ಬಾಲರೆಡ್ಡಿಪಲ್ಲಿ ಗ್ರಾಮದ ಬಳಿ ಹೋಗಿ ಅಲ್ಲಿದ್ದ ಇಬ್ಬರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಗ್ರಾಮದೊಳಗೆ ಹೋಗಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ನಡೆದುಕೊಂಡು ಬಾಲರೆಡ್ಡಿಪಲ್ಲಿ ಗ್ರಾಮದ ಚಿಕ್ಕನಾರಾಯಣಸ್ವಾಮಿ ಬಿನ್ ನೀರಗಂಟಿ ವೆಂಕಟರಾಯಪ್ಪ  ರವರ ಮನೆಯ ಬಳಿ ಹೋಗಿ ನೋಡಲಾಗಿ ಮನೆಯ ಮಾಲೀಕನಾದ ಚಿಕ್ಕನಾರಾಯಣಸ್ವಾಮಿ ತಮ್ಮ ಮನೆಯ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿಹೋಗಿದ್ದು, ಮನೆಯ ಮಾಲೀಕನಾದ ಚಿಕ್ಕನಾರಾಯಣಸ್ವಾಮಿ ರವರನ್ನು ವಶಕ್ಕೆ ಪಡೆದುಕೊಂಡು  ಆತನ  ಹೆಸರು ಮತ್ತು ವಿಳಾಸ ಕೇಳಗಾಗಿ  ಚಿಕ್ಕನಾರಾಯಣಸ್ವಾಮಿ ಬಿನ್ ನೀರಗಂಟಿ ವೆಂಕಟರಾಯಪ್ಪ, 45 ವರ್ಷ, ಅಂಗಡಿ ವ್ಯಾಪಾರ, ಆದಿ ಕರ್ನಾಟಕ ಜನಾಂಗ, ವಾಸ ಬಾಲರೆಡ್ಡಿಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿಸಿದನು. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  90 ಎಂ.ಎಲ್ ನ HAYWARDS CHEERS WHISKEY ಮಧ್ಯದ 4 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 04 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 140/-ರೂ ಆಗಿರುತ್ತೆ. ಮದ್ಯ ಒಟ್ಟು 360 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಮನೆಯ ಮಾಲೀಕನಾದ ಚಿಕ್ಕನಾರಾಯಣಸ್ವಾಮಿ ಇಲ್ಲವೆಂದು ತಿಳಿಸಿರುತ್ತಾನೆ.  ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 12-30 ರಿಂದ 1-30 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು ಆಸಾಮಿಯನ್ನು ನಿಮ್ಮ ಮುಂದೆ ಮಹಜರ್ & ಈ ನನ್ನ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ಚಿಕ್ಕನಾರಾಯಣಸ್ವಾಮಿ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ವರದಿ ಸಾರಾಂಶವಾಗಿರುತ್ತೆ.

 

7. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.47/2021 ಕಲಂ. ಮನುಷ್ಯ ಕಾಣೆ:-

          ದಿನಾಂಕ;-02-05-2021 ರಂದು ಮದ್ಯಾಹ್ನ 4-00 ಗಂಟೆಗೆ ಕುಪ್ಪಹಳ್ಳಿ  ಗ್ರಾಮದ ವಾಸಿಯಾದ  ನಾರಾಯಣಸ್ವಾಮಿ  ಬಿನ್ ಲೇಟ್ ವೀರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರಿಗೆ 37 ವರ್ಷದ ಹಿಂದೆ ಶ್ರೀಮತಿ ಬಾಗ್ಯಮ್ಮರವರೊಂದಿಗೆ ಮದುವೆಯಾಗಿ  1 ನೇ ಬಾಸ್ಕರ್, 31 ವರ್ಷ, 2 ನೇ, ಶ್ರೀಮತಿ ಶಾಲಿನಿ, 3 ನೇ, ಭರತ್, 29 ವರ್ಷ ಎಂಬ ಮಕ್ಕಳಿರುತ್ತಾರೆ. ಶಾಲಿನಿಗೆ ಮದುವೆಯಾಗಿ ಗಂಡನ ಮನೆಯಲ್ಲಿ ವಾಸವಿರುತ್ತಾಳೆ. ಇಬ್ಬರೂ ಗಂಡು ಮಕ್ಕಳಿಗೆ ಮದುವೆಯಾಗಿರುವುದಿಲ್ಲ. ಬಾಸ್ಕರ್ ಬಿ,ಕಾಂ, ಫದವಿ, ಭರತ್ ಎಂ ಫಾರ್ಮಸಿ ವ್ಯಾಸಂಗ ಮಾಡಿರುತ್ತಾರೆ. ಹಿರಿಯ ಮಗ ಪಧವಿ ನಂತರ ನನ್ನೊಂದಿಗೆ ಜಿರಾಯ್ತಿ ಮಾಡಿಕೊಂಡು, ಭರತ್ ಎಂ ಫಾರ್ಮ ವ್ಯಾಸಂಗದ ನಂತರ ಸುಮಾರು 4 ವರ್ಷದಿಂದ ಬೆಂಗಳೂರಿನ ಎಂಜಿ ರಸ್ತೆಯ ಕೋವೆನ್ಸ್ ಫಾರ್ಮಸುಟಿಕಲ್ಸ್ ನಲ್ಲಿ ಕೆಲಸ ಮಾಡಿ ಕೊಂಡು ಆರ್ ಟಿ ನಗರದಲ್ಲಿ ರೂಂ ಮಾಡಿಕೊಂಡು ಅಲ್ಲೇ ಇದ್ದನು. ಈಗ್ಗೆ ಸುಮಾರು 2 ವರ್ಷದಿಂದ ಕೊವಿಡ್-19 ಕಾಯಿಲೆ ಹಬ್ಬಿದ ನಂತರ ಮನೆಯಲ್ಲಿಯೆ ವರ್ಕ ಫ್ರಂ ಹೋಂ ಮಾಡಿಕೊಂಡು ಇದ್ದನು. ಈಗ್ಗೆ ಸುಮಾರು 4 ದಿನಗಳ ಹಿಂದಿನಿಂದ ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ದೆ ಮಾಡದೆ, ಸರಿಯಾಗಿ ಸಮಯಕ್ಕೆ ಊಟಮಾಡುತ್ತಿರಲಿಲ್ಲ. ಕೇಳಿದರೆ ಯಾಕೋ ನಿದ್ದೆ ಬರುವುದಿಲ್ಲ,  ಊಟಮಾಡಲು ಆಗುತ್ತಿಲ್ಲ ಎಂತ ಹೇಳುತಿದ್ದನು. ಈಗಿರುವಲ್ಲಿ ಈ ದಿನ ಬೆಳ್ಳಿಗ್ಗೆ ಸುಮಾ ರು 06-30 ಗಂಟೆಯಲ್ಲಿ ನಾನು ಮನೆಯಲ್ಲಿದ್ದಾಗ ನನಗೆ ಆಶೀರ್ವಾದ ಮಾಡು ಎಂತ ಕೇಳಿದಾಗ ನಾನು ಆಯಿತು ದೇವರು ಒಳ್ಳೆಯದು ಮಾಡಲಿ ಎಂತ ಹೇಳಿದೆ. ನಂತರ ಸುಮಾರು 07-30 ಗಂಟೆಯಲ್ಲಿ ನಮ್ಮ ಮನೆಯ ಮುಂಭಾಗ ಸ್ವಲ್ಪ ದೂರದಲ್ಲಿ ರೈಲ್ವೇ ಟ್ರಾಕ್ ಮೇಲೆ ಭರತ್ ಕುಳಿತಿದ್ದವನನ್ನು ನಾನು ನೋಡಿ ಮನೆಗೆ ಬಂದು ತಿಂಡಿ ಮಾಡಲು ಹೇಳಿ ನಾನು ಕೆಲಸದ ಬಗ್ಗೆ ತೋಟದ ಕಡೆ ಹೋದೆನು. ನಂತರ ನಾನು ಸುಮಾರು 10-00 ಗಂಟೆಗೆ ಮನೆಗೆ ಬಂದು ನೋಡಲಾಗಿ ಭರತ್ ಮನೆಯಲ್ಲಿ ಇರಲಿಲ್ಲ. ನಂತರ ಮನೆಯಲ್ಲಿ ಹಾಗೂ ಗ್ರಾಮದಲ್ಲಿ ನೋಡಲಾಗಿ ಕಾಣಿಸದ ಕಾರಣ ಮನೆಯಲ್ಲಿದ್ದ ನನ್ನ ಮಗ ಭರತ್ ನ 1 ಕಟಣ ಮೊಬೈಲ್ ನಲ್ಲಿ ಕೊನೆಯ ಕಾಲ್ ಕಿರಣ್ ಎಂಬುವವರು ಪೋನ್ ಗೆ ಕರೆಮಾಡಿ ಕೇಳಿದ್ದಕ್ಕೆ ಸದರಿ ಕಿರಣ್ ಭರತ್ ಗೆ ನಾನು ಹಣ ಕೊಡಬೇಕಾಗಿತ್ತು ಭರತ್ ಸದರಿ ಹಣವನ್ನು ಪೋನ್ ಮಾಡಿ ನನಗೆ ಕೊಡಬೇಕಾಗಿರುವ ಹಣವನ್ನು ನಮ್ಮ ಮನೆಯಲ್ಲಿ ಕೊಡು ಎಂತ ಹೇಳಿದ ಎಂತ ಹೇಳಿದನು. ನಂತರ ನಾನು ನನ್ನ ಮಗ ಬಾಸ್ಕರ್ ಹಾಗೂ ಇತರರು ಗ್ರಾಮದಲ್ಲಿ ಹಾಗೂ ತೋಟಗಳು ಮತ್ತು ಗ್ರಾಮದ ಸುತ್ತಲೂ, ಮತ್ತು ನೆಂಟರ ಮನೆಗಳಿಗೆ ಕರೆ ಮಾಡಿ ಕೇಳಿದ್ದು, ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ಮಗ ಭರತ್ ನನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.140/2021 ಕಲಂ. 143,323,504,506,149 ಐ.ಪಿ.ಸಿ:-

          ದಿನಾಂಕ:02-05-2021 ರಂದು ಮದ್ಯಾಹ್ನ 1-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಮಂಜುಳ ಕೋಂ ಪ್ರಭಾಕರ್ 38 ವರ್ಷ, ವಕ್ಕಲಿಗರು, ಜಿರಾಯ್ತಿ,ವಾಸ-ಚೌಡಸಂದ್ರ ಗ್ರಾಮ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಗ್ರಾಮದ ಸರ್ವೆ  ನಂಬರ್ 242/3ಎ ರಲ್ಲಿ 0.09.08 ಗುಂಟೆ ಜಮೀನು ತನ್ನ  ಮಾವನಾದ ರಾಮೇಗೌಡ ಬಿನ್ ಲೇಟ್ ಚನ್ನರಾಯಪ್ಪ ರವರ ಹೆಸರಿನಲ್ಲಿದ್ದು, ಸದರಿ ಜಮೀನಿನಲ್ಲಿ ತಾವು ಅನುಭೋಗದಲ್ಲಿ ಇರುತ್ತೇವೆ. ಸದರಿ ಜಮೀನಿನ ವಿಚಾರದಲ್ಲಿ ಘನ ನ್ಯಾಯಾಲಯದಲ್ಲಿ ದಾವೆ ನಡೆದು ತಮ್ಮ ಪರವಾಗಿ ಆದೇಶವಾಗಿರುತ್ತದೆ. ಹೀಗಿರುವಾಗ ಈ ದಿನ ದಿನಾಂಕ 02/05/2021 ರಂದು ಬೆಳಿಗ್ಗೆ ಸುಮಾರು 8-30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಅಶ್ವತ್ಥಮ್ಮ ಕೋಂ ಕ್ಯಾತಪ್ಪ, ರತ್ನಮ್ಮ ಕೋಂ ರಾಮಕೃಷ್ಣಪ್ಪ, ರತ್ನಮ್ಮ ಕೋಂ ಆಂಜನೇಯ ರೆಡ್ಡಿ ರವರು ಬಂದು ನಮ್ಮ ಅನುಭೋಗದ ಜಮೀನಿನಲ್ಲಿ ಕಸವನ್ನು ಹಾಕುತ್ತಿದ್ದರು. ಆಗ ನಾನು ಮತ್ತು ನನ್ನ ಮಗನಾದ ಯಶಸ್ ಗೌಡ, ಮಗಳಾದ ಹೇಮಾ ರವರು ಸ್ಥಳಕ್ಕೆ ಹೋಗಿ ಮೇಲ್ಕಂಡವರಿಗೆ ತಮ್ಮ ಜಮೀನಿನಲ್ಲಿ ಯಾಕೇ ಕಸವನ್ನು ಹಾಕುತ್ತಿದ್ದೀರಾ ಎಂದು ಹೇಳಿದಾಗ ಮೇಲ್ಕಂಡವರು ತಮ್ಮ ಮೇಲೆ ಜಗಳವನ್ನು ತೆಗೆದು ಕೆಟ್ಟ ಮಾತುಗಳಿಂದ ಬೈದು, ತನಗೂ ಮತ್ತು ತನ್ನ ಮಗಳಿಗೂ ಕೈಗಳಿಂದ ಮೈ ಮೇಲೆ ಹೊಡೆದಿರುತ್ತಾರೆ. ಅದೇ ಸಮಯದಲ್ಲಿ ತಮ್ಮ ಗ್ರಾಮದ ಕೆ.ನಾರಾಯಣಸ್ವಾಮಿ ಬಿನ್ ಕೃಷ್ಣಪ್ಪ, ಹರೀಶ್ ಬಿನ್ ಆಂಜನೇಯರೆಡ್ಡಿ, ಆಂಜನೇಯರೆಡ್ಡಿ ಬಿನ್ ಆಂಜನೇಯರೆಡ್ಡಿ, ಮಹೇಶ್ ಬಿನ್ ಸಿ.ಡಿ ನಾರಾಯಣಸ್ವಾಮಿ, ನಾರಾಯಣಸ್ವಾಮಿ ಬಿನ್ ನಾರಾಯಣಪ್ಪ, ರಾಮಕೃಷ್ಣಪ್ಪ ಬಿನ್ ಮುನಿಯಪ್ಪ, ಹೇಮಾವತಿ ಬಿನ್ ನಾರಾಯಣಸ್ವಾಮಿ, ರಾಮಚಂದ್ರಪ್ಪ ಬಿನ್ ನಾರಾಯಣಸ್ವಾಮಿ, ಸಿ.ಆರ್ ರಾಜಣ್ಣ ಬಿನ್ ರಾಮಪ್ಪ, ನಾಗೇಶ್ ಬಿನ್ ರಾಮಕೃಷ್ಣಪ್ಪ ರವರು ಬಂದು ಮೇಲ್ಕಂಡವರ ಜೊತೆ ಸೇರಿಕೊಂಡು ಅಕ್ರಮವಾಗಿ ಗುಂಪುಕಟ್ಟಿಕೊಂಡು ತಮ್ಮನ್ನು ಕೆಟ್ಟ ಕೆಟ್ಟ ಮಾತುಗಳಿಂದ ಬೈದು, ಈ ಜಮೀನು ತಮ್ಮ ಗ್ರಾಮಸ್ಥರಿಗೆ ಸೇರ ಬೇಕು ಈ ಜಮೀನಿನ ತಂಟೆಗೆ ನೀವು ಬಂದರೆ ನಿಮ್ಮನ್ನು ಸಾಯಿಸಿ ಬಿಡುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆ ಸಮಯದಲ್ಲಿ ತಮ್ಮ ಗ್ರಾಮದ ಹಿರಿಯರಾದ ಚಂದ್ರಶೇಖರ್ ಸಿ.ಆರ್ ಬಿನ್ ರಾಮಪ್ಪ, ಶ್ರೀನಿವಾಸ್ ಬಿನ್ ಬೈರಪ್ಪ ಹಾಗು ಇತರರು ಅಡ್ಡ ಬಂದು ಜಗಳವನ್ನು ಬಿಡಿಸಿರುತ್ತಾರೆ. ಆದ ಕಾರಣ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ದೂರಿನ ಮೇರೆಗ ಠಾಣಾ ಮೊ.ಸಂ:140/2021 ಕಲಂ:143,323,504,506 ರೆ/ವಿ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.141/2021 ಕಲಂ. 323,341,447,504,506,34 ಐ.ಪಿ.ಸಿ:-

          ದಿನಾಂಕ:02-05-2021 ರಂದು ಪಿರ್ಯಾದಿದಾರರಾದ ಆರ್.ಶಂಕರಪ್ಪ ಬಿನ್ ಟಿ.ಕೆ.ರಾಮಕೃಷ್ಣಪ್ಪ,ಸುಮಾರು 40 ವರ್ಷ, ವಕ್ಕಲಿಗರು,ಜಿರಾಯ್ತಿ, ವಾಸ: ತುಮ್ಮನಹಳ್ಳಿ ಗ್ರಾಮ,ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು  ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತಮ್ಮ ಬಾಬತ್ತು ಸೊರಕಾಯಲಹಳ್ಳಿ ಗ್ರಾಮದ  ಸರ್ವೆ ನಂ: ನಂ:28/2, 35/5, 35/1. 35/4, 35/3, 35/2, 34/1ಅ ಹಾಗೂ 34/5 ಜಮೀನುಗಳು ತಮ್ಮ ತಂದೆ ಟಿ.ಕೆ.ರಾಮಕೃಷ್ಣಪ್ಪ ರವರ ಹೆಸರಿನಲ್ಲಿರುತ್ತೆ, ತಾನು ಮತ್ತು ತನ್ನ ಅಣ್ಣನಾದ ಟಿ.ಆರ್.ವಿಶ್ವನಾಥ ರವರುಗಳು ಸ್ವಾಧೀನಾನುಭವದಲ್ಲಿದ್ದು ಈಗ್ಗೆ ಸುಮಾರು 10 ವರ್ಷಗಳ ಹಿಂದೆ ಸದರಿ ಜಮೀನುಗಳಲ್ಲಿ ದಾಕ್ಷಿ ಬೆಳೆಯನ್ನು ಹಾಕಿರುತ್ತೇವೆ, ಸದರಿ ಜಮೀನುಗಳ ವಿಚಾರದಲ್ಲಿ ತಮಗೂ ಮತ್ತು ಸೊರಕಾಯಲಹಳ್ಳಿ ಗ್ರಾಮದ ವಾಸಿಗಳಾದ ಮುನಿಶಾಮಪ್ಪ ಬಿನ್ ಗುಂಟಪ್ಪ, ಈರಮ್ಮ ಕೊಂ ಮುನಿಶಾಮಪ್ಪ, ಗಾಯಿತ್ರಿ ಕೋಂ ಜಯಚಂದ್ರ, ನರಸಿಂಹಮೂರ್ತಿ ಬಿನ್ ಮುನಿಶಾಮಪ್ಪ ರವರುಗಳ ಮದ್ಯೆ ವಿವಾದಗಳಿದ್ದು ಮೇಲ್ಕಂಡ ತಮ್ಮ ಜಮೀನು ಅವರಿಗೆ ಸೇರಬೇಕೆಂದು ಓ.ಎಸ್.ನಂ:145/2010 ರಂತೆ ಶಿಡ್ಲಘಟ್ಟ ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ಕೇಸು ದಾಖಲಿಸಿದ್ದು ಸದರಿ ಕೇಸು ವಿಚಾರಣೆ ನಡೆದು ಜಮೀನುಗಳಲ್ಲಿ ಗಾಯಿತ್ರಿ ಎಂಬುವವರಿಗೆ ಭಾಗ ಇದೆ ಎಂದು ತೀರ್ಪು ನೀಡಿದ್ದು ಸದರಿ  ತೀರ್ಪಿನ ವಿರುದ್ದ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ನಾವು ಆರ್.ಎ .ನಂ:24/2021 ರಲ್ಲಿ ಅಪೀಲ್ ಸಲ್ಲಿಸಿದ್ದು ಸದರಿ ಅಪೀಲಿನಲ್ಲಿ  ಘನ ಹಿರಿಯ ಶ್ರೇಣಿ ನ್ಯಾಯಾಲಯವು ಕಿರಿಯ ಶ್ರೇಣಿ ನ್ಯಾಯಾಲಯದ ಆಧೇಶವನ್ನ ತಡೆಹಿಡಿದು ದಿನಾಂಕ:23-04-2021 ರಂದು ಆಧೇಶ ಮಾಡಿರುತ್ತದೆ. ಈಗಿರುವಲ್ಲಿ ದಿನಾಂಕ:01-05-2021 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ತಮ್ಮ ಬಾಬತ್ತು ಸೊರಕಾಯಲಹಳ್ಳಿ ಗ್ರಾಮದ ಸರ್ವೆ ನಂ:28/2, 35/5, 35/1. 35/4, 35/3, 35/2, 34/1ಅ ಹಾಗೂ 34/5 ಜಮೀನುಗಳಲ್ಲಿ ಬೆಳೆದಿದ್ದ ದಾಕ್ಷಿಯನ್ನು ಕಟಾವುಮಾಡುತ್ತಿದ್ದಾಗ ಸೊರಕಾಯಲಹಳ್ಳಿ ಗ್ರಾಮದ ವಾಸಿಗಳಾದ ಮುನಿಶಾಮಪ್ಪ ಬಿನ್ ಗುಂಟಪ್ಪ, ಈರಮ್ಮ ಕೊಂ ಮುನಿಶಾಮಪ್ಪ, ಗಾಯಿತ್ರಿ ಕೋಂ ಜಯಚಂದ್ರ, ನರಸಿಂಹಮೂರ್ತಿ ಬಿನ್ ಮುನಿಶಾಮಪ್ಪ ರವರುಗಳು ತಮ್ಮ ಜಮೀನಿಗೆ ಅಕ್ರಮ ಪ್ರವೆಶ ಮಾಡಿ ಈ ಜಮೀನು ತಮಗೆ ಸೇರಿದೆ ನೀವು ಇಲ್ಲಿ  ದಾಕ್ಷಿ ಕಟಾವು  ಮಾಡಬೇಡಿ ಎಂದು ಹೇಳಿ ತಾವು ಮಾಡುತ್ತಿದ್ದ ಕೆಲಸಕ್ಕೆ ಅಡ್ಡಿಪಡಿಸಿದ್ದು ಆಗ ತಾನು ಏಕೆ ಎಂದು ಕೇಳಿದಕ್ಕೆ  ಮೇಲ್ಕಂಡವರು ತನ್ನ ಮೇಲೆ ಗಲಾಟೆ ಮಾಡಿ ಕೈಗಳಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಸದರಿ ಜಮೀನುಗಳನ್ನು ದಾಕ್ಷಿ ಕಟಾವು ಮಾಡಿದರೇ ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ,ಗಲಾಟೆಯನ್ನು ತಮ್ಮ ಗ್ರಾಮದ ನಾರಾಯಣಸ್ವಾಮಿ ಬಿನ್ ಪಿಳ್ಳಪ್ಪಯ್ಯ ಮತ್ತು ಮುನಿಕೃಷ್ಣಪ್ಪ ಬಿನ್ ಮುನಿಯಪ್ಪ ರವರುಗಳು ಗಲಾಟೆಯನ್ನು ಬಿಡಿಸಿರುತ್ತಾರೆ. ಈ ವಿಚಾರ ಗ್ರಾಮದಲ್ಲಿ ಹಿರಿಯರು ಮಾತನಾಡಿ ರಾಜಿ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು ಅದರೇ ಮೇಲ್ಕಂಡವರು ರಾಜಿ ಪಂಚಾಯ್ತಿಗೆ ಬಂದಿರುವುದಿಲ್ಲ ಅದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ:141/2021 ಕಲಂ:323,447,341,504,506 ರೆ/ವಿ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

10. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.49/2021 ಕಲಂ. 32(3),15(A) ಕೆ.ಇ ಆಕ್ಟ್:-

          ದಿನಾಂಕ:02/05/2020 ರಂದು ಮದ್ಯಾಹ್ನ 3.30 ಗಂಟೆಗೆ ಹೆಚ್.ಸಿ.97 ರವರು ಆರೋಪಿ ಮತ್ತು ಮಾಲನ್ನು ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ, ಠಾಣಾಧಿಕಾರಿಗಳ ಅದೇಶದಂತೆ ದಿನಾಂಕ.02.05.2021 ರಂದು ಮದ್ಯಾಹ್ನ ಸುಮಾರು 2-00 ಗಂಟೆಯಲ್ಲಿ  ಹೆಚ್.ಸಿ.97, ಸುಬ್ರಮಣಿ ಆದ ನಾನು ಪಿ.ಸಿ.126 ವೆಂಕಟೇಶ್ ರವರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ನಗರದ ರಹಮತ್ ನಗರದಲ್ಲಿ ಪೈರೋಜ್ ಪಾಷ ರವರ ಅಂಗಡಿಯ ಮುಂಭಾಗದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ನಾವು ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 2-15 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ಇಬ್ಬರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವ ಆಸಾಮಿಯನ್ನು ವಶಕ್ಕೆ ಪಡೆದು ಇವರ ಹೆಸರು ವಿಳಾಸ ಕೇಳಲಾಗಿ ಪೈರೋಜ್ ಪಾಷ ಬಿನ್ ಸುಬಾನ್ ಪಾಷ, 42 ವರ್ಷ, ಚಿಲ್ಲರೆ ಅಂಗಡಿ ವ್ಯಾಪಾರ, ರಹಮತ್ ನಗರ ಶಿಡ್ಲಘಟ್ಟ ನಗರ ಎಂದು ತಿಳಿಸಿರುತ್ತಾರೆ. ಇವರು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು ಬ್ಯಾಗ್ನಲ್ಲಿ ಪರಿಶೀಲಿಸಲಾಗಿ ORIGINAL CHOICE 90 ML ನ 6 ಮದ್ಯದ ಪಾಕೆಟ್ ಗಳಿದ್ದು ಒಂದರ ಬೆಲೆ 35.13 ರೂಗಳಾಗಿದ್ದು, 6 ರ ಬೆಲೆ ಒಟ್ಟು 210.00 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ  ORIGINAL CHOICE 90 ML ನ 02 ಖಾಲಿ ಮದ್ಯದ ಪಾಕೇಟ್ಗಳಿರುತ್ತೆ. ಹಾಗೂ 02 ಪ್ಲಾಸ್ಟಿಕ್ ಗ್ಲಾಸ್ಗಳಿರುತ್ತೆ. ಇವುಗಳನ್ನು ಮುಂದಿನ ತನಿಖೆ ಬಗ್ಗೆ ಮದ್ಯಾಹ್ನ 2-25 ರಿಂದ 3-00 ಗಂಟೆಯವರೆಗೆ ಮಹಜರ್ ಮಾಡಿ ಅಮಾನತ್ತು ಪಡಿಸಿಕೊಂಡಿರುತ್ತೆ. ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಮೇಲ್ಕಂಡ ಆಸಾಮಿಯನ್ನು ವಶಕ್ಕೆ ಪಡೆದು ಮಾಲು ಸಮೇತ ಠಾಣೆಗೆ ಕರೆದುಕೊಂಡು ಬಂದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 03-05-2021 05:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080