Feedback / Suggestions

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 29/2021 ಕಲಂ.420 ಐ.ಪಿ.ಸಿ:-

     ದಿನಾಂಕ 03/02/2021 ರಂದು ಮದ್ಯಾಹ್ನ 12-30 ಗಂಟೆಯಲ್ಲಿ ಫಿರ್ಯಾದಿದಾರರಾದ ನರಸಯ್ಯ ಬಿನ್ ಲೇಟ್ ಚಿನ್ನಪ್ಪ, 60 ವರ್ಷ, ಆದಿಕರ್ನಾಟಕ ಜನಾಂಗ, ಕೊಲಿಕೆಲಸ, ವಾಸ ನಂ 13-15-209, ಸಾಕಲಕುಂಟೆ, 19ನೇ ವಾರ್ಡ, ಹಿಂದೂಪುರ ಟೌನ್ ಮತ್ತು ತಾಲ್ಲೂಕು ರವರು ಠಾಣಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಈಗ್ಗೆ 10 ತಿಂಗಳ ಹಿಂದೆ ನನ್ನ ಹೆಂಡತಿ ಶ್ರೀಮತಿ ಮಾದಿಗ ನಾಗಮ್ಮ ರವರ ಹೆಸರಿನಲ್ಲಿ  ಎ.ಪಿ-39-ಇ.ಇ.-6286 ನೊಂದಣಿ ಸಂಖ್ಯೆಯ ಟಿ.ವಿ.ಎಸ್ ಜುಪಿಟರ್  ದ್ವಿಚಕ್ರ ವಾಹನವನ್ನು ತೆಗೆದುಕೊಂಡಿರುತ್ತೇನೆ. ದಿನಾಂಕ27/12/2020 ರಂದು ಚಿಲಮತ್ತೂರು ಕಣಿವೆಯಲ್ಲಿರುವ ನರಸಿಂಹಸ್ವಮಿ ದೇವಾಸ್ಥಾನದಲ್ಲಿ ನಮ್ಮ ನೆಂಟರ ಮದುವೆ ಕಾರ್ಯಕ್ರಮವಿದ್ದು, ದೇವಾಸ್ಥಾನದಲ್ಲಿ ಮದುವೆ ಮುಗಿಸಿಕೊಂಡು, ನಂತರ ಬಾಗೇಪಲ್ಲಿಗೆ ಹೋಗೋಣವೆಂದು ಮದ್ಯಾಹ್ನ ಸುಮಾರು 12-30 ಗಂಟೆ ಕೊಡಿಕೊಂಡ ಚೆಕ್ ಪೋಸ್ಟ್ ಗೆ ಬಂದಿರುತ್ತೇನೆ. ಚೆಕ್ ಪೋಸ್ಟ ನಲ್ಲಿ ಯಾರೋ ಒಬ್ಬ ಆಸಾಮಿಯು ಬಾಗೇಪಲ್ಲಿಗೆ ಬರುವುದಾಗಿ ತಿಳಿಸಿ, ನನ್ನ ಜೊತೆ ದ್ವಿ ಚಕ್ರ ವಾಹನದಲ್ಲಿ ಬರುವಾಗ, ಬಾರ್ ಎಲ್ಲಿದೆ ಎಂದು ಕೇಳಲಾಗಿ ಬಾಗೇಪಲ್ಲಿ ಟಿ ಬಿ ಕ್ರಾಸ್ ಬಳಿ ಇರುವ ಎಂ ಆರ್ ಬಾರ್ ಗೆ ಕರೆದುಕೊಂಡು ಹೋಗಿರುತ್ತಾನೆ. ನಂತರ ನಾನು ಮತ್ತು ಅಪರಿಚಿತ ಆಸಾಮಿಯು ಬಾರ್ ನಲ್ಲಿ ಮದ್ಯದ ಪಾಕೆಟ್ ಗಳನ್ನು ತೆಗೆದುಕೊಂಡು,ಎಂ.ಆರ್. ಹಿಂಭಾಗದಲ್ಲಿರುವ ಖಾಲಿ ನಿವೇಶನಗಳ ಜಾಗದಲ್ಲಿ ಇಬ್ಬರು ಮದ್ಯಪಾನವನ್ನು ಕುಡಿದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ  ನಾನು ಬಹಿದರ್ೆಸೆಗೆ ಹೋದಾಗ, ಬಾರ್ ಬಳಿಗೆ  ಹೋಗಿ ಬರುತ್ತೆನೆಂದು  ನನ್ನ ದ್ವಿ ಚಕ್ರ ವಾಹನವನ್ನು ತೆಗೆದುಕೊಂಡು ಹೋದಾವನು ವಾಪಸ್ ಬಂದಿರುವುದಿಲ್ಲಾ.  ನನಗೆ ಮೋಸ ಮಾಡುವ ಉದ್ದೇಶದಿಂದ, ನನ್ನ ಬಾಬತ್ತು ಎ.ಪಿ-39-ಇ.ಇ.-6286 ನೊಂದಣಿ ಸಂಖ್ಯೆಯ ಟಿ.ವಿ.ಎಸ್ ಜುಪಿಟರ್ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೊರಟು ಹೋಗಿರುತ್ತಾನೆ. ಆದ್ದರಿಂದ ನನಗೆ ಮೋಸ ಮಾಡಿ ನನ್ನ ಬಾಬತ್ತು ಎ.ಪಿ-39-ಇ.ಇ.-6286 ನೊಂದಣಿ ಸಂಖ್ಯೆಯ ಟಿ.ವಿ.ಎಸ್ ಜುಪಿಟರ್ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿರುವ ಅಪರಿಚತ ಆಸಾಮಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇನೆ. ನನಗೆ ಮೋಸ ಮಾಡಿದ ಆಸಾಮಿಯನ್ನು  ಹಾಗೂ ದ್ವಿ ಚಕ್ರ ವಾಹನವನ್ನು ಎಲ್ಲಾ ಕಡೆ ಹುಡುಕಿ ಈ ದಿನ ತಡವಾಗಿ ಬಂದು  ನೀಡಿರುವ ದೂರಾಗಿರುತ್ತೆ.

 1. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ. 10/2021 ಕಲಂ.419,420 ಐ.ಪಿ.ಸಿ & 66(D) INFORMATION TECHNOLOGY  ACT 2000:-

     ಈ ದಿನಾಂಕ:03/02/2021 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ ಚೇತನ್ ಬಿ.ಆರ್. ಬಿನ್ ಬಿ.ಕೆ ರಾಮಚಂದ್ರ ರವರು ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದಿದ್ದುದರ ಸಾರಾಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಶಿಡ್ಲಘಟ್ಟ ನಗರದಲ್ಲಿ ಮೊಬೈಲ್ ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಾನು ನನ್ನ ಹಣಕಾಸಿನ ವ್ಯವಹಾರಗಳಿಗಾಗಿ ಶಿಡ್ಲಘಟ್ಟ ನಗರದ ಕೆನರಾ ಬ್ಯಾಂಕಿನಲ್ಲಿ ಉಳಿತಾಯಖಾತೆ ಸಂಖ್ಯೆ:0486101192238 ರಂತೆ ಹೊಂದಿದ್ದು ಅದಕ್ಕೆ ನನ್ನ ಮೊಬೈಲ್ ನಂ. 9972279071 ನ್ನು ಸದರಿ ಖಾತೆಗೆ ಜೋಡಿಸಿಕೊಂಡಿರುತ್ತೇನೆ. ನಾನು ಓಪೋ ಆಂಡ್ರಾಯ್ಡ್ ಮೊಬೈಲ್ ನ್ನು ಉಪಯೋಗಿಸುತ್ತಿದ್ದು ನನ್ನ ಹಣಕಾಸಿನ ವ್ಯವಹಾರವನ್ನು ಕೆನರಾ ಬ್ಯಾಂಕ್ ಇಂಟರ್ ನೆಟ್ ಆಪ್ ಆನ್ನು ಇನಸ್ಟಾಲ್ ಮಾಡಿಕೊಂಡು ವ್ಯವಹರಿಸುತ್ತಿರುತ್ತೇನೆ. ಹೀಗಿರುವಾಗ ದಿನಾಂಕ:22/01/2021 ರಂದು ಮದ್ಯಾಹ್ನ ಸುಮಾರು 12-00 ಗಂಟೆಯಲ್ಲಿ ನನ್ನ ಮೊಬೈಲ್ 9972279071 ನಂಬರಿಗೆ ಮೊ. 9163212969 ರಿಂದ ಪೋನ್ ಮಾಡಿ  SOUTH CSP ZONE ಮನಿ ಟ್ರಾನ್ಸ್ಫರ್ ಕಂಪನಿ ಎಂತ ತಿಳಿಸಿ ಅಂಗಡಿ ಬಾಡಿಗೆ, ಒಬ್ಬರಿಗೆ ವೇತನ ಮತ್ತು ಕಂಪ್ಯೂಟರ್ ಹಾಗೂ ಸ್ವೈಪಿಂಗ್ ಮೆಷಿನ್ ಕೊಡುವುದಾಗಿ ಹಾಗೂ ನೀವು 10500/- ರೂಪಾಯಿಗಳು ರೆಜಿಷ್ಟ್ರೇಷನ್ ಫೀ ಕಟ್ಟಲು ತಿಳಿಸಿದ್ದು ಅದರಂತೆ ನಾನು ದಿನಾಂಕ:25/01/2021 ರಂದು ಸದರಿ ಹಣವನ್ನು ನನ್ನ ಮೊಬೈಲ್ ನಲ್ಲಿರುವ ಗೂಗಲ್ ಪೇ ಆಪ್ ನಿಂದ ಅವರು ತಿಳಿಸಿದ ಎಸ್.ಬಿ.ಐ ಖಾತೆ ಸಂಖ್ಯೆ: 36122833574 ಗೆ ಕಳುಹಿಸಿಕೊಟ್ಟಿರುತ್ತೇನೆ. ನಂತರ ಪುನಃ ಮೊ. 9163212969 ನಿಂದ ಪೋನ್ ಮಾಡಿ 50 ಸಾವಿರ ಕಟ್ಟಿದರೆ 5 ಲಕ್ಷರೂ ನಿಮಗೆ ಓಡಿ ಅಕೌಂಟ್ ಮಾಡಿಕೊಡುತ್ತೇವೆ ಹಾಗೂ ಸದರಿ 50 ಸಾವಿರ ರೂಪಾಯಿಗಳನ್ನು ಪುನಃ ಒಂದು ಗಂಟೆಯೊಳಗೆ ವಾಪಸ್ಸು ಕೊಡುವುದಾಗಿ ತಿಳಿಸಿದ ಅದಕ್ಕೆ ನಾನು ಸದರಿ 50 ಸಾವಿರ ರೂ ಹಣವನ್ನು ದಿನಾಂಕ:27/01/2021 ರಂದು ಅವರು ತಿಳಿಸಿದ ಎಸ್.ಬಿ.ಐ ಖಾತೆ ಸಂಖ್ಯೆ:39956728149 ಗೆ ಕೆನರಾ ಬ್ಯಾಂಕ್ ಆಪ್ ನಿಂದ ಕಳುಹಿಸಿಕೊಟ್ಟಿರುತ್ತೇನೆ. ನಂತರ ಪುನಃ ಮೊ. 9163212969 ನಿಂದ ಪೋನ್ ಮಾಡಿ, ನಿಮಗೆ 10 ಲಕ್ಷ ರೂಪಾಯಿ ಓಡಿ ಆಕೌಂಟ್ ಆಗಿದ್ದು ಪುನಃ 30 ಸಾವಿರ ರೂಪಾಯಿಗಳು ಕಳುಹಿಸಲು ತಿಳಿಸಿದ್ದು ಅದರಂತೆ ದಿನಾಂಕ:28/01/2021 ರಂದು ಅವರು ತಿಳಿಸಿದ ಎಸ್.ಬಿ.ಐ ಖಾತೆ ಸಂಖ್ಯೆ:39956728149 ಗೆ 25 ಸಾವಿರ ರೂಪಾಯಿಗಳನ್ನು ಕೆನರಾ ಬ್ಯಾಂಕ್ ಆಪ್ ನಿಂದ ಕಳುಹಿಸಿಕೊಟ್ಟಿರುತ್ತೇನೆ.  ಪುನಃ ಕರೆ ಮಾಡಿ ಕಂಪ್ಯೂಟರ್ ಕಳುಹಿಸಿಕೊಟ್ಟಿರುತ್ತೇನೆ, ಟ್ರಾನ್ಸ್ಪೋಟರ್ಿಂಗ್ ಚಾಜ್ ಕಟ್ಟಬೇಕು ಎಂತ ತಿಳಿಸಿದ್ದು, ಅದರಂತೆ ಅವರು ತಿಳಿಸಿದ ಎಸ್.ಬಿ.ಐ ಖಾತೆ ಸಂಖ್ಯೆ: 33526734746 ಗೆ ನನ್ನ ಮೊಬೈಲ್ ನ ಕೆನರಾ ಬ್ಯಾಂಕ್ 16850/- ರೂಪಾಯಿಗಳನ್ನು ಕಳುಹಿಸಿಕೊಟ್ಟಿರುತ್ತೇನೆ. ನಂತರ ಪುನಃ ಪೋನ್ ಮಾಡಿ ಆರ್.ಬಿ.ಐ ನ ಜಿಎಸ್ಟಿ ಟ್ಯಾಕ್ಸ್ ಕಟ್ಟಬೇಕೆಂತ ತಿಳಿಸಿದ್ದು ಅದರಂತೆ ನಾನು ದಿನಾಂಕ:30/01/2021 ರಂದು ಅವರು ತಿಳಿಸಿದ ಎಸ್.ಬಿ.ಐ ಖಾತೆ ಸಂಖ್ಯೆ:33526734746 ಗೆ 8050/- ರೂಪಾಯಿಗಳನ್ನು ಕಳುಹಿಸಿಕೊಟ್ಟಿರುತ್ತೇನೆ. ಆದರೆ ಮೇಲ್ಕಂಡ ಮೊ. 9163212969 ನಿಂದ ಪೋನ್ ಮಾಡಿದ ಆಸಾಮಿ ನನ್ನ ಮೊಬೈಲ್ ನಂಬರನ್ನು ಪ್ರಸ್ತುತ ಬ್ಲಾಕ್ ಲಿಸ್ಟ್ ಗೆ ಹಾಕಿಕೊಂಡಿರುತ್ತಾನೆ. ಅಲ್ಲದೆ ನನಗೆ ಯಾವುದೇ ಕರೆ ಮಾಡದೇ ನಾನು ಕಳುಹಿಸಿದ ಹಣವನ್ನು ಪಡೆದುಕೊಂಡು ಯಾವುದೇ ವಸ್ತುಗಳನ್ನು ನೀಡದೇ ಹಣವನ್ನು ವಾಪಸ್ಸು ಕೊಡದೇ ವಂಚಿಸಿರುವ  ಮೇಲ್ಕಂಡ ಆಸಾಮಿಯನ್ನು ಪತ್ತೆಮಾಡಿ ನನ್ನ ಹಣವನ್ನು ನನಗೆ ವಾಪಸ್ಸು ಕೊಡಿಸಬೇಕೆಂತ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 06/2021 ಕಲಂ. 279,336 ಐ.ಪಿ.ಸಿ 134 ಐ.ಎಂ.ವಿ ಆಕ್ಟ್:-

     ದಿನಾಂಕ:-03/02/2021 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾಧಿದಾರರಾದ ಶ್ರೀ. ನೂತಲಪಾಟಿ ಉದಯ್ ಕುಮಾರ್ ಬಿನ್ ನೂತಲಪಾಟಿ ರಮೇಶ್ 20 ವರ್ಷ, ಆದಿ ದ್ರಾವಿಡ ಜನಾಂಗ, ವಿದ್ಯಾರ್ಥಿ, ಫ್ಲಾಟ್ ನಂ-03, ವಾರ್ಡ್ ನಂ-22, ಕಪ್ಪಗಲ್ ರಸ್ತೆ, ಸಮೃದ್ಧಿ ಲೇಔಟ್, ಬಳ್ಳಾರಿ ಟೌನ್ ಮತ್ತು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಾನು ಮತ್ತು ತಮ್ಮ ಸಂಬಂಧಿ ಶ್ರೀ.ಅಮೃತ್ ಕುಮಾರ್ ಎಸ್ ಬಿನ್ ಹೆಚ್.ಶೇಖಪ್ಪ 30 ವರ್ಷ, ಆದಿ ಕರ್ನಾಟಕ ಜನಾಂಗ, MIG/2 107, ನೇತಾಜಿ ನಗರ,  KHB ಕಾಲೋನಿ, ಬಳ್ಳಾರಿ ಟೌನ್ ಮತ್ತು ತಾಲ್ಲೂಕು ಹಾಗೂ ತಮ್ಮ ಮಾವ ಶ್ರೀ. ಸಂತೋಷ್ ಕುಮಾರ್ ಬಿನ್ ರಾಮು ಬಿ 38 ವರ್ಷ, ದ್ವಿತೀಯ ದರ್ಜೆ ಸಹಾಯಕರು, ಫ್ಲಾಟ್ ನಂ-03, ವಾರ್ಡ್ ನಂ-22, ಕಪ್ಪಗಲ್ ರಸ್ತೆ, ಸಮೃದ್ಧಿ ಲೇಔಟ್, ಬಳ್ಳಾರಿ ಟೌನ್ ಮತ್ತು ತಾಲ್ಲೂಕು ರವರೊಂದಿಗೆ ತಮ್ಮ ಅಕ್ಕನ ಬಾಬತ್ತು KA-34-N-1936 ರ ಸ್ವಿಫ್ಟ್ ಕಾರಿನಲ್ಲಿ ತಮ್ಮ ಮಾವ ಶ್ರೀ. ಸಂತೋಷ್ ಕುಮಾರ್ ರವರಿಗೆ ಆರೋಗ್ಯ ಸರಿ ಇಲ್ಲದೇ ಇರುವ ಕಾರಣ ಅವರನ್ನು ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ಸೇರಿಸಲು ಬಳ್ಳಾರಿಯಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಹೋಗಲು ದಿನಾಂಕ:-03/02/2021 ರಂದು ಬೆಳಿಗ್ಗೆ ಸುಮಾರು 10-30 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಬಾಗೇಪಲ್ಲಿ - ಬೆಂಗಳೂರು ಎನ್.ಎಚ್-44 ಹೈವೇ ರಸ್ತೆಯ ಹೊನ್ನೇನಹಳ್ಳಿ ಗೇಟ್ ಬಳಿಯ ಯೂ-ಟರ್ನ ಬಳಿ ಹೋಗುತ್ತಿದ್ದಾಗ ಯೂ ಟರ್ನ್ ಬಳಿ AP-02-Z-0569 ರ APSRTC ರ ಬಸ್ ಚಾಲಕ ರಸ್ತೆಯ ಎಡಭಾಗದಲ್ಲಿದ್ದ ಹೋಟೇಲ್ ಕಡೆಯಿಂದ ಬಾಗೇಪಲ್ಲಿ ಕಡೆಗೆ ಹೋಗಲು ಯೂ-ಟರ್ನ್ ಮಾಡುತ್ತಿದ್ದರಿಂದ ತಾನು ಚಾಲನೆಯನ್ನು ಮಾಡುತ್ತಿದ್ದ ತಮ್ಮ ಕಾರನ್ನು ನಿಲ್ಲಿಸಿದ್ದಾಗ ಅದೇ ಸಮಯಕ್ಕೆ ಹಿಂದಿನಿಂದ ಬಾಗೇಪಲ್ಲಿ ಕಡೆಯಿಂದ ಬಂದ KA-43-A-2252 ರ ಲಾರಿ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದಚಾಲನೆ ಮಾಡಿಕೊಂಡು ಬಂದು ತಮ್ಮ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆಸಿ ನಂತರ ಯೂ ಟರ್ನ್ ಮಾಡುತ್ತಿದ್ದ AP-02-Z-0569 ರ APSRTC ರ ಬಸ್ ನ ಬಲಭಾಗದ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತಮ್ಮ ಕಾರಿನ ಬಲಭಾಗದ ಎರಡೂ ಡೋರ್ಗಳು ಹಾಗೂ ಬಸ್ಸಿನ ಬಲಭಾಗದ ಹಿಂಭಾಗದ ಬಳಿ ಹಾಗೂ ಲಾರಿಯ ಮುಂಭಾಗ ಜಕಂಗೊಂಡಿದ್ದು, ಯಾರಿಗೂ ಸಹಾ ಗಾಯಗಳಾಗಿರುವುದಿಲ್ಲ ಸದರಿ ಅಪಘಾತ ಪಡಿಸಿದ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು, ಸದರಿ ಅಪಘಾತಕ್ಕೆ ಕಾರಣನಾದ KA-43-A-2252 ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಿಕೊಂಡಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 11/2021 ಕಲಂ. 143,147,148,323,324,504,506,149 ಐ.ಪಿ.ಸಿ:-

     ದಿನಾಂಕ 02/02/2021 ರಂದು ಠಾಣಾ ಸಿಬ್ಬಂಧಿ ಹೆಚ್.ಸಿ-119 ರವರು ಶಿಡ್ಲಘಟ್ಟ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಶ್ರೀ ಆನಂದ ಬಿನ್ ನರಸಿಂಹಪ್ಪ, 30 ವರ್ಷ, ನಾಯಕರು, ಕೂಲಿ ಕೆಲಸ, ಇರಗಪ್ಪನಹಳ್ಳಿ ಗ್ರಾಮರವರ ಹೇಳಿಕೆನ್ನು ಪಡೆದು ತಂದು ಹಾಜರುಪಡಿಸಿದ್ದರ  ಸಾರಾಂಶವೇನೆಂದರೆ ತಾನು ನರೇಗ ಯೋಜನಯ ಅಡಿ ಚರಂಡಿ ಕೆಲಸ ಮಾಡಿಸುವಾಗ ಒಂದು ದೊಡ್ಡ ಕಲ್ಲು ಅಡ್ಡ ಬರಲಾಗಿ  ಅದನ್ನು ಜೆ.ಸಿ.ಬಿ ಯಿಂದ ಕಿತ್ತು ಪಕ್ಕದ ಜಮೀನಿನ ವೆಂಕಟೇಶ ಬಿನ್ ಚಿಕ್ಕ ವೆಂಕಟರಾಯಪ್ಪ ರವರ ಜಮೀನಿನಲ್ಲಿ ಹಾಕಲಾಗಿ ವೆಂಕಟೇಶ ರವರು ಬಂದು ತನ್ನ ಅಣ್ಣನಾದ ಮೂರ್ತಿರವರನ್ನು ಏಕೆ ಕಲ್ಲನ್ನು ನಮ್ಮ ಜಮೀನಿನಲ್ಲಿ ಹಾಕಿದ್ದು ಎಂದು ಕೇಳಲಾಗಿ  ಮೂರ್ತಿರವರ ಕಲ್ಲನ್ನು ಎತ್ತಿ ಹಾಕುತ್ತೇವೆಂದು ತಿಳಿಸಿದ್ದು, ತಮ್ಮೊಂದಿಗೆ ನವಾಬ್ ಬಿನ್ ಇಮಾಮ್ ಸಾಬಿ ಇದ್ದು, ದಿನಾಂಕ 01/02/2021 ರಂದು ಸಂಜೆ ಸುಮಾರು 7.30 ಗಂಟೆಯ ಸಮಯದಲ್ಲಿ ನವಾಬ್ ರವರು ಮನೆಗೆ ಹೋಗಿದ್ದು, ನಂತರ ಸಂಜೆ ಸುಮಾರು 7.45 ಗಂಟೆ ಸಮಯದಲ್ಲಿ ನವಾಬ್ ರವರು ತನ್ನನ್ನು ಮತ್ತು, ತನ್ನ ಅಣ್ಣ ಮೂರ್ತಿ ಹಾಗೂ ತನ್ನ ಮತ್ತೊಬ್ಬ ಅಣ್ಣ ಡಿ.ನರಸಿಂಹಮೂರ್ತಿ ರವರುಗಳನ್ನು ಅವರ ಮನೆಯ ಬಳಿ ಕರೆಸಿಕೊಂಡು ನನ್ನನ್ನು ಹಾಗೂ ನಿಮ್ಮನ್ನು ವೆಂಕಟೇಶ  ಕೆಟ್ಟದಾಗಿ ಬೈದು ಮತ್ತು ನರೇಗ ಕೆಲಸ ಮಾಡಿದರೆ ಸಾಯಿಸುವುದಾಗ ಪ್ರಾಣ ಬೆದರಿಕೆ ಹಾಕಿರದ್ದಾಗಿ ತಿಳಿಸಿದಾಗ ವೆಂಕಟೇಶ ಮತ್ತು ಅವರ ಜನಾಂಗದ ನಾರಾಯಣಸ್ವಾಮಿ ಬಿನ್ ಕೃಷ್ಣಪ್ಪ, ದೇವರಾಜ ಬಿನ್ ಮುನಿವೆಂಕಟಪ್ಪ, ವೆಂಕಟೇಶ ಬಿನ್ ಚಿಕ್ಕ ವೆಂಕಟರಾಯಪ್ಪ, ವೆಂಕಟರಾಯಪ್ಪ ಬಿನ್ ಚಿಕ್ಕ ವೆಂಕಟರಾಯಪ್ಪ, ನಾಗೇಶ ಬಿನ್ ಚಿಕ್ಕ ವೆಂಕಟರಾಯಪ್ಪ, ಗೋವಿಂದಪ್ಪ ಬಿನ್ ಚಿಕ್ಕ ವೆಂಕಟರಾಯಪ್ಪ,  ಮುನಿವೆಂಕಟಪ್ಪ ಬಿನ್ ಚಿಕ್ಕ ವೆಂಕಟರಾಯಪ್ಪ, ನಾಗರತ್ನಮ್ಮ ಕೋಂ ವೆಂಕಟೇಶ, ವೆಂಕಟಲಕ್ಷ್ಮಮ್ಮ ಕೋಂ ಮುನಿವೆಂಕಟಪ್ಪರವರುಗಳು ಗುಂಪು ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆ-ಮಚ್ಚು ಹಿಡಿದುಕೊಂಡು ತಮ್ಮಗಳನ್ನು ಕೆಟ್ಟದಾಗಿ ಬೈಯುತ್ತಾ, ಅವರುಗಳ ಪೈಕಿ ನಾರಾಯಣಸ್ವಾಮಿ ತನ್ನ ಕೈಯಲ್ಲಿದ್ದ ಮಚ್ಚಿನಿಂದ ತನ್ನ ತಲೆಗೆ ಹೊಡೆದು ರಕ್ತ ಗಾಯಪಡಿಸಿದ್ದು, ದೇವರಾಜ ಮತ್ತು ನರಸಿಂಹಮೂರ್ತಿ ವೆಂಕಟೇಶ ರವರು ತನ್ನ ಅಣ್ಣ ನರಸಿಂಹಮೂರ್ತಿರವರ ಕೈಗಳನ್ನು ಹಿಡಿದುಕೊಂಡಿದ್ದು, ವೆಂಕಟರಾಯಪ್ಪ ತನ್ನ ಬಾಯಿಯಿಂದ ನರಸಿಂಹಮೂರ್ತಿರವರ ಬಲ ಕಾಲಿನ ತೊಡೆಗೆ ಕಚ್ಚಿ ನೋವುಂಟುಮಾಡಿದ್ದು, ನಾಗೇಶ ಮತ್ತು ಗೋವಿಂದಪ್ಪರವರು ಮೂರ್ತಿ @ ನರಸಿಂಹ ಮೂರ್ತಿರವರನ್ನು ಕೈಗಳಿಂದ ಹೊಡೆದು ನೋವುಂಟು ಮಾಡಿದ್ದು,  ಮುನಿವೆಂಕಟಪ್ಪ, ನಾಗರತ್ನಮ್ಮ, ವೆಂಕಟಲಕ್ಷ್ಮಮ್ಮ ಹಾಗೂ ವೆಂಕಟೇಶ ರವರುಗಳು ಇವರಮ್ಮನ್ನೇ ಕ್ಯಾಯಾ, ಸೂಳೆ ನನ್ ಮಕ್ಕಳನ್ನು ಸಾಯಿಸಿಬಿಡಿ ಎಂದು ಪ್ರಾಣ ಬೆದರಿಕೆ ಹಾಕಿದ್ದು, ಮೇಲ್ಕಂಡವರ ಮೇಲೆ ಸೂಕ್ತ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 12/2021 ಕಲಂ. 143,147,323,324,504,506,149 ಐ.ಪಿ.ಸಿ:-

     ದಿನಾಂಕ 02/02/2021 ರಂದು ಠಾಣಾ ಸಿಬ್ಬಂಧಿ ಹೆಚ್.ಸಿ-53 ರವರು ಶಿಡ್ಲಘಟ್ಟ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ನಾಗರತ್ನಮ್ಮ ಕೋಂ ವೆಂಕಟೇಶರವರ ಹೇಳಿಕೆನ್ನು ಪಡೆದು ತಂದು ಹಾಜರುಪಡಿಸಿದ್ದರ ಹೇಳಿಕೆಯ ಸಾರಾಂಶವೇನೆಂದರೆ ತಮ್ಮ ಗ್ರಾಮದ ನಾಯಕರ ಜನಾಂಗ ಮೂರ್ತಿ ಬಿನ್ ಆದೆಪ್ಪರವರು ತಮ್ಮ ಗ್ರಾಮದಲ್ಲಿ ಚರಂಡಿಗಳನ್ನು ಮಾಡುತ್ತಿದ್ದು, ಈ ವಿಚಾರವಾಗಿ ತನ್ನ ಗಂಡ ವೆಂಕಟೇಶರವರು ಮೊನ್ನೆ ದಿನ  ಮೂರ್ತಿರವರನ್ನು ತಮ್ಮ ಮನೆಯ ಬಳಿ ಚರಂಡಿಯನ್ನು ಮಾಡಿಸಲು ಕೇಳಿದ್ದು, ತನು ಮಾಡಿಸುವುದಿಲ್ಲ, ಮಾಡಿಸದಿದ್ದರೆ ಹೊಡೆಯುತ್ತೀಯಾ ಎಂದು ಹೇಳಿ ಕಳುಹಿಸಿದ್ದು, ತನ್ನ ಗಂಡ ಚರಂಡಿ ಮಾಡಿಸು ಎನ್ನುವ ವಿಚಾರ ಮನಸ್ಸಿನಲ್ಲಿಟ್ಟಿಕೊಂಡು ದಿನಾಂಕ 01/02/2021 ರಂದು ಸಂಜೆ ಸುಮಾರು 7.00 ಗಂಟೆಯಲ್ಲಿ ತನ್ನ ಗಂಡ ಮನೆಯ ಬಳಿ ಇದ್ದಾಗ ಮೂರ್ತಿರವರು ಏನೋ ಲೋಫರ್ ನನ್ ಮಗನೆ ನಾನು ಚರಂಡಿ ಮಾಡಿಸಿಲ್ಲವೆಂದರೆ ಹೊಡೆಯುತ್ತೀಯಾ, ಈಗ ಹೊಡಿ ಬಾ ಎಂದು ಗಲಾಟೆ ಮಾಡಿದಾಗ ತಾನು ಹೋಗಿ ಏಕೆ ಗಲಾಟೆ ಮಾಡುತ್ತಿಯಾ ಎಂದು ಕೇಳಲಾಗಿ ಮೂರ್ತಿ ರವರ ಕಡೆಯವರಾದ ನಾಯಕರ ಜನಾಂಗದ ರಾಧ, ಮುನಿರಾಜು ಬಿನ್ ನರಸಿಂಹಪ್ಪ, ಬುಜ್ಜಿ ಬಿನ್ ನರಸಿಂಹಮೂರ್ತಿ,  ಸಂದೀಪ ಬಿನ್ ಪೆದ್ದಣ್ಣ, ನಂದ ಬಿನ್ ನರಸಿಂಹಪ್ಪ, ನರಸಿಂಹಮೂರ್ತಿ ಬಿನ್ ದೊಡ್ಡನರಸಿಂಹಪ್ಪ ಹಾಗೂ ಆದಿ ಕರ್ನಾಟಕ ಜನಾಂಗದ ವೆಂಟಕರೆಡ್ಡಿ @ ವೆಂಟಕಸ್ವಾಮಿ ಬಿನ್ ವೆಂಕಟರಾಯಪ್ಪ, ರಾಜು ಬಿನ್ ವೆಂಕಟರಾಯಪ್ಪ, ಗೌತಮ್ ಬಿನ್ ಅಶ್ವತ್ಥ್ಪ ರವರುಗಳು ಬಂದು ಈ ನನ್ನ ಮಗನಂದು ಜಾಸ್ತಿಯಾಯ್ತು ಊರಿನಲ್ಲಿ  ಎಂದು ಹೇಳಿ ಮೂರ್ತಿ, ಮುನಿರಾಜು, ಬುಜ್ಜಿ, ವೆಂಕಟರೆಡ್ಡಿ ಹಾಗೂ ಆನಂದರವರು ತನ್ನ ಗಂಡನನ್ನು ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದ್ದು, ತಾನು ಅಡ್ಡ ಹೋಗಲಾಗಿ ಮೂರ್ತಿ, ಆನಂದ, ಬುಜ್ಜಿ, ಮುನಿರಾಜ ಕೈಗಳಿಂದ ಮೈ ಮೇಲೆ ಹೊಡೆದು ಕಾಲಿನಿಂದ ಒದ್ದು ನೋವುಂಟು ಮಾಡಿ, ಮೂರ್ತಿರವರು ಅಲ್ಲಿ ಬಿದ್ದಿದ್ದ ಕಲ್ಲಿನಿಂದ ಎದೆಗೆ ಹೊಡೆದು ನೋವುಂಟು ಮಾಡಿದ್ದು, ಸಂದೀಪ ಮತ್ತು ನರಸಿಂಹ ಮೂರ್ತಿರವರು ಕೆಟ್ಟ-ಕೆಟ ಮಾತುಗಳಿಂದ ಬೈದು ವೆಂಕಟರೆಡ್ಡಿ, ರಾಜ, ಗೌತಮ್ ರವರು ಇವರನ್ನು ಸಾಯಿಸಿಬಿಡಿ ಎಂದು ಪ್ರಾಣ ಬೆದರಿಕೆ ಹಾಕಿದ್ದು ಮೇಲ್ಕಂಡವರ ಮೇಲೆ ಸೂಕ್ತ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 13/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ: 02/02/2020 ರಂದು ಶಿಡ್ಲಘಟ್ಟ ತಾಲ್ಲೂಕು, ಕ್ಯಾಸಗೆರೆ ಗ್ರಾಮದ ವಾಸಿಯಾದ ಶ್ರೀ. ನರಸಿಂಹಪ್ಪ ಬಿನ್ ಲೇಟ್ ಲಕ್ಷ್ಮಪ್ಪ, 50 ವರ್ಷ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ವ್ಯವಸಾಯ ಮತ್ತು ವಾಟರ್ ಮೆನ್ ಕೆಲಸ ಮಾಡಿಕೊಂಡಿದ್ದು ನನಗೆ ಸುಮಾರು 28 ವರ್ಷದ ವನಜ( ಮಾನಸಿಕ ಅಸ್ವಸ್ಥೆ) ಹಾಗು 25 ವರ್ಷದ   ಸಂತೋಷ್ ಎಂಬ ಮಕ್ಕಳಿದ್ದು ಸಂತೋಷ್ ರವರಿಗೆ ಮದುವೆಯಾಗಿ 3 ವರ್ಷದ ಮಧುನಿತ ಎಂಬ ಮಗಳಿರುತ್ತಾಳೆ. ತನ್ನ ಮಗ ಚಿಂತಾಮಣಿ ನಗರದ ಗ್ರೇಟ್ ಇಂಡಿಯಾ ಎಲೆಕ್ಟ್ರಾನಿಕ್ಸ್ ನಲ್ಲಿ ಚಾಲಕನ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ: 11/01/2021 ರಂದು ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ತನ್ನ ಮಗನಾದ ಸಂತೋಷ್ ಗಂಜಿಗುಂಟೆ ಕಡೆಯಿಂದ ವೇಮಗಲ್ ರಸ್ತೆಯಲ್ಲಿ ತನ್ನ ಮಗನ ಬಾಬತ್ತು KA-51-HK-7418 ಆಕ್ಟೀವಾ ಹೋಂಡಾ ದ್ವಿಚಕ್ರವಾಹನದಲ್ಲಿ ತಮ್ಮ ಊರಿಗೆ ಬರುತ್ತಿರುವಾಗ ತಮ್ಮ ಗ್ರಾಮದ ಕೆ.ಆರ್ ಮದ್ದಿರೆಡ್ಡಿ ರವರ ಸಮಾಧಿಯ ಹತ್ತಿರ ಅದೇ ಮಾರ್ಗದಲ್ಲಿ ಹಿಂಬದಿಯಿಂದ ಬರುತ್ತಿದ್ದ KA-05-P-7801 ಮಾರುತಿ ಓಮಿನಿ ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಆತನ ಕಾರನ್ನು ಎಡಭಾಗಕ್ಕೆ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾರೆ. ಈ ಸಮಯದಲ್ಲಿ ಅದೇ ರಸ್ತೆಯಲ್ಲಿ  ಬರುತ್ತಿದ್ದ ಚಿಕ್ಕಬಂದರಘಟ್ಟ ಗ್ರಾಮದ ವಾಸಿಯಾದ ನಾಗರಾಜ ಬಿನ್ ಲೇಟ್ ಅಂಕಪ್ಪರವರು ನೋಡಿ ಬಂದು ವಿಷಯ ತಿಳಿಸಿರುತ್ತಾರೆ. ನಂತರ ತಾನು ಸದರೀ ಸ್ಥಳಕ್ಕೆ ಹೋಗಿ 108 ಅಂಬ್ಯುಲೆನ್ಸ್ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು ವೈಧ್ಯರು ತನ್ನ ಮಗನಿಗೆ ಬಲಕಾಲು, ಬಲಕೈ, ಮತ್ತು ಬಲ ಭಾಗದ ಸೊಂಟಕ್ಕೆ ಶಸ್ತ್ರ ಚಿಕಿತ್ಸೆ ಮಾಡಿರುತ್ತಾರೆ. ತನ್ನ ಮಗ ಇನ್ನೂ ಒಳರೋಗಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಆರೈಕೆ ನೋಡಿಕೊಳ್ಳುತ್ತಿದ್ದ ಕಾರಣ ತಡವಾಗಿ ದೂರನ್ನು ನೀಡುತ್ತಿದ್ದು ತನ್ನ ಮಗನಿಗೆ ಅಪಘಾತಪಡಿಸಿದ KA-05-P-7801 ಮಾರುತಿ ಓಮಿನಿ ಕಾರಿನ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 21/2021 ಕಲಂ. 4,6 EXPLOSIVE SUBSTANCES ACT, 1908:-

     ದಿನಾಂಕ:02-02-2021 ರಂದು ಸಂಜೆ:7-30 ಗಂಟೆಗೆ ಪಿರ್ಯಾದಿದಾರರಾದ ಮಂಜುನಾಥ.ಎಂ.ಎನ್. ಪೊಲೀಸ್ ಇನ್ಸ್ ಪೇಕ್ಟರ್  ಗುಡಿಬಂಡೆ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ: ಈ ದಿನ ದಿನಾಂಕ:02-02-2021 ರಂದು ಸಂಜೆ:4-30 ಗಂಟೆಯಲ್ಲಿ ತಾವು ಮತ್ತು ಸಿ.ಹೆಚ್.ಸಿ-102 ಆನಂದ ರವರು ಪೆರೇಸಂದ್ರ ಕಡೆ ಗಸ್ತುನಲ್ಲಿದ್ದಾಗ ತಮಗೆ  ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಹೋಬಳಿ ಆದೇಗಾರಹಳ್ಳಿ ಗ್ರಾಮದ ಪಕ್ಕದಲ್ಲಿರುವ ರಮೇಶ್ ಎಂಬುವರ ಜಮೀನಿನಲ್ಲಿ ಒಂದು ಶೆಡ್ ನಲ್ಲಿ ಯಾರೋ ಒಬ್ಬ ಆಸಾಮಿ ಸ್ಪೋಟಕಕ್ಕೆ ಬಳುಸುವ ವಸ್ತುಗಳನ್ನು ಯಾವುದೇ ಪರವಾನಿಗೆ  ಇಲ್ಲದೇ ಸಂಗ್ರಹಿಸಿರವುದಾಗಿ ಮಾಹಿತಿ ಬಂದಿದ್ದು ಕೂಡಲೇ ಜೊತೆಯಲ್ಲಿದ್ದ  ಸಿ.ಹೆಚ್.ಸಿ-102 ಆನಂದ ರವರನ್ನು ಹಾಗೂ ಪೆರೇಸಂದ್ರ ಕ್ರಾಸ್ ನಲ್ಲಿ ಪಂಚರನ್ನು ಬರಮಾಡಿಕೊಂಡು ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1888 ರಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಅದೇಗಾರಹಳ್ಳಿ ಗ್ರಾಮಕ್ಕೆ ಬಂದು ಅದೇಗಾರಹಳ್ಳಿ ಗ್ರಾಮದಿಂದ ಉತ್ತರಕ್ಕೆ ಇರುವ ಅದೇಗಾರಹಳ್ಳಿ ಗ್ರಾಮದ ರಮೇಶ್ ಎಂಬುವರ ಜಮೀನಿನಲ್ಲಿರುವ ಶೆಡ್ ಬಳಿ ಸಂಜೆ:5-00 ಗಂಟೆಗೆ ಹೋಗಿ ಪಂಚರ ಸಮಕ್ಷಮ ಶೆಡ್ ಒಳಗೆ ಹೋಗಿ ನೋಡಲಾಗಿ ಅಲ್ಲಿ ಒಬ್ಬ ಆಸಾಮಿ ಇದ್ದು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮಣಿಕಂಠನ್.ಆರ್. ಬಿನ್ ರಾಜೇಂದ್ರನ್ 31 ವರ್ಷ ಗೌಂಡರ್ ಜನಾಂಗ ಬಂಡೆ ಕೆಲಸ ಸ್ವಂತಃ ಸ್ಥಳ ತಾರಮಂಗಲಂ ಗ್ರಾಮ  ವಾಮಲೂರು ತಾಲ್ಲೂಕು  ಸೇಲಂ ಜಿಲ್ಲೆ ತಮಿಳುನಾಡು ರಾಜ್ಯ ಹಾಲಿ ವಾಸ ಮುತ್ತುಕದಹಳ್ಳಿ ಗ್ರಾಮ ಮಂಡಿಕಲ್ ಹೋಬಳಿ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು ನಂತರ ಆತನ ಶೆಡ್ ನಲ್ಲಿ ಇದ್ದ ಒಂದು ಬಿಳಿ ಚೀಲದಲ್ಲಿದ್ದ ವಸ್ತುಗಳನ್ನು  ತೆಗೆದು ತೋರಿಸುವಂತೆ ಕೇಳಲಾಗಿ ಆತನು ಬಿಳಿ ಚೀಲದಲ್ಲಿದ್ದ ವಸ್ತುಗಳನ್ನು ಹೊರಗೆ ತಗೆದು ಇಟ್ಟು ಅವುಗಳ ಬಗ್ಗೆ ಆತನನ್ನು ಕೇಳಲಾಗಿ ಆತ ಇವು ಕಲ್ಲಿನ ಕ್ವಾರಿಗಳಲ್ಲಿ ಸ್ಪೋಟಕಕ್ಕೆ ಬಳುಸುವ ವಸ್ತುಗಳು ಎಂದು ಹೇಳಿದ್ದು ಅವುಗಳನ್ನು ಪರಿಶೀಲನೆ ಮಾಡಲಾಗಿ 1) 25 ಮೀಟರ್ ಉದ್ದದ ಅವುಗಳ ಸ್ಟಿಕರ್ ಮೇಲೆ  APEXCEL 25MS TLOD 25 MTRS  ಎಂದು ಬರೆದಿರುವ 25 DTH ಪೈಪುಗಳಿರುತ್ತೆ 2) 7 ಮೀಟರ್ ಉದ್ದದ ಅವುಗಳ ಸ್ಟಿಕರ್ ಮೇಲೆ  APEXCEL 25/250 MS APEPL 7 MTRS ಎಂದು ಬರೆದಿರುವ 30 DTH ಪೈಪುಗಳಿರುತ್ತೆ  3) 3 ಮೀಟರ್ ಉದ್ದದ ಅವುಗಳ ಸ್ಟಿಕರ್ ಮೇಲೆ  APEXCEL 25 MS TLOD 3 MTRS ಎಂದು ಬರೆದಿರುವ 20 DTH ಪೈಪುಗಳಿರುತ್ತೆ  4) INDRA EXEL DUEL DET 25/250 MS 23 ಎಂದು ಸ್ಟಿಕರ್ ಮೇಲೆ ಬರೆದಿರುವ 3 DTH  ಪೈಪುಗಳಿರುತ್ತೆ    5) 30 ಮೀಟರ್ ಉದ್ದದ ಅವುಗಳ ಸ್ಟಿಕರ್ ಮೇಲೆ  250 MS DTHOD  APEXCEL 250 MS ಮತ್ತು  APEXCEL 25 MS TLOD APEXCEL ಎಂದು ಬರೆದಿರುವ 1 DTH ಪೈಪುಗಳಿರುತ್ತೆ 6) ಬಿಳಿ ಬಣ್ಣದ ಒಂದು ಬಂಡಲ್ ವೈರು 7) ಹಸಿರು ಬಣ್ಣದ ಒಂದು ಬಂಡಲ್ ವೈರ್ ಇರುತ್ತೆ ನಂತರ ಈ ಸ್ಪೋಟಕಕ್ಕೆ ಬಳಸುವ ವಸ್ತುಗಳನ್ನು ಸಂಗ್ರಹಿಸಿಡಲು  ಪರವಾನಿಗೆಯನ್ನು  ಕೇಳಲಾಗಿ ಪರವಾನಿಗೆ  ಇರುವುದಿಲ್ಲ ಎಂದು  ಮೇಲ್ಕಂಡ ವ್ಯಕ್ತಿ ಹೇಳಿದ್ದು ನಂತರ ಸ್ಪೋಟಕಕ್ಕೆ ಉಪಯೋಗಿಸುವ ಮೇಲ್ಕಂಡ ವಸ್ತುಗಳನ್ನು ಯಾವುದೇ ಪರವಾನಿಗೆ  ಇಲ್ಲದೇ ಸಂಗ್ರಹಿಸಿದ್ದು ಸದರಿ ಮೇಲ್ಕಂಡ ವಸ್ತುಗಳನ್ನು ಗಂಗೋಜೀರಾವ್ ಎಂಬುವರು ತನಗೆ ನೀಡಿರವುದಾಗಿ ತಿಳಿಸಿರುವುದಾಗಿ ನಂತರ ಸ್ಪೋಟಕಕ್ಕೆ ಬಳಸುವ ಸದರಿ ವಸ್ತುಗಳನ್ನು ಯಾವುದೇ ಪರವಾನಿಗೆಯನ್ನು ಪಡೆಯದೇ  ಕಾನೂನು ಬಾಹಿರವಾಗಿ ಶೇಖರಿಸಿ ಇಟ್ಟಿದ್ದರಿಂದ ಸ್ಪೋಟಕಕ್ಕೆ ಉಪಯೋಗಿಸುವ ಮೇಲ್ಕಂಡ ವಸ್ತುಗಳನ್ನು ಸಂಜೆ:5-00 ಗಂಟೆಯಿಂದ ಸಂಜೆ:6-30 ಗಂಟೆಯವರಿಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಯಾವುದೇ ಅನುಮತಿಯನ್ನು ಪಡೆಯದೇ ಕಾನೂನು ಬಾಹಿರವಾಗಿ ಸ್ಪೋಟಕಕ್ಕೆ ಉಪಯೋಗಿಸುವ ಮೇಲ್ಕಂಡ ವಸ್ತುಗಳನ್ನು ಸಂಗ್ರಹಣೆ ಮಾಡಿದ್ದ ಮಣಿಕಂಠನ್.ಆರ್. ಬಿನ್ ರಾಜೇಂದ್ರನ್ ರವರನ್ನು ವಶಕ್ಕೆ ಪಡೆದುಕೊಂಡು ಪಂಚನಾಮೆ ಮತ್ತು ಮಾಲುಗಳು ಹಾಗೂ ಆರೋಪಿಯೊಂದಿಗೆ ಈ ದಿನ ಸಂಜೆ:7-00 ಗಂಟೆಗೆ ಠಾಣೆಗೆ ವಾಪಸ್ಸಾಗಿ ವರದಿಯನ್ನು ಸಿದ್ದಪಡಿಸಿ ಸಂಜೆ:7-30 ಗಂಟೆಗೆ ದೂರನ್ನು  ನೀಡುತ್ತಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.15/2021 ಕಲಂ. 447,435,506,34 ಐ.ಪಿ.ಸಿ:-

     ದಿನಾಂಕ 02/02/2021 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿದಾರರಾದ ಎಂ.ವಿ. ಪ್ರಭಾಕರ ಬಿನ್ ಲೇಟ್ ವೆಂಕಟರೆಡ್ಡಿ, 30 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಮಿಟ್ಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ: ತಮ್ಮ ತಾತನಾದ ಲೇಟ್ ಬೈಯ್ಯನ್ನ ರವರಿಗೆ ಮೂರು ಜನ ಮಕ್ಕಳಿದ್ದು, ಮೊದಲನೇ ತಮ್ಮ ತಂದೆ ವೆಂಕಟರೆಡ್ಡಿ ಮೃತರಾಗಿದ್ದು, 2 ನೇ ಕೋನಪ್ಪರೆಡ್ಡಿ, 3 ನೇ ಸುಬ್ಬಿರೆಡ್ಡಿರವರು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತಾರೆ. ತಮ್ಮ ಚಿಕ್ಕಪ್ಪ ಕೋನಪ್ಪರೆಡ್ಡಿ  ಮಗಳಾದ ಸಮತಾ ರವರು ಕೃಷ್ಣರಾಜಪುರ ಭಾರತರತ್ನ ಏಜುಕೇಷನಲ್ ಟ್ರಸ್ಟ್ ನಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಆ ಅಪ್ರಾಪ್ತ ವಯಸ್ಸಿನ ಸಮತಾಳನ್ನು ತಮ್ಮ ಪಕ್ಕದ ಗ್ರಾಮದ ವಾಸಿಯಾದ ಅಶೋಕ ಬಿನ್ ಸುದರ್ಶನ್ ರವರು ಹಿಂಬಾಲಿಸಿ ಪ್ರೀತಿಸುವಂತೆ ಬೆದರಿಕೆ ಹಾಕಿ ಕಿರುಕುಳ ನೀಡಿ ಪೇಸ್ಬುಕ್ ಮತ್ತು ವ್ಯಾಟ್ಸ್ ಆಫ್ ಗಳಲ್ಲಿ ಸಮತಾಳ ಹೆಸರು ಮತ್ತು ಪೋಟೋ ಹಾಕಿಕೊಂಡು ತೊಂದರೆ ನೀಡುತ್ತಿದ್ದು, ಈ ಬಗ್ಗೆ ದಿನಾಂಕ 01/02/2021 ರಂದು ತಾನು ಲಿಖಿತ ದೂರು ನೀಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆನು. ಈ ವಿಚಾರವಾಗಿ ದ್ವೇಷ ಬೆಳಿಸಿಕೊಂಡು ದಿನಾಂಕ 01/02/2021 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಸದರಿ ಅಶೋಕ ಬಿನ್ ಸುದರ್ಶನ್ ಮತ್ತು ಅವರ ಕಡೇಯವರು ತಮ್ಮ ಚಿಕ್ಕಪ್ಪ ಕೋನಪ್ಪರೆಡ್ಡಿ ಬಾಬತ್ತು ಮಿಟ್ಟಹಳ್ಳಿಯಿಂದ ಕೆಂಚಾರ್ಲಹಳ್ಳಿಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಗೋನೆನಹಳ್ಳಿ ಸರ್ವೆ ನಂ146/3 ರ ಜಮೀನಿನಲ್ಲಿರುವ  ಶೆಡ್ ಬಳಿ ಅಕ್ರಮ ಪ್ರವೇಶ ಮಾಡಿ ಅಲ್ಲಿ  ಇಟ್ಟಿದ್ದ 8000 ಟಮೋಟೋ ಕೋಲು, 6 ಟ್ರಾಕ್ಟರ್ ಲೋಡ್ ನ ಹುಲ್ಲಿನ ಮೇದೆ, 3 ಲೋಡ್ ನಷ್ಠು ಕಡಲೇ ಗಿಡಕ್ಕೆ  ಬೆಂಕಿ ಹಚ್ಚಿ,  ಶೆಡ್ ನ ಬಾಗಿಲಿಗೆ ಸಿಮೇಎಣ್ಣೆ ಸುರಿದು ಬೆಂಕಿ ಹಚ್ಚಿ ಗೋಡೆ ಮೇಲೆ ಹುಡುಗಿ ವಿಚಾರವಾಗಿ ಬರಹಗಳನ್ನು ಬರೆದು ಕರಪತ್ರಗಳಲ್ಲಿ ತಾನು ಸಮತಾಳನ್ನು ಪ್ರೀತಿಸುತ್ತಿರುವುದಾಗಿ ತನ್ನನ್ನು ಹಿಡಿಯಲು ಬಂದರೆ ಇಬ್ಬರು-ಮೂವರನ್ನು ಸಾಯಿಸುವುದಾಗಿ ಬೆದರಿಕೆ ಪತ್ರಗಳನ್ನು  ಚೆಲ್ಲಿ ಬೆದರಿಕೆ ಹಾಕಿರುತ್ತಾನೆ. ಬೆಂಕಿ ಕಂಡ ಕೂಡಲೇ ತಾನು ಮತ್ತು ತಮ್ಮ ಗ್ರಾಮದ ಬಿ.ಮಂಜುನಾಥ, ವೆಂಕಟರವಣಪ್ಪ, ಸಿದ್ದಾರೆಡ್ಡಿ ಮತ್ತು ಇತರರು ಸ್ಥಳಕ್ಕೆ ಹೋದಾಗ ಅಲ್ಲಿದ್ದ ಅಶೋಕ ತಮ್ಮನ್ನು ನೋಡಿ ಕತ್ತಲಲ್ಲಿ ತಮಗೆ ಸಿಗದೇ ಓಡಿಹೋಗಿರುತ್ತಾನೆ. ನಂತರ ತಾವು ಬೆಂಕಿಯನ್ನು ನಂದಿಸಲು ಯತ್ನಿಸಿ ಸಾಧ್ಯವಾಗದೇ ಇರುವುದರಿಂದ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸಿದರೂ ಸಹ ಪೂರ್ತಿ ಸುಟ್ಟುಹೋಗಿರುತ್ತದೆ. ಇದರಿಂದ ತಮ್ಮ ಚಿಕ್ಕಪ್ಪನವರಿಗೆ ಸುಮಾರು 2.50 ಲಕ್ಷದಷ್ಠು ನಷ್ಠ ಸಂಭಂವಿಸಿರುತ್ತದೆ. ಆದ್ದರಿಂದ ಬೆಂಕಿ ಹಚ್ಚಿ ನಷ್ಠವನ್ನುಂಟುಮಾಡಿ ಕರಪತ್ರಗಳ ಮುಖಾಂತರ ಪ್ರಾಣಬೆದರಿಕೆ ಹಾಕಿದ ಅಶೋಕ ಮತ್ತು ಅವರ ಕಡೇಯವರ  ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಪಿರ್ಯಾದು.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.16/2021 ಕಲಂ. 323,504,506,34 ಐ.ಪಿ.ಸಿ& 3(1)(r),3(1)(s) The SC & ST (Prevention of Atrocities) Amendment Act 2015:-

     ದಿನಾಂಕ 02/02/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಎನ್.ಸುದರ್ಶನ್ ಬಿನ್ ಲೇಟ್ ನಂಜುಂಡಪ್ಪ, ಗೋನೇಪಲ್ಲಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಹೆಚ್ ಸಿ-216 ರವರು ಪಡೆದು ಠಾಣೆಯಲ್ಲಿ ಮಧ್ಯಾಹ್ನ 13-00 ಗಂಟೆಗೆ ಹಾಜರುಪಡಿಸಿದ್ದು, ಹೇಳಿಕೆಯ ಸಾರಾಂಶವೇನೆಂದರೆ: ದಿನಾಂಕ 01/02/2021 ರಂದು ರಾತ್ರಿ ಸುಮಾರು 11-50 ಗಂಟೆ ಸಮಯದಲ್ಲಿ ತಮ್ಮ ಮನೆಯಲ್ಲಿ ತಾನು ಮತ್ತು ತನ್ನ ಹೆಂಡತಿ ಮಲಗಿದ್ದಾಗ ಮನೆಯ ಮುಂದೆ ಜೋರಾಗಿ ಗಲಾಟೆ ಶಬ್ದ ಕೇಳಿ ಬಂದು ಬಾಗಿಲು ತೆರೆದಾಗ ಮಿಟ್ಟಹಳ್ಳಿ ಗ್ರಾಮದ ವಾಸಗಳಾದ ಎಂ.ಬಿ ಮಂಜುನಾಥ, ಸಿದ್ದಾರೆಡ್ಡಿ, ಪ್ರಭಾಕರ ರವರು ತನ್ನನ್ನು ಹಿಡಿದುಕೊಂಡು ಹೊರಗಡೆ ಎಳೆದುಕೊಂಡು ನಿನ್ನಮ್ಮನೇ ಕೇಯ್ಯಾ ನಿನ್ನಮ್ಮ ಜಾತಿನೇ ಕೇಯ್ಯಾ ವಡ್ಡಿ ನಾಕೊಡುಕುಲು ಪನಿಕಿರಾನೋಳ್ಳು”ಎಂದು ಅವಾಚ್ಯವಾಗಿ ಬೈದು ಜಾತಿನಿಂದನೆ ಮಾಡಿ ಮೂರು ಜನ ತಮ್ಮ ಕೈಗಳಿಂದ ಹೊಟ್ಟೆಯ ಮೇಲೆ ಗುದ್ದಿ, ಬೆನ್ನಿನ ಮೇಲೆ ತಲೆಯ ಮೇಲೆ ಜೋರಾಗಿ ಹೊಡೆದು ಹುಲ್ಲು ಬಣವೆಗೆ ನಿನ್ನ ಮಗನೇ ಬೆಂಕಿ ಇಟ್ಟು ಸುಟ್ಟಿರುವುದು ನಿಮ್ಮನ್ನು ಮತ್ತು ನಿನ್ನ ಮಗನನ್ನು ಪ್ರಾಣ ಸಹಿತ ಬಿಡುವುದಿಲ್ಲಾ ಎಂದು ಪ್ರಾಣ ಬೆದರಿಕೆ ಹಾಕಿದ್ದು, ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಹೇಳಿಕೆ ದೂರು.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.23/2021 ಕಲಂ. 4,4(1A),21,22,23(a1) MMDR (MINES AND MINERALS REGULATION OF DEVELOPMENT) ACT 1957 & 3,4 EXPLOSIVE SUBSTANCES ACT, 1908:-

     ದಿನಾಂಕ:02/02/2021 ರಂದು ಚಿಕ್ಕಬಳ್ಳಾಪುರ ಉಪ ವಿಭಾಗದ ಡಿವೈಎಸ್ ಪಿ ಮಾನ್ಯ ಕೆ ರವಿಶಂಕರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣೆಗೆ ಬೇಟಿ ನೀಡಲು ಕಛೇರಿ ಸಿಬ್ಬಂದಿಯಾದ ಹೆಚ್.ಸಿ 205 ರಮೇಶ್ ಪಿಸಿ 286 ಗೌತಮ್ ಹಾಗೂ ಜೀಪ್ ಚಾಲಕ ಎಪಿಸಿ 119 ಅಶೋಕ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ40-ಜಿ-0855 ರಲ್ಲಿ ಸಂಜೆ 4-30 ಗಂಟೆಗೆ ಮಂಚೇನಹಳ್ಳಿ ಗ್ರಾಮದಲ್ಲಿ ಬರುತ್ತಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ ಡಿ.ಪಾಳ್ಯ ಸಮೀಪ ಅನಗಟ್ಟನಹಳ್ಳಿ ಗ್ರಾಮದ ಪಕ್ಕದ ಗುಡ್ಡದಲ್ಲಿ ಯಾರೋ ಕೆಲವರು ಸ್ಪೋಟಕ ವಸ್ತುಗಳನ್ನು ಉಪಯೋಗಿಸಿ ಅಕ್ರಮವಾಗಿ ಗುಡ್ಡದಲ್ಲಿ ಸೈಜ್ ಕಲ್ಲುಗಳನ್ನು ವಿಂಗಡಿಸುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ನಾವು ಕೂಡಲೇ ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಮಿಣಕನಗುರ್ಕಿ ಮಾರ್ಗವಾಗಿ ಮೇಲ್ಕಂಡ ಸ್ಥಳವಾದ ಗೌರಿಬಿದನೂರು ತಾಲ್ಲೂಕಿನ ಡಿ.ಪಾಳ್ಯ ಹೋಬಳಿಯ ಡಿ.ಪಾಳ್ಯ ಗೇಟ್ ನಿಂದ ವದ್ದೇನಹಳ್ಳಿ ಕಡೆ ಹೋಗುವ ರಸ್ತೆಯಲ್ಲಿರುವ ಅನಗಟ್ಟನಹಳ್ಳಿ ಗ್ರಾಮದ ಪಕ್ಕದ ಗುಡ್ಡಕ್ಕೆ ಸಂಜೆ 5-15 ಗಂಟೆಗೆ ಹೋಗಿ ನೋಡಲಾಗಿ ಯಾರೋ ಇಬ್ಬರು ಅಸಾಮಿಗಳು ಮಿನಿಟಿಪ್ಪರ್ ಗೆ ಸೈಜ್ ಕಲ್ಲುಗಳನ್ನು ಲೋಡ್ ಮಾಡುತ್ತಿದ್ದು ನಮ್ಮ ಪೊಲೀಸ್ ಜೀಪನ್ನು ನೋಡಿ ಸದರಿ ಆಸಾಮಿಗಳು ಅಲ್ಲಿಂದ ಓಡಿ ಹೋದರು ಸದರಿ ಸ್ಥಳದ ಗುಡ್ಡದಲ್ಲಿ ಪರಿಶೀಲಿಸಲಾಗಿ ಜಿಲೇಟಿನ್ ನಂತಹ ಸ್ಪೋಟಕ ವಸ್ತುಗಳನ್ನು ಉಪಯೋಗಿಸಿ ಬಂಡೆಗಳಲ್ಲಿ ತೂತುಗಳಿಟ್ಟು ಅದರಲ್ಲಿ ಸ್ಪೋಟಕ ವಸ್ತುವನ್ನು ಇಟ್ಟು ಬಂಡೆಯನ್ನು ಸ್ಪೋಟಿಸಿ ಅದರಲ್ಲಿ ಸೈಜು ಕಲ್ಲುಗಳನ್ನು ವಿಂಗಡಿಸಿರುವ ನಿಶಾನೆಗಳು ಇದ್ದು, ಸ್ಪೋಟಿಸಿದ ರಭಸಕ್ಕೆ ಸಣ್ಣ ಕಲ್ಲು ಚೂರುಗಳು ಛಿದ್ರವಾಗಿ ಅಲ್ಲಲ್ಲಿ ಬಿದ್ದಿರುತ್ತದೆ. ಹಾಗೂ ಬಂಡೆಯ ಮೇಲೆ ಸ್ವಲ್ಪ ದೂರಕ್ಕೆ ಉದ್ದದ ಸ್ಪೋಟಕಕ್ಕೆ ಬಳಸುವ ಡಿಟಿಹೆಚ್ ಫ್ಯೂಸ್ ಮಾದರಿಯ ವೈರ್ ಇರುತ್ತೆ. ಈ ಬಗ್ಗೆ ಗುಡ್ಡದಿಂದ ಸ್ವಲ್ಪ ದೂರದಲ್ಲಿದ್ದ ಅನಘಟ್ಟನಹಳ್ಳಿ  ಗ್ರಾಮದ ಸಾರ್ವಜನಿಕರನ್ನು (ಅವರು ಭಯಪಟ್ಟು ಹೆಸರು ವಿಳಾಸ ತಿಳಿಸಲು ಇಚ್ಚಿಸಿರುವುದಿಲ್ಲ) ವಿಚಾರಣೆ ಮಾಡಿ ತಿಳಿಯಲಾಗಿ ಹನುಮಂತರಾಯಪ್ಪ ಬಿನ್ ಗಂಗಪ್ಪ, 27 ವರ್ಷ, ನಾಯಕರು, ಟಿಪ್ಪರ್ ಲಾರಿ ಚಾಲಕ, ವಾಸ ಹುಲಿಕುಂಟೆ ಗ್ರಾಮ ಡಿ.ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲುಕು ಹಾಗೂ ಗುಂಡಣ್ಣ, ಹುದುಗೂರು ಗ್ರಾಮ ಗೌರಿಬಿದನೂರು ತಾಲ್ಲೂಕು ರವರುಗಳು ಸದರಿ ಗುಡ್ಡದಲ್ಲಿದ್ದ ಕಲ್ಲುಗಳನ್ನು ಸುಮಾರು 1 ವರ್ಷದಿಂದ ಸ್ಪೋಟಕ ವಸ್ತುಗಳನ್ನು ಬಳಸಿ ಕಲ್ಲುಗಳನ್ನು ಛಿದ್ರ ಮಾಡಿ ಸೈಜು ಕಲ್ಲುಗಳನ್ನು ವಿಂಗಡಿಸಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುತ್ತಾರೆಂದಯ ತಿಳಿಸಿರುತ್ತಾರೆ. ಸದರಿ ಸ್ಥಳದಲ್ಲಿ ಸೈಜು ಕಲ್ಲುಗಳನ್ನು ತುಂಬಿದ್ದ ಮಿನಿಟಿಪ್ಪರ್ ಲಾರಿಯನ್ನು ಪರಿಶೀಲಿಸಲಾಗಿ ಕೆಎ-40, 4624 ನೊಂದಣಿ ಸಂಖ್ಯೆಯ 709 ಮಿನಿಟಿಪ್ಪರ್ ಆಗಿರುತ್ತದೆ. ಸದರಿ ಮಿನಿ ಟಿಪ್ಪರ್ ನ ಮುಂಭಾಗ Sri Vel Murugan ಎಂದು ಇರುತ್ತೆ. ಮಿನಿ ಟಿಪ್ಪರ್ ನ ಹಿಂಭಾಗದ ಬಾಡಿಯಲ್ಲಿ ಸೈಜ್ ಕಲ್ಲುಗಳನ್ನು ಹಾಕಿರುತ್ತದೆ. ಇದರ ಚಾಲಕ ಓಡಿ ಹೋದ ಆಸಾಮಿ ಹನುಮಂತರಾಯಪ್ಪ ಎಂದು ತಿಳಿಯಿತು. ಸದರಿ ಲಾರಿಯ ಮಾಲಿಕನ ಬಗ್ಗೆ ತಿಳಿಯಲಾಗಿ ಸುರೇಶ್, ತಮಿಳುನಾಡು ಹಾಲಿ ವಾಸ ಹಳೇ ಆರ್.ಟಿ.ಓ ಕಛೇರಿ ಪಕ್ಕದಲ್ಲಿ ಗೌರಿಬಿದನೂರು ಟೌನ್ ಫೋನ್ ನಂಬರ್ 9900870914 ಎಂದು ತಿಳಿದು ಬಂದಿರುತ್ತದೆ. ಸದರಿ ಗುಡ್ಡದಲ್ಲಿ ಕೆಲಸ ಮಾಡುತ್ತಿದ್ದ ಮಾಲೀಕರ ಬಗ್ಗೆ ಕೇಳಲಾಗಿ ಸುರೇಶ್ ಮತ್ತು ಅವರ ಅಣ್ಣ ತಮ್ಮಂದಿರಾದ ಪಳನಿ ಸ್ವಾಮಿ @ ವೇಲು ಮುರುಗನ್ ಮತ್ತು ಈಶ್ವರಪ್ಪ ಎಂದು ತಿಳಿದುಬಂದಿರುತ್ತದೆ. ಸ್ಥಳದಲ್ಲಿದ್ದ ಡಿಟಿಹೆಚ್ ಫ್ಯೂಸ್ ಮಾದರಿಯ ವೈರ್ ಇದ್ದುದ್ದರಿಂದ ಅದನ್ನು ನೋಡಿಕೊಳ್ಳಲು ನನ್ನ ಜೊತೆ ಇದ್ದ ಸಿಬ್ಬಂದಿಯಾದ ಹೆಚ್.ಸಿ.205 ರಮೇಶ್ ರವರನ್ನು ನೇಮಿಸಿರುತ್ತೇನೆ. ಮೇಲ್ಕಂಡ ಆಸಾಮಿಗಳು ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಜಿಲೇಟಿನ್ ನಂತಹ ಸ್ಪೋಟಕ ವಸ್ತುಗಳನ್ನು ಬಳಸಿ ಗುಡ್ಡದಲ್ಲಿರುವ ಬಂಡೆಗಳನ್ನು ಸ್ಪೋಟಿಸಿ ಸೈಜ್ ಕಲ್ಲುಗಳನ್ನು ವಿಂಗಡಿಸಿ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು, ಇದು ಕಾನೂನು ಬಾಹಿರವಾಗಿರುವುದರಿಂದ ಸ್ಥಳದಲ್ಲಿದ್ದ ಮಿನಿ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದು ಬೇರೆ ಚಾಲಕನ ಸಹಾಯದಿಂದ ಸೈಜ್ ಕಲ್ಲುಗಳನ್ನು ತುಂಬಿರುವ ಟಿಪ್ಪರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಚೇನಹಳ್ಳಿ ಪೊಲೀಸ್ ಠಾಣಾ ಆವರಣದಲ್ಲಿ ಬಿಟ್ಟು ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ವರದಿ.  

 1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.11/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ 02.02.2021 ರಂದು ಸಂಜೆ 4.15 ಗಂಟೆಗ ಪಿರ್ಯಾದುದಾರರಾದ ಶ್ರೀ ಚಂದ್ರೇಶ ಬಿನ್ ನಾರಾಯಣಪ್ಪ, ನಶೀಕುಂಟೆ ಹೊಸೂರು ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ: 01.02.2021 ರಂದು ನಾನು ನಮ್ಮ ಮಾವನ ಬಾಬ್ತು TVS XL ನಂಬರ್ KA-40-K-6522 ದ್ವಿಚಕ್ರ ವಾಹನದಲ್ಲಿ ನನ್ನ ಮಾವನ ಮಗನಾದ ಚೇತನ್ ರವರನ್ನು ಹಿಂದೆ ಕೂರಿಸಿಕೊಂಡು ಈರೇನಹಳ್ಳಿ ಗ್ರಾಮಕ್ಕೆ ಹೋಗಲು  ಬೆಳಗ್ಗೆ 10:45 ಗಂಟೆಗೆ ಕಣಿವೆನಾರಾಯಣಪುರ ಗ್ರಾಮದ ಕೊಂಡಪ್ಪ ರವರ ಜಮೀನಿನ ಬಳಿ ರಸ್ತೆಯ ಎಡಬದಿಯಲ್ಲಿ TVS XL ನ್ನು ನಿಲ್ಲಿಸಿ ನಾನು ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ನನ್ನ ಬಾಮೈದ ಚೇತನ್ ರವರು ಟಿವಿಎಸ್ ಮೇಲೆ ಕುಳಿತುಕೊಂಡಿದ್ದ. ಅದೇ ಸಮಯಕ್ಕೆ ಚಿಗಟೇನಹಳ್ಳಿ ಕಡೆಯಿಂದ ಕಣಿವೆ ನಾರಾಯಣಪುರದ ಕಡೆಗೆ ಬರುತ್ತಿದ್ದ KA-40-EA-4726 ಹೋಂಡಾ ಸಿಬಿ ಯೂನಿಕಾರ್ನ್ ದ್ವಿಚಕ್ರ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ನಿಲ್ಲಿಸಿದ್ದ TVS XL ಮತ್ತು ಅದರ ಮೇಲೆ ಕುಳಿತ್ತಿದ್ದ ಚೇತನ್ ರವರ ದ್ವಿಚಕ್ರ ವಾಹನ ಮುಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಚೇತನ್ ರವರು TVS XL ಸಮೇತ ರಸ್ತೆಯ ಮೇಲೆ ಬಿದ್ದು, ಚೇತನ್ ರವರ ಬಲಪಾದ, ಬಲಮೊಣಕೈ ಮತ್ತು ಬಲಮುಂಗೈಗೆ ರಕ್ತಗಾಯಗಳಾಗಿದ್ದವು ಕೂಡಲೆ ತಾನು ಉಪಚರಿಸಿ 108 ಅಂಬ್ಯುಲೆನ್ಸ್ ನಲ್ಲಿ  ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ವೈದ್ಯರ ಸಲಹೆ ಮೇರೆಗೆ ಬೆಂಗಳೂರು ನಗರದ ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು,  ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಿನಾಂಕ: 02.02.2021 ರಂದು ಬೆಳಗಿನ ಜಾವ ಬೌರಿಂಗ್ ಆಸ್ಪತ್ರೆಯಿಂದ ದೇವನಹಳ್ಳಿ ಆಕಾಶ್ ಆಸ್ಪತ್ರೆಗೆ ದಾಖಲಿಸಿರುತ್ತೇವೆ. ಈ ಅಪಘಾತಪಡಿಸಿದ ಚಾಲಕನ ಹೆಸರು ವಿಳಾಸ ತಿಳಿಯಲಾಗಿ ಶ್ರೀನವಾಸ ಬಿನ್ ಸರಸಪ್ಪ, 25 ವರ್ಷ, ಪ.ಜಾತಿ, ಚಾಲಕ, ಚಿಗಟೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕ್ ಎಂದು ತಿಳಿದುಬಂದಿರುತ್ತದೆ. ಆದ್ದರಿಂದ KA-40-EA-4726 ಹೋಂಡಾ ಸಿಬಿ ಯೂನಿಕಾರ್ನ್ ಚಾಲಕ ಶ್ರೀನಿವಾಸನ  ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು, ಆಸ್ಪತ್ರೆಯಲ್ಲಿ ಚೇತನ್ ರವರಿಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಈ ಪ್ರ.ವರದಿ.

Last Updated: 06-02-2021 01:26 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080