ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.85/2021 ಕಲಂ. 20(b) NARCOTIC DRUGS & PSYCHOTROPIC SUBSTANCES ACT:-

          ದಿನಾಂಕ:03/04/2021 ರಂದು ಮದ್ಯಾಹ್ನ 12-00 ಗಂಟೆಗೆ ಸಿಪಿಐ ಬಾಗೇಪಲ್ಲಿ ವೃತ್ತ ರವರು ಆರೋಪಿ, ಮಾಲು ಮತ್ತು ಅಸಲು ಪಂಚನಾಯೊಂದಿಗೆ ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 03/04/2021 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ನಾನು ಕಛೇರಿಯಲ್ಲಿರುವಾಗ್ಗೆ ಬಾಗೇಪಲ್ಲಿ ತಾಲ್ಲೂಕು ರಾಮಸ್ವಾಮಿಪಲ್ಲಿ ಗ್ರಾಮದ ಬೃಂದಾ ಕೋಂ ಬಾಸ್ಕರ್ ರವರ ಮನೆಯ ಮುಂಭಾಗದಲ್ಲಿ ಯಾರೋ ಒಬ್ಬ ಅಸಾಮಿ ಅಕ್ರಮ ಮಾಧಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ಬಂದ ಖಸಚಿತ ಮಾಹಿತಿಯ ಮೇರೆಗೆ ನಾನು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಗೆಜೆಟೆಡ್ ಅಧಿಕಾರಿಯಾಗಿ ದಾಳಿಗೆ ಸಹಕರಿಸಲು ಮನವಿ ಪತ್ರವನ್ನು ನೀಡಿ ಕಛೇರಿಗೆ ಬರ ಮಾಡಿಕೊಂಡು, ಪಂಚಾಯ್ತಿದಾರರನ್ನು ಕಛೇರಿಗೆ ಬರಮಾಡಿಕೊಂಡು ಅವರಿಗೆ ಕಲಂ 41 ಎನ್,ಡಿ, ಪಿ,ಎಸ್ ಕಾಯ್ದೆಯಡಿಯಲ್ಲಿ  ಪೊಲೀಸ್ ನೋಟೀಸನ್ನು ಜಾರಿ ಮಾಡಿದ್ದು, ಆರೋಗ್ಯಾಧಿಕಾರಿಗಳು, ಪಂಚಾಯ್ತಿದಾರರು ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಕೆಎ-40 ಜಿ-6399 ಪೊಲೀಸ್ ಜೀಪಿನಲ್ಲಿ ರಾಮಸ್ವಾಮಿಪಲ್ಲಿಗೆ ಹೋಗಿ ಬೃಂದಾರವರ ಮನೆಯ ಬಳಿ ಮರೆಯಲ್ಲಿ ನಿಂತು ನಡಲಾಗಿ ಯಾರೋ ಒಬ್ಬ ಅಸಾಮಿ ಕೆಂಪು ಬಣ್ಣದ ಬ್ಯಾಗಿನಲ್ಲಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು, ಸರಿಯವರ ಮೇಲೆ ಆರೋಗ್ಯಾಧಿಕಾರಿಗಳ ಸಮಕ್ಷಮದಲ್ಲಿ ದಾಳಿ ಮಾಡಿ ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮಣಿಕಂಠ ಬಿನ್ ನಾರಾಯಣಸ್ವಾಮಿ, 25 ವರ್ಷ, ವಿಶ್ವಕರ್ಮ ಜನಾಂಗ, ಮೊಬೈಲ್ ಅಂಗಡಿಯಲ್ಲಿ ಕೆಲಸ, ರಾಮಸ್ವಾಮಿಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ಎಂದು ತಿಳಿಸಿದ್ದು, ಸದರಿ ಅಸಾಮಿಯಿಂದ ಸುಮಾರು 10,000/- ರೂ ಬೆಲೆ ಬಾಳುವ 260 ಗ್ರಾಂ ಗಾಂಜಾವನ್ನು ಪಂಚನಾಮೆಯ ಮೂಲಕ ವಶಪಡಿಸಿಕೊಂಡು, ಸದರಿ ಅಸಾಮಿಯನ್ನು, ಮತ್ತು ಮಾಲನ್ನು ಮದ್ಯಾಹ್ನ 12-00 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸುತ್ತಿದ್ದು. ಆಸಾಮಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.48/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:02.04.2021 ರಂದು ಸಂಜೆ 18:20 ಗಂಟೆಗೆ ಪಿ.ಎಸ್.ಐ ಸಾಹೇಬರು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:02.04.2021 ರಂದು ಸಂಜೆ 18:15 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಹುನೇಗಲ್ಲು ಗ್ರಾಮದ ವಾಸಿ ಶ್ರೀಮತಿ ವೆಂಕಟಲಕ್ಷ್ಮಮ್ಮ ಕೊಂ ಲೇಟ್ ಪಿಳ್ಳಪ್ಪ, 50 ವರ್ಷ,ಭೋವಿ ಜನಾಂಗ ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆಂದು ಈ ಬಗ್ಗೆ  ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15[ಎ] , 32[3] ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿ ನೀಡಿದ ವರದಿ ಮೇರೆಗೆ ಈ ಪ್ರ ವ ವರಧಿ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.49/2021 ಕಲಂ. 87 ಕೆ.ಪಿ  ಆಕ್ಟ್:-

          ದಿನಾಂಕ: 02.04.2021 ರಂದು 18:45 ಗಂಟೆಗೆ ಠಾಣಾ ಎನ್,ಸಿ,ಆರ್ ನಂ 62/2021 ರಲ್ಲಿ ಪ್ರಕರಣ ದಾಖಲಿಸಲು ಘನ ಒಂದನೇ ಅಪರ ಸಿ,ಜೆ ಮತ್ತು ಜೆ,ಎಮ,ಫ್,ಸಿ ನ್ಯಾಯಾಲಯ ಚಿಕ್ಕಬಳ್ಳಾಪುರ ರವರಿಂದ ಪ್ರಕರಣ ದಾಖಲಿಸಲು ಅನುಮತಿಯ ಸಾರಾಂಶವೆನೆಂದರೆ ಈ ದಿನ ದಿನಾಂಕ: 02.04.2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಕಾಡದಿಬ್ಬೂರು ಗ್ರಾಮದ ಬಳಿ ಇರುವ ಹೊಸ ಮನೆಗಳ ಬಳಿ ಹೊಂಗೆ ಮರಗಳ ಕೆಳಗೆ ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ತಾನು, ಪಿ.ಸಿ-264 ನರಸಿಂಹಮೂರ್ತಿ , ಪಿಸಿ 244 ಶಶಿಕುಮಾರ್ , ಪಿಸಿ 180 ಬಾಲಚಂದ್ರರವರೊಂದಿಗೆ ಪೊಲೀಸ್ ಜೀಪು ಸಂಖ್ಯೆ ಕೆ.ಎ-40, ಜಿ-567 ರಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಕಾಡದಿಬ್ಬೂರು ಗ್ರಾಮದ ಬಳಿ ಇರುವ ಹೊಸ ಮನೆಗಳ ಬಳಿ ಹೊಂಗೆ ಮರಗಳ ಬಳಿ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ತನಗೆ ಮಾಹಿತಿ ಬಂದ ಸ್ಥಳವಾದ ಹೊಂಗೆ ಮರಗಳ ಬಳಿ ನಡೆದುಕೊಂಡು ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಹೊಂಗೆ ಮರಗಳ ಕೆಳಗೆ ಸುಮಾರು 4 ಜನರು ಗುಂಪು ಸೇರಿದ್ದು, ಗುಂಪಿನಲ್ಲಿದ್ದವರು ಅಂದರ್ 100/- ರೂ. ಬಾಹರ್ 100/- ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ತಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿದರೂ ಸಹ ಇಬ್ಬರು ಆಸಾಮಿಗಳು ಓಡಿ ಹೋಗಿದ್ದು, ಇಬ್ಬರು ಆಸಾಮಿಗಳನ್ನು ಹಿಡಿದು ಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1] ನರಸಿಂಹಮೂರ್ತಿ ಬಿನ್ ಲೇಟ್ ಮದ್ದಿಲೇರಪ್ಪ, 36 ವರ್ಷ ನಾಯಕ ಜನಾಮಗ, ಕೂಲಿ ಕೆಲಸ ವಾಸ ಕಾಡದಿಬ್ಬೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು , 2. ಶ್ರೀನಿವಾಸ ಬಿನ್ ಮುನಿರಾಜಪ್ಪ 33 ವರ್ಷ ನಾಯಕ ಜನಾಂಗ, ಕೂಲಿ ಕೆಲಸ ವಾಸ ಕಾಡದಿಬ್ಬೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು, ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 3] ಚನ್ನಪ್ಪ ಬಿನ್ ನಾರಾಯಣಪ್ಪ 40 ವರ್ಷ ನಾಯಕ ಜನಾಂಗ, ಜಿರಾಯ್ತಿ ವಾಸ ಕಾಡದಿಬ್ಬೂರು ಗ್ರಾಮ , 4] ವೆಂಕಟೇಶ್ ಬಿನ್ ಬೋಡಪ್ಪ 35 ವರ್ಷ ನಾಯಕ ಜನಾಂಗ, ಜಿರಾಯ್ತಿ ವಾಸ ಕಾಡದಿಬ್ಬೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು, ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು, ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣ ಎಣಿಸಲಾಗಿ 520/ -ರೂ. ಗಳಿದ್ದು, ಮೇಲ್ಕಂಡ 2 ಜನ ಆಸಾಮಿಗಳು, 52 ಇಸ್ಪೀಟ್ ಎಲೆಗಳು, ಪಂದ್ಯಕ್ಕೆ ಪಣವಾಗಿಟ್ಟಿದ್ದ 520/-ರೂ. ನಗದು ಹಣವನ್ನು ಸಂಜೆ 4-30 ಗಂಟೆಯಿಂದ 5-30 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡಿರುತ್ತೆ. ಮೇಲ್ಕಂಡ ಅಸಾಮಿಗಳ ವಿರುದ್ದ  ಪ್ರ,ವ,ವರದಿ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.50/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ;03.04.2021 ರಂದು ಮದ್ಯಾಹ್ನ 15:05 ಗಂಟೆಗೆ ಮಾನ್ಯ ಪಿ,ಎಸ್,ಐ ರವರು ಗ್ರಾಮಾಂತರ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:03.04.2021 ರಂದು ಸಂಜೆ 15;00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ದೊಡ್ಡೆಗಾನಹಳ್ಳಿ ಗ್ರಾಮದ ವಾಸಿ ಶ್ರೀ ಬಾಲಪ್ಪ ಬಿನ್ ಲೇಟ್ ಈರಪ್ಪ, 48 ವರ್ಷ, ಅಂಗಡಿ ವ್ಯಾಪಾರ ಆದಿ ಕರ್ನಾಟಕ ಜನಾಂಗ, ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ, ಈ ಬಗ್ಗೆ  ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15[ಎ] , 32[3] ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ,ವ,ವರದಿ.

 

5. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.21/2021 ಕಲಂ. 17(C) (NARCOTIC DRUGS & PSYCHOTROPIC SUBSTANCES ACT :-

          ದಿನಾಂಕ 02-04-2021 ರಂದು ಮದ್ಯಾಹ್ನ 02:30 ಗಂಟೆಯಲ್ಲಿ ಚಿಕ್ಕಬಳ್ಳಾಪುರ ಉಪವಿಭಾಗದ ಮಾನ್ಯ ಡಿವೈ.ಎಸ್.ಪಿ  ಕೆ.ರವಿಶಂಕರ್ ರವರು ಠಾಣೆಗೆ ಹಾಜರಾಗಿ ನೀಡಿದ ಮಾಲು,ಆರೋಪಿಗಳು ಮತ್ತು ಪಂಚನಾಮೆಯೊಂದಿಗೆ ಹಾಜರುಪಡಿಸಿದ್ದರ ವರದಿಯ ದೂರಿನ ಸಾರಾಂಶವೆನೆಂದರೆ ತಾನು  ಬೆಳಿಗ್ಗೆ 11-30 ಗಂಟೆಯಲ್ಲಿ ಕಛೇರಿಯಲ್ಲಿದ್ದಾಗ, ನನಗೆ ಚಿಕ್ಕಬಳ್ಳಾಪುರ ನಗರ ರೈಲ್ವೆಸ್ಟೇಷನ್ ರಸ್ತೆ ಎಡಭಾಗಕ್ಕಿರುವ ಚಾಮರಾಜಪೇಟೆಯ 3 ನೇ ಅಡ್ಡರಸ್ತೆಯಲ್ಲಿ ನಾಗವೇಣಿ ರವರ ಮನೆಯ ಮೇಲ್ಭಾಗದ ಮಹಡಿ ರೂಂನಲ್ಲಿ ರಾಜಸ್ಥಾನದ ಮೂಲದವರು ರೂಂ ಒಂದನ್ನು ಬಾಡಿಗೆಗೆ ಪಡೆದು ಅದರಲ್ಲಿ ಮಾದಕವಸ್ತು ಅಫೀಮು ಉತ್ಪನ್ನವನ್ನು ಇಟ್ಟುಕೊಂಡು ಸೇವನೆ ಮಾಡುತ್ತಿರುವುದಾಗಿ ಬಂದ ಬಾತ್ಮೀಯಂತೆ ದಾಳಿ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಮಾನ್ಯ ಪೊಲೀಸ್ ಅಧೀಕ್ಷಕರವರಿಂದ ಅನುಮತಿ ಪಡೆದು, ನಮ್ಮ ಕಛೇರಿಯ ಸಿಬ್ಬಂದಿಯಾದ ಶ್ರೀ ರಮೇಶ್, ಹೆಚ್.ಸಿ-205, ಶ್ರೀ ಶ್ರೀನಿವಾಸ್, ಹೆಚ್.ಸಿ-59, ಶ್ರೀ ಶ್ರೀನಾಥ್, ಹೆಚ್.ಸಿ-17, ಶ್ರೀ ಗೌತಮ್ರಾಜ್, ಪಿಸಿ-286, ಕುಮಾರಿ ಆಂಜಿನಮ್ಮ, ಮಪಿಸಿ-250 ಹಾಗೂ ಜೀಪ್ ಚಾಲಕ ಅಶೋಕ್, ಎಪಿಸಿ-116 ಹಾಗೂ ಪಂಚಾಯ್ತಿದಾರರಾದ ಶ್ರೀ ಕೆ.ಆರ್.ನರನಾರಾಯಣಮೂರ್ತಿ ಮತ್ತು ಸಿ.ಆರ್.ಆವುಲಕೊಂಡಪ್ಪ ರವರುಗಳೊಂದಿಗೆ ಕಛೇರಿಯ ಜೀಪ್ ಸಂಖ್ಯೆ ಕೆಎ-40-ಜಿ-0855 ಮತ್ತು ಟ್ರಾಫಿಕ್ ಪೊಲೀಸ್ ಠಾಣೆಯ ಜೀಪ್ ಸಂಖ್ಯೆ ಕೆಎ-03-ಜಿ-925 ರಲ್ಲಿ  ಹೋಗಿ ಮಧ್ಯಾಹ್ನ 12-30 ಗಂಟೆಗೆ ಚಿಕ್ಕಬಳ್ಳಾಪುರ ನಗರದ ರೈಲ್ವೆಸ್ಟೇಷನ್ ರಸ್ತೆಯ ಎಡಭಾಗಕ್ಕಿರುವ ಚಾಮರಾಜಪೇಟೆಯ 3ನೇ ಅಡ್ಡರಸ್ತೆ ಯಲ್ಲಿರುವ ಶ್ರೀಮತಿ ನಾಗವೇಣಿ ಕೋಂ ಉಮೇಶ್ ರವರ ಬಾಬತ್ತು ಹೌಸ್ಲಿಸ್ಟ್ ನಂ.920/843 ರ ಮನೆಯ ಮೇಲ್ಭಾಗದಲ್ಲಿ ಎರಡನೇ ಅಂತಸ್ತಿನಲ್ಲಿರುವ (ಜಿ+2ರಲ್ಲಿ) ರೂಮ್ ಅನ್ನು ಬಾಡಿಗೆಗೆ ಪಡೆದಿರುವ ರಾಜಸ್ಥಾನ ಮೂಲದ ಜೋಗ್ ಸಿಂಗ್ ಬಿನ್ ಗುಮಾನ್ ಸಿಂಗ್ ಎಂಬುವರ ರೂಮ್ನಲ್ಲಿ  ಅಕ್ರಮವಾಗಿ ಮಾದಕ ವಸ್ತು ಅಫೀಮು ಉತ್ಪನ್ನದ ವಸ್ತುವನ್ನು ಇಟ್ಟುಕೊಂಡು ಹಾಗೂ ಸೇವನೆ ಮಾಡುತ್ತಿದ್ದ 1) ರಾಣಾಸಿಂಗ್ ಬಿನ್ ಲೇಟ್ ಗುಮಾನ್ಸಿಂಗ್, 37ವರ್ಷ, ರಾಜಪುರೋಹಿತ್ ಬ್ರಾಹ್ಮಣ ಜನಾಂಗ, ಬಟ್ಟೆ ವ್ಯಾಪಾರ, ಬಜಾರ್ರಸ್ತೆ, ಚಿಕ್ಕಬಳ್ಳಾಪುರ ನಗರ, ವಾಸ: ಪ್ರಕೃತಿ ವಿದ್ಯಾಶಾಲೆ ಸಮೀಪ, ಪ್ರಶಾಂತನಗರ, ಚಿಕ್ಕಬಳ್ಳಾಪುರ ಮತ್ತು 2) ಜೋಗ್ಸಿಂಗ್ ಬಿನ್ ಲೇಟ್ ಗುಮಾನ್ಸಿಂಗ್, 61ವರ್ಷ, ರಾಜಪುರೋಹಿತ್ ಬ್ರಾಹ್ಮಣ ಜನಾಂಗ, ಪ್ಲಾಸ್ಟಿಕ್ ವ್ಯಾಪಾರ, ವಾಸ ಚಾಮರಾಜಪೇಟೆ, ಚಿಕ್ಕಬಳ್ಳಾಪುರ ನಗರ ವಾಸ: ಚಾಮರಾಜಪೇಟೆ, ರೈಲ್ವೆಸ್ಟೇಷನ್ 3 ನೇ ಅಡ್ಡ ರಸ್ತೆ, ಚಿಕ್ಕಬಳ್ಳಾಪುರ ನಗರ ಸ್ವಂತ ಸ್ಥಳ: ಬಡಿಪೋಲ್, ಜಾಲೋರ್ ನಗರ ಮತ್ತು ಜಿಲ್ಲೆ, ರಾಜಸ್ಥಾನ ರಾಜ್ಯ  ರವರನ್ನು ವಶಕ್ಕೆ ಪಡೆದು, ಸ್ಥಳದಲ್ಲಿ ಈ ಬಗ್ಗೆ ಪಂಚಾಯ್ತಿದಾರೊಂದಿಗೆ ಮಧ್ಯಾಹ್ನ 12-30 ಗಂಟೆಯಿಂದ 2-15 ಗಂಟೆಯವರೆವಿಗೂ ಪಂಚನಾಮೆ ಕ್ರಮ ಜರುಗಿಸಿ ಅವರ ಬಳಿ 06 ಕವರ್ಗಳಲ್ಲಿ ಒಟ್ಟು ತೂಕ 388.65 ಗ್ರಾಂ ತೂಕದ ಮಾದಕವಸ್ತು ಅಫೀಮು ಉತ್ಪನ್ನವನ್ನು ಅಮಾನತ್ತಪಡಿಸಿ ಅದರಲ್ಲಿ ಪರೀಕ್ಷೆಗಾಗಿ ಸ್ಯಾಂಪಲ್ನ್ನು ಪ್ರತ್ಯೇಕವಾಗಿ ಸಂಗ್ರಹಣೆ ಮಾಡಿರುತ್ತೆ, ಸ್ಥಳದಲ್ಲಿ ದೊರೆತ ಎರಡು ಚಿಕ್ಕ ಸ್ಟೀಲ್ಗ್ಲಾಸ್, ಒಂದು ಚಿಕ್ಕ ಸ್ಟೀಲ್ ಟೇಬಲ್ ಸ್ಪೂನ್ ಅನ್ನು ಪಂಚನಾಮೆಯೊಂದಿಗೆ ಅಮಾನತ್ತು ಪಡಿಸಿರುತ್ತೆ. ಮಾದಕ ವಸ್ತು ಅಫೀಮು ಉತ್ಪನ್ನದ ಬೆಲೆ ಸುಮಾರು 3 ಲಕ್ಷ ರೂಗಳೆಂತ ಅಂದಾಜು ಮಾಡಲಾಗಿರುತ್ತದೆ. ಎಲ್ಲಾ ವಿವರಗಳನ್ನು ಇದರೊಂದಿಗೆ ಲಗತ್ತಿಸಿರುವ ಮಹಜರ್ನಲ್ಲಿ ನಮೂದಿಸಿಕೊಂಡು  ಮಾಲು.ಪಂಚನಾಮೆ ಮತ್ತು ಆರೋಪಿಗಳನ್ನು ಠಾಣಾ ವಶಕ್ಕೆ ನೀಡಿ ಈ ಬಗ್ಗೆ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ವರದಿಯ ದೂರಿನ ಮೇರೆಗೆ ಈ ಪ್ರ.ವ.ವರದಿ.

 

6. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.21/2021 ಕಲಂ. 279,336 ಐ.ಪಿ.ಸಿ:-

          ದಿನಾಂಕ:-02/04/2021 ರಂದು ಮಧ್ಯಾಹ್ನ 3-30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ. ಗಂಗುಲಯ್ಯ ಕೆ ಬಿನ್ ಕೆ. ವೆಂಕಟನಾರಾಯಣ , 44 ವರ್ಷ, ಬಲಜಿಗ ಜನಾಂಗ, ಚಾಲಕ ವೃತ್ತಿ, ನಂ-02, ಸೋಮಾಲವಂಡ್ಲಪಲ್ಲಿ ಗ್ರಾಮ, ತಲುಪುಲ ಮಂಡಲಂ, ಕದಿರಿ ತಾಲ್ಲೂಕು, ಅನಂತಪುರ ಜಿಲ್ಲೆ, ಆಂದ್ರಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಾನು KA-01-AD-7069 ರ ಲಾರಿಯ ಚಾಲನಾಗಿದ್ದು ತಾನು ಮತ್ತು ತಮ್ಮ ಲಾರಿಯ ಕ್ಲೀನರ್ ಸಾಯಿ ಪ್ರತಾಪ್ ಬಿನ್ ರೆಡ್ಡೆಪ್ಪ 24 ವರ್ಷ, ಬಲಜಿಗರು, ದೇವರುಘಟ್ಟಪಲ್ಲಿ ಗ್ರಾಮ, ಚಿಕ್ಕರಾಯಪೇಟ ಮಂಡಲಂ, ಪುಲಿವೆಂದಲ ತಾಲ್ಲೂಕು, ಕಡಪ ಜಿಲ್ಲೆ ರವರೊಂದಿಗೆ ದಿನಾಂಕ:-01/04/2021 ರಂದು ಕಡಪ ಜಿಲ್ಲೆಯ ಚಿಲಮಕೂರು ನಿಂದ ತಮ್ಮ ಲಾರಿಯಲ್ಲಿ ಸಿಮೆಂಟ್ ಚೀಲವನ್ನು ತುಂಬಿಕೊಂಡು ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಹೋಗಲು ಸಂಜೆ ಸುಮಾರು 7-00 ಗಂಟೆಯ ಸಮಯದಲ್ಲಿ ಚಿಲಮಕೂರು ಅನ್ನು ಬಿಟ್ಟು ದಿನಾಂಕ:-02/04/2021 ರಂದು ಬೆಳಗಿನ ಜಾವ ಸುಮಾರು 03-30 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಬಾಗೇಪಲ್ಲಿ - ಬೆಂಗಳೂರು ಎನ್.ಹೆಚ್-44 ಬೈಪಾಸ್ ರಸ್ತೆಯ ಮಂಚನಬಲೆ ಬ್ರಿಡ್ಜ್ ಬಳಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ TN-78-V-9185 ರ ಕಂಟೈನರ್ ಲಾರಿ ಚಾಲಕ ವಾಹನವನ್ನು ಮಂಚನಬಲೆ ಸರ್ವೀಸ್ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೇ ಏಕಾ-ಏಕಿ ಸರ್ವೀಸ್ ರಸ್ತೆಯಿಂದ ಹೈವೇ ರಸ್ತೆಗೆ ವಾಹವನ್ನು ತಿರುಗಿಸಿದ ಪರಿಣಾಮ ನಾನು ಚಾಲನೆ ಮಾಡುತ್ತಿದ್ದ ಲಾರಿಯು ಹೈವೇಗೆ ಅಡ್ಡವಾಗಿ ಬಂದ TN-78-V-9185 ರ ಕಂಟೈನರ್ ಲಾರಿಯ ಬಲಭಾಗಕ್ಕೆ ತಗುಲಿಸಿದ ಪರಿಣಾಮ ಯಾರಿಗೂ ಗಾಯಗಳಾಗದೇ ತಮ್ಮ ಲಾರಿಯ ಮುಂಭಾಗದ ಬಂಪರ್, ಛಾಸಿ, ಮುಂಭಾಗದ ಗ್ಲಾಸ್, ಹೆಡ್ ಲೈಟ್ಸ್ ಜಕಂಗೊಂಡಿದ್ದು, ಸದರಿ ಕಂಟೈನರ್ ಲಾರಿ ರಸ್ತೆಯಲ್ಲಿ ಪಲ್ಟೀ ಹೊಡೆದು ಲಾರಿಯ ಹಿಂಭಾಗ, ಲಾರಿಯ ಬಲಭಾಗದಲ್ಲಿ ಜಕಂಗೊಂಡಿದ್ದು ಸದರಿ ಅಪಘಾತಕ್ಕೆ ಕಾರಣನಾದ ಕಂಟೈನರ್ ಲಾರಿ ಚಾಲಕನ ಹೆಸರು ಮತ್ತು ವಿಳಾಸ ಕೇಳಲಾಗಿ ಶಿವಕುಮಾರ್ ಬಿನ್ ನಿಂಗೇಗೌಡ 28 ವರ್ಷ, ಕುರುಬರು, ಬೆಡದಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ ಎಂತ ತಿಳಿಸಿದ್ದು, ಸದರಿ ಅಪಘಾತಕ್ಕೆ ಕಾರಣನಾದ TN-78-V-9185 ರ ಕಂಟೈನರ್ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಗಣಕೀಕೃತ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

7. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.22/2021 ಕಲಂ. 279,337,304(A) ಐ.ಪಿ.ಸಿ:-

          ದಿನಾಂಕ:-03/04/2021 ರಂದು ಬೆಳಿಗ್ಗೆ 08-30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ. ಮನೋಜ್ ಕುಮಾರ್ ಬಿ ಬಿನ್ ಬೈರೇಗೌಡ ಸಿ ಎನ್ 26 ವರ್ಷ, ವಕ್ಕಲಿಗರು, ಫೈನಾನ್ಸ್ ವೃತ್ತಿ,      ಚೀಡಚಿಕ್ಕನಹಳ್ಳಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ಟೌನ್ ಮತ್ತು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಮ್ಮ ತಂದೆ ಬೈರೇಗೌಡ ಬಿನ್ ನಂಜಪ್ಪ 45 ವರ್ಷ ರವರು ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಹೋಗಲು ದಿನಾಂಕ:-02/04/2021 ರಂದು ಅವರ KA-02-EM-5847 ರ ಬಜಾಜ್ ಚೇತಕ್ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಸುಮಾರು ಸಂಜೆ 6-00 ಗಂಟೆಯ ಸಮಯದಲ್ಲಿ ಮನೆಯಿಂದ ಹೋಗಿದ್ದು, ದಿನಾಂಕ:-02/04/2021 ರಂದು ರಾತ್ರಿ ಸುಮಾರು 8-00 ಗಂಟೆಗೆ ಪಿರ್ಯಾಧುದಾರರಿಗೆ ತಮ್ಮ ದೊಡ್ಡಪ್ಪನ ಮಗನಾದ ಮೋಹನ್ ಬಿನ್ ಬ್ಯಾಟರಾಯಪ್ಪ 32 ವರ್ಷ ರವರು ಮೊಬೈಲ್ ಕರೆಮಾಡಿ ಬೈರೇಗೌಡ ರವರಿಗೆ ಚಿಕ್ಕಬಳ್ಳಾಪುರ ಟೌನ್ ನ ಯಮಹಾ ಶೋರೂಂ ಮುಂಭಾಗದ ಠಾರ್ ರಸ್ತೆಯಲ್ಲಿ ಅಪಘಾತವಾಗಿ ಗಾಯಗಳಾಗಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದು, ತಾನು ಗ್ರಾಮದಿಂದ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು ಸದರಿ ಅಪಘಾತದ ಬಗ್ಗೆ ಅಪಘಾತ ನಡೆದ ಸ್ಥಳಕ್ಕೆ ಹೋಗಿ ಅಲ್ಲಿನ ಶಾಂಭವಿ ಕಾರ್ ವಾಶ್ ನ ಮಾಲೀಕರಾದ ದಿವಾಕರ್ ಬಿನ್ ಗೋಪಾಲಕೃಷ್ಣ ರವರನ್ನು ಸದರಿ ಅಪಘಾತದ ಬಗ್ಗೆ ಕೇಳಲಾಗಿ ಪಿರ್ಯಾಧಿಯ ತಂದೆ ಬೈರೇಗೌಡ ರವರು ದಿನಾಂಕ:-02/04/2021 ರಂದು ಸಂಜೆ ಸುಮಾರು 7-30 ಗಂಟೆಯ ಸಮಯದಲ್ಲಿ KA-02-EM-5847 ರ ಬಜಾಜ್ ಚೇತಕ್ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಚಿಕ್ಕಬಳ್ಳಾಪುರ ನಗರಕ್ಕೆ ಹೋಗಲು ಬೆಂಗಳೂರು - ಚಿಕ್ಕಬಳ್ಳಾಪುರ ಎನ್.ಹೆಚ್-44 ಬಿ.ಬಿ ರಸ್ತೆಯ ಯಮಹಾ ಶೋರೂಂ ಮುಂಭಾಗದ ರಸ್ತೆಯಲ್ಲಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಹಿಂದಿನಿಂದ ಬೆಂಗಳೂರು ಕಡೆಯಿಂದ ಬಂದ KA-03-HX-4755  ರ ದ್ವಿಚಕ್ರವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ತಂದೆ ರವರು ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ದ್ವಿಚಕ್ರವಾಹನ ಸಮೇತ ಠಾರ್ ರಸ್ತೆಯಲ್ಲಿ ಬಿದ್ದಾಗ ತಮ್ಮ ತಂದೆರವರಿಗೆ ತಲೆಯ ಹಿಂಭಾಗ, ಹಣೆಗೆ, ಮೂಗಿಗೆ ರಕ್ತ ಗಾಯಗಳಾಗಿದ್ದು, ಅಪಘಾತಪಡಿಸಿದ ದ್ವಿಚಕ್ರವಾಹನ ಸವಾರಿನಿಗೂ ಸಹಾ ಗಾಯಗಳಾಗಿದ್ದು ಆಗ ಸದರಿ ಅಪಘಾತ ಸ್ಥಳದಲ್ಲಿಯೇ ಇದ್ದ ಅಲ್ಲಿನ ಶಾಂಭವಿ ಕಾರ್ ವಾಶ್ ನ ಮಾಲೀಕರಾದ ದಿವಾಕರ್ ಬಿನ್ ಗೋಪಾಲಕೃಷ್ಣ ರವರು ಹಾಗೂ ಕೆ ರಮೇಶ್ ಬಿನ್ ಕುಶಾಲಪ್ಪ ಚಿಕ್ಕಬಳ್ಳಾಪುರ ರವರು ಗಾಯಾಳುಗಳನ್ನು ಉಪಚರಿಸಿ ಚಿಕಿತ್ಸೆಗಾಗಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿರುವುದಾಗಿ ತಿಳಿಸಿದ್ದು, ಸದರಿ ಅಪಘಾತ ಪಡಿಸಿದ KA-03-HX-4755 ರ ದ್ವಿಚಕ್ರವಾಹನ ಸವಾರನ ಹೆಸರು ಮತ್ತು ವಿಳಾಸ ಕೇಳಲಾಗಿ ಲೊಕೇಶ್ ಬಿನ್ ಶ್ರೀನಿವಾಸ 23 ವರ್ಷ, ಬಲಜಿಗರು, ಮೈಕ್ರೋಟೆಕ್ ನಲ್ಲಿ ಕೆಲಸ, ಹರಿಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು, ನಂತರ ತಮ್ಮ ತಂದೆ ರವರಿಗೆ ತಲೆಗೆ ಹೆಚ್ಚಿನ ಗಾಯಗಳಾಗಿದ್ದರಿಂದ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬ್ಯೂಲೆನ್ಸ್ ವಾಹನದಲ್ಲಿ ಬೆಂಗಳೂರಿನ ಕೆ.ಕೆ ಆಸ್ಪತ್ರೆಗೆ ಸೇರಿಸಿದ್ದು, ತಮ್ಮ ತಂದೆ ಬೈರೇಗೌಡ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಗ ದಿನಾಂಕ:-02/04/2021 ರಂದು ರಾತ್ರಿ ಸುಮಾರು 10-15 ಗಂಟೆಯ ಸಮಯದಲ್ಲಿ ಅಪಘಾತದಲ್ಲಿ ಆದ ತೀವ್ರತರವಾದ ಗಾಯಗಳ ದೆಸೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಚಿಕಿತ್ಸೆಯನ್ನು ನೀಡುತ್ತಿದ್ದ ವೈಧ್ಯಾದಿಕಾರಿಗಳು ತಿಳಿಸಿದ್ದು, ಅಪಘಾತಪಡಿಸಿದ KA-03-HX-4755 ರ ದ್ವಿಚಕ್ರವಾಹನ ಸವಾರನ ಮೇಲೆ ಬೆಂಗಳೂರಿನ ಕೆ.ಕೆ ಆಸ್ಪತ್ರೆಯಿಂದ ಬಂದು ಈ ದಿನ ತಡವಾಗಿ ದಿನಾಂಕ:-03/04/2021 ರಂದು ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಗಣಕೀಕೃತ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.139/2021 ಕಲಂ. 279,337  ಐ.ಪಿ.ಸಿ:-

          ದಿನಾಂಕ: 02/04/2021 ರಂದು ಠಾಣೆಯ WASI ಪದ್ಮ ರವರು ಬೆಂಗಳೂರಿನ ಸತ್ಯಸಾಯಿ ಅರ್ಥೋಪೆಡಿಕ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗಾಯಾಳು ಅವದೇಶ್ ಕುಮಾರ್ ಬಿನ್ ಲೇಟ್ ಜನಾರ್ಧನ್, 20 ವರ್ಷ, ಮಾತು ಜನಾಂಗ, ಖಾಸಗಿ ಕಂಪನಿಯಲ್ಲಿ ಕೆಲಸ, ಇಸ್ಲಾಂ ನಗರ ಗ್ರಾಮ ಮತ್ತು ಅಂಚೆ, ಚಂದ್ರದೀಪ್ ಠಾಣಾ ತಾಲ್ಲೂಕು, ಜಮುವಿ ಜಿಲ್ಲೆ, ಬಿಹಾರ್ ರಾಜ್ಯ, ಹಾಲಿ ವಾಸ: ಸರ್ಕಾರಿ ಶಾಲೆಯ ಬಳಿ, ಮೈನ್ ಗೇಟ್, ಪಿಳ್ಳಗುಂಪೆ ಕೈಗಾರಿಕಾ ಪ್ರದೇಶ, ಹೊಸಕೋಟೆ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 5.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಹಾಜರುಪಡಿಸಿದ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಒಂದು ವರ್ಷದಿಂದ ಬಿಗ್ ಬ್ಯಾಸ್ಕೇಟ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ತನ್ನ ಇತರೆ ಇಬ್ಬರು ಸ್ನೇಹಿತರಾದ ರೋಷನ್ ಕುಮಾರ್ ಮತ್ತು ಮನೋಹರ್ ನೊಂದಿಗೆ ವಾಸವಾಗಿರುತ್ತೇನೆ. ದಿನಾಂಕ: 28/03/2021 ರಂದು ತಾನು ಮತ್ತು ಬ್ರಹ್ಮರೆಡ್ಡಿ ರವರು ಕೆಲಸ ಮುಗಿಸಿಕೊಂಡು ರಾತ್ರಿ 8.30 ಗಂಟೆಯಲ್ಲಿ ತಾನು ಮತ್ತು ಬ್ರಹ್ಮರೆಡ್ಡಿ ರವರು ಆತನ ಬಾಬತ್ತು KA-51 W-4778 ಪ್ಯಾಷನ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಬ್ರಹ್ಮರೆಡ್ಡಿ ರವರು ವಾಹನದ ಸವಾರನಾಗಿದ್ದು, ತಾನು ಹಿಂಬದಿಯಲ್ಲಿ ಕುಳಿತು ಚಿಂತಾಮಣಿ ತಾಲ್ಲೂಕು, ಕೈವಾರ ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆಗೆ ಹೋಗಿ ನಂತರ ವಾಪಸ್ ಬರುತ್ತಿದ್ದಾಗ ಚಿಂತಾಮಣಿ-ಬೆಂಗಳೂರು ರಸ್ತೆಯ ಹಿರೇಪಾಳ್ಯದ ಬಳಿ ಇರುವ ಮೋರಿಯ ಬಳಿ ರಾತ್ರಿ ಸುಮಾರು 11.00 ಗಂಟೆಯಲ್ಲಿ ಬರುತ್ತಿದ್ದಾಗ ಹಿಂಬದಿಯಿಂದ ಯಾವುದೋ ಟ್ರ್ಯಾಕ್ಟರ್ ರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾವು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ತಾವಿಬ್ಬರೂ ದ್ವಿಚಕ್ರ ವಾಹನ ಸಮೇತ ರಸ್ತೆಯ ಮೇಲೆ ಹೋದೆವು. ಆಗ ಹಿಂಬದಿ ಕುಳಿತಿದ್ದ ತನಗೆ ಎಡಕಾಲಿನ ಮೊಣಕಾಲಿನ ಕೆಳಗೆ ಮತ್ತು ಎಡಕಣ್ಣಿನ ಮೇಲ್ಬಾಗದಲ್ಲಿ ರಕ್ತಗಾಯಗಳಾಗಿ, ಬ್ರಹ್ಮರೆಡ್ಡಿ ರವರ ಎಡಕಾಲಿಗೆ ರಕ್ತಗಾಯಗಳಾಗಿರುತ್ತೆ ಹಾಗೂ ದ್ವಿಚಕ್ರ ವಾಹನ ಜಖಂಗೊಂಡಿರುತ್ತೆ. ನಂತರ ಟ್ರ್ಯಾಕ್ಟರ್ ನಂಬರ್ ನೋಡಲಾಗಿ ಎಂಜಿನ್ ಮೇಲೆ KA-53 T-2578 ಎಂದು ಇದ್ದು, ಟ್ರಾಲಿಯು ನೀಲಿ ಬಣ್ಣದಿಂದ ಕೂಡಿದ್ದು, ಅದರ ಮೇಲೆ YCN ಹಾಗೂ 9980638063, 8722272299 ಎಂದು ಬರೆದಿರುತ್ತೆ. ಗಾಯಗೊಂಡಿದ್ದ ತಮ್ಮನ್ನು ಅಲ್ಲಿದ್ದ ಸಾರ್ವಜನಿಕರು ಆಂಬುಲೆನ್ಸ್ ನಲ್ಲಿ ಕೆ.ಆರ್.ಪುರಂ ಬಳಿ ಇರುವ ಸತ್ಯಸಾಯಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿದರು. ನಂತರ ತನ್ನ ಎಡಕಾಲಿಗೆ ಮತ್ತು ಬ್ರಹ್ಮರೆಡ್ಡಿ ರವರ ಎಡಕಾಲಿಗೆ ಶಸ್ತ್ರ ಚಿಕಿತ್ಸೆ ಆಗಿರುತ್ತೆ. ಹಾಲಿ ತಾನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ಅಪಘಾತಕ್ಕೀಡಾದ ಎರಡೂ ವಾಹನಗಳು ಠಾಣೆಯ ಬಳಿ ಇರುವುದಾಗಿ ತಿಳಿದು ಬಂದಿರುತ್ತೆ. ಆದ್ದರಿಂದ ಅಪಘಾತವನ್ನುಂಟು ಮಾಡಿದ ಟ್ರ್ಯಾಕ್ಟರ್ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಹಿಂದಿಯಲ್ಲಿ ಹೇಳಿದ್ದನ್ನು ಕನ್ನಡದಲ್ಲಿ ಬರೆದುಕೊಂಡ ಹೇಳಿಕೆಯ ದೂರಾಗಿರುತ್ತೆ.

 

9. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.61/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ:02/04/2021 ರಂದು ಘನ ನ್ಯಾಯಾಲಯದ ಹೆಚ್.ಸಿ.137 ಮಂಜುನಾಥ ರವರು ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ಘನ ನ್ಯಾಯಾಲಯದಲ್ಲಿ ಲಕ್ಷ್ಮಿನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ನಾನು ಈ ದಿನ ದಿನಾಂಕ:02/04/2021 ರಂದು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ಪೊತೇನಹಳ್ಳಿ ಗ್ರಾಮದ ಬಳಿ ಇರುವ ರೈಲ್ವೆ ಸೇತುವೆಯ ಬಳಿ ಬೇವಿನ ಮರದ ಕೆಳಗೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ.219 ಶ್ರೀನಿವಾಸಮೂರ್ತಿ, ಪಿಸಿ-537 ಆನಂದ್ ಕುಮಾರ್, ಪಿ.ಸಿ.311 ಗೂಳಪ್ಪ, ಪಿ.ಸಿ.175 ನವೀನ್ ಕುಮಾರ್, ಪಿ.ಸಿ.283 ಅರವಿಂದ, ಪಿ.ಸಿ.100 ಮಹೇಶ್, ಪಿ.ಸಿ.336 ಉಮೇಶ್.ಬಿ.ಶಿರಶ್ಯಾಡ್ ಮತ್ತು ಜೀಪ್ ಚಾಲಕ ಎಪಿಸಿ 120  ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಮದ್ಯಾಹ್ನ 2-00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ನಂಜುಂಡಪ್ಪ ಬಿನ್ ಲೇಟ್ ಸಂಜೀವಪ್ಪ, 45 ವರ್ಷ, ನಾಯಕರು, ವ್ಯಾಪಾರ, ವಾಸ ಪೋತೇನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು 2) ಮಹಂದಿಹುಸೇನ್ ಬಿನ್ ಸಖಾವತ್ ಅಲಿ, 38 ವರ್ಷ, ಕಾರ್ಪೆಂಟರ್ ಕೆಲಸ, ವಾಸ ಪೋತೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ಅಶ್ವತ್ಥಪ್ಪ ಬಿನ್ ರಾಮಣ್ಣ 30 ವರ್ಷ, ನಾಯಕರು, ಕೂಲಿ ಕೆಲಸ, ಪೋತೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು  4) ಕದಿರಪ್ಪ ಬಿನ್ ಲೇಟ್ ಗಂಗಪ್ಪ, 68 ವರ್ಷ, ಆದಿಕರ್ನಾಟಕ, ಕೂಲಿ ಕೆಲಸ, ಪೊತೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 5) ಮೂರ್ತಿ ಬಿನ್ ಲೇಟ್ ನಂಜುಂಡಪ್ಪ, 30 ವರ್ಷ, ನಾಯಕರು, ಚಾಲಕವೃತ್ತಿ, ಪೊತೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 6) ಸುಬ್ರಮಣಿ ಬಿನ್ ಗಂಗಸ್ವಾಮಿ, 25 ವರ್ಷ, ನಾಯಕರು, ಕೂಲಿ ಕೆಲಸ, ಪೊತೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 7) ನರಸಿಂಹಮೂರ್ತಿ ಬಿನ್ ಲೇಟ್ ಚಿಕ್ಕಣ್ಣ, 55 ವರ್ಷ, ಕೂಲಿ ಕೆಲಸ, ಲಿಂಗಾಯಿತರು, ಪೊತೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 8) ಕೃಷ್ಣಪ್ಪ ಬಿನ್ ಜಿ ನಾರಾಯಣಪ್ಪ, 54 ವರ್ಷ, ನಾಯಕರು, ಕೂಲಿ ಕೆಲಸ, ಪೊತೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸದರಿಯವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ನಂತರ ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ 5400/- (ಐದು ಸಾವಿರದ ನಾಲ್ಕು ನೂರು ರೂಪಾಯಿಗಳು ಮಾತ್ರ.)  ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಮದ್ಯಾಹ್ನ 2-30 ಗಂಟೆಯಿಂದ 3-30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಠಾಣೆಗೆ ವಾಪಾಸ್ ಬಂದು ಆರೋಪಿತರ ಮೇಲೆ ಮುಂದಿನ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಲು ಸ್ವತಃ ಠಾಣಾ ಎನ್.ಸಿ.ಆರ್ ನಂಬರ್ 98/2021 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 

10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.93/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ: 02-04-2021 ರಂದು ಸಂಜೆ 5.30 ಗಂಟೆಯಲ್ಲಿ ಫಿರ್ಯಾದಿದಾರರಾದ ಮಂಜುನಾಥ ಬಿನ್ ಲೇಟ್ ಮುನಿಯಪ್ಪ, 45 ವರ್ಷ, ದೋಬಿ ಜನಾಂಗ, ಜಿರಾಯ್ತಿ, ವಳಪ್ಪನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಜಿರಾಯ್ತಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತನಗೆ ಮತ್ತು ತನ್ನ ಹೆಂಡತಿ ಶ್ರೀಮತಿ ಲಕ್ಷ್ಮಿದೇವಮ್ಮ ರವರಿಗೆ 1ನೇ ವೇಣುಗೋಪಾಲ್, 2ನೇ ಸುಬ್ರಮಣಿ ಮತ್ತು 3ನೇ ಗಾನಶ್ರೀ ಎಂಬ 3 ಜನ ಮಕ್ಕಳಿರುತ್ತಾರೆ. ಆ ಪೈಕಿ ತನ್ನ ಮಗನಾದ ಸುಬ್ರಮಣಿ ರವರು ವಿಜಯಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2ನೇ ವರ್ಷದ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದು ಪ್ರತಿ ದಿನ ನಮ್ಮ ಗ್ರಾಮದಿಂದ ಜಂಗಮಕೋಟೆ ಕ್ರಾಸ್ ಗೆ ಆಟೋಗಳಲ್ಲಿ ಅಥವಾ ಯಾರಾದರೂ ದ್ವಿಚಕ್ರ ವಾಹನಗಳಲ್ಲಿ ಡ್ರಾಪ್ ಹಾಕಿಸಿಕೊಂಡು ಅಥವಾ ಯಾರೂ ಸಿಗದೆ ಇದ್ದಲ್ಲಿ ನಡೆದುಕೊಂಡು ಜಂಗಮಕೋಟೆ ಕ್ರಾಸ್ ಗೆ ಬಂದು ಜಂಗಮಕೋಟೆ ಕ್ರಾಸ್ ನಿಂದ ವಿಜಯಪುರಕ್ಕೆ ಬಸ್ಸಿನಲ್ಲಿ ಹೋಗಿ ಕಾಲೇಜು ಮುಗಿಸಿಕೊಂಡು ವಾಪಸ್ಸು ಸಂಜೆ ಸುಮಾರು 5.00 ಗಂಟೆ ಒಳಗೆ ಮನೆಗೆ ಬರುತ್ತಿದ್ದನು. ಎಂದಿನಂತೆ ದಿನಾಂಕ: 01-04-2021 ರಂದು ತನ್ನ ಮಗನಾದ ಸುಬ್ರಮಣಿ ರವರು ಕಾಲೇಜಿಗೆ ಹೋಗಿದ್ದು ಸಂಜೆ ಸುಮಾರು 5.45 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ನಮ್ಮ ಸಂಬಂಧಿಯಾದ ಎನ್.ಅಶೋಕ ಬಿನ್ ನಾರಾಯಣಸ್ವಾಮಿ ರವರು ತನಗೆ ಪೋನ್ ಮಾಡಿ ತನ್ನ ಮಗನಾದ ಸುಬ್ರಮಣಿ ರವರಿಗೆ ಜಂಗಮಕೋಟೆ ಕ್ರಾಸ್ ನ ಪೆಟ್ರೋಲ್ ಬಂಕ್ ಮುಂಭಾಗ ಅಪಘಾತವಾಗಿರುವುದಾಗಿ ಕೂಡಲೇ ಜಂಗಮಕೋಟೆ ಕ್ರಾಸ್ ಗೆ ಬರುವಂತೆ ತಿಳಿಸಿದ್ದು ಕೂಡಲೇ ತಾನು ಜಂಗಮಕೋಟೆ ಕ್ರಾಸ್ ಗೆ ಹೋಗಿ ಅಪಘಾತದ ಬಗ್ಗೆ ವಿಚಾರ ಮಾಡಲಾಗಿ ತನ್ನ ಮಗನಾದ ಸುಬ್ರಮಣಿ ರವರು ದಿನಾಂಕ: 01-4-2021 ರಂದು ಸಂಜೆ ಸುಮಾರು 5.30 ಗಂಟೆಯಲ್ಲಿ ಕಾಲೇಜು ಮುಗಿಸಿಕೊಂಡು ಜಂಗಮಕೋಟೆ ಕ್ರಾಸ್ ನಲ್ಲಿರುವ ಸೈಬರ್ ಸೆಂಟರ್ ಗೆ ಹೋಗುವ ಸಲುವಾಗಿ ರಸ್ತೆಯ ಬಲಬದಿಯ ಪುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಹೆಚ್.ಕ್ರಾಸ್ ಕಡೆಯಿಂದ ಬಂದಂತಹ ನಂ. ಕೆಎ-50-ಪಿ-33 ಕಾರನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮಗನಾದ ಸುಬ್ರಮಣಿ ರವರಿಗೆ ಅಪಘಾತವನ್ನು ಉಂಟುಮಾಡಿ ವಾಹನವನ್ನು ಸಹ ಸ್ಥಳದಲ್ಲಿ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದು ಅಪಘಾತದಲ್ಲಿ ತನ್ನ ಮಗನಿಗೆ ಬಲಗಾಲಿನ ಪಾದ ಹಾಗೂ ಕಾಲಿನ ಮೇಲೆ ಗಾಯಗಳಾಗಿದ್ದು ಗಾಯಗೊಂಡಿದ್ದ ತನ್ನ ಮಗನನ್ನು ಅಲ್ಲಿಯೇ ಇದ್ದ ನಮ್ಮ ಸಂಬಂಧಿ ಅಶೋಕ್ ಬಿನ್ ನಾರಾಯಣಸ್ವಾಮಿ ಮತ್ತು ಇತರರು ಉಪಚರಿಸಿ ಚಿಕಿತ್ಸೆಗಾಗಿ ಜಂಗಮಕೋಟೆ ಕ್ರಾಸ್ ನ ಶ್ರೀನಿವಾಸ ನರ್ಸಿಂಗ್ ಹೋಮ್ ನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ತಾನು ತನ್ನ ಮಗನಾದ ಸುಬ್ರಮಣಿ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಪುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ತನ್ನ ಮಗನಾದ ಸುಬ್ರಮಣಿ ರವರಿಗೆ ಅಪಘಾತವನ್ನು ಉಂಟುಮಾಡಿದ ಆರೋಪಿ ನಂ. ಕೆಎ-50-ಪಿ-33 ಕಾರಿನ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಮೊ.ಸಂ. 93/2021 ಕಲಂ 279, 337 ಐಪಿಸಿ ರ/ಜೊ 187 ಐಎಂವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.       

         

ಇತ್ತೀಚಿನ ನವೀಕರಣ​ : 03-04-2021 05:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080