ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.55/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ:02-03-2021 ರಂದು ಪಿರ್ಯಾದಿದಾರದ ವೈ.ಜಿ ಮಂಜುನಾಥ ಬಿನ್ ಗೋಪಾಲಪ್ಪ, 25 ವರ್ಷ, ಭಜಂತ್ರಿ ಜನಾಂಗ, ಕುಲಕಸುಬು, ಯಲ್ಲಂಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು,ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ನಮ್ಮ ತಂದೆ ಗೋಪಾಲಪ್ಪ ತಾಯಿ ಸುಜಾತಮ್ಮ ರವರಿಗೆ ಇಬ್ಬರು ಮಕ್ಕಳಿದ್ದು, 1 ನೇ ಮಂಜುನಾಥ ಆದ ನಾನು, 2ನೇ ಮಂಜುಳ ಆಗಿರುತ್ತೇವೆ. ನನ್ನ ತಂದೆ ಗೋಪಾಲಪ್ಪ ರವರು ಕುಲಕಸುಬನ್ನು ಮಾಡಿಕೊಂಡಿರುತ್ತಾರೆ. ನಾನು ನಮ್ಮ ತಂದೆ ನನ್ನ ತಂಗಿ ಮಂಜುಳ ಒಟ್ಟಿಗೆ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇವೆ. ದಿನಾಂಕ:28/02/2021 ರಂದು ನನ್ನ ತಂದೆಯಾದ ಗೋಪಾಲಪ್ಪ ರವರು ಕೆಲಸದ ನಿಮಿತ್ತ ನಾರೇಪಲ್ಲಿ ಗ್ರಾಮಕ್ಕೆ ಹೋಗಿಬರುವುದಾಗಿ ತನ್ನ ಬಾಬತ್ತು KA-40 E.E-8096 ಪ್ಯಾಷನ್ ಪ್ರೋ ದ್ವಿಚಕ್ರ ವಾಹನದಲ್ಲಿ  ಹೋದನು. ಮದ್ಯಾಹ್ನ ಸುಮಾರು 1:00 ಗಂಟೆಯ ಸಮಯದಲ್ಲಿ ನಮ್ಮ ದೊಡ್ಡಪ್ಪ ನಾಗರಾಜ ರವರು ನನಗೆ ಪೋನ್ ಮಾಡಿ ನಿಮ್ಮ ತಂದೆಗೆ ಟೋಲ್ ಬಳಿ ಎನ್.ಹೆಚ್ 44 ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾಗಿದ್ದು, ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿರುವುದಾಗಿ ತಿಳಿಸಿದರು. ಕೂಡಲೇ ನಾನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಬಳಿ ಹೋಗಿ ನೋಡಲಾಗಿ ನನ್ನ ತಂದೆಯ ಬಲಕಾಲಿಗೆ ರಕ್ತಗಾಯವಾಗಿತ್ತು. ಬಲಕೈಗೆ ತರಚಿದ ಗಾಯವಾಗಿತ್ತು. ವಿಚಾರ ಮಾಡಲಾಗಿ  ನನ್ನ ತಂದೆ ನಾರೇಪಲ್ಲಿಗೆ ಹೋಗಿ ವಾಪಸ್ಸು ಬಾಗೇಪಲ್ಲಿಗೆ ತನ್ನ ಬಾಬತ್ತು KA-40 E E – 8096 ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ, ಮದ್ಯಾಹ್ನ ಸುಮಾರು 12:20 ರಲ್ಲಿ  ಹೈದ್ರಾಬಾದ್ ಕಡೆಯಿಂದ ಬಂದ T.S-07, F.R-2498 ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂಬದಿಯಿಂದ ನನ್ನ ತಂದೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮವಾಗಿ ಮೇಲ್ಕಂಡಂತೆ ನನ್ನ ತಂದೆಗೆ ಗಾಯಗಳಾಗಿರುವುದಾಗಿ ತಿಳಿಯಿತು. ವೈದ್ಯರ ಸಲಹೆಯಂತೆ  ನಾನು ನನ್ನ ತಂದೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿ ನನ್ನ ತಂದೆಯ ಆರೈಕೆಯನ್ನು ಮಾಡುತ್ತಿದ್ದುದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ನನ್ನ ತಂದೆಗೆ ಅಪಘಾತವನ್ನುಂಟು ಮಾಡಿರುವ  T.S-07, F.R-2498 ಕಾರು ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಾಗಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.25/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ: 01/03/2021 ರಂದು ಮದ್ಯಾಹ್ನ 14-30 ಗಂಟೆಗೆ ಸಿ ಹೆಚ್ ಸಿ - 107 ಮುಸ್ತಪಾ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಕೃಷ್ಣಾರೆಡ್ಡಿ ಬಿನ್ ಲೆಟ್ ವೆಂಕಟಸ್ವಾಮಿ ರೆಡ್ಡಿ, 61 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಮಣೀಗಾನಹಳ್ಳಿ ಗ್ರಾಮ, ಪೆದ್ದೂರು ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು ಮೊ ನಂ: 9845121849  ರವರು ನೀಡಿದ ಹೆಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನಗೆ ಸುಮಾರು 30 ಕುರಿಗಳಿದ್ದು, ನಾನು ದಿನಾಂಕ:28/02/2021 ರಂದು ಸಂಜೆ ಸುಮಾರು 4-50 ಗಂಟೆಯ ಸಮಯದಲ್ಲಿ ನಮ್ಮ ಗ್ರಾಮದಿಂದ ಪೆದ್ದೂರಿಗೆ ಹೋಗುವ ದಾರಿಯಲ್ಲಿ ಸರ್ಕಾರಿ ಮೋರಿ ಪಕ್ಕದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ ನಮ್ಮ ಗ್ರಾಮದ ಶಿವಾರೆಡ್ಡಿ ಬಿನ್ ಕೃಷ್ಣಪ್ಪ ಎಂಬುವರು ನನ್ನ ಒಂದು ಕುರಿ ಮೇಲೆ   ಕಲ್ಲಿನಿಂದ ಹೊಡೆದು ಕುರಿ ಕಾಲಿಗೆ ಗಾಯಪಡಿಸಿರುತ್ತಾನೆ. ನಾನು ಏಕೆ ನಮ್ಮ ಕುರಿಗೆ ಹೊಡೆಯುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ನನ್ನ ಮಗನೇ ನೀನು ನಮ್ಮ ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತೀಯಾ ಎಂದು ಅಲ್ಲಿಯೇ ಹೊಲದಲ್ಲಿ ಬಿದ್ದಿದ್ದ ನೀಲಗಿರಿ ದೊಣ್ಣೆಯಿಂದ ನನ್ನ ಎಡ ತಲೆಯ ಮೇಲೆ ಹೊಡೆದು ರಕ್ತ ಗಾಯಪಡಿಸಿ ನಿನ್ನನ್ನು ಪ್ರಾಣ ಸಮೆತ ಇವತ್ತು ಬಿಡುವುದಿಲ್ಲ ಎಂದು ಹೇಳುತ್ತಿದ್ದಂತೆ ಅಲ್ಲಿಯೇ ಹೊಲದಲ್ಲಿದ್ದ ಕೃಷ್ಣಪ್ಪ ಎಂಬುವರು ಕಲ್ಲಿನಿಂದ ನನ್ನ ಬೆನ್ನಿನ ಮೇಲೆ ಹೊಡೆದು ಮೂಗೆಟುಂಟು ಮಾಡಿದ ಅಷ್ಟರಲ್ಲಿ  ಈ ನನ್ನ ಮಗನನ್ನು ಬಿಡ ಬೇಡ ಎಂದು ಶಿವಾರೆಡ್ಡಿ ಹೆಂಡತಿ ರೂಪ ಮತ್ತು ಕೃಷ್ಣಪ್ಪ ನ ಹೆಂಡತಿ ರತ್ನಮ್ಮ ಎಂಬುವರು ಹೆಳಿದ್ದು, ನಂತರ ಶಿವಾರೆಡ್ಡಿ ಮಗ ಕೌಶಿಕ್ ಎಂಬುವನು ಕಾಲಿನಿಂದ ಒದ್ದು ಮೂಗೇಟುಂಟು ಮಾಡಿದ ಅಷ್ಟರಲ್ಲಿಯೇ ನಮ್ಮ ಗ್ರಾಮದ ವಾಸಿಗಳಾದ ಮಂಜುನಾಥ ಬಿನ್ ಲೆಟ್ ವೆಮಕಟಸ್ವಾಮಿ  ಮತ್ತು ಲಕ್ಷ್ಮೀಪತಿ ಗೌಡ ಬಿನ್ ವೆಂಕಟೇ ಗೌಡ ಎಂಬುವರು ಗಲಾಟೆಯನ್ನು ಬಿಡಿಸಿ ಶಿವಾರೆಡ್ಡಿ ಮತ್ತು ವೆಂಕಟೇಶಪ್ಪ ವೈ ಕುರ್ರಪಲ್ಲಿ ರವರ ದ್ವಿಚಕ್ರವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಆದ್ದರಿಂದ ನನ್ನ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

 

3. ಚೇಳೂರು ಪೊಲೀಸ್ ಠಾಣೆ ಮೊ.ಸಂ.12/2021 ಕಲಂ. 506,504,323 ಐ.ಪಿ.ಸಿ :-

     ಈ ದಿನ  ದಿನಾಂಕ-02/03/2021 ರಂದು  ಹೆಚ್.ಸಿ -20 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆ ಯಿಂದ ರಾಮಯ್ಯ ಬಿನ್ ಲೇಟ್ ಈರಪ್ಪ ರವರ ಹೇಳಿಕೆ ಪಡೆದು ಠಾಣೆಗೆ ಹಾಜರು ಪಡಿಸಿದ ಹೇಳಿಕೆಯ ಸಾರಾಂಶವನೆಂದರೆ  ದಿನಾಂಕ:28/02/2021 ರಂದು ಮದ್ಯಾಹ್ನ ಸುಮಾರು 1.30 ಗಂಟೆ ಸಮಯದಲ್ಲಿ ನನ್ನ ಜಮೀನಿನ ಬಳಿ ತೆರಳಿ ನೀರನ್ನು ತೋಟಕ್ಕೆ ಬಿಡುತ್ತಿರುವಾಗ ನನ್ನ ತಮ್ಮನ ಮಗನಾದ  ಶೇಖರ ಬಿನ್ ವೆಂಕಟರವಣ ಎಂಬುವರು ನನ್ನ ತೋಟಕ್ಕೆ ನೀರು ಬಿಡಬೇಕು ಎಂದು ಗೇಟ್ ತಿರುಗಿಸಿ ಅವಾಚ್ಯ ಶಬ್ದಗಳಿಂದ ಬೈದು ನನ್ನ ಗಲ್ಲಾಪಟ್ಟಿ ಹಿಡುದು ಕಪಾಳಕ್ಕೆ ಹೊಡೆದು ,ಕೈಗಳಿದ ನನ್ನನ್ನು ಕೆಳಕ್ಕೆ ತಳ್ಳಿ  ಮೂಗೇಟುಗಳು ಉಂಟು ಮಾಡಿ,ನಿನ್ನನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾನೆ. ನಂತರ ಅಲ್ಲಿಯೇಇದ್ದ ನಮ್ಮ ಗ್ರಾಮದ ಮುರಳಿ ಎಂಬುವರು ಬಂದು ಗಲಾಟೆ ಬಿಡಿಸಿ ನನ್ನನ್ನು ಉಪಚರಿಸಿ ಯಾವುದೋ ದ್ವಿಚಕ್ರ ವಾಹನದಲ್ಲಿ ನನ್ನನ್ನು ಚೇಳೂರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ನಂತರ ಅಲ್ಲಿನ ವೈಧ್ಯಾಧಿಕಾರಿಗಳು  ಹೆಚ್ಚಿನ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗಲು ಸೂಚಿಸಿದ್ದು  ಅದರಂತೆ ನಾನು ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಈ ದಿನ ದಿನಾಂಕ:02-03-2021 ರಂದು ನಾನು ಮೇಲ್ಕಂಡಂತೆ ಹೇಳಿಕೆಯನ್ನು ನೀಡಿದ್ದು, ಆದ್ದರಿಂದ ಮೇಲ್ಕಂಡ ಶೇಖರ ಎಂಬುವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು ಆಗಿರುತ್ತದೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.87/2021 ಕಲಂ. 379  ಐ.ಪಿ.ಸಿ :-

     ದಿನಾಂಕ:02/03/2021 ರಂದು ಪಿರ್ಯಾದಿದಾರರಾದ ಜಯರಾಮಪ್ಪ ಬಿನ್ ಲೇಟ್. ಮುನಿನಾರಾಯಣಪ್ಪ, 60 ವರ್ಷ, ಬಲಜಿಗರು, ಜಿರಾಯ್ತಿ ವಾಸ: ದೊಡ್ಡಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತನ್ನ ಮಗನಾದ ಜೆ.ವಿನಯ್ ಎಂಬುವನು ಬೆಂಗಳೂರಿನ ಇಸ್ರೋ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಅವನ ಹೆಸರಿನಲ್ಲಿ ENG NO:DUZWFE87401, CHASIS NO:2A18AZ6FWE01391 ನಂಬರಿನ ಕೆಎ-51 ಇಕ್ಯೂ-1273 ನೊಂದಣಿ ಸಂಖ್ಯೆಯ ಸಿ.ಟಿ 100 ದ್ವಿಚಕ್ರ ವಾಹನ ಇದ್ದು, ಸದರಿ ವಾಹನವನ್ನು ನಾವು ನಮ್ಮ ಸ್ವಂತ ಕೆಲಸಗಳಿಗೆ ಬಳಸುತ್ತಿದ್ದೆವು. ದಿನಾಂಕ 04/02/2021 ರಂದು ಕೈವಾರ ಗ್ರಾಮದ ಅಮರನಾರಾಯಣಸ್ವಾಮಿ ಕಲ್ಯಾಣ ಮಂಟಪದಲ್ಲಿ ತಮ್ಮ ಸಂಬಂಧಿಕರ ಮದುವೆ ಇದ್ದು ನಾನು ನಮ್ಮ ಬಾಬತ್ತು ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ಸಂಜೆ 7.30 ಗಂಟೆಗೆ ಕೈವಾರ ಗ್ರಾಮದ ಅಮರನಾರಾಯಣಸ್ವಾಮಿ ಕಲ್ಯಾಣ ಮಂಟಪದ ಬಳಿ ಹೋಗಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಮದುವೆ ನೋಡಿಕೊಂಡು ಅದೇ ದಿನ ರಾತ್ರಿ ಸುಮಾರು 11.00 ಗಂಟೆಗೆ ಕಲ್ಯಾಣ ಮಂಟಪದಿಂದ ಹೊರ ಬಂದು ನೋಡಲಾಗಿ ತನ್ನ ಬಾಬತ್ತು ದ್ವಿಚಕ್ರ ವಾಹನ ಸ್ಥಳದಲ್ಲಿ ಇಲ್ಲದೆ ಕಳುವಾಗಿರುತ್ತೆ ಕಳುವಾಗಿರುವ ದ್ವಿಚಕ್ರ ವಾಹನವನ್ನು ಕೈವಾರ ಸುತ್ತ-ಮುತ್ತ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ದಿನಾಂಕ 04/02/2021 ರಂದು ಸಂಜೆ 7.30 ಗಂಟೆಯಿಂದ ರಾತ್ರಿ 11.00 ಗಂಟೆ ಮದ್ಯೆ ಯಾರೋ ಕಳ್ಳರು ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ದ್ವಿಚಕ್ರ ವಾಹನವು ಸುಮಾರು 34000/- ಬೆಲೆ ಬಾಳುತ್ತೆ. ಕಳುವಾಗಿರುವ ದ್ವಿಚಕ್ರ ವಾಹನವನ್ನು ಹುಡುಕಾಡಿಕೊಂಡಿದ್ದು ಪತ್ತೆಯಾಗದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಳುವಾಗಿರುವ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿರುತ್ತಾರೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.88/2021 ಕಲಂ. 15(A) ಕೆ.ಇ ಆಕ್ಟ್:-

     ದಿನಾಂಕ: 02/03/2021 ರಂದು ಸಂಜೆ 5.30 ಗಂಟೆಗೆ ಹೆಚ್.ಸಿ 165 ಟಿ.ಎಂ ಚಂದ್ರಪ್ಪ ರವರು ಠಾಣೆಗೆ ಹಾಜರಾಗಿ ಮಾಲು ಮತ್ತು ಪಂಚನಾಮೆಯನ್ನು ಹಾಜರ್ಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:02/03/2021 ರಂದು ಪಿಎಸ್ಐ ಎಸ್. ನರೇಶ್  ನಾಯ್ಕ ರವರು ಹೆಚ್.ಸಿ.165 ಟಿ.ಎಂ.ಚಂದ್ರಪ್ಪ ಆದ ತನಗೆ ಮತ್ತು ಸಿಪಿಸಿ 239 ಮಣಿಕಂಠ ರವರನ್ನು ಗ್ರಾಮಗಳ ಗಸ್ತಿಗಾಗಿ ನೇಮಕ ಮಾಡಿದ್ದು, ಅದರಂತೆ ನಾವು ಚೊಕ್ಕಹಳ್ಳಿ, ನಾಯನಹಳ್ಳಿ ಮತ್ತು ಶ್ರೀನಿವಾಸಪುರ ಕಡೆ ಗಸ್ತು ಮಾಡಿಕೊಂಡು ಸಂಜೆ 4.00 ಗಂಟೆಗೆ ನಲಮಾಚನಹಳ್ಳಿ ಗ್ರಾಮಕ್ಕೆ ಹೋಗಲಾಗಿ ಸದರಿ ಗ್ರಾಮದ ವಾಸಿಯಾದ ರವಿ ಬಿನ್ ಲೇಟ್ ಮುನಿಯಪ್ಪ ರವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಮೇರೆಗೆ, ಸದರಿ ರವಿ ರವರ ಚಿಲ್ಲರೆ ಅಂಗಡಿಯ ಬಳಿ ದಾಳಿ ಮಾಡುವ ಸಲುವಾಗಿ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ರವಿ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಂಗಡಿಯ ಮುಂಭಾಗದಲ್ಲಿ ಕುಳಿತಿದ್ದ ವ್ಯಕ್ತಿಗಳು ಹಾಗೂ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ರವಿ ರವರು ಓಡಿ ಹೋಗಿದ್ದು, ಸ್ಥಳದಲ್ಲಿ ನೋಡಲಾಗಿ 1) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 3 ಟೆಟ್ರಾ ಪಾಕೆಟ್ ಗಳು, 2) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು 3) ಒಂದು ಲೀಟರ್ ನ ಎಡರು ನೀರಿನ ಬಾಟಲುಗಳಿದ್ದು, 4) ಓಪನ್ ಆಗಿದ್ದ  90 ಎಂ ಎಲ್ ನ ಹೇವಾರ್ಡ್ಸ್ ಕಂಪನಿಯ ಚೀರ್ಸ್ ವಿಸ್ಕಿ 2 ಟೆಟ್ರಾ ಪಾಕೇಟ್ ಗಳು ಇದ್ದವು. ಅಲ್ಲಿದ್ದ ಸಾರ್ವಜನಿಕರನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ರವಿ ಬಿನ್ ಲೇಟ್ ಮುನಿಯಪ್ಪ, 40 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ನಲಮಾಚನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 4.15 ರಿಂದ 5.00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ಎಲ್ಲಾ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲುಗಳು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ವರದಿಯನ್ನು ನೀಡುತ್ತಿದ್ದು, ಅಕ್ರಮವಾಗಿ ತನ್ನ ಚಿಲ್ಲರೆ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ರವಿ ಬಿನ್ ಲೇಟ್ ಮುನಿಯಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುತ್ತಾರೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.89/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:02/03/2021 ರಂದು ರಾತ್ರಿ 7.30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಠಾಣೆಯ WPC-03 ರವರು ಘನ ನ್ಯಾಯಾಲಯದ ನ್ಯಾಯಾಧೀಶರ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಅನುಮತಿಯ ಪತ್ರದ ಸಾರಾಂಶವೇನೆಂದರೆ, ಈ ದಿನ  ದಿನಾಂಕ:-02-03-2021 ರಂದು ಸಂಜೆ 04.30 ಗಂಟೆಯಲ್ಲಿ ಪಿ.ಎಸ್.ಐ ಶ್ರೀ ನರೇಶ್ ನಾಯ್ಕ್ ರವರಿಗೆ ಚಿಂತಾಮಣಿ ಗ್ರಾಮಾಂತರ  ಠಾಣಾ ಸರಹದ್ದಿಗೆ ಸೇರಿದ ಮೈಲಾಪುರ ಗ್ರಾಮದ ಕೆರೆಯ ಅಂಗಳದಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ತಾನು ಮತ್ತು ಸಿಬ್ಬಂದಿಯವರಾದ ಸಂದೀಪ್ ಕುಮಾರ್ ಹೆಚ್.ಸಿ-249, ಶ್ರೀನಿವಾಸಮೂರ್ತಿ ಸಿ.ಪಿ.ಸಿ-185, ಮಣಿಕಂಠ ಸಿ.ಪಿ.ಸಿ-239, ಸತೀಶ ಸಿ.ಪಿ.ಸಿ-504, ರವರುಗಳೊಂದಿಗೆ ಪಂಚರನ್ನು ಠಾಣೆಯ ಸರ್ಕಾರಿ ಜೀಪಿನಲ್ಲಿ ಮೈಲಾಪುರ ಗ್ರಾಮದ ಕೆರೆ ಅಂಗಳಕ್ಕೆ  ಹೋಗಿದ್ದು ಸದರಿ ಕೆರೆಯ ಅಂಗಳದಲ್ಲಿ ಯಾರೋ ಕೆಲವರು  ಗುಂಪು ಕಟ್ಟಿಕೊಂಡು ಕೋಳಿ ಪಂದ್ಯ ಜೂಜಾಟ ಆಡುತ್ತಿದ್ದ ಸದರಿ ಗುಂಪನ್ನು ಪೊಲೀಸರು ಸುತ್ತುವರಿದು ಓಡಿಹೋಗದಂತೆ ಎಚ್ಚರಿಕೆ ನೀಡಿ ಸ್ಥಳದಲ್ಲಿದ್ದವರನ್ನು ಸುತ್ತುವರಿದು ಹಿಡಿದು ಅವರ ಹೆಸರು, ವಿಳಾಸವನ್ನು ಕೇಳಲಾಗಿ 1)ಲೋಕೇಶ ಬಿನ್ ರಾಮರೆಡ್ಡಿ, 29 ವರ್ಷ, ಡ್ರೈವರ್, ರಾಮಸಮುದ್ರಂ ಮಂಡಲ್, ಬಸವನಕಟ್ಟ ಗ್ರಾಮ, ಚಿತ್ತೂರು ಜಿಲ್ಲೆ, ಆಂದ್ರ ಪ್ರದೇಶ. 2) ಸುರೇಶ ಬಿನ್ ನರಸಿಂಹಪ್ಪ, 32 ವರ್ಷ, ನಾಯಕರು, ವ್ಯಾಪಾರ, ಕೆ.ಜಿ.ಎನ್ ಬಡಾವಣೆ, ಚಿಂತಾಮಣಿ ನಗರ. 3) ಆನಂದರೆಡ್ಡಿ ಬಿನ್ ನಾರಾಯಣರೆಡ್ಡಿ, 41 ವರ್ಷ, ಜಿರಾಯ್ತಿ, ಒಕ್ಕಲಿಗರು, ವೆಂಕಟಾಪುರ ಗ್ರಾಮ, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ, ಎಂತ ತಿಳಿಸಿದ್ದು, ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಆರೋಪಿಗಳು ಪಂದ್ಯಕ್ಕೆಂದು ಪಣಕ್ಕೆ ಇಟ್ಟಿದ್ದ, ಒಟ್ಟು 2480 ರೂ ನಗದು ಹಣ ಮತ್ತು 02 ಜೀವಂತ ಕೋಳಿ ಹುಂಜಗಳಿದ್ದು ಇವುಗಳನ್ನು ಸಂಜೆ 5.00 ಗಂಟೆಯಿಂದ 6.00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿದ್ದು ಮೇಲ್ಕಂಡಂತೆ ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಜೂಜಾಟವಾಡುತ್ತಿದ್ದ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿದ್ದು, ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.90/2021 ಕಲಂ. 323,324,504,34 ಐ.ಪಿ.ಸಿ:-

     ದಿನಾಂಕ: 02/03/2021 ರಂದು  ರಾತ್ರಿ 8.30 ಗಂಟೆಗೆ ಆರ್.ನಾಗೇಶ ಬಿನ್ ಲೇಟ್ ರಾಮಕೃಷ್ಣಪ್ಪ, 31 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ವಾಸ ರಾಂಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಹೆಂಡತಿಯಾದ ಶ್ರೀವಲ್ಲಿ ಹಾಗೂ ತಮ್ಮ ಗ್ರಾಮದ ವಾಸಿಯಾದ ತಮ್ಮ ಜನಾಂಗದ ವೆಂಕಟೇಶಪ್ಪನ ಹೆಂಡತಿಯಾದ ಭವಾನಿ ರವರುಗಳು ಈಗ್ಗೆ 3 ದಿನಗಳ ಹಿಂದೆ ತಮ್ಮ ಮನೆಯ ಬಳಿ ಮಕ್ಕಳ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದರು. ಹೀಗಿರುವಾಗ ದಿನಾಂಕ:28/02/2021 ರಂದು ರಾತ್ರಿ 8-30 ಗಂಟೆಯ ಸಮಯದಲ್ಲಿ ವೆಂಕಟೇಶಪ್ಪ ಬಿನ್ ಶ್ರೀನಿವಾಸ ತಮ್ಮ ಮನೆಯ ಬಳಿ ಬಂದು ತನ್ನ ಪತ್ನಿಯನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದ. ಆಗ ಇದನ್ನು ಕೇಳಿಸಿಕೊಂಡ ಮನೆಯಲ್ಲಿದ್ದ ತಾನು ಮನೆಯಿಂದ ಹೊರಗೆ ಬಂದು ವೆಂಕಟೇಶಪ್ಪನನ್ನು ಕುರಿತು ಏಕೆ ಈ ರೀತಿ ನಮ್ಮ ಮನೆಯ ಬಳಿ ಬಂದು ನನ್ನ ಹೆಂಡತಿಯನ್ನು ಬೈಯ್ಯುತ್ತಿದ್ದೀಯಾ ಎಂದು ಕೇಳಿದಾಗ ಕುಡಿದು ಬಂದಿದ್ದ ವೆಂಕಟೇಶಪ್ಪ ತನ್ನನ್ನು ಕುರಿತು ಏ ಬೋಳಿ ನನ್ನ ಮಗನೇ, ಲೋಪರ್ ಸೂಳೆ ನನ್ನ ಮಗನೇ ನೀನು ಯಾರೋ ನನ್ನನ್ನು ಕೇಳೋದಕ್ಕೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಏಕಾಏಕಿ ಅಲ್ಲಿಯೇ ಬಿದ್ದಿದ್ದ ಒಂದು ಕೋಲಿನಿಂದ ತನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿ, ನಂತರ ಅದೇ ಕೋಲಿನಿಂದ ತನ್ನ ಎಡಗೈ ಮೇಲೆ ಹೊಡೆದು ನೋವುಂಟು ಮಾಡಿದ. ನಂತರ ವೆಂಕಟೇಶಪ್ಪ ಆತನ ಬಲಗೈಯಿಂದ ತನ್ನ ಮೂಗಿನ ಬಳಿ ಗುದ್ದಿದ್ದ. ಅಷ್ಟರಲ್ಲಿ ಅಲ್ಲಿದ್ದ ತನ್ನ ಹೆಂಡತಿ ಶ್ರೀವಲ್ಲಿ, 19 ವರ್ಷ ಮತ್ತು ತಮ್ಮ ಮಾವ ರಾಮಕೃಷ್ಣಪ್ಪ, 36 ವರ್ಷ ರವರು ಜಗಳ ಬಿಡಿಸಲು ಅಡ್ಡ ಬಂದಾಗ ವೆಂಕಟೇಶಪ್ಪ ತಮ್ಮ ಮಾವ ರಾಮಕೃಷ್ಣಪ್ಪನಿಗೆ ಆತನ ಕೈಯ್ಯಲ್ಲಿದ್ದ ಅದೇ ಕೋಲಿನಿಂದ ಎಡಗೈ ಮೇಲೆ ಮತ್ತು ಎಡಗಾಲಿಗೆ ಹೊಡೆದು ಗಾಯಪಡಿಸಿದ. ವೆಂಕಟೇಶಪ್ಪನ ಹೆಂಡತಿ ಭವಾನಿ ತನ್ನ ಹೆಂಡತಿ ಶ್ರೀವಲ್ಲಿಗೆ ಕೈಗಳಿಂದ ಮೈಮೇಲೆ ಹೊಡೆದಳು. ಅಷ್ಟರಲ್ಲಿ ತಮ್ಮ ಗ್ರಾಮದ ವಾಸಿಗಳಾದ ವೆಂಕಟೇಶ ಬಿನ್ ವೆಂಕಟರವಣಪ್ಪ ಮತ್ತು ಮಹೇಶ ಬಿನ್ ಲೇಟ್ ವೆಂಕಟರಾಯಪ್ಪ  ರವರುಗಳು ಅಡ್ಡ ಬಂದು ಜಗಳ ಬಿಡಿಸಿ, ತಮ್ಮನ್ನು ಉಪಚರಿಸಿ ವೆಂಕಟೇಶಪ್ಪ ಮತ್ತು ಅವರ ಹೆಂಡತಿ ಭವನಿಗೆ ಬುದ್ದಿ ಹೇಳಿ ಅಲ್ಲಿಂದ ಕಳುಹಿಸಿಕೊಟ್ಟಿರುತ್ತಾರೆ. ನಂತರ ಗಾಯಾಳುಗಳಾಗಿದ್ದ ತಾನು ಮತ್ತು ತಮ್ಮ ಮಾವ ರಾಮಕೃಷ್ಣಪ್ಪ ಅದೇ ದಿನ ರಾತ್ರಿ ತಮ್ಮ ಗ್ರಾಮದಿಂದ ದ್ವಿಚಕ್ರವಾಹನವೊಂದರಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತೇವೆ. ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಸಮಯದಲ್ಲಿ ಆಸ್ಪತ್ರೆಗೆ ಬಂದ ತಮ್ಮ ಗ್ರಾಮದ ಹಿರಿಯರು ಗಲಾಟೆಯ ಬಗ್ಗೆ ಗ್ರಾಮದಲ್ಲಿ ಕುಳಿತು ಮಾತನಾಡೋಣ, ಅಲ್ಲಿಯವರೆಗೂ ಪೊಲೀಸ್ ಠಾಣೆಗೆ ಯಾವುದೇ ಕಂಪ್ಲೆಂಟ್ ನೀಡುವುದು ಬೇಡವೆಂತ ಹೇಳಿದ್ದರಿಂದ ತಾವು ಇದುವರೆಗೂ ಪೊಲೀಸ್ ಠಾಣೆಗೆ ಯಾವುದೇ ಕಂಪ್ಲೆಂಟ್ ನೀಡಿರುವುದಿಲ್ಲ. ಆದರೆ ವೆಂಕಟೇಶಪ್ಪ ಮತ್ತು ಆತನ ಹೆಂಡತಿ ಭವಾನಿ ಇದುವರೆಗೂ ಪಂಚಾಯ್ತಿಗೆ ಬಾರದ ಕಾರಣ ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಬಂದು ಪೊಲೀಸ್ ಠಾಣೆಯಲ್ಲಿ ಕಂಪ್ಲೆಂಟ್ ನೀಡಿರುವುದಾಗಿರುತ್ತೆ. ಆದ್ದರಿಂದ ತಮ್ಮ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿದ ವೆಂಕಟೇಶಪ್ಪ ಮತ್ತು ಆತನ ಹೆಂಡತಿ ಭವಾನಿ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದಾಗಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.92/2021 ಕಲಂ. 143,147,148,323,324,307,504,506,149 ಐ.ಪಿ.ಸಿ:-

     ದಿನಾಂಕ: 03/03/2021 ರಂದು ಬೆಳಿಗ್ಗೆ 11.00 ಗಂಟೆಗೆ ಪ್ರಸನ್ನ.ಆರ್ ಬಿನ್ ಲೇಟ್ ರಾಮಕೃಷ್ಣಪ್ಪ, 38 ವರ್ಷ, ಗೊಲ್ಲರು, ಬಿ.ಎಂ.ಟಿ.ಸಿ ಯಲ್ಲಿ ಮೆಕ್ಯಾನಿಕ್ ಕೆಲಸ, ವಾಸ ಸಂತೇಕಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ:02/03/2021 ರಂದು ಬೆಳಿಗ್ಗೆ ತಾನು ಎಂದಿನಂತೆ ತಮ್ಮ ಗ್ರಾಮದಿಂದ ಕೆ.ಆರ್.ಪುರಂ ಗೆ ಕೆಲಸಕ್ಕೆ ಹೋಗಿ ಸಂಜೆ 6-15 ಗಂಟೆಗೆ ತಮ್ಮ ಗ್ರಾಮಕ್ಕೆ ವಾಪಸ್ಸು ಬಂದಿರುತ್ತೇನೆ. ತಮ್ಮ ಗ್ರಾಮದ ವಾಸಿ ತಮ್ಮ ಜನಾಂಗದ ಚೇತನ್ ಬಿನ್ ಮುನಿಶಾಮಪ್ಪ ಎಂಬಾತನು ತನ್ನ ಅಣ್ಣ ಮಂಜುನಾಥ ರವರ ಮಗಳು 14 ವರ್ಷ ವಯಸ್ಸಿನ ಸಹನಾಳಿಗೆ ಆಗಾಗ ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಆಕೆಯ ಹಿಂದೆ ಬಿದ್ದು ಕಿರುಕುಳ ನೀಡುತ್ತಿದ್ದು, ಈ ವಿಚಾರವನ್ನು ಸಹನಾ ತಮಗೆ ತಿಳಿಸಿದ್ದಳು. ನಂತರ ತಾವು ಚೇತನ್ ಗೆ ಈ ವಿಚಾರವಾಗಿ ಸಹನಾಳ ತಂಟೆ-ತಕರಾರಿಗೆ ಬಾರದಂತೆ ಬುದ್ದಿವಾದ ಹೇಳಿದ್ದೆವು. ಹೀಗಿರುವಾಗ ನಿನ್ನೆಯ ದಿನ ದಿನಾಂಕ:02/03/2021 ರಂದು ಸಂಜೆ 6-15 ಗಂಟೆಗೆ ತಾನು ಕೆಲಸ ಮುಗಿಸಿಕೊಂಡು ತಮ್ಮ ಮನೆಗೆ ವಾಪಸ್ಸಾದಾಗ ತನ್ನ ಅಣ್ಣ ಮಂಜುನಾಥ ರವರು ತನ್ನನ್ನು ಕುರಿತು ಚೇತನ್ ಈ ದಿನ ಮತ್ತೆ ಸಹನಾಳಿಗೆ ಪೋನ್ ಮಾಡುತ್ತಾ ತೊಂದರೆ ಮಾಡುತ್ತಿದ್ದಾನೆಂತ ಸಹನಾ ಅಳುತ್ತಾ ತಿಳಿಸಿದ್ದಾಳೆ ಆತನಿಗೆ ತಾವು ಸ್ವಲ್ಪ ಬುದ್ದಿವಾದ ಹೇಳೋಣ ಬಾ ಎಂತ ತಿಳಿಸಿದರು. ನಂತರ ತಾನು ಅದೇ ದಿನ ಸಂಜೆ ಸುಮಾರು 6-45 ಗಂಟೆಯ ಸಮಯದಲ್ಲಿ ಚೇತನ್ ಚಿಕ್ಕಪ್ಪನಾದ ಗೋಪಾಲ್ ಬಿನ್ ಮುನಿಯಪ್ಪ ಎಂಬುವರಿಗೆ ತನ್ನ ಮೊಬೈಲ್ ನಂಬರ್ ನಿಂದ ಪೋನ್ ಮಾಡಿ ಚೇತನ್ ತನ್ನ ಅಣ್ಣನ ಮಗಳು ಸಹನಾಳಿಗೆ ಮತ್ತೆ ಪೋನ್ ಮಾಡಿ ತೊಂದರೆ ಮಾಡುತ್ತಿದ್ದಾನೆಂತ ಆತನಿಗೆ ಸ್ವಲ್ಪ ಬುದ್ದಿ ಹೇಳಿ ಎಂದು ತಿಳಿಸಿದೆ. ಆಗ ಗೋಪಾಲ್ ಈ ಬಗ್ಗೆ ನಮ್ಮ ಮನೆಯ ಬಳಿ ಕೂತು ಮಾತನಾಡೋಣ ನೀನು, ನಿಮ್ಮ ಅಣ್ಣ ಮಂಜುನಾಥ ಇಬ್ಬರೂ ನಮ್ಮ ಮನೆಯ ಬಳಿಗೆ ಬನ್ನಿ ಎಂದು ಹೇಳಿದರು. ಅದರಂತೆ ಅದೇ ದಿನ ಸಂಜೆ ಸುಮಾರು 7-30 ಗಂಟೆಯ ಸಮಯದಲ್ಲಿ ಈ ವಿಚಾರವಾಗಿ ಮಾತನಾಡಲೆಂದು ತಾನು ಮತ್ತು ತನ್ನ ಅಣ್ಣ ಮಂಜುನಾಥ, 40 ವರ್ಷ ರವರು ಗೋಪಾಲ್ ರವರ ಮನೆಯ ಬಳಿಗೆ ಹೋದಾಗ ಅಲ್ಲಿ ಚೇತನ್ ಬಿನ್ ಮುನಿಶಾಮಪ್ಪ, ಗೋಪಾಲ್ ಬಿನ್ ಮುನಿಯಪ್ಪ, ಅಶೋಕ ಬಿನ್ ದ್ಯಾವಪ್ಪ, ಚಂದನ್ ಬಿನ್ ಮುನಿಶಾಮಿ ಮತ್ತು ಎಳನೀರು ಮುನಿಶಾಮಪ್ಪ ಬಿನ್ ಚಿಕ್ಕಗೋಪಾಲಪ್ಪ ಎಂಬುವರುಗಳು ಇದ್ದು, ಆ ಪೈಕಿ ಗೋಪಾಲ್ ತಮ್ಮನ್ನು ಕುರಿತು ಏನೋ ಬೋಳಿ ನನ್ನ ಮಕ್ಕಳಾ, ಲೋಪರ್ ನನ್ನ ಮಕ್ಕಳಾ ನಿಮ್ಮದು ಊರಿನಲ್ಲಿ ಜಾಸ್ತಿಯಾಗಿದೆ, ಈಗ ನೀವು ನಮಗೆ ಸರಿಯಾಗಿ ಸಮಯಕ್ಕೆ ಸಿಕ್ಕಿದ್ದೀರಿ, ನಿಮಗೆ ಈ ದಿನ ಒಂದು ಗತಿಯನ್ನು ಕಾಣಿಸುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ಬೈದ. ಅಶೋಕ್ ತನ್ನ ಅಣ್ಣ ಮಂಜುನಾಥ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಆತನ ಕೈಯ್ಯಲ್ಲಿದ್ದ ಚಾಕುವಿನಿಂದ ತನ್ನ ಅಣ್ಣ ಮಂಜುನಾಥ ರವರ ಹೊಟ್ಟೆಗೆ ಬಲವಾಗಿ ತಿವಿದು ಕೊಲೆ ಪ್ರಯತ್ನ ಮಾಡಿದ. ಚಂದನ್ ಒಂದು ದೊಣ್ಣೆಯಿಂದ ತನಗೆ ಬಲಗೈ ಮೇಲೆ, ಹಣೆಯ ಬಳಿ ಹೊಡೆದು ರಕ್ತಗಾಯಪಡಿಸಿದ್ದು, ಗೋಪಾಲ್, ಚೇತನ್ ಮತ್ತು ಮುನಿಶಾಮಪ್ಪ ರವರುಗಳು ಕೈಗಳಿಂದ ತನಗೆ ಮತ್ತು ತನ್ನ ಅಣ್ಣನಿಗೆ ಮೈಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಗೋಪಾಲ್ ನಿಮ್ಮನ್ನು ಮುಗಿಸದೇ ಬಿಡುವುದಿಲ್ಲವೆಂತ ಪ್ರಾಣಬೆದರಿಕೆಯನ್ನು ಹಾಕಿರುತ್ತಾನೆ. ಈ ಗಲಾಟೆಯಿಂದ ತನ್ನ ಅಣ್ಣನಿಗೆ ಹೊಟ್ಟೆಗೆ ತೀವ್ರಸ್ವರೂಪದ ರಕ್ತಗಾಯವಾಗಿ ಸ್ಥಳದಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದಿರುತ್ತಾರೆ. ತನಗೂ ಸಹ ಬಲಗೈ ಮೇಲೆ, ಹಣೆಯ ಬಳಿ ರಕ್ತಗಾಯಗಳಾಗಿರುತ್ತೆ. ನಂತರ ಗಾಯಾಳುಗಳಾಗಿದ್ದ ತಮ್ಮನ್ನು ತಮ್ಮ ಗ್ರಾಮದ ವಾಸಿಗಳಾದ ವಿನೋದ್, ಗಂಗರಾಜು, ಹರೀಶ ಮತ್ತು ಹರೀಶ ಬಿನ್ ರಾಮಪ್ಪ ರವರುಗಳು ಉಪಚರಿಸಿ ಕಾರಿನಲ್ಲಿ ಹಾಕಿಕೊಂಡು ಅಲ್ಲಿಂದ ನೇರವಾಗಿ ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ. ತನ್ನ ಅಣ್ಣನಿಗೆ ಸದರಿ ಆಸ್ಪತ್ರೆಯಲ್ಲಿ ವೈದ್ಯರೂ ಶಸ್ತ್ರ ಚಿಕಿತ್ಸೆಯನ್ನು ಮಾಡಿ ನಿಗಾವಣೆಯಲ್ಲಿಟ್ಟಿರುತ್ತಾರೆ. ತಾನು ಸಹ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಠಾಣೆಗೆ ಬಂದು ಕಂಪ್ಲೆಂಟ್ ನೀಡಿರುತ್ತೇನೆ. ಆದ್ದರಿಂದ ತನ್ನ ಅಣ್ಣನ ಮಗಳ ವಿಚಾರವಾಗಿ ಮಾತನಾಡಲು ತಮ್ಮನ್ನು ಅವರ ಮನೆಯ ಬಳಿಗೆ ಕರೆಸಿಕೊಂಡು ಅಕ್ರಮ ಗುಂಪು ಕಟ್ಟಿಕೊಂಡು ತಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ತಮ್ಮ ಮೇಲೆ ದೊಣ್ಣೆ, ಚಾಕುವಿನಿಂದ ಹಲ್ಲೆ ಮಾಡಿ, ಕೊಲೆ ಪ್ರಯತ್ನ ಮಾಡಿರುವ ಮೇಲ್ಕಂಡ  ಚೇತನ್, ಗೋಪಾಲ್ ಅಶೋಕ, ಚಂದನ್ ಮತ್ತು ಎಳನೀರು ಮುನಿಶಾಮಪ್ಪ ರವರುಗಳ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದಾಗಿರುತ್ತೆ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.93/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ: 03/03/2021 ರಂದು ಮದ್ಯಾಹ್ನ 1.00 ಗಂಟೆಗೆ ಸುಜಾತಮ್ಮ ಕೋಂ ಗೋಪಾಲಪ್ಪ, 35 ವರ್ಷ, ಗೊಲ್ಲರು, ಮನೆಕೆಲಸ, ಸಂತೇಕಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಭಾವನ ಮಗನಾದ ಚೇತನ್ ಬಿನ್ ಲೇಟ್ ಮುನಿಶಾಮಪ್ಪ ರವರು ತಮ್ಮ ಗ್ರಾಮದ ಮಂಜುನಾಥ ರವರ ಮಗಳಾದ ಸಹನಾ ಎಂಬುವಳನ್ನು ಅಪಹರಣ ಮಾಡಿಕೊಂಡು ಹೋಗಿರುವ ವಿಚಾರದಲ್ಲಿ ಸಹನಾ ರವರ ಕಡೆಯವರಿಗೆ ಹಾಗೂ ಚೇತನ್ ಕಡೆಯವರಿಗೆ ಗಲಾಟೆಗಳಾಗಿರುತ್ತೆ. ದಿನಾಂಕ:02/03/2021 ರಂದು ಸಂಜೆ 7.30 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಅಕ್ಕನಾದ ಸರಸ್ವತಮ್ಮ ಕೋಂ ದ್ಯಾವಪ್ಪ, 45 ವರ್ಷ ರವರು ತಮ್ಮ ಮನೆಯ ಬಳಿ ಇದ್ದಾಗ, ಮಂಜುನಾಥ ಬಿನ್ ರಾಮಕೃಷ್ಣಪ್ಪ ಮತ್ತು ಪ್ರಸನ್ನ ಬಿನ್ ರಾಮಕೃಷ್ಣಪ್ಪ ಎಂಬುವರು ಬಂದು ಆ ಪೈಕಿ ಮಂಜುನಾಥ ಎಂಬುವನು ತಮ್ಮನ್ನು ಕುರಿತು ಬೇವರ್ಷಿ ಮುಂಡೆಗಳೆ, ನಿಮ್ಮ ಭಾವನ ಮಗನಾದ ಚೇತನ್ ಎಂಬುವನು ನನ್ನ ಮಗಳನ್ನು ಕರೆದುಕೊಂಡು ಹೋಗಿದ್ದಾನೆ ಅವನನ್ನು ಬಿಡುವುದಿಲ್ಲ ಎಂದು ಕೆಟ್ಟ ಮಾತುಗಳಿಂದ ಬೈದಾಗ, ತಾವು ಆತನನ್ನು ಕುರಿತು ನೀವು ಏಕೆ ನಮ್ಮನ್ನು ಬೈಯುತ್ತಿದ್ದೀರಾ ಅವರನ್ನು ಹೋಗಿ ಕೇಳಿ ಎಂದು ತಿಳಿಸಿದಾಗ ಮಂಜುನಾಥ ಕಲ್ಲಿನಿಂದ ತನ್ನ ಎಡಕಣ್ಣಿನ ಮೇಲ್ಭಾಗದಲ್ಲಿ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಪ್ರಸನ್ನ ಎಂಬುವನು ದೊಣ್ಣೆಯಿಂದ ತನ್ನ ಬೆನ್ನಿನ ಮೇಲೆ ಹೊಡೆದು ಮೂಗೇಟುಂಟು ಮಾಡಿರುತ್ತಾರೆ. ಆಗ ಸರಸ್ವತಮ್ಮ ರವರು ಜಗಳ ಬಿಡಿಸಲು ಬಂದಾಗ ಮಂಜುನಾಥ ದೊಣ್ಣೆಯಿಂದ ತನ್ನ ಅಕ್ಕ ಸರಸ್ವತಮ್ಮ ರವರ ಬಲಮೊಣಕೈಗೆ ಹೊಡೆದು ರಕ್ತಗಾಯಪಡಿಸಿ ದೊಣ್ಣೆಯನ್ನು ಬಿಸಾಡಿ ಕೈಗಳಿಂದ ತನ್ನ ಅಕ್ಕನ ಬೆನ್ನಿನ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಆಗ ತಮ್ಮ ಗ್ರಾಮದ ವಾಸಿಗಳಾದ ಶ್ರೀನಿವಾಸ ಬಿನ್ ಕೃಷ್ಣಪ್ಪ ಮತ್ತು ಮುನಿಶಾಮಿ ಬಿನ್ ಚಿಕ್ಕ ಗೋಪಾಲಪ್ಪ ರವರು ಬಂದು ಜಗಳ ಬಿಡಿಸಿರುತ್ತಾರೆ. ಆಗ ಮೇಲ್ಕಂಡವರು ತಮ್ಮನ್ನು ಕುರಿತು ನೀವು ಈ ದಿನ ತಪ್ಪಿಸಿಕೊಂಡಿದ್ದೀರಾ ನಿಮ್ಮನ್ನು ಸಾಯಿಸುವವರೆಗೆ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ನಂತರ ತಮ್ಮ ಗ್ರಾಮದ ದಿಪೀಲ್ ಬಿನ್ ನಾಗರಾಜ ರವರು ತನ್ನ ಕಾರಿನಲ್ಲಿ ತಮ್ಮನ್ನು ರಾತ್ರಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ಈ ಬಗ್ಗೆ ತಮ್ಮ ಗ್ರಾಮದ ಹಿರಿಯರು ನ್ಯಾಯಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು ಇದುವರೆಗೆ ಅವರು ನ್ಯಾಯಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

10. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.30/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ: 03/03/2021 ರಂದು ನ್ಯಾಯಾಲಯದ ಪಿ.ಸಿ 367 ರವರು ಎನ್ ಸಿ ಆರ್ 30/2021 ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ  ಬೆಳಿಗ್ಗೆ 10;45 ಗಂಟೆಗೆ  ಹಾಜರಾಗಿ ನೀಡಿದ ಪ್ರತಿಯ ಸಾರಾಂಶವೆನೆಂದರೆ ದಿನಾಂಕ:02/03/2021 ರಂದು ಸಂಜೆ ಸುಮಾರು 04.45 ಗಂಟೆಯ ಸಮಯದಲ್ಲಿ ಪಿ ಎಸ್ ಐ ರವರು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿಯೇನೆಂದರೆ, ಚಿಂತಾಮಣಿ ನಗರದ ಗಜಾನನ ವೃತ್ತದ ಬಳಿ ಇರುವ ಮಸೀದಿ ಮುಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಹಣವನ್ನು ಪಣಕ್ಕಿಟ್ಟು ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ಖಚಿತ ಮಾಹಿತಿಯ ಮೇರೆಗೆ ತಾನು ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ 245, ಸಿ.ಪಿಸಿ 426, ಮತ್ತು ಸಿ.ಪಿ.ಸಿ 275 ರವರು ಕೆಎ-40-ಜಿ-138 ಸರ್ಕಾರಿ ಜೀಪಿನಲ್ಲಿ ಹೋಗಿ ಗಜಾನನ ವೃತ್ತದ ಬಳಿ ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ ಕಾಲ್ನಡಿಗೆಯಲ್ಲಿ ತಾವು ಹಾಗೂ ಪಂಚರು ಮಸೀದಿ ಮರೆಯಲ್ಲಿ  ನಿಂತು ನೋಡಲಾಗಿ 5 ಜನರು ಸ್ಥಳದಲ್ಲಿ ಕುಳಿತುಕೊಂಡು ಅಂದರ್ 100 ಬಾಹರ್  100 ಎಂತ ಕೂಗುತ್ತಾ ಹಣವನ್ನು ಪಣಕ್ಕಿಟ್ಟು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟವಾಡುತ್ತಿದ್ದು, ಪಂಚರ ಸಮಕ್ಷಮ ಅವರನ್ನು ಸುತ್ತುವರೆದು ಅವರಿಗೆ ಓಡಿಹೋಗದಂತೆ ಎಚ್ಚರಿಕೆ ನೀಡಿ ಅವರನ್ನು ಹಿಡಿದುಕೊಂಡು ಆವರ ಹೆಸರು ಮತ್ತು ವಿಳಾಸ ಕೇಳಲಾಗಿ 1] ಆನಂದ.ವಿ.ಎಂ ಬಿನ್ ಲೇಟ್ ವೆಂಕಟಪ್ಪ, 40ವರ್ಷ, ವಕ್ಕಲಿಗರು,ವಿಡಿಯೊ ಗ್ರಾಪರ್ ಕೆಲಸ, ವಾಸ: ಕನ್ನಂಪಲ್ಲಿ, ಚಿಂತಾಮಣಿ ನಗರ 2] ನಾಗೇಂದ್ರ ಬಿನ್ ಲೇಟ್ ಚನ್ನರಾಯಪ್ಪ, 33ವರ್ಷ, ಎಸ್.ಟಿ. ಜನಾಂಗ, ಗಾರೆಕೆಲಸ, ವಾಸ: ಕೆ.ಆರ್ ಬಡಾವಣೆ , ಚಿಂತಾಮಣಿ ನಗರ, 3] ಕೃಷ್ಣಮೂರ್ತಿ ಬಿನ್ ಲೇಟ್ ನಾರಾಯಣಸ್ವಾಮಿ, 49ವರ್ಷ, ಎಸ್.ಟಿ ಜನಾಂಗ, ಕೂಲಿ ಕೆಲಸ, ಎನ್.ಎನ್.ಟಿ ರಸ್ತೆ,ಚಿಂತಾಮಣಿ ನಗರ, 4] ವಸಂತ ಬಿನ್ ನಾಗರಾಜು, 36ವರ್ಷ, ಬಲಜಿಗರು, ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ, ವಾಸ: ಗುಂಡಪ್ಪ ಬಡಾವಣೆ, ಚಿಂತಾಮಣಿ ನಗರ, 5] ರಾಹುಲ್ ಬಿನ್ ಜನಾರ್ಧನಾ, 34 ವರ್ಷ, ಮರಾಠಿ ಜನಾಂಗ, ಚಿನ್ನದ ಅಂಗಡಿಯಲ್ಲಿ ಕೆಲಸ, ವಾಸ: ಕೆ.ಜಿ.ಎನ್ ಬಡಾವಣೆ ಚಿಂತಾಮಣಿ ನಗರ ಎಂದು ತಿಳಿಸಿದ್ದು ಸ್ಥಳದಲ್ಲಿ ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲ ಹಾಕಿದ್ದು, ಅದರ ಮೇಲೆ ಇಸ್ಪೀಟು ಎಲೆಗಳು, ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಇಸ್ಪೀಟು ಎಲೆಗಳನ್ನು ಎಣಿಸಲಾಗಿ ಒಟ್ಟು 52 ಇಸ್ಪೀಟು ಎಲೆಗಳು ಇದ್ದು, ಹಣ ಒಟ್ಟು 3410-00 ರೂ.ಗಳ ನಗದು ಹಣ ವಿರುತ್ತೆ. ಪಂಚರ ಸಮಕ್ಷಮ ಸದರಿ  ಮಾಲುಗಳನ್ನು ಈ ದಿನ ಸಂಜೆ 05.00 ಗಂಟೆಯಿಂದ 06.30 ಗಂಟೆಯ ವರೆಗೆ ಪಂಚನಾಮೆಯನ್ನು ಜರುಗಿಸಿ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯಂತೆ ಇದು ಆಸಂಜ್ಞೇಯ ಅಪರಾಧವಾಗಿರುವುದರಿಂದ ಮುಂದಿನ ಕ್ರಮಕ್ಕೆ ಎನ್.ಸಿ,ಆರ್ ನಂ: 30/2021 ರಂತೆ ದಾಖಲಿಸಿ ನಂತರ  ಇದು ಅಸಂಜ್ಙೇಯ ಅಪರಾಧವಾಗಿರುವುದರಿಂದ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 

11. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.50/2021 ಕಲಂ. 279,337,338 ಐ.ಪಿ.ಸಿ:-

     ದಿನಾಂಕ 03-03-2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರಾದ ರಾಮಾಂಜಿನಪ್ಪ ಬಿನ್ ನಾರಾಯಣಪ್ಪ, 44 ವರ್ಷ, ಕುರುಬರು, ಜಿರಾಯ್ತಿ, ವಾಸ ನರಸಾಪುರ ಗ್ರಾಮ, ಡಿ.ಪಾಳ್ಯ ಹೋಬಳಿ, ಗೌರಿಬಿದಮೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ  ಕಂಪ್ಯೂಟರ್ ಟೈಪ್ ಮಾಡಿದ ದೂರಿನ ಸಾರಾಂಶವೇನೆಂಧರೆ  ದಿನಾಂಕ 16-01-2021 ರಂದು  ಕೆಲಸದ ಮೇಲೆ ನಾನು  ದೊಡ್ಡಕುರುಗೋಡು ಗ್ರಾಮಕ್ಕೆ ಹೋಗಿದ್ದು  ಸಂಜೆ 07-00 ಗಂಟೆಯಲ್ಲಿ  ಬಸ್ಸಿಗೆ ಕಾಯಲು  ರಸ್ತೆ ದಾಟುತ್ತಿದ್ದಾಗ  ಯಾವುದೋ ದ್ವಿಚಕ್ರವಾಹನ ಅತಿವೇಗ ಮತ್ತು ಅಜಾಗರೂಕತೆಯಿಂದ  ನನಗೆ ಡಿಕ್ಕಿಪಡಿಸಿದ್ದು  ನನಗೆ 15 ದಿನಗಳ ನಂತರ ಜ್ಷಾನ ಬಂದಾಗ ನಾನು ಯಲಹಂಕದ ಕೆ.ಕೆ. ಆಸ್ಪತ್ರೆಯಲ್ಲಿ ಇದ್ದೆ  ಯಾರೋ ನನ್ನನ್ನು ಆಸ್ಪತ್ರೆಗೆ ಸೇರಿಸಿರುತ್ತಾರೆ.  ನಂತರ ನೋಡಿದಾಗ ನನ್ನ ಬಲಗಾಲನ್ನು ತೆಗೆದುಹಾಕಿದ್ದು ಬಲಗೈ ಮುರಿದಿರುತ್ತೆ. ಮುಖ ಮತ್ತು ಇತರೇ ಕಡೆ ಗಾಯವಾಗಿರುತ್ತೆ. ನಂತರ ವಿಚಾರ ತಿಳಿಯಲಾಗಿ  ಚಿಕಿತ್ಸೆ ಕೊಡಿಸುತ್ತೇನೆಂದು  ಹೇಳಿ ಕೊಡಿಸಿರುವುದಿಲ್ಲ. ಇದರ ಸಂಖ್ಯೆ ಕೆ.ಎ.-40-ಇ.ಡಿ.-9932 ಅದರ ಮಾಲೀಕ ಮಂಜುನಾಥ, ಚಾಲಕ ಅನಿಲಕುಮಾರ್ ಎಂದು ತಿಳಿದುಬಂದಿರುತ್ತೆ. ನನಗೆ ಅಪಘಾತವಾಗಿದ್ದು  15 ದಿನಗಳ ನಂತರ ಪ್ರಜ್ಞೇ ಬಂದಿದ್ದಿದ್ದು  ನನಗೆ ಸರಿಯಾಗಿ ಅಕ್ಷರ ಜ್ಞಾನ ಇಲ್ಲದ ಕಾರಣ ಹಾಗೂ ನನ್ನ ಜ್ಞಾನ ಸಹಜ ಸ್ಥಿತಿಗೆ ಬಂದಿದ್ದರಿಂದ ತಡವಾಗಿ ದೂರು ನೀಡುತ್ತಿದ್ದೇನೆ. ನನಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತಪಡಿಸಿದ  ಅನಿಲ ಕುಮಾರ ನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂಧು  ಕೋರಿ ನೀಡಿದ ದೂರಾಗಿರುತ್ತೆ.

 

12. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.38/2021 ಕಲಂ. 279,337  ಐ.ಪಿ.ಸಿ:-

     ದಿನಾಂಕ: 02/03/2021 ರಂದು  ಸಂಜೆ 18.30 ಗಂಟೆಗೆ ಪಿರ್ಯಾಧಿದಾರರು ಠಾಣೆಗೆ ಬಂದು ನೀಡಿದ ಹೇಳಿಕೆಯ  ಸಾರಾಂಶವೇನೆಂದರೆ: ತಾನು ಅಂಗನವಾಡಿ ಕಾರ್ಯ ಕರ್ತೆ ಕೆಲಸ ಮಾಡಿಕೊಂಡು ಮಗು ಮತ್ತು ಗಂಡನೊಂದಿಗೆ ಗುಡಿಬಂಡೆ ತಾಲ್ಲೂಕು ಲಕ್ಷ್ಮೀಸಾಗರ ಗ್ರಾಮದಲ್ಲಿ ಬಾಅಡಿಗೆ ಮನೆಯಲ್ಲಿ ವಾಸವಾಗಿರುತ್ತೇವೆ. ಈಗಿರುವಲ್ಲಿ ದಿನಾಂಕ: 28/02/2021 ರಂದು ತನ್ನ ಗಂಡನಾದ ಮನೋಜ್ ಕುಮಾರ್ ರವರು ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಹೋಗಿ ಬರುತ್ತೇನೆಂದು ಹೇಳಿ ಬಿಳಿಗ್ಗೆ 10-00 ಗಂಟೆಯಲ್ಲಿ ಮನೆಯನ್ನು ಬಿಟ್ಟು ಚಿಕ್ಕಬಳ್ಳಾಪುರಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಅಲ್ಲಿಂದ ಬಾಗೇಪಲ್ಲಿ ತಾಲ್ಲೂಕು ಚನ್ನರಾಯಪಲ್ಲಿ ಗ್ರಾಮಕ್ಕೆ ಹೋಗಿ ಪುನಃ ತಮ,ಮ ಗ್ರಾಮಕ್ಕೆ ಬರಲು ಬಾಗೇಪಲ್ಲಿಯಿಂದ ಯಾವುದೋ ಒಂದು ಬಸ್ಸಿನಲ್ಲಿ ಬಂದು ವರ್ಲಕೊಂಡ ಗ್ರಾಮದ ಹತ್ತಿರ ಸಂತೆ ಸುಮಾರು 7-20 ಗಂಟೆಯ ಸಮಯದಲ್ಲಿ ಬಸ್ಸಿನಿಂದ ಳಿದು ಲಕ್ಷ್ಮೀಸಾಗರ ಗ್ರಾಮಕ್ಕೆ ಬರಲು ನಡೆದುಕೊಂಡು ಬರುತ್ತಿದ್ದಾಗ ಹಿಂದುಗಡೆಯಿಂದ ಅಂದರೆ ಬಾಗೇಪಲ್ಲಿ ಕಡೆಯಿಂದ ಬರುತ್ತಿದ್ದ KA-04 MR-5695 ನೊಂದಣಿ ಸಂಖ್ಯೆಯ ಕಾರು ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಗಂಡನಾದ ಮನೋಜ್ ಕುಮಾರ್ ರವಬರಿಗೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದ ಪರಿಣಾಮ ಮನೋಜ್ ಕುಮಾರ್ ರವರಿಗೆ ತಲೆಗೆ, ಎಡ ಭುಜಕ್ಕೆ ಹಾಗೂ ಹೊಟ್ಟೆಯ ಭಾಗಕ್ಕೆ ರಕ್ತಗಾಯಗಳಾಗಿ ಎಡ ಕಾಲು ಮುರಿದಿರುತ್ತೆ, ಬಲಕಾಲಿಗೆ ತರಚಿದ ರಕ್ತಗಾಯಗಳಾಗಿರುತ್ತೆ.ನಂತರ ಅಲ್ಲಿಯೇ ಸರ್ವಿಸ್ ರಸ್ತೆಯ ಪಕ್ಕದಲ್ಲಿದ್ದ ಅಶ್ವತ್ಥಪ್ಪ ರವರ ಟೀ ಅಂಗಡಿ ಹತ್ತಿರ  ದ್ದ ತನ್ನ ತಂದೆ-ರಾಮಕೃಷ್ಣಪ್ಪ ಹಾಗೂ ತಮ್ಮ ಗ್ರಾಮದ ವಾಸಿಗಳಾಅದ ಮಂಜುನಮಾಥ ಮತ್ತು ರವಿಕುಮಾರ್ ರವರು ಸ್ಥಳಕ್ಕೆ ಹೋಗಿ ಅಲ್ಲಿಂದ ತನಗೆ ಪೋನ್ ಮಾಡಿ ತನ್ನ ಗಂಡ ಮನೋಜ್ ಕುಮಾರ್ ರವರಿಗೆ ರಸ್ತೆಯಲ್ಲಿ ಅಪಘಾತವಾಗಿರುವ ಬಗ್ಗೆ ತನ್ನ ತಂದೆ ತಿಳಿಸಿದರು. ನಂತರ ತಾನು ತಮ್ಮ ಗ್ರಾಮದಿಂದ ಸ್ಥಳಕ್ಕೆ ಬರುವಷ್ಟರಲ್ಲಿ ತನ್ನ ತಂದೆರಾಮಕೃಷ್ಣಪ್ಪ ಹಾಗೂ ತಮ್ಮ ಗ್ರಾಮದ ವಾಸಿಗಳಾದ ಮಂಜುನಾಥ ಮತ್ತು ರವಿಕುಮಾರ್ ರವರು ತನ್ನ ಗಂಡನನ್ನು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ನಂತರ ತಾನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಿದ್ದು ವಿಚಾರ ನಿಜವಾಗಿದ್ದು. ನಂತರ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಹೋಗಲು ತಿಳಿಸಿದರು. ನಂತರ ತಾವು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಹೋದೆವು ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದರು. ನಂತರ ತಾವು ಬೆಂಗಳೂರಿನ ಜಯನಗರದಲ್ಲಿರುವ ದಿಗ್ವಿಜಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ ಚಿಕಿತ್ಸೆ ಕೋಡಿಸುತ್ತಿದ್ದೇವೆ. ತನ್ನ ಗಂಡನಾದ ಮನೋಜ್ ಕುಮಾರ್ ರವರಿಗೆ ಅಪಘಾತ ಪಡಿಸಿದ ಮೇಲ್ಕಂಡ ಕಾರಿನ ಚಾಲಕನ ವಿರುದ್ದ  ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

13. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.45/2021 ಕಲಂ. 279,337  ಐ.ಪಿ.ಸಿ:-

     ದಿನಾಂಕ:02/03/2021 ರಂದು ಪಿರ್ಯಾದಿದಾರರಾದ ಶ್ರೀ ಮುನಿರಾಜು ಬಿನ್ ಹನುಮಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:14/02/2021 ರಂದು ಸಂಜೆ ಸುಮಾರು 5.00 ಗಂಟೆಯ ಸಮಯದಲ್ಲಿ ತಮ್ಮದೇ ಆದ ಸ್ಪ್ಲೇಂಡರ್ ಪ್ಲಸ್ ದ್ವಿ ಚಕ್ರ ವಾಹನದಲ್ಲಿ ತನ್ನ ಹೆಂಡತಿಯಾದ ಲೀಲಾವತಿ, ತನ್ನ ಅಜ್ಜಿಯಾದ ಓಬಳಮ್ಮ ಮತ್ತು ತನ್ನ ಮಗನಾದ ಚಂದ್ರಶೇಖರ್ ರವರು ಗುಂಜೂರಿನಿಂದ ತೊಂಡೇಬಾವಿಯ ಆಸ್ಪತ್ರೆಗೆ ತನ್ನ ಅಜ್ಜಿಯವರನ್ನು ಕರೆದುಕೊಂಡು ಹೋಗಬೇಕಾದರೆ SH-9 ರಸ್ತೆಯ ಬಂದಾರ್ಲಹಳ್ಳಿ ಗೇಟ್ ಬಳಿ ಹೋಗುತ್ತಿದ್ದಾಗ ಎದುರುಗಡೆಯಿಂದ ಅಂದರೆ ಗೌರೀಬಿದನೂರು ಕಡೆಯಿಂದ ಬರುತ್ತಿದ್ದ ಹೊಸ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನದ ಸವಾರ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ತನ್ನ ಮಗನಾದ ಚಂದ್ರಶೇಖರ್ ಬರುತ್ತಿದ್ದ ಹೊಸ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ಹೆಂಡತಿಯಾದ ಲೀಲಾವತಿರವರಿಗೆ ಮೂಗು ಮತ್ತು ಎಡಕಾಲಿಗೆ ರಕ್ತಗಾಯವಾಗಿ, ನನ್ನ ಮಗನಾದ ಚಂದ್ರಶೇಖರ್ ರವರಿಗೆ ಎಡಕೆನ್ನೆಗೆ, ಎಡಭುಜಕ್ಕೆ ಮತ್ತು ತನ್ನ ಅಜ್ಜಿಯಾದ ಓಬಳಮ್ಮನಿಗೆ ಮೂಗು ಹಲ್ಲಿಗೆ ರಕ್ತಗಾಯವಾಗಿ ಅಲ್ಲಿನ ಶ್ರೀನಿವಾಸಗೌಡರವರು ಫೋನ್ ಮಾಡಿ ನನಗೆ ವಿಚಾರ ತಿಳಿಸಿ ಮತ್ತು ಗಾಯಾಳುಗಳನ್ನು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಮುಖಾಂತರ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮೂರು ಜನರನ್ನು ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಅಪಘಾತ ಪಡಿಸಿದ ನೊಂದಣಿ ಸಂಖ್ಯೆ ಇಲ್ಲದ ಹೊಸ ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

14. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.54/2021 ಕಲಂ. 447,427,504,506,34 ಐ.ಪಿ.ಸಿ:-

     ದಿನಾಂಕ:02.03.2021 ರಂದು ಸಂಜೆ 4.15 ಗಂಟೆಯಲ್ಲಿ ಪಿರ್ಯಾದಿದಾರರಾದ ಪಿ ಮುನಿರೆಡ್ಡಿ ಬಿನ್ ಲೇಟ್ ಪಿಳ್ಳಪ್ಪ 73 ವರ್ಷ, ವಕ್ಕಲಿಗರು, ಜಿರಾಯ್ತಿ, ಮುತ್ತೂರು ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತನ್ನ ಬಾಬತ್ತು ತಮ್ಮ ಗ್ರಾಮದ ಸರ್ವೆ  ನಂ 6/14 ರಲ್ಲಿ 2 ಎಕರೆ 11 ಗುಂಟೆ ಜಮೀನು ಇದ್ದು ಸದರಿ ಜಮೀನಿನಲ್ಲಿ ತಾನು ಜಿರಾಯ್ತಿ ಮಾಡಿಕೊಂಡಿರುತ್ತೇನೆ ತಮ್ಮ ಪಕ್ಕದ ಜಮೀನಿನವರಾದ  ದೊಡ್ಡಮುನಿಶಾಮಪ್ಪ  ಮತ್ತು ಆತನ ಮಗನಾದ ಡಿ.ಎಂ.ನಾರಾಯಣಸ್ವಾಮಿ ರವರು ತನ್ನ ಬಾಬತ್ತು ಜಮೀನಿನಲ್ಲಿ 10 ಗುಂಟೆ ಜಮೀನು ತನಗೆ ಸೇರಿದೆ ಎಂದು 2004 ನೇ ಸಾಲಿನಲ್ಲಿ ಒ.ಎಸ್.ನಂ:25/2004 ರಂತೆ ಶಿಡ್ಲಘಟ್ಟ ಸಿವಿಲ್ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿರುತ್ತಾನೆ ಸದರಿ ಕೇಸು ವಿಚಾರಣೆ ನಡೆದು ಸದರಿ ಕೇಸು ತಮ್ಮ ಪರವಾಗಿ ಆಗಿರುತ್ತೆ, ನಂತರ ಡಿ.ಎಂ.ನಾರಾಯಣಸ್ವಾಮಿ  ಮೇಲಿನ ಕೋರ್ಟ್ ನಲ್ಲಿ ಮೇಲ್ಮನವಿಯನ್ನು ಸಲ್ಲಿಸಿಕೊಂಡಿದ್ದು  ಸದರಿ ಕೇಸು ವಿಚಾರಣೆಯಲ್ಲಿರುತ್ತೆ, ಆಗಾಗ ಡಿ.ಎಂ ನಾರಾಯಣಸ್ವಾಮಿ ಕಡೆಯವರು ಇದೇ ವಿಚಾರವಾಗಿ ಆಗಾಗ ತನ್ನ ಮೇಲೆ ಗಲಾಟೆ ಮಾಡುತ್ತಿದ್ದರು  ನಂತರ ತನಗೆ ವಯಸ್ಸಾದ ಕಾರಣ ಜಮೀನಿನಲ್ಲಿ ಕೆಲಸ ಮಾಡಲು ಆಗದೇ ಇದ್ದು ಈಗ್ಗೆ ಸುಮಾರು 4 ವರ್ಷದ ಹಿಂದೆ ಸದರಿ ತನ್ನ ಬಾಬತ್ತು  ಜಮೀನನಲ್ಲಿ ಜಿರಾಯ್ತಿ ಮಾಡಿಕೊಳ್ಳಲು ತಮ್ಮ ಗ್ರಾಮದ ಭೈರೇಗೌಡ ಬಿನ್ ಲೇಟ್ ಬಿ.ನಾರಾಯಣಪ್ಪ ರವರಿಗೆ  ವರ್ಷಕ್ಕೆ 60,000/ ರೂ ಕೊಡುವಂತೆ ಮಾತನಾಡಿ ಲೀಸ್ಗೆ  ಕೊಟ್ಟಿದ್ದು ಅದರಂತೆ ಬೈರೆಗೌಡ ರವರು ತನ್ನ ಜಮೀನಿನಲ್ಲಿ ಬೆಳೆಗಳನ್ನು ಇಟ್ಟುಕೊಂಡು ವರ್ಷಕ್ಕೆ 60,000/ ರೂ  ಕೊಡುತ್ತಿದ್ದನು ತಾನು ಸಹ ಜಮೀನಿನಲ್ಲಿ ಆಗಾಗ ಹೋಗಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದೆ,ಈಗಿರುವಲ್ಲಿ  ಸದರಿ ಜಮೀನಿನಲ್ಲಿ ಭೈರೆಗೌಡ ಟೆಮೋಟೊ ಬೆಳೆಯನ್ನು ಇಟ್ಟಿರುತ್ತಾರೆ. ಈಗಿರುವಲ್ಲಿ ದಿನಾಂಕ:02-03-2021 ರಂದು ಮದ್ಯಾಹ್ನ 1-30 ಗಂಟೆಯಲ್ಲಿ ನಾನು ಮತ್ತು  ತನ್ನ ಸೊಸೆ ಕವಿತ ರವರು  ನನ್ನ ಬಾಬತ್ತು ಸವರ್ೆ ನಂ 6/14 ಜಮೀನಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ಡಿ.ಎಂ.ನಾರಾಯಣಸ್ವಾಮಿ ಕಡೆಯವರಾದ ಡಿ.ಎಂ.ಜಯಚಂದ್ರ ಬಿನ್ ದೊಡ್ಡಮುನಿಶಾಮಪ್ಪ,ಡಿ.ಎಂ.ದೇವರಾಜ ಬಿನ್ ದೊಡ್ಡಮುನಿಶಾಮಪ್ಪ ಮತ್ತು ಮನೋಜ್ ಕುಮಾರ್ ಬಿನ್ ಡಿ.ಎಂ.ಜಯಚಂದ್ರ ರವರುಗಳು ಏಕಾ ಏಕಿ ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ  ಸದರಿ ಜಮೀನಿನಲ್ಲಿದ್ದ  ಟಮೋಟೋ ಗಿಡಗಳು, ಟಮೋಟೋ ಗಿಡದ ಬುಡಕ್ಕೆ ಹಾಕಿದ್ದ ಮಂಚಿಂಗ್ ಪೇಪರ್,ಡ್ರಿಪ್ ಪೈಪುಗಳು, ತೋಟದ ಸುತ್ತಲು ಕಟ್ಟಿದ್ದ ಮೇಶ್, ಮತ್ತು ಟೆಮೋಟೊ ಕಡ್ಡಿಗಳನ್ನು ಕಿತ್ತುಹಾಕಿ ನಾಶಪಡಿಸಿ ಸುಮಾರು ಒಂದು ಲಕ್ಷದಷ್ಠು ನಷ್ಠವುಂಟು ಮಾಡಿರುತ್ತಾರೆ ಅದನ್ನು ಕೇಳಲು ಹೋದ ನನಗೆ ಮತ್ತು ತನ್ನ ಸೊಸೆಯಾದ ಕವಿತ ರವರಿಗೆ ಕೆಟ್ಟ ಮಾತುಗಳಿಂದ ಬೈದು ಈ ಜಮೀನಿನ ತಂಟೆಗೆ ಬಂದರೆ ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ,ಮೇಲ್ಕಂಡವರು ಮಾಡಿದ ದೌರ್ಜನ್ಯವನ್ನು ಅಲ್ಲಿಯೇ ಪಕ್ಕದ ಜಮೀನಿನಲ್ಲಿದ್ದ ನಮ್ಮ ಗ್ರಾಮದ ಗಂಗಾಧರ ಬಿನ್ ಬೈರಪ್ಪ ,ಮುನಿಶಾಮಿರೆಡ್ಡಿ ಬಿನ್ ಬೈರಪ್ಪ ರವರುಗಳು ನೋಡಿರುತ್ತಾರೆ. ಅದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರಗೆ ಠಾಣಾ ಮೊ ಸಂ:54/2021 ಕಲಂ 447,427,504,506 ರೆ/ವಿ 34 ಐ.ಪಿ.ಸಿ ರೀತ್ಯ  ಪ್ರಕರಣ ದಾಖಲಿಸಿರುತ್ತೆ.

 

15. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.55/2021 ಕಲಂ. 447,427,504,506,34 ಐ.ಪಿ.ಸಿ:-

     ದಿನಾಂಕ:02.03.2021 ರಂದು ರಾತ್ರಿ 8-00 ಗಂಟೆಯಲ್ಲಿ  ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೇಮೊವನ್ನು ಪಡೆದುಕೊಂಡು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಜಯಚಂದ್ರ ಬಿನ್ ಲೇಟ್ ದೊಡ್ಡಮುನಿಶಾಮಪ್ಪ , ಸುಮಾರು 61 ವರ್ಷ, ವಕ್ಕಲಿಗರು, ಜಿರಾಯ್ತಿ, ಮುತ್ತೂರು ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ತನ್ನ ಬಾಬತ್ತು ತಮ್ಮ ಗ್ರಾಮದ ಸರ್ವೆ  ನಂ 6/13 ಮತ್ತು 5/13 ರಲ್ಲಿ 2 ಎಕರೆ ಜಮೀನು ಇದ್ದು,  ತಮ್ಮ ಜಮೀನಿಗೆ ಹೋಗಲು ದಾರಿ ಇಲ್ಲದೇ ಇದ್ದ ಕಾರಣ 1982 ನೇ ಸಾಲಿನಲ್ಲಿ  ತಮ್ಮ ಗ್ರಾಮದ ಮುನಿರೆಡ್ಡಿ ಬಿನ್ ಲೇಟ್ ಪಿಳ್ಳಪ್ಪ ರವರ ಬಾಬತ್ತು ಸರ್ವೆ  ನಂ 06/14 ರಲ್ಲಿ ತಮ್ಮ ಜಮೀನಿಗೆ ದಾರಿ ಮಾಡಿಕೊಳ್ಳುವ ಸಲುವಾಗಿ 10 ಗುಂಟೆ ಜಮೀನನ್ನು ಖರೀದಿಗಾಗಿ ಪಡೆದುಕೊಂಡು ತನ್ನ ಅಣ್ಣನಾದ ಡಿ.ಎಂ ನಾರಾಯಣಸ್ವಾಮಿ ರವರ ಹೆಸರಿಗೆ ಅಗ್ರಿಮೆಂಟ್ ರಿಜಿಸ್ಟರ್ ಮಾಡಿಸಿಕೊಂಡಿರುತ್ತಾರೆ. ಅಂದಿನಿಂದ ಸದರಿ ದಾರಿಯಲ್ಲಿಯೇ ತಮ್ಮ ಕುಟುಂಬದವರೆಲ್ಲಾ ಹೋಗಿ ಬರುತ್ತಿದ್ದು ಈಗಿರುವಲ್ಲಿ 2007 ನೇ ಸಾಲಿನಲ್ಲಿ ಮುನಿರೆಡ್ಡಿ ತಮಗೆ ದಾರಿ ಬಿಡದೇ ಗಲಾಟೆಯನ್ನು ಮಾಡಿರುತ್ತಾನೆ, ಆಗ ತನ್ನ ಅಣ್ಣನಾದ ಡಿ.ಎಂ.ನಾರಾಯಣಸ್ವಾಮಿ  ಈ ಬಗ್ಗೆ ಶಿಡ್ಲಘಟ್ಟ ಸಿವಿಲ್ ನ್ಯಾಯಾಲಯದಲ್ಲಿ ಓ.ಎಸ್ ನಂ:69/2007 ರಂತೆ ಸಿವಿಲ್ ಕೇಸನ್ನು ದಾಖಲಿಸಿದ್ದು ಸದರಿ ಕೇಸು ವಿಚಾರಣೆ ನಡೆದು ತಮ್ಮ ಬಾಬತ್ತು ಜಮೀನಿನಲ್ಲಿ ದಾರಿ ಬೀಡುವಂತೆ ತಮ್ಮ ಪರವಾಗಿ ಆಗಿರುತ್ತೆ, ಆದರೂ ಸಹ ಮುನಿರೆಡ್ಡಿ ತಮಗೆ ದಾರಿ ಬಿಡದೇ ತೊಂದರೆ ನೀಡುತ್ತಿದ್ದನು ನಂತರ ಮುನಿರೆಡ್ಡಿ ಸದರಿ ಜಮೀನಿನನ್ನು  ತಮ್ಮ ಗ್ರಾಮದ ಬೈರೆಗೌಡ ಬಿನ್ ಬಿ.ನಾರಾಯಣಪ್ಪ ರವರಿಗೆ ಲೀಸ್ ಗೆ ಕೊಟ್ಟಿದ್ದು  ಸದರಿ ಜಮೀನಿನಲ್ಲಿ  ಬೈರೆಗೌಡ ರವರೇ ಜಿರಾಯ್ತಿ ಮಾಡಿಕೊಂಡಿದ್ದರು, ಆಗಲೂ ಸಹ ತಾವು ಸದರಿ ಜಮೀನಿನ ತಮ್ಮ ಬಾಬತ್ತು ದಾರಿಯಲ್ಲಿಯೇ ಓಡಾಡುತ್ತಿದ್ದು, ಈಗಿರುವಲ್ಲಿ ಈಗ್ಗೆ 2 ದಿನಗಳ ಹಿಂದೆ ಭೈರೆಗೌಡ ಸದರಿ ಜಮೀನಿನಲ್ಲಿ ಟೆಮೋಟೊ ಬೆಳೆಯನ್ನು ಹಾಕಿದ್ದು ತಮ್ಮ  ಬಾಬತ್ತು ದಾರಿ ಜಮೀನನ್ನು ಸಹ ಸೇರಿಸಿಕೊಂಡು ಬೆಳೆಯನ್ನು ಹಾಕಿದ್ದು ತಮ್ಮ ಬಾಬತ್ತು ದಾರಿಯನ್ನು ಮುಚ್ಚಿಹಾಕಿರುತ್ತಾರೆ ದಿನಾಂಕ:02-03-2021 ರಂದು ಮದ್ಯಾಹ್ನ 3-30 ಗಂಟೆಯಲ್ಲಿ  ತಾನು ತಮ್ಮ ಜಮೀನಿನ ದಾರಿಯನ್ನು ಮುಚ್ಚಿಹಾಕಿರುವ ವಿಚಾರದಲ್ಲಿ ಕೇಳಲು ಅಲ್ಲಿಗೆ ಹೋದಾಗ ಅಲ್ಲಿ ಬೈರೆಗೌಡ ಇರಲಿಲ್ಲ ನಂತರ ಅಲ್ಲಿಯೇ ಇದ್ದ ಭೈರೆಗೌಡ ರವರ ಮಗನಾದ ಕಾರ್ತಿಕ್  , ಮುನಿರೆಡ್ಡಿ ಬಿನ್ ಲೇಟ್ ಪಿಳ್ಳಪ್ಪ ಮತ್ತು ಮೋಹನ್ ಬಿನ್ ಮುನಿರೆಡ್ಡಿ ರವರುಗಳನ್ನು ಏಕೆ  ತಮ್ಮ ಜಮೀನಿಗೆ ಹೋಗಲು ದಾರಿಯನ್ನು ಮುಚ್ಚಿಹಾಕಿದ್ದೀರಾ ಎಂದು ಕೇಳಿದಕ್ಕೆ ಮೇಲ್ಕಂಡವರು  ತನ್ನ ಮೇಲೆ ಏಕಾ ಏಕಿ ಗಲಾಟೆ ಮಾಡಿ ತಮ್ಮ ದಾರಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯಶಬ್ದಗಳಿಂದ ಬೈದು , ಅ.ಪೈಕಿ ಕಾರ್ತಿಕ್  ಅಲ್ಲಿಯೇ ಇದ್ದ ಯಾವುದೋ ಒಂದು ದೊಣ್ಣೆಯಿಂದ ತನ್ನ ತಲೆಯ ಬಲಭಾಗಕ್ಕೆ ಹೊಡೆದು ನೋವಿನಗಾಯವುಂಟು ಮಾಡಿರುತ್ತಾನೆ, ಮುನಿರೆಡ್ಡಿ ಮತ್ತು ಮೋಹನ್ ಕೈಗಳಿಂದ ಹಲ್ಲೆ ಮಾಡಿರುತ್ತಾರೆ,ನಂತರ ಮೂರು ಜನರು ಸೇರಿ ಜೀವಬೆದರಿಕೆ ಹಾಕಿರುತ್ತಾರೆ,ಆಗ ಅಲ್ಲಿಯೇ ಇದ್ದ ತಮ್ಮ ಗ್ರಾಮದ ರಮೇಶ್ ಬಿನ್ ಗೋಪಾಲಪ್ಪ ಮತ್ತು ಮಂಜುನಾಥ ಬಿನ್ ಸೂರ್ಯಾನಾರಾಯಣಪ್ಪ  ರವರುಗಳು ಗಲಾಟೆಯನ್ನು ಬಿಡಿಸಿರುತ್ತಾರೆ, ಅದ್ದರಿಂದ ತಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕೇಳಿದಕ್ಕೆ ತನ್ನ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 8-45 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಗಾಯಾಳು ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ.ಸಂ 55/2021 ಕಲಂ 323.324,447,504,506 ರೆ/ವಿ 34 ಐ.ಪಿ.ಸಿ ರೀತ್ಯಾ ಕೇಸು ದಾಖಲಿಸಿಕೊಂಡಿರುತ್ತೆ.

 

16. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.20/2021 ಕಲಂ. 420 ಐ.ಪಿ.ಸಿ:-

     ದಿನಾಂಕ.03/03/2021 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿದಾರರ ದೂರನ್ನು ಅವರ ತಮ್ಮ ಶ್ರೀನಿವಾಸ @ ಚಿನ್ನಿ ರವರ ಮುಖಾಂತರ ಠಾಣೆಯಲ್ಲಿ ಪಡೆದಿದ್ದರ ದೂರಿನ ಸಾರಾಂಶವೇನಂದರೆ, ನನ್ನ ಗಂಡ ಮುನಿನಾರಾಯಣಪ್ಪ ಈ ಹಿಂದೆ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದು, ನಿವೃತ್ತಿ ಹೊಂದಿದ ನಂತರ ಸುಮಾರು 10 ವರ್ಷಗಳ ಹಿಂದೆ ಮೃತ ಪಟ್ಟಿರುತ್ತಾರೆ. ನಮಗೆ ಮಕ್ಕಳು ಇಲ್ಲದೆಯಿದ್ದು, ಇದೇ ಶಿಡ್ಲಘಟ್ಟ ಟೌನ್ ದೇಶದಪೇಟೆಯಲ್ಲಿ ನಾನು ಒಬ್ಬಳೇ ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ.01.03.2021 ರಂದು ಬೆಳಿಗ್ಗೆ ಸುಮಾರು 10.30 ಗಂಟೆಯಲ್ಲಿ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮ ಪಕ್ಕದ ಮನೆಯ ಮಂಜಮ್ಮ ರವರು ಒಬ್ಬ ಅಪರಿಚಿತ ವ್ಯಕ್ತಿಯನ್ನು ನಮ್ಮ ಮನೆಗೆ ಕರೆದುಕೊಂಡು ಬಂದು ಇವರು ಪೋಸ್ಟ್ ಮ್ಯಾನ್ ಹೊಸದಾಗಿ ಬಂದಿದ್ದಾರೆಂದು ಪರಿಚಯ ಮಾಡಿಸಿಕೊಟ್ಟು ಇವರು ಹೊಸದಾಗಿ ಓಲ್ಡ್ಏಜ್ ಪೆನ್ಷನ್ ತಿಂಗಳಿಗೆ 1500/-ರೂ ಮಾಡಿಸಿಕೊಡುತ್ತಾರೆಂತೆ ತಿಳಿಸಿದಳು. ಆಗ ನಾನು ಅವರನ್ನು ವಿಚಾರ ಮಾಡಿದಾಗ ನಾನು ರಮೇಶ 1-1/2 ತಿಂಗಳಿಂದ ಹೊಸದಾಗಿ ಪೋಸ್ಟ್ ಮ್ಯಾನ್ ಆಗಿ ಬಂದಿರುತ್ತೇನೆ. ಈಗ ಹೊಸದಾಗಿ ಮೋದಿ ಸ್ಕಿಂನಲ್ಲಿ 10000/-ರೂ ಪೆನ್ಕ್ಷನ್ ಹೆಚ್ಚಿಗೆ ಅರ್ಡರ್ ಆಗಿದೆ ಪೋಟೋ, ಅಧಾರ್ ಕಾಡರ್ು ಕೊಟ್ಟರೆ ಮಾಡಿಸಿಕೊಡುವುದಾಗಿ ತಿಳಿಸಿದ. ಆಗ ನಾನು ನಿಜ ಇರಬಹುದೆಂತ ನಂಬಿ ಅಯಿತು ಮಾಡಿಸಿಕೊಡಿ ಎಂದು ತಿಳಿಸಿದೆ. ಆಗ ಅಪರಿಚಿತ ವ್ಯಕ್ತಿ ಪೋಟೋ ತೆಗೆಯಬೇಕು ನಿಮ್ಮ ಮೈ ಮೇಲೆ ಇರುವ ವಡವೆಗಳನ್ನು ತೆಗೆದು ಬಿಚ್ಚಿಡಿ ವಡವೆಗಳು ಇದ್ದರೆ ಪೆನ್ಷನ್ ಕೊಡುವುದಿಲ್ಲ ಎಂದು ಹೇಳಿದಾಗ ನಾನು ನನ್ನ ಕತ್ತಿನಲ್ಲಿದ್ದ ಸುಮಾರು 35 ಗ್ರಾಂ ಮಾಂಗಲ್ಯ ಚೈನ್ ಮತ್ತು ಕೈಗಳಲ್ಲಿದ್ದ ಸುಮಾರು 4 ಗ್ರಾಂ ತೂಕದ 2 ಉಂಗುರಗಳನ್ನು ತೆಗೆದು ಬೀರುವಿನಲ್ಲಿಟ್ಟಿದ್ದು, ನಂತರ ಅಪರಿಚಿತ ವ್ಯಕ್ತಿ ಆಸ್ಪತ್ರೆಗೆ ಹೋಗಿ ಡಾಕ್ಟರ್ ಹತ್ತಿರ ಅರ್ಜಿಗೆ ಸಹಿ ಮಾಡಿಸಿಕೊಂಡು ಬರಬೇಕೆಂದು ತಿಳಿಸಿದಾಗ ನಾನು ಬೀರುವಿಗೆ ಬೀಗ ಹಾಕದೆ ಮನೆಗೆ ಬೀಗ ಹಾಕಿಕೊಂಡು ನನಗೆ ಮತ್ತು ಮಂಜಮ್ಮ ರವರಿಗೆ ಅಪರಿಚಿತ ವ್ಯಕ್ತಿ ಯಾವುದೋ ಆಟೋದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಬಳಿ ಬೆಳಿಗ್ಗೆ ಸುಮಾರು 11.00 ಗಂಟೆಗೆ ಕರೆದುಕೊಂಡು ಬಂದಾಗ ಅಪರಿಚಿತ ವ್ಯಕ್ತಿ ನನಗೆ ಓರಿಜಿನಲ್ ರೇಷನ್ ಕಾಡರ್ು ಮರೆತು ಬಂದಿರುತ್ತೇವೆ. ರೇಷನ್ ಕಾರ್ಡು ತರೆಸಿಕೊಡಿ ಎಂದು ಹೇಳಿದಾಗ ನಾನು ನಮ್ಮ ಜೊತೆ ಬಂದಿರುವ ಮಂಜಮ್ಮ ರವರಿಗೆ ನಮ್ಮ ಮನೆಯ ಬೀಗ ಕೊಟ್ಟು ರೇಷನ್ ಕಾರ್ಡು ತೆಗೆದುಕೊಂಡು ಬರಲು ತಿಳಿಸಿದೆ. ಆಗ ನಾನು ಮಂಜಮ್ಮನಿಗೆ ಹೇಳಿದ ಸಮಯದಲ್ಲಿ ಅಪರಿಚಿತ ವ್ಯಕ್ತಿ ಕೇಳಿಸಿಕೊಂಡು ಅತನು ಮತ್ತು ಮಂಜಮ್ಮ ಒಂದೇ ಆಟೋದಲ್ಲಿ ನಮ್ಮ ಮನೆಗೆ ಹೋದರು. ಸ್ವಲ್ಪ ಸಮಯದ ನಂತರ ಮಂಜಮ್ಮ ಮಾತ್ರ ಆಸ್ಪತ್ರೆಗೆ ವಾಪಸ್ಸು ಬಂದಿದ್ದು, ಅಪರಿಚಿತ ವ್ಯಕ್ತಿ ಬಂದಿಲ್ಲ. ನಾನು ಮಂಜಮ್ಮಳನ್ನು ಕೇಳಿದಾಗ ಅವರು ಪೋಸ್ಟ್ ಆಪೀಸ್ಗೆ ಹೋಗಿ ಅರ್ಜಿ ತೆಗೆದುಕೊಂಡು ಬರುವುದಾಗಿ ತಿಳಿಸಿ ಕೋಟೆ ಸರ್ಕಲ್ ನಲ್ಲಿ ಆಟೋ ಇಳಿದು ಪೋಸ್ಟ್ ಆಪೀಸ್ ಗೆ ಹೋಗಿರುವುದಾಗಿ ತಿಳಿಸಿದಳು. ನಾವು ಸುಮಾರು ಸಮಯ ಕಾದರೂ ಅಪರಿಚಿತ ವ್ಯಕ್ತಿ ಬಾರದ ಕಾರಣ ನಾನು ಮಂಜಮ್ಮ ನಮ್ಮ ಮನೆಗೆ ಹೋಗಿ ನೋಡಿದಾಗ ನಾನು ನಮ್ಮ ಮನೆಯಲ್ಲಿ ಬೀರುವಿನಲ್ಲಿ ತೆಗೆದಿಟ್ಟಿರುವ ವಡವೆಗಳನ್ನು ನೋಡಿದಾಗ ಇಲ್ಲದೆ ಇದ್ದು, ಅಪರಿಚಿತ ವ್ಯಕ್ತಿ ನಮ್ಮ ಮನೆಗೆ ಹೋಗಿದ್ದ ಸಮಯದಲ್ಲಿ ಮಂಜಮ್ಮ ರವರನ್ನು ನಿಮಗೆ ಸಹ ಪೆನ್ಕ್ಷನ್ ಮಾಡಿಸಿಕೊಡುವುದಾಗಿ ನಿಮ್ಮ ರೇಷನ್ ಕಾರ್ಡು ತೆಗೆದುಕೊಂಡು ಬರಲು ಅವರ ಮನೆಗೆ ಕಳುಹಿಸಿ ನಮ್ಮ ಮನೆಯ ಬೀರುವಿನಲ್ಲಿಟ್ಟಿದ್ದ ಮಾಂಗಲ್ಯ ಚೈನ್, 2 ಉಂಗುರಗಳು ಹಾಗೂ ಬೀರುವಿನಲ್ಲಿದ್ದ ಸುಮಾರು 45 ಗ್ರಾಂ ಅವಲಕ್ಕಿ ಸರ ಮತ್ತು 20 ಸಾವಿರ ನಗದು ಹಣವನ್ನು ಸಹ ಎತ್ತಿಕೊಂಡು ಹೋಗಿರುತ್ತಾನೆ. ಅಂದಿನಿಂದ ನಾವು ಅಪರಿಚಿತ ವ್ಯಕ್ತಿ ಪುನಃ ಬರಬಹುದೆಂತ ಹುಡುಕಾಡುತ್ತಿದ್ದರೂ ಇದುವರೆಗೂ ಸಿಕ್ಕಿರುವುದಿಲ್ಲ.  ಆದ್ದರಿಂದ ನನಗೆ ಯಾರೋ ಅಪರಿಚಿತ ವ್ಯಕ್ತಿ ಪೋಸ್ಟ್ ಆಪೀಸ್ನಲ್ಲಿ ಪೆನ್ಕ್ಷನ್ ಮಾಡಿಸಿಕೊಡುವುದಾಗಿ ನಂಬಿಸಿ ನಮ್ಮ ಮನೆಯಲ್ಲಿದ್ದ ಬಂಗಾರದ ವಡವೆಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ನಮಗೆ ಮೋಸ ಮಾಡಿರುವ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ ಕಳುವಾದ ವಡವೆಗಳು ಮತ್ತು ಹಣ ವಾಪಸ್ಸು ಕೊಡಿಸಿಕೊಡಲು ತಡವಾಗಿ ಕೊಟ್ಟ ದೂರಿನ ಮೇರೆಗೆ ಈ ಪ್ಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 03-03-2021 06:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080